ಚಾಮರಾಜನಗರದ ಹೊಂಗನೂರು ಗ್ರಾಮದಲ್ಲಿ ಅಂಬೇಡ್ಕರ್ ಚಿತ್ರವುಳ್ಳ ಫ್ಲೆಕ್ಸ್‍ಗೆ ಅವಮಾನ,
ವಿಕೋಪಕ್ಕೆ ತಿರುಗಿದ ಪ್ರತಿಭಟನೆ, ಕಲ್ಲುತೂರಾಟ, ಆರಕ್ಷಕರಿಗೂ ಗಾಯ, ಲಾಠಿ ಪ್ರಹಾರ, ಗ್ರಾಮದಲ್ಲಿ ಪ್ರಕ್ಷುಬ್ದ ಸ್ಥಿತಿ ನಿರ್ಮಾಣ
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಬೃಹತ್ ಫ್ಲೆಕ್ಸ್‍ಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದರಿಂದ ಚಾಮರಾಜನಗgದ ಹೊಂಗನೂರು ಗ್ರಾಮದಲ್ಲಿ ಇದೀಗ ಉದ್ವಿಗ್ನ ಸ್ಥಿತಿ ಬಂದಿದೆ.
ಹೊಂಗನೂರು ಗ್ರಾಮದ ಬಸ್ ನಿಲ್ದಾಣದಲ್ಲಿ ಹಾಕಲಾಗಿದ್ದ ಬೃಹತ್ ಅಂಬೇಡ್ಕರ್ ಪ್ಲೆಕ್ಸ್‍ಗೆ ಗ್ರಾಮದ ಕೆಲವು ಕಿಡಿಗೇಡಿಗಳು ಚಪ್ಪಲಿ ಹಾರವನ್ನು ಅಂಬೇಡ್ಕರ್ ಕಾಲಿನ ಬಳಿ ಹಾರದಂತೆ ಚಪ್ಪಲಿ ಹಾಕಿದ್ದೇ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಲು ಕಾರಣವಾಗಿದೆ ಎಂದು ತಿಳಿದುಬಂದಿದೆ.
ಹೊಂಗನೂರು ಗ್ರಾಮದಲ್ಲಿ ಇಂದು ಬೆಳಗ್ಗೆ ಉಂಟಾದ ಘರ್ಷಣೆ ಮತ್ತು ಬಿಗುವಿನ ವಾತಾವರಣದಿಂದ ಹದಿನೈದಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗಾಹುತಿಯಾಗಿದೆ. ಎರಡು ಕೋಮಿನ ನಡುವೆ ಕಲ್ಲು ತೂರಾಟ ಉಂಟಾಗಿ ಪೊಲೀಸರು ಸೇರಿದಂತೆ ಹಲವಾರು ಮಂದಿಗೆ ಪೆಟ್ಟಾಗಿದ್ದು, ಗಾಯಾಳುಗಳನ್ನು ಕಾಗಲವಾಡಿ ಮತ್ತು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಎರಡು ಕೋಮಿನ ನಡುವೆ ಉಂಟಾದ ಘರ್ಷಣೆಯಿಂದ ಹೊಂಗನೂರು ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಹೆಚ್ಚುವರಿ ಪೊಲೀಸ್ ತುಕಡಿ ಗ್ರಾಮಕ್ಕೆ ಆಗಮಿಸಿದೆ. ಕಿಡಿಗೇಡಿಗಳು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದರಿಂದ ಅವರೂ ಕೂಡ ಲಾಠಿ ಪ್ರಹಾರ ಮಾಡಿ ಚದುರಿಸಬೇಕಾದ ಸ್ಥಿತಿ ಉಂಟಾಯಿತು.
ಕಲ್ಲು ತೂರಾಟದಲ್ಲಿ ಪೊಲೀಸ್ ಸಿಬ್ಬಂದಿಗಳು ನಿಯಂತ್ರಿಸಲು ಎಷ್ಟೇ ಕಷ್ಟ ಪಡುತ್ತಿದ್ದರೂ ನಿಯಂತ್ರಣ ತರುವಲ್ಲಿ ಹೆಚ್ಚುವರಿ ಚರೀಷ್ಟಾದಿಕಾರಿಗಳು ಪ್ರಯತ್ನ ಪಡುತ್ತಿದ್ದಾರೆ.ಇದರಿಂದ ಮಾದ್ಯಮದವರಿಗೂ ರಕ್ಷಣೆ ಸಿಗುವ ಸಾದ್ಯಾಸಾದ್ಯತೆಗಳನ್ನು ಅರಿತ ಕೆಲವು ಮಾಧ್ಯಮದವರು ಚಿತ್ರೀಕರಣ ಮಾಡಲು ಹಿಂದೇಟು ಹಾಕಿ ವಾಪಾಸ್ ಹೋದ ಘಟನೆ ನಡೆದಿದೆ..
------------------------------------------------------------

No comments:
Post a Comment