Tuesday, 28 June 2016

ಚಾಮರಾಜನಗರ ಪೊಲೀಸ್ ಇಲಾಖೆಗೆ ಸೇರಿದ ಡಿ ಗ್ರೂಪ್ ನೌಕರೆ ಕಾಲು ಜಾರಿ ರೈಲುಗೆ ಸಿಲುಕಿ ಸಾವು( 28-06-2016)






ಚಾಮರಾಜನಗರ ಪೊಲೀಸ್ ಇಲಾಖೆಗೆ ಸೇರಿದ ಡಿ ಗ್ರೂಪ್ ನೌಕರೆ ಕಾಲು ಜಾರಿ ರೈಲುಗೆ ಸಿಲುಕಿ  ಸಾವು
      ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ : ಮೈಸೂರಿನಿಂದ  ಚಾಮರಾಜನಗರಕ್ಕೆ ಕರ್ತವ್ಯಕ್ಕೆ ಬರುತ್ತಿದ್ದ ವೇಳೆ ರೈಲು ಹತ್ತಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ರೈಲಿಗೆ ಸಿಲುಕಿಕೊಂಡಿರುವ ಘಟನೆ ಚಾಮರಾಜಪುರಂ ರೈಲು ನಿಲ್ದಾಣದಲ್ಲಿ ನಡೆದಿದೆ.
ಮೈಸೂರಿನ ಬೋಗಾದಿ ನಿವಾಸಿ ಪ್ರೇಮಮ್ಮ (54) ಮೃತ ದುರ್ದೈವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರೇಮಮ್ಮ ಅವರು ಚಾಮರಾಜನಗರ ಪೊಲೀಸ್ ವರೀಷ್ಟಾಧಿಕಾರಿ ಕಚೇರಿಯಲ್ಲಿ ಡಿ.ಗ್ರೂಪ್ ( ದಲಾಯತ್ ) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪ್ರತಿನಿತ್ಯ ತಮ್ಮ ಅಳಿಯ ಚಾಮರಾಜಪುರಂ ರೈಲು ನಿಲ್ದಾಣಕ್ಕೆ ತಂದು ಬಿಟ್ಟು ಹೋಗುತ್ತಿದ್ದರು. ಎಂದಿನಂತೆ ಪ್ರತಿನಿತ್ಯ ಮೈಸೂರಿನಿಂದ ಚಾಮರಾಜನಗರದೆಡೆಯ 7.20 ವೇಳೆಯ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು.  ಇಂದು ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅಚಾನಕ್ ಆಗಿ ಜಾರಿ ಸಿಲಿಕಿಕೊಂಡಿದ್ದಾರೆ.
ಮೃತರಿಗೆ ತಮ್ಮ ಪತಿಯ ನಿಧನ ನಂತರ ಅನುಕಂಪಧಾರಿತ ಹುದ್ದೆ ಸಿಕ್ಕಿತ್ತು ಎನ್ನಲಾಗಿದೆ. ಒಂದು ಗಂಡು, ಹೆಣ್ಣು ಮಕ್ಕಳಿದ್ದಾರೆ  ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Sunday, 26 June 2016

18-06-2016 ರಿಂದ 26-06-2016 ಚಾಮರಾಜನಗರ ಪ್ರಮುಖ ಸುದ್ದಿಗಳು






















ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಕುಟುಂಬದ ವಿರುದ್ದ ಎಸಿಬಿಯಲ್ಲಿ ದೂರು ದಾಖಲು
ಚಾಮರಾಜನಗರ.ಜೂನ್.20: ಅಕ್ರಮ ಗಣಿಗಾರಿಕೆ ಸಂಬಂಧ ಸಹಕಾರ ಮತ್ತು ಸಕ್ಕರೆ ಖಾತೆ ಸಚಿವ ಹಾಗÀೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ವಿರುದ್ದ ಎಸಿಬಿಯಲ್ಲಿ ದೂರು ದಾಖಲಾಗಿದೆ.
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಹಕಾರ ಮತ್ತು ಸಕ್ಕರೆ ಖಾತೆ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಪುತ್ರ ಗುಂಡ್ಲುಪೇಟೆ ತಾಲ್ಲೂಕಿನ ಬೆಳಚವಾಡಿ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ತನಿಖೆ ನಡೆಸುವಂತೆ ಗುಂಡ್ಲುಪೇಟೆ ಮಂಡಲ ಬಿ.ಜೆ.ಪಿ ಅಧ್ಯಕ್ಷ ಹಾಗೂ ಮಾಜಿ ಪುರಸಭಾ ಅಧ್ಯಕ್ಷ ಎಲ್.ಸುರೇಶ್ ಎಸಿಬಿಗೆ ದೂರು ದಾಖಲಿಸಿದ್ದಾರೆ.
ಸಹಕಾರ ಮತ್ತು ಸಕ್ಕರೆ ಖಾತೆ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಪುತ್ರ ಹೆಚ್.ಎಂ. ಗಣೇಶ್‍ಪ್ರಸಾದ್‍ರವರು ಬೆಳಚವಾಡಿ ಗ್ರಾಮದ ಸರ್ವೆ ನಂಬರ್ 243 ರಲ್ಲಿ ಅಕ್ರಮ ಗಣಿಕೆಗಾರಿಕೆ ನಡೆಸಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು 4 ಲಕ್ಷರೂಗಳನ್ನು ದಂಡ ವಿಧಿಸಿದ್ದಾರೆ. ಅದರಂತೆ ಮಹದೇವಪ್ರಸಾದ್ ಪುತ್ರ ಗಣೇಶ್ ಪ್ರಸಾದ್ ಇಲಾಖೆಗೆ ಕಳೆದ ಮಾರ್ಚ್ 28 ರಂದು ನಾಲ್ಕು ಲಕ್ಷರೂಗಳನ್ನು ದಂಡ ಪಾವತಿಸಿದ್ದಾರೆ ಇದೆಲ್ಲಾ ಗಮನಿಸಿದರೆ ಗಣೇಶ್ ಪ್ರಸಾದ್ ಬೆಳಚವಾಡಿ ಗ್ರಾಮದಲ್ಲಿ ಬಿಳಿಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಸಪಷ್ಟವಾಗಿದ್ದು, ಅದರಲ್ಲು  ತಂದೆಯ ಪ್ರಭಾವದಿಂದ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಸ್ಪಷ್ಟವಾಗಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಹಿರಿಕಾಟಿ, ಬೆಳಚವಾಡಿ, ಕೋಟೆಕೆರೆ ಹೀಗೆ ಹಲವಾರು ಕಡೆ ಇರುವ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆಯನ್ನು ಸಚಿವ ಮಹದೇವಪ್ರಸಾದ್ ತಾವೇ ಸ್ವತಃ ನಡೆಸುತ್ತಿದ್ದಾರೆ. ಅದೂ ಅಲ್ಲದೆ ಅವರ ಪುತ್ರ ಗಣೇಶ್‍ಪ್ರಸಾದ್ ಮತ್ತು ಸಹೋದರ ಹೆಚ್.ಎಸ್.ನಂಜುಂಡಪ್ರಸಾದ್ ಹಾಗೂ ಬಾವಮೈದುನ ಮಲ್ಲಿಕಾರ್ಜುನ ಎಲ್ಲರೂ ಸೇರಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಂಚಿನಲ್ಲಿ ಈ ಅಕ್ರಮಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಒಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಲ ಮತ್ತು ಎಡ ಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಈಗ ಗಣಿ ಕಂಟಕ ಸಿಕ್ಕಿಕೊಂಡಿದೆ.





ಚಾಮರಾಜನಗರ: ಶ್ರೀನಿವಾಸ್ ಪ್ರಸಾದ್‍ಗೆ ಕೈ ತಪ್ಪಿದ ಸಚಿವ ಸ್ಥಾನ
ಕಾಂಗ್ರೆಸ್ ಕಾರ್ಯಕರ್ತರಿಂದಲೇ ಬಂದ್
ಚಾಮರಾಜನಗರ.ಜೂ.20: ಮಾಜಿ ಕೇಂದ್ರ ಸಚಿವ ಹಾಗೂ ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್‍ರವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿರುವುದನ್ನು ಖಂಡಿಸಿ, ವಿ.ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳು, ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇಂದು ಚಾಮರಾಜನಗರ ಬಂದ್ ಆಚರಿಸಿದರು.
ಚಾಮರಾಜನಗರ ಬಂದ್ ಹಿನ್ನಲೆಯಲ್ಲಿ ಎಲ್ಲಾ ಅಂಗಡಿಗಳು ಸ್ವಯಂ ಪ್ರೇರಿತರಾಗಿ ಬಂದ್ ಆಗಿದ್ದವು, ನಂಜನಗೂಡು ಮಾರ್ಗವಾಗಿ ಮೈಸೂರಿಗೆ ಹೋಗುವ ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಬಸ್ ಸಂಚಾರ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದರು. ಮೈಸೂರಿಗೆ ಹೋಗುವ ಬಸ್‍ಗಳು ಟಿ.ನರಸೀಪುರ ಮಾರ್ಗವಾಗಿ ಸಂಚಾರ ಮಾಡಿದ್ದರಿಂದ ನಂಜನಗೂಡಿಗೆ ಹೋಗುವ ಪ್ರಯಾಣಿಕೆರು ಪರದಾಡುವಂತಹ ಪರಿಸ್ಥಿತಿ ಇತ್ತು.
ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿ.ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳು ಮಾನವ ಸರಪಳಿ ನಿರ್ಮಿಸಿ ಮುಖ್ಯಮಂತ್ರಿ ಸಿದ್ದರಾಯಮಯ್ಯರವರಿಗೆ ಧಿಕ್ಕಾರ ಕೂಗಿ ರಸ್ತೆ ನಡುವಲ್ಲಿ ಟೈರ್‍ಗಳಿಗೆ ಬೆಂಕಿ  ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು, ಪ್ರಯಾಣಿಕರು ಆಟೋದಲ್ಲಿ ಸಂಚರ ಮಾಡುವ ಸ್ಥಿತಿ ಇತ್ತು, ನಗರದ ಎಲ್ಲಾ ಚಲನ ಚಿತ್ರ ಮಂದಿರಗಳು ಪ್ರದರ್ಶನಗಳು ನಿಲ್ಲಿಸಿ ಬಂದ್ ಬೆಂಬಲ ಸೂಚಿಸಿತು. ಶಾಲಾ ಕಾಲೇಜುಗಳು ಸಹ ಬಂದ್ ಆಗಿದ್ದವು.
ಚಾಮರಾಜೇಶ್ವರ ಉದ್ಯಾನವನದಲ್ಲಿ ಸಮಾವೇಶಗೊಂಡ ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳು, ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಶ್ರೀನಿವಾಸ್ ಪ್ರಸಾದ್‍ರವರನ್ನುಸಂಪುಟದಲ್ಲಿ ಮುಂದುವರೆಸುವಂತೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ನಗರಸಭೆಯ ಉಪಾಧ್ಯಕ್ಷ ರಾಜಪ್ಪ, ಸದಸ್ಯ ಕೇಶವ,ಸಿ.ಕೆ. ಮಂಜುನಾಥ್, ಪಿ.ಚಿನ್ನಸ್ವಾಮಿ ಮುಖಂಡರಾದ ಕಾಗಲವಾಡಿ ಚಂದ್ರು, ಮಹೇಶ್‍ಕುದರ್, ಚೂಡಾ ಸದಸ್ಯ ಶ್ರೀಕಾಂತ್, ಆರ್.ಪುಟ್ಟಮಲ್ಲಪ್ಪ, ಮಲ್ಲುಪುರ ಶಿವಕುಮಾರ್ ಸೇರಿದಂತೆ ಅನೇಕರು ಇದ್ದರು.


ಜೂ. 21ರಂದು ಬಾಲ್ಯ ವಿವಾಹ ನಿಷೇಧ ಪ್ರಚಾರಾಂದೋಲನ ಕುರಿತು ಸಮಾಲೋಚನೆ
ಚಾಮರಾಜನಗರ, ಜೂ. 20 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಕರ್ನಾಟಕ ಬಾಲ್ಯ ವಿವಾಹ ನಿಷೇಧ ಕಾರ್ಯಪಡೆ ಇವರುಗಳ ಸಹಭಾಗಿತ್ವದಲ್ಲಿ ಜೂನ್ 21ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಬಾಲ್ಯ ವಿವಾಹ ನಿಷೇಧ ಪ್ರಚಾರಾಂದೋಲನ ಕುರಿತು ಸಮಾಲೋಚನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿ ಬಿ. ರಾಮು ಕಾರ್ಯಕ್ರಮ ಉದ್ಘಾಟಿಸುವರು. ತಾಲೂಕು ಮತ್ತು ಜಿಲ್ಲಾ ಮಟ್ಟದ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಡನೆ ಬಾಲ್ಯ ವಿವಾಹ ನಿಷೇಧ ಕುರಿತು ಸಮಾಲೋಚನೆ ನಡೆಯಲಿದೆ.
ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್‍ನ ಕಾರ್ಯಕಾರಿ ನಿರ್ವಾಹಕರಾದ ಎನ್.ವಿ. ವಾಸುದೇವ ಶರ್ಮಾ ಅವರು ಬಾಲ್ಯ ವಿವಾಹ–ವಾಸ್ತವಾಂಶಗಳು ಕುರಿತು, ಬಾಲ್ಯ ವಿವಾಹ ನಿಷೇಧ ಕೋಶದ ಉಪನಿರ್ದೇಶಕರಾದ ವೀಣಾ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಪಾತ್ರ ಕುರಿತು ಹಾಗೂ ಬೆಂಗಳೂರಿನ ಮನುಷ್ ಸಂಸ್ಥೆಯ ನಿರ್ದೇಶಕರಾದ ಬಿ.ಸಿ. ಗೋಪಾಲ್ ಅವರು ಚಾಮರಾಜನಗರ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳ ವಾಸ್ತವಾಂಶಗಳು ಕುರಿತು ಮÁತನಾಡಲಿದ್ದಾರೆ ಎಂದು ತಿಳಿಸಿದೆ.
ಜೂ. 21ರಂದು ನಗರದಲ್ಲಿ ರಫ್ತು ಜಾಗೃತಿ ಶಿಬಿರ
ಚಾಮರಾಜನಗರ, ಜೂ. 20 : ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಗ್ರಾನೈಟ್ ಉದ್ಯಮಗಳ ಸಂಘÀ ಮತ್ತು ವರ್ತಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಜೂನ್ 21ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜೋಡಿ ರಸ್ತೆಯಲ್ಲಿರುವ ವರ್ತಕರ ಭವನದಲ್ಲಿ ರಫ್ತು ಜಾಗೃತಿ ಶಿಬಿರ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅಧ್ಯಕ್ಷತೆ ವಹಿಸುವರು.
ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಪ್ಸಿಬಾರಾಣಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಿ.ಆರ್. ಅಶ್ವತ್ ನಾರಾಯಣ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಎ. ಜಯಸಿಂಹ, ಜಿಲ್ಲಾ ಗ್ರಾನೈಟ್ ಉದ್ಯಮಗಳ ಸಂಘದ ಅಧ್ಯಕ್ಷರಾದ ಜಿ.ಎಂ. ಹೆಗ್ಗಡೆ, ವರ್ತಕರ ಸಂಘದ ಅಧ್ಯಕ್ಷರಾದ ಬಾಲಸುಬ್ರಮಣ್ಯ ಹಾಗೂ ವಿಟಿಪಿಸಿ ಉಪನಿರ್ದೇಶಕರಾದ ಮಹಮ್ಮದ್ ಅತೀಕುಲ್ಲಾ ಷರೀಫ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
 ಶಿಬಿರದಲ್ಲಿ ಬೆಂಗಳೂರಿನ ವಿಟಿಪಿಸಿ ಉಪನಿರ್ದೇಶಕರಾದ ಮಹಮ್ಮದ್ ಅತೀಕುಲ್ಲಾ ಷರೀಫ್ ರಫ್ತು ಕಾರ್ಯಕ್ರಮಗಳ ಪರಿಚಯ ಹಾಗೂ ರಫ್ತುದಾರರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು, ಹಿರಿಯ ರಫ್ತು ಸಲಹೆಗಾರರಾದ ಪ್ರಸನ್ನ ಎಸ್ ಶ್ರೀನಿವಾಸನ್ ಅವರು ರಫ್ತು ನಿರ್ವಹಣೆ ಮತ್ತು ಮಾರುಕಟ್ಟೆ, ಕರ್ನಾಟಕ ರಾಜ್ಯ ವ್ಯವಸಾಯ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಉತ್ತೇಜಕ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಉಮೇಶ್ ಅವರು ವ್ಯವಸಾಯ ಉತ್ಪನ್ನಗಳಿಗೆ ರಫ್ತು ಅವಕಾಶಗಳು ಕುರಿತು ಉಪನ್ಯಾಸ ನೀಡುವರು ಎಂದು ತಿಳಿಸಿದೆ.
ಜೂ. 21ರಂದು ವಿಶ್ವ ಯೋಗ ದಿನಾಚರಣೆ
ಚಾಮರಾಜನಗರ, ಜೂ. 20 : ಕೇಂದ್ರ ಆಯುಷ್ ಮಂತ್ರಾಲಯ, ರಾಜ್ಯ ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಧರ್ಮಸ್ಥಳ ಮಂಜುನಾಥ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಡಿ ವಿಶ್ವ ಯೋಗ ದಿನ ಆಚರಣೆ ಕಾರ್ಯಕ್ರಮವನ್ನು ಜೂನ್ 21ರಂದು ಬೆಳಿಗ್ಗೆ 6.45 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ,  ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್.ಜಯಣ್ಣ, ಆರ್.ನರೇಂದ್ರ, ಎಸ್.ನಾಗರಾಜು (ಸಂದೇಶ್ ನಾಗರಾಜು), ಆರ್.ಧರ್ಮಸೇನ, ಗೋ. ಮಧುಸೂದನ, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕಾ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಆಯುಷ್ ಇಲಾಖೆಯ ನಿರ್ದೇಶಕರಾದ ಸುಭಾಷ್ ಕೆ ಮಾಲ್ಕೆಡ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರೆಂದು ತಿಳಿಸಿದೆ.


ಆನೆ ಧಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಶಾಸಕರಿಂದ ಪರಿಹಾರ ವಿತರಣೆ
ಚಾಮರಾಜನಗರ.ಜೂ.20: ಆನೆ ಧಾಳಿಯಿಂದ ಮೃತಪಟ್ಟ ವಡ್ಡರಹಳ್ಳಿ ಗ್ರಾಮದ ಮಹದೇವಗೌಡ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ನೀಡಲಾದ ಪರಿಹಾರದ ಚೆಕ್‍ನ್ನು  ಶಾಸಕ ಪುಟ್ಟರಂಗಶೆಟ್ಟಿ ವಿತರಿಸಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು.
ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ಮಹದೇವಗೌಡ ಎಂಬುವರು ಗ್ರಾಮದ ಪಕ್ಕದಲ್ಲಿರುವ ಕೆರೆಗೆ ಹಸುಗಳಿಗೆ ನೀರು ಕುಡಿಸಲು ತೆರಳಿದಾಗ ಆನೆ ದಿಢೀರ್ ಧಾಳಿಯಿಂದ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಮೃತನ ಕುಟುಂಬ ವಿರ್ವಹಣೆಗೆ ಈ ಹಿಂದೆ 2ಲಕ್ಷರೂಗಳ ಪರಿಹಾರ ವಿತರಿಸಲಾಗಿತ್ತು.ಮತ್ತಷ್ಟು ಪರಿಹಾರ ಕಲ್ಪಿಸುವ ಸಲುವಾಗಿ ಇಂದು ಶಾಸಕರು ಅರಣ್ಯ ಇಲಾಖೆಯಿಂದ ನೀಡಲಾದ  3ಲಕ್ಷರೂಗಳ ಪರಿಹಾರವನ್ನು ಮೃತ ಮಹದೇವಗೌಡ ಪತ್ನಿ ನಾಗಮ್ಮಗೆ  ವಿತರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೊತ್ತಲವಾಡಿ ಸೋಮಲಿಂಗಪ್ಪ, ಶಂಕರಪ್ಪ, ಬಸವಣ್ಣ, ಚನ್ನಬಸವೇಗೌಡ, ನಾಗಶೆಟ್ಟಿ,ಉಪವಲಯ ಅರಣ್ಯಾಧಿಕಾರಿ ಕೃಷ್ಣಯ್ಯ, ಸುರೇಶ್, ಮಹೇಶ್, ಮೂರ್ತಿ,ಇತರರು ಇದ್ದರು.




   

ಡಿ.ಎಂ. ನಂಜುಂಡಪ್ಪ ವರದಿ ಅನುದಾನದ ನಿಖರ ಮಾಹಿತಿಗೆ ಸೂಚನೆ
ಚಾಮರಾಜನಗರ, ಜೂ. 18- ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸು ಅನ್ವಯ ಬಿಡುಗಡೆಯಾಗಿರುವ ವಿಶೇಷ ಅಭಿವೃದ್ಧಿ ಅನುದಾನ ವೆಚ್ಚ ಕುರಿತ ವಿವರಗಳನ್ನೊಳಗೊಂಡ ನಿಖರ ಮಾಹಿತಿಯನ್ನು ಜುಲೈ ತಿಂಗಳೊಳಗೆ ಸಲ್ಲಿಸುವಂತೆ ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸುಗಳ ಅನುಷ್ಠಾನ ಉನ್ನತ ಅಧಿಕಾರಿ ಸಮಿತಿಯ ಅಧ್ಯಕ್ಷರಾದ ವೆಂಕಟರಾವ್ ಘÉೂೀರ್ಪಡೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಡಾ. ಡಿ.ಎಂ. ನಂಜುಂಡಪ್ಪ ವರದಿ ವಿಶೇಷ ಅಭಿವೃದ್ಧಿ ಯೋಜನೆ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ. ಡಿ.ಎಂ. ನಂಜುಂಡಪ್ಪ ವರದಿ ಮೇರೆಗೆ ಕಳೆದ 2007-08ನೇ ಸಾಲಿನಿಂದ 2014-15ರ ಅಂತ್ಯಕ್ಕೆ ಚಾಮರಾಜನಗರ ತಾಲೂಕಿಗೆ 128 ಕೋಟಿ, ಕೊಳ್ಳೇಗಾಲ ತಾಲೂಕಿಗೆ 93 ಕೋಟಿ, ಗುಂಡ್ಲುಪೇಟೆ ತಾಲೂಕಿಗೆ 70.03 ಕೋಟಿ ಬಿಡುಗಡೆಯಾಗಿದೆ. ಇದರಡಿ ವೆಚ್ಚ ಮಾಡಲಾದ ವರದಿಯ ವಿವರಗಳನ್ನು ನಿಗದಿತ ನಮೂನೆಯಲ್ಲಿ ನೀಡಲಾಗಿಲ್ಲ. ಇದರಿಂದ ಒಟ್ಟಾರೆ ಪ್ರಗತಿಯ ಚಿತ್ರಣದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಹೀಗಾಗಿ ಒಂದು ತಿಂಗಳೊಳಗೆ ವರದಿಯನ್ನು ಪುನರ್ ಅವಲೋಕಿಸಿ ಸಮರ್ಪಕವಾಗಿ ಮಾಹಿತಿ ಒದಗಿಸಬೇಕೆಂದು ವೆಂಕಟರಾವ್ ಘೋರ್ಪಡೆ ತಿಳಿಸಿದರು.
ನಂಜುಂಡಪ್ಪ ವರದಿ ಶಿಫಾರಸು ಅನ್ವಯ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದ್ದು ಇದರಡಿ ಅನೇಕ ಉಪಯೋಗಿ ಕೆಲಸಗಳು ನಡೆದಿವೆ. ಆದರೆ ಕೈಗೊಳ್ಳಲಾಗುವ ಕಾಮಗಾರಿ ಸ್ಥಳದಲ್ಲಿ ವಿವರಗಳನ್ನು ಒಳಗೊಂಡ ಫಲಕಗಳನ್ನು ಅಳವಡಿಸುತ್ತಿಲ್ಲ. ಹೀಗಾಗಿ ಕಾಮಗಾರಿ ಕೈಗೊಂಡ ಬಳಿಕ ಅದರ ಸಂಪೂರ್ಣ ವಿವರಗಳನ್ನೊಳಗೊಂಡ ಫಲಕಗಳನ್ನು ಆಯಾ ಸ್ಥಳಗಳಲ್ಲಿ ಪ್ರದರ್ಶಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ. ಇದಕ್ಕೆ ಕಾರಣ ಹುಡುಕಬೇಕಿದೆ. ಒಂದು ವೇಳೆ ಅನುದಾನದಡಿ ಯೋಜನೆ ಪ್ರಗತಿಯಾಗಿದ್ದರೂ ನಮೂದು ಅಥವಾ ಹಂಚಿಕೆ ಮಾಡುವ ವಿಧಾನದಲ್ಲಿ ತೊಡಕುಗಳು ಇರಬಹುದೇ ಎಂಬ ಬಗ್ಗೆ ಪರಿಶೀಲಿಸಿಕೊಳ್ಳಬೇಕೆಂದು ವೆಂಕಟರಾವ್ ಘೋರ್ಪಡೆ ತಿಳಿಸಿದರು.
ನಂಜುಂಡಪ್ಪ ವರದಿ ಯೋಜನೆ ಮೇರೆಗೆ ಬಿಡುಗಡೆಯಾಗುವ ಅನುದಾನ ವೆಚ್ಚ ಮಾಡಲು ಯಾವುದೇ ಷರತ್ತುಗಳನ್ನು ಹೇರಲÁಗುತ್ತಿಲ್ಲ. ಇದರಿಂದ ಅಭಿವೃದ್ಧಿ ಕೆಲಸಗಳಿಗೆ ಹಣ ಖರ್ಚು ಮಾಡಲು ಮುಕ್ತ ಅವಕಾಶವಿದೆ. ಹೀಗಾಗಿ ಹೆಚ್ಚು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು ಎಂದರು.
ರಾಜ್ಯ ಸರ್ಕಾರ ನಂಜುಂಡಪ್ಪ ವರದಿ ಶಿಫಾರಸು ಅನುಷ್ಠಾನವನ್ನು ಮತ್ತೆ 5 ವರ್ಷಗಳ ಅವಧಿಗೆ ಮುಂದುವರಿಸಿದೆ. ಕಳೆದ ಸಾಲಿನಲ್ಲಿ 2300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಸಾಲಿನ ಬಜೆಟ್‍ನಲ್ಲಿ 3000 ಕೋಟಿ ರೂ.ಗಳನ್ನು ನಿಗದಿ ಮಾಡಿದೆ. ಅನುದಾನ ಲಭ್ಯತೆಗೆ ಅನುಸಾರವಾಗಿ ಪ್ರತೀ ವರ್ಷ ಕ್ರಿಯಾ ಯೋಜನೆ ತಯಾರಿಸಬೇಕು. ಬಿಡುಗಡೆಯಾದ ಹಣ ಸದ್ಬಳಕೆಯಾಗಬೇಕು. ಆಗ ಮಾತ್ರ ಹಿಂದುಳಿದ ತಾಲೂಕುಗಳ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ ಎಂದು ವೆಂಕಟರಾವ್ ಘೋರ್ಪಡೆ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ ಹಿಂದುಳಿದ ತಾಲೂಕುಗಳ ಪ್ರಗತಿಗೆ ನಂಜುಂಡಪ್ಪ ವರದಿ ಮೇರೆಗೆ ಬಿಡುಗಡೆಯಾಗುತ್ತಿರುವ ಅನುದಾನ ಉಪಯೋಗವಾಗುತ್ತಿದೆ. ಚಾಮರಾಜನಗರ ತಾಲೂಕು ಮಳೆ ಆಶ್ರಿತ ಪ್ರದೇಶವಾದ್ದರಿಂದ ಇಲ್ಲಿಗೆ ಹೆಚ್ಚಿನ ಅನುದಾನವನ್ನು ನಿಗದಿ ಮಾಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಉಪಾಧ್ಯಕ್ಷರಾದ ಬಸವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ. ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುನಿರಾಜಪ್ಪ, ಮುಖ್ಯ ಯೋಜನಾಧಿಕಾರಿ ಮಾದೇಶು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.


ಅತ್ಯುತ್ತಮ ಯೋಜನೆ ಕೊಡುಗೆ ನೀಡಿದ್ದ ಧೀಮಂತ ನಾಯಕ ಅರಸು
ಚಾಮರಾಜನಗರ, ಜೂ. 18:- ಕರ್ನಾಟಕ ರಾಜ್ಯದಲ್ಲಿ ಅನೇಕ ಅತ್ಯುತ್ತಮ ಯೋಜನೆಗಳನ್ನು ಜನಸಾಮಾನ್ಯರಿಗೆ ಕೊಡುಗೆಯಾಗಿ ನೀಡಿದ ಧೀಮಂತ ನಾಯಕರು ಡಿ. ದೇವರಾಜ ಅರಸು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ತಿಳಿಸಿದರು.
ನಗರದ ಜಿಲ್ಲಾಡಳತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಡಿ. ದೇವರಾಜ ಅರಸು ಅವರ ಜೀವನದ ಸಂಪೂರ್ಣ ಚಿತ್ರಣವನ್ನು ಪ್ರಸ್ತುತ ಪಡಿಸುವ ನೃತ್ಯ ರೂಪಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಡವರ ಪರ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು. ಉಳುವವನೇ ಭೂಮಿಯ ಒಡೆಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರು. ಇವರ ಆಳ್ವಿಕೆಯಲ್ಲಿ ತಂದ ಸುಧಾರಣಾ ಕ್ರಮಗಳು ಸ್ಮರಣೀಯವಾಗಿದೆ ಎಂದರು.
ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಜನರ ಕಾಳಜಿಯಿಂದ ಹಾವನೂರು ಆಯೋಗ ವರದಿ ಅನುಷ್ಠಾನ ಮಾಡಿದರು. ಇದರಿಂದ ಹಿಂದುಳಿದ ಜನತೆಗೆ ಅನುಕೂಲವಾಗಿದೆ. ಅರಸು ಅವರ ಮಾರ್ಗದರ್ಶನ ಹಾಗೂ ಆದರ್ಶಗಳನ್ನು ನಾವು ಪಾಲನೆ ಮಾಡಬೇಕಿದೆ ಎಂದರು.
ಅರಸು ಅವರ ಬದುಕು ಚಿತ್ರಣವನ್ನು ನಾಗರಿಕರಿಗೆ ನೃತ್ಯರೂಪಕ ಮೂಲಕ ತಿಳಿಸಲು ಹೊರಟಿರುವುದು ಉತ್ತಮ ಕೆಲಸವಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕೆಂದು ರಾಮಚಂದ್ರ ತಿಳಿಸಿದರು.
ನಗರಸಭೆ ಅಧ್ಯಕ್ಷರಾದ ರೇಣುಕಾ ಮಲ್ಲಿಕಾರ್ಜುನ್ ಮಾತನಾಡಿ ಪ್ರಬುದ್ಧ ವ್ಯಕ್ತಿತ್ವವುಳ್ಳ ದೇವರಾಜ ಅರಸು ಅವರು ನೇರ ನುಡಿ, ದಿಟ್ಟತನ ಗುಣಗಳನ್ನು ಹೊಂದಿದ್ದರು. ಹಿಂದುಳಿದ ವರ್ಗ, ದೀನದಲಿತರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದ ಅರಸು ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಿದರು. ಅರಸು ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಅವರ ಒಳ್ಳೆಯ ಕೆಲಸವನ್ನು ಸ್ಮರಿಸಿಕೊಳ್ಳಬೇಕಿದೆ ಎಂದರು.
ಪಿಎಲ್‍ಡಿ ಬ್ಯಾಂಕಿನ ಅದ್ಯಕ್ಷರಾದ ಪಾಪಣ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ಶಿವಕುಮಾರ್, ನೃತ್ಯ ತಂಡದ ನಿರ್ದೇಶಕಿ ರೂಪಾರಾಜೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜೂ. 28ರಂದು ಮಹದೇಶ್ವರ ಬೆಟ್ಟದಲ್ಲಿ ಗೋಲಕ ಹಣ ಎಣಿಕೆ
ಚಾಮರಾಜನಗರ, ಜೂ. 18 - ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಗೋಲಕಗಳ ಹಣ ಎಣಿಕೆ ಕಾರ್ಯ ಜೂನ್ 28ರಂದು ಬೆಳಿಗ್ಗೆ ಅಲ್ಲಿನ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ನಡೆಯಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ಹಣ ಎಣಿಕೆ ಕಾರ್ಯಕ್ಕೆ ಸಹಕರಿಸಲಿದ್ದಾರೆ ಎಂದು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗೃಹರಕ್ಷಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 18 - ಜಿಲ್ಲಾ ಗೃಹರಕ್ಷಕ ದಳ ಸ್ವಯಂ ಸೇವಾ ಸಂಸ್ಥೆಯು ಪುರುಷ ಗೃಹರಕ್ಷಕರನ್ನು ಹಾಗೂ ಮಹಿಳಾ ಗೃಹರಕ್ಷಕಿಯರನ್ನು ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು  ಆಹ್ವಾನಿಸಿದೆ.
ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು, ಕುದೇರು, ಹನೂರು, ಅಗರ-ಮಾಂಬಳ್ಳಿ, ರಾಮಾಪುರ ಹಾಗೂ ಮಹದೇಶ್ವರ ಬೆಟ್ಟ ಸುತ್ತಮುತ್ತಲಿನ ಪ್ರದೇಶಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಕನಿಷ್ಠ 20 ವರ್ಷ ಮೇಲ್ಪಟ್ಟಿರಬೇಕು. ಧೃಢಕಾಯರಾಗಿರಬೇಕು. ಕನಿಷ್ಟ 4ನೇ ತರಗತಿಗಿಂತ ಮೇಲ್ಪಟ್ಟು ವಿದ್ಯಾರ್ಹತೆ  ಇರಬೇಕು. ಅರ್ಜಿಗಳನ್ನು ಸಂಬಂಧಪಟ್ಟ ತಾಲ್ಲೂಕು ಘಟಕ ಮತ್ತು ಉಪ ಘಟಕಗಳಿಂದ ಉಚಿತವಾಗಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯ ಜೊತೆ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿ¸ಸಿದ ವಿದ್ಯಾರ್ಹತೆ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣಪತ್ರ, ಆಧಾರ್‍ಕಾರ್ಡ್, ಪಾನ್‍ಕಾರ್ಡ್, ಚುನಾವಣಾ ಗುರುತಿನ ಚೀಟಿ, ಜಾತಿ ಪ್ರಮಾಣಪತ್ರ, ವೈದ್ಯಾಧಿಕಾರಿಗಳಿಂದÀ ಪಡೆದ ದೈಹಿಕ ದೃಢೀಕರಣ ಪತ್ರ ಮತ್ತು ಬ್ಯಾಂಕ್ ಉಳಿತಾಯ ಖಾತೆ ಜೆರಾಕ್ಸ್ ಪ್ರತಿಗಳು ಮತ್ತು ಇತ್ತೀಚಿನ 2 ಭಾವಚಿತ್ರಗಳನ್ನು ಲಗತ್ತಿಸಬೇಕÀು.
ಅರ್ಜಿಗಳನ್ನು ಘಟಕಾಧಿಕಾರಿಗಳಾದ ಟಿ.ಮಹದೇವಸ್ವಾಮಿ (9663296718) ಚಾಮರಾಜನಗರ, ಶ್ರೀನಿವಾಸನ್    (9449679209) ಗುಂಡ್ಲುಪೇಟೆ, ನಾಗರಾಜು (9741917616) ಯಳಂದೂರು, ಮರಿಸ್ವಾಮಿ (7353045241) ಕೊಳ್ಳೇಗಾಲ, ಸಿದ್ದರಾಜು (9481189079) ಕುದೇರು, ನಾಗರಾಜು (9611598907) ಅಗರ-ಮಾಂಬಳ್ಳಿ, ರಮೇಶ(9141465500, 9742212611) ಹನೂರು,  ದೊಡ್ಡಸ್ವಾಮಿ (9902422129) ರಾಮಾಪುರ,  ಮಾದೇಶ್ (9743472131) ಮಹದೇಶ್ವರ ಬೆಟ್ಟ  ಅವರಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಛೇರಿ ದೂರವಾಣಿ ಸಂಖ್ಯೆ: 08226-225856 ಸಂಪರ್ಕಿಸುವಂತೆ ಗೃಹರಕ್ಷಕ ದಳದ ಸಮಾದೇಷ್ಟರಾದ ಬಸವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ. 21ರಂದು ವಿಶ್ವ ಯೋಗ ದಿನಾಚರಣೆ
ಚಾಮರಾಜನಗರ, ಜೂ. 18 - ಕೇಂದ್ರ ಆಯುಷ್ ಮಂತ್ರಾಲಯ, ರಾಜ್ಯ ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಧರ್ಮಸ್ಥಳ ಮಂಜುನಾಥ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಡಿ ವಿಶ್ವ ಯೋಗ ದಿನ ಆಚರಣೆ ಕಾರ್ಯಕ್ರಮವನ್ನು ಜೂನ್ 21ರಂದು ಬೆಳಿಗ್ಗೆ 6.45 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ,  ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್.ಜಯಣ್ಣ, ಆರ್.ನರೇಂದ್ರ, ಎಸ್.ನಾಗರಾಜು (ಸಂದೇಶ್ ನಾಗರಾಜು), ಆರ್.ಧರ್ಮಸೇನ, ಗೋ. ಮಧುಸೂದನ, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕಾ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಆಯುಷ್ ಇಲಾಖೆಯ ನಿರ್ದೇಶಕರಾದ ಸುಭಾಷ್ ಕೆ ಮಾಲ್ಕೆಡ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.
ಜೂ. 20ರಂದು ಯೋಗ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ
ಚಾಮರಾಜನಗರ, ಜೂ. 18 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 20ರಂದು ಜನಜಾಗೃತಿ ಜಾಥಾ ಕಾರ್ಯಕ್ರಮ ಏರ್ಪಾಡಾಗಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ಚಾಮರಾಜೇಶ್ವರ ದೇವಾಲಯ ಬಳಿ 2 ತಂಡಗಳಲ್ಲಿ ಜಾಥಾ ಹೊರಡಲಿದೆ. ಪ್ರಮುಖ ರಸ್ತೆಗಳಲ್ಲಿ ಸಾಗಿ ಅಂತಿಮವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಾಥಾ ಮುಕ್ತಾಯವಾಗಲಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಪುನೀತಾ ಬಾಬು ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ: ನಿಷೇಧಾಜ್ಞೆ ಜಾರಿ

ಚಾಮರಾಜನಗರ ಜೂನ್ 18ಜಿಲ್ಲೆಯಲ್ಲಿ ಜೂನ್ 20ರಿಂದ 27ರ ವರೆಗೆ ವಿವಿಧೆಡೆ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೇ ನಡೆಯಲಿದ್ದು ಪರೀಕ್ಷಾ ಕೇಂದ್ರಗಳ 200 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ.ರಾಮು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕಾರ್ಯವು ನ್ಯಾಯೋಚಿತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ 200ಮೀ. ವ್ಯಾಪ್ತಿಯಲ್ಲಿ ಪರೀಕ್ಷಾ ದಿನಗಳಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯ ವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ ಅಲ್ಲದೆ ಪರೀಕ್ಷಾ ಕೇಂದ್ರಗಳ 200ಮೀ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳು ಬೆಳಿಗ್ಗೆ 7 ರಿಂದ ಮಧ್ಯಹ್ನ 1.30 ಗಂಟೆಯವರೆಗೆ ಮುಚ್ಚುವಂತೆಯು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಆದೇಶವು ಪರೀಕ್ಷೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿಗೆ ಅನ್ವಯವಾಗುವುದಿಲ್ಲವೆಂದು ಆದೇಶದಲ್ಲಿ ತಿಳಿಸಲಾಗಿದೆ.

ಜೂನ್ 20 ರಂದು ಕೇಂದ್ರ ಪುರಸೃತ ಯೋಜನೆ ಕುರಿತ ತರಬೇತಿ 
ಚಾಮರಾಜನಗರ, ಜೂ. 19 - ನಹರು ಯುವಕೇಂದ್ರ, ಶ್ರೀಗಂಧ ಮಹಿಳಾ ಅಭಿವೃಧ್ದಿ ಸಂಘ ಚಂದನ ಆಭಿವೃದ್ಧಿ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದೊಂದಿಗೆ ಕೇಂದ್ರ ಪುರಸ್ಕøತ ಯೋಜನೆಗಳು ಹಾಗೂ ಅನುಷ್ಟಾನದಲ್ಲಿ ಸಮುದಾಯ ಸಂಘಟನೆಗಳ ಪಾತ್ರ ಕುರಿತು ತರಬೇತಿ  ನೆರೆ ಹೊರೆ ಯುವ ಸಂಸತ್ತು ಕಾರ್ಯಕ್ರಮವನ್ನು ಜೂನ್ 20 ರಂದು ಬೆಳಿಗ್ಗೆ 11 ಗಂಟೆಗೆ ನಗರದ ವಾರ್ತಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಶದ ರಾಜೇಶ್ ಗೌಡ ಕಾರ್ಯಕ್ರಮ ಉದ್ಘಾಟಿಸುವರು. ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಶಿವಕುಮಾರ್ ಪ್ರಮಾಣ ಪತ್ರ ವಿತರಿಸುವರು. ಜಿಲ್ಲಾ ಆಯುಷ್ ಅಧಿಕಾರಿ ಡಾ|| ಸಿ.ಪುನೀತ್ ಆಧ್ಯಕ್ಷತೆ ವಹಿಸುವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಚೆಲುವಯ್ಯ, ಸ್ನೇಹ ಸಂಸ್ಥೆಯ ಸಂಯೋಜಕರಾದ ಲೀನಾಕುಮಾರಿ ಮುಖ್ಯ ಅತಿಥಿಗಳಾಗಿ ಬಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.   
ಜೂ. 20ರಂದು ಯೋಗ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ
ಚಾಮರಾಜನಗರ, ಜೂ. 19  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 20ರಂದು ಜನಜಾಗೃತಿ ಜಾಥಾ ಕಾರ್ಯಕ್ರಮ ಏರ್ಪಾಡಾಗಿದೆ.
ಬೆಳಿಗ್ಗೆ 9 ಗಂಟೆಗೆ ಚಾಮರಾಜೇಶ್ವರ ದೇವಾಲಯ ಬಳಿ 2 ತಂಡಗಳಲ್ಲಿ ಜಾಥಾ ಹೊರಡಲಿದೆ. ಪ್ರಮುಖ ರಸ್ತೆಗಳಲ್ಲಿ ಸಾಗಿ ಅಂತಿಮವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಾಥಾ ಮುಕ್ತಾಯವಾಗಲಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಪುನೀತಾ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ. 21ರಂದು ಬಾಲ್ಯ ವಿವಾಹ ನಿಷೇಧ ಪ್ರಚಾರಾಂದೋಲನ ಕುರಿತು ಸಮಾಲೋಚನೆ
ಚಾಮರಾಜನಗರ, ಜೂ. 20 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಕರ್ನಾಟಕ ಬಾಲ್ಯ ವಿವಾಹ ನಿಷೇಧ ಕಾರ್ಯಪಡೆ ಇವರುಗಳ ಸಹಭಾಗಿತ್ವದಲ್ಲಿ ಜೂನ್ 21ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಬಾಲ್ಯ ವಿವಾಹ ನಿಷೇಧ ಪ್ರಚಾರಾಂದೋಲನ ಕುರಿತು ಸಮಾಲೋಚನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿ ಬಿ. ರಾಮು ಕಾರ್ಯಕ್ರಮ ಉದ್ಘಾಟಿಸುವರು. ತಾಲೂಕು ಮತ್ತು ಜಿಲ್ಲಾ ಮಟ್ಟದ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಡನೆ ಬಾಲ್ಯ ವಿವಾಹ ನಿಷೇಧ ಕುರಿತು ಸಮಾಲೋಚನೆ ನಡೆಯಲಿದೆ.
ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್‍ನ ಕಾರ್ಯಕಾರಿ ನಿರ್ವಾಹಕರಾದ ಎನ್.ವಿ. ವಾಸುದೇವ ಶರ್ಮಾ ಅವರು ಬಾಲ್ಯ ವಿವಾಹ–ವಾಸ್ತವಾಂಶಗಳು ಕುರಿತು, ಬಾಲ್ಯ ವಿವಾಹ ನಿಷೇಧ ಕೋಶದ ಉಪನಿರ್ದೇಶಕರಾದ ವೀಣಾ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಪಾತ್ರ ಕುರಿತು ಹಾಗೂ ಬೆಂಗಳೂರಿನ ಮನುಷ್ ಸಂಸ್ಥೆಯ ನಿರ್ದೇಶಕರಾದ ಬಿ.ಸಿ. ಗೋಪಾಲ್ ಅವರು ಚಾಮರಾಜನಗರ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳ ವಾಸ್ತವಾಂಶಗಳು ಕುರಿತು ಮÁತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಜೂ. 21ರಂದು ನಗರದಲ್ಲಿ ರಫ್ತು ಜಾಗೃತಿ ಶಿಬಿರ
ಚಾಮರಾಜನಗರ, ಜೂ. 20 - ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಗ್ರಾನೈಟ್ ಉದ್ಯಮಗಳ ಸಂಘÀ ಮತ್ತು ವರ್ತಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಜೂನ್ 21ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜೋಡಿ ರಸ್ತೆಯಲ್ಲಿರುವ ವರ್ತಕರ ಭವನದಲ್ಲಿ ರಫ್ತು ಜಾಗೃತಿ ಶಿಬಿರ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅಧ್ಯಕ್ಷತೆ ವಹಿಸುವರು.
ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಪ್ಸಿಬಾರಾಣಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಿ.ಆರ್. ಅಶ್ವತ್ ನಾರಾಯಣ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಎ. ಜಯಸಿಂಹ, ಜಿಲ್ಲಾ ಗ್ರಾನೈಟ್ ಉದ್ಯಮಗಳ ಸಂಘದ ಅಧ್ಯಕ್ಷರಾದ ಜಿ.ಎಂ. ಹೆಗ್ಗಡೆ, ವರ್ತಕರ ಸಂಘದ ಅಧ್ಯಕ್ಷರಾದ ಬಾಲಸುಬ್ರಮಣ್ಯ ಹಾಗೂ ವಿಟಿಪಿಸಿ ಉಪನಿರ್ದೇಶಕರಾದ ಮಹಮ್ಮದ್ ಅತೀಕುಲ್ಲಾ ಷರೀಫ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
 ಶಿಬಿರದಲ್ಲಿ ಬೆಂಗಳೂರಿನ ವಿಟಿಪಿಸಿ ಉಪನಿರ್ದೇಶಕರಾದ ಮಹಮ್ಮದ್ ಅತೀಕುಲ್ಲಾ ಷರೀಫ್ ರಫ್ತು ಕಾರ್ಯಕ್ರಮಗಳ ಪರಿಚಯ ಹಾಗೂ ರಫ್ತುದಾರರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು, ಹಿರಿಯ ರಫ್ತು ಸಲಹೆಗಾರರಾದ ಪ್ರಸನ್ನ ಎಸ್ ಶ್ರೀನಿವಾಸನ್ ಅವರು ರಫ್ತು ನಿರ್ವಹಣೆ ಮತ್ತು ಮಾರುಕಟ್ಟೆ, ಕರ್ನಾಟಕ ರಾಜ್ಯ ವ್ಯವಸಾಯ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಉತ್ತೇಜಕ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಉಮೇಶ್ ಅವರು ವ್ಯವಸಾಯ ಉತ್ಪನ್ನಗಳಿಗೆ ರಫ್ತು ಅವಕಾಶಗಳು ಕುರಿತು ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.
ಜೂ. 21ರಂದು ವಿಶ್ವ ಯೋಗ ದಿನಾಚರಣೆ
ಚಾಮರಾಜನಗರ, ಜೂ. 20 :- ಕೇಂದ್ರ ಆಯುಷ್ ಮಂತ್ರಾಲಯ, ರಾಜ್ಯ ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಧರ್ಮಸ್ಥಳ ಮಂಜುನಾಥ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಡಿ ವಿಶ್ವ ಯೋಗ ದಿನ ಆಚರಣೆ ಕಾರ್ಯಕ್ರಮವನ್ನು ಜೂನ್ 21ರಂದು ಬೆಳಿಗ್ಗೆ 6.45 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ,  ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್.ಜಯಣ್ಣ, ಆರ್.ನರೇಂದ್ರ, ಎಸ್.ನಾಗರಾಜು (ಸಂದೇಶ್ ನಾಗರಾಜು), ಆರ್.ಧರ್ಮಸೇನ, ಗೋ. ಮಧುಸೂದನ, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕಾ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಆಯುಷ್ ಇಲಾಖೆಯ ನಿರ್ದೇಶಕರಾದ ಸುಭಾಷ್ ಕೆ ಮಾಲ್ಕೆಡ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.


ಬೆಂಬಲ ಬೆಲೆ ಯೋಜನೆಯಡಿ ತೆಂಗಿನಕಾಯಿ ಖರೀದಿ  
ಚಾಮರಾಜನಗರ, ಜೂ. 20 - ಜಿಲ್ಲೆಯಲ್ಲಿ ಸುಲಿದ ತೆಂಗಿಕಾಯಿ ಬೆಲೆ ಕುಸಿತಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಸುಲಿದ ತೆಂಗಿನಕಾಯಿಯನ್ನು ಖರೀದಿಸಲು ಸರ್ಕಾರ ಆದೇಶಿಸಿದೆ.

    ಚಾಮರಾಜನಗರ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ತೀರ್ಮಾನದಂತೆ ಇತ್ತೀಚೆಗೆ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಚಿವ ಸಂಪುಟ ಉಪ ಸಮಿತಿಯು ಸುಲಿದ ತೆಂಗಿನಕಾಯಿ ಬೆಲೆ ಕುಸಿತಕ್ಕೆ ಒಳಗಾಗಿರುವುದನ್ನು ಕೂಲಂಕಶವಾಗಿ ಸಭೆಯಲ್ಲಿ ಚರ್ಚಿಸಿ ಸುಲಿದ ತೆಂಗಿನಕಾಯಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ನಿರ್ಣಯ ಕೈಗೊಂಡಿತ್ತು.

    ಈ ಹಿನ್ನೆಲೆಯಲ್ಲಿ 2016 ನೇ ಸಾಲಿಗೆ ಒಂದು ತಿಂಗಳ ಕಾಲಾವಧಿಗೆ ಎಫ್.ಎ.ಕ್ಯೂ. ಗುಣಮಟ್ಟದ ಸುಲಿದ ತೆಂಗಿಕಾಯಿಯನ್ನು ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆಯಾದ ಕ್ವಿಂಟಾಲ್‍ಗೆ 1600 ರೂ ನಂತೆ ಖರೀದಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಹಾಫ್‍ಕಾಮ್ಸ್ ಸಂಸ್ಥೆಯನ್ನು ಖರೀದಿ ಸಂಸ್ಥೆಯೆಂದು ಗುರುತಿಸಲಾಗಿದೆ.

    ಹೀಗಾಗಿ ಜೂನ್ 18 ರಂದು ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ತೀರ್ಮಾದಂತೆ ಸುಲಿದ ತೆಂಗಿನಕಾಯಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಗಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಶೀಘ್ರವೇ ಖರೀದಿ ಪ್ರಕ್ರಿಯೆ ಪ್ರಾರಂಬಿಸುವ ದಿನಾಂಕ ಸಂಬಂಧ  ಕ್ರಮ ವಹಿಸುವಹಿಸಬೇಕೆಂದು ಜಿಲ್ಲಾಧಿಕಾರಿ ಬಿ.ರಾಮು ಅವರು ಹಾಫ್‍ಕಾಮ್ಸ್ ಸಂಸ್ಥೆಗೆ ಅದೇಶಿಸಿದ್ದಾರೆ.  

ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ : ಜಿಲ್ಲಾಧಿಕಾರಿ ಬಿ. ರಾಮು
ಚಾಮರಾಜನಗರ, ಜೂ. 21 :- ಮಕ್ಕಳ ಹಕ್ಕುಗಳ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿದರೆ ಬಾಲ್ಯ ವಿವಾಹ ಪದ್ಧತಿಯನ್ನು ಸಂಪೂರ್ಣವಾಗಿ ದೂರ ಮಾಡಬಹುದೆಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಕರ್ನಾಟಕ ಬಾಲ್ಯ ವಿವಾಹ ನಿಷೇಧ ಕಾರ್ಯಪಡೆ ಆಶ್ರಯದಲ್ಲಿ ಇಂದು ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಲ್ಯ ವಿವಾಹ ನಿಷೇಧ ಪ್ರಚಾರಾಂದೋಲನ ಕುರಿತು ಸಮಾಲೋಚನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನಿಕವಾಗಿ ನೀಡಲಾಗಿರುವ ಮಕ್ಕಳ ಹಕ್ಕುಗಳ ಕುರಿತು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಮನವರಿಕೆ ಮಾಡಿಕೊಡಬೇಕು. ಇದರಿಂದ ಬಾಲ್ಯವಿವಾಹವನ್ನು ಮಕ್ಕಳೇ ನಿರಾಕರಿಸುವ ಧೈರ್ಯ ಪ್ರವೃತ್ತಿ ಬರುತ್ತದೆ. ಪೋಷಕರಿಗೂ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿದರೆ ಬಾಲ್ಯ ವಿವಾಹ ಪದ್ಧತಿಂiÀiನ್ನು ನಿರ್ಮೂಲನೆ ಮಾಡಬಹುದೆಂದು ಜಿಲ್ಲÁಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಜರುಗುವ ಬಾಲ್ಯ ವಿವಾಹವನ್ನು ತಡೆಗಟ್ಟುವ ಸಲುವಾಗಿಯೇ ಶೀಘ್ರದಲ್ಲಿಯೇ ಆಯಾ ಗ್ರಾಮ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಸಮಾಜ ಸೇವಕರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿಯ ದೂರವಾಣಿ ಸಂಖ್ಯೆ ಹಾಗೂ ವಿವರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಲಾಗುತ್ತದೆ. ಬಾಲ್ಯವಿವಾಹ ಪ್ರಕರಣಗಳು ನಡೆಯುವ ಸುಳಿವು ದೊರೆತಲ್ಲಿ ದೂರವಾಣಿ ಮೂಲಕ ಮಾಹಿತಿ ನೀಡಿದರೆ ತಕ್ಷಣವೇ ಬಾಲ್ಯವಿವಾಹ ತಡೆಯಲು ಸಮಿತಿ ಮುಂದಾಗಲಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 11 ರಿಂದ 18ರ ವಯೋಮಾನದ 63 ಸಾವಿರ ಹೆಣ್ಣುಮಕ್ಕಳಿದ್ದಾರೆ. ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡುವ ಪ್ರಕರಣಗಳ ಬಗ್ಗೆ ನಿಗಾ ಇಡುವಂತೆ ಸೂಚಿಸಲಾಗಿದೆ. ಬಾಲ್ಯವಿವಾಹ ತಡೆಗಟ್ಟಿ ಮಕ್ಕಳ ರಕ್ಷಣೆ, ವಿದ್ಯಾಭ್ಯಾಸಕ್ಕೆ ನೆರವು ನೀಡುವುದು ಮುಖ್ಯವಾಗಿದೆ. ಎಲ್ಲ ಮಟ್ಟದ ಅಧಿಕಾರಿಗಳು, ಪೋಷಕರು, ಸಂಸ್ಥೆಗಳು ಒಟ್ಟಾಗಿ ಅನಿಷ್ಠ ಬಾಲ್ಯಪದ್ಧತಿಯನ್ನು ಹೋಗಲಾಡಿಸಬೇಕಿದೆ ಎಂದು ರಾಮು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಭಾಸ್ಕರ್ ಮಾತನಾಡಿ ಬಾಲ್ಯ ವಿವಾಹದಿಂದಾಗುವ ಪರಿಣಾಮಗಳ ಕುರಿತು ಶಾಲಾ ಹಂತದಲ್ಲಿ ಹೆಚ್ಚಿನ ತಿಳಿವಳಿಕೆ ನೀಡಬೇಕಿದೆ. ಯಾವುದೇ ಗ್ರಾಮದಲ್ಲಿ ಬಾಲ್ಯವಿವಾಹ ನಡೆಯುವ ಬಗ್ಗೆ ಸುಳಿವು ಇದ್ದರೆ ಕೂಡಲೇ ಆ ಬಗ್ಗೆ ಆಯಾ ಶಾಲೆ ಶಿಕ್ಷಕರು, ಅಂಗನವಾಡಿ ಕಾರ್ಯಕತೆಯರಿಗೆ ತಿಳಿಸಬೇಕು. ಇದರಿಂದ ಬಾಲ್ಯವಿವಾಹವನ್ನು ತಡೆಗಟ್ಟಬಹುದಾಗಿದೆ ಎಂದರು.
ಮನುಷ್ ಸಂಸ್ಥೆಯ ನಿರ್ದೇಶಕರಾದ ಬಿ.ಸಿ. ಗೋಪಾಲ್, ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್‍ನ ಕಾರ್ಯಕಾರಿ ನಿರ್ವಾಹಕರಾದ ಎನ್.ವಿ. ವಾಸುದೇವ ಶರ್ಮಾ ಅವರು  ಬಾಲ್ಯ ವಿವಾಹ ನಿಷೇಧ ಸಂಬಂಧ ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಶ್ಮಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ವಚ್ಚತಾ ಕ್ರಮ ಪಾಲಿಸದ ಹೋಟೆಲ್‍ಗಳ ವಿರುದ್ಧ ಕ್ರಮ : ಜಿಲ್ಲಾಧಿಕಾರಿ ಎಚ್ಚರಿಕೆ
ಚಾಮರಾಜನಗರ, ಜೂ. 21 - ಜಿಲ್ಲೆಯ ಹೋಟೆಲ್‍ಗಳ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡಿ ಅಲ್ಲಿನ ನೈರ್ಮಲ್ಯ ಪಾಲನೆ ಹಾಗೂ ಆಹಾರ ಸುರಕ್ಷತಾ ವಿಧಾನಗಳನ್ನು ಪರಿಶೀಲಿಸಲಾಗುವುದು. ಸ್ಪಚ್ಚತೆ ಕಾಪಾಡದ ಹೋಟೆಲ್ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಬಿ. ರಾಮು ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಮಲೇರಿಯಾ ಮಾಸಾಚರಣೆ ಅಂಗವಾಗಿ ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಹೋಟೆಲ್, ಬೇಕರಿ, ತಂಪುಪಾನೀಯ ಇತರೆ ಅಂಗಡಿಮುಂಗಟ್ಟುಗಳಲ್ಲಿ ಸ್ಪಚ್ಚತೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಲೇಬೇಕು. ಗ್ರಾಹಕರಿಗೆ ಶುದ್ಧ ಆಹಾರ, ಕುಡಿಯುವ ನೀರÀು ಪೂರೈಸಬೇಕು. ಕಲಬೆರಕೆ ಮುಕ್ತ ಆಹಾರಪದಾರ್ಥಗಳನ್ನು ಬಳಸಬೇಕು. ಊಟಉಪಹಾರ ತಯಾರಿಸುವ ಸ್ಥಳ ಸ್ವಚ್ಚವಾಗಿರಬೇಕು. ಹೋಟೆಲ್ ಇನ್ನಿತರ ಅಂಗಡಿ ಉದ್ಯಮಗಳಿಗೆ ಭೇಟಿ ನೀಡಿ ತಾವೇ ತಪಾಸಣೆ ಮಾಡಲಿದ್ದು ಈ ವೇಳೆ ಅನೈರ್ಮಲ್ಯ ಸುರಕ್ಷಿತ ಕ್ರಮಗಳು ಇರದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೋಟೆಲ್ ರೆಸ್ಟೋರೆಂಟ್, ಅಂಗಡಿಗಳಲ್ಲಿ ಸ್ವಚ್ಚತಾ ಕ್ರಮಗಳನ್ನು ಅನುಸರಿಸಿ ಉದ್ದಿಮೆ ನಡೆಸಲಾಗುತ್ತಿದೆಯೇ ಎಂಬ ಬಗ್ಗೆ ನಗರಸಭೆ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಬೀದಿ, ಮುಖ್ಯರಸ್ತೆಯ ಪಕ್ಕದಲ್ಲೇ ಇರುವ ಅಂಗಡಿಗಳಲ್ಲಿ ಗಾಜಿನ ಪರದೆ ಇಟ್ಟು ಆಹಾರಪದಾರ್ಥಗಳನ್ನು ಮುಚ್ಚಬೇಕು. ಯಾವುದೇ ಕ್ರಿಮಿಕೀಟ ಕೂರದ ಹಾಗೆ ನೋಡಿಕೊಂಡು ಪರಿಶುದ್ಧವಾಗಿ ವಸ್ತುಗಳ ಮಾರಾಟ ಮಾಡಬೇಕು. ಈ ಬಗ್ಗೆ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಆಯಾ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಜಾಗೃತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬÉೀಕು. ಶಾಲೆ ಕಾಲೇಜು, ಅಂಗನವಾಡಿಗಳಲ್ಲೂ ರೋಗ ಬಗೆಗಿನ ತಡೆಗಟ್ಟುವ ಕುರಿತು ತಿಳಿವಳಿಕೆ ನೀಡಬೇಕು ಎಂದರು.
ಮಲೇರಿಯಾ, ಡೆಂಗೆ, ಚಿಕೂನ್ ಗುನ್ಯಾ ಇನ್ನಿತರ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣಕ್ಕೆ ತರಲು ನಗರಾಭಿವೃದ್ಧಿ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಸಮಾಜ ಕಲ್ಯಾಣ, ಕಂದಾಯ, ನೀರಾವರಿ, ಮೀನುಗಾರಿಕೆ, ಕೈಗಾರಿಕೆ ಇಲಾಖೆಗಳು ಪ್ರಮುಖ ಪಾತ್ರ ವಹಿಸಬೇಕಿದೆ. ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ರೋಗ ತಡೆಗೆ ಅನುಸರಿಸಬೇಕಿರುವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಳೆದ 3 ವರ್ಷಗಳಲ್ಲಿ ಕೊಳ್ಳೇಗಾಲ ತಾಲೂಕಿನ ಮಾರ್ಟಳ್ಳಿ ಮತ್ತು ಸತ್ತೇಗಾಲ ಗ್ರಾಮದಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚು ದಾಖಲಾಗಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಕೊಳ್ಳೇಗಾಲ ತಾಲೂಕು ವ್ಯಾಪ್ತಿ ರೋಗ ಹತೋಟಿಗೆ ವಿಶೇಷ ಆದ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತರೋಗಗಳ ನಿಯಂತ್ರಣಾಧಿಕಾರಿ ಡಾ. ಅನಿಲ್ ಕುಮಾರ್ ಮಲೇರಿಯಾ ರೋಗ ಹರಡುವಿಕೆ ವಿಧಾನ, ಚಿಕಿತ್ಸೆ ಕ್ರಮಗಳು ಹಾಗೂ ಇಲಾಖೆ ವತಿಯಿಂದ ಮಲೇರಿಯಾ ವಿರೋದಿ ಮಾಸಾಚರಣೆ ಅಂಗವಾಗಿ ಕೈಗೊಂಡಿರುವ ಸ್ವಚ್ಚತಾ ಆಂದೋಲನ ಕುರಿತು ಸಭೆಗೆ ವಿವರಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ. ಪಾಂಡುವಿಜಯನ್, ಜಿಲ್ಲಾ ಸರ್ಜನ್ ಡಾ. ರಘುರಾಂ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಆರ್. ಸರಸ್ವತಿ, ತಾಲೂಕು ಮಟ್ಟದ ಆರೋಗ್ಯಾಧಿಕಾರಿಗಳು, ಇತರರು ಸಭೆಯಲ್ಲಿ ಹಾಜರಿದ್ದರು.

ನೂತನ ನಗರಾಭಿವೃದ್ಧಿ ಪ್ರಾಧಿಕಾರ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಕ್ಕೆ ತೀರ್ಮಾನ
ಚಾಮರಾಜನಗರ, ಜೂ. 21 - ಚಾಮರಾಜನಗರ – ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಸ್ವಂತ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಮುಂದಿನ ತಿಂಗಳು ಚಾಲನೆ ನೀಡಲು ತೀರ್ಮಾನಿಸಲಾಗಿದೆ.
ಜಿಲ್ಲಾಡಳಿತ ಭವನದಲ್ಲಿರುವ  ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿಂದು ಅಧ್ಯಕ್ಷರಾದ ಸೈಯದ್ ರಫಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಾಧಿಕಾರದ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಕ್ರಿಯೆ ಸಂಬಂಧ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರಾದ ಸೈಯದ್ ರಫಿ ಅವರು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಬಳಿ ಇರುವ ನಾಗರೀಕ ಸೌಲಭ್ಯ ನಿವೇಶನದಲ್ಲಿ 98.38 ಲಕ್ಷ ರೂ. ಅಂದಾಜು ಮೊತ್ತದ ಪ್ರಾಧಿಕಾರ ಕಚೇರಿ ಕಟ್ಟಡ ನಿರ್ಮಾಣಕ್ಕೆ  ಕಳೆದ ಮಾರ್ಚ್ 31ರಂದು ತಾತ್ವಿಕ ಅನುಮೋದನೆ ನೀಡಲಾಗಿದೆ. ಕಳೆದ ಮೇ 3ರಂದು ಕ್ರಿಯಾ ಯೋಜನೆಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಲಭಿಸಿದೆ ಎಂದರು.
ಪ್ರಾಧಿಕಾರಕ್ಕೆ ತನ್ನದೇ ಆದ ಕಟ್ಟಡ ಹೊಂದುವುದರಿಂದ ಕಚೇರಿ ಕೆಲಸಗಳಿಗೆ ಅನುಕೂಲವಾಗಲಿದೆ. ಹೀಗಾಗಿ ಮುಂದಿನ ತಿಂಗಳು ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಮುಂದಾಗುವುದಾಗಿ ರಫಿ ಅವರು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರವು ರೈತರ ಸಹಭಾಗಿತ್ವದಲ್ಲಿ ಶೇ. 50:50ರ ಅನುಪಾತದಲ್ಲಿ ವಸತಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಲ್ಲಿಸುವ ಬಗ್ಗೆಯೂ ವಿವರವಾಗಿ ಚರ್ಚಿಸಲಾಯಿತು. ನಾಗರೀಕ ಸೌಲಭ್ಯಗಳ ನಿವೇಶನದ ಉದ್ದೇಶ ಹಾಗೂ ದರ ಕುರಿತು ಸಹ ಸಭೆಯಲ್ಲಿ ಸಮಾಲೋಚಿಸಲಾಯಿತು.
ಅರ್ಜಿದಾರರು ಜಮೀನನ್ನು ವಸತಿ ಉದ್ದೇಶದ ಏಕ ನಿವೇಶನ ವಿನ್ಯಾಸ ನಕ್ಷೆ ಅನುಮೋದನೆ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಸಭೆಯಲ್ಲಿ ಮಂಡಿಸಲಾಯಿತು.
ಸಭೆಯ ಆರಂಭದಲ್ಲಿ ಪ್ರಾಧಿಕಾರಕ್ಕೆ ನೂತನ ಸದಸ್ಯರಾಗಿ ನಾಮನಿರ್ದೇನಗೊಂಡಿರುವ ಶ್ರೀಕಾಂತ್, ಸಿ. ಗೋವಿಂದ ಹಾಗೂ ಪದ್ಮಾ ಪುರುಷೋತ್ತಮ್ ಅವರನ್ನು ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ ಹೂಗುಚ್ಚ ನೀಡಿ ಅಭಿನಂದಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಟಿ. ನಿಸಾರ್ ಅಹಮದ್, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಮಹದೇವ್, ನಗರ ಯೋಜನಾ ಸದಸ್ಯರು ನಗರ ಮತ್ತು ಗ್ರಾಮಾಂತರ ಯೋಜನೆ ಸಹಾಯಕ ನಿರ್ದೇಶಕರಾದ ಚೆಲುವರಾಜು, ನಗರಸಭೆ ಅಧಿಕಾರಿ ನಂಜುಂಡಸ್ವಾಮಿ, ಆರೋಗ್ಯ ಇಲಾಖೆ ಅಧಿಕಾರಿ ಗುರುಲಿಂಗಯ್ಯ ಪೊಲೀಸ್ ಇನ್ಸ್‍ಪೆಕ್ಟರ್ ಶ್ರೀಕಾಂತ್, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

                     ನಗರದಲ್ಲಿ ಗಮನ ಸೆಳೆದ ಆಕರ್ಷಕ ಯೋಗ ಪ್ರದರ್ಶನ
ಚಾಮರಾಜನಗರ, ಜೂ. 21-: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕೇಂದ್ರ ಆಯುಷ್ ಮಂತ್ರಾಲಯ, ರಾಜ್ಯ ಆಯುಷ್ ಇಲಾಖೆ, ಜಿಲ್ಲಾಡಳಿತ ಮತ್ತು ಧರ್ಮಸ್ಥಳ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ವತಿಯಿಂದ ನಗರದಲ್ಲಿ  ಯೋಗಾಭ್ಯಾಸ ಹಾಗೂ ಸಮಾರಂಭ ನಡೆಯಿತು.
ಜಿಲ್ಲಾಡಳಿತ ಭವನದ ವಿವಿಧೋದ್ದೇಶ ಸಭಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ 7 ರಿಂದ 8ರವರೆಗೆ ಯೋಗಾಸನಗಳನ್ನು ಪ್ರದರ್ಶಿಸಲಾಯಿತು. ಜಿ.ಪಂ. ಅಧ್ಯಕ್ಷ ಎಂ. ರಾಮಚಂದ್ರ ದೀಪಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಸಾರ್ವಜನಿಕರು ಹಾಗೂ ವಿಎಚ್‍ಪಿ ಶಾಲೆಯ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಯೋಗಾಭ್ಯಾಸ ನಡೆಸಿದರು.
ಧರ್ಮಸ್ಥಳ ಯೋಗ ಮಹಾವಿದ್ಯಾಲಯದ ವೈದ್ಯೆ ಡಾ. ಜಾಸ್ಮಿನ್ ಡಿಸೋಜ, ಆಸನಗಳ ಬಗ್ಗೆ ತಿಳಿಸಿಕೊಟ್ಟರು. ಧರ್ಮಸ್ಥಳ ಯೋಗ ಆಸ್ಪತ್ರೆಯ ವೈದ್ಯರಾದ ಡಾ. ದೀಪಾಶ್ರೀ, ಡಾ. ಮೇಘನಾ, ಡಾ. ಸುಸ್ಮಿತಾ, ಮಾನಸಾ ವೇದಿಕೆಯಲ್ಲಿ ಯೋಗ ಪ್ರದರ್ಶನ ನೀಡಿದರು. ಸೂಚನೆಯನ್ನು ಸರಿಸಿ ಸಾರ್ವಜನಿಕರು ವಿದ್ಯಾರ್ಥಿಗಳು ಯೋಗಾಸನಗಳನ್ನು ಮಾಡಿದರು. ಕೇಂದ್ರ ಆಯುಷ್ ಇಲಾಖೆ ನಿಗದಿಪಡಿಸಿದ್ದ ಶಿಷ್ಟಾಚಾರದ ಪ್ರಕಾರ ಯೋಗಾಸನಗಳನ್ನು ನಡೆಸಲಾಯಿತು. ಮೊದಲಿಗೆ ಶೀಥಲೀಕರಣ ವ್ಯಾಯಾಮಗಳನ್ನು ಮಾಡಲಾಯಿತು. ಬಳಿಕ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಾಂಕಾಸನ, ವಕ್ರಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನಗಳನ್ನು ಪ್ರದರ್ಶಿಸಿದರು. ಬಳಿಕ ಕಪಾಲಭಾತಿ, ಚಂದ್ರಾನುಲೋಮ, ಸೂರ್ಯಾನುಲೋಮ, ನಾಡಿಶೋಧನ, ಭ್ರಮರಿ ಪ್ರಾಣಾಯಾಮಗಳನ್ನು ಮಾಡಿಸಲಾಯಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿ.ಪಂ. ಅಧ್ಯಕ್ಷ ಎಂ. ರಾಮಚಂದ್ರ, ದಿನನಿತ್ಯದ ಜಂಜಾಟ, ಒತ್ತಡ ಹಾಗೂ ಕಲುಷಿತ ವಾತಾವರಣದಿಂದ ಎಲ್ಲರಿಗೂ ಅನಾರೋಗ್ಯ ಉಂಟಾಗುತ್ತಿದೆ. ಇದನ್ನು ನಿವಾರಿಸಲು ಯೋಗಾಭ್ಯಾಸ ಅವಶ್ಯಕ. ಯೋಗದಿಂದ ಔಷಧಿ ಇಲ್ಲದೇ ಅನೇಕ ರೋಗಗಳನ್ನು ಗುಣಪಡಿಸಬಹುದು. ರೋಗಬಾರದಂತೆ ರಕ್ಷಿಸಿಕೊಳ್ಳಬಹುದು ಎಂದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್‍ರಫಿ ಮಾತನಾಡಿ, ಯೋಗ ಮಂದಿರ ನಿರ್ಮಿಸಲು ಅಗತ್ಯವಾದ ನಿವೇಶನವನ್ನು ಆಯುಷ್ ಇಲಾಖೆಗೆ ನೀಡಲು ನಗರಾಭಿವೃದ್ಧಿ ಪ್ರಾಧಿಕಾರ ಸಿದ್ಧವಿದೆ. ಈ ಕುರಿತು ಆಯುಷ್ ಇಲಾಖೆ ಅಧಿಕಾರಿಗಳು ಅಗತ್ಯಕ್ರಮಗಳನ್ನು ಕೈಗೊಳ್ಳಿ ಎಂದು ಸೂಚಿಸಿದರು.
ಎಂಆರ್‍ಆರ್ ಯೋಗ ಕೇಂದ್ರದ ನಿರ್ದೇಶಕ ಡಾ. ಚೇತನ್‍ಕುಮಾರ್ ಮಾತನಾಡಿ, ಜೀವನಶೈಲಿ, ಆಹಾರ ಪದ್ಧತಿ ಹಾಗೂ ಒತ್ತಡದಿಂದ ಕಾಯಿಲೆಗಳನ್ನು ತಂದುಕೊಳ್ಳುತ್ತಿದ್ದೇವೆ.  ಜೀವನಶೈಲಿಯಲ್ಲಿ ಬದಲಾವಣೆ, ಆರೋಗ್ಯಕರ ಆಹಾರ ಪದ್ಧತಿ, ಅನುಸರಿಸಬೇಕು. ಮುಖ್ಯವಾಗಿ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಪುನೀತ್‍ಬಾಬು, ನೆಹರು ಯುವಕೇಂದ್ರದ ಅಧಿಕಾರಿ ಬಸವರಾಜು, ಪತಂಜಲಿ ಯೋಗ ಕೇಂದ್ರದ ಕುಮಾರಸ್ವಾಮಿ, ಬಸವರಾಜಯ್ಯ, ವಾಸುದೇವರಾವ್, ವಿಶ್ವಕುಮಾರ್, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
-----------------------------------

ಯಶಸ್ವಿನಿ ಯೋಜನೆ ಪ್ರಗತಿ ಗುರಿ ಸಾಧನೆಗೆ ಡೀಸಿ ಸೂಚನೆ
ಚಾಮರಾಜನಗರ, ಜೂ. 22 - ರಾಜ್ಯ ಸರ್ಕಾರ ಅನುಷ್ಠಾನ ಮಾಡುತ್ತಿರುವ ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆಗೆ ಹೆಚ್ಚಿನ ಸದಸ್ಯರನ್ನು ನೊಂದಣಿ ಮಾಡುವ ಮೂಲಕ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಯಶಸ್ವಿನಿ ಸಹಕಾರಿ ರೈತ ಆರೋಗ್ಯ ರಕ್ಷಣಾ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಶಸ್ವಿನಿ ಯೋಜನೆಯಡಿ ಸಹಕಾರಿ ಸದಸ್ಯರು ಆರೋಗ್ಯ ಸಂಬಂಧಿ ಸೌಲಭ್ಯಗಳನ್ನು ಪಡೆಯಲು ಅವಕಾಶಗಳಿವೆ. ಈ ಬಗ್ಗೆ ಸಹಕಾರಿ ಸದಸ್ಯರಿಗೆ ಮನವರಿಕೆ ಮಾಡಿಕೊಡಬೇಕು. ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಪ್ರಸಕ್ತ ಸಾಲಿನ ಗುರಿಯನ್ನು ಮುಟ್ಟಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಸಹಕಾರಿ ಸದಸ್ಯರ ಕುಟುಂಬಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ದೊರೆಯುವ ಚಿಕಿತ್ಸಾ ವಿಧಾನಗಳು, ಔಷಧೋಪಚಾರಗಳಿಗಾಗಿ ಮಾಡಲಾಗುವ ವೆಚ್ಚ, ಇನ್ನಿತರ ಮಾಹಿತಿಯನ್ನು ಸಮರ್ಪಕವಾಗಿ ತಲುಪಿಸಬೇಕು. ಅನಾರೋಗ್ಯಕ್ಕೆ ತುತ್ತಾಗುವ ಸಹಕಾರಿ ಸದಸ್ಯರು ಯೋಜನೆಯ ಸೌಲಭ್ಯವನ್ನು ಸರಳವಾಗಿ ತಿಳಿದುಕೊಳ್ಳಲು ಅಗತ್ಯವಿರುವ ನೆರವು ನೀಡಬೇಕೆಂದು ರಾಮು ತಿಳಿಸಿದರು.
ಸದಸ್ಯರು ಯೋಜನೆಗೆ ಸೇರ್ಪಡೆಯಾಗಲು ಅಗತ್ಯವಿರುವ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸಹಕಾರಿ ಸದಸ್ಯರು ಗರಿಷ್ಟ ಸಂಖ್ಯೆಯಲ್ಲಿ ಯೋಜನೆ ವ್ಯಾಪ್ತಿಗೆ ಒಳಪಡಲು ಆಂದೋಲನ ಮಾದರಿಯಲ್ಲಿ ಕಾರ್ಯಕ್ರಮ ಹಾಕಿಕೊಳ್ಳಬೇಕು. ನಿಗದಿತ ಗುರಿಯನ್ನು ಕಾಲಮಿತಿಯೊಳಗೆ ತಲುಪಬೇಕೆಂದು ಜಿಲ್ಲಾಧಿsÀಕಾರಿ ತಿಳಿಸಿದರು.
ಸಭೆಗೆ ಮಾಹಿತಿ ನೀಡಿದ ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರಾದ ಗೋಪಾಲರೆಡ್ಡಿ ಅವರi ಯಶಸ್ವಿನಿ ಯೋಜನೆಯಡಿ ಕಳೆದ 2010-16ನೇ ಸಾಲಿನಲ್ಲಿ ಗ್ರಾಮೀಣ ಪ್ರದೇಶದ ಸದಸ್ಯರ ಪೈಕಿ ಹೊರ ರೋಗಿಯÁಗಿ 364 ಜನ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಒಳರೋಗಿಯಾಗಿ ದಾಖಲಾದ 3114 ಮಂದಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಇದಕ್ಕಾಗಿ 630.05 ಲಕ್ಷ ರೂ. ಭರಿಸಲಾಗಿದೆ. ನಗರ ಪ್ರದೇಶದ ಸದಸ್ಯರ ಪೈಕಿ ಹೊರ ರೋಗಿಯÁಗಿ 66 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಒಳರೋಗಿಯಾಗಿ ದಾಖಲಾದ 204 ಮಂದಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಇದಕ್ಕಾಗಿ 56.69 ಲಕ್ಷ ರೂ. ಭರಿಸಲಾಗಿದೆ ಎಂದರು. 
ಚಾಮರಾಜನಗರ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದರಾಜು, ಎಂಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕರಾದ ವೆಂಕಟಾಚಲ, ಇತರೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಜೂ. 30ರಂದು ನಗರದಲ್ಲಿ ಅರಸು ಅವರ ವ್ಯಕ್ತಿತ್ವ ಸಾಧನೆ ಕುರಿತು ನಾಟಕ ಪ್ರದರ್ಶನ
ಚಾಮರಾಜನಗರ, ಜೂ. 22 - ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಸಾಮಾಜಿಕ ನ್ಯಾಯದ ಹರಿಕಾರರೆಂದೇ ಪ್ರಸಿದ್ಧರಾಗಿದ್ದ ಡಿ. ದೇವರಾಜ ಅರಸು ಅವರ ವ್ಯಕ್ತಿತ್ವ ಹಾಗೂ ಮಹತ್ವದ ಸಾಧನೆಗಳನ್ನು ಪ್ರಸ್ತುತ ಪಡಿಸುವ ನಾಟಕ ಪ್ರದರ್ಶನವು ಜೂನ್ 30ರಂದು ಸಂಜೆ 6.30 ಗಂಟೆಗೆ ನಗರದ ಜಿಲ್ಲಾಡಳತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಏರ್ಪಾಡಾಗಿದೆ.
ಮಂಡ್ಯ ರಮೇಶ್ ನಾಟಕ ತಂಡವು ಅರಸು ಅವರ ವ್ಯಕ್ತಿತ್ವ ಹಾಗೂ ಸಾಧನೆಗಳ ಕುರಿತ ನಾಟಕ ಪ್ರದರ್ಶನ ನೀಡಲಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿತವಾಗಿದೆ.
ಈ ನಾಟಕ ಪ್ರದರ್ಶನವನ್ನು ದೇವರಾಜ ಅರಸು ಅವರ ಅಭಿಮಾನಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು, ನಾಗರಿಕರು ವೀಕ್ಷಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ಶಿವಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ದೂ.ಸಂ. 08226-222180 ಅಥವಾ ಮೊಬೈಲ್ 9480817623 ಸಂಪರ್ಕಿಸಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ಕೆಪಿಎಸ್‍ಸಿ : ಸಿ ವೃಂದದ ತಾಂತ್ರಿಕೇತರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ
ಚಾಮರಾಜನಗರ, ಜೂ. 22- ಕರ್ನಾಟಕ ಲೋಕಸೇವಾ ಆಯೋಗವು ಸಿ ವೃಂದದ ತಾಂತ್ರಿಕೇತರ ಹುದ್ದೆಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳ್ಳಲು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರವು ಉಚಿತ ಪರೀಕ್ಷಾಪೂರ್ವ ತರಬೇತಿ ನೀಡಲಿದೆ.
ಈಗಾಗಲೇ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಸ್ವವಿವರದೊಂದಿಗೆ ಜೂನ್ 30ರೊಳಗೆ ಹೆಸರು ನೊಂದಾಯಿಸಬಹುದಾಗಿದೆ. ವಿವರಗಳಿಗೆ ಜಿಲ್ಲಾ ಉದ್ಯೋಗಾಧಿಕಾರಿ, ದೂ.ಸಂ. 08226-224430 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ನೀಟ್ ಪರೀಕ್ಷೆಗೆ ತರಬೇತಿ
    ಚಾಮರಾಜನಗರ, ಜೂ. 22 - ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಕೇಂದ್ರ ಸರ್ಕಾರ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಡಿ ಆಯ್ಕೆಯಾಗಲು ಜುಲೈ 25ರಂದು ನಡೆಸಲಿರುವ ನೀಟ್ II ಪರೀಕ್ಷೆಗೆ 3 ವಾರಗಳ ತರಬೇತಿ ನೀಡಲಿದೆ.
    ಹೊರ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಸಹ ಕಲ್ಪಿಸಲಾಗುವುದು. ಆಸಕ್ತರು ಜೂನ್ 30ರೊಳಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮುಕ್ತಗಂಗೋತ್ರಿ ಆವರಣದಲ್ಲಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0821-2515944 ಸಂಪರ್ಕಿಸುವಂತೆ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.         


ಸಕ್ಕರೆ ಮಾರಾಟ ವಹಿವಾಟಿಗೆ ಪರವಾನಗಿ ಪಡೆಯಲು ಸೂಚನೆ
ಚಾಮರಾಜನಗರ, ಜೂ. 22 - ಜಿಲ್ಲೆಯಲ್ಲಿ ಸಕ್ಕರೆಯನ್ನು ಸಗಟು ಹಾಗೂ ಚಿಲ್ಲರೆ ಮಾರಾಟ ಮಾಡುವವರು, ಆಮದುದಾರರು ಪರವಾನಗಿ ಪಡೆದು ವಹಿವಾಟು ನಡೆಸುವಂತೆ ಜಿಲ್ಲಾಧಿಕಾರಿ ಬಿ. ರಾಮು ಆದೇಶಿಸಿದ್ದಾರೆ.
ರಾಜ್ಯದಲ್ಲಿ ಸಕ್ಕರೆ ದರದಲ್ಲಿ ತೀವ್ರ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಕ್ಕರೆ (ದಾಸ್ತಾನು ನಿಯಂತ್ರಣ) ಆದೇಶ 2016ರ ಪ್ರಕಾರ ಆಮದುಗಾರರು ಸಗಟು ಚಿಲ್ಲರೆ ಮಾರಾಟಗಾರರು ಸಕ್ಕರೆ ಮಾರಾಟ ಮಾಡಲು ಹೊಂದಬೇಕಾದ ದಾಸ್ತಾನು ಪ್ರಮಾಣ ಹಾಗೂ ಅನುಮತಿ ಪತ್ರವನ್ನು ಪಡೆದು ವಹಿವಾಟು ನಡೆಸುವಂತೆ ಆದೇಶಿಸಲಾಗಿದೆ. ಹೀಗಾಗಿ ಜಿಲ್ಲೆಯಾದ್ಯಂತ ಸಕ್ಕರೆ ಆಮದುಗಾರರು ಹಾಗೂ ಸಗಟು ಚಿಲ್ಲರೆ ಮಾರಾಟಗಾರರು ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕು. ಪರವಾನಗಿ ಪಡೆದುಕೊಳ್ಳದೇ ಮಾರಾಟ ವಹಿವಾಟು ನಡೆಸುವ ವ್ಯಾಪಾರಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆಹಾರ ಇಲಾಖೆಯ ಉಪನಿರ್ದೇಶಕರನ್ನು ಸಂಪರ್ಕಿಸಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಳಂದೂರು : ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 22 - ಯಳಂದೂರು ತಾಲೂಕಿನ ವಿವಿದೆಡೆ  ಅಂಗನವಾಡಿಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಗುಂಬಳ್ಳಿ (ಸಾಮಾನ್ಯ), ಬಿಳಿಗಿರಿರಂಗನಬೆಟ್ಟ (ಪರಿಶಿಷ್ಟ ಪಂಗಡ), ಮಂಜಿಗÀುಂಡಿ ಕಲ್ಯಾಣಿಪೋಡು (ಪರಿಶಿಷ್ಟ ಪಂಗಡ) ಹಾಗೂ ಪುರಾಣಿಪೋಡು (ಪರಿಶಿಷ್ಟ ಪಂಗಡ) ಇಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ಯಳಂದೂರು ಪಟ್ಟಣದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಇಡಲಾಗಿರುವ ಟೆಂಡರ್ ಪೆಟ್ಟಿಗೆಯಲ್ಲಿ ಹಾಕಬೇಕು. ಅರ್ಜಿ ಸಲ್ಲಿಕೆಗೆ ಜುಲೈ 18 ಕಡೆಯ ದಿನವಾಗಿದೆ. ವಿವರಗಳಿಗೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
               ಜೂನ್ 27 ರಂದು ಶಿಕ್ಷಕರ ಹುದ್ದೆಗಳ ಅಭ್ಯರ್ಥಿಗಳಿಗೆ ಕೌನ್ಸ್‍ಲಿಂಗ್
ಚಾಮರಾಜನಗರ, ಜೂ. 21 -: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸ್ಥಳ ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಜೂ.27 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಕೌನ್ಸ್‍ಲಿಂಗ್ ನಡೆಯಲಿದೆ ಎಂದು ಉಪನಿರ್ದೇಶಕ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ನೂತನ ವಿಭಾಗಗಳಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 23- ನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವು 2016-17ನೇ ಸಾಲಿಗೆ ಎಂಎಸ್ಸಿ (ಮಾಸ್ಟರ್ ಆಫ್ ಕಂಪ್ಯೂಟರ್ ಸೈನ್ಸ್) ಎಂ.ಎಲ್‍ಐ.ಎಸ್ಸಿ (ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್) ಮತ್ತು ಬಿ.ಎಲ್‍ಐ.ಎಸ್ಸಿ (ಬ್ಯಾಚುಲರ್ ಆಫ್ ಲೈಬ್ರರಿ ಸೈನ್ಸ್) ವಿಭಾಗಗಳನ್ನು ಹೊಸದಾಗಿ ತೆರೆದಿದ್ದು ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಮಾಸ್ಟರ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ 2 ವರ್ಷಗಳ ಅವಧಿಯದ್ದಾಗಿದೆ. ಬ್ಯಾಚುಲರ್ ಆಫ್ ಲೈಬ್ರರಿ ಸೈನ್ಸ್ 1 ವರ್ಷದ ಅವಧಿಯದ್ದಾಗಿದೆ.
ನೂತನ ವಿಭಾಗದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯುವಂತೆ ಕೇಂದ್ರದ ನಿರ್ದೇಶಕರಾದ ಡಾ. ಶಿವಬಸವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಕ್ತದಾನ ಶಿಬಿರ ಆಯೋಜನೆಗೆ ಆರೋಗ್ಯ ಇಲಾಖೆ ಮನವಿ
ಚಾಮರಾಜನಗರ, ಜೂ. 23:- ನಗರದ ಜಿಲ್ಲಾ ಆಸ್ಪತ್ರೆಯಲ್ಲಿರುವ ರಕ್ತನಿಧಿ ಕೇಂದ್ರದಲ್ಲಿ ರಕ್ತಕ್ಕೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ರಕ್ತ ಪೂರೈಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮನವಿ ಮಾಡಿದೆ.
ರಕ್ತ ತೊಂದರೆಯಿಂದ ಬಳಲುತ್ತಿರುವ ರೋಗಿಗಳಿಗೆ ಬೇಕಾದ ರಕ್ತದ ಬೇಡಿಕೆ ಅಧಿಕವಾಗಿದ್ದು ಪ್ರಸ್ತುತ ರಕ್ತನಿಧಿ ಕೇಂದ್ರದಲ್ಲಿ ರಕ್ತದ ದಾಸ್ತಾನು ಕಡಿಮೆ ಇದೆ. ಹೀಗಾಗಿ ಸರ್ಕಾರಿ ಇತರೆ ಸಂಘಸಂಸ್ಥೆಗಳು ಜಿಲ್ಲೆಯಾದ್ಯಂತ ಹೆಚ್ಚು ರಕ್ತದಾನ ಶಿಬಿರ ಆಯೋಜಿಸುವ ಮೂಲಕ ರಕ್ತನಿಧಿ ಕೇಂದ್ರಕ್ಕೆ ರಕ್ತ ಪೂರೈಸಲು ಸಹಕರಿಸುವಂತೆ ಮನವಿ ಮಾಡಿದೆ.
ಸ್ವಯಂಸೇವಾ ಸಂಸ್ಥೆಗಳು ರಕ್ತದಾನ ಶಿಬಿರ ನಡೆಸುವ ಸಂಬಂಧ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಸುಜಾತ ಅವರ ಮೊಬೈಲ್ ಸಂಖ್ಯೆ 9448128969 ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ. ಪಾಂಡುವಿಜಯನ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಜೂ. 25ರಂದು ಉದ್ಯಮಶೀಲತಾ ತಿಳಿವಳಿಕೆ ಕಾರ್ಯಕ್ರಮ
ಚಾಮರಾಜನಗರ, ಜೂ. 23 - ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಆಶ್ರಯದಲ್ಲಿ ಭಾವಿ ಉದ್ಯಮಿಗಳಿಗಾಗಿ ಉದ್ಯಮಶೀಲತಾ ತಿಳಿವಳಿಕೆ ಕಾರ್ಯಕ್ರಮವನ್ನು ಜೂನ್ 25ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೋಡಿ ರಸ್ತೆಯಲ್ಲಿರುವ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಪ್ರೇರಣಾ ಎಂಟರ್‍ಪ್ರೈಸಸ್ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆ. ಕಾರ್ಯಕ್ರಮದಲ್ಲಿ ಉದ್ಯಮ ಸ್ಥಾಪನೆ, ಬ್ಯಾಂಕು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ದೊರೆಯುವ ಹಣಕಾಸು ಸೌಲಭ್ಯಗಳು, ಮಾರುಕಟ್ಟೆ ಯೋಜನೆ ಇನ್ನಿತರ ತರಬೇತಿ ನೀಡಲಾಗುತ್ತದೆ.
ಆಸಕ್ತರು ಅಂದು ಬೆಳಿಗ್ಗೆ 10 ಗಂಟೆಗೆ ನೇರವಾಗಿ ಕಾರ್ಯಕ್ರಮಕ್ಕೆ ಹಾಜರಾಗಿ ಹೆಸರು ನೊಂದಣಿ ಮಾಡಬಹುದು. ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರ, ಸಿಡಾಕ್, ಉಪನಿರ್ದೇಶಕರನ್ನು ಸಂಪರ್ಕಿಸಬಹುದು ಅಥವಾ ದೂರವಾಣಿ ಸಂಖ್ಯೆ 08226-226346, ಮೊಬೈಲ್ 7760145784 ಸಂಪರ್ಕಿಸಬಹುದೆಂದು  ಪ್ರಕಟಣೆ ತಿಳಿಸಿದೆ.

ಅತಿಥಿ ಉಪನ್ಯಾಸಕರ
    ಚಾಮರಾಜನಗರ, ಜೂ. 23 (ಕರ್ನಾಟಕ ವಾರ್ತೆ):- ತಾಲೂಕಿನ ಕೋಡಿ ಉಗನೆಯಲ್ಲಿರುವ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ಗೌರವಧನ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಭೌತಶಾಸ್ತ್ರ, ಗಣಕಯಂತ್ರ, ಜೀವಶಾಸ್ತ್ರ, ಗಣಿತ, ಕನ್ನಡ ವಿಷಯಗಳ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಎಂಎಸ್ಸಿ ಬಿಎಡ್ ಮತ್ತು ಕನ್ನಡ ಉಪನ್ಯಾಸ ಹುದ್ದೆಗೆ ಕನ್ನಡ ವಿಷಯದಲ್ಲಿ ಎಂಎ ಬಿಎಡ್ ವಿದ್ಯಾರ್ಹತೆ ಹೊಂದಿರಬೇಕು. ಪ್ರತಿ ತಿಂಗಳು 7000 ರೂ. ಗೌರವಧನ ನೀಡಲಾಗುತ್ತದೆ.
ಅರ್ಜಿ ಹಾಗೂ ಸ್ವವಿವರವನ್ನು ಕೋಡಿಉಗನೆಯಲ್ಲಿರುವ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿಗೆ ತಲುಪಿಸಲು ಜೂನ್ 30 ಕಡೆಯ ದಿನವಾಗಿದೆ. ವಿವರಗಳಿಗೆ ಮೊಬೈಲ್ ಸಂಖ್ಯೆ 7829899840 ಹಾಗೂ 9964714370 ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜೇಶ್ ಜಿ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.         


ಮಾಹಿತಿ ಆಯುಕ್ತರ ಜಿಲ್ಲಾ ಪ್ರವಾಸ
ಚಾಮರಾಜನಗರ, ಜೂ. 23 - ರಾಜ್ಯ ಮಾಹಿತಿ ಆಯುಕ್ತರಾದ ಕೆ.ಎಂ. ಚಂದ್ರೇಗೌಡ ಅವರು ಜೂನ್ 27 ಹಾಗೂ 28ರಂದು ಜಿಲ್ಲೆಗೆ ಭೇಟಿ ನೀಡಲಿದ್ದು ಪ್ರವಾಸ ಕಾರ್ಯಕ್ರಮದ ವಿವರ ಹೀಗಿದೆ.
ಜೂನ್ 27ರಂದು ರಾತ್ರಿ 7 ಗಂಟೆಗೆ ನಗರಕ್ಕೆ ಆಗಮಿಸಿ ವಾಸ್ತವ್ಯ ಹೂಡುವರು. ಜೂನ್ 28ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಮಾಹಿತಿ ಹಕ್ಕು ಅಧಿನಿಯಕ್ಕೆ ಸಂಬಂಧಪಟ್ಟಂತೆ ಪ್ರಕರಣಗಳ ವಿಚಾರಣೆಯನ್ನು ನಡೆಸುವರು. ಮಧ್ಯಾಹ್ನ 2.30 ಗಂಟೆಗೆ ಮಾಹಿತಿ ಹಕ್ಕು ಅಧಿನಿಯಮ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಜಿಲ್ಲೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತರಬೇತಿ ನೀಡುವ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಪ್ರಕಟಣೆ ತಿಳಿಸಿದೆ.

ಯಳಂದೂರು : ಅಡುಗೆ ಅನಿಲ, ವೈಯಕ್ತಿಕ ಶೌಚಾಲಯ ಸಹಾಯಧನಕ್ಕೆ ಪಜಾ, ಪಪಂ ವರ್ಗದವರಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 23- ಯಳಂದೂರು ಪಟ್ಟಣ ಪಂಚಾಯಿತಿಯು 2009-10 ಮತ್ತು 2013-14ನೇ ಸಾಲಿನ ಶೇ.24.10ರ ಖರ್ಚಾಗದೆ ಬಾಕಿ ಉಳಿದಿರುವ ಎಸ್ ಎಫ್ ಸಿ ಮುಕ್ತ ಅನುದಾನದಡಿ  ವಿವಿಧ ಆರ್ಥಿಕ ಸೌಲಭ್ಯಗಳನ್ನು ನೀಡುವ ಸಲುವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅನಿಲರಹಿತ ಬಿಪಿಎಲ್ ಕುಟುಂಬಗಳಿಗೆ ಅಡಿಗೆ ಅನಿಲ ಸಂಪರ್ಕ ಕಲ್ಪಿಸಲು 4600 ರೂ. ಸಹಾಯಧನ ಒದಗಿಸಲಾಗುತ್ತದೆ. ಶೌಚಾಲಯ ನಿರ್ಮಾಣಕ್ಕಾಗಿ 10 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ.
ಅರ್ಜಿಯನ್ನು ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಅಭ್ಯರ್ಥಿಗಳೇ ಖುದ್ದು ಹಾಜರಾಗಿ ಪಡೆಯಬೇಕು. ಭರ್ತಿ ಮಾಡಿದ ಅರ್ಜಿ ಜತೆ ಜಾತಿ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬಿಪಿಎಲ್ ಪಡಿತರ ಚೀಟಿ ಇನ್ನಿತರ ಅಗತ್ಯ ದಾಖಲಾತಿಗಳನ್ನು ಲಗತ್ತಿಸಬೇಕು. ಅರ್ಜಿ ಸಲ್ಲಿಕೆಗೆ ಜೂನ್ 20 ಕಡೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ ಪಟ್ಟಣ ಪಂಚಾಯಿತಿ ಕಾರ್ಯಾಲಯದ ವಿಷಯ ನಿರ್ವಾಹಕರನ್ನು ಸಂಪರ್ಕಿಸುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಬಿ. ರವಿ ಮತ್ತು ಮುಖ್ಯಾಧಿಕಾರಿ ಎಸ್. ಉಮಾಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿ ನವೀಕರಣಕ್ಕೆ ಸೂಚನೆ
ಚಾಮರಾಜನಗರ, ಜೂ. 23 - ಚಾಮರಾಜನಗರ ನಗರಸಭೆ ವತಿಯಿಂದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆ (ನಲ್ಮ್)ಯಡಿ 2014-15ನೇ ಸಾಲಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವಿತರಿಸಲಾಗಿರುವ ಗುರುತಿನ ಚೀಟಿಯನ್ನು ನವೀಕರಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಗುರುತಿನ ಚೀಟಿ ಅವಧಿ 1 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನಗರಸಭೆ ಕಚೇರಿಯ ನಲ್ಮ್ ಯೋಜನೆ ವಿಭಾಗದಲ್ಲಿ 2016-17ನೇ ಸಾಲಿಗೆ ನವೀಕರಿಸಿಕೊಂಡು ಗುರುತಿನ ಚೀಟಿಯನ್ನು ಹೊಸದಾಗಿ ಪಡೆಯಬೇಕು. ನವೀಕರಿಸಿ ಕೊಳ್ಳುವ ಸಂದರ್ಭದಲ್ಲಿ ಬಿಳಿ ಹಾಳೆಯಲ್ಲಿ ಅರ್ಜಿ ಬರೆದು ಈಗಾಗಲೇ ಪಡೆದಿರುವ ಗುರುತಿನ ಚೀಟಿ ಜೆರಾಕ್ಸ್ ಪ್ರತಿ, ನವೀಕರಣ ಶುಲ್ಕವಾಗಿ 50 ರೂ. ಪಾವತಿಸಿ ರಸೀತಿ ಲಗತ್ತಿಸಬೇಕು. ಹೆಚ್ಚಿನ ವಿವರಗಳಿಗೆ ನಲ್ಮ್ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಮಲ್ಲೇಶ್ ಅವರ ಮೊಬೈಲ್ 9844397602 ಸಂಪರ್ಕಿಸುವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಂಡ್ಲುಪೇಟೆ : ವಿವಿಧ ಕೌಶಲ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 23 - ಗುಂಡ್ಲುಪೇಟೆ ಪುರಸಭೆ ವತಿಯಿಂದ ಡೇ ನಲ್ಮ್ ಯೋಜನೆಯಡಿ ನೀಡಲಿರುವ ವಿವಿಧ ಕೌಶಲ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
7ನೇ ತರಗತಿ ತೇರ್ಗಡೆಯಾದವರಿಗೆ ಸಾಫ್ಟ್ ಸ್ಕಿಲ್ಸ್, ಸ್ಪೋಕನ್ ಇಂಗ್ಲೀಷ್ ಮತ್ತು ಕಮ್ಯುನಿಕೇಷನ್ ಸ್ಕಿಲ್, 8ನೇ ತರಗತಿ ತೇರ್ಗಡೆಯಾದವರಿಗೆ ಫ್ಯಾಷನ್ ಡಿಸೈನಿಂಗ್, 10ನೇ ತರಗತಿ ತೇರ್ಗಡೆಯಾದವರಿಗೆ ಕಾಲ್‍ಸೆಂಟರ್ ಟ್ರೈನಿಂಗ್, ಡಿಪ್ಲಮೋ ಇನ್ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ಕೋರ್ಸ್ ಮತ್ತು  ದ್ವಿತೀಯ ಪಿಯುಸಿ ತೇರ್ಗಡೆಯಾದವರಿಗೆ ಅಕೌಂಟಿಂಗ್ ಹಾಗೂ ಟ್ಯಾಲಿ ವಿಷಯದಲ್ಲಿ ತರಬೇತಿ ನೀಡಲಾಗುತ್ತದೆ.
ಅಭ್ಯರ್ಥಿಗಳು 18 ರಿಂದ 45ರ ವಯೋಮಿತಿಯೊಳಗಿರಬೇಕು. ಅರ್ಜಿಯನ್ನು ಪುರಸಭೆ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಜೂನ್ 30ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಪುರಸಭೆ ಕಚೇರಿ ಸಂಪರ್ಕಿಸುವಂತೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಿಲಿಟರಿ ಬಾಲಕರ ವಸತಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 23 - ಮೈಸೂರಿನಲ್ಲಿರುವ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಮಿಲಿಟರಿ ಬಾಲಕರ ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
2016-17ನೇ ಸಾಲಿನಲ್ಲಿ 6 ರಿಂದ ದ್ವಿತೀಯ ಪಿಯುಸಿ ಮತ್ತು ಡಿಪ್ಲೊಮಾ ವ್ಯಾಸಂಗ ಮಾಡುವ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರ ಗಂಡುಮಕ್ಕಳಿಗೆ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ನೀಡಲಾಗುತ್ತದೆ.
ಅರ್ಜಿಯನ್ನು ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದಲ್ಲಿರುವ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಜೂನ್ 30ರೊಳಗೆ ಸಲ್ಲಿಸಬೇಕು. ವಿವರಗಳಿಗೆ ದೂರವಾಣಿ ಸಂಖ್ಯೆ 0821- 2425240 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.






ಯಳಂದೂರು : ವಿವಿಧ ಸಹಾಯಧನ, ಸೌಲಭ್ಯಕ್ಕೆ ಪಜಾ, ಪಪಂ, ಹಿಂದುಳಿದ ವರ್ಗ, ಅಂಗವಿಕಲರಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 23 :- ಯಳಂದೂರು ಪಟ್ಟಣ ಪಂಚಾಯಿತಿಯು 2009-10 ಮತ್ತು 2011-12ನೇ ಸಾಲಿನ ಶೇ.24.10, ಶೇ. 7.25 ಹಾಗೂ ಶೇ.3ರ ಮುಕ್ತ ಅನುದಾನದಡಿ  ವಿವಿಧ ಆರ್ಥಿಕ ಸೌಲಭ್ಯಗಳನ್ನು ನೀಡುವ ಸಲುವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಂಗವಿಕಲ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ವೈಯಕ್ತಿಕ ಶೌಚಾಲಯ ನಿರ್ಮಾಣ, ಶಿಕ್ಷಣ ಸೌಲಭ್ಯ, ಅನಿಲ ಸಂಪರ್ಕಕ್ಕೆ ಸಹಾಯಧನ, ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಸಹಾಯಧನ, ವಿಕಲಚೇತನರಿಗೆ ಘೋಷನಾ ಭತ್ಯೆ. ಸ್ವಯಂ ಉದ್ಯೋಗಕ್ಕಾಗಿ 4 ಚಕ್ರದ ಸೈಕಲ್ ಗಾಡಿಗಳನ್ನು ವಿತರಿಸಲಾಗುತ್ತದೆ.
ಅರ್ಜಿಯನ್ನು ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಪಡೆಯಬೇಕು. ಭರ್ತಿ ಮಾಡಿದ ಅರ್ಜಿ ಜತೆ ಜಾತಿ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬಿಪಿಎಲ್ ಪಡಿತರ ಚೀಟಿ ಇನ್ನಿತರ ಅಗತ್ಯ ದಾಖಲಾತಿಗಳನ್ನು ಲಗತ್ತಿಸಬೇಕು. ಅರ್ಜಿ ಸಲ್ಲಿಕೆಗೆ ಜೂನ್ 20 ಕಡೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ ಪಟ್ಟಣ ಪಂಚಾಯಿತಿ ಕಾರ್ಯಾಲಯದ ವಿಷಯ ನಿರ್ವಾಹಕರನ್ನು ಸಂಪರ್ಕಿಸುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಬಿ. ರವಿ ಮತ್ತು ಮುಖ್ಯಾಧಿಕಾರಿ ಎಸ್. ಉಮಾಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜೂನ್ 25ರಂದು ಲೋಕಸಭಾ ಸದಸ್ಯರ ತಾಲೂಕು ಪ್ರವಾಸ
ಚಾಮರಾಜನಗರ, ಜೂ. 24 - ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಜೂನ್ 25ರಂದು ಚಾಮರಾಜನಗರ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.
ಭೋಗಾಪುರದ ನಾಯಕರ ಬೀದಿಯಲ್ಲಿ ನಡೆಯಲಿರುವ ಸಮುದಾಯ ಭವನದ ಗುದ್ದಲಿಪೂಜೆ, ಮಸಗಾಪುರದ ಕ್ರಿಶ್ಚಿಯನ್ ಬೀದಿಯಲ್ಲಿ ನಡೆಯಲಿರುವ ಸಮುದಾಯ ಭವನದ ಗುದ್ದಲಿಪೂಜೆ, ಚಾಮರಾಜನಗರದ ಅಂಬೇಡ್ಕರ್ ಭವನದಲ್ಲಿ  ನಡೆಯಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಶಿವಪುರ, ಹೆಗ್ಗೋಠಾರದಲ್ಲಿ ನಡೆಯಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ, ನಂಜದೇವನಪುರದಲ್ಲಿ ನಡೆಯಲಿರುವ ಶಾಲಾ ಕಟ್ಟಡ ಉದ್ಘಾಟನೆ, ತಮ್ಮಡಹಳ್ಳಿಯಲ್ಲಿ ನಡೆಯಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಧ್ರುವನಾರಾಯಣ ಅವರು ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.
ನರೇಗಾ ಜಾಗೃತಿ ಅಭಿಯಾನಕ್ಕೆ ಚಾಲನೆ
ಚಾಮರಾಜನಗರ, ಜೂ. 24 - ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯಿತಿಯು ಜಾಗೃತಿ ಅಭಿಯಾನವನ್ನು ಆರಂಭಿಸಿದೆ.
ಜಿಲ್ಲಾಡಳಿತ ಭವನದ ಆವರಣದಲ್ಲಿ ಇಂದು ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶಂಭುದಯಾಳ್ ಮೀನಾ ಅವರು  ನರೇಗಾ ಕಾರ್ಯಕ್ರಮ ಕುರಿತ ಮಾಹಿತಿಯುಳ್ಳ ಕರಪತ್ರವನ್ನು ಬಿಡುಗಡೆಗೊಳಿಸಿದರು.
ನರೇಗಾ ಯೋಜನೆ ಜನರ ಬಳಿ ತಲುಪುವುದಕ್ಕಾಗಿ ಜಾಗೃತಿ ಅಭಿಯಾನ ವಾಹನವು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರಗಳು ಹಾಗೂ ಗ್ರಾಮಗಳಿಗೆ ಹೋಗಿ, ಅಲ್ಲಿ ಜನರಿಗೆ ತಿಳಿವಳಿಕೆ ಮೂಡಿಸುವ  ಕಾರ್ಯ ಮಾಡಲಿದೆ. ಜಾಗೃತಿ ಅಭಿಯಾನ ವಾಹನದಲ್ಲಿ ಅತ್ಯಾಧುನಿಕ ಸಿನಿಮಾ ಪ್ರದರ್ಶನದ ವ್ಯವಸ್ಥೆ ಇದ್ದು, ಇದರಲ್ಲಿ  ಚಾಮರಾಜನಗರ ಜಿಲ್ಲಾ ಪಂಚಾಯಿತಿ ವತಿಯಿಂದ ನಿರ್ಮಾಣಗೊಂಡಿರುವ ನರೇಗಾ ಕುರಿತ ಸಾಕ್ಷ್ಯಚಿತ್ರ ಜೊತೆಗೆ ಉದ್ಯೋಗ ಖಾತರಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಮುಖ್ಯ ಇಲಾಖೆಗಳಾದ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಸಾಮಾಜಿಕ ಅರಣ್ಯ  ಮತ್ತಿತರರ ಇಲಾಖೆಯಲ್ಲಿನ ಮಾಹಿತಿಯನ್ನು ತಿಳಿಸುವ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಸಹ ಮಾಡಲಾಗುತ್ತದೆ.
ನರೇಗಾ ಕಾರ್ಯಕ್ರಮ ಕುರಿತ ಮಾಹಿತಿ ಫಲಕಗಳನ್ನು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅಳವಡಿಸಲಾಗುತ್ತಿದೆ. ಮಾನ್ಯ ಮುಖ್ಯಮಂತ್ರಿಯವರ 21 ಅಂಶಗಳ ಕಾರ್ಯಕ್ರಮದ ಮಾಹಿತಿ, ಪರಿಷ್ಕøತ ಕೂಲಿ ದರದ ಮಾಹಿತಿ, ವಾರ್ಷಿಕ ದೊರೆಯುವ ಮಾನವ ದಿನಗಳು ಸೇರಿದಂತೆ ಯೋಜನೆಯಡಿ ಕೈಗೊಳ್ಳಬಹುದಾದ ವಿವಿಧ ಕಾಮಗಾರಿಗಳ ವಿವರಗಳನ್ನು ಒಳಗೊಂಡ ಮಾಹಿತಿಯು ಕರಪತ್ರದಲ್ಲಿ ಇದ್ದು, ಇದನ್ನು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ಮೂಲಕ ಸಾರ್ವಜನಿಕರಿಗೆ ತಲುಪಿಸಲು ಕ್ರಮವಹಿಸಲಾಗಿದೆ.
ಜಾಗೃತಿ ಅಭಿಯಾನ ಕಾರ್ಯಕ್ರಮ ಕೇವಲ ಏಕಮುಖವಾಗದೆ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರಿಂದ ಕೂಲಿ ಬೇಡಿಕೆ ಸಂಗ್ರಹಿಸುವ ಕಾರ್ಯವೂ ನಡೆಯುತ್ತದೆ. ಈ ಮಹತ್ವಾಕಾಂಕ್ಷೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ತಿಳಿಸಿದರು.

ವಸತಿ ಯೋಜನೆ ಗುರಿ ಸಾಧಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ
ಚಾಮರಾಜನಗರ, ಜೂ. 24 :- ಜಿಲ್ಲೆಯಲ್ಲಿ ಸರ್ಕಾರದ ವಿವಿಧ ವಸತಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ನಿಗದಿತ ಗುರಿ ಸಾಧಿಸುವಂತೆ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಶಂಭುದಯಾಳ್ ಮೀನಾ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಬರ ನಿರ್ವಹಣೆ ಹಾಗೂ ಇತರೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಸವ ವಸತಿ ಯೋಜನೆ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ ಸೇರಿದಂತೆ ಅನುಷ್ಠಾನದಲ್ಲಿರುವ ವಸತಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕೆಲವೆಡೆ ಇನ್ನೂ ಕಾಮಗಾರಿ ಆರಂಭಿಸಿಲ್ಲ. ಇನ್ನೂ ಕೆಲ ತಾಲೂಕುಗಳಲ್ಲಿ ಅಪೂರ್ಣವಾಗಿವೆ. ಯೋಜನೆ ಸಂಬಂಧ ಅನುಷ್ಠಾನಕ್ಕೆ ಎದುರಾಗಿರುವ ತೊಡಕುಗಳನ್ನು ಪರಿಹರಿಸಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.
ವಸತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಫಲಾನುಭವಿಗಳಿಗೆ ತಲುಪಿಸುವ ದಿಸೆಯಲ್ಲಿ ಶೀಘ್ರವೇ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಅಗತ್ಯ ಮಾರ್ಗದರ್ಶನ ಮಾಡಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ವಸತಿ ಯೋಜನೆ ಪ್ರಗತಿಯನ್ನು ಪರಾಮರ್ಶಿಸಿ ಕಾಮಗಾರಿಗೆ ಚುರುಕು ನೀಡಬೇಕು ಎಂದು ಶಂಭುದಯಾಳ್ ಮೀನಾ ತಿಳಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇಲಾಖೆಗಳು ಹೆಚ್ಚು ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೇ ಇಲಾಖೆಗಳು ಹೆಚ್ಚು ಕಾಮಗಾರಿಯನ್ನು ಯೋಜನೆಯಡಿ ನಿರ್ವಹಿಸಿ ಪ್ರಗತಿ ಸಾಧಿಸಲು ಅವಕಾಶಗಳಿವೆ. ಪ್ರತಿ ಇಲಾಖೆಯ ಅಧಿಕಾರಿಗಳು ನರೇಗಾ ಕೆಲಸಗಳಿಗೆ ವಿಶೇಷ ಒತ್ತು ನೀಡಬೇಕು. ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಗತಿ ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ಅಧಿಕಾರಿಗಳು ನೀಡಬೇಕೆಂದರು.
ಕುಡಿಯುವ ನೀರಿನ ಯೋಜನೆ ಪ್ರಗತಿ ಪರಿಶೀಲಿಸಿದ ಉಸ್ತುವಾರಿ ಕಾರ್ಯದರ್ಶಿಯವರು ನಿಗದಿತ ಸಮಯದೊಳಗೆ ಯೋಜನೆ ಪೂರ್ಣಗೊಳಿಸಬೇಕು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಗ್ರಾಮೀಣ ನೀರು ಪೂರೈಕೆ ಇಲಾಖೆಯ ಎಂಜಿನಿಯರ್‍ಗಳು ಸಂಪರ್ಕದಲ್ಲಿದ್ದು, ಕೊಳವೆ ಬಾವಿಗಳ ಮರುಪೂರಣ ಕೆಲಸವನ್ನು ಪೂರ್ಣ ಪ್ರಮಾಣದಲ್ಲಿ ನಿರ್ವಹಿಸಬೇಕು. ಈ ಕೆಲಸವನ್ನು ವಿಶೇಷ ಆದ್ಯತೆಯಾಗಿ ಪರಿಗಣಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಂಭುದಯಾಳ್ ಮೀನಾ ತಾಕೀತು ಮಾಡಿದರು.
ಕೃಷಿ, ಪಶುಸಂಗೋಪನೆ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಉಪಕಾರ್ಯದರ್ಶಿ ಮುನಿರಾಜಪ್ಪ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಸಭೆಗೂ ಮೊದಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು ಗುಂಡ್ಲುಪೇಟೆ ತಾಲೂಕಿನ ಶಿವಪುರ, ರಾಘವಾಪುರ, ಹಂಗಳ, ಪುತ್ತನಪುರ ಸೇರಿದಂತೆ ವಿವಿಧ ಭಾಗಗಳಿಗೆ ಭೇಟಿ ನೀಡಿ ನರೇಗಾ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದರು.  
ಮಹದೇಶ್ವರ ಬೆಟ್ಟದಲ್ಲಿ ವೈರ್ ಲೆಸ್ ಸಿಸಿ ಕ್ಯಾಮರಾ ಕಣ್ಗಾವಲು ವ್ಯವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ
ಚಾಮರಾಜನಗರ, ಜೂ. 24 - ಭಕ್ತಾಧಿಗಳ ಸುರಕ್ಷತೆಗಾಗಿ ವೈರ್‍ಲೆಸ್ ಮೂಲಕ ಸಿಸಿ ಕ್ಯಾಮರಾ ಕಣ್ಗಾವಲು ವ್ಯವಸ್ಥೆ ಹೊಂದಿದ ರಾಜ್ಯದ ಮೊಟ್ಟಮೊದಲ ಯಾತ್ರಾಕ್ಷೇತ್ರವೆಂಬ ಹೆಗ್ಗಳಿಕೆಗೆ ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಪಾತ್ರವಾಗಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ ವೈರ್‍ಲೆಸ್ ಮೂಲಕ ಕ್ಷೇತ್ರದ ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ನಿಗಾ ವ್ಯವಸ್ಥೆಗೆ ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಎಸ್ ಮಹದೇವಪ್ರಸಾದ್ ಇಂದು ಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಕಚೇರಿಯಲ್ಲಿ ಚಾಲನೆ ನೀಡಿದರು. ಇದೇವೇಳೆ ನೂತನವಾಗಿ ನಿರ್ಮಾಣ ಮಾಡಿರುವ 26 ಅಂಗಡಿ ಮಳಿಗೆಗಳನ್ನು ಉದ್ಘಾಟಿಸಿದರು. ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿದರು.
ಬಳಿಕ ಮಹದೇಶ್ವರ ದೇವಾಲಯ ಸಮೀಪದ ಬಯಲು ರಂಗಮಂದಿರದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು.
ಇದೇವೇಳೆ ಮಾತನಾಡಿದ ಉಸ್ತುವಾರಿ ಸಚಿವರು 89 ಲಕ್ಷ ರೂ. ವೆಚ್ಚದಲ್ಲಿ ಕ್ಷೇತ್ರದ ವಿವಿಧೆಡೆ ಒಟ್ಟು 12 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ತಮಿಳುನಾಡು ಭಾಗದಿಂದ ಮಹದೇಶ್ವರ ಬೆಟ್ಟಕ್ಕೆ ಬರುವ ಪ್ರವೇಶ ಸ್ಥಳ ಹಾಗೂ ಕ್ಷೇತ್ರದ ಮುಖ್ಯ ಇತರೆ ಸ್ಥಳಗಳಲ್ಲಿ ಈ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ದೇವಾಲಯ ಸೇರಿದಂತೆ ಜನಸಂದಣಿ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಇಡಲಾಗಿದೆ ಎಂದರು.
ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳ ಸಂಖ್ಯೆಯೂ ಹೆಚ್ಚಿದೆ. ಜಾತ್ರೆ ಇತರೆ ವಿಶೇಷ ದಿನಗಳಲ್ಲೂ ಅಧಿಕ ಸಂಖ್ಯೆಯಲ್ಲಿ ಜಮಾವಣೆಗೊಳ್ಳುವ ಭಕ್ತರ ರಕ್ಷಣೆಯೂ ಮುಖ್ಯವಾಗಿದೆ. ಹೀಗಾಗಿ ಸಿಸಿ ಕ್ಯಾಮರಾ ಅಳವಡಿಕೆಯಿಂದ ಯಾವುದೇ ಅಹಿತಕರ ಘಟನೆ ಇತರೆ ದುಷ್ಕøತ್ಯಗಳು ತಡೆಯಲು ಅನುಕೂಲವಾಗಲಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಪ್ರಸ್ತುತ ಅಳವಡಿಸಿರುವ ಸಿಸಿ ಕ್ಯಾಮರಾಗಳು ಹೆಚ್ ಡಿ ಗುಣಮಟ್ಟದ್ದಾಗಿದೆ. ಅಲ್ಲದೆ ಒಂದು ಕಿ.ಮೀ. ದೂರದವರೆಗಿನ ದೃಶ್ಯಾವಳಿಗಳನ್ನು ಸೆರೆ ಹಿಡಿಯುವ ಸಾಮಥ್ರ್ಯ ಹೊಂದಿವೆ. ಇದರಿಂದ ಯಾವುದೇ ಸೂಕ್ಷ್ಮ ಅಂಶಗಳನ್ನೂ ಸಹ ದಾಖಲು ಮಾಡಬಹುದಾಗಿದೆ. ಇಂತಹ ವೈಶಿಷ್ಟ್ಯವುಳ್ಳ ವೈರ್ ಲೆಸ್ ಸಿಸಿ ಕ್ಯಾಮರಾ ಕಣ್ಗಾವಲು ವ್ಯವಸ್ಥೆ ಅಳವಡಿಸಿಕೊಂಡ ರಾಜ್ಯದ ಮೊದಲ ದೇವಾಲಯ ಮಹದೇಶ್ವರ ದೇವಾಲಯವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕ್ಷೇತ್ರಕ್ಕೆ ವರ್ಷದಿಂದ ವರ್ಷಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಪ್ರಾಧಿಕಾರವು ಅಗತ್ಯ ಮೂಲ ಸೌಕರ್ಯ ಒದಗಿಸುವ ಕೆಲಸ ಮಾಡುತ್ತಾ ಬಂದಿದೆ. 4.50 ಕೋಟಿ ರೂ. ವೆಚ್ಚದಲ್ಲಿ ಭಕ್ತಾಧಿಗಳು ಕುಳಿತುಕೊಳ್ಳಲು ವಿಶಾಲವಾದ ರಂಗಮಂದಿರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಸಿಮೆಂಟ್ ಕಾಂಕ್ರೀಟ್ ನೆಲವನ್ನು ಸಿದ್ಧಪಡಿಸಲಾಗಿದೆ. ಮೇಲ್ಚಾವಣಿ ಕಾಮಗಾರಿಯೂ ಸಹ ನಡೆಯಲಿದೆ. 40 ಲಕ್ಷ ರೂ. ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾರ್ಯ ನಡೆಯುತ್ತಿದೆ. 4.86 ಕೋಟಿ ರೂ. ವೆಚ್ಚದ ಡಾರ್ಮೆಂಟರಿ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. 3.30 ಕೋಟಿ ರೂ. ವೆಚ್ಚದಲ್ಲಿ ಪ್ರಾಧಿಕಾರದ ಸಿಬ್ಬಂದಿ ವಸತಿಗೃಹ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಕ್ಷೇತ್ರದಲ್ಲಿ ಇನ್ನೂ ಹಲವಾರು ಸೌಲಭ್ಯಗಳನ್ನು ಒದಗಿಸಲು ಯೋಜಿಸಲಾಗಿದೆ. ಕ್ಷೇತ್ರದಲ್ಲಿ 40 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಬಯಲು ರಂಗಮಂದಿರ, 100 ಅಡಿ ಎತ್ತರದ ಮಹದೇಶ್ವರ ಪ್ರತಿಮೆ, ಔಷಧೀಯ ವನ, ಮಹದೇಶ್ವರರ ಚರಿತ್ರೆ ತಿಳಿಸಲು ಅನುಕೂಲವಾಗುವ ಸಭಾಂಗಣ, ಮಕ್ಕಳ ಉದ್ಯಾನವನ ಇನ್ನಿತರ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಕ್ಷೇತ್ರದಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದನ್ನು ತಪ್ಪಿಸಿ ಅಂಗಡಿಗಳಲ್ಲಿ ಮಾರಾಟ ನಡೆಸಲು ಅನುಕೂಲವಾಗುವಂತೆ ಇಂದೂ ಕೂಡ 26 ಮಳಿಗೆಗಳನ್ನು ಉದ್ಘಾಟಿಸಲಾಗಿದೆ. ಇನ್ನೂ 50 ಮಳಿಗೆಗಳನ್ನು ವಿವಿಧ ಸ್ಥಳಗಳಲ್ಲಿ ನಿರ್ಮಾಣ ಮಾಡಲು ಸೂಚಿಸಲಾಗಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ  ಶಾಖೆಗಳನ್ನು ತೆರಕಣಾಂಬಿ, ಸಂತೆಮರಹಳ್ಳಿಯಲ್ಲಿಯೂ ತೆರೆಯಲಾಗುತ್ತಿದೆ. ಸಹಕಾರ ಕೇಂದ್ರ ಬ್ಯಾಂಕು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ರೈತರಿಗೆ ಸೌಲಭ್ಯ ನೀಡುತ್ತಿದೆ. ಜಿಲ್ಲೆಯಲ್ಲಿ ಹೆಚ್ಚು ಜನರಿಗೆ ಸಾಲ ನೀಡಿದೆ ಎಂದು ಸಚಿವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಆರ್. ನರೇಂದ್ರ ಅವರು ಪ್ರಾಧಿಕಾರ ಅಸ್ವಿತ್ವಕ್ಕೆ ಬಂದ ಬಳಿಕ ಭಕ್ತಾಧಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ಸಲುವಾಗಿ ಅನೇಕ ಕಾಮಗಾರಿ ಕೈಗೊಳ್ಳಲಾಗಿದೆ. ದೇವಾಲಯದ ಆದಾಯವು 57 ಕೋಟಿಗೆ ತಲುಪಿದೆ. ಈ ಆದಾಯದಲ್ಲಿ ಶೇ. 75ರಷ್ಟನ್ನು ಭಕ್ತಾಧಿಗಳ ಸೌಕಂiÀರ್iಕ್ಕಾಗಿಯೇ ಬಳಕೆ ಮಾಡಲÁಗುತ್ತದೆ ಎಂದರು.
ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕಿನ ಉಪಾಧ್ಯಕ್ಷರಾದ ಚಂದ್ರಶೇಖರ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಹಲಗತಂಬಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರುಕ್ಮಿಣಿ, ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಿ. ಭಾರತಿ, ಡಿಸಿಸಿ ಬ್ಯಾಂಕಿನ ನಿರ್ದೇಶಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಳಿಕ ಉಸ್ತುವಾರಿ ಸಚಿವರು ಹನೂರು ಪಟ್ಟಣದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶಾಖೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ತದನಂತರ ಸಂತೆಮರಹಳ್ಳಿ, ತೆರಕಣಾಂಬಿಯಲ್ಲಿ ಬ್ಯಾಂಕಿನ ನೂತನ ಶಾಖೆ ಆರಂಭಕ್ಕೆ ಚಾಲನೆ ನೀಡಿದರು.

ಜಿಲ್ಲಾ ಪಂಚಾಯತ್ ವಿವಿಧ ಸ್ಥಾಯಿ ಸಮಿತಿಗೆ ಆಯ್ಕೆ
ಚಾಮರಾಜನಗರ, ಜೂ. 25 - ಜಿಲ್ಲಾ ಪಂಚಾಯತ್‍ನ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆ ಪ್ರಕ್ರಿಯೆಯು ಇಂದು ನಡೆಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆ ನಡೆದಿದ್ದು ವಿವರ ಹೀಗಿದೆ.
ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ - ಎಂ ರಾಮಚಂದ್ರ – ಅಧ್ಯಕ್ಷರು, ಎನ್ ಉಮಾವತಿ, ಬಿ.ಕೆ. ಬೊಮ್ಮಯ್ಯ, ಮರಗದಮಣಿ, ಶಶಿಕಲಾ, ಸಿ.ಎನ್. ಬಾಲರಾಜು ಹಾಗೂ ಎನ್. ಮಂಜುಳ - ಸದಸ್ಯರು
ಸಾಮಾನ್ಯ ಸ್ಥಾಯಿ ಸಮಿತಿ – ಎಸ್. ಬಸವರಾಜು – ಅಧÀ್ಯಕ್ಷರು, ಪಿ. ಚನ್ನಪ್ಪ, ಎಲ್. ನಾಗರಾಜು (ಕವiಲ್), ಕೆ. ನವೀನ್, ಇರ್ಷಾದ್ ಬಾನು, ಡಿ. ಲೇಖಾ ಮತ್ತು ಶಿವಮ್ಮ - ಸದಸ್ಯರು
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ - ಬಿ.ಕೆ. ಬೊಮ್ಮಯ್ಯ – ಅಧ್ಯಕ್ಷರು, ಎನ್. ಉಮಾವತಿ, ಪಿ. ಚನ್ನಪ್ಪ, ಎಂ. ಅಶ್ವಿನಿ, ಆರ್. ಬಾಲರಾಜು, ಎಂ. ಚಂದ್ರಕಲಾ ಹಾಗೂ ಶಿವಮ್ಮ - ಸದಸ್ಯರು.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ – ಕೆ.ಪಿ. ಸದಾಶಿವಮೂರ್ತಿ – ಅಧÀ್ಯಕ್ಷರು, ರತ್ನಮ್ಮ, ಡಿ. ಲೇಖಾ, ಜಯಂತಿ, ಜೆ. ಯೋಗೇಶ್, ಮರುಗದಮಣಿ ಹಾಗೂ ಕೆ.ಎಸ್. ಮಹೇಶ್ - ಸದಸ್ಯರು
ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ – ಕೆ. ನವೀನ್ – ಅಧ್ಯಕ್ಷರು, ಕೆ.ಎಸ್. ಮಹೇಶ್, ಶೀಲಾ, ಎಂ. ಅಶ್ವಿನಿ, ಶಶಿಕಲಾ, ಜೆ. ಯೋಗೇಶ್ ಮತ್ತು ಕೆ.ಪಿ. ಸದಾಶಿವಮೂರ್ತಿ - ಸದಸ್ಯರು

ಯಶಸ್ವಿನಿ ಯೋಜನೆ ನೋಂದಣಿ ಅವಧಿ ವಿಸ್ತರಣೆ
ಚಾಮರಾಜನಗರ, ಜೂ. 25 :- ಪ್ರಸಕ್ತ ಸಾಲಿನಲ್ಲಿ ಗ್ರಾಮೀಣ ಹಾಗೂ ನಗರ ಯಶಸ್ವಿನಿ ಸಹಕಾರ ರೈತರ ಆರೋಗ್ಯ ರಕ್ಷಣಾ ಯೋಜನೆಗೆ ನೋಂದಾಯಿಸಿಕೊಳ್ಳುವ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ.
ಸಹಕಾರ ಸಂಘಗಳ ಸದಸ್ಯರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಆಯಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿಗಳ ಕಚೇರಿ, ಚಾಮರಾಜನಗರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಹಾಗೂ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.







Friday, 17 June 2016

chamarajanews24x7: ರಜೆಯನ್ನೇ ಹಾಕದೇ ತೂಗುಕತ್ತಿಯ ಮೇಲೆ ನಡೆದೇ ವರ್ಷ ಪೂರೈಸಿದ ...

chamarajanews24x7: ರಜೆಯನ್ನೇ ಹಾಕದೇ ತೂಗುಕತ್ತಿಯ ಮೇಲೆ ನಡೆದೇ ವರ್ಷ ಪೂರೈಸಿದ ...: ರಜೆಯನ್ನೇ ಹಾಕದೇ ತೂಗುಕತ್ತಿಯ ಮೇಲೆ ನಡೆದೇ ವರ್ಷ ಪೂರೈಸಿದ  ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್, ರಾಮಸಮುದ್ರ ಎಸ್.ವೀರಭದ್ರಸ್ವಾಮಿ (9480030980) ಚ...

17-06-2016 ಚಾಮರಾಜನಗರ ಪ್ರಮುಖ ಸುದ್ದಿಗಳು







ವೈದ್ಯಕೀಯ ಕಾಲೇಜು ಕಟ್ಟಡ ಪೂರಕ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ
ಚಾಮರಾಜನಗರ, ಜೂ. 17 - ಜಿಲ್ಲಾ ಕೇಂದ್ರದ ಯಡಬೆಟ್ಟದ ಬಳಿ ನಿರ್ಮಾಣವಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಪೂರಕವಾಗಿ ಒದಗಿಸಬೇಕಿರುವ ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಹಕಾರ, ಸಕ್ಕರೆ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ವೈದ್ಯಕೀಯ ಕಾಲೇಜು ಕಟ್ಟಡ, ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ವೈದ್ಯಕೀಯ ಕಾಲೇಜನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಆರಂಭಿಸಲು ಅನುಮತಿ ಸಿಕ್ಕಿದೆ. ಈ ಸಾಲಿನಲ್ಲಿ 150 ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯಲಿದ್ದು ಕಾಲೇಜು ತರಗತಿಗಳು ಆರಂಭಿಸಬೇಕಿದೆ. ಹೀಗಾಗಿ ಬಾಕಿ ಉಳಿದಿರುವ ಕೆಲಸವನ್ನು ಶೀಘ್ರ ಗತಿಯಲ್ಲಿ ಪೂರ್ಣ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಉಸ್ತುವಾರಿ ಸಚಿವರು ತಿಳಿಸಿದರು.
ಕಾಲೇಜು ಕ್ಯಾಂಪಸ್‍ನಲ್ಲಿ ನಿರ್ಮಾಣವಾಗಿರುವ ಕಟ್ಟಡ ವಿಭಾಗಗಳು, ವಿದ್ಯಾರ್ಥಿನಿಲಯ ಇತರೆ ಸೌಲಭ್ಯಗಳ ಕುರಿತು ಮಾಹಿತಿ ಪಡೆದ ಉಸ್ತುವಾರಿ ಸಚಿವರು ಯಾವುದೇ ಕೆಲಸ ಅಪೂರ್ಣವಾಗದಂತೆ ನೋಡಿಕೊಳ್ಳಬೇಕು. ಎಲ್ಲಾ ವ್ಯವಸ್ಥೆಗಳು ಪೂರಕವಾಗಿ ಒದಗಿಸಲು ನಿಗಾ ವಹಿಸಬೇಕು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಎಲ್ಲ ಕಾಮಗಾರಿ ಶೈಕ್ಷಣಿಕ ಸಾಲು ಆರಂಭವಾಗುವ ಮೊದಲೇ ಪೂರ್ಣವಾಗಿರಬೇಕು ಎಂದರು.
ಕಾಲೇಜು, ವಿದ್ಯಾರ್ಥಿನಿಲಯ, ಬೋಧಕ, ಬೋಧಕೇತರ ವಸತಿಗೃಹಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಬೇಕು. ಈ ಪ್ರಕ್ರಿಯೆಗೆ ಅಗತ್ಯವಿರುವ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡು ಹೆಚ್ಚಿನ ಪ್ರಮಾಣದಲ್ಲಿ ನೀರು ಸರಬರಾಜು ವ್ಯವಸ್ಥೆ ಮಾಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಕಾಲೇಜು ಸಂಪರ್ಕಿಸುವ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಬೇಕು. ಕಾಲೇಜು ಆರಂಭವಾದ ನಂತರ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಣಿಜ್ಯ ಕಟ್ಟಡಗಳು ಬರಲಿವೆ. ಅಲ್ಲದೆ ಬಡಾವಣೆಗಳು ಸಹ ನಿರ್ಮಾಣವಾಗಲಿದೆ. ಹೀಗಾಗಿ ಭವಿಷ್ಯದ ಉದ್ದೇಶವನ್ನು ಮನಗಂಡು ಅದಕ್ಕೆ ಪೂರಕವಾಗಿ ರಸ್ತೆಯನ್ನು ಕಲ್ಪಿಸಬೇಕಿದೆ. ಲೋಕೋಪಯೋಗಿ ಇಲಾಖೆ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಸಚಿವರು ತಿಳಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿ ಪರಿಶೀಲಿಸಿದ ಸಚಿವರು ಯೋಜನೆ ಪೂರ್ಣಗೊಂಡರೆ ಚಾಮರಾಜನಗರ ತಾಲೂಕಿನ 166 ಹಾಗೂ ಗುಂಡ್ಲುಪೇಟೆ ತಾಲೂಕಿನ 131 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಸೌಲಭ್ಯ ಲಭ್ಯವಾಗಲಿದೆ. ಯೋಜನೆಯನ್ನು ದಸರಾ ಹಬ್ಬಕ್ಕೂ ಮುನ್ನವೇ ಪೂರ್ಣಗೊಳಿಸಿ ಜನತೆಗೆ ಅನುಕೂಲ ಕಲ್ಪಿಸಬೇಕು. ಹೀಗಾಗಿ ಕಾಮಗಾರಿಯನ್ನು ಚುರುಕುಗೊಳಿಸುವಂತೆ ತಿಳಿಸಿದರು.
ಬದನಗುಪ್ಪೆ ಕೆಲ್ಲಂಬಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಕೈಗಾರಿಕಾ ಪ್ರದೇಶ ಕೆಲಸಗಳ ಕುರಿತು ಪರಿಶೀಲಿಸಿದ ಸಚಿವರು ವಿದ್ಯುತ್ ಸೌಲಭ್ಯ ಕಲ್ಪಿಸುವ ಪ್ರಕ್ರಿಯೆಯನ್ನು ವಿಳಂಬ ಮಾಡಬಾರದು. ಕುಡಿಯುವ ನೀರು ಪೂರೈಕೆಗೂ ಅಗತ್ಯವಿರುವ ಕಾಮಗಾರಿ ಕೈಗೊಳ್ಳಲು ಬೇಕಿರುವ ಕ್ರಮಗಳ ಬಗ್ಗೆ ತುರ್ತಾಗಿ ಕಾರ್ಯೋನ್ಮುಖರಾಗಬೇಕು. ಬಾಕಿ ಉಳಿದಿರುವ ರಸ್ತೆ ನಿರ್ಮಾಣಕ್ಕೆ ಉಂಟಾಗಿರುವ ತೊಡಕುಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ವೈದ್ಯಕೀಯ ಕಾಲೇಜು ಡೀನ್ ಡಾ. ಚಂದ್ರಶೇಖರ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇನಾಯತ್ ಉಲ್ಲಾ ಷರೀಫ್, ತಹಸೀಲ್ದಾರ್ ಮಹದೇವು, ಕೆಐಡಿಬಿಯ ಹಿರಿಯ ಅಧಿಕಾರಿಗಳು, ಇತರರು ಸಭೆಯಲ್ಲಿ ಹಾಜರಿದ್ದರು.
ಸಭೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು,  ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಜಿಲ್ಲಾ ಪಂಚಾಯತ್ ಸದಸ್ಯರಾದ ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್, ನಗರಸಭೆಯ ಅಧ್ಯಕ್ಷರಾದ ರೇಣುಕಾ, ಚೂಡಾ ಅಧ್ಯಕ್ಷರಾದ ರಫಿ, ಇತರೆ ಅಧಿಕಾರಿಗಳೊಂದಿಗೆ ಯಡಪುರಕ್ಕೆ ತೆರಳಿ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದರು. ಅಗತ್ಯವಿರುವ ಸೂಚನೆಗಳನ್ನು ನೀಡಿ ಅದರಂತೆ ಕ್ರಮ ವಹಿಸಲು ನಿರ್ದೇಶನ ನೀಡಿದರು.

ಜೂ. 18ರಂದು ನಂಜುಂಡಪ್ಪ ವರದಿ ಶಿಫಾರಸು ಅನುಷ್ಠಾನ ಉನ್ನತ ಅಧಿಕಾರಿ ಸಮಿತಿ ಸಭೆ
ಚಾಮರಾಜನಗರ, ಜೂ. 17 :- ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸುಗಳ ಅನುಷ್ಠಾನ ಉನ್ನತ ಅಧಿಕಾರಿ ಸಮಿತಿಯ ಅಧ್ಯಕ್ಷರಾದ ವೆಂಕಟರಾವ್ ಘÉೂೀರ್ಪಡೆ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯು ಜೂನ್ 18ರಂದು ಬೆಳಿಗ್ಗೆ 10.30 ಗಂಟೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ತೋಟಗಾರಿಕೆ ಬೆಳೆಗಳಿಗೆ ಪ್ರದಾನಮಂತ್ರಿ ಫಸಲು ವಿಮೆ, ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ
ಚಾಮರಾಜನಗರ, ಜೂ. 17 :- ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಚಟುವಟಿಕೆಗಳಿಗೆ ನೆರವಾಗಲು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಬೀಮಾ (ವಿಮಾ) ಯೋಜನೆ ಹಾಗೂ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನುಷ್ಠಾನವಾಗುತ್ತಿದೆ.
ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆಯನ್ನು ತಾಲೂಕಿನಲ್ಲಿ ಬೆಳೆಯುವ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಚಾಮರಾಜನಗರ ತಾಲೂಕಿನ ಕಸಬಾ, ಸಂತೆಮರಹಳ್ಳಿ, ಹರವೆ ಹೋಬಳಿಯಲ್ಲಿ ನೀರಾವರಿ ಆಶ್ರಿತ ಟೊಮೆಟೋ, ಅರಿಶಿನ, ಚಂದಕವಾಡಿ ಹೋಬಳಿಯಲ್ಲಿ ನೀರಾವರಿ ಆಶ್ರಿತ ಟೊಮೆಟೋ, ಬದನೆ ಅರಿಶಿನ, ಹರದನಹಳ್ಳಿ ಹೋಬಳಿಯಲ್ಲಿ  ನೀರಾವರಿ ಆಶ್ರಿತ ಆಲೂಗೆಡ್ಡೆ, ಟೊಮೊಟೋ, ಅರಿಶಿನ ಬೆಳೆಗಳು ವಿಮೆಗೆ ಒಳಪಡಲಿವೆ.
ಗುಂಡ್ಲುಪೇಟೆ ತಾಲೂಕಿನ ಬೇಗೂರು, ಹಂಗಳ, ತೆರಕಣಾಂಬಿ ಹೋಬಳಿಯಲ್ಲಿ ನೀರಾವರಿ ಆಶ್ರಿತ ಈರುಳ್ಳಿ, ಟೊಮೆಟೋ ಹಾಗೂ ಅರಿಶಿನ, ಕಸಬಾ ಹೋಬಳಿಯಲ್ಲಿ ನೀರಾವರಿ ಆಶ್ರಿತ ಟೊಮೆಟೋ, ಈರುಳ್ಳಿ, ಬೀನ್ಸ್, ಬದನೆ, ಅರಿಶಿನ ವಿಮೆ ವ್ಯಾಪ್ತಿಗೆ ಸೇರಲಿವೆ.
ಕೊಳ್ಳೇಗಾಲ ತಾಲೂಕಿನ ರಾಮಾಪುರ, ಪಾಳ್ಯ, ಕಸಬಾ ಹೋಬಳಿಯಲ್ಲಿ ನೀರಾವರಿ ಆಶ್ರಿತ ಈರುಳ್ಳಿ ಹಾಗೂ ಅರಿಶಿನ, ಹನೂರು ಹೋಬಳಿಯಲ್ಲಿ ನೀರಾವರಿ ಆಶ್ರಿತ ಟೊಮೊಟೋ, ಈರುಳ್ಳಿ, ಅರಿಶಿನ, ಲೊಕ್ಕನಹಳ್ಳಿ ಹೋಬಳಿಯಲ್ಲಿ ನೀರಾವರಿ ಆಶ್ರಿತ ಟೊಮೊಟೋ, ಈರುಳ್ಳಿ, ಆಲೂಗೆಡ್ಡೆ, ಅರಿಶಿನ ಬೆಳೆಯು ವಿಮೆ ವ್ಯಾಪ್ತಿಗೆ ಒಳಪಡಲಿವೆ.
ಸೂಚಿಸಿರುವ ಈ ಎಲ್ಲಾ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ವಿಮಾ ಯೋಜನೆಯಡಿ ಪ್ರಯೋಜನ ಪಡೆಯಬಹುದಾಗಿದೆ. 2016ರ ಮುಂಗಾರು ಹಂಗಾಮಿನಲ್ಲಿ ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ ಹೀಗೆ ಪ್ರಕೃತಿ ವಿಕೋಪಗಳಿಂದ ಉಂಟಾಗುವ ನಷ್ಟವನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮೆ ಪರಿಹಾರ ನೀಡಲಾಗುತ್ತದೆ. ವಿಮೆ ಮಾಡಿಸಿರುವ ರೈತರು ಬೆಳೆ ಹಾನಿಯ ವಿವರಗಳನ್ನು ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆ ಕಚೇರಿಗೆ 48 ಗಂಟೆಯೊಳಗೆ ತಿಳಿಸಬೇಕು.
ಶೇ. 75ರಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇ. 25ರಷ್ಟು ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಲಿದೆ. ಯೋಜನೆಯಡಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂಥಹ ಸಂದರ್ಭದಲ್ಲಿ 2 ವಾರದೊಳಗೆ (14 ದಿನಗಳು) ಚಂಡಮಾರುತ, ಅಕಾಲಿಕ ಮಳೆಯಿಂದ ಬೆಳೆ ನಾಶವಾದರೆ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ಪರಿಹಾರವನ್ನು ನೀಡಲಿದೆ.
ಸೂಚಿಸಿರುವ ನಿಗದಿತ ಬೆಳೆಗಳಿಗೆ ಸಂಬಂಧಿಸಿದಂತೆ ಬೆಳೆ ವಿಮೆ ಯೋಜನೆಯಡಿ ಸೇರ್ಪಡೆಯಾಗಲು ಇಚ್ಚಿಸುವ ಸಾಲ ಪಡೆಯದ ರೈತರು ನಿಗದಿತ ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ ಸಂಖ್ಯೆ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳನ್ನು ಹತ್ತಿರದ ಬ್ಯಾಂಕುಗಳಿಗೆ ಸಲ್ಲಿಸಬಹುದು. ಬೆಳೆ ಸಾಲ ಪಡೆದ ರೈತರನ್ನು ಕಡ್ಡಾಯವಾಗಿ ಯೋಜನೆಯಡಿ ಸೇರಿಸಲಾಗುತ್ತದೆ.
ಬೆಳೆ ಸಾಲ ಪಡೆದ ರೈತರು ಅಂದಾಜು ಬೆಳೆ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲಿ ಯೋಜನೆಗೆ ಸೇರ್ಪಡೆಯಾಗಬಹುದು. ಬೆಳೆ ವಿಮೆಗೆ ನೊಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದಲ್ಲಿ ಯೋಜನೆಯಲ್ಲಿ ಭಾಗವಹಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕಿಂತ 30 ದಿವಸಗಳು ಮುಂಚಿತವಾಗಿ ನೊಂದಾಯಿಸಿದ ಆರ್ಥಿಕ ಸಂಸ್ಥೆಗಳಲ್ಲಿ (ಬ್ಯಾಂಕು) ಬಿತ್ತನೆ ದೃಢೀಕರಣ ಪತ್ರ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸಿ ಕೊಳ್ಳಬಹುದಾಗಿದೆ. ಇಂತಹ ಸಂದರ್ಭದಲ್ಲಿ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸವನ್ನು ರೈತರು ಭರಿಸಬೇಕಿದೆ. ಅಲ್ಲದೆ ಹೆಚ್ಚುವರಿ ವಿಮಾ ಕಂತನ್ನು ರೈತರಿಗೆ ಮರು ಪಾವತಿಸಲಾಗುತ್ತದೆ.
ಪ್ರಧಾನಮಂತ್ರಿ ಫಸಲು ವಿಮಾ ಯೋಜನೆಯಡಿ ರೈತರು ವಿಮಾ ಮೊತ್ತ ಪಾವತಿಸಲು ಜುಲೈ 30 ಕಡೆಯ ದಿನವಾಗಿದೆ. ರೈತರು ವಿಮೆ ಮೊತ್ತದ ಶೇ. 5ರಷ್ಟನ್ನು ವಿಮಾ ಕಂತಾಗಿ ಪಾವತಿಸಬೇಕಿದೆ.
ತೋಟಗಾರಿಕೆ ಬೆಳೆಗಳಿಗೆ ಮತ್ತೊಂದು ವಿಮಾ ಯೋಜನೆಯಾದ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಸಹ ಲಭ್ಯವಿದೆ. 2016-17ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ಅಂಗಾಂಶ ಕೃಷಿ ಬಾಳೆ, ಕಂದು ಬಾಳೆ ಹಾಗೂ ತೆಂಗು ಬೆಳೆಗಳಿಗೆ ಯೋಜನೆಯಡಿ ವಿಮೆ ನೆರವು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ, ಇನ್ನಿತರ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿ ಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ.
ನಾಲ್ಕೂ ತಾಲೂಕುಗಳ 16 ಹೋಬಳಿ ವ್ಯಾಪ್ತಿಯ 130 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ವಿಮೆ ಯೋಜನೆಗೆ ತೆಂಗು, ಅಂಗಾಂಶ ಕೃಷಿ ಮತ್ತು ಕಂದು ಬಾಳೆ ಬರಲಿವೆ.
ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ವಿಮಾ ಕಂತು ಪಾವತಿಸಲು ಜೂನ್ 30 ಕಡೆಯ ದಿನವಾಗಿದೆ.  ಬೆಳೆ ಸಾಲ ಪಡೆದ ರೈತರಿಗೆ ಜೂನ್ 30ರೊಳಗೆ ಸಾಲ ಮಂಜೂರಾಗಿದ್ದರೆ ಅಂತಹ ರೈತರನ್ನು ಕಡ್ಡಾಯವಾಗಿ ವಿಮೆ ಯೋಜನೆಗೆ ಒಳಪಡಿಸಲಾಗುತ್ತದೆ. ಬೆಳೆ ಸಾಲ ಪಡೆಯದ ರೈತರು ಬೆಳೆ ವಿಮೆ ಯೋಜನೆಗೆ ಒಳಪಡಲು ಐಚ್ಚಿಕವಾಗಿರುತ್ತದೆ.
ರೈತರು ಶೇ. 5ರಷ್ಟನ್ನು ವಿಮಾ ಕಂತಾಗಿ ಪಾವತಿಸಬೇಕಿದೆ. ಅಂಗಾಂಶ ಕೃಷಿ ಬಾಳೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಕಂತಾಗಿ 10518 ರೂ. ನಿಗದಿಯಾಗಿದೆ. ರೈತರು 4375 ರೂ.ಗಳನ್ನು ಪಾವತಿಸಬೇಕಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಮಾ ಕಂತಿನಲ್ಲಿ ತಲಾ 3071 ರೂ.ಗಳನ್ನು ರಿಯಾಯಿತಿಯಾಗಿ ನೀಡಲಿದೆ. ಕಂದು ಬಾಳೆಗೆ ಪ್ರತಿ ಹೆಕ್ಟೇರ್‍ಗೆ 9015 ರೂ. ವಿಮಾ ಕಂತು ನಿಗದಿಯಾಗಿದೆ. ರೈತರು 3750 ರೂ ಪಾವತಿಸಬೇಕಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಮಾ ಕಂತಿನಲ್ಲಿ ತಲಾ 2633 ರೂ.ಗಳನ್ನು ರಿಯಾಯಿತಿಯಾಗಿ ನೀಡಲಿದೆ. ತೆಂಗು ಬಾಳೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಕಂತಾಗಿ 4010 ರೂ. ನಿಗದಿಯಾಗಿದೆ. ರೈತರು 2500 ರೂ. ಪಾವತಿಸಬೇಕಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಮಾ ಕಂತಿನಲ್ಲಿ ತಲಾ 755 ರೂ.ಗಳನ್ನು ರಿಯಾಯಿತಿಯಾಗಿ ನೀಡಲಿದೆ.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ವಿಮಾ ಸಂಸ್ಥೆಯಾಗಿ ಯೂನಿವರ್ಸಲ್ ಸೋಂಪೋ ಇನ್ಷೂರೆನ್ಸ್ ಕಂಪನಿ ಲಿಮಿಟೆಡ್ ನಿಯೋಜಿತವಾಗಿದೆ.
ತೋಟಗಾರಿಕೆ ಬೆಳೆಗಳಿಗೆ ನೆರವು ನೀಡುವ ಸಲುವಾಗಿ ಅನುಷ್ಠಾನವಾಗಿರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ ಹಾಗೂ ಮರುವಿನ್ಯಾಸ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ತೋಟಗಾರಿಕೆ, ಕೃಷಿ ಇಲಾಖೆ, ಕಂದಾಯ ಇಲಾಖೆ ಮತ್ತು ಆಯ್ಕೆಯಾಗಿರುವ ವಿಮಾ ಸಂಸ್ಥೆ ಮತ್ತು ಸ್ಥಳೀಯ ಬ್ಯಾಂಕಿನ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರಾದ ನಾಗರಾಜು ತಿಳಿಸಿದ್ದಾರೆ.


ತೂಗುಕತ್ತಿಯ ಮೇಲೆ ನಡೆದೇ ವರ್ಷ ಪೂರೈಸಿದ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್.! 15-06-2016




ವರ್ಷದಲ್ಲಿ ಮೂರು ಬಾರಿ ವರ್ಗಾವಣೆ ಕಸರತ್ತು ನಡೆಸಿದ ಸರ್ಕಾರ, ರಜೆಯನ್ನೆ ಹಾಕದೇ ವರ್ಷ ಪೂರೈಸಿದ ಎಸ್ಪಿ ಕುಲದೀಪ್ ಕುಮಾರ್ ಜೈನ್

    ವರದಿ ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ದಕ್ಷ ಅದಿಕಾರಿಗಳನ್ನು ಕಂಡರೆ ಸಾಕು ವರ್ಗಾವಣೆ ಮಾಡಿ ಸುಮ್ಮನೆ ಆಗಿ ಬಇಡುವುದರಲ್ಲಿ ಎತ್ತಿದ ಕೈ ಆದರೆ ಚಾಮರಾಜನಗರಕ್ಕೆ ಆಗಮಿಸಿ ಕಾರ್ಯನಿರ್ವಹಿಸುತ್ತಿರುವ ಹಾಲಿ ಪೊಲೀಸ್ ವರೀಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಅವರನ್ನು ಮೂರು ಬಾರಿ ವರ್ಗಾವಣೆ ಮಾಡಲು ಯತ್ನ ನಡೆಸಿರುವ ಅಂಶ ತಿಳಿದುಬಂದಿದೆ




.
ಚಾಮರಾಜನಗರಕ್ಕೆ ಬಂದು ಅದಿಕಾರ ಸ್ವೀಕಾರ ಮಾಡಿದಾಗಿನಿಂದ ಇಂದಿನ ತನಕ ಪೊಲೀಸ್ ವರೀಷ್ಟಾಧಿಕಾರಿಗಳಿಗೆ ಅಕ್ಟೋಬರ್, ಡಿಸೆಂಬರ್ ಹಾಗೂ ಮಾರ್ಚ್ ಮಾಹೆ ಸೇರಿದಂತೆ ಮೂರು ಬಾರಿ ವರ್ಗಾವಣೆ ಮಾಡುವ ಮೂಲಕ ಕಸರತ್ತು ಮಾಡಿದ್ದ ಅಂಶ ತಿಳಿದುಬಂದಿದೆ.


ಸರ್ಕಾರದ ವರ್ಗಾವಣೆಯನ್ನು ಲೆಕ್ಕಕ್ಕೆ ಪರಿಗಣಿಸದೇ ಚಾಮರಾಜನಗರಕ್ಕೆ ಬಂದು ವರ್ಷವೇ ಆಗದೇ ಇದ್ದುದ್ದರಿಂದ ಸಿ.ಎ.ಟಿ ( ಸೆಂಟ್ರಲ್ ಅಡ್ಮಿನಿಷ್ಟ್ರೇಷನ್ ಟ್ರಿಬ್ಯುನಲ್) ಗೆ ಹೋಗಿ ತಡೆ ತಂದು ಕರ್ತವ್ಯ ನಿರ್ವಹಿಸಿದ್ದಾರೆ ಎಂಬ ಅಂಶ ಬೆಳಕಿಗೂ ಬಂದಿದೆ.




ಪೊಲೀಸ್ ವರೀಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ವಾರದಲ್ಲಿ ಒಂದು ದಿನ ಕಡ್ಡಾಯ ರಜೆ ಬೇಕೆ ಬೇಕು ಎಂಬುದು ಸೇರಿದಂತೆ ವಿವಿದ ಬೇಡಿಕೆಗಳನ್ನು ಇಟ್ಟುಕೊಂಡು ನಡೆಸುತ್ತಿದ್ದ ಪೊಲೀಸರಿಗೆ ಚಾಮರಾಜನಗರ ಪೊಲೀಸ್ ವರೀಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಅವರು ವರ್ಷದಲ್ಲಿ ಒಂದು ರಜೆಯನ್ನೂ ಹಾಕದೇ ಕರ್ತವ್ಯ ನಿರ್ವಹಿಸಿದ್ದಾರೆ
ರಾಜಸ್ಥಾನದ ಮೂಲ ನಿವಾಸಿಗಳಾಗಿರುವ ರಮೇಶ್ ಕುಮಾರ್ ಜೈನ್ ಅವರ ಸುಪುತ್ರರಾಗಿ ಚಾಮರಾಜನಗರದದ ಹಾಲಿ ಪೊಲೀಸ್ ವರೀಷ್ಟಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಲದೀಪ್ ಕುಮಾರ್ ಜೈನ್ ಅವರೇ ಪಬ್ಲಿಕ್ ರಿಯಲ್ ಹೀರೋ ಆಗಿದ್ದಾರೆ .

ವ್ಯಕ್ತಿತ್ವ ಪರಿಚಯ:
ಕುಲದೀಪ್ ಕುಮಾರ್ ಆರ್ ಜೈನ್ ಅವರು ಇವರು 1984 ಜೂನ್ 29 ರಂದು ಚೆನ್ನೈ ಅಲ್ಲಿ ಜನಿಸಿ ಅಣ್ಣಾ ಇನ್ಸ್‍ಟ್ಯೂಟ್ ಅಲ್ಲಿ ಎಮ್.ಸಿ.ಎ ವ್ಯಾಸಂಗ ಮುಗಿಸಿದರು.2011 ಆಗಸ್ಟ್ 29 ರಂದು ತಮ್ಮ ಪೊಲೀಸ್ ಇಲಾಖಾ ವೃತ್ತಿಗೆ ಸೇರಿ ನಂತರ ಮಂಗಳೂರಿನಲ್ಲಿ ತಮ್ಮ ಪ್ರೋಬೆಷನರಿ ಮುಗಿಸಿದರು.
ರಾಮನಗರ ಜಿಲ್ಲೆಯಲ್ಲಿ ಚನ್ನಪಟ್ಟಣದಲ್ಲಿ  ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಕೆ,ಎಸ್.ಆರ್.ಪಿ ಫಸ್ಟ್ ಬೆಕ್ಟ್ ಕಮ್ಯಾಡೆಂಟ್ ಆಗಿ ಕಾರ್ಯನಿರ್ವಹಿಸಿ ನಂತರ 2015 ಜೂನ್ 15  ರಂದು ಬಹುಶಃ ಸುಮಾರು 10.42 ರ ಸಮಯದಲ್ಲಿ ನಿರ್ಗಮಿತ ವರೀಷ್ಠಾಧಿಕಾರಿ ರಂಗಸ್ವಾಮಿ ನಾಯಕ್ ಅವರಿಂದ ಅದಿಕಾರ ಸ್ವೀಕಾರ ಮಾಡಿದರು.
ಆಡಳಿತದಲ್ಲಿ ಸುದಾರಣೆ: ಪೊಲೀಸ್ ವರೀಷ್ಟಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಲದೀಪ್ ಕುಮಾರ್ ಆರ್ ಜೈನ್ ಅವರು ಮೊದಲು ಬಂದಿದ್ದೆ ಎಲ್ಲಾ ತಾಲ್ಲೂಕಿನಲ್ಲಿ ಹೆಚ್ಚು ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿರುವ ಆರಕ್ಷಕ ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವ ಮೂಲಕ ಸುದಾರಣೆ ತರಲಾರಂಬಿಸಿದರು.
ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುವ ಎಲಾ ಇನ್ಸ್‍ಪೆಕ್ಟರ್ , ಸಬ್ ಇನ್ಸ್‍ಪೆಕ್ಟರ್‍ಗಳು ಕಡ್ಡಾಯವಾಗಿ ವಾಟ್ಸಾಫ್ ಬಳಕೆ ಮಾಡಿ ಅಲ್ಲಿಗೆ ಬಂದ ದೂರುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಸೂಚಿಸಿದರು ಅಲ್ಲಿಂದ ಪ್ರಾರಂಭವಾಯಿತು ನೋಡಿ ಯಾವುದೆ ಸಾರ್ವಜನಿಕರು ಅಕ್ರಮವಾಗಿ ಮರಳು, ಗಣಿ ಸಾಗಾಣಿಕೆ ಮಾಡಿದರೆ ಅದರ ಛಾಯಚಿತ್ರ ಸಂಬಂದಿಸಿದ ಇನ್ಸ್‍ಪೆಕ್ಟರ್‍ಗಳಿಗೆ ಕಳುಹಿಸುವ ಮುನ್ನ ವರೀಷ್ಟಾಧಿಕಾರಿಗಳಿಗೆ ಕಳುಹಿಸಿ ಸುಮ್ಮನಾಗುತ್ತಿದ್ದರು ನಂತರ ಸಂಬಂದಿಸಿದ ಅದಿಕಾರಿಗಳು ಬೇಟೆ ಆಡಲಾರಂಬಿಸಿದರು.
ವರ್ಗಾವಣೆಗಷ್ಟೇ ಅಲ್ಲ ಹತ್ಯೆಗೂ ಸಂಚು: ಪೊಲೀಸ್ ವರೀಷ್ಟಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಲದೀಪ್ ಕುಮಾರ್ ಆರ್ ಜೈನ್ ಅವರನ್ನು ವರ್ಗಾವಣೆ ಮಾಡಲು ಸಣ್ಣ ಪುಟ್ಟ ಲೋಪದೋಷಗಳನ್ನು ಮುಂದಿಟ್ಟುಕೊಂಡು ಹಾಗೂ ಕೋರ್ಟ್ ಜಾರಿ ತಂದ ಮರಳು ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾದ ಇವರನ್ನು ವರ್ಗಾವಣೆ ಮಾಡಲೇಬೇಕೆಂದು ಪ್ರತಿಭಟನೆ ನೆಪದಲ್ಲಿ ಹೋರಾಟ ಪ್ರಾರಂಬಿಸಿದರು.
ಮರೆಯಲಾಗದ ಆ ದಿನ : 2015 ನವೆಂಬರ್ 1 ಬಹುಶಃ ಕರಿಕಲ್ಲು ಮಾಫಿಯಾದವರಿಗೆ ಬಲಿಯಾಗಬೇಕಾಗಿದ್ದ ಪೊಲೀಸ್ ವರೀಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಅವರು ತಂದೆ ತಾಯಿ, ದೇವರ ಆಶೀರ್ವಾದದಿಂದ ಹೇಗೂ ಪಾರಾದರು, ಆದರೆ ಘಟನಾ ಸ್ಥಳಕ್ಕೆ ಬಂದ ಜಿಲ್ಲಾದಿಕಾರಿ ಎ.ಎಮ್.ಕುಂಜಪ್ಪ ಅವರಿಗೆ ಮಾತ್ರ ಕಲ್ಲಿನ ಹೊಡೆತದಿಂದ ಪಾರಾಗಲು ಸಾದ್ಯವಾಗಲೇ ಇಲ್ಲ.
ಅಂದು ಎಚ್ಚೆತ್ತ ಪೊಲೀಸ್ ವರೀಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಮತ್ತಷ್ಟು ಜಾಗೃತರಾಗಲು ಅವಕಾಶವಾಯಿತು. ಘಟನೆಗೆ ಸಂಬಂದಿಸಿದಂತೆ 50 ಕ್ಕೂ ಹೆಚ್ಚು ಜನರನ್ನು ಬಂದಿಸಿ ನ್ಯಾಯಾಂಗದ ವಶಕ್ಕೆ ಕೊಟ್ಟರು.
ಸದ್ದಿಲ್ಲದೆ ಕೋಮು ಘರ್ಷಣೆ, ಪೊಲೀಸ್ ಪ್ರತಿಭಟನೆಗೆ ತಡೆ: ಹೊಂಗನೂರು ಗ್ರಾಮದಲ್ಲಿ ಕಿಡಿಗೇಡಿಗಳು ಮಹಾನ್ ನಾಯಕರ ಪ್ಲೆಕ್ಸ್‍ಗೆ ಅಪಮಾನ ಮಾಡಿ ಎರಡು ಕೋಮುಗಳು ಘರ್ಷಣೆಯಿಂದ ಊರಿಗೆ ಊರೇ ಕತ್ತಿ ಉರಿಯಲಾರಂಬಿಸಿತು. ಅದನ್ನು ಕೇವಲ ಒಂದು ಗ್ರಾಮಕ್ಕಷ್ಟೇ ಮೀಸಲಿರಿಸಿ ಎಲ್ಲೂ ಪ್ರಚೋದನಕಾರಿಯಾಗಿ ನಡೆಯದಂತೆ ನೋಡಿಕೊಳ್ಳುವುದರಲ್ಲಿ ತಪ್ಪಿತಸ್ಥರನ್ನು ಹುಡುಕಿ ನ್ಯಾಯಾಂಗದ ಬಂದನಕ್ಕೆ ಕೊಟ್ಟರು.
ಬಹುಶಃ ಇಲ್ಲಿ ಇವರ ಸ್ಥಳದಲ್ಲಿ ಬೇರೆ ಯಾವುದೇ ಜಾತಿಯ ವರೀಷ್ಠಾಧಿಕಾರಿಗಳಿದ್ದರೆ ನೆನಪಿಸಕೊಳ್ಳಲು ಅಸಾದ್ಯ ( ಉದಾ- ವರೀಷ್ಟಾದಿಕಾರಿಗಳು ಸೂಚಿತ ವರ್ಗಕ್ಕೆ ಸೇರಿದವರಾಗಿದ್ದರೆ ಅವರ ಪರ ತೀರ್ಪು, ಅನುಸೂಚಿತ ವರ್ಗಕ್ಕೆ ಸೇರಿದವರಾಗಿದ್ದರೆ ಅನುಸೂಚಿತ ವರ್ಗದವÀರ ಪರ ತೀರ್ಪು ಎಂದೆ ಜನರು ಭಾವಿಸುತ್ತಿದ್ದರೇನೋ ) ನೀವೇ ಊಹಿಸಿಕೊಳ್ಳಿ.

ಪೊಲೀಸ್ ಪ್ರತಿಭಟನೆಗೆ ತಡೆ: ಇವರ ರಾಜ್ಯಾದಾದ್ಯಂತ ಜೂನ್ 4 ರಂದು ಪೊಲೀಸ್ ಪ್ರತಿಭಟನೆಗೆ ಕರೆ ನೀಡಿದ್ದರೂ ಕೆಲವೆಡೆ ಮುನ್ಸೂಚನೆ ಕಂಡರೂ ಚಾಮರಾಜನಗರದಲ್ಲಿ ಮಾತ್ರ ಕೆಲವರು ಸಾಮೂಹಿಕ ರಜೆ ನೀಡಿದ್ದರು. ಆದರೆ ಅವರನ್ನು ಮನವೊಲಿಸಿ ವಾಪಸ್ ಪಡೆಯುವಂತೆ ಕೇಳಿಕೊಂಡಿದ್ದರು. ಅಷ್ಟೇ ಅಲ್ಲ ಕೆಲವು ಬೇಡಿಕೆಗಳು ರಾಜ್ಯಮಟ್ಟದ್ದಾಗಿದ್ದು ಸರ್ಕಾರ ನಿಮ್ಮ ಭರವಸೆಗಳನ್ನು ಈಡೇರಿಸುತ್ತದೆ ನಮ್ಮ ಜಿಲ್ಲೆಯ ಸಮಸ್ಯೆಗಳನ್ನು ನಾನೇ ಖುದ್ದು ಈಡೇರಿಸುತ್ತೇನೆ ಎಂಬ ಆಶ್ವಾಸನೆ ನೀಡಿದ ಮೇರೆಗೆ ಇವರ ದಕ್ಷತೆ ಹಾಗೂ ಗೌರವಕ್ಕೆ ಮನವೊಲಿದು ಪ್ರತಿಭಟನೆ ಕೈಬಿಡಿಸಿದರು.

ವರ್ಷದ ಅವದಿಯಲ್ಲಿ ನಾವು ( ಚಾಮರಾಜನಗರ ಟುಡೇ ಹಾಗೂ ಜಿನ್ಯೂಸ್ 5. ಮುಖ್ಯಸ್ಥ ರಾಮಸಮುದ್ರ ಎಸ್.ವೀರಭದ್ರಸ್ವಾಮಿ)  ಕೇಳಿದ ಪ್ರಶ್ನೆಗೆ  ಪೊಲೀಸ್ ವರೀಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಅವರು ನೀಡಿದ ಉತ್ತರ

ಪ್ರ: ಅಕ್ರಮ ಕರಿಕಲ್ಲು ತಡೆಯುವಲ್ಲಿ ಇಲಾಖೆ ಯಶಸ್ವಿಯಾಗಿದಿಯೇ.?
ಉ: ಬಹುಶಃ ನೂರಕ್ಕೆ ನೂರಷ್ಟು ಇಲ್ಲದಿದ್ದರೂ ತೃಪ್ತಿದಾಯಕವಾಗಿಲ್ಲ.
ಪ್ರ: ಕಾನೂನು ಸುವ್ಯವಸ್ಥೆ ಬಗ್ಗೆ ನಿಮ್ಮ ಅನಿಸಿಕೆ.?
ಉ: ಜಿಲ್ಲೆಯಲ್ಲಿ ಜನರು ಬಹುತೇಕರು ಮುಗ್ದರು, ಸ್ವಲ್ಪ ಕಾನೂನು ನಿಯಮಗಳು ಮೊದಲಿಗಿಂತ ಅಭಿವೃದ್ದಿಯಾಗುತ್ತಿದೆ.
ಪ್ರ: ಹೊಂಗನೂರು ಗಲಾಟೆ, ಜಿಲ್ಲಾದಿಕಾರಿ ಮೇಲಿನ ಹಲ್ಲೆ ಪ್ರಕರಣದ ವಾಸ್ಥವತೆ ಬಗ್ಗೆ ನಿಮ್ಮ ಅನಿಸಿಕೆ?
ಉ: ಹೊಂಗನೂರು ಗ್ರಾಮದಲ್ಲಿ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಘಟನೆ ಆಗಬಾರದಾಗಿತ್ತು. ಪ್ರಕರಣದಲ್ಲಿ ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಕೊಡಲಾಗಿದೆ. ಜಿಲ್ಲಾದಿಕಾರಿ ಗಲಾಟೆ ಪ್ರಕರಣದಲ್ಲೂ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ, ಕರ್ತವ್ಯಕ್ಕೆ ಅಡ್ಡಿ ಉಂಡು ಮಾಡಿರುವ ಸಂಬಂದ ಐದಾರು ಪ್ರಕರಣದಲ್ಲಿ 60 ಕ್ಕೂ ಹೆಚಗಚು ಜನರು ನ್ಯಾಯಾಂಗ ಬಂದನಕ್ಕೆ ನೀಡಲಾಗಿದೆ.
ಪ್ರ: ವಿದ್ಯಾವಂತರಿಗೆ ಪೊಲೀಸ್ ಸ್ನೇಹಿಗಿಂತ ಜನಸ್ನೇಹಿ ಆದರೆ ಹೊರತು ಬೇರೆಯವರಿಗಲ್ಲ ಎಂಬುದರ ಬಗ್ಗೆ ನಿಮ್ಮ ಅನಿಸಿಕೆ?
ಉ: ವಿದ್ಯಾವಂತರು ಕೆಲವೆಡೆ ವಾಟ್ಸಾಪ್ ಮೂಲಕ ದೂರು ದಾಖಲಸಿದ್ದಾರೆ ಅದರ ನಗ್ಗೆ ಕ್ರಮವನ್ನು ತೆಗೆದುಕೊಂಡಿದ್ದೇವೆ ಹಾಗಂತ ಕೇವಲ ಅವಿದ್ಯಾವಂತಿಗೆ ನ್ಯಾಯ ಸಿಕ್ಕಿಲ್ಲ ಎನ್ನುವುದು ಸರಿಯಲ್ಲ. ನಮ್ಮ ಕಚೇರಿ ಯಾವಾಗಲೂ ತೆರೆದೇ ಇರುತ್ತದೆ ಮೊದಲು ಠಾಣೆಗಳಿಗೆ ಹೋಗುವ ಬದಲು ನನ್ನ ಬಳಿ ಬರುತ್ತಿದ್ದಾರೆ ಅವರು ನನ್ನ ಮೇಲಿಟ್ಟಿರುವ ನಂಬಿಕೆ ಇದಕ್ಕೆ ಸಾಕ್ಷಿ .
ಪ್ರ: ತಮ್ಮ ಅವದಿಯಲ್ಲಿ ಅಪರಾದ ಸಂಖ್ಯೆ ಹೆಚ್ಚಳವಾಗಿದಿಯೇ ಇಳಿಮುಖವಾಗಿದಿಯೇ, ಕೆಲವು ಪೊಲೀಸ್ ಅದಿಕಾರಿಗಳ ಮೇಲೆ ಕ್ರಮಜರುಗಿಸಿದರು ಬಗ್ಗೆ ನಿಮ್ಮ ಅನಿಸಿಕೆ?
ಉ: ಅಪರಾದಗಳು ಹೇಳಿ ಕೇಳಿ ಬರುವಂತಹದ್ದಲ್ಲ, ಕೆಲವೆಡೆ ಸುಳ್ಳು ಪ್ರಕರಣಗಳು ದಾಖಲಾಗುತ್ತದೆ ಪರಿಶೀಲಸಿ ಕ್ರಮ ಕೈಗೊಳ್ಳಬೇಕು ಎಂದರು. ಕಾನೂನು ಎಲ್ಲರಿಗೂ ಒಂದೆ ನಮ್ಮ ಇಲಾಖೆಯಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬಾರದು ಎಂದೆನಿಲ್ಲವಲ್ಲ ಎಂದರು.
ಒಟ್ಟಾರೆ ಒಂದು ವರ್ಷದ ಅವದಿಯಲ್ಲಿ ರಜೆಯನ್ನೆ ಹಾಕದೇ ತೂಗುಕತ್ತಿಯ ಮೇಲೆ ನಡೆದು ಅವರದ್ದೇ ಇಲಾಖೆಯಲ್ಲಿರುವ ಓರ್ವ ಸಬ್ ಇನ್ಸ್‍ಪೆಕ್ಟರ್ , ಐದಾರು ಪೇದೆಗಳನ್ನು ಅಮಾನತು, ಹಾಗೂ ಓರ್ವ ಪೇದೆಯನ್ನು ಸಂಪೂರ್ಣ ವಜಾ ಮಾಡುವ ಮೂಲಕ ಕಾರ್ಯ ದಕ್ಷತೆ ತೋರಿದ್ದಾರೆ
***************************************************************************













Thursday, 16 June 2016

14-06-2016 ರಿಂದ 16-06-2016 ಚಾಮರಾಜನಗರ [ಪ್ರಮುಖ ಸುದ್ದಿಗಳು (ವಾರ್ತಾಖೆ ಇಲಾಖೆ)








ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ವೈದ್ಯಕೀಯ ಕಾಲೇಜು ತರಗತಿ ಆರಂಭಕ್ಕೆ ಅನುಮತಿ
ಚಾಮರಾಜನಗರ, ಜೂ ನಗರದದ ವೈದ್ಯಕೀಯ ಕಾಲೇಜನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ 150 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಮೂಲಕ ಆರಂಭಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅನುಮತಿ ನೀಡಿದೆ. ಹೀಗಾಗಿ ಬಹುನಿರೀಕ್ಷಿತ ವೈದ್ಯಕೀಯ ಕಾಲೇಜು ಆರಂಭದ ಕನಸು ನನಸಾಗಿದೆ.
ಹೊರವಲಯ ಯಡಪುರದಲ್ಲಿ 42 ಎಕರೆ ಪ್ರದೇಶದಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ಕಾಲೇಜು ಕಟ್ಟಡ, ವಿದ್ಯಾರ್ಥಿ, ವಿದ್ಯಾರ್ಥಿನಿಯರ ನಿಲಯ, ಭೋದಕ ವೈದ್ಯರು, ಶೂಶ್ರುಷಕರು, ಡಿ ಗ್ರೂಪ್ ನೌಕರರ ವಸತಿ ಗೃಹಗಳು ನಿರ್ಮಾಣಗೊಂಡಿದೆ. 2014ರ ಸೆಪ್ಟೆಂಬರ್‍ನಲ್ಲಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಇದುವರೆಗೆ ಭಾರತೀಯ ವೈದ್ಯಕೀಯ ಮಂಡಳಿ(ಎಂ.ಸಿ.ಎ) ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಅಂತಿಮವಾಗಿ ಕಾಲೇಜಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಮನಗಂಡು 2016-17ನೇ ಸಾಲಿನಲ್ಲಿ ಕಾಲೇಜು ಪ್ರವೇಶ ಆರಂಭಕ್ಕೆ ಶಿಫಾರಸು ಮಾಡಿತು. ಈ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೈದ್ಯಕೀಯ ಕಾಲೇಜು ಆರಂಭಿಸಲು ಅಧಿಕೃತವಾಗಿ ಅನುಮತಿ ನೀಡಿದೆ. ಅನುಮತಿ ಪತ್ರವನ್ನು ಜೂನ್ 13ರಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ವೈದ್ಯಕೀಯ ಶಿಕ್ಷಣ)ಗೆ ಕಳುಹಿಸಿದೆ.
ಒಟ್ಟು 150 ವಿದ್ಯಾರ್ಥಿಗಳಿಗೆ 2016-17ನೇ ಸಾಲಿಗೆ ಪ್ರವೇಶ ನೀಡಲು ಅನುಮತಿಸಿರುವ ಇಲಾಖೆಯು ಶೇ. 15ರಷ್ಟು ವೈದ್ಯಕೀಯ ಸೀಟುಗಳನ್ನು ಆಲ್ ಇಂಡಿಯಾ ಕೋಟಾಗೆ ಮೀಸಲಿಡುವಂತೆ ಸೂಚಿಸಿದೆ.
ಭಾರತೀಯ ವೈದ್ಯಕೀಯ ಮಂಡಳಿ(ಎಂ.ಸಿ.ಎ) ನಿಯಮಾವಳಿ ಪ್ರಕಾರ ವೈದ್ಯಕೀಯ ಕಾಲೇಜು ಅಧ್ಯಯನಕ್ಕೆ ಕನಿಷ್ಟ 300 ಹಾಸಿಗೆ ಹಾಗೂ ಅದಕ್ಕೆ ಪೂರಕವಾಗಿರುವ ಚಿಕಿತ್ಸೆ ಸೌಲಭ್ಯಗಳನ್ನೊಳಗೊಂಡ ಆಸ್ಪತ್ರೆ ಅಗತ್ಯವಿತ್ತು. ಆದರೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭದಲ್ಲಿ 150 ಹಾಸಿಗೆ ಹಾಗೂ ಅದಕ್ಕೆ ಅಗತ್ಯವಿರುವ ಸೌಲಭ್ಯಗಳು ಮಾತ್ರ ಲಭ್ಯವಿದ್ದವು. ಇದರಿಂದ ವೈದ್ಯಕೀಯ ಕಾಲೇಜು ಆರಂಭsವಾಗಲು ಸಾಧ್ಯವಾಗುವುದಿಲ್ಲವೆಂಬ ಸಂಗತಿಯನ್ನು ಮನಗಂಡು ಜಿಲ್ಲಾ ಆಸ್ಪತ್ರೆಯನ್ನು ಪ್ರಸ್ತುತ 330 ಹಾಸಿಗೆ ಸಾಮಥ್ರ್ಯವುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಹೆಚ್ಚಳಕ್ಕೆ ಅನುಗುಣವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ 5 ಆಪರೇಷನ್ ಥಿಯೇಟರ್, ಮೂರು ಎಕ್ಷರೇ ಮಿಷನ್, 2 ಅಲ್ಟ್ರಾ ಸ್ಕ್ಯಾನಿಂಗ್ ಮಿಷನ್, ಸೆಂಟರ್ ಅಪರೇಟಡ್ ಆಕ್ಷಿಜನ್ ಸಿಸ್ಟಮ್, ಎಲೆಕ್ಟ್ರಾನಿಕ್ ಲಾಂಡ್ರಿ ಸೇರಿದಂತೆ ಅವಶ್ಯಕ ಸೌಕರ್ಯಗಳನ್ನು ಕಲ್ಪಿಸಲಾಯಿತು.
ವೈದ್ಯಕೀಯ ಕಾಲೇಜಿನಲ್ಲಿ ಒಟ್ಟು 8 ವಿಭಾಗಗಳು ಅಂದರೆ ಅನಾಟಮಿ, ಫಿಸಿಯೋಲಜಿ, ಬಯೋಕೆಮಿಸ್ಟ್ರಿ, ಕಮ್ಯೂನಿಟಿ ಮೆಡಿಸನ್, ಫಾರ್ಮೋಕಾಲಜಿ, ಫೆಥಾಲಜಿ, ಮೈಕ್ರೋಬಯಾಲಜಿ, ಪೊರೆನ್ಸಿಕ್ ಮೆಡಿಸನ್ ಅಧ್ಯಯನಕ್ಕೆ ಸಿದ್ಧವಾಗಿವೆ. ಒಟ್ಟು 24 ಪ್ರಯೋಗಾಲಯಗಳಿಗೂ ವ್ಯವಸ್ಥೆ ಮಾಡಲಾಗಿದೆ.
ಕಾಲೇಜು ಆರಂಭಕ್ಕೆ ಅಗತ್ಯವಿರುವ ಭೋದಕ ಹಾಗೂ ಭೋದಕೇತರ ಸಿಬ್ಬಂದಿ ಈಗಾಗಲೇ ನೇಮಕವಾಗಿದ್ದಾರೆ. ಒಟ್ಟು 105 ಭೋದಕ ವೈದ್ಯರು, 175 ಶುಶ್ರೂಷಕ ಸಿಬ್ಬಂದಿ, 100 ಪ್ಯಾರ ಮೆಡಿಕಲ್, ಇತರೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಸುಮಾರು 5 ಕೋಟಿ ರೂ. ವೆಚ್ಚದ ಪೀಠೋಪಕರಣ ಹಾಗೂ ಪಾಠೋಪಕರಣ ಸಾಮಗ್ರಿ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ.
ತಲಾ 165 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಹಾಸ್ಟಲ್ ಸೌಲಭ್ಯ ಕಲ್ಪಿಸಲು ಕಟ್ಟಡ ಸಿದ್ಧವಿದೆ. ಮುಂಬರುವ ದಿನಗಳಿಗೆ ಅನುಗುಣವಾಗಿ 650 ವಿದ್ಯಾರ್ಥಿಗಳು ಉಳಿದು ವ್ಯಾಸಂಗ ಮಾಡಲು ಅನುಕೂಲವಿರುವ ಸೌಕರ್ಯಗಳನ್ನು ಒದಗಿಸಲು ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಒಟ್ಟಾರೆ ಈ ಶೈಕ್ಷಣಿಕ ಸಾಲಿನಲ್ಲಿಯೆ ಕಾಲೇಜು ಆರಂಭಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಯನ್ನು ಪೂರಕವಾಗಿ ಕೈಗೊಳ್ಳಲಾಗಿದೆ.
ಎಂ.ಸಿ.ಎ ಮಾರ್ಗಸೂಚಿಯನ್ವಯ ಮುಂಬರುವ ವರ್ಷಗಳಲ್ಲಿ ಕಾಲೇಜು ವಿದ್ಯಾರ್ಥಿಗಳ ಅಧ್ಯಯನಕ್ಕೆ 750 ಹಾಸಿಗೆ ಹಾಗೂ ಅವಶ್ಯಕ ಸೌಕರ್ಯಗಳನ್ನೊಳಗೊಂಡ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕಿದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಕಾಲೇಜು ಕಟ್ಟಡ ಕೆಲಸ ಪೂರ್ಣಗೊಂಡಿದ್ದು ಸುಣ್ಣ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಒಟ್ಟಾರೆ ಈ ಶೈಕ್ಷಣಿಕ ಸಾಲಿನಲ್ಲಿಯೆ ಕಾಲೇಜು ಆರಂಭಕ್ಕೆ ಬೇಕಿರುವ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ವೈದ್ಯಕೀಯ ಕಾಲೇಜು ಡೀನ್ ಡಾ. ಚಂದ್ರಶೇಖರ್ ಹೇಳಿದ್ದಾರೆ.
ನಗರದಲ್ಲಿ ವೈದ್ಯಕೀಯ ಕಾಲೇಜು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಆರಂಭಿಸಲು ಅನುಮತಿ ಸಿಕ್ಕಿರುವುದು ಸಂತಸದ ವಿಷಯವಾಗಿದೆ. 150 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಕೂಲ ಕಲ್ಪಿಸಿದ್ದು, ಕಾಲೇಜು ಕಾರ್ಯಾರಂಭವಾಗುತ್ತಿರುವುದು ಜಿಲ್ಲೆಯ ಅಭಿವೃದ್ಧಿಯಲ್ಲಿ ಮೈಲುಗಲ್ಲಾಗಿದೆ ಎಂದು ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಹರ್ಷ ವ್ಯಕ್ತಪಡಿಸಿದ್ದಾರೆ.


ಅತ್ಯಾಚಾರ ಎಸಗಿದ ಅಪರಾಧಿಗೆ ಕಠಿಣ ಶಿಕ್ಷೆ
ಚಾಮರಾಜನಗರ, ಜೂ. 14 - ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಗರ್ಭಿಣಿಯಾಗಲು ಕಾರಣನಾದ ಅಪರಾಧಿಗೆ ಪ್ರದಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಹಾಗೂ 3000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಚಾಟೀಪುರ ಗ್ರಾಮದ ಅಬ್ದುಲ್ ರಿಯಾಜ್ ಅಲಿಯಾಸ್ ರಿಯಾಜ್ ಪಾಶಾ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ನೊಂದ ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿದ್ದಲ್ಲದೆ ಮದುವೆಯಾಗುತ್ತೇನೆಂದು ನಂಬಿಸಿ ಅತ್ಯಾಚಾರ ಮಾಡಿದ್ದು ಆಕೆ ಗರ್ಭಿಣಿಯಾಗಲು ಕಾರಣವಾಗಿದ್ದನು. ಈ ವಿಚಾರ ಯಾರಿಗೂ ಹೇಳಬಾರದು. ಈ ವಿಷಯ ಬಾಯಿಬಿಟ್ಟಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದು ಸದರಿ ಪ್ರಕರಣವು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಪ್ರಕರಣದ ಅಪರಾಧಿಗೆ ಪೋಕ್ಸೋ ಕಾಯಿದೆಯಡಿ 10 ವರ್ಷ ಕಠಿಣ ಶಿಕ್ಷೆ ಹಾಗೂ 3000 ರೂ. ದಂಡವನ್ನು ವಿಧಿಸಿ ಕಳೆದ ಜೂನ್ 10ರಂದು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಸ್. ನಾಗರಾಜು ಕಾಮಗೆರೆ ವಾದ ಮಂಡಿಸಿದ್ದರೆಂದು ಪ್ರಕಟಣೆ ತಿಳಿಸಿದೆ.
ಕಟ್ಟಡ ಕಲ್ಲು ಸಾಗಣೆ ಲಾರಿ ವಶ : ಗಣಿ ಭೂವಿಜ್ಞಾನ ಇಲಾಖೆ ಸ್ಪಷ್ಟನೆ
ಚಾಮರಾಜನಗರ, ಜೂ. 14:- ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ, ಕೂತನೂರು, ಬೆಳಚಲವಾಡಿ ಇನ್ನಿತರ ಗ್ರಾಮಗಳಲ್ಲಿ ಕಟ್ಟಡ ಕಲ್ಲಿನ ಗಣಿಗಾರಿಕಾ ಪ್ರದೇಶಗಳಲ್ಲಿ ಜೂನ್ 13ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಕೃಷ್ಣವೇಣಿ ಅವರು ತಪಾಸಣೆ ಮಾಡುವ ಸಂದರ್ಭದಲ್ಲಿ ರವಿಕುಮಾರ್ ಎಂಬುವವರಿಗೆ ಸೇರಿದ 2 ಲಾರಿಗಳಲ್ಲಿ (ಕೆಎಲ್ 41 ಎ 2509 ಮತ್ತು ಕೆಎ 3 ಸಿ 5359) ಪರವಾನಗಿ ಇಲ್ಲದೆ ಕಟ್ಟಡ ಕಲ್ಲು ಸಾಗಿಸುತ್ತಿದ್ದರಿಂದ ಅವುಗಳನ್ನು ವಶಕ್ಕೆ ಪಡೆದು ಪ್ರತಿ ಲಾರಿಗೆ 10 ಸಾವಿರ ರೂ. ದಂಡ ವಿಧಿಸಲಾಗಿದೆ.
ವಾರಸುದಾರರಾದ ರವಿಕುಮಾರ್ ಅವರು ದಂಡ ಪಾವತಿಸಿದ್ದು ಲಾರಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಹದೇವಪ್ರಸಾದ್ ಅಥವಾ ಗಣೇಶ್ ಪ್ರಸಾದ್ ಅವರಿಗಾಗಲೀ ಸಂಬಂಧ ಇರುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು ್ಲ ಸ್ಪಷ್ಟಪಡಿಸಿದ್ದಾರೆ.

ಜುಲೈ15ರಿಂದ ಮಕ್ಕಳ ಚಲನಚಿತ್ರೋತ್ಸವ: ಪೂರ್ವಭಾವಿ ಸಭೆಯಲ್ಲಿ ತೀರ್ಮಾನ

ಚಾಮರಾಜನಗರ, ಜೂ. 14 :- ಜಿಲ್ಲೆಯಲ್ಲಿ ಮಕ್ಕಳ ಚಲನಚಿತ್ರೋತ್ಸವವನ್ನು ಜುಲೈ15ರಿಂದ 21ರವರೆಗೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣ ಕೊರ್ಲಾಪಾಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಚಿತ್ರೋತ್ಸವ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಜಿಲ್ಲಾಡಳಿತ,ಸಾರ್ವಜನಿಕ ಶಿಕ್ಷಣ ಇಲಾಖೆ,ಚಿಕ್ಕಬಳ್ಳಾಪುರದ ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಮಕ್ಕಳ ಚಿತ್ರಸಂಸ್ಥೆ ಆಶ್ರಯದಲ್ಲಿ ನಾಲ್ಕು ತಾಲ್ಲೂಕಿನ ವಿವಿಧ ಚಿತ್ರಮಂದಿರಗಳಲ್ಲಿ ಮಕ್ಕಳ ಚಲನಚಿತ್ರ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
 ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಅವರು ವಿದ್ಯಾರ್ಥಿಗಳಿಗೆ ಪ್ರವೇಶ  ಟಿಕೇಟ್ ದರವನ್ನು 10ರೂ.ಗೆ ನಿಗದಿ ಮಾಡಬೇಕು.ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಚಲನಚಿತ್ರ ವೀಕ್ಷಿಸಲು ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಮಾಡಬೇಕೆಂದು ಸೂಚಿಸಿದರು.
  ಉತ್ತಮ ಸಾಮಾಜಿಕ ಸಂದೇಶ ಸಾರುವ ಸದಭಿರುಚಿಯ ಚಲನಚಿತ್ರಗಳನ್ನು ಪ್ರದರ್ಶಿಸಬೇಕು.ಚಲನಚಿತ್ರಗಳ ಪಟ್ಟಿಯನ್ನು ಪರಿಶೀಲಿಸಿ ಉತ್ತಮ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು.ಮಕ್ಕಳ ಮನಸ್ಸಿನಲ್ಲಿ ನೆನಪು ಉಳಿಯುವ ಚಿತ್ರಗಳ ಪ್ರದರ್ಶನಕ್ಕೆ ಏರ್ಪಾಡು  ಮಾಡುವಂತೆ ತಿಳಿಸಿದರು.
   ಸಾರ್ವತ್ರಿಕ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಂದು ಚಿತ್ರ ಪ್ರದರ್ಶನ ವೀಕ್ಷಣೆಗೆ ವೇಳಾಪಟ್ಟಿ ನಿಗದಿಮಾಡಿಕೊಳ್ಳಬೇಕು. ಚಿತ್ರಮಂದಿರದಲ್ಲಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ.ಆಯಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತರೆ ಅಧಿಕಾರಿಗಳು ಶಾಲಾ ಮಕ್ಕಳಿಗೆ ಚಿತ್ರೋತ್ಸವದ ಬಗ್ಗೆ ಪೂರ್ವಭಾವಿಯಾಗಿ ಮಾಹಿತಿ ನೀಡಬೇಕು ಎಂದು ಹೆಪ್ಸಿಬಾ ರಾಣಿ ತಿಳಿಸಿದರು.
  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪಿ.ಮಮತಾ,ತಹಶೀಲ್ದಾರರಾದ ಎಂ.ಮಹದೇವು,ಮಹದೇವಯ್ಯ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಭಾಸ್ಕರ್, ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಮಕ್ಕಳ ಚಿತ್ರಸಂಸ್ಥೆ  ವ್ಯವಸ್ಥಾಪಕರಾದ ಎಸ್.ರಮೇಶ್,ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳು, ಚಲನಚಿತ್ರ ಮಂದಿರದ ಮಾಲೀಕರು,ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.



ಗಮನ ಸೆಳೆದ ಮಲೇರಿಯಾ  ವಿರೋಧಿ ಜಾಗೃತಿ ಜಾಥಾ

ಚಾಮರಾಜನಗರ, ಜೂ. 14 - ರಾಷ್ಟ್ರೀಯ ಮಲೇರಿಯಾ  ವಿರೋಧಿ ಮಾಸಾಚರಣೆ ಅಂಗವಾಗಿ ನಗರದಲ್ಲಿಂದು ಮಲೇರಿಯಾ  ರೋಗ ತಡೆ  ಕುರಿತು ಜಾಗೃತಿ ಜಾಥಾ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.
 ನಗರದ ಚಾಮರಾಜೇಶ್ವರ ದೇವಾಲಯದ ಬಳಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣ ಕೊರ್ಲಾಪಾಟಿ ಅವರು ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
 ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ರೋಗ ನಿಯಂತ್ರಣಕ್ಕೆ ಜನರಿಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸಬೇಕು.ಮಳೆಗಾಲ ಸಂದರ್ಭದಲ್ಲಿ ವಿಶೇಷವಾಗಿ ಈ ರೋಗ ತಡೆಗೆ ಮುನ್ನೆಚ್ಚರಿಕೆ ವಹಿಸಬೇಕಿದೆ.ಸೊಳ್ಳೆಗಳ ನಿಯಂತ್ರಿಸುವ ಮೂಲಕ ರೋಗ ಹರಡದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದರು.
 ರೋಗ ಹತೋಟಿಗೆ ಆರೋಗ್ಯ ಇಲಾಖೆ ಮುಂಜಾಗರೂಕತೆ  ವಹಿಸಬೇಕು. ಆರೋಗ್ಯ ಇಲಾಖೆಯ ಸೌಲಭ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಜಿ.ಪಂ ಸಿಇಓ ತಿಳಿಸಿದರು.
 ಬಳಿಕ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ  ನಡೆಸಿದರು. ದೊಡ್ಡಂಗಡಿ ಬೀದಿ,ಚಿಕ್ಕಂಗಡಿ ಬೀದಿ,ಸಂತೇಮರಹಳ್ಳಿ ವೃತ್ತ,ಪಚ್ಚಪ್ಪ ವೃತ್ತ,ಜೋಡಿರಸ್ತೆ ಮೂಲಕ ಸಾಗಿ ಬಂದ ಜಾಥಾ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದ ಬಳಿ ಸಮಾವೇಶಗೊಂಡಿತು.
 ಇದೇ ವೇಳೆ ಮಾತನಾಡಿದ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅನಿಲ್ ಕುಮಾರ್ ರೋಗ ಹರಡದಂತೆ ವಹಿಸಬೇಕಿರುವ ಮುನ್ನಚ್ಚರಿಕೆ ಬಗ್ಗೆ ಹೆಚ್ಚು ನಿಗಾ ವಹಿಸಬೇಕಿದೆ.ಸೊಳ್ಳೆಗಳಿಂದ ಹರಡುವ ಕಾಯಿಲೆ ತಡೆಯಲು ಮನೆಗಳಲ್ಲಿ ಸೊಳ್ಳೆ ಪರದೆ,ಇತರೆ ರಕ್ಷಣಾ ಕ್ರಮಗಳನ್ನು ಸ್ವಯಂಪ್ರೇರಿತವಾಗಿ ಜನರು ತೆಗೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಪಾಂಡುವಿಜಯನ್,ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ನಾಗರಾಜು,ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮಹದೇವು,ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿಗಳು ದೊರೆಸ್ವಾಮಿ ನಾಯಕ,ಇತರರು ಹಾಜರಿದ್ದರು.



ಜೂ. 17ರಂದು ನಗರದಲ್ಲಿ ದೇವರಾಜ ಅರಸು ನಮನ ಗೀತ ನೃತ್ಯ ರೂಪಕ
ಚಾಮರಾಜನಗರ, ಜೂ. 15 - ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಸಾಮಾಜಿಕ ನ್ಯಾಯದ ಹರಿಕಾರರೆಂದೇ ಪ್ರಸಿದ್ಧರಾಗಿದ್ದ ಡಿ. ದೇವರಾಜ ಅರಸು ಅವರ ಜೀವನದ ಸಂಪೂರ್ಣ ಚಿತ್ರಣವನ್ನು ಪ್ರಸ್ತುತ ಪಡಿಸುವ ನೃತ್ಯ ರೂಪಕ ಕಾರ್ಯಕ್ರಮವನ್ನು ಜೂನ್ 17ರಂದು ಸಂಜೆ 6 ಗಂಟೆಗೆ ನಗರದ ಜಿಲ್ಲಾಡಳತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಬೆಂಗಳೂರಿನ ನೃತ್ಯರೂಪಕ ತಂಡದ ನಿರ್ದೇಶಕಿ ರೂಪಾರಾಜೇಶ್ ಅವರ ನಿರ್ದೇಶನದಲ್ಲಿ ಡಿ. ದೇವರಾಜ ಅರಸು ನಮನ ನೃತ್ಯ ರೂಪಕ ಕಾರ್ಯಕ್ರಮ ಪ್ರದರ್ಶಿತವಾಗಲಿದೆ. ಡಿ.ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಅರಸು ಅವರ ಬದುಕು ಚಿತ್ರಣವನ್ನು ಸಮಗ್ರವಾಗಿ ನೃತ್ಯ ರೂಪಕದ ಮುಖೇನ ಜನರಿಗೆ ತಲುಪಿಸುವ ಮಹದಾಸೆಯೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿತವಾಗಿದೆ.
ನೃತ್ಯರೂಪಕ ಪ್ರದರ್ಶನವನ್ನು ದೇವರಾಜ ಅರಸು ಅವರ ಅಭಿಮಾನಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು, ನಾಗರಿಕರು ವೀಕ್ಷಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ಶಿವಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ದೂ.ಸಂ. 08226-222180 ಅಥವಾ ಮೊಬೈಲ್ 9480817623 ಸಂಪರ್ಕಿಸಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
ಜೂ. 18ರಂದು ನಂಜುಂಡಪ್ಪ ವರದಿ ಶಿಫಾರಸು ಅನುಷ್ಠಾನ ಉನ್ನತ ಅಧಿಕಾರಿ ಸಮಿತಿ ಸಭೆ
ಚಾಮರಾಜನಗರ, ಜೂ. 15 - ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸುಗಳ ಅನುಷ್ಠಾನ ಉನ್ನತ ಅಧಿಕಾರಿ ಸಮಿತಿಯ ಅಧ್ಯಕ್ಷರಾದ ವೆಂಕಟರಾವ್ ಘÉೂೀರ್ಪಡೆ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯು ಜೂನ್ 18ರಂದು ಬೆಳಿಗ್ಗೆ 10.30 ಗಂಟೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 16ರಂದು ಕೊತ್ತಲವಾಡಿ ಗ್ರಾಮದಲ್ಲಿ ಅಂಚೆ ಸಂತೆ
ಚಾಮರಾಜನಗರ, ಜೂ. 15:- ಅಂಚೆ ಇಲಾಖೆಯು ಗುಂಡ್ಲುಪೇಟೆ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಜೂನ್ 16ರಂದು ಅಂಚೆ ಸಂÀತೆ ಕಾರ್ಯಕ್ರಮವನ್ನು  ಹಮ್ಮಿಕೊಂಡಿದೆ.
ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ದಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ,  ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ  ಜೀವವಿಮೆ ಮತ್ತು  ಅಂಚೆ ಜೀವವಿಮೆ ಇನ್ನಿತರ ಅಂಚೆ ಇಲಾಖೆಯ ಸಂಬಂಧ ಯೋಜನೆಗಳನ್ನು ಸ್ಥಳದಲ್ಲೇ  ಸ್ವಿಕರಿಸಲಾಗುತ್ತದೆ.
ಸುತ್ತಮುತ್ತಲ ಗ್ರಾಮಸ್ಥರು ಅಂಚೆ ಸಂತೆ ಕಾರ್ಯಕ್ರಮದ  ಸದುಪಯೋಗ ಮಾಡಿಕೊಳ್ಳುವಂತೆ ಅಂಚೆ ವಿಭಾಗದ ಅಧೀಕ್ಷರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 15 :- ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2015ನೆ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ನೀಡುವ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಕನಿಷ್ಟ 18 ರಿಂದ 35ರ ವಯೋಮಿತಿಯವರಾಗಿರಬೇಕು. ಸ್ವವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರದ ನಕಲು ಪ್ರತಿ ಅಥವಾ ಅಧಿಕೃತವಾದ ದೃಢೀಕರಿಸಲ್ಪಟ್ಟ ಜನ್ಮದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಲಗತ್ತಿಸಬೇಕು. ಪ್ರಸ್ತುತ ಸಲ್ಲಿಸಲ್ಪಡುತ್ತಿರುವ ಕೃತಿಯು ಚೊಚ್ಚಲ ಕೃತಿಯಾಗಿದ್ದು ಎಲ್ಲಿಯೂ ಪ್ರಕಟವಾಗಿಲ್ಲವೆಂದು ಸ್ವಯಂ ದೃಢೀಕರಣ ಪತ್ರ ನೀಡಬೇಕು.
ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಡಿಟಿಪಿ ಮಾಡಿಸಿದಾಗ 1/8 ಡೆಮ್ಮಿ ಅಳತೆಯಲ್ಲಿ ಕನಿಷ್ಟ 60 ಪುಟಗಳಿರಬೇಕು. ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿಗೆ ಸಿದ್ಧಪಡಿಸಿದ ಪ್ರಬಂಧಗಳನ್ನು ಹೊರತುಪಡಿಸಿ, ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯದ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಸ್ತಪ್ರತಿ ಇರಬೇಕು. ಕೃತಿಯ ಪಠ್ಯದಲ್ಲಿ ಯಾವುದೇ ಧರ್ಮ, ದೇವರು, ಜಾತಿ, ಕೋಮು, ವೃತ್ತಿ, ಸಮುದಾಯ, ಭಾಷೆ, ಆಚರಣೆ, ಪದ್ಧತಿ ಇತ್ಯಾದಿ ಸಂಗತಿಗಳಿಗೆ ಸಂಬಂಧಿಸಿದಂತೆ ಹಾಗೂ ರಾಷ್ಟ್ರೀಯ ನಾಯಕರುಗಳ ಕುರಿತಂತೆ ನೇರವಾಗಿಯೇ ಆಗಲಿ ಅಥವಾ ಪರೋಕ್ಷವಾಗಿಯೇ ಆಗಲಿ ಮನನೋಯಿಸುವಂತಹ ವಿಷಯವಾಗಲಿ ಇರಬಾರದು. ಅಲ್ಲದೆ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವಂತಹ ವಿಷಯ ಸಂಗತಿಗಳು ಪ್ರಸ್ತಾಪವಾಗಿರಬಾರದು.
ಅರ್ಜಿಗಳನ್ನು ಜೂನ್ 30ರ ಒಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು - 560002 ಇಲ್ಲಿಗೆ ಕಳುಹಿಸಿಕೊಡಬೇಕು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-22484516 ಮತ್ತು 22017704 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮರು ಮೌಲ್ಯಮಾಪನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಚಾಮರಾಜನಗರ, ಜೂ. 15  - ಕಳೆದ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಮರುಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಜೂನ್ 16ರವರೆಗೆ ವಿಸ್ತರಿಸಲಾಗಿದೆ.
ವಿದ್ಯಾರ್ಥಿಗಳು ಮತ್ತು ಪೋಷಕರ ಕೋರಿಕೆಯ ಮೇರೆಗೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಚಲನ್ ಡೌನ್‍ಲೋಡ್ ಮಾಡಿಕೊಂಡು ಬ್ಯಾಂಕ್ ವ್ಯವಹಾರದ ಸಮಯದಲ್ಲಿ ಶುಲ್ಕ ಪಾವತಿಸಬಹುದೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜಯಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.


ಜೂ. 17ರಂದು ಗುಂಡ್ಲುಪೇಟೆ ಭಾಗದಲ್ಲಿ ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಜೂ. 15 :- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಜೂನ್ 17ರಂದು ಗುಂಡ್ಲುಪೇಟೆ ವಿದ್ಯುತ್ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಗುಂಡ್ಲುಪೇಟೆ, ಹಂಗಳ, ತೆರಕಣಾಂಬಿ, ಬೊಮ್ಮಲಾಪುರ, ಬೇಗೂರು, ಕಬ್ಬಳ್ಳಿ, ಹರವೆ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ. 17ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಜೂ. 15 - ತಾಲೂಕಿನ ಅಟ್ಟುಗೂಳಿಪುರ ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಜೂನ್ 17ರಂದು ಕೈಗೊಳ್ಳಲಾಗಿದೆ. ಹೀಗಾಗಿ ಸಿದ್ದಯ್ಯನಪುರ, ಹೊಂಗಲವಾಡಿ, ಕೋಳೀಪಾಳ್ಯ, ಬಂದೀಗೌಡನಹಳ್ಳಿ, ಅಟ್ಟುಗೂಳಿಪುರ, ಎನ್‍ಜೆವೈ, ದೊಡ್ಡಮೋಳೆ ಪ್ರದೇಶಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾಟೆ ತರಬೇತಿ ನೀಡಲು ತರಬೇತುದಾರರಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 17ಇಂದು ಶ್ರೀ ಮಹದೇವ ಆರ್ಟ್ ಗ್ಯಾಲರಿ ಉದ್ಘಾಟನೆ(ಜೂನ್-16-2016), ಚಾಮರಾಜನಗರ ಜಿಲ್ಲೆ ಕಲೆ, ಸಾಹಿತ್ಯ, ಸಂಸ್ಕøತಿ ಜನಪದದಲ್ಲಿ ಇಡೀ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ರಾಜಾವಳಿ ಕಥೆಯ ದೇವಚಂದ್ರ ಮೊಟ್ಟಮೊದಲ ಕವಯತ್ರಿ ಸಂಚಿ ಹೊನ್ನಮ್ಮ, ಮುಪ್ಪಿನ ಷಡಕ್ಷರಿ, ನಿಂಗನ ಶಿವಯೋಗಿಗಳು, ನಾಟಕಕಾರ ಸಂಸ, ಕರ್ನಾಟಕ ರತ್ನ ಡಾ|| ರಾಜ್ ಕುಮಾರ್ ಅಲ್ಲದೇ ಮಹದೇಶ್ವರ, ಮಂಟೆಸ್ವಾಮಿ ಇವರೆಲ್ಲರೂ ನಮ್ಮ ಜಿಲ್ಲೆಯವರನ್ನುವುದು ಹೆಮ್ಮೆಯ ವಿಷಯವಾಗಿದೆ. ಶೇಕಡ 65% ರಷ್ಟು ಕಾಡಿನ ಸಂಪತ್ತು ಹೊಂದಿರುವ ಈ ಜಿಲ್ಲೆಯಲ್ಲಿ ಚಿತ್ರ ಕಲಾವಿದರಿಗಾಗಿಯೇ ಮೊಟ್ಟಮೊದಲ ಬಾರಿಗೆ ಒಂದು ಆರ್ಟ್ ಗ್ಯಾಲರಿಯನ್ನು  ಶ್ರೀ ಮಹದೇವ ಆರ್ಟ್ ಗ್ಯಾಲರಿ ಎಂಬ ಹೆಸರಿನಲ್ಲಿ ಇದೇ ಜೂನ್ 16,2016ರಂದು ಪ್ರಾರಂಭ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಪ್ರತಿಭಾನ್ವಿತ ಚಿತ್ರಕಲಾವಿದರಿಗೆ ಚಿತ್ರಕಲಾ ಪ್ರದರ್ಶನಕ್ಕೆ ಸ್ಥಳಾವಕಾಶ ಕಲ್ಪಿಸುವುದು, ಮಕ್ಕಳಿಗೆ ಚಿತ್ರಕಲಾ ಪ್ರಾತ್ಯಸ್ಥಿಕೆ, ಪ್ರದರ್ಶನ, ಸ್ಪರ್ಧೆಗಳು ಹೀಗೆ ಪ್ರತಿಭಾ ಪುರಸ್ಕಾರಕ್ಕೆ ಹಾಗೂ ಕಲೆ ಕಲಾವಿದರ ಅಭಿವೃದ್ದಿಗಾಗಿ ಈ ಆರ್ಟ್ ಗ್ಯಾಲರಿ ವೇದಿಕೆ ಮಾಡಿಕೊಡಲಾಗಿದೆ.
ಇದರ ಉದ್ಘಾಟನೆಯನ್ನು ಕರ್ನಾಟಕ ಲಲಿತಾಕಲಾ ಅಕಾಡೆಮಿ ಅಧ್ಯಕ್ಷರಾದ ಡಾ.ಎಂ.ಎಸ್.ಮೂರ್ತಿರವರ ನೆರವೇರಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಂ.ರಾಮಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ರಂಗವಾಹಿನಿ ಸಂಸ್ಥೆ ಅಧ್ಯಕ್ಷರಾದ ಸಿ.ಎಂ. ನರಸಿಂಹಮೂರ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಸಿ.ರಾಜಶೇಖರ, ಸಂಗಮ ಸೌಹಾರ್ದ ಸಹಕಾರ ನಿಯಮತ ಅಧ್ಯಕ್ಷ ಡಿ.ನಾಗಸುಂದರ್ ಭಾಗವಹಿಸಲಿದ್ದಾರೆ. ಅಂದು ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಚಿತ್ರಕಲಾವಿದರ ಸಮೂಹ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ದಯಮಾಡಿ ಕಲಾಪ್ರೇಮಿಗಳು ತಪ್ಪದೇ ಆಗಮಿಸಬೇಕೆಂದು ಶ್ರೀ ಮಹದೇವ ಆರ್ಟ್ ಗ್ಯಾಲರಿಯ ಸಂಸ್ಥಾಪಕರಾದ ಸಿ.ಎಂ. ಮಹೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.
:- ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ವತಿಯಿಂದ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲು ಉದ್ದೇಶಿಸಿದ್ದು ಅರ್ಹ ಬ್ಲಾಕ್ ಬೆಲ್ಟ್ ತರಬೇತುದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತುದಾರರು ಶಾಲೆಗಳಿಗೆ ಭೇಟಿನೀಡಿ ತರಬೇತಿ ನೀಡಬೇಕಿದೆ. 3 ತಿಂಗಳ ಅವಧಿಗೆ ಪ್ರತಿ ಶಾಲೆಗೆ 4500 ರೂ. ಗೌರವಧನ ನೀಡಲಾಗುತ್ತದೆ. ಪ್ರಾಢಶಾಲಾ ಮುಖ್ಯ ಶಿಕ್ಷಕರು ಶಾಲಾ ಹಂತದಲ್ಲಿಯೇ ಅರ್ಹ ತರಬೇತುದಾರರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಆಸಕ್ತ ತರಬೇತುದಾರರು ಗುರುತಿನ ಚೀಟಿ, ಆಧಾರ್ ಕಾರ್ಡ್, ಇಬ್ಬರು ಸ್ಥಳೀಯ ಗಣ್ಯ ವ್ಯಕ್ತಿಗಳ ಪರಿಚಯ ಪತ್ರ, ಇತರೆ ವಿವರಗಳೊಂದಿಗೆ ಜೂನ್ 23ರೊಳಗೆ ತಾವು ಇಚ್ಚಿಸುವ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರಿಗೆ ಅರ್ಜಿ ಸಲ್ಲಿಸಬಹುದು. ವಿವರಗಳಿಗೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಉಪಯೋಜನಾ ಸಮನ್ವಯ ಅಧಿಕಾರಿ ಶಿವಕುಮಾರ್ (ಮೊಬೈಲ್ 7411615546) ಅವರನ್ನು ಸಂಪರ್ಕಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಮತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಕಲಚೇತನರ ಪುನರ್ವಸತಿ ಕೇಂದ್ರ ಪ್ರಾರಂಭಿಸಲು ಪ್ರಸ್ತಾವನೆ ಆಹ್ವಾನ
ಚಾಮರಾಜನಗರ, ಜೂ. 15 - ಜಿಲ್ಲಾ ಕೇಂದ್ರದಲ್ಲಿ ಎಲ್ಲಾ ಸ್ವರೂಪದ ವಿಕಲಚೇತನರಿಗೆ ವೈದ್ಯಕೀಯ, ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಪುರ್ನವಸತಿ ಕೇಂದ್ರವನ್ನು ನಡೆಸಲು ಬಯಸುವ ಸ್ವಯಂ ಸೇವಾಸಂಸ್ಥೆ, ವೈದ್ಯಕೀಯ ಮಹಾವಿದ್ಯಾಲಯಗಳಿಂದ ಪ್ರಸ್ತಾವನೆ ಆಹ್ವಾನಿಸಲಾಗಿದೆ.
ಚಾಮರಾಜನಗರ ಪಟ್ಟಣದಲ್ಲಿ ಪುನರ್ವಸತಿ ಕೇಂದ್ರ ನಡೆಸಬೇಕಿದೆ. ವಿಕಲಚೇತನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ, ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸೌಲಭ್ಯ, ಆಸ್ಪತ್ರೆ ಸೌಕರ್ಯ ಹೊಂದಿರುವ ಸ್ವಯಂ ಸೇವಾ ಸಂಸ್ಥೆ ಅಥವಾ ವೈದ್ಯಕೀಯ ಮಹಾವಿದ್ಯಾಲಯ ಪ್ರಸ್ತಾವನೆ ಸಲ್ಲಿಸಬಹುದು.
ನಿಗದಿತ ಅರ್ಜಿ ನಮೂನೆಯನ್ನು  ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನೊಳಗೊಂಡ ಪ್ರಸ್ತಾವನೆ ಸಲ್ಲಿಸಲು ಜೂನ್ 30 ಕಡೆಯ ದಿನವಾಗಿದೆ. ವಿವರಗಳಿಗೆ ಸದರಿ ಕಚೇರಿ ಅಥವಾ ದೂ.ಸಂ.08226-223688 ಸಂಪರ್ಕಿಸುವಂತೆ ಪ್ರಭಾರ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಪೃಥ್ವಿದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಚಾಮರಾಜನಗರ, ಜೂ. 17ಇಂದು ಶ್ರೀ ಮಹದೇವ ಆರ್ಟ್ ಗ್ಯಾಲರಿ ಉದ್ಘಾಟನೆ(ಜೂನ್-16-2016), ಚಾಮರಾಜನಗರ ಜಿಲ್ಲೆ ಕಲೆ, ಸಾಹಿತ್ಯ, ಸಂಸ್ಕøತಿ ಜನಪದದಲ್ಲಿ ಇಡೀ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ರಾಜಾವಳಿ ಕಥೆಯ ದೇವಚಂದ್ರ ಮೊಟ್ಟಮೊದಲ ಕವಯತ್ರಿ ಸಂಚಿ ಹೊನ್ನಮ್ಮ, ಮುಪ್ಪಿನ ಷಡಕ್ಷರಿ, ನಿಂಗನ ಶಿವಯೋಗಿಗಳು, ನಾಟಕಕಾರ ಸಂಸ, ಕರ್ನಾಟಕ ರತ್ನ ಡಾ|| ರಾಜ್ ಕುಮಾರ್ ಅಲ್ಲದೇ ಮಹದೇಶ್ವರ, ಮಂಟೆಸ್ವಾಮಿ ಇವರೆಲ್ಲರೂ ನಮ್ಮ ಜಿಲ್ಲೆಯವರನ್ನುವುದು ಹೆಮ್ಮೆಯ ವಿಷಯವಾಗಿದೆ. ಶೇಕಡ 65% ರಷ್ಟು ಕಾಡಿನ ಸಂಪತ್ತು ಹೊಂದಿರುವ ಈ ಜಿಲ್ಲೆಯಲ್ಲಿ ಚಿತ್ರ ಕಲಾವಿದರಿಗಾಗಿಯೇ ಮೊಟ್ಟಮೊದಲ ಬಾರಿಗೆ ಒಂದು ಆರ್ಟ್ ಗ್ಯಾಲರಿಯನ್ನು  ಶ್ರೀ ಮಹದೇವ ಆರ್ಟ್ ಗ್ಯಾಲರಿ ಎಂಬ ಹೆಸರಿನಲ್ಲಿ ಇದೇ ಜೂನ್ 16,2016ರಂದು ಪ್ರಾರಂಭ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಪ್ರತಿಭಾನ್ವಿತ ಚಿತ್ರಕಲಾವಿದರಿಗೆ ಚಿತ್ರಕಲಾ ಪ್ರದರ್ಶನಕ್ಕೆ ಸ್ಥಳಾವಕಾಶ ಕಲ್ಪಿಸುವುದು, ಮಕ್ಕಳಿಗೆ ಚಿತ್ರಕಲಾ ಪ್ರಾತ್ಯಸ್ಥಿಕೆ, ಪ್ರದರ್ಶನ, ಸ್ಪರ್ಧೆಗಳು ಹೀಗೆ ಪ್ರತಿಭಾ ಪುರಸ್ಕಾರಕ್ಕೆ ಹಾಗೂ ಕಲೆ ಕಲಾವಿದರ ಅಭಿವೃದ್ದಿಗಾಗಿ ಈ ಆರ್ಟ್ ಗ್ಯಾಲರಿ ವೇದಿಕೆ ಮಾಡಿಕೊಡಲಾಗಿದೆ.
ಇದರ ಉದ್ಘಾಟನೆಯನ್ನು ಕರ್ನಾಟಕ ಲಲಿತಾಕಲಾ ಅಕಾಡೆಮಿ ಅಧ್ಯಕ್ಷರಾದ ಡಾ.ಎಂ.ಎಸ್.ಮೂರ್ತಿರವರ ನೆರವೇರಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಂ.ರಾಮಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ರಂಗವಾಹಿನಿ ಸಂಸ್ಥೆ ಅಧ್ಯಕ್ಷರಾದ ಸಿ.ಎಂ. ನರಸಿಂಹಮೂರ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಸಿ.ರಾಜಶೇಖರ, ಸಂಗಮ ಸೌಹಾರ್ದ ಸಹಕಾರ ನಿಯಮತ ಅಧ್ಯಕ್ಷ ಡಿ.ನಾಗಸುಂದರ್ ಭಾಗವಹಿಸಲಿದ್ದಾರೆ. ಅಂದು ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಚಿತ್ರಕಲಾವಿದರ ಸಮೂಹ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ದಯಮಾಡಿ ಕಲಾಪ್ರೇಮಿಗಳು ತಪ್ಪದೇ ಆಗಮಿಸಬೇಕೆಂದು ಶ್ರೀ ಮಹದೇವ ಆರ್ಟ್ ಗ್ಯಾಲರಿಯ ಸಂಸ್ಥಾಪಕರಾದ ಸಿ.ಎಂ. ಮಹೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.


ಜೂ. 17ರಂದು ವಸತಿಶಾಲೆ ಪ್ರವೇಶಕ್ಕೆ 2ನೇ ಹಂತದ ಕೌನ್ಸೆಲಿಂಗ್
ಚಾಮರಾಜನಗರ, ಜೂ.15 (- 2016-17ನೇ ಸಾಲಿಗೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ ವಸತಿ ಶಾಲೆಯ 6ನೇ ತರಗತಿ ಪ್ರವೇಶಕ್ಕೆ ಉಳಿದಿರುವ ಸೀಟುಗಳನ್ನು ಹಂಚಿಕೆ ಮಾಡಲು 2ನೇ ಹಂತದ ಕೌನ್ಸೆಲಿಂಗ್ ಅನ್ನು ಜೂನ್ 17ರಂದು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ನಡೆಸಲಾಗುತ್ತದೆ.
ವಿದ್ಯಾರ್ಥಿಗಳು ಅಗತ್ಯ ಮೂಲ ದಾಖಲೆಗಳೊಂದಿಗೆ ಕೌನ್ಸೆಲಿಂಗ್‍ಗೆ ಹಾಜರಾಗುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜೇಶ್ ಜಿ ಗೌಡ  ತಿಳಿಸಿದ್ದಾರÉ.



ಜೂ. 17ರಂದು ನಗರದಲ್ಲಿ ದೇವರಾಜ ಅರಸು ನಮನ ಗೀತ ನೃತ್ಯ ರೂಪಕ
ಚಾಮರಾಜನಗರ, ಜೂ. :- ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಸಾಮಾಜಿಕ ನ್ಯಾಯದ ಹರಿಕಾರರೆಂದೇ ಪ್ರಸಿದ್ಧರಾಗಿದ್ದ ಡಿ. ದೇವರಾಜ ಅರಸು ಅವರ ಜೀವನದ ಸಂಪೂರ್ಣ ಚಿತ್ರಣವನ್ನು ಪ್ರಸ್ತುತ ಪಡಿಸುವ ನೃತ್ಯ ರೂಪಕ ಕಾರ್ಯಕ್ರಮವನ್ನು ಜೂನ್ 17ರಂದು ಸಂಜೆ 6 ಗಂಟೆಗೆ ನಗರದ ಜಿಲ್ಲಾಡಳತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಬೆಂಗಳೂರಿನ ನೃತ್ಯರೂಪಕ ತಂಡದ ನಿರ್ದೇಶಕಿ ರೂಪಾರಾಜೇಶ್ ಅವರ ನಿರ್ದೇಶನದಲ್ಲಿ ಡಿ. ದೇವರಾಜ ಅರಸು ನಮನ ನೃತ್ಯ ರೂಪಕ ಕಾರ್ಯಕ್ರಮ ಪ್ರದರ್ಶಿತವಾಗಲಿದೆ. ಡಿ.ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಅರಸು ಅವರ ಬದುಕು ಚಿತ್ರಣವನ್ನು ಸಮಗ್ರವಾಗಿ ನೃತ್ಯ ರೂಪಕದ ಮುಖೇನ ಜನರಿಗೆ ತಲುಪಿಸುವ ಮಹದಾಸೆಯೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿತವಾಗಿದೆ.
ನೃತ್ಯರೂಪಕ ಪ್ರದರ್ಶನವನ್ನು ದೇವರಾಜ ಅರಸು ಅವರ ಅಭಿಮಾನಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು, ನಾಗರಿಕರು ವೀಕ್ಷಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ಶಿವಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ದೂ.ಸಂ. 08226-222180 ಅಥವಾ ಮೊಬೈಲ್ 9480817623 ಸಂಪರ್ಕಿಸಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ಪ್ರತಿಷ್ಠಿತ ಶಾಲೆಗಳಿಗೆ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳ ಸೇರ್ಪಡೆ ಸೌಲಭ್ಯ : ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 16 - ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಶಾಲೆಗಳಿಗೆ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳನ್ನು 6ನೇ ತರಗತಿ ಪ್ರವೇಶಕ್ಕೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಸೇರ್ಪಡೆ ಮಾಡಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಕೊಳ್ಳೇಗಾಲ ಪಟ್ಟಣದ ಎಸ್‍ಡಿಎ ಇಂಗ್ಲೀಷ್ ಹೈಸ್ಕೂಲ್ (ಸವೆಂತ್ ಡೇ ಇಂಗ್ಲೀಷ್ ಹೈಸ್ಕೂಲ್), ಹನೂರಿನ ವಿವೇಕಾನಂದ ಹೆಚ್‍ಪಿಎಸ್ ಶಾಲೆಗೆ ಪ್ರವೇಶ ಕಲ್ಪಿಸಲಾಗುತ್ತದೆ.
ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಗೊಲ್ಲ, ಹೆಳವ, ಬುಡಬುಡಿಕೆ, ಬುಂಡಬೆಸ್ತ, ದರ್ವೇಸ್, ಬಾಜಿಗರ್, ದೊಂಬಿದಾಸ, ಜೋಗಿ, ಬೈರಾಗಿ, ಗೋಂದಳಿ ಇನ್ನಿತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಪ್ರವೇಶ ಪಡೆದ ವಿದ್ಯಾರ್ಥಿಗಳ ಶಾಲಾ ಶುಲ್ಕ, ಸಮವಸ್ತ್ರ, ಪಠ್ಯಪುಸ್ತಕ, ಪ್ರವಾಸ, ಇತರ ವೆಚ್ಚವನ್ನು ಇಲಾಖೆಯೇ ಭರಿಸಲಿದೆ. ವಸತಿ ಶಾಲೆಯಾಗಿದ್ದಲ್ಲಿ, ವಸತಿ ಹಾಗೂ ಭೋಜನಾ ವೆಚ್ಚವನ್ನು ಭರಿಸಲಾಗುತ್ತದೆ.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಜೂನ್ 30ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಸದರಿ ಕಚೇರಿ ಅಥವಾ ದೂ.ಸಂಖ್ಯೆ 08226-222180 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಕಲಚೇತನರಿಗೆ ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ, ಶುಲ್ಕ ಮರುಪಾವತಿ : ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 16 - ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿಕಲಚೇತನರಿಗೆ ನೀಡುವ ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ ಹಾಗೂ ಶುಲ್ಕ ಮರುಪಾವತಿ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಿದೆ.
1ನೇ ತರಗತಿಯಿಂದ ವಿಶ್ವವಿದ್ಯಾಲಯ ಮಟ್ಟದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಎಸ್‍ಎಸ್‍ಎಲ್‍ಸಿ ಹಾಗೂ ನಂತರದ ಪರೀಕ್ಷೆಗಳಲ್ಲಿ ಶೇ. 60ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಕೊಡಲಾಗುತ್ತದೆ. ಅಲ್ಲದೆ ಎಸ್‍ಎಸ್‍ಎಲ್‍ಸಿ ನಂತರದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅವರು ಪಾವತಿಸಿರುವ ಶುಲ್ಕವನ್ನು ಮರುಪಾವತಿಸಲಾಗುತ್ತದೆ.
ಅರ್ಜಿ ನಮೂನೆಗಳನ್ನು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಅಥವಾ ತಾಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ ಬಳಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 25ರೊಳಗೆ ಸಲ್ಲಿಸಬೇಕು. ವಿವರಗಳಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳ ಕಚೇರಿಗೆ (ದೂ.ಸಂ. 08226-223688 ಮತ್ತು 224688) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ನಿರುದ್ಯೋಗಿ ಅಭ್ಯರ್ಥಿಗಳಿಗೆ ಉಚಿತ ಸಾಫ್ಟ್ ಸ್ಕಿಲ್ ತರಬೇತಿ
ಚಾಮರಾಜನಗರ, ಜೂ. 16- ನಗರದಲ್ಲಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಪದವೀಧರ ನಿರುದ್ಯೋಗಿ ಅಭ್ಯರ್ಥಿಗಳಿಗಾಗಿ ಸಾಫ್ಟ್ ಸ್ಕಿಲ್ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಜೂನ್ 30ರ ಒಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಾನವ ಸಂಪನ್ನೂಲ ಅಭಿವೃದ್ಧಿ ಕೇಂದ್ರದಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು. ವಿವರಗಳಿಗೆ ಜಿಲ್ಲಾ ಉದ್ಯೋಗ ಅಧಿಕಾರಿ (ದೂ.ಸಂ. 08226-224430) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆಯಡಿ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 1- ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಿಲ್ಲಾ ಕೈಗಾರಿಕಾ ಕೇಂದ್ರವು 2016-17ನೇ ಸಾಲಿಗೆ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆಯಡಿ ನೀಡುವ ಸಾಲಸೌಲಭ್ಯಕ್ಕೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಥಮ ಪೀಳಿಗೆ ಉದ್ಯಮಶೀಲರಿಗೆ ಪ್ರತಿ ಘಟಕಕ್ಕೆ ಗರಿಷ್ಟ 10 ಲಕ್ಷ ರೂಗಳನ್ನು ಕಿರು ಉತ್ಪಾದನಾ ಘಟಕ ಹಾಗೂ ಸೇವಾ ಉದ್ಯಮ ಪ್ರಾರಂಭಿಸಲು ಹಣಕಾಸು ಸಂಸ್ಥೆಗಳ ಮೂಲಕ ಸಾಲ ನೀಡಲಾಗುತ್ತದೆ.
ಸಾಮಾನ್ಯ ವರ್ಗದ ಉದ್ಯಮಶೀಲರಿಗೆ ಯೋಜನಾ ವೆಚ್ಚದ ಶೇ. 25ರಷ್ಟು (ಗರಿಷ್ಟ 2 ಲಕ್ಷ 50 ಸಾವಿರ ರೂ) ವಿಶೇಷ ವರ್ಗದ ಉದ್ಯಮಶೀಲರಿಗೆ ಶೇ. 35ರಷ್ಟು (ಗರಿಷ್ಟ 3 ಲಕ್ಷ 50 ಸಾವಿರ ರೂ) ಸಹಾಯಧನವನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ನೀಡಲಾಗುತ್ತದೆ.
ಅಭ್ಯರ್ಥಿಗಳು 21 ರಿಂದ 35ರ ವಯೋಮಿತಿಯವರಾಗಿರಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ. ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಯೋಧರು, ಅಂಗವಿಕಲರು ಹಾಗೂ ಮಹಿಳೆಯರಾಗಿದ್ದಲ್ಲಿ ಗರಿಷ್ಟ ವಯೋಮಿತಿ 45 ವರ್ಷಗಳೆಂದು ನಿಗದಿ ಮಾಡಲಾಗಿದೆ. 8ನೇ ತರಗತಿ ತೇರ್ಗಡೆಯಾಗಿರಬೇಕು. ಯಾವುದೇ ಆದಾಯ ಮಿತಿ ಇರುವುದಿಲ್ಲ. ಯಾವುದೇ ಗ್ರಾಮೀಣ ಪ್ರದೇಶ ಮತ್ತು 2001ರ ಜನಗಣತಿ 20 ಸಾವಿರ ಜನರಿಗಿಂತ ಕಡಿಮೆ ಇರುವ ಪಟ್ಟಣವೆಂದು ವರ್ಗೀಕರಿಸಿರುವ ಪ್ರದೇಶದಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿಯನ್ನು ವೆಬ್ ಸೈಟ್ ತಿತಿತಿ.emegಠಿ.ಞಚಿಡಿ.ಟಿiಛಿ.iಟಿ ಮೂಲಕ ಆನ್‍ಲೈನ್‍ನಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಜುಲೈ 16 ಕಡೆಯ ದಿನವಾಗಿದೆ. ವಿವರಗಳಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿ ಅಥವಾ ಖಾದಿ ಗ್ರಾಮದ್ಯೋಗ ಮಂಡಳಿ ಅಧಿಕಾರಿ ಅವರಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
ಜೂ. 22ರಂದು ರಫ್ತು ಜಾಗೃತಿ ಶಿಬಿರ : ನೋಂದಣಿಗೆ ಮನವಿ
ಚಾಮರಾಜನಗರ, ಜೂ. 1- ಕೈಗಾರಿಕೋದ್ಯಮಿಗಳು ಹಾಗೂ ವಾಣಿಜ್ಯೋದ್ಯಮಿಗಳಿಗಾಗಿ ರಫ್ತು ಉತ್ತೇಜನಾ ಕ್ರಮಗಳ ಕುರಿತ ಜಾಗೃತಿ ಶಿಬಿರವನ್ನು ಜೂನ್ 22ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜೋಡಿ ರಸ್ತೆಯಲ್ಲಿರುವ ವರ್ತಕರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಗ್ರಾನೈಟ್ ಉದ್ಯಮಗಳ ಸಂಘÀ ಮತ್ತು ವರ್ತಕರ ಸಂಘದ ಸಂಯುಕ್ತ ಆಶ್ರಯದಲ್ಲಿ ರಫ್ತು ಜಾಗೃತಿ ಶಿಬಿರ ಏರ್ಪಾಡಾಗಿದೆ.
ಶಿಬಿರಕ್ಕೆ ಉಚಿತ ಪ್ರವೇಶವಿದೆ. ರಫ್ತು ಚಟುವಟಿಕೆಗಳನ್ನು ಕೈಗೊಳ್ಳುವವರಿಗೆ ಶಿಬಿರವು ಪ್ರಯೋಜನಕಾರಿಯಾಗಲಿದೆ. ರಫ್ತು ಕಾರ್ಯಕ್ರಮಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಜಿಲ್ಲೆಯ ಉದ್ಯಮಿಗಳು, ವಾಣಿಜ್ಯದಾರರು ಶಿಬಿರದ ಸದುಪಯೋಗ ಮಾಡಿಕೊಳ್ಳಬೇಕು. ಆಸಕ್ತಿ ಉಳ್ಳವರು ಮೈಸೂರಿನಲ್ಲಿರುವ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದಲ್ಲಿ ಜೂನ್ 18ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ವಿವರಗಳಿಗೆ ದೂ. ಸಂಖ್ಯೆ 0821-4253409, ಮೊಬೈಲ್ 9731938421 ಅಐವಾ ಇ ಮೇಲ್ vಣಠಿಛಿmಥಿsoಡಿe@gmಚಿiಟ.ಛಿom ಸಂಪರ್ಕಿಸುವಂತೆ ವಿಟಿಟಿಸಿ ಶಾಖಾ ವ್ಯವಸ್ಥಾಪಕರಾದ ಎಚ್. ವರದರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಜೂ. 18ರಂದು ನಂಜುಂಡಪ್ಪ ವರದಿ ಶಿಫಾರಸು ಅನುಷ್ಠಾನ ಉನ್ನತ ಅಧಿಕಾರಿ ಸಮಿತಿ ಸಭೆ
ಚಾಮರಾಜನಗರ, ಜೂ. 1- ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸುಗಳ ಅನುಷ್ಠಾನ ಉನ್ನತ ಅಧಿಕಾರಿ ಸಮಿತಿಯ ಅಧ್ಯಕ್ಷರಾದ ವೆಂಕಟರಾವ್ ಘÉೂೀರ್ಪಡೆ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯು ಜೂನ್ 18ರಂದು ಬೆಳಿಗ್ಗೆ 10.30 ಗಂಟೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ. 23ರಂದು ಕೊಳ್ಳೇಗಾಲ ತಾಲೂಕಿನ ಮಂಗಲದಲ್ಲಿ ಅಂಚೆ ಸಂತೆ
ಚಾಮರಾಜನಗರ, ಜೂ. 16 - ಅಂಚೆ ಇಲಾಖೆ ವತಿಯಿಂದ ಅಂಚೆ ಸಂತೆ ಕಾರ್ಯಕ್ರಮವನ್ನು ಜೂನ್ 23ರಂದು ಕೊಳ್ಳೇಗಾಲ ತಾಲೂಕು ಕಾಮಗೆರೆ ಹೋಬಳಿಯ ಮಂಗಲ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂಚೆ ಸಂತೆಯಲ್ಲಿ ಅಂಚೆ ಕಚೇರಿಯ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ ಮತ್ತು ಇತರೆ ಅಂಚೆ ಜೀವವಿಮೆ ಯೋಜನೆಗಳನ್ನು ಸ್ವೀಕರಿಸಲಾಗುತ್ತದೆ.
ಸುತ್ತಮುತ್ತಲ ಗ್ರಾಮಸ್ಥರು ಅಂಚೆ ಸಂತೆಯನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಅಂಚೆ ವಿಭಾಗದ ಅಧೀಕ್ಷಕರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜೂ. 17, 18 ರಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರ ಜಿಲ್ಲಾ ಪ್ರವಾಸ
ಚಾಮರಾಜನಗರ, ಜೂ. 16-  ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ|| ಎಲ್ ಹನುಮಂತಯ್ಯ ಅವರು ಜೂನ್ 17 ಹಾಗೂ 18 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಜೂನ್ 17 ರಂದು ಬೆಳಿಗ್ಗೆ 11 ಗಂಟೆಗೆ ಕೊಳ್ಳೆಗಾಲಕ್ಕೆ ಆಗಮಿಸುವರು. 11.30 ಗಂಟೆಗೆ ಸಾಹಿತಿಗಳು ಹಾಗೂ ಕನ್ನಡ ಪರ ಸಂಘಟನೆಗಳ ಮುಖ್ಯಸ್ಥರನ್ನು ಭೇಟಿ ಮಾಡುವರು ಮತ್ತು ಗಡಿಸಮಸ್ಯಗಳ ಬಗ್ಗೆ ಚರ್ಚೆ ನಡೆಸುವರು. ಅಂದು ಕೊಳ್ಳೆಗಾಲದ ಸರ್ಕಾರಿ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡುವರು. ಜೂನ್ 18 ರಂದು ಬೆಳಿಗ್ಗೆ 8 ಗಂಟೆಗೆ  ಬೆಂಗಳೂರಿಗೆ ತೆರಳುವರೆಂದು ಪ್ರಕಟಣೆ ತಿಳಿಸಿದೆ.




01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು