Saturday, 7 April 2018

ವಿಧಾನಸಭಾ ಚುನಾವಣೆ – 2018 ಚುನಾವಣಾ ಪ್ರಕ್ರಿಯೆಯ ಪರಿಪೂರ್ಣ ಮಾಹಿತಿ ಹೊಂದಿ: ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಧಿಕಾರಿಗಳಿಗೆ ಸೂಚನೆ (07-04-2018)


ವಿಧಾನಸಭಾ ಚುನಾವಣೆ – 2018
ಚುನಾವಣಾ ಪ್ರಕ್ರಿಯೆಯ ಪರಿಪೂರ್ಣ ಮಾಹಿತಿ ಹೊಂದಿ: ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಧಿಕಾರಿಗಳಿಗೆ ಸೂಚನೆ 
 ಚಾಮರಾಜನಗರ, ಏ. 07 :- ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತದ ಮಾಹಿತಿ ಹೊಂದಿರುವುದಲ್ಲದೆ, ಮತಯಂತ್ರ(ಇ.ವಿ.ಎಂ) ಹಾಗೂ ವಿ.ವಿ. ಪ್ಯಾಟ್ ಕಾರ್ಯವಿಧಾನಗಳ ಬಗ್ಗೆ ಸಂಪೂರ್ಣ ಅರಿವಿರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾಡಳಿತವತಿಯಂದ ಮಾಸ್ಟರ್ ಟ್ರೈನರ್ಸ್, ಸೆಕ್ಟರ್ ಅಧಿಕಾರಿ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.

ಚಾಮರಾಜನಗರ, ಏ. 07 :- ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತದ ಮಾಹಿತಿ ಹೊಂದಿರುವುದಲ್ಲದೆ, ಮತಯಂತ್ರ(ಇ.ವಿ.ಎಂ) ಹಾಗೂ ವಿ.ವಿ. ಪ್ಯಾಟ್ ಕಾರ್ಯವಿಧಾನಗಳ ಬಗ್ಗೆ ಸಂಪೂರ್ಣ ಅರಿವಿರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾಡಳಿತವತಿಯಂದ ಮಾಸ್ಟರ್ ಟ್ರೈನರ್ಸ್, ಸೆಕ್ಟರ್ ಅಧಿಕಾರಿ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
ಚುನಾವಣಾ ಆಯೋಗವು ಕಾಲಕಾಲಕ್ಕೆ ನಿರ್ವಹಿಸಬೇಕಿರುವ ಕಾರ್ಯವೈಖರಿ, ನೀತಿ, ನಿಯಮಗಳನ್ನು ಪರಿಷ್ಕರಿಸುತ್ತಿದೆ. ಅದನ್ನು ಅನುಷ್ಠಾನಗೊಳಿಸಲು ಚುನಾವಣಾ ಪ್ರಕ್ರಿಯೆಗೆ ಸಂಬಂಧಪಟ್ಟ ಎಲ್ಲ ಮಾಹಿತಿಗಳ ಸಂಪೂರ್ಣ ಅರಿವು ಹೊಂದಬೇಕು. ಯಾವುದೇ ಹಂತದ ಅಧಿಕಾರಿಗಳು ಎಷ್ಟೇ ಬಾರಿ ತರಬೇತಿ ಪಡೆದಿದ್ದರೂ ಸಹ ಚುನಾವಣಾ ಕಾರ್ಯವಿಧಾನದಲ್ಲಿ ಹೆಚ್ಚಿನ ಪರಿಪೂರ್ಣತೆ ಹೊಂದಿ, ಆಯೋಗದ ಮಾರ್ಗಸೂಚಿಗಳನ್ನು ಯಶಸ್ವಿಯಾಗಿ ಪಾಲಿಸಬೇಕು ಎಂದರು.
ಮತದಾನವು ಒಂದು ಪವಿತ್ರ ಕಾರ್ಯವಾಗಿದೆ. ಚುನಾವಣೆಯ ಮಾರ್ಗಸೂಚಿಗಳು ಸರಳವಾಗಿ ಅರ್ಥವಾಗುವುದರೊಂದಿಗೆ ಅದರಲ್ಲಿ ಪಾಲ್ಗೊಳ್ಳುವ ವಿವಿಧ ಹಂತದ ಅಧಿಕಾರಿಗಳು ಹಾಗೂ ಮತದಾರರು ಚುನಾವಣೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಸಲುವಾಗಿ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ(ಈesಣivಚಿಟ oಜಿ ಆemoಛಿಡಿesಥಿ) ದ ಮಾದರಿಯಲ್ಲಿ ನಡೆಸಲು ಆಯೋಗವು ನಿರ್ದೇಶನ ನೀಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತದಾನ ದಿನದಂದು ಮತಗಟ್ಟೆಯಲ್ಲಿ ಪಿ.ಆರ್.ಒ(ಪ್ರಿಸೈಡಿಂಗ್ ಅಧಿಕಾರಿ), ಮತಗಟ್ಟೆಯ ವಿವಿಧ ಅಧಿಕಾರಿಗಳು ಮತಯಂತ್ರದ ಕುರಿತು ಸಂಪೂರ್ಣ ತಿಳಿವಳಿಕೆ ಇರಬೇಕು. ಮತಗಟ್ಟೆಯ ಎಲ್ಲಾ ಚಲನ-ವಲನಗಳನ್ನು ಸೂಕ್ಷ್ಮ ಮತಿಯಿಂದ ಗಮನಿಸÀಬೇಕು. ಮತದಾನದ ಹಿಂದಿನ ದಿನವೇ ಮತಗಟ್ಟೆಯ ಎಲ್ಲಾ ಸಿದ್ದತೆಗಳನ್ನು ನಿರ್ವಹಿಸಬೇಕು ಎಂದರು. ಇದಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಫ್ಲೋ-ಚಾರ್ಟ್ ನೀಡಲಾಗುವುದು ಎಂದರು.
ಅಣಕು ಮತದಾನದಲ್ಲಿ ಲೋಪವಾಗದಂತೆ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಇಡೀ ಮತದಾನ ಪ್ರಕ್ರಿಯೆಗೆ ತೊಂದರೆ ಉಂಟಾಗಬಹುದು. ಪ್ರಿಸೈಡಿಂಗ್ ಅಧಿಕಾರಿಯು ಅತ್ಯಂತ ಜಾಣ್ಮೆ, ವಿವೇಕ ಹಾಗೂ ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಿಸಬೇಕು. ಯಾವುದೇ ಅನುಮಾನ, ಸಮಸ್ಯೆಗಳಿದ್ದರೂ ತಮ್ಮ ವಿವೇಚನೆ ಬಳಸದೇ ಮತ್ತು ಬಹುಮತದ ಅಭಿಪ್ರಾಯಗಳಿಗೆ ಮನ್ನಣೆ ನೀಡದೇ ತಮ್ಮ ಮೇಲಧಿಕಾರಿಗೆ ತಿಳಿಸಿ ಪರಿಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಮಾತನಾಡಿ ಮತಗಟ್ಟೆಗಳಿಗೆ ಕನಿಷ್ಠ ಮೂಲಸೌಲಭ್ಯ ಒದಗಿಸಲಾಗುತ್ತಿದೆ. ಮತಗಟ್ಟೆಗಳಿಗೆ ಅಗತ್ಯವಾದ ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆ, ಅಂಗವಿಕಲರಿಗೆ ರ್ಯಾಂಪ್, ಹಾಗೂ ವಿಶ್ರಾಂತಿ ಕೊಠಡಿಗಳನ್ನು ತೆರೆಯಲಾಗುವುದು ಎಂದರು.
ಮತದಾನದ ಕುರಿತು ಜಿಲ್ಲೆಯ ಯಾವುದೇ ಭಾಗದಲ್ಲಿ ಹಾಗೂ ಯಾವುದೇ ಕ್ಷಣದಲ್ಲಿ ಪ್ರತಿಹಂತದ ಮಾಹಿತಿ ಪಡೆಯುವ ಸಲುವಾಗಿ ಸಂಪರ್ಕಕ್ಕೆ ಸಿಗಲು ಅನುಕೂಲವಾಗುವಂತೆ ವ್ಯವಸ್ಥೆಯನ್ನು ಉತ್ತಮಗೊಳಿಸಲಾಗುವುದು ಎಂದು ಸಿ.ಇ.ಒ. ಹರೀಶ್‍ಕುಮಾರ್ ಅವರು ತಿಳಿಸಿದರು.
ಮಾಸ್ಟರ್ ಟ್ರೈನರ್‍ಗಳಾದ ಶ್ರೀನಿವಾಸಕುಮಾರ್ ಹಾಗೂ ಗಣೇಶ್‍ಕುಮಾರ್, ತರಬೇತಿ ನೋಡೆಲ್ ಆಧಿಕಾರಿ ಯೋಗೇಶ್ ಅವರು ಚುನಾವಣಾ ಪೂರ್ವಸಿದ್ದತೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಹಾಜರಿದ್ದ ವಿವಿಧ ಹಂತದ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದರು.
ನಂತರ ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ. ಪ್ಯಾಟ್ ಕಾರ್ಯವಿಧಾನ ಕುರಿತು ಪ್ರಾಯೋಗಿಕ ತರಬೇತಿನ್ನು ಅಧಿಕಾರಿಗಳಿಗೆ ನೀಡಲಾಯಿತು.

ಏಪ್ರಿಲ್ 8ರಂದು ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಮಿಂಚಿನ ನೋಂದಣಿ ಅಭಿಯಾನ

            ಚಾಮರಾಜನಗರ, ಏ. 07 -  ಚುನಾವಣಾ ಆಯೋಗವು ಆಯಾ ಮತ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಏಪ್ರಿಲ್ 8ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಆಯಾ ಮತಗಟ್ಟೆಗಳಲ್ಲಿ ಮಿಂಚಿನ ನೋಂದಣಿ ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ.
ಏಪ್ರಿಲ್ 8 ರಂದು ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಜರಿದ್ದು ಬೆಳಗ್ಗೆ 9 ರಿಂದ ಸಂಜೆ 5.30 ಗಂಟೆಯವರೆಗೆ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಅರ್ಜಿ ಸ್ವೀಕರಿಸಲಿದ್ದಾರೆ.  ನಿಯಮಾನುಸಾರ ಪರಿಶೀಲಿಸಿ ಅರ್ಹರನ್ನು ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತದೆ.
ಈ ಅವಕಾಶವನ್ನು ಜಿಲ್ಲೆಯ ಜನತೆ ಸದುಪಯೋಗ ಮಾಡಿಕೊಳ್ಳಬೇಕು.  ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಹಮ್ಮಿಕೊಂಡಿರುವ ಮಿಂಚಿನ ನೋಂದಣಿ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಬಿ.ಬಿ ಕಾವೇರಿ ಅವರು  ಮನವಿ ಮಾಡಿದ್ದಾರೆ.



             










Friday, 6 April 2018

ಮತದಾರರ ಜಾಗೃತಿಗೆ ಉತ್ತೇಜಿಸಿ: ಜಿ.ಪಂ ಸಿ.ಇ.ಓ ಡಾ.ಕೆ. ಹರೀಶ್ ಕುಮಾರ್ ಕರೆ (04-04-2018)

ಮತದಾರರ ಜಾಗೃತಿಗೆ ಉತ್ತೇಜಿಸಿ: ಜಿ.ಪಂ ಸಿ.ಇ.ಓ ಡಾ.ಕೆ. ಹರೀಶ್ ಕುಮಾರ್ ಕರೆ 

ಚಾಮರಾಜನಗರ, ಏ. 04 - ಪ್ರಜಾಪ್ರಭುತ್ವದ ಯಶಸ್ವಿಗೆ ಪ್ರತಿಯೊಬ್ಬರೂ ಸಹ ಸಕ್ರಿಯವಾಗಿ ಉತ್ಸಾಹದಿಂದ ಪಾಲ್ಗೊಳ್ಳಬೇÀಕಿರುವುದರಿಂದ ಮತಗಟ್ಟೆ ಮಟ್ಟದ ಜಾಗೃತಿ ಗುಂಪುಗಳು (ಬಿ.ಎ.ಜಿ) ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಉತ್ತೇಜಿಸುವ ಚಟುವಟಿಕೆಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಜಿಲ್ಲಾ ಮುಖ್ಯಸ್ಥರೂ ಆದ ಡಾ. ಕೆ.ಹರೀಶ್ ಕುಮಾರ್ ಅವರು ತಿಳಿಸಿದರು. 

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ನಡೆದ  ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಮಟ್ಟದ ಜಾಗೃತಿ ಗುಂಪುಗಳ ಸದಸ್ಯರ ಬೃಹತ್ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜನತಂತ್ರ ವ್ಯವಸ್ಥೆಯಲ್ಲಿ ಎಲ್ಲರೂ ಭಾಗವಹಿಸುವಂತಾಗಬೇಕು.  ಮತದಾರರು ಮೊದಲಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು.  ಅರ್ಹರೆಲ್ಲರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು.  ಯಾರೂ ಸಹ ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು.  ಇದಕ್ಕಾಗಿಯೇ ಮತಗಟ್ಟೆ ಮಟ್ಟದ ಜಾಗೃತಿ ಗುಂಪುಗಳು ಮತದಾರರ ಪಟ್ಟಿಯಲ್ಲಿ ಯಾರ ಹೆಸರಾದರೂ ಕೈಬಿಟ್ಟು ಹೋಗಿದ್ದಲ್ಲಿ ಜಾಗೃತಿ ಮೂಡಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಲು ತಿಳಿವಳಿಕೆ ನೀಡಬೇಕು ಎಂದು ಹರೀಶ್ ಕುಮಾರ್ ತಿಳಿಸಿದರು.  

ಮತಗಟ್ಟೆ ಮಟ್ಟದ ಜಾಗೃತಿ ಗುಂಪುಗಳು ಚುನಾವಣೆ ಹಿನ್ನಲೆಯಲ್ಲಿ ಮತದಾನಕ್ಕೆ ಪೂರಕವಾಗಿರುವ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸುವ ಬಗ್ಗೆಯೂ ತಿಳಿಸಬೇಕಿದೆ.  ಈ ಬಾರಿ ಮತಗಟ್ಟೆಯಲ್ಲಿ ಕನಿಷ್ಠ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ರ್ಯಾಂಪ್, ನೆರಳಿನ ವ್ಯವಸ್ಥೆಯನ್ನು ಖಾತರಿ ಪಡಿಸಲಾಗುತ್ತದೆ. ಜನರಿಗೆ ಮಾಹಿತಿ ನೀಡುವ ಹಲವಾರು ಆಪ್‍ಗಳು ಸಹ ಇವೆ.  ಈ ಎಲ್ಲ ವಿಷಯಗಳನ್ನೂ ಮತಗಟ್ಟೆ ಮಟ್ಟದಲ್ಲಿ ಮತದಾರರಿಗೆ ಅರಿವು ಮೂಡಿಸುವ ಜವಾಬ್ದಾರಿ ಮತಗಟ್ಟೆ ಮಟ್ಟದ ಜಾಗೃತಿ ಗುಂಪಿನ ಸದಸ್ಯರಿಗೆ ಇದೆ ಎಂದರು. 

ವಿಶೇಷ ಚೇತನರು ಮತದಾನದಿಂದ ದೂರ ಉಳಿಯದಂತೆ ಮಾಡುವ ಉದ್ದೇಶದಿಂದ ಮತಗಟ್ಟೆಗೆ ಸುಲಭವಾಗಿ ಪ್ರವೇಶಿಸಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.  ಈಗಾಗಲೇ ಜಿಲ್ಲೆಯಲ್ಲಿರುವ ವಿಶೇಷ ಚೇತನರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.  ಲಿಂಗತ್ವ ಅಲ್ಪ ಸಂಖ್ಯಾತರು ಇನ್ನಿತರ ಎಲ್ಲಾ ವರ್ಗದವರು ಮುಕ್ತವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಗತ್ಯ ತಿಳಿವಳಿಕೆ ನೀಡುವ ಕೆಲಸವನ್ನು ಸಹ ಮತಗಟ್ಟೆ ಜಾಗೃತಿ ಗುಂಪುಗಳು ನಿರ್ವಹಿಸಬೇಕೆಂದು ಹರೀಶ್ ಕುಮಾರ್ ತಿಳಿಸಿದರು.
ಮತಗಟ್ಟೆ ಮಟ್ಟದ ಜಾಗೃತಿ ಗುಂಪುಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ಥಳೀಯ ಸಂಸ್ಥೆಗಳ ನೌಕರರು ಇರುತ್ತಾರೆ.  ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಜಾಗೃತಿ ಗುಂಪಿನ ಮೇಲ್ವಿಚಾರಣೆ ಮಾಡಲಿದ್ದಾರೆ.  ಗ್ರಾಮಗಳಲ್ಲಿ ಚುನಾವಣೆಗೆ ಬಳಸುವ ವಿದ್ಯುನ್ಮಾನ ಮತಯಂತ್ರ ಹಾಗೂ ಮತ ಖಾತರಿ ಪಡಿಸುವ ವಿ.ವಿ.ಪ್ಯಾಟ್ ಬಳಕೆ ಬಗ್ಗೆಯೂ ಪ್ರಾತ್ಯಕ್ಷಿಕೆ ಮೂಲಕ ಸ್ವೀಪ್ ಸಮಿತಿಯಿಂದ ಅರಿವು ಮೂಡಿಸಲಾಗುತ್ತದೆ.  ಈ ಚಟುವಟಿಕೆಗಳಿಗೆ ಸಹ ಬೆಂಬಲವಾಗಿ ನಿಲ್ಲಬೇಕು ಎಂದು ಹರೀಶ್ ಕುಮಾರ್ ತಿಳಿಸಿದರು.
ಇದೇ ವೇಳೆ ಮಾಸ್ಟರ್ ಟ್ರೈನರ್ ಶ್ರೀನಿವಾಸ್ ಅವರು ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ.ಪ್ಯಾಟ್ ಬಳಕೆ ಹಾಗೂ ಕಾರ್ಯವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಿಳಿವಳಿಕೆ ಮೂಡಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್, ತರಬೇತಿ ನೋಡಲ್ ಅಧಿಕಾರಿ ಯೋಗೇಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಏ. 5ರಂದು ನಗರದಲ್ಲಿ ಡಾ. ಬಾಬು ಜಗಜೀವನರಾಮ್ ಜನ್ಮದಿನಾಚರಣೆ: ಮೆರವಣಿಗೆ ಹಾಗೂ ಸಮಾರಂಭ ಆಯೋಜನೆ 

ಚಾಮರಾಜನಗರ, ಏ. 04 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಏಪ್ರಿಲ್ 5ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 9.30 ಗಂಟೆಗೆ ನಗರದ ಪ್ರವಾಸಿ ಮಂದಿರದಿಂದ ಡಾ. ಬಾಬು ಜಗಜೀವನ್‍ರಾಮ್ ರವರ ಭಾವಚಿತ್ರ ಮೆರವಣಿಗೆ ಹೊರಡಲಿದೆ.  ಬಳಿಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಜೆ.ಎಚ್. ಪಟೇಲ್ ಸಭಾಂಗಣಕ್ಕೆ ಮೆರವಣಿಗೆ ತಲುಪಲಿದೆ.  ಬಳಿಕ 10 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ
ಬಿ.ಬಿ. ಕಾವೇರಿ ಅವರು ಜನ್ಮ ದಿನಾಚರಣೆಯ ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಎಂ. ತಿರುಮಲೇಶ ಮುಖ್ಯ ಭಾಷಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ಉಚಿತ ಕಂಪ್ಯೂಟರ್ ತರಬೇತಿ

ಚಾಮರಾಜನಗರ, ಏ. 04   ಕೈಗಾರಿಕೆ ಮತ್ತು ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಏಪ್ರಿಲ್ 9 ರಿಂದ ಮೇ 9ರವರೆಗೆ ಉಚಿತ ಕಂಪ್ಯೂಟರ್ ತರಬೇತಿಯನ್ನು ನಗರದ ಜಿಲ್ಲಾಡಳಿತ ಭವನದ 2ನೇ ಮಹಡಿಯಲ್ಲಿರುವ ಕೈಗಾರಿಕೆ ತರಬೇತಿ ಮತ್ತು ಉದ್ಯೊಗ ಇಲಾಖೆ ಕಚೇರಿ (ಕೊಠಡಿ ಸಂಖ್ಯೆ 212) ಯಲ್ಲಿ ಆಯೋಜಿಸಲಾಗಿದೆ.
ಅಭ್ಯರ್ಥಿಗಳು ಸ್ವ ವಿವರಗಳೊಂದಿಗೆ ತಮ್ಮ ಹೆಸರು ನೊಂದಾಯಿಸಿಕೊಂಡು ಸದುಪಯೋಗ ಪಡೆದುಕೊಳ್ಳಲು ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08226-224430 ಹಾಗೂ ವೆಂಕಟೇಶ್ (ಮೊ. 8971856973) ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕೆ ಮತ್ತು ತರಬೇತಿ ಮತ್ತು ಉದ್ಯೋಗ ಇಲಾಖೆ ಅಧಿಕಾರಿ ಸಿ.ಎಂ. ಉಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ. 13ರಂದು ಜಿ.ಪಂ. ಅಧ್ಯಕ್ಷರ ಚುನಾವಣೆ

ಚಾಮರಾಜನಗರ, ಏ. 04 -  ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಏಪ್ರಿಲ್ 13ರಂದು ಮಧ್ಯಾಹ್ನ 12 ಗಂಟೆಗೆ ಚಾಮರಾಜನಗರದ ಜಿಲ್ಲಾ ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಚುನಾವಣೆ ಸಭೆ ಕರೆಯಲಾಗಿದೆ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಹೆಚ್ಚುವರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದೆ.

ಚಾ.ನಗರ : ಉದ್ದಿಮೆ ಪರವಾನಗಿ ಪಡೆಯಲು ಸೂಚನೆ

ಚಾಮರಾಜನಗರ, ಏ. 04:- ಪಟ್ಟಣ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸುತ್ತಿರುವ ಎಲ್ಲ ಉದ್ದಿಮೆದಾರರುಗಳಿಗೆ ನಗರ ಸ್ಥಳೀಯ ಸಂಸ್ಥೆಗಳಿಂದ ಸರಳವಾಗಿ ಉದ್ದಿಮೆ ಪರವಾನಗಿ ದೊರಕಿಸಿಕೊಡುವ ದೃಷ್ಠಿಯಿಂದ ಪೌರಸುಧಾರಣಾ ಕೋಶದಿಂದ ವ್ಯಾಪಾರ (ಉದ್ದಿಮೆ ಪರವಾನಗಿ) ಆನ್ ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.
ಎಲ್ಲ ಉದ್ದಿಮೆದಾರರು ಕಡ್ಡಾಯವಾಗಿ 2018-19ನೇ ಸಾಲಿಗೆ ಕಟ್ಟಡದ ಕಂದಾಯವನ್ನು ಪಾವತಿಸಿ ವ್ಯಾಪಾರ್ ಆನ್ ಲೈನ್ ತಂತ್ರಾಂಶದ ಮೂಲಕವೇ ಉದ್ದಿಮೆ ಪರವಾನಗಿಯನ್ನು ಪಡೆಯಬೇಕು ಮತ್ತು ನವೀಕರಿಸಿಕೊಳ್ಳಬೇಕು.
ಕರ್ನಾಟಕ ಪುರಸಭೆಗಳ ಅಧಿನಿಯಮ 1964 ಮತ್ತು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1978ರ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಎಲ್ಲ ಉದ್ದಿಮೆದಾರರು ಪರವಾನಗಿ ಪಡೆಯಬೇಕು. ಪರವಾನಗಿ ಪಡೆಯದಿರುವವರ ಹಾಗೂ ನವೀಕರಿಸದಿರುವ ಉದ್ದಿಮೆದಾರರ ಉದ್ದಿಮೆಗಳನ್ನು ಮುಚ್ಚಿಸಿ, ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, 5 April 2018

ಉತ್ತಮ ಜ್ಞಾನ, ಚಿಂತನೆ ಗುಣಗಳಲ್ಲಿ ಬಾಬು ಜಗಜೀವನರಾಮ್ ಪ್ರಮುಖರು : ಜಿ.ಪಂ. ಸಿಇಓ ಡಾ. ಕೆ. ಹರೀಶ್ ಕುಮಾರ್ (05-04-2018 )

ಉತ್ತಮ ಜ್ಞಾನ, ಚಿಂತನೆ ಗುಣಗಳಲ್ಲಿ ಬಾಬು ಜಗಜೀವನರಾಮ್ ಪ್ರಮುಖರು : ಜಿ.ಪಂ. ಸಿಇಓ ಡಾ. ಕೆ. ಹರೀಶ್ ಕುಮಾರ್  

ಚಾಮರಾಜನಗರ, ಏ. 05 - ಹುಟ್ಟಿನಿಂದ ಶ್ರೇಷ್ಠತೆ ಬರುವುದಿಲ್ಲ. ಗಳಿಸಿಕೊಂಡ ಜ್ಞಾನ ಉತ್ತಮ ಚಿಂತನೆಗಳಿಂದ ಶ್ರೇಷ್ಠತೆ ಪ್ರಾಪ್ತವಾಗುತ್ತದೆ. ಇಂತಹ ಗುಣಗಳನ್ನು ಹೊಂದಿರುವವರ ಪೈಕಿ ಡಾ. ಬಾಬು ಜಗಜೀವನರಾಂ ಅವರು ಪ್ರಮುಖರು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅಭಿಪ್ರಾಯಪಟ್ಟರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ. ಬಾಬು ಜಗಜೀವನ್‍ರಾಮ್ ಅವರು ಬಾಲ್ಯದಿಂದಲೇ ಉತ್ತಮ ಅಧ್ಯಯನ ಮಾಡಿದರು. ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಮಹಾಮೇಧಾವಿ ಎನಿಸಿಕೊಂಡರು. ಹಲವು ನ್ಯೂನತೆ ಹಾಗೂ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಎಲ್ಲವನ್ನು ಮೆಟ್ಟಿ ನಿಂತು ಅಗಾಧ ಸಾಧನೆ ಮಾಡಿದರು ಎಂದರು.
ಅಂದಿನ ಕಾಲಘಟ್ಟದಲ್ಲಿ ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮಗಾಂಧಿ, ಬಾಬು ಜಗಜೀವನರಾಮ್ ಅವರಂಥಹ ಮಹಾನ್ ವ್ಯಕ್ತಿಗಳು ಮಾನವೀಯ ಮೌಲ್ಯಗಳ ದಿಸೆಯಲ್ಲಿ ಚಿಂತನೆ ಮಾಡಿದರು. ಈ ಕಾರಣದಿಂದಲೇ ಎಲ್ಲರಿಗಿಂತ ವಿಭಿನ್ನವಾಗಿ ಗಮನ ಸೆಳೆಯುತ್ತಾರೆ. ಎಲ್ಲ ಕಷ್ಟವನ್ನು ಸಹಿಸಿಕೊಂಡು ಯಶಸ್ವಿಯಾಗಿದ್ದಾರೆ. ಇಂತಹ ಮಹನೀಯರು ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಬಾಬು ಜಗಜೀವನರಾಮ್ ಅವರು ಒಳ್ಳೆಯ ಶಿಕ್ಷಣ ಪಡೆದು ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಿದ್ದರು. ಸಾಮಾಜಿಕ ವ್ಯವಸ್ಥೆಯನ್ನು ತಿದ್ದುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಸಮಾನತೆ ಬಗ್ಗೆ ಸಾರಿದ ಬಾಬು ಜಗಜೀವನರಾಮ್ ಅವರು ಅನೇಕ ಉತ್ತಮ ಕೆಲಸಗಳನ್ನು ನಿರ್ವಹಿಸುವ ಮೂಲಕ ತಮ್ಮದೇ ಆದ ವಿಶಿಷ್ಠ ಛಾಪು ಮೂಡಿಸಿದ್ದಾರೆ. ಇವರ ವಿಚಾರಧಾರೆ ಹಾಗೂ ಉನ್ನತ ಧ್ಯೇಯಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ತಿಳಿದುಕೊಳ್ಳುವ ಅಗತ್ಯವಿದೆ. ಈ ದಿಸೆಯಲ್ಲಿ ಯುವ ಪೀಳಿಗೆ ಮುಂದಾಗಬೇಕೆಂದು ಗಾಯತ್ರಿ ಅವರು ಸಲಹೆ ಮಾಡಿದರು.
ಮುಖ್ಯ ಉಪನ್ಯಾಸ ನೀಡಿದ ಕೃಷಿ ಜಂಟಿ ನಿರ್ದೇಶಕರಾದ ಎಂ. ತಿರುಮಲೇಶ ಅವರು ಶೋಷಿತ ಸಮುದಾಯದಲ್ಲಿ ಕಷ್ಟ ವೈಫಲ್ಯಗಳ ಪರಿಸ್ಥಿತಿ ನಡುವೆಯೂ ಯಾವುದನ್ನೂ ಲೆಕ್ಕಿಸದೆ ಅಧ್ಯಯನ ಮಾಡಿ ಉನ್ನತ ಸ್ಥಾನಕ್ಕೆ ಏರಿದ ಮಹಾನ್ ನಾಯಕರಾದ ಡಾ. ಬಾಬು ಜಗಜೀವನರಾಮ್, ಅಂಬೇಡ್ಕರ್ ಸೇರಿದಂತೆ ಎಲ್ಲರ ಬಗ್ಗೆಯೂ ಇಂದಿನ ಯುವ ಸಮೂಹ ಅರಿಯಬೇಕಿದೆ. ಸ್ವಾಭಿಮಾನ, ಗುರಿ, ಸಂವಹನ ಕಲೆ, ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡು ಮೇರು ವ್ಯಕ್ತಿತ್ವದ ಪ್ರಭಾವವನ್ನು ಮನಸ್ಸುಗಳಿಗೆ ಹರಿಯಬಿಡಬೇಕಿದೆ ಎಂದರು.
ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಅನುಕೂಲವಲ್ಲದ ಸ್ಥಿತಿಯಲ್ಲಿಯೂ ಹಲವಾರು ನಾಯಕರು ಪರಿಶ್ರಮದಿಂದ ಹೇಗೆ ಮುಂಚೂಣಿಗೆ ಬಂದರು ಎಂಬ ಬಗ್ಗೆ ಗಂಭೀರ ಚಿಂತನೆ ಮಾಡಬೇಕಿದೆ. ಸೂಕ್ಷ್ಮ ಪರಿಸ್ಥಿತಿಯಲ್ಲಿಯೂ ಶಿಕ್ಷಣದಂತಹ ಪ್ರಮುಖ ವಿಷಯಗಳಿಗೆ ಒಲವು ತೋರಬೇಕಿದೆ. ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಸಿದ್ಧರಾಗಬೇಕಿದೆ. ಕೀಳರಿಮೆ ತೊರೆದು ಉನ್ನತ ಅಧ್ಯಯನ ಸ್ಥಾನಮಾನಗಳನ್ನು ಪಡೆಯಲು ದಿಟ್ಟ ನಿಲುವು ತಳೆಯಬೇಕು ಎಂದು ತಿರುಮಲೇಶ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಸತೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಿಂದ ಡಾ. ಬಾಬು ಜಗಜೀವನರಾಮ್ ಅವರ ಭಾವಚಿತ್ರ ಮೆರವಣಿಗೆಯು ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸಮಾವೇಶಗೊಂಡಿತು. 
ಏ. 15ರಂದು ವಸತಿಶಾಲೆಗಳ ಪ್ರವೇಶಕ್ಕೆ ಪರೀಕ್ಷೆ
ಚಾಮರಾಜನಗರ, ಏ. 05 - ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ, ಡಾ. ಬಿ.ಆರ್. ಅಂಬೇಡ್ಕರ್, ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ 2018-19ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶಕ್ಕೆ ಏಪ್ರಿಲ್ 15ರಂದು ಪ್ರವೇಶ ಪರೀಕ್ಷೆ ನಿಗದಿಯಾಗಿದೆ.
ಈ ಹಿಂದೆ ನಿಗದಿಯಾಗಿದ್ದ ಪ್ರವೇಶ ಪರೀಕ್ಷೆಗೆ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ತದನಂತರ ತಡೆಯಾಜ್ಞೆ ತೆರವುಗೊಳಿಸಿರುವುದರಿಂದ ಪ್ರವೇಶ ಪರೀಕ್ಷೆಯು ಏಪ್ರಿಲ್ 15ರಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಧಾನಸಭಾ ಚುನಾವಣೆ – 2018:
ಅಬಕಾರಿ ಅಕ್ರಮಗಳ ಕುರಿತು ದೂರು, ಮಾಹಿತಿ ನೀಡಿ

ಚಾಮರಾಜನಗರ, ಏ. 05 :- ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಬಕಾರಿ ಇಲಾಖೆಗೆ ಸಂಬಂಧಿಸಿದ ಅಕ್ರಮಗಳ ಬಗ್ಗೆ ದೂರು ಅಥವಾ ಯಾವುದೇ ಮಾಹಿತಿಗಳನ್ನು ಇಲಾಖೆಯ ಶುಲ್ಕ ರಹಿತ (ಟೋಲ್‍ಫ್ರೀ) ದೂರವಾಣಿ ಸಂಖ್ಯೆ 18004252550 ಗೆ ಕರೆ ಮಾಡಿ ತಿಳಿಸುವಂತೆ ಅಬಕಾರಿ ಇಲಾಖೆ ಉಪ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಏ. 6, 7ರಂದು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಜಾಥಾ

ಚಾಮರಾಜನಗರ, ಏ. 05 - ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸ್ವೀಪ್ ಸಮಿತಿ ವತಿಯಿಂದ ಏಪ್ರಿಲ್ 6 ಹಾಗೂ 7ರಂದು ನಗರದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 6ರಂದು ಬೆಳಿಗ್ಗೆ 10 ಗಂಟೆಗೆ ಚಾಮರಾಜೇಶ್ವರ ದೇವಸ್ಥಾನದ ಬಳಿ ಹಾಗೂ 7ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದ ಬಳಿ ಜಾಥಾ ಹೊರಡಲಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿಯ ಜಿಲ್ಲಾ ಅಧ್ಯಕ್ಷರೂ ಆದ ಡಾ. ಕೆ. ಹರೀಶ್ ಕುಮಾರ್ ಅವರು ಜಾಥಾಗೆ ಚಾಲನೆ ನೀಡಲಿದ್ದಾರೆ.
ತಾಲೂಕು ಪಂಚಾಯಿತಿ ವ್ಯಾಪ್ತಿಯ ಎಲ್ಲ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಸಹ ಹಾಜರಾಗುವಂತೆ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಏ. 05 -  ತೋಟಗಾರಿಕೆ ಇಲಾಖೆಯು ತೋಟಗಾರಿಕೆ ತರಬೇತಿ ಕೇಂದ್ರ, ಸೋಮನಹಳ್ಳಿ ಕಾವಲ್, ಹಾಸನ ಜಿಲ್ಲೆ ಮತ್ತು ತೋಟಗಾರಿಕೆ ಕೇಂದ್ರ, ರಂಗಸಮುದ್ರ, ಟಿ, ನರಸೀಪುರ ತಾಲೂಕು, ಮೈಸೂರು ಜಿಲ್ಲೆ ಇಲ್ಲಿ ರೈತ ಮಕ್ಕಳಿಗೆ ಮೇ 5 ರಿಂದ 2019ರ ಫೆಬ್ರವರಿ 28ರವರೆಗೆ 10 ತಿಂಗಳ ಅವಧಿಯ ತೋಟಗಾರಿಕೆ ತರಬೇತಿಯನ್ನು ನೀಡಲಿದೆ.
ಇಚ್ಚೆಯುಳ್ಳ ಅಭ್ಯರ್ಥಿಗಳು ನಗರದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ರಾಜ್ಯ ವಲಯ) ಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಏಪ್ರಿಲ್ 24ರ ಒಳಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ನಗರದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ಅಥವಾ ತೋಟಗಾರಿಕೆ ಉಪನಿರ್ದೇಶಕರು (ಜಿಪಂ) ಇವರನ್ನು ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ. 11ರ ಸಾಹಸ ಚಾರಣ ಕ್ರೀಡೆ ಮುಂದೂಡಿಕೆ

ಚಾಮರಾಜನಗರ, ಏ. 05 - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಏಪ್ರಿಲ್ 11 ರಿಂದ 13ರವರೆಗೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕುಂತಿಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸಾಹಸ ಚಾರಣ ಕ್ರೀಡೆಯನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08226-224932 ಹಾಗೂ ಮೊಬೈಲ್ 9482718278 ಅನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಎಂ. ಚಲುವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ. 9, 10ರಂದು ಸಮುದಾಯದತ್ತ ಶಾಲಾ ಕಾರ್ಯಕ್ರಮ

ಚಾಮರಾಜನಗರ, ಏ. 05 - ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 9ರಂದು ಪ್ರಾಥಮಿಕ ಶಾಲೆಯಲ್ಲಿ ಹಾಗೂ ಏಪ್ರಿಲ್ 10ರಂದು ಪ್ರೌಢಶಾಲೆಗಳಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಲಿದೆ. ಅಂದು ಶಾಲೆ ಮುಖ್ಯ ಶಿಕ್ಷಕರು ಪೋಷಕರನ್ನು ಆಹ್ವಾನಿಸಿ ವಿದ್ಯಾರ್ಥಿಗಳ ಕಲಿಕೆಯ ಪ್ರಗತಿ ನೋಟ, ಕುಂದುಕೊರತೆ ಇನ್ನಿತರ ವಿಷಯಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ.
ಬ್ಲಾಕ್ ಹಾಗೂ ಜಿಲ್ಲಾ ಹಂತದಲ್ಲಿ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳು, ಮಾರ್ಗದರ್ಶಕರು ಶಾಲಾ ಶೈಕ್ಷಣಿಕ ಅಭಿವೃದ್ಧಿಯ ಕುರಿತು ಎಸ್‍ಡಿಎಂಸಿ ಸದಸ್ಯರೊಂದಿಗೆ ನಡೆಸಬೇಕು. ಅಗತ್ಯ ನಿರ್ಣಯ ಕೈಗೊಂಡು ಅದರ ವರದಿಯನ್ನು ಕಳುಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮಾರ್ಗಸೂಚಿ ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Wednesday, 4 April 2018

ವಿಧಾನಸಭಾ ಚುನಾವಣೆ- 2018 ವಿಧಾನಸಭೆ ಚುನಾವಣೆ : 11 ಅಂತರಾಜ್ಯ ಚೆಕ್‍ಪೋಸ್ಟ್ ಸ್ಥಾಪನೆ (01-04-2018)

ವಿಧಾನಸಭಾ ಚುನಾವಣೆ- 2018
ವಿಧಾನಸಭೆ ಚುನಾವಣೆ : 11 ಅಂತರಾಜ್ಯ ಚೆಕ್‍ಪೋಸ್ಟ್ ಸ್ಥಾಪನೆ

ಚಾಮರಾಜನಗರ, ಏ. 01 - ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಜಿಲ್ಲೆಯ 11 ಕಡೆ ಅಂತರಾಜ್ಯ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಅದಕ್ಕೆ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರ:- ಪಾಲಾರ್ ಚೆಕ್‍ಪೋಸ್ಟ್ - ಬಸವರಾಜು, ಸೆಕ್ಟರ್ ಅಧಿಕಾರಿ, ಮೊ: 991677294, ಸದಾಶಿ, ಆರ್.ಎಫ್.ಒ ಮೊ: 8489748727, ಇವರೊಂದಿಗೆ ಮೊದಲನೇ ಪಾಳಿಯಲ್ಲಿ ಸುರೇಶ್‍ಕುಮಾರ್, ಮೊ: 997283701, ಪರಶಿವಸ್ವಾಮಿ ಮೊ: 9739225485(ಪೊಲೀಸ್ ಸಿಬ್ಬಂದಿ), ರಾಜೇಶ್, ಪಿ.ಡಿ.ಒ, ಮೊ: 9620155590. ಮಾದೇಶ, ಡಿ.ಎಫ್.ಆರ್.ಒ, ಮೊ: 9047422677. ರಾಜು, ಅಬಕಾರಿ ರಕ್ಷಕರು ಇವರು ಕಾರ್ಯನಿರ್ವಹಿಸಲಿದ್ದಾರೆ.
2ನೇ ಪಾಳಿಯಲ್ಲಿ ಸಿದ್ದರಾಮ, ಮೊ: 9916282554, ನಂಜುಂಡಸ್ವಾಮಿ, ಮೊ: 9743398420(ಪೊಲೀಸ್ ಸಿಬ್ಬಂದಿ), ವಿನೋದ್, ಗ್ರಾಮ ಲೆಕ್ಕಿಗರು, ಮೊ: 73534977749. ವೆಂಕಟೇಶ್, ಅರಣ್ಯ ರಕ್ಷಕರು, ಮೊ: 9845455659.
ಮೂರನೇ ಪಾಳಿಯಲ್ಲಿ ನೀಲಕಂಠ, ಮೊ: 9972843701, ಲೋಕೇಶ್,ಮೊ: 9739225485(ಪೊಲೀಸ್ ಸಿಬ್ಬಂದಿ), ಮಲ್ಲೇಶ್, ಬಿಲ್ ಕಲೆಕ್ಟರ್ ಮೊ: 8277478011, ಕಿರಣ್, ಅಬಕಾರಿ ರಕ್ಷಕ ಇವರು ಕರ್ತವ್ಯ ನಿರ್ವಹಿಸಲಿದ್ದಾರೆ.
ಹೊಗೇನಕಲ್ ಚೆಕ್‍ಪೋಸ್ಟ್- ಶಿವಪ್ರಸಾದ್, ಸೆಕ್ಟರ್ ಅಧಿಕಾರಿ, ಮೊ: 7204537500, ಶಂಕರ್, ಆರ್.ಎಫ್.ಒ, ಮೊ: 9448336954, ಇವರೊಂದಿಗೆ ಮೊದಲನೇ ಪಾಳಿಯಲ್ಲಿ ಬೈರಪ್ಪ, ಮೊ: 9591045639, ಮಣಿವಣ್ಣನ್(ಪೊಲೀಸ್ ಸಿಬ್ಬಂದಿ), ರಾಜಕುಮಾರ್, ಪಿ.ಡಿ.ಒ, ಮೊ: 9481171429, ಬೈರರಾಜು, ಡಿ.ಎಫ್.ಅರ್.ಒ, ಮೊ: 8277578294,
2ನೇ ಪಾಳಿಯಲ್ಲಿ ರಾಹುಲ್ ಪೂಜಾರಿ, ಮೊ: 8497097290, ಚರಣ್(ಪೊಲೀಸ್ ಸಿಬ್ಬಂದಿ), ತಂಗರಾಜು, ಬಿಲ್ ಕಲೆಕ್ಟರ್, ಮೊ: 9740569546, ಸತೀಶ್, ಅರಣ್ಯ ರಕ್ಷಕ, ಮೊ: 9483365763.
ಮೂರನೇ ಪಾಳಿಯಲ್ಲಿ ಮನುಸ್ವಾಮಿ, ಮೊ: 9591404563, ಅಪ್ಪುಸ್ವಾಮಿ(ಪೊಲೀಸ್ ಸಿಬ್ಬಂದಿ), ಮಾದೇಶ, ಬಿಲ್ ಕಲೆಕ್ಟರ್, ಮೊ: 9482740168. ಚೆನ್ನಪ್ಪ, ಅರಣ್ಯ ರಕ್ಷಕ, ಮೊ: 9481641856 ಕಾರ್ಯನಿರ್ವಹಿಸಲಿದ್ದಾರೆ.
ನಾಲಾ ರೋಡ್ ಚೆಕ್‍ಪೋಸ್ಟ್- ಗಂಗಾಧರ್, ಸೆಕ್ಟರ್ ಅಧಿಕಾರಿ, ಮೊ: 9481536318. ರಾಜೇಶ್ ಗಾವಲ್, ಆರ್,ಎಫ್.ಒ, ಮೊ: 8762421941 ಇವರೊಂದಿಗೆ ಮೊದಲ ಪಾಳಿಯಲ್ಲಿ ಈಶ್ವರ, ಮೊ: 9611012547. ಮಹದೇವಸ್ವಾಮಿ, ಮೊ: 8904518508(ಪೊಲೀಸ್ ಸಿಬ್ಬಂದಿ), ಆರ್ಮುಗಂ, ಬಿಲ್ ಕಲೆಕ್ಟರ್, ಮೊ: 7849093491. ರಾಮು, ಡಿ.ಎಫ್.ಆರ್.ಒ, ಮೊ: 9379636648.
2ನೇ ಪಾಳಿಯಲ್ಲಿ ಸಿದ್ದರಾಜೇಗೌಡ, ಮೊ: 9341843585, ಮಂಜುನಾಥ, ಮೊ: 8970899018(ಪೊಲೀಸ್ ಸಿಬ್ಬಂದಿ), ನಂಜುಂಡಸ್ವಾಮಿ, ಪಿ.ಡಿ.ಒ, ಮೊ: 9742624313, ಶಾಕಪ್ಪ ಬೆಸೂರ, ಅರಣ್ಯ ರಕ್ಷಕ, ಮೊ: 8762665996.
ಮೂರನೇ ಪಾಳಿಯಲ್ಲಿ ಶಿವಕುಮಾರ, ಮೊ: 9611012547, ಕಿರಣ್, ಮೊ: 8904518508(ಪೊಲೀಸ್ ಸಿಬ್ಬಂದಿ), ಅಂತೋಣಿ, ಬಿಲ್ ಕಲೆಕ್ಟರ್, ಮೊ: 9741044034. ಮಹೇಶ್, ಅರಣ್ಯ ರಕ್ಷಕ, ಮೊ: 9880984270. ಕೃಷ್ಣಮೂರ್ತಿ, ಅಬಕಾರಿ ರಕ್ಷಕ, ಮೊ: 9916628875 ಕಾರ್ಯನಿರ್ವಹಿಸಲಿದ್ದಾರೆ.
ಅರ್ಧನಾರಿಪುರ ಚೆಕ್ ಪೋಸ್ಟ್ – ಎಸ್. ಮಹದೇವು, ಸೆಕ್ಟರ್ ಅಧಿಕಾರಿ, ಮೊ: 9980365942, ಶಿವರಾಮ್, ಆರ್.ಎಫ್.ಒ, ಮೊ: 9632681551 ಇವರೊಂದಿಗೆ ಮೊದಲ ಪಾಳಿಯಲ್ಲಿ ಪ್ರದೀಪ್‍ಕುಮಾರ್ ಮೊ: 7406306806. ಮಾದೇಶ(ಪೊಲೀಸ್ ಸಿಬ್ಬಂದಿ), ವೆಂಕಟೇಶ, ಕಾರ್ಯದರ್ಶಿ, ಮೊ: 9731073517. ವಿಶ್ವ, ಡಿ.ಎಫ್.ಅರ್.ಒ, ಮೊ: 9632194504,
2ನೇ ಪಾಳಿಯಲ್ಲಿ ಸಿದ್ದರಾಜು, ಮೊ: 9141769933, ಶಿವರಾಜು(ಪೊಲೀಸ್ ಸಿಬ್ಬಂದಿ), ರಾಚಪ್ಪ, ಬಿಲ್ ಕಲೆಕ್ಟರ್, ಮೊ: 8105693030. ಮಹಾಲಿಂಗಪ್ಪ, ಅರಣ್ಯ ರಕ್ಷಕರು, ಮೊ: 9108852399.
3ನೇ ಪಾಳಿಯಲ್ಲಿ ಶ್ರೀನಿವಾಸಮೂರ್ತಿ, ಮೊ: 7406306806. ಮಾದೇಶ(ಪೊಲೀಸ್ ಸಿಬ್ಬಂದಿ), ರಾಮು.ಪಿ.ಡಿ.ಒ, ಮೊ: 9611130448. ರವಿ, ಅರಣ್ಯ ರಕ್ಷಕರು, ಮೊ: 9980036063. ಎಂ. ರಮೇಶ್, ಅಬಕಾರಿ ರಕ್ಷಕರು, ಮೋ; 9164748472 ಇವರು ಕಾರ್ಯನಿರ್ವಹಿಸಲಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರ:- ಬಿಸಿಲವಾಡಿ ಚೆಕ್‍ಪೋಸ್ಟ್- ಬಿ.ಎಸ್. ರಾಮಸ್ವಾಮಿ, ಸೆಕ್ಟರ್ ಅಧಿಕಾರಿ, ಮೊ: 9193831583 ಇವರೊಂದಿಗೆ ಮೊದಲ ಪಾಳಿಯಲ್ಲಿ ಮಂಜುನಾಥ(ಪೊಲೀಸ್ ಸಿಬ್ಬಂದಿ), ಮೊ: 9886567244. ಟಿ.ಎಸ್. ನಾಗಭೂಷಣ, ಪಿ.ಡಿ.ಒ, ಮೊ: 8971343301. 2ನೇ ಪಾಳಿಯಲ್ಲಿ ಸ್ವಾಮಿ, ಪೊಲೀಸ್ ಸಿಬ್ಬಂದಿ, ಮೊ: 8310590014. ಆರ್. ಮಹೇಶ್, ಪಿ.ಡಿ.ಒ, ಮೊ: 8904738826. ಮೂರನೇ ಪಾಳಿಯಲ್ಲಿ ಭರತ್‍ಕುಮಾರ್, ಪೊಲೀಸ್ ಸಿಬ್ಬಂದಿ. ಗುರುಸಿದ್ದಪ್ಪ, ಗ್ರಾಮ ಲೆಕ್ಕಿಗರು, ಮೊ: 94481382948.
ಬಂದೀಗೌಡನಹಳ್ಳಿ ಚೆಕ್‍ಪೋಸ್ಟ್ - ಬಿ.ಎಸ್. ರಾಮಸ್ವಾಮಿ, ಸೆಕ್ಟರ್ ಅಧಿಕಾರಿ, ಮೊ: 9193831583 ಇವರೊಂದಿಗೆ ಮೊದಲ ಪಾಳಿಯಲ್ಲಿ ದೊರೆಸ್ವಾಮಿ, ಪೊಲೀಸ್ ಸಿಬ್ಬಂದಿ, ಮೊ: 9886567244. ನವೀನ್, ಕಾರ್ಯದರ್ಶಿ. 2ನೇ ಪಾಳಿಯಲ್ಲಿ ಶಿವರಾಮಯ್ಯ, ಪೊಲೀಸ್ ಸಿಬ್ಬಂದಿ, ಮೊ: 9449715028. ಪ್ರವೀಣ್‍ಕುಮಾರ್, ಗ್ರಾಮ ಲೆಕ್ಕಿಗರು, ಮೊ: 9448772882. 3ನೇ ಪಾಳಿಯಲ್ಲಿ ರವಿ, ಪೊಲೀಸ್ ಸಿಬ್ಬಂದಿ. ವಿಜಯಕುಮಾರ್, ಗ್ರಾಮ ಲೆಕ್ಕಿಗರು, ಮೊ: 8105069210 ಕಾರ್ಯನಿರ್ವಹಿಸಲಿದ್ದಾರೆ.
ಚಿಕ್ಕಹೊಳೆ ಚೆಕ್‍ಪೋಸ್ಟ್ – ರಾಘವೇಂದ್ರ, ಸೆಕ್ಟರ್ ಅಧಿಕಾರಿ, ಮೊ: 948209406 ಇವರೊಂದಿಗೆ ಮೊದಲನೇ ಪಾಳಿಯಲ್ಲಿ ರಂಗೇಗೌಡ, ರಾಜೇಂದ್ರ, ಪೊಲೀಸ್ ಸಿಬ್ಬಂದಿ. ಶಿವಮೂರ್ತಿ, ಪಿ.ಡಿ.ಒ, ಮೊ: 9008082520. 2ನೇ ಪಾಳಿಯಲ್ಲಿ ದೊರೆಸ್ವಾಮಿ, ಪೊಲೀಸ್ ಸಿಬ್ಬಂದಿ, ಮೊ: 9900279784. ಮಲ್ಲಿಕಾರ್ಜುನ, ಪಿ.ಡಿ.ಒ, ಮೊ: 9482369878. 3ನೇ ಪಾಳಿಯಲ್ಲಿ ಶಿವಶಂಕರಮೂರ್ತಿ, ಪೊಲೀಸ್ ಸಿಬ್ಬಂದಿ, ಮೊ: 9538635533. ರಾಜೇಶ್ ನಾಯ್ಕ, ಗ್ರಾಮ ಲೆಕ್ಕಿಗರು, ಮೊ: 9972915444 ಇವರು ಕರ್ತವ್ಯ ನಿರ್ವಹಿಸಲಿದ್ದಾರೆ.
ಪುಣಜನೂರು ಚೆಕ್‍ಪೋಸ್ಟ್ - ರಾಘವೇಂದ್ರ, ಸೆಕ್ಟರ್ ಅಧಿಕಾರಿ, ಮೊ: 948209406 ಇವರೊಂದಿಗೆ ಮೊದಲನೇ ಪಾಳಿಯಲ್ಲಿ ಮಹದೇವಪ್ಪ, ಪೊಲೀಸ್ ಸಿಬ್ಬಂದಿ, ಮೊ: 8453682258. ಮಾದಪ್ಪ, ಕಾರ್ಯದರ್ಶಿ, ಮೊ: 9972727075. ಜೆ.ಡಿ. ನಾಗೇಶ, ಅರಣ್ಯ ರಕ್ಷಕ, ಮೊ: 7829225301. 2ನೇ ಪಾಳಿಯಲ್ಲಿ ರೇವಣ್ಣಸ್ವಾಮಿ, ಪೊಲೀಸ್ ಸಿಬ್ಬಂದಿ. ಚೆನ್ನಬಸವಯ್ಯ, ಪಿ.ಡಿ.ಒ. ರವಿ, ಡಿ.ಎಫ್.ಆರ್.ಒ, ಮೊ: 9141511030. 3ನೇ ಪಾಳಿಯಲ್ಲಿ ಸಿದ್ದರಾಜನಾಯ್ಕ, ಪೊಲೀಸ್ ಸಿಬ್ಬಂದಿ, ಮೊ: 9591476143. ರಾಜಶೇಖರಮೂರ್ತಿ, ಗ್ರಾಮ ಲೆಕ್ಕಿಗರು, ಮೊ: 8105884804. ಆರ್. ಚಂದ್ರಕುಮಾರ್, ಡಿ.ಎಫ್.ಆರ್.ಒ, ಮೊ: 9845037944. ರಾಜೇಶ್, ಅಬಕಾರಿ ರಕ್ಷಕರು, ಮೊ: 7204415220 ಇವರು ಕಾರ್ಯನಿರ್ವಹಿಸಲಿದ್ದಾರೆ.
ಮೂಡಲ ಹೊಸಹಳ್ಳಿ ಚೆಕ್‍ಪೋಸ್ಟ್ – ಜಗದೀಶ್, ಸೆಕ್ಟರ್ ಅಧಿಕಾರಿ, ಮೊ: 9972584272 ಇವರೊಂದಿಗೆ ಮೊದಲ ಪಾಳಿಯಲ್ಲಿ ಫರ್ಹತ್ ಉಲ್ಲಾ ಷರೀಫ್, ಪೊಲೀಸ್ ಸಿಬ್ಬಂದಿ, ಮೊ: 9964305997. ಕೆ.ವಿ. ಉಮೇಶ, ಪಿ.ಡಿ.ಒ, ಮೊ: 9880933616. 2ನೇ ಪಾಳಿಯಲ್ಲಿ ಕುಮಾರಸ್ವಾಮಿ, ಪೊಲೀಸ್ ಸಿಬ್ಬಂದಿ, ಮೊ: 9964090848. ಮಹದೇವಸ್ವಾಮಿ, ಪೊಲೀಸ್ ಸಿಬ್ಬಂದಿ. ಎಫ್.ಆರ್. ಷರೀಫ್, ಪಿ.ಡಿ.ಒ, ಮೊ: 9483347476. ಮೂರನೇ ಪಾಳಿಯಲ್ಲಿ ಸಚಿನ್ ಮಿರಾಜ್‍ಕರ್, ಗ್ರಾಮ ಲೆಕ್ಕಿಗರು, ಮೊ: 9686468641. ಇವರು ಕರ್ತವ್ಯ ನಿರ್ವಹಿಸಲಿದ್ದಾರೆ.
ಮೂಲೆಹೊಳೆ ಚೆಕ್ ಪೋಸ್ಟ್ – ಎ.ಸಿ. ಶಿವರಾವi, ಸೆಕ್ಟರ್ ಅಧಿಕಾರಿ, ಮೊ: 9448414564 ಇವರೊಂದಿಗೆ ಮೊದಲ ಪಾಳಿಯಲ್ಲಿ ವೆಂಕಟೇಶÀಮೂರ್ತಿ, ಸುರೇಶ, ಮೊ: 997283701, ಪೊಲೀಸ್ ಸಿಬ್ಬಂದಿ. ಭಾವಂತಾರ್ಯ, ಗ್ರಾಮ ಲೆಕ್ಕಿಗರು. 2ನೇ ಪಾಳಿಯಲ್ಲಿ ಶಿವನಂಜಪ್ಪ, ಶಿವಣ್ಣ, ಪೊಲೀಸ್ ಸಿಬ್ಬಂದಿ. ಹನುಮಯ್ಯ, ದ್ವಿ.ದ.ಸ, ಮೊ: 8150811161. 3ನೇ ಪಾಳಿಯಲ್ಲಿ ಮಹದೇವಪ್ರಸಾದ್, ಜಿ.ಬಿ. ಶಿವಯ್ಯ, ಪೊಲೀಸ್ ಸಿಬ್ಬಂದಿ. ನಾರಾಯಣ, ಅರಣ್ಯ ರಕ್ಷಕ, ಮೊ: 9591448401. ಎನ್. ಜಯಪ್ರಕಾಶ್, ಅರಣ್ಯ ರಕ್ಷಕ, ಮೊ: 9945943535 ಇವರು ಕಾರ್ಯನಿರ್ವಹಿಸಲಿದ್ದಾರೆ.
ಬಂಡೀಪುರ ಚೆಕ್ ಪೋಸ್ಟ್ - ಪಿ. ನಂದೀಶ್, ಸೆಕ್ಟರ್ ಅಧಿಕಾರಿ, ಮೊ: 9480695112 ಇವರೊಂದಿಗೆ ಮೊದಲ ಪಾಳಿಯಲ್ಲಿ ಸಿದ್ದಪ್ಪ, ಮಲ್ಲುಸ್ವಾಮಿ, ಪೊಲೀಸ್ ಸಿಬ್ಬಂದಿ. ಸದ್ದಾಂ ಹುಸೇನ್, ಗ್ರಾಮ ಲೆಕ್ಕಿಗರು, ಮೊ: 9972515183. 2ನೇ ಪಾಳಿಯಲ್ಲಿ ಜಗದೀಶ, ರಾಜಯ್ಯ, ಪೊಲೀಸ್ ಸಿಬ್ಬಂದಿ. ಮಹದೇವಯ್ಯ, ಕಾರ್ಯದರ್ಶಿ, ಮೊ: 8105922401. 3ನೇ ಪಾಳಿಯಲ್ಲಿ ಗಣೇಶ, ಮೊ: 9986729981, ನಂಜುಂಡಸ್ವಾಮಿ, ಪೊಲೀಸ್ ಸಿಬ್ಬಂದಿ. ಮಂಜುನಾಥ ಮಲ್ಲರಾಜರೇ, ಅರಣ್ಯ ರಕ್ಷಕ, ಮೊ: 7760326972. ಎಂ. ಮಂಜುನಾಥ, ಅಬಕಾರಿ ರಕ್ಷಕ, ಮೊ: 9743188234 ಇವರು ಕಾರ್ಯನಿರ್ವಹಿಸಲಿದ್ದಾರೆ. 

ಮಾದರಿ ನೀತಿ ಸಂಹಿತೆ ಘಟಕ ರಚನೆ

ಚಾಮರಾಜನಗರ, ಏ. 01 - ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ರ ಸಂಬಂಧ ಜಿಲ್ಲಾ ಮಟ್ಟದ ಮಾದರಿ ನೀತಿ ಸಂಹಿತೆ ಘಟಕವನ್ನು ರಚಿಸಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವನಾಧಿಕಾರಿಯವರಾದ ಬಿ.ಬಿ.ಕಾವೇರಿ (ಮೊ: 9480010123) ಅವರು ಮಾದರಿ ನೀತಿ ಸಂಹಿತೆ ಘಟಕದ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ (ಮೊ: 9480804601), ಜಿಲ್ಲಾ ಆದಾಯ ತೆರಿಗೆ ಅಧಿಕಾರಿ ರಂಗನಾಥ್ (ಮೊ: 8762301094), ಜಿಲ್ಲಾ ವಾಣಿಜ್ಯ ತೆರಿಗೆ ಅಧಿಕಾರಿ ಉದಯ್ ಕುಮಾರ್ (ಮೊ: 9449174676), ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಎ.ಎಲ್. ನಾಗೇಶ್ (ಮೊ: 9449597179), ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಹಾಗೂ ಮಾದರಿ ನೀತಿ ಸಂಹಿತೆ ಜಿಲ್ಲಾ ನೋಡೆಲ್ ಅಧಿಕಾರಿ ಎಂ.ತಿರುಮಲೇಶ್ (ಮೊ: 8277930760) ಅವರು ಘಟಕದ ಸದಸ್ಯರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ. 
 



ಚಾಮರಾಜನಗರದಲ್ಲಿ ಪೊಲೀಸ್ ಧ್ವಜದಿನಾಚರಣೆ (02-04-2018)

     ಚಾಮರಾಜನಗರದಲ್ಲಿ ಪೊಲೀಸ್ ಧ್ವಜದಿನಾಚರಣೆ 



ಚಾಮರಾಜನಗರ ಏ.02-  ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಇರಬೇಕಾದರೆ ಪೋಲಿಸರು ಸಲ್ಲಿಸುವ ಸೇವೆ ಮಹತ್ವವಾದದ್ದು.  ಪೋಲಿಸ್ ಸೇವೆ ಇಲ್ಲದೆ ಹೊದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಅರಜಕಥೆ ಅ ಶಾಂತಿ ಉಂಟಾಗುತ್ತದೆ. ಯಾವುದೇ ಗುಂಪುಗಾರಿಕೆ, ಕೋಮುಗಲಭೆಯಾಗಿರಬಹುದು, ಏನೆ ಗಲಾಟೆಯಾದರು  ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡದ್ದಿದ್ದಾರೆ ಅದರ ಹೊಣೆಯನ್ನು ಪೋಲಿಸ್‍ಇಲಾಖೆ ಹೊರಬೇಕಾಗುತ್ತದೆ. ಎಂದು  ಗೌರವಾನ್ವಿತ ಜಿಲ್ಲಾ ಸತ್ರ ನ್ಯಾಯಾಧೀಶಾರಾದ ಜಿ.ಬಸವರಾಜು ಅಭಿಪ್ರಾಯಪಟ್ಟರು.

ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ತಮ್ಮ ಜೀವವನ್ನೆ ಮುಡುಪಾಗಿಟ್ಟು ಹೋರಾಡುವಂತಹ ಅನೇಕ ಸಂದರ್ಭಗಳು ಬರುತ್ತದೆ ಅಂತಹ ಸಂದರ್ಭದಲ್ಲಿ ಅನೇಕ ಪೋಲಿಸರು ತಮ್ಮ ಜೀವವನ್ನೆ ಕಳೆದು ಕೊಂಡ್ಡಿದ್ದಾರೆ. ಕೆಲವರು ಅಂಗವಿಕಲಾರು ಅಗಿದ್ದಾರೆ. ಅಂತವರಿಗೆ ಧ್ವಜಾ ದಿನಾಚರಣೆ ಮೂಲಕ ಹಣ ಸಂಗ್ರಹಿಸಿ ಅ ಸಂತ್ರಸ್ಥರಿಗೆ ಹಾಗೂ ಸಿಬಂದ್ದಿಯಾವರಿಗೆ ಸಹಯ ದಾನವನವನ್ನು ಕೊಡುತ್ತಿರುವುದು ಶಾಘನಿಯವಾಗಿದೆ.  ಪೋಲಿಸ್ ಇಲಾಖೆಯ ಪ್ರಭು ಅವರು ವರಿಷ್ಠಾಧಿಕಾರಿಗಳ ಅತ್ತಿ ಮನವಿಮಾಡಿಕೊಂಡರುನಿವೃತ್ತ ಪೋಲಿಸ್ ಸಿಬಂದ್ದಿಗಳಿಗೆ ಅರೋಗ್ಯ ಭಾಗ್ಯ ಯೋಜನೆಯಡಿಲ್ಲಿ ಸೌಲಭ್ಯ ಸಿಗುವಂತಗಬೇಕು ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಮನವಿಯನ್ನು ಪರಿಗಣಿಸಿ ಸರ್ಕಾರಕ್ಕೆ ಸೂಕ್ತ ಶಿಪಾರಸ್ತು ಮಾಡಿದರೆ ಎಲ್ಲಾ ನಿವೃತ್ತ ಪೋಲಿಸ್ ಅಧಿಕಾರಿಗಳಿಗೆ ಈ ಆರೋಗ್ಯ ಭಾಗ್ಯ ಯೋಜನೆ ಲಾಭ ಸಿಗಲಿದೆ ಎಂದು ತಿಳಿಸಿದರು.
ಬೇರೆ ಜಿಲ್ಲೆಗಳಿಂದ ಬರುವ ಪೋಲಿಸ್ ಅಧಿಕಾರಿಗಳಿಗೆ ವಿಶ್ರಾಂತಿ ಗೃಹದ ವ್ಯವಸ್ಥೆಯನ್ನು ತಮ್ಮ ಮಿತಿಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ವರಿಷ್ಠಾಧಿಕಾರಿಗಳು ಅವರ ಮನವಿಯನ್ನು ಪರಿಶೀಲಿಸಿ ಎಂದು ತಿಳಿಸಿದರು


       ಪೊಲೀಸ್ ಧ್ವಜಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಮಾತನಾಡಿ ಗಡಿಭಾಗದಲ್ಲಿ ರಕ್ಷಣಾ ಇಲಾಖೆಗಳು ಹೇಗೆ ಸೇವೆಲ್ಲಿಸುತ್ತಿದ್ದೆಯೊ ಹಾಗೆಯೆ ನಮೋಡನೆ ಪೋಲಿಸ್ ಇಲಾಖೆ ಕರ್ತವ್ಯ ನಿರ್ವಹಿಸುತ್ತಿದೆ. ರಾತ್ರಿ ಹಗಲು ಎನ್ನದೆ 24 ಗಂಟೆಗಳ ಕಾಲ ಸೇವೆಸಲ್ಲಿಸುತ್ತಿರ ಇಲಾಖೆ ಪೋಲಿಸ್ ಇಲಾಖೆ ಎಲ್ಲಾ ಇಲಾಖೆಗಳು ಸರ್ಕಾರದ ಇಲಾಖೆಗಳಿರಬಹುದು ಅಥವ ಸಾರ್ವನಿಕರಿರ ಬಹುದು ನಿಮ್ಮ ಸೇವೆಗಳನ್ನು ಸ್ಮರಿಸುವ ದಿನವಾಗಿದೆ ಎಂದು ತಿಳಿಸಿದರು.
ಶಾಂತಿಯುತವಾಗಿ ಜೀವನ ನಡೆಸಬೇಕಾದರೆ ಪೋಲಿಸ್ ಇಲಾಖೆ ಸಹಯ ಬಹಳ ಮುಖ್ಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೋಲಿಸ್ ಇಲಾಖೆ ಪಾತ್ರ ಬಹಳ ಮುಖ್ಯವಾಗಿದೆ ಧ್ವಜಾ ದಿನಾಚರಣೆಯಲ್ಲಿ ನಿವೃತ್ತ ನೌಕರರನ್ನು ಗೌರವಿಸುತ್ತಿರುವುದು ಸಂತೋಷದ ವಿಷಯವಾಗಿದೆ ಸರ್ಕಾರದಿಂದ ಪಡೆಯುವ ಸವಲತ್ತುಗಳನ್ನು ಪಡೆದು ಸಧುಪಯೋಗ ಪಡೆದುಕೊಳ್ಳಿ ಈ ಧ್ವಜಾ ದಿನಾಚರಣೆಯ ಶುಭಾಷಯಗಳು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಆರ್.ಎಸ್.ಐ (ಡಿ.ಎ.ಆರ್.ಚಾಮರಾಜನಗರ) ಎಂ.ಪ್ರಭು ಭಾಗವಹಿಸಿದ್ದರು. ಹೆಚ್ಚುವರಿ ಎಸ್.ಪಿ. ಗೀತಾಪ್ರಸನ್ನ ಹಾಜರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.

Tuesday, 3 April 2018

ವಿಧಾನಸಭಾ ಚುನಾವಣೆ- 2018 ವಿದ್ಯುನ್ಮಾನ ಮತಯಂತ,್ರ ವಿವಿ ಪ್ಯಾಟ್ ಕುರಿತು ಜಾಗೃತಿ ಕಾರ್ಯಕ್ರಮ (03-04-2018)

ವಿಧಾನಸಭಾ ಚುನಾವಣೆ- 2018
ವಿದ್ಯುನ್ಮಾನ ಮತಯಂತ,್ರ ವಿವಿ ಪ್ಯಾಟ್ ಕುರಿತು ಜಾಗೃತಿ ಕಾರ್ಯಕ್ರಮ

ಚಾಮರಾಜನಗರ, ಏ. 03- ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಹಾಗೂ ಮತದಾರರಿಗೆ ಮತ ಹಾಕಿದ ಬಗ್ಗೆ ಖಾತರಿಪಡಿಸುವ ವಿವಿ ಪ್ಯಾಟ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಇಂದು ನಡೆಯಿತು.
ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ಕಾರ್ಯವಿಧಾನಗಳ ಕುರಿತು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್À ಅವರು ವಿವರಿಸಿದರು.
ಜಿಲ್ಲೆಯಲ್ಲಿ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‍ನ್ನು ಚುನಾವಣೆಯಲ್ಲಿ ಬಳಸಲಾಗುತ್ತದೆ. ಈಗಾಗಲೇ ಶೇ. 90ರಷ್ಟು ಮತಯಂತ್ರಗಳು ಬಂದಿದ್ದು ಪ್ರಥಮ ಸುತ್ತಿನ ಪರೀಕ್ಷಾ ಕಾರ್ಯವನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲಾಗಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೂ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ಕಾರ್ಯನಿರ್ವಹಿಸುವ ವಿಧಾನಗಳ ಕುರಿತು ಮಾಹಿತಿ ನೀಡಲಾಗಿದೆ ಎಂದರು.
ಜನರಿಗೆ ವಿದ್ಯುನ್ಮಾನ ಮತಯಂತ್ರ ಹಾಗೂ ಮತದಾರರು ಅವರು ಚಲಾಯಿಸಿದ ಮತ ದಾಖಲಾಗಿದೆಯೇ ಎಂಬ ಬಗ್ಗೆ ಖಾತರಿಪಡಿಸುವ ವಿವಿ ಪ್ಯಾಟ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕಿದೆ. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ವಿವಿಧ ಹಂತಗಳ ಮೂಲಕ ತಿಳಿಸಲಾಗುತ್ತಿದೆ. ಇದಕ್ಕೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ ಮತದಾರರಿಗೆ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ಬಳಕೆ ಕಾರ್ಯವಿಧಾನಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿಯೂ ವ್ಯಾಪಕವಾಗಿ ಸ್ವೀಪ್ ಸಮಿತಿಯಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕಾರ್ಯಕ್ರಮ ಆಯೋಜನೆಗೆ ಮೊದಲು ಜನರಿಗೆ ಮಾಹಿತಿ ನೀಡಲಾಗುತ್ತದೆ ಎಂದರು.
ಚುನಾವಣಾ ಸಂಬಂಧ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹಿರಾತು ಇನ್ನಿತರ ಪ್ರಕಟಣೆಗೆ ಅನುಮತಿ ಪಡೆಯಬೇಕಿದೆ. ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲ್ವಿಚಾರಣಾ ಸಮಿತಿಯು (ಎಂಸಿಎಂಸಿ) ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗಿದೆ. ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಎಂಸಿಎಂಸಿಯಿಂದ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಿದೆ. ಪತ್ರಿಕೆಗಳ ಜಾಹಿರಾತನ್ನು ಸಹ ಅಭ್ಯರ್ಥಿಗಳ ವೆಚ್ಚಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದರು.
ಬಿಇಎಲ್ ತಂತ್ರಜ್ಞರಾದ ವೆಂಕಟರಾಜು ಹಾಗೂ ಶ್ರೀನಿವಾಸ್ ಅವರು ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ ನೀಡಿ ಮತದಾರ ಅಭ್ಯರ್ಥಿಗೆ ಮತ ಹಾಕಿದ ಬಳಿಕ ಅವರು ಹಾಕಿದ ಮತ ನಿರ್ಧಿಷ್ಟ ಅಭ್ಯರ್ಥಿಗೆ ದಾಖಲಾಗಿದೆಯೇ ಎಂಬುದು ಅವರೇ ವಿವಿ ಪ್ಯಾಟ್ ನಲ್ಲಿ ವೀಕ್ಷಣೆ ಮಾಡಲು ಅವಕಾಶವಿದೆ. ಏಳು ಸೆಕೆಂಡ್‍ಗಳ ಕಾಲ ಅಭ್ಯರ್ಥಿಯ ಕ್ರಮ ಸಂಖ್ಯೆ, ಚಿಹ್ನೆ, ಹೆಸರು ಮತದಾರನಿಗೆ ಗೋಚರವಾರಲಿದೆ. ಬಳಿಕ ವಿವರವುಳ್ಳ ಚೀಟಿಯು ಬಾಕ್ಸ್ ಒಳಗೆಯೇ ಸಂಗ್ರಹವಾಗುತ್ತದೆ ಎಂದು ವಿವರಿಸಿದರು.
ಮತದಾನಕ್ಕೂ ಮೊದಲು ಅಣಕು ಮತದಾನಕ್ಕೆ ಅವಕಾಶ ನೀಡಿ ಮತಯಂತ್ರಗಳನ್ನು ಪರೀಕ್ಷಿಸಲಾಗುತ್ತದೆ. ಬೆಳಿಗ್ಗೆ 6 ಗಂಟೆಗೆ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿಯೇ ಅಣುಕು ಮತದಾನ ನಡೆಸಿ ಮತಯಂತ್ರದ ಕ್ಷಮತೆ ಬಗ್ಗೆ ದೃಢೀಕರಿಸಿಕೊಳ್ಳಲಾಗುತ್ತದೆ. ಬಳಿಕ ಮತದಾನಕ್ಕೆ ಸಿದ್ಧಪಡಿಸಿ ಉಪಯೋಗ ಮಾಡಲಾಗುತ್ತದೆ ಎಂದರು.
ಜಿಲ್ಲಾ ಪಂಚÁಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ನೋಡಲ್ ಅಧಿಕಾರಿ ಸೋಮಸುಂದರ್, ಯೋಗೇಶ್, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಚಾಮರಾಜನಗರ ವಿಧಾನ ಸಭಾ ಕ್ಷೇತ್ರ: ದೂರು ಸಲ್ಲಿಕೆಗೆ ಅವಕಾಶ

ಚಾಮರಾಜನಗರ, ಏ. 03 - ಚಾಮರಾಜನಗರ ವಿಧಾನ ಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಸಾರ್ವಜನಿಕರು ದೂರವಾಣಿ, ಎಸ್.ಎಂ.ಎಸ್, ವಾಟ್ಸ್‍ಪ್, ಇ-ಮೇಲ್, ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ದೂರವಾಣಿ ಸಂಖ್ಯೆಯು: 08226-223220, ವಾಟ್ಸ್‍ಪ್ ಸಂಖ್ಯೆ: 8277858831 ಆಗಿದೆ.  ಇ-ಮೇಲ್ ವಿಳಾಸವು: ಡಿo.ಛಿhಟಿಚಿgಚಿಡಿ223@gmಚಿiಟ.ಛಿom  ಮತ್ತು ಚಿಡಿo.ಛಿhಟಿಚಿgಚಿಡಿ223@gmಚಿiಟ.ಛಿom ಅಗಿರುತ್ತದೆ.
ಚುನಾವಣಾ ಅಧಿಕಾರಿಯಾಗಿ  ಕಲಘಟಕಿ ಅಶೋಕ ಭೀಮಣ್ಣ ಅವರು ಇರುತ್ತಾರೆ.  ಇವರ ಮೊಬೈಲ್ ಸಂ:9449027183 ಆಗಿದೆ.  ಸಹಾಯಕ ಚುನಾವಣಾ ಅಧಿಕಾರಿಯಾಗಿ ಟಿ.ರಮೇಶ್ ಬಾಬು ಇದ್ದು, ಇವರ ಮೊಬೈಲ್ ಸಂ:9480168864 ಆಗಿದೆ.  ಕಾಲ್ ಸೆಂಟರ್ ಸಂ: 1950 ಆಗಿರುತ್ತದೆ. 
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಏಪ್ರಿಲ್ 14ರವರೆಗೆ ಅರ್ಜಿ ಸ್ವೀಕರಿಸಲು ಕಾಲವಕಾಶ ಇದೆ.  ನಾಗರೀಕರು ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಚಾಮರಾಜನಗರ ವಿಧಾನ ಸಭಾ ಕ್ಷೇತ್ರ ಸಹಾಯಕ ಚುನಾವಣಾ ಅಧಿಕಾರಿ ಹಾಗೂ ತಹಶೀಲ್ದಾರ್ ಟಿ.ರಮೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 14ರವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ: ಜಿಲ್ಲಾಧಿಕಾರಿ ಬಿ.ಬಿ ಕಾವೇರಿ
ಚಾಮರಾಜನಗರ, ಏ. 03 - ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 14ರವರೆಗೂ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅವರು ಚುನಾವಣಾ ಆಯೋಗ ಏಪ್ರಿಲ್ 14ರವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಕಾಲವಕಾಶ ನೀಡಿದೆ. ಹೀಗಾಗಿ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ.  ಜಿಲ್ಲೆಯಲ್ಲಿ ಅರ್ಹರೆಲ್ಲರೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು.  ಏಪ್ರಿಲ್ 14ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿದವರಿಗೆ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಸಿಗಲಿದೆ. 
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವ ಸಲುವಾಗಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಏಪ್ರಿಲ್ 8ರಂದು ವಿಶೇಷ ಅಭಿಯಾನ ಸಹ ಹಮ್ಮಿಕೊಳ್ಳಲಾಗಿದೆ.  ಅಂದು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ) ಬೆಳಿಗ್ಗೆಯಿಂದ ಸಂಜೆಯವರೆಗೂ ಲಭ್ಯರಿದ್ದು ವಿಶೇಷ ಅಭಿಯಾನದಲ್ಲಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ನಡೆಸಲಿದ್ದಾರೆ ಎಂದರು. 
ಮತದಾರರಿಗೆ ಸಹಾಯ ಮಾಡುವ ಸಲುವಾಗಿಯೆ ತಾಲ್ಲೂಕು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಕೇಂದ್ರಗಳನ್ನು ತೆರೆಯಲಾಗಿದೆ.  ಮತದಾರರಿಗೆ ಸಂಬಂಧಿಸಿದ ಮಾಹಿತಿ ನೀಡಲಾಗುತ್ತದೆ.
ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಪಾಲನೆ ಅನುಷ್ಠಾನ ನೋಡಿಕೊಳ್ಳಲು ವಿವಿಧ ತಂಡಗಳನ್ನು ರಚಿಸಲಾಗಿದೆ.  ಯಾವುದೇ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಪಟ್ಟ ತಂಡಗಳು ದೂರು ದಾಖಲಿಸಿ ಕ್ರಮ ವಹಿಸಲಿವೆ ಎಂದು ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ತಿಳಿಸಿದರು.

ಸಕಲ ಜೀವಿಗಳ ಒಳಿತು ಬಯಸಿದ ಸಾಕಾರಮೂರ್ತಿ ಮಹಾವೀರರು: ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ 

ಚಾಮರಾಜನಗರ, ಏ. 03- ಸಕಲ ಜೀವಿಗಳ ಒಳಿತಿಗೆ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಮಹಾವೀರರು ಅಹಿಂಸೆ, ತ್ಯಾಗ ಹಾಗೂ ವೈರಾಗ್ಯದ ಸಾಕಾರಮೂರ್ತಿಯಾಗಿದ್ದರು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಅಭಿಪ್ರಾಯಪಟ್ಟರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸಂತರು, ಮಹಾಪುರುಷರು ಹಾಗೂ ಋಷಿಗಳ ಜೀವನ ಹಾಗೂ ಸಂದೇಶಗಳೇ ನಮಗಿಂದು ಮಾದರಿಯಾಗಿದೆ. ಸರಳತೆ, ಅಹಿಂಸೆಯ ಪ್ರತಿರೂಪವಾಗಿದ್ದ ಮಹಾವೀರರ ಮಾರ್ಗವನ್ನು ಗಾಂಧಿಜೀಯವರು ಸಹ ಅನುಸರಿಸಿದ್ದರು. ನಮ್ಮಲ್ಲಿನ ವಿಕಾರ ಮನೋಭಾವ ತೊರೆದು ಮಹಾವೀರರ ತತ್ವಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಸಮಾಜದಲ್ಲಿದ್ದ ಮೌಢ್ಯತೆಯನ್ನು ಹೋಗಲಾಡಿಸಿದ ಮಹಾವೀರರು ಎಲ್ಲರನ್ನು ಸಹೋದರತ್ವ, ಭ್ರಾತೃತ್ವದಿಂದ ಕಾಣುವ ಮೂಲಕ ಸರಳತೆ, ಅಹಿಂಸೆ, ತ್ಯಾಗದಿಂದ ಇರುವುದೇ ಮಾನವಧರ್ಮ ಎಂದು ಜಗತ್ತಿಗೆ ಸಾರಿದರು. ಇಂತಹ ಮಹಾಪುರುಷರ ಸಂದೇಶಗಳು ಇಂದಿಗೂ ಅನಿವಾರ್ಯವಾಗಿವೆ. ಮಹಾವೀರರ ಜೀವನಾದರ್ಶಗಳನ್ನು ಅನುಸರಿಸುವ ದಿಟ್ಟ ನಿರ್ಧಾರವನ್ನು ಪ್ರತಿಯೊಬ್ಬರು ಹೊಂದಬೇಕಿದೆ ಎಂದು ಜಿಲ್ಲಾಧಿಕಾರಿ ಕಾವೇರಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಮಾತನಾಡಿ ಇಂದು ವಿಶ್ವದ ಹಲವೆಡೆ ಭಯೋತ್ಪಾದನೆ ತಾಂಡವವಾಡುತ್ತಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಒಂದು ದೇಶ ಮತ್ತೊಂದು ದೇಶವನ್ನು ಹಣಿಯಲು ಯತ್ನಿಸುತ್ತಿದೆ. ಯುದ್ಧ ಅನಿವಾರ್ಯವಾಗಿರುವ ಇಂತಹ ಸಂದರ್ಭದಲ್ಲಿ ಮಹಾವೀರರ ಅಹಿಂಸಾ ತತ್ವ, ಬದುಕಿನ ಸಂದೇಶಗಳು ಸರ್ವಕಾಲಕ್ಕೂ ಅನ್ವಯವಾಗುವ ಆದರ್ಶಗಳಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಮೈಸೂರು ವಿ.ವಿ. ಮಾನಸಗಂಗೋತ್ರಿಯ ಜೈನಶಾಸ್ತ್ರ ಹಾಗೂ ಪ್ರಾಕ್ರತ ವಿಜ್ಞಾನ ವಿಭಾಗದ ಅತಿಥಿ ಉಪನ್ಯಸಕರಾದ ಡಾ. ಶಾಂತಿಸಾಗರ ಶಿರಹಟ್ಟಿ ಶಾಸ್ತ್ರಿ ಅವರು ಭಗನಾನ್ ಮಹಾವೀರರ ಜೀವನ, ಸಂದೇಶ, ಅಹಿಂಸಾಮಾರ್ಗಗಳ ಕುರಿತು ಸುದೀರ್ಘ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆÉಯ ಸಹಾಯಕ ನಿರ್ದೇಶಕರಾದ ಮಹದೇವಯ್ಯ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಗರದ ಅಕ್ಷತಾ ಎಸ್, ಜೈನ್ ತಂಡದವರು ನಡೆಸಿಕೊಟ್ಟ ಮಹಾವೀರರ ಕುರಿತ ಸಂಗೀತ ನೃತ್ಯರೂಪಕ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.

      ಯಳಂದೂರು : ರಾಷ್ಟ್ರ ನಾಯಕರ ಜಯಂತಿ ಸರಳ ಆಚರಣೆ

ಚಾಮರಾಜನಗರ, ಏ. 03 - ಇದೇ ಏಪ್ರಿಲ್ 5ರಂದು ಡಾ. ಬಾಬು ಜಗಜೀವನರಾಂ ಹಾಗೂ ಏಪ್ರಿಲ್ 14ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದೆಂದು ಯಳಂದೂರು ತಹಸೀಲ್ದಾರ್ ತಿಳಿಸಿದ್ದಾರೆ.
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಸದರಿ ದಿನದಂದು ಆಯಾ ಕಚೇರಿಯಲ್ಲಿ ಪುಷ್ಪಾರ್ಚನೆ ಮಾಡಿ ಸರಳವಾಗಿ ಆಚÀರಿಸಲಾಗುವುದು. ಯಾವುದೇ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಯಳಂದೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

 ಪ್ರಾಥಮಿಕ, ಪ್ರೌಢಶಾಲೆ ಆರಂಭಿಸಲು ನೊಂದಾಯಿತ ಸಂಸ್ಥೆಗಳಿಂದ
ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
ಚಾಮರಾಜನಗರ, ಏ. 03 - ಸಾರ್ವಜನಿಕ ಶಿಕ್ಷಣ ಇಲಾಖೆಯು 2018-19ನೇ ಶೈಕ್ಷಶಿಕ ಸಾಲಿನಿಂದ ಜಿಲ್ಲೆಯಲ್ಲಿ ನೂತನವಾಗಿ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆರಂಭಿಸಲು ಉದ್ದೇಶಿಸಿರುವ ಅರ್ಹ ನೊಂದಾಯಿತ ಸಂಸ್ಥೆಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಅರ್ಜಿಯನ್ನು ಇಲಾಖೆ ವೆಬ್ ಸೈಟ್‍ನಲ್ಲಿ ಏಪ್ರಿಲ್ 10ರೊಳಗೆ ಸಲ್ಲಿಸಲು ಅವಕಾಶವಿದ್ದು, ಹೊಸ ಶಾಲೆಗೆ ನೋಂದಣಿ ಶುಲ್ಕ ಹಾಗೂ ಸಂಸ್ಕರಣಾ ಶುಲ್ಕದ ವಿವರ ಈ ರೀತಿ ಇದೆ.
1 ರಿಂದ 5ನೇ ತರಗತಿಯ ಎಲ್ಲ ಮಾಧ್ಯಮದ ಶಾಲೆಗಳಿಗೆ ನೋಂದಣಿ ಶುಲ್ಕ 25 ಸಾವಿರ ಹಾಗೂ ಸಂಸ್ಕರಣಾ ಶುಲ್ಕ 10 ಸಾವಿರ ರೂ.ಗಳಾಗಿದ್ದು ಡಿಡಿಯನ್ನು ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಚಾಮರಾಜನಗರ ಇವರ ಹೆಸರಿನಲ್ಲಿ ಪಡೆಯಬೇಕು.
6 ರಿಂದ 8ನೇ ತರಗತಿಯ ಕನ್ನಡ ಮಾಧ್ಯಮ ಮತ್ತು ಇತರೆ ಮಾತೃ ಭಾಷೆ ಶಾಲೆಗಳಿಗೆ ನೋಂದಣಿ ಶುಲ್ಕ 50 ಸಾವಿರ ಹಾಗೂ ಸಂಸ್ಕರಣಾ ಶುಲ್ಕ 20 ಸಾವಿರ ರೂ.ಗಳಾಗಿದ್ದು ಡಿಡಿಯನ್ನು ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಚಾಮರಾಜನಗರ ಇವರ ಹೆಸರಿನಲ್ಲಿ ಪಡೆಯಬೇಕು.
6 ರಿಂದ 8ನೇ ತರಗತಿಯ ಆಂಗ್ಲ ಮಾಧ್ಯಮ ಶಾಲೆಗಳಿಗೆ ನೋಂದಣಿ ಶುಲ್ಕ 1 ಲಕ್ಷ ಹಾಗೂ ಸಂಸ್ಕರಣಾ ಶುಲ್ಕ 20 ಸಾವಿರ ರೂ.ಗಳಾಗಿದ್ದು ಡಿಡಿಯನ್ನು ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಚಾಮರಾಜನಗರ ಇವರ ಹೆಸರಿನಲ್ಲಿ ಪಡೆಯಬೇಕು.
9 ಮತ್ತು 10ನೇ ತರಗತಿಯ ಕನ್ನಡ ಮಾಧ್ಯಮ ಮತ್ತು ಇತರೆ ಮಾತೃ ಭಾಷೆ ಶಾಲೆಗಳಿಗೆ ನೋಂದಣಿ ಶುಲ್ಕ 50 ಸಾವಿರ ಹಾಗೂ ಸಂಸ್ಕರಣಾ ಶುಲ್ಕ 20 ಸಾವಿರ ರೂ.ಗಳಾಗಿದ್ದು ಡಿಡಿಯನ್ನು ಆಯುಕ್ತರು ಅಥವಾ ಅಪರ ಅಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಹೆಸರಿನಲ್ಲಿ ಪಡೆಯಬೇಕು.
9 ಮತ್ತು 10ನೇ ತರಗತಿಯ ಆಂಗ್ಲ ಮಾಧ್ಯಮ ಶಾಲೆಗಳಿಗೆ ನೋಂದಣಿ ಶುಲ್ಕ 1 ಲಕ್ಷ ಹಾಗೂ ಸಂಸ್ಕರಣಾ ಶುಲ್ಕ 20 ಸಾವಿರ ರೂ.ಗಳಾಗಿದ್ದು ಡಿಡಿಯನ್ನು ಆಯುಕ್ತರು ಅಥವಾ ಅಪರ ಅಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಹೆಸರಿನಲ್ಲಿ ಪಡೆದು ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಶಿಕ್ಷಣ ಇಲಾಖಾ ವೆಬ್ ಸೈಟ್ ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ಸಂಪರ್ಕಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜವಹರ್ ನವೋದಯ ವಿದ್ಯಾಲಯ : ಪ್ರವೇಶ ಪರೀಕ್ಷೆಗೆ ಪ್ರವೇಶ ಪತ್ರ ವಿತರಣೆ

ಚಾಮರಾಜನಗರ, ಏ. 03:- ಜವಹರ್ ನವೋದಯ ವಿದ್ಯಾಲಯದ ಪ್ರಸಕ್ತ ಸಾಲಿನ 6ನೇ ತರಗತಿ ದಾಖಲಾತಿ ಪ್ರವೇಶ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ವಿತರಿಸಲಾಗುತ್ತಿದೆ.
ಪರೀಕ್ಷೆಯು ಏಪ್ರಿಲ್ 21ರಂದು ನಡೆಯಲಿದ್ದು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಯಾವುದೇ ಸಾಮಾನ್ಯ ಸೇವಾ ಕೇಂದ್ರದಲ್ಲಿ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು.
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಶಾಲಾ ಮುಖ್ಯೋಪಾಧ್ಯಾಯರಿಂದ ಪಡೆದುಕೊಳ್ಳುವುದು.
ಪ್ರವೇಶ ಪತ್ರ ಪಡೆಯುವ ಸಂಬಂಧ ಯಾವುದೇ ತೊಂದರೆ ಉಂಟಾದಲ್ಲಿ ಅಥವಾ ಹೆಚ್ಚಿನ ಮಾಹಿತಿಗೆ ಜವಹರ್ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷಾ ಪ್ರಭಾರಿ ಬಿ.ಎಚ್. ಸುರೇಶ್ ಇವರನ್ನು ಸಹಾಯವಾಣಿ 9742476738 ಮೂಲಕ ಸಂಪರ್ಕಿಸುವಂತೆ ಜವಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯರಾದ ಆರ್.ಡಿ.ಆರ್. ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ

ಚಾಮರಾಜನಗರ, ಏ. 03 - ಜಿಲ್ಲೆಯ ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಏಪ್ರಿಲ್ 5ರಿಂದ 30ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸಲಿದ್ದಾರೆ.
ಏಪ್ರಿಲ್ 5ರಂದು ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರಿಂದ ಗುಂಡ್ಲುಪೇಟೆಯ ಸರ್ಕಾರಿ ಅತಿಥಿಗೃಹದಲ್ಲಿ, 10ರಂದು ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ ನಗರದ ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ಸ್ವೀಕರಿಸುವರು.
ಏಪ್ರಿಲ್ 16ರಂದು ಯಳಂದೂರು, 25ರಂದು ಕೊಳ್ಳೇಗಾಲ ಹಾಗೂ 30ರಂದು ಹನೂರಿನಲ್ಲಿ ದೂರುಗಳನ್ನು ಅಲ್ಲಿನ ಸರ್ಕಾರಿ ಅತಿಥಿಗೃಹದಲ್ಲಿ ಸ್ವೀಕರಿಸುವರು.
ಸರ್ಕಾರಿ ಕಚೇರಿಗಳಲ್ಲಿ ವಿಳಂಬ, ಲಂಚದ ಹಣಕ್ಕೆ ಒತ್ತಾಯ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

ಏ. 6 ರಿಂದ ತಾತ್ಕಾಲಿಕವಾಗಿ ಗ್ರಂಥಾಲಯ ಸೇವೆ ಸ್ಥಗಿತ 

ಚಾಮರಾಜನಗರ, ಏ. 03 - ಚಾಮರಾಜನಗರ ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯಲ್ಲಿ ಏಪ್ರಿಲ್ 6 ರಿಂದ 14ರವರೆಗೆ ಪುಸ್ತಕ ಹಾಗೂ ಪೀಠೋಪಕರಣಗಳ ವಾರ್ಷಿಕ ದಾಸ್ತಾನು ಕಾರ್ಯ ನಡೆಯಲಿದೆ.
ಈ ಹಿನ್ನೆಲಯಲ್ಲಿ ಶಾಖಾ ಗ್ರಂಥಾಲಯಗಳಾದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕುಗಳಲ್ಲಿ ದಾಸ್ತಾನು ತಪಾಸಣೆ ನಡೆಯಲಿರುವುದರಿಂದ ತಾತ್ಕಾಲಿಕವಾಗಿ ಗ್ರಂಥಾಲಯ ಸೇವೆ ಸ್ಥಗಿತಗೊಳ್ಳಲಿದೆ.
ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಡಿ. ನಾಗವೇಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




















ವಿಧಾನಸಭಾ ಚುನಾವಣೆ- 2018 ವಿಧಾನಸಭೆ ಚುನಾವಣೆ : ಸ್ಟಾಟಿಕ್ ಸರ್ವೈಲೈನ್ಸ್ ತಂಡ ನೇಮಕ (02-04-2018)

ವಿಧಾನಸಭಾ ಚುನಾವಣೆ- 2018
ವಿಧಾನಸಭೆ ಚುನಾವಣೆ : ಸ್ಟಾಟಿಕ್ ಸರ್ವೈಲೈನ್ಸ್ ತಂಡ ನೇಮಕ

ಚಾಮರಾಜನಗರ, ಏ. 02 - ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ನ್ಯಾಯಸಮ್ಮತ, ಪಾರದರ್ಶಕ ಮತ್ತು ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸಲು ಹಾಗೂ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸಲು ಸ್ಟಾಟಿಕ್ ಸರ್ವೈಲೈನ್ಸ್ ಅಧಿಕಾರಿಗಳ ತಂಡ ನೇಮಕ ಮಾಡಿ ಜಿಲ್ಲಾಧಿಕಾರಿ       ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರ – ತಂಡ 1:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಮನೋಜ್ ಕುಮಾರ್, ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹನೂರು (ಮೊ. 9945879300), ಪೊಲೀಸ್ ಸಿಬ್ಬಂದಿ ಶಿವಮೂರ್ತಿ, ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ (ಮೊ. 9964305145), ಪ್ರಶಾಂತ್ (ಮೊ. 8152834383), ಒಬ್ಬರು ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಮಹದೇವಸ್ವಾಮಿ, ಕಿರಿಯ ಎಂಜಿನಿಯರ್, ಪಿಡಬ್ಲ್ಯೂಡಿ ಇಲಾಖೆ, ಮಹದೇಶ್ವರಬೆಟ್ಟ, ಕೊಳ್ಳೇಗಾಲ ತಾಲೂಕು (ಮೊ. 9448595770), ಪೊಲೀಸ್ ಸಿಬ್ಬಂದಿ ಸುರೇಶ್, ರಾಮಾಪುರ ಪೊಲೀಸ್ ಠಾಣೆ (ಮೊ. 9886832705), ನಿಂಗರಾಜು (9845839096) ಹಾಗೂ ವೀಡಿಯೋ ಗ್ರಾಫರ್ ಓರ್ವರನ್ನು ನೇಮಕ ಮಾಡಲಾಗಿದೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಹರ್ಷ, ಉಪನ್ಯಾಸಕರು, ಎಸ್‍ವಿಕೆ ಕಾಲೇಜು, ಕೊಳ್ಳೇಗಾಲ (ಮೊ. 7760032984), ಪೊಲೀಸ್ ಸಿಬ್ಬಂದಿ ರವಿ, ಹನೂರು ಪೊಲೀಸ್ ಠಾಣೆ (8951444277), ಮಂಜುನಾಥ್ (ಮೊ. 9980747646) ಹಾಗೂ ವೀಡಿಯೋ ಗ್ರಾಫರ್ ಓರ್ವರನ್ನು ನೇಮಕಗೊಳಿಸಲಾಗಿದೆ.
ತಂಡ 2:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಎಂ.ಪಿ. ಯಶವಂತ್, ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹನೂರು (ಮೊ. 7259913555), ಮೂವರು ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಎಂ. ರವಿಶಂಕರ್, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹನೂರು (ಮೊ. 9241551811), ಮೂವರು ಪೊಲೀಸ್ ಸಿಬ್ಬಂದಿ ಮತ್ತು ಓರ್ವ ವೀಡಿಯೋ ಗ್ರಾಫರ್‍ರನ್ನು ನೇಮಕ ಮಾಡಲಾಗಿದೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಮಹೇಶ್, ಸಹಾಯಕ ಎಂಜಿನಿಯರ್. ಪಿಡಬ್ಲಯೂಡಿ ಇಲಾಖೆ, ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ತಾಲೂಕು (ಮೊ. 9964228742), ಮೂವರು ಪೊಲೀಸ್ ಸಿಬ್ಬಂದಿ, ಓರ್ವ ವೀಡಿಯೋ ಗ್ರಾಫರ್‍ರನ್ನು ನೇಮಕಗೊಳಿಸಲಾಗಿದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ – ತಂಡ 1:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಶಿವಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ಕೊಳ್ಳೇಗಾಲ (ಮೊ. 8184051948), ಪೊಲೀಸ್ ಸಿಬ್ಬಂದಿಯಾಗಿ ಶಂಕರಪ್ಪ, ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆ (ಮೊ. 9449217452), ಶಿವಕುಮಾರ್ (ಮೊ. 9008081152), ಒಬ್ಬರು ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಶಂಕರೇಗೌಡ, ಸಹಾಯಕ ನಿರ್ದೇಶಕರು, ಪಂಚಾಯತ್ ರಾಜ್ ಇಲಾಖೆ (ಮೊ. 9731932325), ಪೊಲೀಸ್ ಸಿಬ್ಬಂದಿಯಾಗಿ ಇಲಿಯಾಸ್ ಪಾಷ, ಯಳಂದೂರು ಪೊಲೀಸ್ ಠಾಣೆ (ಮೊ. 9449203272)  ರಾಜೇಶ್ (8861991932) ಹಾಗೂ ಮತ್ತೋರ್ವ ಪೊಲೀಸ್ ಸಿಬ್ಬಂದಿ ಮತ್ತು  ಓರ್ವ ವೀಡಿಯೋ ಗ್ರಾಫರ್ ಇವರನ್ನು ನೇಮಕ ಮಾಡಲಾಗಿದೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಟಿ.ಡಿ. ಧನಂಜಯ, ಅಭಿಯಂತರರು, ನಗರಸಭೆ (ಮೊ. 9591635391), ಪೊಲೀಸ್ ಸಿಬ್ಬಂದಿಯಾಗಿ ಸುಬ್ರಮಣಿ, ಮಾಂಬಳ್ಳಿ ಪೊಲೀಸ್ ಠಾಣೆ (9902646826)  ನಂಜಪ್ಪ, ಮತ್ತೋರ್ವ ಪೊಲೀಸ್ ಸಿಬ್ಬಂದಿ ಹಾಗೂ ವೀಡಿಯೋ ಗ್ರಾಫರ್ ಇವರನ್ನು ನೇಮಕಗೊಳಿಸಲಾಗಿದೆ.
ತಂಡ 2:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಸತೀಶ್ ಚಂದ್ರ, ಕಿರಿಯ ಎಂಜಿನಿಯರ್, ಪಿಡಬ್ಲ್ಯೂಡಿ ಇಲಾಖೆ, ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ತಾಲೂಕು (ಮೊ. 9480446452),  ಪೊಲೀಸ್ ಸಿಬ್ಬಂದಿಯಾಗಿ ಮಹದೇವಚಾರಿ, ಎಎಸ್‍ಐ, ಸಂತೇಮರಹಳ್ಳಿ ಪೊಲೀಸ್ ಠಾಣೆ (ಮೊ. 9686119710) ಹಾಗೂ ಇನ್ನಿಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಕುಮಾರ್, ಸಹÁಯಕ ಅಭಿಯಂತರರು, ಪಿಆರ್‍ಇಡಿ, ಯಳಂದೂರು (ಮೊ. 9980137779), ಪೊಲೀಸ್ ಸಿಬ್ಬಂದಿಯಾಗಿ ಶಿವರುದ್ರಪ್ಪ, ಎಎಸ್‍ಐ, ಕುದೇರು ಪೊಲೀಸ್ ಠಾಣೆ (ಮೊ.9448905164) ಮತ್ತು ಓರ್ವ ವೀಡಿಯೋ ಗ್ರಾಫರ್‍ರನ್ನು ನೇಮಕ ಮಾಡಲಾಗಿದೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ತನುಜï ಕುಮಾರ್, ಪಿಡಬ್ಲ್ಯೂಡಿ ಇಲಾಖೆ, ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ತಾಲೂಕು (ಮೊ. 9900068748), ಪೊಲೀಸ್ ಸಿಬ್ಬಂದಿಯಾಗಿ ಸಿದ್ದರಾಜು ನಾಯಕ, ಎಎಸ್‍ಐ, ಚಾಮರಾಜನಗರ ಪೊಲೀಸ್ ಠಾಣೆ (ಪೂರ್ವ) (ಮೊ. 9591476143), ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಒರ್ವ ವೀಡಿಯೋ ಗ್ರಾಫರ್‍ರನ್ನು ನೇಮಕಗೊಳಿಸಲಾಗಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರ – ತಂಡ 1:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಗೀತ, ಉಪ ನೋಂದಣಾಧಿಕಾರಿ, ಚಾಮರಾಜನಗರ (ಮೊ. 9480698363), ಪೊಲೀಸ್ ಸಿಬ್ಬಂದಿಯಾಗಿ ವಿನಯ್ ಕುಮಾರ್, ಚಾಮರಾಜನಗರ ಟೌನ್ ಪೊಲೀಸ್ ಠಾಣೆ (ಮೊ. 81399188182), ನಂಜುಂಡಸ್ವಾಮಿ ಹಾಗೂ ಮತ್ತೋರ್ವ ಪೊಲೀಸ್ ಸಿಬ್ಬಂದಿ ಹಾಗೂ  ಒಬ್ಬರು ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ನಾಗಮಲ್ಲಪ್ಪ, ಪ್ರಾಂಶುಪಾಲರು, ಸರ್ಕಾರಿ ಪದವಿಪೂರ್ವ ಕಾಲೇಜು, ಅರಕಲವಾಡಿ, ಪೊಲೀಸ್ ಸಿಬ್ಬಂದಿಯಾಗಿ ಸುರೇಶ್ ಯಾದವ್, ಚಾಮರಾಜನಗರ ಗ್ರಾಮಾಂತರ  (ಮೊ. 9448025351), ಶಿವಸ್ವಾಮಿ (9945823843) ಹಾಗೂ ಮತ್ತೋರ್ವ ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ವೀಡಿಯೋ ಗ್ರಾಫರ್ ಇವರನ್ನು ನೇಮಕ ಮಾಡಲಾಗಿದೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಎಂ. ಗಿರೀಶ್, ಉಪ ನೋಂದಣಾಧಿಕಾರಿ, ಕುದೇರು, (ಮೊ. 9480698364), ಪೊಲೀಸ್ ಸಿಬ್ಬಂದಿಯಾಗಿ ಮಹೇಶ್, ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ (807325425), ರಾಜೇಶï ಹಾಗೂ ಮತ್ತೋರ್ವ ಪೊಲೀಸ್ ಸಿಬ್ಬಂದಿ ಮತ್ತು ಓರ್ವ  ವೀಡಿಯೋ ಗ್ರಾಫರ್ ಇವರನ್ನು ನೇಮಕಗೊಳಿಸಲಾಗಿದೆ.
ತಂಡ 2:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಎಂ.ವಿ. ಸುಬ್ರಮಣ್ಯ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಹÁಯಕ ನಿಬಂಧಕರ ಕಚೇರಿ, ಚಾಮರಾಜುನಗರ, ಮೂವರು ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಕೃಷ್ಣಮೂರ್ತಿ, ಪ್ರಾಚಾರ್ಯರು, ಸರ್ಕಾರಿ ಪದವಿಪೂರ್ವ ಕಾಲೇಜು, ಚಂದಕವಾಡಿ, ಮೂವರು ಪೊಲೀಸ್ ಸಿಬ್ಬಂದಿ ಮತ್ತು ಓರ್ವ ವೀಡಿಯೋ ಗ್ರಾಫರ್‍ರನ್ನು ನೇಮಕ ಮಾಡಲಾಗಿದೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಮಂಜುನಾಥ ಪ್ರಸನ್ನ, ಪ್ರಾಚಾರ್ಯರು, ಸರ್ಕಾರಿ ಪದವಿಪೂರ್ವ ಕಾಲೇಜು, ಆಲೂರು (ಮೊ. 9845993227), ಮೂವರು ಪೊಲೀಸ್ ಸಿಬ್ಬಂದಿ, ಓರ್ವ ವೀಡಿಯೋ ಗ್ರಾಫರ್‍ರನ್ನು ನೇಮಕಗೊಳಿಸಲಾಗಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ – ತಂಡ 1:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಎಚ್.ಜಿ. ರಾಮನಾಥ, ಅಧೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಗುಂಡ್ಲುಪೇಟೆ  (ಮೊ. 8711857322), ಪೊಲೀಸ್ ಸಿಬ್ಬಂದಿಯಾಗಿ ಜಿ.ಡಿ. ವೆಂಕಟೇಶÀಮೂರ್ತಿ, ಗುಂಡ್ಲುಪೇಟೆ ಪೊಲೀಸ್ ಠಾಣೆ (ಮೊ. 9611064890), ಶಿವಣ್ಣ (ಮೊ. 9731110944) ಹಾಗೂ ಮತ್ತೋರ್ವ ಪೊಲೀಸ್ ಸಿಬ್ಬಂದಿ ಮತ್ತು ಒಬ್ಬರು ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಗಿರೀಶ್, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಗುಂಡ್ಲುಪೇಟೆ  (ಮೊ. 9743719472), ಪೊಲೀಸ್ ಸಿಬ್ಬಂದಿಯಾಗಿ ಬಿ.ಸಿ ವಿಶ್ವ (ಮೊ. 9844097340), ಜಿ.ಬಿ. ಶಿವಯ್ಯ (8453681427) ಮತ್ತೋರ್ವ ಪೊಲೀಸ್ ಸಿಬ್ಬಂದಿ ಮತ್ತು ಒಬ್ಬರು ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಶಿವಸ್ವಾಮಿ, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಗುಂಡ್ಲುಪೇಟೆ (ಮೊ. 9964700435), ಪೊಲೀಸ್ ಸಿಬ್ಬಂದಿಯಾಗಿ ಸುಕೇಶ್ (813999070), ರಾಜಯ್ಯ (ಮೊ. 8105077892), ಮತ್ತೋರ್ವ ಪೊಲೀಸ್ ಸಿಬ್ಬಂದಿ ಮತ್ತು ಒಬ್ಬರು ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ
ತಂಡ 2:- ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಸುಬ್ರಮಣ್ಯ ಶರ್ಮ, ಸಹಾಯಕ ನಿರ್ದೇಶಕರು, ತÁಲೂಕು ಪಂಚಾಯಿತಿ, ಗುಂಡ್ಲುಪೇಟೆ (ಮೊ. 9341129674), ಪೊಲೀಸ್ ಸಿಬ್ಬಂದಿಯಾಗಿ ಜಯರಾಜು (ಮೊ. 9632078289), ಚಾಮರಾಜು (ಮೊ. 8197712335), ವೆಂಕಟೇಶ್ (ಮೊ. 9483193958) ಹಾಗೂ ಒಬ್ಬ ವೀಡಿಯೋ ಗ್ರಾಫರ್ ನೇಮಕಗೊಂಡಿದ್ದಾರೆ.
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಹೆಚ್. ಜಗದೀಶ್, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರ್ರಥಮದರ್ಜೆ ಕಾಲೇಜು, ತೆರಕಣಾಂಬಿ (ಮೊ. 9632197117),  ಪೊಲೀಸ್ ಸಿಬ್ಬಂದಿಯಾಗಿ ಸಿದ್ದಪ್ಪ, ಪವನ್, ಸ್ವಾಮಿ (ಮೊ. 7026076006) ಮತ್ತು ಓರ್ವ ವೀಡಿಯೋ ಗ್ರಾಫರ್‍ರನ್ನು ನೇಮಕ ಮಾಡಲಾಗಿದೆ.
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸೆಕ್ಟರ್ ಅಧಿಕಾರಿಯಾಗಿ ಎಸ್.ಎಂ. ವಿನಯ ಪ್ರಭು, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತೆರಕಣಾಂಬಿ (ಮೊ. 9986238677), ಪೊಲೀಸ್ ಸಿಬ್ಬಂದಿಯಾಗಿ ಸಂತೋಷ್ (9916567716), ಸುರೇಶ್ (9620025965), ಈ. ಮೂರ್ತಿ (9108397354) ಹಾಗೂ ದಓರ್ವ ವೀಡಿಯೋ ಗ್ರಾಫರ್‍ರನ್ನು ನೇಮಕಗೊಳಿಸಲಾಗಿದೆ.
                 ವಿಧಾನಸಭಾ ಚುನಾವಣೆ- 2018

ವಿಧಾನಸಭೆ ಚುನಾವಣೆ : ವಿದ್ಯುನ್ಮಾನ ಮತಯಂತ್ರ, ವಿ.ವಿ ಪ್ಯಾಟ್ ಪ್ರಾತ್ಯಕ್ಷಿಕೆ 

ಚಾಮರಾಜನಗರ, ಏ. 02 -  ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಳಸಲಾಗುವ ವಿದ್ಯುನ್ಮಾನ ಮತಯಂತ್ರ ಹಾಗೂ ಚಲಾಯಿಸಿರುವ ಮತವನ್ನು ಮತದಾರರಿಗೆ ಖಾತರಿ ಪಡಿಸುವ ವಿ.ವಿ ಪ್ಯಾಟ್ ಪ್ರಾತ್ಯಕ್ಷಿಕೆ ಜಾಗೃತಿ ಕಾರ್ಯಕ್ರಮವನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಇಂದು ಹಮ್ಮಿಕೊಳ್ಳಲಾಗಿತ್ತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿ ಬಿ.ಬಿ ಕಾವೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ  ಅವರ ಸಮ್ಮುಖದಲ್ಲಿ ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ ಪ್ಯಾಟ್ ಕಾರ್ಯನಿರ್ವಹಿಸುವ ಕುರಿತು ಅರಿವು ಮೂಡಿಸಲಾಯಿತು. 
ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿಯೆ ವಿದ್ಯುನ್ಮಾನ ಮತಯಂತ್ರ, ವಿ.ವಿ ಪ್ಯಾಟ್‍ನಲ್ಲಿ ಹೇಗೆ ಮತ ಹಾಗೂ ಖಾತರಿ ಪಡಿಸುವ ಅಂಶಗಳು ದಾಖಲಾಗಲಿವೆ ಎಂಬ ಬಗ್ಗೆ ಬಿ.ಇ.ಎಲ್ ಹಿರಿಯ ತಂತ್ರಜ್ಞರು ಮನವರಿಕೆ ಮಾಡಿಕೊಟ್ಟರು.  ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಖುದ್ದು ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ. ಪ್ಯಾಟ್ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬ ಬಗ್ಗೆ ಮಾಹಿತಿ ಪಡೆದರು.  ಇದೇ ವೇಳೆ ಹಲವು ಪ್ರಶ್ನೆಗಳ ಮೂಲಕ ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ ಪ್ಯಾಟ್ ಕಾರ್ಯವಿಧಾನಗಳ ಬಗ್ಗೆ ಇರುವ ಎಲ್ಲಾ ಅಂಶಗಳ ಬಗ್ಗೆ ತಿಳಿದುಕೊಂಡರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಬಿ.ಬಿ ಕಾವೇರಿಯವರು ಪಾರದರ್ಶಕವಾಗಿ ಚುನಾವಣೆ ನಡೆಸಲಾಗುತ್ತದೆ.  ಈ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ ಪ್ಯಾಟ್ ಕಾರ್ಯ ವಿಧಾನಗಳ ನಿರ್ವಹಣೆ ಬಗ್ಗೆ  ಮಾಹಿತಿ ನೀಡಲಾಗುತ್ತಿದೆ ಎಂದರು. 
ಮತಯಂತ್ರ ಅಥವಾ ವಿ.ವಿ ಪ್ಯಾಟ್ ದುರುಪಯೋಗ ಮಾಡಲು ಅವಕಾಶವಿರುವುದಿಲ್ಲ. ಎಲ್ಲವನ್ನೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಏಜೆಂಟರ ಮುಂದೆಯೆ ಪರೀಕ್ಷಿಸಿ ಉಪಯೋಗಿಸಲಾಗುತ್ತದೆ.  ಮತದಾನಕ್ಕೂ ಮೊದಲು ಅಣುಕು ಮತದಾನದ ಮೂಲಕ ಪರೀಕ್ಷಿಸಿ ನಂತರವೇ ಮತದಾನಕ್ಕೆ ಯಂತ್ರಗಳನ್ನು ಬಳಸಲಾಗುತ್ತದೆ.  ಮತದಾನ ಪೂರ್ವದಲ್ಲಿ ಎಲ್ಲಾ ಪರೀಕ್ಷಾ ಕಾರ್ಯವು ಪೂರ್ಣಗೊಂಡಿರುತ್ತದೆ, ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಬಗ್ಗೆ ದೃಢೀಕರಿಸಿಕೊಳ್ಳಲಾಗುತ್ತದೆ ಎಂದರು. 
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ ಹರೀಶ್ ಕುಮಾರ್ ಅವರು ಮಾತನಾಡಿ ಗ್ರಾಮೀಣಾ ಭಾಗದಲ್ಲಿ ಸ್ವೀಪ್ ಸಮಿತಿಯಿಂದಲೂ ಮತಯಂತ್ರ ಹಾಗೂ ವಿ.ವಿ ಪ್ಯಾಟ್ ಬಳಕೆ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸಲಾಗುತ್ತದೆ.  ಜನರಲ್ಲಿ ಯಾವುದೇ ಗೊಂದಲವಿಲ್ಲದೆ ಈ ಯಂತ್ರಗಳ ಕಾರ್ಯ ಕ್ಷಮತೆ ಬಗ್ಗೆ ತಿಳಿಸುವ ಕಾರ್ಯವು ನಡೆಯಲಿದೆ.  ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ ಗಾಯತ್ರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುನಿರಾಜಪ್ಪ, ಮಾಸ್ಟರ್ ಟ್ರೈನರ್ ಶ್ರೀನಿವಾಸ್, ನೋಡಲ್ ಅಧಿಕಾರಿ ಸೋಮಸುಂದರ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ನೂರೊಂದು ಶೆಟ್ಟಿ, ಎಂ. ಚಿದಾನಂದ ಮೂರ್ತಿ, ಡಿ.ಎನ್ ಉಷಾ, ಎಸ್ ರಾಮಚಂದ್ರ, ಎಂ.ಎಂ ಮಾದೇಶ, ಎಂ ಎಸ್. ಪೃಥ್ವಿರಾಜ್, ಆರ್ ಪುರುಷೋತ್ತಮ, ಜಿ. ಲೊಕೇಶ್ ಕೊತ್ತಲವಾಡಿ, ನಾಗೇಶ ನಾಯ್ಕ, ಎಂ ಕುಮಾರ ಸ್ವಾಮಿ, ಬ್ಯಾಡಮೂಡ್ಲು ಬಸವಣ್ಣ ಇತರರು ಹಾಜರಿದ್ದರು. 


ವಿಧಾನಸಭೆ ಚುನಾವಣೆ : ಅಂತರ ಜಿಲ್ಲಾ ಚೆಕ್ ಪೋಸ್ಟ್ ತಂಡ ನೇಮಕ
ಚಾಮರಾಜನಗರ, ಏ. 02 - ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಸಂಬಂಧ ಅಂತರ ಜಿಲ್ಲಾ 8 ಚೆಕ್ ಪೋಸ್ಟ್‍ಗಳನ್ನು ತೆರೆಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪಾಳಿ ಆಧಾರದ ಮೇಲೆ    ಕಾರ್ಯ ನಿರ್ವಹಿಸಲು ಅಧಿಕಾರಿ, ಸಿಬ್ಬಂದಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರ – ಸತ್ತೇಗಾಲ ಹ್ಯಾಂಡ್ ಪೋಸ್ಟ್ -  ಸೆಕ್ಟರ್ ಅಧಿಕಾರಿಯಾಗಿ ಪ್ರಶಾಂತ್ (ಮೊ. 9448305543), ಮಹದೇವಸ್ವಾಮಿ, ಆರ್ ಎಫ್ ಓ  (ಮೊ. 876238382) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ರಂಗರಾಜು (ಮೊ. 9880878399), ದ್ವಾರಕೀಶ್ (ಮೊ. 9901849858) ಪೊಲೀಸ್ ಸಿಬ್ಬಂದಿ,  ಮಹದೇವಪ್ರಭು (ಪಿ.ಡಿ.ಓ) (ಮೊ. 9986691150), ಶಿವಕುಮಾರ್  (9448528723) ಡಿ.ಎಫ್.ಆರ್.ಓ
 ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಅಮಗೊಂಡ ಬಿರಾದರ್ (ಮೊ. 8147327730), ಗಂಗರಾಜು ಪೊಲೀಸ್ ಸಿಬ್ಬಂದಿ,  ನಾಗಸುಂದರ, ಬಿಲ್ ಕಲೆಕ್ಟರ್ (ಮೊ. 994503552), ಮಹಾನಂದ, ಅರಣ್ಯ ರಕ್ಷಕ (9663524696)
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ರಂಗರಾಜು (ಮೊ. 9880878399), ದ್ವಾರಕೀಶ್ (9901849868) ಪೊಲೀಸ್ ಸಿಬ್ಬಂದಿ, ಸೀಗನಾಯ್ಕ, ಗ್ರಾಮ ಸಹಾಯಕ (ಮೊ. 9945261350), ಶ್ರೀಧರಮೂರ್ತಿ, ಅರಣ್ಯ ರಕ್ಷಕ (ಮೊ. 9481615992), ರವಿಕುಮಾರ್, ಅಬಕಾರಿ ರಕ್ಷಕ (ಮೊ. 8147926525) ಇವರನ್ನು ನೇಮಕಗೊಳಿಸಲಾಗಿದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ – ಉಮ್ಮತ್ತೂರು ಚೆಕ್ ಪೋಸ್ಟ್ -  ಸೆಕ್ಟರ್ ಅಧಿಕಾರಿಯಾಗಿ ಸುಂದರಮ್ಮ (ಮೊ. 8277930765) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ರಮೇಶï (ಮೊ. 9448596293), ಪುಟ್ಟಸ್ವಾಮಿ ಪೊಲೀಸ್ ಸಿಬ್ಬಂದಿ, ಶಿವಕÀುಮಾರ್, ಪಿಡಿಓ, (ಮೊ. 9886305118)
 ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಕಿಶೋರ್, ನಾಗರಾಜು ಪೊಲೀಸ್ ಸಿಬ್ಬಂದಿ, ಶಿವಯ್ಯ, ಬಿಲ್ ಕಲೆಕ್ಟರ್ (ಮೊ. 9902699791)
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಸಲೀಂಪಾಶಾ (ಮೊ. 9886131459), ಆನಂದ ಪೊಲೀಸ್ ಸಿಬ್ಬಂದಿ, ಪುಟ್ಟಸ್ವಾಮಿ, ಗ್ರಾಮ ಸಹಾಯಕ (ಮೊ. 9845971832) ಇವರುಗಳು ನೇಮಕಗೊಂಡಿದ್ದಾರೆ.
ಮೂಗೂರು ಬಾರ್ಡರ್ ಚೆಕ್ ಪೋಸ್ಟ್ (ಬಾಣಹಳ್ಳಿ) -  ಸೆಕ್ಟರ್ ಅಧಿಕಾರಿಯಾಗಿ ಶಶಿಧರ್ (ಮೊ. 9844364293) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ರಾಜು (ಮೊ. 7892145097), ಮಹದೇವಸ್ವಾಮಿ ಪೊಲೀಸ್ ಸಿಬ್ಬಂದಿ, ನಾಗರಾಜು, ಕÁರ್ಯದರ್ಶಿ, ಸಂತೇಮರಹಳ್ಳಿ ಗ್ರಾಮ ಪಂಚಾಯಿತಿ (ಮೊ. 9743091713)
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ವಿಜಯಕುಮಾರ್ (ಮೊ. 9900943055), ನಟೇಶ ಪೊಲೀಸ್ ಸಿಬ್ಬಂದಿ, ಕೆ. ವೆಂಕಟೇಶ್, ಬಿಲ್ ಕಲೆಕ್ಟರ್, ಸಂತೆಮರಹಳ್ಳಿ (ಮೊ. 9972674526) ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಬಾಬು (ಮೊ. 9972813007), ಕುಮಾರ ಪೊಲೀಸ್ ಸಿಬ್ಬಂದಿ, ವೆಂಕಟರಾಮು, ಗ್ರಾಮ ಲೆಕ್ಕಿಗ, ಕಮರವಾಡಿ (ಮೊ. 9741653248) ಇವರುಗಳು ನೇಮಕಗೊಂಡಿದ್ದಾರೆ.
ಹೊಸಮಾಲಂಗಿ (ಅಮಜಿಕಟ್ಟೆ) ಚೆಕ್ ಪೋಸ್ಟ್ -  ಸೆಕ್ಟರ್ ಅಧಿಕಾರಿಯಾಗಿ ಜಯಶೀಲ (ಮೊ. 97418732218) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ರವಿ (ಮೊ. 9975283529), ನಾಗಶೆಟ್ಟಿ (ಮೊ. 8711038617) ಪೊಲೀಸ್ ಸಿಬ್ಬಂದಿ, ಮಹದೇವಪ್ರಭು, ಪಿಡಿಓ, ಮುಳ್ಳೂರು ಗ್ರಾಮ ಪಂಚಾಯಿತಿ (ಮೊ. 9986691150)
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಮುತ್ತಪ್ಪಗೌಡರ್ (ಮೊ. 9731323746), ಪ್ರಶಾಂತ್ ಪೊಲೀಸ್ ಸಿಬ್ಬಂದಿ, ಶಿವಕುಮಾರ್, ಬಿಲ್ ಕಲೆಕ್ಟರ್, ಮುಳ್ಳೂರು (ಮೊ. 7829474379)
 ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಮಂಜು (ಮೊ. 9845207976), ಗಂಗರಾಜು ಪೊಲೀಸ್ ಸಿಬ್ಬಂದಿ, ರಾಜಣ್ಣ, ಗ್ರಾಮ ಸೇವಕ (ಮೊ. 9844946356) ಇವರುಗಳು ನೇಮಕಗೊಂಡಿದ್ದಾರೆ.
ಟಗರಪುರ ಚೆಕ್ ಪೋಸ್ಟ್ -  ಸೆಕ್ಟರ್ ಅಧಿಕಾರಿಯಾಗಿ ಎಂ.ಎನ್. ಕೇಶವ (ಮೊ. 8217069308) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಎಂ.ಬಿ. ರಾಜಣ್ಣ (ಮೊ. 9743057520), ರಘು (ಮೊ. 9902142013) ಪೊಲೀಸ್ ಸಿಬ್ಬಂದಿ, ರವೀಂದ್ರನಾಥ, ಪಿಡಿಓ, ಟಗರಪುರ ಗ್ರಾಮ ಪಂಚಾಯಿತಿ (ಮೊ. 9449594828)
 ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಪ್ರಕಾಶ್ (ಮೊ. 8884228496), ಮಹದೇವಪ್ರಭು ಪೊಲೀಸ್ ಸಿಬ್ಬಂದಿ, ಶಿವಣ್ಣ, ಬಿಲ್ ಕಲೆಕ್ಟರ್, ಟಗರಪುರ (ಮೊ. 9731788128)
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಮಹದೇವಸ್ವಾಮಿ (ಮೊ. 8618425787) ಪೊಲೀಸ್ ಸಿಬ್ಬಂದಿ, ದೇವೇಂದ್ರನಾಯ್ಕ, ಗ್ರಾಮ ಲೆಕ್ಕಿಗ, ಹೊನ್ನೂರು (ಮೊ. 8722273093) ಇವರುಗಳು ನೇಮಕಗೊಂಡಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರ - ಪಣ್ಯದಹುಂಡಿ ಚೆಕ್ ಪೋಸ್ಟ್ -  ಸೆಕ್ಟರ್ ಅಧಿಕಾರಿಯಾಗಿ ಚಲುವಯ್ಯ (ಮೊ. 9611172984) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಲೋಕೇಶ (ಮೊ. 9538162844) ಪೊಲೀಸ್ ಸಿಬ್ಬಂದಿ, ಮಲ್ಲಣ್ಣ, ಪಿಡಿಓ, ಹೆಗ್ಗೊಠಾರ  (ಮೊ. 9880880874)
ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಮೋಹನ್‍ಕುಮಾರ್ (ಮೊ. 9972645524) ಪೊಲೀಸ್ ಸಿಬ್ಬಂದಿ, ಗಂಗಾಧರÀ, ಗ್ರಾಮ ಲೆಕ್ಕಿಗ, ದೊಡ್ಡಮೋಳೆ  (ಮೊ. 8217389481)
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಹರಿಪ್ರಸಾದ್ (ಮೊ. 8310832320) ಪೊಲೀಸ್ ಸಿಬ್ಬಂದಿ, ನಂದೀಶ, ಗ್ರಾಮ ಲೆಕ್ಕಿಗ, ಮಸಗಾಪುರ (ಮೊ. 9880140674) ಇವರುಗಳು ನೇಮಕಗೊಂಡಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ - ಹಿರೇಕಾಟಿ ಚೆಕ್ ಪೋಸ್ಟ್ -  ಸೆಕ್ಟರ್ ಅಧಿಕಾರಿಯಾಗಿ ಬಿಂದ್ಯ (ಮೊ. 9480843091) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ರಂಗಸ್ವಾಮಿ (ಮೊ. 9686858685), ವೆಂಕಟೇಶ್ ಪೊಲೀಸ್ ಸಿಬ್ಬಂದಿ, ಅಶೋಕ ವಾಲ್ಮೀಕಿ, ಗ್ರಾಮ ಲೆಕ್ಕಿಗ, ಅಗತÀಗೌಡನಹಳ್ಳಿ
 ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಅನ್ಸರ್ ಪಾಶಾ (ಮೊ. 9916722453), ಮಹೇಂದ್ರ ಪೊಲೀಸ್ ಸಿಬ್ಬಂದಿ, ಬಿ. ಸ್ವಾಮಿ, ಕಾರ್ಯದರ್ಶಿ, ನಿಟ್ರೆ (ಮೊ. 9844344348)
 ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಜಯರಾಜ್, ಸ್ವಾಮಿ ಪೊಲೀಸ್ ಸಿಬ್ಬಂದಿ, ಎಸ್. ನಾಗೇಂದ್ರಪ್ಪ, ಗ್ರಾಮ ಲೆಕ್ಕಿಗ, ನಿಟ್ರೆ (ಮೊ. 9845423403) ಇವರುಗಳು ನೇಮಕಗೊಂಡಿದ್ದಾರೆ.
ಕುರುಬಾರಹುಂಡಿ ಚೆಕ್ ಪೋಸ್ಟ್ -  ಸೆಕ್ಟರ್ ಅಧಿಕಾರಿಯಾಗಿ ಎನ್. ರವಿಕುಮಾರ್ (ಮೊ. 9480082699) ನೇಮಕಗೊಂಡಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ವಿಶ್ವ (ಮೊ. 9844097340), ದೊರೆರಾಜು ಪೊಲೀಸ್ ಸಿಬ್ಬಂದಿ, ರವಿ ಕೆ.ಎಂ, ಗ್ರಾಮ ಲೆಕ್ಕಿಗ, ಸೀಗವಾಡಿ ಸಂಜೆ 4 ರಿಂದ ರಾತ್ರಿ 12 ಗಂಟೆಯವರೆಗೆ ಕೃಷ್ಣ (ಮೊ. 9886574662), ಸಂತೋಶ್ ಪೊಲೀಸ್ ಸಿಬ್ಬಂದಿ, ನಾಗೇಗೌಡ,  ಕಾರ್ಯದರ್ಶಿ, ರಾಘವಪುರ ಗ್ರಾಮ ಪಂಚಾಯಿತಿ (ಮೊ. 97311930431)
ರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಗುರುಮಲ್ಲಪ್ಪ, ಮೂರ್ತಿ ಪೊಲೀಸ್ ಸಿಬ್ಬಂದಿ, ಗುದದಯ್ಯ, ಅರಣ್ಯ ರಕ್ಷಕ (ಮೊ. 9632362569) ಇವರುಗಳು ನೇಮಕಗೊಂಡಿದ್ದಾರೆ.

ಯಳಂದೂರು ಪ.ಪಂ. : ನೂತನ ಸ್ವೀಕೃತಿ ವ್ಯವಸ್ಥೆ ಜಾರಿ

ಚಾಮರಾಜನಗರ, ಏ. 02 - ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ಸಾರ್ವಜನಿಕ ಸ್ನೇಹಿ ಮತ್ತು ಪಾರದರ್ಶಕ ಇ-ಆಡಳಿತ ಜಾರಿ ಮಾಡುವ ನಿಟ್ಟಿನಲ್ಲಿ ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಪಟ್ಟಣ ಪಂಚಾಯಿತಿಯು ಸ್ವೀಕೃತಿ ತಂತ್ರಾಂಶವನ್ನು ಖಜಾನೆ 2 ತಂತ್ರಾಂಶದೊಂದಿಗೆ ಅಭಿವೃದ್ಧಿಪಡಿಸಲÁಗಿದೆ.
ಏಪ್ರಿಲ್ 2ರಿಂದ ಯಳಂದೂರು ಪಟ್ಟಣ ಪಂಚಾಯಿತಿಗೆ ಪಾವತಿಸುವ ಆಸ್ತಿ ತೆರಿಗೆ, ನೀರಿನ ಶುಲ್ಕ, ವ್ಯಾಪಾರ ಪರವಾನಗಿ ಶುಲ್ಕ, ಮಳಿಗೆ ಬಾಡಿಗೆ ಮತ್ತು ಇನ್ನಿತರ ಸೇವಾ ಶುಲ್ಕಗಳನ್ನು ಸಾರ್ವಜನಿಕರು ಮತ್ತು 3ನೇ ವ್ಯಕ್ತಿಗಳಿಂದ ಸ್ವೀಕರಿಸಲಾಗುವ ಪಾವತಿಗಳನ್ನು ಸ್ವೀಕೃತಿ ತಂತ್ರಾಂಶದ ಮೂಲಕ ಓವರ್ ದ ಕೌಂಟರ್ ಚಲನ್ ಪಡೆದು ನೇರವಾಗಿ ಬ್ಯಾಂಕ್‍ನಲ್ಲಿ ನಗದು, ಡಿಡಿ, ಚೆಕ್ಕು ಅಥವಾ ಆನ್ ಲೈನ್ (ಇ-ಪಾವತಿ / ನೆಟ್ ಬ್ಯಾಂಕಿಂಗ್) ಮೂಲಕ ಯಳಂದೂರು ಪಟ್ಟಣ ಪಂಚಾಯಿತಿಗೆ ಪಾವತಿಸಬಹುದಾಗಿದೆ.
ಸಾರ್ವಜನಿಕರು ಯಾರ ಬಳಿಯೂ ಹಣ ನೀಡದೆ ತಾವೇ ಖುದ್ದು ಬ್ಯಾಂಕ್‍ನಲ್ಲಿ ಪಾವತಿಸಬೇಕು. ಸಾರ್ವಜನಿಕರಿಂದ ಮೂರನೇ ವ್ಯಕ್ತಿಗಳು ಹಣ ಪಡೆದು ಮೋಸಗೊಳಿಸಿದರೆ ಆಗುವ ನಷ್ಟಕ್ಕೆ ಪಟ್ಟಣ ಪಂಚಾಯಿತಿ ಹೊಣೆಯಲ್ಲ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.




ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು