Tuesday, 24 July 2018

ಬೀದಿನಾಟಕ, ಸಂಗೀತ ಕಲಾತಂಡಗಳ ಆಯ್ಕೆಗೆ ಅರ್ಜಿ ಆಹ್ವಾನ (24-07-2018)

 ಬೀದಿನಾಟಕ, ಸಂಗೀತ ಕಲಾತಂಡಗಳ ಆಯ್ಕೆಗೆ ಅರ್ಜಿ ಆಹ್ವಾನ

ಚಾಮರಾಜನಗರ, ಜು. 24- ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 2018-19ನೇ ಸಾಲಿನಲ್ಲಿ ಏರ್ಪಡಿಸಲಾಗುವ ಗ್ರಾಮಸಂಪರ್ಕ ಕಾರ್ಯಕ್ರಮದಡಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಚುರಪಡಿಸುವ ಸಲುವಾಗಿ ಆಯೋಜಿಸಲಾಗುವ ಬೀದಿ ನಾಟಕ ಹಾಗೂ ಜಾನಪದ ಸಂಗೀತ ಕಲಾ ಪ್ರದರ್ಶನ ಆಯ್ಕೆಗಾಗಿ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೀದಿ ನಾಟಕ ಕಲಾತಂಡದಲ್ಲಿ ಕನಿಷ್ಟ 8 ಜನ ಕಲಾವಿದರು ಇರಬೇಕು. ಈ ಪೈಕಿ ಇಬ್ಬರು ಮಹಿಳಾ ಕಲಾವಿದರು ಇರÀುವುದು ಕಡ್ಡಾಯ. ತಂಡದ ಕಲಾವಿದರ ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರಬೇಕು. 
ಜಾನಪದ ಸಂಗೀತ ಕಲಾತಂಡದಲ್ಲಿ 3 ಜನ ಕಲಾವಿದರಿರಬೇಕು. ಈ ಪೈಕಿ ಒಬ್ಬರು ಮಹಿಳೆಯರಾಗಿರಬೇಕು. ಕಲಾವಿದರ ಪೈಕಿ ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರಬೇಕು.
ಅರ್ಜಿ ಸಲ್ಲಿಸುವ ತಂಡವು ನೋಂದಣಿಯಾಗಿರಬೇಕು. ನೋಂದಣಿ ಕುರಿತ ದಾಖಲೆಗಳ ಪ್ರತಿ, ಕಲಾವಿದರ ಆಧಾರ್ ಕಾರ್ಡ್, ಪಾನ್ ಕಾರ್ಡ್, ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ಪಾಸ್ ಬುಕ್ ಜೆರಾಕ್ಸ್ ಸೇರಿದಂತೆ ಇತರೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಬೇಕು. ಅರ್ಜಿ ಸಲ್ಲಿಕೆಗೆ ಜುಲೈ 31 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಭವನ ಸಂಪರ್ಕಿಸುವಂತೆ ಇಲಾಖೆ ಪ್ರಕಟಣೆ ತಿಳಿಸಿದೆ. 
ಜು. 25ರಂದು ಪ್ರವಾಸೋದ್ಯಮ, ರೇಷ್ಮೆ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಜು. 24 (ಕರ್ನಾಟಕ ವಾರ್ತೆ):- ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವರಾದ ಸಾ.ರಾ. ಮಹೇಶ್ ಅವರು ಜುಲೈ 25ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 11.30 ಗಂಟೆಗೆ ಕೊಳ್ಳೇಗಾಲದ ಮುಡಿಗುಂಡ ರೇಷ್ಮೆ ಗೂಡು ಮಾರುಕಟ್ಟೆಗೆ ಭೇಟಿ ನೀಡುವರು. ಮಧ್ಯಾಹ್ನ 12 ಗಂಟೆಗೆ ಭರಚುಕ್ಕಿ ಜಲಪಾತಕ್ಕೆ ಭೇಟಿ ನೀಡುವರು. ಮಧ್ಯಾಹ್ನ 1 ಗಂಟೆಗೆ ಗಗನÀಚುಕ್ಕಿ ಜಲಪಾತಕ್ಕೆ ಭೇಟಿ ನೀಡುವರು ಹಾಗೂ ಮಯೂರ ಹೋಟೆಲ್‍ನಲ್ಲಿ ಕೆಎಸ್‍ಟಿಡಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 2.30 ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಕಾಣೆಯಾದ ವ್ಯಕ್ತಿ ಬಗ್ಗೆ ಸುಳಿವು ನೀಡಲು ಮನವಿ
ಚಾಮರಾಜನಗರ, ಜು. 2- ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ವ್ಯಾಪ್ತಿಯ ಶ್ಯಾನಡ್ರಳ್ಳಿ ಗ್ರಾಮದಿಂದ ಮಹದೇವಶೆಟ್ಟಿ ಎಂಬುವರು ಕಾಣೆಯಾಗಿದ್ದಾರೆಂದು ಅವರ ಪತ್ನಿ ದೂರು ದಾಖಲಿಸಿದ್ದು ಸದರಿ ವ್ಯಕ್ತಿಯ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ.
ಮಹದೇವಶೆಟ್ಟಿ ಅವರಿಗೆ 62 ವರ್ಷ ವಯಸ್ಸಾಗಿದ್ದು ಕಪ್ಪುಬಿಳಿ ಮಿಶ್ರಿತ ತಲೆಕೂದಲು, ಗಡ್ಡ ಮೀಸೆ, ದÀುಂಡು ಮುಖ, ಸಾದಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಓರೆಗಣ್ಣು ಹೊಂದಿರುತ್ತಾರೆ. 5.7 ಅಡಿ ಎತ್ತರವಿದ್ದು ಬಿಳಿ ಬಣ್ಣದ ಚೌಕಳಿ ಶರ್ಟ್ ಮತ್ತು ಬಿಳಿ ಪಂಚೆ ಧರಿಸಿರುತ್ತಾರೆ. ಈ ಚಹರೆ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ದೂ.ಸಂಖ್ಯೆ 08226-222243, ಜಿಲ್ಲಾ ಕಂಟ್ರೋಲ್ ರೂಂ 08226-222383, ತೆರಕಣಾಂಬಿ ಪೊಲೀಸ್ ಠಾಣೆ 08229-232235, ಮೊಬೈಲ್ 9480804652 ಸಂಪರ್ಕಿಸುವಂತೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಸುತ್ತುನಿಧಿಗೆ ಯುವ ಸಂಘಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಜು. 24  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಯುವಶಕ್ತಿ ಯೋಜನೆಯಡಿ ಪ್ರತಿ ಸಂಘಕ್ಕೆ ನೀಡಲಾಗುವ 5 ಲಕ್ಷ ರೂ. ಸುತ್ತುನಿಧಿಗೆ ಅರ್ಜಿ ಆಹ್ವಾನಿಸಿದೆ.
ಸಾಮಾಜಿಕ ಕ್ಷೇತ್ರದಲ್ಲಿ ಅಸಾಧಾರಣ ಪ್ರಗತಿ ಕೆಲಸ ಮಾಡುತ್ತಿರುವ ಇಲಾಖೆಯಲ್ಲಿ ನೊಂದಾಯಿಸಿಕೊಂಡಿರುವ ಯುವ ಸಂಘಗಳನ್ನು ಆಯ್ಕೆ ಮಾಡಿ ಸುತ್ತುನಿಧಿ ಮಂಜೂರು ಮಾಡಲಾಗುತ್ತದೆ.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಆಗಸ್ಟ್ 6ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಸದರಿ ಕಚೇರಿ ಅಥವ ದೂ.ಸಂ. 08226-224932 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. 
ಜು. 28ರವರೆಗೆ ಪಿಯು ದಾಖಲಾತಿಗೆ ಅವಕಾಶ
ಚಾಮರಾಜನಗರ, ಜು. 24  ಜಿಲ್ಲೆಯ ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಜುಲೈ 28ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.
ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶುಲ್ಕವಿಲ್ಲದೆ ಹಾಗೂ ಮಾರ್ಚ್ 2018ರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ದಂಡಶುಲ್ಕದೊಂದಿಗೆ ದಾಖಲಾತಿ ಮಾಡಿಕೊಳ್ಳಲು ಪದವಿಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರಾದ ವಿ.ಆರ್. ಶ್ಯಾಮಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
x

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು