Friday, 17 March 2017

ಗುಂಡ್ಲುಪೇಟೆ ಉಪಚುನಾವಣೆ : ಅಸಹಜ ಬ್ಯಾಂಕ್ ವಹಿವಾಟು ನಡೆಸುವವರ ವಿರುದ್ಧ ನಿಗಾ – ಜಿಲ್ಲಾಧಿಕಾರಿ ಬಿ. ರಾಮು

ಗುಂಡ್ಲುಪೇಟೆ ಉಪಚುನಾವಣೆ : ಅಸಹಜ ಬ್ಯಾಂಕ್ ವಹಿವಾಟು ನಡೆಸುವವರ ವಿರುದ್ಧ ನಿಗಾ – ಜಿಲ್ಲಾಧಿಕಾರಿ ಬಿ. ರಾಮು
ಚಾಮರಾಜನಗರ, ಮಾ. 17 - ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಚುನಾವಣಾ ಅಕ್ರಮಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳುವ ಸಲುವಾಗಿ ಬ್ಯಾಂಕುಗಳಲ್ಲಿ ಅಸಹಜ ಹಾಗೂ ಅನುಮಾನಾಸ್ಪದವಾಗಿ ವಹಿವಾಟು ನಡೆಸುವವರ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ. ರಾಮು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಗುಂಡ್ಲುಪೇಟೆ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ರಾಷ್ಟ್ರೀಕೃತ, ಖಾಸಗಿ ಹಾಗೂ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗೆ ಸಂದರ್ಭದಲ್ಲಿ  ಅಕ್ರಮವಾಗಿ ಹಣ ಬಳಕೆ ಮಾಡುವವರ ವಿರುದ್ಧ ನಿಗಾ ವಹಿಸಬೇಕಿದೆ. ಚುನಾವಣಾ ಅಕ್ರಮಗಳಿಗೆ ಆಸ್ಪದ ನೀಡದಿರಲು ಜಿಲ್ಲೆಯ ಯಾವುದೇ ಭಾಗದಲ್ಲಿ ಪ್ರತಿನಿತ್ಯ ಅಸಹಜ ಹಾಗೂ ಅನುಮಾನಕ್ಕೆ ಎಡೆ ಮಾಡಿಕೊಡುವ ನಗದು ವಹಿವಾಟು ನಡೆಸುವವರ ಬಗ್ಗೆ ಗಮನ ಹರಿಸಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚುನಾವಣೆ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದೆ. ಈ ಅವಧಿಯಲ್ಲಿ ಈ ಹಿಂದಿನ ಅವಧಿಗಿಂತ ಹೆಚ್ಚಿನ ಹಣದ ವಹಿವಾಟು ನಡೆದರೆ ಅದು ಯಾವ ಉದ್ದೇಶಕ್ಕೆ ನಡೆಯುತ್ತಿದೆ ಎಂಬ ಬಗ್ಗೆ ತಿಳಿಯಬೇಕಿದೆ. ಅಸಹಜ ವಹಿವಾಟು ಚುನಾವಣಾ ಅಕ್ರಮಗಳಿಗೆ ಬಳಕೆಯಾಗಲಿದೆಯೇ ಎಂಬ ಬಗ್ಗೆ ಮಾಹಿತಿ ಪಡೆದು ಯಾವುದೇ ಅಕ್ರಮಕ್ಕೆ ಅವಕಾಶವಾಗದಂತೆ ಎಚ್ಚರ ವಹಿಸಬೇಕು. ಹೀಗಾಗಿ ದಿನನಿತ್ಯದ ಹಣ ವರ್ಗಾವಣೆ, ಜಮೆ, ಹಿಂಪಡೆಯುವಿಕೆ ಮೇಲೆ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಬ್ಯಾಂಕುಗಳಿಂದ ಪ್ರತಿನಿತ್ಯ 50 ಸಾವಿರ ರೂ.ಗಿಂತ ಹೆಚ್ಚಿನ ನಗದು ಹಿಂಪಡೆಯುವ ಮತ್ತು ವರ್ಗಾವಣೆ ಮಾಡುವವರ ವಹಿವಾಟಿನ ಮಾಹಿತಿಯನ್ನು ನೀಡಬೇಕು. ಬ್ಯಾಂಕುಗಳಿಂದ ಮಂಜೂರಾಗಿರುವ ಸಾಲ, ಫಲಾನುಭವಿಗಳಿಗೆ ಮಂಜೂರಾಗಿರುವ ಸವಲತ್ತು ಹಣ ಇನ್ನಿತರ ಕಾರಣಗಳಿಗಾಗಿ ಜಮೆಯಾಗಿದ್ದರೆ ಅಂತಹವುಗಳ ಬಗ್ಗೆ ಮಾಹಿತಿ ಅಗತ್ಯವಿಲ್ಲ. ಚುನಾವಣೆ ಉದ್ದೇಶಕ್ಕಾಗಿ ಮಾಹಿತಿ ಪಡೆಯುತ್ತಿರುವ ಬಗ್ಗೆ ಗ್ರಾಹಕರಿಗೆ ಮನವರಿಕೆ ಮಾಡಿಕೊಡಬೇಕು. ವಹಿವಾಟಿನ ಹೆಸರಿನಲ್ಲಿ ಯಾರಿಗೆ ತೊಂದರೆ ಕೊಡುವ ಉದ್ದೇಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
 ಒಬ್ಬರೇ ವ್ಯಕ್ತಿ ಕಾರಣ ಹಾಗೂ ಸೂಕ್ತ ದಾಖಲೆಗಳನ್ನು ನೀಡದೆ ಪ್ರತೀದಿನ ಹೆಚ್ಚು ಹಣ ಪಡೆಯುವುದು, ವರ್ಗಾವಣೆ ಮಾಡುವುದು ಅಥವ ಜಮೆ ಮಾಡುವ ಪ್ರಕ್ರಿಯೆ ಕಂಡುಬಂದಲ್ಲಿ ಪರಿಶೀಲಿಸಬೇಕು. ಇದಕ್ಕಾಗಿ ಚುನಾವಣೆಗೆ ನೇಮಕವಾಗಿರುವ ಅಧಿಕಾರಿಗಳು ಸಹ ಹೆಚ್ಚು ಹಣ ವಹಿವಾಟಿನ ಬಗ್ಗೆ ಪರಿಶೀಲಿಸಿ ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದನ್ನು ತಿಳಿಯಲಿದ್ದಾರೆ. ಒಟ್ಟಾರೆ ಚುನಾವಣಾ ಅಕ್ರಮಗಳಿಗೆ ಹಣ ಬಳಕೆಯಾಗದಂತೆ ನೋಡಿಕೊಳ್ಳುವುದು ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಬ್ಯಾಂಕ್‍ಗಳ ಗ್ರಾಹಕರು ಸಹಕರಿಸಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚು ಹಣ ವಹಿವಾಟು ನಡೆಸುವ ಮಾಹಿತಿಯನ್ನು ಚುನಾವಣಾ ಅಧಿಕಾರಿಗಳಿಗೆ ವಹಿವಾಟು ನಡೆದ ಸಂಜೆಯ ವೇಳೆಗೆ ಲಿಖಿತವಾಗಿ ತಿಳಿಸಬೇಕು. ಎಟಿಎಂಗಳಲ್ಲಿಯೂ ಸಹ ಚುನಾವಣಾ ಪ್ರಕ್ರಿಯೆ ಅವಧಿಯಲ್ಲಿ ಯಾವುದೇ ನಿರ್ಧಿಷ್ಟ ಉದ್ದೇಶವಿಲ್ಲದೆ ಅಸಹಜವಾಗಿ ಹಾಗೂ ಹೆಚ್ಚು ಪ್ರಮಾಣದಲ್ಲಿ ಹಣ ಹಿಂಪಡೆಯುವ ಅನುಮಾನಾಸ್ಪದ ಪ್ರಕ್ರಿಯೆಗಳು ನಡೆದರೆ ಆ ಬಗ್ಗೆಯೂ ಮಾಹಿತಿ ಕೊಡಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ ಚುನಾವಣಾ ಸಂದರ್ಭದಲ್ಲಿ ಅಕ್ರಮಕ್ಕೆ ಆಸ್ಪದ ನೀಡದೆ ಇರುವ ಉದ್ದೇಶದಿಂದ ಹಣ ವಹಿವಾಟು, ವಾಹನಗಳ ತಪಾಸಣೆ ಇನ್ನಿತರ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದಕ್ಕಾಗಿ ಬ್ಯಾಂಕ್ ಅಧಿಕಾರಿಗಳು ಸಹ ಪೂರಕವಾಗಿ ಸ್ಪಂದಿಸಬೇಕು ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸಿದ್ದರಾಜು, ಡಿವೈಎಸ್‍ಪಿ ಗಂಗಾಧರ ಸ್ವಾಮಿ, ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಸಭೆಯಲ್ಲಿ ಹಾಜರಿದ್ದರು.

ಗುಂಡ್ಲುಪೇಟೆ ಉಪಚುನಾವಣೆ : ನಾಲ್ಕನೇ ದಿನವೂ ನಾಮಪತ್ರ ಸಲ್ಲಿಕೆ ಇಲ್ಲ
ಚಾಮರಾಜನಗರ, ಮಾ. 17 :- ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ನಾಲ್ಕನೇ ದಿನವಾದ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಗುಂಡ್ಲುಪೇಟೆ ಉಪಚುನಾವಣೆ : ಕೆಲ ಸೆಕ್ಷರ್ ಅಧಿಕಾರಿಗಳ ಬದಲು
ಚಾಮರಾಜನಗರ, ಮಾ. 17 - ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಸದರಿ ಅಧಿಕಾರಿಗಳ ಪೈಕಿ ಕೆಲವು ಅಧಿಕಾರಿಗಳು ಪಿಯುಸಿ ಪರೀಕ್ಷೆ ಹಾಗೂ ಬರ ಪರಿಸ್ಥಿತಿ ಸೇರಿದಂತೆ ಪ್ರಭಾರ ಹುದ್ದೆಗಳಲ್ಲಿ ನಿರತರಾಗಿರುವುದರಿಂದ ಅವರ ಬದಲಿಗೆ ಹೊಸದಾಗಿ ಕೆಲವು ಅಧಿಕಾರಿಗಳನ್ನು ನೇಮಕ ಮಾಡಿ ತಿದ್ದುಪಡಿ ಆದೇಶ ಹೊರಡಿಸಲಾಗಿದೆ.
ಸದರಿ ಬದಲಾದ ಅಧಿಕಾರಿಗಳು ಕೂಡಲೇ ಕೆಲಸಕ್ಕೆ ಹಾಜರಾಗಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ನೀಡುವ ಸೂಚನೆಯಂತೆ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ. ರಾಮು ಅವರು ತಿಳಿಸಿದ್ದಾರೆ.
ತಂಡದ ಸಂಖ್ಯೆ 1 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08226-231100) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023). ವ್ಯಾಪ್ತಿ ಪ್ರದೇಶಗಳು - ಹೊಸಮಠ, ಶ್ರೀಕಂಠಪುರ, ಚನ್ನವಡೆಯನಪುರ-1, ಯಡವನಹಳ್ಳಿ, ಹೊಣಕನಪುರ-5, ಹೊರೆಯಾಲ 1 ಮತ್ತು 2, ರಂಗೂಪುರ, ಬೆಳಚಲವಾಡಿ 1 ಮತ್ತು 2, ಕುರುಬರಹುಂಡಿ, ಬೆಟ್ಟದಮಾದಹಳ್ಳಿ. ಮತಗಟ್ಟೆ ಸಂಖ್ಯೆ 1 ರಿಂದ 8, 21,22,27 ಹಾಗೂ 33. ಸೆಕ್ಟರ್ ಅಧಿಕಾರಿಯಾಗಿದ್ದ ಸುಂದ್ರಮ್ಮ, ಸಹಾಯಕ ಕೃಷಿ ನಿರ್ದೇಶಕರು, ಚಾಮರಾಜನಗರ (ಮೊ. 9945292355) ಅವರ ಬದಲಿಗೆ ಉಮೇಶ್, ರೇಷ್ಮೆ ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ, ಯಳಂದೂರು (ಮೊ. 8970053954) ಅವರನ್ನು ನೇಮಕ ಮಾಡಲಾಗಿದೆ.
ತಂಡದ ಸಂಖ್ಯೆ 3 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08226-231100) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023). ವ್ಯಾಪ್ತಿ ಪ್ರದೇಶಗಳು – ಚಿಕ್ಕಾಟಿ 1 ಮತ್ತು 2, ತೊಂಡವಾಡಿ-1 ಮತ್ತು 2, ಹಾಲಹಳ್ಳಿ, ಕಮರಹಳ್ಳಿ, ಸೋಮಹಳ್ಳಿ- 1, 2 ಮತ್ತು 3, ಕೊಡಗಾಪುರ, ಶೀಗೇವಾಡಿ,  ಮರಳಾಪುರ. ಮತಗಟ್ಟೆ ಸಂಖ್ಯೆ 11 ರಿಂದ 14, 16,17 ಹಾಗೂ 50 ರಿಂದ 55. ಸೆಕ್ಟರ್ ಅಧಿಕಾರಿ - ವರಲಕ್ಷ್ಮಿ, ಸಹಾಯಕ ನಿರ್ದೇಶಕರು, ಉಪ ಖಜಾನಾಧಿಕಾರಿ ಕಚೇರಿ, ಗುಂಡ್ಲುಪೇಟೆ ಇವರ ಬದಲಿಗೆ ದೇವರಾಜ್, ಸಹಾಯಕ ಅಭಿಯಂತರರು, ಕಾವೇರಿ ನೀರಾವರಿ ನಿಗಮ, ಅಟ್ಟುಗೂಳಿಪುರ, ಚಾಮರಾಜನಗರ ತಾಲೂಕು (ಮೊ. 9620152142) ಅವರನ್ನು ನೇಮಿಸಲಾಗಿದೆ.
ತಂಡದ ಸಂಖ್ಯೆ 8 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಚಾಮರಾಜನಗರ ರೂರಲ್ (ದೂ.ಸಂ. 08226-222092), ಲೋಹಿತ್ ಕುಮಾರ್ (ಮೊ. 9480804646). ವ್ಯಾಪ್ತಿ ಪ್ರದೇಶಗಳು – ಹೆಗ್ಗವಾಡಿ, ಭುಜಗನಪುರ, ಕೆರೆಹÀಳ್ಳಿ, ಮುಕ್ಕಡಹಳ್ಳಿ  - 1 ಮತ್ತು 2, ಹೆಗ್ಗವಾಡಿ, ಮಲೆಯೂರು, ಮೂಡ್ನಾಕೂಡು 1 ಮತ್ತು 2, ಸಾಗಡೆ – 1,2,3. ಮತಗಟ್ಟೆ ಸಂಖ್ಯೆ 65 ರಿಂದ 70, 73, 74 ಹಾಗೂ 83 ರಿಂದ 87. ಸೆಕ್ಟರ್ ಅಧಿಕಾರಿ – ರಾಮಕೃಷ್ಣಯ್ಯ, ಸಿಡಿಪಿಓ, ಗುಂಡ್ಲುಪೇಟೆ (ಮೊ. 9845565133), ಮಹೇಶ್, ಮಕ್ಕಳ ಕಾರ್ಮಿಕ ಯೋಜನಾ ವ್ಯವಸ್ಥಾಪಕರು, ಚಾಮರಾಜನಗರ (ಮೊ.9886164951) ಇವರುಗಳ ಬದಲಿಗೆ ಕ್ರಮವಾಗಿ ಮದನ್ ಮೋಹನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಕೃಷಿ ಇಲಾಖೆ, ಚಾಮರಾಜನಗರ (ಮೊ. 8762422339) ಹಾಗೂ ಸತೀಶ್, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಗುಂಡ್ಲುಪೇಟೆ (ಮೊ. 9480835584) ಇವರನ್ನು ನೇಮಕ ಮಾಡಿದೆ.
ತಂಡದ ಸಂಖ್ಯೆ 10 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ಪರಮಾಪುರ, ಪಡಗೂರು, ಯಡಹುಂಡಿ, ಕೆಲಸೂರು  - 1 ಮತ್ತು 2, ಮಲ್ಲಮ್ಮನಹುಂಡಿ, ಮೂಡಗೂರು, ಶ್ಯಾನಾಡ್ರಹಳ್ಳಿ. ಬಲಚವಾಡಿ, ಕೆಲಸೂರುಪುರ, ಚಿಕ್ಕತುಪ್ಪೂರು - 1 ಮತ್ತು 2, ಕಿಲಗೆರೆ, ಚನ್ನಂಜಯ್ಯನಹುಂಡಿ. ಮತಗಟ್ಟೆ ಸಂಖ್ಯೆ 93 ರಿಂದ 102, 230 ರಿಂದ 234. ಸೆಕ್ಟರ್ ಅಧಿಕಾರಿ – ಗುರುಲಿಂಗಯ್ಯ ಎಲ್, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ, ಚಾಮರಾಜನಗರ (ಮೊ. 9448999390) ಇವರ ಬದಲಾಗಿ ಸ್ವಾಮಿ, ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ, ಜಿಲ್ಲಾ ಪಂಚಾಯಿತಿ, ಚಾಮರಾಜನಗರ (ಮೊ.94808355812) ಇವರ ನೇಮಕವಾಗಿದೆ.
ತಂಡದ ಸಂಖ್ಯೆ 11 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ಲಕ್ಕೂರು, ಗುರುವಿನಪುರ, ತೆರಕಣಾಂಬಿಹುಂಡಿ  - 1 ಮತ್ತು 2, ತೆರಕಣಾಂಬಿ - 1 ರಿಂದ 5, ಬೆರಟಹಳ್ಳಿ, ಕಗ್ಗಳ – 1,2, ಕಗ್ಗಳದಹುಂಡಿ, ತ್ರಿಯಂಬಕಪುರ. ಮತಗಟ್ಟೆ ಸಂಖ್ಯೆ 103 ರಿಂದ 116. ಸೆಕ್ಟರ್ ಅಧಿಕಾರಿ – ಹೆಚ್.ಎಸ್. ಗೀತಾಂಬ, ಪ್ರಾಂಶುಪಾಲರು, ಡಯಟ್,  ಚಾಮರಾಜನಗರ (ಮೊ. 9448999363) ಇವರ ಬದಲಿಗೆ ಶಿವರಾಮೇಗೌಡ, ಹಿರಿಯ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್), ಚಾಮರಾಜನಗರ (ಮೊ.9448572952) ಇವರನ್ನು ನೇಮಿಸಲಾಗಿದೆ.
ತಂಡದ ಸಂಖ್ಯೆ 12 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ಕರಕಲಮಾದಹಳ್ಳಿ, ಬೊಮ್ಮನಹಳ್ಳಿ, ಕುರುಬರಹುಂಡಿ, ರಾಮಯ್ಯನಪುರ, ಚಿರಕನಹಳ್ಳಿ, ವಡ್ಡಗೆರೆ, ಕುಂದಕೆರೆ  - 1 ಮತ್ತು 2, ಹೆಗ್ಗವಾಡಿ, ಉಪಕಾರ ಕಾಲೋನಿ (ಬಿ), ಯರಿಯೂರು. ಮತಗಟ್ಟೆ ಸಂಖ್ಯೆ - 124 ರಿಂದ 134. ಸೆಕ್ಟರ್ ಅಧಿಕಾರಿ –ನಾಗವೇಣಿ ಡಿ, ಪ್ರಭಾರ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಚಾಮರಾಜನಗರ (ಮೊ. 948112479) ಇವರ ಸ್ಥಾನಕ್ಕೆ ಯಾಸಿನ್, ಸಹಾಯಕ ಅಭಿಯಂತರರು, ಕಾವೇರಿ ನೀರಾವರಿ ನಿಗಮ, ಅಟ್ಟುಗೂಳಿಪುರ, ಚಾಮರಾಜನಗರ ತಾಲೂಕು (ಮೊ. 8861682300) ಇವರನ್ನು ನೇಮಕ ಮಾಡಲಾಗಿದೆ.
ತಂಡದ ಸಂಖ್ಯೆ 13 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ದೇವಾಪುರ, ಶೀಲವಂತಪುರ, ಸೋಮನಪುರ, ಕೊಡಸೋಗೆ  - 1,2,3, ಕಡತಾಳಕಟ್ಟೆಹುಂಡಿ, ಕಂದೇಗಾಲ, ಬೆಟ್ಟಹಳ್ಳಿ, ಶಿಂಡನಪುರ, ದೊಡ್ಡತುಪ್ಪೂರು. ಮತಗಟ್ಟೆ ಸಂಖ್ಯೆ 117 ರಿಂದ 123, 226 ರಿಂದ 229. ಸೆಕ್ಟರ್ ಅಧಿಕಾರಿ – ಬಿ.ಎಸ್. ಮೋಹನ್, ಜಿಲ್ಲಾ ವ್ಯವಸ್ಥಾಪಕರು,  ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಚಾಮರಾಜನಗರ (ಮೊ. 9740800544) ಇವರ ಬದಲಿಗೆ ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ವ್ಯವಸ್ಥಾಪÀಕರು, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಚಾಮರಾಜನಗರ (ಮೊ. 9945269388) ಇವರ ನೇಮಕವಾಗಿದೆ.
ತಂಡದ ಸಂಖ್ಯೆ 14 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಗುಂಡ್ಲುಪೇಟೆ (ದೂ. ಸಂ.08229-222228) ಸಾಗರ್ (ಮೊ. 9480804652), ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಅಂಕನಹಳ್ಳಿ – 1,2, ಬೊಮ್ಮಲಾಪುರ-1,2,3, ಹುಲ್ಲೇಪುರ, ಶಿವಪುರ  - 1 ಮತ್ತು 2, ಅಣ್ಣೂರು, ಅಣ್ಣೂರುಕೇರಿ – 1,2,3, ಕೋಡಹಳ್ಳಿ – 1,2. ಮತಗಟ್ಟೆ ಸಂಖ್ಯೆ 148 ರಿಂದ 152, 155 ರಿಂದ 157, 220 ರಿಂದ 225. ಸೆಕ್ಟರ್ ಅಧಿಕಾರಿ – ಶೋಭಾ, ಜಿಲ್ಲಾ ವ್ಯವಸ್ಥಾಪಕರು, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಚಾಮರಾಜನಗರ (ಮೊ. 9449169859), ಇವರ ಬದಲಿಗೆ ಸೋಮಯ್ಯ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರ ಕಚೇರಿ, ಚಾಮರಾಜನಗರ (ಮೊ.9900594349) ಇವರನ್ನು ನೇಮಕ ಮಾಡಲಾಗಿದೆ.
ತಂಡದ ಸಂಖ್ಯೆ 16 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಗುಂಡ್ಲುಪೇಟೆ (ದೂ. ಸಂ.08229-222228) ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಚಿಕ್ಕಯಲಚಟ್ಟಿ, ಯಲಚಟ್ಟಿ, ಜಕ್ಕಹಳ್ಳಿ, ಕಣಿಯನಪುರ ಕಾಲೋನಿ, ಮಂಗಲ, ಬಂಡಿಪುರ, ಮಗುವಿನÀಹಳ್ಳಿ, ಮೇಲುಕಾಮನಹಳ್ಳಿ, ಕಲ್ಲೇಗೌಡನಹಳ್ಳಿ, ಪಸಯ್ಯನಪುರ, ಹಂಗಳ – 1 ರಿಂದ 5. ಮತಗಟ್ಟೆ ಸಂಖ್ಯೆ 137 ರಿಂದ 144, 158, 159, 165 ರಿಂದ 169. ಸೆಕ್ಟರ್ ಅಧಿಕಾರಿ – ಸಿದ್ದರಾಜು, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ನೀರಾವರಿ ಇಲಾಖೆ, ಚಾಮರಾಜನಗರ (ಮೊ. 9449191832) ಇವರ ಬದಲಿಗೆ ಮಹದೇವು, ರೇಷ್ಮೆ ವಿಸ್ತರಣಾಧಿಕಾರಿ, ತಾಂತ್ರಿಕ ಸೇವಾ ಕೇಂದ್ರ, ಕಾಮಗೆರೆ, ಕೊಳ್ಳೇಗಾಲ ತಾಲೂಕು (ಮೊ.9980365942) ಇವರನ್ನು ನೇಮಿಸಿದೆ.
ತಂಡದ ಸಂಖ್ಯೆ 17– ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಗುಂಡ್ಲುಪೇಟೆ (ದೂ. ಸಂ.08229-222228). ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ದೇವರಹಳ್ಳಿ, ಹಂಗಳದ ಹೊಸಹಳ್ಳಿ, ಕಳ್ಳೀಪುರ, ಗೋಪಾಲಪುರ, ಹೊನ್ನೇಗೌಡಹಳ್ಳಿ. ಗೋಪಾಲಪುರ, ಕಣ್ಣೇಗಾಲ, ಮದ್ದಯ್ಯನಹುಂಡಿ, ಭೀಮನಬೀಡು – 1,2,3,  ಕೂತನೂರು – 1,2, ಮಲ್ಲಯ್ಯನಪುರ – 1,2. ಮತಗಟ್ಟೆ ಸಂಖ್ಯೆ 170 ರಿಂದ 177, 192 ರಿಂದ 198. ಸೆಕ್ಟರ್ ಅಧಿಕಾರಿ – ರಂಗನಾಥ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕರ್ನಾಟಕ ಗೃಹ ಮಂಡಳಿ, ಚಾಮರಾಜನಗರ (ಮೊ.9449038966) ಇವರ ಬದಲಾಗಿ ರವೀಂದ್ರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕರ್ನಾಟಕ ಗೃಹ ಮಂಡಳಿ, ಚಾಮರಾಜನಗರ (ಮೊ. 9448470311) ಇವರ ನೇಮಕವಾಗಿದೆ.
ತಂಡದ ಸಂಖ್ಯೆ 18 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ –ಗುಂಡ್ಲುಪೇಟೆ (ದೂ. ಸಂ.08229-222228) ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಬೇರಂಬಾಡಿ – 1,2, ಮದ್ದೂರು ಕಾಲೋನಿ, ಚನ್ನಮಲ್ಲಿಪುರ, ಹೊಂಗಹಳ್ಳಿ  - 1 ಮತ್ತು 2, ಮುಕ್ತಿಕಾಲೋನಿ, ಬರಗಿ– 1,2, ಮುಂಟೀಪುರ, ಮೂಖಹಳ್ಳಿ, ತೆಂಕಲಹುಂಡಿ, ಹೊನ್ನಶೆಟ್ಟರಹುಂಡಿ, ಹುಲಸಗುಂದಿ, ಮಎಹಳ್ಳಿ, ಉತ್ತಂಗೆರೆಹುಂಡಿ. ಮತಗಟ್ಟೆ ಸಂಖ್ಯೆ 178 ರಿಂದ 191, 241, 242. ಸೆಕ್ಟರ್ ಅಧಿಕಾರಿ – ಮಹಾಂತೇಶ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಚಾಮರಾಜನಗರ (ಮೊ. 9449821666), ಇವರ ಬದಲಾಗಿ ಮುರುಳೇಶ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಚಾಮರಾಜನಗರ (ಮೊ.9945119833) ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಗುಂಡ್ಲುಪೇಟೆ ಉಪಚುನಾವಣೆ : ಕೆಲ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಬದಲು
ಚಾಮರಾಜನಗರ, ಮಾ. 17 - ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿತ್ತು. ಸದರಿ ಅಧಿಕಾರಿಗಳ ಪೈಕಿ ಕೆಲವು ಅಧಿಕಾರಿಗಳು ಇತರೆ ಕೆಲಸಗಳಲ್ಲಿ  ಈಗಾಗಲೇ ನಿಯೋಜನೆಗೊಂಡಿರುವುದರಿಂದ ಹಾಗೂ ಇತರೆ ಕಾರಣಗಳಿಂದ ಅವರ ಬದಲಿಗೆ ಬದಲಿ ಅಧಿಕಾರಿಗಳನ್ನು ನೇಮಕ ಮಾಡಿ ತಿದ್ದುಪಡಿ ಆದೇಶ ಹೊರಡಿಸಲಾಗಿದೆ.
ತಂಡದ ಸಂಖ್ಯೆ 03 – ಗುಂಡ್ಲುಪೇಟೆ ತಾಲೂಕು ಕಸಬಾ ಹೋಬಳಿಗೆ ನೇಮಕವಾಗಿದ್ದ ಪಿ. ಶಶಿಧರ್, ಸಹಕಾರ ಸಂಘಗಳ  ಜಿಲ್ಲಾ ನೋಂದಣಾಧಿಕಾರಿ, ಚಾಮರಾಜನಗರ (ಮೊ. 9448928132) ಇವರ ಬದಲಾಗಿ ಜವರೇಗೌಡ, ರೇಷ್ಮೆ ಉಪನಿರ್ದೇಶಕರು, ಮಾದರಿ ಬಿತ್ತನೆ ಕೋಠಿ, ಚಾಮರಾಜನಗರ (ಮೊ.9481818750) ಇವರನ್ನು ನೇಮಕ ಮಾಡಲಾಗಿದೆ.
ತಂಡದ ಸಂಖ್ಯೆ 05 – ಗುಂಡ್ಲುಪೇಟೆ ತಾಲೂಕು ಹಂಗಳ ಹೋಬಳಿ - ಚಂದ್ರೇಗೌಡ, ಸಹಾಯಕ ನಿರ್ದೇಶಕರು, ಸಣ್ಣ ಉಳಿತಾಯ ಇಲಾಖೆ, ಚಾಮರಾಜನಗರ (ದೂ.ಸಂ. 08226-226255) ಇವರ ಬದಲಾಗಿ ಎಂ. ಮಹದೇವಸ್ವಾಮಿ, ಸಹಾಯಕ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ, ಚಾಮರಾಜನಗರ (ಮೊ/9448322981) ಇವರ ನೇಮಕವಾಗಿದೆ.
ತಂಡದ ಸಂಖ್ಯೆ 06 – ಚಾಮರಾಜನಗರ ತಾಲೂಕು ಹರವೆ ಹೋಬಳಿ - ನಾಗರಾಜು, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಚಾಮರಾಜನಗರ (ಮೊ.944899922) ಇವರ ಬದಲಿಗೆ ಹೆಚ್.ಎಸ್. ಮಹದೇವು, ಹಿರಿಯ ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಚಾಮರಾಜನಗರ (ಮೊ.9480823040) ಇವರನ್ನು ನೇಮಕ ಮಾಡಲಾಗಿದೆ.
ಉಪಚುನಾವಣೆ : ಅಬಕಾರಿ ಅಧಿಕಾರಿಗಳ ನಿಯೋಜನೆ
ಚಾಮರಾಜನಗರ, ಮಾ. 17 - ಗುಂಡ್ಲುಪೇಟೆ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ, ದಾಸ್ತಾನು, ತಯಾರಿಕೆ, ಸಾಗಾಣಿಕೆ ತಡೆಯುವ ಉದ್ದೇಶದಿಂದ ಗಸ್ತು ಕಾರ್ಯಕ್ಕೆ ಹಾಗೂ ಫ್ಲೈಯಿಂಗ್ ಸ್ಕ್ವಾಡ್ ತಂಡಕ್ಕೆ ಅಬಕಾರಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ - ಎಂ.ಡಿ. ಮೋಹನ್ ಕುಮಾರ್ (9449597187), ಅಬಕಾರಿ ಉಪನಿರೀಕ್ಷಕರು, ಕೃಷ್ಣಮೂರ್ತಿ, ಅಬಕಾರಿ ನಿರೀಕ್ಷಕರು, ಜಿ. ನಾಗೇಶ್, ಗೃಹ ರಕ್ಷಕ, ಜೆ. ಪ್ರಭು, ಗೃಹ ರಕ್ಷಕ, ಎಂ.ಯು. ಉಮಾಶಂಕರ್ (9880754839), ಅಬಕಾರಿ ನಿರೀಕ್ಷಕರು, ಸಿದ್ದರಾಜು, ಅಬಕಾರಿ ರಕ್ಷಕ, ಬಿ. ಶಿವಕುಮಾರ್, ಎಂ. ಮಂಜುನಾಥ, ಗೃಹ ರಕ್ಷಕ, ಸುನಂದ (8123352572), ಅಬಕಾರಿ ನಿರೀಕ್ಷಕರು, ಭಾಸ್ಕರ್ ಮತ್ತು ಶಿವು, ಅಬಕಾರಿ ರಕ್ಷಕರು
ಚಾಮರಾಜನಗರ ತಾಲೂಕು ಹರವೆ ಹೋಬಳಿ ವ್ಯಾಪ್ತಿ - ಚೆಲುವರಾಜು (948240837), ಅಬಕಾರಿ ನಿರೀಕ್ಷಕರು, ಮಂಜುನಾಥ, ಅಬಕಾರಿ ರಕ್ಷಕ, ಎನ್. ನಾಗರಾಜು, ಸಿ, ನಾಗೇಂದ್ರ, ಗೃಹ ರಕ್ಷಕ
ಫ್ಲೈಯಿಂಗ್ ಸ್ಕ್ವಾಡ್ – ವಾಣಿ (9741725921),  ಅಬಕಾರಿ ಉಪನಿರೀಕ್ಷಕರು, ರಾಜು, ಅಬಕಾರಿ ರಕ್ಷಕರು (ಮುನಿಸಿಪಲ್ ಪ್ರದೇಶ ವ್ಯಾಪ್ತಿ), ರೇವಣ್ಣ (9980358515), ಅಬಕಾರಿ ಉಪನಿರೀಕ್ಷಕರು, ಜಯಪ್ರಕಾಶ್, ಅಬಕಾರಿ ರಕ್ಷಕರು (ಗುಂಡ್ಲುಪೇಟೆ ಕಸಬಾ ಹೋಬಳಿ), ತನ್ವೀರ್ (9739239586), ಅಬಕಾರಿ ಉಪನಿರೀಕ್ಷಕರು, ಪ್ರದೀಪ್, ಅಬಕಾರಿ ರಕ್ಷಕರು (ತೆರಕಣಾಂಬಿ ಹೋಬಳಿ), ಶಿವಮಲ್ಲಪ್ಪ (9844884129), ಅಬಕಾರಿ ಉಪನಿರೀಕ್ಷಕರು, ಸುಂದರಪ್ಪ, ಅಬಕಾರಿ ರಕ್ಷಕರು, ಶಿವನಂಜಾಚಾರಿ (9845798122), ಅಬಕಾರಿ ಉಪನಿರೀಕ್ಷಕರು, ರಾಜೇಶ್, ಅಬಕಾರಿ ರಕ್ಷಕರು (ಹರವೆ ಹೋಬಳಿ). ದೀಪು ಎನ್ (8310675068), ಅಬಕಾರಿ ನಿರೀಕ್ಷಕರು, ರಾಜು, ಅಬಕಾರಿ ರಕ್ಷಕರು (ಬೇಗೂರು ಹೋಬಳಿ).
ಅಬಕಾರಿ ಇಲಾಖೆಯ ಪರವಾಗಿ ಚುನಾವಣಾ ಸಂಬಂಧ ನೋಡಲ್ ಅಧಿಕಾರಿಯಾಗಿ ಅಬಕಾರಿ ಉಪಾಧೀಕ್ಷಕರಾದ  ಗಂಗಾಧರ ಮುದೇಣ್ಣನವರ್ ಅವರನ್ನು ನೇಮಿಸಲಾಗಿದೆ. ಇವರೊಂದಿಗೆ ಅಬಕಾರಿ ರಕ್ಷಕರಾದ ರವಿ, ಬಾಸಿನ್, ಗೃಹ ರಕ್ಷಕರಾದ ಶ್ರೀನಿವಾಸ್ ಕಾರ್ಯ ನಿರ್ವಹಿಸಲಿದ್ದಾರೆ.
ನಾಗರಿಕರು ಇಲಾಖೆಯ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳಿಗೆ ಮಾಹಿತಿ ನೀಡುವಂತೆ ಅಬಕಾರಿ ಉಪ ಆಯುಕ್ತರು ಕೆ.ಎನ್. ನಾಗೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಇಲ್ಲಿ ಜಿಲ್ಲಾದಿಕಾರಿ ಆದೇಶಕ್ಕೆ ಕವಡೆ ಕಾಸಿನ ಬೆಲೆಯಿಲ್ಲ..!

ಇಲ್ಲಿ ಜಿಲ್ಲಾದಿಕಾರಿ ಆದೇಶಕ್ಕೆ ಕವಡೆ ಕಾಸಿನ ಬೆಲೆಯಿಲ್ಲ..! ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಚಾಮರಾಜನಗರ: ಪರೀಕ್ಷಾ ಕೇಂದ್ರದ 200 ಮೀ ಸುತ್ತಮುತ್ತ ಜೆರಾಕ್ಸ್ ಅಂಗಡಿಯನ್ನು ಜಿಲ್ಲಾದಿಕಾರಿ ಆದೇಶ ಹೊರಡಿಸಿದ್ದರೂ ಜಿಲ್ಲಾದಿಕಾರಿ ಆದೇಶಕ್ಕೆ ಕವಡೆ ಕಾಸಿನ ಬೆಲೆಯಿಲ್ಲದಂತಾಗಿದೆ. ಮಾರ್ಚ್ 9 ರಿಂದ 27 ರವರೆಗೆ ದ್ವಿ.ಪಿ.ಯು.ಪರೀಕ್ಷೆ ನಡೆಯುತ್ತಿದ್ದು ಸದರಿ ಬೆಳಿಗ್ಗೆ 6 ರಿಂದ ಸಂಜೆ 6 ರವಗೆ ನಿಷೇದಾಜ್ಞೆ ಹೊರಡಿಸಿರುವುದರ ಜೊತೆಗೆ ಜೆರಕ್ಸ್ ಅಂಗಡಿಗಳನ್ನು ಬೆಳಿಗ್ಗೆ 8 ರಿಂದ ಮದ್ಯಹ್ನ 2.30 ರವರೆಗೆ ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ. ದ್ವಿ.ಪಿ.ಯು.ಪರೀಕ್ಷೆ ನಡೆಯುವ ಕೇಂದ್ರದ ಸುತ್ತಮುತ್ತ ಎಗ್ಗಿಲ್ಲದೆ ಅಂಗಡಿ ತೆರೆದುಕೊಂಡಿದ್ದು ಚಾಮರಜನಗರ ಜಿಲ್ಲಾ ಪರೀಕ್ಷಾ ಮೇಲ್ವಿಚಾರಕರು, ಉಪನಿರ್ದೇಶಕರ ಕಣ್ಣಿಗೆ ಇದು ಕಾಣದೇ ಇರುವುದು ವಿಪರ್ಯಾಸವಾಗಿದೆ ಎಂದರೆ ತಪ್ಪಾಗಲಾರದು. ಒಟ್ಟಾರೆ ಅದಿಕಾರಿಗಳಿರಲಿ ಜಿಲ್ಲಾದಿಕಾರಿ ಹೊರಡಿಸಿದ ಆದೇಶ ಆದೇಶವಾಗಿ ಉಳಿಯಿತೇ ಹೊರತು ಅದು ಜಾರಿಗೆ ಬರದೆ ಕವಡೆP ಕಾಸಿಗೆ ಬೆಲೆಯಿಲ್ಲದಂತಾಗಿದೆ ಎಂದರೆ ತಪ್ಪಾಗಲಾರದು.

Thursday, 16 March 2017

ಗುಂಡ್ಲುಪೇಟೆ ಉಪಚುನಾವಣೆ : ಮೂರನೇ ದಿನವೂ ನಾಮಪತ್ರ ಸಲ್ಲಿಕೆ ಇಲ್ಲ 16-03-2017

ಗುಂಡ್ಲುಪೇಟೆ ಉಪಚುನಾವಣೆ : ಮೂರನೇ ದಿನವೂ ನಾಮಪತ್ರ ಸಲ್ಲಿಕೆ ಇಲ್ಲ ಚಾಮರಾಜನಗರ, ಮಾ. 16 :- ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಮೂರÀನೇ ದಿನವಾದ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ : ಚೆಕ್‍ಪೋಸ್ಟ್‍ಗೆ ಅಧಿಕಾರಿಗಳ ನಿಯೋಜನೆ ಚಾಮರಾಜನಗರ, ಮಾ. 16 - ಗುಂಡ್ಲುಪೇಟೆ ವಿಧಾನ ಸಭಾ ಚುನಾವಣೆ ಸಂಬಂಧಿಸಿದಂತೆ ಚೆಕ್‍ಪೋಸ್ಟ್‍ಗಳನ್ನು ತೆರಯಲಾಗಿದ್ದು, ಇದಕ್ಕಾಗಿ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ರಾಮು ರವರು ಆದೇಶ ಹೊರಡಿಸಿದ್ದಾರೆ. ಹೀರಿಕಾಟಿ ಚೆಕ್‍ಪೋಸ್ಟ್-ಮೋಹನ್‍ದಾಸ್ (ಸೆಕ್ಟರ್ ಅಧಿಕಾರಿ ಮೊ-8277930762), ರಾಚಪ್ಪ (ಪ್ಲೈಯಿಂಗ್ ಸ್ಕ್ವಾಡ್ ಮೊ-9448424665), ಕೆ.ಎಂ.ರಾಮಪ್ರಸಾದ್ (ಮೊ-9739826854), ವಾಸುದೇವ (ಮೊ-9742593734), ಕೆ.ಎಂ.ರವಿ (ಮೊ-7406203406), ಗಂಗಾಧರಸ್ವಾಮಿ (ಡಿವೈಎಸ್ಪಿ ಮೊ-9480804651), ಶಶಿಧರ್ (ಎ.ಎಸ್.ಐ ಮೊ-9964481589), ನಂಜುಂಡ (ಎ.ಎಸ್.ಐ ಮೊ-9886017585), ಮಂಜುನಾಥ್ (ಹೆಚ್.ಸಿ.ಪಿ.ಸಿ ಮೊ-9886998224), ವಸಂತಕುಮಾರ್ (ಹೆಚ್.ಸಿ.ಪಿ.ಸಿ ಮೊ-9480442288), ಪಿ.ಸಿದ್ದರಾಜು (ಎಕ್ಸೈಜ್ ಗಾರ್ಡ್). ಕುರುಬರಹುಂಡಿ ಚೆಕ್‍ಪೋಸ್ಟ್- ಸುಂದ್ರಮ್ಮ (ಸೆಕ್ಟರ್ ಅಧಿಕಾರಿ ಮೊ-9277930765), ರಾಚಪ್ಪ (ಪ್ಲೈಯಿಂಗ್ ಸ್ಕ್ವಾಡ್ ಮೊ-9448424665), ಕೆ.ಜಿ.ಜಯಣ್ಣ (ಮೊ-9632896441), ಸಿದ್ದರಾಜು (ಮೊ-9611844342), ಅನಿಲ್ (ಮೊ-8123434618), ಸಿದ್ದಲಿಂಗೇಗೌಡ (ಎ.ಎಸ್.ಐ ಮೊ-9902433718), ಲಕ್ಷ್ಮಿನಾರಾಯಣ (ಎ.ಎಸ್.ಐ ಮೊ-9741756550), ನಟರಾಜು (ಹೆಚ್.ಸಿ ಮೊ-9591927080), ಮಹದೇವಸ್ವಾಮಿ (ಪಿ.ಸಿ ಮೊ-9945474581), ಬಿ.ವಿ.ಕೃಷ್ಣಮೂರ್ತಿ (ಎಕ್ಸೈಜ್ ಗಾರ್ಡ್). ಬಂಡೀಪುರ ಚೆಕ್‍ಪೋಸ್ಟ್-ನಿಜಲಿಂಗಸ್ವಾಮಿ (ಸೆಕ್ಟರ್ ಅಧಿಕಾರಿ ಮೊ-9483308663), ಕೆ.ಹೆಚ್.ಸತೀಶ್ (ಪ್ಲೈಯಿಂಗ್ ಸ್ಕ್ವಾಡ್ ಮೊ-9964182077), ಕೃಷ್ಣಮೂರ್ತಿ (ಮೊ-9342825630), ಬಸವಲಿಂಗಪ್ಪ ಶಾಂತಪ್ಪ (ಮೊ-8861162104), ಚಿಕ್ಕರಾಚೇಗೌಡ (ಮೊ-9342769890), ಗಂಗಾಧರಸ್ವಾಮಿ (ಡಿವೈಎಸ್ಪಿ ಮೊ-9480804651), ಮಲ್ಲಿಕಾರ್ಜುನ (ಎ.ಎಸ್.ಐ ಮೊ-9483328954), ಅಬ್ಸಾಲ್ ಬೇಗ್ (ಎ.ಎಸ್.ಐ ಮೊ-8884959525), ಮಲ್ಲು (ಪಿ.ಸಿ ಮೊ-9886741291), ವಿಶ್ವ (ಹೆಚ್.ಸಿ ಮೊ-9884097340), ಸೋಮು.ಕೆ (ಡಿ.ಆರ್.ಎಫ್ ಮೊ-8139948438), ಎಸ್.ಕುಮಾರಸ್ವಾಮಿ (ಡಿ.ಆರ್.ಎಫ್ ಮೊ-9449364222), ಬಿ.ರವಿಕುಮಾರ್ (ಎಕ್ಸೈಜ್ ಗಾರ್ಡ್). ಮದ್ದೂರು ಚೆಕ್‍ಪೋಸ್ಟ್-ಮಹದೇವು (ಸೆಕ್ಟರ್ ಅಧಿಕಾರಿ ಮೊ-9448795791), ಕೆ.ಹೆಚ್.ಸತೀಶ್ (ಪ್ಲೈಯಿಂಗ್ ಸ್ಕ್ವಾಡ್ ಮೊ-9964182077), ನಾಗರಾಜು (ಮೊ-974312303), ಭಗವಂತರಾಯ (ಮೊ-9108249009), ಸದ್ದಾಂಹುಸೇನ್ (ಮೊ-8497840979), ಗಂಗಾಧರಸ್ವಾಮಿ (ಡಿವೈಎಸ್ಪಿ ಮೊ-9480804651), ಶಿವಪ್ಪ (ಎ.ಎಸ್.ಐ ಮೊ-9591564210), ವೆಂಕಟೇಶ್ (ಎ.ಎಸ್.ಐ ಮೊ-9901771932), ಸಿದ್ದರಾಜು (ಪಿ.ಸಿ ಮೊ-97090201071), ಸುರೇಶ್ (ಹೆಚ್.ಸಿ ಮೊ-9448905116), ಮಂಜುನಾಥ.ಎಂ (ಎಕ್ಸೈಜ್‍ಗಾರ್ಡ್), ಸಿದ್ದಾಪ್ಪಾಜಿ (ಅರಣ್ಯ ವೀಕ್ಷಕ), ಮಂಜುನಾಥ (ಅರಣ್ಯ ವೀಕ್ಷಕ ಮೊ-9108397238). ನಂಜದೇವನಪುರ ಚೆಕ್‍ಪೋಸ್ಟ್-ವಿಜಯ ಸಾರಥಿ (ಸೆಕ್ಟರ್ ಅಧಿಕಾರಿ ಮೊ-9845974671), ನಾಗರಾಜ್ (ಪ್ಲೈಯಿಂಗ್ ಸ್ಕ್ವಾಡ್ ಮೊ-9448999221), ಕುರುಬರ ಶ್ರೀಧರ (ಮೊ-9741270125), ಸಂತೋಷ್‍ಕುಮಾರ್ (ಮೊ-7259625845), ಜಯಪ್ಪ (ಮೊ-9449490017), ಗಂಗಾಧರಸ್ವಾಮಿ (ಡಿವೈಎಸ್ಪಿ ಮೊ-9480804651), ಪ್ರಭುಸ್ವಾಮಿ (ಎ.ಎಸ್.ಐ ಮೊ-8453250245), ಎಂ.ರವಿ (ಎ.ಎಸ್.ಐ ಮೊ-9972835299), ಪೈಗಂಬರ್ ಗಡೆಕರ್ (ಪಿ.ಸಿ ಮೊ-9590844929), ಶಿವಕುಮಾರ್ (ಪಿ.ಸಿ ಮೊ-9164024357), ರಾಜೇಶ.ಆರ್ (ಎಕ್ಸೈಜ್ ಗಾರ್ಡ್). ತೆರಕಣಾಂಬಿ ಚೆಕ್‍ಪೋಸ್ಟ್-ಸೋಮಶೇಖರ್ (ಸೆಕ್ಟರ್ ಅಧಿಕಾರಿ ಮೊ-9449001630), ಸೈಯದ್ ನಿಜಾಮ್ ಅಹಮದ್ (ಪ್ಲೈಯಿಂಗ್ ಸ್ಕ್ವಾಡ್ ಮೊ-9448816563), ಚಂದ್ರಪ್ಪ (ಮೊ-8722544757), ಎಂ.ರಾಜೇಂದ್ರ (ಮೊ-9731133080), ಸಿ.ರಂಗಸ್ವಾಮಿ (ಮೊ-9036869497), ಗಂಗಾಧರಸ್ವಾಮಿ (ಡಿವೈಎಸ್ಪಿ ಮೊ-9480804651), ಪ್ರಭಾಕರ್ (ಎ.ಎಸ್.ಐ ಮೊ-8277418868), ರಾಮಕೃಷ್ಣ (ಎ.ಎಸ್.ಐ ಮೊ-9448164251), ರಾಜಪ್ಪ (ಹೆಚ್.ಸಿ (ಮೊ-9900366806), ಮಹಾದೇವಸ್ವಾಮಿ (ಹೆಚ್.ಸಿ ಮೊ-9886284010), ಎನ್.ಜಯಪ್ರಕಾಶ್ (ಎಕ್ಸೈಜ್ ಗಾರ್ಡ್). ಹೆಗ್ಗವಾಡಿ ಕ್ರಾಸ್ ಚೆಕ್‍ಪೋಸ್ಟ್-ರಾಮಕೃಷ್ಣಯ್ಯ (ಸೆಕ್ಟರ್ ಅಧಿಕಾರಿ ಮೊ-9845565133), ನಾಗರಾಜ್ (ಪ್ಲೈಯಿಂಗ್ ಸ್ಕ್ವಾಡ್ ಮೊ-9448999221), ವೆಂಕಟೇಶ.ಎಂ (ಮೊ-9902436877), ಮಣಿಕಂಠ (ಮೊ-8151915694), ಬಸವರಾಜ ಹಂಡರಾಳ್ (ಮೊ-9945552257), ಗಂಗಾಧರಸ್ವಾಮಿ (ಡಿವೈಎಸ್ಪಿ ಮೊ-9480804651), ಸೋಮಾರಾಧ್ಯ (ಎ.ಎಸ್.ಐ ಮೊ-9590350728), ನಟರಾಜು (ಎ.ಎಸ್.ಐ ಮೊ-9482265965), ಉಮೇಶ (ಪಿ.ಸಿ ಮೊ-9035214689), ಯೋಗೇಶ್ (ಪಿ.ಸಿ ಮೊ-9986396135), ಎಂ.ಎನ್.ಸುಂದ್ರಪ್ಪ (ಎಕ್ಸೈಜ್ ಗಾರ್ಡ್). ಬೊಮ್ಮನಹಳ್ಳಿ ಚೆಕ್‍ಪೋಸ್ಟ್-ಕೆ.ಆರ್.ಕುಲಕರ್ಣಿ (ಸೆಕ್ಟರ್ ಅಧಿಕಾರಿ ಮೊ-8762376353), ಸೈಯದ್ ನಿಜಾಮ್ ಅಹಮದ್ (ಪ್ಲೈಯಿಂಗ್ ಸ್ಕ್ವಾಡ್ ಮೊ-9448816563), ಬಸವರಾಜು ಪೂಜಾರಿ (ಮೊ-9880930694), ಶರಣಪ್ಪ ಎನ್.ಕಜಾರಿ (ಮೊ-9986111742), ಸಿ.ಮಂಜು (ಮೊ-9900352006), ಗಂಗಾಧರಸ್ವಾಮಿ (ಡಿವೈಎಸ್ಪಿ ಮೊ-9480804651), ಮಹದೇವ (ಎ.ಎಸ್.ಐ ಮೊ-8197700532), ಅಶ್ವಥ್ (ಎ.ಎಸ್.ಐ ಮೊ-9986540946), ನಂದೀಶ (ಪಿ.ಸಿ ಮೊ-7760165868), ಸಿದ್ದಯ್ಯ (ಎಕ್ಸೈಜ್ ಗಾರ್ಡ್). ಉಡಿಗಾಲ ಚೆಕ್‍ಪೋಸ್ಟ್-ವಿಜಯ ಸಾರಥಿ (ಸೆಕ್ಟರ್ ಅಧಿಕಾರಿ ಮೊ-9845974671), ನಾಗರಾಜ್ (ಪ್ಲೈಯಿಂಗ್ ಸ್ಕ್ವಾಡ್ ಮೊ-9448999221), ಡಿ.ರಾಜಯ್ಯ (ಮೊ-9945475818), ಎನ್.ರೇವಣ್ಣ (ಮೊ-7353880627), ಆರ್.ಎಲ್.ವಿನಯ್ (ಮೊ-9964361782), ಗಂಗಾಧರಸ್ವಾಮಿ (ಡಿವೈಎಸ್ಪಿ ಮೊ-9480804651), ಟಿ.ಆರ್.ವೆಂಕಟೇಶ (ಎ.ಎಸ್.ಐ (ಮೊ-9964541202), ವಿ.ರಾಜು (ಎ.ಎಸ್.ಐ ಮೊ-9945658901), ವಿನಯ್‍ಕುಮಾರ್ (ಪಿ.ಸಿ), ಸಲೀಂ ಪಾಷ (ಪಿ.ಸಿ ಮೊ-9886131459), ರಾಜು (ಎಕ್ಸೈಜ್ ಗಾರ್ಡ್). ಕಾಳನಹುಂಡಿ ಕ್ರಾಸ್ ಚೆಕ್‍ಪೋಸ್ಟ್-ರಾಮಕೃಷ್ಣಯ್ಯ (ಸೆಕ್ಟರ್ ಅಧಿಕಾರಿ ಮೊ-9845565133), ನಾಗರಾಜ್ (ಪ್ಲೈಯಿಂಗ್ ಸ್ಕ್ವಾಡ್ ಮೊ-9448999221), ಮಹೇಶ್‍ಕುಮಾರ್ (ಮೊ-9901262081), ಎಲ್.ರೇವಣ್ಣ (ಮೊ-9620759494), ಆನಂದದೂಳಪ್ಪನವರ್ (ಮೊ-9620526536), ಗಂಗಾಧರಸ್ವಾಮಿ (ಡಿವೈಎಸ್ಪಿ ಮೊ-9480804651), ನಾಗೇಂದ್ರರಾವ್ (ಎ.ಎಸ್.ಐ ಮೊ-9482456084), ಶಿವಶಂಕರ್ (ಎ.ಎಸ್.ಐ ಮೊ-9448744189), ವೃಷಭೇಂದ್ರ (ಪಿ.ಸಿ ಮೊ-8105529954), ಮೊಳಲಿ ಡಿ ನಾಯ್ಕೋಡಿ (ಪಿ.ಸಿ ಮೊ-7026280147), ಪ್ರದೀಪ್ ಕುಮಾರ್ (ಎಕ್ಸೈಜ್ ಗಾರ್ಡ್). ಕೆಬ್ಬೇಪುರ ಚೆಕ್‍ಪೋಸ್ಟ್-ಪುಟ್ಟಮಲ್ಲು (ಸೆಕ್ಟರ್ ಅಧಿಕಾರಿ ಮೊ-9481593164), ನಾಗರಾಜ್ (ಪ್ಲೈಯಿಂಗ್ ಸ್ಕ್ವಾಡ್ ಮೊ-9448999221), ನಾಗೇಶ್‍ಮೂರ್ತಿ (ಮೊ-9008256923), ಡಿ.ರಾಜಶೇಖರ್ ಮೂರ್ತಿ (ಮೊ-7090449505), ಸುರೇಶ (ಮೊ-9972746846), ಗಂಗಾಧರಸ್ವಾಮಿ (ಡಿವೈಎಸ್ಪಿ ಮೊ-9480804651), ರಾಜಣ್ಣ (ಎ.ಎಸ್.ಐ ಮೊ-8743057530), ಸಿದ್ದರಾಜು (ಎ.ಎಸ್.ಐ ಮೊ-9739510518), ನಾರಾಯಣಸ್ವಾಮಿ (ಪಿ.ಸಿ ಮೊ-9491895269), ಮಹದೇವಮೂರ್ತಿ (ಪಿ.ಸಿ ಮೊ-8050017567), ಎಂ.ಕೆ.ಸ್ವಾಮಿ (ಎಕ್ಸೈಜ್ ಗಾರ್ಡ್). ಗುಂಡ್ಲುಪೇಟೆ ಉಪ ಚುನಾವಣೆ : ನೋಡಲ್ ಅಧಿಕಾರಿ ನೇಮಕ ಚಾಮರಾಜನಗರ, ಮಾ. 16 - ಗುಂಡ್ಲುಪೇಟೆ ವಿಧಾನ ಸಭಾ ಚುನಾವಣೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಅನುಷ್ಠಾನ, ಕಾನೂನು ಸುವ್ಯವಸ್ಥೆ, ಅಂಚೆ ಮತಪತ್ರ, ಮತ್ತಿತರ ಚುನಾವಣೆಗೆ ಸಂಬಂಧಿಸಿದಂತೆ ಕರ್ತವ್ಯಗಳನ್ನು ನಿರ್ವಹಿಸಿ ಜಿಲ್ಲಾ ಚುನವಣಾಧಿಕಾರಿಗಳಿಗೆ ಮಾಹಿತಿ ನೀಡುವ ಸಲುವಾಗಿ ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ (ಮೊ-8277930760) ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ರಾಮು ಅವರು ಆದೇಶ ಹೊರಡಿಸಿದ್ದಾರೆ.

Wednesday, 15 March 2017

15-03-2017 (ಗ್ರಾಹಕರು ಜಾಗೃತಿ ಹೊಂದಲು ಜಿಲ್ಲಾಧಿಕಾರಿ ಸಲಹೆ,ಬಾಬು ಜಗಜೀವನ್ ರಾಮ್, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆಗೆ ತೀರ್ಮಾನ ,,ಉಪಚುನಾವಣೆ : ಎರಡನೇ ದಿನವೂ ನಾಮಪತ್ರ ಸಲ್ಲಿಕೆ ಇಲ್ಲ)

******************************************************** ಬಾಬು ಜಗಜೀವನ್ ರಾಮ್, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆಗೆ ತೀರ್ಮಾನ ಚಾಮರಾಜನಗರ, ಮಾ. 15 :- ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆಯನ್ನು ಏಪ್ರಿಲ್ 5 ರಂದು ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಏಪ್ರಿಲ್ 14 ರಂದು ಜಿಲ್ಲಾ ಆಡಳಿತದ ವತಿಯಿಂದ ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳ ಹಾಗೂ ಆರ್ಥ ಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಬಾಬೂಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನ ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸಂಬಂಧ ಜಿಲ್ಲಾಧಿಕಾರಿ ಬಿ.ರಾಮು ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲಾಧಿಕಾರಿ ಬಿ.ರಾಮು ಅವರು ಮಾತನಾಡಿ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ನೀತಿ ಸಂಹಿತೆಯು ಮಾರ್ಚ್ 9 ರಿಂದ ಆರಂಭವಾಗಿದ್ದು, ಏಪ್ರಿಲ್ 15 ರವರೆಗೂ ಜಾರಿಯಲ್ಲಿರುತ್ತದೆ. ಈ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಪಾಲನೆ ಅನುಗುಣವಾಗಿ ಕಾರ್ಯಕ್ರಮವನ್ನು ರೂಪಿಸಬೇಕಿದೆ. ಹೀಗಾಗಿ ಬಾಬು ಜಗಜೀವನ್ ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನ ಆಚರಣೆ ಕಾರ್ಯಕ್ರಮವನ್ನು ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಬೇಕು. ಮೆರವಣಿಗೆ ಕಾರ್ಯಕ್ರಮವನ್ನು ಈ ಬಾರಿ ಏರ್ಪಡಿಸಲು ಅವಕಾಶವಾಗುತ್ತಿಲ್ಲ ಎಂದು ತಿಳಿಸಿದರು. ಬಾಬೂಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಎಂದಿನಂತೆ ಆಯೋಜಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಿಚಾರಧಾರೆಗಳ ಕುರಿತು ಉಪನ್ಯಾಸ ಏರ್ಪಡಿಸಲು ವಿಚಾರವಾದಿಗಳನ್ನು ಆಹ್ವಾನಿಸಬೇಕು. ಈ ನಿಟ್ಟಿನಲ್ಲಿ ಆಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಬಳಿಕ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಕಾರ್ಯಕ್ರಮ ಇರುತ್ತದೆ. ಬಳಿಕ ಅಂಬೇಡ್ಕರ್ ಅವರ ಕುರಿತು ವಿಚಾರ ಧಾರೆಗಳ ಉಪನ್ಯಾಸ ಕಾರ್ಯಕ್ರಮವು ಸಹ ಆಯೋಜಿಸಬೇಕು. ಇದಕ್ಕಾಗಿ ಅಧಿಕಾರಿಗಳು ಈಗಿನಿಂದಲೇ ಅಗತ್ಯವಿರುವ ಪ್ರಕ್ರಿಯೆ ಕೈಗೊಳ್ಳಬೇಕು ಎಂದರು. ಬಾಬೂಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಸರ್ವರೂ ಸಹಕರಿಸಿ ಪಾಲ್ಗೊಳ್ಳಬೇಕು. ಕಾರ್ಯಕ್ರಮ ಯಶ್ವಸಿಯಾಗಲು ಪ್ರತಿಯೊಬ್ಬರು ಜಿಲ್ಲಾಡಳಿತದ ಜೊತೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಬಿ.ರಾಮು ಮನವಿ ಮಾಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಕೆ.ಹೆಚ್.ಸತೀಶ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ***************************************************************** ಗ್ರಾಹಕರು ಜಾಗೃತಿ ಹೊಂದಲು ಜಿಲ್ಲಾಧಿಕಾರಿ ಸಲಹೆ ಚಾಮರಾಜನಗರ, ಮಾ. 15:- ವಸ್ತು ಖರೀದಿ ಸರಕು ಸೇವೆಗಳ ಸೌಲಭ್ಯ ಪಡೆಯುವ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತಗೊಳ್ಳದಿದ್ದರೆ ಶೋಷಣೆಗೆ ಒಳಗಾಗಬೇಕಾಗುತ್ತದೆಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು. ನಗರದ ಜಿಲ್ಲಾಡಳಿತ ಭವನದ ಆವರಣದ ಕೆ.ಡಿ.ಪಿ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ಇಲಾಖೆ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಆಶ್ರಯದಲ್ಲಿ ನಡೆದ ವಿಶ್ವ ಗ್ರಾಹಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ಗ್ರಾಹಕರು ತಾವು ಖರೀದಿಸಿದ ವಸ್ತು, ಪಡೆಯುವ ಸೇವೆ ಗುಣಮಟ್ಟದ್ದಾಗಿರಬೇಕೆಂದು ಬಯಸುತ್ತಾರೆ. ಗ್ರಾಹಕರ ನಿರೀಕ್ಷೆಗೆ ಅನುಗುಣವಾಗಿ ವರ್ತಕರು, ವ್ಯಾಪಾರಿಗಳು ಉತ್ತಮ ವಸ್ತು ಸೇವೆ ನೀಡುವಂತಾಗಬೇಕು. ಗ್ರಾಹಕರು ಯಾವುದೇ ನ್ಯೂನ್ಯತೆ ಕಂಡುಬಂದರೆ ಮುಲಾಜಿಗೆ ಒಳಗಾಗದೇ ಗ್ರಾಹಕರ ಪರಿಹಾರ ಕೇಂದ್ರದಲ್ಲಿ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಬೇಕು ಎಂದರು. ಗ್ರಾಹಕರಿಗೆ ಅವರದೇ ಆದ ಹಕ್ಕುಗಳಿವೆ. ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಕಾಯ್ದೆ, ನಿಯಮಗಳ ಬಗ್ಗೆ ಅರಿತುಕೊಂಡಷ್ಟು ಶೋಷಣೆಗೆ ಗುರಿಯಾಗುವುದು ತಪ್ಪಲಿದೆ. ಹೀಗಾಗಿ ಗ್ರಾಹಕ ಜಾಗೃತಿ ಕಾರ್ಯಕ್ರಮಗಳು ಉಪಯೋಗವಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಮಾತನಾಡಿ ಕಾನೂನು ಅಡಿಯಲ್ಲಿ ಗ್ರಾಹಕರಿಗೆ ರಕ್ಷಣೆ ಇದೆ. ಈ ಹಿನ್ನೆಲೆಯಲ್ಲಿ ಮೋಸ ಮಾಡುವವರಿಗಿಂತ ಮೋಸ ಹೋಗುವ ಗ್ರಾಹಕರು ಎಚ್ಚರದಿಂದ ಇದ್ದರೆ ವಂಚಿಸುವುದರಿಂದ ತಪ್ಪಿಸಿಕೊಳ್ಳಬಹುದು. ಗ್ರಾಹಕರ ಅರಿವು ಕಾರ್ಯಕ್ರಮಗಳು ಹೆಚ್ಚು ಮೂಡಿ ಬರಬೇಕು ಎಂದರು. ಮುಖ್ಯ ಉಪನ್ಯಾಸ ನೀಡಿದ ವಕೀಲರಾದ ವೆಂಕಟಾಚಲ ಅವರು 1983 ರಲ್ಲಿ ವಿಶ್ವ ಗ್ರಾಹಕ ದಿನಾಚರಣೆಯನ್ನು ಮೊದಲಿಗೆ ಹಮ್ಮಿಕೊಳ್ಳಲಾಯಿತು. ಶಾಲೆಗಳಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ ತಿಳಿಸಿಕೊಡುವ ಉದ್ದೇಶದಿಂದ ಕ್ಲಬ್‍ಗಳನ್ನು ಸ್ಥಾಪಿಸಲಾಗಿದೆ. ಇದೇ ರೀತಿ ಎಲ್ಲಾ ಗ್ರಾಹಕರಿಗೂ ಅರಿವು ಮೂಡಿಸಲು ವ್ಯಾಪಕವಾಗಿ ಕಾರ್ಯಕ್ರಮ ಏರ್ಪಡಿಸದರೇ ಅನುಕೂಲವಾಗಲಿದೆ ಎಂದರು. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರಾದ ಕೆ.ಎಲ್.ಶಿವಲಿಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯರಾದ ಗೌರಮ್ಮಣಿ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷರಾದ ಮಾದಮ್ಮ, ಆಹಾರ ಇಲಾಖೆಯ ಉಪ ನಿರ್ದೇಶಕರಾದ ಆರ್.ರಾಚಪ್ಪ ಕಾಯ್ರಕ್ರಮದಲ್ಲಿ ಉಪಸ್ಥಿತರಿದ್ದರು. ***************************************************************** ಗುಂಡ್ಲುಪೇಟೆ ಉಪಚುನಾವಣೆ : ಎರಡನೇ ದಿನವೂ ನಾಮಪತ್ರ ಸಲ್ಲಿಕೆ ಇಲ್ಲ ಚಾಮರಾಜನಗರ, ಮಾ. 15 (- ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಎರಡನೇಯ ದಿನವಾದ ಇಂದು ಯಾವುದೆ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ************************************************** ಗುಂಡ್ಲುಪೇಟೆ ಉಪಚುನಾವಣೆ : ಅಬಕಾರಿ ಮಾಹಿತಿಗಾಗಿ ಕಂಟ್ರೋಲ್ ರೂಂ ಚಾಮರಾಜನಗರ, ಮಾ. 15 - ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ ಪ್ರಯುಕ್ತ ಅಕ್ರಮ ಮದ್ಯ ಮಾರಾಟ, ತಯಾರಿಕೆ, ದಾಸ್ತಾನು, ಸಾಗಾಣಿಕೆ ಇತ್ಯಾದಿಗಳ ಕುರಿತು ಮಾಹಿತಿಯನ್ನು ಅಬಕಾರಿ ಇಲಾಖೆಗೆ ನೀಡಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ. ಕಂಟ್ರೋಲ್ ರೂಂಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು ಸಾರ್ವಜನಿಕರು ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆಗೆ ಅಥವಾ ಇಲಾಖೆಯ ಕಂಟ್ರೋಲ್ ರೂಂ ಮೇಲುಸ್ತುವಾರಿ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲು ಕೋರಲಾಗಿದೆ. ಕಂಟ್ರೋಲ್ ರೂಂಗಳು ಚಾಮರಾಜನಗರ ಹಾಗೂ ಗುಂಡ್ಲುಪೇಟೆಯಲ್ಲಿ ಕಾರ್ಯನಿರ್ವಹಿಸಲಿದ್ದು ವಿವರ ಇಂತಿದೆ. ಅಬಕಾರಿ ಉಪ ಆಯುಕ್ತರ ಕಚೇರಿ, ಚಾಮರಾಜನಗರ ಜಿಲ್ಲೆ, ಚಾಮರಾಜನಗರ (ದೂ.ಸಂ. 08226-224892), ಶ್ರೀ ಗಂಗಾಧರ ಮುದೇಣ್ಣವರ, ಅಬಕಾರಿ ಉಪ ಅಧೀಕ್ಷಕರು, ಚಾಮರಾಜನಗರ ಉಪವಿಭಾಗ (ಮೊಬೈಲ್ 9449597186), ಅಬಕಾರಿ ನಿರೀಕ್ಷಕರ ಕಚೇರಿ, ಗುಂಡ್ಲುಪೇಟೆ ವಲಯ, ಗುಂಡ್ಲುಪೇಟೆ (ದೂ.ಸಂ. 08229-223289), ಸುನಂದ, ಅಬಕಾರಿ ನಿರೀಕ್ಷಕರು (ಮೊಬೈಲ್ 9964861036) ಇಲ್ಲಿಗೆ ಮಾಹಿತಿ ನೀಡುವಂತೆ ಅಬಕಾರಿ ಇಲಾಖೆ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ****************************************************************

Tuesday, 14 March 2017

ಎಸ್ಪಿ ಕುಲದೀಪ್ ಕುಮಾರ್ ಜೈನ್ ಪ್ರಾಣಾಪಾಯದಿಂದ ಪಾರು, ಎದುರುಗಡೆ ಬಂದು ಅಪಘಾತ ಮಾಡಿದ ಚಾಲಕನ ವಶ ಪಡೆದ ಆರಕ್ಷಕರು.(ಅಪಘಾತವಾದಾಗ ನರಸೀಪುರದವರು ತೆಗೆದ ಚಿತ್ರ),

******************************************************* ಎಸ್ಪಿ ಕುಲದೀಪ್ ಕುಮಾರ್ ಜೈನ್ ಪ್ರಾಣಾಪಾಯದಿಂದ ಪಾರು REPORTED BY S.VEERABHADRA SWAMY. RAMASAMUDRA ಚಾಮರಾಜನಗರ, ಮಾ. 14 :-ಇನ್ನೋವಾ ಕಾರಿಗೆ ಟಾಟಾ ಸುಮೋ ಡಿಕ್ಕಿ ಹೊಡೆದ ಪರಿಣಾಮ ಎಸ್ಪಿ ಅವರ ಚಾಲಕನಿಗೆ ಸಣ್ಣಪುಟ್ಟ ಗಾಯ ಹೊರತು ಪಡಿಸಿದರೆ ಚಾಮರಾಜನಗರ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮದ್ಯಾಹ್ನದ ಸರಿ ಸುಮಾರು 4 ರ ಸಮಯದಲ್ಲಿ ಚಾಮರಾಜನಗರ ಎಎಸ್. ಕುಲದೀಪ್ ಕುಮಾರ್ ಆರ್ ಜೈನ್ ಚಾಮರಾಜನಗರದಿಂದ ಮೈಸೂರಿಗೆ ತೆರಳುವ ಮಾರ್ಗ ಮದ್ಯೆ ತಿರುಮಕೂಡಲ ನರಸೀಪುರ ಯಡತೊರೆ (ಗರ್ಗೇಶ್ವರಿ) ಬಳಿ ಎದುರಿನಿಂದ ಬಂದ ಟಾಟಾ ಸುಮೋ ಡಿಕ್ಕಿಹೊಡೆದಿದೆ ಎನ್ನಲಾಗಿದೆ. ಮೈಸೂರಿನಿಂದ ನರಸೀಪುರದೆಡೆಗೆ ಬರುತ್ತಿದ್ದ ಟಾಟಾ ಸುಮೋ ವರೀಷ್ಠಾಧಿಕಾರಿಗಳ ಇನ್ನೋವಾಗೆ ಬಲವಾಗಿ ಗುದ್ದಿದ್ದರಿಂದ ಚಾಲಕ ರಮೇಶ್ ಗನ್ ಮ್ಯಾನ್ ರಾಜಪ್ಪ ಗೆ ಸಣ್ಣಪುಟ್ಟ ಗಾಯವಾಗಿದ್ದು, ಎಸ್ಪಿ ಜೈನ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಸ್ಪಿ ಕುಲದೀಪ್ ಕುಮಾರ್ ಜೈನ್ ಅವರು ಹೋಗುತ್ತಿದ್ದ ಇನ್ನೋವಾ ಮುಂಬಾಗ ಹೆಚ್ಚು ಜಖಂಗೊಂಡಿದೆ ಎಂದು ತಿಳಿದುಬಂದಿದೆ. ನರಸೀಪುರ ಠಾಣಾ ಪೋಲೀಸರು ದೂರು ದಾಖಲಿಸಿಕೊಂಡು ಟಾಟಾಸುಮೊ ಚಾಲಕ ಪ್ರತಾಪ್ ಎಂಬುವವರನ್ನು ವಶಪಡೆದಿದ್ದಾರೆ . ******************************************************* ************************************************************** ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ : ಜಿಲ್ಲಾಧಿಕಾರಿ ಬಿ.ರಾಮು ಚಾಮರಾಜನಗರ, ಮಾ. 14 :- ಚುನಾವಣೆ ಪ್ರಕ್ರಿಯೆಯನ್ನು ಪಾರದರ್ಶಕ, ಶಾಂತಿಯುತ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ಉದ್ದೇಶದಿಂದ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಚುನಾವಣೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ಕುರಿತು ಚರ್ಚಿಸುವ ಸಲುವಾಗಿ ಕರೆಯಲಾಗಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣೆ ನೀತಿ ಸಂಹಿತೆಯು ಈಗಾಗಲೇ ಜಾರಿಯಲ್ಲಿದೆ. ಅಭ್ಯರ್ಥಿಗಳು ಚುನಾವಣಾ ಆಯೋಗ ನಿಗಧಿಪಡಿಸಿರುವ ಮಾರ್ಗಸೂಚಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದರು. ಚುನಾವಣಾ ಸಂದರ್ಭದಲ್ಲಿ ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಆಸ್ತಿಯನ್ನು ವಿರೂಪಗೊಳಿಸುವಂತಿಲ್ಲ. ಅನುಮತಿ ಪಡೆಯದೇ ಪ್ರಚಾರ ಸಾಮಾಗ್ರಿಗಳಾದ ಬಾವುಟ, ಕಟ್‍ಔಟ್ ನಿಲ್ಲಿಸುವಂತಿಲ್ಲ. ಭಿತ್ತಿಪತ್ರ ಅಂಟಿಸುವುದು, ಘೋಷಣೆ ಬರೆಯುವಂತಿಲ್ಲ. ಖಾಸಗಿ ವ್ಯಕ್ತಿಗಳಿಗೆ ಸೇರಿದ ಭೂಮಿ, ಕಟ್ಟಡ, ಕಾಂಪೌಂಡ್ ಇನ್ನಿತರೆಡೆ ಲಿಖಿತ ಅನುಮತಿ ಪಡೆಯದೇ ಪ್ರಚಾರ ಸಾಮಾಗ್ರಿಗಳನ್ನು ಪ್ರದರ್ಶಿಸಬಾರದು. ಅನುಮತಿ ಪಡೆಯದೇ ಇರುವ ಪ್ರಚಾರ ಸಾಮಾಗ್ರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುತ್ತದೆ ಎಂದರು. ಮತಯಾಚನೆÉಯನ್ನು ಜಾತಿ, ಮತ ಮತ್ತು ಕೋಮು ಭಾವನೆಗಳ ಆಧಾರದ ಮೇಲೆ ಮಾಡುವಂತಿಲ್ಲ. ದೇವಾಲಯ, ಮಸೀದಿ, ಚರ್ಚ್ ಅಥವಾ ಇತರ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರ ವೇದಿಕೆಗಳಾಗಿ ಬಳಸಬಾರದು. ಜಾತಿ ಸಮುದಾಯಗಳ ಮಧ್ಯೆ ಅಥವಾ ಮತಿಯ ಭಾಷಾ ಸಮೂಹಗಳ ಮಧ್ಯೆ ಇರುವ ವೈಮನಸ್ಸನ್ನು ಕೆರಳಿಸುವ, ದ್ವೇಷ ಹುಟ್ಟಿಸುವಂತಹ ಉದ್ವೇಗಕ್ಕೆ ಕಾರಣವಾಗುವಂತಹ ಚಟುವಟಿಕೆಗಳಲ್ಲಿ ತೊಡಗಬಾರದೆಂದು ಜಿಲ್ಲಾಧಿಕಾರಿ ತಿಳಿಸಿದರು. ಸಭೆ, ಸಮಾರಂಭ ನಡೆಸುವ ಮೊದಲು ಸ್ಥಳೀಯ ಪೊಲೀಸ್ ಅಧಿಕಾರಿ, ಚುನಾವಣಾಧಿಕಾರಿ ಹಾಗೂ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಅವಶ್ಯವಾಗಿದೆ. ಅನುಮತಿ ನೀಡಲು ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಒಂದೇ ಕಡೆ ವ್ಯವಸ್ಥೆ ಮಾಡಲಾಗಿದೆ. ಧ್ವನಿವರ್ದಕ, ಪ್ರಚಾರ ಸಾಮಾಗ್ರಿ, ವಾಹನ ಬಳಕೆಗೆ ಅನುಮತಿ ಪಡೆಯಬೇಕು. ಇದಕ್ಕೆ ತಗಲಬಹುದಾದ ವೆಚ್ಚವನ್ನು ಅಭ್ಯರ್ಥಿಗಳ ಲೆಕ್ಕಕ್ಕೆ ಪರಿಗಣಿಸಲಾಗುತ್ತದೆ ಎಂದರು. ಬೇರೆ ಅಭ್ಯರ್ಥಿಯ ಖಾಸಗಿ ನಡತೆ ಅಥವಾ ಶೀಲಗಳ ಬಗ್ಗೆ ಸುದ್ದಿಯನ್ನು ಪ್ರಸಾರ ಮಾಡುವಂತಿಲ್ಲ. ದೃಶ್ಯ ಮತ್ತು ಮುದ್ರಣ ಮಾಧ್ಯಮದ ಮೂಲಕ ಪ್ರಚಾರ ಮಾಡುವ ಮುನ್ನ ಜಿಲ್ಲಾ ವಾರ್ತಾ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ರಾಜಕೀಯ ಪಕ್ಷಗಳು ತಾರಾ ಪ್ರಚಾರಕರ ಹೆಸರು, ಹುದ್ದೆ ಇತರೆ ವಿವರಗಳ ಜೊತೆ ಪ್ರಚಾರ ಮಾಡುವ ದಿನಾಂಕ, ವೇಳೆ, ಸ್ಥಳದ ಬಗ್ಗೆ ಮಾಹಿತಿ ನೀಡಬೇಕು, ಮೆರವಣಿಗೆ, ಸ್ಥಳ, ವೇಳೆ, ಹಾದುಹೋಗುವ ಮಾರ್ಗಗಳ ಬಗ್ಗೆ ಮುಂಚಿತವಾಗಿ ತಿಳಿಸಿರಬೇಕು. ಸಭೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಪ್ರಚಾರ ಸಾಮಾಗ್ರಿಗಳನ್ನು ಅಳವಡಿಸಬೇಕು. ಸಭೆ ಮುಕ್ತಾಯವಾದ ಎರಡು ಗಂಟೆಯೊಳಗೆ ತೆರವುಗೊಳಿಸಬೇಕು ಎಂದರು. ಶಾಂತಿಯುತ ಚುನಾವಣೆ ನಡೆಸಲು ಹಾಗೂ ಯಾವುದೇ ಅಕ್ರಮಕ್ಕೆ ಅವಕಾಶವಾಗದಂತೆ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಕಣ್ಗಾವಲು ತಂಡ, ವಿಡಿಯೋ ವೀಕ್ಷಣಾ ತಂಡ, ವೆಚ್ಚ ಪರಿಶೀಲನಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಒಟ್ಟು 11 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನ್ಯಾಯ ಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲಾ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯಿತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಡಿವೈಎಸ್ಪಿ ಗಂಗಾಧರ ಸ್ವಾಮಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಮರಿಸ್ವಾಮಿ, ಸಿ.ಎಂ.ಕೃಷ್ಣಮೂರ್ತಿ, ಆರ್.ಎಲ್.ನಾಗೇಂದ್ರ ಬಾಬು, ಸುಂದರ್‍ರಾಜ್, ಮಹೇಶ್, ಬ್ಯಾಡಮೂಡ್ಲು ಬಸವಣ್ಣ ಇತರರು ಸಭೆಯಲ್ಲಿ ಹಾಜರಿದ್ದರು. ********************************************************** ಮಾ. 15ರಂದು ಸಂತೆಮರಹಳ್ಳಿಯಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ ಚಾಮರಾಜನಗರ, ಮಾ. 14:- ನೆಹರು ಯುವ ಕೇಂದ್ರ, ಸಂತೆಮರಹಳ್ಳಿಯ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು, ಸಂತೆಮರಹಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಮಾದಿಗ ಯುವಕರ ಸಂಘ, ಕೆಂಪನಪುರದ ಶ್ರೀ ಮಹರ್ಷಿ ವಾಲ್ಮೀಕಿ ಯುವಕರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಚಾಮರಾಜನಗರ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಮಾರ್ಚ್ 15ರಂದು ಬೆಳಿಗ್ಗೆ 10.30 ಗಂಟೆಗೆ ಸಂತೆಮರಹಳ್ಳಿಯ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್ ಕ್ರೀಡಾಕೂಟ ಉದ್ಘಾಟಿಸುವರು. ಸಂತೆಮರಹಳ್ಳಿಯ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಎ.ಶಿವಣ್ಣ ಅಧ್ಯಕ್ಷತೆ ವಹಿಸುವರು. ದೀನಬಂಧು ಸಂಸ್ಥೆಯ ಜಿ.ಎಸ್. ಜಯದೇವ್ ಕ್ರೀಡಾ ಸಂದೇಶ ನೀಡುವರು. ಮಳವಳ್ಳಿಯ ಭಗವಾನ್ ಬುದ್ಧ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ವೈ.ಎನ್. ಸಿದ್ಧರಾಜು, ಮಂಡ್ಯದ ರೋಟರಿ ಕ್ಲಬ್ ಅಧ್ಯಕ್ಷರಾದ ಎ.ಸಿ. ರಮೇಶ್ ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳುವರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ. ಚಲುವಯ್ಯ, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಆರ್.ಸ್ವಾಮಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಸಿ.ಎಂ.ನರಸಿಂಹಮೂರ್ತಿ, ಸಂತೆಮರಹಳ್ಳಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಮಹದೇವಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ. ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಆಹ್ವಾನ ಚಾಮರಾಜನಗರ, ಮಾ. 14 - ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 2016ನೇ ಸಾಲಿನ ಟೀಯೆಸ್ಸಾರ್ ಹಾಗೂ ಮೊಹರೆ ಹಣಮಂತರಾಯ, ಪರಿಸರ ಪತ್ರಿಕೋದ್ಯಮ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ. ಟೀಯೆಸ್ಸಾರ್ ಪ್ರಶಸ್ತಿಯನ್ನು ಕನ್ನಡದ ಹಿರಿಯ ಪತ್ರಕರ್ತ ಟಿ.ಎಸ್. ರಾಮಚಂದ್ರರಾವ್ ಅವರ ನೆನಪಿನಲ್ಲಿ ಸರ್ಕಾರ ನೀಡುತ್ತಾ ಬಂದಿದೆ. ಪ್ರಶಸ್ತಿಯ ಮೊತ್ತ 1 ಲಕ್ಷ ರೂ. ಆಗಿದ್ದು ಕನ್ನಡ ಪತ್ರಿಕೋದ್ಯಮ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಕನಿಷ್ಠ 30 ವರ್ಷಗಳ ಸೇವೆ ಸಲ್ಲಿಸಿರುವವರನ್ನು ಪರಿಗಣಿಸಲಾಗುವುದು. ಒಬ್ಬರಿಗೆ ಮಾತ್ರ ಈ ಪ್ರಶಸ್ತಿ ನೀಡಲಾಗುವುದು. ಪತ್ರಿಕಾರಂಗದ ಭೀಷ್ಮರೆಂದೇ ಹೆಸರಾದ ಮೊಹರೆ ಹಣಮಂತರಾಯ ಪ್ರಶಸ್ತಿಗೆ ಕನ್ನಡ ಪತ್ರಿಕೋದ್ಯಮದಲ್ಲಿ ಕನಿಷ್ಠ 30 ವರ್ಷ ಸೇವೆ ಸಲ್ಲಿಸಿದವರು ಅರ್ಹರು. ಕೇವಲ ಒಬ್ಬರಿಗೆ ಮಾತ್ರ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿ ಮೊತ್ತ 1 ಲಕ್ಷ ರೂ. ಆಗಿದೆ. ರಾಜ್ಯದೆಲ್ಲೆಡೆ ಅಭಿವೃದ್ಧಿಗೆ ಉತ್ತಮ ವಾತಾವರಣ ಕಲ್ಪಿಸಲು ಅನುಕೂಲವಾಗುವಂತೆ ಉತ್ತೇಜಿಸಲು ಅಭಿವೃದ್ಧಿ ಪತ್ರಿಕೋದ್ಯಮ ಹಾಗೂ ರಾಜ್ಯದಲ್ಲಿನ ಪರಿಸರ, ಪ್ರಕೃತಿ ಹಾಗೂ ನಿಸರ್ಗದ ಸಮತೋಲನ ಕಾಯ್ದುಕೊಳ್ಳಲು ನೆರವಾಗಿರುವ ಪತ್ರಕರ್ತರಿಗಾಗಿ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, ಕನಿಷ್ಠ 10 ವರ್ಷ ಅನುಭವ ಹೊಂದಿರುವ ಪತ್ರಕರ್ತರು ಅರ್ಹರಾಗಿರುತ್ತಾರೆ. ಪ್ರಶಸ್ತಿ ಮೊತ್ತವು ತಲಾ ರೂ. 50,000 ಒಳಗೊಂಡಿರುತ್ತದೆ. ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಮಾಧ್ಯಮ ಸಂಸ್ಥೆಗಳು ಹಾಗೂ ಇತರೆ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳು ಪೂರ್ಣ ದಾಖಲಾತಿಗಳೊಂದಿಗೆ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾಸೌಧ, ನಂ. 17, ಭಗವಾನ್ ಮಹಾವೀರ್ ರಸ್ತೆ, ಬೆಂಗಳೂರು - 560 001 ಇಲ್ಲಿಗೆ ಮಾರ್ಚ್ 25 ರೊಳಗಾಗಿ ಕಳುಹಿಸಿಕೊಡಬಹುದಾಗಿದೆ ಎಂದು ವಾರ್ತಾ ಇಲಾಖೆ ಪ್ರಕಟಣೆ ತಿಳಿಸಿದೆ. ******************************************************* ಗಾಂಜಾ ಬೆಳೆದ ವ್ಯಕ್ತಿಗೆ ಸಜೆ ಚಾಮರಾಜನಗರ, ಮಾ. 14 :- ಕಬ್ಬಿನ ಫಸಲಿನ ನಡುವೆ ಅಕ್ರಮವಾಗಿ ಗಾಂಜಾ ಬೆಳಿದ ವ್ಯಕ್ತಿಗೆ 2 ವರ್ಷಗಳ ಸಜೆ ಹಾಗೂ 2 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಕೊಳ್ಳೇಗಾಲದ ಸತ್ತೇಗಾಲ ಅಗ್ರಹಾರದ ಧನಗೆರೆ ಗ್ರಾಮದ ನಾಗಣ್ಣ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ತನ್ನ ಜಮೀನಿನಲ್ಲಿ ಕಬ್ಬಿನ ಫಸಲಿನ ಮಧ್ಯೆ ಅಕ್ರಮವಾಗಿ 50 ಗಾಂಜಾ ಗಿಡಗಳನ್ನು ಬೆಳೆದಿದ್ದಾನೆ. 2012ರ ಸೆಪ್ಟೆಂಬರ್ 30ರಂದು ಕೊಳ್ಳೇಗಾಲ ಉಪವಿಭಾಗದ ಡಿವೈಎಸ್‍ಪಿ. ಯವರು ಜಮೀನಿಗೆ ಹೋಗಿ ದಾಳಿ ನಡೆಸಿ ಗಾಂಜಾ ಗಿಡ ವಶಕ್ಕೆ ತೆಗೆದುಕೊಂಡಿದ್ದರು. ಪ್ರಕರಣ ದಾಖಲಾಗಿ ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಅಪರಾಧಿ ನಾಗಣ್ಣನಿಗೆ 2 ವರ್ಷಗಳ ಸಜೆ ಮತ್ತು 2 ಸಾವಿರ ರೂ. ದಂಡ ವಿಧಿಸಿ ಪ್ರದಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್. ಮಳವಳ್ಳಿ ಅವರು ಮಾರ್ಚ್ 13ರಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು. ಗುಂಡ್ಲುಪೇಟೆ ಉಪಚುನಾವಣೆ : ಮೊದಲನೇ ದಿನ ನಾಮಪತ್ರ ಸಲ್ಲಿಕೆ ಇಲ್ಲ ಚಾಮರಾಜನಗರ, ಮಾ. 14 (- ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಅವಧಿ ಆರಂಭವಾಗಿದ್ದು ಮೊದಲ ದಿನವಾದ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಗುಂಡ್ಲುಪೇಟೆ ಉಪಚುನಾವಣೆ : ವೇಳಾಪಟ್ಟಿ ಪ್ರಕಟ ಚಾಮರಾಜನಗರ, ಮಾ. 14 - ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಪಚುನಾವಣೆಗೆ ಉಮೇದುವಾರರು ಅಥವಾ ಅವರ ಸೂಚಕರು ಚುನಾವಣಾಧಿಕಾರಿ ಅಥವ ಸಹಾಯಕ ಚುನಾವಣಾಧಿಕಾರಿಯವರಿಗೆ ಮಾರ್ಚ್ 14 ರಿಂದ 21ರವರೆಗೆ ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು. ಮಾರ್ಚ್ 14ರಂದು ಅಧಿಸೂಚನೆ ಹೊರಡಿಸಲಾಗಿದ್ದು ನಾಮಪತ್ರ ಪ್ರಕ್ರಿಯೆ ಸಲ್ಲಿಕೆ ಅವಧಿ ಆರಂಭವಾಗಿದೆ. ನಾಮಪತ್ರ ಸಲ್ಲಿಸಲು ಮಾರ್ಚ್ 21 (ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ) ಕಡೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ ಕಾರ್ಯವು ಮಾರ್ಚ್ 22ರಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮಾರ್ಚ್ 24 ಕಡೆಯ ದಿನವಾಗಿದೆ (ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ). ಏಪ್ರಿಲ್ 9ರಂದು ಮತದಾನ ನಡೆಯಲಿದ್ದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಮಾಡುವ ಅವಧಿಯನ್ನು ನಿಗದಿ ಮಾಡಲಾಗಿದೆ. ಏಪ್ರಿಲ್ 13ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಚುನಾವಣೆ ಪ್ರಕ್ರಿಯೆಯು ಏಪ್ರಿಲ್ 15ರಂದು ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ. ರಾಮು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ************************************************ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಚಾಮರಾಜನಗರ, ಮಾ. 14:– ಜಿಲ್ಲಾ ನ್ಯಾಯಾಂಗ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ಬೆರಳಚ್ಚು - ನಕಲುಗಾರರು, ಆದೇಶ ಜಾರಿಕಾರರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಶೀಘ್ರಲಿಪಿಗಾರರ 3 ಹುದ್ದೆಗಳು, ಬೆರಳಚ್ಚುಗಾರರ 6 ಹುದ್ದೆಗಳು, ಬೆರಳಚ್ಚು-ನಕಲುಗಾರರ 2 ಹುದ್ದೆಗಳು ಹಾಗೂ ಆದೇಶ ಜಾರಿಕಾರರ 2 ಹುದ್ದೆಗಳು ಖಾಲಿ ಇವೆ. ಶೀಘ್ರಲಿಪಿಗಾರರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಹಿರಿಯ ದರ್ಜೆ (ಸೀನಿಯರ್ ಗ್ರೇಡ್) ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಹಾಗೂ ಶೀಘ್ರಲಿಪಿ ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಬೆರಳಚ್ಚುಗಾರರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಹಿರಿಯ ದರ್ಜೆ (ಸೀನಿಯರ್ ಗ್ರೇಡ್) ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಬೆರಳಚ್ಚು - ನಕಲುಗಾರರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಕಿರಿಯ ದರ್ಜೆ (ಜೂನಿಯರ್ ಗ್ರೇಡ್) ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಆದೇಶ ಜಾರಿಕಾರರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು. ಡ್ರೈವಿಂಗ್ ಲೈಸೆನ್ಸ್ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಕನ್ನಡ ಓದಲು ಬರೆಯಲು ಬಲ್ಲವರಾಗಿರಬೇಕು. ಅಭ್ಯರ್ಥಿಯು ಕನಿಷ್ಟ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದವರಾಗಿದ್ದಲ್ಲಿ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದವರಾಗಿದ್ದಲ್ಲಿ 38 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳಾಗಿದ್ದಲ್ಲಿ 40 ವರ್ಷ ಮೀರಿರಬಾರದು. ಸರ್ಕಾರಿ ಸೇವೆಯಲ್ಲಿರುವವರು, ಜೀತಕಾರ್ಮಿಕರು, ಮಾಜಿ ಸೈನಿಕರು, ಅಂಗವಿಕಲರು, ವಿಧವೆಯರಿಗೆ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಇದೆ. ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನಿಗದಿಪಡಿಸಿರುವಂತೆ ಅರ್ಜಿ ನಮೂನೆಯಲ್ಲಿ ಬೆರಳಚ್ಚು ಮಾಡಿಸಿದ ಅಥವಾ ಗಣಕೀಕೃತ ಅರ್ಜಿಯನ್ನು ಕೈಬರವಣಿಗೆಯಲ್ಲಿ ಭರ್ತಿ ಮಾಡಿ ಅಗತ್ಯ ಸ್ವಯಂ ದೃಢೀಕೃತ ನಕಲು ಪ್ರತಿಗಳ ದಾಖಲೆಗಳೊಂದಿಗೆ ಏಪ್ರಿಲ್ 7ರೊಳಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಾಮರಾಜನಗರ ಇವರಿಗೆ ಸಲ್ಲಿಸಬೇಕು. ಅಧಿಸೂಚನೆ ಹಾಗೂ ಹುದ್ದೆಗಳಿಗೆ ಸಂಬಂಧಿಸಿದ ವಿವರಗಳನ್ನು ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ಅಂತರ್ಜಾಲ ವಿಳಾಸ ತಿತಿತಿ.ಛಿouಡಿಣs.gov.iಟಿ/ಛಿhಚಿmಚಿಡಿಚಿರಿಚಿಟಿಚಿgಚಿಡಿ ರಲ್ಲಿ ಸಹ ಪಡೆಯಬಹುದು. ಅಲ್ಲದೆ ನಗರದ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ ಸಂಪರ್ಕಿಸಿಯೂ ಹೆಚ್ಚಿನ ಮಾಹಿತಿ ಪಡೆಯಬಹುದೆಂದು ಪ್ರಕಟಣೆ ತಿಳಿಸಿದÉ. **************************************************** ಮಾ. 15ರಂದು ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ, ಕಾನೂನು ಅರಿವು ನೆರವು ಕಾರ್ಯಕ್ರಮ ಚಾಮರಾಜನಗರ, ಮಾ. 14 :- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ನಗರದ ಸಾಧನಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಮಾರ್ಚ್ 15ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸಾಧನ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ. ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ಪಿ. ನಂದೀಶ್ ಕಾರ್ಯಕ್ರಮ ಉದ್ಘಾಟಿಸುವರು. ಸಾಧನಾ ಸಂಸ್ಥೆಯ ಅಧ್ಯಕ್ಷರಾದ ಟಿ. ಜೆ. ಸುರೇಶ್ ಅಧ್ಯಕ್ಷತೆ ವತಿಸುವರು. ವಕೀಲರ ಸಂಘದ ಉಪಾಧ್ಯಕ್ಷರಾದ ಶಿವಪ್ರಸನ್ನ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಎಸ್. ಮಂಜು ಅವರು ಗ್ರಾಹಕರ ಹಕ್ಕುಗಳ ಕುರಿತು ಉಪನ್ಯಾಸ ನೀಡುವರೆಂದು ಪ್ರಕಟಣೆ ತಿಳಿಸಿದÉ. ಒಪ್ಪಿಗೆ ಪತ್ರ ನೀಡಲು ಪಿಂಚಣಿ ಫಲಾನುಭವಿಗಳಿಗೆ ಸೂಚನೆ ಚಾಮರಾಜನಗರ, ಮಾ. 14 (ಕರ್ನಾಟಕ ವಾರ್ತೆ):- ಚಾಮರಾಜನಗರ ತಾಲೂಕಿನಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಆಯಾ ಗ್ರಾಮದ ಗ್ರಾಮ ಲೆಕ್ಕಿಗರಿಗೆ ನೀಡುವಂತೆ ತಾಲೂಕು ಆಡಳಿತ ಸೂಚನೆ ನೀಡಿದೆ. ವೃದ್ದಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲರ, ಮನಸ್ವಿನಿ ಮತ್ತು ಮೈತ್ರಿ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಎಲ್ಲ ಫಲಾನುಭವಿಗಳು ಸ್ಮಾರ್ಟ್ ಕಾರ್ಡ್ ಮತ್ತು ಅಂಚೆ ಕಚೇರಿ ಬ್ಯಾಂಕ್ ಮೂಲಕ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಆಯಾ ಗ್ರಾಮದ ಗ್ರಾಮ ಲೆಕ್ಕಿಗರಿಗೆ ಸಲ್ಲಿಸಬೇಕು. ಒಪ್ಪಿಗೆ ಪತ್ರ ನೀಡದಿದ್ದಲ್ಲಿ ಈ ಏಪ್ರಿಲ್ ಮಾಹೆಯಿಂದ ಫಲಾನುಭವಿಗಳಿಗೆ ಪಿಂಚಣಿ ಸ್ಥಗಿತವಾಗುವ ಸಾಧ್ಯತೆ ಇದೆ. ಈಗಾಗಲೇ ಅಂಚೆ ಕಚೇರಿ ಮತ್ತು ಬ್ಯಾಂಕುಗಳಿಗೆ ಆಧಾರ್ ಸಂಖ್ಯೆಯ ಮಾಹಿತಿ ನೀಡಿದ್ದರೂ ಸಹ ಗ್ರಾಮಲೆಕ್ಕಿಗರಿಗೆ ಮತ್ತೊಮ್ಮೆ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಮಾರ್ಚ್ 25ರೊಳಗೆ ನೀಡುವಂತೆ ತಹಸೀಲ್ದಾರ್ ಪುರಂಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ********************************************************* ಮಾ. 15ರಂದು ಜಿಲ್ಲಾಡಳಿತದಿಂದ ವಿಶ್ವ ಗ್ರಾಹಕರ ದಿನಾಚರಣೆ ಚಾಮರಾಜನಗರ, ಮಾ. 14 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು, ಕಾನೂನು ಮಾಪನ ಶಾಸ್ತ್ರ ಇಲಾಖೆ ಮತ್ತು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಆಶ್ರಯದಲ್ಲಿ ವಿಶ್ವ ಗ್ರಾಹಕ ದಿನಾಚರಣೆಯನ್ನು ಮಾರ್ಚ್ 15ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಜಿಲ್ಲಾಧಿಕಾರಿ ಬಿ. ರಾಮು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರಾದ ಕೆ.ಎಲ್. ಶಿವಲಿಂಗೇಗೌಡ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್, ಉಪವಿಭಾಗಾಧಿಕಾರಿ ನಳಿನ್ ಅತುಲ್, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಗೌರಮ್ಮಣ್ಣಿ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷರಾದ ಮಾದಮ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕೊಳ್ಳೇಗಾಲದ ವಕೀಲರಾದ ವೆಂಕಟಾಚಲ ಮುಖ್ಯ ಭಾಷಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ. **************************************************

Monday, 13 March 2017

ಚಾಮರಾಜನಗರದಲ್ಲಿ ಎಷ್ಟು.ಸಿ.ಸಿ ಕ್ಯಾಮೆರಾ ಇದೆ ಗೊತ್ತಾ.? ಪರೀಕ್ಷಾ ಕೇಂದ್ರಗಳಲ್ಲಿರದ ಸಿ.ಸಿ.ಕ್ಯಾಮೆರಾ ಜಿಲ್ಲಾಡಳಿತಭವನ, ಖಜಾನೆಯ ಸುತ್ತಮುತ್ತ 15 ಕ್ಕೂ ಹೆಚ್ಚು ಸಿ.ಸಿ ಕ್ಯಾಮೆರಾ.!

ಪರೀಕ್ಷಾ ಕೇಂದ್ರಗಳಲ್ಲಿರದ ಸಿ.ಸಿ.ಕ್ಯಾಮೆರಾ ಜಿಲ್ಲಾಡಳಿತಭವನ, ಖಜಾನೆಯ ಸುತ್ತಮುತ್ತ 15 ಕ್ಕೂ ಹೆಚ್ಚು ಸಿ.ಸಿ ಕ್ಯಾಮೆರಾ.! ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ನಗರ ಜಿಲ್ಲಾ ಕೇಂದ್ರದಲ್ಲಿ ಕೊಳ್ಳೇಗಾಲ, ಚಾಮರಾಜನಗರ, ಹನೂರು, ಗುಂಡ್ಲುಪೇಟೆ,ಯಳಂದೂರು, ರಾಮಾಪುರದಲ್ಲಿನ ಪರೀೀಕ್ಷಾ ಕೇಂದ್ರಗಳ ಸಂಖ್ಯೆ ಎಣಿಸಿದರೆ 16 ಕೇಂದ್ರಗಳಿದೆ. ಆದರೆ ಆ ಕೇಂದ್ರದಲ್ಲಿ ಶೇ.98 ರಷ್ಟು ಸಿ.ಸಿ ಕ್ಯಾಮೆರಾಗಳು ಇಲ್ಲವೇ ಇಲ್ಲ, ಒಂದು ವೇಳೇ ಶೇ 2% ಇದ್ದರೆ ಅದು ಕೆಲಸ ನಿರ್ವಹಿಸುತ್ತಿದಿಯೋ ಇಲ್ಲವೋ ಎಂಬುದು ಮಾತ್ರ ಪರೀಕ್ಷಾ ಕೇಂದ್ರ ಮುಖ್ಯಸ್ಥರಿಗೆ ಮಾತ್ರ ಗೊತ್ತಾಗಬೇಕಾಗಿದೆ. ದ್ವಿತೀಯ ಪಿ.ಯು,ಪರೀಕ್ಷಾ ಪತ್ರಿಕೆಗಳನ್ನು ಜಿಲ್ಲಾಡಳಿತಭವನದದ ಖಜಾನೆಯಲ್ಲಿ ಇರಿಸಲಾಗಿದ್ದು ಅಲ್ಲಿ ಪ್ರವೇಶ ದ್ವಾರದಿಂದ ಹಿಡಿದು ಖಜಾನೆವರೆಗೆ 9 ಕ್ಯಾಮೆರಾಗಳು,ಖಜಾನೆ ಪ್ರವೇವಾಗಿನಿಂದ ಒಳಗಡೆ 7 ಕ್ಕೂ ಹೆಚ್ಚು ಕ್ಯಾಮೆರಾಗಳು ಇದೆ ಎಂದು ತಿಳಿದುಬಂದಿದೆ. ಕಳೆದ ಎರಡು ದಿನದ ಹಿಂದೆ ಬೀದರ್ ಕಾಲೇಜಿನಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಪರೀಕ್ಷಾಕೇಂದ್ರದಲ್ಲಿ ನಕಲು ಚೀಟಿ ಕೊಡುತ್ತಿದ್ದ ದೃಶ್ಯವನ್ನು ಖಾಸಗೀ ವಾಹಿನಿ ಪ್ರಸಾರ ಮಾಡಿತ್ತು. ಅದರಂತೆ ಅದರ ಬಗ್ಗೆ ತಿಳಿದುಕೊಳ್ಳುವ ಹಿತಾದೃಷ್ಟಿಯಿಂದ ಉಪನಿರ್ದೇಶಕರನ್ನು ಮಾಹಿತಿ ಕೆಳಿದರೆ ಗಂಟೆಗೊಂದು, ಘಳಿಗೆಗೊಂದು ಉತ್ತರ ನೀಡುತಿದ್ದ ಹಿನ್ನಲೆಯಲ್ಲಿ ಮೂರು ದಿನದ ಹಿಂದೆಯೇ ಕಾರ್ಯಕರ್ತ ಎಸ್.ವೀರಭದ್ರಸ್ವಾಮಿಅ ವರು ಮಾಹಿತಿ ಹಕ್ಕು ಸಲ್ಲಿಸಿದ್ದು ತ್ವರಿತವಾಗಿ ಉತ್ತರ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಮಾಹಿತಿ ಹಕ್ಕಿನಲ್ಲಿ ಕೊಡಬೇಕಾದ ಉತ್ತರ ಅಂಶಗಳು 2 ನಿಮಿಷದಲ್ಲಿ ನೀಡಬಹುದಾದರೂ 30 ದಿನಗಳ ಅವಕಾಶವಿದೆ ಎಂದು ಇಲಾಖಾ ಆಡಳಿತ ಮಂಡಳಿತ ಬೇಜವ್ದಾರಿ ಉತ್ತರ ನೀಡಿದ್ದು ನಾವು ಪೋನಿನಲ್ಲೇ ಉತ್ರರ ಹೇಳುತ್ತಿದ್ದೇವು, ಅದಕ್ಕೆ ಏಕೆ ಈ ಅರ್ಜಿ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಅದರೆ .ಸಿ.ಸಿ.ಕ್ಯಾಮೆರಾ ಇರುವಿಕೆ ಬಗ್ಗೆ ಖಚಿತಪಡಿಸಿಕೊಂಡಿದ್ದೀರಾ? ಹಾಗೂ ಅದು ಸುಸ್ಥಿತಿಯಲ್ಲಿದೀಯಾ ಎಂಬ ಪ್ರಶ್ನೆಗೆ ಮಾತ್ರ ಉಪನಿರ್ದೇಶಕರು ತಬ್ಬಿಬ್ಬರಾಗಿದ್ದಾರೆ ಆದರೂ ಈ ಪ್ರಶ್ನೆಗೆ ಅವರೇ ಉತ್ತರ ನೀಡಬೇಕಾಗಿದೆ. **************************************************************************

13-03-2017 ಚಾಮರಾಜನಗರ( ನಿರ್ಭೀತಿಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ : ಡಿ.ಸಿ ರಾಮು ಸೂಚನೆನಗರದಲ್ಲಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ಕಚೇರಿ ಉದ್ಘಾಟನೆ,)

ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ಕಚೇರಿ ಆರಂಭಕ್ಕೆ ಜಿಲ್ಲಾಧಿಕಾರಿ ಚಾಲನೆ ಚಾಮರಾಜನಗರ ಮಾ.13 : ಪೊಲೀಸ್ ಅಧಿಕಾರಿಗಳ ದುರ್ನಡತೆ, ಅಧಿಕಾರ ದುರುಪಯೋಗ ಇನ್ನಿತರ ಪ್ರಕರಣಗಳ ಕುರಿತು ವಿಚಾರಣೆ ನಡೆಸಲು ಹಾಗೂ ದೂರು ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ಕಚೇರಿಗೆ ಇಂದು ಜಿಲ್ಲಾಧಿಕಾರಿ ಬಿ.ರಾಮು ಇವರು ಚಾಲನೆ ನೀಡಿದರು. ನಗರದ ಜಿಲ್ಲಾಡಳಿತ ಭವನದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ: 127 ರಲ್ಲಿ ಆರಂಭಿಸಲಾಗಿರುವ ದೂರು ಪ್ರಾದಿಕಾರ ಕಚೇರಿಯನ್ನು ಟೇಪು ಕತ್ತರಿಸುವ ಮೂಲಕ ಜಿಲ್ಲಾಧಿಕಾರಿಯವರು ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿಯವರು ಪೊಲೀಸ್‍ರಿಂದ ಯಾವುದೇ ಹಕ್ಕು ಉಲ್ಲಂಘನೆಯಾದಲ್ಲಿ, ಅಧಿಕಾರ ದುರುಪಯೋಗವಾದಲ್ಲಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು ಎಂದರು. ದೂರು ಪ್ರಾಧಿಕಾರ ಇಂದಿನಿಂದ ಪ್ರತ್ಯೇಕ ಕಚೇರಿಯನ್ನು ಆರಂಭಿಸುವುದರಿಂದ ನೇರವಾಗಿ ಅಥವಾ ದೂರವಾಣಿ ಮುಖಾಂತರ ದೂರುಗಳನ್ನು ಸಲ್ಲಿಸಲು ಅವಕಾಶವಿದೆ. ಇನ್ನು ಮುಂದೆ ಮಾರ್ಗಸೂಚಿ ಪ್ರಕಾರ ದೂರು ಪ್ರಾಧಿಕಾರ ಸಭೆಗಳನ್ನು ನಡೆಸಲಾಗುತ್ತದೆ. ಸಲ್ಲಿಸಿಕೆಯಾದ ದೂರುಗಳ ಬಗ್ಗೆ ವಿಚಾರಣೆ ಕೈಗೊಳ್ಳಲಾಗುತ್ತದೆ ಎಂದರು. ಪ್ರಾಧಿಕಾರದ ಸದಸ್ಯರಾದ ನಿವೃತ್ತ ಕೆ.ಎಸ್.ಪಿ.ಎಸ್ ಕಮಾಂಡೆಂಟ್ ರಾಮದಾಸ ಗೌಡ ಮಾತನಾಡಿ ಅತ್ಯಂತ ಪರಿಣಾಮಕಾರಿಯಾಗಿ ದೂರು ಪ್ರಾಧಿಕಾರವು ಕಾರ್ಯನಿರ್ವಹಿಸಲಿದೆ. ಪ್ರಾಧಿಕಾರವು ಸಮರ್ಪಕವಾಗಿ ಪ್ರಾಧಿಕಾರದ ಉದ್ದೇಶ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್.ಜೈನ್ ಮಾತನಾಡಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆಯಾಗಿದೆ. ಸದ್ಯಕ್ಕೆ ಪ್ರಾಧಿಕಾರ ಕಚೇರಿಯಲ್ಲಿ ಲಭ್ಯವಿರುವ ಸಿಬ್ಬಂದಿಯನ್ನು ನಿಗಧಿತ ಸಮಯಗಳ ಕಾಲ ದೂರು ಸ್ವೀಕರಿಸಲು ನಿಯೋಜಿಸಲಾಗುತ್ತದೆ. ದೂರವಾಣಿ ಮೂಲಕವು ದೂರು ಸಲ್ಲಿಸಬಹುದು. ಇಂತಹ ದೂರುಗಳ ಬಗ್ಗೆ ಪ್ರಾಧಿಕಾರವು ವಿಚಾರಣೆ ನಡೆಸಲಿದೆ ಎಂದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಡಿವೈಎಸ್ಪಿ ಗಂಗಾಧರ ಸ್ವಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ********************************************************************************************************** ಉಪ ಚುನಾವಣೆ : ಬಂದೂಕು, ಆಯುಧ ಡಿಪಾಸಿಟ್ ಮಾಡಲು ಸೂಚನೆ ಚಾಮರಾಜನಗರ ಮಾ.13 : ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರÀದ ಉಪ ಚುನಾವಣೆಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ತಾಲ್ಲೂಕು ವ್ಯಾಪ್ತಿ ಹಾಗೂ ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿ ವ್ಯಾಪ್ತಿಯಲ್ಲಿ ಪರವಾನಗಿ ಹೊಂದಿರುವ ಬಂದೂಕು, ಆಯುಧಗಳನ್ನು ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯ ಸುಪರ್ದಿಯಲ್ಲಿ ಡಿಪಾಸಿಟ್ ಮಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಬಿ.ರಾಮು ಅವರು ಆದೇಶಿಸಿದ್ದಾರೆ. ಸದರಿ ಆದೇಶವು ಮಾರ್ಚ್ 9 ರಿಂದ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ಏಪ್ರಿಲ್ 15 ರವರೆಗೂ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. *********************************************************************************************** ಗುಂಡ್ಲುಪೇಟೆ ಉಪಚುನಾವಣೆ : ಮಾರ್ಚ್ 14 ರಿಂದ 21 ರವರೆಗೆ ನಾಮ ಪತ್ರ ಸ್ವೀಕಾರ ಚಾಮರಾಜನಗರ, ಮಾ. 13 - ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಮಾರ್ಚ್ 14 ರಿಂದ 21 ರವರೆಗೆ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯೊಳಗೆ ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಕಚೇರಿಯ ಮಿನಿ ವಿಧಾನ ಸೌಧ ಕಟ್ಟಡದ ನೆಲ ಮಹಡಿಯ ಸಭಾ ಭವನದಲ್ಲಿ ನಾಮ ಪತ್ರವನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಬಿ.ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗುಂಡ್ಲುಪೇಟೆ ಉಪಚುನಾವಣೆ : ಸೆಕ್ಟರ್ ಅಧಿಕಾರಿಗಳ ನೇಮಕ ಚಾಮರಾಜನಗರ, ಮಾ. 13- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಬಿ.ರಾಮು ಅವರು ಆದೇಶ ಹೊರಡಿಸಿದ್ದಾರೆ. ತಂಡದ ಸಂಖ್ಯೆ 1 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08228-231100) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023). ವ್ಯಾಪ್ತಿ ಪ್ರದೇಶಗಳು - ಹೊಸಮಠ, ಶ್ರೀಕಂಠಪುರ, ಚನ್ನವಡೆಯನಪುರ-1, ಯಡವನಹಳ್ಳಿ, ಹೊಣಕನಪುರ-5, ಹೊರೆಯಾಲ 1 ಮತ್ತು 2, ರಂಗೂಪುರ, ಬೆಳಚಲವಾಡಿ 1 ಮತ್ತು 2, ಕುರುಬರಹುಂಡಿ, ಬೆಟ್ಟದಮಾದಹಳ್ಳಿ. ಮತಗಟ್ಟೆ ಸಂಖ್ಯೆ 1 ರಿಂದ 8, 21,22,27 ಹಾಗೂ 33. ಸೆಕ್ಟರ್ ಅಧಿಕಾರಿ - ಸುಂದ್ರಮ್ಮ, ಸಹಾಯಕ ಕೃಷಿ ನಿರ್ದೇಶಕರು, ಚಾಮರಾಜನಗರ (ಮೊ. 9945292355), ಎಂ.ಕೆ. ರವಿಕುಮಾರ್, ಸಹಾಯಕ ಆಡಳಿತಾಧಿಕಾರಿ, ತಾಲೂಕು ಜನರಲ್ ಆಸ್ಪತ್ರೆ, ಗುಂಡ್ಲುಪೇಟೆ (ಮೊ. 7795115857). ತಂಡದ ಸಂಖ್ಯೆ 2 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08228-231100) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023). ವ್ಯಾಪ್ತಿ ಪ್ರದೇಶಗಳು - ಹಿರೇಕಾಠಿ, ದೊಡ್ಡಹುಂಡಿ, ಅರೇಪುರ, ಬೇಗೂರು-1,2,3, ಕಾಳನಹುಂಡಿ, ಕೋಟೆಕೆರೆ - 1 ಮತ್ತು 2, ಬೋಹಯ್ಯನಹುಂಡಿ, ತಗ್ಗಲೂರು, ರಾಘವಾಪುರ 1 ಮತ್ತು 2. ಮತಗಟ್ಟೆ ಸಂಖ್ಯೆ 9, 10, 15, 18 ರಿಂದ 20, 23 ರಿಂದ 26, 34 ರಿಂದ 36. ಸೆಕ್ಟರ್ ಅಧಿಕಾರಿ – ಮೋಹನ್ ದಾಸ್ ಕೆ.ಎಸ್, ಸಹಾಯಕ ಕೃಷಿ ನಿರ್ದೇಶಕರು (ಜಾರಿ ದಳ), ಜಂಟಿ ಕೃಷಿ ನಿರ್ದೇಶಕರ ಕಚೇರಿ, ಚಾಮರಾಜನಗರ (ಮೊ. 8277930762), ಸಿದ್ದೇಗೌಡ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಗುಂಡ್ಲುಪೇಟೆ (ಮೊ. 8277930774). ತಂಡದ ಸಂಖ್ಯೆ 3 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08228-231100) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023). ವ್ಯಾಪ್ತಿ ಪ್ರದೇಶಗಳು – ಚಿಕ್ಕಾಟಿ 1 ಮತ್ತು 2, ತೊಂಡವಾಡಿ-1 ಮತ್ತು 2, ಹಾಲಹಳ್ಳಿ, ಕಮರಹಳ್ಳಿ, ಸೋಮಹಳ್ಳಿ- 1, 2 ಮತ್ತು 3, ಕೊಡಗಾಪುರ, ಶೀಗೇವಾಡಿ, ಮರಳಾಪುರ. ಮತಗಟ್ಟೆ ಸಂಖ್ಯೆ 11 ರಿಂದ 14, 16,17 ಹಾಗೂ 50 ರಿಂದ 55. ಸೆಕ್ಟರ್ ಅಧಿಕಾರಿ - ಚಿಕ್ಕಣ್ಣ, ಕಾರ್ಯದರ್ಶಿ, ಎಪಿಎಂಸಿ, ಚಾಮರಾಜನಗರ (ಮೊ. 7259552915), ವರಲಕ್ಷ್ಮಿ, ಸಹಾಯಕ ನಿರ್ದೇಶಕರು, ಉಪ ಖಜಾನಾಧಿಕಾರಿ ಕಚೇರಿ, ಗುಂಡ್ಲುಪೇಟೆ. ತಂಡದ ಸಂಖ್ಯೆ 4 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08228-231100) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023). ವ್ಯಾಪ್ತಿ ಪ್ರದೇಶಗಳು - ನಿಟ್ರೆ-1 ಮತ್ತು 2, ರಂಗನಾಥÀಪುರ, ತೋರವಳ್ಳಿ, ಕೆಬ್ಬೇಪುರ, ಅರಳೀಕಟ್ಟೆ, ಚಿಕ್ಕಬೇಗೂರು, ಹಿರಿಬೇಗೂರು, ಕಿಳಲಿಪುರ, ಕುಲಗಾಣ 1 ಮತ್ತು 2. ಮತಗಟ್ಟೆ ಸಂಖ್ಯೆ 56 ರಿಂದ 64, 71 ಹಾಗೂ 72. ಸೆಕ್ಟರ್ ಅಧಿಕಾರಿ - ಪುಟ್ಟಮಲ್ಲು, ಉಪ ನಿರ್ದೇಶಕರು, ರೇಷ್ಮೆ ತರಬೇತಿ ಸಂಸ್ಥೆ, ಕುದೇರು, ಚಾಮರಾಜನಗರ (ಮೊ. 9481593164), ಬಾಲಸುಬ್ರಹ್ಮಣ್ಯ, ಪತ್ರಾಂಕಿತ ವ್ಯವಸ್ಥಾಪಕರು, ಬಿಇಓ ಕಚೇರಿ, ಗುಂಡ್ಲುಪೇಟೆ (ಮೊ. 9845436088). ತಂಡದ ಸಂಖ್ಯೆ 5 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08228-231100) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023). ವ್ಯಾಪ್ತಿ ಪ್ರದೇಶಗಳು – ಮಂಚಹಳ್ಳಿ, ಸಾವುಕನಹಳ್ಳಿ, ಶೆಟ್ಟಹಳ್ಳಿ, ಹಸಗೂಲಿ - 1 ಮತ್ತು 2, ಗರಗನಹಳ್ಳಿ, ಮಳವಳ್ಳಿ, ನೇನೇಕಟ್ಟೆ - 1 ಮತ್ತು 2, ದೇಶಿಪುರ, ಆಲತ್ತೂರು 1 ಮತ್ತು 2. ಮತಗಟ್ಟೆ ಸಂಖ್ಯೆ 28 ರಿಂದ 32, 37, 245 ರಿಂದ 250. ಸೆಕ್ಟರ್ ಅಧಿಕಾರಿ - ಭಾಸ್ಕರ್ ಹೆಚ್, ಸಹಾಯಕ ತೋಟಗಾರಿಕೆ ನಿರ್ದೇಶಕರು, ಯಳಂದೂರು (ಮೊ. 8139973339), ರಫು, ಕಾರ್ಯದರ್ಶಿ, ಎಪಿಎಂಸಿ, ಗುಂಡ್ಲುಪೇಟೆ (ಮೊ. 9980795163). ತಂಡದ ಸಂಖ್ಯೆ 6 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08228-231100), ಗುಂಡ್ಲುಪೇಟೆ (08229-222228) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023), ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಅಗತಗೌಡನಹಳ್ಳಿ, ಹೆಗ್ಗಡಹಳ್ಳಿ, ಹಳ್ಳದಮಾದಹಳ್ಳಿ, ಮಾದಪಟ್ಟಣ, ಹÀುಣಸಿನಮರ, ದಡದಹÀಳ್ಳಿ, ಹಕ್ಕಲಪುರ, ಮಾಡ್ರಹಳ್ಳಿ, ಬೆಂಡಗಳ್ಳಿ, ಗುಂಡ್ಲುಪೇಟೆ 15, 15, 16, 17. ಮತಗಟ್ಟೆ ಸಂಖ್ಯೆ 38 ರಿಂದ 43, 45, 243, 244, 206 ರಿಂದ 209. ಸೆಕ್ಟರ್ ಅಧಿಕಾರಿ - ಚಲುವಯ್ಯ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ, ಚಾಮರಾಜನಗರ (ಮೊ. 9611172984), ಬಿಂದ್ಯ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ, ಗುಂಡ್ಲುಪೇಟೆ (ಮೊ. 9663382658). ತಂಡದ ಸಂಖ್ಯೆ 7 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಗುಂಡ್ಲುಪೇಟೆ (ದೂ.ಸಂ. 08229-222228). ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಕಲ್ಲಹಳ್ಳಿ, ಸಂಪಿಗೆಮರ, ಕಬ್ಬಹಳ್ಳಿ – 1,2,3, ಬೆಟ್ಟದಪುರ, ಪಂಜನಹಳ್ಳಿ, ಇಂಗಲವಾಡಿ, ಬನ್ನಿತಾಳಪುರ, ವೀರನಪುರ. ಮತಗಟ್ಟೆ ಸಂಖ್ಯೆ 44, 46 ರಿಂದ 49, 88, 235 ರಿಂದ 240. ಸೆಕ್ಟರ್ ಅಧಿಕಾರಿ – ಎಲ್.ಜೆ. ಹಂಸವೇಣಿ, ಜಿಲ್ಲಾ ನೋಂದಣಾಧಿಕಾರಿ, ಚಾಮರಾಜನಗರ (ಮೊ. 9448810572), ಶಿವಲಿಂಗಪ್ಪ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಗುಂಡ್ಲುಪೇಟೆ (ಮೊ. 9945764867). ತಂಡದ ಸಂಖ್ಯೆ 8 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಚಾಮರಾಜನಗರ ರೂರಲ್ (ದೂ.ಸಂ. 08226-222092), ಲೋಹಿತ್ ಕುಮಾರ್ (ಮೊ. 9480804646). ವ್ಯಾಪ್ತಿ ಪ್ರದೇಶಗಳು – ಹೆಗ್ಗವಾಡಿ, ಭುಜಗನಪುರ, ಕೆರೆಹÀಳ್ಳಿ, ಮುಕ್ಕಡಹಳ್ಳಿ - 1 ಮತ್ತು 2, ಹೆಗ್ಗವಾಡಿ, ಮಲೆಯೂರು, ಮೂಡ್ನಾಕೂಡು 1 ಮತ್ತು 2, ಸಾಗಡೆ – 1,2,3. ಮತಗಟ್ಟೆ ಸಂಖ್ಯೆ 65 ರಿಂದ 70, 73, 74 ಹಾಗೂ 83 ರಿಂದ 87. ಸೆಕ್ಟರ್ ಅಧಿಕಾರಿ – ರಾಮಕೃಷ್ಣಯ್ಯ, ಸಿಡಿಪಿಓ, ಗುಂಡ್ಲುಪೇಟೆ (ಮೊ. 9845565133), ಮಹೇಶ್, ಮಕ್ಕಳ ಕಾರ್ಮಿಕ ಯೋಜನಾ ವ್ಯವಸ್ಥಾಪಕರು, ಚಾಮರಾಜನಗರ (ಮೊ.9886164951). ತಂಡದ ಸಂಖ್ಯೆ 9 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಚಾಮರಾಜನಗರ ರೂರಲ್ (ದೂ.ಸಂ. 08226-222092), ಲೋಹಿತ್ ಕುಮಾರ್ (ಮೊ. 9480804646). ವ್ಯಾಪ್ತಿ ಪ್ರದೇಶಗಳು – ಕಲ್ಪುರ, ದೇಶೀಗೌಡನಪುರ, ಹಳೇಪುರ, ಹರವೆ – 1,2,3,4, ಕೇತಹÀಳ್ಳಿ, ಕೆಂಗಾಕಿ, ಕುಟ್ಟೇಗೌಡನಹುಂಡಿ, ಕುಮಚಹಳ್ಳಿ, ಹೂರದಹಳ್ಳಿ. ಮತಗಟ್ಟೆ ಸಂಖ್ಯೆ 75 ರಿಂದ 82, 89 ರಿಂದ 92. ಸೆಕ್ಟರ್ ಅಧಿಕಾರಿ – ಲಿಂಗೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಚಾಮರಾಜನಗರ (ಮೊ.9880986261), ವಿಜಯಸಾರಥಿ, ಎಇಇ, ಪಿಡಬ್ಲ್ಯೂಡಿ, ಗುಂಡ್ಲುಪೇಟೆ (ಮೊ. 9845974671). ತಂಡದ ಸಂಖ್ಯೆ 10 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ಪರಮಾಪುರ, ಪಡಗೂರು, ಯಡಹುಂಡಿ, ಕೆಲಸೂರು - 1 ಮತ್ತು 2, ಮಲ್ಲಮ್ಮನಹುಂಡಿ, ಮೂಡಗೂರು, ಶ್ಯಾನಾಡ್ರಹಳ್ಳಿ. ಬಲಚವಾಡಿ, ಕೆಲಸೂರುಪುರ, ಚಿಕ್ಕತುಪ್ಪೂರು - 1 ಮತ್ತು 2, ಕಿಲಗೆರೆ, ಚನ್ನಂಜಯ್ಯನಹುಂಡಿ. ಮತಗಟ್ಟೆ ಸಂಖ್ಯೆ 93 ರಿಂದ 102, 230 ರಿಂದ 234. ಸೆಕ್ಟರ್ ಅಧಿಕಾರಿ – ಗುರುಲಿಂಗಯ್ಯ ಎಲ್, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ, ಚಾಮರಾಜನಗರ (ಮೊ. 9448999390), ಸೋಮಣ್ಣ, ಸಹಾಯಕ ನಿರ್ದೇಶಕರು, ಗುಂಡ್ಲುಪೇಟೆ (ಮೊ.8884881672). ತಂಡದ ಸಂಖ್ಯೆ 11 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ಲಕ್ಕೂರು, ಗುರುವಿನಪುರ, ತೆರಕಣಾಂಬಿಹುಂಡಿ - 1 ಮತ್ತು 2, ತೆರಕಣಾಂಬಿ - 1 ರಿಂದ 5, ಬೆರಟಹಳ್ಳಿ, ಕಗ್ಗಳ – 1,2, ಕಗ್ಗಳದಹುಂಡಿ, ತ್ರಿಯಂಬಕಪುರ. ಮತಗಟ್ಟೆ ಸಂಖ್ಯೆ 103 ರಿಂದ 116. ಸೆಕ್ಟರ್ ಅಧಿಕಾರಿ – ಹೆಚ್.ಎಸ್. ಗೀತಾಂಬ, ಪ್ರಾಂಶುಪಾಲರು, ಡಯಟ್, ಚಾಮರಾಜನಗರ (ಮೊ. 9448999363), ಸೋಮಶೇಖರ್, ಸಹಾಯಕ ಯೋಜನಾ ಸಮನ್ವಯಾಧಿಕಾರಿ, ಸರ್ವಶಿಕ್ಷಣ ಅಭಿಯಾನ, ಡಿಡಿಪಿಐ ಕಚೇರಿ, ಚಾಮರಾಜನಗರ (ಮೊ.9449001630). ತಂಡದ ಸಂಖ್ಯೆ 12 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ಕರಕಲಮಾದಹಳ್ಳಿ, ಬೊಮ್ಮನಹಳ್ಳಿ, ಕುರುಬರಹುಂಡಿ, ರಾಮಯ್ಯನಪುರ, ಚಿರಕನಹಳ್ಳಿ, ವಡ್ಡಗೆರೆ, ಕುಂದಕೆರೆ - 1 ಮತ್ತು 2, ಹೆಗ್ಗವಾಡಿ, ಉಪಕಾರ ಕಾಲೋನಿ (ಬಿ), ಯರಿಯೂರು. ಮತಗಟ್ಟೆ ಸಂಖ್ಯೆ - 124 ರಿಂದ 134. ಸೆಕ್ಟರ್ ಅಧಿಕಾರಿ – ಕೆ.ಆರ್. ಕುಲಕರ್ಣಿ, ಉಪನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಚಾಮರಾಜನಗರ (ಮೊ. 8762376353), ನಾಗವೇಣಿ ಡಿ, ಪ್ರಭಾರ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಚಾಮರಾಜನಗರ (ಮೊ. 948112479). ತಂಡದ ಸಂಖ್ಯೆ 13 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ದೇವಾಪುರ, ಶೀಲವಂತಪುರ, ಸೋಮನಪುರ, ಕೊಡಸೋಗೆ - 1,2,3, ಕಡತಾಳಕಟ್ಟೆಹುಂಡಿ, ಕಂದೇಗಾಲ, ಬೆಟ್ಟಹಳ್ಳಿ, ಶಿಂಡನಪುರ, ದೊಡ್ಡತುಪ್ಪೂರು. ಮತಗಟ್ಟೆ ಸಂಖ್ಯೆ 117 ರಿಂದ 123, 226 ರಿಂದ 229. ಸೆಕ್ಟರ್ ಅಧಿಕಾರಿ – ಬಿ.ಎಸ್. ಮೋಹನ್, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಚಾಮರಾಜನಗರ (ಮೊ. 9740800544), ಎಲ್. ಶಿವಲಿಂಗಮೂರ್ತಿ, ಜಿಲ್ಲಾ ವ್ಯವಸ್ಥಾಪÀಕರು, ಕೆಎಸ್‍ಸಿಎಫ್‍ಸಿ, ಚಾಮರಾಜನಗರ (ಮೊ. 9448496017). ತಂಡದ ಸಂಖ್ಯೆ 14 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಗುಂಡ್ಲುಪೇಟೆ (ದೂ. ಸಂ.08229-222228) ಸಾಗರ್ (ಮೊ. 9480804652), ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಅಂಕನಹಳ್ಳಿ – 1,2, ಬೊಮ್ಮಲಾಪುರ-1,2,3, ಹುಲ್ಲೇಪುರ, ಶಿವಪುರ - 1 ಮತ್ತು 2, ಅಣ್ಣೂರು, ಅಣ್ಣೂರುಕೇರಿ – 1,2,3, ಕೋಡಹಳ್ಳಿ – 1,2. ಮತಗಟ್ಟೆ ಸಂಖ್ಯೆ 148 ರಿಂದ 152, 155 ರಿಂದ 157, 220 ರಿಂದ 225. ಸೆಕ್ಟರ್ ಅಧಿಕಾರಿ – ಶೋಭಾ, ಜಿಲ್ಲಾ ವ್ಯವಸ್ಥಾಪಕರು, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಚಾಮರಾಜನಗರ (ಮೊ. 9449169859), ಮಹದೇವಯ್ಯ, ಜಿಲ್ಲಾ ವ್ಯವಸ್ಥಾಪಕರು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಚಾಮರಾಜನಗರ (ಮೊ.9580379284). ತಂಡದ ಸಂಖ್ಯೆ 15 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಗುಂಡ್ಲುಪೇಟೆ (ದೂ. ಸಂ.08229-222228). ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಬಾಚಹಳ್ಳಿ – 1,2, ಹುಂಡೀಪುರ, ಕೆಬ್ಬೇಪುರ, ಶೆಟ್ಟಹಳ್ಳಿ, ಬೆಳವಾಡಿ, ಚೌಡಹಳ್ಳಿ, ಹಂಗಳಪುರ, ಬಸವನಪುರ, ಬೆಂಡರವಾಡಿ, ವಡ್ಡನಹೊಸಹಳ್ಳಿ, ಪುತ್ತನಪುರ. ಮತಗಟ್ಟೆ ಸಂಖ್ಯೆ 135, 136, 145 ರಿಂದ 147, 153, 154, 160 ರಿಂದ 164. ಸೆಕ್ಟರ್ ಅಧಿಕಾರಿ – ಜಯಶೀಲಾ, ಸಿಡಿಪಿಓ, ಯಳಂದೂರು ಮತ್ತು ಸಂತೇಮರಹಳ್ಳಿ (ಮೊ. 9741843218), ರಾಜೇಂದ್ರ ಪ್ರಸಾದ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ನೀರಾವರಿ ಇಲಾಖೆ, ಸುವರ್ಣಾವತಿ, ಚಾಮರಾಜನಗರ (ಮೊ.9886484747). ತಂಡದ ಸಂಖ್ಯೆ 16 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಗುಂಡ್ಲುಪೇಟೆ (ದೂ. ಸಂ.08229-222228) ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಚಿಕ್ಕಯಲಚಟ್ಟಿ, ಯಲಚಟ್ಟಿ, ಜಕ್ಕಹಳ್ಳಿ, ಕಣಿಯನಪುರ ಕಾಲೋನಿ, ಮಂಗಲ, ಬಂಡಿಪುರ, ಮಗುವಿನÀಹಳ್ಳಿ, ಮೇಲುಕಾಮನಹಳ್ಳಿ, ಕಲ್ಲೇಗೌಡನಹಳ್ಳಿ, ಪಸಯ್ಯನಪುರ, ಹಂಗಳ – 1 ರಿಂದ 5. ಮತಗಟ್ಟೆ ಸಂಖ್ಯೆ 137 ರಿಂದ 144, 158, 159, 165 ರಿಂದ 169. ಸೆಕ್ಟರ್ ಅಧಿಕಾರಿ – ಸಿದ್ದರಾಜು, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ನೀರಾವರಿ ಇಲಾಖೆ, ಚಾಮರಾಜನಗರ (ಮೊ. 9449191832), ನಿಜಲಿಂಗಸ್ವಾಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಚಾಮರಾಜನಗರ (ಮೊ.9483308663). ತಂಡದ ಸಂಖ್ಯೆ 17– ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಗುಂಡ್ಲುಪೇಟೆ (ದೂ. ಸಂ.08229-222228). ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ದೇವರಹಳ್ಳಿ, ಹಂಗಳದ ಹೊಸಹಳ್ಳಿ, ಕಳ್ಳೀಪುರ, ಗೋಪಾಲಪುರ, ಹೊನ್ನೇಗೌಡಹಳ್ಳಿ. ಗೋಪಾಲಪುರ, ಕಣ್ಣೇಗಾಲ, ಮದ್ದಯ್ಯನಹುಂಡಿ, ಭೀಮನಬೀಡು – 1,2,3, ಕೂತನೂರು – 1,2, ಮಲ್ಲಯ್ಯನಪುರ – 1,2. ಮತಗಟ್ಟೆ ಸಂಖ್ಯೆ 170 ರಿಂದ 177, 192 ರಿಂದ 198. ಸೆಕ್ಟರ್ ಅಧಿಕಾರಿ – ಶಂಕರೇಗೌಡ, ಕರ್ನಾಟಕ ವಿಮಾಧಿಕಾರಿ, ಕೆಜಿಐಡಿ, ಚಾಮರಾಜನಗರ (ಮೊ. 9880631436), ರಂಗನಾಥ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕರ್ನಾಟಕ ಗೃಹ ಮಂಡಳಿ, ಚಾಮರಾಜನಗರ (ಮೊ.9449038966). ತಂಡದ ಸಂಖ್ಯೆ 18 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ –ಗುಂಡ್ಲುಪೇಟೆ (ದೂ. ಸಂ.08229-222228) ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಬೇರಂಬಾಡಿ – 1,2, ಮದ್ದೂರು ಕಾಲೋನಿ, ಚನ್ನಮಲ್ಲಿಪುರ, ಹೊಂಗಹಳ್ಳಿ - 1 ಮತ್ತು 2, ಮುಕ್ತಿಕಾಲೋನಿ, ಬರಗಿ– 1,2, ಮುಂಟೀಪುರ, ಮೂಖಹಳ್ಳಿ, ತೆಂಕಲಹುಂಡಿ, ಹೊನ್ನಶೆಟ್ಟರಹುಂಡಿ, ಹುಲಸಗುಂದಿ, ಮಡಹಳ್ಳಿ, ಉತ್ತಂಗೆರೆಹುಂಡಿ. ಮತಗಟ್ಟೆ ಸಂಖ್ಯೆ 178 ರಿಂದ 191, 241, 242. ಸೆಕ್ಟರ್ ಅಧಿಕಾರಿ – ಮಹಾಂತೇಶ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಚಾಮರಾಜನಗರ (ಮೊ. 9449821666), ಮಹದೇವು, ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಯಳಂದೂರು (ಮೊ.9448795791). ತಂಡದ ಸಂಖ್ಯೆ 19 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ –ಗುಂಡ್ಲುಪೇಟೆ (ದೂ. ಸಂ.08229-222228) ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಗುಂಡ್ಲುಪೇಟೆ – 9,10, 10ಎ, 11 ರಿಂದ 14, 18, 1,2,5,7,3,4,6,7. ಮತಗಟ್ಟೆ ಸಂಖ್ಯೆ 199 ರಿಂದ 205, 210 ರಿಂದ 219. ಸೆಕ್ಟರ್ ಅಧಿಕಾರಿ – ನಿಸಾರ್ ಅಹಮದ್, ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಚಾಮರಾಜನಗರ (ಮೊ. 9008219682), ರಾಜಕುಮಾರ್, ಜಿಲ್ಲಾ ಅಧಿಕಾರಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಚಾಮರಾಜನಗರ (ಮೊ.9480825621). ನಿರ್ಭೀತಿಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ : ಡಿ.ಸಿ ರಾಮು ಸೂಚನೆ ಚಾಮರಾಜನಗರ ಮಾ.13 : ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರÀದ ಉಪ ಚುನಾವಣೆಗೆ ನಿಯೋಜಿತರಾಗಿರುವ ಅಧಿಕಾರಿ, ಸಿಬ್ಬಂದಿ ಪಾರದರ್ಶಕತೆ ಹಾಗೂ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಬಿ.ರಾಮು ಅವರು ಸೂಚನೆ ನೀಡಿದರು. ನಗರದ ಕೆ.ಡಿ.ಪಿ ಸಭಾಂಗಣದಲ್ಲಿ ಇಂದು ಗುಂಡ್ಲುಪೇಟೆ ವಿಧಾನ ಸಭೆ ಚುನಾವಣೆಗೆ ನೇಮಕವಾಗಿರುವ ಸೆಕ್ಟರ್ ಅಧಿಕಾರಿ, ವಿಡಿಯೋ ಕಣ್ಗಾವಲು ತಂಡ, ವಿಡಿಯೋ ವೀಕ್ಷಣಾ ತಂಡ ಹಾಗೂ ಫ್ಲೈಯಿಂಗ್ ಸ್ಕೌಡ್ ಅಧಿಕಾರಿ, ಸಿಬ್ಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣೆ ಕರ್ತವ್ಯವು ಅತ್ಯಂತ ಹೊಣೆಗಾರಿಕೆಯಾಗಿದೆ. ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು, ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದೆ. ಈಗಾಗಿ ಅಧಿಕಾರಿಗಳು ತಮಗೆ ವಹಿಸಿರುವ ಕರ್ತವ್ಯವನ್ನು ಚುನಾವಣಾ ಆಯೋಗದ ನಿಯಮ ಮಾರ್ಗಸೂಚಿ ಅನ್ವಯ ನಿರ್ವಹಿಸಬೇಕು ಎಂದರು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೊಂದಿಗೆ ಚುನಾವಣಾ ಪ್ರಕ್ರಿಯೆಯು ಬಿರುಸುಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ. ವ್ಯಾಪಕವಾಗಿ ಅವರವರ ಕಾರ್ಯ ಕ್ಷೇತ್ರದಲ್ಲಿ ನಿರತರಾಗಿ ನೀತಿ ಸಂಹಿತೆ ಪಾಲನೆಯಾಗುತ್ತಿದೆಯೇ ಎಂದು ಪರಿಶೀಲಿಸಬೇಕು. ಉಲ್ಲಂಘನೆಯಾಗಿದೆ ಎಂದು ಕಂಡುಬಂದಲ್ಲಿ ಕೂಡಲೇ ಪ್ರಕರಣ ದಾಖಲು ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಯಾವುದೇ ಚುನಾವಣಾ ಸಂಬಂಧ ಸಭೆ, ಸಮಾರಂಭ, ರ್ಯಾಲಿ ಮೆರವಣಿಗೆ ನಡೆಯುವ ವೇಳೆ ಚುನಾವಣೆಗೆ ನಿರತರಾಗಿರುವ ಅಧಿಕಾರಿಗಳು ಭೇಟಿ ನೀಡಿ ಅನುಮತಿ ಪಡೆಯಲಾಗಿದೇ ಎಂದು ಪರಿಶೀಲಿಸಬೇಕು. ಆ ಕುರಿತು ವರದಿ ಸಹ ಸಲ್ಲಿಸಬೇಕು. ಚುನಾವಣಾ ಸಂಬಂಧ ಮಾಡುತ್ತಿರುವ ವೆಚ್ಚಗಳ ಬಗ್ಗೆ ಮಾಹಿತಿ ಕಲೆಹಾಕಿ ವರದಿ ಸಿದ್ದಪಡಿಸಬೇಕು ಎಂದರು. ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳ ತಂಡ ದಿನದ 24 ಗಂಟೆಯೂ ನಿರತವಾಗಿರಬೇಕು. ಒಂದು ತಂಡ ತಮ್ಮ ಪಾಳಿಯ ಕರ್ತವ್ಯದ ನಂತರ ವರದಿ ಮಾಡಿಕೊಳ್ಳುವ ಮತ್ತೊಂದು ತಂಡಕ್ಕೆ ನಿರ್ವಹಿಸಿದ ಕೆಲಸಗಳ ಬಗ್ಗೆ ಮಾಹಿತಿ ನೀಡಬೇಕು. ಸಮನ್ವಯ ಸಹಕಾರದಿಂದ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಯಾವುದೇ ಲೋಪವೆಸಗಿದರೇ ಆಯಾ ಅಧಿಕಾರಿಗಳೇ ಹೊಣೆಗಾರರಾಗಲಿದ್ದಾರೆ. ಈಗಾಗಿ ಚುನಾವಣಾ ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಅನುಮಾನಗಳಿದ್ದರೆ ಪರಿಹರಿಸಿಕೊಳ್ಳಬೇಕು ಎಂದು ಬಿ.ರಾಮು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್.ಜೈನ್ ಮಾತನಾಡಿ ಚುನಾವಣಾ ಆಯೋಗದ ಅನುಸಾರ ಕರ್ತವ್ಯ ನಿರ್ವಹಿಸಬೇಕು. ವಾಹನ ತಪಾಸಣೆ ಸೇರಿದಂತೆ ಎಲ್ಲಾ ತಂಡಗಳಲ್ಲಿಯೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಇರಲಿದ್ದಾರೆ ಎಂದರು. ಚುನಾವಣಾ ಅಧಿಕಾರಿ ನಳಿನ್ ಅತುಲ್ ಮಾತನಾಡಿ ಚುನಾವಣಾ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಯಾವುದೇ ನಿರ್ಲಕ್ಷ ವಹಿಸುವುದನ್ನು ಸಹಿಸುವುದಿಲ್ಲ. ಪ್ರತಿದಿನ ನಿರ್ವಹಿಸುವ ಕರ್ತವ್ಯಗಳ ವೇಳೆ ಕಂಡುಬರುವ ಎಲ್ಲಾ ಪ್ರಕರಣಗಳು ಇನ್ನಿತರ ಚುನಾವಣಾ ಸಂಬಂಧ ವಿಷಯಗಳನ್ನೊಳಗೊಂಡ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ತಿಳಿಸಿದರು. ಇದೇ ವೇಳೆ ಭೂ ದಾಖಲೆ ಇಲಾಖೆಯ ಉಪ ನಿರ್ದೇಶಕರು ಹಾಗೂ ಚುನಾವಣಾ ಸಂಬಂಧ ತರಬೇತಿ ನೋಡಲ್ ಅಧಿಕಾರಿ ಸೋಮಸುಂದರ್ ಪವರ್ ಪಾಯಿಂಟ್ ಮೂಲಕ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿ, ಸಿಬ್ಬಂದಿಗೆ ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯಿತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಅಬಕಾರಿ ಉಪ ಆಯುಕ್ತರಾದ ನಾಗೇಶ್ ಸಭೆಯಲ್ಲಿ ಉಪಸ್ಥಿತರಿದ್ದರು. ******************************************************************************************* ಗುಂಡ್ಲುಪೇಟೆ ಉಪಚುನಾವಣೆ : ಪ್ಲೈಯಿಂಗ್ ಸ್ಕ್ವಾಡ್ ತಂಡ ನೇಮಕ ಚಾಮರಾಜನಗರ, ಮಾ. 12 ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ನಡೆಯಬಹುದಾದ ಯಾವುದೇ ಚುನಾವಣಾ ಅಪರಾಧ ಮತ್ತು ಅಕ್ರಮಗಳನ್ನು ನಿಯಂತ್ರಿಸಲು ಮತ್ತು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ವಿವಿಧ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಪ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶಿಸಿದ್ದಾರೆ. ಬೇಗೂರು ಹೋಬಳಿಗೆ ಸಂಬಂಧಪಟ್ಟಂತೆ ಆಹಾರ ಇಲಾಖೆಯ ಉಪನಿರ್ದೆಶಕರಾದ ಆರ್.ರಾಚಪ್ಪ (ಮೊ.ಸಂ 9448424665), ರೇಷ್ಮೆ ಇಲಾಖೆಯ ಸಹಾಯಕÀ ನಿರ್ದೇಶಕರಾದ ರೇಣುಕೇಶ್ (ಮೊ.ಸಂ 8884881672) ಹೆಡ್‍ಕಾನ್ಸ್‍ಟೇಬಲ್ ರಾಜ್‍ಗೋಪಾಲ್(ಮೊ.ಸಂ. 9986288946) ನೇಮಕವಾಗಿದ್ದಾರೆ. ಗುಂಡ್ಲುಪೇಟೆ ಮುನಿಸಿಪಲ್ ಪ್ರದೇಶಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಶೇಖರಪ್ಪ ಗಡತ್(ಮೊ.ಸಂ 9448221040),ಭೂವಿಜ್ಣಾನಿ ಸುಬ್ರಮಣಿ(ಮೊ.ಸಂ. 9980676120), ಅಬಕಾರಿ ಉಪನಿರೀಕ್ಷಕರಾದ ಎಂ.ವಾಣಿ, ಪೊಲೀಸ್ ಕಾನ್ಸ್‍ಟೇಬಲ್ ಹಮೀದ್(ಮೊ.ಸಂ 9480388314) ನೇಮಕವಾಗಿದ್ದಾರೆ. ಗುಂಡ್ಲುಪೇಟೆ ಕಸಬಾ ಹೋಬಳಿಗೆ ಸಂಬಂಧಪಟ್ಟಂತೆ ಜಿಲ್ಲಾ ಸಹಕಾರ ಸಂಘಗಳ ರಿಜಿಸ್ಟಾರ್ ಪಿ.ಶಶಿಧರ್ (ಮೊ.ಸಂ 9448928132) ಟೌನ್ ಪ್ಲಾನಿಂಗ್ ಸಹಾಯಕ ನಿರ್ದೇಶಕರಾದ ಸಿ.ಎಲ್ ಲಕ್ಷ್ಮೀಕಾಂತ್ (ಮೊ.ಸಂ 9945940309) ಅಬಕಾರಿ ಉಪ ನಿರೀಕ್ಷಕರಾದ ರೇವಣ್ಣ, ಪೊಲೀಸ್ ಕಾನ್ಸ್‍ಟೇಬಲ್ ಸುರೇಶ್ (ಮೊ.ಸಂ 9886360747) ನೇಮಕವಾಗಿದ್ದಾರೆ. ತೆರಕಣಾಂಬಿ ಹೋಬಳಿಗೆ ಸಂಬಂಧಿಸಿದಂತೆ ಜವಳಿ ಇಲಾಖೆಯ ಉಪನಿರ್ದೇಶಕರಾದ ಸಯದ್ ನಯೀಮ್ ಅಹಮದ್ (ಮೊ.ಸಂ 9448816563) ಹಿಂದುಳಿದ ವರ್ಗದ ಇಲಾಖೆಯ ವಿಸ್ತರಣಾಧಿಕಾರಿ ರಾಮಸ್ವಾಮಿ (ಮೊ.ಸಂ 9183831583) ಅಬಕಾರಿ ಉಪನಿರೀಕ್ಷಕರಾದ ತನ್ವೀರ್ , ಪೊಲೀಸ್ ಕಾನ್ಸ್‍ಟೇಬಲ್ ಚಂದ್ರಶೇಖರ (ಮೊ.ಸಂ 9620121970) ನೇಮಕವಾಗಿದ್ದಾರೆ. ಹಂಗಳ ಹೋಬಳಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಕೆ.ಎಚ್. ಸತೀಶ್ (ಮೊ.ಸಂ 9964182077) ಸಣ್ಣ ಉಳಿತಾಯ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರೇಗೌಡ (ದೂ.ಸಂ 08226-226255) ಅಬಕಾರಿ ಉಪನಿರೀಕ್ಷಕರಾದ ಶಿವಮಲ್ಲಪ್ಪ, ಪೊಲೀಸ್ ಕಾನ್ಸ್‍ಟೇಬಲ್ ಮನು (ಮೊ.ಸಂ 8792225505) ನೇಮಕವಾಗಿದ್ದಾರೆ. ಹರವೆ ಹೋಬಳಿಗೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ನಾಗರಾಜು (ಮೊ.ಸಂ 9448999221) ತೋಟಗಾರಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಸ್ ರಮೇಶ್ (ಮೊ.ಸಂ 9448421475) ಅಬಕಾರಿ ಉಪನಿರೀಕ್ಷಕರಾದ ಶಿವರಾಜಚಾರಿ ಪೊಲೀಸ್ ಕಾನ್ಸ್‍ಟೇಬಲ್ ಕೆ.ಜಿ.ಮಹೇಶ್ (ಮೊ.ಸಂ 9008897160) ನೇಮಕವಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ************************************************************************************************ ಗುಂಡ್ಲುಪೇಟೆ ಉಪಚುನಾವಣೆ : ವೀಡಿಯೋ ಸರ್ವೇಯಲೆನ್ಸ್ ಅಧಿಕಾರಿಗಳ ನೇಮಕ ಚಾಮರಾಜನಗರ, ಮಾ. 12;- ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ನಡೆಯಬಹುದಾದ ಯಾವುದೇ ಚುನಾವಣಾ ಅಪರಾಧ ಮತ್ತು ಅಕ್ರಮಗಳನ್ನು ನಿಯಂತ್ರಿಸಲು ಮತ್ತು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ವಿವಿಧ ಅಧಿಕಾರಿ ಹಾಗೂ ನೌಕರರನ್ನು ವೀಡಿಯೋ ಸರ್ವೇಯಲೆನ್ಸ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ. ನೇಮಕವಾಗಿರುವ ಅಧಿಕಾರಿಗಳು ಚುನಾವಣೆಗೆ ಸಂಬಂಧಿಸಿದಂತೆ ನಡೆಯುವ ಸಭೆ ಸಮಾರಂಭಗಳನ್ನು ವೀಡಿಯೋಗ್ರಾಪರ್ ಮೂಲಕ ಚಿತ್ರಿಕರಿಸಿ ವೀಡಿಯೋ ಮತ್ತು ವರದಿಯನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಬೇಗೂರು ಹೋಬಳಿಗೆ ತೋಟಗಾರಿಕೆ ಸಹಾಯಕ ಅಧಿಕಾರಿ ನಂಜುಂಡಯ್ಯ (ಮೊ.ನಂ 94480141143) ಕಸಬಾ ಹೋಬಳಿಗೆ ಕೃಷಿ ಅಧಿಕಾರಿ ಸತೀಶ್(ಮೊ.ಸಂ 8277930775) ತೆರಕಾಂಬಿ ಹೋಬಳಿಗೆ ಸಹಾಯಕ ತೋಟಕಾರಿಕೆ ಅಧಿಕಾರಿ ರವಿ (ಮೊ.ಸಂ 8904063635) ಹಂಗಳ ಹೋಬಳಿಗೆ ಸಹಾಯಕ ಕೃಷಿ ಅಧಿಕಾರಿ ಎಂ.ಸಿ ಪ್ರಸಾದ್ (ಮೊ,ಸಂ 8277930767) ಹರವೆ ಹೋಬಳಿಗೆ ಸಹಾಯಕ ತೋಟಗಾರಿಕೆ ಅಧಿಕಾರಿ ಪ್ರಕಾಶ್ (ಮೊ.ಸಂ 7829572434) ನೇಮಕವಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ************************************************************************************************************ ಗುಂಡ್ಲುಪೇಟೆ ಉಪಚುನಾವಣೆ : ವೀಡಿಯೋ ವೀವಿಂಗ್ ಅಧಿಕಾರಿ ನಿಯೋಜನೆ ಚಾಮರಾಜನಗರ, ಮಾ. ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ನಡೆಯಬಹುದಾದ ಯಾವುದೇ ಚುನಾವಣಾ ಅಪರಾಧ ಮತ್ತು ಅಕ್ರಮಗಳನ್ನು ನಿಯಂತ್ರಿಸಲು ಮತ್ತು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ಚುನಾವಣೆಗೆ ಸಂಬಂಧಿಸಿದಂತೆ ಚಿತ್ರಿಕರಿಸಿದ ಸಭೆ ಸಮಾರಂಭಗಳ ವೀಡಿಯೋ ವೀಕ್ಷಿಸಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಯಾಗಿದೆಯೇ ? ಇಲ್ಲವೇ ?ಎಂಬ ಬಗ್ಗೆ ವರದಿಯನ್ನು ನೀಡಲು ವೀಡಿಯೋ ವೀವಿಂಗ್ ತಂಡವನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರೂ.ಕೆ.ಚಾಮರಾಜ್ ಅವರು ತಂಡದ ಮುಖ್ಯಸ್ಥರಾಗಿ, ಕೃಷಿ ಇಲಾಖೆಯ ಅಧೀಕ್ಷಕರಾದ ಸುಧೀಂದ್ರ ಭಾರಧ್ವಾಜ್ (ಮೊ.ಸಂ 8892221166) ಅವರು ಸದಸ್ಯರಾಗಿ ನೇಮಕವಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು