ಯಶಸ್ವಿಯಾಗಿ ನಡೆದ ಮಂಟೇಸ್ವಾಮಿ ಕಥಾಪ್ರಸಂಗ ನಾಟಕ
---------------------------------
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
----------------------------
ಚಾಮರಾಜನಗರ: ಡಾ. ಎಚ್ ಎಸ್ ಶಿವಪ್ರಕಾಶ್ ಅವರ ರಚನೆಯಲ್ಲಿ ಮಂಜುನಾಥ್.(ಕಾಚಕ್ಕಿ ) ಅವರ ನಿರ್ದೇಶನದಲ್ಲಿ ಚಾಮರಾಜನಗರದ ಜೆ ಎಸ್ ಎಸ್ ಮಹಿಳಾ ಕಾಲೇಜು ವಿಧ್ಯಾರ್ಥಿನಿಯರ ಸಹಕಾರದಲ್ಲಿ ಚಾಮರಾಜನಗರ ಜೆಎಸ್ಎಸ್ ಕಾಲೇಜು ಆವರಣದಲ್ಲಿ ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕ ನಡೆಯಿತು.
------------------------------------------
ನಾಟಕದ ಕುರಿತು :
ನಾಟಕ ಪ್ರಾರಂಭವಾಗುವುದು ನೀಲಗಾರರಿಂದ, ಬಸವಣ್ಣ ಭಕ್ತ ಶರಣರ ಆಗಮನದ ನಿರೀಕ್ಷೆಯಲ್ಲಿ ಕುತೂಹಲದಿಂದ ಕಾಯುತ್ತಿರುವಾಗ ಮಂಟೇಸ್ವಾಮಿಯವರು ಭಂಗಿ ಸೇದುತ್ತಿದ್ದರೂ ಸಹ ಅವರನ್ನು ಬಸವಣ್ಣ ಮತ್ತು ನೀಲಾಂಬಿಕೆ ದಂಪತಿಗಳು ಪೂಜಿಸುತ್ತಾರೆ.
ಕಲ್ಯಾಣವನ್ನು ತೊರೆದ ನಂತರ ಮಂಟೇಸ್ವಾಮಿಯವರು ಕಡುಗಣ್ಣ ರಾಚಪ್ಪಾಜಿ ಮತ್ತು ದೊಡ್ಡಮ್ಮತಾಯಿಯೊಂದಿಗೆ ದಕ್ಷಿಣದ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ತನ್ನ ಏಳು ಪುನರ್ಜನ್ಮಗಳ ನಂತರ ನಿಡುಗಟ್ಟದ ಕೆಂಪಾಚಾರಿ ಮಂಟೇಸ್ವಾಮಿಯವರ ಶಿಶ್ಯನಾಗುತ್ತಾನೆ. ನಂತರ ಅವನು ಘನನೀಲಿ ಸಿದ್ದಪ್ಪಾಜಿಯಾಗಿ ರೂಪಾಂತರಗೊಂಡು ಹಲಗೂರಿನ ಪಾಂಚಾಲ ರಾಜರ ಅಹಂಕಾರವನ್ನು ಮುರಿದು ಅವರಿಂದ ಕಬ್ಬಿಣ ಆಯುಧಗಳನ್ನು ತಂದು ಅವರ ಗುರುಗಳಾದ ಮಂಟೇಸ್ವಾಮಿಯವರಿಗೆ ಪಾತಾಳಬಾವಿ ತೋಡಿಸಿಕೊಡುತ್ತಾರೆ. ಅಂತಿಮವಾಗಿ ಕಲಿಯುಗದ ಉನ್ನತಿಯನ್ನು ನೋಡಿದ ಮಂಟೇಸ್ವಾಮಿಯವರು ಪಾತಾಳೇಶ್ವರನೊಂದಿಗೆ ಒಂದಾಗುತ್ತಾರೆ.
ನಾಟಕಕಾರರ ಕುರಿತು :
ನಾಟಕಕಾರರಾದ ಡಾ. ಎಚ್. ಎಸ್. ಶಿವಪ್ರಕಾಶ್‍ರವರು ಏಳು ಕವನ ಸಂಕಲನಗಳು, ಹನ್ನೆರಡು ನಾಟಕಗಳು ಹಾಗೂ ಹಲವಾರು ಪುಸ್ತಕಗಳನ್ನ ಬರೆದಿದ್ದಾರೆ. ಇವರ ಕೃತಿಗಳನ್ನು ಇಂಗ್ಲೀಷ್, ಫ್ರೆಂಚ್, ಜರ್ಮನ್, ಹಿಂದಿ, ಮಲಯಾಳಂ, ಮರಾಠಿ ಮತ್ತು ತಮಿಳು ಭಾಷೆಗಳಿಗೆ ಅನುವಾದಿಸಲಾಗಿದೆ.
ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿಗಳು ಲಭಿಸಿದೆ..
ಸುತ್ತೂರು ಶ್ರೀಮಠದ ಜಗದ್ಗುರುಗಳಾದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯ ಎಂಬುದನ್ನು ಕಂಡುಕೊಂಡ ಧೀಮಂತ ಚೇತನ. ಅದಕ್ಕಾಗಿ ಅವರು ಗ್ರಾಮಾಂತರ ಪ್ರದೇಶಗಳಲ್ಲಿ ಶಾಲಾಕಾಲೇಜುಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗಾಗಿ ಉಚಿತ ಪ್ರಸಾದ ನಿಲಯಗಳನ್ನೂ ತೆರೆದರು. ಸಂಗೀತ, ಸಾಹಿತ್ಯ, ಕಲೆ, ಸಂಸ್ಕೃತಿ, ಜ್ಯೋತಿಷ್ಯ ಮುಂತಾದ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡುವ ಮೂಲಕ ಸಮಾಜದ ಸರ್ವತೋಮುಖ ಬೆಳವಣ ಗೆಗೆ ಕಾರಣರಾದರು.
ಶ್ರೀಮಠದ ಶೈಕ್ಷಣ ಕ ಚಟುವಟಿಕೆಗಳ ನಿರ್ವಹಣೆಗಾಗಿ ಶ್ರೀಗಳವರು 1954ರಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠವನ್ನು ಪ್ರಾರಂಭಿಸಿದರು. ಇಂದು ನೆರೆಯ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿರುವ 320ಕ್ಕೂ ಹೆಚ್ಚು ಸಂಸ್ಥೆಗಳು ಮಹಾವಿದ್ಯಾಪೀಠದ ಆಶ್ರಯದಲ್ಲಿ ಕೆಲಸ ಮಾಡುತ್ತಿವೆ.
ಜೆಎಸ್‍ಎಸ್ ಕಲಾಮಂಟಪ ಸ್ಥಾಪನೆ :ಭಾರತೀಯ ಕಲೆಗಳನ್ನು ಪೆÇ್ರೀತ್ಸಾಹಿಸುವ ಸಲುವಾಗಿ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಜೆಎಸ್‍ಎಸ್ ಮಹಾವಿದ್ಯಾಪೀಠದಿಂದ 1948ರಲ್ಲಿ ಜೆಎಸ್‍ಎಸ್ ಕಲಾಮಂಟಪವನ್ನು ಪ್ರಾರಂಭಿಸಿದರು. ವಿದ್ಯಾಪೀಠದ ಅಂಗಸಂಸ್ಥೆಗಳ ಹಿರಿಯ-ಕಿರಿಯ ಸಿಬ್ಬಂದಿಗಳು ಕಲಾಮಂಟಪದ ಕಲಾವಿದರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ನಾಟಕಕಾರರಾಗಿದ್ದ ಶ್ರೀ ಎಂ.ಸಿ. ಅಂಕಪ್ಪನವರ ಶ್ರೀ ಶಿವರಾತ್ರೀಶ್ವರ ವಿಜಯ, ಆದರ್ಶ ವಿವಾಹ, ಭೂಮೀಲ್ಹಿಕ್ಮತ್ತು ಸ್ವರ್ಗದಲ್ಲಿ ಕ್ಯಾನ್ವಾಸು, ಕಂಬಳಿ ನಾಗಿದೇವ ಮೊದಲಾದ ನಾಟಕಗಳು ಹಾಗೂ ತಿಪ್ಪೇರುದ್ರಸ್ವಾಮಿಯವರ ವಿರಚಿತ ಶ್ರೀ ನಿಜಗುಣ ಶಿವಯೋಗಿ ಇತ್ಯಾದಿ ನಾಟಕಗಳು ನಾಡಿನಾದ್ಯಂತ ಪ್ರದರ್ಶನಗೊಂಡಿವೆ.
ನಿರ್ದೇಶಕರ ಕುರಿತು :
ಮಂಜುನಾಥ್ (ಕಾಚಕ್ಕಿ)
ರು ಚಾಮರಾಜನಗರ ಜಿಲ್ಲೆಯ ರಾಮಸಮುದ್ರ ಗ್ರಾಮದವರು. ಇವರು ನೀನಾಸಂ ರಂಗತರಬೇತಿ ಪಡೆದುಕೊಂಡು ಹಲವು ಮಕ್ಕಳ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ಇವರು ಜೆಎಸ್‍ಎಸ್ ಪ್ರೌಢಶಾಲೆ, ಸಂತೆಮರಳ್ಳಿಯಲ್ಲಿ ಕಳೆದ ಹತ್ತು ವರ್ಷಗಳಿಂದ ನಾಟಕ ಶಿಕ್ಷಕರಾಗಿ, ಕಲಾಮಂಟಪದಲ್ಲಿ ನಟರಾಗಿ, ಬೇಸಿಗೆ ಶಿಬಿರಗಳು ಮತ್ತು ರಂಗೋತ್ಸವ ನಾಟಕಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಂಗೀತ ಸಂಯೋಜಕರ ಕುರಿತು:
ಚಂದ್ರಶೇಖರಾಚಾರ್ ಹೆಗ್ಗೊಠಾರ ಇವರು ಚಾಮರಾಜನಗರ ಜಿಲ್ಲೆಯ ಹೆಗ್ಗೊಠಾರ ಗ್ರಾಮದವರು. ಇವರು ನೀನಾಸಂ ರಂಗತರಬೇತಿ ಪಡೆದುಕೊಂಡು ಹಲವು ಮಕ್ಕಳ ನಾಟಕಗಳ ನಿರ್ದೇಶಿಸಿ ಸಂಗೀತ ನೀಡಿದ್ದಾರೆ. ಪ್ರಸ್ತುತ ಇವರು ಜೆಎಸ್‍ಎಸ್ ಪ್ರೌಢಶಾಲೆ, ಬರಗಿ, ಗುಂಡ್ಲುಪೇಟೆ ತಾ. ಇಲ್ಲಿ ನಾಟಕ ಶಿಕ್ಷಕರಾಗಿ, ಜೆಎಸ್‍ಎಸ್ ಕಲಾ ಮಂಟಪದಲ್ಲಿ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆಧುನಿಕ ನಾಟಕಗಳ ಪ್ರಯೋಗ :
ಶಾಲಾಕಾಲೇಜುಗಳಲ್ಲಿ ನಾಟಕಾಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ಕಲಾಮಂಟಪವು ರಂಗಭೂಮಿಯ ಹೊಸ ಆಯಾಮವನ್ನು ಅಳವಡಿಸಿಕೊಳ್ಳುವ ಪ್ರಯತ್ನವಾಗಿ ನಾಟಕರಚನಾ ಶಿಬಿರಗಳ ಮೂಲಕ ಪೆÇ್ರ. ಬಿ. ಸೋಮಶೇಖರಪ್ಪನವರು ರಚಿಸಿದ ಶ್ರೀ ಗಂಗಾಧರಸ್ವಾಮಿಯವರ ನಿರ್ದೇಶನದಲ್ಲಿ ದಿವ್ಯಚೇತನ ಶರಣಚರಿತಾಮೃತದ ಒಂದು ಭಾಗವನ್ನು ರಂಗರೂಪಕ್ಕೆ ಅಳವಡಿಸಿ, ಶ್ರೀ ಚಂದ್ರಶೇಖರಾಚಾರ್ ನಿರ್ದೇಶನದಲ್ಲಿ ಬಾಗಿದ ತಲೆಯ ಕೈ ಮುಗಿದ ಬಸವ, ಶ್ರೀಹರ್ಷನ ನಾಗಾನಂದ ಪೆÇ್ರ. ಹೆಚ್.ಎಸ್. ಉಮೇಶ್ ಅವರ ನಿರ್ದೇಶನದಲ್ಲಿ, ಶ್ರೀ ಲಿಂಗದೇವರು ಹಳೆಮನೆ ರಚಿಸಿದ ಕಲ್ಲರಳಿ ಹೂವಾಗಿ ಶ್ರೀಮತಿ ಸುಮತಿ ಕೆ.ಆರ್ ರವರ ನಿರ್ದೇಶನದಲ್ಲಿ ನಾಟಕಗಳನ್ನು ಪ್ರದರ್ಶಿಸಲಾಗಿದೆ.
ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮನ್ನಣೆ :
2009-10ನೇ ಸಾಲಿನಲ್ಲಿ ದೆಹಲಿಯಲ್ಲಿ ನಡೆದ ಜಶ್ನ್ ಎ ಬಚಪನ್ ನಾಟಕೋತ್ಸವದಲ್ಲಿ ಕುವೆಂಪು ವಿರಚಿತ ಕಿಂದರಿ ಜೋಗಿ ಶ್ರೀ ಹೆಚ್. ಜನಾರ್ಧನ್ (ಜನ್ನಿ) ನಿರ್ದೇಶನದದಲ್ಲಿ ನಾಟಕ ಪ್ರದರ್ಶನಗೊಂಡಿದೆ. ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ ಶ್ರೀಮತಿ ಸುಮತಿ ಕೆ.ಆರ್. ರವರ ನಿರ್ದೇಶನಲ್ಲಿ ಡಾ. ಎಚ್.ಎಸ್. ವೆಂಕಟೇಶ್‍ಮೂರ್ತಿ ರಚಿಸಿದ ಚಿತ್ರಪಟ ನಾಟಕವನ್ನು ಪ್ರದರ್ಶಿಸಲಾಯಿತು. ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತಮಾನೋತ್ಸವದ ಅಂಗವಾಗಿ ದಿವೃಚೇತನ ನಾಟಕವು ಶಾಲಾಕಾಲೇಜುಗಳ ಶತಮಾನೋತ್ಸವಗಳಲ್ಲಿ ಪ್ರದರ್ಶನಗಳು ಸೇರಿದಂತೆ 70 ಪ್ರದರ್ಶನಗಳನ್ನು ಕಂಡಿದ್ದಲ್ಲದೇ ರಾಜ್ಯದ ನಾನಾ ಭಾಗಗಳಲ್ಲಿ ಒಟ್ಟು 100ಕ್ಕೂ ಹೆಚ್ಚು ಪ್ರದರ್ಶನ ನೀಡಿ ಜನಮೆಚ್ಚುಗೆಗೆ ಪಾತ್ರವಾಗಿದೆ.
ಜೆಎಸ್‍ಎಸ್ ರಂಗೋತ್ಸವ :
ಮಕ್ಕಳ ರಂಗಭೂಮಿಗೆ ಹೆಚ್ಚು ಪೆÇ್ರೀತ್ಸಾಹ ಕೊಡಬೇಕೆಂಬ ನಿಟ್ಟಿನಲ್ಲಿ ಆರಂಭವಾದ ಜೆಎಸ್‍ಎಸ್ ರಂಗೋತ್ಸವವು ಈಗ 7ನೆಯ ವರ್ಷಕ್ಕೆ ಕಾಲಿಟ್ಟಿದೆ. 2011 ರಿಂದ 2019 ರವರೆಗೆ ಪ್ರದರ್ಶನಗೊಂಡಿರುವ ನಾಟಕಗಳಾದ ಪುಷ್ಪರಾಣ , ನಾಯಿಮರಿ, ಅಳಿಲು ರಾಮಾಯಣ, ಆಮನಿ, ನಾಣ ಭಟ್ಟನ ಸ್ವರ್ಗದ ಕನಸು, ರೆಕ್ಕೆ ಕಟ್ಟುವಿರಾ, ಝಂ ಝಾಂ ಆನೆ ಮತ್ತು ಪುಟ್ಟ, ಸರೀಸೃಪಗಳ ಸಭೆ, ಪಂಜರ ಶಾಲೆ, ಮಾನವಪುರದ ರಾಜಕುಮಾರಿ, ಗುಮ್ಮ, ಮೃಚ್ಛಕಟಿಕ, ಸಾಹೇಬರು ಬರುತ್ತಾರೆ, ನ್ಯಾಯಕ್ಕೆ ಜಯ, ಬೆಪ್ಪತಕ್ಕಡಿ ಬೋಳೆ ಶಂಕರ, ಜನಪದ ಜೋಗಿ, ಗೊಂಬೆ ರಾವಣ, ಸತ್ರು ಅಂದ್ರೆ ಸಾಯ್ತಾರಾ, ಮೈನಾ ಹಕ್ಕಿ, ದ್ರೋಣ ಪ್ರತಿಜ್ಞೆ, ಕಂಸಾಯಣ, ರಾಮಧಾನ್ಯ ಪ್ರಕರಣ, ಇಲಿ ಮಡಕೆ, ತಲೆಬಾಗದ ಜನ, ನಾಯಿತಿಪ್ಪ ನಾಟಕಗಳನ್ನು ಪ್ರದರ್ಶಿಸಲಾಗಿದೆ.
ಈ ವರ್ಷ ಚಂದ್ರಮುಖಿ, ತಿರುಕನ ಕನಸು ಮತ್ತು ಮಂಗಗಳ ಉಪವಾಸ ಹಾಗೂ ಮಂಟೇಸ್ವಾಮಿ ಕಥಾಪ್ರಸಂಗ ನಾಟಕಗಳು ಡಿಸೆಂಬರ್ ತಿಂಗಳಿನಲ್ಲಿ ಬೆಂಗಳೂರು, ಮೈಸೂರು ಮತ್ತು ಚಾಮರಾಜನಗರದಲ್ಲಿ ನಡೆಯುವ ಜೆ ಎಸ್ ಎಸ್ ರಂಗೋತ್ಸವದÀಲ್ಲಿ ಈ ನಾಟಕಗಳು ಪ್ರದರ್ಶನಗೊಳ್ಳತ್ತಿವೆ.
ಆಶಯ :
ಜೆಎಸ್‍ಎಸ್ ರಂಗೋತ್ಸವವು ಮಕ್ಕಳ ಸುಪ್ತಪ್ರತಿಭೆಯ ಪ್ರದರ್ಶನಕ್ಕೆ ಒಳ್ಳೆಯ ಅವಕಾಶವಾಗಿದೆ. ಅಲ್ಲದೆ, ಶಿಕ್ಷಣದಲ್ಲಿ ರಂಗಭೂಮಿ ಅಳವಡಿಕೆಯು ಎಲ್ಲಾ ಶಾಲೆಗಳಲ್ಲಿಯೂ, ಎಲ್ಲಾ ಮಕ್ಕಳಿಗೂ ಸಿಗಬೇಕಾದ ಅವಶ್ಯಕತೆಯಿದೆ. ಈ ದೃಷ್ಟಿಯಿಂದ ಜೆಎಸ್‍ಎಸ್ ಕಲಾಮಂಟಪವು ಪ್ರೌಢಶಾಲಾ ಮಕ್ಕಳಿಂದ 2 ನಾಟಕಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ 1 ನಾಟಕವನ್ನು ಸಿದ್ಧಪಡಿಸಿ ರಂಗೋತ್ಸವವನ್ನು ಆಯೋಜಿಸಿದೆ. ಇದರ ಪ್ರಯೋಜನವನ್ನು ಮಕ್ಕಳ ಜೊತೆಗೆ ಪೆÇೀಷಕರೂ ಪಡೆಯಲಿ ಎಂಬುದು ಜೆ ಎಸ್ ಎಸ್ ಕಲಾಮಂಟಪದ ಆಶಯವಾಗಿದೆ.
--------------------
@..ರಾಮಸಮುದ್ರ ಎಸ್. ವೀರಭದ್ರಸ್ವಾಮಿ
Pics by: M.Kaachakki
----------------
No comments:
Post a Comment