Tuesday, 24 January 2017

24-01-2017 ಚಾಮರಾಜನಗರಕ್ಕೆ ಪ್ರಪ್ರಥಮ ಭೇಟಿಯ ಸಭೆಯ ಖಾದರ್ ಸುದ್ದಿ ಚಿತ್ರಗಳು




















ಚಿತ್ರ ಶೀರ್ಷಿಕೆ : ನಗರದ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಕೊಡುಗೆಯಾಗಿ ನೀಡಿರುವ ಡಯಾಲಿಸಿಸ್ ಯಂತ್ರವನ್ನು ಆಹಾರ ನಾಗರೀಕ ಸರಬರಾಜು ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಇಂದು ಸೇವೆಗೆ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಪಿ.ಸದಾಶಿವಮೂರ್ತಿ ಇತರರು ಹಾಜರಿದ್ದರು.
                          



ಜ. 25ರಂದು ನಗರದಲ್ಲಿ ರಾಷ್ಟ್ರೀಯ ಮತದಾರರ ದಿನ ಆಚರಣೆ
ಚಾಮರಾಜನಗರ, ಜ. 24 (ಕರ್ನಾಟಕ ವಾರ್ತೆ):- ಚುನಾವಣಾ ಆಯೋಗ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ರಾಷ್ಟ್ರೀಯ ಮತದಾರರ ದಿನ ಆಚರಣೆಯನ್ನು ಜನವರಿ 25ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಲಕ್ಷ್ಮಣ್ ಎಫ್. ಮಳವಳ್ಳಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ಬಿ. ರಾಮು ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್. ಜೈನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್. ವಿರೂಪಾಕ್ಷ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ|| ಪಿ. ದೇವರಾಜು ಮುಖ್ಯ ಭಾಷಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ಜ. 26 ರಿಂದ ಮಹದೇಶ್ವರ ಬೆಟ್ಟದಲ್ಲಿ ಜಾನಪದ ಜÁತ್ರೆಗೆ ಚಾಲನೆ
ಚಾಮರಾಜನಗರ, ಜ. 24 (ಕರ್ನಾಟಕ ವಾರ್ತೆ):- ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಇದೇ ಮೊದಲ ಬಾರಿಗೆ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಜನವರಿ 26 ಹಾಗೂ 27ರಂದು ಕೊಳ್ಳೇಗಾಲ ತಾಲೂಕಿನ ಮಹದೇಶ್ವರಬೆಟ್ಟದಲ್ಲಿ ಹಮ್ಮಿಕೊಂಡಿದೆ.
ಜನವರಿ 26ರಂದು ಸಂಜೆ 5.30 ಗಂಟೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಜಾನಪದ ಜಾತ್ರೆಗೆ ಚಾಲನೆ ನೀಡುವರು. ಹನೂರು ಶಾಸಕರಾದ ಆರ್. ನರೇಂದ್ರ ಅಧ್ಯಕ್ಷತೆ ವಹಿಸಲಿದ್ದು ಸಾಲೂರು ಬೃಹನ್ಮಠ ಅಧ್ಯಕ್ಷರಾದ ಪಟ್ಟದ ಗುರುಸ್ವಾಮಿ ಅವರು ದಿವ್ಯ ಸಾನಿಧ್ಯ ವಹಿಸುವರು.
ನಗರದ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿನಿರ್ದೇಶಕರಾದ ಅಶೋಕ ಎನ್. ಚಲವಾದಿ ಹಾಗೂ ಜಾನಪದ ಜಾತ್ರೆಯ ನಿರ್ದೇಶಕರಾದ ಡಾ|| ಬಾನಂದೂರ ಕೆಂಪಯ್ಯ ಈ ವಿಷಯ ತಿಳಿಸಿದರು.
ಕಾರ್ಯಕ್ರಮಗಳು ಎರಡು ದಿನಗಳ ಕಾಲ ಸಂಜೆಯ ವೇಳೆಗೆ ನಡೆಯಲಿದೆ. 30 ವಿವಿಧ ಜಾನಪದ ಕಲಾಪ್ರಕಾರ ತಂಡಗಳು ಈಗಾಗಲೇ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ತರಬೇತಿಯಲ್ಲಿ ನಿರತವಾಗಿವೆ. 350ಕ್ಕೂ ಹೆಚ್ಚು ಕಲಾವಿದರು ಜಾನಪದ ಜಾತ್ರೆಯಲ್ಲಿ ತಮ್ಮ ಕಲಾ ಪ್ರದರ್ಶನ ನೀಡಲಿದ್ದಾರೆ. ಮಹದೇಶ್ವರಬೆಟ್ಟದ ಬಳಿಕ ರಾಜ್ಯದ ಇತರೆಡೆ ಕೂಡ ಜಾನಪದ ಜಾತ್ರೆ ಮುಂದುವರೆಯಲಿದೆ ಎಂದು ಅಶೋಕ್ ಎನ್. ಚಲವಾದಿ ತಿಳಿಸಿದರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಕೊಳ್ಳೇಗಾಲ ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಸ್. ರಾಜು, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಲತಾ ರಾಜಣ್ಣ, ಮಾರ್ಟಳ್ಳಿ ಜಿ.ಪಂ. ಸದಸ್ಯರಾದ ಇಷಾರತ್ ಬಾನು, ಮಹದೇಶ್ವರ ಬೆಟ್ಟ ತಾ.ಪಂ. ಸದಸ್ಯರಾದ ಹಲಗತಂಬಡಿ, ಮಹದೇಶ್ವರ ಬೆಟ್ಟ ಗ್ರಾ.ಪಂ. ಅಧ್ಯಕ್ಷರಾದ ರುಕ್ಮಿಣಿ, ಜಿಲ್ಲಾಧಿಕಾರಿ ಬಿ. ರಾಮು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಮರ್Áದಾಯ ದತ್ತಿಗಳ ಇಲಾಖೆ ಆಯುಕ್ತರಾದ ಎಸ್.ಪಿ. ಷಡಕ್ಷರಿಸ್ವಾಮಿ ಗೌರವಾನ್ವಿತ ಉಪಸ್ಥಿತರಿರುವರು.


ಕಾರ್ಯಕ್ರಮದಲ್ಲಿ ಭಾಗವಹಿಸುವ ಜಾನಪದ ಕಲಾತಂಡಗಳ ವಿವರ:-
ಚಾಮರಾಜನಗರ ಜಿಲ್ಲೆಯ ರವಿಚಂದ್ರ ಪ್ರಸಾದ್ ಮತ್ತು ತಂಡ - ಕಹಳೆ ಕೊಂಬು, ಬಸವರಾಜಯ್ಯ ಮತ್ತು ತಂಡ - ನೀಲಗಾರರು, ಕೆಂಪಣ್ಣ ಮತ್ತು ತಂಡ – ಕಂಸಾಳೆ, ರಾಜಶೇಖರಮೂರ್ತಿ ಮತ್ತು ತಂಡ – ಗೊರವರ ಕುಣಿತ, ಕೃಷ್ಣಮೂರ್ತಿ ಮತ್ತು ತಂಡ - ಸೋಲಿಗರ ನೃತ್ಯ
ದಾವಣಗೆರೆ ಜಿಲ್ಲೆಯ ಲಾವಣ್ಯ ಮತ್ತು ತಂಡ – ಕೋಲಾಟ, ಚೇತನ್ ಕುಮಾರ್ ಮತ್ತು ತಂಡ – ಕರಡಿ ಮಜಲು
ರಾಮನಗರ ಜಿಲ್ಲೆಯ ಜಯರಾಮಯ್ಯ ಮತ್ತು ತಂಡ - ಪೂಜಾ ಕುಣಿತ, ಅನಿಲ್ ಕುಮಾರ್ ಮತ್ತು ತಂಡ - ಪಟಾ ಕುಣಿತ, ಕುಮಾರ ಮತ್ತು ತಂಡ – ತಮಟೆ, ನಗಾರಿ
ಕೊಡಗು ಜಿಲ್ಲೆಯ ಜಿ.ಕೆ. ರಾಮು ಮತ್ತು ತಂಡ – ಗಿರಿಜನ ನೃತ್ಯ
ಬಾಗಲಕೋಟೆ ಜಿಲ್ಲೆಯ ಮಂಜುನಾಥ ಭಜಂತ್ರಿ ಮತ್ತು ತಂಡ - ಶಹನಾಯಿ, ಹನುಮಂತ ಮಾದರ ಮತ್ತು ತಂಡ – ತತ್ವ ಪದಗಳು, ಯಲ್ಲವ್ವ ಮಾದರ ಮತ್ತು ತಂಡ – ಗೀಗೀ ಪದ
ಮಂಡ್ಯ ಜಿಲ್ಲೆಯ ನಿಂಗರಾಜು ಮತ್ತು ತಂಡ – ತಮಟೆ ವಾದ್ಯ, ಮರಿಸ್ವಾಮಿ ಮತ್ತು ತಂಡ - ಪೂಜಾ ಕುಣಿತ
ಚಿತ್ರದುರ್ಗ ಜಿಲ್ಲೆಯ ಜಯಬಾಯಿ ಮತ್ತು ತಂಡ - ಲಂಬಾಣಿ ನೃತ್ಯ, ಲಕ್ಷ್ಮಕ್ಕ ಮತ್ತು ತಂಡ - ಸೋಬಾನೆ ಪದ
ಹಾಸನ ಜಿಲ್ಲೆಯ ಕುಮಾರಯ್ಯ ಮತ್ತು ತಂಡ – ಚಿಟ್ಟಿಮೇಳ
ಮೈಸೂರು ಜಿಲ್ಲೆಯ ದಿನೇಶ್ ಕುಮಾರ್ ಮತ್ತು ತಂಡ - ನಗಾರಿ, ನಾಗನಾಯಕ ಮತ್ತು ತಂಡ – ಡೊಳ್ಳು ಕುಣಿತ, ಜಿ.ಕೆ. ಗೋವಿಂದ ನಾಯಕ ಮತ್ತು ತಂಡ – ವೀರಗಾಸೆ
ಬೆಂಗಳೂರು ಜಿಲ್ಲೆಯ ಸುಮಕಂಠಿ ಮತ್ತು ತಂಡ – ಜನಪದ ಹಾಡಿಗೆ ನೃತ್ಯ
ಹಾವೇರಿ ಜಿಲ್ಲೆಯ ಅಭಿಶೇಕ್ ಮತ್ತು ತಂಡ – ಜನಪದ ನೃತ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುನಿಯಪ್ಪ ಮತ್ತು ತಂಡ - ಸೋಮನ ಕುಣಿತ
ಶಿವಮೊಗ್ಗ ಜಿಲ್ಲೆಯ ಕುಮುದ ಮತ್ತು ತಂಡ – ಆದಿವಾಸಿ ನೃತ್ಯ
ಬೆಳಗಾವಿ ಜಿಲ್ಲೆಯ ಕಲ್ಲಪ್ಪ ಬ ದೊಡ್ಡಮನಿ ಮತ್ತು ತಂಡ – ಚೌಡಿಕೆ ವಾದ್ಯ
ಧಾರವಾಡ ಜಿಲ್ಲೆಯ ಕಲ್ಲಪ ಹಂಚಿನಮನಿ ಮತ್ತು ತಂಡ – ಜಗ್ಗಲಿಗೆ ಮೇಳ
ಬಳ್ಳಾರಿ ಜಿಲ್ಲೆಯ ವಿ. ತಿಮ್ಮಪ್ಪ ಮತ್ತು ತಂಡ - ಹುಲಿವೇಷ ಪ್ರದರ್ಶನ ನೀಡಲಿದ್ದಾರೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ. ನಾಗವೇಣಿ, ಜಾನಪದ ಕಲಾವಿದ ಸಿ.ಎಂ. ನರಸಿಂಹಮೂರ್ತಿ ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.

ಜ. 28ರಂದು ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ಜ. 24 (ಕರ್ನಾಟಕ ವಾರ್ತೆ):- ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಜನವರಿ 28ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
     ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಜ. 28ರಂದು ಶಿವಪುರದಲ್ಲಿ ಜನಸಂಪರ್ಕ ಸಭೆ
ಚಾಮರಾಜನಗರ, ಜ. 24 (ಕರ್ನಾಟಕ ವಾರ್ತೆ):- ಜನರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ತಾಲೂಕಿನ ಕಸಬಾ ಹೋಬಳಿಯ ಶಿವಪುರ ಗ್ರಾಮದ ಶನೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜನವರಿ 28ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ.
ಸಾರ್ವಜನಿಕರು ಜನಸಂಪÀರ್ಕ ಸಭೆಯಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದು ತಹಸೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾದ ಬಳಿಕ ಚಾಮರಾಜನಗರ ಜಿಲ್ಲೆಗೆ ಬಾರಿಗೆ ಜಿಲ್ಲೆಗೆ ಆಹಾರ, ನಾಗರೀಕ ಮತ್ತು ಗ್ರಾಹಕ ಸರಬರಾಜು ಸಚಿವ ಖಾದರ್ ಮೊದಲ ಬಾರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಖಾದರ್ ಅವರ ನೇತೃತ್ವದಲ್ಲಿ ನಡೆಯಬೇಕಾಗಿದ್ದ ಸಭಾ ಕಾರ್ಯಕ್ರಮದಲ್ಲಿ ವಿಪರ್ಯಾಸ ಎಂದರೆ ಸಭೆ ಹಾಗೂ ಸಂವಾದದ ಬದಲು ವಿವಿದ ಯೋಜನೆ ಪುಸ್ತಕ, ಸಿ.ಡಿ ಬಿಡುಗಡೆ ಮಾಡಿ ಸಮಯ ಕಳೆಯಲಾಯಿತು. ಮೊಟ್ಟಮೊದಲಿಗೆ ಸ್ವಾಗತ, ಸ್ಮಾರ್ಟ್ ಯೋಜನೆ ಕೈಪಿಡಿ,ಉಷಾ ಯೋಜನೆಯ ಸಿ.ಡಿ. ಬಿಡುಗಡೆ ಮಾಡುವುದರಲ್ಲೆ ಕಾಲ ಕಳೆದು ಯೋಜನೆಗಳ ಪ್ರಗತಿ ಮಾಹಿತಿಗಳು ಮೂಲೆಗುಂಪಾದವು. ಕಾರ್ಯಕ್ರಮದಲ್ಲಿ ಶಾಸಕ ಪುಟ್ಟರಂಗಶೆಟ್ಟಿ,ನರೇಂದ್ರ, ಜಯಣ್ಣ, ಜಿಲ್ಲಾಧಿಕಾರಿ ರಾಮು, ಸಿಈಒ, ಎಸಿ ಹಾಗೂ ಜಿಲ್ಲಾ ಮಟ್ಟದ ಅದಿಕಾರಿಗಳು ಬಾಗವಹಿಸಿದ್ದರು. -ರಾಮಸಮುದ್ರ ಎಸ್.ವೀರಭದ್ರಸ್ವಾಮಿ

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು