Tuesday, 24 January 2017

25-01-2017 ಚಾಮರಾಜನಗರ ಸುದ್ದಿ

ರಾಜ್ಯ ಮಟ್ಟದ ಪ್ರಬಂಧ ಮತ್ತು ಕವನ ಸ್ಪರ್ಧೆ ಚಾಮರಾಜನಗರ :- ವಿಶ್ವಗುರು ಬಸವಣ್ಣನವರ ಮತ್ತು ಶಿವಶರಣರ ದಿವ್ಯ ಸಂದೇಶವನ್ನು ಜನಮನಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮತ್ತು ಪರಿಚಯಕ್ಕಾಗಿ ಬೆಂಗಳೂರಿನ ಕೇಂದ್ರ ಬಸವ ಸಮಿತಿಯು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಮತ್ತು ಕವನ ಸ್ಪರ್ಧೆಯನ್ನು ಏರ್ಪಡಿಸಿದೆ. ಬಸವಣ್ಣನವರ ಪರಿವರ್ತನಾತ್ಮಕ ಮನೋಧರ್ಮ: ಅಂದು- ಇಂದು- ಮುಂದು ಪ್ರಬಂಧದ ವಿಷಯ ಮತ್ತು ಬಸವಾದಿ ಶರಣರ ದಿವ್ಯ ಸಂದೇಶ ಸಾರುವ ಕವಿತೆಗಳು ಕವನದ ವಿಷಯ ಕುರಿತು ಉದಯೋನ್ಮುಖ ಹಾಗೂ ಪ್ರತಿಭಾವಂತ ಬರಹಗಾರರಿಂದ, ಕವಿಗಳಿಂದ ಪ್ರಬಂಧ ಮತ್ತು ಕವನಗಳನ್ನು ಆಹ್ವಾನಿಸಲಾಗಿದೆ. ಪ್ರಬಂಧ 6 ಪುಟಗಳಿಗೆ ಮಿಕ್ಕದಂತೆ, ಕವನ 2 ಪುಟಗಳಿಗೆ ಮಿಕ್ಕದಂತೆ ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಅಥವಾ ಡಿ.ಟಿ.ಪಿ ಮಾಡಿಸಿ ಸ್ವ ವಿಳಾಸ, ಕಿರು ಪರಿಚಯ, ಭಾವ ಚಿತ್ರ ಹಾಗೂ ವ್ಯಾಟ್ಸಪ್ ನಂ. ಮೊಬೈಲ್ ನಂಬರದೊಂದಿಗೆ ಫೆಬ್ರವರಿ 28 ರೊಳಗೆ ಅರವಿಂದ ಬಸಪ್ಪ ಜತ್ತಿ, ಅಧ್ಯಕ್ಷರು, ಬಸವ ಸಮಿತಿ, ಬಸವ ಭವನ, ಶ್ರೀ ಬಸವೇಶ್ವರ ರಸ್ತೆ, ಬೆಂಗಳೂರು- 560001 ಈ ವಿಳಾಸಕ್ಕೆ ಕಳುಹಿಸಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸಲು ವಯಸ್ಸಿನ ನಿರ್ಬಂಧವಿರುವದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9448920888 ಸಂಪರ್ಕಿಸಬೇಕೆಂದು ಕೇಂದ್ರ ಬಸವ ಸಮಿತಿ ನಿರ್ದೇಶಕ ಮೋಹನ ಬಸವನಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಬಂಧ / ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ದಿನಾಂಕ : 29-04-2017 ಬಸವ ಜಯಂತ್ಯೋತ್ಸವದಂದು ಬೆಂಗಳೂರು ಬಸವ ಭವನದಲ್ಲಿ ಬಹುಮಾನ, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಂಶನಾ ಪತ್ರ ನೀಡಲಾಗುವುದು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. 10000/-. ದ್ವಿತೀಯ ಬಹುಮಾನ ರೂ. 6000/-. ಮತ್ತು ತೃತೀಯ ಬಹುಮಾನ ರೂ. 3000/- ಹಾಗೂ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. 5000/-, ದ್ವಿತೀಯ ಬಹುಮಾನ ರೂ. 3000/- ಮತ್ತು ತೃತೀಯ ಬಹುಮಾನ ರೂ. 2000/- ಕೊಡಲಾಗುವುದೆಂದು ಬಸವ ಸಮಿತಿ ನಿರ್ದೇಶಕರು ತಿಳಿಸಿರುತ್ತಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು