ಚಾಮರಾಜನಗರ, ಏ. - ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಶೋಷಣೆ ದೌರ್ಜನ್ಯ ತಡೆಯಲು ಪರಿಣಾಮಕಾರಿಯಾಗಿ ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸುವಂತೆ ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜÐರ ಸಮಿತಿಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಳೆದ 10ವರ್ಷಗಳ ಅವಧಿಯಲ್ಲಿ ಮಹಿಳೆಯರು, ಮಕ್ಕಳ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಕುರಿತು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ತಡೆಯಲು ಹಲವಾರು ಕಾಯ್ದೆಗಳನ್ನು ರೂಪಿಸಲಾಗಿದೆ. ಆದರೂ ಶೋಷಣೆ ನಡೆಯುತ್ತಲ್ಲೇ ಇದೆ. ಶಿಕ್ಷೆಗೆ ಒಳಗಾದವರ ಸಂಖ್ಯೆ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ತಪ್ಪಿಸ್ಥರನ್ನು ಸಾಕ್ಷಧ್ಯಾರಗಳ ಮೂಲಕ ಶಿಕ್ಷೆಗೆ ಗುರಿಪಡಿಸುವ ಪ್ರಯತ್ನವನ್ನು ಪರಿಣಾಮಕಾರಿಯಾಗಿ ಮಾಡಿದರೇ, ಉತ್ತಮ ಸಂದೇಶ ರವಾನೆಯಾಗುತ್ತದೆ ಎಂದು ಉಗ್ರಪ್ಪ ಅವರು ತಿಳಿಸಿದರು.
ಪ್ರಸವಪೂರ್ವ ಭ್ರೂಣ ಲಿಂಗ ಪತ್ತೇ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಮಾಡಬೇಕು. ಹೆಣ್ಣು ಭ್ರೂಣ ಹತ್ಯೆ ಮಾಡುವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು. ಮಹಿಳೆಯರ ಆರೋಗ್ಯ ರಕ್ಷಣೆಗೆ ಇರುವ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕು. ತಾಯಿ ಮತ್ತು ಶಿಶು ಮರಣ ಸಂಖ್ಯೆಯನ್ನು ಇಳಿಮುಖಗೊಳಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಯುವುದು ಮಾತ್ರವಲ್ಲ. ಪ್ರಯತ್ನಕ್ಕೆ ಮುಂದಾಗುವವರ ವಿರುದ್ದ ಪ್ರಕರಣ ದಾಖಲು ಮಾಡಬೇಕು ಎಂದರು. ಇದೇ ವೇಳೆ ಸಮಿತಿಯ ಸದಸ್ಯರು ಹಾಗೂ ವಿಧಾನಪರಿಷತ್ ಸದಸ್ಯರಾದ ಕೆ.ಬಿ.ಶಾಣಪ್ಪ ಮಾತನಾಡಿ ಬಾಲ್ಯ ವಿವಾಹ ಪ್ರಕರಣಗಳು ನಡೆಯುತ್ತಿದ್ದರು. ಎಷ್ಟೊ ಸಂಧರ್ಭದಲ್ಲಿ ಗಮನಕ್ಕೆ ಬರುತ್ತಿಲ್ಲ. ಬಾಲ್ಯ ವಿವಾಹ ತಡೆಯುವ ಜೊತೆಗೆ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಮಾಡಬೇಕು ಎಂದರು.
ಸಮಿತಿಯ ಮೊತ್ತೊರ್ವ ಸದಸ್ಯರಾದ ಶರಣಪ್ಪ ಮಟ್ಟೂರು ಮಾತನಾಡಿ ಮಹಿಳೆಯರು, ಅಪ್ರಾಪ್ತರ ಮೇಲೆ ಅತ್ಯಾಚಾರ ನಡೆದ ಸಂಧರ್ಭದಲ್ಲಿ ತುರ್ತಾಗಿ ಪ್ರಕರಣ ದಾಖಲು ಮಾಡಿಕೊಳ್ಳಬೇಕು, ಸಂತ್ರಸ್ತೆಗೆ ವೈಧ್ಯಕೀಯ ಪರೀಕ್ಷೆಯನ್ನು ತ್ವರಿತವಾಗಿ ಮಾಡುವ ಮೂಲಕ ಮಾನಸಿಕ ಹಿಂಸೆಯನ್ನು ತಪ್ಪಿಸಬೇಕು. ಇದಕ್ಕೆ ಸರ್ಕಾರಿ ಅಭಿಯೋಜಕರು, ಪೊಲೀಸ್ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ತಿಳಿಸಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳ ಹಿತ ರಕ್ಷಣೆ ಕುರಿತು ಮಾತನಾಡಿದ ಉಗ್ರಪ್ಪ ಅವರು ಶಾಲಾ ಕಾಲೇಜುಗಳಲ್ಲಿ ಸಿಸಿಟಿವಿ ಕ್ಯಾಮರ ಅಳವಡಿಸಬೇಕು. ವಿದ್ಯಾರ್ಥಿಗಳ ಮೇಲೆ ಯಾವುದೇ ಕಿರುಕುಳ ದೌರ್ಜನ್ಯವಾಗದಹಾಗೇ ಆಯಾ ಇಲಾಖೆ, ಜಿಲ್ಲಾ ಮುಖ್ಯಸ್ಥರು ನಿಗಾವಹಿಸಬೇಕು. ಕಿರುಕುಳ ಪ್ರಕರಣದಲ್ಲಿ ಭಾಗಿಯಾಗುವರು ವಿರುದ್ದ ಕ್ರಮ ಜರುಗುಸಲು ಹಿಂದೇಟು ಹಾಕಬಾರದೆಂದು ಸೂಚಿಸಿದರು.
ಸಮಿತಿಯ ಸದಸ್ಯರಾದ ವಿನಿಷಾನೀರೊ, ಪ್ರಪುಲ್ಲಮಧುಕರ್, ಕೆ.ಎಸ್.ವಿಮಲ, ಜ್ಯೋತಿ, ಪ್ರಭ, ರೇಣುಕಾ, ಸಂಪಿಗೆ, ಜಿಲ್ಲಾಧಿಕಾರಿ ಬಿ.ರಾಮು, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಏ. 30ರಂದು ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣಾ ಸಭೆ
ಚಾಮರಾಜನಗರ, ಏ. - ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಬಂಧ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಏಪ್ರಿಲ್ 30ರಂದು ಮಧ್ಯಾಹ್ನ 1 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚುನಾವಣಾ ಸಭೆ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತರಾದ ಎ.ಎಂ. ಕುಂಜಪ್ಪ ತಿಳಿಸಿದ್ದಾರÉ.
ಜಿಲ್ಲೆಯಲ್ಲಿ ಪ್ಲೆಕ್ಸ್‍ಗಳ ವಿಚಾರವಾಗಿಯೇ ಗಲಾಟೆ, ನಿಯಂತ್ರಣ ಜಿಲ್ಲಾಡಳಿತದಿಂದ ಸಾದ್ಯವೇ.?
ಬೂದಿ ಮುಚ್ಚಿದ ಕೆಂಡದಂತಿರುವ ಹೊಂಗನೂರು ಗ್ರಾಮ, ವ್ಯಾಪಕ ಬಂದೂಬಸ್ತ್
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜಿಲ್ಲೆಯಲ್ಲಿ ಪ್ಲೆಕ್ಸ್ ವಿಚಾರವಾಗಿ ಪದೇ ಪದೇ ಅನ್ಯ ಕೋಮುಗಳ ನಡುವೆ ಸಂಘರ್ಷ ನಡೆಯುತ್ತಲೇ ಇದೆ ಆದರೆ ನಿಯಂತ್ರಣ ಮಾಡಲು ಜಿಲ್ಲಾಡಳಿತಕ್ಕೆ ಸಾದ್ಯವಾಗದೇ ನಿಷ್ಕ್ರೀಯವಾಗಿದಿಯೇ ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಮೂಡಿಸಿದೆ.
ಜಿಲ್ಲಾದಿಕಾರಿ ಕುಂಜಪ್ಪ, ಪೊಲೀಸ್ ವರೀಷ್ಟಾಧಿಕಾರಿ ರಂಗಸ್ವಾಮಿ ನಾಯಕ್ ಅವರಿದ್ದಾಗ ಪ್ಲೆಕ್ಸ್ ಹಾಕುವ ವಿಚಾರವಾಗಿ ಎರಡು ಕೋಮುಗಳ ನಡುವೆ ಘರ್ಷಣೆಯಾಗಿ ಲಾಠಿಪ್ರಹಾರ, ಗಾಳಿಯಲ್ಲಿ ಗುಂಡು ಹಾರಿಸುವ ಮಟ್ಟಿಗೆ ಪಟ್ಟಣದಲ್ಲೇ ಕಳೆದ ವರ್ಷದ ಸಾಲಿನಲ್ಲಿ ಜರುಗಿತ್ತು. ವಿಪರ್ಯಾಸ ಎಂದರೆ ಈಗ ಗ್ರಾಮಾಂತರ ವ್ಯಾಪ್ತಿಯಲ್ಲಿ ಹಾಕಲಾಗಿದ್ದ ಪ್ಲೆಕ್ಸ್ ಗೆ ಅಪಮಾನ ಮಾಢುವಂತಹ ಕೃತ್ಯ ನಡೆದು ಗಾಳಿಯಲ್ಲಿ ಗುಂಡು ಹಾರಿಸುವ ಮಟ್ಟಿಗೆ ಇಲ್ಲೂ ನಡೆದಿದೆ.
ಹೊಂಗನೂರು ಗ್ರಾಮದಲ್ಲಿ ನಿನ್ನೆ ಬೆಳಗ್ಗೆ ಉಂಟಾದ ಘರ್ಷಣೆ ಮತ್ತು ಬಿಗುವಿನ ವಾತಾವರಣದಿಂದ ಹದಿನೈದಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗಾಹುತಿಯಾಗಿದ್ದವು ಎರಡು ಕೋಮಿನ ನಡುವೆ ಕಲ್ಲು ತೂರಾಟ ಉಂಟಾಗಿ ಪೊಲೀಸರು ಸೇರಿದಂತೆ ಹಲವಾರು ಮಂದಿಗೆ ಪೆಟ್ಟಾಗಿದ್ದು, ಗಾಯಾಳುಗಳನ್ನು ಕಾಗಲವಾಡಿ ಮತ್ತು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೂ ಆಸ್ತಿ ಪಾಸ್ತಿ ನಷ್ದ ಲೆಕ್ಕಾಚಾರ ಮಾಢುವಷ್ಟು ಸಮಯ ಸಿಕ್ಕದಂತಾಗಿದೆ.
ಕಿಡಿಗೇಡಿಗಳು ಮಾಡಿದ ಗಲಾಟೆಯಿಂದ ಕಲ್ಲು ತೂರಾಟದಲ್ಲಿ ಪೊಲೀಸ್ ಸಿಬ್ಬಂದಿಗಳು ನಿಯಂತ್ರಿಸಲು ಎಷ್ಟೇ ಕಷ್ಟ ಪಡುತ್ತಿದ್ದರೂ ನಿಯಂತ್ರಣ ತರುವಲ್ಲಿ ಪೊಲೀಸ್ ಇಲಾಖೆ ಪ್ರಯತ್ನ ಪಡುತ್ತಿದ್ದರೂ, ಇಲಾಖೆ ಸಿಬ್ಬಂದಿಗಳು, ಅಮಾಯಕ ಜನರು, ಮಾದ್ಯಮದವರಿಗೂ ಇದೇ ಸಂದರ್ಭದಲ್ಲಿ ಹಲ್ಲೆಯಾಗಿರುವುದು ವಿಪರ್ಯಾಸವಾಗಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಕಳೆದ ಎರಡು ವರ್ಷದ ಅವದಿಯಲ್ಲಿ ಬಾರಿ ಪ್ರಮಾಣದಲ್ಲಿ ಈ ಸಂಘರ್ಷಗಳು ಉಂಟಾಗಿದ್ದು ಇದನ್ನು ತಡೆಯುವಲ್ಲಿ ಹೆಚ್ಚು ಪೊಲೀಸರ ಪಾತ್ರವೇ ಪ್ರಮುಖವಾಗಿದೆ. ಜಿಲ್ಲಾಡಳಿತ ಎಲ್ಲೆಂದರಲ್ಲಿ ಹಾಕುವ ಪ್ಲೆಕ್ಸ್‍ಗಳಿಗೆ, ಅನಧಿಕೃತವಾಗಿ ಅನುಮತಿ ಪಡೆಯದೇ ಕಾರ್ಯಕ್ರಮ ಮುಗಿದ ನಂತರೂ ಅನವಾಶ್ಯಕ ಜಾಗದಲ್ಲಿ ಹಾಕುವಂತಹ ಪ್ರಕ್ರಿಯೆಗಳು ಪ್ರಾರಂಭವಾದ್ದರಿಂದ ಕೆಲವು ಕಿಡಿಗೇಡಿಗಳು ಇದನ್ನೆ ಅಸ್ತ್ರವನ್ನಾಗಿ ಮಾಡಿಕೊಂಡು ಸಮಾಜದ ಸ್ವಾಸ್ಥ್ಯ ಕದಡುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾದಿಕಾರಿಗಳನ್ನು ಮಾತನಾಢಿಸಲಾಗಿ ,ಕಾರ್ಯಕ್ರಮ ಮುಗಿದರೂ ಇದುವರೆಗೂ ಪ್ಲೆಕ್ಸ್ ತೆರೆವು ಮಾಡದೇ ಇರುವುದು ಒಂದೆಡೆಯಾದರೆ ಕೆಲವರು ಇದಕ್ಕೆ ಅಪಮಾನ ಮಾಢುವುದು ಸಾಮಾನ್ಯವಾಗಿ ಬಿಟ್ಟಿದೆ, ಅಂತಹವರ ವಿರುದ್ದ ಈಗಾಗಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಇನ್ನು ಮುಂದೆ ಗ್ರಾಮ ಪಂಚಾಯ್ತ್ ವಲಯದ ಕಾರ್ಯದರ್ಶಿಯನ್ನು ಹೊಣೆಗಾರರನ್ನಾಗಿ ಮಾಢಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
------------------------------------------------------------________________
No comments:
Post a Comment