ಜಿಲ್ಲೆಯ ವಿವಿಧ ಭಾಗಗಳಿಗೆ ಸಚಿವರ ತಂಡ ಭೇಟಿ : ಬರ ಪ್ರದೇಶಗಳ ವೀಕ್ಷಣೆ
ಚಾಮರಾಜನಗರ, ಏ. - ಬರಪೀಡಿತ ಪ್ರದೇಶಗಳ ಅಧ್ಯಯನ ಹಾಗು ಬರ ನಿರ್ವಹಣೆ ಹಿನ್ನೆಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಪರಿವೀಕ್ಷಣೆಗಾಗಿ ರಚನೆ ಮಾಡಲಾಗಿರುವ ಸಚಿವ ಸಂಪುಟದ ಉಪ ಸಮಿತಿಯ ಸದಸ್ಯರ ತಂಡ ಇಂದು ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ಕಾನೂನು ಹಾಗೂ ಉನ್ನತ ಶಿಕ್ಷಣ ಸಚಿವರಾದ ಟಿ.ಬಿ. ಜಯಚಂದ್ರ, ಸಹಕಾರ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್, ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹಾಗೂ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ದಿನೇಶ್ ಗುಂಡುರಾವ್ ಅವರನ್ನೋಳಗೊಂಡ ಸಚಿವರ ತಂಡ ಬೆಳಗ್ಗೆಯಿಂದಲೇ ಪರಿಶೀಲನೆಯನ್ನು ಆರಂಭಿಸಿತು.
ಮೊದಲಿಗೆ ಮಲೈ ಮಹದೇಶ್ವರ ಬೆಟ್ಟದಲ್ಲಿ ಗೋಪಿನಾಥಂ ಸುತ್ತಮುತ್ತಲ ಸ್ಥಳಿಯ ಗ್ರಾಮಸ್ಥರಿಂದ ಬರ ಪರಿಸ್ಥಿತಿ ಸಂಬಂಧ ಮನವಿಗಳನ್ನು ಸ್ವೀಕರಿಸಿದರು. ಬಳಿಕ ಕೌದಹಳ್ಳಿಗೆ ಆಗಮಿಸಿದ ಸಚಿವರ ತಂಡ ಅಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಕೆರೆ ಅಭಿವೃದ್ದಿ ಕಾಮಗಾರಿಯನ್ನು ವೀಕ್ಷಿಸಿತ್ತು. ಬಳಿಕ ಪಳನಿಮೇಡು, ಕೆಂಪಯ್ಯನ ಹಟ್ಟಿ ಮಾರ್ಗವಾಗಿ ಬರಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿತು.
ರಾಮಾಪುರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ನಾಗರೀಕರಿಂದ ಕುಂದುಕೊರತೆಗಳನ್ನು ಆಲಿಸಿದ ವೇಳೆ ಹೂಗ್ಯೂಂ, ಸ್ಕÀಂದನ ಪಾಳ್ಯ, ದಿನ್ನಹಳ್ಳಿ ಇತರೆಡೆ ಕುಡಿಯುವ ನೀರು, ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಈ ಭಾಗದಲ್ಲಿ ಈ ಸಮಸ್ಯೆಗಳನ್ನು ಪರಿಹರಿಸಬೇಕು. ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಬೇಕೆಂದು ಬರ ಅಧ್ಯಯನ ತಂಡಕ್ಕೆ ಸ್ಥಳೀಯರು ಮನವರಿಕೆ ಮಾಡಿಕೊಟ್ಟರು.
ತದನಂತರ ಅಜ್ಜಿಪುರಕ್ಕೆ ಭೇಟಿ ನೀಡಿ ಅಲ್ಲಿನ ಗ್ರಾಮ ಪಂಚಾಯಿಗೆ ಕಾರ್ಯಾಲಯದ ಅವರಣದಲ್ಲಿ ನಾಗರೀಕರಿಂದ ಅಹವಾಲು ಆಲಿಸಿದರು. ಅಲ್ಲಿಯೂ ಸಹ ಕುಡಿಯುವ ನೀರಿನ ಸಮಸ್ಯೆ ಕೇಳಿಬಂತು, ಅಲ್ಲದೇ ರಸ್ತೆ ನಿರ್ಮಿಸಿ ಕೊಡುವಂತೆಯು ಬೇಡಿಕೆ ಬಂದಿತ್ತು. ಲೋಕೋಪಯೋಗಿ ಸಚಿವರಾದ ಎಚ್.ಸಿ. ಮಹದೇವಪ್ಪ ಅವರು ಕೆಶಿಸಿಪ್ ನಡಿ ಕೊಳ್ಳೇಗಾಲದಿಂದ ಮಲೈ ಮಹದೇಶ್ವರಬೆಟ್ಟಕ್ಕೆ ರಸ್ತೆ ಅಭಿವೃದ್ದಿ ಪಡಿಸುವ ಸಂದರ್ಭದಲ್ಲಿ ಸ್ಥಳೀಯವಾಗಿ ಅವಶ್ಯವಿರುವ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದರು. ನಂತರ ಕೊಳ್ಳೇಗಾಲ ಮುಖ್ಯ ರಸ್ತೆಯ ಪ್ರಮುಖ ಗ್ರಾಮಗಳಿಗೆ ಸಚಿವರ ತಂಡ ಭೇಟಿಕೊಟ್ಟು ನೇರವಾಗಿ ಜನರಿಂದಲೇ ಬರಗಾಲ ಸಂಬಂಧ ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಮಾಹಿತಿ ಪಡೆಯಿತು.
ಬಳಿಕ ಸಂತೇಮರಹಳ್ಳಿಯಲ್ಲಿಯೂ ಸಭೆ ನಡೆಸಿ, ಕುಡಿಯುವ ನೀರು, ಮೇವು, ಉದ್ಯೋಗ ಖಾತರಿ ಯೋಜನೆಯಡಿ ಲಭಿಸುತ್ತಿರುವ ಕೂಲಿ ಕೆಲಸ ಕುರಿತು ಚರ್ಚಿಸಿತ್ತು. ಈ ಸಂದರ್ಭದಲ್ಲಿಯು ಸ್ಥಳೀಯರು ಸಮಸ್ಯೆಗಳನ್ನು ಸಚಿವರ ತಂಡದ ಮುಂದೆ ನಿವೇದಿಸಿದರು.
ಕುದೇರು ಗ್ರಾಮದಲ್ಲಿ ಭೇಟಿ ನೀಡಿದ ವೇಳೆ ಅಲ್ಲಿನ ಗ್ರಾಮಸ್ಥರು ಕಮರವಾಡಿಯಿಂದ ಕುದೇರಿಗೆ ಹೊಸದಾಗಿ ಪೈಪ್ ಲೈನ್ ಅಳವಡಿಸುವ ಮೂಲಕ ಅನುಭವಿಸುತ್ತಿರುವ ತೊಂದರೆಯನ್ನು ನಿವಾರಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಇದೇ ವೇಳೆ Àಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು, ಸ್ಥಳಿಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಮಾಹಿತಿ ಪಡೆದು, ಸಮಾಲೋಚನೆ ಮಾಡಿದರು. ಬಳಿಕ ಹೊಸ ಪೈಪ್‍ಲೈನ್ ಅಳವಡಿಸಿ, ನೀರು ಪೊರೈಕೆಯನ್ನು ಸಮರ್ಪಕವಾಗಿ ಮಾಡುವ ಭರವಸೆಯನ್ನು ಸಚಿವ ಮಹದೇವಪ್ರಸಾದ್ ನೀಡಿದರು.
ಕಸ್ತೂರು, ಬೋಗಾಪುರಕ್ಕೂ ಭೇಟಿ ನೀಡಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿ, ಅಭಾವ ಪೀಡಿತ ಪರಿಸ್ಥಿತಿಯನ್ನು ಅವಲೋಕಿಸಿತು.
ಕುಂದುಕೊರತೆಗೆ ಆಲಿಕೆ ಸಭೆ : ಆಯಾ ಗ್ರಾಮಗಳಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಬರ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಸಚಿವ ಟಿ.ಬಿ. ಜಯಚಂದ್ರ ಅವರು, ಸರ್ಕಾರ ಬರಪೀಡಿತ ತಾಲೂಕುಗಳಲ್ಲಿನ ಪರಿಸ್ಥಿತಿ ಪರಿಶೀಲಿಸಿ ಒದಗಿಸಬೇಕಾಗಿರುವ ಅಗತ್ಯ ಸೌಲಭ್ಯಗಳನ್ನು ಜನರಿಗೆ ತಲುಪಿಸಿ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಕಾರ್ಯನ್ಮುಖವಾಗಿದೆ. ತುರ್ತಾಗಿ ಕುಡಿಯುವ ನೀರು, ಉದ್ಯೋಗ, ಜಾನುವಾರುಗಳಿಗೆ ಮೇವು ಪೊರೈಸುವ ನಿಟ್ಟಿನಲ್ಲಿ ನೆರವು ನೀಡುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಎಚ್.ಎಸ್. ಮಹದೇವಪ್ರಸಾದ್ ಮಾತನಾಡಿ, ಬರಗಾಲ ಸಂದರ್ಭದಲ್ಲಿ ಎದುರಾಗುತ್ತಿರುವ ಕುಡಿಯುವ ನೀರು, ಸಮಸ್ಯೆ ಪರಿಹಾರಕ್ಕೆ ಅದ್ಯತೆ ನೀಡಲಾಗುತ್ತಿದೆ. ಜನರು ಕೆಲಸ ಅರಸಿ, ಗುಳೆ ಹೋಗದಂತೆ ತಡೆಯುವ ಸಲುವಾಗಿ ಸ್ಥಳೀಯವಾಗಿ ಹೆಚ್ಚು ಉದ್ಯೋಗ ಅವಕಾಶಗಳನ್ನು ನೀಡುವಂತೆ ಸೂಚಿಸಲಾಗಿದೆ ಎಂದರು.
ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ನೀಗಿಸಲೆಂದೇ ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಲಕ್ಷ ರೂ. ನೀಡಿದೆ. ಸಂಕಷ್ಟದಲ್ಲಿರುವ ಜನತೆ ನೆರವಿಗೆ ಎಲ್ಲರು ಒಂದಾಗಿ ಶ್ರಮಿಸಬೇಕಿದೆ. ಇನ್ನು ಒಂದೆರಡು ತಿಂಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ, ಸಮಸ್ಯೆಯನ್ನು ನಿಭಾಯಿಸಬೇಕು ಎಂದರು.
ಇದಾದ ನಂತರ ಚಾಮರಜನಗರ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ಸಚಿವರ ತಂಡ ಅಧಿಕಾರಿಗಳೊಂದಿಗೆ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳನ್ನು ಪರಾರ್ಮಶಿಸಿತು. ಕೃಷಿ, ವಿದ್ಯುತ್, ಕುಡಿಯವ ನೀರು, ಮೇವು ದಾಸ್ತಾನು ಬಗ್ಗೆ ವಿವರವಾಗಿ ಚರ್ಚೆ ನಡೆಸಿತು.
ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕವನ್ನು ತ್ವರಿತವಾಗಿ ನೀಡಬೇಕು. ಜಮೀನು ಇಲ್ಲದವರಿಗೆ ತಮ್ಮ ಜಾನುವಾರುಗಳ ನಿರ್ವಹಣೆಗಾಗಿ ಮೇವು ಖರೀದಿಸಿಕೊಡಲು ಮೇವು ಬ್ಯಾಂಕ್ ಆರಂಭಿಸಬೇಕು. ಮುಂದಿನ ದಿನಗಳಲ್ಲಿ ಮಳೆಯಾದಲ್ಲಿ ಬಿತ್ತನೆ ಚಟುವಟಿಕೆಗಳಿಗೆ ಪೂರಕವಾಗಿರುವ ಬೀಜ, ರಸಗೊಬ್ಬರ, ಇತರೇ ಅಗತ್ಯ ಪರಿಕರಗಳೊಂದಿಗೆ ಸಜ್ಜಾಗಬೇಕು ಎಂದು ಸಚಿವರ ತಂಡ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾ ಕೇಂದ್ರದ ಸಭೆಯ ಬಳಿಕ ಸಚಿವರ ತಂಡ ಗುಂಡ್ಲುಫೇಟೆ ವಿಧಾನ ಸಭಾ ಕ್ಷೇತ್ರದ ಬರಪೀಡಿತ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲಿಸಿತು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎಸ್. ಜಯಣ್ಣ, ಆರ್. ನರೇಂದ್ರ, ಜಿ,.ಪಂ. ಸದಸ್ಯರಾದ ಕೆರೆಹಳ್ಳಿ ನವೀನ್, ಎಂ. ರಾಮಚಂದ್ರ, ಸದಾಶಿವಮೂರ್ತಿ, ಬಸವರಾಜು, ಲೇಖಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಂಭುದಯಾಳ್ ಮೀನಾ, ಪ್ರಾದೇಶಿಕ ಆಯುಕ್ತರಾದ ಎ.ಎಂ. ಕುಂಜಪ್ಪ, ಜಿಲ್ಲಾಧಿಕಾರಿ ಬಿ. ರಾಮು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ನರಸಿಂಹಮೂರ್ತಿ, ಇನ್ನಿತರ ಹಿರಿಯ ಅಧಿಕಾರಿಗಳು ಭೇಟಿ ಹಾಗೂ ಸಭೆಯ ವೇಳೆ ಹಾಜರಿದ್ದರು.
ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದ ಉತ್ಸವ ಮೂರ್ತಿ ಕಿರೀಟದ ಹರಳು ನಾಪತ್ತೆ .! ದೇವಾ ನಿನ್ನ ಕಿರೀಡಕಕ್ಕೂ ಕಂಟಕನಾ..?
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಪುರಾಣ ಪ್ರಸಿದ್ದ ಹಾಗೂ ಸೋಲಿಗರ ಆರಾಧ್ಯ ದೈವ ಬಿಳಿಗಿರಿರಂಗನ ಬೆಟ್ಟದಲ್ಲಿ ಉತ್ಸವ ಮೂರ್ತಿಯ ಕಿರೀಟದಲ್ಲಿದ್ದ ಕೆಂಪು ಹರಳುಗಳು ನಿಗೂಡವಾಗಿ ನಾಪತ್ತೆಯಾಗಿರುವ ಬಗ್ಗೆ ಇಂದು ಆಭರಣಗಳ ಪರಿಶೀಲನೆ ನಡೆಯಿತು.
ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಉತ್ಸವ ಮೂರ್ತಿ ಹಾಕುವ ಚಿನ್ನದ ಕಿರೀಟದಲ್ಲಿರುವ ಕೆಂಪು ಬಣ್ಣದ 26 ಹರಳುಗಳು ನಿಗೂಡವಾಗಿ ಕಣ್ಮರೆಯಾಗಿರುವ ಸಂಗತಿ ಇದೀಗ ಮುಜರಾಯಿ ಇಲಾಖೆಗೆ ಭಾರಿ ತಲೆ ನೋವು ತಂದಿದೆ.
ಯಳಂದೂರು ತಾಲ್ಲೂಕಿನ ತಹಸೀಲ್ದಾರ್ ಚಂದ್ರಮೌಳಿ ರವರು ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಗಿಯಾದ ಪೊಲೀಸ್ ಬಂದೂ ಬಸ್ತ್‍ನಲ್ಲಿ ಉತ್ಸವ ಮೂರ್ತಿಯ ಕಿರೀಟದಲ್ಲಿ ಕಣ್ಮರೆಯಾಗಿರುವ ಹರಳುಗಳ ಬಗ್ಗೆ ವಿಚಾರಣೆ ನಡೆಸಿದರು.
ಮುಜರಾಯಿ ಇಲಾಖೆಗೆ ಅಕ್ಕಸಾಲಿಗರಾಗಿ ನಿಯೋಜನೆಗೊಂಡಿರುವವರಿಂದ ಕಿರೀಟವನ್ನು ಪರೀಕ್ಷಿಸಿ, ಕಿರೀಟವು 58 ತೊಲ ಬಂಗಾರದಲ್ಲಿದ್ದು, 785 ಗ್ರಾಂ ಇದೆ ಎಂದು ದೃಡಪಡಿಸಿದರು. ನಂತರ ಹರಳುಗಳ ಏಣಿಕೆ ಮಾಡಿದಾಗ ಕಿರೀಟದಲ್ಲಿ 140 ಹರಳುಗಳಿದ್ದು, ಅದರಲ್ಲಿ 26 ಹರಳುಗಳು ಉದುರಿ ಹೋಗಿದೆ ಎಂದು ದೃಡಪಡಿಸಿ, ಕಿರೀಟದ ಮೇಲ್ಭಾಗ ಹೆಚ್ಚಿನ ಉಷ್ಟಾಂಶದಿಂದ ಸುಟ್ಟ ಮಾದರಿಯಂತಿದೆ. ಹಾಗೂ ಕಿರೀಟದಲ್ಲಿರುವ ಹರಳುಗಳು ಕೆಂಪು ಬಣ್ಣದ ಮಾಣಿಕ್ಯ ಎಂದು ಅಕ್ಕಸಾಲಿಗರು ಸ್ಪಷ್ಟಪಡಿಸಿದರು.
ದೇವಾಲಯ ಆಭರಣಗಳ ದಾಸ್ತಾನು ನಮೂದಿಸುವ ಪುಸ್ತಕದಲ್ಲಿ ಉತ್ಸವ ಮೂರ್ತಿಯ ಗುಂಡು ಮಾದರಿಯ ಕಿರೀಟದಲ್ಲಿ ಕೆಂಪು ವಜ್ರದ ಹರಳುಗಳಿದ್ದವು ಅದರಲ್ಲಿ ಎರಡು ಹರಳು ಇರಲಿಲ್ಲ ಎಂದು ನಮೂದಿಸಿದೆ. ಆದರೆ ಇಂದು ಆಭರಣ ಪರಿಶೀಲಿಸಿದ ವೇಳೆ ಕಿರೀಟದಲ್ಲಿರುವುದು ವಜ್ರದ ಹರಳಲ್ಲ ಎಂದು ಬರೆದಿರುವುದು ಮಾತ್ರ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಕಿರೀಟವು ಎರಡು ಶತಮಾನಗಳ ಹಿಂದೆ ಮೈಸೂರು ಅರಸರು ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥ ಸ್ವಾಮಿಗೆ ಬಳುವಳಿಯಾಗಿ ನೀಡಿದ್ದರು ಎಂದು ಹೇಳಲಾಗಿದ್ದು, ರಾಜ ಮನತದಲ್ಲಿ ವಜ್ರಭರಣಗಳನ್ನು ಮಾತ್ರ ಬಳವಳಿ ನೀಡುತ್ತಿದ್ದರು. ಈ ಎಲ್ಲಾ ಅಂಶವನ್ನು ಗಮನಿಸಿದರೆ ಉತ್ಸವ ಮೂರ್ತಿಯ ಕಿರೀಟದಲ್ಲಿರುವ ಹರಳುಗಳು ವಜ್ರದ್ದೇ ಅಥವಾ ಯಾರಾದರೂ ಕಿರೀಟದ ಹರಳನ್ನು ಬದಲಾಯಿಸಿದರೆ ಎನ್ನುವ ಅನುಮಾನ ಮೂಡಿದೆ.
ಸದಾ ಕಾಲ ದೇವಾಲಯದ ಆಭರಣಗಳು ಸರ್ಕಾರಿ ಖಜಾನೆಯಲ್ಲಿ ಭದ್ರತೆಯಲ್ಲಿಡುವುದು ವಾಡಿಕೆ. ಹಾಗಾದರೆ ಭದ್ರೆಯಲ್ಲಿ ಲೋಪವಾಗಿದೆಯೇ ಆಥವಾ ಕಾಣದ ಕೈಗಳ ತಂತ್ರ ನಡೆದಿದೆಯಾ ಎನ್ನುವ ಅಂಶ ಬಹಿರಂಗವಾಗಬೇಕಾಗಿದೆ.
ಆಭರಣಗಳ ಪರಿಶೀಲನೆ ವೇಳೆ ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ವೆಂಕಟೇಶ್ ಪ್ರಸಾದ್, ಅರ್ಚಕರು, ಪರಿಚಾರಕರು ಇದ್ದರು.
ಒಟ್ಟಿನಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲಿ ವರ್ಷಕೊಮ್ಮೆಯಾದರೂ ಆಭರಣಗಳ ವಿಚಾರವಾಗಿ ಸುದ್ದಿ ಮಾಡುತ್ತಿರುವುದು ಮಾತ್ರ ಸತ್ಯ ಈ ಬಗ್ಗೆ ಸೂಕ್ತವಾದ ತನಿಖೆ ನಡೆಸಿದಾಗ ಮಾತ್ರ ಸತ್ಯ ಸಂಗತಿ ಹೊರ ಬರಲಿದೆ.
ಚಾಮರಾಜನಗರ.ಏ.: ತಾಲೂಕಿನ ಹೊನ್ನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷರಾಗಿ ಪಿ.ವೃಷಬೇಂದ್ರಪ್ಪ ಮತ್ತು ಉಪಾದ್ಯಕ್ಷರಾಗಿ ಶೇಖರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಎಲ್. ಪ್ರಕಾಶ್, ದೊರೆಸ್ವಾಮಿ, ಸುರೇಶ್, ಶೇಖರಪ್ಪ, ಸಿದ್ದಮಾದೇಗೌಡ, ವಿ.ಮಹೇಶ್, ಶಿವಣ್ಣ, ಗಾಯತ್ರಿ, ಸುಧಾಮಣಿ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಹಕಾರ ಸಂಘಗಳ ಅಧಿಕಾರಿ ಶಿಲ್ಪಶ್ರೀ ತಿಳಿಸಿದ್ದಾರೆ.
ನೂತನ ಅದ್ಯಕ್ಷ ಪಿ.ವೃಷಬೇಂದ್ರಪ್ಪ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಸಂಘದ ಅಭಿವೃದ್ದಿಯ ಜೊತೆಗೆ ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಕಲ್ಪಿಸಲು ಶ್ರಮಿಸುವುದಾಗಿ ತಿಳಿಸಿದ ಅವರು, ರೈತರು ಸಹ ಸಂಘದಿಂದ ಪಡೆದಂತ ಸಾಲವನ್ನು ಉದ್ದೇಶಕ್ಕೆ ಬಳಸಿಕೊಂಡು ತಾವು ಅಬಿವೃದ್ದಿಯಾಗಿ ಸಕಾಲದಲ್ಲಿ ಸಾಲ ಮರುಪಾವತಿ ಇತರರಿಗೂ ಸಹ ಅನುಕೂಲವಾಗುವಂತೆ ಮಾಡುವುದರ ಜೊತೆಗೆ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕೆಂದರು. ನೂತನ ಸಂಘದಲ್ಲಿ ಹೆಚ್ಚು ಷೇರುದಾರರಾಗಿ ಸಂಘದ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ವೃಷಬೇಂದ್ರಪ್ಪ ಮನವಿ ಮಾಡಿದರು.
No comments:
Post a Comment