Tuesday, 5 July 2016

18-03-2016 to 29-03-2016

ಅಸ್ಪøಶ್ಯತೆ ನಿವಾರಣೆಗೆ ಸಂಕಲ್ಪ : ಜಿಲ್ಲಾಧಿಕಾರಿ ಬಿ. ರಾಮು
ಚಾಮರಾಜನಗರ, ಮಾ. 18 - ಸಮಾಜದಲ್ಲಿ ಅಸ್ಪøಶ್ಯತಾ ಆಚರಣೆ ಬೇರಿಗೆ ಪೋಷಣೆ ಮಾಡದೆ ಬುಡಸಮೇತ ಕಿತ್ತುಹಾಕುವ ಸಂಕಲ್ಪ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಸ್ಪøಶ್ಯತಾ ನಿವಾರಣೆ ಕುರಿತ ವಿಚಾರಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು ಬಹುವರ್ಷಗಳು ಕಳೆದಿವೆ. ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕು ಇದೆ. ಅಸ್ಪøಶ್ಯತೆ ಎನ್ನುವ ತಾಯಿ ಬೇರಿಗೆ ನೀರು, ಮಣ್ಣು, ಗೊಬ್ಬರ ಎರೆಯುವ ಕೆಲಸ ಮಾಡಬಾರದು. ಅಸ್ಪøಶ್ಯತೆ ಎಂಬ ಹೆಮ್ಮರವನ್ನು ಕಾಂಡದಿಂದ ಹಿಡಿದು ಬೇರು ಸಮೇತ ಕಿತ್ತೊಗೆಯುವ ಕಾಲ ಬಂದೇಬರುತ್ತದೆ. ಜನತೆ ಸೌಹಾರ್ಧತೆಯಿಂದ ಬಾಳುವ ಮನೋಭಾವನೆ ರೂಢಿಸಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಸ್ವಾಭಿಮಾನದ ಜೀವನ ನಡೆಸಬೇಕು. ವ್ಯಕ್ತಿಗಳ ನಡುವೆ ಹುಟ್ಟುಹಾಕುವ ಕಂದಕಗಳನ್ನು ಮುಚ್ಚಬೇಕು. ಯಾವುದೇ ಬೇಧಭಾವ ಎಣಿಸದೆ ನೆಮ್ಮದಿಯಾಗಿ ಬದುಕಬೇಕು. ಮನಶಾಂತಿ ಹಾಳು ಮಾಡಿಕೊಳ್ಳದೆ ಕಷ್ಟಕ್ಕೆ ದೂಡಿಕೊಳ್ಳದೆ ಸಾತ್ವಿಕ ಬದುಕು ನಡೆಸುವ ಪ್ರಯತ್ನ ಮಾಡಬೇಕೆಂದು ರಾಮು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಳಂದ ಬೌದ್ಧ ವಿವಿಯ ಬೋಧಿದತ್ತ ಬಂತೇಜಿ ಅವರು ಜಾತೀಯತೆ ಮುಂದುವರೆಸುವ ವ್ಯವಸ್ಥೆಯನ್ನು ಕೈಬಿಡಬೇಕು. ಎಲ್ಲರನ್ನು ಸರಿಸಮಾನರಾಗಿ ಕಾಣುವ ಆಶಯಗಳಿಗೆ ಒಪ್ಪಿಕೊಳ್ಳುವ ಚಿಂತನೆ ಮಾಡಬೇಕು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿಯವರು ಪ್ರತಿಯೊಬ್ಬರು ಮತ್ತೊಬ್ಬರನ್ನು ಗೌರವ ವಿಶ್ವಾಸದಿಂದ ಕಾಣುವಂತಾಗಬೇಕು. ಇನ್ನೊಬ್ಬರನ್ನು ಬದಲಾಯಿಸುವ ಮೊದಲು ತಮ್ಮನ್ನು ತಾವೇ ಬದಲಾಯಿಸಿಕೊಳ್ಳಬೇಕು. ಸಮಾಜದಲ್ಲಿ ಬದಲಾವಣೆ ತರುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.
ಅಸ್ಪøಶ್ಯತೆ ನಿರ್ಮೂಲನೆಯಲ್ಲಿ ನಾಗರಿಕರ ಜವಾಬ್ದಾರಿ ಮತ್ತು ಹಕ್ಕು ಬಾಧ್ಯತೆಗಳು ಎಂಬ ವಿಷಯ ಕುರಿತು ಮಾತನಾಡಿದ ಅಮೃತ ಅತ್ರಾಡಿ ಅವರು ಸಾಮಾಜಿಕ ಕಳಕಳಿ ಹೊಂದಿರುವ ಮನಸ್ಸುಗಳ ಜತೆ ಆಡಳಿತಶಾಹಿ ಕೈಜೋಡಿಸಿದರೆ ಅಸ್ಪøಶ್ಯತೆಯ ಬೇರನ್ನು ಕಿತ್ತುಹಾಕಲು ಸಾಧ್ಯವಾಗಲಿದೆ. ಸ್ವಾಭಿಮಾನ ಬೆಳೆಸಿಕೊಂಡು  ಅಂಬೇಡ್ಕರ್ ಅವರ ಹಾದಿಯನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಅಸ್ಪøಶ್ಯತೆಯ ಉಗಮ ಮತ್ತು ಸಾಮಾಜಿಕ ಅಸಮಾನತೆ ಎಂಬ ವಿಷಯ ಕುರಿತು ಮಾತನಾಡಿದ ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಡಾ. ಶಿವಕುಮಾರ್ ಸಹಭೋಜನ, ಅಂತರ್ಜಾತಿ ವಿವಾಹ, ಶಿಕ್ಷಣದಿಂದಲೇ ಅಸ್ಪøಶ್ಯತೆ ನಿವಾರಣೆಯಾಗಲು ಸಾಧ್ಯ ಎಂಬುದನ್ನು ಪೂರ್ಣವಾಗಿ ಒಪ್ಪಲಾಗದು. ಅಂಬೇಡ್ಕರ್ ಪ್ರತಿಪಾದಿಸಿದಂತೆ ಅಧಿಕಾರ ಹೀನ ಸ್ಥಿತಿಯೇ ಅಸ್ಪøಶ್ಯತೆ. ಸ್ವತಂತ್ರ್ಯ ರಾಜಕೀಯ ಅಧಿಕಾರವನ್ನು ಹೋರಾಟ ಮಾಡಿ ಪಡೆಯಬೇಕು. ವಿನಹ ಗೋಗರೆದು ಬೇಡಿದರೆ ಅಸ್ಪøಶ್ಯತೆ ಹೋಗುವುದಿಲ್ಲ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ ಅಸ್ಪøಶ್ಯತೆ ನಿರ್ಮೂಲನೆ, ಕಾನೂನು ನೆರವು, ಪರಿಶಿಷ್ಟ ಜಾತಿ ವರ್ಗಗಳ ಮೇಲಿನ ದೌರ್ಜನ್ಯ ಪ್ರತಿಬಂಧ ಅಧಿನಿಯಮ ವಿಷಯ ಕುರಿತು ಮಾತನಾಡಿದರು.
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಿ. ಶಿವಕುಮಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರೇವಣ್ಣ, ಸಮಾಜ ಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕರಾದ ದಾಶರಥಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆ
ಚಾಮರಾಜನಗರ, ಮಾ. 18- ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚಿಸಲಾಗಿದೆ.
ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ದೂರು ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ. ನಿವೃತ್ತ ಕೆಎಎಸ್ ಅಧಿಕಾರಿ ಪುಟ್ಟಮಾದಯ್ಯ, ದೀನಬಂಧು ಸಂಸ್ಥೆಯ ಪ್ರೊ.ಜಿ.ಎಸ್. ಜಯದೇವ್ ಸದಸ್ಯರಾಗಿದ್ದು ಜಿಲ್ಲಾ ಪೊಲೀಸ್ ಅಧೀಕ್ಷಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರವು ಡಿವೈಎಸ್‍ಪಿ ಹಾಗೂ ಕೆಳಗಿನ ಹಂತದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸಂಜ್ಞೆಯ ಅಪರಾಧಗಳಲ್ಲಿ ತೊಡಗಿದ ಬಗೆಗಿನ ದೂರುಗಳ ಬಗ್ಗೆ ವಿಚಾರಣೆ ಮಾಡುವ ಅಧಿಕಾರ ಹೊಂದಿದೆ. ಪೊಲೀಸ್ ಅಭಿರಕ್ಷೆಯಲ್ಲಿ ನಡೆದ ಸಾವು, ತೀವ್ರ ಸ್ವರೂಪದ ಗಾಯ, ಅತ್ಯಾಚಾರ, ಇನ್ನಿತರ ವಿಷಯಗಳನ್ನು ವಿಚಾರಣೆ ಮಾಡುವ ಅಧಿಕಾರ ಸಹ ಹೊಂದಿದೆ.
ಡಿವೈಎಸ್‍ಪಿಗಿಂತ ಮೇಲ್ಪಟ್ಟ ಅಧಿಕಾರಿಗಳ ವಿರುದ್ಧ ದೂರುಗಳು ಸ್ವೀಕೃತವಾದಲ್ಲಿ ರಾಜ್ಯಮಟ್ಟದ ದೂರು ಪ್ರಾಧಿಕಾರಕ್ಕೆ ದೂರು ರವಾನಿಸಬೇಕಾಗುತ್ತದೆ. ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರವು ಪ್ರತಿವರ್ಷ ರಾಜ್ಯಸರ್ಕಾರಕ್ಕೆ ವಾರ್ಷಿಕ ವರದಿಯನ್ನು ಸಲ್ಲಿಸಬೇಕಿದೆ.
ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ಬಂದ ದೂರುಗಳನ್ನು ವಿಚಾರಣೆ ಮಾಡಲು ಸಿವಿಲ್ ನ್ಯಾಯಾಲಯದಷ್ಟೇ ಅಧಿಕಾರವಿರುತ್ತದೆ.
ಪ್ರತಿ ಠಾಣಾ ಮಟ್ಟದಲ್ಲಿ ಒಂದೊಂದು ಘಟಕ ಪ್ರಾರಂಭಿಸಬೇಕಿದೆ. ಕರ್ನಾಟಕ ರಾಜ್ಯ ಪೊಲೀಸ್ (ತಿದ್ದುಪಡಿ) ಕಾಯಿದೆ 2012ರ ನಿಯಮ 20ಡಿ, 20ಇ, 20ಎಫ್ ಹಾಗೂ 20ಜಿ ನಲ್ಲಿರುವ ಅಧಿಕಾರಗಳನ್ನು ಹೊಂದಿರುತ್ತದೆ.
ಯಾವುದೇ ದೂರು ಸಲ್ಲಿಸಬೇಕಿದ್ದಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿ, ಮೈಸೂರು, ದೂ.ಸಂಖ್ಯೆ 0821-2414088, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ, ಚಾಮರಾಜನಗರ ದೂ.ಸಂಖ್ಯೆ 08226-222243, 222912 ಮತ್ತು 224005 ಸಂಪರ್ಕಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೇಸಿಗೆ ಹಿನ್ನೆಲೆ : ನೈರ್ಮಲ್ಯ ಕ್ರಮ ಪಾಲನೆಗೆ ನಗರಸಭೆ ಸೂಚನೆ
ಚಾಮರಾಜನಗರ, ಮಾ. 18 - ಬೇಸಿಗೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿರುವ ಹೋಟೆಲ್, ಕ್ಯಾಂಟೀನ್, ಬಾರ್, ರೆಸ್ಟೋರೆಂಟ್ ಆಹಾರ ಪದಾರ್ಥ ಮಾರಾಟಗಾರರು ನೈರ್ಮಲ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ನಗರಸಭೆ ಸೂಚಿಸಿದೆ.
ಹೋಟೆಲ್‍ನಲ್ಲಿ ಗ್ರಾಹಕರಿಗೆ ಬಿಸಿ ನೀರು ಹಾಗೂ ಬಿಸಿ ಆಹಾರ ಪದಾರ್ಥಗಳನ್ನೇ ನೀಡಬೇಕು. ಸಿಹಿತಿಂಡಿಗಳ ಮೇಲೆ  ನೊಣ ಕ್ರಿಮಿಕೀಟ ಕೂರದ ಹಾಗೆ ಜಾಗ್ರತೆ ವಹಿಸಬೇಕು.
ರಸ್ತೆ ಬದಿಯ ಎಳನೀರು, ಹಣ್ಣು, ಪಾನಿಪುರಿ, ಫಾಸ್ಟ್ ಫುಡ್, ತಂಪುಪಾನೀಯ ಮಾರಾಟಗಾರರು ತ್ಯಾಜ್ಯವಸ್ತುಗಳನ್ನು ಚರಂಡಿ, ಖಾಲಿ ನಿವೇಶನಗಳಿಗೆ ಸುರಿಯದೆ ನಗರಸಭೆ ವಾಹನಗಳಿಗೆ ನೀಡಬೇಕು ಅಥವಾ ನಗರಸಭೆ ಸೂಚಿಸಿದ ಸ್ಥಳದಲ್ಲಿ ವಿಲೇವಾರಿ ಮಾಡಬೇಕು.
ಹೋಟೆಲ್, ಕ್ಯಾಂಟೀನ್, ಬಾರ್ ರೆಸ್ಟೋರೆಂಟ್‍ಗಳಿಗೆ ನಗರಸಭೆ ಆರೋಗ್ಯ ಅಧಿಕಾರಿ ಸಿಬ್ಬಂದಿ ಭೇಟಿ ನೀಡಿದ ಸಂದರ್ಭದಲ್ಲಿ ಶುಚಿತ್ವ ಪರಿಸರ ಕಂಡುಬರದಿದ್ದಲ್ಲಿ ಕಟ್ಟುನಿಟ್ಟಾಗಿ ಕ್ರಮ ಜರುಗಿಸಲಾಗುತ್ತದೆ.
ನಾಗರಿಕರು ರಸ್ತೆ ಬದಿಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು. ದನ,ಹಂದಿ, ನಾಯಿ ಇತರೆ ಸಾಕುಪ್ರಾಣಿಗಳನ್ನು ಸಾರ್ವಜನಿಕ ರಸ್ತೆಗೆ ಬಿಡದೆ ತಮ್ಮ ನಿವಾಸ ಅಂಗಳದಲ್ಲೇ ಪೋಷಣೆ ಮಾಡಬೇಕು. ತಪ್ಪಿದಲ್ಲಿ ಪ್ರಾಣಿಗಳನ್ನು ಸೆರೆಹಿಡಿದು ಪಿಂಜರಾಪೋಲ್‍ಗೆ ಸಾಗಿಸಲಾಗುವುದು.
ಬೇಸಿಗೆ ವೇಳೆ ನಾಗರಿಕರು ಹೋಟೆಲ್ ಇನ್ನಿತರ ಆಹಾರ ಪದಾರ್ಥ ಮಾರಾಟಗಾರರು ಆರೋಗ್ಯಪೂರಕ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ನಗರಸಭೆ ಪೌರಾಯುಕ್ತರಾದ ಎಂ.ಜಿ. ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಮಾರಾಟ ವಿರುದ್ಧ ಕ್ರಮ
 ಚಾಮರಾಜನಗರ, ಮಾ. 18 - ಚಾಮರಾಜನಗರ ಪಟ್ಟಣ ವ್ಯಾಪ್ತಿಯಲ್ಲಿ 40 ಮೈಕ್ರಾನ್‍ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ದಾಸ್ತಾನು ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ.
40 ಮೈಕ್ರಾನ್‍ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಮಾರಾಟ ಬಳಕೆ ದಾಸ್ತಾನು ನಿಷೇಧ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಅಕ್ರಮ ದಾಸ್ತಾನು ವಶಪಡಿಸಿಕೊಂಡು ದಂಡ ವಿಧಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರಾದ ಎಂ.ಜಿ. ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಮಾ. 19ರಂದು ನಗರದಲ್ಲಿ ಅಸ್ಪøಶ್ಯತಾ ನಿವಾರಣಾ ಕುರಿತು ಕಾರ್ಯಾಗಾರ
ಚಾಮರಾಜನಗರ, ಮಾ. 18 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಅಸ್ಪøಶ್ಯತಾ ನಿವಾರಣೆ ಕುರಿತ ಕಾರ್ಯಾಗಾರವನ್ನು ಮಾರ್ಚ್ 19ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಸೇವಾಭಾರತಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಪಟ್ಟಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಆರ್. ಶ್ರೀಕಾಂತ್ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ವಕೀಲರು ಹಾಗೂ ಸೇವಾಭಾರತಿ ಶಿಕ್ಷಣ ಸಂಸ್ಥೆಯ ಸದಸ್ಯರಾದ ಕೆ. ಬಾಲಸುಬ್ರಹ್ಮಣ್ಯಂ ಅಧ್ಯಕ್ಷತೆ ವಹಿಸುವರು.
ಹಿರಿಯ ವಕೀಲರಾದ ಎಂ. ಚಿನ್ನಸ್ವಾಮಿ ವಿಚಾರ ಮಂಡಿಸುವರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜೇಶ್ ಜಿ ಗೌಡ, ಪ್ರಾಂಶುಪಾಲರಾದ ಟಿ.ಎ. ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ದಾಶರಥಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.

ಮಾ. 23ರಂದು ಡಾ.ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನರಾಮ್ ದಿನಾಚರಣೆ ಕುರಿತು ಪೂರ್ವಭಾವಿ ಸಭೆ
ಚಾಮರಾಜನಗರ, ಮಾ. 18:- ಜಿಲ್ಲಾಡಳಿತದ ವತಿಯಿಂದ ಡಾ. ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನ ಆಚರಣೆ ಸಮಾರಂಭ ಹಮ್ಮಿಕೊಳ್ಳುವ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಮಾರ್ಚ್ 23ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಸಭೆಗೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿ ಅಗತ್ಯ ಸಲಹೆ, ಮಾರ್ಗದರ್ಶನ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಹಾಗೂ ಡಾ. ಬಾಬು ಜಗಜೀವನರಾಂ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿಯ ಕಾರ್ಯದರ್ಶಿ ಜಿ. ರಾಜೇಶ್‍ಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.22ರಂದು ಮಹದೇಶ್ವರ ಬೆಟ್ಟದಲ್ಲಿ ಗೋಲಕ ಹಣ ಎಣಿಕೆ
ಚಾಮರಾಜನಗರ, ಮಾ. 18 - ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಾಲಯದಲ್ಲಿ ಇರುವ  ಗೋಲಕಗಳ  ಹಣ ಎಣಿಕೆ ಕಾರ್ಯವನ್ನು ಮಾಚ್ ್ 22ರಂದು ಬೆಳಿಗ್ಗೆ ನಡೆಸಲಾಗುತ್ತದೆ.
ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ಸಹಯೋಗದೊಂದಿಗೆ ಹಣ ಎಣಿಕೆ ಕಾರ್ಯ ಮಾಡಲಾಗುತ್ತದೆ ಎಂದು ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ. 20ರಂದು ಹೊಸಪೋಡುವಿನಲ್ಲಿ ಗಿರಿಜನ ಬುಡಕಟ್ಟು ಸಾಂಸ್ಕøತಿಕ ಉತ್ಸವ
ಚಾಮರಾಜನಗರ, ಮಾ. 19 :- ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಗಿರಿಜನ ಬುಡಕಟ್ಟು ಸಾಂಸ್ಕøತಿಕ ಉತ್ಸವವನ್ನು ಮಾರ್ಚ್ 20ರಂದು ಬೆಳಿಗ್ಗೆ 11 ಗಂಟೆಗೆ ಕೊಳ್ಳೇಗಾಲ ತಾಲೂಕಿನ ಹನೂರು ವಲಯದ ಹೊಸಪೋಡುನಲ್ಲಿ ಹಮ್ಮಿಕೊಳ್ಳಲಾಗಿದೆ.
ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವÀರಾದ ಎಚ್.ಎಸ್. ಮಹದೇವಪ್ರಸಾದ್ ಉದ್ಘಾಟನೆ ನೆರವೇರಿಸುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಉಮಾಶ್ರೀ ಮೆರವಣಿಗೆ ಉದ್ಘಾಟಿಸುವರು. ಶಾಸಕರಾದ ಆರ್. ನರೇಂದ್ರ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್‍ನ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಗೋ. ಮಧುಸೂದನ್, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಸದಸ್ಯರಾದ ಮರುಗದಮಣಿ, ತಾಲೂಕು ಪಂಚಾಯತ್ ಸದಸ್ಯರಾದ ಶಿವಮ್ಮ, ಗ್ರಾಮ ಪಂಚಾಯತ್ ಅಧÀ್ಯಕ್ಷರಾದ ಎಸ್. ಬಸವಣ್ಣ, ಉಪಾಧ್ಯಕ್ಷರಾದ ಶಾಂತಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕರಾದ ಕೆ.ಎ. ದಯಾನಂದ್, ಜಂಟಿನಿರ್ದೇಶಕರಾದ ಬಲವಂತರಾವ್ ಪಾಟೀಲ್ ಪಾಲ್ಗೊಳ್ಳುವರು.
ಬುಡಕಟ್ಟು ಸಾಂಸ್ಕøತಿಕ ಉತ್ಸವದಲ್ಲಿ ಬಿಳಿಗಿರಿರಂಗನ ಬೆಟ್ಟದ ಬಸವರಾಜು ಮತ್ತು ತಂಡದಿಂದ ಗೊರುಕನ ನೃತ್ಯ, ಯರಕನಗದ್ದೆ ಕಾಲೋನಿಯ ಪದ್ಮ ಮತ್ತು ತಂಡದಿಂದ ಗುಬ್ಬಿ ಹಾಲೇ ನೃತ್ಯ, ಕಾಳಮಳೆದೊಡ್ಡಿಯ ತಿಪ್ಪಯ್ಯ ಮತ್ತು ತಂಡದಿಂದ ಪಿನಾಸಿ ನೃತ್ಯ, ಬಿಳಿಗಿರಿರಂಗನ ಬೆಟ್ಟದ ಬೂಪನಿಪೋಡುವಿನ ದಾಸೇಗೌಡ ಮತ್ತು ತಂಡದಿಂದ ಹಾಡುಕೆ, ಮುನೇಶ್ವರ ಕಾಲೋನಿಯ ಶಿವರಾಮು ಮತ್ತು ತಂಡದಿಂದ ಸೋಲಿಗ ನೃತ್ಯ, ಮದ್ದೂರು ಕಾಲೋನಿಯ ರತ್ನಮ್ಮ ಮತ್ತು ತಂಡದಿಂದ ಪಿನಾಸಿ ನೃತ್ಯ, ಹರದನಹಳ್ಳಿಯ ಎಸ್. ನಟರಾಜು ಮತ್ತು ತಂಡದಿಂದ ಸುಗಮ ಸಂಗೀತ, ದಕ್ಷಿಣ ಕೊಡಗಿನ ರಮೇಶ್ ಮತ್ತು ತಂಡದಿಂದ ತೋಟದಿಮ್ಮಿ ನೃತ್ಯ, ಕೋಟೆಕೆರೆಯ ಮಹದೇವನಾಯ್ಕ ಮತ್ತು ತಂಡದಿಂದ ಹುಲಿವೇಷ, ಬಸವಾಪುರದ ಮಹದೇವನಾಯ್ಕ ಮತ್ತು ತಂಡದಿಂದ ತಂಬೂರಿ ಪದ, ಕೊಣದಕೆರೆಯ ದೇವರಾಜ್ ಮತ್ತು ತಂಡದಿಂದ ಮಾರಿ ಕುಣಿತ, ಬಾಣವಾಡಿಯ ಸಣ್ಣಮಾದೇಗೌಡ ಮತ್ತು ತಂಡದಿಂದ ಪಿನಾಸಿ ನೃತ್ಯ, ಹಾವಿನಮೂಲೆ ಕಲಾವಿದರಿಂದ ಸೋಬಾನೆ ಪದ, ಹರದನಹಳ್ಳಿಯ ಮಹೇಶ ಮತ್ತು ತಂಡದಿಂದ ಬೀಸು ಕಂಸಾಳೆ, ಮೈಸೂರಿನ ಮುತ್ತೂರು ಆಶ್ರಮಶಾಲೆ ಮಕ್ಕಳಿಂದ ಜಾನಪದ ನೃತ್ಯ, ಟಗರಪುರ ಪುರುಷೋತ್ತಮ್ ಮತ್ತು ತಂಡದಿಂದ ಭಕ್ತಿಗೀತೆ, ಗುಂಡ್ಲುಪೇಟೆಯ ಬಿ.ಎಂ. ಸುರೇಶ್ ಮತ್ತು ತಂಡದಿಂದ ಹಳ್ಳಿ ಗೌಡ್ರು ಎಂಬ ಸಾಮಾಜಿಕ ನಾಟಕ, ಹಂಗಳದ ಕಾಳನಾಯ್ಕ ಮತ್ತು ತಂಡದಿಂದ ಹರಿಕಥೆ, ಹರದನಹಳ್ಳಿಯ ಹೆಚ್.ಆರ್. ಕೃಷ್ಣಯ್ಯ (ಘಟಂ ಕೃಷ್ಣ) ಮತ್ತು ತಂಡದಿಂದ ರಂಗಗೀತೆ ಹಾಗೂ ಗುಂಡ್ಲುಪೇಟೆ ಕಲಾವಿದರಿಂದ ಕಾಡು ಕುರುಬರ ನೃತ್ಯ ಪ್ರದರ್ಶನ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಏ. 10ರೊಳಗೆ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳಿಸಿ : ಡೀಸೀ ರಾಮು ತಾಕೀತು
ಚಾಮರಾಜನಗರ, ಮಾ. 19 - ಬರಪರಿಹಾರ ಯೋಜನೆಯಡಿ ನಿಗದಿಯಾಗಿರುವ ಅನುದಾನದಲ್ಲಿ ಕುಡಿಯುವ ನೀರಿನ ಕಾಮಗಾರಿಯನ್ನು ತಕ್ಷಣವೇ ಕೈಗೆತ್ತಿಗೊಂಡು ಏಪ್ರಿಲ್ 10ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಬರಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳಬೇಕಿರುವ ಮುಂಜಾಗರೂಕತಾ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇಸಿಗೆ ಸಂದರ್ಭ ಇರುವ ಕಾರಣದಿಂದ ವ್ಯಾಪಕವಾಗಿ ಬರಪರಿಹಾರ ನಿರ್ವಹಣೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕಿದೆ.ಬರಪರಿಹಾರ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 75 ಲಕ್ಷ ರೂ.ನಂತೆ ಒಟ್ಟು 3 ಕೋಟಿ ರೂ ಅನುದಾನ ನಿಗದಿಯಾಗಿದ್ದು ಇದಕ್ಕೆ ಮಂಜೂರಾತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ತ್ವರಿತವಾಗಿ ಕುಡಿಯುವ ನೀರಿನ ಕಾಮಗಾರಿಯನ್ನು ಆರಂಭಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಹೋಬಳಿ ಮಟ್ಟಕ್ಕೆ ನೇಮಕವಾಗಿರುವ ನೋಡಲ್ ಅಧಿಕಾರಿಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್‍ಗಳು ಕುಡಿಯುವ ನೀರಿನ ಮೂಲಗಳನ್ನು ಪರಿಶೀಲಿಸಬೇಕು. ಅಪೂರ್ಣವಾಗಿರುವ ಕಾಮಗಾರಿ ಪೂರ್ಣ ಮಾಡಬೇಕು. ವಿದ್ಯುತ್ ಸಂಪರ್ಕದ ಕಾರಣದಿಂದ ಬಾಕಿ ಉಳಿದಿರುವ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಗೊಂಡು ಸಮರ್ಪಕವಾಗಿ ಬೇಸಿಗೆ ವೇಳೆ ನೀರು ಪೂರೈಸಬೇಕೆಂದು ರಾಮು ತಿಳಿಸಿದರು.
ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್, ತೊಂಬೆ, ನೀರಿನ ಪೈಪ್ ಲೈನ್ ಸುಸ್ಥಿತಿಯಲ್ಲಿದೆಯೇ ಎಂಬ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಕುಡಿಯುವ ನೀರು ಕಲುಷಿತವಾಗದಂತೆ ಎಚ್ಚರಿಕೆ ವಹಿಸಿ ಶುದ್ಧ ನೀರು ಸರಬರಾಜು ಮಾಡಬೇಕು ಎಂದರು.
ಗ್ರಾಮಾಂತರ ಹಾಗೂ ಪಟ್ಟಣ ನಗರ ಪ್ರದೇಶಗಳಲ್ಲಿ ಇರುವ ನೀರಿನ ಸಂಗ್ರಹಗಾರಗಳನ್ನು ಶುದ್ಧಗೊಳಿಸಬೇಕು. ಕ್ಲೋರಿನೇಷನ್ ಮಾಡಿ ಪುನಃ ಶುಚಿಗೊಳಿಸಬೇಕು. ನಂತರ  ಪರಿಶುದ್ಧ ನೀರು ಸಂಗ್ರಹಿಸಿ ಜನರಿಗೆ ಪೂರೈಸಬೇಕು, ಈ ಕೆಲಸವನ್ನು ಮುಂದಿನ ವಾರದೊಳಗೆ ನಿರ್ವಹಿಸಿ ತಪ್ಪದೇ ವರದಿ ನೀಡುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳುವಾಗ ಒಳಚರಂಡಿ ಹಾದುಹೋಗುವ ಮಾರ್ಗದ ಪಕ್ಕದಲ್ಲಿಯೇ ಪೈಪ್ ಲೈನ್ ಹಾಕಬಾರದು. ಕೊಳವೆ ಒಡೆದು ಒಳಚರಂಡಿ ನೀರು ಸೇರಿ ಕಲುಷಿತವಾಗಿರುವ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಆರೋಗ್ಯಕರವಾಗಿ ನೀರು ಸರಬರಾಜು ಮಾಡುವ ಉದ್ದೇಶದಿಂದ ಒಳಚರಂಡಿ ಪೈಪ್ ಲೈನ್ ಪಕ್ಕದಲ್ಲಿಯೇ ಕುಡಿಯುವ ನೀರಿನ ಕೊಳವೆಗಳನ್ನು ಅಳವಡಿಸುವ ಕೆಲಸವನ್ನು ಕೈಬಿಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಬೇಸಿಗೆ ವೇಳೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ನೀರು ಸರಬರಾಜು ಮಾಡಬೇಕಿರುವ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಚುರುಕಿನಿಂದ ನಿರ್ವಹಿಸಬೇಕು. ಸೂಚಿತ ಅವಧಿಯೊಳಗೆ ಪೂರ್ಣಗೊಳಿಸಿ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳು ಆಗಿಂದಾಗ್ಗೆ ಭೇಟಿ ನೀಡಿ ಕೆಲಸ ಹೇಗೆ ಪ್ರಗತಿಯಲ್ಲಿದೆ ಎಂಬ ಬಗ್ಗೆ ವೀಕ್ಷಿಸಿ ವರದಿ ಮಾಡಬೇಕು ಎಂದರು.
ಉದ್ಯೋಗ ಖಾತರಿ ಯೋಜನೆಯನ್ನು ಸಹ ಉತ್ತಮವಾಗಿ ನಿರ್ವಹಿಸಬೇಕು. ಯೋಜನೆಯಡಿ ಜಿಲ್ಲೆಯು ಹೆಚ್ಚಿನ ಪ್ರಗತಿಯತ್ತ ಹೆಜ್ಜೆ ಹಾಕಿದೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ನರೇಗಾ ಅಡಿ ಮಾಡಲು ಅವಕಾಶವಿದೆ. ಬರಪೀಡಿತ ಪ್ರದೇಶಗಳಲ್ಲಿ ಹೆಚ್ಚು ಅವಧಿಯವರೆಗೆ ಉದ್ಯೋಗ ನೀಡಲು ಅವಕಾಶವೂ ಇದೆ. ಗ್ರಾಮಾಂತರ ಪ್ರದೇಶದ ಜನರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ತಡೆದು ಸ್ಥಳೀಯವಾಗಿಯೇ ಉದ್ಯೋಗ ಮಾಡಲು ಅವಕಾಶಗಳನ್ನು ಒದಗಿಸಬೇಕೆಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎಚ್. ನರಸಿಂಹಮೂರ್ತಿ ಮಾತನಾಡಿ ಈಗಾಗಲೇ ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಲಾಗಿರುವ ಕಾಮಗಾರಿ ಸ್ಥಳಕ್ಕೆ ನೋಡಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಡಬಹುದಾದ ಕಾಮಗಾರಿ ಕೆಲಸಗಳ ಬಗ್ಗೆ ಮಾರ್ಗದರ್ಶನ ಮಾಡಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಿ ಭಾರತಿ, ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ದೇವರಾಜು, ನಾಲ್ಕೂ ತಾಲೂಕು ವ್ಯಾಪ್ತಿಯ ತಹಸೀಲ್ದಾರರು, ನೋಡಲ್ ಅಧಿಕಾರಿಗಳಾಗಿ ನೇಮಕವಾಗಿರುವ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಸರ್ವರನ್ನು ಸಮಾನರನ್ನಾಗಿ ಕಾಣುವ ಆಶಯ ಈಡೇರಿಸಬೇಕು  
  ಚಾಮರಾಜನಗರ, ಮಾ. 19 :- ಬಹುಧರ್ಮೀಯರಿರುವ ಭಾರತದಲ್ಲಿಂದು  ನಾಗರಿಕರೆಲ್ಲರನ್ನು ಸರಿ-ಸಮಾನರಾಗಿ ಕಾಣುವ ಮೂಲಕ ಸಂವಿಧಾನದ ಆಶಯಗಳನ್ನು ಈಡೇರಿಸಬೇಕಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಚಿನ್ನಸ್ವಾಮಿ ಅವರು ತಿಳಿಸಿದರು.
ನಗರದ ಸೇವಾಭಾರತಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಆಸ್ಪøಶ್ಯತಾ ನಿವಾರಣೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಜಾತಿ ಆಧಾರಿತ ಶೋಷಣೆ, ತಾರತಮ್ಯದಿಂದ ಕೂಡಿದೆ. ಸ್ಪøಶ್ಯ ಮತ್ತು ಆಸ್ಪøಶ್ಯ ಎಂದು ವರ್ಗೀಕರಿಸಿದ್ದರಿಂದ ಶೋಷಿತರಿಗೆ ಯಾವುದೇ ಸೌಲಭ್ಯಗಳಿರಲಿಲ್ಲ. ಸಂವಿಧಾನ ಜಾರಿಯಾದ ನಂತರ ಎಲ್ಲರೂ ಸಮಾನತೆಯಿಂದ ಜೀವನ ನಡೆಸಲು ಅವಕಾಶ ಲಭಿಸಿದೆ. ಸಂವಿಧಾನದ ಮೂಲ ಆಶಯ ಪ್ರತಿಯೊಬ್ಬರು ಸಮಾನತೆಯಿಂದ ಇರಬೇಕೆಂಬುದು ಆಗಿದೆ ಎಂದರು.
ಸಮುದಾಯದಲ್ಲಿ ಯಾವುದೇ ವ್ಯಕ್ತಿ ಶೋಷಣೆ, ದೌರ್ಜನ್ಯಕ್ಕೆ ಒಳಗಾದರೆ ಅಂತಹವರ ಪುನರ್ವಸತಿಗಾಗಿ ಸರ್ಕಾರ ಇಂದು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಸಂವಿಧಾನದ ಹಲವು ಪರಿಚ್ಚೇದಗಳು ಶೋಷಿತರ ಪರವಾಗಿವೆ ಎಂದು ತಿಳಿಸಿದರು.
ಇಂದು ಎಲ್ಲರೂ ಶಿಕ್ಷಣವನ್ನು ಸಮಾನವಾಗಿ ಪಡೆಯಲು ಸಂವಿಧಾನವೇ ಕಾರಣ. ಶಿಕ್ಷಣ ಪಡೆದ ಶೋಷಿತರು ಜಾಗೃತರಾಗುತ್ತಿದ್ದಾರೆ. ಇಂದಿನ ವಿದ್ಯಾರ್ಥಿಗಳು ತಾರತಮ್ಯರಹಿತ ಸಮಾಜ ನಿರ್ಮಾಣಕ್ಕಾಗಿ ವೈಚಾರಿಕ ನೆಲೆಗಟ್ಟಿನಲ್ಲಿ ಆಲೋಚಿಸುವ ಮನೋಭಾವ ಹೊಂದಬೇಕು. ಸಂವಿಧಾನದ ಆಶೋತ್ತರಗಳನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಚಿನ್ನಸ್ವಾಮಿ ತಿಳಿಸಿದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಪಟ್ಟಣ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ನಾಗಮ್ಮ ಅವರು ನಾವು ಸಂಘಜೀವಿಗಳು. ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ತುಳಿತಕ್ಕೊಳಗಾದವನ್ನು ತಿದ್ದಬೇಕು. ಆಸ್ಪøಶ್ಯತೆ ಹೋಗಲಾಡಿಸಲು ವಿದ್ಯಾರ್ಥಿಗಳು ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಕಾರ್ಯೋನ್ಮುಖರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ವಕೀಲರು ಹಾಗೂ ಸೇವಾಭಾರತಿ ಕಾಲೇಜಿನ ಸದಸ್ಯರಾದ ಕೆ. ಬಾಲಸುಬ್ರಮಣ್ಯಂ ಅವರು ಸಮಾಜದಲ್ಲಿ ಜಾತಿವ್ಯವಸ್ಥೆ, ಅಸಮಾನತೆ ವಿರುದ್ಧ ಹಲವಾರು ತತ್ವಜ್ಞಾನಿಗಳು, ಸಂತರು, ದಾರ್ಶನಿಕರು ಹಾಗೂ ಸಮಾಜ ಸುಧಾರಕರು ಹೋರಾಡಿದ್ದಾರೆ. ವಿದ್ಯಾರ್ಥಿಗಳು ಇದನ್ನು ಮನಗಂಡು ತಮ್ಮ ಗ್ರಾಮಗಳಲ್ಲಿ ಜನತೆಗೆ ತಿಳಿವಳಿಕೆ ನೀಡಬೇಕು. ಆಸ್ಪøಶ್ಯತೆ ನಿವಾರಣೆಗೆ ಸಹಭೋಜನ, ಮಾತೃಭೋಜನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ದಾಶರಥಿ ಅವರು ಅಸ್ಪøಶ್ಯತೆ ನಿವಾರಣೆಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.
ಸಮುದಾಯದ ಮುಖಂಡರಾದ ಸಿ.ಎಂ. ಕೃಷ್ಣಮುರ್ತಿ ಹಾಗೂ ಸೇವಾಭಾರತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಮಂಜುನಾಥ್ ಅವರು ಅಸ್ಪøಶ್ಯತೆ ನಿವಾರಣೆ ಕುರಿತು ಇದೇ ಸಂದರ್ಭದಲ್ಲಿ ಮಾತನಾಡಿದರು.
ಸಂಘಟನೆಯ ಮುಖಂಡರಾದ ಅರಕಲವಾಡಿ ನಾಗೇಂದ್ರ, ಸಿ.ಎಂ. ನರಸಿಂಹಮೂರ್ತಿ ಉಪಸ್ಥಿತರಿದ್ದರು.  

               

ಮಾರ್ಚ್ 29ರಂದು ನಗರದಲ್ಲಿ ಕನ್ನಡ ನುಡಿಹಬ್ಬ
ಚಾಮರಾಜನಗರ, ಮಾ.28 - ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಕನ್ನಡ ನುಡಿಹಬ್ಬ ಕಾರ್ಯಕ್ರಮವನ್ನು ಮಾರ್ಚ್ 29 ರಂದು ಸಂಜೆ 5.30 ಗಂಟೆಗೆ ನಗರದ ಚಾಮರಾಜೇಶ್ವರ ದೇವಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಹಕಾರ ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್ ಮಹದೇವ ಪ್ರಸಾದ್ ಕಾರ್ಯಕ್ರಮ  ಉದ್ಘಾಟಿಸುವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎಲ್.ಹನುಮಂತಯ್ಯ ಪ್ರಾಸ್ತಾವಿಕ ನುಡಿಗಳನ್ನಾಡುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ  ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಗೋ. ಮಧುಸೂಧನ್, ಎಸ್. ನಾಗರಾಜು (ಸಂದೇಶ್ ನಾಗರಾಜು), ಧರ್ಮಸೇನ, ನಗರಸಭಾ ಅಧ್ಯಕ್ಷರಾದ ರೇಣುಕಾ ಮಲ್ಲಿಕಾರ್ಜುನ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್‍ರಫೀ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎಚ್.ನರಸಿಂಹ ಮೂರ್ತಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಜ್ಯದ ಪ್ರಸಿದ್ಧ ಜಾನಪದ ತಂಡಗಳ ಬೃಹತ್ ಕನ್ನಡ ನುಡಿ ಜಾಗೃತಿ ಜಾಥಾ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮಾ. 30ರಂದು ಎನ್‍ಎಚ್‍ಎಂ ಪ್ರಗತಿ ಪರಿಶೀಲನಾ ಸಭೆ
ಚಾಮರಾಜನಗರ, ಮಾ. 28 - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಗಾಗಿ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಮಾರ್ಚ್ 30ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ನಡೆಯಲಿದೆ.
ಈ ಸಭೆಯಲ್ಲಿ ಎನ್ ಎಚ್ ಎಂ ಕಾರ್ಯಕ್ರಮಗಳ ಪ್ರಗತಿ, ಬಿಡುಗಡೆಯಾಗಿರುವ ಅನುದಾನ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ. ಪಾಂಡುವಿಜಯನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ. 30ರಂದು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ
ಚಾಮರಾಜನಗರ, ಮಾ. 28 - ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಲುವಾಗಿ ಭೌದ್ಧಿಕ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರವನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್‍ನಲ್ಲಿ ಮಾರ್ಚ್ 30ರಂದು ಬೆಳಿಗ್ಗೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ವಿಶೇಷ ಘಟಕ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ವತಿಯಿಂದ ಏರ್ಪಾಡಾಗಿರುವ ಕಾರ್ಯಾಗಾರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಉದ್ಘಾಟಿಸುವರು. ಮೈಸೂರು ಮಾನಸ ಗಂಗೋತ್ರಿಯ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾದ ಡಾ. ಎಂ. ರುದ್ರಯ್ಯ, ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಜಿ.ಆರ್. ಜನಾರ್ಧನ್ ಉಪಸ್ಥಿತರಿದ್ದು ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಶಿವಬಸವಯ್ಯ ಅಧ್ಯಕ್ಷತೆ ವಹಿಸುವರೆಂದು ಪ್ರಕಟಣೆ ತಿಳಿಸಿದೆ.
ಮಾ. 29ರಂದು ನಗರದಲ್ಲಿ ಉದ್ಯೋಗ ಮೇಳ : ವಿವಿಧ ಹುದ್ದೆಗಳಿಗೆ ನೇಮಕ
ಚಾಮರಾಜನಗರ, ಮಾ. 28 - ಭಾರತೀಯ ಜೀವವಿಮಾ ನಿಗಮ (ಎಲ್‍ಐಸಿ ಆಫ್ ಇಂಡಿಯಾ) ಮತ್ತು ಯುರೇಕಾ ಫೋರ್ ಬೆಸ್ ಲಿಮಿಟೆಡ್ ಕಂಪನಿಯು ವಿವಿಧ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುವ ಸಲುವಾಗಿ ಮಾರ್ಚ್ 29ರಂದು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಉದ್ಯೋಗ ಮೇಳ ಆಯೋಜಿಸಿದೆ.
ಕಸ್ಟಮರ್ ಸೇಲ್ಸ್ ಸ್ಪೆಷಲಿಸ್ಟ್, ಕಸ್ಟಮರ್ ರಿಲೇಷನ್‍ಶಿಪ್ ಮ್ಯಾನೇಜ್ ಮೆಂಟ್, ಟೆರಿಟರಿ ಎಕ್ಸಿಕ್ಯುಟಿವ್ ಅಕೌಂಟೆಂಟ್, ಎಲ್‍ಐಸಿ ಏಜೆಂಟ್ ಹುದ್ದೆಗಳಿಗೆ ನೇರ ಸಂದರ್ಶನ ನಡೆಸಲಾಗುತ್ತದೆ.
ಎಸ್‍ಎಸ್‍ಎಲ್‍ಸಿ ನಂತರದ ಅಭ್ಯರ್ಥಿಗಳಿಗೆ ಎಲ್ ಐಸಿ ಏಜೆಂಟ್ ಆಗಲು ಅವಕಾಶವಿದೆ. ಪಿಯುಸಿ, ಎಸ್‍ಎಸ್‍ಎಲ್‍ಸಿ, ಐಟಿಐ, ಡಿಪ್ಲೊಮಾ, ಪದವಿ, ಎಂಬಿಎ, ಬಿಇ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶಗಳಿವೆ. ಅಭ್ಯರ್ಥಿಗಳು 18 ರಿಂದ 30ರ ವಯೋಮಿತಿಯೊಳಗಿರಬೇಕು. ಆಸಕ್ತರು ಮಾರ್ಚ್ 29ರಂದು ಬೆಳಿಗ್ಗೆ 10.30 ಗಂಟೆಗೆ ನೇರ ಸಂದರ್ಶನಕ್ಕೆ ಸ್ವವಿವರಗಳೊಂದಿಗೆ ಹಾಜರಾಗಬೇಕು. ವಿವರಗಳಿಗೆ ಜಿಲ್ಲಾ ಉದ್ಯೋಗಾಧಿಕಾರಿ ಸಿ.ಎಂ. ಉಮಾ ಹಾಗೂ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ (ಮೊ. 8884900212, 8762993030) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಿಗೆ ಭರ್ತಿ : ಅರ್ಜಿ ಆಹ್ವಾನ
ಚಾಮರಾಜನಗರ, ಮಾ. 28 - ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗಾಗಿ ನಡೆಸಲಾಗುವ ನೇಮಕಾತಿ ರ್ಯಾಲಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ನೇಮಕಾತಿ ರ್ಯಾಲಿಯು ಮೇ 1 ರಿಂದ 10ರವರೆಗೆ ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ನಡೆಯಲಿದೆ.
ಸೈನಿಕ ಸಾಮಾನ್ಯ ಹುದ್ದೆಗೆ ಸರಾಸರಿ ಶೇ.45ರಷ್ಟು ಹಾಗೂ ಪ್ರತಿಯೊಂದು ವಿಷಯದಲ್ಲಿ ಶೇ. 33ರಷ್ಟು ಅಂಕದೊಂದಿಗೆ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು. ಈ ಹುದ್ದೆಗೆ 17 1/2 ಯಿಂದ 21ರ ವಯೋಮಿತಿಯೊಳಗಿರಬೇಕು.
ಸೈನಿಕ ಲಿಪಿಕ, ಉಗ್ರಾಣ ಪಾಲಕ ತಾಂತ್ರಿಕ ಹುದ್ದೆಗೆ ಸರಾಸರಿ ಕನಿಷ್ಟ ಶೇ.50 ಹಾಗೂ ಪ್ರತಿ ವಿಷಯದಲ್ಲಿ ಕನಿಷ್ಟ ಶೇ. 40ರಷ್ಟು ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪಿಯುಸಿ ತೇರ್ಗಡೆಯಾಗಿರಬೇಕು.  ಎಸ್‍ಎಸ್‍ಎಲ್‍ಸಿ ಅಥವಾ ದ್ವಿತೀಯ ಪಿಯುಸಿಯಲ್ಲಿ ಇಂಗ್ಲೀಷ್, ಗಣಿತ ಅಥವಾ ಅಕೌಂಟ್ಸ್ ಇಲ್ಲವೇ ಬುಕ್ ಕೀಪಿಂಗ್ ಅಧ್ಯಯನ ಮಾಡಿರಬೇಕು.
ಸೈನಿಕ ತಾಂತ್ರಿಕ ಹುದ್ದೆಗೆ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲೀಷ್‍ನಲ್ಲಿ 35 ಅಂಕ ಹಾಗೂ ಸರಾಸರಿ ಕನಿಷ್ಟ ಶೇ. 45ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಅಥವಾ 10ನೇ ತರಗತಿಯಲ್ಲಿ ಕನಿಷ್ಟ ಸರಾಸರಿ ಶೇ. 50ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಜತೆಗೆ 3 ವರ್ಷದ ಡಿಪ್ಲೊಮಾ ಎಂಜಿನಿಯರಿಂಗ್ ಮಾಡಿರಬೇಕು.
ಸೈನಿಕ ತಾಂತ್ರಿಕ ಹುದ್ದೆಗೆ ಕನಿಷ್ಟ ಶೇ.50 ಹಾಗೂ ಪ್ರತಿ ವಿಷಯದಲ್ಲಿ ಕನಿಷ್ಟ ಶೇ.40ರಷ್ಟು ಅಂಕದೊಂದಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಒಳಗೊಂಡ ವಿಜ್ಞಾನ, ಇಂಗ್ಲೀಷ್ ಅಥವಾ ಬಿಎಸ್ಸಿ ಪದವಿ (ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಜೈವಿಕ ವಿಜ್ಞಾನ ಹಾಗೂ ಇಂಗ್ಲೀಷ್ ವಿಷಯದಲ್ಲಿ ಪಿಯುಸಿಯಲ್ಲಿ ತೇರ್ಗಡೆಯಾಗಿರಬೇಕು.
ಸೈನಿಕ ಟ್ರೇಡ್ಸ್ ಮನ್ (ಚೆಫ್ ಡ್ರಸ್ಸರ್, ಪೈಂಟರ್, ಡೆಕೋರೇಟರ್, ಸ್ಟೀವರ್ಡ್ (ಸಹಾಯಕ ಸಿಬ್ಬಂದಿ ವಾಷರ್ ಮ್ಯಾನ್, ಆರ್ಟಿಸನ್, ಮರಗೆಲಸ, ದರ್ಜಿ) ಹುದ್ದೆಗೆ ಎಸ್ ಎಸ್ ಎಲ್ ಸಿ ಕನಿಷ್ಟ ಶೇ.33ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಹೌಸ್ ಕೀಪರ್ ಮತ್ತು ಮೆಸ್ ಕೀಪರ್ ಹುದ್ದೆಗೆ 8ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಈ ಎಲ್ಲ ಹುದ್ದೆಗಳಿಗೆ 17 1/2 ಯಿಂದ 23ರ ವಯೋಮಿತಿಯೊಳಗಿರಬೇಕು.
ಮಾಜಿ ಸೈನಿಕರನ್ನು ಡಿಎಸ್‍ಇ ಯಲ್ಲಿ ಸೈನಿಕ ಸಾಮಾನ್ಯ ಕರ್ತವ್ಯಕ್ಕೆ ಪುನರ್ ನೇಮಕ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 20 ಕಡೆಯ ದಿನವಾಗಿದೆ. ಅಗತ್ಯ ದಾಖಲೆಗಳು, ದೈಹಿಕ ದಾಢ್ರ್ಯತೆ ಪರೀಕ್ಷೆ ಇನ್ನಿತರ ನೇಮಕಾತಿ ಸಂಬಂಧ ಎಲ್ಲಾ ವಿವರಗಳಿಗೆ ಬೆಂಗಳೂರಿನ ನೇಮಕಾತಿ ಕಚೇರಿ, ಕೇಂದ್ರ ಕಾರ್ಯಸ್ಥಾನ ನೇಮಕಾತಿ ವಲಯ, ದೂ.ಸಂ. 080-25599290, 080-25596517 ಅಥವಾ ವೆಬ್ ಸೈಟ್ ತಿತಿತಿ.ರಿoiಟಿiಟಿಜiಚಿಟಿಚಿಡಿmಥಿ.ಟಿiಛಿ.iಟಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಏಪ್ರಿಲ್ ಅಂತ್ಯದಲ್ಲಿ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿಯವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ : ಪ್ರಾಧಿಕಾರ ಸಭೆಯಲ್ಲಿ ತೀರ್ಮಾನ
ಚಾಮರಾಜನಗರ, ಮಾ.29 :- ಜಿಲ್ಲೆಯ ಪ್ರಸಿದ್ಧ ಯಾತ್ರಾಕ್ಷೇತ್ರ ಮಹದೇಶ್ವರ ಬೆಟ್ಟದಲ್ಲಿ ಮಲೆಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದಿಂದ ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅಂದಾಜು  47 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಏಪ್ರಿಲ್ ಅಂತ್ಯದಲ್ಲಿ ಮುಖ್ಯಮಂತ್ರಿಯವರಿಂದ ಚಾಲನೆ ಕೊಡಿಸಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ಸಹಕಾರ, ಸಕ್ಕರೆ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಎಚ್.ಎಸ್. ಮಹದೇವಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಯವರಿಂದ ಚಾಲನೆ ಕೊಡಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಮಹದೇಶ್ವರ ಬೆಟ್ಟದಲ್ಲಿ ಒಳಚರಂಡಿ, ತಿರುಪತಿ-ತಿರುಮಲ ಮಾದರಿಯಲ್ಲಿ ಅಂತರಗಂಗÉ ನಿರ್ಮಾಣ, ಬಯಲು ರಂಗಮಂದಿರ ಮುಂಭಾಗದಲ್ಲಿ ಭಕ್ತಾಧಿಗಳಿಗೆ ನೆರಳಿನ ವ್ಯವಸ್ಥೆಗಾಗಿ ಶೆಲ್ಟರ್, ಗುಂಪಾಗಿ ಬರುವ ಭಕ್ತಾಧಿಗಳಿಗೆ ಸಮೂಹ ವಸತಿಗೃಹ, ಪ್ರಾಧಿಕಾರದ ವತಿಯಿಂದ 24 ವಸತಿ ಗೃಹ ನಿರ್ಮಾಣ, ಬೆಳ್ಳಿರಥ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿಯವರಿಂದ ಹಸಿರು ನಿಶಾನೆ ನೀಡಲು ಸಭೆಯು ನಿರ್ಣಯಿಸಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರಾದ ಮಹದೇವಪ್ರಸಾದ್ ಅವರು ಮಹದೇಶ್ವರ ಬೆಟ್ಟದಲ್ಲಿ ಇನ್ನು 2-3 ವರ್ಷಗಳಲ್ಲಿ 500 ವಸತಿಗೃಹಗಳು ನಿರ್ಮಾಣವಾಗಲಿವೆ. ಪ್ರಾಧಿಕಾರ ನೌಕರರಿಗೂ ಪ್ರತೀವರ್ಷ ವಸತಿಗೃಹಗಳನ್ನು ಕಟ್ಟಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಕ್ಷೇತ್ರಕ್ಕೆ ಭೇಟಿ ಕೊಡುವ ಭಕ್ತಾಧಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ಒಳಚರಂಡಿ ಕಾಮಗಾರಿ ಅತಿ ಅವಶ್ಯಕವಾಗಿ ಕೈಗೆತ್ತಿಕೊಳ್ಳಬೇಕಿದೆ ಎಂದರು.
ಮಹದೇಶ್ವರಬೆಟ್ಟವು ಗ್ರಾಮ ಪಂಚಾಯಿತಿಯ ಕೇಂದ್ರಸ್ಥಾನವೂ ಆಗಿದ್ದು ಸಾಕಷ್ಟು ಜನರು ಇಲ್ಲಿ ವಾಸ ಮಾಡುತ್ತಿದ್ದಾರೆ. ಪ್ರಾಧಿಕಾರ ವ್ಯಾಪ್ತಿಯ ಪ್ರದೇಶವನ್ನು ಸ್ಪಚ್ಚವಾಗಿಟ್ಟುಕೊಳ್ಳಲು ಒಳಚರಂಡಿ ವ್ಯವಸ್ಥೆ ಅತಿ ಅಗತ್ಯವಾಗಿದೆ. ಹೀಗಾಗಿ 27.10 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಬೇಕಿರುವ ಕಾಮಗಾರಿಗೆ ಶೇ.50ರಷ್ಟು ಅನುದಾನವನ್ನು ಸರ್ಕಾರದಿಂದ ನಿರೀಕ್ಷಿಸಿ ಕಾಮಗಾರಿ ಪ್ರಾರಂಭಿಸಬೇಕು ಎಂದರು.
ಅಂತಿಮವಾಗಿ ಸಭೆ ಈ ಕಾಮಗಾರಿಗೆ ಸರ್ಕಾರದ ಅನುದಾನ ನಿರೀಕ್ಷಿಸಿ ಪ್ರಾಧಿಕಾರ ಅನುದಾನದಿಂದ ಅನುಷ್ಠಾನಗೊಳಿಸುವ ಸಂಬಂಧ ಆಡಳಿತಾತ್ಮಕ ಮಂಜೂರಾತಿಗೆ ಅನುಮೋದನೆ ನೀಡಿತು.
ಜಾನಪದ ಕಲೆಯ ತವರೂರಾಗಿರುವ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಜಾನಪದ ಅಧ್ಯಯನ ಕೇಂದ್ರ ತೆರೆದು ಜಾನಪದ ಕಲಾ ಪರಂಪರೆ ಚಟುವಟಿಕೆಗಳಿಗೆ ಒತ್ತು ನೀಡಬೇಕೆಂಬುದು ಜಾನಪದ ಕಲಾವಿದರು ಹಾಗೂ ಭಕ್ತರ ಬಹುದಿನಗಳ ಬೇಡಿಕೆಯಾಗಿದೆ. ಇವರ ಆಶಯಕ್ಕೆ ತಕ್ಕಂತೆ ಈಹಿಂದೆ ಕನ್ನಡ ಮತ್ತು ಸಂಸ್ಕ್ಕøತಿ ಇಲಾಖೆಗೆ ನೀಡಲಾಗಿದ್ದ 3 ಎಕರೆ ಜಮೀನನ್ನು ವಾಪಸ್ ಪಡೆದು ಜಾನಪದ ಅಧ್ಯಯನ ಕೇಂದ್ರವನ್ನು ಪ್ರಾಧಿಕಾರದ ವತಿಯಿಂದ ತೆರೆಯುವ ಪ್ರಕ್ರಿಯೆಗೆ ಸಭೆ ನಿರ್ಣಯಿಸಿತು.
ಇದೇವೇಳೆ ಮಾತನಾಡಿದ ಸಚಿವರಾದ ಮಹದೇವಪ್ರಸಾದ್ ಮಲೆ ಮಹದೇಶ್ವರಸಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹೆಲಿಪ್ಯಾಡ್ ಬಳಿಯಿರುವ 8 ಎಕರೆ ವಿಸ್ತಾರ ಪ್ರದೇಶದಲ್ಲಿ ಒಂದು ಮೆಗಾವ್ಯಾಟ್ ಉತ್ಪಾದನಾ ಸಾಮಥ್ರ್ಯದ ಸೋಲಾರ್ ಪಿವಿ ಪ್ಲವರ್ ಪ್ಲಾಂಟ್ ಸ್ಥಾಪಿಸಬೇಕು. ಈ ಸಂಬಂಧ ವಿಸ್ತøತ ಯೋಜನಾ ವರದಿ ತಯಾರಿಸಬೇಕೆಂದು ನಿರ್ದೇಶನ ನೀಡಿದರು.
ಕ್ಷೇತ್ರದ ದೀಪದ ಒಡ್ಡುವಿನಲ್ಲಿ ಮಹದೇಶ್ವರರ 100 ಅಡಿ ಬೃಹತ್ ಪ್ರತಿಮೆ ನಿರ್ಮಾಣಕ್ಕೂ ಸಭೆ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಆ ಪ್ರದೇಶದ 40ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಒಂದು ತಿಂಗಳೊಳಗೆ ಹಸ್ತಾಂತರಿಸಲು ಜಿಲ್ಲಾಧಿಕಾರಿಯವರು ಕ್ರಮ ವಹಿಸಬೇಕೆಂದು ಉಸ್ತುವಾರಿ ಸಚಿವರು ಸೂಚಿಸಿದರು.
ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಪ್ರಸಾದ್ ಯೋಜನೆ ನೆರವಿನೊಂದಿಗೆ ಶ್ರೀ ಮಲೆ ಮಹದೇಶ್ವರ ಟೂರಿಸ್ಟ್ ಸಕ್ರ್ಯೂಟ್ ಕಾರ್ಯಕ್ರಮವನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸುವ ಬಗ್ಗೆಯೂ ವಿಸ್ತøತ ಚರ್ಚೆ ನಡೆಯಿತು. ಮಹದೇಶ್ವರ ಬೆಟ್ಟವನ್ನು ಯಾತ್ರಾ ಪ್ರವಾಸಿ ತಾಣವನ್ನಾಗಿ ಆಕರ್ಷಿಸುವ ದಿಸೆಯಲ್ಲಿ ವಿಸ್ತಾರವಾದ ಪ್ರದೇಶದಲ್ಲಿ ಜಾನಪದ ವಸ್ತುಸಂಗ್ರಹಾಲಯ, ಬಯಲು ರಂಗಮಂದಿರ, ಜ್ಞಾನಮಂದಿರ, ಸಂಗೀತ ಕಾರಂಜಿ, ಔಷಧೀಯ ಸಸ್ಯಗಳ ವನ, ಪ್ರಕೃತಿ ಚಿಕಿತ್ಸಾಲಯ, ಮಕ್ಕಳ ಉದ್ಯಾನವನ ಇನ್ನಿತರ ವ್ಯವಸ್ಥೆಗಳನ್ನು ಕಲ್ಪಿಸುವ ಉದ್ದೇಶದ ಪ್ರವಾಸಿ ಸೌಕರ್ಯ ಯೋಜನೆಗೆ ವಿಸ್ತøತ ಯೋಜನಾ ವರದಿ ಸಲ್ಲಿಸುವಂತೆಯೂ ಸಚಿವರು ತಿಳಿಸಿದರು.
ಮಹದೇಶ್ವರರು ಸಂಚರಿಸಿದ ಪುಣ್ಯ ಸ್ಥಳಗಳನ್ನು ಅದರ ಮಹತ್ವವನ್ನು ಸಾರುವ ದಿಸೆಯಲ್ಲಿ ಅಭಿವೃದ್ಧಿಗೊಳಿಸುವ ಅಗತ್ಯವಿದೆ. ಇಂತಹ ಸ್ಥಳಗಳನ್ನು ಗುರುತಿಸಿ ಅಗತ್ಯ ಕೆಲಸ ಆರಂಭಿಸುವ ಪ್ರಕ್ರಿಯೆಯನ್ನು ನಡೆಸಲು ಕ್ರಮ ವಹಿಸಬೇಕೆಂದು ಸಚಿವರು ತಿಳಿಸಿದರು.
ಮುಖ್ಯಮಂತ್ರಿಯವರನ್ನು ಏಪ್ರಿಲ್ ಅಂತ್ಯದಲ್ಲಿ ಮಹದೇಶ್ವರ ಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಹ್ವಾನಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಂಬಂಧ ರೂಪುರೇಷೆ, ಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು, ಕ್ಷೇತ್ರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ವ್ಯವಸ್ಥೆ, ತಿರುಪತಿ ಮಾದರಿಯಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳ ಉದ್ಘಾಟನೆಯನ್ನು ಸಹ ಮುಖ್ಯಮಂತ್ರಿಯವರಿಂದ ನೆರವೇರಿಸಲು ಎಲ್ಲ ಪೂರಕ ವ್ಯವಸ್ಥೆಗಳನ್ನು ನಿರ್ವಹಿಸುವಂತೆ  ಪ್ರಾಧಿಕಾರದ ಕಾರ್ಯದರ್ಶಿಯವರಿಗೆ ಸಚಿವರು ಸೂಚಿಸಿದರು.
ಮುಜರಾಯಿ ಸಚಿವರಾದ ಮನೋಹರ ತಹಸೀಲ್ದಾರ್, ಸಾಲೂರು ಮಠದ ಶ್ರೀಗಳು, ಶಾಸಕರಾದ ಆರ್. ನರೇಂದ್ರ, ವಿಧಾನ ಪರಿಷತ್ ಸದಸ್ಯರಾದ ಆರ್. ಧರ್ಮಸೇನ, ಮುಜರಾಯಿ ಇಲಾಖೆ ಕಾರ್ಯದರ್ಶಿ ರಾಜ್ ಕುಮಾರ್ ಕತ್ರಿ, ಆಯುಕ್ತರಾದ ಆರ್. ಆರ್. ಜನ್ನು, ಜಿಲ್ಲಾಧಿಕಾರಿ ಬಿ. ರಾಮು, ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಿ. ಭಾರತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎಚ್. ನರಸಿಂಹಮೂರ್ತಿ ಸಭೆಯಲ್ಲಿ ಹಾಜರಿದ್ದರು.
ಮಾ. 30ರಂದು ಎನ್‍ಎಚ್‍ಎಂ ಪ್ರಗತಿ ಪರಿಶೀಲನಾ ಸಭೆ
ಚಾಮರಾಜನಗರ, ಮಾ. 29 - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಗಾಗಿ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಮಾರ್ಚ್ 30ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ನಡೆಯಲಿದೆ.
ಈ ಸಭೆಯಲ್ಲಿ ಎನ್ ಎಚ್ ಎಂ ಕಾರ್ಯಕ್ರಮಗಳ ಪ್ರಗತಿ, ಬಿಡುಗಡೆಯಾಗಿರುವ ಅನುದಾನ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ. ಪಾಂಡುವಿಜಯನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾ.ಪಂ. ಉಪಚುನಾವಣೆ : ವೇಳಾಪಟ್ಟಿ ಪ್ರಕಟ
ಚಾಮರಾಜನಗರ, ಮಾ. 29 :- ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ಜಿಲ್ಲೆಯ ಚಾಮರಾಜನಗರ ತಾಲೂಕಿನ ಮಾದಾಪುರ, ಸಾಗಡೆ, ನವಿಲೂರು, ಕುಲಗಾಣ, ಉಮ್ಮತ್ತೂರು, ಹರದನಹಳ್ಳಿ, ದೊಡ್ಡಮೋಳೆ, ಕೊಳ್ಳೇಗಾಲ ತಾಲೂಕಿನ ಲೊಕ್ಕನಹಳ್ಳಿ, ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮ ಪಂಚಾಯಿತಿಯ ಖಾಲಿ ಇರುವ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಒಟ್ಟು 9 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಏಪ್ರಿಲ್ 4ರಂದು ಜಿಲ್ಲಾಧಿಕಾರಿಯವರು ಚುನಾವಣಾ ಅಧಿಸೂಚನೆ ಹೊರಡಿಸುವರು. ಏಪ್ರಿಲ್ 7 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏಪ್ರಿಲ್ 9ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಏಪ್ರಿಲ್ 11ರಂದು ಕಡೆಯ ದಿನವಾಗಿದೆ. ಏಪ್ರಿಲ್ 17ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ (ಮತದಾನ ಅವಶ್ಯವಿದ್ದರೆ). ಮರುಮತದಾನ ಅವಶ್ಯವಿದ್ದಲ್ಲಿ ಏಪ್ರಿಲ್ 18ರಂದು ನಡೆಸಲಾಗುತ್ತದೆ. ಏಪ್ರಿಲ್ 20ರಂದು ಬೆಳಿಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್ 20ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ.
ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಏಪ್ರಿಲ್ 4 ರಿಂದ 20ರವರೆಗೆ ಜಾರಿಯಲ್ಲಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು