ಚಾಮರಾಜನಗರ ಪೊಲೀಸ್ ಇಲಾಖೆಗೆ ಸೇರಿದ ಡಿ ಗ್ರೂಪ್ ನೌಕರೆ ಕಾಲು ಜಾರಿ ರೈಲುಗೆ ಸಿಲುಕಿ ಸಾವು
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ : ಮೈಸೂರಿನಿಂದ ಚಾಮರಾಜನಗರಕ್ಕೆ ಕರ್ತವ್ಯಕ್ಕೆ ಬರುತ್ತಿದ್ದ ವೇಳೆ ರೈಲು ಹತ್ತಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ರೈಲಿಗೆ ಸಿಲುಕಿಕೊಂಡಿರುವ ಘಟನೆ ಚಾಮರಾಜಪುರಂ ರೈಲು ನಿಲ್ದಾಣದಲ್ಲಿ ನಡೆದಿದೆ.
ಮೈಸೂರಿನ ಬೋಗಾದಿ ನಿವಾಸಿ ಪ್ರೇಮಮ್ಮ (54) ಮೃತ ದುರ್ದೈವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರೇಮಮ್ಮ ಅವರು ಚಾಮರಾಜನಗರ ಪೊಲೀಸ್ ವರೀಷ್ಟಾಧಿಕಾರಿ ಕಚೇರಿಯಲ್ಲಿ ಡಿ.ಗ್ರೂಪ್ ( ದಲಾಯತ್ ) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪ್ರತಿನಿತ್ಯ ತಮ್ಮ ಅಳಿಯ ಚಾಮರಾಜಪುರಂ ರೈಲು ನಿಲ್ದಾಣಕ್ಕೆ ತಂದು ಬಿಟ್ಟು ಹೋಗುತ್ತಿದ್ದರು. ಎಂದಿನಂತೆ ಪ್ರತಿನಿತ್ಯ ಮೈಸೂರಿನಿಂದ ಚಾಮರಾಜನಗರದೆಡೆಯ 7.20 ವೇಳೆಯ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಇಂದು ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅಚಾನಕ್ ಆಗಿ ಜಾರಿ ಸಿಲಿಕಿಕೊಂಡಿದ್ದಾರೆ.
ಮೃತರಿಗೆ ತಮ್ಮ ಪತಿಯ ನಿಧನ ನಂತರ ಅನುಕಂಪಧಾರಿತ ಹುದ್ದೆ ಸಿಕ್ಕಿತ್ತು ಎನ್ನಲಾಗಿದೆ. ಒಂದು ಗಂಡು, ಹೆಣ್ಣು ಮಕ್ಕಳಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
No comments:
Post a Comment