Tuesday, 14 January 2020

ಶಿಕ್ಷಣ ಸಚಿವರಿಗೊಂದು ಪತ್ರ..ಮುಚ್ಚಲ್ಪಡುವ ಶಾಲೆಗೆ ಕಾಯಕಲ್ಪ ನೀಡಿ... ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಶಿಕ್ಷಣ ಸಚಿವರಾದ ತಾವು ಈ ಶಾಲೆಯ ಚಿತ್ರ ಬಹುಶಃ  ತಾವು ನೋಡಿರಬಹುದೇನೋ ಎಂದು ಹೇಳುತ್ತಿರುವೆ. ಕಳೆದ ವಾರದ ಹಿಂದಷ್ಟೆ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ..
ಸುತ್ತ ಪೆಂಡಾಲ್ ಕವಿದುಕೊಂಡು ಈ ಕಟ್ಟಡ ತಮ್ಮನ್ನ ಮರೆ ಮಾಚಿಕೊಂಡಿತ್ತು ಹಾಗಿಯೇ ಗಂಬೀರ ವಿಚಾರ ಈ ಶಾಲೆ ಮುಚ್ಚುವ ಹಂತವನ್ನೂ ಕೂಡ ಕಂಡಿಕೊಂಡಿದೆ.
ಚಾಮರಾಜನಗರ ಪಟ್ಟಣದಿಂದ ಕೇವಲ ೩ ಕಿ.ಮಿ ಅಂತರದಲ್ಲಿರುವ ರಾಮಸಮುದ್ರ ಸಮೀಪ ಕ್ರಿಸ್ತರಾಜ ಬಾಲರಪಟ್ಟಣ ಶಾಲೆ ಎಂದರೆ ಸಾಕು ಹತ್ತಳ್ಳಿಗೆ ಯಜಮಾನ ಹೇಗೋ ಸುಮಾರು ಗ್ರಾಮದ ಜನರಿಗೆ ಶಿಕ್ಷಣ ನೀಡಿದ ಜ್ಞಾನ ಮಂದಿರ. ಇದು ಖಾಸಗೀ ಶಾಲೆಯಾದರೂ ಸರ್ಕಾರದ ಅನುದಾನಕ್ಕೋಳಪಟ್ಟ ಕನ್ನಡ ಮಾದ್ಯಮ ಶಾಲೆಯಾಗಿದೆ.
ಮೊದಲ ಹಂತದಲ್ಲಿ ಈಗ ಒಂದರಿಂದ ಐದನೇ ತರಗತಿಗಳು ಮುಚ್ಚಿ ಹೋಗಿದೆ.ಮುಚ್ಚಲು ಆದೇಶ ಯಾರು ಕೊಟ್ಟರೆಂಬ ಅನುಮಾನ ಈಗಲೂ ಕಾಡುತ್ತಿದೆ. ಉಳಿದಂತೆ ೬, ೭ ತರಗತಿಗಳು ಬಹುಶಃ ೬೨ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಓರ್ವ ಶಿಕ್ಷಕರಷ್ಟೆ ಅನುದಾನಿತ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ. ಉಳಿದಂತೆ ಆಡಳಿತ ವರ್ಗ ಇಬ್ಬರ ಶಿಕ್ಷಕರನ್ನ  ಅತಿಥಿ ಶಿಕ್ಷಕರಾಗಿ ಮಾಡಿಕೊಂಡೊ ಏನೊ ಶಿಕ್ಷಣ ಬಂಡಿ ನಡೆಸಿ ಈಗ ಅದನ್ನು ನಿಲ್ಲಿಸಲು ಸಂಚು ನಡೆಸುತ್ತದೆ.
ದಯಮಾಡಿ ಹೆಚ್ಚಿನ ಪೀಠಿಕೆ ಹಾಕದೇ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ....
ಈಗ ಪ್ರವೇಶವನ್ನೆ ನಿಲ್ಲಿಸಿ ಹಂತ ಹಂತವಾಗಿ ಮುಚ್ಚುತ್ತಿರುವ ಈ ಶಾಲೆಗೆ ಕಟ್ಟು ನಿಟ್ಟಾಗಿ ಪ್ರವೇಶ ಮಾಡಿಕೊಂಡು ಶಾಲೆ ನಡೆಸುವಂತೆ ಡಿಡಿಪಿಐ & ಬಿಇಓ ಗಳಿಗೆ ಸೂಚನೆ ನೀಡಿ ಜ್ಞಾನ ಮಂದಿರ ಬೆಳಗಲು ಕಾರಣರಾಗಬೇಕೆಂದು ಕೋರುತ್ತೇವೆ.
----------
ಕೆಲವು ವ್ಯಾಕರಣ ಪದಗಳು ಲೋಪವಾಗಿದ್ದರೆ ವಿಷಾದವಿರಲಿ.. ಮೊಬೈಲ್ ಅಲ್ಲಿ ಟೈಪ್ ಮಾಡುತ್ತಿದ್ದು ಸಾದ್ಯತೆ ಇರುತ್ತದೆ. ಆದರೂ ಎಚ್ಚರ ವಹಿಸಿ ಬರೆಯುತ್ತಿರುವೆ..ತಪ್ಪಿದ್ದರೆ ಕ್ಷಮೆಯಿರಲಿ.

ಇಂತಿ....ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
                        ಹಳೆಯ ವಿದ್ಯಾರ್ಥಿ.
                                 9480030980
----------
ಸಾರ್ವಜನಿಕರಿಗೊಂದು ಮಾತು.....ನೀವು ಓದಿದ ಶಾಲೆ ನಿಮಗೆ ಬೇಡವಾದೀತೆ..ನಿಮ್ಮ ಮಕ್ಕಳಿಗೆ ಕನ್ನಡ ಮಾದ್ಯಮ ಬೇಡವೆಂದದ್ದರಿಂದೇನೋ ಈ ಸ್ಥಿತಿಗತಿ...ಶಿಕ್ಷಕರಾಗಿದ್ದೀರಾ, ವೈದ್ಯರಾಗಿದ್ದೀರಾ,ಇಂಜಿನಿಯರ್ ಆಗಿದ್ದೀರಾ,ಹೋರಾಟಗಾರರಾಗಿದ್ದೀರಾ.ಪತ್ರಕರ್ತರಾಗಿದ್ದೀರಾ.ಚಲನ ಚಿತ್ರ ನಟರಾಗಿದ್ದೀರಾ, ಕೃಷಿಕರಾಗಿದ್ದೀರಾ, ಜನಪ್ರತಿನಿದಿಗಳಾಗಿದ್ದೀರಾ ಆದರೆ ಒಬ್ಬನೂ ಈ ಶಾಲೆ ಉಳಿಸಬೇಕು ಎಂದು ಮುಂದೆ ಬರಲಿಲ್ಲವಲ್ಲ..ನಿಜಕ್ಕೂ  ರಾಮಸಮುದ್ರದ ೫ ಹಾಲಿ ನಗರಸಬಾ ಸದಸ್ಯರು, ಮಾಜಿ ಸದಸ್ಯರು, ಮಾಜಿ ಜಿ.ಪಂ./ನ.ಸ.ಅದ್ಯಕ್ಷರು.ಪತ್ರಕರ್ತರಾದವರಿಗೂ ಬೇಡವಾಯಿತಾ!? ಈ ಜ್ಞಾನ ಮಂದಿರ..!?
----------

Saturday, 4 January 2020

ಚಾಮರಾಜನಗರ ಆಲೂರು ಬ್ಯಾಂಕ್ ಮೇಲೆ ಎಸಿಬಿ ದಾಳಿ...ನಿಜಕ್ಕೂ ಕಳ್ಳಾಟ ಯಾರದ್ದು..!?... ಸತ್ಯ ಘಟನೆಗಳ ರೋಚಕ ಕಥೆ....

ಚಾಮರಾಜನಗರದ ಆಲೂರು
ಬೆಳೆ ಸಾಲ ಮನ್ನಾ ಸಾಲ ತಿರುವಳಿ ಪತ್ರಕ್ಕಾಗಿ ೧೫.೦೦೦ ಬೇಡಿಕೆ ಇಟ್ಟಿದ್ದ ಆಲೂರು ವಿಜಯ ಬ್ಯಾಂಕ್ ಮೇಲೆ ಚಾಮರಾಜನಗರ ಎಸಿಬಿ ಘಟಕ ದಾಳಿ ನಡೆಸಿ ಮ್ಯಾನೆಜರ್ ವಶಪಡಿಸಿ ವಿಚಾರಣೆ ಮಾಡಿ ಜೈಲಿಗಟ್ಟುತ್ತಾರೆ...ಇದು ವಾಸ್ತವ ಘಟನೆ.....
ಪೂರಕ ಎಂಬಂತೆ ಅವರದ್ದೆ ಆದ ಬ್ಯಾಂಕಿನ ವಿಡಿಯೊ ಗಳೆ ಸಾಕ್ಷಿ.... ಜೊತೆಗೆ ಬ್ಯಾಂಕಿನ ಹೊರಗಿದ್ದ ಬಿಟಿವಿ ವರದಿಗಾರ & ಕಸ್ತೂರಿ ಟಿವಿ ವರದಿಗಾರ ರಾತ್ರಿ ೧೧ ರ ತನಕ ಮೊಕ್ಕಂ ಇದ್ದು ನಂತರ ಕಾಯುವುದರಿಂದ ಪ್ರಯೋಜವಿಲ್ಲ ಎಂದು ಹೊರಡುತ್ತಾರೆ.ಮತ್ತೊಂದು ಸಾಕ್ಷಿ.  ದಾಳಿ ಸಂಬಂದಿಸಿದ ಸುದ್ದಿಗಳು ಮೈಸೂರು ಎಸಿಬಿ ಘಟಕದ ಅದಿಕಾರಿಗಳಿಂದ ಪತ್ರಿಕಾ ಪ್ರಕಟಣೆ ಹೊರಡಿಸಲ್ಪಡುತ್ತದೆ.! ಸುದ್ದಿಯೂ ಮರುದಿನ ಪತ್ರಿಕೆಯಲ್ಲಿ ಪ್ರಕಟಸಲ್ಪಡುತ್ತದೆ...ಹೀಗೆ ಈ ಸುದ್ದಿ ಇತಿಹಾಸ ಸೃಷ್ಟಿಯನ್ನೆ ಮಾಡಿ ಬಿಡುತ್ತದೆ. ಬ್ಯಾಂಕ್ ಮೇಲೆ ಎಸಿಬಿ ದಾಳಿ ಮೊದಲೆಯ ಪ್ರಕರಣವಾದರೂ ಇದು ಎಷ್ಟರ ಮಟ್ಟಿಗೆ ಪೀಕಲಾಟ ತಂದಿಡುತ್ತದೆ ಎಂದರೆ ಇದನ್ನ ಜೀರ್ಣಿಸಿಕೊಳ್ಳಲಾಗದ ಬ್ಯಾಂಕಿನವರು
ರಾಜ್ಯ ಎಸಿಬಿ ಘಟಕದ ಬಹುತೇಕ ಅದಿಕಾರಿಗಳಿಗೆ ಇಲ್ಲ ಸಲ್ಲದ ಕಥೆಗಳ ಕಟ್ಟಿ
ಬಿಡುತ್ತಾರೆ. ಮತ್ತೊಂದೆಡೆ ಲ್ಯಾಪ್ ಟಾಪ್ ಅಲ್ಲಿ ಸಂಗ್ರಹಿಸಲ್ಪಟ್ಟ ಕ್ಯಾಮೆರಾ. ನಂ೬ ರ ವಿಡಿಯೊ ಮೊಬೈಲ್ ಅಲ್ಲಿ ಬ್ಯಾಂಕ್ ಅದಿಕಾರಿಗಳೆ ಸಿದ್ದ ಪಡಿಸಿ ಎಸಿಬಿ ಅದಿಕಾರಿಗಳೆ ಹಣ ತಂದಿಟ್ಟು ಕಳ್ಳಾಟವಾಡಿದ್ದಾರೆ.ಎಂದು ಮಾದ್ಯಮದವರನ್ನೂ ನಂಬಿಸುತ್ತಾರೆ. ನಾವು ನಿಮ್ಮನ್ನ ಬಿಡುವುದಿಲ್ಲ..ಕಾನೂನನಲ್ಲೆ ಹೋರಾಡ್ತೇವೆ ಎಂದು ಹಾರಾಡಿ ಬರುತ್ತಾರೆ. ಈ ವಿಚಾರಣೆ ಪೂರ್ಣ ಪರ ಚರ್ಚೆಗೆ ಗ್ರಾಸವಾಗಿ ೨೬-೧೨-೨೦೧೯ ರಂದು ಪ್ರಮುಖರ ವಿಚಾರಣೆಯನ್ನ ರಾಜ್ಯ ಎಸಿಬಿಯ ಪ್ರಮುಖರು ಮೂರು ಪ್ರಶ್ನೆಯಲ್ಲಿ ಕೇಳಿ ತಿಳಿದು
ಅಂತಿಮಗೊಳಿಸಿ ಕಳುಹಿಸಿಕೊಡುತ್ತಾರೆ.
೨೭-೧೨-೨೦೧೯ ರಂದು ಮ್ಯಾನೇಜರ್ ಬಿಡುಗಡೆಯಾಗುತ್ತದೆ ಈ ಬಿಡುಗಡೆ ವಿಳಂಬಕ್ಕೂ ಕಾರಣವಿದೆ. ನ್ಯಾಯಾಲಯ ಮತ್ರು ವಕೀಲರ ಶುಲ್ಕ ಎಂದು ೧೫.೦೦೦ ವಸೂಲಿ ಮಾಡುವುದು ಸರಿಯಾದ ಕ್ರಮವೇ ಎಂದು .....ನ್ಯಾಯಾದೀಶರೊಬ್ಬರನ್ನ ......ಕಾರ್ಯಕ್ರಮದ ಬಿಡುವಿನ ಸಮಯದಲ್ಲಿ ಕೇಳಲಾಗಿ ಹಾಗೇನು ಪಡೆಯಲು ಅವಕಾಶವಿಲ್ಲ.ನೋಡೋಣ ಅದೇನಿದೆ ಎಂಬುದನ್ನ ತಿಳಿಸಿದ್ದು ಆ ವಿಚಾರ ಬ್ಯಾಂಕ್ ಮ್ಯಾನೇಜರ್ ವಿಚಾರ ಪ್ರಸ್ತಾಪಿತವಾಗಿರಬಹುದು. ನ್ಯಾಯಾಲಯದ ಶುಲ್ಕ ಎಂದು ಬಡವರ ಸುಲಿಗೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿ ಬಂದಿದೆ..ಇರಲಿ...ಮುಂದುವರೆಸೋಣ...
ಹೀಗೆ ನಂತರದ ದಿನ...೩೧-೧೨-೨೦೧೯ ವರ್ಷದ ಕೊನೆ ದಿನ ಬ್ಯಾಂಕ್ ನ ಪ್ರಮುಖರು ರಾಜ್ಯ ಎಸಿಬಿ ಕಚೇರಿಗೆ ಬರುತ್ತಾರೆ. ಅವರಿಗೆ ಉತ್ತರ ಕೊಟ್ಟರಾಯಿತು ಎಂದು ಹಿಂದೆ ಹೇಳಿರುವಾಗ ಆ ದಿನ ಮಾತಿಗೆ ಮಾತು ಬೆಳೆದು ವೈಪರೀತ್ಯವಾಗಿ ಸತ್ಯ ಅರಗಿಸಿಕೊಳ್ಳದೆ ಹೊರಬಂದಿರಬಹುದು...
ಮುಂದೆ ರೊಚ್ಚಿಗೆದ್ದ ಜಿಎಮ್:
ಆ ವೇಳೆಗಾಗಲೇ ಜಿಎಮ್ ಒಬ್ಬರು ರೊಚ್ಚಿಗೆದ್ದು ಏನೇನೊ ಮಾಹಿತಿ ನೀಡಿ ದಾರಿ ತಪ್ಪಿಸಿದ್ದರು ಎಂದು ಕಂಟಾಘೋಷವಾಗಿ ಹೇಳಬಲ್ಲೆವು. ಇದಕ್ಕೆ ಕೆಲವು ಮಾದ್ಯಮದವರು ಯಾಕೆ ಕೈ ಜೋಡಿಸಿದರೊ ಎಂಬುದಂತು ಗೊತ್ತಿಲ್ಲ...ಬ್ಯಾಂಕ್ ಜಿಎಮ್ ಪರವಾಗಿ ಅದಿಕಾರಿಗಳ ವಿರುದ್ದ ನಿಲ್ಲುತ್ತಾರೆ.
ಇಷ್ಟಕ್ಕೂ ಆ ವಿಡಿಯೊ ಅಲ್ಲಿದ್ಧದ್ದು...ಹಣ ನೀಡಿ ಹೋದ ನಂತರ ದೂರದಾರನೊಂದಿಗೆ ಮತ್ತೆ ಅದಿಕಾರಿಗಳು ಬಂದು  ಹಣದ ರಶೀದಿ,ಹಣ, ಮತ್ತು ಮ್ಯಾನೇಜರ್ ಕೈ ಹಿಡಿದುಕೊಂಡ ಚಿತ್ರಣವಷ್ಟೆ ಸೆರೆಯಾಗಿರುತ್ತದೆ.(ದೂರುದಾರ ಹಣ ಪಡೆದಿದ್ದಾರೆ ಎಂಬ ಸೂಚನೆಯನ್ನ ಸರ್ಕಾರಿ ನೌಕರ ಸಕ್ಷಮದಲ್ಲೆ ಕ್ಯಾಮೆರಾ....ಅಲ್ಲಿ ರೆಕಾರ್ಡ್ಸ್ ಆಗಿರುತ್ತದೆ.ಬಹುತೇಕರಿಗೆ ಇದು ಗೊತ್ತಿಲ್ಲ.ಉಳಿದ ಚಿತ್ರಣದು ಕ್ಯಾಮೆರಾ ನಂ..೬ ರಲ್ಲಿ...ಇಲ್ಲಿದೆ ನಾವು ಹೇಳೋ ಟ್ವಿಸ್ಟ್... ನೋಡಿ....ನೀವು ನಮ್ಮನ್ನ ಈ ಪ್ರಕರಣದಲ್ಲಿ ಎಸಿಬಿ ಅದಿಕಾರಿಗಳ ಬಕೆಟ್ ಎಂದರೂ ಪರವಾಗಿಲ್ಲ..ಮುಂದೆ ಯಾರು ಯಾರ ಬಕೆಟ್ ಎಂಬುದು ಗೊತ್ತಾಗುತ್ತದೆ....
೧)ದೂರುದಾರನಿಂದ ದೂರು ಪಡೆದು ಅದಿಕಾರಿಗಳು ಲಗ್ಗೆ ಇಡ್ತಾರೆ
೨)ಸರ್ಕಾರಿ ನೌಕರರ ಸಾಕ್ಷಿಯಾಗಿ ಓರ್ವ ವ್ಯಕ್ತಿ ಪರಿಗಣಿಸ್ತಾರೆ
೩)ರಾಸಾಯನಿಕ ಸಿಂಪಡಿತ ಹಣ ಮ್ಯಾನೆಜರ್ ಕೈಯಲ್ಲಿರುತ್ತದೆ.
೪) ಅವರದ್ದೆ ಆದ ವಿಡಿಯೊಗ್ರಪಿ. ಪೊಟೊಗ್ರಪಿ ಇರುತ್ತದೆ
೫) ಯಾರಿಗೂ ತೊಂದರೆಯಾಗದ ತರಹ ಕರ್ತವ್ಯ ನಿರ್ವಣೆ ಮಾಡಿದ ಎಸಿಬಿ ಅದಿಕಾರಿಗಳು.
೬)ಇದಕ್ಕೂ ಮುಂಚೆ ಸಂಗ್ರಹಿಸಿದ ದಾಖಲೆ,ವಿಡಿಯೋ ೨೦ ದಿನಗಳ ಕಾಲ ಪರಿಶೀಲನೆ. ಸಿಬಿಐ ನಿಂದ ಅನುಮತಿ..ಪಡೆದು ಸಿದ್ದರಾಗಿರುತ್ತಾರೆ..ಇದು ರಾಜ್ಯ & ಜಿಲ್ಲಾ ಎಸಿಬಿ ಘಟಕ ಅನುಸರಿಸಿದ ನೀತಿ ನಿಯಮಗಳು....
 ----------------
ನಂತರ ಆಗಿದ್ದೇನು...?
ರಾಜ್ಯ ಎಸಿಬಿ ಘಟಕದ ಅದಿಕಾರಿಗಳು ತಕ್ಕ ಉತ್ತರ‌ ನ್ಯಾಯಾಲಯದಲ್ಲೆ  ಕೊಡುತ್ತೇವೆ ಎಂದು ರಾಜ್ಯ, ಕೇಂದ್ರದಿಂದ ಒತ್ತಡ ತರುತ್ತದ್ದ ಬ್ಯಾಂಕ್ ಶಾಖೆಯ ಕೆಲವರಿಗೆ ಮುಖಕ್ಕೆ ಹೊಡೆದಂಗೆ ೩೧-೧೨-೨೦೧೯ ರಂದು ಬಹುಶಃ ಹೇಳಿದ್ದರಿಂಲೇನೊ ಹೇಗಾದರೂ ಮಾಡಿ ಏನಾದರೂ ಮಾಡಲೆಬೆಕೆಂದು ಜಿ.ಎಮ್ ಸಿದ್ದವಾಗಿಯೇ ಬಿಟ್ಟರು.

ಇದ್ದಕ್ಕಿಂದ್ದಂತೆ ಚಾಮರಾಜನಗರ ವಾರ್ತಾ ಇಲಾಖೆಯವರು....ಲೀಡ್ ಬ್ಯಾಂಕ್ ಕಚೇರಿಯಲ್ಲಿ ವಿಜಯ್ ಬ್ಯಾಂಕ್ ಸಂಬಂದ ೧೨.೩೦ ಕ್ಕೆ ಪತ್ರಿಕಾಘೊಷ್ಟಿ ಇದೆ ನಂತರ ಊಟದ ವ್ಯವಸ್ಥೆ ........ಹೊಟೆಲ್ ಅಲ್ಲಿದೆ ಇದೆ ಎಂಬ ಮಾಹಿತಿ ಹಾಕಿದ್ದರು.....
ಕೆಲವರಿಗೆ ಆ ಪತ್ರಿಕಾಘೋಷ್ಟಿ ಪ್ರಾರಂಭವಾಗೋದು ೧ ಕ್ಕೆ ಅಂತ ಗೊತ್ತಿತ್ತು...ಆಗಲೆ ಸ್ವಲ್ಪ ಅನುಮಾನ..ಬಹುತೇಕ ವರದಿಗಾರರಿಗೆ ಈ ಯೋಜನೆ ಗೊತ್ತಿದೆ ಅಂತ..ಕೆಲವರು ಐದತ್ತು ನಿಮಿಷ ಪತ್ರಿಕಾಘೋಷ್ಟಿ ಕಾಯದವರು ಅರ್ದ ತಾಸು ಕಾದರು.. ನಂತರ ಬಂದವರೆ ಜಿಎಮ್......ಸಾರಿ ಸಾರಿ.....ಅಂತ ಹೇಳುತ್ತಲೆ ನಮ್ಮಲ್ಲಿ ಅದ್ಬುತ ಸಾಕ್ಷಿ ಇದೆ. ವಿಡಿಯೊ ಇದೆ ಎಂದವರು..ಪತ್ರಿಕಾಘೋಷ್ಟಿ ನಡೆಸಲು ಮೇಲಾದಿಕಾರಿಗಳ ಅನುಮತಿ ಬೇಕು ಬಂದ ಕೂಡಲೆ ಮಾತಾಡ್ತೀನಿ ಅಂತ ಏಕಾ ಏಕಿ..ಬೇಡ ಅಂತ ಹೇಳಿ ಬಿಟ್ಟರು...ಪೆನ್ನು. ಪ್ಯಾಡ್ ಸಾಮಾನ್ಯ..ಇಲ್ಲಿ..ಅದರ ಜೊತೆ ೧೫೦ ಪಾರ್ಕರ್ ಪೆನ್..BOB ಮುದ್ರಿತ ಕಪ್..ಉಡುಗೊರೆಯಾಗಿ ನೀಡಿದರು..ಕೆಲವರಿಗೆ..ಕೆಲವರು ಬೇಡ ಎಂದರು ಆದರೆಬೇರೆ ಕಡೆಯಿಂದ ತಲುಪುವುದಿಲ್ಲ ಎಂಬ ಗ್ಯಾರಂಟಿ ಏನು!? ..ಊಟಕ್ಕೆ ಅವರ ವಿಸಿಟಿಂಗ್ ಕಾರ್ಡ್ ತೋರಿಸಿ ಎಂದು ಹೇಳಿ ಹೋದರು..
----------------
ಶುರುವಾಯ್ತ..... ನೋಡಿ ಆ ಬ್ಯಾಂಕ್ ವಿಡಿಯೋನ ಅಸಲಿ ಕಥೆ....
ಎಸಿಬಿ ಅದಿಕಾರಿಗಳೆ ಹಣ ನೀಡಿ ತಪ್ಪಿತಸ್ಥರನ್ನಾಗಿ ಮಾಡಿದ ಎಸಿಬಿ ಅದಿಕಾರಿಗಳ ಕಳ್ಳಾಟ,  ಎಂಬ ಶೀರ್ಷಿಕೆ ಸುದ್ದಿಗಳು.......
ಮತ್ತೆ ಹರಿದು ಬಂತು ಎರಡು ವಿಡಿಯೋ.....
ಹೌದು ೨೦೦೦.ಕಟ್ಟಿದರೆ ಸಾಲ ಮನ್ನ ಆಗುತ್ತದೆ. ಅದು ನೋಟಿಸ್ ಶುಲ್ಕ. ಖಾತೆ ರನ್ನಿಂಗ್ ಗೆ ಅಂತ ಹೇಳಿದ್ರೆ, ೧೫.೦೦೦ ಕೊಡಲೆ ಬೇಕು..ನ್ಯಾಯಾಲಯ, ವಕೀಲರ ಶುಲ್ಕ ಎಂಬ ಮ್ಯಾನೆಜರ್ ಹೇಳಿದ ಎರಡು ವಿಡಿಯೋ....ಅಲ್ಲಿಗೆ ಮೂರು ಚಿತ್ರಣಗಳು ಲಬ್ಯವಾದವು...
ಇದರಲ್ಲಿ ಅಸಲಿ ನಕಲಿ ಯಾವುದು ಎಂಬುದು ತಿಳಿಯಲೆ ಬೇಕು...ಎಲ್ಲವೂ ಅಸಲಿಯೇ...ಎರಡು ವಿಡಿಯೋ ಎಸಿಬಿ ಅವರು ದಾಳಿ ನಡೆಸಲು ಕಾರಣರಾದ ಚಿತ್ರಣ, ಹಾಗೂ ಸಾಲ ಮನ್ನಾ ವದ ಖಾತೆ, ಸಿಬಿಐ ಘಟಕದಿಂದ ಅನುಮತಿ ಪಡೆದು ನುಗ್ಗಲು ಸಹಕಾರಿ ಯಾಗಿತ್ತು... ಇನ್ನೊಂದು ಬ್ಯಾಂಕ್ ಅವರೆ ಲ್ಯಾಪ್ ಟಾಪ್ ನಿಂದ ಚಿತ್ರಿಸಿ ‌ಮಾದ್ಯಮಕ್ಕೆ ನೀಡಿ ತಪ್ಪು ಸಂದೇಶ ನೀಡಿದರು.
ಅದನ್ನ ಪ್ರಕಟಿಸಿದರು.ಮುಂದೆ ಬಹುತೇಕರು ಎಸಿಬಿ ನ್ಯಾಯಾಲಯದಲ್ಲಿ ಉತ್ತರಿಸುವ ಸಾದ್ಯತೆ ಕೂಡ ಇದೆ..
ಬ್ಯಾಂಕ್ ಅದಿಕಾರಿಗಳು ನಮ್ಮನ್ನ ರೈಡ್ ಮಾಡಲು ಅವರಿಗೇನು ಅದಿಕಾರ ಇದೆ ಎಂದು ಮಾದ್ಯಮದವರಿಗೆ ಸವಾಲೊಡ್ಡುವ ಮಾತುಗಳು ನೋಡಿದರೆ ತಪ್ಪು ಎಸಿಬಿ ಅವರದ್ದೆ ಎನ್ನುವಂತಾಗಿತ್ತು.. ಆದರೆ ಮೈಸೂರು ವಿಭಾಗ ಎಸ್ಪಿ ರಶ್ಮಿ ಅವರು ಲೋಕಾಯುಕ್ತದಲ್ಲಿ ಕೆಸಲ ನಿರ್ವಹಿಸಿದ್ದವರು ಈಗ..ಎಸಿಬಿ ಅಲ್ಲಿ ಕೆಲಸ ಮಾಡುತ್ತಿರುವ ಇವರು ಕೆಲಸದ ಅನುಭವ ಪರಿಗಣಿಸಲೇ ಬೇಕು. ಇವರು ಪ್ರಕರಣ ದಾಖಲಿಸಿದಾಗಿನಿಂದ ೧೫-೨೦ ದಿನಗಳ ಕಾಲ ಸಾಲ ಮನ್ನಾ ಪಟ್ಟಿ, ಶುಲ್ಕ ರಹಿತಿ ಎನ್ ಒ.ಸಿ.ನೀಡಬೇಕು ಎಂಬ ಎಲ್ಲಾ ಮಾಹಿತಿ ದಾಖಲಿಸಿ...ಸಿಬಿಐ ಘಟಕದಿಂದ ಅನುಮತಿ ಪಡೆದು ಜೊತೆಗೆ ತಮ್ಮ ಐಜಿ ಅವರ ಗಮನಕ್ಕೆ ತಂದು ದಾಳಿ ನಡೆಸಲು ಜಿಲ್ಲಾ ಘಟಕಕ್ಕೆ ಸೂಚಿಸಿ ತದ ನಂತರ ಕೈಗೊಂಡ ಕ್ರಮಗಳು...ಈಗ ಹೇಳಿ ಕಳ್ಳಾಟ....ಎಸಿಬಿ ಅದಿಕಾರಿಗಳದ್ದೊ., ಬೇರೆ ವಿಡಿಯೊ ತೋರಿಸಿ ದಾರಿ ತಪ್ಪಿಸಿದವರದ್ದೋ...ಮತ್ತ್ಯಾರದ್ದೋ ಅಂತ....!?
ಪ್ರಸ್ತುತ ಪ್ರಕರಣ ನ್ಯಾಯಾಲಯ ಅಂಗಳದಲ್ಲಿದೆ. ತಪ್ಪು ಒಪ್ಪುಗಳನ್ನ ಎಸಿಬಿ ಅದಿಕಾರಿಗಳು ನ್ಯಾಯಾಲಯದಲ್ಲಿ ಉತ್ತರಿಸುತ್ತಾರೆ..ನಾವೇಕೆ ಬೀದಿಗೆ ಬರಬೇಕು. ಅದು ನಮ್ಮ ಕೆಲಸವಲ್ಲ..ದೂರು ಬಂದಿದೆ. ಪರಿಶೀಲಿಸಿದ್ದೇವೆ.ಸುಮ್ಮನೇ ಕೂರಲು ನಮ್ಮಿಂದ ಸಾದ್ಯವಿಲ್ಲ ಎಂದು ಹೆಮ್ಮೆಯಿಂದ ಮೈಸೂರು ಎಸಿಬಿ ಎಸ್ಪಿ ಜೆ.ರಶ್ಮಿ ಅವರು ಉತ್ತರಿಸುತ್ತಾರೆ..
ಯಾರು ಎಷ್ಟೆ ಬೊಗಳಿದರೂ ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆ  ಬಾಗಲೇ ಬೇಕು...
--------------
ಕ್ಯಾಮೆರಾ ನಂ.......ಅಲ್ಲಿ ದೂರುದಾರ ಒಳಬರುವ ಚಿತ್ರವಿದ್ದರೆ..ಕ್ಯಾ.೬ ರಲ್ಲಿಬ್ಯಾಂಕ ಮ್ಯಾನೆಜರ್ ಮಾತುಕತೆ ಚಿತ್ರಣವಿದೆ. ಮತ್ತೆ..ಕ್ಯಾ.ನಂ......ಅಲ್ಲಿ ಹಣ ಪಡೆದಿದ್ದಾರೆ ಎಸಿಬಿ ಅದಿಕಾರಿಗಳು ಒಳಪ್ರವೇಶಿಸಬಹುದುಎಂಬ ಸೂಚನೆ ನೀಡುವ ಚಿತ್ರಣವಿದೆ. ಕ್ಯಾಮೆರಾ....ನಂ.....ಅಲ್ಲಿ ಹಣ ಪಡೆದ ಸಿಬ್ಬಂದಿ ಕಟ್ಟದೆ ಇರುವ ಚಿತ್ರಣ ಇದೆ. ಅದಿಕಾರಿಗಳು ನುಗ್ಗಿದ ನಂತರ ದೂರುದಾರನ ಹಣ ಜಪ್ತಿ ಮಾಡಬೇಕಾದ ಕೆಲಸ ಎಸಿಬಿ ಅದಿಕಾರಿಗಳಿಗಿರುತ್ತದೆ. ಈ ಎಲ್ಲಾ ಚಿತ್ರಣ ಬ್ಯಾಂಕಿನ  ಐದಾರು ಕ್ಯಾಮೆರಾದಲ್ಲಿ ಚಿತ್ರೀಕರಿಸಲ್ಪಟ್ಟರೂ ಕ್ಯಾ.ನಂ.೬ ಕೊಟ್ಟು ದಾರಿ ತಪ್ಪಿಸಿದ್ದೇಕೆ ಎಂಬುದನ್ನ  ಜನ ಮನಗಾಣಬೇಕಾಗಿದೆ.


------------------
ಪ್ರಕರಣದಲ್ಲಿ ದೂರುದಾರರ ಹೆಸರು. ದಾಳಿ ನಡೆಸಿದ ಅದಿಕಾರಿಗಳು. ರಾಜ್ಯ ಘಟಕ & ಕೇಂದ್ರ ಘಟಕದ ಕೆಲವರ ಹೆಸರನ್ನ ಪ್ರಸ್ತಾಪಿಸಿಲ್ಲ....ಮುಂದಿನ ದಿನಗಳಲ್ಲಿ ಎಲ್ಲರ ಹೆಸರನ್ನ ಜನರ ಮುಂದೆ ಇಡ್ತೇವೆ...
--------
ರೈತರು ಎನ್ ಒ.ಸಿ ಗೆ ಒಂದು ರೂಪಾಯಿ ನೀಡಬೇಡಿ..ಅದು ಉಚಿತವಾಗಿ ಕೊಡುವಂತದ್ದು ಎಂದು ತಿಳಿಸಿರುವ ಅವರು ಅಂತ ದೂರನ್ನ ಆಯಾ ಕಚೇರಿ ಸಂಪರ್ಕಿಸಿ ದೂರು ಸಲ್ಲಿಸಲು ತಿಳಿಸಿದ್ದಾರೆ.
-----------------------
ಇದು ವೈಯುಕ್ತಿಕವಾಗಿ ನಾನು, ಇಲಾಖೆ ಕೆಲಸ ಗಮನದಲ್ಲಿಟ್ಟುಕೊಂಡು ಅನಿಸಿಕೆ ವ್ಯಕ್ತಪಡಿಸಿರುತ್ತೇನೆ. ನ್ಯಾಯಾಲಯ ನಿಂದನೆಪದಗಳಿಂದಲೂ ಕೂಡಿರುವುದಿಲ್ಲ ಎಂದು ಮನಗಂಡಿದ್ದು...ಅರಿವಿಗೆ ಬಾರದೆ ಪದಗಳಿದ್ದರೆ ವಿಷಾದವಿರಲಿ..ಸಾಕ್ಷಿಗಳು ಇಲಾಖಾ ಪರವಾಗಿಯೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಅದೂ ಈ ಪ್ರಕರಣದಲ್ಲಿ ಇನ್ನೂ ಸಾಕಷ್ಟು ಸತ್ಯಗಳ ನಮ್ಮಲ್ಲಿಯೂ.ಇಲಾಖೆಯಲ್ಲೂ ಇದೆ. ದಾರಿ ತಪ್ಪಿಸಲು ಹೋಗಿ ನೀವು ದಾರಿ ತಪ್ಪಬೇಡಿ.ಎಂಬುದಷ್ಟೆ ಆಶಯಆಶಯ.
ಪೈನಲ್ ಟಚ್.....ಇದೋಂದುಪೂರ್ವ ಯೋಜಿತ ಕೃತ್ಯಾಂತಾನೆಹೇಳ್ತಾರೆ. ಸತ್ಯ...ದೂರು ಬಂದಾಗಿನಿಂದ ಜೈಲಿಗಟ್ಟೊ ತನಕ ಅಥವಾ ದಾಳಿ ನಡೆಸೊ ತನಕ ಮಾಡುವ ಪ್ರಕ್ರಿಯೆ ಎಲ್ಲವೂ ಪೂರ್ವ ಯೋಜಿತ..ಉದಾ..ಹಣಕ್ಕೆ ರಸಾಯನಿಕ ಸಿಂಪಡಣೆ, ಓರ್ವರ ಸಾಕ್ಷಿ,ಹೀಗೆ ಮತ್ತಷ್ಟು ಕ್ರಿಯೆಗಳು ಪೂರ್ವ ಯೋಜಿತವಾಗದಿದ್ದರೆ ಹಿರಿಯ ಅದಿಕಾರಿಗಳಿಗೆ ಇವರೇ ತಲೆದಂಡವಾಗಬೇಕಾಗುತ್ತದೆ.

.ಇಂತಿ....ರಾಮಸಮುದ್ರ ಎಸ್.ವೀರಭದ್ರಸ್ವಾಮಿ..

Sunday, 29 December 2019

ಚಾಮುಲ್ ನೇಮಕಾತಿ ಪ್ರಕರಣ : ಜಂಟಿ ತನಿಖೆಗೆ ಅಧಿಕಾರಿಗಳ ತಂಡ ರಚನೆ- ವಾರದೊಳಗೆ ವರದಿ ನೀಡಲು ಡಿಸಿ ಆದೇಶ

 
ಚಾಮರಾಜನಗರ, ಡಿಸೆಂಬರ್. 30 - ತಾಲ್ಲೂಕಿನ ಕುದೇರಿನ ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಾಮುಲ್)ದಲ್ಲಿ ಖಾಲಿ ಇದ್ದ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತ ತನಿಖೆಗೆ ನಾಲ್ವರು ಅಧಿಕಾರಿಗಳ ತಂಡವನ್ನು ರಚಿಸಿ ಜಂಟಿ ತನಿಖೆ ನಡೆಸಲು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶಿಸಿದ್ದಾರೆ.

ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಾಮುಲ್)ದಲ್ಲಿ ಖಾಲಿ ಇದ್ದ ವಿವಿಧ ವೃಂದಗಳಲ್ಲಿನ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆಸಿ ಅನರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಹಲವು ಸಂಘ-ಸಂಸ್ಥೆಗಳು ಜಿಲ್ಲಾಡಳಿತಕ್ಕೆ ದೂರು ನೀಡಿ ತನಿಖೆ ನಡೆಸುವಂತೆ ಆಗ್ರಹಿಸಿದ್ದವು. ಅಲ್ಲದೇ ಈ ಬಗ್ಗೆ ವಿವಿಧ ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಂಡಿದ್ದು ನೇಮಕಾತಿ ಪ್ರಕ್ರಿಯೆಯ ವಿವಿಧ ಅಂಶಗಳ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡಬೇಕಿರುವ ಹಿನ್ನಲೆಯಲ್ಲಿ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಸಮಾಜ ಕಲ್ಯಾಣ ಉಪನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರನ್ನು ಜಂಟಿ ತನಿಖೆಗೆ ನೇಮಕ ಮಾಡಿ ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ.

ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಾಮುಲ್)ದಲ್ಲಿ ಉದ್ಯೋಗ ನೇಮಕಾತಿ ಸಂಬಂಧ ನಡೆಸಲಾಗಿರುವ ಲಿಖಿತ ಪರೀಕ್ಷೆ, ಸಂದರ್ಶನ, ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಿಕೆ ಹಾಗೂ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ ಮಾಡಿರುವ ಕುರಿತು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಾಮುಲ್)ವು ಜಂಟಿ ತನಿಖೆಗೆ ರಚಿಸಲಾಗಿರುವ ಅಧಿಕಾರಿಗಳ ತಂಡಕ್ಕೆ ಪರಿಶೀಲನೆಗಾಗಿ ನೇಮಕಾತಿ ನಿಯಮ, ಸರ್ಕಾರದ ಆದೇಶಗಳು ಹಾಗೂ ಅಗತ್ಯ ದಾಖಲೆಗಳನ್ನು ನೀಡಬೇಕೆಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದ್ದಾರೆ.

ಅಧಿಕಾರಿಗಳ ತನಿಖಾ ತಂಡವು ಜಂಟಿಯಾಗಿ ತನಿಖೆ ನಡೆಸಿ ಒಂದು ವಾರದೊಳಗಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶಿಸಿದ್ದಾರೆ.

ಯಶಸ್ವಿಯಾಗಿ ನಡೆದ ಮಂಟೇಸ್ವಾಮಿ ಕಥಾಪ್ರಸಂಗ ನಾಟಕ (೧೯-೧೨-೨೦೧೯) ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ




ಯಶಸ್ವಿಯಾಗಿ ನಡೆದ ಮಂಟೇಸ್ವಾಮಿ ಕಥಾಪ್ರಸಂಗ ನಾಟಕ
---------------------------------
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
----------------------------
ಚಾಮರಾಜನಗರ:  ಡಾ. ಎಚ್ ಎಸ್ ಶಿವಪ್ರಕಾಶ್     ಅವರ ರಚನೆಯಲ್ಲಿ  ಮಂಜುನಾಥ್.(ಕಾಚಕ್ಕಿ ) ಅವರ ನಿರ್ದೇಶನದಲ್ಲಿ ಚಾಮರಾಜನಗರದ ಜೆ ಎಸ್ ಎಸ್ ಮಹಿಳಾ ಕಾಲೇಜು ವಿಧ್ಯಾರ್ಥಿನಿಯರ ಸಹಕಾರದಲ್ಲಿ ಚಾಮರಾಜನಗರ ಜೆಎಸ್ಎಸ್ ಕಾಲೇಜು ಆವರಣದಲ್ಲಿ ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕ ನಡೆಯಿತು. 
------------------------------------------

               

ನಾಟಕದ ಕುರಿತು :
ನಾಟಕ ಪ್ರಾರಂಭವಾಗುವುದು ನೀಲಗಾರರಿಂದ, ಬಸವಣ್ಣ ಭಕ್ತ ಶರಣರ ಆಗಮನದ ನಿರೀಕ್ಷೆಯಲ್ಲಿ ಕುತೂಹಲದಿಂದ ಕಾಯುತ್ತಿರುವಾಗ ಮಂಟೇಸ್ವಾಮಿಯವರು ಭಂಗಿ ಸೇದುತ್ತಿದ್ದರೂ ಸಹ ಅವರನ್ನು ಬಸವಣ್ಣ ಮತ್ತು ನೀಲಾಂಬಿಕೆ ದಂಪತಿಗಳು ಪೂಜಿಸುತ್ತಾರೆ.
ಕಲ್ಯಾಣವನ್ನು ತೊರೆದ ನಂತರ ಮಂಟೇಸ್ವಾಮಿಯವರು ಕಡುಗಣ್ಣ ರಾಚಪ್ಪಾಜಿ ಮತ್ತು ದೊಡ್ಡಮ್ಮತಾಯಿಯೊಂದಿಗೆ ದಕ್ಷಿಣದ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ತನ್ನ ಏಳು ಪುನರ್ಜನ್ಮಗಳ ನಂತರ ನಿಡುಗಟ್ಟದ ಕೆಂಪಾಚಾರಿ ಮಂಟೇಸ್ವಾಮಿಯವರ ಶಿಶ್ಯನಾಗುತ್ತಾನೆ. ನಂತರ ಅವನು ಘನನೀಲಿ ಸಿದ್ದಪ್ಪಾಜಿಯಾಗಿ ರೂಪಾಂತರಗೊಂಡು ಹಲಗೂರಿನ ಪಾಂಚಾಲ ರಾಜರ ಅಹಂಕಾರವನ್ನು ಮುರಿದು ಅವರಿಂದ ಕಬ್ಬಿಣ ಆಯುಧಗಳನ್ನು ತಂದು ಅವರ ಗುರುಗಳಾದ ಮಂಟೇಸ್ವಾಮಿಯವರಿಗೆ ಪಾತಾಳಬಾವಿ ತೋಡಿಸಿಕೊಡುತ್ತಾರೆ. ಅಂತಿಮವಾಗಿ ಕಲಿಯುಗದ ಉನ್ನತಿಯನ್ನು ನೋಡಿದ ಮಂಟೇಸ್ವಾಮಿಯವರು ಪಾತಾಳೇಶ್ವರನೊಂದಿಗೆ ಒಂದಾಗುತ್ತಾರೆ. 


ನಾಟಕಕಾರರ ಕುರಿತು : 
ನಾಟಕಕಾರರಾದ ಡಾ. ಎಚ್. ಎಸ್. ಶಿವಪ್ರಕಾಶ್‍ರವರು ಏಳು ಕವನ ಸಂಕಲನಗಳು, ಹನ್ನೆರಡು ನಾಟಕಗಳು ಹಾಗೂ ಹಲವಾರು ಪುಸ್ತಕಗಳನ್ನ ಬರೆದಿದ್ದಾರೆ. ಇವರ ಕೃತಿಗಳನ್ನು ಇಂಗ್ಲೀಷ್, ಫ್ರೆಂಚ್, ಜರ್ಮನ್, ಹಿಂದಿ, ಮಲಯಾಳಂ, ಮರಾಠಿ ಮತ್ತು ತಮಿಳು ಭಾಷೆಗಳಿಗೆ ಅನುವಾದಿಸಲಾಗಿದೆ.
ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿಗಳು ಲಭಿಸಿದೆ..
ಸುತ್ತೂರು ಶ್ರೀಮಠದ ಜಗದ್ಗುರುಗಳಾದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯ ಎಂಬುದನ್ನು ಕಂಡುಕೊಂಡ ಧೀಮಂತ ಚೇತನ. ಅದಕ್ಕಾಗಿ ಅವರು ಗ್ರಾಮಾಂತರ ಪ್ರದೇಶಗಳಲ್ಲಿ ಶಾಲಾಕಾಲೇಜುಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗಾಗಿ ಉಚಿತ ಪ್ರಸಾದ ನಿಲಯಗಳನ್ನೂ ತೆರೆದರು. ಸಂಗೀತ, ಸಾಹಿತ್ಯ, ಕಲೆ, ಸಂಸ್ಕೃತಿ, ಜ್ಯೋತಿಷ್ಯ ಮುಂತಾದ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡುವ ಮೂಲಕ ಸಮಾಜದ ಸರ್ವತೋಮುಖ ಬೆಳವಣ ಗೆಗೆ ಕಾರಣರಾದರು.
ಶ್ರೀಮಠದ ಶೈಕ್ಷಣ ಕ ಚಟುವಟಿಕೆಗಳ ನಿರ್ವಹಣೆಗಾಗಿ ಶ್ರೀಗಳವರು 1954ರಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠವನ್ನು ಪ್ರಾರಂಭಿಸಿದರು. ಇಂದು ನೆರೆಯ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿರುವ 320ಕ್ಕೂ ಹೆಚ್ಚು ಸಂಸ್ಥೆಗಳು ಮಹಾವಿದ್ಯಾಪೀಠದ ಆಶ್ರಯದಲ್ಲಿ ಕೆಲಸ ಮಾಡುತ್ತಿವೆ.
ಜೆಎಸ್‍ಎಸ್ ಕಲಾಮಂಟಪ ಸ್ಥಾಪನೆ :ಭಾರತೀಯ ಕಲೆಗಳನ್ನು ಪೆÇ್ರೀತ್ಸಾಹಿಸುವ ಸಲುವಾಗಿ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಜೆಎಸ್‍ಎಸ್ ಮಹಾವಿದ್ಯಾಪೀಠದಿಂದ 1948ರಲ್ಲಿ ಜೆಎಸ್‍ಎಸ್ ಕಲಾಮಂಟಪವನ್ನು ಪ್ರಾರಂಭಿಸಿದರು. ವಿದ್ಯಾಪೀಠದ ಅಂಗಸಂಸ್ಥೆಗಳ ಹಿರಿಯ-ಕಿರಿಯ ಸಿಬ್ಬಂದಿಗಳು ಕಲಾಮಂಟಪದ ಕಲಾವಿದರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ನಾಟಕಕಾರರಾಗಿದ್ದ ಶ್ರೀ ಎಂ.ಸಿ. ಅಂಕಪ್ಪನವರ ಶ್ರೀ ಶಿವರಾತ್ರೀಶ್ವರ ವಿಜಯ, ಆದರ್ಶ ವಿವಾಹ, ಭೂಮೀಲ್ಹಿಕ್ಮತ್ತು ಸ್ವರ್ಗದಲ್ಲಿ ಕ್ಯಾನ್ವಾಸು, ಕಂಬಳಿ ನಾಗಿದೇವ ಮೊದಲಾದ ನಾಟಕಗಳು ಹಾಗೂ ತಿಪ್ಪೇರುದ್ರಸ್ವಾಮಿಯವರ ವಿರಚಿತ ಶ್ರೀ ನಿಜಗುಣ ಶಿವಯೋಗಿ ಇತ್ಯಾದಿ ನಾಟಕಗಳು ನಾಡಿನಾದ್ಯಂತ ಪ್ರದರ್ಶನಗೊಂಡಿವೆ.


ನಿರ್ದೇಶಕರ ಕುರಿತು :
ಮಂಜುನಾಥ್ (ಕಾಚಕ್ಕಿ)
ರು ಚಾಮರಾಜನಗರ ಜಿಲ್ಲೆಯ ರಾಮಸಮುದ್ರ ಗ್ರಾಮದವರು. ಇವರು ನೀನಾಸಂ ರಂಗತರಬೇತಿ ಪಡೆದುಕೊಂಡು ಹಲವು ಮಕ್ಕಳ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ಇವರು ಜೆಎಸ್‍ಎಸ್ ಪ್ರೌಢಶಾಲೆ, ಸಂತೆಮರಳ್ಳಿಯಲ್ಲಿ ಕಳೆದ ಹತ್ತು ವರ್ಷಗಳಿಂದ ನಾಟಕ ಶಿಕ್ಷಕರಾಗಿ, ಕಲಾಮಂಟಪದಲ್ಲಿ ನಟರಾಗಿ, ಬೇಸಿಗೆ ಶಿಬಿರಗಳು ಮತ್ತು ರಂಗೋತ್ಸವ ನಾಟಕಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಸಂಗೀತ ಸಂಯೋಜಕರ ಕುರಿತು: 
ಚಂದ್ರಶೇಖರಾಚಾರ್ ಹೆಗ್ಗೊಠಾರ ಇವರು ಚಾಮರಾಜನಗರ ಜಿಲ್ಲೆಯ ಹೆಗ್ಗೊಠಾರ ಗ್ರಾಮದವರು. ಇವರು ನೀನಾಸಂ ರಂಗತರಬೇತಿ ಪಡೆದುಕೊಂಡು ಹಲವು ಮಕ್ಕಳ ನಾಟಕಗಳ ನಿರ್ದೇಶಿಸಿ ಸಂಗೀತ ನೀಡಿದ್ದಾರೆ. ಪ್ರಸ್ತುತ ಇವರು ಜೆಎಸ್‍ಎಸ್ ಪ್ರೌಢಶಾಲೆ, ಬರಗಿ, ಗುಂಡ್ಲುಪೇಟೆ ತಾ. ಇಲ್ಲಿ ನಾಟಕ ಶಿಕ್ಷಕರಾಗಿ, ಜೆಎಸ್‍ಎಸ್ ಕಲಾ ಮಂಟಪದಲ್ಲಿ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆಧುನಿಕ ನಾಟಕಗಳ ಪ್ರಯೋಗ :
ಶಾಲಾಕಾಲೇಜುಗಳಲ್ಲಿ ನಾಟಕಾಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ಕಲಾಮಂಟಪವು ರಂಗಭೂಮಿಯ ಹೊಸ ಆಯಾಮವನ್ನು ಅಳವಡಿಸಿಕೊಳ್ಳುವ ಪ್ರಯತ್ನವಾಗಿ ನಾಟಕರಚನಾ ಶಿಬಿರಗಳ ಮೂಲಕ ಪೆÇ್ರ. ಬಿ. ಸೋಮಶೇಖರಪ್ಪನವರು ರಚಿಸಿದ ಶ್ರೀ ಗಂಗಾಧರಸ್ವಾಮಿಯವರ ನಿರ್ದೇಶನದಲ್ಲಿ ದಿವ್ಯಚೇತನ ಶರಣಚರಿತಾಮೃತದ ಒಂದು ಭಾಗವನ್ನು ರಂಗರೂಪಕ್ಕೆ ಅಳವಡಿಸಿ, ಶ್ರೀ ಚಂದ್ರಶೇಖರಾಚಾರ್ ನಿರ್ದೇಶನದಲ್ಲಿ ಬಾಗಿದ ತಲೆಯ ಕೈ ಮುಗಿದ ಬಸವ, ಶ್ರೀಹರ್ಷನ ನಾಗಾನಂದ ಪೆÇ್ರ. ಹೆಚ್.ಎಸ್. ಉಮೇಶ್ ಅವರ ನಿರ್ದೇಶನದಲ್ಲಿ, ಶ್ರೀ ಲಿಂಗದೇವರು ಹಳೆಮನೆ ರಚಿಸಿದ ಕಲ್ಲರಳಿ ಹೂವಾಗಿ ಶ್ರೀಮತಿ ಸುಮತಿ ಕೆ.ಆರ್ ರವರ ನಿರ್ದೇಶನದಲ್ಲಿ ನಾಟಕಗಳನ್ನು ಪ್ರದರ್ಶಿಸಲಾಗಿದೆ.

ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮನ್ನಣೆ :       
2009-10ನೇ ಸಾಲಿನಲ್ಲಿ ದೆಹಲಿಯಲ್ಲಿ ನಡೆದ ಜಶ್ನ್ ಎ ಬಚಪನ್ ನಾಟಕೋತ್ಸವದಲ್ಲಿ ಕುವೆಂಪು ವಿರಚಿತ ಕಿಂದರಿ ಜೋಗಿ ಶ್ರೀ ಹೆಚ್. ಜನಾರ್ಧನ್ (ಜನ್ನಿ) ನಿರ್ದೇಶನದದಲ್ಲಿ ನಾಟಕ ಪ್ರದರ್ಶನಗೊಂಡಿದೆ. ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ ಶ್ರೀಮತಿ ಸುಮತಿ ಕೆ.ಆರ್. ರವರ ನಿರ್ದೇಶನಲ್ಲಿ ಡಾ. ಎಚ್.ಎಸ್. ವೆಂಕಟೇಶ್‍ಮೂರ್ತಿ ರಚಿಸಿದ ಚಿತ್ರಪಟ ನಾಟಕವನ್ನು ಪ್ರದರ್ಶಿಸಲಾಯಿತು. ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತಮಾನೋತ್ಸವದ ಅಂಗವಾಗಿ ದಿವೃಚೇತನ ನಾಟಕವು ಶಾಲಾಕಾಲೇಜುಗಳ ಶತಮಾನೋತ್ಸವಗಳಲ್ಲಿ ಪ್ರದರ್ಶನಗಳು ಸೇರಿದಂತೆ 70 ಪ್ರದರ್ಶನಗಳನ್ನು ಕಂಡಿದ್ದಲ್ಲದೇ ರಾಜ್ಯದ ನಾನಾ ಭಾಗಗಳಲ್ಲಿ ಒಟ್ಟು 100ಕ್ಕೂ ಹೆಚ್ಚು ಪ್ರದರ್ಶನ ನೀಡಿ ಜನಮೆಚ್ಚುಗೆಗೆ ಪಾತ್ರವಾಗಿದೆ.


ಜೆಎಸ್‍ಎಸ್ ರಂಗೋತ್ಸವ :
ಮಕ್ಕಳ ರಂಗಭೂಮಿಗೆ ಹೆಚ್ಚು ಪೆÇ್ರೀತ್ಸಾಹ ಕೊಡಬೇಕೆಂಬ ನಿಟ್ಟಿನಲ್ಲಿ ಆರಂಭವಾದ ಜೆಎಸ್‍ಎಸ್ ರಂಗೋತ್ಸವವು ಈಗ 7ನೆಯ ವರ್ಷಕ್ಕೆ ಕಾಲಿಟ್ಟಿದೆ. 2011 ರಿಂದ 2019 ರವರೆಗೆ ಪ್ರದರ್ಶನಗೊಂಡಿರುವ ನಾಟಕಗಳಾದ ಪುಷ್ಪರಾಣ , ನಾಯಿಮರಿ, ಅಳಿಲು ರಾಮಾಯಣ, ಆಮನಿ, ನಾಣ  ಭಟ್ಟನ ಸ್ವರ್ಗದ ಕನಸು, ರೆಕ್ಕೆ ಕಟ್ಟುವಿರಾ, ಝಂ ಝಾಂ ಆನೆ ಮತ್ತು ಪುಟ್ಟ, ಸರೀಸೃಪಗಳ ಸಭೆ, ಪಂಜರ ಶಾಲೆ, ಮಾನವಪುರದ ರಾಜಕುಮಾರಿ, ಗುಮ್ಮ, ಮೃಚ್ಛಕಟಿಕ, ಸಾಹೇಬರು ಬರುತ್ತಾರೆ, ನ್ಯಾಯಕ್ಕೆ ಜಯ, ಬೆಪ್ಪತಕ್ಕಡಿ ಬೋಳೆ ಶಂಕರ, ಜನಪದ ಜೋಗಿ, ಗೊಂಬೆ ರಾವಣ, ಸತ್ರು ಅಂದ್ರೆ ಸಾಯ್ತಾರಾ, ಮೈನಾ ಹಕ್ಕಿ, ದ್ರೋಣ ಪ್ರತಿಜ್ಞೆ, ಕಂಸಾಯಣ, ರಾಮಧಾನ್ಯ ಪ್ರಕರಣ, ಇಲಿ ಮಡಕೆ, ತಲೆಬಾಗದ ಜನ, ನಾಯಿತಿಪ್ಪ ನಾಟಕಗಳನ್ನು ಪ್ರದರ್ಶಿಸಲಾಗಿದೆ. 
        

ಈ ವರ್ಷ ಚಂದ್ರಮುಖಿ, ತಿರುಕನ ಕನಸು ಮತ್ತು ಮಂಗಗಳ ಉಪವಾಸ ಹಾಗೂ ಮಂಟೇಸ್ವಾಮಿ ಕಥಾಪ್ರಸಂಗ ನಾಟಕಗಳು ಡಿಸೆಂಬರ್ ತಿಂಗಳಿನಲ್ಲಿ ಬೆಂಗಳೂರು, ಮೈಸೂರು ಮತ್ತು ಚಾಮರಾಜನಗರದಲ್ಲಿ ನಡೆಯುವ ಜೆ ಎಸ್ ಎಸ್ ರಂಗೋತ್ಸವದÀಲ್ಲಿ ಈ ನಾಟಕಗಳು ಪ್ರದರ್ಶನಗೊಳ್ಳತ್ತಿವೆ.


ಆಶಯ : 
       ಜೆಎಸ್‍ಎಸ್ ರಂಗೋತ್ಸವವು ಮಕ್ಕಳ ಸುಪ್ತಪ್ರತಿಭೆಯ ಪ್ರದರ್ಶನಕ್ಕೆ ಒಳ್ಳೆಯ ಅವಕಾಶವಾಗಿದೆ. ಅಲ್ಲದೆ, ಶಿಕ್ಷಣದಲ್ಲಿ ರಂಗಭೂಮಿ ಅಳವಡಿಕೆಯು ಎಲ್ಲಾ ಶಾಲೆಗಳಲ್ಲಿಯೂ, ಎಲ್ಲಾ ಮಕ್ಕಳಿಗೂ ಸಿಗಬೇಕಾದ ಅವಶ್ಯಕತೆಯಿದೆ. ಈ ದೃಷ್ಟಿಯಿಂದ ಜೆಎಸ್‍ಎಸ್ ಕಲಾಮಂಟಪವು ಪ್ರೌಢಶಾಲಾ ಮಕ್ಕಳಿಂದ 2 ನಾಟಕಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ 1 ನಾಟಕವನ್ನು ಸಿದ್ಧಪಡಿಸಿ ರಂಗೋತ್ಸವವನ್ನು ಆಯೋಜಿಸಿದೆ. ಇದರ ಪ್ರಯೋಜನವನ್ನು ಮಕ್ಕಳ ಜೊತೆಗೆ ಪೆÇೀಷಕರೂ ಪಡೆಯಲಿ ಎಂಬುದು ಜೆ ಎಸ್ ಎಸ್ ಕಲಾಮಂಟಪದ ಆಶಯವಾಗಿದೆ.

--------------------
@..ರಾಮಸಮುದ್ರ ಎಸ್. ವೀರಭದ್ರಸ್ವಾಮಿ
Pics by: M.Kaachakki
----------------

Monday, 12 August 2019

ಅಕ್ರಮ ಸಂಬಂದ ಶಿಕ್ಷಕನ ಕೊಲೆ! ಆರೋಪಿಗಳು ಅಂದರ್. 13-08-2019


 ಅಕ್ರಮ ಸಂಬಂದ ಶಿಕ್ಷಕನ ಕೊಲೆ! ಆರೋಪಿಗಳು ಅಂದರ್. 

 ಚಾಮರಾಜನಗರ: ಅನೈತಿಕ ಸಂಬಂದದಿಂದ ಶಿಕ್ಷಕನೊರ್ವ ಅನಾಥ ಹೆಣವಾದ ಘಟನೆಗೆ ಸಂಬಂದಿಸಿದಂತೆ ಗುಂಡ್ಲುಪೇಟೆ ವಲಯ ಪೊಲೀಸರು ಆರೋಪಿಗಳನ್ನ ಬಂದಿಸಿದ್ದಾರೆ. 
 *ಬಂದಿತರು ಗುಂಡ್ಲುಪೇಟೆಯ ಅಣ್ಣೂರು ಕೇರಿ ನಿವಾಸಿ ರಘು, ಹಂಗಳ ಗ್ರಾಮದ ಸಿದ್ದು ಹಾಗೂ ಅನೈತಿಕ ಸಂಬಂದಕ್ಕೊಳಪಟ್ಟ ಗೃಹಿಣಿ ಬಸವ ರಾಜೇಶ್ವರಿ ಎಂಬಾಕೆಯನ್ನ ಪೊಲೀಸರು ಬಂದಿಸಿದ್ದಾರೆ.

ಘಟನೆ ವಿವರ: ಬಸವರಾಜೇಶ್ವರಿ ಎಂಬಾಕೆಯೊಂದಿಗೆ ಅಕ್ರಮ ಸಂಬಂದ ಹೊಂದಿದ ಎನ್ನಲಾದ ಶಿಕ್ಷಕ ರಂಗಸ್ವಾಮಿಯನ್ನ ಗುಂಡ್ಲುಪೇಟೆಯ ಹಾಲಹಳ್ಳಿ-ನಿಟ್ರೆ ರಸ್ತೆ ಮದ್ಯೆ ಸಾಯಿಸಿ ಕಾರಿನೊಳಗೆ ಹಾಕಿ ಬೆಂಕಿ ಹಾಕಿ ದಹಿಸಿದ್ದರು..‌ಆಗಸ್ಟ್ ಎಂಟರಂದು ಪ್ರಕರಣದ ಬಗ್ಗೆ  ದೂರು ದಾಖಲಿಸಿಕೊಂಡ ಪೊಲೀಸರು  ಅಂದೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಕರೆಯಿಸಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದರು. ಕೂಡಲೆ ಆರೋಪಿಗಳ ಸೆರೆಗಾಗಿ ತಂಡ ರಚಿಸಿ ವಿಚಾರಣೆ ಆರಂಬಿಸಿದ ೪೮ ಗಂಟೆಯೊಳಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಆರೋಪಿಗಳಿಗೆ ಜಾಲ ಬೀಸಿದ್ದರು.

*ಬಸವರಾಜೇಶ್ವರಿ ಉದ್ಯೋಗಿಯಾಗಿದ್ದು ಶಿಕ್ಷಕ ರಂಗಸ್ವಾಮಿಯೊಂದಿಗೆ ಬಹಳ ವರ್ಷದಿಂದೆ ಅಕ್ರಮ ಸಂಬಂದವಿರಿಸಿಕೊಂಡಿದ್ದಳು ಎನ್ನಲಾಗಿದೆ. ಆದರೆ ಈ ಹಿಂದೆಯೂ ವಿಚಾರ ಗೊತ್ತಾಗಿ ಕೌಟುಂಬಿಕ ಕಲಹವೂ ಆಗಿತ್ತು ಎನ್ನಲಾಗಿದೆ.ತದ ನಂತರದ ದಿನಗಳಲ್ಲೂ ಈ ಚಾಳಿ ಮುಂದುವರೆದಿತ್ತು ಎನ್ನಲಾಗಿದೆ ಆದರೆ ಈ ನಡುವೆ ಬಸವರಾಜೇಶ್ವರಿಗೆ ಮತ್ತೊಬ್ಬನ ಸಂಪರ್ಕವೂ ಇತ್ತು ಎನ್ನಲಾಗಿದೆ. ಆತನೊಂದಿಗೂ ಶಿಕ್ಷಕ ತಾನು ನಡೆಸಿದ ರಾಸಲೀಲೆಯ ಕೆಲವು ತುಣುಕುಗಳನ್ನ ಕಳುಹಿಸಿದ್ದ ಎನ್ನಲಾಗುತ್ತಿದ್ದಷ್ಟೆ ಅಲ್ಲದೇ ಸಾಮಾಜಿಕ ಜಾಲತಾಣಕ್ಕೂ ಹರಿಯಬಿಡುವ ಬೆದರಿಕೆಯನ್ನೂ ಹಾಕಿದ್ದ ಎನ್ನಲಾಗಿದೆ. 

*ಪ್ರಕರಣದ ಬಗ್ಗೆ ಮನನೊಂದು ಗೃಹಿಣಿ ಪೂರ್ವ ಯೋಜನೆ ಮಾಡಿ ರಘು ಮತ್ತು ಸಿದ್ದು ಎಂಬುವವರೊಂದಿಗೆ ಸೇರಿ ಕೊಲೆ ಮಾಡಿಸಿ ಯಾರಿಗೂ ಅನುಮಾನ ಬಾರದಂತೆ ಮೃತ ಶವವನ್ನ ಕಾರಿನೊಳಗೆ ಇರಿಸಿ ಬೆಂಕಿ ಹಾಕಿ ಇದೊಂದು ಸಹಜ ಸಾವಂತೆ ಮೇಲ್ನೋಟಕ್ಕೆ ಬಿಂಬಿಸಿದ್ದರು. *ಅನುಮಾನಗೊಂಡ ಗುಂಡ್ಲುಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಬಾಲಕೃಷ್ಟ, ಬೇಗೂರು ಠಾಣೆಯ ರೋಹಿತ್ ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ ಎನ್ನಲಾಗಿದೆ.
 ಆರೋಪಿಗಳನ್ನ ನಿನ್ನೆ ರಾತ್ರಿ ಡಿವೈಸ್ಪಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಿ ಆರೋಪಿಗಳನ್ನ ಜೈಲಿಗಟ್ಟಿದ್ದಾರೆ.
------------

All right reserved publication ..
Rashvee@ publication.
Chamarajanagar





Tuesday, 7 May 2019

ಕಾಯಕವೇ ಕೈಲಾಸದ ಕಾಯಕಯೋಗಿ ಬಸವಣ್ಣನವರು: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ (07-04-2019)



ಕಾಯಕವೇ ಕೈಲಾಸದ ಕಾಯಕಯೋಗಿ ಬಸವಣ್ಣನವರು: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ  
ಚಾಮರಾಜನಗರ, ಮೇ. 07 :  ಕಾಯಕವೇ ಕೈಲಾಸ ತತ್ವದ ಮೂಲಕ ದುಡಿಮೆಯಲ್ಲಿ ದೇವರನ್ನು ಕಂಡ ಕಾಯೋಕಯೋಗಿ ಬಸವಣ್ಣನವರು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಅಭಿಪ್ರಾಯ ಪಟ್ಟರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಸರಳವಾಗಿ ಆಯೋಜಿಸಲಾಗಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುವೆಂಪು ಅವರು 20ನೇ ಶತಮಾನದಲ್ಲಿ ವಿಶ್ವಮಾನವತೆಯ ಕನಸು ಕಂಡಿದ್ದರು. ಅದನ್ನು ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಾರಿ ಮಾಡಿದ್ದರು. ಜನಸಾಮಾನ್ಯರಿಗೆ ಅರ್ಥವಾಗುವ ಸರಳಭಾಷೆ ಕನ್ನಡದಲ್ಲಿ ಸಾಕಷ್ಟು ವಚನಗಳನ್ನು ರಚಿಸಿ ಅರಿವಿನ ಬೆಳಕನ್ನು ತೋರಿ ಸಮ ಸಮಾಜಕ್ಕೆ ನಾಂದಿ ಹಾಡಿದರು. ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದರು ಎಂದರು.
ಬಸವಣ್ಣನವರು ಅನುಭವ ಮಂಟಪದ ಮೂಲಕ ದೇಶದ ಮೊದಲ ಸಂಸತ್ತನ್ನು ಸ್ಥಾಪಿಸಿ ಅಲ್ಲಿ ಸಾಮಾಜಿಕ, ಧಾರ್ಮಿಕ ಚರ್ಚೆಗಳನ್ನು ನಡೆಸುತ್ತಿದ್ದರು. ಅಂದಿನ ಸಮಾಜದಲ್ಲಿದ್ದ ಜಾತಿವ್ಯವಸ್ಥೆ, ವರ್ಣಬೇಧ ಲಿಂಗಬೇಧವನ್ನು ದಿಕ್ಕರಿಸಿ ಬಡವರು, ದೀನ ದಲಿತರು, ಮಹಿಳೆಯರನ್ನು ಅನುಭವ ಮಂಟಪದಲ್ಲಿ ಒಂದೆಡೆ ಸೇರಿಸಿ ಕ್ರಾಂತಿಕಾರಿ ವಿಚಾರಗಳನ್ನು ವಚನಗಳ ಮೂಲಕ ಜನರಿಗೆ ತಲುಪಿಸಿದರು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಾತಿ ಭಾಷೆಯ ಬೇಧವಿಲ್ಲದೆ ಲಿಂಗಶರಣ ತತ್ವವನ್ನು ಪ್ರತಿಪಾದಿಸಿದ ಬಸವಣ್ಣನವರು ತಳ ಸಮುದಾಯದವರಿಗೆ ದೇವಾಲಯ ಹಾಗೂ ಊರಿನ ಒಳಗಡೆ ಪ್ರವೇಶ, ಕುಡಿಯುವ ನೀರಿನ ಹಕ್ಕು, ಮಹಿಳೆಯರು ಪುರುಷರಷ್ಟೆ ಸಮಾನ ಜೀವನ ನಡೆಸಲು ಕಾರಣರಾಗಿ ಕ್ರಾಂತಿಯೋಗಿ ಬಸವಣ್ಣ ಎನಿಸಿಕೊಂಡರು. ನುಡಿದಂತೆ ನಡೆದ ಬಸವಣ್ಣನವರು ರಚಿಸಿದ ವಚನಗಳು ಇಂದಿಗೂ ಜೀವಂತವಾಗಿವೆ ಎಂದು ಜಿಲ್ಲಾಧಿಕಾರಿ ಕಾವೇರಿ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಮಾತನಾಡಿ ಭಾರತದ ಇತಿಹಾಸದಲ್ಲಿ ಸಾಮಾಜಿಕ ಅಸಮಾನತೆ ವಿರುದ್ಧ ದನಿ ಎತ್ತಿದ ಅನೇಕ ಸಾಧು ಸಂತರು, ಶರಣರಲ್ಲಿ ಬಸವಣ್ಣನವರು ಅಗ್ರಗಣ್ಯರಾಗಿದ್ದಾರೆ. ಸಾಂಪ್ರದಾಯಿಕ ಮೌಢ್ಯಗಳು, ಡಾಂಬಿಕತೆಯನ್ನು ಪ್ರಶ್ನಿಸಿ ವಚನ ಸಾಹಿತ್ಯದ ಮೂಲಕ ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ತುಂಬಿ ಸಮಾಜವನ್ನು ಪರಿಷ್ಕರಣೆಗೊಳಪಡಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದರು.
ಜಗತ್ತಿನ ಎಲ್ಲಾ ಧರ್ಮಗಳ ಸಾರವನ್ನು ಅರಿತಿದ್ದ ಬಸವಣ್ಣನವರು ದಯೆ, ಕರುಣೆ ಇಲ್ಲದ ಧರ್ಮ ಯಾವುದು ಇಲ್ಲ. ದಯೆಯೇ ಧರ್ಮದ ಮೂಲವಯ್ಯ ಎಂದು ಸಾರಿ ವಿಶ್ವಮಾನ್ಯರಾದರು. ಅವರ ನಡೆ. ನುಡಿ, ಸದ್ಗುಣ, ವಚನಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಲತಾಕುಮಾರಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಅವರು ಮಾತನಾಡಿ ಸಮಾಜದ ಎಲ್ಲರನ್ನು ಸಮಾನತೆಯಿಂದ ಕಾಣಬೇಕೆಂದು 12ನೇ ಶತಮಾನದಲ್ಲಿಯೆ ಬಸವಣ್ಣನವರು ತಿಳಿಸಿದ್ದರು. ಅವರ ಉದ್ದೇಶ ಸಮ ಸಮಾಜದ ನಿರ್ಮಾಣವೇ ಆಗಿತ್ತು. ಅದನ್ನು ನಾವೆಲ್ಲರೂ ಪಾಲನೆ ಮಾಡಬೇಕು ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿದೇಶಕರಾದ ಎಚ್. ಚನ್ನಪ್ಪ ಅವರು ಬಸವಣ್ಣನವರ ಜಯಂತಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳಾನ್ನಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಇತರರು ಉಪಸ್ಥಿತರಿದ್ದರು.




Wednesday, 17 April 2019

ಚಾಮರಾಜನಗರ ಲೋಕಸಭಾ ಚುನಾವಣೆ ಬಿರುಸಿನ ಮತದಾನ, ಮತಗಟ್ಟೆಯಲ್ಲಿ ಅದಿಕಾರಿಯೋರ್ವ ಹೃದಯಾಘಾತದಿಂದ ಸಾವು

ಚಾಮರಾಜನಗರದಲ್ಲಿ ಬಿರುಸಿನ ಮತದಾನ:ಹೃದಯಘಾತದಿಂದ ಹೆಚ್ಚುವರಿ ಮತಗಟ್ಟೆ ಅದಿಕಾರಿ ಸಾವು,   
 *ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ*  ಚಾಮರಾಜನಗರ: ಮುಂಜಾನೆಯಿಂದಲೆ ಪ್ರಾರಂಭವಾದ ಲೋಕಸಬಾ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಪ್ರಾರಂಭವಾಗಿದೆ.
*ಚಾಮರಾಜನಗರ ಪಟ್ಟಣದಲ್ಲಿದ್ದ ಮತಗಟ್ಟೆ ಸಂಖ್ಯೆ ೬೯ ರಲ್ಲಿ ಮತಯಂತ್ರ ಕೈ ಕೊಟ್ಟದ್ದರಿಂದ ಮತದಾರರು ಸರದಿ ಸಾಲು ಹೆಚ್ಚಾಯಿತು‌. ಜೊತೆಗೆ ವಯೋವೃದ್ದರನ್ನ ಕರೆ ತರಲು ವ್ಹೀಲ್ ಚೇರ್ ಇದ್ದರೂ ಅವರನ್ನ ಮಯಯಂತ್ರ ಸಮೀಪ ಕರೆದೋಯ್ಯಲು ಸ್ವಯಂ ಸೇವಕರಿಲ್ಲದೆ ಕಾಯಬೇಕಾದ ಸ್ಥಿತಿಯೂ ಎದುರಾಯಿತು. *ಚಾಮರಾಜನಗರ ಯಳಂದೂರು ತಾಲ್ಲೂಕಿನ ಉಪ್ಪಿನ ಮೋಳೆ ಗ್ರಾಮದಲ್ಲಿ  ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಾದ ಪುಟ್ಟರಂಗಶೆಟ್ಡಿ ಅವರ ಮತಗಟ್ಟೆ ೨೧೮ ರಲ್ಲಿ ಮತ ಚಲಾಯಿಸಲು ಹೋದಾಗ ಕೈ ಬೆರಳಿಗೆ ಷಾಹಿ ಹಾಕಿಸಿಕೊಂಡು ಮತ ಒತ್ತುವ ಸಂದರ್ಭದಲ್ಲಿ ಮತಯಂತ್ರ ಸುಮಾರು  ಒಂದೂವರೆ ಗಂಟೆಗಳ ಕಾಲ ಕೈ ಕೊಟ್ಟಿತು.
 * ಚಾಮರಾಜನಗರ ಮತಗಟ್ಟೆ ಸಂಖ್ಯೆ ೪೮ ರಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ ದುರ್ಘಟನೆಯೂ ನಡೆದಿದೆ.
*ಹೆಚ್ಚುವರಿ ಮತ ಗಟ್ಟೆ ಅದಿಕಾರಿ ಶಾಂತಮೂರ್ತಿ ಹೃದಯಘಾತದಿಂದ ಸಾವನ್ನಪ್ಪಿರುವ ದುರ್ದೈವಿ ಎಂದು ತಿಳಿದುಬಂದಿದೆ.
 *ಚಾಮರಾಜನಗರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ದ್ರುವ ನಾರಾಯಣ್ ಸ್ವ ಕ್ಷೇತ್ರ ಹೆಗ್ಗವಾಡಿಯಲ್ಲಿ ಮತ ಚಲಾಯಿಸಿದರು.        *ಚಾಮರಾಜನಗರ ಲೋಕಸಭಾ ಕ್ಷೇತ್ರದದಲ್ಲಿ ೭ ರಿಂದ 9 ಗಂಟೆ ವೇಳೆಗೆ ಶೇ.10.18%ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.




















ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು