ಏ. 28ರಂದು ಮಹಿಳೆ ಮಕ್ಕಳ ಮೇಲಿನ ದೌರ್ಜನÀ್ಯ ನಿಯಂತ್ರಣ ಸಮಿತಿ ಅಧ್ಯಕ್ಷರಾದ ವಿ.ಎಸ್. ಉಗ್ರಪ್ಪ ಅಧ್ಯಕ್ಷತೆಯಲ್ಲಿ ಸಭೆ : ಪ್ರಕರಣಗಳ ಪರಿಶೀಲನೆ
ಚಾಮರಾಜನಗರ, ಏ. :- ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಹಾಗೂ ವರದಿ ನೀಡುವ ವಿಧಾನ ಪರಿಷತ್ ಸದಸ್ಯರಾದ ವಿ.ಎಸ್. ಉಗ್ರಪ್ಪ ಅಧ್ಯಕ್ಷತೆಯ ಸಮಿತಿಯು ಏಪ್ರಿಲ್ 28ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ನಡೆದಿರುವ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಚರ್ಚಿಸಲಿದೆ.
ಕಳೆದ 10 ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆದ ಶೋಷಣೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳು ಹಾಗೂ ಒದಗಿಸಿದ ಪರಿಹಾರಗಳ ಕುರಿತು ವಿವರವಾಗಿ ಚರ್ಚೆ ನಡೆಯಲಿದೆ.
ಜಿಲ್ಲಾಧಿಕಾರಿ, ಸಿಆರ್‍ಇ ಸೆಲ್ ಪೋಲೀಸ್ ಅಧೀಕ್ಷಕರು, ಸರ್ಕಾರಿ ಅಭಿಯೋಜಕರು, ಸ್ತ್ರೀಶಕ್ತಿ ಮತ್ತು ಮಹಿಳಾ ಸಂಘಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲಾಮಟ್ಟದ ಇಲಾಖೆ ಅಧಿಕಾರಿಗಳೊಂದಿಗೆ ಅಧ್ಯಕ್ಷರಾದ ಉಗ್ರಪ್ಪ ಅವರು ಸಭೆ ನಡೆಸುವರೆಂದು ಪ್ರಕಟಣೆ ತಿಳಿಸಿದೆ.
ಬಸವಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ
ಚಾಮರಾಜನಗರ, ಏ.:- ಜಿಲ್ಲಾಡಳಿತದ ವತಿಯಿಂದ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಆಚರಿಸುವ ಸಂಬಂಧ ಚರ್ಚಿಸುವ ಸಲುವಾಗಿ ಇಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಗುಂಡ್ಲುಪೇಟೆ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸಚಿವರ ತಂಡ ಭೇಟಿ : ಬರ ಪ್ರದೇಶಗಳ ಪರಿಶೀಲನೆ
ಚಾಮರಾಜನಗರ, ಏ. - ಬರಪೀಡಿತ ಪ್ರದೇಶಗಳ ಪರಿಶೀಲನೆಗಾಗಿ ಆಗಮಿಸಿದ್ದ ಸಚಿವ ಸಂಪುಟದ ಉಪ ಸಮಿತಿಯ ಸದಸ್ಯರ ತಂಡ ಸೋಮವಾರ ಸಂಜೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿ ಜನರಿಂದ ಅಹವಾಲು ಆಲಿಸಿ ಅಭಾವಪೀಡಿತ ಪರಿಸ್ಥಿತಿಯನ್ನು ಅವಲೋಕಿಸಿತು.
ಕಾನೂನು ಹಾಗೂ ಉನ್ನತ ಶಿಕ್ಷಣ ಸಚಿವರಾದ ಟಿ.ಬಿ. ಜಯಚಂದ್ರ ಅವರ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ ಸದಸ್ಯರಾದ ಸಹಕಾರ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್, ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ದಿನೇಶ್ ಗುಂಡುರಾವ್ ಅವರನ್ನೊಳಗೊಂಡ ತಂಡ ಕೊಳ್ಳೇಗಾಲ, ಚಾಮರಾಜನಗರ ತಾಲೂಕಿನ ವಿವಿದೆಡೆ ಬರಪರಿಸ್ಥಿತಿ ಅಧ್ಯಯನ ನಡೆಸಿ ಜಿಲ್ಲಾ ಕೇಂದ್ರದಲ್ಲಿ ಸಭೆ ನಡೆಸಿದ ಬಳಿಕ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ಚಾಮರಾಜನಗರ ತಾಲೂಕಿನ ಇನ್ನು ಹಲವು ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ಕಾರ್ಯವನ್ನು ಮುಂದುವರಿಸಿತು.
ವೀರನಪುರ ಗ್ರಾಮದಲ್ಲಿ ಜನರು ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕೆರೆಗೆ ನೀರು ತುಂಬಿಸುವಂತೆ ಮನವಿ ಮಾಡಿದರು. ಇದಕ್ಕೆ ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರೆಯಿತು. ಬಳಿಕ ನಂಜದೇವನಪುರಕ್ಕೆ ಆಗಮಿಸಿದ ಸಚಿವರ ತಂಡಕ್ಕೆ ಅಲ್ಲಿಯೂ ಕುಡಿಯುವ ನೀರು ತೊಂದರೆಯನ್ನು ಗಮನಕ್ಕೆ ತರಲಾಯಿತು.
ಹರವೆ ಗ್ರಾಮದಲ್ಲಿ ಜಾನುವಾರುಗಳಿಗೆ ಮೇವು ಕೊರತೆಯಾಗುತ್ತಿದೆ. ಸಮರ್ಪಕವಾಗಿ ನೀರು ಪೂರೈಸಲು ಕೊಳವೆ ಬಾವಿ ಕೊರೆಯಿಸಬೇಕೆಂಬ ಅಹವಾಲನ್ನು ಸ್ಥಳೀಯ ಜನರು ಸಚಿವರ ತಂಡಕ್ಕೆ ಸಲ್ಲಿಸಿದರು.
ಹಳೇಪುರ ಗ್ರಾಮದಲ್ಲಿ ಕುಂದುಕೊರತೆ ಆಲಿಸುವ ವೇಳೆ ಕುಡಿಯುವ ನೀರಿನ ಸಮಸ್ಯೆಗೆ ವಿದ್ಯುತ್ ಅಭಾವವೇ ಕಾರಣವೆಂದು ಜನರು ದೂರಿದರು. ನೀರು ಸರಬರಾಜು ಮಾಡಲು ಸಿಂಗಲ್ ಫೇಸ್ ಮೋಟಾರ್ ಅಳವಡಿಸಬೇಕು. ಸಮಗ್ರವಾಗಿ ಎಲ್ಲ ಕಡೆ ನೀರು ಪೂರೈಕೆ ವ್ಯವಸ್ಥೆ ಮಾಡಬೇಕೆಂದು ಜನರು ಸಚಿವರ ಗಮನಕ್ಕೆ ತಂದರು.
ಮಲೆಯೂರು, ಕುಲಗಾಣ ಗ್ರಾಮದಲ್ಲಿಯೂ ಅಭಾವಪೀಡಿತ ಸಮಸ್ಯೆ ಪರಿಹರಿಸಲು ಜನರು ಮನವಿ ಮಾಡಿದರು. ಸೀಗೇವಾಡಿಯಲ್ಲಿ ಅಂತರ್ಜಲ ಬತ್ತಿಹೋಗುತ್ತಿದೆ. ಇದರಿಂದ ಇನ್ನಷ್ಟು ಆಳಕ್ಕೆ ಕೊಳವೆಬಾವಿ ಕೊರೆಯಿಸಬೇಕಾದ ಅನಿವಾರ್ಯ ಉಂಟಾಗುತ್ತಿದೆ. ಒಟ್ಟಾರೆ ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಜನರು ಮನವಿ ಮಾಡಿದರು. ನಿಟ್ರೆ ಗ್ರಾಮದಲ್ಲಿ ಭೇಟಿ ಮಾಡಿದ ಜನರಿಂದ ಜಾನುವಾರುಗಳಿಗೆ ಒಣ ಮೇವು ಪೂರೈಸುವ ಬದಲು ಪಶು ಆಹಾರ ನೀಡಬೇಕೆಂಬ ಮನವಿ ಕೇಳಿಬಂತು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಪಶು ಆಹಾರವನ್ನು ಸಬ್ಸಿಡಿ ದರದಲ್ಲಿ ಪೂರೈಸುವದಾಗಿ ತಿಳಿಸಿದರು.
ಬರಗಾಲ ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಪರಿಹಾರ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಜನರು ಕೆಲಸ ಹುಡುಕಿಕೊಂಡು ಹೊರಜಿಲ್ಲೆಗೆ ಹೋಗದಂತೆ ಉದ್ಯೋಗಖಾತರಿ ಯೋಜನೆಯಡಿ ಸ್ಥಳೀಯವಾಗಿ ಕೆಲಸ ಕೊಡಲು ಎಲ್ಲ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಕೆರೆಹಳ್ಳಿ ನವೀನ್, ಎಂ. ರಾಮಚಂದ್ರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಂಭುದಯಾಳ್ ಮೀನಾ, ಪ್ರಾದೇಶಿಕ ಆಯುಕ್ತರಾದ ಎ.ಎಂ. ಕುಂಜಪ್ಪ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎಚ್. ನರಸಿಂಹಮೂರ್ತಿ, ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ, ಇನ್ನಿತರರು ಹಾಜರಿದ್ದರು.
ಪೈಪ್ ದುರಸ್ಥಿ ಹಿನ್ನೆಲೆ : ನೀರು ಪೂರೈಕೆ ವ್ಯತ್ಯಯ
ಚಾಮರಾಜನಗರ, ಏ. - ಚಾಮರಾಜನಗರ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಮಾರ್ಗದ ಪೈಪ್ ದುರಸ್ಥಿ ಕಾರ್ಯವು ನಡೆಯುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 26 ಹಾಗೂ 27ರಂದು ನೀರು ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ. ನಾಗರಿಕರು ಲಭ್ಯವಿರುವ ತೊಂಬೆ ಹಾಗೂ ಕೈಪಂಪ್ ಕೊಳವೆಬಾವಿಗಳಿಂದ ನೀರು ಬಳಸಿಕೊಂಡು ಸಹಕರಿಸುವಂತೆ ನಗರಸಭೆ ಅಧ್ಯಕ್ಷರಾದ ಎಸ್.ಎನ್, ರೇಣುಕ ಹಾಗೂ ಪೌರಾಯುಕ್ತರಾದ ಎಂ.ಜಿ. ರಮೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಏ. 28ರಂದು ಗುಂಡ್ಲುಪೇಟೆ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಏ. - ಗುಂಡ್ಲುಪೇಟೆ ತಾಲೂಕಿನ ಬೇಗೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಏಪ್ರಿಲ್ 28ರಂದು ತ್ರೈಮಾಸಿಕ ನಿರ್ವಹಣೆ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಿಟ್ರೆ, ಬೇಗೂರು, ಹೊರೆಯಾಲ, ಕೋಟೆಕೆರೆ, ಅರೇಪುರ, ಚನ್ನವಡೆಯನಪುರ, ಬೋಗಯ್ಯನಹುಂಡಿ, ಹಸಗೂಲಿ, ಆಲತ್ತೂರು, ಮಂಚಳ್ಳಿ, ಶೆಟ್ಟಳ್ಳಿ, ಗರಗನಹಳ್ಳಿ, ಅಗತಗೌಡನಹಳ್ಳಿ, ಹೆಗ್ಗಡಹಳ್ಳಿ, ಹಳ್ಳದಮಾದಳ್ಳಿ, ರಾಘವಾಪುರ, ಕಮರಳ್ಳಿ, ತೊಂಡವಾಡಿ, ಹಿರೀಕಾಟಿ, ಚಿಕ್ಕಾಟಿ, ಚಿಕ್ಕುಂಡಿ, ದೊಡ್ಡುಂಡಿ, ಹಾಲಳ್ಳಿ, ಬೆಳಚಲವಾಡಿ, ರಂಗನಾಥಪುರ, ತೊರವಳ್ಳಿ, ಮರಳಾಪುರ ಗ್ರಾಮಗಳಿಗೆ ವಿದ್ಯುತ್ ಸರಬರಾಜಿಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.
ಏ.28ರಂದು ನಗರದಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
ಚಾಮರಾಜನಗರ, ಏ. - ಬೆಂಗಳೂರಿನ ಜಿ4ಎಸ್ ಸೆಕ್ಯೂರ್ ಸಲ್ಯೂಷನ್ಸ್ ಮತ್ತು ಮೈಸೂರಿನ ಹಿಂದುಜಾ ಗ್ಲೋಬಲ್ ಸೆಲ್ಯೂಷನ್ಸ್ ಕಂಪನಿಯು ವಿವಿಧ ಹುದ್ದೆಗಳಿಗೆ ಏಪ್ರಿಲ್ 29ರಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಿದೆ.
ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿದ್ದು 18 ರಿಂದ 35ರ ವಯೋಮಿತಿಯೊಳಗಿರುವ ಪುರುಷ ಅಭ್ಯರ್ಥಿಗಳಿಗೆ ಸೆಕ್ಯುರಿಟಿ ಸ್ಟಾಫ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಮೈಸೂರಿನ ಹಿಂದೂಜಾ ಗ್ಲೋಬಲ್ ಸೆಲ್ಯೂಷನ್ ಕಂಪನಿಯು ಪಿಯುಸಿ, ಡಿಪ್ಲೊಮಾ, ಐಟಿಐ ಪದವೀಧರ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿದೆ.
ಆಸಕ್ತ ಅಭ್ಯರ್ಥಿಗಳು ಸ್ವವಿವರದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ವಿವರಗಳಿಗೆ 08226-224430 ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
ಪ್ರತಿಷ್ಟಿತ ಶಾಲೆಗಳ ಪ್ರವೇಶಕ್ಕೆ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಏ. - ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ಪರಿಶಿಷ್ಟ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ದಾಖಲು ಮಾಡಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಥಿಯು 5ನೇ ತರಗತಿಯಲ್ಲಿ ಶೇ.60ರಷ್ಟು ಅಂಕ ಪಡೆದಿರಬೇಕು. ಪೋಷಕರ ವಾರ್ಷಿಕ ವರಮಾನ 2 ಲಕ್ಷ ರೂ. ಮಿತಿಯೊಳಗಿರಬೇಕು. ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಮೇ 13ರೊಳಗೆ ಸಲ್ಲಿಸಬೇಕು. ವಿವರಗಳಿಗೆ ನಗರದ ಜಿಲ್ಲಾಡಳಿ ಭವನದಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕೊಳ್ಳೇಗಾಲ ನಗರಸಭೆ, ಹನೂರು ಪಟ್ಟಣ ಪಂಚಾಯಿತಿ ವತಿಯಿಂದ ವಿವಿಧ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, - ಕೊಳ್ಳೇಗಾಲ ನಗರಸಭೆ ಹಾಗೂ ಹನೂರು ಪಟ್ಟಣ ಪಂಚಾಯಿತಿಯು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜ್ಯ ಯೋಜನೆಯಡಿ (ಸಲ್ಮ್) ವಿವಿಧ ಕೌಶಲ್ಯ ತರಬೇತಿ ನೀಡಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಉಳ್ಳವರಿಗೆ ಅಡ್ವಾನ್ಸ್‍ಡ್ ಟ್ರೈನಿಂಗ್ ಇನ್ ಕಂಪ್ಯೂಟರ್ ಅಪ್ಲಿಕೇಷನ್, ಕಂಪ್ಯೂಟರ್ ಪ್ರೋಗ್ರಾಮಿಂಗ್, ಕಂಪ್ಯೂಟರ್ ಹಾರ್ಡ್‍ವೇರ್ ಮತ್ತು ನೆಟ್‍ವರ್ಕಿಂಗ್, ಕಂಪ್ಯೂಟರ್ ಫಂಡಮೆಂಟಲ್ಸ್, ಎಂಎಸ್ ಆಫೀಸ್, ಇಂಟರ್ ನೆಟ್ ಡಿಟಿಪಿ, ಬೇಸಿಕ್ ಎಂಬೇಡೆಡ್ ಸಿಸ್ಟಂ ಕೋರ್ಸ್, ಅಡ್ವಾನ್ಸ್ ಎಂಬೇಡೆಡ್ ಸಿಸ್ಟಂ, ಐಟಿ ಎಸೆನ್ಸಿಯಲ್ ಹಾರ್ಡ್‍ವೇರ್ ಮತ್ತು ಸಾಫ್ಟ್ ವೇರ್ (ಐಟಿಇ), ಪಿಯುಸಿ ವಿದ್ಯಾರ್ಹತೆ ಉಳ್ಳವರಿಗೆ ಅಕೌಂಟಿಂಗ್ ಮತ್ತು ಟ್ಯಾಲಿ, 8ನೇ ತರಗತಿ ವಿದ್ಯಾರ್ಹತೆ ಉಳ್ಳವರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಫೋನ್ ಮೇಂಟೆನೆನ್ಸ್ ಹಾಗೂ 7ನೇ ತರಗತಿ ವಿದ್ಯಾರ್ಹತೆ ಉಳ್ಳವರಿಗ ಸಾಫ್ಟ್ ಸ್ಕಿಲ್, ಸ್ಪೋಕನ್ ಇಂಗ್ಲೀಷ್ ಮತ್ತು ಕಮ್ಯುನಿಕೇಷನ್ ಸ್ಕಿಲ್ ತರಬೇತಿ ನೀಡಲಾಗುತ್ತದೆ.
ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ದೃಢೀಕರಿಸಿ ಏಪ್ರಿಲ್ 30ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೊಳ್ಳೇಗಾಲ ನಗರಸಭೆ ಹಾಗೂ ಹನೂರು ಪಟ್ಟಣ ಪಂಚಾಯಿತಿ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

No comments:
Post a Comment