ಜೂನ್3, 2016
ಉದ್ಯೋಗ ಅವಕಾಶಕ್ಕೆ ವರದಾನವಾಗಿರುವ ಗುಂಡ್ಲುಪೇಟೆ ಜಿ.ಟಿ.ಟಿ.ಸಿ ಕೇಂದ್ರ
ಗುಂಡ್ಲುಪೇಟೆಯ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಉದ್ಯೋಗಾವಕಾಶಕ್ಕೆ ನೆರವಾಗುವ ಅಲ್ಪಾವಧಿ ಮತ್ತು ದೀರ್ಘಾವಧಿಯ ತರಬೇತಿಗಳನ್ನು ನೀಡುತ್ತಿದ್ದು ಜಿಲ್ಲೆಯ ಯುವ ಜನರು ಇದರ ಪ್ರಯೋಜನ ಪಡೆಯಲು ಅವಕಾಶವಿದೆ.
ಗುಂಡ್ಲುಪೇಟೆ ಪಟ್ಟಣದಲ್ಲಿ 2007 ರಲ್ಲಿ ಫ್ರಾರಂಭವಾದ ತರಬೇತಿ ಕೇಂದ್ರದಲ್ಲಿ ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್ ದೀರ್ಘಾವಧಿ ಕೋರ್ಸು ಅಧ್ಯ್ಯಯನಕ್ಕೆ ಅವಕಾಶ ನೀಡಿದ್ದು ಇದುವರೆಗೆ 150 ವಿದ್ಯಾರ್ಥಿಗಳು ತರಬೇತಿ ಪಡೆದು ರಾಷ್ಟ್ರಮಟ್ಟದ ಪ್ರತಿಷ್ಠಿತ ಕೈಗಾರಿಕೆ ಉದ್ಯಮಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ನೌಕರಿ ಅವಕಾಶ ಲಭಿಸಿದೆ.
ಟೂಲ್ ಮತ್ತು ಡೈ ಮೇಕಿಂಗ್ ಕೋರ್ಸಿಗೆ ಪ್ರತಿ ವರ್ಷ 30 ವಿದ್ಯಾರ್ಥಿಗಳಿಗೆ ಮಾತ್ರÀ ಪ್ರವೇಶಕ್ಕೆ ಅವಕಾಶವಿದೆ. ಈ ಕೋರ್ಸು ವ್ಯಾಸಂಗಮಾಡಿದ ವಿದ್ಯಾರ್ಥಿಗಳಿಗೆ ದೇಶವಿದೇಶಗಳಲ್ಲು ಹೆಚ್ಚಿನÀ ಉದ್ಯೋಗ ಅವಕಾಶ ಇರುವ ಹಿನ್ನಲೆಯಲ್ಲಿ ಸಹಜವಾಗಿ ಕೋರ್ಸು ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಇದೆ. ಜಿಲ್ಲೆಯಲ್ಲಿ ಇಂತಹ ಕೋರ್ಸು ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿರುವುದು ವರದಾನವೆಂದೆ ಭಾವಿಸಬಹುದು.
ತರಬೇತಿ ಕೇಂದ್ರದಲ್ಲಿ ಇತರೆ ಸರ್ಟಿಫೈಡ್ ಡಿಪ್ಲೊಮಾ ಕೋರ್ಸು ವ್ಯಾಸಂಗಮಾಡಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಟೂಲ್ ಮ್ಯಾನುಪ್ಯಾಕ್ಚರಿಂಗ್, ಟೂಲ್ ರೂಂ ಮೆಷಿನಿಷ್ಟ್, ಟೂಲ್ ಅಂಡ್ ಡೈ ಟೆಕ್ನಿಷಿಯನ್ ಕೋರ್ಸುಗಳಲ್ಲಿ ತರಬೇತಿ ನೀಡಲಾಗುತ್ತಿದೆ.
ತರಬೇತಿ ಕೇಂದ್ರವು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಾಯೋಜನೆಯಡಿ ವಿಶೇಷಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಟೂಲ್ ರೂಂ ಮೆಷಿನಿಷ್ಟ್, ಸಿ.ಎನ್.ಸಿ ಟೆಕ್ನಾಲಜಿಸ್ಟ್ ಕ್ಯಾಡ್/ಕ್ಯಾಮ್ ಸ್ಪೆಷಲಿಸ್ಟ್, ಟರ್ನರ್, ಮಿಲ್ಲರ್ ವಿಷಯದಲ್ಲಿ ಅಲ್ಪಾವಧಿಯ ತರಬೇತಿಯನ್ನು ನೀಡುತ್ತಿದೆ.
ಪೌರಾಡಳಿತ ನಿರ್ದೇಶನಾಲಯ ಪ್ರಾಯೋಜನೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ನಲ್ಮ್) ಯೋಜನೆಯಡಿ ಸಿ.ಎನ್.ಸಿ.ಟರ್ನಿಂಗ್, ಸಿ.ಎನ್.ಸಿ ಮಿಲ್ಲಿಂಗ್, ಕ್ಯಾಡ್/ಸಾಲಿಡ್ ವಕ್ರ್ಸ, ಟರ್ನರ್, ಮಿಲ್ಲರ್, ಗ್ರೈಂಡರ್ ವಿಷಯದಲ್ಲಿ ಅಲ್ಪಾವಧಿಯ ತರಬೇತಿಯನ್ನು ಪಟ್ಟಣ ಪಂಚಾಯಿತಿ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳಿಗೆ ಕೊಡಲಾಗುತ್ತಿದೆ.
ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಟೂಲ್ ರೂಂ ಮೆಷಿನಿಷ್ಟ್, ಸಿ.ಎನ್.ಸಿ ಟರ್ನಿಂಗ್ ಮೆಷಿನ್ ಆಪರೇಟರ್, ಸಿ.ಎನ್.ಸಿ ಮಿಲ್ಲಿಂಗ್ ಮೆಷಿನ್ ಆಪರೇಟರ್ ತರಬೇತಿಯನ್ನು ಗ್ರಾಮೀಣ ಅಭ್ಯರ್ಥಿಗಳು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ನೂತನ ಸೌಕರ್ಯ, ತಂತ್ರ ವಿಧಾನಗಳನ್ನು ಬಳಸಿಕೊಂಡು ಕೈಗಾರಿಕೆಗಳಲ್ಲಿ ಗರಿಷ್ಠ ಉತ್ಪಾದನೆಗಾಗಿ ತರಬೇತಿ ಹಾಗೂ ಆವಿಷ್ಕಾರಕ್ಕಾಗಿ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವ ಮಹತ್ತರ ಗುರಿಯೊಂದಿಗೆ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಆರಂಭವಾಗಿದೆ. ಉನ್ನತ ಗುಣಮಟ್ಟದ ತರಬೇತಿಯನ್ನು ನೀಡುತ್ತಿರುವ ಕೇಂದ್ರದ ಮುಖ್ಯ ಉದ್ದೇಶವು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಅಭ್ಯರ್ಥಿಗಳು ಆರ್ಥಿಕ ಸ್ವಾವಲಂಬನೆ ಸಾಧಿಸಲು ಬೇಕಿರುವ ತರಬೇತಿ ತಂತ್ರಜ್ಝಾನ ಕ್ರಮಗಳನ್ನು ರೂಪಿಸುವುದು ಆಗಿದೆ.
.ಗುಂಡ್ಲುಪೇಟೆ ಪಟ್ಟಣದ ಹೊಸೂರು ರಸ್ತೆಯಲ್ಲಿರುವ ದುಂದಾಸನಪುರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕೋರ್ಸುಗಳ ಪ್ರವೇಶಕ್ಕಾಗಿ ಈಗಾಗಲೇ ಅರ್ಜಿಗಳನ್ನು ವಿತರಿಸಲಾಗುತ್ತಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 7ರೊಳಗೆ ಸಲ್ಲಿಸಬೇಕಿದೆ. ಉದ್ಯೋಗಾವಕಾಶಗಳನ್ನು ಒದಗಿಸುವ ಕೋರ್ಸುಗಳ ಅಧ್ಯ್ಯಯನಕ್ಕೆ ಅಭ್ಯರ್ಥಿಗಳು ಮುಂದೆ ಬರಬೇಕು. ಜಿಲ್ಲೆಯ ಏಕೈಕ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಯೋಜನವನ್ನು ಪೂರ್ಣಪ್ರಮಾಣದಲ್ಲಿ ಪಡೆದುಕೊಳ್ಳಬೇಕು ಎಂದು ಪ್ರಾಂಶುಪಾಲರಾದ ಗಣಪತಿ ಎಸ್. ಮೇತ್ರಿ ಮನವಿ ಮಾಡುತ್ತಾರೆ.
ವಿವರಗಳಿಗೆ ದೂರವಾಣಿ 08229-222344, ಅಥವಾ ಮೊಬೈಲ್ 9880800692 ಸಂಪರ್ಕಿಸುವಂತೆಯು ಅವರು ಮಾಹಿತಿ ನೀಡಿದ್ದಾರೆÉ.
ಜೂನ್ 4ರಂದು ನಗರದಲ್ಲಿ ವಿಶ್ವಪರಿಸರ ದಿನಾಚರಣೆ: ವಿವಿಧ ಕಾರ್ಯಕ್ರಮ ಆಯೋಜನೆ.
ಚಾಮರಾಜನಗರ: ಜೂನ್3- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಓ.ಡಿ.ಪಿ ಸಂಸ್ಥೆ ಮತ್ತು ರಂಗವಾಹಿನಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್4ರಂದು ನಗರದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರದಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಶಾಲಾ ವಿದ್ಯಾರ್ಥಿಗಳಿಗಾಗಿ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ದೆ ನಡೆಯಲಿದೆ. ಈ ಕಾರ್ಯಕ್ರವನ್ನು ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಉದ್ಘಾಟಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕರಾದ ಪಿ.ಮಮತ ಬಹುಮಾನ ವಿತರಿಸುವವರು.
ಮದ್ಯಾಹ್ನ 4ಗಂಟೆಗೆ ಜಿಲಾಡಳಿತ ಭವನದ ಆವರಣದಲ್ಲಿ 100 ಸಸಿಗಳನ್ನು ನಡೆಯುವ ಕಾರ್ಯಕ್ರಮವಿದ್ದು ಜಿಲ್ಲಾಧಿಕಾರಿ ಬಿ.ರಾಮು ಇದಕ್ಕೆ ಚಾಲನೆ ನೀಡುವವರು.
ಜೂನ್5ರಂದು ಬೆಳಿಗ್ಗೆ 10ಗಂಟೆಗೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಪರಿಸರ ಕುರಿತು ಬೀದಿ ನಾಟಕ್ಕೆ ಪರಿಸರ ಅಧಿಕಾರಿ ಬಿ.ಎಂ.ಪ್ರಕಾಶ್ ಚಾಲನೆ ನೀಡುವವರು. ಜೂನ್ 6ರಂದು ಬೆಳಗ್ಗೆ 9.30 ಗಂಟೆಗೆ ಚಾಮರಾಜೇಶ್ವರ ದೇವಾಲಯ ಬಳಿ ಪರಿಸರ ಜಾಥ ಕಾರ್ಯಕ್ರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್.ಜೈನ್ ಉದ್ಘಾಟಿಸುವರು ಎಂದು ಪ್ರಟಣೆ ತಿಳಿಸಿದೆ.
ಜೂನ್ 16ರಂದು ಕೊತ್ತಲವಾಡಿ ಗ್ರಾಮದಲ್ಲಿ ಅಂಚೆ ಸಂತೆ
ಚಾಮರಾಜನಗರ: ಜೂನ್3- ಅಂಚೆ ಇಲಾಖೆಯು ಗುಂಡ್ಲುಪೇಟೆ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಜೂನ್16ರಂದು ಅಂಚೆ ಸಂÀತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ದಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವವಿಮೆ ಮತ್ತು ಅಂಚೆ ಜೀವವಿಮೆ ಇನ್ನಿತರ ಅಂಚೆ ಇಲಾಖೆಯ ಸಂಬಂಧ ಯೋಜನೆಗಳನ್ನು ಸ್ಥಳದಲ್ಲೇ ಸ್ವಿಕರಿಸಲಾಗುತ್ತದೆ.
ಸುತ್ತಮುತ್ತಲ ಗ್ರಾಮಸ್ಥರು ಅಂಚೆ ಸಂತೆ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳುವಂತೆ ಅಂಚೆ ವಿಭಾಗದ ಅಧೀಕ್ಷರಾದ ಜಿ.ಸಿ. ಶ್ರೀನಿವಾಸ್ ಕೋರಿದ್ದಾರೆ.
ಜೂನ್3, 2016
ನರೇಗಾ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಜಿ.ಪಂ ಸಿ.ಇ.ಓ ಸೂಚನೆ
ಚಾಮರಾಜನಗರ: ಜೂನ್3- ಬಹು ಪ್ರಮುಖ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಪ್ರತಿವಾರ ಗುರಿ ನಿಗಧಿ ಮಾಡಿಕೊಂಡು ಅದರಂತೆ ಸಾಧನೆ ಮಾಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳು ನಿಗಾವಹಿಸಬೇಕು. ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಎಂ.ಐ.ಎಸ್ ಸಂಯೋಜಕರಿಂದ ಪ್ರತಿ ದಿನ ವರದಿ ಪಡೆಯಬೇಕು. ಕಡಿಮೆ ಪ್ರಗತಿ ಇರುವ ಗ್ರಾಮ ಪಂಚಾಯಿತಿಗಳಿಗೆ ಭೇಟಿನೀಡಿ ಹೆಚ್ಚು ಸಾಧನೆಯಾಗಲು ಕ್ರಮವಹಿಸೀಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಸಂಪರ್ಕದಲ್ಲಿದ್ದು, ಗಣನೀಯ ಪ್ರಗತಿಗೆ ಮುಂದಾಗಬೇಕೆಂದು ಹೆಪ್ಸಿಬಾ ರಾಣಿ ತಿಳಿಸಿದರು.
ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪಾರದರ್ಶಕವಾಗಿ ನಿರ್ವಹಿಸಬೇಕು. ಯೋಜನೆ ಸಂಬಂಧ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ಅನುಷ್ಠಾನ ಇಲಾಖೆಗಳಿಗೆ ಸುತ್ತೋಲೆ, ಮಾರ್ಗಸೂಚಿ ಹಾಗೂ ಕೈಪಿಡಿಗಳನ್ನು ವಿತರಿಸಲಾಗಿದೆ. ಈ ಪ್ರಕಾರವೇ ಕಾರ್ಯೋನ್ಮುಖರಾಗಬೇಕು. ಪ್ರತಿ ಕಾಮಗಾರಿವಾರು ಪ್ರತ್ಯೇಕ ಕಡತ ತೆರದು ದಾಖಲೆಗಳನ್ನು ಇಡಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕೆ ಗ್ರಾಮ ಪಂಚಾಯಿತಿಯ ಆಸ್ತಿವಹಿಯಲ್ಲಿ ವಿವರವನ್ನು ನಮೂದಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಪ್ರಮುಖವಾಗಿ ವೈಯಕ್ತಿಕ ಕಾಮಗಾರಿ ನಿರ್ವಹಿಸಬೇಕು. ಜಲಸರಂಕ್ಷಣೆ ಕಾಮಗಾರಿಯಾದ ಚೆಕ್‍ಡ್ಯಾಂ, ಭೂಮಿ ಸಮತಟ್ಟು, ಸಂರಕ್ಷಣೆ, ಅರಣ್ಯೀಕರಣ ಕೆಲಸಗಳಿಗೆ ಒತ್ತು ನೀಡಬೇಕು. ಕಾಮಗಾರಿ ನಡೆಯುವ ಸ್ಥಳದಲ್ಲಿ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಕಾಮಗಾರಿ ಸಾಮಗ್ರಿಗಳ ಬಗ್ಗೆ ದಾಸ್ತಾನು ವಹಿಯಲ್ಲಿ ದಾಖಲಿಸಬೇಕು ಎಂದು ಹೆಪ್ಸಿಬಾ ರಾಣಿ ತಿಳಿಸಿದರು.
ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಗ್ರಾಮಗಳಲ್ಲಿ ಜನರಿಗೆ ಅರಿವು ಮೂಡಿಸುವ ಚಟುವಟಿಕೆ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕು. ಪ್ರತಿ ಗುರುವಾರ ರೋಜ್‍ಗಾರ್ ದಿವಸವನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಯೋಜನೆ ಸಂಬಂಧ ಪ್ರಗತಿ ಪರಿಶೀಲಿಸಿ ವರದಿ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಸೂಚಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಮುನಿರಾಜಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಎಂ.ಐ.ಎಸ್ ಸಂಯೋಜಕರು, ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಜೂ. 6ರಂದು ವಿಶ್ವಪರಿಸರ ದಿನಾಚರಣೆ
ಚಾಮರಾಜನಗರ, ಜೂ. 04 - ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ವತಿಯಿಂದ ಜೂನ್ 6ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ವ್ಯಾಜ್ಯಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್. ಮಳವಳ್ಳಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸುವರು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಂ. ಭೃಂಗೇಶ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ಪಿ. ನಂದೀಶ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಡಿ. ರಾಘವೇಂದ್ರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದÉ.
ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 04 - ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿ ತರಬೇತಿಗೆ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಎಲೆಕ್ಟ್ರೀಷಿಯನ್, ಫಿಟ್ಟರ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಐಟಿಇಎಸ್‍ಎಂ, ಟರ್ನರ್, ಎಂಆರ್‍ಎಸಿ, ಮೆಕಾನಿಕ್ ಡೀಸೆಲ್, ಡ್ರೆಸ್ ಮೇಕಿಂಗ್, ಎಂಎಂವಿ ವಿಷಯಗಳಲ್ಲಿ ತರಬೇತಿ ಪಡೆಯಬಹುದಾಗಿದೆ.
ಎಸ್‍ಎಸ್‍ಎಲ್‍ಸಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಕೆಗೆ ಜೂನ್ 6 ಕಡೆಯ ದಿನವಾಗಿದೆ. ವಿವರಗಳಿಗೆ ವೆಬ್ ಸೈಟ್ ತಿತಿತಿ.emಠಿಣಡಿg.ಞಚಿಡಿ.ಟಿiಛಿ.iಟಿ ಮತ್ತು ತಿತಿತಿ.ಜeಣಞಚಿಡಿ.ಛಿom/ಚಿಜmissioಟಿ-2016 ನೋಡಬಹುದು.
ಹನೂರು : ಕೌಶಲ್ಯ ಅಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 04 (ಕರ್ನಾಟಕ ವಾರ್ತೆ):- ಹನೂರು ಪಟ್ಟಣ ಪಂಚಾಯಿತಿಯು ದೀನ್‍ದಯಾಳು ಅಂತ್ಯೋದಯ ಯೋಜನೆ ನಲ್ಮ್ ಅಭಿಯಾನದಡಿ ನೀಡಲಿರುವ ಸ್ವಯಂ ಉದ್ಯೋಗ ಮತ್ತು ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನಿಸಿದೆ.
ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಜೂನ್ 8ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಪಟ್ಟಣ ಪಂಚಾಯಿತಿ ಕಚೇರಿ ಸಂಪರ್ಕಿಸುವಂತೆ ಮುಖ್ಯಾಧಿಕಾರಿ ತಿಳಿಸಿದ್ದಾರÉ.
ಗುಂಡ್ಲುಪೇಟೆ : ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 04 - ಗುಂಡ್ಲುಪೇಟೆ ಪಟ್ಟಣದಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
5 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುವ ಹಿಂದುಳಿದ ಪ್ರವರ್ಗಗಳಿಗೆ ಸೇರಿದ ವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ.
ಅರ್ಜಿಗಳನ್ನು ವಿದ್ಯಾರ್ಥಿನಿಲಯ ಮೇಲ್ವಿಚಾರಕರು ಅಥವಾ ಗುಂಡ್ಲುಪೇಟೆ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಅವರಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 10 ರೊಳಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ಕೊಳ್ಳೇಗಾಲ : ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 04:- ಕೊಳ್ಳೇಗಾಲ ತಾಲೂಕಿನ ವಿವಿಧೆಡೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಪರಿಶಿಷ್ಟ ಜಾತಿಯ ಮೆಟ್ರಿಕ್ ಪೂರ್ವ ಬಾಲಕರ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಸಂಬಂಧಪಟ್ಟ ವಿದ್ಯಾರ್ಥಿನಿಲಯ ಅಥವಾ ಕೊಳ್ಳೇಗಾಲ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 8 ರೊಳಗೆ ಸಲ್ಲಿಸಬೇಕು. ವಿವರಗಳಿಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಗುಂಡ್ಲುಪೇಟೆ : ವಿವಿಧ ವಿದ್ಯಾರ್ಥಿನಿಲಯ, ಆಶ್ರಮಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 04 - ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಿದ್ಯಾರ್ಥಿನಿಲಯ ಹಾಗೂ ಆಶ್ರಮ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಗುಂಡ್ಲುಪೇಟೆ ಪಟ್ಟಣದ ಬಾಲಕರ ವಿದ್ಯಾರ್ಥಿನಿಲಯ, ಬಾಲಕಿಯರ ವಿದ್ಯಾರ್ಥಿನಿಲಯ, ಎಸ್‍ಟಿ ಬಾಲಕಿಯರ ವಿದ್ಯಾರ್ಥಿನಿಲಯ, ಕಬ್ಬಳ್ಳಿಯಲ್ಲಿರುವ ಬಾಲಕರ ವಿದ್ಯಾರ್ಥಿನಿಲಯ, ಬಾಲಕಿಯರ ವಿದ್ಯಾರ್ಥಿನಿಲಯ, ಬೊಮ್ಮಲಾಪುರ, ಹಂಗಳ, ಬಾಚಹಳ್ಳಿಯಲ್ಲಿರುವ ಬಾಲಕರ ವಿದ್ಯಾರ್ಥಿನಿಲಯ, ಬೇಗೂರಿನಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯ, ಬಂಡೀಪುರ, ಮದ್ದೂರಿನಲ್ಲಿರುವ ಎಸ್‍ಟಿ ಆಶ್ರಮ ಶಾಲೆಗೆ ಪ್ರವೇಶ ನೀಡಲಾಗುತ್ತದೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ 6 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುವವರು ಅರ್ಜಿ ಸಲ್ಲಿಸಬಹುದು. ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಆಶ್ರಮ ಶಾಲೆಗಳಲ್ಲಿ 1ನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ. ಆಶ್ರಮ ಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗೂ ಎಸ್‍ಟಿ ವಿದ್ಯಾರ್ಥಿಗಳಿಗೆ ದಾಖಲು ಮಾಡಿಕೊಳ್ಳಲಾಗುತ್ತದೆ.
ಅರ್ಜಿಗಳನ್ನು ಗುಂಡ್ಲುಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಆಯಾ ವಿದ್ಯಾರ್ಥಿನಿಲಯಗಳಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 10 ರೊಳಗೆ ಆಯಾ ನಿಲಯಗಳ ಮೇಲ್ವಿಚಾರಕರಿಗೆ ಸಲ್ಲಿಸಬೇಕು
ಕೊಳ್ಳೇಗಾಲ : ವಿವಿಧ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 04- ಕೊಳ್ಳೇಗಾಲದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2016-17ನೇ ಸಾಲಿಗೆ 4 ವೃತ್ತಿ ತರಬೇತಿ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯುತ್ ಕರ್ಮಿ, ವಿದ್ಯುನ್ಮಾನ ದುರಸ್ತಿದಾರ, ಜೋಡಣೆಗಾರ, ಸೀವಿಂಗ್ ಟೆಕ್ನಾಲಜಿ ವಿಷಯ ತರಬೇತಿಗೆ ಅರ್ಜಿ ಸಲ್ಲಿಸಬಹುದು. ವಿವರಗಳಿಗೆ ವೆಬ್ ಸೈಟ್ ತಿತಿತಿ.emಠಿಣಡಿg.ಞಚಿಡಿ.ಟಿiಛಿ.iಟಿ ಅಥವಾ ತಿತಿತಿ.ಜeಣಞಚಿಡಿಟಿಚಿಣಚಿಞಚಿ.oಡಿg.iಟಿ ನೊಡಬಹುದು. ದೂರವಾಣಿ ಸಂಖ್ಯೆ 08224-254936 ಸಂಪರ್ಕಿಸಿಯೂ ಪ್ರಾಚಾರ್ಯರಿಂದ ಮಾಹಿತಿ ಪಡೆಯುವಂತೆ ಪ್ರಕಟಣೆ ತಿಳಿಸಿದೆ.
ಜೂ. 7ರಿಂದ ಶಾಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ
ಚಾಮರಾಜನಗರ, ಜೂ. 04 (ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2016-17ನೇ ಸಾಲಿಗೆ ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ವಿತರಿಸಲಿದ್ದು ವಿದ್ಯಾರ್ಥಿಗಳು ನಿಗದಿತ ಶುಲ್ಕದೊಂದಿಗೆ ತಮ್ಮ ಶೈಕ್ಷಣಿಕ ಸಂಸ್ಥೆಗಳ ಮೂಲಕ ನಿಗಮಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಸಿದೆ.
ಮೊದಲನೇ ಹಂತದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜೂನ್ 7 ರಿಂದ ಶೈಕ್ಷಣಿಕ ಸಂಸ್ಥೆಗಳ ಮೂಲಕ ಬಸ್ ಪಾಸ್‍ಗಳನ್ನು ವಿತರಿಸಲಿದೆ. ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿ ಹಾಗೂ ನಿಗದಿತ ಶುಲ್ಕದೊಂದಿಗೆ ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆ ಮೂಲಕ ನಿಗಮಕ್ಕೆ ಸಲ್ಲಿಸಿ ಬಸ್‍ಪಾಸ್ ಪಡೆದುಕೊಳ್ಳಬೇಕು. ಶೈಕ್ಷಣಿಕ ಸಂಸ್ಥೆಯಿಂದ ವಾಸಸ್ಥಳಕ್ಕೆ 60 ಕಿ.ಮೀ. ಗರಿಷ್ಟ ಅಂತರವಿರುವ ವಿದ್ಯಾರ್ಥಿಗಳು ಬಸ್‍ಪಾಸ್ ಪಡೆಯಬಹುದು ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ್ಲ ತಿಳಿಸಿದ್ದಾರೆ.
ಮನೋವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿ ಸಂಪರ್ಕ
ಚಾಮರಾಜನಗರ, ಜೂ. 04 :- ಕರ್ನಾಟಕ ರಾಜ್ಯ ಮುಕ್ತ ವಿವಿ ಮನೋವಿಜ್ಞಾನ ಅಧ್ಯಯನ ವಿಭಾಗವು 2015-16ನೇ ಸಾಲಿನ ಅಂತಿಮ ಬಿಎ ಮನೋವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿ ಸಂಪರ್ಕ ಕಾರ್ಯಕ್ರಮವನ್ನು, ಜೂನ್ 7 ರಿಂದ 12ರವರೆಗೆ ಬೆಂಗಳೂರಿನ ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹಾಗೂ ಮೈಸೂರಿನ ಮುಕ್ತ ವಿವಿ ಆವರಣದ ವಿಜ್ಞಾನ ಭವನದಲ್ಲಿ ಜೂನ್ 15 ರಿಂದ 20ರವರೆಗೆ ಏರ್ಪಡಿಸಿದೆ.
ಜೂನ್ 12ರಂದು ಬೆಂಗಳೂರಿನಲ್ಲಿ, ಜೂನ್ 20ರಂದು ಮೈಸೂರಿನಲ್ಲಿ ಪ್ರಾಯೋಗಿಕ ಪರೀಕ್ಷೆ ನಿಗದಿ ಮಾಡಿದೆ. ಮನೋವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡಿರುವ ಅಂತಿಮ ಬಿಎ ವಿದ್ಯಾರ್ಥಿಗಳು ಪ್ರಾಯೋಗಿಕ ತರಗತಿ ಸಂಪರ್ಕ ಕಾರ್ಯಕ್ರಮ ಮತ್ತು ಪರೀಕ್ಷೆಗೆ ಹಾಜರಾಗುವಂತೆ ವಿವಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಎಸ್. ಮಹದೇವ ತಿಳಿಸಿದ್ದಾರೆ.
ವಿಶ್ವಪರಿಸರ ದಿನಾಚರಣೆ : ಜಿಲ್ಲಾಡಳಿತದಿಂದ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಚಾಲನೆ
ಚಾಮರಾಜನಗರ, ಜೂ. 04 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಂಗವಾಹಿನಿ ಹಾಗೂ ಒಡಿಪಿ ಸಂಸ್ಥೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಇಂದು ನಗರದಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾಡಳಿತ ಭವನದ ಆವರಣದಲ್ಲಿ ವಿವಿಧ ಫಲಪುಷ್ಪಗಳ 100 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಬಿ.ರಾಮು ಚಾಲನೆ ನೀಡಿದರು. ತಾವೇ ಸ್ವತಃ ಗಿಡ ನೆಟ್ಟು ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಬಿ.ರಾಮು ಇತರೆ ಅಧಿಕಾರಿಗಳಿಗೂ ಗಿಡ ನೆಡುವ ಕೆಲಸಕ್ಕೆ ಮಾದರಿಯಾದರು. ಬಳಿಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಗಿಡ ನೆಟ್ಟು ನೀರೆರೆದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಬಿ.ರಾಮು ಅವರು ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲೂ ಈ ಹಿಂದಿನ ಸಮಯಕ್ಕೆ ಹೋಲಿಸಿದರೆ ಇತ್ತೀಚೆಗೆ ತಾಪಮಾನದಲ್ಲಿ ಗಣನೀಯವಾಗಿ ಹೆಚ್ಚಳ ದಾಖಲಾಗಿರುವುದು ಕಂಡುಬಂದಿದೆ. ಹೀಗಾಗಿ ಪರಿಸರ ಸಮತೋಲನಕ್ಕೆ ನಾವೆಲ್ಲರೂ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎಂದರು.
ವಿಶ್ವ ಪರಿಸರ ದಿನವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ 100 ಗಿಡಗಳನ್ನು ನೆಡುವ ಮಹತ್ವದ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದು ಜಿಲ್ಲಾಡಳಿತ ಭವನಕ್ಕೆ ಮಾತ್ರ ಸೀಮಿತಗೊಳಿಸುವುದಿಲ್ಲ. ತಾಲೂಕು ಮಟ್ಟದ ಕಚೇರಿಗಳಲ್ಲೂ ಸಸಿ ಗಿಡಗಳನ್ನು ನೆಟ್ಟು ಉತ್ತಮ ಪರಿಸರ ನಿರ್ಮಾಣಕ್ಕೆ ಮುಂದಾಗಲಿದ್ದೇವೆ. ಹಸಿರೀಕರಣಕ್ಕೆ ಒತ್ತು ನೀಡಲಿದ್ದೇವೆ. ವಿಶೇಷವಾಗಿ ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅರಣ್ಯೀಕರಣ ಕಾರ್ಯಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮೊದಲು ಜಿಲ್ಲಾಡಳಿತ ಭವನದ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿ ಇರುವ ಉದ್ಯಾನವನದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಪರಿಸರ ಕುರಿತು ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಸ್ವತಃ ಕ್ಯಾನ್‍ವಾಸ್ ಮೇಲೆ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹೆಪ್ಸಿಬಾರಾಣಿ ಪರಿಸರ ಕಾಳಜಿ ಪ್ರತಿಯೊಬ್ಬರಲ್ಲೂ ಇರಬೇಕು. ದೈನಂದಿನ ಜೀವನದಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಪರಿಸರ ಸಂರಕ್ಷಣೆ ಮಾಡಿದರೆ ನಮ್ಮನ್ನು ಪರಿಸರವೇ ಕಾಪಾಡುತ್ತದೆ. ಹೀಗಾಗಿ ಈ ಸಂದೇಶವನ್ನು ವ್ಯಾಪಕವಾಗಿ ತಲುಪಿಸಬೇಕಿದೆ ಎಂದರು.
ಪರಿಸರ ಪÉೂೀಷಣೆ ಜಾಗೃತಿಗಾಗಿ ವಿಶ್ವಸಂಸ್ಥೆಯು ವಿಶ್ವಪರಿಸರ ದಿನಾಚರಣೆ ಆರಂಭಿಸಿತು. ಪ್ರತೀವರ್ಷ ಜೂನ್ ಮಾಹೆಯಲ್ಲಿ ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಎಲ್ಲೆಡೆ ನಡೆಸಲಾಗುತ್ತಿದೆ. ಇದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪರಿಸರ ಕುರಿತ ಸಂರಕ್ಷಣೆ ಅರಿವು ನಿರಂತರವಾಗಿ ಇರಬೇಕು. ಉತ್ಸಾಹ ಸ್ಪೂರ್ತಿಯಿಂದ ಸುತ್ತಮುತ್ತಲ ಪರಿಸರವನ್ನು ಕಾಪಾಡಬೇಕು ಎಂದು ಹೆಪ್ಸಿಬಾರಾಣಿ ತಿಳಿಸಿದರು.
ಉತ್ತಮ ಪರಿಸರವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ತಾವೂ ಸಹ ಉತ್ಸುಕರಾಗಿದ್ದು 60 ಸಸಿಗಳನ್ನು ನೆಡುವ ಉದ್ದೇಶ ಹೊಂದಿದ್ದೇನೆ. ಪ್ರತಿಯೊಬ್ಬರೂ ಸೇರಿ ಪರಿಸರ ಸಂರಕ್ಷಿಸುವ ಕಾರ್ಯದಲ್ಲಿ ಭಾಗಿಯಾದರೆ ಮಹತ್ವದ ಉದ್ದೇಶ ಯಶಸ್ವಿಯಾಗುತ್ತದೆ ಎಂದು ಹೆಪ್ಸಿಬಾರಾಣಿ ಹೇಳಿದರು.
ಉದ್ಘಾಟನೆ ಕಾರ್ಯಕ್ರಮದ ಬಳಿಕ ನೂರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಉದ್ಯಾನವನದಲ್ಲಿ ಕುಳಿತು ಪರಿಸರ ಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದರು.
ಪರಿಸರ ಅಧಿಕಾರಿ ಪ್ರಕಾಶ್, ಉಪಪರಿಸರ ಅಧಿಕಾರಿ ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಮತ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸರಸ್ವತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಭಾಸ್ಕರ್, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ನಾಗರಾಜು, ಹಿರಿಯ ಸಹಾಯಕ ನಿರ್ದೇಶಕರಾದ ಡಾ. ಆನಂದ್, ರಂಗವಾಹಿನಿ ಸಂಸ್ಥೆಯ ಅಧ್ಯಕ್ಷರಾದ ಸಿ.ಎಂ. ನರಸಿಂಹಮೂರ್ತಿ, ಕಲಾವಿದರಾದ ಸಂಪತ್‍ಕುಮಾರ್, ಕಲೆ ನಟರಾಜು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೊಣೆಗಾರಿಕೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಬಿ.ರಾಮು ಸೂಚನೆ.
ಚಾಮರಾಜನಗರ ಜೂನ್ 04 ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ ಕಾರ್ಯಕ್ಕಾಗಿ ನೇಮಕವಾಗಿರುವ ಅಧಿಕಾರಿ, ಸಿಬ್ಬಂದಿ ಯಾವುದೇ ಗೊಂದಲಕ್ಕೆ ಅವಕಾಶವಾಗದ ಹಾಗೆ ಹೊಣೆಗಾರಿಕೆಯಿಂದ ಕರ್ತವ್ಯನಿರ್ವಹಿಸಬೇಕೆಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ರಾಮು ಸೂಚನೆ ನೀಡಿದರು.
ನಗರದ ಜಿಲ್ಲಾ ಆಡಳಿತ ಭವನದಲ್ಲಿರುವ ಕೆ.ಡಿ.ಪಿ.ಸಭಾಂಗಣದಲ್ಲಿ ಇಂದು ಮತಗಟ್ಟೆಗಳಿಗೆ ನೇಮಕ ಮಾಡಿರುವ ಪ್ರಿಸೈಡಿಂಗ್ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತದಾನ ಕೇಂದ್ರದಲ್ಲಿ ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಬೇಕು. ಚುನಾವಣಾ ಸಂಬಂಧ ಚುನಾವಣಾ ಆಯೋಗವು ಹೊರಡಿಸಿರುವ ಕೈಪಿಡಿಯನ್ನು ಸಂಪೂರ್ಣವಾಗಿ ಮನನ ಮಾಡಿಕೊಂಡು ಆ ಪ್ರಕಾರವೇ ಕೆಲಸ ನಿರ್ವಹಿಸಬೇಕು. ಯಾವುದೇ ಲೋಪಕ್ಕೆ ಅವಕಾಶವಿಲ್ಲದಂತೆ ಕರ್ತವ್ಯ ಮಾಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಮತಗಟ್ಟೆಯಲ್ಲಿ ಮುಕ್ತ ಹಾಗೂ ನಿಪ್ಷಕ್ಷಪಾತವಾಗಿ ಮತದಾನ ಕಾರ್ಯನಡೆಯುವಂತೆ ನೋಡಿಕೊಳ್ಳುವುದು ಪ್ರಿಸೈಡಿಂಗ್ ಅಧಿಕಾರಿಗಳ ಮುಖ್ಯ ಜವಾಬ್ದಾರಿಯಾಗಿದೆ. ಹೀಗಾಗಿ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ ಮಾತನಾಡಿ ಮತದಾನದ ಹಿಂದಿನ ದಿನದಂದು ಅಂದರೆ ಮಸ್ಟರಿಂಗ್ ನಡೆಯುವ ದಿನದಂದು ಚೆಕ್‍ಲಿಸ್ಟ್ ಪ್ರಕಾರ ಎಲ್ಲಾ ಮತದಾನ ಸಾಮಗ್ರಿಗಳು ಇದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ನಿಗಧಿತ ಸಮಯದಲ್ಲಿ ಮಸ್ಟರಿಂಗ್ ಸ್ಥಳಕ್ಕೆ ಹಾಜರಿರಬೇಕು ಎಂದರು.
ಮತದಾನದ ವೇಳೆ ಮತ ಚಲಾಯಿಸುವ ಮತದಾರರ ಎಡಗೈ ಮಧÀ್ಯದ ಬೆರಳಿಗೆ ಶಾಯಿ ಹಚ್ಚಲು ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಅದರಂತೆ ಕ್ರಮ ಕೈಗೊಳ್ಳಬೇಕು. ಪ್ರಾಶಸ್ತ್ಯಾನುಸಾರ ಕ್ರಮದಲ್ಲಿ ಅಂಕಿಗಳಲ್ಲಿ ನೇರಳೆ ಬಣ್ಣದ ಸ್ಕೆಚ್‍ಪೆನ್‍ನಲ್ಲಿ ಮತಚಲಾಯಿಸುವ ಬಗ್ಗೆ ಮತದಾರರಿಗೆ ತಿಳಿಸಬೇಕೆಂದು ಭಾರತಿಯವರು ತಿಳಿಸಿದರು.
ಮತಗಟ್ಟೆ ಅಧಿಕಾರಿ ನಿರ್ವಹಿಸಬೇಕಿರುವ ಕಾರ್ಯವಿಧಾನಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದ ಭೂದಾಖಲೆಗಳ ಉಪ ನಿರ್ದೇಶಕರಾದ ಸೋಮಸುಂದರ ರವರು ಮತಗಟ್ಟೆ ಸಿಬ್ಬಂದಿ ಉಮೇದುವಾರರ ಪೊಲಿಂಗ್ ಏಜೆಂಟರುಗಳು ಕುಳಿತುಕೊಳ್ಳುವ ಸ್ಥಳವನ್ನು ಮತ್ತು ವೋಟಿಂಗ್ ಕಂಪಾರ್ಟ್‍ಮೆಂಟ್ ಇಡುವ ಸ್ಥಳವನ್ನು ಮತದಾನದ ಹಿಂದಿನ ದಿನವೇ ನಿರ್ಧರಿಸಬೇಕು ಎಂದರು.
ಸಭೆಯಲ್ಲಿ ಚುನಾವಣಾ ಕೆಲಸಕ್ಕೆ ನಿಯೋಜಿತರಾಗಿರುವ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.
ಯಶಸ್ವಿಯಾಗಿ ನಡೆದ ಪರಿಸರ ಜಾಗೃತಿ ಜಾಥಾ
ಚಾಮರಾಜನಗರ, ಜೂ. 06 - ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳ ವತಿಯಿಂದ ನಗರದಲ್ಲಿ ಇಂದು ಜಾಗೃತಿ ಜಾಥಾ ನಡೆಯಿತು.
ಚಾಮರಾಜೇಶ್ವರ ದೇವಾಲಯ ಬಳಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್¯ಪಾಟಿ ಅವರು ವಿದ್ಯಾರ್ಥಿಗಳು ನಡೆಸಿದ ಪರಿಸರ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಬಳಿಕ ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ತಂಡದವರು ಶಾಲಾ ಬ್ಯಾಂಡ್ ವಾದನದೊಡನೆ ಪರಿಸರ ಕುರಿತು ಅರಿವು ಮೂಡಿಸುವ ಜಾಥಾದಲ್ಲಿ ಹೆಜ್ಜೆ ಹಾಕಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರೂ ಸಹ ವಿದ್ಯಾರ್ಥಿಗಳ ಜಾಗೃತಿ ಜಾಥಾದಲ್ಲಿ ಜತೆಗೂಡಿ ಮುನ್ನಡೆದರು.
ನೂರಾರು ಸಂಖ್ಯೆಯಲ್ಲಿ ಸಾಗಿದ ಶಾಲಾವಿದ್ಯಾರ್ಥಿಗಳು ‘ಮನೆಗೊಂದು ಮರ ಊರಿಗೊಂದು ವನ’, ‘ಮರಗಳನ್ನು ಬೆಳಸಿ ನಾಡನ್ನು ಉಳಿಸಿ’, ‘ಕಾಡಿದ್ದರೆ ನಾಡು ನಾಡಿದ್ದರೆ ನಾವು’ ಹೀಗೆ ಹತ್ತುಹಲವು ಪ್ರಕೃತಿ ಉಳಿಸಿ ಪೋಷಣೆ ಮಾಡುವ ಮಹತ್ವದ ಸಂದೇಶವನ್ನು ಸಾರುವ ಫಲಕಗಳನ್ನು ಹಿಡಿದಿದ್ದರು.
ಮುಖ್ಯ ಬೀದಿಗಳಲ್ಲಿ ಸಾಗಿದ ವಿದ್ಯಾರ್ಥಿಗಳು ಪರಿಸರ ಕಾಪಾಡುವ ಘೋಷಣೆಯನ್ನು ಸಹ ಮೊಳಗಿಸಿದರು. ವಿದ್ಯಾರ್ಥಿಗಳೊಂದಿಗೆ ಅಧಿಕಾರಿಗಳು ಸಹ ಸಾಥ್ ನೀಡಿದರು. ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರಿಂದ ಜಾಥಾ ಕಾರ್ಯಕ್ರಮವು ಜನರ ಗಮನ ಸೆಳೆಯಲು ಯಶಸ್ವಿಯಾಯಿತು. ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ಜಾಥಾ ಜಿಲ್ಲಾಡಳಿತ ಭವನದ ಆವರಣದಲ್ಲಿ ಮುಕ್ತಾಯವಾಯಿತು.
ಜಿಲ್ಲ್ವಾ ಪರಿಸರ ಅಧಿಕಾರಿ ಪ್ರಕಾಶ್, ಉಪ ಪರಿಸರಾಧಿಕಾರಿ ಉಮಾಶಂಕರ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಡಾ. ಆನಂದ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಪರಿಸರ ಸಮತೋಲನ ಕಾಯ್ದುಕೊಳ್ಳದಿದ್ದರೆ ಆಪತ್ತು : ಜಿಲ್ಲಾ ನ್ಯಾಯಾಧೀಶರ ಕಳವಳ
ಚಾಮರಾಜನಗರ, ಜೂ. 06 :- ಪರಿಸರ ಸಮತೋಲನ ಕಾಯ್ದುಕೊಳ್ಳದಿದ್ದರೆ ಅರಣ್ಯ ಹಾಗೂ ಅಪರೂಪದ ಪ್ರಾಣಿ ಸಂಕುಲಗಳಿಗೂ ಆಪತ್ತು ಎದುರಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್. ಮಳವಳ್ಳಿ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ವತಿಯಿಂದ ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ವ್ಯಾಜ್ಯಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಿತಿಮೀರಿದ ಪರಿಸರ ಮಾಲಿನ್ಯದಿಂದ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಪರಿಸರ ಸಮತೋಲನ ಕಾಯ್ದುಕೊಳ್ಳಬೇಕಾದರೆ ಶೇ. 33ರಷ್ಟು ಅರಣ್ಯ ಪ್ರದೇಶ ಇರಲೇಬೇಕು. ಆದರೆ ಈ ಪ್ರಮಾಣದಲ್ಲಿ ವನಸಂಪತ್ತು ಇಲ್ಲದಿರುವುದರಿಂದ ಹವಾಮಾನದಲ್ಲಿ ವೈಪರೀತ್ಯವಾಗುತ್ತಿದೆ. ಮಳೆಯ ಪ್ರಮಾಣ ಕ್ಷೀಣಿಸುತ್ತಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಅರಣ್ಯ ನಾಶದಿಂದ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಅರಣ್ಯ ಸಂರಕ್ಷಣೆಯಾಗದಿದ್ದರೆ ಸಸ್ಯಪ್ರಾಣಿ ಸಂಕುಲಗಳು ಮುಂದಿನ ಕಾಲಮಾನದ ಹೊತ್ತಿಗೆ ಮರೆಯಾಗಬಹುದು. ಹೀಗಾಗಿ ಪರಿಸರ ಕಾಳಜಿ ಪ್ರತಿಯೊಬ್ಬರಲ್ಲೂ ಬರಬೇಕು. ಕಾಡು ಉಳಿಸುವುದರ ಜತೆಗೆ ನಮ್ಮ ನೆರೆಹೊರೆಯಲ್ಲೂ ಮರಗಿಡಗಳನ್ನು ಪೋಷಣೆ ಮಾಡಬೇಕು. ಅರಣ್ಯ ಇಲಾಖೆ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸುತ್ತಿದೆ. ಜನತೆ ಈ ಸೌಲಭ್ಯ ಪಡೆದು ಸಸಿ ನೆಟ್ಟು ಅವುಗಳ ಕಾಪಾಡುವ ಜವಾಬ್ದಾರಿ ಹೊಂದಬೇಕು ಎಂದರು.
ನಗರ ಪ್ರದೇಶಗಳಲ್ಲಿ ವಾಹನ ದಟ್ಟಣೆಯಿಂದ ಶುದ್ಧ ಗಾಳಿ ಸೇವನೆಗೂ ಕಂಟಕವಾಗಿದೆ. ಇದರಿಂದ ಉಸಿರಾಟ ಕಾಯಿಲೆಯಿಂದ ಬಳಲುವವರ ಸಂಖ್ಯೆಯೂ ಹೆಚ್ಚಳವಾಗಲಿದೆ. ಮುಂದಿನ ಪೀಳಿಗೆಗೂ ಉತ್ತಮ ಆರೋಗ್ಯ ಹಾಗೂ ಪರಿಸರವನ್ನು ಕಲ್ಪಿಸುವುದು ಎಲ್ಲರ ಕಳಕಳಿಯಾಗಬೇಕು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಂ. ಭೃಂಗೇಶ್ ಮಾತನಾಡಿ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದು ಸಲ್ಲದು. ಮರಗಳನ್ನು ಕಡಿದ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚು ಸಸಿಗಳನ್ನು ನೆಡಬೇಕೆಂಬ ನಿಯಮವಿದೆ. ಇದನ್ನು ಪಾಲನೆ ಮಾಡುವ ಮೂಲಕ ಪರಿಸರ ಸಮತೋಲನ ಕಾಯ್ದುಕೊಳ್ಳಬೇಕು. ಪ್ರಕೃತಿ ದತ್ತವಾದ ಜೀವ ವೈವಿಧ್ಯತೆ ಹಾಗೂ ಆಹಾರ ಸರಪಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ ಅವರು ಪೂರ್ವಿಕರ ಆಹಾರ ಪದ್ಧತಿ ಪರಿಸರ ಪ್ರೇಮವನ್ನು ಪ್ರತಿಯೊಬ್ಬರೂ ಪ್ರಸ್ತುತ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ. ಗಿಡಮರಗಳ ಪೋಷಣೆಯೊಂದಿಗೆ ಪೌಷ್ಠಿಕ ಆಹಾರ ಸೇವನೆಗೂ ಮಹತ್ವ ನೀಡಿದ ಹಿಂದಿನ ಜನರು ದೀರ್ಘಾವಧಿ ಕಾಲ ಆರೋಗ್ಯವಂತರಾಗಿದ್ದರು ಎಂಬುದನ್ನು ಮನಗಾಣಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ಪಿ. ನಂದೀಶ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಡಿ. ರಾಘವೇಂದ್ರ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಚಿನ್ನಸ್ವಾಮಿ, ಹಿರಿಯ ವಕೀಲರಾದ ನರಸಿಂಹಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಇತರೆ ನ್ಯಾಯಾಧೀಶರು ಗಿಡ ನೆಟ್ಟು ನೀರೆರೆದರು.
ಮಹಿಳಾ ಅಭಿವೃದ್ಧಿ ನಿಗಮದಿಂದ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 06 - 2016-17ನೇ ಸಾಲಿಗೆ ಮಹಿಳಾ ಅಭಿವೃದ್ಧಿ ನಿಗಮವು ಮಹಿಳೆಯರಿಗಾಗಿ ಸಾಲಸೌಲಭ್ಯ ಹಾಗೂ ಸಹಾಯಧನ ಒದಗಿಸಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಸಾಲದ ಮೊತ್ತವನ್ನು ಬ್ಯಾಂಕ್ ನೀಡಲಿದೆ. ಇದಕ್ಕೆ ಪೂರಕವಾದ ಸಹಾಯಧನವನ್ನು ಮಹಿಳಾ ಅಭಿವೃದ್ಧಿ ನಿಗಮವು ಕೊಡಲಿದೆ. 18 ರಿಂದ 45ರ ವಯೋಮಿತಿಯೊಳಗಿರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಜೂನ್ 25 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ನಗರದ ಪಿಡಬ್ಲ್ಯೂಡಿ ಕಾಲೋನಿಯಲ್ಲಿರುವ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ (ದೂ.ಸಂ. 08226-222603) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದÉ.
ಜೂ. 17ರಂದು ವಸತಿಶಾಲೆ ಪ್ರವೇಶಕ್ಕೆ 2ನೇ ಹಂತದ ಕೌನ್ಸೆಲಿಂಗ್
ಚಾಮರಾಜನಗರ, ಜೂ. 06 - 2016-17ನೇ ಸಾಲಿಗೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ ವಸತಿ ಶಾಲೆಯ 6ನೇ ತರಗತಿ ಪ್ರವೇಶಕ್ಕೆ ಉಳಿದಿರುವ ಸೀಟುಗಳನ್ನು ಹಂಚಿಕೆ ಮಾಡಲು 2ನೇ ಹಂತದ ಕೌನ್ಸೆಲಿಂಗ್ ಅನ್ನು ಜೂನ್ 17ರಂದು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ನಡೆಸಲಾಗುತ್ತದೆ.
ವಿದ್ಯಾರ್ಥಿಗಳು ಅಗತ್ಯ ಮೂಲ ದಾಖಲೆಗಳೊಂದಿಗೆ ಕೌನ್ಸೆಲಿಂಗ್‍ಗೆ ಹಾಜರಾಗುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜೇಶ್ ಜಿ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಉಚಿತ ಯೋಗ ಶಿಬಿರ
ಚಾಮರಾಜನಗರ, ಜೂ. 06 - ಕೇಂದ್ರ ಆಯುಷ್ ಮಂತ್ರಾಲಯ, ಕೇಂದ್ರೀಯ ಯೋಗ ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ, ಇನ್ನಿತರ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಉಚಿತ ಯೋಗ ಶಿಬಿರವನ್ನು ನಗರದಲ್ಲಿ ಆರಂಭಿಸಲಾಗಿದೆ.
ನಗರದ ಜಿಲ್ಲಾ ಭವನದಲ್ಲಿ ಶ್ರೀ ಪತಂಜಲಿ ಯೋಗ ಮಂದಿರ ಸಹಯೋಗದೊಂದಿಗೆ ಜೂನ್ 21ರವರೆಗೂ ಶಿಬಿರ ಆಯೋಜಿತವಾಗಿದೆ. ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಉಚಿತ ಯೋಗ ತರಬೇತಿ ನೀಡಲಾಗುತ್ತದೆ. ಮಾಹಿತಿಗೆ ಮೊಬೈಲ್ 9449792324 ಅಥವಾ 9242882447 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಡಿಇಡಿ, ಡಿಪಿಇಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 06:- ಪ್ರಸಕ್ತ ಶೈಕ್ಷಣಿಕ ಸಾಲಿನ ಡಿಇಡಿ, ಡಿಪಿಇಡಿ ಕೋರ್ಸಿನ ವ್ಯಾಸಂಗದ ಸರ್ಕಾರಿ ಕೋಟಾ ಸೀಟುಗಳ ಭರ್ತಿಗಾಗಿ ಆನ್ ಲೈನ್ ಮೂಲಕ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಜೂನ್ 30 ಕಡೆಯದಿನವಾಗಿದೆ. ಶುಲ್ಕ ಪಾವತಿಗೆ ಜುಲೈ 4 ಕಡೆಯ ದಿನವಾಗಿದೆ. ವಿವರಗಳಿಗೆ ವೆಬ್ ಸೈಟ್ ತಿತಿತಿ.sಛಿhooಟeಜuಛಿಚಿಣioಟಿ ನೋಡುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಂಡ್ಲುಪೇಟೆ : ವೃತ್ತಿ ತರಬೇತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಚಾಮರಾಜನಗರ, ಜೂ. 06 - ಗುಂಡ್ಲುಪೇಟೆಯ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್ ಕೋರ್ಸು ಹಾಗೂ ಇತರೆ ಸರ್ಟಿಫೈಡ್ ಹಾಗೂ ಅಲ್ಪಾವಧಿ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಸ್ಲಲಿಸುವ ಅವಧಿಯನ್ನು ಜೂನ್ 11ರವರೆಗೆ ವಿಸ್ತರಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಗುಂಡ್ಲುಪೇಟೆ ಪಟ್ಟಣದ ಹೊಸೂರು ರಸ್ತೆಯಲ್ಲಿರುವ ದುಂದಾಸನಪುರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರನ್ನು (08229-222344, ಮೊಬೈಲ್ 9880800692) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದÉ.
ಜೂ. 9ರಂದು ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ
ಚಾಮರಾಜನಗರ, ಜೂ. 0:- ಚೆನ್ನೈನ ಫಸ್ಟ್ ಸೋರ್ಸ್ ಕಂಪನಿಯು ಕನ್ನಡ ವಾಯ್ಸ್ ಪ್ರೋಸೆಸ್ ಮತ್ತು ಟೀಮ್ ಲೀಡರ್ ಸೂಪರ್‍ವೈಸರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಜೂನ್ 9ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ನೇರ ಸಂದರ್ಶನ ಏರ್ಪಡಿಸಿದೆ.
ಏರ್‍ಟೆಲ್‍ನಲ್ಲಿ ಕನ್ನಡ ವಾಯ್ಸ್ ಪ್ರೋಸೆಸ್ ಮತ್ತು ಟೀಂ ಲೀಟರ್ ಸೂಪರ್‍ವೈಸರ್ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತದೆ. ಅಭ್ಯರ್ಥಿಗಳು 18 ರಿಂದ 35ರ ವಯೋಮಿತಿಯೊಳಗಿರಬೇಕು. ಎಸ್‍ಎಸ್‍ಎಲ್‍ಸಿ ಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಸ್ವವಿವರದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗಾಧಿಕಾರಿ ಸಿ.ಎಂ ಉಮಾ (ದೂ.ಸಂ. 08226-224430, ಮೊಬೈಲ್ 08547994717) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ವಿವಿಧ ಸಾಲಸೌಲಭ್ಯ, ಗಂಗಾ ಕಲ್ಯಾಣ ಯೋಜನೆ ಪ್ರಯೋಜನಕ್ಕೆ ವಿಶ್ವಕರ್ಮ ಸಮುದಾಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 06 ( ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮವು ವಿವಿಧ ಸಾಲಸೌಲಭ್ಯ ಹಾಗೂ ಇತರೆ ಯೋಜನೆಗಳಿಗೆ ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪಜಾತಿಗೆ ಸೇರಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪಂಚವೃತ್ತಿ ಅಭಿವೃದ್ಧಿ, ಸ್ವಯಂ ಉದ್ಯೋಗ, ಅರಿವು ಶೈಕ್ಷಣಿಕ ಸಾಲ ಯೋಜನೆ, ನೇರ ಸಾಲ ಯೋಜನೆ, ಗಂಗಾ ಕಲ್ಯಾಣ ಸಾಲ ಯೋಜನೆಗೆ ಆರ್ಥಿಕ ನೆರವು ನೀಡಲಾಗುತ್ತದೆ.
ಅಭ್ಯರ್ಥಿಗಳು 18 ರಿಂದ 55ರ ವಯೋಮಿತಿಯೊಳಗಿರಬೇಕು. ಕುಟುಂಬದ ವಾರ್ಷಿಕ ವರಮಾನವು ಗ್ರಾಮಾಂತರ ಪ್ರದೇಶದವರಾಗಿದ್ದಲ್ಲಿ 40 ಸಾವಿರ ಹಾಗು ಪಟ್ಟಣ ಪ್ರದೇಶದವರಾಗಿದ್ದಲ್ಲಿ 55 ಸಾವಿರ ರೂ.ಗಿಂತ ಕಡಿಮೆ ಇರಬೇಕು. ಅರಿವು ಶೈಕ್ಷಣಿಕ ಸಾಲ ಯೋಜನೆಗೆ ವರಮಾನದ ಮಿತಿಯು 3.5 ಲಕ್ಷ ರೂ. ನಿಗದಿ ಮಾಡಲಾಗಿದೆ.
ಸಾಲಸೌಲಭ್ಯ ಯೋಜನೆ ಪಡೆಯಲು ಇಚ್ಚಿಸುವವರು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ (3ನೇ ಮಹಡಿ, ಕೊಠಡಿ ಸಂಖ್ಯೆ 305)ದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಜೂನ್ 30ರೊಳಗೆ ಅರ್ಜಿ ಪಡೆಯಬಹದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜುಲೈ 17ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ವೆಬ್ ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/ಞvಛಿಜಛಿಟ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
No comments:
Post a Comment