ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಮರುನಿಯೋಜನಾ ಪ್ರಕ್ರಿಯೆ
ಚಾಮರಾಜನಗರ, ಜು. 12 - ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಶಾಲೆಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಆರ್‍ಟಿಇ ಕಾಯ್ದೆಗೆ ಅನುಸಾರವಾಗಿ ಶಿಕ್ಷಕರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಶಿಕ್ಷಕರ ಮರುನಿಯೋಜನಾ ಪ್ರಕ್ರಿಯೆಯನ್ನು ನಡೆಸುತ್ತಿದೆ.
ಜಿಲ್ಲೆಯ ಶಾಲೆಗಳಲ್ಲಿ ಶಿಕ್ಷಕರ ಅವಶ್ಯಕತೆ, ಖಾಲಿ ಹುದ್ದೆಗಳು ಮತ್ತು ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಮರುನಿಯೋಜನೆ ಕಾರ್ಯ ನಡೆಸಲಾಗುತ್ತಿದ್ದು ಬ್ಲಾಕ್ ಹಂತದಲ್ಲಿ ನಿಯೋಜನೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.
ಜಿಲ್ಲಾ ಹಂತದಲ್ಲಿ ಜುಲೈ 16ರಂದು, ತಾಲೂಕು ಹಂತದಲ್ಲಿ ಕೌನ್ಸಿಲಿಂಗ್‍ನಲ್ಲಿ ಭರ್ತಿ ಆಗದೇ ಉಳಿದಿರುವ ಖಾಲಿ ಹುದ್ದೆಗಳನ್ನು, ಜಿಲ್ಲಾ ಮಟ್ಟದಲ್ಲಿ ಜೇಷ್ಠತಾ ಪಟ್ಟಿಯನ್ನು ಸೇವೆಗೆ ಸೇರಿದ ದಿನಾಂಕದ ಆಧಾರದ ಮೇಲೆ ಕೌನ್ಸಿಲಿಂಗ್ ಮೂಲಕ ಮರುನಿಯೋಜನೆ ಮಾಡಲಾಗುವುದು.
ಯಾವುದೇ ಶಾಲೆಯಲ್ಲಿ 60ಕ್ಕಿಂತ ಕಡಿಮೆ ದಾಖಲಾತಿ ಇದ್ದಲ್ಲಿ ಶಾಲೆಯಲ್ಲಿರುವ ಮುಖ್ಯ ಶಿಕ್ಷಕರನ್ನು ಅಗತ್ಯವಿರುವ ಶಾಲೆಗೆ ಸ್ಥಳಾಂತರಿಸಲಾಗುವುದು. ಶಿಕ್ಷಕರನ್ನು ಮುಖ್ಯ ಶಿಕ್ಷಕರ ಪ್ರಭಾರದಲ್ಲಿ ಇಡಲಾಗುವುದು. 120ಕ್ಕಿಂತ ಹೆಚ್ಚು ಮಕ್ಕಳು ಇರುವ ಶಾಲೆಯ ನಲಿ-ಕಲಿ ತರಗತಿಗೆ ಒಬ್ಬರು ಹೆಚ್ಚುವರಿ ಶಿಕ್ಷಕರನ್ನು ನೀಡಲಾಗುವುದು. ಅತಿಥಿ ಶಿಕ್ಷಕರ ನೇಮಕವನ್ನು ಜಿಲ್ಲಾ ಹಂತದಲ್ಲಿ ಮರುನಿಯೋಜನೆ ಪ್ರಕ್ರಿಯೆ ಮುಗಿದ ನಂತರ ಅಗತ್ಯವಿರುವ ಶಾಲೆಗಳಿಗೆ ನೇಮಕ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಮತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜು. 16ರಂದು ನಗರಸಭೆಯ ಟಾಸ್ಕ್ ಫೋರ್ಸ್ ಸಮಿತಿ ಸಭೆ
ಚಾಮರಾಜನಗರ, ಜು. 12 - ನಗರಸಭೆ ವ್ಯಾಪ್ತಿಯ ದೀನದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ ನಲ್ಮ್) ಯೋಜನೆಗೆ ಸಂಬಂಧಿಸಿದ ಸ್ವಯಂ ಉದ್ಯೋಗ ಮತ್ತು ಗುಂಪು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳನ್ನು ಆಯ್ಕೆ ಮಾಡಲು ಜುಲೈ 16ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜೋಡಿ ರಸ್ತೆಯಲ್ಲಿರುವ ವರ್ತಕರ ಭವನದ ಎದುರಿನ ಸಿಡಿಎಸ್ ಸಮುದಾಯ ಭವನದಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ಸಭೆಯನ್ನು ಪೌರಾಯುಕ್ತರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದೆ.
ಅರ್ಜಿ ಸಲ್ಲಿಸಿರುವ ಎಲ್ಲಾ ಫಲಾನುಭವಿಗಳು ಮೂಲ ದಾಖಲಾತಿಗಳೊಂದಿಗೆ ಸಭೆಗೆ ಹಾಜರಾಗುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ನೂತನ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಪ್ರಾರಂಭ
ಚಾಮರಾಜನಗರ, ಜೂ. 12 - ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆವತಿಯಿಂದ 2016-17ನೇ ಸಾಲಿಗೆ ನಗರದಲ್ಲಿ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ) ಹೆಣ್ಣು ಮಕ್ಕಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯವನ್ನು ನೂತನವಾಗಿ ಪ್ರಾರಂಭಿಸಲಾಗುತ್ತಿದೆ.
ಶೇ. 75ರಷ್ಟು ಸ್ಥಾನಗಳನ್ನು ಅಲ್ಪಸಂಖ್ಯಾತರ ಜನಾಂಗದ ವಿದ್ಯಾರ್ಥಿಗಳಿಗೆ ಹಾಗೂ ಶೇ. 25ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ನೀಡಲಾಗುವುದು.
ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ 44,500 ರೂ.ಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1ಕ್ಕೆ ಒಂದು ಲಕ್ಷ ರೂ. ಮೀರಿರಬಾರದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08226-222180, ಮೊಬೈಲ್ 9980685550, 9480817623 ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ.ಜಾ. ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜು. 12 - ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2016-17ನೇ ಸಾಲಿಗೆ ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣದಲ್ಲಿ ನಿಬಂಧನೆಗಳಿಗೆ ಅನುಗುಣವಾಗಿ ತರಬೇತಿ ನೀಡಲು ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಯು ಪರಿಶಿಷ್ಟ ಜಾತಿಗೆ ಸೇರಿದ್ದು ಕಾನೂನು ಪದವೀಧರರಾಗಿರಬೇಕು. ಅರ್ಜಿ ಸಲ್ಲಿಸುವ ಕಡೆಯ ದಿನಾಂಕಕ್ಕೆ ಕಾನೂನು ಪದವಿಯಲ್ಲಿ ತೇರ್ಗಡೆಯಾಗಿ 2 ವರ್ಷ ಮೀರಿರಬಾರದು. ಅಭ್ಯರ್ಥಿಗಳು ಜಿಲ್ಲೆಯವರಾಗಿದ್ದು ಬಾರ್ ಕೌನ್ಸಿಲ್‍ನಲ್ಲಿ ಈಗಾಗಲೇ ನೊಂದಾಯಿಸಿರಬೇಕು. 40 ವರ್ಷ ವಯೋಮಿತಿಯೊಳಗಿದ್ದು 2 ಲಕ್ಷ ರೂ. ವಾರ್ಷಿಕ ಆದಾಯದ ಮಿತಿಯೊಳಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳು 4 ವರ್ಷಗಳವರೆಗೆ ತರಬೇತಿ ಪಡೆದುಕೊಳ್ಳಬೇಕು. ತರಬೇತಿ ಅವಧಿಯಲ್ಲಿ 2 ಸಾವಿರ ರೂ.ಗಳ ಶಿಷ್ಯ ವೇತನ ಮಂಜೂರು ಮಾಡಲಾಗುವುದು. ತರಬೇತಿ ಅವಧಿಯಲ್ಲಿ ಬಿಟ್ಟು ಹೋದಲ್ಲಿ ವiಂಜೂರಾದ ಶಿಷ್ಯ ವೇತನವನ್ನು ವಸೂಲು ಮÁಡಲಾಗುವುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ತಹಸೀಲ್ದಾರ್ ಅವರಿಂದ ಪಡೆದ ಜಾತಿ ಪ್ರಮಾಣ ಪತ್ರ, ವರಮಾನ ಪತ್ರ, ಕಾನೂನು ಪದವಿ ಅಂಕಪಟ್ಟಿಗಳು, ಪದವಿ ಪತ್ರ, ಬಾರ್ ಕೌನ್ಸಿಲ್ ನೋಂದಣಿ ಪತ್ರದ ದೃಢೀಕೃತ ಪ್ರತಿಗಳೊಂದಿಗೆ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಿ ಜುಲೈ 30ರ ಸಂಜೆ 4 ಗಂಟೆಂiÀÉೂಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರಥಮ ಎಂಎಫ್‍ಎ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜು. 12- ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲೆ ಕಾಲೇಜಿನಲ್ಲಿ ಪ್ರಥಮ ಎಂಎಫ್‍ಎ ತರಗತಿ ಪ್ರವೇಶಕ್ಕಾಗಿ 2016-17ನೇ ಸಾಲಿನ ಶಿಕ್ಷಣಿಕ ವರ್ಷಕ್ಕೆ ಚಿತ್ರಕಲೆ, ಶಿಲ್ಪಕಲೆ ಹಾಗೂ ಗ್ರಾಫಿಕ್ಸ್ ವಿಭಾಗಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಬಿಎಫ್‍ಎ ಪದವಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅರ್ಜಿ ಹಾಗೂ ವಿವರಣಾ ಪತ್ರಿಕೆಯನ್ನು 250 ರೂ. ಪಾವತಿ ಖುದ್ದಾಗಿ ಹಾಗೂ ಡೀನ್, ಕಾವಾ, ಮೈಸೂರು ಇವರ ಹೆಸರಿನಲ್ಲಿ ರೂ. 275ಗಳ ಡಿಡಿಯನ್ನು ಕಳುಹಿಸಿಯೂ ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಯನ್ನು ದೃಢೀಕರಿಸಿದ ಎಸ್‍ಎಸ್‍ಎಲ್‍ಸಿ, ಪ್ರಥಮ ಹಾಗೂ ದ್ವಿತೀಯ ಮೂಲ ತರಗತಿ, ಬಿಎಫ್‍ಎ ಅಥವಾ ತತ್ಸಮಾನ ಪದವಿ ಅಂಕಪಟ್ಟಿಗಳು, ಪ್ರಮಾಣ ಪತ್ರ, ವರ್ಗಾವಣೆ ಪತ್ರ, ಆದಾಯ, ಜಾತಿ, ವಲಸೆ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳೊಂದಿಗೆ ಡೀನ್, ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲೆ ಕಾಲೇಜು (ಕಾವಾ), ಭಾರತ ಸರ್ಕಾರ ಪಠ್ಯ ಪುಸ್ರಕ ಮುದ್ರಣಾಲಯದ ಆವರಣ, ಟಿ.ಎನ್. ಪುರ ರಸ್ತೆ, ಮೈಸೂರು-570011 ಇಲ್ಲಿಗೆ ಜುಲೈ 20ರೊಳಗೆ ಸಲ್ಲಿಸಬೇಕು. ಜುಲೈ 22ರಂದು ಬೆಳಿಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆ ನಡೆಸಲಾಗುವುದು.
ಶುಲ್ಕ ಪಾವತಿಸಲು ಜುಲೈ 28 ಕಡೆಯ ದಿನವಾಗಿದೆ. ತರಗತಿಗಳು ಆಗಸ್ಟ್ 1ರಿಂದ ಪ್ರಾರಂಭವಾಗಲಿದೆ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಅರ್ಜಿಯೊಡನೆ ಲಗತ್ತಿಸಿದ ಮೂಲ ದಾಖಲಾತಿಗಳನ್ನು ಹಾಜರು ಪಡಿಸುವಂತೆ ಕಾವಾ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ.ಜಾ., ಪ.ಪಂ. ಅಭ್ಯರ್ಥಿಗಳಿಂದ ಫೆಲೋಷಿಪ್‍ಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜು. 12 ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಸಂಗೀತ, ನೃತ್ಯ ಕಲೆಗಳಲ್ಲಿ ಹೆಚ್ಚಿನ ಸಂಶೋಧನೆ, ಅಧ್ಯಯನ ಮಾಡಲು 2016-17ನೇ ಸಾಲಿಗೆ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪರಿಣಿತ ಕಲಾವಿದರು, ತಜ್ಞರಿಂದ ಸಂಶೋಧನೆಗಾಗಿ ಫೆಲೋಷಿಪ್‍ಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತರು ಸಂಶೋಧನೆ, ಅಧ್ಯಯನ ನಡೆಸುವ ವಿಷಯದ ಬಗ್ಗೆ ಸುಮಾರು 5-6 ಪುಟಗಳ ಸಾರಲೇಖನವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಅಧ್ಯಯನ ಅವಧಿ 6 ತಿಂಗಳು ಹಾಗೂ ಒಟ್ಟು 20 ಫೆಲೋಷಿಪ್‍ಗಳು. ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದವರಿಗೆ 1 ಲಕ್ಷ ರೂ. ಸಂಶೋಧನಾ ನೆರವನ್ನು ನೀಡಲಾಗುವುದು. ಆಯ್ಕೆಯಲ್ಲಿ ಆಕಾಡಮಿ ತೀಮಾನವೇ ಅಂತಿಮವಾಗಿರುತ್ತದೆ.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಉಚಿತವಾಗಿ, 10 ರೂ.ಗಳ ಅಂಚೆಚೀಟಿ ಅಂಟಿಸಿದ ಸ್ವವಿಳಾಸವುಳ್ಳ ಲಕೋಟೆಯನ್ನು ಕಳುಹಿಸುವುದರ ಮೂಲಕ ಅಥವಾ ಅಕಾಡೆಮಿಯ ಇ-ಮೇಲ್ ಞಚಿಡಿಟಿಚಿಣಚಿಞಚಿsಚಿಟಿgeeಣಚಿ@gmಚಿiಟ.ಛಿomನಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜುಲೈ 25ರ ಒಳಗೆ ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆಸಿ ರಸ್ತೆ, ಬೆಂಗಳೂರು-560002 ಇಲ್ಲಿಗೆ ಕಳುಹಿಸಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಕಾಡೆಮಿ ರಿಜಿಸ್ಟ್ರಾರ್ ಬನಶಂಕರಿ ವಿ. ಅಂಗಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜು. 12 - ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2016-17ನೇ ಸಾಲಿಗೆ ಶಿಷ್ಯ ವೇತನಕ್ಕೆ ಅರ್ಜಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಶಾಸ್ತ್ರೀಯ ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾ ಕೀರ್ತನೆ ಮತ್ತು ಗಮಕ ಕಲಾ ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24ರ ವಯೋಮಾನದ ಅಭ್ಯರ್ಥಿಗಳು ಅರ್ಹರು.
ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದವರಿಗೆ 10 ಸಾವಿರ ರೂ. ಶಿಷ್ಯ ವೇತನ ನೀಡಲಾಗುವುದು.
ಅರ್ಜಿಯನ್ನು ಉಚಿತವಾಗಿ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ, 10 ರೂ.ಗಳ ಅಂಚೆಚೀಟಿ ಅಂಟಿಸಿದ ಸ್ವವಿಳಾಸವುಳ್ಳ ಲಕೋಟೆಯನ್ನು ಕಳುಹಿಸುವುದರ ಮೂಲಕ ಅಥವಾ ಅಕಾಡೆಮಿಯ ಇ-ಮೇಲ್ ಞಚಿಡಿಟಿಚಿಣಚಿಞಚಿsಚಿಟಿgeeಣಚಿ@gmಚಿiಟ.ಛಿomನಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜುಲೈ 30ರ ಒಳಗೆ ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆಸಿ ರಸ್ತೆ, ಬೆಂಗಳೂರು-560002 ಇಲ್ಲಿಗೆ ಕಳುಹಿಸಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಕಾಡೆಮಿ ರಿಜಿಸ್ಟ್ರಾರ್ ಬನಶಂಕರಿ ವಿ. ಅಂಗಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಬಿಎಸ್‍ಎನ್‍ಎಲ್‍ನಲ್ಲಿ ಜೂನಿಯರ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜು. 12 - ಭಾರತ್ ಸಂಚಾರ್ ನಿಗಮ ಲಿಮಿಟೆಡ್‍ನಲ್ಲಿ ಖಾಲಿ ಇರುವ 2700 ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ಬಿ.ಇ, ಬಿ.ಟೆಕ್, ಡಿಪ್ಲೊಮೊನಲ್ಲಿ ಟೆಲಿಕಮ್ಯೂನಿಕೇಷನ್, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್, ರೇಡಿಯೋ, ಕಂಪ್ಯೂಟರ್ ಸೈನ್ಸ್, ಇನ್ಸ್‍ಟ್ರುಮೇಟೆಷನ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ ಅಥವಾ ಬಿ.ಎಸ್ಸಿ. (ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್), ಎಂ.ಎಸ್ಸಿ (ಎಲೆಕ್ಟ್ರಾನಿಕ್ಸ್)ಯಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ 18 ರಿಂದ 30 ವರ್ಷಗಳು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿಯನ್ನು ವೆಬ್‍ಸೈಟ್ ತಿತಿತಿ.exಣeಡಿಟಿಚಿಟexಚಿm.bsಟಿಟ.ಛಿo.iಟಿ ನಲ್ಲಿ ಸಲ್ಲಿಸಲು ಕೊನೆಯ ಆಗಸ್ಟ್ 10 ಕಡೆಯ ದಿನ.
ಹೆಚ್ಚಿನ ಮಾಹಿತಿಯನ್ನು ಉಪಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇವರಿಂದ ಅಥವಾ ವೆಬ್‍ಸೈಟ್ ತಿತಿತಿ.bsಟಿಟ.ಛಿo.iಟಿನ್ನು ಸಂಪರ್ಕಿಸಿ ಪಡೆಯಬಹುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.
ಜು. 15ರಂದು ವಿಶ್ವ ಕೌಶಲ್ಯ ದಿನಾಚರಣೆ ಅಂಗವಾಗಿ ಉದ್ಯೋಗಮೇಳ
ಚಾಮರಾಜನಗರ, ಜೂ. - ವಿಶ್ವ ಯುವ ಕೌಶಲ್ಯ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜುಲೈ 15ರಂದು ಕೌಶಲ್ಯ ಆಧಾರಿತ ಉದ್ಯೋಗಕ್ಕೆ ಸೇರಬಯಸುವ ಅಭ್ಯರ್ಥಿಗಳಿಗೆ ಉದ್ಯೋಗ ಮೇಳ ಏರ್ಪಡಿಸಲಾಗಿದೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ, ಯಾವುದೇ ಪದವಿ, ಐಟಿಐ, ಡಿಪ್ಲೊಮಾ, ಎಎನ್‍ಎಂ, ಜಿಎನ್‍ಎಂ, ಜೆಓಸಿ ವಿದ್ಯಾರ್ಹತೆ ಹೊಂದಿದ್ದು 18 ರಿಂದ 35ರ ವಯೋಮಿತಿಯೊಳಗಿರುವ ಅಭ್ಯರ್ಥಿಗಳು ಜುಲೈ 15ರಂದು ಬÉಳಿಗ್ಗೆ 10.30 ಗಂಟೆಗೆ ಉದ್ಯೋಗ ಮೇಳಕ್ಕೆ ಹಾಜರಾಗಬೇಕೆಂದು ಜಿಲ್ಲಾ ಉದ್ಯೋಗಾಧಿಕಾರಿ ಸಿ.ಎಂ. ಉಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳಾ ಉದ್ದಿಮೆದಾರರು, ಸದಸ್ಯರ ಉತ್ಪನ್ನಗಳ ಮಾರಾಟ ಮೇಳ : ಉಚಿತ ಮಳಿಗೆ ಸೌಲಭ್ಯ
ಚಾಮರಾಜನಗರ, ಜು.- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಮಹಿಳಾ ಉದ್ದಿಮೆದಾರರು ಹಾಗೂ ಸ್ವಸಹಾಯ ಗುಂಪಿನ ಸದಸ್ಯರು ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಜುಲೈ 18 ರಿಂದ 20ರವರೆಗೆ ನಗರದ ಲಕ್ಷ್ಮೀರಂಗನಾಥ ಕಲ್ಯಾಣ ಮಂಟಪದಲ್ಲಿ ಜಿಲ್ಲಾಮಟ್ಟದ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದೆ.
ಈ ವಸ್ತುಪ್ರದರ್ಶನದಲ್ಲಿ ಭಾಗವಹಿಸುವ ಮಹಿಳಾ ಉದ್ದಿಮೆದಾರರು, ಸ್ವಸಹಾಯ ಗುಂಪಿನ ಸದಸ್ಯರು, ಸಂಘಸಂಸ್ಥೆಗಳಿಗೆ ಉಚಿತ ಮಳಿಗೆಗಳನ್ನು ಒದಗಿಸಲಾಗುತ್ತದೆ. ಆಸಕ್ತರು ಜುಲೈ 15ರೊಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ನೊಂದಾಯಿಸಿಕೊಳ್ಳಬಹುದು, ವಿವರಗಳಿಗೆ ಮೊಬೈಲ್ ಸಂಖ್ಯೆ 7204705236 ಹಾಗೂ ಸ್ಥಿರ ದೂರವಾಣಿ ಸಂಖ್ಯೆ 08226-222445 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಜು. 16ರಂದು ನಗರದಲ್ಲಿ ಮಾವು ಬೆಳೆ ಕುರಿತು ವಿಚಾರ ಸಂಕಿರಣ
ಚಾಮರಾಜನಗರ, ಜು. 11 - ತೋಟಗಾರಿಕೆ ಇಲಾಖೆ ವತಿಯಿಂದ ಮಾವು ಬೆಳೆಯ ಬೇಸಾಯ ಕ್ರಮ, ಸಸ್ಯ ಸಂರಕ್ಷಣೆ ಮತ್ತು ಕೊಯ್ಲೋತ್ತರ ನಿರ್ವಹಣೆ ಕುರಿತು ವಿಚಾರ ಸಂಕಿರಣವನ್ನು ಜುಲೈ 16ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಬೆಂಗಳೂರಿನ ಭಾರತೀಯ ಸಂಶೋಧನಾ ಕೇಂದ್ರದ ವಿಜ್ಞಾನಿಗಳು, ತೋಟಗಾರಿಕೆ ಇಲಾಖೆಯ ನುರಿತ ತಜ್ಞರು ವಿಚಾರಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯ ರೈತರು, ಬೆಳೆಗಾರರು ಈ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಆಯಾ ತಾಲೂಕಿನ ಹಿರಿಯ ತೋಟಗಾರಿಕೆ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08226-222142, ಮೊಬೈಲ್ 9480292129 ಸಂಪರ್ಕಿಸಿಯೂ ಮಾಹಿತಿ ಪಡೆಯಬಹುದೆಂದು ತೋಟಗಾರಿಕೆ ಉಪನಿರ್ದೇಶಕರಾದ ನಾಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜು. 12ರಿಂದ ಶಾಲಾ ವಿದ್ಯಾರ್ಥಿಗಳ ವಿಶೇಷ ಕ್ರೀಡಾಕೂಟ
ಚಾಮರಾಜನಗರ, ಜು. ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 14 ರಿಂದ 17ರ ವಯೋಮಿತಿಯೊಳಗಿನ ಶಾಲಾ ವಿದ್ಯಾರ್ಥಿಗಳಿಗೆ ನೇರ ಜಿಲ್ಲಾ ವಿಶೇಷ ಕ್ರೀಡೆಗಳನ್ನು ಜುಲೈ 12 ರಿಂದ 29ರವರೆಗೆ ವಿವಿದೆಡೆ ಆಯೋಜಿಸಲಾಗಿದೆ.
ಜುಲೈ 12ರಂದು ಗುಂಡ್ಲುಪೇಟೆ ಪಟ್ಟಣದ ದೇವರಾಜ ಅರಸು ಕ್ರೀಡಾಂಗಣದಲ್ಲಿ ಫುಟ್‍ಬಾಲ್, 13ರಂದು ಷಟಲ್ ಬ್ಯಾಡ್ಮಿಂಟನ್, 14ರಂದು ಕೊಳ್ಳೇಗಾಲದ ಲಯನ್ಸ್ ಶಾಲೆಯಲ್ಲಿ ಯೋಗ, 15ರಂದು ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರದಲ್ಲಿ ಚೆಸ್, 19ರಂದು ಕೊಳ್ಳೇಗಾಲದ ಆದರ್ಶ ಶಾಲೆಯಲ್ಲಿ ಹ್ಯಾಂಡ್ ಬಾಲ್, 20ರಂದು ಕೊಳ್ಳೇಗಾಲದ ಎಂಜಿಎಸ್‍ವಿ ಶಾಲೆಯಲ್ಲಿ ಬ್ಯಾಸ್ಕೆಟ್ ಬಾಲ್, 21ರಂದು ಕ್ರಿಕೆಟ್ (ಬಾಲಕರಿಗೆ), 22ರಂದು ಕೊಳ್ಳೇಗಾಲದ ಎಸ್‍ವಿಕೆ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಟಿಟಿ, 26ರಂದು ಹಾಕಿ, 27ರಂದು ಕೊಳ್ಳೇಗಾಲದ ಕೆಯುಸಿಯಲ್ಲಿ ಲಾನ್ ಟೆನಿಸ್, 29ರಂದು ಲಯನ್ಸ್ ಶಾಲೆಯಲ್ಲಿ ಕರಾಟೆ ಸ್ಪರ್ಧೆಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
ಕಾನೂನು ಬಾಹಿರವಾಗಿ ಪುಸ್ತಕ ಮಾರಾಟ ಮಾಡುವ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ
ಚಾಮರಾಜನಗರ, ಜು. - ಜಿಲ್ಲೆಯಲ್ಲಿ ಯಾವುದೇ ಪ್ರಾಥಮಿಕ ಹಾಗೂ ಪ್ರೌಢಶಾಲಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಿಲ್ಲನ್ನು ನೀಡದೆ ಸರ್ಕಾರಕ್ಕೆ ತೆರಿಗೆಯನ್ನು ವಂಚಿಸಿ ಪುಸ್ತಕಗಳನ್ನು ಮಾರಾಟ ಮಾಡಬಾರದೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ನೋಟ್ ಪುಸ್ತಕ, ಲೇಖನ ಸಾಮಗ್ರಿ, ಇತರೆ ಪುಸ್ತಕಗಳನ್ನು ಬಿಲ್ಲನ್ನು ನೀಡದೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆಂಬ ದೂರು ಬಂದಿದೆ. ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬಿಲ್ಲನ್ನು ನೀಡದೆ ಸರ್ಕಾರಕ್ಕೆ ತೆರಿಗೆಯನ್ನು ವಂಚಿಸಿ ಪುಸ್ತಕ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಕಾನೂನು ಬಾಹಿರವಾಗಿ ಪುಸ್ತಕ ಮಾರಾಟ ಮಾಡಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಮತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನಸಂಖ್ಯಾ ನಿಯಂತ್ರಣಕ್ಕೆ ಜಾಗೃತಿ ಮೂಡಿಸಿ : ಎಂ. ರಾಮಚಂದ್ರ
ಚಾಮರಾಜನಗರ, ಜು. :- ಜನಸಂಖ್ಯಾ ಸ್ಪೋಟದಿಂದ ಅನೇಕ ಸಮಸ್ಯೆಗಳು ಎದುರಾಗಿದ್ದು ಈ ಬಗ್ಗೆ ಎಲ್ಲೆಡೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದÀ ಜನಸಂಖ್ಯೆ ಇಂದು 138 ಕೋಟಿಗೆ ತಲುಪಿದೆ. ಜನಸಂಖ್ಯೆ ಪ್ರಮಾಣ ಹೆಚ್ಚಿದಂತೆ ಅದಕ್ಕೆ ಅನುಗುಣವಾಗಿ ಜನರಿಗೆ ಸಮರ್ಪಕವಾಗಿ ಮೂಲಸೌಕರ್ಯವಾದ ನೀರು, ವಸತಿ, ಉದ್ಯೋಗ ಇನ್ನಿತರ ಅಗತ್ಯಗಳನ್ನು ಪೂರೈಸುವ ಸವಾಲನ್ನು ಸಹ ಎದುರಿಸಬೇಕಾಗುತ್ತದೆ. ಜನಸಂಖ್ಯೆ ಸಮತೋಲನದಿಂದ ಎಲ್ಲಾ ಸೌಲಭ್ಯಗಳು ತಲುಪಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜನಸಂಖ್ಯೆ ಹೆಚ್ಚಳದಿಂದ ಆಗಬಹುದಾದ ತೊಂದರೆ ಅಪಾಯಗಳ ಬಗ್ಗೆ ಮನವರಿಕೆ ಮಾಡಿಕೊಡುವ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಮಾಡಬೇಕಿದೆ. ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳ ಸಹಕಾರ ಪಡೆದು ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು. ಈ ನಿಟ್ಟಿನಲ್ಲಿ ತಾವು ಪೂರಕವಾಗಿ ಸ್ಪಂದಿಸುವುದಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಮಚಂದ್ರ ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಬಸವರಾಜು ಮಾತನಾಡಿ ಜನಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವುದರಿಂದ ಕೃಷಿ ಜಮೀನುಗಳು ನಿವೇಶನವಾಗಿ ಪರಿವರ್ತನೆಯಾಗುತ್ತಿವೆ. ಜನಸಂಖ್ಯೆ ನಿಯಂತ್ರಣಕ್ಕೆ ಚೀನಾ ಮಾದರಿಯ ಕಟ್ಟುನಿಟ್ಟಿನ ಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕಿದೆ. ಕುಟುಂಬದ ಸಂಖ್ಯೆ ಇತಿಮಿತಿಯಲ್ಲಿದ್ದರೆ ಪೋಷಕರಿಗೂ ಉತ್ತಮ ವಿದ್ಯಾಭ್ಯಾಸ, ಇತರೆ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಲು ಸಾಧ್ಯವಾಗಲಿದೆ. ಮುಂದಿನ ತಲೆಮಾರಿಗೆ ಉತ್ತಮ ಸುಧಾರಣೆಗಳನ್ನು ತರುವ ಸಲುವಾಗಿಯಾದರೂ ಜನಸಂಖ್ಯೆ ಹತೋಟಿಗೆ ಬರಬೇಕಿದೆ ಎಂದರು.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ ಮಾತನಾಡಿ ಜನಸಂಖ್ಯೆ ಹೆಚ್ಚಳಕ್ಕೆ ಮೌಢ್ಯತೆ, ಅನಕ್ಷರತೆ ಸಹ ಕಾರಣವಾಗಲಿದೆ. ಮಿತಿಮೀರಿದ ಜನಸಂಖ್ಯೆಯಿಂದ ಸಾಮಾಜಿಕ ಆರ್ಥಿಕ ಶಿಕ್ಷಣ ಕ್ಷೇತ್ರದ ಪ್ರಗತಿ ಕುಂಠಿತವಾಗುತ್ತದೆ. ಹಳ್ಳಿಹಳ್ಳಿಗಳಲ್ಲೂ ಜನಸಂಖ್ಯೆ ಹೆಚ್ಚಳದಿಂದ ಆಗಬಹುದಾದ ಅನಾಹುತಗಳ ಬಗ್ಗೆ ಮನದಟ್ಟು ಮಾಡಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಬಿ.ರಾಮು ಮಾತನಾಡಿ ಭಾರತದಲ್ಲಿ ಕಳೆದ 7 ದಶಕಗಳಲ್ಲಿ ಜನಸಂಖ್ಯೆ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗಿದೆ. ಆದರೆ ಸ್ವಾಭಾವಿಕ ಸಂಪನ್ಮೂಲಗಳು ಹೆಚ್ಚಳವಾಗಿಲ್ಲ ಎಂಬುದನ್ನು ತಿಳಿಯಬೇಕಿದೆ. ಹೀಗಾಗಿ ನಾನಾ ಸಮಸ್ಯೆಗಳು ಎದುರಿಸಬೇಕಿದೆ. 1970ರಿಂದಲೂ ವ್ಯಾಸೆಕ್ಟಮಿ, ಟ್ಯುಬೆಕ್ಟಮಿ, ಇನ್ನಿತರ ವಿಧಾನಗಳ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜನಸಂಖ್ಯೆ ನಿಯಂತ್ರಣಕ್ಕೆ ನಿರತವಾಗಿದೆ ಎಂದರು.
ಜೆ.ಎಸ್.ಎಸ್. ಮಹಿಳಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರೊ. ಕೆ.ವೀರಣ್ಣ ಜನಸಂಖ್ಯೆ ದಿನಾಚರಣೆ ಮಹತ್ವ, ಜನಸಂಖ್ಯೆ ನಿಯಂತ್ರಣಕ್ಕೆ ಯೂನಿಸೆಫ್ ಮಾಡಿರುವ ಸಲಹೆ ಇನ್ನಿತರ ಕ್ರಮಗಳ ಕುರಿತು ಉಪನ್ಯಾಸ ನೀಡಿದರು.
ಇದೇವೇಳೆ ಕುಟುಂಬ ಕಲ್ಯಾಣ ಯೋಜನೆಗೆ ಶ್ರಮಿಸಿದ ವೈದ್ಯರು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರನ್ನು ಗಣ್ಯರು ಸನ್ಮಾನಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು, ರೋಟರಿ ಇನ್ನರ್ ವೀಲ್ ಸಂಸ್ಥೆಯ ಡಿ.ಎಸ್. ಗಿರೀಶ್, ಜಿ.ಪಂ. ಉಪಕಾರ್ಯದರ್ಶಿ ಮುನಿರಾಜಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ. ಪಾಂಡುವಿಜಯನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ವೈ. ನಂದ, ಪ್ರಬಾರ ಜಿಲ್ಲಾ ಶಿಕ್ಷಣ ಆರೋಗ್ಯಾಧಿಕಾರಿ ದೊರೆಸ್ವಾಮಿ ನಾಯಕ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಪ್ರವಾಸಿ ಮಂದಿರದ ಬಳಿ ಜಾಗೃತಿ ಜಾಥಾಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚÀಂದ್ರ ಚಾಲನೆ ನೀಡಿದರು.
ಗುಂಡ್ಲುಪೇಟೆ : ಮನೆ ನಿರ್ಮಾಣ, ಖರೀದಿ, ವಿಸ್ತರಣೆಗೆ ಆರ್ಥಿಕ ನೆರವು : ಅರ್ಜಿ ಆಹ್ವಾನ
ಚಾಮರಾಜನಗರ, ಜು. - ಗುಂಡ್ಲುಪೇಟೆ ಪುರಸಭೆಯು ಕೇಂದ್ರ ಪುರಸ್ಕøತ ಹೌಸಿಂಗ್ ಫಾರ್ ಹಾಲ್ ಅಭಿಯಾನದ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯಡಿ ಮನೆ ಖರೀದಿ, ನಿರ್ಮಾಣ, ವಿಸ್ತರಣೆಗೆ ಸಾಲ ಹಾಗೂ ಬಡ್ಡಿ ಸಹಾಯಧನ ಒದಗಿಸುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.
ಬಿಪಿಎಲ್ ಕುಟುಂಬ (ವಾರ್ಷಿಕ ಆದಾಯ 87 ಸಾವಿರ), ಇಡಬ್ಲ್ಯೂಎಸ್ (87 ಸಾವಿರದಿಂದ 3 ಲಕ್ಷ ವಾರ್ಷಿಕ ಆದಾಯ) ಹಾಗೂ ಎಲ್‍ಐಜಿ (3 ಲಕ್ಷದಿಂದ 6 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ) ವರ್ಗಕ್ಕೆ ಸೌಲಭ್ಯ ಲಭಿಸಲಿದೆ. ಆಸಕ್ತರು ಪುರಸಭೆ ಕಚೇರಿಯಲ್ಲಿ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಜುಲೈ 25ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬೇಕು.
ಸಂಪೂರ್ಣ ವಿವರಗಳಿಗೆ ಪುರಸಭೆ ಕಚೇರಿ ಸಂಪರ್ಕಿಸುವಂತೆ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಮೊರಾರ್ಜಿ ವಸತಿ ಶಾಲೆಗಳಲ್ಲಿ ಪಿಯುಸಿ ವಿಸ್ತರಣೆ: ಎಚ್.ಎಸ್. ಮಹದೇವಪ್ರಸಾದ್
ಚಾಮರಾಜನಗರ, ಜು,9 ರಾಜ್ಯದ ಎಲ್ಲಾ ಮೊರಾರ್ಜಿ ವಸತಿ ಶಾಲೆಗಳಲ್ಲಿ ಪಿಯುಸಿ ವರೆಗಿನ ತರಗತಿಗಳನ್ನು ಹಂತ ಹಂತವಾಗಿ ವಿಸ್ತರಣೆ ಮಾಡುವ ಚಿಂತನೆ ಸರ್ಕಾರದ ಮುಂದಿದೆ ಎಂದು ಸಹಕಾರ ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ತಿಳಿಸಿದರು.
ಹನೂರಿನಲ್ಲಿಂದು ಸಮಾಜ ಕಲ್ಯಾಣ ವತಿಯಿಂದ ನಿರ್ಮಾಣವಾಗಿರುವ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜು ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮೊರಾರ್ಜಿ ಶಾಲೆಗಳಿಗೆ ಎಲ್ಲಾ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಬಹು ವಿಸ್ತಾರವಾದ ಪ್ರದೇಶದಲ್ಲಿ ಬೃಹತ್ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರಸ್ತುತ 6 ರಿಂದ 10ನೇ ತರಗತಿ ವರೆಗೆ ಮಾತ್ರ ವ್ಯಾಸಂಗಕ್ಕೆ ವಸತಿ ಶಾಲೆಗಳಲ್ಲಿ ಅವಕಾಶವಿದೆ. ಪಿಯುಸಿ ವರೆಗೆ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸೌಲಭ್ಯ ಒದಗಿಸುವುದರಿಂದ ಅನುಕೂಲವಾಗಲಿದೆ ಹೀಗಾಗಿ ಎಲ್ಲಾ ಮೊರಾರ್ಜಿ ವಸತಿ ಶಾಲೆಗಳಲ್ಲೂ ಹಂತ ಹಂತವಾಗಿ ಪಿಯುಸಿ ವ್ಯಾಸಂಗಕ್ಕೆ ವಿಸ್ತರಣೆ ಮಾಡಲು ಯೋಜಿಸಲಾಗಿದೆ ಎಂದರು.
ವಸತಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಪಡೆಯಲು ಪೂರಕ ಸೌಲಭ್ಯಗಳನ್ನು ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಒಟ್ಟು 16 ವಸತಿ ಶಾಲೆಗಳಿವೆ. ಈ ಶಾಲೆಗಳಲ್ಲಿ ಶೇ. 94 ರಷ್ಟು ಫಲಿತಾಂಶ ಬಂದಿದೆ. ಇದು ಹೆಮ್ಮೆಯ ಸಂಗತಿ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಚಾಮರಾಜನಗರ ತಾಲ್ಲೂಕಿನ ಕೋಡಿ ಉಗನೆಯಲ್ಲಿ ಮೊರಾರ್ಜಿ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿತ್ತು. ವಿದ್ಯಾರ್ಥಿಗಳಿಗೆ ಆಗುತ್ತಿದ್ದ ತೊಂದರೆ ಮನಗಂಡು ಆದಷ್ಟು ಶೀಘ್ರವೇ ಅನುಕೂಲ ಕಲ್ಪಿಸಬೇಕೆಂಬ ಉದ್ದೇಶದಿಂದ ಪ್ರಸ್ತುತ ಉದ್ಘಾಟನೆಯಾಗಿರುವ ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರ ವಸತಿ ನಿಲಯಗಳ ಸ್ಥಾಪನೆ ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿದೆ. ಎಲ್ಲಾ ಸುಧಾರಣೆಗೂ ಶಿಕ್ಷಣವೇ ಮದ್ದು. ಶಿಕ್ಷಣ ಅಧ್ಯಯನದಿಂದ ಮಾನ್ಯತೆ ಸಿಗಲಿದೆ. ಹೀಗಾಗಿ ಎಲ್ಲಾ ವರ್ಗಗಳಿಗೂ ಪರಿಪೂರ್ಣವಾಗಿ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ. ಶಿಕ್ಷಣ ರಂಗದ ಸವಲತ್ತುಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಅನಾವರಣ ಮಾಡಿ ಮಾತನಾಡಿದ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ವಸತಿ ಶಾಲೆಗಳು ಬಡವಿದ್ಯಾರ್ಥಿಗಳಿಗೆ ವರದಾನವಾಗಿದೆ. ಪ್ರತಿ ತಾಲ್ಲೂಕಿನಲ್ಲೂ ಕನಿಷ್ಟ ಒಂದು ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜನ್ನು ಶೀಘ್ರವೇ ಪ್ರಾರಂಭಿಸಬೇಕು. ಇದರಿಂದ ಬಹುತೇಕ ವಿದ್ಯಾರ್ಥಿಗಳಿಗೆ ದೂರದ ಪಟ್ಟಣಗಳಿಗೆ ತೆರಳಿ ಅಧ್ಯಯನ ಮಾಡುವ ತೊಂದರೆ ತಪ್ಪಲಿದೆ. ಈ ಹಿನ್ನಲೆಯಲ್ಲಿ ಮುಂದಿನ ರಾಜ್ಯ ಪರಿಷತ್ ಸಭೆಯಲ್ಲಿ ಮುಖ್ಯ ಮಂತ್ರಿಗಳಿಗೂ ಸಹ ಈ ಬಗ್ಗೆ ಮನವಿ ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಆರ್. ನರೇಂದ್ರ ಅವರು ಹನೂರು ಭಾಗವು ಆರ್ಥಿಕವಾಗಿ ಹಿಂದುಳಿದಿದ್ದರೂ ಸಹಾ ಶಿಕ್ಷಣ ಸಾಧನೆಯಲ್ಲಿ ಮುಂದಿದೆ. ಈ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ರಾಮಾಪುರ, ಪಾಳ್ಯ ಹೋಬಳಿಗಳಲ್ಲೂ ಮೊರಾರ್ಜಿ ಶಾಲೆ ಮಂಜೂರಾಗಿದೆ. ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಇರುವಂತಹ ನವೋದಯ ಶಾಲೆಯನ್ನು ಹನೂರಿನಲ್ಲಿಯೂ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಮೊರಾರ್ಜಿ ದೇಸಾಯಿ ಅವರ ಭಾವಚಿತ್ರ ಅನಾವರಣ ಮಾಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬೊಮ್ಮಯ್ಯ, ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ.ಸದಾಶಿವಮೂರ್ತಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ನವೀನ್, ಜಿ.ಪಂ. ಸದಸ್ಯರಾದ ಜಯಂತಿ, ಶಿವಮ್ಮ, ಮರುಗದಮಣಿ, ತಾ.ಪಂ. ಅಧ್ಯಕ್ಷರಾದ ರಾಜು, ಉಪಾಧ್ಯಕ್ಷರಾದ ಲತಾರಾಜಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರಾಜು ಗೌಡ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜವಾದ್ ಅಹಮದ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಮಮತಾ ಮಹದೇವ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜೇಶ್. ಜಿ ಗೌಡ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ನಂತರ ಹನೂರು ಪಟ್ಟಣದ ವಿಶೇಷ ತಹಶೀಲ್ದಾರ್ ಕಚೇರಿ ಬಳಿ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಉಸ್ತುವಾರಿ ಸಚಿವರು ಗುದ್ದಲಿ ಪೂಜೆ ನೆರವೇರಿಸಿದರು.
No comments:
Post a Comment