ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ : ಜಿಲ್ಲೆಯಲ್ಲಿ 11 ಮತಗಟ್ಟೆ ಸ್ಥಾಪನೆ
ಚಾಮರಾಜನಗರ, ಜೂ. 07:- ರಾಜ್ಯ ವಿಧಾನ ಪರಿಷತ್ತಿಗೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಜೂನ್ 9ರಂದು ನಡೆಯಲಿರುವ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 11 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿ 2, ಚಾಮರಾಜನಗರ ತಾಲೂಕು ಕಚೇರಿಯಲ್ಲಿ 3, ಯಳಂದೂರು ತಾಲೂಕು ಕಚೇರಿಯಲ್ಲಿ 1, ಕೊಳ್ಳೇಗಾಲ ತಾಲೂಕು ಕಚೇರಿಯಲ್ಲಿ 3 ಮತ್ತು ಹನೂರು ಪಟ್ಟಣದ ವಿಶೇಷ ತಹಸೀಲ್ದಾರ್ ಕಚೇರಿಯಲ್ಲಿ 1 ಹಾಗೂ ರಾಜಸ್ವ ನಿರೀಕ್ಷಕರ ಕಚೇರಿಯಲ್ಲಿ 1 ಮತಗಟ್ಟೆ ತೆರೆಯಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 8832 ಮತದಾರರಿದ್ದಾರೆ. ಇವರಲ್ಲಿ 6768 ಪುರುಷರು, 2064 ಮಹಿಳಾ ಮತದಾರರಿದ್ದಾರೆ. ಜೂನ್ 8ರಂದು ನಗರದ ಜಿಲ್ಲಾಡಳಿತ ಭವನದಲ್ಲಿ ಮಸ್ಟರಿಂಗ್ ಕಾರ್ಯ ನಡೆಯಲಿದೆ.
ಜೂನ್ 9ರಂದು ಮತಗಟ್ಟೆಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮತಗಟ್ಟೆ ಅಧಿಕಾರಿಗಳು ನೀಡುವ ವೈಲೆಟ್ ಸ್ಕೆಚ್ ಪೆನ್‍ನಲ್ಲಿ ಮಾತ್ರವೇ ಪ್ರಾಶಸ್ತ್ಯ ಮತವನ್ನು ನೀಡಲು ಸೂಚಿಸುವಂತೆ ತಿಳಿಸಲಾಗಿದೆ. ಮತದಾರರಿಗೆ ಎಡಗೈ ಮಧ್ಯದ ಬೆರಳಿಗೆ ಶಾಯಿ ಹಚ್ಚಲಾಗುತ್ತದೆ. ಮತ ಎಣಿಕೆಯು ಜೂನ್ 13ರಂದು ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ.
ಚುನಾವಣಾ ಗುರುತಿನ ಚೀಟಿ (ಎಪಿಕ್ ಕಾರ್ಡ್) ಹೊಂದಿಲ್ಲದಿರುವವರು ಗುರುತಿಗಾಗಿ ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ, ರಾಜ್ಯ, ಸಾರ್ವಜನಿಕ ವಲಯ, ಕಂಪನಿಗಳು ಅವರ ನೌಕರರಿಗೆ ನೀಡಿರುವ ಸೇವಾ ಗುರುತಿನ ಪತ್ರ, ಬ್ಯಾಂಕ್, ಅಂಚೆ ಕಚೇರಿ ಪಾಸ್ ಬುಕ್, ಆದಾಯ ತೆರಿಗೆ ಗುರುತಿನ ಪತ್ರ (ಪಾನ್ ಕಾರ್ಡು), ಎನ್‍ಪಿಆರ್ ಅಡಿ ಆರ್‍ಜಿಐ ನೀಡಿರುವ ಸ್ಮಾರ್ಟ್ ಕಾರ್ಡ್, ಆರೋಗ್ಯ ವಿಮೆ ಯೋಜನೆ ಸ್ಮಾರ್ಟ್ ಕಾರ್ಡ್, ಪಿಂಚಣಿ ದಾಖಲೆ, ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ, ಶಸ್ತ್ರಾಸ್ತ್ರ ಪರವಾನಗಿ, ವಿಕಲಚೇತನರ ಪ್ರಮಾಣ ಪತ್ರ, ಮಾಜಿ ಸೈನಿಕರ ಗುರುತಿನ ಚೀಟಿಯಂತಹ ದಾಖಲೆಗಳನ್ನು ಹಾಜರುಪಡಿಸಬಹುದು.
ಚಾ.ನಗರ ತಾಲೂಕು : ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 07:- ಚಾಮರಾಜನಗರ ತಾಲೂಕಿನ ವಿವಿದೆಡೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಿರ್ವಹಣೆಯಾಗುತ್ತಿರುವ ಮೆಟ್ರಿಕ್ ಪೂರ್ವ ವಿವಿಧ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
2016-17ನೇ ಸಾಲಿನಲ್ಲಿ 5 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪ್ರವರ್ಗ 1, 2ಎ, 2ಬಿ, 3ಎ, 3ಬಿ ಹಾಗೂ ಪರಿಶಿಷ್ಟ ಜಾತಿ ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಚಾಮರಾಜನಗರ ಪಟ್ಟಣದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ, ಬಾಲಕರ ವಿದ್ಯಾರ್ಥಿನಿಲಯ, ಶ್ರೀ ಮುರುಘರಾಜೇಂದ್ರ ಅನುದಾನಿತ ಖಾಸಗಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಜೆಎಸ್‍ಎಸ್ ಅನುದಾನಿತ ಅನಾಥಾಲಯ, ವೆಂಕಟಯ್ಯನ ಛತ್ರ, ಅರಕಲವಾಡಿ, ಕಾಗಲವಾಡಿಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅವಕಾಶವಿದೆ.
ವಿದ್ಯಾರ್ಥಿಗಳಿಗೆ ಉಚಿತ ಊಟವಸತಿ, ಸಮವಸ್ತ್ರ, ಪಠ್ಯಪುಸ್ತಕ ಇನ್ನಿತರ ಸೌಲಭ್ಯ ಒದಗಿಸಲಾಗುತ್ತದೆ. ಅರ್ಜಿಗಳನ್ನು ಆಯಾ ನಿಲಯದ ಮೇಲ್ವಿಚಾರಕರು ಅಥವಾ ನಗರದ ಸತ್ಯಮಂಗಲ ರಸ್ತೆಯ ಡಿ. ದೇವರಾಜ ಅರಸು ಭವನದಲ್ಲಿರುವ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಕಚೇರಿಯಿಂದ ಅರ್ಜಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 30ರೊಳಗೆ ಸಲ್ಲಿಸಬೇಕು. ವಿವರಗಳಿಗೆ ದೂರವಾಣಿ ಸಂಖ್ಯೆ 08226-222069 ಸಂಪರ್ಕಿಸಬಹುದು.
ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 07:- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2015-16ನೇ ಸಾಲಿನಲ್ಲಿ ಸಾಂಸ್ಕøತಿಕ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯಚಟುವಟಿಕೆ ಮಾಡಿರುವ ಯುವ ಸಂಘ ಹಾಗೂ ವ್ಯಕ್ತಿಗಳಿಗೆ ನೀಡುವ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
ಪರಸರ ರಕ್ಷಣೆ, ಗ್ರಾಮ ನೈರ್ಮಲೀಕರಣ, ಶ್ರಮದಾನ, ಸಾಮೂಹಿಕ ವಿವಾಹ, ಜಾನಪದ ಕಲೆ, ವ್ಯಕ್ತಿತ್ವ ವಿಕಸನ, ಆರೋಗ್ಯ ಕಾರ್ಯಕ್ರಮ, ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ಕಾನೂನು ಅರಿವು, ಕ್ರೀಡಾ ತರಬೇತಿ, ಮನರಂಜನೆ, ಆಟದ ಬಯಲುಗಳ ಅಭಿವ್ಥದ್ಧಿ, ವಾಚನಾಲಯ, ಸಾಮಾಜಿಕ ಪಿಡುಗುಗಳ ಬಗ್ಗೆ ತಿಳುವಳಿಕೆ, ಯುವ ಮುಂದಾಳತ್ವ ತರಬೇತಿ, ಆರೋಗ್ಯ ಜಾಗೃತಿ, ಸ್ವಯಂ ಉದ್ಯೋಗ ಕುರಿತ ತರಬೇತಿ, ಸಾರ್ವಜನಿಕ ಸ್ವತ್ತುಗಳ ರಕ್ಷಣೆ, ಅರಣ್ಯೀಕರಣ, ಹೆಚ್‍ಐವಿ ಕುರಿತು ಜಾಗೃತಿಯಂತಹ ಚಟುವಟಿಕೆಯಲ್ಲಿ ತೊಡಗಿರುವವರಿಗೆ ವೈಯಕ್ತಿಕ ಪ್ರಶಸ್ತಿ ನೀಡಲಾಗುತ್ತದೆ.
ಯುವಜನ ಸಾಂಘಿಕ ಪ್ರಶಸ್ತಿಗೆ ಪರಿಸರ ಸಂರಕ್ಷಣೆ, ಅರಣ್ಯೀಕರಣ, ಗ್ರಾಮ ನೈರ್ಮಲೀಕರಣ, ಸಾರ್ವಜನಿಕ ಸ್ವತ್ತುಗಳು, ಕೊಳಚೆ ನಿರ್ಮೂಲನ, ದುರ್ಬಲರಿಗೆ ಸಹಾಯ, ಸಾಮೂಹಿಕ ಉಳಿತಾಯ, ಸಣ್ಣ ಉಳಿತಾಯಕ್ಕೆ ಪ್ರೋತ್ಸಾಹ, ಆಟದ ಬಯಲುಗಳ ಅಭಿವೃದ್ಧಿ, ಪ್ರತಿಭಾನ್ವಿತ ಕ್ರೀಡಾಪಟುಗಳ ಶೋಧನೆ, ಕ್ರೀಡಾ ತರಬೇತಿ, ಕ್ರೀಡಾ ಸ್ಪರ್ಧೆ ಆಯೋಜನೆ, ಮನರಂಜನಾ ಚಟುವಟಿಕೆ, ಸಾಧನೆ, ಜಾನಪದ ಕಲೆಗಳನ್ನು ಜನಪ್ರಿಯಗೊಳಿಸುವಿಕೆ, ಸ್ಥಳೀಯ ಮಟ್ಟದ ಸಾಂಸ್ಕøತಿಕ ಚಟುವಟಿಕೆಯಲ್ಲಿ ಸಾಧನೆ ಮಾಡಿರುವ ಸಂಘಗಳನ್ನು ಆಯ್ಕೆ ಮಾಡಲಾಗುತ್ತದೆ.
ಇಲಾಖೆಯಲ್ಲಿ ನೊಂದಾಯಿತರಾಗಿದ್ದು ದಿನಾಂಕ 1.4.2015ರಿಂದ 31.3.2016ರವರೆಗೆ ಸಾಧನೆ ಮಾಡಿರುವ 15 ರಿಂದ 35ರ ವಯೋಮಿತಿಯಲ್ಲಿರುವವರು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆದು ಜೂನ್ 29ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಸದರಿ ಕಚೇರಿ ಅಥವಾ ದೂ.ಸಂ. 08226-224932, ಮೊಬೈಲ್ 9482718278 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದÉ.
ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ : ಮತ ಚಲಾಯಿಸಲು ಅನುಮತಿ
ಚಾಮರಾಜನಗರ, ಜೂ. 08 :- ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಜೂನ್ 9ರಂದು ನಡೆಯಲಿರುವ ಮತದಾನದಲ್ಲಿ ಸರ್ಕಾರದ ಎಲ್ಲ ಕಚೇರಿ, ಶಿಕ್ಷಣ ಸಂಸ್ಥೆ, ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಖಾಸಗಿ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರರಿಗೆ ಸಂಬಂಧಿಸಿದ ಪ್ರಾಧಿಕಾರಿಗಳು ಮತ ಚಲಾಯಿಸಲು ಅನುಮತಿ ನೀಡುವಂತೆ ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.
ಆಧಾರ್ ಆಧಾರಿತ ಪಡಿತರ ಕೂಪನ್ ವಿತರಣೆಗೆ ಖಾಸಗಿ ಫೋಟೋ ಬಯೋ ಕೇಂದ್ರ ತೆರೆಯಲು ಅವಕಾಶ
ಚಾಮರಾಜನಗರ, ಜೂ. 09 - ಜಿಲ್ಲೆಯಲ್ಲಿ ಖಾಸಗಿ ಫೋಟೋ ಬಯೋಕೇಂದ್ರಗಳ ಮೂಲಕ ಪಡಿತರ ಆಧಾರ್ ಆಧಾರಿತ ಕೂಪನ್‍ಗಳನ್ನು ವಿತರಿಸಲು ಅವಕಾಶ ನೀಡಲಾಗಿದ್ದು ಆಸಕ್ತಿಯುಳ್ಳವರು ಅಗತ್ಯ ದಾಖಲಾತಿಗಳೊಂದಿಗೆ ಆಹಾರ ನಾಗರಿಕ ಇಲಾಖೆಗೆ ಮನವಿ ಸಲ್ಲಿಸಬಹುದಾಗಿದೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರ ಚೀಟಿದಾರರು ಆಧಾರ್ ಆಧಾರಿತ ಕೂಪನ್‍ಗಳನ್ನು ಪಡೆಯಲು ಅವಕಾಶವಾಗುವಂತೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಟಲ್ ಜೀ ಜನಸ್ನೇಹಿ ಕೇಂದ್ರ, ತಾಲೂಕು ಕೇಂದ್ರಗಳಲ್ಲಿರುವ ಖಾಸಗಿ ಸೇವಾ ಕೇಂದ್ರಗಳೊಂದಿಗೆ ಹೆಚ್ಚುವರಿ ಕೇಂದ್ರಗಳನ್ನು ತೆರೆಯಲು ಸರ್ಕಾರ ಆದೇಶಿಸಿದೆ.
ಖಾಸಗಿ ಕೇಂದ್ರದವರು ಕೂಪನ್ ವಿತರಣೆಗೆ ಅವಶ್ಯಕವಿರುವ ಕಂಪ್ಯೂಟರ್, ಯುಪಿಎಸ್, ಲೇಸರ್ ಪ್ರಿಂಟರ್, ಇಂಟರ್ ನೆಟ್, ಬೆರಳಚ್ಚು ಬಯೋಮೆಟ್ರಿಕ್, ಐರೀಸ್ ಸ್ಕ್ಯಾನರ್ ಮತ್ತು ಬಾರ್ ಕೋಡೆಡ್ ಕೂಪನ್ ರೀಡರ್‍ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಕೂಪನ್ ಪಡೆಯಲು ಬರುವ ಪಡಿತರ ಚೀಟಿದಾರರು ಕೂರಲು ಸ್ಥಳಾವಕಾಶ ಹಾಗೂ ನೆರಳಿನ ಸೌಲಭ್ಯ ಇರಬೇಕು. ಕೇಂದ್ರಗಳಲ್ಲಿ ಕಂಪ್ಯೂಟರ್ ಮಾನಿಟರ್‍ಗಳನ್ನು ಹೆಚ್ಚುವರಿಯಾಗಿ ಹೊಂದಿದ್ದು ಅದನ್ನು ಕೂಪನ್ ಪಡೆಯಲು ಬರುವ ಕಾರ್ಡುದಾರರಿಗೂ ಪ್ರದರ್ಶಿಸಬೇಕಾಗುವುದು. ಏಕೆಂದರೆ ಖಾಸಗಿ ಕೂಪನ್ ವಿತರಣಾ ಕೇಂದ್ರದವರು ಏನನ್ನು ದಾಖಲಿಸುತ್ತಿದ್ದಾರೆ ಎಂಬುದನ್ನು ಪಡಿತರ ಚೀಟಿದಾರರು ಖಾತರಿ ಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಖಾಸಗಿ ಕೂಪನ್ ವಿತರಣಾ ಕೇಂದ್ರಗಳನ್ನು ನೋಂದಾಯಿಸುವವರು ಅವರಿಗೆ ನಿಬಂಧನೆಗಳನ್ನು ಲಿಖಿತ ಮೂಲಕ ನೀಡಿ ಅವರೊಂದಿಗೆ ಛಾಪಾ ಕಾಗದದಲ್ಲಿ ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಒಪ್ಪಂದದಲ್ಲಿ ಇಲಾಖೆಯ ನಿರ್ದೇಶನಗಳನ್ನು ಉಲ್ಲಂಘಿಸುವ ವಿತರಣಾ ಕೇಂದ್ರಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುತ್ತದೆ ಎಂಬ ಅಂಶವನ್ನು ಕಡ್ಡಾಯವಾಗಿ ನಮೂದಿಸಲಾಗುತ್ತದೆ.
ಬೆರಳಚ್ಚು ಬಯೋಮೆಟ್ರಿಕ್‍ಗೆ ನಿಗದಿ ಮಾಡಲಾದ ಸ್ಕ್ಯಾನರ್, ಲೇಸರ್ ಸ್ಕ್ಯಾನರ್ ಯಂತ್ರಗಳನ್ನು ಖರೀದಿಸಿಕೊಂಡು ಕೂಪನ್ ವಿತರಣಾ ಕಾರ್ಯ ನಿರ್ವಹಿಸಬೇಕು. ಪಡಿತರ ಚೀಟಿದಾರರಿಗೆ ಕೂಪನ್ ಸೃಜಿಸಲು ಖಾಸಗಿ ಕೂಪನ್ ವಿತರಣಾ ಕೇಂದ್ರಗಳಿಗೆ ಪ್ರತಿ ಕೂಪನ್‍ಗೆ 3 ರೂ. ದರ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಸಂಗ್ರಹಿಸಲಾದ ಕೂಪನ್ ಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಲು ಪ್ರತಿ ಕೂಪನ್‍ಗೆ 0.20 ರೂ.ಗಳನ್ನು ನಿಗದಿ ಮಾಡಲಾಗಿದೆ. ಈ ಮೊತ್ತವನ್ನು ಖಾಸಗಿ ಕೂಪನ್ ವಿತರಣಾ ಕೇಂದ್ರಗಳ ಬ್ಯಾಂಕ್ ಖಾತೆಗೆ ತಿಂಗಳ ಕೊನೆಯಲ್ಲಿ ಇಲಾಖೆಯಿಂದ ಜಮೆ ಮಾಡಲಾಗುವುದರಿಂದ ಪಡಿತರ ಚೀಟಿ ಸೃಜಿಸಲು ಅಥವಾ ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಲು ಯಾವುದೇ ಶುಲ್ಕವನ್ನು ಖಾಸಗಿ ಕೇಂದ್ರದವರು ಅರ್ಜಿದಾರರಿಂದ ಪಡೆಯುವಂತಿಲ್ಲ.
ಈ ಎಲ್ಲಾ ನಿಬಂಧನೆಗಳಿಗೆ ಒಳಪಟ್ಟು ಖಾಸಗಿ ಬಯೋ ಕೂಪನ್ ವಿತರಣಾ ಕೇಂದ್ರವನ್ನು ತೆರೆಯಲು ಆಸಕ್ತಿಯುಳ್ಳವರು ನಗರದ ಜಿಲ್ಲಾಡಳಿತ ಭವನದಲ್ಲಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಜೂನ್ 14ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಮನವಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ. 19ರಂದು ಭೂಮಾಪಕರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ
ಚಾಮರಾಜನಗರ, ಜೂ. 09 :- ಪೋಡಿ ಮುಕ್ತ ಅಭಿಯಾನ ಯೋಜನೆ ಅನುಷ್ಠಾನಕ್ಕಾಗಿ ಅರ್ಹ ಅಭ್ಯರ್ಥಿಗಳಿಗೆ ಪರವಾನಗಿ ನೀಡಿ ಭೂಮಾಪಕರಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದ್ದು ಇದರಂತೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಜೂನ್ 19ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ.
ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ವೆಬ್ ಸೈಟ್ bhoomoರಿiಟಿi.ಞಚಿಡಿಟಿಚಿಣಚಿಞಚಿ.gov.iಟಿ/ಟsಡಿeಛಿಡಿuiಣmeಟಿಣ ಇಂದ ಪಡೆದುಕೊಳ್ಳಬಹುದೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ. 12ರಂದು ನಗರದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
ಚಾಮರಾಜನಗರ, ಜೂ. 09 - ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಇತರೆ ಇಲಾಖೆ ಸೇವಾ ಸಂಘಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆಯನ್ನು ಜೂನ್ 12ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಾಲಯ ಬಳಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಡಿ. ರಾಘವೇಂದ್ರ ಅವರು ಜಾಥಾಗೆ ಚಾಲನೆ ನೀಡುವರು.
ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಉದ್ಘಾಟಿಸುವರು. ಜಿಲ್ಲಾಧಿಕಾರಿ ಬಿ.ರಾಮು ಅವರು ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಸಿ. ಶಿವಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಮಹದೇವು, ವಕೀಲರ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ, ಕಾರ್ಯದರ್ಶಿ ಚಿನ್ನಸ್ವಾಮಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಟಿ.ಜೆ. ಸುರೇಶ್, ಆದಿವಾಸಿ ಮತ್ತು ಗ್ರಾಮೀಣಾಭಿವೃದ್ಧಿ ಸಂಘದ ನಿರ್ದೇಶಕರಾದ ಬಿ.ಎಸ್. ಬಸವರಾಜು, ಮಕ್ಕಳ ಸಹಾಯವಾಣಿ ಸಂಯೋಜಕರಾದ ಅರುಣ್ ರಾಯ್, ಜಿಲ್ಲಾ ದ್ವಿಚಕ್ರ ವಾಹನ ದುರಸ್ತಿಗಾರರ ಸಂಘದ ಅಧ್ಯಕ್ಷರಾದ ಮುಜಾಹಿದ್ ಉಲ್ಲಾಖಾನ್, ಡಾ. ಬಿ.ಆರ್. ಅಂಬೇಡ್ಕರ್ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷರಾದ ಸಿದ್ದರಾಜು ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸುªರು
ವಿಧಾನ ಪರಿಷತ್ ಚುನಾವಣೆ : ಜಿಲ್ಲೆಯಲ್ಲಿ ಶೇ.55.23ರಷ್ಟು ಮತದಾನ
ಚಾಮರಾಜನಗರ, ಜೂ. 09 - ಕರ್ನಾಟಕ ವಿಧಾನ ಪರಿಷತ್ತಿಗೆ ದಕ್ಷಿಣ ಪಧವೀಧರ ಕ್ಷೇತ್ರದಿಂದ ನಡೆದ ಚುನಾವಣೆಗೆ ಜಿಲ್ಲೆಯಲ್ಲಿ ಶೇ.55.23ರಷ್ಟು ಮತದಾನವಾಗಿದೆ.
ಜಿಲ್ಲೆಯಲ್ಲಿ 6768 ಪುರಷರು, ಮತ್ತು 2064 ಮಹಿಳಾ ಮತದಾರರು ಸೇರಿದಂತೆ ಒಟ್ಟು 8832 ಮತದಾರರಿದ್ದಾರೆ. ಈ ಪೈಕಿ 3868 ಪುರಷರು, 1010 ಮಹಿಳೆಯರು ಸೇರಿದಂತೆ ಒಟ್ಟು 4878 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಚಾಮರಾಜನಗರ ತಾಲ್ಲೂಕಿನಲ್ಲಿ 2241 ಪುರಷರು, ಹಾಗೂ 708 ಮಹಿಳೆಯರು ಸೇರಿದಂತೆ ಒಟ್ಟು 2949 ಮತದಾರರು ಇದ್ದಾರೆ. ಇವರಲ್ಲಿ 1205 ಪುರಷರು, 309 ಮಹಿಳೆಯರು ಸೇರಿದಂತೆ ಒಟ್ಟು 1514 ಮಂದಿ ಮತ ಚಲಾಯಿಸಿದ್ದಾರೆ. ಒಟ್ಟಾರೆ ಚಾಮರಾಜನಗರ ತಾಲ್ಲೂಕಿನಲ್ಲಿ ಶೇ 51.34ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 1290 ಪುರಷರು, ಹಾಗೂ 280 ಮಹಿಳೆಯರು ಸೇರಿದಂತೆ ಒಟ್ಟು 1570 ಮತದಾರರು ಇದ್ದಾರೆ. ಈ ಪೈಕಿ 785 ಪುರಷರು, 150 ಮಹಿಳೆಯರು ಸೇರಿದಂತೆ ಒಟ್ಟು 935 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಶೇ 59.55ರಷ್ಟು ಮತದಾನ ನಡೆದಿದೆ.
ಯಳಂದೂರು ತಾಲ್ಲೂಕಿನಲ್ಲಿ 647 ಪುರಷರು, ಹಾಗೂ 230 ಮಹಿಳೆಯರು ಸೇರಿದಂತೆ ಒಟ್ಟು 877ಮತದಾರರು ಇದ್ದಾರೆ. ಈ ಪೈಕಿ 436 ಪುರಷರು, 136 ಮಹಿಳೆಯರು ಸೇರಿದಂತೆ ಒಟ್ಟು 572 ಮಂದಿ ಮತ ಚಲಾಯಿಸಿದ್ದಾರೆ. ಒಟ್ಟಾರೆ ಯಳಂದೂರು ತಾಲ್ಲೂಕಿನಲ್ಲಿ ಶೇ 65.22ರಷ್ಟು ಮತದಾನವಾಗಿದೆ.
ಕೊಳ್ಳೇಗಾಲ ತಾಲ್ಲೂಕಿನಲ್ಲಿ 2590 ಪುರಷರು, ಹಾಗೂ 846 ಮಹಿಳೆಯರು ಸೇರಿದಂತೆ ಒಟ್ಟು 3436 ಮತದಾರರು ಇದ್ದಾರೆ. ಇವರಲ್ಲಿ 1442 ಪುರಷರು, 415 ಮಹಿಳೆಯರು ಸೇರಿದಂತೆ ಒಟ್ಟು 1857 ಮಂದಿ ಮತ ಚಲಾಯಿಸಿದ್ದಾರೆ. ಒಟ್ಟಾರೆ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಶೇ 54.05ರಷ್ಟು ಮತದಾನವಾಗಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 65.22 ರಷ್ಟು ಯಳಂದೂರು ತಾಲ್ಲೂಕಿನಲ್ಲಿ ಮತದಾನ ನಡೆದಿದೆ. ಚಾಮರಾಜನಗರ ತಾಲ್ಲೂಕಿನ 59ನೇ ಮತಗಟ್ಟೆಯಲ್ಲಿ ಅತಿ ಕಡಿಮೆ ಅಂದರೆ ಶೇ.43.37ರಷ್ಟು ಮತದಾನವಾಗಿದೆ.
ಜೂ. 11ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಜೂ. 10- ನಗರದಲ್ಲಿ ಜೂನ್ 11ರಂದು ವಿದ್ಯುತ್ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ಪಚ್ಚಪ್ಪ ವೃತ್ತ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಸಂತೆಮರಹಳ್ಳಿ ವೃತ್ತ, ರಂಗನಾಥ ಕಲ್ಯಾಣ ಮಂಟಪ, ಚಿಕ್ಕ ಅಂಗಡಿ ಬೀದಿ, ದೊಡ್ಡ ಅಂಗಡಿ ಬೀದಿ, ಭ್ರಮರಾಂಭ ಬಡಾವಣೆ, ಶಂಕರಪುರ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ. 14ರಂದು ಮಲೇರಿಯಾ ವಿರೋಧಿ ಮಾಸಾಚರಣೆ ಜಾಥಾ
ಚಾಮರಾಜನಗರ, ಜೂ. 10 - ಆರೋಗ್ಯ ಇಲಾಖೆ ವತಿಯಿಂದ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಜೂನ್ 14ರಂದು ಬೆಳಿಗ್ಗೆ 10 ಗಂಟೆಗೆ ನಗರದ ಚಾಮರಾಜೇಶ್ವರ ದೇವಾಲಯ ಆವರಣದಲ್ಲಿ ಜಾಥಾ ಹೊರಡಲಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ, ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 10:- ಸಾರ್ವಜನಿಕ ಶಿಕ್ಷಣ ಇಲಾಖೆಯು 2016-17ನೇ ಸಾಲಿಗೆ ಜಿಲ್ಲೆಯಿಂದ ಉತ್ತಮ ಶಿಕ್ಷಕರನ್ನು ರಾಜ್ಯ, ರಾಷ್ಟ್ರ ಪ್ರಶಸ್ತಿಗೆ ಪರಿಗಣಿಸಲು ಅರ್ಜಿ ಆಹ್ವಾನಿಸಿದೆ.
10 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರು ರಾಜ್ಯ ಪ್ರಶಸ್ತಿಗೆ ಹಾಗೂ 15 ವರ್ಷ ಸೇವೆ ಪೂರೈಸಿರುವ ಶಿಕ್ಷಕರು ಮತ್ತು ಕನಿಷ್ಟ 20 ವರ್ಷ ಸೇವೆ ಸಲ್ಲಿಸಿರುವ ಮುಖ್ಯೋಪಾಧ್ಯಾಯರನ್ನು ರಾಷ್ಟ್ರ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಪ್ರಸ್ತಾವನೆಯು 50 ಪುಟಗಳನ್ನು ಮೀರಿರಬಾರದು. ಶೈಕ್ಷಣಿಕ ಸಾಧನೆಗಳನ್ನು ಬಿಂಬಿಸುವಂತಿರಬೇಕು.
ಸಮೂಹ ಸಂಪನ್ಮೂಲ ವ್ಯಕ್ತಿಗಳು ಅರ್ಜಿ ಪರಿಶೀಲಿಸಿ ಅರ್ಹ ಶಿಕ್ಷಕರ ಪಟ್ಟಿಯನ್ನು ಜೂನ್ 16ರ ಒಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಚ್ಚಾರಿತ್ಯವನ್ನು ಹೊಂದಿರುವ ಯಾವುದೇ ದೂರು ವಿಚಾರಣೆ, ನ್ಯಾಯಾಲಯದ ಪ್ರಕರಣಗಳು ಇಲ್ಲದಿರುವುದನ್ನು ದೃಢಪಡಿಸಿಕೊಂಡು ಪರಿಶೀಲಿಸಿ ಮಾನದಂಡ ಮಾಗೂ ಮಾರ್ಗಸೂಚಿ ಪ್ರಕಾರ ಡಯಟ್ ಪ್ರಾಶುಪಾಲರಿಗೆ ಜೂನ್ 21ರೊಳಗೆ ವರದಿ ಸಲ್ಲಿಸಬೇಕು. ಡಯಟ್ ಪ್ರಾಂಶುಪಾಲರು ಪ್ರಸ್ತಾವನೆಗಳನ್ನು ಕ್ಷೇತ್ರ ಭೇಟಿ ಮೂಲಕ ಖುದ್ದು ಪರಿಶೀಲಿಸಿ ಅರ್ಹ ತಲಾ 2 ಪ್ರಸ್ತಾವನೆಗಳನ್ನು ಜೂನ್ 28ರೊಳಗೆ ಜಿಲ್ಲಾ ಆಯ್ಕೆ ಸಮಿತಿಗೆ ಸಲ್ಲಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಯು ಪರೀಕ್ಷಾ ಶುಲ್ಕ ಪಾವತಿಗೆ ಅವಧಿ ವಿಸ್ತರಣೆÀ
ಚಾಮರಾಜನಗರ, ಜೂ. 10 - ಜುಲೈ ತಿಂಗಳಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ದಂಡಶುಲ್ಕವಿಲ್ಲದೆ ಸಂದಾಯ ಮಾಡಲು ಜೂನ್ 11ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಹನ ಚಾಲನಾ ತರಬೇತಿಗೆ ಪಜಾ, ಪಪಂ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 10 - ನಗರದಲ್ಲಿರುವ ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ವಾಹನ ಚಾಲನಾ ತರಬೇತಿ ನೀಡಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿದ್ದು ವಾಹನ ಚಾಲನೆಗೆ ಅಗತ್ಯವಿರುವ ದೈಹಿಕ ಅರ್ಹತೆ ಹೊಂದಿರಬೇಕು. ಲಘು ಮೋಟಾರ್ ವಾಹನ ಚಾಲನೆ ತರಬೇತಿಗೆ ಕನಿಷ್ಟ 18 ವರ್ಷ ವಯಸ್ಸಾಗಿರಬೇಕು. ಭಾರಿ ವಾಹನ ತರಬೇತಿಗೆ ಕನಿಷ್ಟ 20 ವರ್ಷ ವಯಸ್ಸಾಗಿದ್ದು ಲಘು ಮೋಟಾರು ವಾಹನ ಪರವಾನಗಿ ಪಡೆದು 1 ವರ್ಷ ಪೂರೈಸಿರಬೇಕು. ತರಬೇತಿಗೆ ತಗಲುವ ವೆಚ್ಚದಲ್ಲಿ ಶೇ. 25ರಷ್ಟನ್ನು ಅಭ್ಯರ್ಥಿಗಳು ಭರಿಸಬೇಕು.
ಅರ್ಜಿಯನ್ನು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜೂನ್ 20ರವರೆಗೂ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ವಿತರಿಸಲಾಗುತ್ತದೆ. ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಜೂನ್ 24 ಕಡೆಯ ದಿನವಾಗಿದೆ. ವಿವರಗಳಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜೂ.11, 12ರಂದು ನಗರಕ್ಕೆ ನೀರು ವ್ಯತ್ಯಯ
ಚಾಮರಾಜನಗರ, ಜೂ. 10 :- ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಟಿ. ನರಸೀಪುರದ ಪಂಪ್ ಹೌಸ್ ಹತ್ತಿರದ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು ನೀರೆತ್ತುವ ಪಂಪಿಗೆ ಸಾಕಷ್ಟು ನೀರು ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜೂನ್ 11, 12ರಂದು ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ನಾಗರಿಕರು ಹತ್ತಿರದ ಲಭ್ಯವಿರುವ ತೊಂಬೆ, ಕೈ ಪಂಪ್, ಕೊಳವೆ ಬಾವಿಗಳಿಂದ ನೀರು ಉಪಯೋಗಿಸಿಕೊಂಡು ಸಹಕರಿಸುವಂತೆ ನಗರಸಭೆ ಪೌರಾಯುಕ್ತರಾದ ಎಂ.ಜಿ. ರಮೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕ್ರೀಡಾ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 10 - ರಾಜ್ಯ ಸರ್ಕಾರದ ವತಿಯಿಂದ ಉನ್ನತ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಕೊಡಮಾಡುವ ಏಕಲವ್ಯ ಪ್ರಶಸ್ತಿ, ಹಿರಿಯ ತರಬೇತಿದಾರರು ಹಾಗೂ ಕ್ರೀಡಾಪಟುವಿಗೆ ಕೊಡುವ ಜೀವನ ಪರ್ಯಂತ ಸಾಧನೆ ಪ್ರಶಸ್ತಿ ಮತ್ತು ಗ್ರಾಮೀಣ ಕ್ರೀಡೆಗಳಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ನೀಡುವ ಕ್ರೀಡಾರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆ ವಿವರಗಳು ವೆಬ್ ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿಥಿouಣhಠಿoಡಿಣಚಿಟ.iಟಿ ನಲ್ಲಿ ಲಭ್ಯವಿದೆ. ಭರ್ತಿ ಮಾಡಿದ ಅರ್ಜಿಗಳನ್ನು ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಯುವ ಕೇಂದ್ರ, ನೃಪತುಂಗ ರಸ್ತೆ, ಬೆಂಗಳೂರು–560001 ಇವರಿಗೆ ಜೂನ್ 20ರ ಒಳಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ (ದೂ.ಸಂ. 08226-224932, ಮೊಬೈಲ್ 9611172984) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಚರ್ಚ್ ನವೀಕರಣ, ಸಮುದಾಯ ಭವನ ನಿರ್ಮಾಣ ಸೇರಿ ಇತರೆ ಕೆಲಸಗಳಿಗೆ ಸಹಾಯಧನ : ಕ್ರೈಸ್ತರ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 10 :- ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕ್ರೈಸ್ತರ ಅಭಿವೃದ್ಧಿ ಯೋಜನೆಯಡಿ ಚರ್ಚ್ ನವೀಕರಣ, ದುರಸ್ತಿ, ಆವರಣ ಗೋಡೆ, ಸ್ಮಶಾನ ಅಭಿವೃದ್ಧಿ, ಸಮುದಾಯ ಭವನದ ಕಟ್ಟಡ ನಿರ್ಮಾಣ, ಅನಾಥಾಶ್ರಮ, ವೃದ್ದಾಶ್ರಮ, ಎಚ್‍ಐವಿ, ವಿಕಲಚೇತನ ಸೇವಾಸಂಸ್ಥೆಗಳಿಗೆ ಅನುದಾನ ನೀಡಲು ಅರ್ಜಿ ಆಹ್ವಾನಿಸಿದೆ.
ಆಸಕ್ತ ಕ್ರೈಸ್ತ ಸಂಘಸಂಸ್ಥೆಗಳು ಅಂದಾಜು ನಕ್ಷೆ, ಇನ್ನಿತರ ವಿವರಗಳೊಂದಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯವರಿಗೆ ಜುಲೈ 30ರೊಳಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಯನ್ನು ಸದರಿ ಕಚೇರಿಯಿಂದ ಪಡೆಯಬಹುದು. ದೂರವಾಣಿ ಸಂಖ್ಯೆ 08226-222180 ಸಂಪರ್ಕಿಸಿ ಕೂಡ ವಿವರ ಪಡೆಯಬಹುದೆಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ಶಿವಕುಮಾರ್ ತಿಳಿಸಿದ್ದಾರೆ.

No comments:
Post a Comment