Tuesday, 31 January 2017

ಸರಳವಿವಾಹ ಯೋಜನೆಯಡಿ ಪ.ಜಾ. ದಂಪತಿಗೆ ಆರ್ಥಿಕ ನೆರವು

ಸರಳವಿವಾಹ ಯೋಜನೆಯಡಿ ಪ.ಜಾ. ದಂಪತಿಗೆ ಆರ್ಥಿಕ ನೆರವು ರಾಜ್ಯ ಸರ್ಕಾರ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ವಿವಾಹವಾಗುವ ಪರಿಶಿಷ್ಟ ಜಾತಿ ದಂಪತಿಗಳಿಗೆ 50,000 ರೂ ಆರ್ಥಿಕ ನೆರವು ನೀಡುತ್ತಿರುವ ಸರಳ ವಿವಾಹ ಯೋಜನೆಯು ಜಿಲ್ಲೆಯಲ್ಲಿ ಅನುಷ್ಟಾನಗೊಳ್ಳುತ್ತಿದೆ. ಪರಿಶಿಷ್ಟ ಜಾತಿಗೆ ಸೇರಿದ ಬಡ ಕುಟುಂಬಗಳಿಗೆ ನೆರವಾಗಲು ಹಾಗೂ ಸಾಮೂಹಿಕ ಸರಳ ವಿವಾಹಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸರಳವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆ ಮಾಡಿಕೊಳ್ಳುವ ಪರಿಶಿಷ್ಟ ಜಾತಿ ದಂಪತಿಗಳಿಗೆ 50 ಸಾವಿರ ರೂ ಆರ್ಥಿಕ ನೆರವನ್ನು ಅವರ ಜೀವನೋಪಾಯಕ್ಕಾಗಿ ನೀಡಲಾಗುವುದೆಂದು 2015-16ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿತು.್ತ ಅರ್ಜಿದಾರರು ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿರಬೇಕು, ವಧುವಿಗೆ ಕನಿಷ್ಟ 18 ವರ್ಷ, ಗರಿಷ್ಟ 42 ವರ್ಷ ವಿರಬೇಕು. ವರನಿಗೆ ಕನಿಷ್ಠ 21 ವರ್ಷ, ಗರಿಷ್ಠ 40 ವರ್ಷ ವಿರಬೇಕು. ಒಟ್ಟಾರೆ ವಾರ್ಷಿಕ ಆದಾಯ 2 ಲಕ್ಷರೂ ಮೀರಿರಬಾರದು ಎಂಬ ಷರತ್ತು ವಿಧಿಸಿದೆ. ಜಿಲ್ಲಾ ನೋಂದಣಿ ಕಚೇರಿಯಲ್ಲಿ ಸಾಮೂಹಿಕ ವಿವಾಹಗಳ ಆಯೋಜಕರೆಂದು ನೋಂದಣಿಯಾಗಿರುವ ಖಾಸಗಿ ಟ್ರಸ್ಟ್, ದೇವಸ್ಥಾನದ ಟ್ರಸ್ಟ್, ಸಂಘಗಳು ಸೊಸೈಟಿಗಳು, ಖಾಸಗಿ ವ್ಯಕ್ತಿಗಳು ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾದವರು ಆರ್ಥಿಕ ನೆರವು ಪಡೆಯಬಹುದು. ಸಂಘ ಸಂಸ್ಥೆಗಳು ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾಗಿರುವ ಬಗ್ಗೆ ಅರ್ಜಿದಾರರು ಪ್ರಮಾಣ ಪತ್ರ ಸಲ್ಲಿಸಬೇಕಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳ ವಿವಾಹವಾದ 3 ತಿಂಗಳ ಒಳಗೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಅಥವಾ ಉಪ ನಿರ್ದೇಶಕರ ಕಚೇರಿಗೆ ನಿಗಧಿತ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮದ ಪೋಟೊ, ವಧು-ವರನ ಭಾವಚಿತ್ರವನ್ನು ಲಗತ್ತಿಸಬೇಕಿದೆ. ಅಂತರ್ಜಾತಿ ವಿವಾಹಗಳು ಇದ್ದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಸ್ಪøಶ್ಯತಾ ನಿವಾರಣಾ ಕಾರ್ಯಕ್ರಮದಡಿ ಅಂತರ್ ಜಾತಿ ವಿವಾಹ ಪ್ರೋತ್ಸಹಧನಕೋಸ್ಕರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಂತರ್‍ಜಾತಿ ವಿವಾಹ ಪ್ರೋತ್ಸಾಹ ಧನಕ್ಕೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕೆಂದು ತಿಳಿಸಲಾಗಿದೆ. 2015-16ನೇ ಸಾಲಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳವಿವಾಹವಾದ ಪರಿಶಿಷ್ಟ ಜಾತಿಯ 7 ದಂಪತಿಗಳಿಗೆ ತಲಾ 50 ಸಾವಿರ ರೂ ರÀಂತೆ ಒಟ್ಟು 3ಲಕ್ಷದ 75 ಸಾವಿರ ರೂ ಆರ್ಥಿಕ ನೆರವನ್ನು ಮಂಜೂರುಮಾಡಲಾಗಿದೆ. 2016-17ನೇ ಸಾಲಿಗೆ ಸರಳವಿವಾಹವಾದ ದಂಪತಿಗೆ ಆರ್ಥಿಕ ನೆರವು ಒದಗಿಸುವ ಸಲುವಾಗಿ 27 ಲಕ್ಷರೂ ಅನುದಾನ ಬಿಡುಗಡೆಯಾಗಿದೆ. ಜಿಲ್ಲೆಯ ಪರಿಶಿಷ್ಟಜಾತಿಯ ದಂಪತಿಗಳು ಆರ್ಥಿಕ ನೆರವು ಸೌಲಭ್ಯವನ್ನು ಪಡೆದುಕೊಳ್ಳಲು ಮುಂದಾಗಬೇಕೆಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಎಚ್. ಸತೀಶ್ ಕೋರುತ್ತಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು