ಟಿಪ್ಪರ್ ಗೆ ಬೈಕ್ ಸವಾರರಿಬ್ಬರು ಬಲಿ!
*ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ: ಚಲಿಸುತ್ತಿದ್ದ ಟಿಪ್ಪರ್ ಗೆ ಬೈಕ್ ಸವಾರರಿಬ್ಬರು ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ೨೦೯ ಅಲ್ಲಿ ನಡೆದಿದೆ.
*ಮೃತರು ಬ್ಯಾಡ್ ಮೂಡ್ಲು ಗ್ರಾಮದ ಮಣಿ (೨೮) ಹಾಗೂ ಹೊಂಗನೂರು ಗ್ರಾಮದ ನಟರಾಜು (೨೫) ಎಂದು ತಿಳಿದುಬಂದಿದೆ.
*ಸವಾರರಿಬ್ಬರು ಊರಿಗೆ ಹೋಗುವಾಗ ಸತ್ತಿ ರಸ್ತೆಯಲ್ಲಿರೊ ಎಚ್.ಪಿ.ಪೆಟ್ರೊಲ್ ಬಂಕ್ ಸಮೀಪವಿರೊ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
*ಸ್ಥಳಕ್ಕೆ ಎಸ್ಪಿ ದಿವ್ಯ,
ಹೆಚ್ಚುವರಿ ಪೊಲೀಸ್ ವರೀಷ್ಟಾದಿಕಾರಿ ಅನಿತಾ ಹದ್ದಣ್ಣನ್ನವರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಂಚಾರ ಠಾಣೆ& ಪಟ್ಟಣಠಾಣಾ ಸಿಬ್ಬಂದಿಗಳು ಹಾಜರಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
*ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
No comments:
Post a Comment