ನಿದ್ರಾವಸ್ಥೆಯಲ್ಲಿ ಸಂಚಾರ ಅವ್ಯವಸ್ಥೆ,ಚಾಮರಾಜನಗರದಲ್ಲಿ ನಿಷ್ಪ್ರಯೋಕವಾದ ಬಾಡಿಕ್ಯಾಮ್!
*ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ: ಎಲ್ಲೆಂದರಲ್ಲಿ ವಾಹನ ನಿಲುಗಡೆ,ಎಲ್ಲೆಂದರಲ್ಲಿ ವಾಹನ ತಪಾಸಣೆ,ಹೆಚ್ಚಾಗಿ ರಸ್ತೆ ನಿಯಮ ಉಲ್ಲಂಘಿಸುತ್ತಿರೋ ವಾಹನ ಸವಾರರು, ನಿಷ್ಪ್ರಯೋಜಕವಾದ ಬಾಡಿಕ್ಯಾಮ್ ಹೀಗೆ ಒಂದಾ ಎರಡಾ ಹೇಳೋಕೆ ಹೋಗ್ತಾ ಇದ್ರೆ ಇದನ್ನೆಲ್ಲ ಕೇಳೊಕೆ ಪೊಲೀಸ್ ಇಲಾಖೆ ಇದಿಯೊ ಇಲ್ಲವೊ ಎಂಬ ಮಟ್ಟಿಗೆ ಅನುಮಾನ ಮೂಡಿಸಿ ಬಿಡುತ್ತದೆ.
*ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖಾ ಕಳೆದ ತಿಂಗಳು ಸ್ಪೆಷಲ್ ಡ್ರೈವ್ ನೆಪದಲ್ಲಿ ಎಲ್ಲ ಮೂಲೆ ಮೂಲೆಯಲ್ಲೂ ನಿಂತು ವಾಹನ ಸವಾರರಿಗೆ ಬಲೆ ಬೀಸಿ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕಿದರು.
*ಉಳಿದಂತೆ ಯಾವಾಗಲೊ ದಂಡ ಹಾಕೋದು, ಊರ ಹೊರಗೆ ನಿಂತು ದಂಡ ಹಾಕೋದು ಈಗ ಸಾಮಾನ್ಯವಾಗಿದೆ. ಅದು ಬಿಟ್ರೆ ಎಲ್ಲಾದರೂ ಹೆಲ್ಮೆಟ್ ರಹಿತ ವಾಹನ ಸವಾರರು ಒಂದಿಬ್ಬರು ಸತ್ತರೆ ನಂತರ ಇಲಾಖೆ ಪುಲ್ ಅಲರ್ಟ್ ಆಗುತ್ತದೆ ತದ ನಂತರ ಯಥಾ ಸ್ಥಿತಿ.. ಹಾಗಿಯೆ ಬಾಡಿಕ್ಯಾಮ್ ಸ್ಥಿತಿ ಕೂಡ ಅಷ್ಟೆ...
*ಸಂಚಾರ ಠಾಣೆಯಲ್ಲಿ ಇನ್ಸ್ ಪೆಕ್ಟರ್ ರವಿಶಂಕರ್ ಅವರಿದ್ದಾಗ ಬಳಸಿದ ಬಾಡಿಕ್ಯಾಮ್ ನಂತರ ಮೂಲೆಗೆ ಸೇರಿದವು. ಹೀಗೆ ಆವಾಗ ಈವಾಗ ಬಳಕೆ ಮಾಡಿದರೆ ಯಾರನ್ನ ತಾನೆ ಜನಸಾಮಾನ್ಯರು ನಂಬುತ್ತಾರೆ ಹೇಳಿ..ನಿಯಮ ಉಲ್ಲಂಘನೆ, ಗಲಾಟೆ ಮಾಡಿದವರ ಚಿತ್ರಣ, ಅಲ್ಪ ಪ್ರಮಾಣ ಭ್ರಷ್ಟತೆ ಕಡಿಮೆ ಮಾಡಬಹುದಾದರೂ ಇದೆಲ್ಲವನ್ನ ಉಲ್ಲಂಘನೆ ಮಾಡಿ ಕೆಲಸ ನಿರ್ವಹಣೆ ಮಾಡಲಾಗುತ್ತಿದೆ.
*ನ್ಯಾಯಾಲಯ ಒಂದು ಕಡೆ ಬಾಡಿಕ್ಯಾಮ್ ಧರಿಸಿ ಕೆಲಸ ನಿರ್ವಹಿಸಿ ಅಂತ ಸಲಹೆ ನೀಡಿದರೂ ಪಾಲನೆ ಮಾತ್ರ ಶೂನ್ಯವಾಗಿದೆ. *ಜಿಲ್ಲಾ ವರೀಷ್ಟಾದಿಕಾರಿಗಳ ಬಾಡಿಕ್ಯಾಮ್ ಬಳಸಲು ಆದೇಶಿಸುತ್ತಾರೋ, ಅವರ ಆದೇಶ ನಿರಂತರವಾಗಿ ಜಾರಿಯಾಗುತ್ತೋ ಅಥವಾ ಒಂದು ದಿನದ ಬಳಕೆಗಾಗಿ ಆಗುತ್ತೋ
No comments:
Post a Comment