Tuesday, 31 January 2017
31-01-2017 ಗ್ರಾ.ಪಂ. ಉಪಚುನಾವಣೆ : ಅಧಿಸೂಚನೆ ಪ್ರಕಟ
ಗ್ರಾ.ಪಂ. ಉಪಚುನಾವಣೆ : ಅಧಿಸೂಚನೆ ಪ್ರಕಟ
ಚಾಮರಾಜನಗರ, ಜ. 31 (ಕರ್ನಾಟಕ ವಾರ್ತೆ):– ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲೆಯ 5 ಗ್ರಾಮ ಪಂಚಾಯಿತಿಯ 5 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸುವ ಸಂಬಂಧ ಜಿಲ್ಲಾಧಿಕಾರಿ ಬಿ. ರಾಮು ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಹೊಂಗನೂರು (ಅನುಸೂಚಿತ ಜಾತಿ), ಕೊಳ್ಳೇಗಾಲ ತಾಲೂಕಿನ ದೊಡ್ಡಾಲತ್ತೂರು (ಅನುಸೂಚಿತ ಜಾತಿ), ಮಾರ್ಟಳ್ಳಿ ಗ್ರಾಮ ಪಂಚಾಯಿತಿಯ ವಡ್ಡರದೊಡ್ಡಿ (ಹಿಂದುಳಿದ ‘ಅ’ ವರ್ಗ) ಗುಂಡ್ಲುಪೇಟೆ ತಾಲೂಕಿನ ಕೊತನೂರು, ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ {ಅನುಸೂಚಿತ ಪಂಗಡ, (ಮಹಿಳೆ)}, ಗ್ರಾಮಪಂಚಾಯಿತಿಯ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ನಾಮಪತ್ರ ಸಲ್ಲಿಸಲು ಫೆಬ್ರವರಿ 2 ಕಡೆಯ ದಿನವಾಗಿದೆ. ಫೆಬ್ರವರಿ 3ರಂದು ನಾಮಪತ್ರ ಪರಿಶೀಲನೆ ನಡೆಸಲಾಗುವುದು. ಫೆಬ್ರವರಿ 6ರಂದು ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕಡೆಯ ದಿನವಾಗಿದೆ. ಫೆಬ್ರವರಿ 12ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ (ಅವಶ್ಯವಿದ್ದರೆ). ಫೆಬ್ರವರಿ 14ರಂದು ಅವಶ್ಯವಿದ್ದಲ್ಲಿ ಮರು ಮತದಾನ ನಡೆಯಲಿದೆ. ಫೆಬ್ರವರಿ 15ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತಗಳ ಏಣಿಕೆ ಕಾರ್ಯ ನಡೆಯಲಿದೆ ಹಾಗೂ ಅಂದೇ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಗಾಂಜಾ ಬೆಳೆದವನಿಗೆ ಶಿಕ್ಷೆ
ಚಾಮರಾಜನಗರ, ಜ. 31 (ಕರ್ನಾಟಕ ವಾರ್ತೆ):- ಮುಸುಕಿನ ಜೋಳದ ಬೆಳೆ ನಡುವೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ವ್ಯಕ್ತಿಯೊಬ್ಬರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎರಡು ವರ್ಷಗಳ ಶಿಕ್ಷೆ ಹಾಗೂ ಒಂದು ಸಾವಿರ ರೂ ದಂಡ ವಿಧಿಸಿ ತಿರ್ಪುನೀಡಿದೆ.
ರಾಮಾಪುರದ ಕಾರಕೋಬೆ ಗ್ರಾಮದ ನಾಗರಾಜು ಶಿಕ್ಷೆಗೆ ಗುರಿಯಾದ ವ್ಯಕ್ತಿ. ಇವರು ತಮ್ಮ ಜಮೀನಿನಲ್ಲಿ ಮುಸುಕಿನ ಜೋಳದ ಬೆಳೆ ನಡುವೆ ಅಕ್ರಮವಾಗಿ 16 ಗಾಂಜಾ ಗಿಡಗಳನ್ನು ಬೆಳೆದಿದ್ದರು, 2012ರ ಡಿಸೆಂಬರ್ 3ರಂದು ರಾಮಾಪುರ ಪೊಲೀಸರು ದಾಳಿ ಮಾಡಿ ಪತ್ತೆ ಹಚ್ಚಿದ್ದರು. ಸದರಿ ಪ್ರಕರಣ ವಿಚಾರಣೆ ನಡೆದು ಅಪರಾಧ ಸಾಬೀತಾದ ಹಿನ್ನಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್. ಮಳವಳ್ಳಿ ಅವರು ಜನವರಿ 28ರಂದು ಅಪರಾಧಿಗೆ ಎರಡು ವರ್ಷಗಳ ಶಿಕ್ಷೆ ಹಾಗೂ ಒಂದು ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು,
ಕುರಿ, ಮೇಕೆ ಘಟಕ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜ. 31 (ಕರ್ನಾಟಕ ವಾರ್ತೆ):- ಮೈಸೂರಿನಲ್ಲಿರುವ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಕುರಿ ಮತ್ತು ಮೇಕೆ ಘಟಕಗಳನ್ನು ನೀಡಲಿದ್ದು ಈ ಸೌಲಭ್ಯಕ್ಕೆ ಚಾಮರಾಜನಗರ ಜಿಲ್ಲೆಯ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯಡಿ ಹಾಗೂ ಇತರ ವರ್ಗದವರಿಗೆ ಕುರಿ, ಮೇಕೆ ಘಟಕ ಹೊಂದಲು ಸಹಾಯಧನ ನೀಡಲಿದೆ. 10+2 ಕುರಿ/ಮೇಕೆ ಘಟಕಕ್ಕೆ 57,440 ರೂ ನಿಗಧಿ ಮಾಡಲಾಗಿದೆ. ಈ ಪೈಕಿ ಪರಿಶಿಷ್ಟಜಾತಿ ಪರಿಶಿಷ್ಟ ಪಂಗಡಕ್ಕೆ ಶೇ 50 ರಷ್ಟು ಹಾಗೂ ಸಾಮಾನ್ಯ ವರ್ಗದವರಿಗೆ ಶೇ. 25 ರಷ್ಟು ಸಹಾಯಧನ ನೀಡಲಾಗುತ್ತದೆ.
ಕೃಷಿ ವಿಕಾಸ ಯೋಜನೆಯಡಿಯೂ 100+4 ಕುರಿ/ಮೇಕೆ ಘಟಕಕ್ಕೆ 7,00,000ರೂ ಸಹಾಯಧನ ನಿಗಧಿಮಾಡಲಾಗಿದೆ. ಈ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗು ಸಾಮಾನ್ಯವರ್ಗದವರಿಗೆ ಶೇ 25 ರಷ್ಟು ಸಹಾಯಧನ ನೀಡಲಾಗುತ್ತದೆ.
ನಿಗಮದಲ್ಲಿ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘÀದಲ್ಲಿ ಸದಸ್ಯರಾಗಿರುವ, ಇಲಾಖೆನಿಗಮದಿಂದ ಸಹಾಯಧನ ಸೌಲಭ್ಯ ಪಡೆದ, ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ತರಬೇತಿ ಹೊಂದಿದ್ದು ಕುರಿ ಮೇಕೆ ಸಾಕಾಣಿಕೆಗೆ ಜಮೀನು ಇದ್ದು, ಹಸಿರು ಒಣ ಮೇವನ್ನು ಒದಗಿಸುವ ಸಾಮಥ್ರ್ಯ ಇರಬೇಕು.
ಅರ್ಜಿಯನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಮಾನಂದವಾಡಿ ರಸ್ತೆ, ಚಾಮುಂಡಿಪುರಂ, ಮೈಸೂರು-570008 ಇಲ್ಲಿಗೆ ಅಥವಾ ಸಂಬಂಧ ಪಟ್ಟ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಮೂಲಕ ಫೆಬ್ರವರಿ 10 ರೊಳಗೆ ಸಲ್ಲಿಸಬೇಕು ಹೆಚ್ಚಿನ ಮಾಹಿತಿಗೆ ಮೈಸೂರಿನಲ್ಲಿರುವ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ, ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ನಗರದಲ್ಲಿ ಫೆ 3ರಿಂದ ಸಿನಿಮೋತ್ಸವ ಸಪ್ತಾಹ : ಉಚಿತ ಪ್ರವೇಶ
ಚಾಮರಾಜನಗರ, ಜ. 31 (ಕರ್ನಾಟಕ ವಾರ್ತೆ):- ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಚಲನಚಿತ್ರಗಳು ಜನಸಾಮಾನ್ಯರಿಗೆ ತಲುಪಲಿ ಎಂಬ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿನಿಮೋತ್ಸವ ಸಪ್ತಾಹ ಕಾರ್ಯಕ್ರಮವನ್ನು ಫೆಬ್ರವರಿ 3 ರಿಂದ 9 ರವರೆಗೆ ನಗರದ ಸಿಂಹ ಮೂವಿ ಪ್ಯಾರಡೈಸ್ ಚಿತ್ರಮಂದಿರದಲ್ಲಿ ಬೆಳಗಿನ ಪ್ರದರ್ಶನದಲ್ಲಿ ಆಯೋಜಿಸಿದೆ.
ಫೆಬ್ರವರಿ 3ರಿಂದ 9ರವರೆಗೆ ಸಿಂಹ ಮೂವಿ ಪ್ಯಾರಡೈಸ್ ಚಿತ್ರಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ 2015ನೇ ಕ್ಯಾಲೆಂಡರ್ ವರ್ಷದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಲನಚಿತ್ರಗಳಲ್ಲಿ ರಾಜ್ಯ ಪ್ರಶಸ್ತಿಗೆ ಭಾಜನವಾಗಿರುವ ಕನ್ನಡದ ಐದು ಸಿನಿಮಾಗಳನ್ನು ಪ್ರದರ್ಶಿಸಲಾಗುವುದು. ಫೆಬ್ರವರಿ 3 ರಂದು ಮೈತ್ರಿ, ಫೆಬ್ರವರಿ 4 ರಂದು ಶಿವಯೋಗಿ ಶ್ರೀಪುಟ್ಟಯ್ಯಜ್ಜ, ಫೆಬ್ರವರಿ 5 ರಂದು ತಿಥಿ, ಫೆಬ್ರವರಿ 6 ರಂದು ಕೃಷ್ಣಲೀಲಾ, ಫೆಬ್ರವರಿ 7 ರಂದು ರಂಗಿತರಂಗ, ಫೆಬ್ರವರಿ 8 ರಂದು ತಿಥಿ ಹಾಗೂ ಫೆಬ್ರವರಿ 9 ರಂದು ಮೈತ್ರಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಈ ಸದಾವಕಾಶವನ್ನು ಬಳಸಿಕೊಳ್ಳಬಹುದು.
ಮೈತ್ರಿ: ಗಿರಿರಾಜ್ ನಿರ್ದೇಶನದಲ್ಲಿ ಪುನೀತರಾಜ್‍ಕುಮಾರ್, ಮೋಹನಲಾಲ್ ತಾರಗಣದ ಮೈತ್ರಿ ಚಿತ್ರ ಪ್ರತಿಭೆಗೆ ಬಡತನವಿಲ್ಲ. ಪ್ರೋತ್ಸಾಹ ಸಿಕ್ಕರೆ ಸಾಧನೆ ಸಾದ್ಯ ಎನ್ನುವ ಕಥಾಹಂದರ ಹೊಂದಿದೆ.
ಶಿವಯೋಗಿ ಶ್ರೀಪುಟ್ಟಯ್ಯಜ್ಜ: ದಿವಂಗತ ಶ್ಯಾಂ ನವಲೆ ನಿರ್ದೇಶನದ ವಿಜಯರಾಘವೇಂದ್ರ ನಟಿಸಿರುವ ಈ ಚಿತ್ರವು ಸಂಗೀತ ಕಲಾ ಪರಾಂಗತ ಎನ್ನಿಸಿದ ಗದಗಿನ ಶ್ರೀ ವೀರೇಶ್ವರ ಪುಣ್ಯ ಆಶ್ರಮದ ಡಾ. ಪಂಡಿತ ಪುಟರಾಜ ಗವಾಯಿಗಳ ಜೀವನಾಧಾರಿತ ಸಿನಿಮಾ.
ತಿಥಿ: ಹೊಸ ನಿರ್ದೇಶಕ ಹೊಸ ಕಲಾವಿದರ ನೂತನ ಕಥೆಯೊಂದಿಗೆ ಹೊಸ ಛಾಪು ಮೂಡಿಸಿದ ತಿಥಿ ಸಿನಿಮಾ ಹಳ್ಳಿಯೊಂದರ ನೆಲೆಗಟ್ಟಿನ ನೈಜ ಸಿನಿಮಾವಾಗಿದ್ದು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಕೃಷ್ಣಲೀಲಾ : ಶಶಾಂಕ್ ನಿರ್ದೇಶನದಲ್ಲಿ ಅಜಯ್ ರಾವ್ ನಿರ್ಮಿಸಿ ನಟಿಸಿರುವ ಕೃಷ್ಣಲೀಲಾ ಇಂದಿನ ಅಗತ್ಯಗಳಲ್ಲಿ ಒಂದಾಗಿರುವ ಮೊಬೈಲ್ ಅವಾಂತರದ ಮೂಲಕ ಜೀವನ ಬದಲಾಗುವ ರೀತಿಯನ್ನು ಹೇಳಿರುವ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದೆ.
ರಂಗಿತರಂಗ: ಕನ್ನಡ ಚಿತ್ರರಂಗದಲ್ಲಿ ಇಂದಿನ ಅದ್ದೂರಿ ಚಿತ್ರಗಳ ಪೈಪೋಟಿ ನಡುವೆ ವರ್ಷ ಪೂರೈಸಿದ ಚಿತ್ರ ರೋಚಕಥೆ ಕುತುಹಲ ಕಂಡುಕೊಂಡು ಪತ್ತೇದಾರಿ ಕಥೆಯ ಜನಮನ್ನಣೆ ಗಳಿಸಿರುವ ಸಿನಿಮಾ ಇದಾಗಿದೆ.
ಸಾರ್ವಜನಿಕರು ಈ ಸದಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆ ಕೋರಿದೆ.
Subscribe to:
Post Comments (Atom)
01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ
ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...
ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು
-
ಹ್ಯಾಟ್ಸ್ ಆಫ್.. ಟು.. ಎಮ್.ಎಲ್.ಎ. ಪುಟ್ಟರಂಗಶೆಟ್ಟಿ ಸಾಹೇಬ್ರೇ..! . … ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ದಯಮಾಡಿ ಕ್ಷಮಿಸಿ ಯಾರ ಹಂಗಿಗೂ ಒಳಗಾ...
-
ವರ್ಷದಲ್ಲಿ ಮೂರು ಬಾರಿ ವರ್ಗಾವಣೆ ಕಸರತ್ತು ನಡೆಸಿದ ಸರ್ಕಾರ, ರಜೆಯನ್ನೆ ಹಾಕದೇ ವರ್ಷ ಪೂರೈಸಿದ ಎಸ್ಪಿ ಕುಲದೀಪ್ ಕುಮಾರ್ ಜೈನ್ ವರದಿ ರಾಮಸಮುದ್ರ ಎಸ್.ವೀ...
-
ಮಿಸ್ ಯೂ ಟು ಆಲ್, ಥ್ಯಾಂಕ್ಯು ಟು ಆಲ್ ಎಂದು ಭಾವುಕದಿಂದ ಕಣ್ಣೀರಿಟ್ಟ ಎಸ್ಪಿ ಜೈನ್ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ...
-
ನವ ದಂಪತಿಗಳಿಗೆ ನಿರಾಸೆ............................... ಚಾಮರಾಜೇಶ್ವರ ರಥೋತ್ಸವ, ನಡೆಯುತ್ತಾ.! ಚಾಮರಾಜನಗರ, ಮೇ : ಆಷಾಢದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಖ...
-
ಇಂಜಿನಿಯರಿಂಗ್ ವಿದ್ಯಾರ್ಥಿನಿ: ಆತ್ಮಹತ್ಯೆಗೆ ಯತ್ನ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ ಮೇ 18: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪ್...
-
******************************************************* ಎಸ್ಪಿ ಕುಲದೀಪ್ ಕುಮಾರ್ ಜೈನ್ ಪ್ರಾಣಾಪಾಯದಿಂದ ಪಾರು REPORTED BY S.VEERABHADRA SWAMY. R...
-
ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ್ವರ ದೇವಾಲಯ.. VSS ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ...
-
ಅಕ್ರಂ ದಂದೆಗಳನ್ನ ಮಟ್ಟ ಹಾಕಿದ ಚಾಮರಾಜನಗರದ ಐ. ಪಿ.ಎಸ್ ಆದಿಕಾರಿ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆ, ಶ್ರೀ ಧರ್ಮೇಂದ್ರ ಕುಮಾರ್ ಮೀನಾ, (ಐಪಿಎಸ್.) ...
-
ನ್ಯೂ ಬೀಟ್ ಸಿಸ್ಟಂ…ಹಾಗಂದ್ರೇನು..? ಪ್ರತಿಯೊಬ್ಬಸಾರ್ವಜನಿಕ ಗಮನಕ್ಕೆ ಸುದ್ದಿ ಓದಿದ ಮೇಲೆ ಶೇರ್ ಮಾಡುವುದನ್ನು ಮರೆಯಬೇಡಿ..ನಿಮ್ಮ ಬೀದಿಗೆ ಬಂದಾಗ ಪೋಲೀಸರೊಂದ...
-
ಕೇಸರಿ ದ್ವಜ ಮತ್ತು ಸ್ಕೂಟರ್ ಬೆಂಕಿಹಾಕಿದ ದುಷ್ಕರ್ಮಿಗಳು ವರದಿ: ರಾಮಸಮುದ್ರ ಎಸ್ ವೀರಭದ್ರಸ್ವಾಮಿ (ವಾಹನದ ನಂಬರ್ ಅನ್ನು ನಾವೇ ಅಳಸಿಲಾಗಿದೆ. ಕ್ಷಮ...
No comments:
Post a Comment