Monday, 1 October 2018

ವಿದ್ಯಾರ್ಥಿಗಳನ್ನ ಸದೃಡರನ್ನಾಗಿ ಮಾಡುತ್ತಿದ್ದ ದೈಹಿಕ ಶಿಕ್ಷಕ ಇಂದು ನಿತ್ರಾಣ! ನೆರವಿಲ್ಲದೆ ಪರದಾಡುತ್ತಿರುವ ಕುಟುಂಬ. *ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ*

 ದೈಹಿಕ ಶಿಕ್ಷಕರೋರ್ವರಿಗೆ ನೆರವಿನ ಹಸ್ತ ಚಾಚುವಿರಾ.?... ಸುದ್ದಿಗೆ ಸಂಬಂದಿಸಿದ ತಪ್ಪು ಒಪ್ಪುಗಳಿಗೆ ನಾವೆ ಜವಬ್ದಾರರು.. ಈ ಸುದ್ದಿಸಂಬಂದ ಮಾತನಾಡಿದ ಆಡಿಯೋ, ಸಾರ್ವಜನಿಕರೊರ್ವರಿಗೆ ಮಾತನಾಡಿದ ಸಂಬಾಷಣೆ. ಎಷ್ಟು ಹಣ ಪಾವತಿಸಿದ್ದೀರಾ ಎಂಬ ಅಂಶಗಳು ನಮ್ಮಲ್ಲಿದೆ. ಬೆದರಿಕೆ ಕರೆಗಳಿಗೆ ಅಂಜೊದಿಲ್ಲ...ದಯಮಾಡಿ ಯುವಜನಾಂಗ ಹೋಗಿ ಆ ಶಿಕ್ಷಕರ ನೋಡಿ..ಶ್ರೀಮಂತರ ಮಾತುಗಳಿಗೆ ಕಿವಿಕೊಡಬೇಡಿ.‌ಮಾನವೀಯತೆ ನಿಮ್ಮಲ್ಲೂ ಇದೆ ಮಾನವೀಯ ಮೆರೆಯಿರಿ...ಸ್ನೇಹಿತರ ವಾಲ್ ಇಂದ ಸ್ಕ್ರೀನ್ ಷಾಟ್  ತೆಗೆದು ಹಾಕಿದ್ದೇನೆ. ಇಂತಿ. Vss

ವಿದ್ಯಾರ್ಥಿಗಳನ್ನ ಸದೃಡರನ್ನಾಗಿ ಮಾಡುತ್ತಿದ್ದ ದೈಹಿಕ ಶಿಕ್ಷಕ ಇಂದು ನಿತ್ರಾಣ! ನೆರವಿಲ್ಲದೆ ಪರದಾಡುತ್ತಿರುವ ಕುಟುಂಬ. 

*ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ*

 ಚಾಮರಾಜನಗರ: ವಿದ್ಯಾರ್ಥಿಗಳನ್ನ ಸದೃಡರನ್ನಾಗಿ ಮಾಡುತ್ತಿದ್ದ ದೈಹಿಕ ಶಿಕ್ಷಕರೋರ್ವರು  ಆರೋಗ್ಯದಲ್ಲಿ ಏರುಪೇರಾಗಿ ನಿತ್ರಾಣಗೊಂಡು ಆಸ್ಪತ್ರೆಗೆ ಸೇರಿದ್ದಾರೆ ಆದರೆ ಕುಟುಂಬ ವರ್ಗ ನೆರವಿಲ್ಲದೆ ಪರದಾಡುತ್ತಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.                      *ಹೆಸರಾಂತ ಖಾಸಗೀ ಶಾಲೆ ವಿಶ್ವ ಹಿಂದೂ ಪರಿಷದ್ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ರಾಮಚಂದ್ರ ರಾವ್ ಗುರೂಜೀ ಅವರೇ ಚರ್ಮ ಸಂಬಂದಿ ಖಾಯಿಲೆಗೆ ತುತ್ತಾಗಿ ಚಿಕಿತ್ಸೆ ವೆಚ್ಚ ಭರಿಸಲು ಪರದಾಡುತ್ತಿರುವ ಅಂಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

*ಮಾಹಿತಿ ಕಲೆ ಹಾಕಲು ಹೊರಟಾಗ ಇವರು ಶಿವಮೊಗ್ಗ ಸಾಗರದ ಮೂಲದವರಾಗಿದ್ದು ೨೫ ಕ್ಕೂ ಹೆಚ್ಚು ವರ್ಷಗಳಿಂ ದೈಹಿಕ ಶಿಕ್ಷಕರಾಗಿ ಚಾಮರಾಜನಗರ ವಿಶ್ವಹಿಂದೂ ಪರಿಷತ್ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 

*ಪ್ರಪ್ರಥಮವಾಗಿ ಕೆ.ಆರ್. ಆಸ್ಪತ್ರೆಗೆ ಸೇರಿದ್ದ  ಇವರನ್ನ  ನಂತರ ಹಳೆ ವಿದ್ಯಾರ್ಥಿಯೋರ್ವ ಜೆ.ಎಸ್‌.ಎಸ್. ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ತಿಳಿದುಬಂದಿದೆ.

* ಕಳೆದ ವಾರವಷ್ಟೆ ಇಂಜೆಕ್ಷನ್ ಗೆ ೩೦ ಅಥವಾ ೪೦  ಸಾವಿರದಷ್ಟು ಹಣ ಒದಗಿಸಲಾಗದ ಸ್ಥಿತಿ ‌ಇದ್ದುದನ್ನ ನೋಡಿ ವೈದ್ಯರು ಚಿಕಿತ್ಸೆಯನ್ನ   ಸ್ವಲ್ಪ ದಿನಗಳ ಕಾಲ ಮುಂದೂಡಿದ್ದರು ಎಂದು ತಿಳಿದುಬಂದಿದೆ.

 * ಹೆಸರು ಹೇಳಲು ಇಚ್ಚಿಸಲಾರದ ಹಳೆ ವಿದ್ಯಾರ್ಥಿಯೋರ್ವ ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆಯನ್ನ ಇಟ್ಟು ತಮ್ಮ ಶಿಕ್ಷಕರ ನೆರವಿಗೆ ಅಂಗಲಾಚಿ ಕೊನೆಗೆ ಚಿಕಿತ್ಸೆಗೆ ಅಗತ್ಯವಾಗುವಷ್ಟು ಹಣ ಒದಗಿಸುವಲ್ಲಿ ಸಫಲನಾಗಿದ್ದು ಶಿಕ್ಷಕರ ಕುಟುಂಬಕ್ಕೆ ಕೈಲಾದ ನೆರವು ಮಾಡಿದ್ದಾರೆ. ಆರೋಗ್ಯ ಸ್ವಲ್ಪ ಮಟ್ಟಿಗೆ ಚೇತರಿಕೆಯಾಗುತ್ತಿದೆ ಎಂದು ತಿಳಿದುಬಂದಿದ್ದು ಎಂದಿನಂತೆ ಬದುಕುಳಿಯಲು ಚಿಕಿತ್ಸೆಗೆ ಹೆಚ್ಚು ಹಣದ ಅಗತ್ಯವಿದೆ ಎಂದು ತಿಳಿದುಬಂದಿದೆ.  

 *ಸಂಸ್ಥೆಯ ಆಡಳಿತಾಧಿಕಾರಿಯೋರ್ವರನ್ನ ಸಂಪರ್ಕಿಸಲಾಗಿ ಆರೋಗ್ಯವಿಮೆ ಭರಿಸಿದ್ದೇವೆ ಎಂದು ಉತ್ತರ ಕೊಟ್ಟರು ಆದರೆ ತಕ್ಷಣ ಸಂಸ್ಥೆ ಕಡೆಯಿಂದ ಏನು ಹಣಕಾಸು ನೆರವು ಇತರ ಚಿಕಿತ್ಸಾ ನೆರವು ನೀಡಿದ್ದೀರಾ ಎಂಬ ಪ್ರಶ್ನೆಗೆ ಮಾತ್ರ ನಾವೆ ಎಲ್ಲವನ್ನ ಮಾಡಿದ್ದೇವೆ. ವೈದ್ಯರ ಜೊತೆ ಮಾತುಕತೆಯಾಡಿದ್ದೇವೆ. ಹಣ ನೆರವು ಕೊಟ್ಟಿರುವ ಬಗ್ಗೆ ಪ್ರಸ್ತಾಪಿಸಿದಾಗ ಅದು ಹೇಳುವುದು ಬೇಡ ಎಂದು ನುಣುಚಿಕೊಂಡು ಉತ್ತರಿಸಿದ್ದಾರೆ. 

 *ಒಟ್ಟಾರೆ ಚಿಕಿತ್ಸೆಗೆ ಮೈಸೂರು ಜೆ.ಎಸ್.ಎಸ್ ವೈದ್ಯರು ವಾರದಿಂದಲೂ ಶ್ರಮವಹಿಸಿ ನೋಡಿಕೊಳ್ಳುತ್ತಿದ್ದು ಶಿಕ್ಷಕರ ಆಸ್ಪತ್ರೆ ಚಿಕಿತ್ಸಾ ವೆಚ್ಚ ನೋಡಿದರೆ ಸಾಕಾಗುವುದು ಕಷ್ಟ ಎಂಬ ಅಂಶ ಮಾತ್ರ ತಿಳಿದುಬಂದಿದೆ.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು