ಶಿಕ್ಷಣ ಸಚಿವರಾದ ತಾವು ಈ ಶಾಲೆಯ ಚಿತ್ರ ಬಹುಶಃ ತಾವು ನೋಡಿರಬಹುದೇನೋ ಎಂದು ಹೇಳುತ್ತಿರುವೆ. ಕಳೆದ ವಾರದ ಹಿಂದಷ್ಟೆ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ..
ಸುತ್ತ ಪೆಂಡಾಲ್ ಕವಿದುಕೊಂಡು ಈ ಕಟ್ಟಡ ತಮ್ಮನ್ನ ಮರೆ ಮಾಚಿಕೊಂಡಿತ್ತು ಹಾಗಿಯೇ ಗಂಬೀರ ವಿಚಾರ ಈ ಶಾಲೆ ಮುಚ್ಚುವ ಹಂತವನ್ನೂ ಕೂಡ ಕಂಡಿಕೊಂಡಿದೆ.
ಚಾಮರಾಜನಗರ ಪಟ್ಟಣದಿಂದ ಕೇವಲ ೩ ಕಿ.ಮಿ ಅಂತರದಲ್ಲಿರುವ ರಾಮಸಮುದ್ರ ಸಮೀಪ ಕ್ರಿಸ್ತರಾಜ ಬಾಲರಪಟ್ಟಣ ಶಾಲೆ ಎಂದರೆ ಸಾಕು ಹತ್ತಳ್ಳಿಗೆ ಯಜಮಾನ ಹೇಗೋ ಸುಮಾರು ಗ್ರಾಮದ ಜನರಿಗೆ ಶಿಕ್ಷಣ ನೀಡಿದ ಜ್ಞಾನ ಮಂದಿರ. ಇದು ಖಾಸಗೀ ಶಾಲೆಯಾದರೂ ಸರ್ಕಾರದ ಅನುದಾನಕ್ಕೋಳಪಟ್ಟ ಕನ್ನಡ ಮಾದ್ಯಮ ಶಾಲೆಯಾಗಿದೆ.
ಮೊದಲ ಹಂತದಲ್ಲಿ ಈಗ ಒಂದರಿಂದ ಐದನೇ ತರಗತಿಗಳು ಮುಚ್ಚಿ ಹೋಗಿದೆ.ಮುಚ್ಚಲು ಆದೇಶ ಯಾರು ಕೊಟ್ಟರೆಂಬ ಅನುಮಾನ ಈಗಲೂ ಕಾಡುತ್ತಿದೆ. ಉಳಿದಂತೆ ೬, ೭ ತರಗತಿಗಳು ಬಹುಶಃ ೬೨ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಓರ್ವ ಶಿಕ್ಷಕರಷ್ಟೆ ಅನುದಾನಿತ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ. ಉಳಿದಂತೆ ಆಡಳಿತ ವರ್ಗ ಇಬ್ಬರ ಶಿಕ್ಷಕರನ್ನ ಅತಿಥಿ ಶಿಕ್ಷಕರಾಗಿ ಮಾಡಿಕೊಂಡೊ ಏನೊ ಶಿಕ್ಷಣ ಬಂಡಿ ನಡೆಸಿ ಈಗ ಅದನ್ನು ನಿಲ್ಲಿಸಲು ಸಂಚು ನಡೆಸುತ್ತದೆ.
ದಯಮಾಡಿ ಹೆಚ್ಚಿನ ಪೀಠಿಕೆ ಹಾಕದೇ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ....
ಈಗ ಪ್ರವೇಶವನ್ನೆ ನಿಲ್ಲಿಸಿ ಹಂತ ಹಂತವಾಗಿ ಮುಚ್ಚುತ್ತಿರುವ ಈ ಶಾಲೆಗೆ ಕಟ್ಟು ನಿಟ್ಟಾಗಿ ಪ್ರವೇಶ ಮಾಡಿಕೊಂಡು ಶಾಲೆ ನಡೆಸುವಂತೆ ಡಿಡಿಪಿಐ & ಬಿಇಓ ಗಳಿಗೆ ಸೂಚನೆ ನೀಡಿ ಜ್ಞಾನ ಮಂದಿರ ಬೆಳಗಲು ಕಾರಣರಾಗಬೇಕೆಂದು ಕೋರುತ್ತೇವೆ.
----------
ಕೆಲವು ವ್ಯಾಕರಣ ಪದಗಳು ಲೋಪವಾಗಿದ್ದರೆ ವಿಷಾದವಿರಲಿ.. ಮೊಬೈಲ್ ಅಲ್ಲಿ ಟೈಪ್ ಮಾಡುತ್ತಿದ್ದು ಸಾದ್ಯತೆ ಇರುತ್ತದೆ. ಆದರೂ ಎಚ್ಚರ ವಹಿಸಿ ಬರೆಯುತ್ತಿರುವೆ..ತಪ್ಪಿದ್ದರೆ ಕ್ಷಮೆಯಿರಲಿ.
ಇಂತಿ....ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
ಹಳೆಯ ವಿದ್ಯಾರ್ಥಿ.
9480030980

ಸಾರ್ವಜನಿಕರಿಗೊಂದು ಮಾತು.....ನೀವು ಓದಿದ ಶಾಲೆ ನಿಮಗೆ ಬೇಡವಾದೀತೆ..ನಿಮ್ಮ ಮಕ್ಕಳಿಗೆ ಕನ್ನಡ ಮಾದ್ಯಮ ಬೇಡವೆಂದದ್ದರಿಂದೇನೋ ಈ ಸ್ಥಿತಿಗತಿ...ಶಿಕ್ಷಕರಾಗಿದ್ದೀರಾ, ವೈದ್ಯರಾಗಿದ್ದೀರಾ,ಇಂಜಿನಿಯರ್ ಆಗಿದ್ದೀರಾ,ಹೋರಾಟಗಾರರಾಗಿದ್ದೀರಾ.ಪತ್ರಕರ್ತರಾಗಿದ್ದೀರಾ.ಚಲನ ಚಿತ್ರ ನಟರಾಗಿದ್ದೀರಾ, ಕೃಷಿಕರಾಗಿದ್ದೀರಾ, ಜನಪ್ರತಿನಿದಿಗಳಾಗಿದ್ದೀರಾ ಆದರೆ ಒಬ್ಬನೂ ಈ ಶಾಲೆ ಉಳಿಸಬೇಕು ಎಂದು ಮುಂದೆ ಬರಲಿಲ್ಲವಲ್ಲ..ನಿಜಕ್ಕೂ ರಾಮಸಮುದ್ರದ ೫ ಹಾಲಿ ನಗರಸಬಾ ಸದಸ್ಯರು, ಮಾಜಿ ಸದಸ್ಯರು, ಮಾಜಿ ಜಿ.ಪಂ./ನ.ಸ.ಅದ್ಯಕ್ಷರು.ಪತ್ರಕರ್ತರಾದವರಿಗೂ ಬೇಡವಾಯಿತಾ!? ಈ ಜ್ಞಾನ ಮಂದಿರ..!?
----------
No comments:
Post a Comment