Tuesday, 8 November 2022

08-11-2022 ಚಾಮರಾಜನಗರ ಸುದ್ದಿ

 ಬಾಲಕಾರ್ಮಿಕ ಪದ್ದತಿ ಮುಕ್ತ ಜಿಲ್ಲೆಯಾಗಿಸಲು ಎಲ್ಲರ ಸಹಕಾರ ಅಗತ್ಯ : ನ್ಯಾಯಾಧೀಶರಾದ ಎಂ. ಶ್ರೀಧರ 




      ಚಾಮರಾಜನಗರ, ನವೆಂಬರ್ 08 - ಬಾಲಕಾರ್ಮಿಕ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಿ ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ಅಭಿಪ್ರಾಯಪಟ್ಟರು.


     ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ ಸಂಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿμÉೀಧ ಮತ್ತು ನಿಯಂತ್ರಣ ಕಾಯ್ದೆಯ ಸೆಕ್ಷನ್ 17ರಡಿ ನೇಮಕಗೊಂಡಿರುವ ನಿರೀಕ್ಷಕರುಗಳಿಗೆ ಬಾಲಕಾರ್ಮಿಕ ಪದ್ಧತಿ ಹಾಗೂ ಬಾಲ್ಯವಿವಾಹ ಪದ್ಧತಿ ನಿರ್ಮೂಲನೆಯಲ್ಲಿ ಸೆಕ್ಷನ್ 17ರಡಿ ನೇಮಕಗೊಂಡ ನಿರೀಕ್ಷಕರ ಪಾತ್ರ ಹಾಗೂ ಇ ಶ್ರಮ್ ನೋಂದಣಿ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


     ಗ್ರಾಮಗಳಲ್ಲಿ ಬಾಲಕಾರ್ಮಿಕರನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು. ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದು ಶಿಕ್ಷಣ ಕೊಡಿಸಬೇಕು. ಮಾನವ ಕಳ್ಳಸಾಗಣೆಯನ್ನು ತಡೆಯಬೇಕು. ಶೇ.30ರಷ್ಟು ಜನರಿಗೆ ಮಾತ್ರ ಕಾನೂನಿನ ಅರಿವಿದೆ. ಇನ್ನುಳಿದವರಿಗೂ ಕಾನೂನಿನ ಜಾಗೃತಿ ಮೂಡಿಸಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ಕಿತ್ತೊಗೆದು ಜಿಲ್ಲೆಯನ್ನು ಬಾಲಕಾರ್ಮಿಕ ಪದ್ದತಿ ಮುಕ್ತಗೊಳಿಸಲು ಎಲ್ಲರ ಸಹಕಾರ ಅವಶ್ಯವಾಗಿದೆ ಎಂದರು. 


     ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಸರ್ಕಾರವು ಸಾಕಷ್ಟು ಕ್ರಿಯಾಶೀಲ ಯೋಜನೆಗಳನ್ನು ಜಾರಿಗೊಳಿಸಿದೆ. ಕಾರ್ಮಿಕರ ಕಲ್ಯಾಣ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಅರಿವು ಪಡೆದು ಸದುಪಯೋಗ ಮಾಡಿಕೊಳ್ಳುವಲ್ಲಿ ಮುಂದೆ ಬರಬೇಕು. ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಅನುದಾನ ಮೀಸಲಿಟ್ಟಿದೆ. ಸಂಘಟಿತ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಸೌಲಭ್ಯಗಳನ್ನು ತಲುಪಿಸಲು 13 ಇಲಾಖೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನ್ಯಾಯಾಧೀಶರಾದ ಶ್ರೀಧರ ಅವರು ತಿಳಿಸಿದರು.


     ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ನಾಜಿಯಾ ಸುಲ್ತಾನ ಅವರು ಮಾತನಾಡಿ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಯಲ್ಲಿ ಗ್ರಾಮಮಟ್ಟದ ಅಧಿಕಾರಿಗಳು ಗ್ರಾಮಪಂಚಾಯಿತಿಯನ್ನು ಬಾಲಕಾರ್ಮಿಕ ಮುಕ್ತಗೊಳಿಸಿ ಮುಂದಿನ ಪೀಳಿಗೆ ಉತ್ತಮ ಭವಿಷ್ಯಕ್ಕಾಗಿ ಮಕ್ಕಳನ್ನು ದೈಹಿಕ, ಮಾನಸಿಕವಾಗಿ ಸದೃಢಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು. 


     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗುಡೂರು ಭೀಮಸೇನ ಅವರು ಮಾತನಾಡಿ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸದಿದ್ದರೆ ಕಾನೂನುಗಳು ಕಾಗದದ ಮೇಲೆ ಮಾತ್ರ ಇರಲಿವೆ. ಅವುಗಳ ಪರಿಣಾಮಕಾರಿ ಅನುಷ್ಠಾನದಿಂದ ಯಾವುದೇ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಬಹುದು ಎಂದು ತಿಳಿಸಿದರು. 

     ಮಹಿಳಾ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಶೇಖರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಮಹದೇವಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ, ಕಾರ್ಮಿಕ ನಿರೀಕ್ಷಕರಾದ ವೀಣಾ, ಕೊಳ್ಳೇಗಾಲ ವೃತ್ತದ ಕಾರ್ಮಿಕ ನಿರೀಕ್ಷಕರಾದ ಚಂದ್ರು, ಗುಂಡ್ಲುಪೇಟೆ ವೃತ್ತದ ನಾರಾಯಣಮೂರ್ತಿ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. 


     ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಎಂ. ಮಹೇಶ್ ಅವರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿμÉೀಧ ಮತ್ತು ನಿಯಂತ್ರಣ ಕಾಯ್ದೆಯ ಸೆಕ್ಷನ್ 17ರಡಿ ನೇಮಕಗೊಂಡಿರುವ ನಿರೀಕ್ಷಕರುಗಳಿಗೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೋವಿಂದ ಅವರು ಬಾಲ್ಯವಿವಾಹ ಪದ್ಧತಿ ನಿರ್ಮೂಲನೆಯಲ್ಲಿ ಸೆಕ್ಷನ್ 17ರಡಿ ನೇಮಕಗೊಂಡ ನಿರೀಕ್ಷಕರ ಪಾತ್ರ ಹಾಗೂ ಇ ಶ್ರಮ್ ನೋಂದಣಿ ಬಗ್ಗೆ ಮಾಹಿತಿ ನೀಡಿದರು. 


     ಕಾರ್ಯಕ್ರಮ ಬಳಿಕ ಜಿಲ್ಲೆಯಾದ್ಯಂತ 10 ದಿನಗಳ ಕಾಲ ಸಂಚರಿಸಿ ಇ-ಶ್ರಮ್ ನೋಂದಣಿ ಬಗ್ಗೆ ಅರಿವು ಮೂಡಿಸುವ ಪ್ರಚಾರ ವಾಹನಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಅವರು ಸೇರಿದಂತೆ ಗಣ್ಯರು ಚಾಲನೆ ನೀಡಿದರು.  


------


ನವೆಂಬರ್ 12ರಂದು ಮೆಗಾ ಲೋಕ್ ಅದಾಲತ್ : ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶ-ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ 


       ಚಾಮರಾಜನಗರ, ನವೆಂಬರ್ 08 - ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಶೀಘ್ರ ಇತ್ಯರ್ಥಪಡಿಸುವ ಸಲುವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ನವೆಂಬರ್ 12ರಂದು ಮೆಗಾ ಲೋಕ್ ಅದಾಲತ್ ಅನ್ನು ನಡಸಲಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು. 


      ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.


     ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲದ ನ್ಯಾಯಾಲಯಗಳಲ್ಲಿ ಬೈಟಕ್‍ಗಳನ್ನು ಏರ್ಪಡಿಸಿ ಸಂಧಾನಕಾರರನ್ನು ನೇಮಿಸಿ ಆ ಮೂಲಕ ಲೋಕ್ ಅದಾಲತ್ ಅನ್ನು ಆಯಾ ನ್ಯಾಯಾಲಯದಲ್ಲಿ ನವೆಂಬರ್ 12ರಂದು ನಡೆಸಲಾಗುತ್ತದೆ. ಈ ಮೆಗಾ ಲೋಕ್ ಅದಾಲತ್ ಗೆ ಸಂಬಂಧಪಟ್ಟ ವಕೀಲರು, ಕಕ್ಷಿದಾರರು ತಮ್ಮ ಸಹಕಾರವನ್ನು ನೀಡಿದ್ದಲ್ಲಿ ಸಂಧಾನಕಾರರು ನೀಡುವ ಸಲಹೆಗಳನ್ನು ಆಲಿಸಿ, ಪರಸ್ಪರ ಒಪ್ಪಿಗೆಯಾದಲ್ಲಿ ಪ್ರಕರಣವನ್ನು ಲೋಕ ಅದಾಲತ್ ನಲ್ಲಿ ಬಗೆಹರಿಸಿಕೊಳ್ಳಬಹುದು.  ಇದರಿಂದ ಕಕ್ಷಿದಾರರ ಸಮಯ ಮತ್ತು ಹಣ ಉಳಿತಾಯವಾಗುತ್ತದೆ ಮತ್ತು ಪಕ್ಷಾಕಾರರ ನಡುವೆ ಬಾಂಧವ್ಯ ಚೆನ್ನಾಗಿರುತ್ತದೆ ಎಂದರು.

    

     ಲೋಕ್ ಅದಾಲತ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಹೊರತುಪಡಿಸಿ, ಇತರೆ ಯಾವುದೇ ರೀತಿಯ ಸಿವಿಲ್ ಪ್ರಕರಣಗಳು, ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ದಾಂಪತ್ಯ ಹಕ್ಕುಗಳ ಪುನರ್ ಸ್ಥಾಪನೆ, ಜೀವನಾಂಶ, ಮಕ್ಕಳ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು, ಮೋಟಾರ್ ವಾಹನ ಅಪಘಾತಕ್ಕೆ ಸಂಬಂಧಪಟ್ಟ ಪ್ರಕರಣಗಳು, ಕೈಗಾರಿಕಾ ವಿವಾದ ಕಾಯ್ದೆ ಅಡಿಯಲ್ಲಿರುವ ಪ್ರಕರಣಗಳು ಹಾಗೂ ಇತರೆ ಎಲ್ಲಾ ಸ್ವರೂಪದ ಪ್ರಕರಣಗಳು ಮತ್ತು ರಾಜಿ ಯೋಗ್ಯ ಕ್ರಿಮಿನಲ್ ಪ್ರಕರಣಗಳು, ವಿಶೇಷ ಕಾನೂನಿನಿಂದ ಶಿಕ್ಷಿಸಲ್ಪಡುವ ಅಪರಾಧಗಳಾದ ಚೆಕ್ಕು ಅಮಾನ್ಯ ಪ್ರಕರಣಗಳು, ಕಾರ್ಮಿಕ ಕಾಯ್ದೆಯಲ್ಲಿ ಬರುವಂತಹ ಪ್ರಕರಣಗಳು, ವಿದ್ಯುಚ್ಛಕ್ತಿ ಕಾಯ್ದೆ ಅಡಿಯಲ್ಲಿ ವಿದ್ಯುತ್ ಕಳವಿಗೆ ಸಂಬಂಧಿಸಿದ ಪ್ರಕರಣಗಳು, ಅಕ್ರಮ ಕಲ್ಲು, ಮರಳು ಸಾಗಾಣಿಕೆಗೆ ಸಂಬಂಧಪಟ್ಟ ಅಪರಾಧಗಳು, ಇತರೆ ಯಾವುದೇ ರಾಜೀ ಯೋಗ್ಯ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಬಹುದು. ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ಲೋಕ್ ಅದಾಲತ್ ನಲ್ಲಿ ರಾಜಿ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು. 


      ಯಾವುದೇ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ರಾಜಿ ಯೋಗ್ಯ ಪ್ರಕರಣಗಳಲ್ಲಿ ಪಕ್ಷಕಾರರು ಸಂಬಂಧಪಟ್ಟ ನ್ಯಾಯಾಲಯಕ್ಕೆ ನವೆಂಬರ್ 12ರಂದು ನಡೆಯಲಿರುವ ಲೋಕ್ ಅದಾಲತ್ ಗೆ ಪ್ರಕರಣವನ್ನು ವರ್ಗಾಯಿಸಲು ಮನವಿ ಸಲ್ಲಿಸಿದ್ದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್‍ನ ಮುಂದೆ ಕಳುಹಿಸಲಾಗುತ್ತದೆ. ನಿಗದಿಯಾಗಿರುವ ಪ್ರಕರಣಗಳನ್ನು ಮುಂಗಡ ಅರ್ಜಿಯನ್ನು ಸಲ್ಲಿಸುವ ಮುಖಾಂತರ ಲೋಕ್ ಅದಾಲತ್‍ನಲ್ಲಿ ತರಿಸಿಕೊಂಡು ವ್ಯಾಜ್ಯ ಇತ್ಯರ್ಥಕ್ಕೆ ಪ್ರಯತ್ನಿಸುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ಅಲ್ಲದೇ ಪೂರ್ವಭಾವಿ ಸಮಾಲೋಚನಾ ಕೇಂದ್ರಗಳಲ್ಲಿ ನ್ಯಾಯಾಲಯದಿಂದ ಸಾಕಷ್ಟು ಪ್ರಕರಣಗಳು ಪೂರ್ವಭಾವಿ ಸಮಾಲೋಚನೆಯ ಮುಖಾಂತರ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆ ಪ್ರಕಾರ ಕಳೆದ ಒಂದು ತಿಂಗಳಿಂದ ಸಾಕಷ್ಟು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಮತ್ತು ನ್ಯಾಯಾಲಯದ ಬಾಕಿ ಪ್ರಕರಣಗಳನ್ನು ಪೂರ್ವಭಾವಿ ಸಮಾಲೋಚನೆ ಮುಖಾಂತರ ಇತ್ಯರ್ಥಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು. 


      ಲೋಕ್ ಅದಾಲತ್‍ನಲ್ಲಿ ಪಕ್ಷಗಾರರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಕೊಳ್ಳಬಹುದಾಗಿದೆ. ಮುಂಬರುವ ಲೋಕ ಅದಾಲತ್ ನಲ್ಲಿ ಹೆಚ್ಚೆಚ್ಚು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಸಲುವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ವಿಮಾ ಕಂಪನಿಗಳು, ಭೂ ಸ್ವಾಧೀನಾಧಿಕಾರಿಗಳು, ಬ್ಯಾಂಕುಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ, ವಕೀಲರು, ಕಂದಾಯ ಇಲಾಖೆ, ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.


     ಈಗಾಗಲೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಪ್ರತಿದಿನ ಹಾಗೂ ಎಲ್ಲಾ ನ್ಯಾಯಾಲಯಗಳಲ್ಲಿ ನಿತ್ಯ ಲೋಕ್ ಅದಾಲತ್ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಏರ್ಪಡಿಸಿದ್ದು. ರಾಜೀ ಯೋಗ್ಯ ಪ್ರಕರಣಗಳಲ್ಲಿ, ಎರಡೂ ಪಕ್ಷಾಕಾರರನ್ನು ಕರೆಸಿ ಪೂರ್ವಭಾವಿ ಸಮಾಲೋಚನೆಯನ್ನು ನಡೆಸುತ್ತಾ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.  


     ಈ ಹಿಂದೆ ನಡೆದ ಲೋಕ್ ಅದಾಲತ್ ವಕೀಲರು, ಕಕ್ಷಿದಾರರು, ಪೊಲೀಸರು, ವಿಮಾ ಕಂಪನಿಗಳು ಮತ್ತು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಯಶಸ್ವಿಯಾಗಿತ್ತು.  ಇದೇ ನವೆಂಬರ್ 12ರಂದು ನಡೆಯುವ ಲೋಕ್ ಅದಾಲತ್ ನಲ್ಲಿ ಅಂದಾಜು 10 ಸಾವಿರ ಮೇಲ್ಪಟ್ಟ ಪ್ರಕರಣಗಳು ಇತ್ಯರ್ಥವಾಗುವ ನಿರೀಕ್ಷೆ ಹೊಂದಲಾಗಿದೆ. ಪ್ರತಿಯೊಬ್ಬ ಪಕ್ಷಗಾರರು ಲೋಕ್ ಅದಾಲತ್ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಮನವಿ ಮಾಡಿದರು. 


     ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಕೆ. ವಿರೂಪಾಕ್ಷ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

-------


ನ. 9ರಂದು ನಗರದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ, ಕಾನೂನು ಅರಿವು ನೆರವು ಕುರಿತ ವಸ್ತು ಪ್ರದರ್ಶನ


      ಚಾಮರಾಜನಗರ, ನವೆಂಬರ್: ಕರ್ನಾಟಕ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕುರಿತು ವಸ್ತು ಪ್ರದರ್ಶನವನ್ನು ನವೆಂಬರ್ 9ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಪೇಟೆಪ್ರೈಮರಿ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. 


     ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಅಧ್ಯಕ್ಷತೆ ವಹಿಸುವರು. 


     ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ, ಜಿಲ್ಲಾ ವಕೀಲರ ಸಂಘÀದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ. 

    -------

ಲೇಖನ

(ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ:

    ಬಡತನವೆಂದು ಕಾನೂನಿನಿಂದ ವಂಚಿತರಾಗಬೇಡಿ : ಉಚಿತವಾಗಿ ಕಾನೂನು ನೆರವು ಪಡೆಯಿರಿ


1995 ರಿಂದ ಪ್ರತಿ ವರ್ಷ ನವೆಂಬರ್ 9 ರಂದು ಕಾನೂನು ಸೇವಾ ದಿನವನ್ನು ಆಚರಿಸಲಾಗುತ್ತಿದ್ದು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಅಧೀನದಲ್ಲಿ ಬರುವ ಎಲ್ಲ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳು ಇದರ ಅಧೀನದ ಎಲ್ಲ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದೇಶಾದ್ಯಂತ ಹಲವು ಕಾನೂನು ಸಾಕ್ಷರತೆಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಪ್ರಾಧಿಕಾರದ ವತಿಯಿಂದ ಸಿಗಬಹುದಾದ ಉಚಿತ ಕಾನೂನು ಸೇವೆಗಳು, ಇದರಿಂದಾಗುವ ಅನುಕೂಲ, ದುರ್ಬಲ ವರ್ಗದವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಕಾನೂನು ಸೇವಾ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯಕ್ರಮಗಳಲ್ಲಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳೂ ಪಾಲ್ಗೊಳ್ಳುತ್ತವೆ. 


     ಸಮಾಜದ  ದುರ್ಬಲ ವರ್ಗದವರಿಗೆ  ಉಚಿತ ಕಾನೂನು ಸೇವೆಗಳನ್ನು ಒದಗಿಸುವ ಹಾಗೂ  ಉಚಿತ ಸೇವೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದೆ. ಆದರೆ ಉಚಿತ ಕಾನೂನು ಸೇವೆಗಳು ಯಾರಿಗೆ ಸಿಗುತ್ತವೆ? ಹೇಗೆ  ಸಿಗುತ್ತವೆ? ಎಂಬ ಮಾಹಿತಿಯ ಕೊರತೆಯಿಂದಾಗಿ ಕಾನೂನು ಸೇವಾ ಪ್ರಾಧಿಕಾರದ ಉದ್ದೇಶಗಳು ನಿರೀಕ್ಷಿತ ಮಟ್ಟದಲ್ಲಿ ಈಡೇರುತ್ತಿಲ್ಲ ಎಂಬುದನ್ನು ಮನಗಂಡು  ಸರ್ವೋಚ್ಛ ನ್ಯಾಯಾಲಯವು  ಈ ಬಗ್ಗೆ  ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕಾನೂನು ಸೇವಾ ದಿನವನ್ನು ಆಚರಿಸಲು ನಿರ್ಧರಿಸಿತು. 


ಪ್ರಾಧಿಕಾರದ ಕಾರ್ಯವಿಧಾನ : ಆರ್ಥಿಕವಾಗಿ ಹಿಂದುಳಿದವರು, ಪರಿಶಿಷ್ಟ ಜಾತಿ, ವರ್ಗಗಳು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಅಂಗವಿಕಲರು, ನೈಸರ್ಗಿಕ ವಿಕೋಪಕ್ಕೆ ಒಳಗಾದವರು ಸೇರಿ ಸಮಾಜದ ದುರ್ಬಲ ವರ್ಗಗಳಿಗೆ ಅಗತ್ಯ ಕಾನೂನು ನೆರವು ನೀಡುವುದು ಹಾಗೂ ಉಚಿತ ಕಾನೂನು ಸೇವೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ. ಇಲ್ಲಿ ದೊರೆಯುವ ಕಾನೂನು ಸೇವೆಗಳು ಸಂಪೂರ್ಣ ಉಚಿತವಾಗಿರಲಿವೆ. ಇದಲ್ಲದೆ ಕೊಲೆ, ಅತ್ಯಾಚಾರ, ಮಾನವ ಕಳ್ಳಸಾಗಣೆ, ಆಸಿಡ್ ದಾಳಿಯಂತಹÀ ಅಪರಾಧ ಕೃತ್ಯಗಳ ಸಂತ್ರಸ್ತರಿಗೆ ಸಂತ್ರಸ್ತ ಪರಿಹಾರ ಯೋಜನೆ ಪ್ರಕಾರ ಶೀಘ್ರ ಪರಿಹಾರ ಒದಗಿಸುವ ದಿಸೆಯಲ್ಲೂ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯೋನ್ಮುಖವಾಗಿದೆ. ಸಂತ್ರಸ್ತ ಪರಿಹಾರ ಯೋಜನೆಗೆ ರಾಜ್ಯ ಸರ್ಕಾರ ಪ್ರತಿವರ್ಷ ಹಣ ಬಿಡುಗಡೆ ಮಾಡುತ್ತದೆ. 


ಸಂತ್ರಸ್ತರಿಗೆ ವರವಾದ ಪರಿಹಾರ ಯೋಜನೆ : ಅಪರಾಧ ಕೃತ್ಯಗಳಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2012 ರಿಂದ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ ಜಾರಿಗೆ ತಂದಿದೆ. ಅಪರಾಧ ಪ್ರಕರಣಗಳ ಸಂತ್ರಸ್ತರಿಗೆ ಶೀಘ್ರ ಪರಿಹಾರ ಕಲ್ಪಿಸುವ ಜತೆಗೆ ಅವರಲ್ಲಿ ನೈತಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು, ವರ್ಷದಿಂದ ವರ್ಷಕ್ಕೆ ಪರಿಹಾರ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಯೋಜನೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಮುಂದಾಗಿರುವ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕ್ರಿಮಿನಲ್ ಪ್ರಕರಣದಲ್ಲಿ ದೂರು ನೀಡಲು ಬರುವ ಸಂತ್ರಸ್ತರಿಗೆ ಪರಿಹಾರ ಯೋಜನೆ ಕುರಿತು ಸೂಕ್ತ ಮಾಹಿತಿ ನೀಡುವಂತೆ ಎಲ್ಲ ಪೋಲೀಸ್ ಠಾಣೆಗಳಿಗೆ ಸೂಚಿಸಿದೆ.


ಯಾರಿಗೆ ಉಚಿತ ಕಾನೂನು ಸೇವೆ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಹಿಳೆಯರು, ಮಕ್ಕಳು, ಕೂಲಿ ಕಾರ್ಮಿಕರು, ಅಂಗವಿಕಲರು, ಮಾನಸಿಕ ಅಸ್ವಸ್ಥರು, ಭೂಕಂಪ, ಪ್ರವಾಹದಂತಹ ನೈಸರ್ಗಿಕ ವಿಕೋಪಗಳ ಸಂತ್ರಸ್ತರು, ಗುಂಪು ಘರ್ಷಣೆ, ಜನಾಂಗೀಯ ಗಲಭೆಗಳಲ್ಲಿ ಗಾಯಗೊಂಡವರು, ಮಾನವ ಕಳ್ಳಸಾಗಣೆ ಹಾಗೂ ವೇಶ್ಯಾವಾಟಿಕೆಗೆ ಬಲಿಯಾದವರು, ಆರ್ಥಿಕವಾಗಿ ಹಿಂದುಳಿದವರು, ವಾರ್ಷಿಕ ವರಮಾನ 3 ಲಕ್ಷ ರೂಪಾಯಿಗಳಿಗಿಂತ  ಕಡಿಮೆ ಹೊಂದಿರುವ ಸಮಾಜದ ಎಲ್ಲ ದುರ್ಬಲ ವರ್ಗದವರಿಗೆ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ನೆರವು ಹಾಗೂ ಸೇವೆಗಳು ದೊರೆಯುತ್ತವೆ. 


ಲೋಕ ಆದಾಲತ್ : ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಶೀಘ್ರ ಇತ್ಯರ್ಥಪಡಿಸಲೆಂದೇ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಲೋಕ ಆದಾಲತ್ (ಜನತಾ ನ್ಯಾಯಾಲಯ) ಆಯೋಜಿಸಲಾಗುತ್ತದೆ. ಅಪರಾಧ ಪ್ರಕರಣಗಳು. ಸಿವಿಲ್ ವ್ಯಾಜ್ಯಗಳು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ಬ್ಯಾಂಕ್ ವ್ಯಾಜ್ಯಗಳು, ವಿಮೆ, ಕೌಟುಂಬಿಕ ಪ್ರಕರಣಗಳು ಸೇರಿ ಹಲವು ಪ್ರಕರಣಗಳಲ್ಲಿ ಎರಡೂ ಕಡೆಯವರನ್ನು ಕರೆಸಿ ರಾಜಿ ಸಂಧಾನ ನಡೆಸಿ ಇತ್ಯರ್ಥ ಪಡಿಸಲಾಗುತ್ತದೆ. ಇದರಿಂದ ನ್ಯಾಯಾಲಯಗಳ ಸಮಯದ ಜತೆಗೆ ಸಾರ್ವಜನಿಕರ ಹಣವೂ ಉಳಿತಾಯವಾಗಲಿದೆ.

     ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಓಂಐSಂ ಒಔಃIಐಇ ಂPP ನ್ನು ಬಿಡುಗಡೆಗೊಳಿಸಿದ್ದು, ಸಾರ್ವಜನಿಕರು ಮೊಬೈಲ್ ಪ್ಲೇ ಸ್ಟೋರ್ ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಈ ಮೊಬೈಲ್ ಆಪ್ ಮೂಲಕ ಉಚಿತ ಕಾನೂನು ಸಲಹೆ ಹಾಗೂ ನೆರವು ಪಡೆಯಬಹುದಾಗಿದೆ. 


     ಬಡವರಿಗೆ, ಹಿಂದುಳಿದವರಿಗೆ, ಉಚಿತ ಕಾನೂನು ಸೇವೆ ಒದಗಿಸಲು ಕಾರ್ಯನಿರ್ವಹಿಸುತ್ತಿರುವ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ. ಕಾನೂನು ಸೇವಾ ದಿನದಂದು ಪ್ರತಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಆಯಾ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳು, ಶಿಬಿರಗಳನ್ನು ಆಯೋಜಿಸಿ ಉಚಿತ ಕಾನೂನು ಸೇವೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತದೆ.


      ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಉಚಿತ ಸಹಾಯವಾಣಿ ಸಂಖ್ಯೆ:- 15100, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಚಿತ ಸಹಾಯವಾಣಿ ಸಂಖ್ಯೆ:-1800-425-90900 ಇ-ಮೇಲ್,  ಞಚಿಡಿsಟsಚಿ@gmಚಿiಟ.ಛಿom    Weಜsiಣe- ತಿತಿತಿ.ಞsಟsಚಿ.ಞಚಿಡಿ.ಟಿiಛಿ.iಟಿ ಲಭ್ಯವಿದ್ದು ಜನತೆ ಪ್ರಯೋಜನ ಪಡೆಯುವಂತೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ತಿಳಿಸಿದ್ದಾರೆ.  


-----------

ನವೆಂಬರ್ 11ರಂದು ನಗರದಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ 


      ಚಾಮರಾಜನಗರ, ನವೆಂಬರ್ 08 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ದಾಸಶ್ರೇಷ್ಠ ಶ್ರೀ ಕನಕದಾಸ ಜಯಂತೋತ್ಸವ ಸಮಿತಿ ಮತ್ತು ಜಿಲ್ಲೆಯ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ನವೆಂಬರ್ 11ರಂದು ನಗರದಲ್ಲಿ ಆಯೋಜಿಸಲಾಗಿದೆ. 


     ನವೆಂಬರ್ 11ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಪ್ರವಾಸಿಮಂದಿರದಲ್ಲಿ ವಿವಿಧ ಕಲಾತಂಡಗಳೊಡನೆ ನಡೆಯಲಿರುವ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. 


     ಮೈಸೂರು ಜಿಲ್ಲೆಯ ಕೆ.ಆರ್. ನಗರದ ಕಾಗಿನೆಲೆ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮಿಯವರು ದಿವ್ಯ ಸಾನಿಧ್ಯ ವಹಿಸುವರು. ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.


     ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್, ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಡಾ. ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮಧು ಜಿ. ಮಾದೇಗೌಡ, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು, ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ, ಉಪಾಧ್ಯಕ್ಷರಾದ ಪಿ. ಸುಧಾ, ಸದಸ್ಯರಾದ ಮಮತ ಬಾಲಸುಬ್ರಮಣ್ಯಂ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 


     ನಿವೃತ್ತ ಶಿಕ್ಷಕರಾದ ಶಿವಣ್ಣ ಇಂದ್ವಾಡಿ ಅವರು ಮುಖ್ಯ ಭಾಷಣ ಮಾಡುವರು. ಆರ್. ಮಹೇಂದ್ರ ಮತ್ತು ತಂಡದವರು ದಾಸರ ಪದಗಳನ್ನು ಹಾಡುವರು ಎಂದು ಪ್ರಕಟಣೆ ತಿಳಿಸಿದೆ.


ನ. 9ರಂದು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಜಾಗೃತಿಗಾಗಿ ಸೈಕಲ್ ಜಾಥಾ


       ಚಾಮರಾಜನಗರ, ನವೆಂಬರ್ 08 (ಕರ್ನಾಟಕ ವಾರ್ತೆ):- ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023ರ ಸಂಬಂಧ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ನವೆಂಬರ್ 9ರಂದು ಬೆಳಿಗ್ಗೆ 8 ಗಂಟೆಗೆ ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಡಳಿತ ಭವನದವರೆಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


ನ. 18, 19ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ (ಪರಿಷ್ಕøತ)


     ಚಾಮರಾಜನಗರ, ನವೆಂಬರ್ 08 - ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ನವೆಂಬರ್ 18, 19ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಪರಿಷ್ಕøತ ವಿವರ ಇಂತಿದೆ. 


     ನವೆಂಬರ್ 18ರಂದು ಬೆಳಿಗ್ಗೆ 11.30 ಗಂಟೆಗೆ ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿಗೆ ಆಗಮಿಸಿ ಜಿಲ್ಲೆಯಲ್ಲಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ತಾಲೂಕಿನ ತಮ್ಮಡಹಳ್ಳಿ, ಉಡಿಗಾಲ ಹಾಗೂ ಆನೆಮಡುಗಳಲ್ಲಿ ಸ್ಥಳ ಪರಿವೀಕ್ಷಣೆ ನಡೆಸುವರು. ಮಧ್ಯಾಹ್ನ 12.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಹಾಗೂ ರೈತರಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಭೆ ನಡೆಸುವರು. 


     ಮಧ್ಯಾಹ್ನ 1.45 ಗಂಟೆಗೆ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರದ ಶ್ರೀ ಮಂಟೇಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವರು. ಮಧ್ಯಾಹ್ನ 2.30 ಗಂಟೆಗೆ ಸುವರ್ಣಾವತಿ ಡ್ಯಾಂ ಅತಿಥಿ ಗೃಹದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳೊಡನೆ ಚರ್ಚೆ ನಡೆಸುವರು. ಸಂಜೆ 4 ಗಂಟೆಗೆ ಕೊಳ್ಳೇಗಾಲಕ್ಕೆ ಆಗಮಿಸಿ ರಾಜೀವ್‍ಗಾಂಧಿ ವಸತಿ ನಿಗಮದ ವತಿಯಿಂದ ಆಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ಕಾರ್ಯಾದೇಶ ನೀಡುವ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 5.30 ಗಂಟೆಗೆ ಶಿಂಷಾದ ಕೆ.ಎಸ್.ಟಿ.ಡಿ.ಸಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡುವರು. ನವೆಂಬರ್ 19ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.

ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯ ತರಬೇತಿಗೆ ಅರ್ಜಿ ಆಹ್ವಾನ 


       ಚಾಮರಾಜನಗರ, ನವೆಂಬರ್ 08:- ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಹಾಗೂ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ವತಿಯಿಂದ ಕರ್ನಾಟಕದಲ್ಲಿರುವ ಕನ್ನಡ ಬಾರದ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ ತರಬೇತಿ ನಡೆಸಲಿದ್ದು, ಅರ್ಜಿ ಆಹ್ವಾನಿಸಲಾಗಿದೆ.


     ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಗೆ ನಗರಸಭೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಕೆಎಸ್‍ಆರ್‍ಟಿಸಿ, ವಿಶ್ವ ವಿದ್ಯಾಲಯಗಳು, ಶಾಲಾ ಕಾಲೇಜುಗಳು, ಸರ್ಕಾರಿ ಅನುದಾನ ಪಡೆಯುವ ಸಂಸ್ಥೆಗಳ ನೌಕರರು, ರಾಷ್ಟ್ರೀಕೃತ ಬ್ಯಾಂಕುಗಳ ನೌಕರರು ನೋಂದಾಯಿಸಿಕೊಳ್ಳಬಹುದು. ನೊಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ. 

      

     ಸರ್ಕಾರಿ ನೌಕರರು ಸಂಪರ್ಕ ಶಿಬಿರ ಹಾಗೂ ಪರೀಕ್ಷೆಗಳಿಗೆ ಹಾಜರಾಗುವಾಗ ಅವರ ಕಚೇರಿ ಗೈರು ಹಾಜರಿಯನ್ನು ಅನ್ಯಕಾರ್ಯ ನಿಮಿತ್ತ ಎಂದು ಪರಿಗಣಿಸಲಾಗುವುದು. ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಗೆ ನೋಂದಾಯಿಸಿಕೊಂಡು ಉತ್ತೀರ್ಣರಾದವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ಪರೀಕ್ಷೆಯಿಂದ ಅಧಿಸೂಚನೆ ಅನ್ವಯ ವಿನಾಯಿತಿ ಇದೆ. 

     

     ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ ತರಬೇತಿಯನ್ನು ಸಾರ್ವಜನಿಕರು ಸಹ ಪಡೆಯಬಹುದಾಗಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. 18 ರಿಂದ 50ರ ವಯೋಮಿತಿಯೊಳಗಿರಬೇಕು. ಆಸಕ್ತರು ಭರ್ತಿ ಮಾಡಿದ ಅರ್ಜಿಯ ಜೊತೆಯಲ್ಲಿ 250 ರೂ. ಡಿಮ್ಯಾಂಡ್ ಡ್ರಾಫ್ಟ್ ಕಳುಹಿಸಿಕೊಡಬೇಕು. ನೋಂದಾಯಿತರಿಗೆ 20 ಪಾಠಾವಳಿಗಳನ್ನು ಕಳುಹಿಸಿಕೊಡಲಾಗುವುದು. ತರಬೇತಿ ಮತ್ತು ಸಂಪರ್ಕ ಶಿಬಿರದ ಅಂತ್ಯದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.


     ಅರ್ಜಿ ನಮೂನೆ ಮತ್ತು ತರಬೇತಿ ವಿವರಗಳನ್ನು ಪ್ರಭಾರಿ ಅಧಿಕಾರಿ, ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮಾನಸ ಗಂಗೋತ್ರಿ ಮೈಸೂರು-570006 (ದೂ.ಸಂ 0821-2345128) ಇವರಿಗೆ 5 ರೂ. ಗಳ ಅಂಚೆ ಚೀಟಿಯನ್ನು ಹಚ್ಚಿದ ಸ್ವ ವಿಳಾಸವುಳ್ಳ ಲಕೋಟೆ ಕಳುಹಿಸಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಕೆಗೆ ಡಿಸೆಂಬರ್ 10 ಕಡೆಯ ದಿನವಾಗಿದೆ ಎಂದು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಉಪನಿರ್ದೇಶಕರಾದ ಡಾ. ಪಿ.ಆರ್. ಧಮೇಶ್ ಫರ್ನಾಂಡಿಜ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Thursday, 7 October 2021

ರಾಷ್ಟ್ರಪತಿಯವರಿಂದ ಸಿಮ್ಸ್ ಲೋಕಾರ್ಪಣೆ


ಗೌ.ರಾಷ್ಟ್ರಪತಿಯವರಿಂದ ಸಿಮ್ಸ್ ಲೋಕಾರ್ಪಣೆ *ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
           
        ಚಾಮರಾಜನಗರ, ಅಕ್ಟೋಬರ್ 07 - ನಗರದ ಹೊರವಲಯದ ಯಡಪುರದಲ್ಲಿ 166.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಸುಸಜ್ಜಿತ 450 ಹಾಸಿಗೆಗಳ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ (ಸಿಐಎಂಎಸ್) ಬೋಧನಾ ಆಸ್ಪತ್ರೆಯನ್ನು ಗೌರವಾನ್ವಿತ ರಾಷ್ಟ್ರಪತಿಯವರಾದ ಶ್ರೀ ರಾಮ್‍ನಾಥ್ ಕೋವಿಂದ್ ಅವರು ಇಂದು ಲೋಕಾರ್ಪಣೆ ಮಾಡಿದರು.  

       ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಯವರಾದ ಶ್ರೀ ರಾಮನಾಥ ಕೋವಿಂದ್ ಅವರು ದೀಪ ಬೆಳಗಿಸಿ ಬಟನ್ ಒತ್ತುವ ಮೂಲಕ ನೂತನ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ (ಸಿಐಎಂಎಸ್) ಬೋಧನಾ ಆಸ್ಪತ್ರೆಯನ್ನು ಉದ್ಘಾಟಿಸಿದರು. 

       ಉದ್ಘಾಟನೆಯ ಬಳಿಕ ಕನ್ನಡದಲ್ಲಿಯೇ ಭಾಷಣ ಪ್ರಾರಂಭಿಸಿದ ರಾಷ್ಟ್ರಪತಿಯವರು ನನಗೆ ಕರ್ನಾಟಕಕ್ಕೆ ಬರಲು ತುಂಬಾ ಇಷ್ಟವಾಗಿದೆ. ನಿಮ್ಮ ಜೊತೆ ಇರಲು ತುಂಬಾ ಸಂತೋಷವಾಗಿದೆ ಎಂದು ಹೇಳುವ ಮೂಲಕ ಕನ್ನಡ ಭಾಷೆ ಹಾಗೂ ಕರ್ನಾಟಕದ ಜನರ ಮೇಲಿನ ಪ್ರೀತಿಯನ್ನು ಅಭಿವ್ಯಕ್ತಪಡಿಸಿದರು. 

      ನವರಾತ್ರಿಯ ಮೊದಲ ಶುಭ ದಿನವೇ ಆಸ್ಪತ್ರೆಯ ಉದ್ಘಾಟನೆ ನೆರವೇರುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ವೈದ್ಯಕೀಯ ವಿದ್ಯಾರ್ಥಿಗಳು ಮೈಸೂರಿನ ರಾಜರು ತೋರಿದ ಉದಾತ್ತ ಸೇವೆ ಮತ್ತು ಸಹಾನುಭೂತಿಯೊಂದಿಗೆ ಭವಿಷ್ಯದಲ್ಲಿ ಸೇವೆ ಸಲ್ಲಿಸಬೇಕು. ಜಿಲ್ಲೆಯ ಮೊದಲ ವೈದ್ಯಕೀಯ ಕಾಲೇಜು ಆಗಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹೊಸ ನೆಲೆಯೊಂದಿಗೆ ಮುಂದುವರೆಯುತ್ತಿದೆ. ಈ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವ 750 ವೈದ್ಯಕೀಯ ವಿದ್ಯಾರ್ಥಿಗಳಲ್ಲಿ 300ರಷ್ಟು ವಿದ್ಯಾರ್ಥಿನಿಯರೇ ಇರುವುದು ಮತ್ತು ನರ್ಸಿಂಗ್ ಕೋರ್ಸ್‍ನಲ್ಲಿ ಶೇ. 60ರಷ್ಟು ವಿದ್ಯಾರ್ಥಿನಿಯರು ಇರುವುದು ತುಂಬಾ ಸಂತೋಷದ ವಿಷಯವಾಗಿದೆ. ನಮ್ಮ ದೇಶದ ನಮ್ಮ ಹೆಣ್ಣು ಮಕ್ಕಳು ಮಹತ್ತರ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಇದು 21ನೇ ಶತಮಾನದಲ್ಲಿ ಮುಮದುವರೆಯುತ್ತಿರುವ ಪ್ರಗತಿಪರ ಭಾರತವನ್ನು ಪ್ರತಿಬಿಂಬಿಸುತ್ತಿದೆ ಎಂದರು. 

      2020-21ರಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನದಲ್ಲಿ ಚಾಮರಾಜನಗರ ವೈದ್ಯಕೀಯ ಕಾಲೇಜು 3ನೇ ಸ್ಥಾನದಲ್ಲಿರುವುದು ಸಂತಸದ ವಿಷಯವಾಗಿದೆ. ದೇಶದಲ್ಲಿ ಆರೋಗ್ಯ ಮೂಲ ಸೌಕರ್ಯವನ್ನು ಸುಧಾರಿಸಲು ಪ್ರತೀ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜನ್ನು ತೆರೆಯಲಾಗುತ್ತಿದೆ. ಹೊಸ ಸ್ನಾತಕೋತ್ತರ ಕಾಲೇಜುಗಳು ಬರುತ್ತಿದ್ದು ಈಗಿರುವ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಗಳು ಶ್ರೇಷ್ಠತೆಯ ಕೇಂದ್ರಗಳಾಗಲು ಉತ್ತೇಜನ ನೀಡುತ್ತವೆ. ಆರೋಗ್ಯ ಸೇವೆಗಳು ದೇಶದ ದೂರದ ಮೂಲೆಗಳಿಗೂ ಕೊಂಡೊಯ್ಯಬೇಕು. ತಂತ್ರಜ್ಞಾನ, ಮಾನವ ಸಂಪನ್ಮೂಲ, ಒಂದಾದಾಗ ಆತ್ಮ ನಿರ್ಭರ ಭಾರತವನ್ನು ನಿರ್ಮಿಸಬಹುದು ಎಂದು ರಾಷ್ಟ್ರಪತಿಯವರು ಆಶಿಸಿದರು.

 ರಾಜ್ಯಪಾಲ ಶ್ರೀ ತಾವರ್‍ಚಂದ್ ಗೆಹ್ಲೋಟ್ ಅವರು ಮಾತನಾಡಿ ವೃತ್ತಿ ಶಿಕ್ಷಣ ನೀಡುವಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಆರೋಗ್ಯ ಸೇವೆಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ನೂತನ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಲಭ್ಯವಿದೆ. ಜಿಲ್ಲೆಯನ್ನು ಕೋವಿಡ್ ಮುಕ್ತವಾಗಿಸಲು ಜಿಲ್ಲಾಡಳಿತದೊಂದಿಗೆ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. 

      ಆಸ್ಪತ್ರೆಯು ಸ್ಥಳೀಯರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಿದ್ದು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಲಿ. ಆರೋಗ್ಯ ಸೇವೆಯು ದೈವಿಕ ಸೇವೆಯಾಗಿದೆ. ಈ ಸೇವಾ ಕಾರ್ಯದಲ್ಲಿ ಯಶಸ್ಸನ್ನು ಪಡೆಯುತ್ತಿರೆಂಬ ನಂಬಿಕೆ ಹೊಂದಿರುವುದಾಗಿ ರಾಜ್ಯಪಾಲರು ನುಡಿದರು. 

       ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ ರಾಷ್ಟ್ರಪತಿಯವರು ಆಸ್ಪತ್ರೆ ಉದ್ಘಾಟಿಸಿರುವುದು ಸ್ಮರಣೀಯ. ಬಡವರ ಅತ್ಯುತ್ತಮ ಸೇವೆಗೆ ಆಸ್ಪತ್ರೆ ಮುಡುಪಾಗಲಿ ಎಂದು ಹಾರೈಸಿದರು.  

     ಚಾಮರಾಜನಗರದ ಸಮಗ್ರ ಅಭಿವೃದ್ದಿಗೆ ಸರ್ಕಾರ ಬದ್ದವಾಗಿದ್ದು ಎಲ್ಲಾ ನೆರವು ನೀಡಲಾಗುವುದು. ಚಾಮರಾಜನಗರದ ಅಭಿವೃದ್ದಿ, ಕಲ್ಯಾಣ ಆದ್ಯ ಕರ್ತವ್ಯ. ಯಾರೂ ಏನೇ ಹೇಳಲಿ ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಿದರೆ ಒಳ್ಳೆಯದೇ ಆಗುತ್ತದೆ. ಮುಂದೆ ಜಿಲ್ಲಾಡಳಿತ ಭವನಕ್ಕೆ ಭೇಟಿ ನೀಡಿ ಅಭಿವೃದ್ದಿ ಕಾರ್ಯಗಳ ಪ್ರಗತಿ ಪರಿಶೀಲಿಸಲಾಗುವುದೆಂದು ಮುಖ್ಯಮಂತ್ರಿಯವರು ತಿಳಿಸಿದರು.  

       ಡಿಸಂಬರ್ ಒಳಗೆ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇನ್ನು ಒಂದುವರೆ ವರ್ಷಗಳಲ್ಲಿ ಬಾಕಿಯಿರುವ ಇನ್ನೂ 8 ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜು ಪ್ರಾರಂಭಿಸಲಾಗುವುದು. ಪ್ರಸ್ತುತ ಚಾಮರಾಜನಗರದಲ್ಲಿ ನಿರ್ಮಾಣ ಮಾಡಲಾಗಿರುವ ಆಸ್ಪತ್ರೆ ಎಲ್ಲರ ಆರೋಗ್ಯ ರಕ್ಷಣೆಗೆ ಅನುಕೂಲವಾಗಲಿದೆ. ಇಲ್ಲಿನ ವೈದ್ಯಕೀಯ ವಿದ್ಯಾಥಿಗಳು ಅತ್ಯಂತ ನಿಪುಣ ವೈದ್ಯರಾಗಿ ಹೊರಹೊಮ್ಮಬೇಕು ಎಂದು ಮುಖ್ಯಮಂತ್ರಿಯವರು ತಿಳಿಸಿದರು.  

      ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಅವರು ಮಾತನಾಡಿ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿಯವರು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಕರ್ನಾಟಕವು ಕೋವಿಡ್ ನಿರ್ವಹಣೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ನೂತನ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅತ್ಯಾಧುನಿಕ ಆಸ್ಪತ್ರೆಯು ಎಲ್ಲರ ಆರೋಗ್ಯ ಸೇವೆಗೆ ಮುಂದಾಗಲಿದೆ ಎಂದರು.  

      ರಾಷ್ಟ್ರಪತಿಯವರ ಶ್ರೀಮತಿಯವರಾದ ಸವಿತಾ ರಾಮನಾಥ್ ಕೋವಿಂದ್, ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ವೇದಿಕೆಯಲ್ಲಿದ್ದರು.











 

Saturday, 9 January 2021

ನಿದ್ರಾವಸ್ಥೆಯಲ್ಲಿ ಸಂಚಾರ ಅವ್ಯವಸ್ಥೆ,ಚಾಮರಾಜನಗರದಲ್ಲಿ ನಿಷ್ಪ್ರಯೋಕವಾದ ಬಾಡಿಕ್ಯಾಮ್!


 ನಿದ್ರಾವಸ್ಥೆಯಲ್ಲಿ ಸಂಚಾರ ಅವ್ಯವಸ್ಥೆ,ಚಾಮರಾಜನಗರದಲ್ಲಿ ನಿಷ್ಪ್ರಯೋಕವಾದ ಬಾಡಿಕ್ಯಾಮ್! 

*ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ: ಎಲ್ಲೆಂದರಲ್ಲಿ ವಾಹನ ನಿಲುಗಡೆ,ಎಲ್ಲೆಂದರಲ್ಲಿ ವಾಹನ ತಪಾಸಣೆ,ಹೆಚ್ಚಾಗಿ ರಸ್ತೆ ನಿಯಮ ಉಲ್ಲಂಘಿಸುತ್ತಿರೋ ವಾಹನ ಸವಾರರು, ನಿಷ್ಪ್ರಯೋಜಕವಾದ ಬಾಡಿಕ್ಯಾಮ್ ಹೀಗೆ ಒಂದಾ ಎರಡಾ ಹೇಳೋಕೆ ಹೋಗ್ತಾ ಇದ್ರೆ ಇದನ್ನೆಲ್ಲ ಕೇಳೊಕೆ ಪೊಲೀಸ್ ಇಲಾಖೆ ಇದಿಯೊ ಇಲ್ಲವೊ ಎಂಬ ಮಟ್ಟಿಗೆ ಅನುಮಾನ ಮೂಡಿಸಿ ಬಿಡುತ್ತದೆ.

 *ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖಾ ಕಳೆದ ತಿಂಗಳು ಸ್ಪೆಷಲ್ ಡ್ರೈವ್ ನೆಪದಲ್ಲಿ ಎಲ್ಲ ಮೂಲೆ ಮೂಲೆಯಲ್ಲೂ ನಿಂತು ವಾಹನ ಸವಾರರಿಗೆ ಬಲೆ ಬೀಸಿ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕಿದರು. 

*ಉಳಿದಂತೆ ಯಾವಾಗಲೊ ದಂಡ ಹಾಕೋದು, ಊರ ಹೊರಗೆ ನಿಂತು ದಂಡ ಹಾಕೋದು ಈಗ ಸಾಮಾನ್ಯವಾಗಿದೆ. ಅದು ಬಿಟ್ರೆ ಎಲ್ಲಾದರೂ ಹೆಲ್ಮೆಟ್ ರಹಿತ ವಾಹನ ಸವಾರರು ಒಂದಿಬ್ಬರು ಸತ್ತರೆ ನಂತರ ಇಲಾಖೆ ಪುಲ್ ಅಲರ್ಟ್ ಆಗುತ್ತದೆ ತದ ನಂತರ ಯಥಾ ಸ್ಥಿತಿ.. ಹಾಗಿಯೆ ಬಾಡಿಕ್ಯಾಮ್ ಸ್ಥಿತಿ ಕೂಡ ಅಷ್ಟೆ...

 *ಸಂಚಾರ ಠಾಣೆಯಲ್ಲಿ ಇನ್ಸ್ ಪೆಕ್ಟರ್ ರವಿಶಂಕರ್  ಅವರಿದ್ದಾಗ ಬಳಸಿದ ಬಾಡಿಕ್ಯಾಮ್ ನಂತರ ಮೂಲೆಗೆ ಸೇರಿದವು. ಹೀಗೆ ಆವಾಗ ಈವಾಗ ಬಳಕೆ ಮಾಡಿದರೆ ಯಾರನ್ನ ತಾನೆ ಜನಸಾಮಾನ್ಯರು ನಂಬುತ್ತಾರೆ ಹೇಳಿ..ನಿಯಮ ಉಲ್ಲಂಘನೆ, ಗಲಾಟೆ ಮಾಡಿದವರ ಚಿತ್ರಣ, ಅಲ್ಪ ಪ್ರಮಾಣ ಭ್ರಷ್ಟತೆ ಕಡಿಮೆ ಮಾಡಬಹುದಾದರೂ ಇದೆಲ್ಲವನ್ನ ಉಲ್ಲಂಘನೆ ಮಾಡಿ ಕೆಲಸ ನಿರ್ವಹಣೆ ಮಾಡಲಾಗುತ್ತಿದೆ. 

*ನ್ಯಾಯಾಲಯ ಒಂದು ಕಡೆ ಬಾಡಿಕ್ಯಾಮ್ ಧರಿಸಿ ಕೆಲಸ ನಿರ್ವಹಿಸಿ ಅಂತ ಸಲಹೆ ನೀಡಿದರೂ ಪಾಲನೆ ಮಾತ್ರ ಶೂನ್ಯವಾಗಿದೆ. *ಜಿಲ್ಲಾ ವರೀಷ್ಟಾದಿಕಾರಿಗಳ ಬಾಡಿಕ್ಯಾಮ್ ಬಳಸಲು ಆದೇಶಿಸುತ್ತಾರೋ, ಅವರ ಆದೇಶ ನಿರಂತರವಾಗಿ ಜಾರಿಯಾಗುತ್ತೋ ಅಥವಾ ಒಂದು ದಿನದ ಬಳಕೆಗಾಗಿ ಆಗುತ್ತೋ 


ಟಿಪ್ಪರ್ ಗೆ ಬೈಕ್ ಸವಾರರಿಬ್ಬರು ಬಲಿ! *ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ*


ಟಿಪ್ಪರ್ ಗೆ ಬೈಕ್ ಸವಾರರಿಬ್ಬರು ಬಲಿ! 
*ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ: ಚಲಿಸುತ್ತಿದ್ದ ಟಿಪ್ಪರ್ ಗೆ ಬೈಕ್ ಸವಾರರಿಬ್ಬರು ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ೨೦೯ ಅಲ್ಲಿ ನಡೆದಿದೆ.
 *ಮೃತರು ಬ್ಯಾಡ್ ಮೂಡ್ಲು ಗ್ರಾಮದ ಮಣಿ (೨೮) ಹಾಗೂ ಹೊಂಗನೂರು ಗ್ರಾಮದ ನಟರಾಜು (೨೫) ಎಂದು ತಿಳಿದುಬಂದಿದೆ.
 *ಸವಾರರಿಬ್ಬರು ಊರಿಗೆ ಹೋಗುವಾಗ ಸತ್ತಿ ರಸ್ತೆಯಲ್ಲಿರೊ ಎಚ್‌‌.ಪಿ.ಪೆಟ್ರೊಲ್ ಬಂಕ್ ಸಮೀಪವಿರೊ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
 *ಸ್ಥಳಕ್ಕೆ ಎಸ್ಪಿ ದಿವ್ಯ,
ಹೆಚ್ಚುವರಿ ಪೊಲೀಸ್ ವರೀಷ್ಟಾದಿಕಾರಿ ಅನಿತಾ ಹದ್ದಣ್ಣನ್ನವರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಂಚಾರ ಠಾಣೆ& ಪಟ್ಟಣಠಾಣಾ ಸಿಬ್ಬಂದಿಗಳು ಹಾಜರಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. 
*ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ





 

Thursday, 7 January 2021

ಟೆಂಪೊ ಟ್ರಾವಲರ್ ಪಲ್ಟಿ: ಒಂದೇ ಕುಟುಂಬದ ಮೂವರ ಸಾವು *ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*



ಟೆಂಪೊ ಟ್ರಾವಲರ್ ಪಲ್ಟಿ: ಒಂದೇ ಕುಟುಂಬದ ಮೂವರ ಸಾವು 

*ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ: ಟೆಂಪೊ ಟ್ರಾವಲರ್ ಪಲ್ಟಿ ಹೊಡೆದ ಪರಿಣಾಮ ಒಂದೆ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಪೂರ್ವ ಗ್ರಾಮಾಂತರ ಠಾಣಾ ವಲಯದಲ್ಲಿ ನಡೆದಿದೆ. *ಕನಕಪಾಳ್ಯಂ ಕಸ್ತೂರಬಾ ನಗರದ ತಿರುಪ್ಪುರ್ ಅಲ್ಲಿರೋ ಒಂದೆ ಕುಟುಂಬದ  ಸುಬ್ರಮಣ್ಯ(75),ಇವರ ಹೆಂಡತಿ ಅಮರಾವತಿ(65), ಇವರ ಮಗಳು ಕೋಕಿಲ (40)ಸೇರಿ ಮೂವರು ಸಾವನ್ನಪ್ಪಿದ್ದಾರೆ. 

*ತಿರುಪೂರ್ ಇಂದ ಮೈಸೂರು ಚಾಮುಂಡಿ‌ಬೆಟ್ಟಕ್ಕೆ ಟೆಂಪೊ ಟ್ರಾವಲ್ ಅಲ್ಲಿ  ಹೋಗುವಾಗ ಬಹುಶಃ ಚಾಲಕನ ನಿಯಂತ್ರಣ ತಪ್ಪಿಯೇನೋ ಚಾಮರಾಜನಗರ ಪೂರ್ವಠಾಣಾ ವ್ಯಾಪ್ತಿಯ ಕುಳ್ಳೂರು ಗುಡಿಭೋರೆ ಸಮೀಪ ಈ ಅಪಘಾತ ಸಂಭವಿಸಿದೆ.

 *  ಅಪಘಾತದಲ್ಲಿ ಮೂವರು ಸ್ಥಳದಲ್ಲಿ ಸಾವನ್ನಪ್ಪಿದರೆ ಉಳಿದ 14 ಜನರನ್ನ ಚಿಕಿತ್ಸೆಗಾಗಿ  ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. *ಪೂರ್ವ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ದಿವ್ಯ, ಎಎಸ್ಪಿ ಅನಿತಾ ಹದ್ದಣ್ಣನ್ನವರ್ ,ಡಿವೈಸ್ಪಿ ಪ್ರಿಯದರ್ಶಿನಿ ಸೇರಿದಂತೆ ಇನ್ನಿತರರು ಭೇಟಿ ನೀಡಿ ಪರಿಶೀಲಿಸಿದರು

 *ಸದರಿ ಸ್ಥಳದಲ್ಲಿ 15 ದಿನದೊಳಗೆ ಈಗಾಗಲೇ ಮೂರನೇ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ





 

Thursday, 10 December 2020

ಭರದಿಂದ ಸಾಗಿರುವ ಇತಿಹಾಸ ಪ್ರಸಿದ್ದ ಬಿಳಿಗಿರಿರಂಗನಾಥಸ್ವಾಮಿ, ಚಾಮರಾಜೇಶ್ವರಸ್ವಾಮಿ ರಥ ನಿರ್ಮಾಣ ಕಾರ್ಯ

 


 ಭರದಿಂದ ಸಾಗಿರುವ ಇತಿಹಾಸ ಪ್ರಸಿದ್ದ ಬಿಳಿಗಿರಿರಂಗನಾಥಸ್ವಾಮಿ, ಚಾಮರಾಜೇಶ್ವರಸ್ವಾಮಿ ರಥ 

                            ನಿರ್ಮಾಣ ಕಾರ್ಯ 


ಚಾಮರಾಜನಗರ, ಸೆಪ್ಟೆಂಬರ್ 8 (ಕರ್ನಾಟಕ ವಾರ್ತೆ):- ಇತಿಹಾಸ ಪ್ರಸಿದ್ದ ಬಿಳಿಗಿರಿರಂಗನಬೆಟ್ಟದ ಬಿಳಿರಂಗನಾಥಸ್ವಾಮಿ ಬ್ರಹ್ಮರಥ ಹಾಗೂ ಚಾಮರಾಜನಗರ ಪಟ್ಟಣದ ಚಾಮರಾಜೇಶ್ವರಸ್ವಾಮಿ ಬ್ರಹ್ಮರಥದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಭಕ್ತರ ಆಶಯದಂತೆ ರಥೋತ್ಸವದ ವೇಳೆಗೆ ಈ ಎರಡೂ ರಥಗಳು ಸಿದ್ದಗೊಳ್ಳುವ ನಿರೀಕ್ಷೆಯಿದೆ. 


ರಥ ಶಿಥಿಲಗೊಂಡ ಹಿನ್ನಲೆಯಲ್ಲಿ ಹಾಗೂ ಬಿಳಿರಂಗನಾಥಸ್ವಾಮಿ ದೇವಾಲಯ ಜೀರ್ಣೋದ್ದಾರ ಕಾರಣದಿಂದ ಕಳೆದ 4 ವರ್ಷಗಳಿಂದ ಏಪ್ರಿಲ್ ಇಲ್ಲವೇ ಮೇ ತಿಂಗಳಿನಲ್ಲಿ ನಡೆಯುತ್ತಿದ್ದ ಬಿಳಿಗಿರಿರಂಗನನಾಥಸ್ವಾಮಿ ಬ್ರಹ್ಮ ರಥೋತ್ಸವ ಸ್ಥಗಿತಗೊಂಡಿತ್ತು. ಚಾಮರಾಜೇಶ್ವರ ಸ್ವಾಮಿ ಬ್ರಹ್ಮರಥಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ರಥ ಸುಟ್ಟುಹೋಗಿ ಕಳೆದ 4 ವರ್ಷಗಳಿಂದ ಆಷಾಢ ಮಾಸದಲ್ಲಿ ನಡೆಯುತ್ತಿದ್ದ ಬ್ರಹ್ಮರಥೋತ್ಸವ ನಿಂತು ಹೋಗಿತ್ತು. ಇದರಿಂದ ಭಕ್ತಾಧಿಗಳಿಗೆ ಬಾರಿ ನಿರಾಶೆಯಾಗಿತ್ತು. 


ರಥ ನಿರ್ಮಾಣ ಕೆಲಸವನ್ನು ಬೇಗ ಕೈಗೊಳ್ಳುವಂತೆ ಸಾಕಷ್ಟು ಒತ್ತಾಯವು ಭಕ್ತರಿಂದ, ಸಾರ್ವಜನಿಕರಿಂದ ಕೇಳಿಬಂದಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಚಾಮರಾಜೇಶ್ವರ ಬ್ರಹ್ಮರಥ ನಿರ್ಮಾಣಕ್ಕೆ ಮುಂದಾಗಿ ಲೋಕೋಪಯೋಗಿ ಇಲಾಖೆಗೆ ನಿರ್ಮಾಣ ಕಾಮಗಾರಿ ಹೊಣೆಯನ್ನು ವಹಿಸಿದೆ. 


ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥವನ್ನು 96 ಲಕ್ಷ ರೂ ವೆಚ್ಚದಲ್ಲಿ ಹಾಗೂ ಚಾಮರಾಜೇಶ್ವರ ಬ್ರಹ್ಮರಥವನ್ನು 99 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಟೆಂಡರ್ ಕರೆದು ಬೆಂಗಳೂರಿನ ರಥಶಿಲ್ಪಿ ಬಿ.ಎಸ್ ಬಡಿಗೇರ ಮತ್ತು ಸನ್ಸ್ ರವರಿಗೆ ಬ್ರಹ್ಮರಥ ನಿರ್ಮಾಣ ಕಾಮಗಾರಿಯನ್ನು ನಿರ್ಮಿಸಲು ಕಾರ್ಯಾದೇಶ ನೀಡಲಾಗಿದೆ. 


ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥಕ್ಕಾಗಿ ಬೇಕಾಗುವ 706.65 ಘನ ಅಡಿ ಬಿ ದರ್ಜೆಯ ಟೀಕ್ ಮರ ಹಾಗೂ ಚಾಮರಾಜೇಶ್ವರ ಬ್ರಹ್ಮ ರಥಕ್ಕಾಗಿ ಅಗತ್ಯವಿರುವ 691.91 ಘನ ಅಡಿ ಬಿ ದರ್ಜೆಯ ಟೀಕ್ ಮರವನ್ನು ಕಾರವಾರ ಜಿಲ್ಲೆಯ ಕಿರವತ್ತು ಸರ್ಕಾರಿ ಮರಮುಟ್ಟು ಸಂಗ್ರಹಾಲಯದಿಂದ ಖರೀದಿಸಲಾಗಿದೆ. ಖರೀದಿಸಿದ ಈ ಮರವನ್ನು ಸುಮಾರು ಎರಡೂವರೆ ತಿಂಗಳ ಕಾಲ ಕತ್ತರಿಸಿ ಒಣಗಿಸಲು ಇಡಲಾಗಿತ್ತು. ಕತ್ತರಿಸಿ ಒಣಗಿಸಿದ ಬಳಿಕ ರಥದ ನಿರ್ಮಾಣ ಕಾಮಗಾರಿ ನಿರ್ವಹಿಸಲಿರುವ ಬಿ.ಎಸ್.ಬಡಿಗೇರ ಅವರ ಬೆಂಗಳೂರಿನಲ್ಲಿರುವ ವರ್ಕ್‍ಶಾಪ್‍ಗೆ ಸಾಗಿಸಲಾಗಿದ್ದು ಅಲ್ಲಿಯೇ ರಥದ ನಿರ್ಮಾಣ ಕೆಲಸ ಭರದಿಂದ ನಡೆದಿದೆ. 


ಪ್ರಧಾನ ಶಿಲ್ಪಿ ಬಿ.ಎಸ್.ಬಡಿಗೇರ ಹಾಗೂ ಇತರೆ ಮುಖ್ಯ ಶಿಲ್ಪಿ ಶಿವಕುಮಾರ ಬಡಿಗೇರ, ಎಚರೇಶ ಬಡಿಗೇರ ಅವರ ನೇತೃತ್ವದಲ್ಲಿ 10 ರಿಂದ 13 ಶಿಲ್ಪಿಗಳು ರಥದ ನಿರ್ಮಾಣ, ಕೆತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಬಿಳಿಗಿರಿರಂಗನಾಥಸ್ವಾಮಿ ರಥವು 16 ಅಡಿಯಲ್ಲಿ ನಿರ್ಮಾಣವಾಗಲಿದ್ದು, 29 ಫ್ರೇಮ್ ಗಳು ಬರಲಿವೆ. ಈಗಾಗಲೇ ಈ ಎಲ್ಲಾ 29 ಫ್ರೇಮ್ ಗಳ ಕೆಲಸ ಪೂರ್ಣವಾಗಿದೆ. ಚಾಮರಾಜೇಶ್ವರ ಬ್ರಹ್ಮರಥವು 16 ಅಡಿಯಲ್ಲಿ ನಿರ್ಮಾಣವಾಗಲಿದ್ದು, 26 ಫ್ರೇಮ್‍ಗಳು ಇರಲಿವೆ. ಇದರಲ್ಲಿ ಈಗಾಗಲೇ 20 ಫ್ರೇಮ್‍ಗಳು ಪೂರ್ಣಗೊಂಡಿವೆ. 


ಫ್ರೇಮ್ ಕೆಲಸಗಳ ಬಳಿಕ ಪುರಾಣದಲ್ಲಿ ಬರುವ ದೇವಾನು ದೇವತೆಗಳ ವಿಗ್ರಹ ಇತರೆ ಕುಸರಿ ಕೆತ್ತನೆ ಕೆಲಸಗಳನ್ನು ಆರಂಭಿಸಬೇಕಿದೆ. ಇದಕ್ಕೂ ಮೊದಲು ರಥ ನಿರ್ಮಾಣವಾಗುತ್ತಿರುವ ಕಾರ್ಯಗಾರಕ್ಕೆ ದೇವಾಲಯದ ಆಗಮಿಕರನ್ನು ಕರೆದೊಯ್ದು ರಥ ನಿರ್ಮಾಣ ಕಾರ್ಯ ಪರಿಶೀಲಿಸಿ ಸೂಕ್ತ ಸಲಹೆಗಳನ್ನು ಪಡೆಯುವಂತೆ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. 


ಭಕ್ತರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಚಾರಿತ್ರಿಕ, ಪುರಾಣ ಪ್ರಸಿದ್ದ ಚಾಮರಾಜೇಶ್ವರ ಹಾಗೂ ಬಿಳಿಗಿರಿರಂಗನಾಥಸ್ವಾಮಿ ರಥ ನಿರ್ಮಾಣ ಕೆಲಸ ವೇಗದಿಂದ ನಡೆದಿದೆ. ಏಪ್ರಿಲ್ ಅಥವಾ ಮೇ ಮಾಹೆಯಲ್ಲಿ ಬರುವ ಚಿತ್ತಾ ನಕ್ಷತ್ರ ಪುಣ್ಯ ದಿನದಂದು ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ನಡೆದುಕೊಂಡು ಬಂದಿದೆ. ಅದೇ ರೀತಿ ಚಾಮರಾಜೇಶ್ವರ ರಥೋತ್ಸವವು ಆಷಾಢ ಮಾಸದಲ್ಲಿ ನಡೆಯಲಿದೆ. ಈ ಎರಡೂ ರಥಗಳ ನಿರ್ಮಾಣ ಕೆಲಸವು ಪೂರ್ಣಗೊಂಡು ನೂತನ ರಥಗಳೊಂದಿಗೆ ಮುಂಬರುವ ಬ್ರಹ್ಮರಥೋತ್ಸವ ನಡೆಯಲಿದೆ ಎಂದು  ಜಿಲ್ಲಾಧಿಕಾರಿಯವರಾದ ಡಾ.ಎಂ.ಆರ್.ರವಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


ಸೆಪ್ಟೆಂಬರ್ 11 ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ


ಚಾಮರಾಜನಗರ, ಸೆಪ್ಟೆಂಬರ್ 8 (ಕರ್ನಾಟಕ ವಾರ್ತೆ):- ಅರಣ್ಯ ಇಲಾಖೆ ವತಿಯಿಂದ ಅರಣ್ಯ ಸಂಪತ್ತನ್ನು ಕಳ್ಳಕಾಕರಿಂದ ರಕ್ಷಿಸುವ ಸಂದರ್ಭದಲ್ಲಿ ಕೆಚ್ಚೆದೆಯಿಂದ ಹೋರಾಡಿ ವೀರ ಮರಣವನ್ನಪ್ಪಿದ ದಿವಂಗತರ ನೆನಪಿಗಾಗಿ ಸೆಪ್ಟೆಂಬರ್ 11 ರಂದು ಬೆಳಿಗ್ಗೆ 9 ಗಂಟೆಗೆ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ನಗರದ ಅರಣ್ಯ ಕೇಂದ್ರ ಸಸ್ಯ ಕ್ಷೇತ್ರದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಚಾಮರಾಜನಗರ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸೆಪ್ಟೆಂಬರ್ 9 ರಂದು ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ   

 

ಚಾಮರಾಜನಗರ, ಸೆಪ್ಟೆಂಬರ್ 8 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶ್ರೀ ನಾರಾಯಣ ಗುರು ಜಯಂತಿಯನ್ನು ಸೆಪ್ಟೆಂಬರ್ 9 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಗುವುದು. 


ಕೊರೊನಾ ವೈರಸ್ ಹಿನ್ನಲೆಯಲ್ಲಿ ಪುಷ್ಪಾರ್ಚನೆ ಮೂಲಕ ಶ್ರೀ ನಾರಾಯಣ ಗುರು ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು ಎಂದು ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸೆಪ್ಟೆಂಬರ್ 15 ರಂದು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ  

 

ಚಾಮರಾಜನಗರ, ಸೆಪ್ಟೆಂಬರ್ 8 (ಕರ್ನಾಟಕ ವಾರ್ತೆ):- ಜಿಲ್ಲಾ ಪಂಚಾಯತ್‍ನ ಸಾಮಾನ್ಯ ಸಭೆಯು ಅಧ್ಯಕ್ಷರಾದ ಎಂ. ಅಶ್ವಿನಿ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 15 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕೊಳಚೆ ಪ್ರದೇಶ ಘೋಷಿಸಲು ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಿ  

 

ಚಾಮರಾಜನಗರ, ಸೆಪ್ಟೆಂಬರ್ 8 (ಕರ್ನಾಟಕ ವಾರ್ತೆ):- ಗುಂಡ್ಲುಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಬಿ.ಜಿ.ಆರ್ ಬಡಾವಣೆ ಈಗಿನ 17ನೇ ವಾರ್ಡ್ ಹಳೆಯ 19ನೇ ವಾರ್ಡ್‍ಅನ್ನು ಕೊಳಚೆ ಪ್ರದೇಶವೆಂದು ಘೋಷಿಸಲು ಉದ್ದೇಶಿಸಿದ್ದು ಈ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 16ರೊಳಗೆ ಸಲ್ಲಿಸುವಂತೆ ಗುಂಡ್ಲುಪೇಟೆ ಮುಖ್ಯ ಅಧಿಕಾರಿ ತಿಳಿಸಿದ್ದಾರೆ. 


ಗುಂಡ್ಲುಪೆಟೆ ತಾಲೂಕಿನ ಆದಿ ಜಾಂಬವ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರು  ಬಿ.ಜಿ.ಆರ್ ಬಡಾವಣೆ ಈಗಿನ 17ನೇ ವಾರ್ಡ್ ಹಳೆಯ 19ನೇ ವಾರ್ಡ್‍ಅನ್ನು ಕೊಳಚೆ ಪ್ರದೇಶವೆಂದು ಘೋಷಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಮೈಸೂರು ಉಪವಿಭಾಗದ ಸಹಾಯಕ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಅವರು ಮಾಹಿತಿ ಮತ್ತು ದಾಖಲೆಗಳನ್ನು ಸಿದ್ದಪಡಿಸಿ ಸಲ್ಲಿಸುವಂತೆ ತಿಳಿಸಿದ್ದಾರೆ. 


ಈಗಾಗಲೇ ಸಮೀಕ್ಷೆ ಮೂಲಕ 70 ಮನೆಗಳನ್ನು ಗುರುತಿಸಿದ್ದು, ಸದರಿ ಸ್ಥಳವನ್ನು ಕೊಳಚೆ ಪ್ರದೇಶವೆಂದು ಘೋಷಿಸಲು ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲಾತಿಯನ್ನು ಸೆಪ್ಟೆಂಬರ್ 16 ಸಂಜೆ 4 ಗಂಟೆ ಒಳಗೆ ಕಚೇರಿಗೆ ಗುಂಡ್ಲುಪೇಟೆ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ. 



 

ಇ-ಸಂಜೀವಿನಿ ಸೌಲಭ್ಯವನ್ನು ಹೆಚ್ಚು ಬಳಸಿಕೊಳ್ಳಿ 


   ಚಾಮರಾಜನಗರ, ಸೆಪ್ಟೆಂಬರ್ 8 (ಕರ್ನಾಟಕ ವಾರ್ತೆ):- ಸಾರ್ವಜನಿಕರು ತಾವು ಇರುವಲ್ಲಿಂದಲೇ ಅನಾರೋಗ್ಯಕ್ಕೆ ಉಚಿತವಾಗಿ ತಜ್ಞರ ಸಲಹೆ ಚಿಕಿತ್ಸೆ ಪಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟೆಲಿ ಮೆಡಿಸಿನ್ ಸೇವೆ ಪ್ರಾರಂಭಿಸಿದೆ. 


ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಮೊಬೈಲ್‍ನಲ್ಲಿಯೇ ಉಚಿತವಾಗಿ ಟೆಲಿ ಮೆಡಿಸಿನ್ ಮೂಲಕ ವೈದ್ಯರ ಸಲಹೆಯನ್ನು ನೀಡಿ ಚಿಕಿತ್ಸೆ ಒದಗಿಸಲು ಇ-ಸಂಜೀವಿನಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ.


ಸಾಮಾನ್ಯವಾಗಿ ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿರುವ ರೋಗಿಗಳೂ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೆ ಇರುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಚಿಂತಿಸದೆ ಮನೆಯಿಂದಲೇ ತಮ್ಮ ಆಂಡ್ರಾಯ್ಡ್ ಮೊಬೈಲ್ ಮೂಲಕ ಅನಾರೋಗ್ಯ, ಖಾಯಿಲೆಗಳಿಗೆ ಸಂಬಂಧಿಸಿದ ತಜ್ಞ ವೈದ್ಯರ ಸಲಹೆ ಪಡೆಯುವ ಸೌಲಭ್ಯವನ್ನು ಇಲಾಖೆಯು ಕಲ್ಪಿಸಿದೆ.


     ಏನಿದು? ಇ-ಸಂಜೀವಿನಿ

    ಕೊರೊನಾ ಸೋಂಕಿನಿಂದ ದೂರಸರಿಯುವುದಕ್ಕಾಗಿ ಮನೆಯಲಿಯೇ ಇದ್ದು ಸುರಕ್ಷಿತವಾಗಿರಿ ಎಂದು ಸರ್ಕಾರವು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ. ಇಂತಹ ಸಂದರ್ಭಗಳಲ್ಲಿ ಆರೋಗ್ಯದ ತೊಂದರೆಗಳು ಕಂಡುಬಂದಾಗ ಮನೆಯಲ್ಲಿ ಕುಳಿತು ಚಿಕಿತ್ಸೆ ಪಡೆಯಲು ಕೇಂದ್ರ ಆರೋಗ್ಯ ಮಂತ್ರಾಲಯ, ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ ಎಂಬ ಹೆಸರಿನಲ್ಲಿ ಲಿಂಕ್‍ನ ಆ್ಯಪ್ ಯೊಂದನ್ನು ಸಿದ್ದಪಡಿಸಿದೆ.


ಆ್ಯಪ್ ಡೌನ್‍ಲೌಡ್ ಮಾಡಿಕೊಳ್ಳುವುದು, ಬಳಸುವುದು ಹೇಗೆ? 

      ಆಂಡ್ರಾಯ್ಡ್  ಮೊಬೈಲ್‍ನಲ್ಲಿ ಉಚಿತವಾಗಿ ಪ್ಲೇ ಸ್ಟೋರ್ ಮೂಲಕ ಡೌನ್‍ಲೌಡ್ ಮಾಡಿಕೊಳ್ಳಬಹುದು. ಆ್ಯಪ್ ನ ಮೂಲಕ ರೋಗಿಯ ನೋಂದಣಿ, ಜನರೇಟ್ ಟೋಕನ್ ಪ್ರಕ್ರಿಯೆ, ಮೊಬೈಲ್ ಸಂಖ್ಯೆ ನಮೂದಿಸಿ ಒ.ಟಿ.ಪಿ ಪಡೆದು ನೊಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಟೋಕನ್ ಪಡೆಯಬಹುದು. ನಂತರ ರೋಗಿಯು ಲಾಗಿನ್ ಮಾಡಿ ಸಂಪೂರ್ಣ ವಿವರ ಹಾಗೂ ದಾಖಲಾತಿಗಳನ್ನು ಅಪ್‍ಲೋಡ್ ಮಾಡಿ ಯಾವ ತಜ್ಞ ವೈದ್ಯರ ಸಲಹೆ ಪಡೆಯಬೇಕು ಎಂದು ಆಯ್ಕೆ ಮಾಡಿಕೊಳ್ಳಬೇಕು. ವೈದ್ಯರ ಲಭ್ಯತೆಗಾಗಿ ನಿರೀಕ್ಷಿಸಿ ನಂತರ ವೈದ್ಯರು ಪರದೆಯಲ್ಲಿ ಮೂಡಿದಾಗ ವೀಡಿಯೋ ಸಂವಾದದ ಮೂಲಕ ಸಂಪರ್ಕಿಸಿ ವೈದ್ಯರಿಂದ ಸಲಹೆ ಪಡೆದು ಚೀಟಿ, ಇ-ಪ್ರಿಸ್ಕ್ರಿಪ್ಷ್‍ನ್ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ. 


      ಆ್ಯಪ್‍ನ  ಕಾರ್ಯಾಚರಣೆ 

      ಆ್ಯಪ್‍ನ ಸೇವೆ ಪಡೆಯಲು ಮೊಬೈಲ್ ಅಥವಾ ಕಂಪ್ಯೂಟರ್‍ನ ಗೂಗಲ್ ನಲ್ಲಿ ಇ ಸಂಜೀವಿನಿ ಒಪಿಡಿ ಎಂಬುದಾಗಿ ನಮೂದಿಸಬೇಕು. ನಂತರ ಕೇಂದ್ರ ಆರೋಗ್ಯ ಸಚಿವಾಲಯದ ಮುಖಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ಪೇಷೆಂಟ್ ರಿಜಿಷ್ಟ್ರೇಷನ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿದರೆ, ನಿಮಗೊಂದು ಒಟಿಪಿ ನಂಬರ್ ಬರಲಿದೆ, ರಿಜಿಷ್ಟ್ರೇಷನ್ ಅಪ್ಲೀಕೇಷನ್ ಒಂದು ತೆರೆದುಕೊಳ್ಳುತ್ತದೆ.


      ವೀಡಿಯೋ ಕಾಲ್‍ನಲ್ಲಿ ಸಂಪರ್ಕ

      ರೋಗಿಯ ಸಂಪರ್ಕ ಲಿಂಗ, ವಯಸ್ಸು, ಮೊಬೈಲ್ ನಂಬರ್, ವಿಳಾಸವನ್ನು ನಮೂದಿಸಿ ಲಾಗಿನ್ ಆಗಬೇಕು. ಈ ವೇಳೆ ನಿಮಗೊಂದು ಟೋಕನ್ ನಂಬರ್ ಬರಲಿದೆ. ಆ ನಂಬರ್ ನೀಡಿ, ವೈದ್ಯರನ್ನು ವೀಡಿಯೋ ಕಾಲ್ ಮೂಲಕ ಸಂಪರ್ಕಿಸಬಹುದು. ಈ ಸೇವೆಯೂ ಪ್ರತಿ ದಿನ ಬೆಳಗ್ಗೆ 10 ರಿಂದ 5 ರವರೆಗೆ ಲಭ್ಯವಿರುತ್ತದೆ. ಒಮ್ಮೆ ರಿಜಿಸ್ಟರ್ ಆದರೆ, ಮತ್ತೆ ಆಗುವ ಅಗತ್ಯವಿಲ್ಲ. ವೀಡಿಯೋ ಕಾಲ್ ಮೂಲಕವೇ, ವೈದ್ಯರು ರೋಗಿಗಳೊಂದಿಗೆ ಸಮಾಲೋಚಿಸಿ ಚಿಕಿತ್ಸೆ ಔಷಧ ಪಡೆದುಕೊಳ್ಳಬಹುದು.



 



ಅಗತ್ಯಕ್ಕೆ ತಕ್ಕಷ್ಟು ಯೂರಿಯಾ ಬಳಸಲು ರೈತರಿಗೆ ಸಲಹೆ


       ಚಾಮರಾಜನಗರ, ಸೆಪ್ಟೆಂಬರ್ 10 (ಕರ್ನಾಟಕ ವಾರ್ತೆ):- ಜಿಲ್ಲೆಯ ರೈತ ಬಾಂಧವರು ಅಗತ್ಯಕ್ಕಿಂತ ಹೆಚ್ಚಿನ ಯೂರಿಯಾವನ್ನು ಖರೀದಿಸದೆ ಬೆಳೆಗಳಿಗೆ ಶಿಫಾರಸ್ಸು ಮಾಡಿದ ಪ್ರಮಾಣವನ್ನು ಮಾತ್ರವೇ ಬೆಳೆಗಳಿಗೆ ಬಳಸುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.     

    

ಜಿಲ್ಲೆಯಲ್ಲಿ ಭತ್ತ ಮತ್ತು ಕಬ್ಬು ಬೆಳೆ ಬಿತ್ತನೆ ಕಾರ್ಯ ಪ್ರಗತಿಯಲ್ಲಿದ್ದು, ಈ ಬೆಳೆಗಳಿಗೆ ಯೂರಿಯಾ ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ಬಳಸುತ್ತಿರುವುದರಿಂದ ಯೂರಿಯಾ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. 


    ಚಾಮರಾಜನಗರ ತಾಲ್ಲೂಕಿನಲ್ಲಿ 185, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 135, ಕೊಳ್ಳೇಗಾಲ ತಾಲ್ಲೂಕಿನಲ್ಲಿ 230, ಯಳಂದೂರು ತಾಲ್ಲೂಕಿನಲ್ಲಿ 75 ಹಾಗೂ ನಗರದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯಲ್ಲಿ 107.100 ಸೇರಿದಂತೆ ಒಟ್ಟು 732.10 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ದಾಸ್ತಾನು ಇದೆ. 

 

    ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ವಾಡಿಕೆ ಮಳೆ 420.7 ಮಿ.ಮೀ ಇದ್ದು ಪ್ರಸ್ತುತ 616.4 ಮಿ.ಮೀ ಮಳೆ ಆಗಿದೆ, ಶೇ. 47 ರಷ್ಟು ಹೆಚ್ಚು ಮಳೆಯಾಗಿರುತ್ತದೆ. ಮುಂಗಾರು ಹಂಗಾಮಿನಲ್ಲಿ 1,20,680 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಪ್ರಸ್ತುತ 1,10,749 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಚಿiÀiÁಗಿದೆ. ಶೇ. 91.77 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸೇನಾ ನೇಮಕಾತಿ ರ್ಯಾಲಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


  ಚಾಮರಾಜನಗರ, ಸೆಪ್ಟೆಂಬರ್ 10 (ಕರ್ನಾಟಕ ವಾರ್ತೆ):- ಭಾರತೀಯ ಸೇನೆಯಿಂದ ವಿವಿಧ ಹುದ್ದೆಗಳಿಗೆ ಚಾಮರಾಜನಗರ ಜಿಲ್ಲೆಯೂ ಸೇರಿದಂತೆ ವಿವಿಧ  ಜಿಲ್ಲೆಗಳ ಅಭ್ಯರ್ಥಿಗಳಿಗಾಗಿ  ಸೇನಾ ನೇಮಕಾತಿ ರ್ಯಾಲಿಯನ್ನು  ಸೆಪ್ಟೆಂಬರ್ 19 ರಿಂದ 2021ರ ಮಾರ್ಚ್ 31ರವರೆಗೆ ಆಯೋಜಿಸಲಾಗುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 


ಸೈನಿಕ-ಜಿಡಿ, ಸೈನಿಕ ಟೆಕ್ನಿಕಲ್, ಸೈನಿಕ ಕುಶಲಕರ್ಮಿ, ಕ್ಲರ್ಕ್ ಹಾಗೂ  ನರ್ಸಿಂಗ್ (ಟೆಕ್) ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ಸ್ಥಳ, ಊರು ಹಾಗೂ ದಿನಾಂಕವನ್ನು ಕೋವಿಡ್ ಹಿನ್ನೆಲೆಯಲ್ಲಿ  ನಂತರ  ನಿಗದಿಪಡಿಸಲಾಗುತ್ತದೆ. 


ಅಭ್ಯರ್ಥಿಯು 17 2/1 ರಿಂದ 23 ವರ್ಷದ ವಯೋಮಿತಿಯಲ್ಲಿರಬೇಕು. 8ನೇ, 10ನೇ ತರಗತಿ ಹಾಗೂ ಪಿ.ಯು.ಸಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಹಾಗೂ ವಿವರಗಳಿಗೆ ಯನ್ನು ವೆಬ್ ಪೋರ್ಟಲ್ ತಿತಿತಿ.ರಿoiಟಿಜiಚಿಟಿಚಿಡಿmಥಿ.ಟಿiಛಿ.iಟಿ ನಲ್ಲಿ ನೋಡಬಹುದು. 

 

ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಅಥವಾ ದೂರವಾಣಿ ಸಂ. 08226-224430 ಅನ್ನು ಸಂಪರ್ಕಿಸುವಂತೆ ಉದ್ಯೋಗಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸೆ.20ರಂದು ಸಿವಿಲ್ ಕಾನ್ಸ್‍ಟೇಬಲ್ ನೇಮಕಾತಿಗೆ ಲಿಖಿತ ಪರೀಕ್ಷೆ 


  ಚಾಮರಾಜನಗರ, ಸೆಪ್ಟೆಂಬರ್ 10 (ಕರ್ನಾಟಕ ವಾರ್ತೆ):- ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ 2,200 ಅಭ್ಯರ್ಥಿಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ಸೆಪ್ಟೆಂಬರ್ 20ರಂದು ಬೆಳಗ್ಗೆ 11 ಗಂಟೆ ಯಿಂದ ಮಧ್ಯಾಹ್ನ 12.30ರವರೆಗೆ  ಜಿಲ್ಲೆಯ 8 ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.


ಲಿಖಿತ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ಪೊಲೀಸ್ ಇಲಾಖೆಯ ವೆಬ್‍ಸೈಟ್ ತಿತಿತಿ.ಞsಠಿ.gov.iಟಿ ನಿಂದ ಪಡೆದುಕೊಳ್ಳಬಹುದಾಗಿದೆ.


ನಗರದ ಬಿ. ರಾಚಯ್ಯ ಜೋಡಿ ರಸ್ತೆಯ ಜೆ.ಎಸ್.ಎಸ್. ಬಾಲಕಿಯರ ಪ್ರೌಢಶಾಲೆ, ಸತ್ಯಮಂಗಲ ರಸ್ತೆಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು,  ಚೆನ್ನಿಪುರದಮೋಳೆ ರಸ್ತೆಯ ಸೇವಾ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಸೇವಾ ಭಾರತಿ ಪಬ್ಲಿಕ್ ಶಾಲೆ, ಸೋಮವಾರ ಪೇಟೆಯ ಎಂ.ಸಿ.ಎಸ್. ಪಬ್ಲಿಕ್ ಸ್ಕೂಲ್ ಹಾಗೂ ಯೂನಿವರ್ಸ್ ಇಂಗ್ಲೀಷ್ ಸ್ಕೂಲ್‍ಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ.


ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ  ಮೊಬೈಲ್, ಲ್ಯಾಪ್‍ಟಾಪ್, ಕ್ಯಾಲ್ಕುಲೇಟರ್, ಪೇಜರ್, ಚಿಟ್ಸ್, ನೋಟ್ ಬುಕ್, ಎಲೆಕ್ಟ್ರಾನಿಕ್ ಉಪಕರಣ ಹಾಗೂ ಇತರೆ ಸಾಮಾಗ್ರಿಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವಂತಿಲ್ಲ. 


ಕರ್ನಾಟಕ ರಾಜ್ಯದ ಪೊಲೀಸ್ ನೇಮಕಾತಿಯನ್ನು ಪಾರದರ್ಶಕ, ಗಣಕೀಕೃತ, ಸಂಪೂರ್ಣ ವಸ್ತು ನಿಷ್ಠ, ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ ನಡೆಸಲಾಗುತ್ತದೆ. ಅಭ್ಯರ್ಥಿಯು ಇಲಾಖೆಯ ಹೊರಗಾಗಲಿ, ಒಳಗಾಗಲಿ ಉದ್ಯೋಗ ಪಡೆಯುವ ಸಲುವಾಗಿ ಯಾವುದೇ ವ್ಯಕ್ತಿಗೆ ಹಣ ನೀಡುವುದು, ಯಾವುದೇ ವಿಧವಾದ ಪಾರತೋಷಕ ನೀಡುವುದನ್ನು ಮಾಡಬಾರದು. ಯಾವುದೇ ವಿಧವಾದ ಹಣ ವಸೂಲಾತಿಗೆ ಯಾರಿಗೂ ಅಧಿಕಾರ ನೀಡಿರುವುದಿಲ್ಲ. ಈ ದಿಸೆಯಲ್ಲಿ ಮಧ್ಯವರ್ತಿಗಳ ಭರವಸೆಗಳಿಗೆ ಅಭ್ಯರ್ಥಿಗಳು ಮಾರು ಹೋಗಬಾರದೆಂದು  ಪೊಲೀಸ್ ಅಧೀಕ್ಷಕರಾದ ದಿವ್ಯಾಸಾರಾ ಥಾಮಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸೆಪ್ಟೆಂಬರ್ 11 ರಂದು ನಗರದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ


ಚಾಮರಾಜನಗರ, ಸೆಪ್ಟೆಂಬರ್ 10 (ಕರ್ನಾಟಕ ವಾರ್ತೆ):- ಅರಣ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಸೆಪ್ಟೆಂಬರ್ 11 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸಸ್ಯ ಕ್ಷೇತ್ರದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.


ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಡಿ.ವಿನಯ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿಲ್ಲಾಧಿಕಾರಿ  ಡಾ.ಎಂ.ಆರ್. ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬೋಯರ್ ಹರ್ಷಲ್ ನಾರಾಯಣ್‍ರಾವ್ ಅವರು ಸಮಾರಂಭದಲ್ಲಿ ಉಪಸ್ಥಿತರಿರುವರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಸಂತೋಷ್ ಕುಮಾರ್ ಅವರು ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.



ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‍ಕುಮಾರ್ ಅವರಿಂದ 25 ಮಾದರಿ ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ


ಚಾಮರಾಜನಗರ, ಸೆಪ್ಟೆಂಬರ್ 7 (ಕರ್ನಾಟಕ ವಾರ್ತೆ):- ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ 25 ಗ್ರಾಮ ಪಂಚಾಯಿತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿಸುವ ವಿಶೇಷ ಕಾರ್ಯಕ್ರಮಕ್ಕೆ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‍ಕುಮಾರ್ ಅವರು ಇಂದು ಚಾಲನೆ ನೀಡಿದರು.


ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಸರ್ಕಾರಿ ಶಾಲೆಯ ಅವರಣದಲ್ಲಿ ಈ ಮಾದರಿ ಕಾರ್ಯಕ್ರಮವನ್ನು  ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು.

 

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ಹಾಗೂ ಹನೂರು ತಾಲೂಕಿನ ಆಯ್ದ ಗ್ರಾಮ ಪಂಚಾಯಿತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಇನ್ನಷ್ಟು ಗ್ರಾಮ ಪಂಚಾಯಿತಿಗಳ ವಿಸ್ತರಣೆಯನ್ನು ಮುಂದಿನ ಹಂತದಲ್ಲಿ ಮಾಡಲಾಗುವುದು ಉಸ್ತುವಾರಿ ಸಚಿವರು ತಿಳಿಸಿದರು.


 ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯ ಉದ್ದೇಶದೊಂದಿಗೆ ಯೋಜನೆ ರೂಪಿಸಲಾಗಿದೆ. ನರೇಗಾ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ಸ್ಥಳೀಯವಾಗಿ ಉದ್ಯೋಗ ನೀಡುವುದರ ಜೊತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಮಹತ್ತರ ಧ್ಯೇಯವನ್ನು ಯೋಜನೆ ಹೊಂದಿದೆ ಎಂದರು.


ಯೋಜನೆಯಡಿ ಗ್ರಾಮಗಳ ನೈರ್ಮಲ್ಯ, ಕೊಳಚೆ ನೀರಿನ ಸಮರ್ಪಕ ನಿರ್ವಹಣೆಗೆ ಸೋಕ್‍ಪಿಟ್‍ಗಳ ನಿರ್ಮಾಣ ಮಾಡಲಾಗುತ್ತದೆ. ಮನೆಯ ಹಿತ್ತಲಿನಲ್ಲಿ ಪೌಷ್ಠಿಕ ತೋಟ ನಿರ್ಮಾಣವು ಸಹ ಆಗಲಿದೆ. ಶಾಲೆಗಳಲ್ಲಿಯೂ ಪೌಷ್ಠಿಕ ತೋಟ ನಿರ್ಮಾಣವನ್ನು ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಕಾರ್ಯ ಚಟುವಟಿಕೆಗಳ ಬಗ್ಗೆ ಉತ್ಸಾಹ ತುಂಬಬಹುದಾಗಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.


ಮಳೆ ನೀರು ಕೊಯ್ಲು ಸಹ ಯೋಜನೆಯಡಿ ಕೈಗೊಂಡಿರುವ ಪ್ರಮುಖ ಗುರಿಯಾಗಿದೆ. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಇತರೆ ಉದ್ದೇಶಗಳಿಗೆ ಬಳಸುವ ಹಿನ್ನೆಲೆಯಲ್ಲಿ ಮಳೆ ನೀರು ಕೊಯ್ಲು ಕಾಮಗಾರಿಯನ್ನು  ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.


ಮಹಿಳಾ ಸ್ವಸಹಾಯ ಸಂಘಗಳ ಅರ್ಥಿಕ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮಾದರಿ ಗ್ರಾಮ ಪಂಚಾಯಿತಿ ಯೋಜನೆಯಡಿ ಸಂಜೀವಿನಿ ಶೆಡ್ ನಿರ್ಮಾಣ ಮಾಡಲಾಗುತ್ತದೆ. ಅತ್ಯಂತ ಪೌಷ್ಠಿಕ ಆಹಾರ ಎನಿಸಿರುವ ಹಣಬೆ ಬೇಸಾಯಕ್ಕೂ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ ಎಂದ ಸುರೇಶ್‍ಕುಮಾರ್ ಅವರು ನಮ್ಮ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿ ಯೋಜನೆ ಇತರೆ ಜಿಲ್ಲೆಗಳಿಗೂ ಮಾದರಿಯಾಗಲಿ ಎಂದು ಹಾರೈಸಿದರು.


ಶಾಸಕರಾದ ಆರ್. ನರೇಂದ್ರ ಅವರು ಮಾತನಾಡಿ ನೂತನ ಮಾದರಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಯೋಜನೆ ಎಲ್ಲಾ ಗ್ರಾಮಗಳಿಗೂ ಅನುಕೂಲವಾಗಲಿ. ಅಭಿವೃದ್ಧಿ ಕೆಲಸಗಳು ತ್ವರಿತವಾಗಿ ನಡೆಯಲಿ ಎಂದು ಆಶಿಸಿದರು. 


ಕೊಳ್ಳೇಗಾಲ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಸುರೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬೋಯರ್ ಹರ್ಷಲ್ ನಾರಾಯಣ್‍ರಾವ್, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಲ್. ಗಂಗಾಧರ್, ತಹಶೀಲ್ದಾರ್ ಕೆ. ಕುನಾಲ್, ಜಿಲ್ಲಾ ಪಂಚಾಯಿತ್ ಉಪ ಕಾರ್ಯದರ್ಶಿ ಧರಣೇಶ್, ಇತರರು ಉಪಸ್ಥಿತರಿದ್ದರು. 




ನಾರಾಯಣ ಗುರು ಅವರ ಚಿಂತನೆಗಳು ದಾರಿದೀಪ : ಶಾಸಕÀರಾದ ಸಿ. ಪುಟ್ಟರಂಗ ಶೆಟ್ಟಿ


  ಚಾಮರಾಜನಗರ, ಸೆಪ್ಟೆಂಬರ್ 09 (ಕರ್ನಾಟಕ ವಾರ್ತೆ):- ಅಸ್ಪøಶ್ಯತೆ, ಅಜ್ಞಾನ, ಅಂಧಶ್ರದ್ಧೆ ವಿರುದ್ಧ ಹೋರಾಟ ನಡೆಸಿ, ಸಮ ಸಮಾಜ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಟ್ಟ ನಾರಾಯಣ ಗುರು ಅವರ ಚಿಂತನೆಗಳು ಪ್ರತಿಯೊಬ್ಬರಿಗೂ ದಾರಿದೀಪ ಎಂದು ಶಾಸಕರಾದ ಸಿ. ಪುಟ್ಟರಂಗ ಶೆಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.


 ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಕೇರಳದಲ್ಲಿ ಶೋಷಿತ ಸಮುದಾಯಗಳು ಅನುಭವಿಸುತ್ತಿದ್ದ ಅಸಮಾನತೆಯ ವಿರುದ್ಧ ಹೋರಾಟ ನಡೆಸಿದವರು. ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದಾಗ ಸ್ವತಃ ಅವರು ಶಿವನ ದೇವಸ್ಥಾನವನ್ನು ನಿರ್ಮಿಸಿದರು. ಶೋಷಿತರ ವಿದ್ಯಾಭ್ಯಾಸಕ್ಕಾಗಿ ಕೇರಳದ ಕರಾವಳಿ ಪ್ರದೇಶದ ಕಾಲಡಿಯಲ್ಲಿ ಪಾಠಶಾಲೆಯನ್ನು ತೆರೆದರು. ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತÀರಾಗಿ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದವರು ಎಂದು ಹೇಳಿದರು.


ನಾರಾಯಣ ಗುರುಗಳ ಚಿಂತನೆ, ಆಧ್ಯಾತ್ಮ ವಿಷಯಗಳು ಮುನ್ನಲೆಗೆ ಬರಬೇಕಾದರೆ ಅವರ ಪುಸ್ತಕವನ್ನು ಹೆಚ್ಚು ಓದಿ ನಾರಾಯಣ ಗುರುಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಅನೇಕ ಸಾಧಕರು, ಸಮಾಜ ಸುಧಾರಕರು ನಾರಾಯಣ ಗುರು ಅವರ ಕುರಿತ ಗ್ರಂಥಗಳನ್ನು ಅಧ್ಯಯನ ಮಾಡಿ ಪ್ರಭಾವಿತರಾಗಿದ್ದರು. ನಾರಾಯಣ ಗುರು ಜಯಂತಿ ಜಯಂತಿ ಅಚರಣೆಗೆ ಸೀಮಿತವಾಗದೇ ಜೀವನದಲ್ಲಿ ಅವರ ಆದರ್ಶ, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. 


ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಬಿ. ಶಾಂತಮೂರ್ತಿ ಅವರು ಮಾತನಾಡಿ ನಾರಾಯಣ ಗುರುಗಳ ಸಂದೇಶ, ಅವರ ಜೀವನ ನಮಗೆ ಆದರ್ಶವಾಗಿದೆ. ದೇಶದಲ್ಲಿ ಅಸಮಾನತೆಯನ್ನು ಹೋಗಲಾಡಿಸಲು ಇವರಂತೆ ಎಲ್ಲರೂ ಶ್ರಮಿಸಿ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

 

ಮುಖಂಡರು ಹಾಗೂ ವಿಚಾರವಾದಿಗಳಾದ ಅರಕಲವಾಡಿ ನಾಗೇಂದ್ರ ಅವರು ಮಾತನಾಡಿ ಕೇರಳಕ್ಕೆ ಸೀಮಿತವಾಗಿದ್ದ ಸಾಮಾಜಿಕ ಚಳವಳಿಯನ್ನು ಇಡೀ ದೇಶವೇ ತಿರುಗಿ ನೋಡುವ ರೀತಿ ಮಾಡಿದ ಕೀರ್ತಿ ನಾರಾಯಣ ಗುರು ಅವರಿಗೆ ಸಲ್ಲುತ್ತದೆ. ಹಠ ಸಾಧನೆ, ಯೋಗವನ್ನು ಬಲ್ಲವರಾಗಿದ್ದು, ಎಲ್ಲವನ್ನು ಜಯಿಸುವ ಶಕ್ತಿಯನ್ನು ಬೆಳೆಸಿಕೊಂಡಿದ್ದರು ಎಂದರು.  


ನಾರಾಯಣಗುರು ಅವರು ಆರಂಭದಲ್ಲಿ ಆಧ್ಯಾತ್ಮದೆಡೆ ಒಲವು ಹೊಂದಿದ್ದರು. ಸಮಾಜದಲ್ಲಿ ಅಸಮಾನತೆಯನ್ನು ಕಂಡು ಬಳಿಕ ಸಾಮಾಜಿಕ ಪರಿವರ್ತನೆಗೆ ಮುಂದಾದರು. ದೇವಸ್ಥಾನದಲ್ಲಿ ಸುಂದರವಾದ ಉದ್ಯಾನವನ, ಗ್ರಂಥಾಲಯವನ್ನು ಸ್ಥಾಪಿಸಿದರು. ಅನೇಕ ಹೋರಾಟಗಾರರು, ವಿಚಾರವಾದಿಗಳು ನಾರಾಯಣಗುರು ಅವರ ಹೋರಾಟದಿಂದ ಪ್ರೇರಣೆ ಯಾಗಿದ್ದರು ಎಂದು ಅರಕಲವಾಡಿ ನಾಗೇಂದ್ರ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಕೆ. ಗಿರೀಶ್, ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ವೆಂಕಟೇಶ್, ನಿಜಧ್ವನಿ ಗೋವಿಂದರಾಜು, ಜಿ. ಬಂಗಾರು, ಬ್ಯಾಡಮೂಡ್ಲು ಬಸವಣ್ಣ, ಶ್ರೀನಿವಾಸ್, ಸಿ.ಎಸ್. ಪುಟ್ಟಣ್ಣ, ಪರ್ವತರಾಜು, ಇತರರು ಉಪಸ್ಥಿತರಿದ್ದರು.


ಸೆಪ್ಟೆಂಬರ್ 11 ರಂದು ನಗರದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ


ಚಾಮರಾಜನಗರ, ಸೆಪ್ಟೆಂಬರ್ 09 (ಕರ್ನಾಟಕ ವಾರ್ತೆ):- ಅರಣ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಸೆಪ್ಟೆಂಬರ್ 11 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸಸ್ಯ ಕ್ಷೇತ್ರದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.


ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಡಿ.ವಿನಯ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿಲ್ಲಾಧಿಕಾರಿ  ಡಾ. ಎಂ.ಆರ್ ರವಿ, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ದಿವ್ಯಾ ಸಾರಾ ಥಾಮಸ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬೋಯರ್ ಹರ್ಷಲ್ ನಾರಾಯಣ್‍ರಾವ್ ಅವರು ಸಮಾರಂಭದಲ್ಲಿ ಉಪಸ್ಥಿತರಿರುವರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಸಂತೋಷ್ ಕುಮಾರ್ .ಜಿ ಅವರು ವಹಿಸುವರು ಎಂದು ಪ್ರಕಟಣೆ ತಿಳಿಸಿದೆ. 















ಐತಿಹಾಸಿಕ ನರಸಮಂಗಲ ದೇವಾಲಯ ನಿರ್ವಹಣೆಗೆ ತುರ್ತು ಗಮನಸೆಳೆಯಲು ಜಿಲ್ಲಾಧಿಕಾರಿಯವರಿಂದ ಪತ್ರ

 


ಐತಿಹಾಸಿಕ ನರಸಮಂಗಲ ದೇವಾಲಯ ನಿರ್ವಹಣೆಗೆ ತುರ್ತು ಗಮನಸೆಳೆಯಲು ಜಿಲ್ಲಾಧಿಕಾರಿಯವರಿಂದ ಪತ್ರ


ಚಾಮರಾಜನಗರ, ಸೆಪ್ಟೆಂಬರ್ 14 (ಕರ್ನಾಟಕ ವಾರ್ತೆ):-  ಚಾಮರಾಜನಗರ ತಾಲ್ಲೂಕಿನ ನರಸಮಂಗಲ ಗ್ರಾಮದಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಯ ಐತಿಹಾಸಿಕ ರಾಮೇಶ್ವರ ದೇವಾಲಯ ನಿರ್ವಹಣೆ ಹಾಗೂ ಅಲ್ಲಿ ಕೈಗೊಳ್ಳಬೇಕಿರುವ ಕಾರ್ಯಗಳ ಕುರಿತು ತುರ್ತು ಗಮನಹರಿಸುವ ಅಗತ್ಯತೆ ಕುರಿತು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞರಿಗೆ ಪತ್ರ ಬರೆದು ಗಮನಸೆಳೆದಿದ್ದಾರೆ. 


ಕಳೆದ ಸೆಪ್ಟೆಂಬರ್ 3 ರಂದು ತಾವು ನರಸಮಂಗಲದ ರಾಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ದೇವಾಲಯಕ್ಕೆ ಆಗಬೇಕಿರುವ ತುರ್ತು ಅಗತ್ಯ ಕೆಲಸಗಳನ್ನು ಗಮನಿಸಿದ್ದೇನೆ. ಈ ಪ್ರಕಾರ ಐತಿಹಾಸಿಕ ಸ್ಮಾರಕದ ಬೇಲಿ ಅಳವಡಿಕೆ ಕಾರ್ಯ ಅಪೂರ್ಣವಾಗಿದೆ. ಮುಖ್ಯ ಪ್ರವೇಶ ಗೇಟನ್ನು ಇನ್ನೂ ಅಳವಡಿಸದ ಕಾರಣ ಹಲವು ಅನಾನುಕೂಲಗಳು ಕಂಡು ಬಂದಿದೆ. ಆವರಣವು ಕಟ್ಟಡ ನಿರ್ಮಾಣದ ವಸ್ತುಗಳಿಂದ ಆವರಿಸಲ್ಪಟ್ಟಿದೆ. ಸ್ಮಾರಕದ ಸುತ್ತುಗೋಡೆಯು ಸಂಪೂರ್ಣವಾಗಿ ಪೊದೆ ಹಾಗೂ ಅನುಪಯುಕ್ತ ಗಿಡ ಗಂಟಿÉಗಳಿಂದ ಸುತ್ತುವರೆಯಲ್ಪಟ್ಟಿದೆ. ಇದು ಪಾರಂಪರಿಕ ಸ್ಮಾರಕ ರಕ್ಷಣೆಯ ಉದ್ದೇಶಗಳಿಗೆ ವಿರುದ್ದವಾಗಿದ್ದು ನಿರ್ವಹಣೆಯ ಕೊರತೆಯನ್ನು ತೋರಿಸುತ್ತಿದೆ ಎಂದು ಜಿಲ್ಲಾಧಿಕಾರಿಯವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. 


ಸೋಲಾರ್ ಆಧಾರಿತ ಯುಪಿಎಸ್ ಬಹು ವರ್ಷಗಳಿಂದ ಕೆಟ್ಟಿರುವುದರಿಂದ ರಾಮೇಶ್ವರ ದೇವಾಲಯವು ಕತ್ತಲಿನಿಂದ ಆವೃತವಾಗಿದೆ. ಹೊರ ಭಾಗದಲ್ಲೂ ಬೆಳಕಿನ ವ್ಯವಸ್ಥೆಯ ಕೊರತೆ ಇದೆ. ಐತಿಹಾಸಿಕ ಸ್ಮಾರಕದ ಮಹತ್ವದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಯಾವುದೇ ಫಲಕಗಳು ಅಳವಡಿಕೆಯಾಗಿಲ್ಲ. ಅಲ್ಲದೇ ಐತಿಹಾಸಿಕ ತಾಣಕ್ಕೆ ಸಂಪರ್ಕ ಕಲ್ಪಿಸುವ ಹರದನಹಳ್ಳಿ ಮತ್ತು ತೆರಕಣಾಂಬಿ ಅಥವಾ ಮುಖ್ಯ ರಸ್ತೆಯ ಯಾವುದೇ ಮಾರ್ಗದಲ್ಲಿಯೂ ಕೂಡ ಮಾಹಿತಿ ಫಲಕಗಳು ಹಾಕಲಾಗಿಲ್ಲ ಎಂಬ ವಿಷಯದ ಬಗ್ಗೆಯೂ ಪತ್ರದಲ್ಲಿ ಗಮನ ಸೆಳೆಯಲಾಗಿದೆ. 


ತಾವು ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಜನರೊಂದಿಗೆ ಮಾತನಾಡಿದ ವೇಳೆ ರಾಮೇಶ್ವರ ದೇವಾಲಯವನ್ನು ಇತಿಹಾಸದ ದಾಖಲೆಗಳ ಪ್ರಕಾರ ರಾಮಲಿಂಗೇಶ್ವರ ದೇವಾಲಯವೆಂದು ಬದಲಾವಣೆ ಮಾಡಬೇಕಿದೆ ಎಂದು ಸ್ಥಳೀಯ ಜನತೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಐತಿಹಾಸಿಕ ದಾಖಲೆಗಳ ಪ್ರಕಾರ ಸೂಕ್ತ ತಿದ್ದುಪಡಿ ಸಂಬಂಧ ಪರಿಶೀಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಯವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 


ಜಿಲ್ಲಾಡಳಿತ ಐತಿಹಾಸಿಕ ಸ್ಮಾರಕ ಸಂರಕ್ಷಣೆ ಹಾಗೂ ಪರಂಪರೆಯ ಉತ್ತೇಜನಕ್ಕಾಗಿ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆಯ ರೂಢಿ ಹಾಗೂ ನಿಯಮಗಳಿಗೆ ಅನುಸಾರವಾಗಿ ಎಲ್ಲಾ ಬಗೆಯ ಸಹಕಾರ ನೀಡಲು ಉತ್ಸುಕವಾಗಿದೆ. ಸ್ಮಾರಕದ ಕೊರತೆಗಳನ್ನು ನಿವಾರಿಸಿ ಉತ್ತಮ ನಿರ್ವಹಣೆಗೆ ಎಲ್ಲಾ ಅಗತ್ಯಗಳನ್ನು ಪೂರೈಸಲು ತಕ್ಷಣವೇ ಗಮನಹರಿಸಬೇಕಾದ ತುರ್ತು ಇದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಪತ್ರದಲ್ಲಿ ಗಮನಸೆಳೆದಿದ್ದಾರೆ. 


ಕನ್ನಡ ವಿವಿ ಹಂಪಿ, ಬಾದಾಮಿ ಕೇಂದ್ರ : ಚಿತ್ರಕಲೆ, ಶಿಲ್ಪಕಲೆ ಪದವಿ ಕೋರ್ಸ್‍ಗೆ ಅರ್ಜಿ ಆಹ್ವಾನ


ಚಾಮರಾಜನಗರ, ಸೆಪ್ಟೆಂಬರ್ 14 (ಕರ್ನಾಟಕ ವಾರ್ತೆ):- ಕನ್ನಡ ವಿಶ್ವವಿದ್ಯಾಲಯ ಹಂಪಿ ಬಾದಾಮಿ ಕೇಂದ್ರದಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಹಾಗೂ ಶಿಲ್ಪಕಲೆಯ 4 ವರ್ಷದ ಪದವಿ ಕೋರ್ಸ್‍ಗಳ ವ್ಯಾಸಂಗಕ್ಕೆ 2020-21ನೇ ಸಾಲಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಪಿ.ಯು.ಸಿ, ಐ.ಟಿ.ಐ, ಜೆ.ಓ.ಡಿ.ಸಿ ಹಾಗೂ ತತ್ಸಮಾನ (10+2) ಪರೀಕ್ಷೆಯಲ್ಲಿ ಉತ್ತೀರ್ಣ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. 


ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಿಸ್ತರಣಾ ಕೇಂದ್ರವಾದ ಬಾದಾಮಿ ಬನಶಂಕರಿಯಲ್ಲಿ ನಡೆಸಲಾಗುತ್ತಿರುವ  ಕೇಂದ್ರ ಚಿತ್ರಕಲೆ ಹಾಗೂ ಶಿಲ್ಪಕಲೆಯ 4 ವರ್ಷದ ಪದವಿ ತರಗತಿಗಳು ಇನ್ನಿತರ ಸಾಮಾನ್ಯ ಪದವಿಗಳಾದ ಬಿ.ಎ, ಬಿ.ಕಾಂ. ಬಿ.ಎಸ್.ಸಿ ಮತ್ತು ಇನ್ನಿತರ ತತ್ಸಮಾನ ಪದವಿಗಳಂತೆ ಪದವಿ ಹಂತದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳು, ಬ್ಯಾಂಕಿಂಗ್, ಕೆ.ಎ.ಎಸ್, ಐ.ಎ.ಸ್, ರೈಲ್ವೆ ಇಲಾಖೆ, ಎಫ್.ಡಿ.ಎ ಮುಂತಾದವುಗಳನ್ನು ಬರೆಯಲು ಅವಕಾಶವಿದೆ. 


ಉನ್ನತ ಶಿಕ್ಷಣ ವ್ಯಾಸಂಗ ಮಾಡಬಯಸುವವರಿಗೆ ಎಂ.ವಿ.ಎ, ಎಂ.ಎಫ್.ಎ, ಎಂ.ಫಿಲ್, ಪಿ.ಎಚ್.ಡಿ ಮತ್ತು ಬೇರೆ ಕ್ಷೇತ್ರಗಳಾದ ಪತ್ರಿಕೋದ್ಯಮ, ಬಿ.ಪಿ.ಎಡ್ ಮುಂತಾದವುಗಳನ್ನು ಕಲಿಯಲು ಅವಕಾಶಗಳಿವೆ. 


ಬಾದಾಮಿ ಕೇಂದ್ರದಲ್ಲಿ ನಿರಂತರವಾಗಿ ಪ್ರಖ್ಯಾತ ಕಲಾವಿದರು ಮತ್ತು ಸೃಜನಶೀಲಾ ಯುವ ಕಲಾವಿದರರಿಂದ ಕಲಾಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ. ರಾಷ್ಟ್ರ, ರಾಜ್ಯ ಮಟ್ಟದ ಕಲಾ ಶಿಬಿರ, ಕಾರ್ಯಗಾರ, ಕಲಾ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತದೆ. ಕೇಂದ್ರವು ನಾಡೋಜ ಡಾ. ಆರ್.ಎಂ ಹಡಪದ ಅವರ ಹೆಸರಿನಲ್ಲಿ ಚಿತ್ರಕಲೆ ಹಾಗೂ ಶಿಲ್ಪಕಲೆಯ ಸುಸಜ್ಜಿತ ಆರ್ಟ್ ಗ್ಯಾಲರಿ ( ಕಲಾ ಸಂಗ್ರಹಾಲಯ) ಹೊಂದಿದೆ. ಸಂಪ್ರದಾಯ ಶಿಲ್ಪ ಮತ್ತು ಚಿತ್ರಗಳನ್ನು ಸಂಗ್ರಹಿಸಿದ್ದು, ಪ್ರದರ್ಶನ ಹಾಗೂ ಅಧ್ಯಯನಕ್ಕೆ ವ್ಯವಸ್ಥೆ ಮಾಡಲಾಗಿದೆ.


  ಹೆಚ್ಚಿನ ಮಾಹಿತಿಗಾಗಿ ದೂ.ಸಂ 94492, 56814, 80056, 9886664967 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ತೋಟಗಾರಿಕೆ ಇಲಾಖೆಯ ಯಾಂತ್ರಿಕರಣ ಸಹಾಯ ಧನಕ್ಕೆ ಅರ್ಜಿ ಆಹ್ವಾನ


ಚಾಮರಾಜನಗರ, ಸೆಪ್ಟೆಂಬರ್ 14 (ಕರ್ನಾಟಕ ವಾರ್ತೆ):- ತೋಟಗಾರಿಕೆ ಇಲಾಖೆಯು 2020-21 ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೈತ ಫಲಾನುಭವಿಗಳಿಗೆ ಮಿನಿ ಟ್ರ್ಯಾಕ್ಟರ್ ಹಾಗೂ ಪವರ್ ಟಿಲ್ಲರ್‍ಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ. 

 

20 ಪಿ.ಟಿ.ಓ ಅಥವಾ 20 ಪಿ.ಟಿ.ಓ ಗಿಂತ ಕಡಿಮೆ ಸಾಮಥ್ರ್ಯವುಳ್ಳ ಟ್ರ್ಯಾಕ್ಟರ್ ಖರೀದಿಸಲು ಸಾಮಾನ್ಯ ವರ್ಗದ ರೈತರಿಗೆ ಶೇ.25 ರಂತೆ 75 ಸಾವಿರ ರೂ ಸಹಾಯಧನ ಹಾಗೂ ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ಶೇ.35 ರಂತೆ 1 ಲಕ್ಷ ರೂಗಳ ಸಹಾಯಧನ ನೀಡಲಾಗುತ್ತದೆ.


  ಪವರ್ ಟಿಲ್ಲರ್ ಖರೀದಿಸಲು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡ ರೈತರಿಗೆ ಶೇ. 50 ರಂತೆ ಹಾಗೂ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ಶೇ. 90 ರಂತೆ ಸಹಾಯಧನ ನೀಡಲಾಗುವುದು.


ಆಸಕ್ತ ರೈತರು ಅಗತ್ಯ ದಾಖಲಾತಿಗಳನ್ನು ನಿಗದಿತ ಅರ್ಜಿ ನಮೂನೆಯೊಂದಿಗೆ ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಕಂದಾಯ ಇಲಾಖೆಯಿಂದ ಗಣಕೀಕೃತ ಬೆಳೆ ದೃಢೀಕರಣ, ತೋಟಗಾರಿಕೆ ಬೆಳೆ ಇರುವ ತಾಕಿನ ಪೋಟೊ, ಮತದಾರರ ಗುರುತಿನ ಚೀಟಿ, ಮತ್ತು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಕೃಷಿ ಇಲಾಖೆಯಿಂದ  ಎನ್.ಓ.ಸಿ ಪತ್ರ, ಮುಚ್ಚಳಿಕೆ ಪತ್ರ ಇತ್ಯಾದಿಗಳನ್ನು ಆಯಾ ತಾಲ್ಲೂಕಿನ ತೋಟಗಾರಿಕೆ ಕಚೇರಿಗೆ ಸೆಪ್ಟೆಂಬರ್ 22 ರೊಳಗೆ ಸಲ್ಲಿಸಬಹುದು.


  ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಕಚೇರಿ ಸಂಪರ್ಕಿಸುವಂತೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ. 

  






ರೈತರಿಗೆ ಸಮರ್ಪಕವಾಗಿ ರಸಗೊಬ್ಬರ, ಸಹಾಯಧನ ತಲುಪಿಸಿ : ಅಧ್ಯಕ್ಷರಾದ ಎಂ. ಅಶ್ವಿನಿ ಸೂಚನೆ


ಚಾಮರಾಜನಗರ, ಸೆಪ್ಟೆಂಬರ್ 15 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ರೈತರಿಗೆ ಸರಿಯಾದ ಸಮಯಕ್ಕೆ ಸಮರ್ಪಕವಾಗಿ ರಸಗೊಬ್ಬರ ಸಿಗುವಂತಾಗಬೇಕು. ಹೂ, ಹಣ್ಣು, ತರಕಾರಿ ಬೆಳೆದ ಫಲಾನುಭವಿಗಳಿಗೆ ಪರಿಹಾರಧನ ಶೀಘ್ರವಾಗಿ ತಲುಪಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ಅಶ್ವಿನಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 


ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 


ಮಳೆಯ ಪ್ರಮಾಣ ಉತ್ತಮ ರೀತಿಯಲ್ಲಿ ಆಗಿದ್ದು, ರೈತರಿಗೆ ರಸಗೊಬ್ಬರವನ್ನು ತಲುಪಿಸಬೇಕು. ಹನೂರು ತಾಲೂಕಿನಲ್ಲಿ ಯೂರಿಯಾ ಕೊರತೆ ಕಂಡು ಬಂದಿದ್ದು, ಆ ಸಮಸ್ಯೆಯನ್ನು ಬೇಗ ನಿವಾರಿಸಬೇಕು. ಹಲವು ರೈತರಿಗೆ ಕೃಷಿ ಹೊಂಡದ ಸಹಾಯ ಧನವು ಬಿಡುಗಡೆಯಾಗಿಲ್ಲ. ಹೀಗಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಫಲಾನುಭವಿಗಳಿಗೆ ಶೀಘ್ರ ಸೌಲಭ್ಯ ತಲುಪಿಸುವಂತೆ ಮಾಡಬೇಕು ಎಂದು ತಿಳಿದರು.


ಸಭೆಯ ಆರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸವರಾಜು, ಚೆನ್ನಪ್ಪ, ಕೆ.ಎಸ್.ಮಹೇಶ್, ಸಿ.ಎನ್. ಬಾಲರಾಜ್, ಮರಗದ ಮಣಿ ಸೇರಿದಂತೆ ಹಲವು ಸದಸ್ಯರು ರಸಗೊಬ್ಬರ ಅಗತ್ಯಕ್ಕೆ ತಕ್ಕಂತೆ ರೈತರಿಗೆ ದೊರೆಯಲು ಏರ್ಪಾಡು ಮಾಡಬೇಕು. ರಸಗೊಬ್ಬರ ದಾಸ್ತಾನು ಕುರಿತು ತಾಲ್ಲೂಕುವಾರು ಮಾಹಿತಿ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಸ್ಪಂಧಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಾಣ್ ರಾವ್ ಅವರು ತಾಲ್ಲೂಕು ವಾರು ಮಾಹಿತಿ ಪ್ರತಿಯನ್ನು ಒದಗಿಸುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು. 


ಆರೋಗ್ಯ ಇಲಾಖೆ ವಿಷಯ ಕಲುರಿತ ಚರ್ಚೆ ವೇಳೆ ಎಂ. ಅಶ್ವಿನಿ ಅವರು ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಕಾಡದಂತೆ ಕ್ರಮವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಟ್ಟಡ ನಿರ್ವಹಣೆ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯ ರಕ್ಷಾ ಸೇವಾ ಯೋಜನೆಯನ್ನು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು ಎಂದು ನಿರ್ದೇಶನ ನೀಡಿದರು. 


       ಆರೋಗ್ಯ ಇಲಾಖೆ ವಿಷಯ ಪ್ರಸ್ತಾಪ ವೇಳೆ ಕೋವಿಡ್-19 ನಿಯಂತ್ರಣಾ ಕ್ರಮಗಳಿಗೆ ಸಂಬಂಧಿಸಿದಂತೆ ಸಮರ್ಪಕ ಕ್ರಮಗಳನ್ನು ಅನುಷ್ಠಾನ ಮಾಡಬೇಕು. ಸ್ಯಾನಿಟೇಜಷನ್, ಸೂಕ್ತ ಸ್ಪಂದನೆ ಯಂತಹ ಕ್ರಮಗಳಿಗೆ ಮುಂದಾಗಬೇಕು, ಕೊರೊನಾ ವಾರಿಯರ್ಸ್‍ಗಳಾಗಿ ಕೆಲಸ ನಿರ್ವಹಿಸುವವರಿಗೆ ಸಹಾಯ ಧನವನ್ನು ಹೆಚ್ಚಿಸಬೇಕು ಎಂದು ಸದಸ್ಯರು ತಿಳಿಸಿದರು.


ಸದಸ್ಯರಾದ ಸಿ.ಎನ್. ಬಾಲರಾಜ್, ಕೆ.ಎಸ್. ಮಹೇಶ್, ಕೆರೆಹಳ್ಳಿ ನವೀನ್, ಬಿ.ಕೆ. ಬೊಮ್ಮಯ್ಯ, ಗುಂಡ್ಲುಪೇಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಜಿ.ಮಧುಶಂಕರ್ ಸೇರಿದಂತೆ ಹಲವು ಸದಸ್ಯರು ವೈದ್ಯಕೀಯ ಸೇವೆ ರಾತ್ರಿ ವೇಳೆಯು ಜನರಿಗೆ ಸಿಗಬೇಕಿದೆ ಎಂದರು. ಸದಸ್ಯರಾದ ಕಮಲ್ ನಾಗರಾಜ್ ಅವರು ಮಾತನಾಡಿ ಮುಳ್ಳೂರು ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರವನ್ನು ಶೀಘ್ರ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ದಾನಿಗಳು ಸ್ಥಳÀ ನೀಡಲು ಮುಂದೆ ಬಂದಿದ್ದು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದರು. ಸಭೆಯಲ್ಲಿ ಇತರೆ ವಿಷಯಗಳ ಕುರಿತು ಚರ್ಚಿಸಲಾಯಿತು. 


ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಖರೀದಿಸದಂತೆ ಚೂಡಾಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಮನವಿ

 

ಚಾಮರಾಜನಗರ, ಸೆಪ್ಟೆಂಬರ್ 15 (ಕರ್ನಾಟಕ ವಾರ್ತೆ):- ಚಾಮರಾಜನಗರ - ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ ಸಾರ್ವಜನಿಕರು ನಿವೇಶನ ಖರೀದಿಸಬಾರದೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಅವರು ಮನವಿ ಮಾಡಿದ್ದಾರೆ. 


ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಜಮೀನುಗಳಿಗೆ ಜಿಲ್ಲಾಧಿಕಾರಿ ಅವರಿಂದ ಭೂ ಪರಿವರ್ತನೆ, ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೆ, ಒಳಚರಂಡಿ, ವಿದ್ಯುತ್, ನೀರು ಸರಬರಾಜು, ರಸ್ತೆ, ಉದ್ಯಾನವನ ಹಾಗೂ ನಾಗರಿಕ ಸೌಕರ್ಯ ನಿವೇಶನ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸದಿರುವ ಅನಧಿಕೃತ ಬಡಾವಣೆಗಳಲ್ಲಿ ನಿವೇಶನಗಳನ್ನು ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ. 


ಜನಸಾಮಾನ್ಯರ ಮನಸ್ಥಿತಿಗನುಗುಣವಾಗಿ ಕಾನೂನಿಗೆ ವಿರುದ್ಧವಾಗಿ ಕೆಲವರು ಎಕರೆಗಟ್ಟಲೆ ಜಮೀನು ಖರೀದಿಸಿ ಯಾವುದೇ ಅನುಮತಿ ಇಲ್ಲದೇ ಭೂ ಪರಿವರ್ತನೆಯನ್ನು ಮಾಡದೆ ಗುಂಟೆ ರೂಪದಲ್ಲಿ ಮಾರಾಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಗುಂಟೆ ರೂಪದಲ್ಲಿ ಭದ್ರತೆಗೋಸ್ಕರ ರಿಜಿಸ್ಟರ್ ಮಾಡಿಸುತ್ತಿದ್ದು, ಇದರಿಂದ ನಿವೇಶನ ಕೊಂಡುಕೊಳ್ಳುವವರಿಗೆ ಮೂಲಭೂತ ಸೌಕರ್ಯಗಳು ದೊರೆಯುವುದಿಲ್ಲ. ಭೂ ಪರಿವರ್ತನೆ ಮಾಡದೆ ಗುಂಟೆ ರೂಪದಲ್ಲಿ ತೆಗೆದುಕೊಂಡು ಜಮೀನಿನಲ್ಲಿ ಕಟ್ಟಡ ನಿರ್ಮಿಸಿದರೆ ಅದು ಅನಧೀಕೃತವಾಗುತ್ತದೆ. ಇಂತಹ ಜಾಗಗಳಿಗೆ ಖಾತೆಯು ಕೂಡ ಅಗುವುದಿಲ್ಲ. ಬಡಾವಣೆ ನಿರ್ಮಾಣ ಮಾಡುವವರು ಗುಂಟೆ ರೂಪದಲ್ಲಿ ರಿಜಿಸ್ಟರ್ ಮೂಲಕ ತೆಗೆದುಕೊಂಡು ಗ್ರಾಮ ಪಂಚಾಯಿತಿ, ನಗರಸಭೆಯಲ್ಲಿ ಖಾತೆ ಮಾಡಿಸಿಕೊಂಡು ನಂತರ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಒಳಚರಂಡಿ, ರಸ್ತೆ, ವಿದ್ಯುಚ್ಛಕ್ತಿ ದೊರೆಯುತ್ತದೆ ಎಂದು ಮಾಹಿತಿ ನೀಡುತ್ತಿದ್ದಾರೆಂದು ಸಾರ್ವಜನಿಕರು ತಿಳಿಸುತ್ತಿದ್ದಾರೆ.


ಈ ಹಿನ್ನಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಚಾಮರಾಜನಗರ, ಗ್ರಾಮಾಂತರದ ಚನ್ನಿಪುರಮೋಳೆ, ರಾಮಸಮುದ್ರ, ಕರಿನಂಜನಪುರ, ಸೋಮವಾರಪೇಟೆ, ಗಾಳಿಪುರ, ಮೂಡ್ಲುಪುರ, ಮಲ್ಲಯ್ಯನಪುರ, ಉತ್ತುವಳ್ಳಿ, ಕಾಡಹಳ್ಳಿ, ಮಸಗಾಪುರ, ಮನಗಾನಹಳ್ಳಿ, ಮುಂಚನಹಳ್ಳಿ, ಬೂದಿತಿಟ್ಟು, ಮರಿಯಾಲ, ಗಂಗವಾಡಿ, ಮಾದಾಪುರ, ದೊಡ್ಡಮೋಳೆ, ಕೋಡಿಮೋಳೆ, ಹರದನಹಳ್ಳಿ, ಬಂಡಿಗೆರೆ, ಯಡಪುರ, ಶಿವಪುರ, ಚಂದಕವಾಡಿ, ಕೂಡ್ಲೂರು, ಬಸವನಪುರ ಹಾಗೂ ಹಂಡ್ರಕಳ್ಳಿ  ಗ್ರಾಮಗಳಲ್ಲಿ ನಿವೇಶನ ಕೊಂಡುಕೊಳ್ಳುವವರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಹಿತಿ ಪಡೆದುಕೊಳ್ಳಬೇಕು. ಜೊತೆಗೆ ಬಡಾವಣೆಯಲ್ಲಿನ ರಸ್ತೆ, ಒಳಚರಂಡಿ, ಕುಡಿಯುವ ನೀರಿನ, ವಿದ್ಯುಚ್ಛಕ್ತಿ ಸಂಪರ್ಕ ಹಾಗೂ ಅಭಿವೃದ್ಧಿಪಡಿಸಿದ ಪಾಕ್ರ್À ಮತ್ತು ಸಿ.ಎ. ನಿವೇಶನಗಳನ್ನು ಹೊಂದಿರುವ ಬಗ್ಗೆ ಖಚಿತಪಡಿಸಿಕೊಂಡು ನಿವೇಶನಗಳನ್ನು ಖರೀದಿಸಬೇಕೆಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಮನವಿ ಮಾಡಿದ್ದಾರೆ.


ಒಂದು ವೇಳೆ ಇಂತಹ ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳನ್ನು ಖರೀದಿಸಿದಲ್ಲಿ, ಖರೀದಿದಾರರಿಗೆ ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಕಾನೂನು ತೊಡಕುಗಳು ಸಂಭವಿಸಲಿದ್ದು, ಕಾನೂನು ತೊಡಕಿಗೆ ಖರೀದಿದಾರರೇ ಹೋಣೆಗಾರರಾಗಲಿದ್ದಾರೆ.


ಬಡಾವಣೆ ನಿರ್ಮಾಣ ಮಾಡುವವರು ಕಾನೂನಾತ್ಮಕವಾಗಿ ನಿಯಮಗಳಿಗನುಸಾರವಾಗಿ ನಿರ್ಮಾಣ ಮಾಡಬೇಕು, ಮುಂದಿನ ದಿನಗಳಲ್ಲಿ ನಿವೇಶನ ಪಡೆದುಕೊಂಡವರಿಗೆ ಮೂಲಭೂತ ಸೌಕರ್ಯ ದೊರೆಕಿಸಿಕೊಡಬೇಕು, ಇದರಿಂದ ಬಡಾವಣೆಗಳಿಗೂ ಕೂಡ ಮೂಲಭೂತ ಸೌಕರ್ಯಗಳು ದೊರೆಯುವುದರ ಜೊತೆಗೆ ನಗರವು ಯೋಜನಾಬದ್ಧವಾಗಿ ಅಭಿವೃದ್ಧಿಗೊಳ್ಳುತ್ತದೆ ಇದಕ್ಕಾಗಿ ಸಾರ್ವಜನಿಕರು ಸಂಪೂರ್ಣವಾಗಿ ಸಹಕರಿಸಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.



ಕೊಳ್ಳೇಗಾಲ ನಗರಸಭಾ : ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡದಂತೆ ಸೂಚನೆ 


ಚಾಮರಾಜನಗರ, ಸೆಪ್ಟೆಂಬರ್ 15 (ಕರ್ನಾಟಕ ವಾರ್ತೆ):- ಕೊಳ್ಳೇಗಾಲ ನಗರಸಭೆಯ ವ್ಯಾಪ್ತಿಯಲ್ಲಿ ಬಿಡಾಡಿ ದನಗಳಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ. ಹಾಗಾಗಿ ಬಿಡಾಡಿ ದನಗಳನ್ನು ಸಾಕಾಣಿಕೆ ಮಾಡುವವರು ತಮ್ಮ ತಮ್ಮ ಮನೆಗಳಲ್ಲಿಯೇ ಕಟ್ಟಿ ಹಾಕಿಕೊಂಡು ಸಾಕಬೇಕು ಎಂದು ನಗರಸಭೆ ಸೂಚಿಸಿದೆ. 


ದನ, ಕರು, ನಾಯಿ ಹಾಗೂ ಹಂದಿಗಳನ್ನು ಸಾಕುತ್ತಿರುವವರು ರಸ್ತೆಗಳಲ್ಲಿ ಬಿಡುತ್ತಿರುವುದರಿಂದ ಹಲವಾರು ಅಪಘಾತಗಳು ಸಂಭವಿಸುತ್ತಿದ್ದು ತುಂಬಾ ತೊಂದರೆಗಳಾಗುತ್ತಿರುವ ಬಗ್ಗೆ ಸಾರ್ವಜನಿಕರು ಮತ್ತು ನಗರಸಭಾ ಸದಸ್ಯರುಗಳಿಂದ ದೂರುಗಳು ಬಂದಿವೆ. ಇದರಿಂದಾಗಿ ಸಾಕಾಣಿಕೆ ಮಾಡುತ್ತಿರುವ ಮಾಲೀಕರು ರಸ್ತೆಗಳಿಗೆ ಸಾಕು ಪ್ರಾಣಿಗಳನ್ನು ಬಿಡಬಾರದು ಇಲ್ಲದಿದ್ದಲ್ಲಿ ಪ್ರಾಣಿಗಳನ್ನು ಮೈಸೂರಿನ ಪ್ರಿಂಜಾಪೋಲ್‍ಗೆ ಕಳುಹಿಸಲಾಗುತ್ತದೆ ಎಂದು ನಗÀರಸಭೆಯ ಪೌರಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ರೇಷ್ಮೆ ಕೃಷಿ ಪ್ರಶಸ್ತಿಗಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಂದ ಅರ್ಜಿ ಆಹ್ವಾನ 

 

ಚಾಮರಾಜನಗರ, ಸೆಪ್ಟೆಂಬರ್ 15 (ಕರ್ನಾಟಕ ವಾರ್ತೆ):- ರೇಷ್ಮೆ ಇಲಾಖೆಯಿಂದ 2019-20ನೇ ಸಾಲಿನ ರೇಷ್ಮೆ ಕೃಷಿ ಪ್ರಶಸ್ತಿಗಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಂದ  ಅರ್ಜಿ ಆಹ್ವಾನಿಸಲಾಗಿದೆ.


 ಅರ್ಜಿ ಸಲ್ಲಿಸುವ ನೂಲು ಬಿಚ್ಚಾಣಿಕೆದಾರರು ಕಡ್ಡಾಯವಾಗಿ ಪ್ರಸಕ್ತ ಸಾಲಿಗೆ ನಿಯಮಾನುಸಾರ ನೋಂದಾಯಿಸಿರಬೇಕು. ಕನಿಷ್ಟ 6 ಮಲ್ಟಿ ಎಂಡ್ ಬೇಸಿನ್ ಹೊಂದಿರಬೇಕು. ಸ್ವಯಂಚಾಲಿತ ನೂಲು ಬಿಚ್ಚಾಣಿಕೆದಾರರು ಸ್ವಯಂಚಾಲಿತ ಯಂತ್ರವನ್ನು ಸ್ಥಾಪಿಸಿರಬೇಕು. ರೇಷ್ಮೆ ಗೂಡು ಮಾರುಕಟ್ಟೆಯಲ್ಲಿಯೇ ಗೂಡು ಖರೀದಿಸಿರುವುದನ್ನು ದಾಖಲಾತಿಯೊಂದಿಗೆ ದೃಢೀಕರಿಸಬೇಕು. ವರ್ಷದಲ್ಲಿ ಖರೀದಿಸಿದ ಗೂಡನ್ನು ಸಂಪೂರ್ಣವಾಗಿ ನೂಲು ಬಿಚ್ಚಾಣಿಕೆಗೆ ಬಳಸಿರಬೇಕು. ಖರೀದಿಸಿದ ಗೂಡನ್ನು ಇತರೆ ಮಾರುಕಟ್ಟೆಗಳಲ್ಲಿ ಇತರರಿಗೆ ಮಾರಾಟ ಮಾಡಿರಬಾರದು. 


 ಹೆಚ್ಚಿನ ಮಾಹಿತಿಗಾಗಿ ಕೊಳ್ಳೇಗಾಲದ ರೇಷ್ಮೆ ವಿಸ್ತರಣಾಧಿಕಾರಿಗಳು, ಗೂಡಿನ ನಂತರದ ಚಟುವಟಿಕೆಗಳ ರೇಷ್ಮೆ ಸಹಾಯಕರ ನಿರ್ದೇಶಕರ ಕಚೇರಿ ಸಂಪರ್ಕಿಸಿ ಅಗತ್ಯ ಮಾಹಿತಿ ದಾಖಲಾತಿಗಳೊಂದಿಗೆ ಒದಗಿಸಿ ಅರ್ಜಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 25ರೊಳಗೆ ಸಲ್ಲಿಸಬೇಕು ಎಂದು ಕೊಳ್ಳೇಗಾಲದ ಗೂಡಿನ ನಂತರದ ಚಟುವಟಿಕೆಗಳ ರೇಷ್ಮೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು