ರಾಜಧನ ವಂಚನೆ ಪ್ರಕರಣ: ಎಂಟು ಜನರ ಮೇಲೆ ಕ್ರಿಮಿನಲ್ ಮೊಕದ್ದಮೆ
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ, ಜು. 17 - ಕರಿಕಲ್ಲು ಶಿಲಾದಿಮ್ಮಿಗಳನ್ನು ಸಾಗಾಣಿಕೆ ಮಾಡಲು ಹೆಚ್ಚಿಗೆ ಅವದಿ ನಮೂದಿಸಿಕೊಂಡು ರಾಜಧನ ಪಾವತಿ ಮಾಡದೇ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದ ಎಂಟು ಜನ ಕರಿಕಲ್ಲು ಗುತ್ತಿಗೆದಾರರ ಮೇಲೆ ಗ್ರಾಮಾಂತರ ಠಾಣೆ ಪೋಲೀಸರು ದಾಖಲಿಸಿದ್ದಾರೆ.ಸಾರ್ವಜನಿಕರು ಹಾಗೂ ಗಣಿ ಭೂ ವಿಜ್ಞಾನಿ ಅದಿಕಾರಿಗಳ ದೂರಿನನ್ವಯ ಗ್ರಾಮಾಂತರ ಠಾಣೆ ಪೋಲೀಸರು ತಪಾಷಣೆ ಮಾಡಿ ಪರಿಶೀಲಿಸಿಲಾಗಿ ಶಿಲಾದಿಮ್ಮಿಗಳನ್ನು ಸಾಗಾಣಿಕೆ ಮಾಡಲು ಹೆಚ್ಚಿಗೆ ಅವದಿ ನಮೂದಿಸಿಕೊಂಡು ರಾಜಧನ ಪಾವತಿ ಮಾಡದೇ ಇರುವ ಎಂಟು ಜನ ಗುತ್ತಿಗೆದಾರರ ಮೇಲೆ ಕೆ.ಎಮ್.ಎಮ್.ಸಿ.ಆರ್ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ 420 ರಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಸಿದ್ದಾರೆ.
ಚಾಮರಾಜನಗರ ಭೂ ವಿಜ್ಞಾನಿ ಅದಿಕಾರಿ ಚಂದ್ರಶೇಖರ್ ಅವರ ದೂರಿನನ್ವಯ ಚಂದಕವಾಡಿ ವ್ಯಾಪ್ತಿಯಲ್ಲಿನ ಮಹದೇವಪ್ಪ ,ಸಾರ್ವಜನಿಕ ಸುಬ್ರಮಣ್ಯ ಅವರ ದೂರಿನನ್ವಯ ಕೊತ್ತಲವಾಡಿಯ ಮಹದೇವಸ್ವಾಮಿ ಕೆ.ಎಮ್. ಮಹದೇವಪ್ಪ, ಮತ್ತು ಸೋಮಪ್ಪ ನಂಜದೇವನಪುರದ ಪಿ.ಮರಿಸ್ವಾಮಿ (ಅಪರಾಧ ಸಂಖ್ಯೆ 164/16), ಕೊತ್ತಲವಾಡಿಯ ಕೆ.ಪಿ ಸಿದ್ದಮಲ್ಲಪ್ಪ, ಚಾಮರಾಜನಗರ ಭೂ ವಿಜ್ಞಾನಿ ಅದಿಕಾರಿ ಕೃಷ್ಣವೇಣಿ ಅವರ ದೂರಿನನ್ವಯ ಕೊತ್ತಲವಾಡಿಯ ಲಿಂಗಣ್ಣಾಚಾರ್ ,ಚಾಮರಾಜನಗರ ವ್ಯಾಪ್ತಿಯ ಮೆರಾಜ್ ಉಲ್ಲಾ ಹಕ್ ಇವರುಗಳ ವಿರುದ್ದ ಪ್ರಕರಣವನ್ನು ದಾಖಲಸಿದ್ದಾರೆ.
ಪ್ರಕರಣ ಸಂಬಂದದ ಆರು ಪ್ರಕರಣದಲ್ಲಿ ಭಾಗಿಯಾಗಿರುವವರ ಎಂಟು ಜನರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಕಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಸರಿಯಾಗಿ ರಾಜದನ ಪಾವತಿ ಮಾಢದ ಹಿನ್ನಲೆಯಲ್ಲಿ ಗಣಿ ಭೂವಿಜ್ಞಾನ ಇಲಾಖಾ ಆಯುಕ್ತರು ಚಾಮರಾಜನಗರ ಗಣಿ ಭೂ ವಿಜ್ಞಾನ ಇಲಾಕೆಗೆ ಇವರುಗಳಿಗೆ ನೀಡಲಾಗಿರುವ ಅನುಮತಿಯನ್ನು ರದ್ದು ಮಾಢುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮಾಂತರ ಠಾಣೆಯ ವೃತ್ತ ಆರಕ್ಷಕರಾದ ಶಿವಸ್ವಾಮಿ, ಸಬ್ ಇನ್ಸ್‍ಪೆಕ್ಟರ್ ಎಮ್.ನಾಯಕ್ ಹಾಗೂ ಸಿಬ್ಬಂದಿವರ್ಗ ಪತ್ತೆ ಮಾಡುವಲ್ಲಿ ಯಶಶ್ವಿಯಾಗಿದ್ದಾರೆ.
ನಾಗರಿಕ ಸೌಲಭ್ಯ ನಿವೇಶನ ಹಂಚಿಕೆಗೆ ನಗರಾಭಿವೃದ್ಧಿ ಪ್ರಾಧಿಕಾರ ಸಮ್ಮತಿ
ಚಾಮರಾಜನಗರ, ಜು. 17- ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ ನಾಗರಿಕ ಸೌಲಭ್ಯ ನಿವೇಶನಗಳನ್ನು ಕೋರಿ ಸಲ್ಲಿಸಿರುವ ಅರ್ಜಿದಾರ ಸಂಸ್ಥೆ ಹಾಗೂ ಸರ್ಕಾರಿ ಇಲಾಖೆಗಳಿಗೆ ನಿವೇಶನ ಹಂಚಿಕೆ ಮಾಡಲು ನಿರ್ಣಯ ತೆಗೆದುಕೊಳ್ಳಲಾಗಿದೆ.ನಗರದ ಜಿಲ್ಲಾಡಳಿತ ಭವನದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಸಭಾಂಗಣದಲ್ಲಿ ಇಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ ಅವರ ಅಧ್ಯಕ್ಷತೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳು ಮತ್ತು ಶಾಸಕರು ಹಾಗೂ ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ಸಮಿತಿಯ ಸದಸ್ಯರು ಆದ ಸಿ.ಪುಟ್ಟರಂಗಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆದ ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ ಸಮಿತಿ ಸಭೆಯಲ್ಲಿ ನಿವೇಶನ ಕೋರಿರುವ ಅರ್ಜಿದಾರ ಸಂಸ್ಥೆ ಹಾಗೂ ಸರ್ಕಾರಿ ಇಲಾಖೆಗಳಿಗೆ ನಿವೇಶನ ಹಂಚಿಕೆ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.
ಸಭೆ ಆರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ ಅವರು ಮಾತನಾಡಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಕೆಲ ಬಡಾವಣೆಗಳಲ್ಲಿ ಲಭ್ಯವಿದ್ದ 12 ನಾಗರಿಕ ಸೌಲಭ್ಯ ನಿವೇಶನಗಳನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ನಿಯಮಗಳ ಅನುಗುಣವಾಗಿ ಹಂಚಿಕೆ ಮಾಡುವ ಉದ್ದೇಶದಿಂದ ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕೆ ಸ್ಪಂದಿಸಿ 5 ಅರ್ಜಿಗಳು ಬಂದಿವೆ. ಈ ಪೈಕಿ ಸರ್ಕಾರಿ ಕಚೇರಿಗೆ 2 ನಿವೇಶನ ಮತ್ತು ಶೈಕ್ಷಣಿಕ ಕೇಂದ್ರ ಸಮುದಾಯ ಅಭಿವೃದ್ದಿ, ಆರೋಗ್ಯ ಮತ್ತು ಮಹಿಳಾ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿವೇಶನ ಕೋರಿ 3 ಅರ್ಜಿಗಳನ್ನು ಸಂಘ ಸಂಸ್ಥೆಗಳಿಂದ ಸ್ವೀಕರಿಸಲಾಗಿದೆ ಎಂದರು.
ತದನಂತರ ಸಮಿತಿಯು ವಿವರವಾಗಿ ಪರಿಶೀಲಿಸಿ 5 ಅರ್ಜಿದಾರ ಇಲಾಖೆ ಹಾಗೂ ಸಂಘ ಸಂಸ್ಥೆಗಳಿಗೆ ನಿವೇಶನ ಹಂಚಿಕೆ ಮಾಡಲು ತೀರ್ಮಾನಿಸಲಾಯಿತು.
ಇದೆ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದ ರೈಲು ನಿಲ್ದಾಣ ಬಳಿಯ ಜಮೀನಿನಲ್ಲಿ ಬಿಜಿನೆಸ್ ಪಾರ್ಕ್‍ಗೆ ಸ್ಥಳ ಗುರುತಿಸಲಾಗಿದೆ. ವರ್ತಕರಿಗೆ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಬಿಜಿನೆಸ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಸೈಯದ್ ರಫಿ ಸಭೆಯಲ್ಲಿ ವಿವರಿಸಿದರು.
ಕರಿನಂಜನಪುರ ಗ್ರಾಮದ ಬಳಿ ಇರುವ ಪ್ರದೇಶದಲ್ಲಿ ಬೆಂಗಳೂರಿನ ಡಿ.ದೇವರಾಜು ಟ್ರಕ್ ಟರ್ಮಿನಲ್ ನಿಯಮಿತ ಸಹಯೋಗದೊಂದಿಗೆ ಟ್ರಕ್ ಟರ್ಮಿನಲ್ ಅನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ರಫಿ ಅವರು ವಿವರ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಟಿ.ನಿಸಾರ್ ಅಹಮದ್, ನಗರ ಯೋಜನಾ ಸದಸ್ಯರು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರಾದ ಎಚ್.ಎಸ್.ಚೆಲುವರಾಜು, ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಿನ್ನಸ್ವಾಮಿ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಜುಲೈ 18ರಂದು ಉಡಿಗಾಲದಲ್ಲಿ ಅಂಚೆಸಂತೆ
ಚಾಮರಾಜನಗರ, ಜು. :- ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಜುಲೈ 18ರಂದು ಅಂಚೆ ಸಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಅವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಭಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವಾ ವಿಮೆ ಮತ್ತು ಅಂಚೆ ಜೀವಾ ವಿಮೆ ಮುಂತಾದ ಅಂಚೆ ಯೋಜನೆಗಳನ್ನು ಸ್ಥಳದಲ್ಲೇ ಪರಿಶಿಲಿಸಿ ಸ್ವೀಕರಿಸಲಾಗುವುದು.
ಉಡಿಗಾಲ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ಕೋರಿದ್ದಾರೆ.
No comments:
Post a Comment