Sunday, 23 September 2018

23-09-2018 (ಇಷ್ಟಕ್ಕೂ ರಾಮಸಮುದ್ರ ಎಸ್. ವೀರಭದ್ರಸ್ವಾಮಿ ಪ್ರತಿಭಟನೆ ಮಾಡಿದ್ದೇಕೆ,? ಪೂರ್ತಿ ಓದದೇ ಲೈಕ್ ಕೊಡಬೇಡಿ,ಶೇರ್ ಮಾಡಬೇಡಿ.ನೆನಪಿರಲಿ.. ಮಾದ್ಯಮದವರು ಪ್ರಚಾರ ಕೊಡದಿದ್ದೇಕೆ,?)

ಕರ್ತವ್ಯಲೋಪವೆಸಗಿದ್ದಾರೆ ಎನ್ನಲಾದ ಅದಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿ ಏಕಾಂಗಿ ಪ್ರತಿಭಟನೆ 

ಚಾಮರಾಜನಗರ: ಕರ್ತವ್ಯಲೋಪವೆಸಗಿದ್ದಾರೆ ಎನ್ನಲಾದ ಅದಿಕಾರಿಗಳನ್ನು ಅಮಾನತು ಮಾಡುವುದು ಸೇರಿದಂತೆ ವಿವಿದ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದಲ್ಲಿ ಏಕಾಂಗಿಯಾಗಿ ಪ್ರತಿಭಟಿಸಲಾಯಿತು.
ಬಹುತೇಕವಾಗಿ ಬರುವ ಪೊನ್ ಇನ್ ಕಾರ್ಯಕ್ರಮದಲ್ಲಿ ಸಮಸ್ಯೆಗಳಿಗಿಂತ ನಿದ್ದೆ ಮಾಡುವ ಅದಿಕಾರಿಗಳೆ ದೊಡ್ಡ ಸಮಸ್ಯೆಯಾಗಿ ಯಾವುದೇ ಸಮಸ್ಯೆಗಳಿಗೂ ಪರಿಹಾರ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂತಹವರು ಜಿಲ್ಲಾದಿಕಾರಿಗಳು ಕ್ರಮಜರುಗಿಸದೇ ಇರುವುದು ಜಿಲ್ಲಾದಿಕಾರಿಗಳ ಬೇಜವಬ್ದಾರಿತನ ತೋರಿಸುತ್ತಿದೆ ಎಂದು ಆರೋಪಿಸಲಾಯಿತು.

ಬಹುತೇಕ ಅದಿಕಾರಿಗಳು ತಮ್ಮ ಕೆಲಸಗಳನ್ನು ಕಾಟಾಚಾರವಾಗಿ ನಿರ್ವಹಿಸುವುದರ ಜೊತೆ ಸರಿಯಾಗಿ ಹಾಜರಾಗದೇ ಸಾರ್ವಜನಿಕ ಕೆಲಸಗಳು ಮಂದಗತಿಯಲ್ಲಿ ನಡೆಯುತ್ತಿದೆ ಇದಕ್ಕೆ ಪೂರಕ್ಕ ಎಂಬಂತೆ ಇತ್ತೀಚೆಗೆ ಜಿ.ಪಂ..ಸಿ.ಇ.ಓ ಹರೀಶ್ ಕುಮಾರ್ ಅವರೇ ಖುದ್ದು ಕಚೇರಿಗೆ ಹೋಗುವ ಮೂಲಕ ತಪ್ಪನ್ನು ಕಂಡುಹಿಡಿದಿದ್ದಾರೆ. ಆದರೂ ಈ ಪ್ರಕ್ರತಿಯೆಗಳು ನಿಲ್ಲದ ಕಾರಣ ಕಚೇರಿಗಳಿಗೆ ಕಡ್ಡಾಯವಾಗಿ ತಂಬ್ ಇಂಪ್ರೆಷನ್ ಅಳವಡಿಸಿಬೇಕು.
ಪೋನ್ ಇನ್ ಪ್ರೊಗ್ರಾಂ ಅಲ್ಲಿ ಗಮನ ಸೆಳೆದ ವಿಚಾರವಾಗಿ ಕಟ್ಟುನಿಟ್ಟು ಕ್ರಮ ಜರುಗಿಸಬೇಕಾದ ಬಹುತೇಕ ಅದಿಕಾರಿಗಳು ಪರಿಶೀಲನೆ ಮಾಢದೇ ಕೂತಲ್ಲೆ ವರದಿ ಸಿದ್ದಪಡಿಸಿ ಕರ್ತವ್ಯಲೋಪವೆಸಗಿದ ಇವರನ್ನು ಅಮಾನತು ಮಾಢಬೇಕು ಹಾಗೂ ಜಿಲ್ಲಾದಿಕಾರಿ ಅವರ ಬಳಿ ಬಹಿರಂಗ ಕ್ಷಮೆಯಾಚಿಸಬೇಕು.
ಕೇಂದ್ರಸ್ಥಾನದಲ್ಲಿರಬೇಕಾಧ ಅದಿಕಾರಿಗಳು ಕೇಂದ್ರಸ್ಥಾನದಲ್ಲಿರದೇ ಸಮಯ ವ್ಯಯಮಾಡುತ್ತಿರುವವರ ವಿರುದ್ದ ಕ್ರಮ ಜರುಗಿಸಿಬೇಕು. ಕೆಲವು ಶಿಕ್ಷಕರ/ಉಪನ್ಯಾಸಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವುದು ಹಾಗೂ ಇದಕ್ಕೆ ಕಾರಣಕರ್ತರಾದ ಪ್ರಾಂಶುಪಾಲರ ವೇತನವನ್ನು ತಡೆಹಿಡಿಯುವುದು.
 ಪೊಲೀಸ್ ಇಲಾಖೆ ಸ್ಪಷ್ಟವಾಗಿ ಪಟ್ಟಣದಲ್ಲಿ ಅದಿಕೃತವಾಗಿ ಅಕ್ರಮ ಚಟುವಟಿಕೆಗಳನ್ನು  ನಡೆಯುತ್ತಿದ್ದು ಎಂದು ವರದಿ ನೀಢಿದ್ದು ಸದರಿ ಮೈನ್ ಎಜುಕೇಷನ್ ಟ್ರಸ್ಟ್ ಎಂಬ ನಕಲಿ ಸಂಸ್ಥೆ 15 ವರ್ಷಗಳಿಂದಲೂ ತೆರಿಗೆ ಕಟ್ಟದೇ ಸರ್ಕಾರ ವಂಚಿಸುವುದರ ಜೊತೆಗೆ ಪೋಲೀಸರಿಗೂ ತಪ್ಪು ಮಾಹಿತಿ ನೀಡಿದ್ದು, ಸಂಸ್ಥೆಯವರ ವಿರುದ್ದ ಕ್ರಮ ಪೊಲೀಸ್ ಇಲಾಖೆ ಕ್ರಮ ಜರುಗಿಸುವುದು.
ಅಕ್ರಮ ಚಟುವಟಿಕೆ ನಡೆಸುತ್ತಿರುವ ಕಟ್ಟಡಗಳಿಗೆ, ಪಿ.ಜಿ.ಸೆಂಟರ್ ಗಳು ತೆರಿಗೆ ಪಾವತಿಸದೇ ವಂಚಿಸುತ್ತಿಸುತ್ತಿದ್ದ ನಗರಸಬಾ ಆಯುಕ್ತರು ನಿದ್ದೆಯಲಕ್ಲಿದ್ದು ಅವರು ತ್ವರಿತವಾಗಿ ತೆರಿಗೆ ಕಟ್ಟಿದ್ದಾರೆಯೇ ಇಲ್ಲವೂ? ಅಕ್ರಮವೋ ಸಕ್ರಮವೋ ಎಂದು ಪರಿಶೀಲಸಿ. ಅಕ್ರಮವಾಗಿದ್ದರೆ ಕಟ್ಟಡ ತೆರವು ಮಾಡಲು ನಗರಸಬೆ ಅದಿಕಾರಿಗಳಿಗೆ ಸೂಚಿಸುವುದು ಇದನ್ನು 48 ಗಂಟೆಯೊಳಗೆ ಮಾಹಿತಿಯನ್ನು ಜಿಲ್ಲಾದಿಕಾರಿಗಳಿಗೆ ನೀಢುವಂತೆ ಆಗ್ರಹಿಸಿದರು
ಬಹುತೇಕ ಹಾಸ್ಟಲ್ ಗಳಲ್ಲಿ ಬಾಗಿಲೆ ಇಲ್ಲದೇ ಭದ್ರತೆ ಕೊರತೆ ಎದುರಾಗಿದೆ ಎಲ್ಲಾ ಕಡೆ ಸಿ.ಸಿ.ಕ್ಯಾಮೆರಾ ಅಳವಡಿಸಿ ವಸತಿನಿಲಯಗಳ ಸುರಕ್ಷತೆಯನ್ನ ಕಾಪಾಡುವುದು
ಜಿಲ್ಲೆಯದಾದ್ಯಂತ ಮಾನಸಿಕ ಅಸ್ವಸ್ಥರು ಹೆಚ್ಚುತ್ತಿದ್ದು ಅವರಿಗೆ ಸೂಕ್ತ ನೆಲೆಯನ್ನು ಇದುವರೆಗೂ ಕಲ್ಪಿಸಲು ಮುಂದಾಗದ ಅಧಿಕಾರಿಗಳಿಗೆ ಸೂಕ್ತ ಸಲಹೆ ನೀಡುವುದು ಹಾಗೂ ಕಣ್ಣೆದುರು ಸಿಕ್ಕರೆ ಅವರಿಗೆ ಬದುಕಲು ಸೂಕ್ತ ವ್ಯವಸ್ಥೆ ನೀಡಿಸುವುದು. ಎಲ್ಲಕ್ಕಿಂತ ಮಿಗಿಲಾಗಿ ಶಿಥಿಲ ಅವಸ್ಥೆ ಅಲ್ಲಿ ಸಾಯುತ್ತಿರುವ ಹಂತದಲ್ಲಿರುವ ಪಟ್ಟಣ ಠಾಣೆಯ ಕಟ್ಟಡವನ್ನ  ಬೇರೆಡೆ ವರ್ಗಾಯಿಸುವಂತೆ ಜಿಲ್ಲಾದಿಕಾರಿ ಹಾಗೂ ಹೆಚ್ಚುವರಿ ಪೋಲೀಸ್ ವರೀಷ್ಟಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೆಲವು ಗಂಬೀರ ಸಮಸ್ಯೆಗಳು ಬಗೆಹರಿಯದೇ ಇದ್ದಲ್ಲಿ 72 ಗಂಟೆಯ ನಂತರ ಮತ್ತೆ ಪ್ರತಿಭಟನೆ ಕÀುಳಿತು ಸಂಬಂದಿಸಿದ ಅದಿಕಾರಿಗಳನ್ನು ಅಲ್ಲಿಗೆ ಕರೆಯಿಸಿ ಉತ್ತರ ನೀಡಬೇಕಾಗುತ್ತದೆ ಎಲ್ಲವಾದರೆ ಮುಂದಾಗುವ ಕಾನೂನಾತ್ಮಕ ಹೋರಾಟಕ್ಕೆ ಜಿಲ್ಲಾಡಳಿತ ಸಜ್ಜಾಗಬೇಕಾಗುತ್ತದೆ ಎಂದು ತಿಳಿಸಲಾಯಿತು.
ಕೆಲವು ಮಾದ್ಯಮದವರು ಕೆಲವು ಅದಿಕಾರಿಗಳ  ಸಹಯೋಗದಿಂದಿಗೆ ಇರುವ ಕಾರಣ ಸುದ್ದಿಯನ್ನು ಮರೆಮಾಚಿದ್ದಾರೆ. ಆದರೆ ಸುದ್ದಿ‌ಹಾಕಿ ಎಂದು ಪತ್ರಿಕಾ ಪ್ರಕಟನೆಯನ್ನು ಕೊಟ್ಟಿಲ್ಲ.‌ಹಣ ಕೊಟ್ಟು ಹಾಕಿಸಿಕೊಳ್ಳುವ ದರಿದ್ರ ನನಗಿಲ್ಲ...
ಆದರೆ ಈಗ  ನಾವು ಪಡೆದ ಅಂಬೇಡ್ಕರ್ ಅವರ ಆಶೀರ್ವಾದೊಂದಿಗಿನ ಹೋರಾಟ ಮೊದಲ ಹಂತದ್ಲೆ ಯಶಸ್ವಿಯಾಗಿದೆ.
ಬಹುತೇಕರಿಗೆ ಗೊಂದಲ ಒಂದು ಉಂಟಾಗಿದೆ..ಅದಕ್ಕೆ ಒಂದೆ ಸಾಲಿನಲ್ಲಿ ನನ್ನ ಉತ್ತರ ಇಷ್ಟೆ.. ಹುಟ್ಟಿನಿಂದ ಸಾಯುವ ಪ್ರತಿ ಜೀವಿಗಳಿಗೂ ಅನುಕೂಲವಾಗಲೆಂದು ಸಂವಿಧಾನದ....ಭಂಡಾರ ಬರೆದಿದ್ದಾರೆ ........ಅಲ್ಲೆ ಶಿಕ್ಷಣ ಸಂಘಟನೆ ಹೋರಾಟದ ಮಹತ್ವವನ್ನೂ ಸಾರಿದ್ದಾರೆ ಇದು ಮುಂದೆ ನಿಮಗೆ ಅನಿವಾರ್ಯವಾಗಬಹುದು...........
*********************
ಕರ್ತವ್ಯಲೋಪವೆಸಗಿದ್ದಾರೆ ಎನ್ನಲಾದ ಅದಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿ ಏಕಾಂಗಿ ಪ್ರತಿಭಟನೆ
ಚಾಮರಾಜನಗರ: ಕರ್ತವ್ಯಲೋಪವೆಸಗಿದ್ದಾರೆ ಎನ್ನಲಾದ ಅದಿಕಾರಿಗಳನ್ನು ಅಮಾನತು ಮಾಡುವುದು ಸೇರಿದಂತೆ ವಿವಿದ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದಲ್ಲಿ ಏಕಾಂಗಿಯಾಗಿ ಪ್ರತಿಭಟಿಸಲಾಯಿತು.
ಬಹುತೇಕವಾಗಿ ಬರುವ ಪೊನ್ ಇನ್ ಕಾರ್ಯಕ್ರಮದಲ್ಲಿ ಸಮಸ್ಯೆಗಳಿಗಿಂತ ನಿದ್ದೆ ಮಾಡುವ ಅದಿಕಾರಿಗಳೆ ದೊಡ್ಡ ಸಮಸ್ಯೆಯಾಗಿ ಯಾವುದೇ ಸಮಸ್ಯೆಗಳಿಗೂ ಪರಿಹಾರ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂತಹವರು ಜಿಲ್ಲಾದಿಕಾರಿಗಳು ಕ್ರಮಜರುಗಿಸದೇ ಇರುವುದು ಜಿಲ್ಲಾದಿಕಾರಿಗಳ ಬೇಜವಬ್ದಾರಿತನ ತೋರಿಸುತ್ತಿದೆ ಎಂದು ಆರೋಪಿಸಲಾಯಿತು.

ಬಹುತೇಕ ಅದಿಕಾರಿಗಳು ತಮ್ಮ ಕೆಲಸಗಳನ್ನು ಕಾಟಾಚಾರವಾಗಿ ನಿರ್ವಹಿಸುವುದರ ಜೊತೆ ಸರಿಯಾಗಿ ಹಾಜರಾಗದೇ ಸಾರ್ವಜನಿಕ ಕೆಲಸಗಳು ಮಂದಗತಿಯಲ್ಲಿ ನಡೆಯುತ್ತಿದೆ ಇದಕ್ಕೆ ಪೂರಕ್ಕ ಎಂಬಂತೆ ಇತ್ತೀಚೆಗೆ ಜಿ.ಪಂ..ಸಿ.ಇ.ಓ ಹರೀಶ್ ಕುಮಾರ್ ಅವರೇ ಖುದ್ದು ಕಚೇರಿಗೆ ಹೋಗುವ ಮೂಲಕ ತಪ್ಪನ್ನು ಕಂಡುಹಿಡಿದಿದ್ದಾರೆ. ಆದರೂ ಈ ಪ್ರಕ್ರತಿಯೆಗಳು ನಿಲ್ಲದ ಕಾರಣ ಕಚೇರಿಗಳಿಗೆ ಕಡ್ಡಾಯವಾಗಿ ತಂಬ್ ಇಂಪ್ರೆಷನ್ ಅಳವಡಿಸಿಬೇಕು.
ಪೋನ್ ಇನ್ ಪ್ರೊಗ್ರಾಂ ಅಲ್ಲಿ ಗಮನ ಸೆಳೆದ ವಿಚಾರವಾಗಿ ಕಟ್ಟುನಿಟ್ಟು ಕ್ರಮ ಜರುಗಿಸಬೇಕಾದ ಬಹುತೇಕ ಅದಿಕಾರಿಗಳು ಪರಿಶೀಲನೆ ಮಾಢದೇ ಕೂತಲ್ಲೆ ವರದಿ ಸಿದ್ದಪಡಿಸಿ ಕರ್ತವ್ಯಲೋಪವೆಸಗಿದ ಇವರನ್ನು ಅಮಾನತು ಮಾಢಬೇಕು ಹಾಗೂ ಜಿಲ್ಲಾದಿಕಾರಿ ಅವರ ಬಳಿ ಬಹಿರಂಗ ಕ್ಷಮೆಯಾಚಿಸಬೇಕು.
ಕೇಂದ್ರಸ್ಥಾನದಲ್ಲಿರಬೇಕಾಧ ಅದಿಕಾರಿಗಳು ಕೇಂದ್ರಸ್ಥಾನದಲ್ಲಿರದೇ ಸಮಯ ವ್ಯಯಮಾಡುತ್ತಿರುವವರ ವಿರುದ್ದ ಕ್ರಮ ಜರುಗಿಸಿಬೇಕು. ಕೆಲವು ಶಿಕ್ಷಕರ/ಉಪನ್ಯಾಸಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವುದು ಹಾಗೂ ಇದಕ್ಕೆ ಕಾರಣಕರ್ತರಾದ ಪ್ರಾಂಶುಪಾಲರ ವೇತನವನ್ನು ತಡೆಹಿಡಿಯುವುದು.
 ಪೊಲೀಸ್ ಇಲಾಖೆ ಸ್ಪಷ್ಟವಾಗಿ ಪಟ್ಟಣದಲ್ಲಿ ಅದಿಕೃತವಾಗಿ ಅಕ್ರಮ ಚಟುವಟಿಕೆಗಳನ್ನು  ನಡೆಯುತ್ತಿದ್ದು ಎಂದು ವರದಿ ನೀಢಿದ್ದು ಸದರಿ ಮೈನ್ ಎಜುಕೇಷನ್ ಟ್ರಸ್ಟ್ ಎಂಬ ನಕಲಿ ಸಂಸ್ಥೆ 15 ವರ್ಷಗಳಿಂದಲೂ ತೆರಿಗೆ ಕಟ್ಟದೇ ಸರ್ಕಾರ ವಂಚಿಸುವುದರ ಜೊತೆಗೆ ಪೋಲೀಸರಿಗೂ ತಪ್ಪು ಮಾಹಿತಿ ನೀಡಿದ್ದು, ಸಂಸ್ಥೆಯವರ ವಿರುದ್ದ ಕ್ರಮ ಪೊಲೀಸ್ ಇಲಾಖೆ ಕ್ರಮ ಜರುಗಿಸುವುದು.
ಅಕ್ರಮ ಚಟುವಟಿಕೆ ನಡೆಸುತ್ತಿರುವ ಕಟ್ಟಡಗಳಿಗೆ, ಪಿ.ಜಿ.ಸೆಂಟರ್ ಗಳು ತೆರಿಗೆ ಪಾವತಿಸದೇ ವಂಚಿಸುತ್ತಿಸುತ್ತಿದ್ದ ನಗರಸಬಾ ಆಯುಕ್ತರು ನಿದ್ದೆಯಲಕ್ಲಿದ್ದು ಅವರು ತ್ವರಿತವಾಗಿ ತೆರಿಗೆ ಕಟ್ಟಿದ್ದಾರೆಯೇ ಇಲ್ಲವೂ? ಅಕ್ರಮವೋ ಸಕ್ರಮವೋ ಎಂದು ಪರಿಶೀಲಸಿ. ಅಕ್ರಮವಾಗಿದ್ದರೆ ಕಟ್ಟಡ ತೆರವು ಮಾಡಲು ನಗರಸಬೆ ಅದಿಕಾರಿಗಳಿಗೆ ಸೂಚಿಸುವುದು ಇದನ್ನು 48 ಗಂಟೆಯೊಳಗೆ ಮಾಹಿತಿಯನ್ನು ಜಿಲ್ಲಾದಿಕಾರಿಗಳಿಗೆ ನೀಢುವಂತೆ ಆಗ್ರಹಿಸಿದರು
ಬಹುತೇಕ ಹಾಸ್ಟಲ್ ಗಳಲ್ಲಿ ಬಾಗಿಲೆ ಇಲ್ಲದೇ ಭದ್ರತೆ ಕೊರತೆ ಎದುರಾಗಿದೆ ಎಲ್ಲಾ ಕಡೆ ಸಿ.ಸಿ.ಕ್ಯಾಮೆರಾ ಅಳವಡಿಸಿ ವಸತಿನಿಲಯಗಳ ಸುರಕ್ಷತೆಯನ್ನ ಕಾಪಾಡುವುದು
ಜಿಲ್ಲೆಯದಾದ್ಯಂತ ಮಾನಸಿಕ ಅಸ್ವಸ್ಥರು ಹೆಚ್ಚುತ್ತಿದ್ದು ಅವರಿಗೆ ಸೂಕ್ತ ನೆಲೆಯನ್ನು ಇದುವರೆಗೂ ಕಲ್ಪಿಸಲು ಮುಂದಾಗದ ಅಧಿಕಾರಿಗಳಿಗೆ ಸೂಕ್ತ ಸಲಹೆ ನೀಡುವುದು ಹಾಗೂ ಕಣ್ಣೆದುರು ಸಿಕ್ಕರೆ ಅವರಿಗೆ ಬದುಕಲು ಸೂಕ್ತ ವ್ಯವಸ್ಥೆ ನೀಡಿಸುವುದು. ಎಲ್ಲಕ್ಕಿಂತ ಮಿಗಿಲಾಗಿ ಸಾಯುತ್ತಿರುವ ಹಂತದಲ್ಲಿರುವ ಪಟ್ಟಣ ಠಾಣೆಯನ್ನು ಬೇರೆಡೆ ವರ್ಗಾಯಿಸುವಂತೆ ಜಿಲ್ಲಾದಿಕಾರಿ ಹಾಗೂ ಹೆಚ್ಚುವರಿ ಪೋಲೀಸ್ ವರೀಷ್ಟಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೆಲವು ಗಂಬೀರ ಸಮಸ್ಯೆಗಳು ಬಗೆಹರಿಯದೇ ಇದ್ದಲ್ಲಿ 72 ಗಂಟೆಯ ನಂತರ ಮತ್ತೆ ಪ್ರತಿಭಟನೆ ಕÀುಳಿತು ಸಂಬಂದಿಸಿದ ಅದಿಕಾರಿಗಳನ್ನು ಅಲ್ಲಿಗೆ ಕರೆಯಿಸಿ ಉತ್ತರ ನೀಡಬೇಕಾಗುತ್ತದೆ ಎಲ್ಲವಾದರೆ ಮುಂದಾಗುವ ಕಾನೂನಾತ್ಮಕ ಹೋರಾಟಕ್ಕೆ ಜಿಲ್ಲಾಡಳಿತ ಸಜ್ಜಾಗಬೇಕಾಗುತ್ತದೆ ಎಂದು ತಿಳಿಸಲಾಯಿತು.

..

Thursday, 13 September 2018

ಪತ್ರಕರ್ತರ ಸಂಘ ಚಾಮರಾಜನಗರದಲ್ಲಿ ಎಷ್ಟಿದೆ ಗೊತ್ತಾ!?


ನಮ್ಮ ಚಾಮರಾಜನಗರ
#ಪತ್ರಕರ್ತರ #ಬಗ್ಗೆ ನೀವು #ತಿಳಿಯಬೇಕಾದ #ಪ್ರಮುಖ #ಅಂಶಗಳು.
 ಮಾನ್ಯತೆ   ಪಡೆದ ಹಾಗೂ ಪಡೆಯದ ಸಂಘಗಳ ರಾಜ್ಯಾದ್ಯಂತ ಚಾಲ್ತಿಯಲ್ಲಿರೋದು ಸಹಜ. ಆದರೆ ನಮ್ಮೂರಲ್ಲಿ ಕಾರ್ಯನಿರತ ಸಂಘ, ಜಿಲ್ಲಾ ಪತ್ರಕರ್ತರ ಸಂಘ,ವರದಿಗಾರ ಕೂಟ,ಮಾಸ ಹಾಗೂ ವಾರ ಪತ್ರಿಕೆಗಳ ಸಂಘ ರಾರಾಜಿಸುತ್ತದೆ. ಕೆಲವೊಬ್ಬರು ಯಾವುದೇ ಗುಂಪಿನಲ್ಲಿ ಇರೋದೆ ಇಲ್ಲ..ಅದಿಕೃ ಸರ್ಕಾರ ಇಲಾಖೆ ಪಟ್ಟಿಯಲ್ಲಿರುತ್ತಾರೆ. ನೊಂದಣಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪತ್ರಕರ್ತರ ರ್ಸಂಘ ಬಿಟ್ಟರೆ ಯಾವುದೂ ನೊಂದಣಿಯಾಗಿಲ್ಲ. ಜೊತೆಗೆ ವಿಪರ್ಯಾಸವೆಂದರೆ ವಾಟ್ಸಾಪ್ ಗುಂಪು ನೋಡುತ್ತಿದ್ದರೆ.ಜಿಲ್ಲೆಯಲ್ಲಿ .೪೦ರಿಂದ ೬೦ ಗುಂಪುಗಳು..ಒಂದು ಗುಂಪಲ್ಲಿದ್ದವರು ಮತ್ತೊಂದು ಗುಂಪಿನಲ್ಲಿ ಇರೋದೇ ಇಲ್ಲ. ಹಾಗಿದ್ದರೆ ಎಷ್ಟು ಗುಂಪುಗಳಿದ್ದಾರೆ ಎಂದು ನೋಡುತ್ತಾ ಇದ್ದರೆ ವಾಹನಗಳು ಅಷ್ಟೆ (Press) ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.

Saturday, 8 September 2018

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಚಾಲನೆ (01-09-2018)

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಚಾಲನೆ

ಚಾಮರಾಜನಗರ, ಸೆ.1 - ಭಾರತೀಯ ಅಂಚೆ ಇಲಾಖೆಯ ಮಹತ್ವದ ಕ್ರಾಂತಿಯಂದೆ ಭಾವಿಸಲಾಗಿರುವ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಜಿಲ್ಲೆಯಲ್ಲೂ ಸಹ ಇಂದು ಅದ್ದೂರಿಯಾಗಿ ಆರಂಭಗೊಂಡಿತು.
ನಗರದ ವಾಲ್ಮೀಕಿ ಭವನದಲ್ಲಿ ಭಾರತೀಯ ಅಂಚೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಶಾಖೆಗೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಭಾರತೀಯ ಅಂಚೆ ಇಲಾಖೆಗೆ ತನ್ನದೆ ಆದ ಮಹತ್ವ ಇದೆ. ಬ್ಯಾಂಕಿಂಗ್ ವಲಯಕ್ಕೂ ಇಲಾಖೆ ಹೆಜ್ಜೆ ಇಡುವ ಮೂಲಕ ಪ್ರಸ್ತುತ  ಸಂದರ್ಭಕ್ಕೆ ಅವಶ್ಯಕತೆಗೆ ಅನುಗುಣವಾಗಿ ತೆರೆದು ಕೊಂಡಿರುವುದು ಉತ್ತಮವಾಗಿದೆ ಎಂದರು.
ಬ್ಯಾಂಕ್ ಸೌಲಭ್ಯಗಳು ಪಟ್ಟಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ಎಲ್ಲ ಗ್ರಾಮೀಣ ಭಾಗಗಳಿಗೂ ತಲುಪುವಂತಾಗಬೇಕು ಈ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅರಂಭಿಸಿದೆ. ಈ ಕಾರ್ಯ ಯಶಸ್ವಿಯಾಗಲಿ ಎಂದು ಜಿಲ್ಲಾಧಿಕಾರಿ ಶುಭ ಹಾರೈಸಿದರು.
 ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್, ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಚೆ ಇಲಾಖೆಯು ಸಹ ಬ್ಯಾಂಕ್ ವಲಯಕ್ಕೆ ಕಾಲಿರಿಸಿರುವುದು ಹೆಮ್ಮೆಯ ವಿಷಯವಾಗಿದೆ. ಸರ್ಕಾರಿ ಇಲಾಖೆಯೂ ಬ್ಯಾಂಕ್ ಕ್ಷೇತ್ರಕ್ಕೂ ಮುಂದಾಗಿರುವುದು ವಿಶಿಷ್ಠವಾಗಿದೆ. ಪ್ರೀತಿ, ನಂಬಿಕೆ ಉಳಿಸಿಕೊಂಡು ಬ್ಯಾಂಕ್ ಕಾರ್ಯ ನಿರ್ವಹಿಸುವಂತಾಗಲಿ ಎಂದು ಆಶಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದರ್‍ಕುಮಾರ್‍ಮೀನಾ ಮಾತನಾಡಿ ಅಂಚೆ ಇಲಾಖೆಗೆ 150 ವರ್ಷಗಳ ಇತಿಹಾಸವಿದೆ. ಅರ್ಥಿಕ ಸೇರ್ಪಡೆ, ಜಾಗೃತಿ, ಅರ್ಥಿಕ ಸಾಕ್ಷರತೆಯ ಗುರಿಯೊಂದಿಗೆ ಗ್ರಾಮೀಣರ ಮನೆ ಬಾಗಿಲಲ್ಲೆ ಬ್ಯಾಂಕ್ ಸೇವೆಗೆ ಮುಂದಾಗಿರುವುದು ಹೊಸ ಬೆಳವಣಿಗೆಯಾಗಿದೆ ಎಂದರು
ಅಂಚೆ ಇಲಾಖೆ ಅಧೀಕ್ಷಕರಾದ ಹೆಚ್.ಸಿ. ಸದಾನಂದ, ಬ್ಯಾಂಕಿನ ವ್ಯವಸ್ಠಾಪಕರಾದ ಮಾನುಸ್‍ಜಾರ್ಜ್, ಸಹಾಯಕ ಅಂಚೆ ಅಧೀಕ್ಷಕರಾದ ನರಸಿಂಹಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸೆ. 2ರಂದು ನಗರದಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ
ಚಾಮರಾಜನಗರ, ಸೆ. 01 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶ್ರೀಕೃಷ್ಣ  ಜಯಂತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 2ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರು ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಶ್ರೀಕೃಷ್ಣ ಜಯಂತಿ ಕುರಿತು ಚಾಮರಾಜನಗರದ ಪ್ರದೀಪ್‍ಕುಮಾರ್ ದೀಕ್ಷಿತ್ ಅವರು ಉಪನ್ಯಾಸ ನೀಡಲಿದ್ದಾರೆ.
ನಗರದ ಕಲಾಸರಸ್ವತಿ ನಾಟ್ಯ ಸಂಸ್ಥೆಯ ಕು. ಅಕ್ಷತಾ ಎಸ್. ಜೈನ್ ಮತ್ತು ತಂಡದವರು ನೃತ್ಯ ರೂಪಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆÉಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್. ಚೆನ್ನಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ: ಡಾ.ಕೆ.ಹರೀಶ್‍ಕುಮಾರ್
ಚಾಮರಾಜನಗರ, ಸೆ.1 - ರಾಜ್ಯದಲ್ಲಿ ಏಕೀಕೃತ ವಿದ್ಯಾರ್ಥಿವೇತನ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ತಂತ್ರಾಂಶದಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಯೋಜನೆಗಳಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸದರಿ ತಂತ್ರಾಂಶದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಯೋಜನೆಗಳನ್ನು ನಿರ್ವಹಿಸಲಾಗುವುದು. ಸದರಿ ಯೋಜನೆಯಡಿ ವಿದ್ಯಾರ್ಥಿ ವೇತನ ಸೌಲಭ್ಯ ವೇತನವನ್ನು ಪಡೆಯಲು ವೆಬ್‍ಸೈಟ್ ವಿಳಾಸ:  hಣಣಠಿs:/ssಠಿ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಹಾಗೂ ಎಲ್ಲಾ ಶಾಲೆಗಳಲ್ಲಿ ತಾಲ್ಲೂಕುವಾರು ಅರ್ಜಿ ಸ್ವೀಕಾರ ಕೇಂದ್ರಗಳನ್ನು ತೆರೆದಿದ್ದು, ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯ ಎಸ್.ಎ.ಟಿ.ಎಸ್-ಐ.ಡಿ (ಸಂಬಂಧಪಟ್ಟ ಶಾಲೆಗಳಿಂದ)  ವಿದ್ಯಾರ್ಥಿಯ ಆಧಾರ್/ಐಡಿ ಹಾಗೂ ಆಧಾರ್ ಇಐಡಿ ಸಂಖ್ಯೆಯಲ್ಲಿ ನಮೂದಿಸಿರುವಂತೆ ಹೆಸರು. ಪೋಷಕರ ಆಧಾರ್/ಇಐಡಿ ನಮೂದಿಸಿರುವಂತೆ ಹೆಸರು. ವಿದ್ಯಾರ್ಥಿಯ ಆಧಾರ್ ಇಲ್ಲದಿದ್ದಲ್ಲಿ, ವಿದ್ಯಾರ್ಥಿಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯ ವಿವರಗಳು (ಬ್ಯಾಂಕ್ ಹೆಸರು, ಬ್ಯಾಂಕ್ ವಿಳಾಸ ಐಎಫ್‍ಎಸ್‍ಇ ಕೋಡ್, ಖಾತೆ ಸಂಖ್ಯೆ), ವಿದ್ಯಾರ್ಥಿ ಹೆಸರಿನಲ್ಲಿ ನೀಡಲಾದ ಗಣಕೇಕೃತ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಆರ್.ಡಿ ಸಂಖ್ಯೆಗಳು, ವಸತಿನಿಲಯ ವಿದ್ಯಾರ್ಥಿಯಾಗಿದ್ದಲ್ಲಿ ವಸತಿ ನಿರ್ವಹಣೆ ತಂತ್ರಾಂಶದ ನೋಂದಣಿ ಸಂಖ್ಯೆ, (ಹೆಚ್.ಎಂ.ಐ.ಎಸ್/ಇ-ಪಾಸ್ ಐಡಿ), ಅಲ್ಪಸಂಖ್ಯಾತ ವಿದ್ಯಾರ್ಥಿಯಾಗಿದ್ದಲ್ಲಿ ಹಾಲಿ ಶೈಕ್ಷಣಿಕ ವರ್ಷದ ಎನ್.ಎಸ್.ಪಿ ನೋಂದಣಿ ಸಂಖ್ಯೆ. ಪೋಷಕರು ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿದ್ದಲ್ಲಿ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸಲ್ಲಿಸಬೇಕು.
ಸದರಿ ದಾಖಲೆಗಳನ್ನು ಶಾಲೆಗಳಿಗೆ ಮತ್ತು ಮಾಹಿತಿ ಕೇಂದ್ರಗಳಲ್ಲಿ ನೀಡಿ, ಅಪ್‍ಲೋಡ್ ಮಾಡಿಸಲು ಎಲ್ಲಾ ಪೋಷಕರ ವರ್ಗದವರು ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯವರು ಕ್ರಮವಹಿಸಿ ಅರ್ಹ ವಿದ್ಯಾರ್ಥಿಗಳಿಗೆ ದೊರಕುವ ವಿದ್ಯಾರ್ಥಿ ವೇತನವನ್ನು ತಲುಪಿಸಲು ಸಹಕರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.2 ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ.1:- ಚಾಮರಾಜನಗರ ಪಟ್ಟಣ ವ್ಯಾಪ್ತಿಯಲ್ಲಿ ಜಿಓಎಸ್ ಅಳವಡಿಕೆ ಕಾರ್ಯವು ಸೆ.2  ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜೋಡಿ ರಸ್ತೆ, ರಥದ ಬೀದಿ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಗುಂಡ್ಲುಪೇಟೆ ಸರ್ಕಲ್, ಶ್ರೀವೀರಭದ್ರೇಶ್ವರ ದೇವಸ್ಥಾನ, ಸಂತೇಮರಹಳ್ಳಿ ಸರ್ಕಲ್ ಮತ್ತು ಟೌನ್-1 ವ್ಯಾಪ್ತಿಗೆ ಸೇರಿದ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.11 ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ. ಸಭೆ
ಚಾಮರಾಜನಗರ, ಸೆ.1   ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿರವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸಿರುವ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮಗಳೂ ಸೇರಿದಂತೆ) ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯು ಸೆಪ್ಟೆಂಬರ್ 11 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.3 ರಂದು ಪದವೀಧÀರ ಪಾಥಮಿಕ ಶಿಕ್ಷಕರ ನೇಮಕಾತಿ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ
ಚಾಮರಾಜನಗರ, ಸೆ.1  :- ಚಾಮರಾಜನಗರ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪಧವೀಧರ ಪ್ರಾಥಮಿಕ ಶಿಕ್ಷಕರ (6ರಿಂದ8) ವೃಂದದ ನೇಮಕಾತಿಗೆ ಸಂಬಂಧಿಸಿದಂತೆ 1:3 ಅನುಪಾತದಂತೆ ತಾತ್ಕಲಿಕವಾಗಿ ಪರಿಶೀಲನಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆ ಕಾರ್ಯವು ಸೆಪ್ಟೆಂಬರ್ 3 ರÀಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶರ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
     ದಾಖಲಾತಿ ಪರಿಶೀಲನಾ ಸಂಬಂಭ ಸೂಚನೆಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು. ಈ ಪ್ರಕ್ರಿಯೆ ನಂತರ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ದಾಖಲಾತಿ ಪರಿಶೀಲನೆ ನಡೆಸಲಿದ್ದು ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ತಮಗೆ ದೂರವಾಣಿಯಲ್ಲಿ ತಿಳಿಸಿದ ದಿನಾಂಕದಂದು ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಆಕ್ಷೇಪಣೆಗಳಿದ್ದರೆ ಕಚೇರಿಯ ಸ್ವೀಕೃತಿ ವಿಭಾಗಕ್ಕೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9448978661, 6360444933, 8496975459,  08226-222406 ಸಂಪರ್ಕಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರಿಯ ವಿದ್ಯಾಲಯದಲ್ಲಿ ಹೆಚ್ಚುವರಿ ತರಗತಿ ಮಂಜೂರು:ಸಂಸದರಿಂದ ಕೃತಜ್ಞತೆ
ಚಾಮರಾಜನಗರ, ಸೆ.1  - ನಗರದ ಮಾದಾಪುರ ಬಳಿಯ ಕೇಂದ್ರಿಯ ವಿದ್ಯಾಲಯದಲ್ಲಿ 2018-19 ನೇ ಸಾಲಿನಿಂದಲೇ ಜಾರಿಗೆ ಬರುವಂತೆ 1 ರಿಂದ 5 ನೇ ತರಗತಿವರೆಗೆ (ಪ್ರತಿ ತರಗತಿಯಲ್ಲಿ 40 ವಿದ್ಯಾರ್ಥಿಗಳು)  ಹೆಚ್ಚುವರಿ ತರಗತಿಗೆ ಮಂಜೂರಾತಿ ದೊರೆತಿದೆ.
      ಇತ್ತೀಚೆಗೆ ಕೇಂದ್ರಿಯ ವಿದ್ಯಾಲಯ ಕಟ್ಟಡದ ಉದ್ಘಾಟನೆ ವೇಳೆ ಕೇಂದ್ರ ಸಚಿವರಾದ ಅನಂತ್ ಅವರಿಗೆ ಹೆಚ್ಚುವರಿ ತರಗತಿಗೆ ಮಂಜೂರು ಮಾಡುವಂತೆ ಕೋರಲಾಗಿತ್ತು. ನವದೆಹಲಿಯಲ್ಲಿರುವ ಕೇಂದ್ರಿಯ ವಿದ್ಯಾಲಯದ ಆಯುಕ್ತರನ್ನು ಸಹ ಹೆಚ್ಚುವರಿ ತರಗತಿ ನಡೆಸಲು ಮನವಿ ಮಾಡಲಾಗಿತ್ತು. ಈ ಎಲ್ಲಾ ಮನವಿಗೆ ಸ್ಪಂಧಿಸಿ ಪ್ರಸಕ್ತ ಸಾಲಿನಿಂದಲೇ ಹೆಚ್ಚ್ಚುವರಿ ತರಗತಿಗೆ ಮಂಜೂರಾತಿ ಸಿಗಲು ಶ್ರಮಿಸಿದ ಕೇಂದ್ರ ಸಚಿವರು ಹಾಗೂ ಕೇಂದ್ರಿಯ ವಿದ್ಯಾಲಯದ ಮೇಲಾಧಿಕಾರಿಗಳಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 2ರಂದು ನಗರದಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ
ಚಾಮರಾಜನಗರ, ಸೆ. 01- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 2ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರು ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಶ್ರೀಕೃಷ್ಣ ಜಯಂತಿ ಕುರಿತು ಚಾಮರಾಜನಗರದ ಪ್ರದೀಪ್‍ಕುಮಾರ್ ದೀಕ್ಷಿತ್ ಅವರು ಉಪನ್ಯಾಸ ನೀಡಲಿದ್ದಾರೆ.
ನಗರದ ಕಲಾಸರಸ್ವತಿ ನಾಟ್ಯ ಸಂಸ್ಥೆಯ ಕು. ಅಕ್ಷತಾ ಎಸ್. ಜೈನ್ ಮತ್ತು ತಂಡದವರು ನೃತ್ಯ ರೂಪಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆÉಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್. ಚೆನ್ನಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


















x

ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಾಗಿ ನಡೆದ ಶ್ರೀ ಕೃಷ್ಣ ಜಯಂತಿ ಆಚರಣೆ (02-09-2018)

ಜಿಲ್ಲಾಡಳಿತದ ವತಿಯಿಂದ ಅರ್ಥಪೂರ್ಣವಾಗಿ ನಡೆದ ಶ್ರೀ ಕೃಷ್ಣ ಜಯಂತಿ ಆಚರಣೆ

ಚಾಮರಾಜನಗರ, ಸೆ.2 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಶ್ರೀಕೃಷ್ಣ ಜಯಂತಿಯನ್ನು ಇಂದು ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣ ಸತ್ಯಮೇವ ಜಯತೇ ಎಂಬುದನ್ನು ಪ್ರತಿಪಾದಿಸಿದ. ಮಾನವೀಯ ಮೌಲ್ಯಗಳನ್ನು ಸಾರುವಲ್ಲಿ ಶ್ರೀಕೃಷ್ಣ ಅದರ್ಶವಾಗಿದ್ದಾನೆ ಎಂದರು.
ಶ್ರೀ ಕೃಷ್ಣನ ಕುರಿತು ಹೆಚ್ಚು ಓದಬೇಕು. ಮಕ್ಕಳಿಗೂ ಸಹ ಕೃಷ್ಣನ ಕುರಿತು ತಿಳಿಸಿಕೊಡಬೇಕು. ಶ್ರೀಕೃಷ್ಣನ ಬಾಲ್ಯ, ತುಂಟತನ, ಅರ್ಜುನನಿಗೆ ಸತ್ಯ ಕುರಿತು ಮಾಡಿದ ಉಪದೇಶ ಸೇರಿದಂತೆ ಹಲವಾರು ಮಹತ್ವದ ವಿಷಯಗಳನ್ನು ಹೇಳಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ, ಶ್ರೀಕೃಷ್ಣ ಜೀವನೋತ್ಸಾಹದ  ಸಂಕೇತ. ಶ್ರೀಕೃಷÀ್ಣನ ಪ್ರಬುದ್ದತೆ, ಮುತ್ಸದಿತನ  ಇಂದಿನ ಕಾಲಘಟ್ಟಕ್ಕೂ ಮಾದರಿಯಾಗಿ ನಿಲ್ಲುತ್ತದೆ. ಯುದ್ದ ಕಾಲದಲ್ಲಿ ನೀಡಿದ ಶ್ರೀಕೃಷ್ಣ ಭೋದನೆ ಸಹ ಗಮನ ಸೆಳೆಯುತ್ತದೆ. ಶ್ರೀ ಕೃಷ್ಣನ ಆದರ್ಶ ಪಾಲನೆ ಮಾಡಬೇಕಾಗಿದೆ ಎಂದರು.
ಶ್ರೀಕೃಷ್ಣನ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರದೀಪ್‍ಕುಮಾರ್ ದೀಕ್ಷೀತ್ ಅವರು, ಧರ್ಮದ ಏಕಮೇವ ಉದ್ದಾರವೇ ಶ್ರೀಕೃಷ್ಣನ ಜನ್ಮಕ್ಕೆ  ಕಾರಣ. ಜಗತ್ತಿನ ಸಂರಕ್ಷಕ ಶ್ರೀಕೃಷ್ಣನ ವಿಶೇಷ ಗುಣಗಳು ಗಮನ ಸೆಳೆಯುತ್ತವೆ. ಇಂದಿಗೂ ಸಹ ಶ್ರೀಕೃಷ್ಣನ ವ್ಯಕ್ತಿತ್ವ ಮಾದರಿಯಾಗಿದೆ ಎಂದರು.
ಶ್ರೀಕೃಷ್ಣ ಉತ್ತಮ ರಾಜನೀತಿಜ್ಞನಾಗಿದ್ದು, ಸಹನೆ, ತಾಳ್ಮೆಯಂತಹ ಗುಣಗಳಿಂದ ವಿಶಿಷ್ಟವಾಗಿ ನಿಲ್ಲುತ್ತಾನೆ. ಕಲಿಯುಗದಲ್ಲಿ ನಡೆಯಬಹುದಾದ ವಿದ್ಯಮಾನಗಳ ಬಗ್ಗೆ ದ್ವಾಪರ ಯುಗದಲ್ಲಿಯೇ ಶ್ರೀಕೃಷ್ಣ  ತಿಳಿಸಿದ್ದ. ಧರ್ಮ, ಪರಂಪರೆ, ಸಾತ್ವಿಕ ರಕ್ಷಣೆಗೆ ಶ್ರೀಕೃಷ್ಣ ಕಾರಣರಾದರು ಎಂದರು ಪ್ರದೀಪ್‍ಕುಮಾರ್ ದಿಕ್ಷೀತ್ ತಿಳಿಸಿದರು.
ಇದೇ ವೇಳೆ ಚಿಕ್ಕ ಮಕ್ಕಳು ಶ್ರೀಕೃಷ್ಣನ ವೇಷದಾರಿ ಸ್ಪರ್ಧೆಯಲ್ಲಿ  ಪಾಲ್ಗೊಂಡು ಗಮನ ಸೆಳೆದರು. ಎಲ್ಲಾ ಕೃಷ್ಣ ವೇಷಧಾರಿ ಮಕ್ಕಳಿಗೆ ಜಿಲ್ಲಾಧಿಕಾರಿ, ಇತರೇ ಗಣ್ಯರು  ನೆನಪಿನ ಕಾಣಿಕೆ, ಪ್ರಶಂಸ ಪತ್ರವನ್ನು ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ  ಸಹಾಯಕ ನಿರ್ದೇಶಕ ಎಚ್. ಚನ್ನಪ್ಪ, ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್. ಋಗ್ವೇದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸೆ. 3 ರಿಂದ ತಾಲ್ಲೂಕು ಕೇಂದ್ರಗಳಿಗೆ ಭ್ರಷ್ಟಚಾರ ನಿಗ್ರಹ ಅಧಿಕಾರಿಗಳ ಭೇಟಿ: ದೂರು ಸ್ವೀಕಾರ

ಚಾಮರಾಜನಗರ, ಸೆ. 2- ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಗೆ  ಜಿಲ್ಲಾ ಭ್ರಷ್ಟಚಾರ ನಿಗ್ರಹ ದಳದ ಅಧಿಕಾರಿಗಳು ಸೆಪ್ಟಂಬರ್ 3 ರಿಂದ ಭೇಟಿ ನೀಡಿ, ನಾಗರಿಕರಿಂದ ದೂರುಗಳನ್ನು ಸ್ವೀಕರಿಸಲಿದ್ದಾರೆ.
ಸೆ. 3ರಂದು ಗುಂಡ್ಲುಪೇಟೆ ಸರ್ಕಾರಿ ಅತಿಥಿ ಗೃಹ, ಸೆ.11 ರಂದು ಚಾಮರಾಜನಗರ ಎಸಿಬಿ ಪೊಲೀಸ್ ಠಾಣೆ, ಸೆ. 19 ರಂದು ಯಳಂದೂರು ಸರ್ಕಾರಿ ಅತಿಥಿ ಗೃಹ, ಸೆ. 24 ರಂದು ಕೊಳ್ಳೇಗಾಲ ಸರ್ಕಾರಿ ಅತಿಥಿ ಗೃಹ, ಸೆ. 29ರಂದು ಹನೂರು ಸರ್ಕಾರಿ ಅತಿಥಿ ಗೃಹದಲ್ಲಿ ದೂರುಗಳನ್ನು ಸ್ವೀಕರಿಸುವವರು.
ಸರ್ಕಾರಿ ಕಚೇರಿಯಲ್ಲಿ ವಿಳಂಬ, ಲಂಚದ ಹಣಕ್ಕೆ ಒತ್ತಾಯ ಇತರೇ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ದ ದೂರುಗಳಿದ್ದಲ್ಲಿ ನೀಡಬಹುದಾಗಿದೆ. ಈ ಭೇಟಿ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ಭ್ರಷ್ಟಚಾರ ನಿಗ್ರಹ ದಳದ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


x

ಅಬಕಾರಿ ಇಲಾಖೆ ಕಾರ್ಯಚಾರಣೆ: 3ಲಕ್ಷ ರೂ ಮೌಲ್ಯದ ಗಾಂಜಾ ವಶ (04-09-2018)

ಅಬಕಾರಿ ಇಲಾಖೆ ಕಾರ್ಯಚಾರಣೆ: 3ಲಕ್ಷ ರೂ ಮೌಲ್ಯದ ಗಾಂಜಾ ವಶ

ಚಾಮರಾಜನಗರ, ಸೆ. 4  - ಅಬಕಾರಿ ಇಲಾಖೆಯ ಅಧಿಕಾರಿಗಳು ಕೊಳ್ಳೇಗಾಲ ತಾಲ್ಲೂಕಿನ ಕರಳಕಟ್ಟೆ ಗ್ರಾಮದ ಜಮೀನಲ್ಲಿ ಹಾಗೂ ಅಲ್ಲಿದ್ದ ಮನೆಯ ಮೇಲೆ ದಾಳಿನಡೆಸಿ ಅಕ್ರಮವಾಗಿ ಬೆಳೆದಿದ್ದ ಹಾಗೂ ದಾಸ್ತಾನು ಮಾಡಲಾಗಿದ್ದ 3 ಲಕ್ಷ ರೂ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಭಾನುವಾರ ಕೊಳ್ಳೇಗಾಲ ತಾಲ್ಲೂಕಿನ ಕರಳಕಟ್ಟೆ ಗ್ರಾಮದ ಗುಂಡಾಲ ಜಲಾಶಯ ರಸ್ತೆಯ ಪಕ್ಕದ ಜಡೇಗೌಡ ಎಂಬಾತನಿಗೆ ಸೇರಿದ ಜಮೀನು ಹಾಗೂ ಅಲ್ಲಿಯೇ ಇದ್ದ ಮನೆಯ ಮೇಲೆ ದಾಳಿನಡೆಸಿ ಅಕ್ರಮವಾಗಿ ಬೆಳೆದಿದ್ದ 324 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದರು ಅಲ್ಲದೆ ಮಾರಾಟಕ್ಕೆ ಸಿದ್ದಪಡಿಸಿದ್ದ 1.6ಕೆ.ಜಿ ವಣಗಿದ ಗಾಂಜಾವನ್ನು ಜಪ್ತಿಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಡೇಗೌಡನ್ನು ಬಂದಿಸಿದ್ದು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿದೆ.
ಅಬಕಾರಿ ಉಪ ಅಧೀಕ್ಷಕರಾದ ಗಂಗಾಂದರ ಹೆಚ್.ಮುದೆಣ್ಣವರ್, ನಿರೀಕ್ಷಕರಾದ ಎ.ಎ.ಮುಜಾವರ್, ಕೆ.ವಿ.ಲೋಹಿತ್, ಎಂ.ಬಿ.ಉಮಾಶಂಕರ್, ಅರಣ್ಯಾಧಿಕಾರಿಗಳಾದ ಮಹೇಶ್, ನವೀನ್, ಅಬಕಾರಿ ಸಿಬ್ಬಂಧಿ ರವಿಕುಮಾರ್, ಕೃಷ್ಣಮೂರ್ತಿ, ರಮೇಶ, ಪ್ರದೀಪ್, ಜಯಪ್ರಕಾಶ್, ಸುಂದ್ರಪ್ಪ, ಸಿದ್ದಯ್ಯ, ವೀರತಪ್ಪ ಮಂಜುನಾಥ, ಸಂತೋಷ್‍ಕುಮಾರ್, ಮಹೇಶ ಆನಂದ, ಹೇಮಂತ್, ಮೋಹನ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿವೇತನಕ್ಕೆ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿಸಲ್ಲಿ ಪರಿಶಿಷ್ಟವರ್ಗಗಳ ಇಲಾಖೆ ಸೂಚನೆ 
ಚಾಮರಾಜನಗರ, ಸೆ. 4 - ಪ್ರಸಕ್ತ ಸಾಲಿನ ಪರಿಶಿಷ್ಟವರ್ಗದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮಂಜೂರು ಮಾಡಲು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಮುಲಕ ಆನ್‍ಲೈನ್‍ನಲ್ಲಿ ಅರ್ಜಿಸಲ್ಲಿಸುವಂತೆ ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಸೂಚಿಸಿದೆ
ಆನ್‍ಲೈನ್‍ನಲ್ಲಿ ಅರ್ಜಿಸಲ್ಲಿಸಲು ವೆಬ್ ಸೈಟ್ ತಿತಿತಿ.ssಠಿ.ಞಚಿಡಿಟಿಚಿಣಚಿಞಚಿ.gov.iಟಿನಲ್ಲಿ ಅವಕಾಶ ಕಲ್ಪಿಸಿದೆ.
ಸರ್ಕಾರಿ, ಅನುದಾನಿತ, ಅನುದಾನರಹಿತ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪೋರ್ಟಲ್‍ನಲ್ಲಿ ಅರ್ಜಿ ನೋಂದಾಯಿಸಲು ಆಯಾಶಾಲಾ ಶಿಕ್ಷಕರು ಪೋಷಕರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಯ SಂಖಿS Iಆ(ಎಸ್.ಎ.ಟಿ.ಎಸ್ ಐಡಿ) ಪೋಷಕರ ಮೊಬೈಲ್ ಸಂಖ್ಯೆ, ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಅಥವಾ ಇ.ಐ.ಡಿ ಸಂಖ್ಯೆ, ಹೆಸರು, ಆಧಾರ್ ಇಲ್ಲದಿದ್ದಲ್ಲಿ ವಿದ್ಯಾರ್ಥಿಯ ಹೆಸರಿನಲ್ಲಿವ ಬ್ಯಾಂಕ್ ಖಾತೆಯ ವಿವರ ಅಂದರೆ ಬ್ಯಾಂಕ್ ಹೆಸರು, ವಿಳಾಸ, ಐ.ಎಫ್.ಸಿ ಕೋಡ್ ಖಾತೆ ಸಂಖ್ಯೆ, ವಿದ್ಯಾರ್ಥಿಯ ಗಣಕೀಕೃತ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು, ಹಿಂದಿನ ಸಾಲಿನಲ್ಲಿ ವಿದ್ಯಾರ್ಥಿವೇತನ ಪಡೆದಿದ್ದಲ್ಲಿ ಅದರ ನೊಂದಣಿ ಸಂಖ್ಯೆ, ವಸತಿ ನಿಲಯದ ವಿದ್ಯಾರ್ಥಿಯಾಗಿದ್ದಲ್ಲಿ ನಿಲಯ ನಿರ್ವಹಣೆಯ ತಂತ್ರಾಂಶದ ನೋಂದಣಿ ಸಂಖ್ಯೆ (ಹೆಚ್.ಎಂ.ಐ.ಎಸ್)ನ್ನು ಅರ್ಜಿಯ ಜೊತೆ ನೋಂದಾಯಿಸಬೇಕು ಎಂದು ಚಾಮರಾಜನಗರ ಹಾಗೂ ಕೊಳ್ಳೇಗಾಲ ತಾಲ್ಲೂಕು ಪರಿಶಿಷ್ಟವರ್ಗಗಳ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 4  - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಸೆಪ್ಟೆಂಬರ್ 5ರಂದು ಸಂತೇಮರಳ್ಳಿ ಉಪವಿಭಾಗದ ಕಾಗಲವಾಡಿ ಶಾಖೆಯ ಹಿರಿಕೆರೆ ಫೀಡರ್ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿರುವ ಪರಿವರ್ತಕಗಳಿಗೆ ಮೀಟರ್ ಅಳವಡಿಸುತ್ತಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸಂಬಂಧ ಪಟ್ಟ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ಸೆಸ್ಕ ಸಂತೇಮರಹಳ್ಳಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 6ರಂದು ಸುಗಮ ಸಂಗೀತ ತರಬೇತಿ ಶಿಭಿರ ಉದ್ಘಾಟನೆ
ಚಾಮರಾಜನಗರ, ಸೆ. 4  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ ಸುಗಮ ಸಂಗೀತ ತರಬೇತಿ ಶಿಬಿರದ ಉದ್ಘಾಟನೆ ಸಮಾರಂಭವು ಸೆಪ್ಟೆಂಬರ್ 6ರಂದು ಬೆಳಗ್ಗೆ 11 ಗಂಟೆಗೆ ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ.
ಸಂಸ್ಕøತಿ ಚಿಂತಕರಾದ ಪ್ರೊ.ಜಿ.ಎಸ್.ಜಯದೇವ್ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಫಯಾಜ್‍ಖಾನ್ ಅಧ್ಯಕ್ಷತೆ ವಹಿಸುವರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಮುಖ್ಯ ಅತಿಥಿಯಾಗಿ ಪಾಲ್ಗೊಳುವರು. ಸದಸ್ಯ ಸಂಚಾಲಕರಾದ ಆನಂದ ಮಾದಲಗೆರೆ ಪ್ರಾಸ್ತಾವಿಕ ನುಡಿಗಳನ್ನಾಡುವರು. ಶಿಬಿರದ ನಿರ್ದೇಶಕರಾದ ಬಿ.ಬಸವರಾಜು, ಸಂಪನ್ಮೂಲ ವ್ಯಕ್ತಿಗಳಾದ ಟಿ.ರಾಜಾರಾಮ್, ಪುರುಷೋತ್ತಮ, ಸಿ.ಎಂ.ನರಸಿಂಹಮೂರ್ತಿ ಪಾಲ್ಗೊಳುವರು.
ಸೆಪ್ಟೆಂಬರ್ 9ರಂದು ಮಧ್ಯಾಹ್ನ ಮೂರು ಗಂಟೆಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲಾಧಿಕಾರಿ ಬಿ.ಬಿ.ಕಾವೇರಿಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ||ಕೆ.ಹರೀಶ್‍ಕುಮಾರ್, ಹೊಂಬಾಳೆ ಪ್ರತಿಭಾರಂಗದ ಅಧ್ಯಕ್ಷರಾದ ಎಚ್.ಪಲ್ಗುಣ ಪ್ರಮಾಣಪತ್ರ ವಿತರಿಸುವರು. ಮೈಸೂರಿನ ರಘುಲೀಲಾ ಸಂಗೀತ ಮಂದಿರದ ನಿರ್ದೇಶಕರಾದ ಸುನೀತ ಚಂದ್ರಕುಮಾರ ಮುಖ್ಯಅತಿಥಿಯಾಗಿ ಪಾಲ್ಗೊಳುವರು.
ಶಿಭಿರಾರ್ಥಿಗಳಿಂದ ಸುಮಗ ಸಂಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಸುಗಮ ಸಂಗೀತ ತರಬೇತಿ ಶಿಬಿರದಲ್ಲಿ ಭಾಗವಹಿಸುವವರು ಸ್ಥಳದಲ್ಲಿಯೇ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸೆ. 5ರಂದು ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ
ಚಾಮರಾಜನಗರ, ಸೆ. 04– ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಹಾಗೂ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭವು ಸೆಪ್ಟೆಂಬರ್ 5ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರಾದ ಎನ್. ಮಹೇಶ್ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಅವರು ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವರು.
ಶಾಸಕರಾದ ಆರ್. ನರೇಂದ್ರ, ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೀಶ್, , ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮರಗದಮಣಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧಮೇಂಧರ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವವರ ವಿವರ
ಚಾಮರಾಜನಗರ, ಸೆ. 04 – ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ 2018-19ನೇ ಸಾಲಿನ ಜಿಲ್ಲಾಮಟ್ಟದ ಶಿಕ್ಷಕರ ಪ್ರಶಸ್ತಿಗೆ 3 ವಿಭಾಗಗಳಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ವಿವರ ಇಂತಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ- ಚಾಮರಾಜನಗರ ತಾಲೂಕು: ಎಂ. ಡಿ. ಮಹದೇವಯ್ಯ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಡಪುರ, ಗುಂಡ್ಲುಪೇಟೆ ತಾಲ್ಲೂಕು: ಜಯರಾಮು, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುಂಟಿಪುರ, ಕೊಳ್ಳೇಗಾಲ ತಾಲ್ಲೂಕು: ಡಿ. ಮಹಾದೇವ, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೆಲ್ಲಳ್ಳಿಮಾಳ, ಹನೂರು ತಾಲ್ಲೂಕು: ತನುಜ ಫಾತೀಮ ಬ್ರಿಟ್ಟೋ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಂಡಯ್ಯನಪಾಳ್ಯ, ಯಳಂದೂರು ತಾಲ್ಲೂಕು: ಕೆ. ಪುಟ್ಟಿ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮದ್ದೂರು.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ- ಚಾಮರಾಜನಗರ ತಾಲೂಕು: ಆರ್. ಚಿಕ್ಕಬಸವ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದಯ್ಯನಪುರ. ಗುಂಡ್ಲುಪೇಟೆ ತಾಲ್ಲೂಕು: ಲತ್ತೀಶ್ಯ ಚಿನ್ನಪ್ಪ, ದೈಹಿಕ ಶಿಕ್ಷಣ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಲಸೂರು, ಕೊಳ್ಳೇಗಾಲ ತಾಲ್ಲೂಕು: ಎಸ್. ನಾಗರಾಜು, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಭೀಮನಗರ. ಹನೂರು ತಾಲ್ಲೂಕು: ಎಸ್. ಕೃಷ್ಣ, ಬಡ್ತಿ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದಿನ್ನಹಳ್ಳಿ, ಯಳಂದೂರು ತಾಲ್ಲೂಕು: ನಂಜುಂಡಸ್ವಾಮಿ, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಸ್ತೂರು-2.
ಪ್ರೌಢಶಾಲಾ ವಿಭಾಗ- ಚಾಮರಾಜನಗರ ತಾಲೂಕು: ಕೆಂಪಣ್ಣ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ದೊಡ್ಡರಾಯಪೇಟೆ, ಗುಂಡ್ಲುಪೇಟೆ ತಾಲ್ಲೂಕು: ಮಹದೇವಸ್ವಾಮಿ, ಸಹ ಶಿಕ್ಷಕರು, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಬೇಗೂರು. ಕೊಳ್ಳೇಗಾಲ ತಾಲ್ಲೂಕು: ಚಿಕ್ಕರಾಜು, ಹಿಂದಿ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ದೊಡ್ಡಿಂದವಾಡಿ, ಹನೂರು ತಾಲ್ಲೂಕು: ಪಿ.ಸಿ. ನಿರ್ಮಲ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ರಾಮಾಪುರ, ಯಳಂದೂರು ತಾಲ್ಲೂಕು: ಪಿ.ಬಿ. ಲಕ್ಷ್ಮಿ, ಸಹ ಶಿಕ್ಷಕರು, ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ, ಯಳಂದೂರು ಇವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರು ಸೆಪ್ಟೆಂಬರ್ 5ರಂದು ನಗರದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
x

ಶಿಕ್ಷಣ ಕ್ಷೇತ್ರದ ಸಮಗ್ರ ಬದಲಾವಣೆಗೆ ಸರ್ಕಾರ ಬದ್ಧ: ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ (05-09-2018)

ಶಿಕ್ಷಣ ಕ್ಷೇತ್ರದ ಸಮಗ್ರ ಬದಲಾವಣೆಗೆ ಸರ್ಕಾರ ಬದ್ಧ: ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ, ಸೆ. 05 :- ಜಿಲ್ಲೆಗೆ ಶೈಕ್ಷಣಿಕ ಮೂಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣ ಕ್ಷೇತ್ರದ ಸಮಗ್ರ ಬದಲಾವಣೆಗೆ ಸರ್ಕಾರ ಕಟಿಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮತ್ತು ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಜಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಅವರು ಶ್ರೇಷ್ಠ ಶಿಕ್ಷಣ ತಜ್ಞರು ಹಾಗೂ ಆದರ್ಶ ಶಿಕ್ಷಕರಾಗಿದ್ದರು. ಅವರ ಜನ್ಮದಿವನ್ನು ಶಿಕ್ಷಕರ ದಿನವಾಗಿ ಆಚರಣೆ ಮಾಡುತ್ತಿರುವುದು ನಮ್ಮ ಹೆಮ್ಮೆಯಾಗಿದೆ. ಶಿಕ್ಷಕ ವೃತ್ತಿ ಇತರೆ ಎಲ್ಲಕ್ಕಿಂತ ಸರ್ವಶ್ರೇಷ್ಠವಾದುದಾಗಿದೆ. ಕಲ್ಲುಬಂಡೆಯಂತಹ ವಿದ್ಯಾರ್ಥಿಗಳನ್ನು ಕಡೆದು ಸುಂದರ ಶಿಲೆಯಾಗಿಸಿ ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಶಾಲಾಕಟ್ಟಡಗಳ ನವೀಕರಣ, ಅಗತ್ಯವಿರುವೆಡೆ ಶಿಕ್ಷಕರ ನೇಮಕಾತಿ, ವಿದ್ಯಾರ್ಥಿನಿಲಯಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಇನ್ನಿತರೆ ಅವಶ್ಯ ಮೂಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಸರ್ಕಾರ ಸಾಕಷ್ಟು ಕಾಳಜಿ ವಹಿಸುತ್ತಿದೆ. ಉನ್ನತ ಶಿಕ್ಷಣಕ್ಕಾಗಿ ಹಲವು ಶಿಕ್ಷಣಸಂಸ್ಥೆಗಳು ಜಿಲ್ಲೆಯಲ್ಲಿ ಆರಂಭವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಮಾತನಾಡಿ ದೇಶ, ರಾಜ್ಯ ಹಾಗೂ ಜಿಲ್ಲೆಯ ಪ್ರಗತಿಗೆ ಶಿಕ್ಷಣವೇ ಮಾನದಂಡವಾಗಿದೆ. ಸ್ವಾತಂತ್ರ್ಯ ನಂತರ ಶೇ. 12ರಷ್ಟಿದ್ದ ದೇಶದ ಸಾಕ್ಷರತೆ ಇಂದು ಶೇ.75ಕ್ಕೆ ತಲುಪಿದೆ ಇದು ಅಭಿವೃದ್ಧಿ ಸೂಚಕವಾಗಿದೆ. ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅದರಲ್ಲೂ ಪ್ರಾಥಮಿಕ ಹಂತದಲ್ಲಿಯೇ ಗುಣಾತ್ಮಕ ಶಿಕ್ಷಣ ಶೈಕ್ಷಣಿಕ ಪ್ರಗತಿಗೆ ಮುನ್ನುಡಿ ಬರೆಯಬೇಕು ಎಂದರು.
ಜಿಲ್ಲೆಯ ಹಲವೆಡೆ ಶಾಲೆಗಳಿಗೆ ಮೂಲಸೌಕರ್ಯಗಳ ಕೊರತೆಯಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿದೆ. ಈಗಾಗಲೇ ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ಕಾಲೇಜನ್ನು ಆರಂಭಿಸಲಾಗಿದೆ. ಪ್ರಸ್ತುತ ವರ್ಷದಿಂದಲೇ ಕಾನೂನು ಕಾಲೇಜು ಸಹ ಕಾರ್ಯರಂಭ ಮಾಡಲಿದೆ ಎಂದು ತಿಳಿಸಿದರು.
ತಾವು ಬೋಧಿಸುವ ಶಿಕ್ಷಣ ಮತ್ತು ಕಲಿಯುವ ಮಕ್ಕಳನ್ನು ಪ್ರೀತಿಸುವವರೆ ನಿಜವಾದ ಶಿಕ್ಷ್ಷಕರು. ವಿದ್ಯಾರ್ಥಿಗಳನ್ನು ದೇಶದ ಆಸ್ತಿಯನ್ನಾಗಿ ಮಾಡುವಲ್ಲಿ ಶಿಕ್ಷಕರು ಕಾರ್ಯೋನ್ಮುಖರಾಗಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡಿದ ಡಾ. ರಾಧಾಕೃಷ್ಣನ್, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಇಂದಿನ ಶಿಕ್ಷಕರು ಅಳವಡಿಸಿಕೊಳ್ಳಬೇಕಿದೆ ಎಂದು ಧ್ರುವನಾರಾಯಣ ಅವರು ಸಲಹೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಶಿಕ್ಷಣ ಕ್ಷೇತ್ರದ ಬದಲಾವಣೆ ಶಿಕ್ಷಕರಿಂದ ಮಾತ್ರ ಸಾಧ್ಯ. ದೇಶದಲ್ಲಿ ಅತ್ಯಂತ ಸ್ಪರ್ಧಾತ್ಮಕ ಬೇಡಿಕೆಯುಳ್ಳ ಈ ಕ್ಷೇತ್ರ ಭಾರಿ ಸವಾಲಿನ ಹಾದಿಯಲ್ಲಿದೆ. ಶಿಕ್ಷಣ ಇಂದು ವ್ಯಾಪಾರೀಕರಣವಾಗುತ್ತಿದೆ ಇದನ್ನು ತಪ್ಪಿಸಲು ಶಿಕ್ಷಕರು ಪ್ರಜ್ಞಾವಂತರಾಗಬೇಕು. ಶಿಕ್ಷಕರಲ್ಲಿ ಕ್ರಿಯಾಶೀಲತೆ ವೃದ್ಧಿಯಾದರೆ ಮಾತ್ರ ಶಿಕ್ಷಣ ಅಭಿವೃದ್ಧಿಪಥದಲ್ಲಿ ಸಾಗುತ್ತದೆ ಎಂದರು.
ಯಾವುದೇ ಚೌಕಟ್ಟಿನೊಳಗೆ ನೀಡುವುದು ಶಿಕ್ಷಣವಲ್ಲ. ವಿದ್ಯಾರ್ಥಿಗಳಲ್ಲಿ ಚೈತನ್ಯ, ಕ್ರಿಯಾಶೀಲತೆಯನ್ನು ಮೂಡಿಸಿ ಅವರ ಪ್ರಬುದ್ಧತೆಯನ್ನು ವ್ಯಕ್ತಪಡಿಸುವಂತಹ ಶಿಕ್ಷಣವನ್ನು ನೀಡಬೇಕಾಗಿದೆ. ಮಕ್ಕಳಲ್ಲಿ ಶಿಸ್ತು, ಸಂಯಮ, ಸಮಯಪ್ರಜ್ಞೆಯನ್ನು ಬೆಳೆಸಬೇಕು. ಅ ಮೂಲಕ ಶಿಕ್ಷಕರು ಎಲ್ಲರ ನಿರೀಕ್ಷೆಗಳನ್ನು ಮೀರಿ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ಡಾ. ಹರೀಶ್‍ಕುಮಾರ್ ಅವರು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮಕೃಷ್ಣ ಅವರು ಡಾ.ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರನ್ನು ಸನ್ಮಾನಿಸಿ ಶಿಕ್ಷಕರ ಕಲ್ಯಾಣ ನಿಧಿಯಿಂದ 5 ಸಾವಿರ ರೂ. ಗಳ ನಗದು ಬಹುಮಾನ ಹಾಗೂ ಪಾರಿತೋಷಕಗಳನ್ನು ವಿತರಿಸಲಾಯಿತು. ಅಲ್ಲದೆ ನಿವೃತ್ತ ಶಿಕ್ಷಕರನ್ನು ಸಹ ಸನ್ಮಾನಿಸಲಾಯಿತು. ಶಿಕ್ಷಕರ ದಿನಾಚರಣೆ ಅಂಗವಾಗಿ ಎರ್ಪಡಿಸಲಾಗಿದ್ದ ತಾಲೂಕುಮಟ್ಟದ ಸಾಂಸ್ಕøತಿಕ ಸ್ಪರ್ಧೆ ಹಾಗೂ ಕ್ರೀಡೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮರುಗದಮಣಿ, ಸದಸ್ಯರಾದ ಉಮಾವತಿ, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ದೊಡ್ಡಮ್ಮ, ಎ.ಪಿ.ಎಂ.ಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುಳ, ಡಯಟ್ ಉಪನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಹೆಚ್.ಸಿ. ಚಂದ್ರಶೇಖರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ಯಾಮಲ, ಡಿ.ವೈ.ಎಸ್.ಪಿ ಜಯಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಆರ್. ರಾಚಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಲಕ್ಷ್ಮೀಪತಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸಮಾರಂಭದಲ್ಲಿ ಹಾಜರಿದ್ದರು.
ಸೆಪ್ಟೆಂಬರ್ 10ರಂದು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ
ಚಾಮರಾಜನಗರ, ಸೆ. 05 - ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯು ಅಧ್ಯಕ್ಷರಾದ ಶಿವಮ್ಮ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 10ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಕ್ತ ವಿ.ವಿ. ಪ್ರಾದೇಶಿಕ ಕೇಂದ್ರದಲ್ಲಿ ವಿವಿಧ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಅಹ್ವಾನ
ಚಾಮರಾಜನಗರ, ಸೆ. 05  ನಗರದಲ್ಲಿರುವ ಮುಕ್ತ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದಲ್ಲಿ ಪ್ರಥಮ ಬಿ.ಎ, ಬಿ.ಕಾಂ, ಎಂ.ಎ, ಎಂ.ಕಾಂ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ದಂಡಶುಲ್ಕವಿಲ್ಲದೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 20 ಕಡೆಯ ದಿನವಾಗಿದೆ. 200 ರೂ. ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 1 ಕೊನೆಯ ದಿನವಾಗಿದೆ.
2,50,000 ರೂ. ಗಳಿಗಿಂತ ಕಡಿಮೆ ಅದಾಯ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು  ಸಮಾಜ ಕಲ್ಯಾಣ ಇಲಾಖೆ ಮೂಲಕ ಉಚಿತವಾಗಿ ಪ್ರವೇಶ ಪಡೆಯಲು ಅವಕಾಶವಿದೆ. ಬಿ.ಪಿ.ಎಲ್ ಕಾರ್ಡು ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ. 25ರಷ್ಟು ರಿಯಾಯಿತಿ ಇದೆ.
ಅರ್ಜಿಯನ್ನು ವಿ.ವಿ. ನಿಲಯದ ಅಧಿಕೃತ ವೆಬ್‍ಸೈಟ್ ತಿತಿತಿ.ಞsoumಥಿsoಡಿe.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಸದರಿ ವೆಬ್ ಸೈಟ್ ಅಥವಾ ನಗರದ ರಾಮಸಮುದ್ರದ ಕೆ.ಎಚ್.ಬಿ ಬಡಾವಣೆಯಲ್ಲಿರುವ ಇಮ್ಯಾನುವೆಲ್ ಪಬ್ಲಿಕ್ ಶಾಲೆಯ ಎದುರು ಇರುವ ಮುಕ್ತ ವಿ.ವಿ.ಯ ಪ್ರಾದೇಶಿಕ ಕೇಂದ್ರದ ಕಚೇರಿ ಅಥವಾ ದೂರವಾಣಿ ಸಂಖ್ಯೆ: 08226-222191, ಮೊ. 9632346618, 9448500718 ಸಂಪಕಿಸುವಂತೆ ಕೇಂದ್ರದ ನಿರ್ದೇಶಕರಾದ ಎನ್ ಮಹದೇವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 05 - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಗುಂಡ್ಲುಪೇಟೆ ಉಪ ವಿಭಾಗ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 7ರಂದು ಪರಿವರ್ತಕ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಗುಂಡ್ಲುಪೇಟೆ 66/11 ಕೆ.ವಿ, ಬೊಮ್ಮಲಾಪುರ 66/11 ಕೆ.ವಿ ಮತ್ತು ಹಂಗಳ 66/11 ಕೆ.ವಿ ವ್ಯಾಪ್ತಿ ಪ್ರದೇಶಗಳಲ್ಲಿ ಅಂದು ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

x

ಅತ್ಯಾಚಾರ ಆರೋಪಿಗೆ ಜಾಮೀನು ತಿರಸ್ಕಾರ (06-09-2018)

ಅತ್ಯಾಚಾರ ಆರೋಪಿಗೆ ಜಾಮೀನು ತಿರಸ್ಕಾರಚಾಮರಾಜನಗರ, ಸೆ. 06 :- ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಆರೋಪಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಜಾಮೀನು ತಿರಸ್ಕರಿಸಿದೆ. 
ಮಾರ್ಡಳ್ಳಿ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅದೇ ಊರಿನ ಗೋಪಿ ಅಲಿಯಾಸ್ ಗೋಪಾಲಕೃಷ್ಣ ಎಂಬಾತ ಬಾಲಕಿಯನ್ನು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆಂದು ಬಾಲಕಿಯ ತಂದೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೋಕ್ಸೋ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಈ ಜಾಮೀನು ಅರ್ಜಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಜಿ. ಬಸವರಾಜ ಅವರು ಸೆಪ್ಟೆಂಬರ್ 1ರಂದು ತಿರಸ್ಕರಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ. ಯೋಗೇಶ್ ಹಾಜರಾಗಿ ವಾದ ಮಂಡಿಸಿದ್ದರೆಂದು ಪ್ರಕಟಣೆ ತಿಳಿಸಿದೆ.
ಕೆಶಿಪ್ ಯೋಜನೆ: ಭೂಮಿ ನೇರ ಖರೀದಿಗೆ ಪತ್ರ ಜಾರಿ  
ಚಾಮರಾಜನಗರ, ಸೆ. - ಕೆಶಿಪ್-3ರ ಯೋಜನೆಯಡಿ ಕೊಳ್ಳೇಗಾಲ-ಹನೂರು ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಲಿದ್ದು, ಈ ಯೋಜನೆಗೆ ಜಮೀನನ್ನು ಕ್ರಯಕ್ಕೆ ನೀಡಲು ತಿಳಿವಳಿಕೆ ಪತ್ರಗಳನ್ನು ಸಂಬಂಧಪಟ್ಟ ಗ್ರಾಮ ಲೆಕ್ಕಿಗರ ಮೂಲಕ ಜಾರಿಗೊಳಿಸಲಾಗುತ್ತಿದ್ದು, ಭೂ ಮಾಲಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.
ಕೆಶಿಪ್ ಯೋಜನೆಗೆ ಅಗತ್ಯವಿರುವ ಜಮೀನನ್ನು ನೇರ ಖರೀದಿಸಲು ಅನುಮೋದನೆ ಸಿಕ್ಕಿದ್ದು, ಈಗಾಗಲೇ ಜಮೀನು ಜಂಟಿ ಅಳತೆ ಕಾರ್ಯ ಮುಗಿದಿದೆ. ನೇರ ಖರೀದಿ ಜಮೀನಿನ ಬೆಲೆ ನಿಗದಿ ಪ್ರಸ್ತಾವನೆಗೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದ ಮುಖ್ಯ ಯೋಜನಾಧಿಕಾರಿಗಳು ಅನುಮೋದನೆ ನೀಡಿದ್ದಾರೆ.
ರಸ್ತೆ ಅಗಲೀಕರಣ ವ್ಯಾಪ್ತಿಗೆ ಅಗ್ರಹಾರ, ಸಿದ್ದಯ್ಯನಪುರ, ಮಧುವನಹಳ್ಳಿ, ಹಾರುವವನಪುರ, ಚಿಕ್ಕಿಂದುವಾಡಿ, ದೊಡ್ಡಿಂದುವಾಡಿ, ಸಿಂಗನಲ್ಲೂರು, ಕೊಂಗರಹಳ್ಳಿ, ಮಂಗಲ, ಆನಾಪುರ, ಹುಲ್ಲೇಪುರ, ಹನೂರು ಗ್ರಾಮಗಳು ಒಳಪಡಲಿವೆ. ಕೊಂಗರಹಳ್ಳಿ(ಕಾಮಗೆರೆ), ಮಂಗಲ ಮತ್ತು ಹನೂರು ಗ್ರಾಮಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ ಒಳಪಡುವ ಕಟ್ಟಡಗಳ ಮೌಲ್ಯಮಾಪನಾ ಕಾರ್ಯ ಪ್ರಗತಿ ಹಂತದಲ್ಲಿದೆ. 
ನೇರ ಖರೀದಿ ಜಮೀನಿಗೆ ಬೆಲೆ ನಿಗದಿಪಡಿಸಿ ದಾಖಲು ಹಾಜರುಪಡಿಸಿ ಪರಿಹಾರ ಪಡೆದುಕೊಂಡು ಕೆಶಿಪ್-3 ಯೋಜನೆಗೆ ಜಮೀನನ್ನು ಕ್ರಯಕ್ಕೆ ನೀಡಲು ತಿಳಿಸಿ ಸಂಬಂಧಿಸಿದ ಗ್ರಾಮಲೆಕ್ಕಿಗರ ಮೂಲಕ ತಿಳಿವಳಿಕೆ ಪತ್ರಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಕೊಳ್ಳೇಗಾಲದ ಉಪವಿಭಾಗಧಿಕಾರಿಗಳ ಕಚೇರಿ ಸಿಬ್ಬಂದಿ ಹಾಗೂ ಸಂಬಂಧಿಸಿದ ಗ್ರಾಮಲೆಕ್ಕಿಗರಿಂದ ಮಾಹಿತಿ ಪಡೆಯಬಹುದೆಂದು ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಮಾಹಿತಿಗಾಗಿ ತಹಶೀಲ್ದಾರ್(ನಿವೃತ್ತ) ಕೆಶಿಪ್-3 ಶಾಖೆ ಮೊ. 9886247077, ಪ್ರಥಮ ದರ್ಜೆ ಸಹಾಯಕರು(ನಿವೃತ್ತ ಪಿ.ಡಿ.ಒ) ಮೊ. 8105092261, ಗ್ರಾಮಲೆಕ್ಕಿಗರು, ಹರಳೆ ವೃತ್ತ, ಅಗ್ರಹಾರಕ್ಕೆ ಸಂಬಂಧಿಸಿದಂತೆ ಮೊ. 7892540749, ಗ್ರಾಮಲೆಕ್ಕಿಗರು, ಸಿದ್ದಯ್ಯನಪುರ ಮೊ. 9741489698, ಗ್ರಾಮಲೆಕ್ಕಿಗರು, ಮಧುವನಹಳ್ಳಿ ಮೊ. 9916415627, ಗ್ರಾಮಲೆಕ್ಕಿಗರು ದೊಡ್ಡಿಂದುವಾಡಿ ಮೊ. 9108252088, ಗ್ರಾಮಲೆಕ್ಕಿಗರು, ಚಿಕ್ಕಿಂದುವಾಡಿ ಮೊ. 8861298650, ಗ್ರಾಮಲೆಕ್ಕಿಗರು, ಸಿಂಗನಲ್ಲೂರು ಮೊ. 9611378047, ಗ್ರಾಮಲೆಕ್ಕಿಗರು, ಕೊಂಗರಹಳ್ಳಿ ಮೊ. 8139948720, ಗ್ರಾಮಲೆಕ್ಕಿಗರು, ಮಂಗಲ ಮೊ. 9449746768, ಗ್ರಾಮಲೆಕ್ಕಿಗರು, ಕಣ್ಣೂರು(ಆನಾಪುರಕ್ಕೆ ಸಂಬಂಧಿಸಿದಂತೆ) ಮೊ. 9886974213, ಗ್ರಾಮಲೆಕ್ಕಿಗರು, ಹನೂರು ವೃತ್ತ(ಹನೂರು ಮತ್ತು ಹುಲ್ಲೇಪುರಕ್ಕೆ ಸಂಬಂಧಿಸಿದಂತೆ) ಮೊ. 9945796717 ಸಂಪರ್ಕಿಸುವಂತೆ ಉಪವಿಭಾಗಧಿಕಾರಿ ಫೌಜಿಯಾ ತರನ್ನುಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
 


   
     
ಮನುಷ್ಯರ ನಡುವೆ ಬಾಂಧವ್ಯ ವೃದ್ಧಿಗೆ ಸಂಗೀತ ಸಹಕಾರಿ : ಪ್ರೊ. ಜಿ.ಎಸ್. ಜಯದೇವ್ 
ಚಾಮರಾಜನಗರ, ಸೆ. 06:- ಸಂಗೀತ ಮನುಷ್ಯನ ನಡುವೆ ಮಧುರವಾದ ಸ್ನೇಹ, ಬಾಂಧವ್ಯ, ಒಗ್ಗಟ್ಟು ಉಂಟುಮಾಡುವ ಅದ್ಭುತ ಸಾಮಥ್ರ್ಯ ಹೊಂದಿದೆ ಎಂದು ಸಾಹಿತಿ ಹಾಗೂ ಸಂಸ್ಕøತಿ ಚಿಂತಕರಾದ ಪ್ರೊ. ಜಿ.ಎಸ್. ಜಯದೇವ ಅವರು ಅಭಿಪ್ರಾಯಪಟ್ಟರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಸುಗಮ ಸಂಗೀತ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ, ಸಾಹಿತ್ಯ ಪ್ರಕಾರಗಳು ಮನುಷ್ಯನಿಗೆ ಅಗತ್ಯ. ಮನುಷ್ಯನ ಹುಟ್ಟುಗುಣಗಳಾದ ಕ್ರೌರ್ಯ, ಹಿಂಸೆ, ಅಸೂಯೆಯನ್ನು ಸಂಗೀತ ಕಲೆ ಪರಿವರ್ತಿಸಿ ಸುಸಂಸ್ಕøತರನ್ನಾಗಿಸುತ್ತದೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುತ್ತದೆ ಎಂದರು.
ಸಾಹಿತ್ಯ ಸಂಸ್ಕøತಿಯನ್ನು ಜಾಗೃತಗೊಳಿಸುವ ಕಾರ್ಯಾಗಾರಗಳು ಹೆಚ್ಚು ನಡೆಯಬೇಕು. ಇದರಿಂದ ಭಾಷೆಯ ಬಗೆಗಿನ ಅಭಿಮಾನ ಸಹ ಹೆಚ್ಚಾಗಲಿದೆ. ಹೊರಗಿನ ಸಂಗೀತ ಪ್ರಕಾರಗಳಿಗಿಂತ ಇಲ್ಲಿನ ಸಂಗೀತ, ಕಲೆ ಅನನ್ಯವಾದದ್ದು. ಇದನ್ನು ಹೆಚ್ಚು ಬೆಳೆಸಬೇಕು. ಈ ನಿಟ್ಟಿನಲ್ಲಿ ಎಲ್ಲರು ಪ್ರಯೋಗಶೀಲರಾಗಬೇಕಿದೆ ಎಂದು ಜಯದೇವ ಅವರು ಸಲಹೆ ಮಾಡಿದರು.
ಸಾಂಸ್ಕøತಿಕವಾಗಿ ಚಾಮರಾಜನಗರ ಜಿಲ್ಲೆ ಕಡೆಗಣಿಸಲ್ಪಟ್ಟಿದೆ. ನೃತ್ಯ, ನಟನೆ, ಸಂಗೀತ ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ಅದ್ಭುತ ಪ್ರತಿಭಾವಂತರಿದ್ದಾರೆ. ಮಹದೇಶ್ವರ ಬೆಟ್ಟದ ಜಾನಪದ ಸಾಹಿತ್ಯವು ಪ್ರಪಂಚದಲ್ಲೇ ಎರಡನೇ ಅತಿದೊಡ್ಡ ಜಾನಪದ ಸಾಹಿತ್ಯವೆಂಬ ಹೆಗ್ಗಳಿಕೆ ಹೊಂದಿದೆ ಎಂದು ಜಯದೇವ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಅನಾದಿ ಕಾಲದಿಂದಲೂ ಕಲೆ, ಸಂಸ್ಕøತಿ ಜೀವನದ ಒಂದು ಭಾಗವಾಗಿದೆ. ಯಾವುದೇ ಇತಿಹಾಸವನ್ನು ಅಧ್ಯಾಯ ಮಾಡಿದಾಗ ಆಯಾ ಕಾಲದ ಕಲೆ, ಸಾಹಿತ್ಯ, ಸಂಸ್ಕøತಿ ಕೊಡುಗೆಗಳನ್ನು ಒದಗಿಸುವ ವಿವರಗಳು ಇಲ್ಲದ ಇತಿಹಾಸ ಪೂರ್ಣಗೊಳ್ಳ್ಳುವುದಿಲ್ಲ ಎಂದರು.
ವೃತ್ತಿಗಿಂತ ಪ್ರವೃತ್ತಿ, ಹೆಸರು, ಕೀರ್ತಿ ತಂದುಕೊಟ್ಟಿರುವ ಹಲವು ನಿದರ್ಶನ ಇವೆ. ಕಲೆ, ಸಾಹಿತ್ಯ, ಸಂಗೀತದಂತಹ ಪ್ರವೃತ್ತಿಯನ್ನು ಅತೀ ಸಂತೋಷದಿಂದ ನಿರ್ವಹಿಸಲಾಗುತ್ತಿದ್ದು, ಪ್ರವೃತ್ತಿಯಲ್ಲಿ ಯಾವುದೇ ಒತ್ತಡ, ಬಲವಂತ ಇರುವುದಿಲ್ಲ. ಕಲಾಪ್ರಕಾರಗಳಲ್ಲಿ ಒಂದಾದ ಸುಗಮ ಸಂಗೀತ ತರಬೇತಿಗೆ ಅಪೂರ್ವವಾದ ಅವಕಾಶವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದು ಗಾಯತ್ರಿ ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ರಿಜಿಸ್ಟ್ರ್ಟಾರ್ ಅಶೋಕ್ ಎನ್. ಚಲವಾದಿ ಅವರು ಅಕಾಡೆಮಿ ಹಮ್ಮಿಕೊಳ್ಳುವ ಯೋಜನೆ, ಕಾರ್ಯಕ್ರಮಗಳು ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗದೇ ರಾಜ್ಯದ ಎಲ್ಲಾ ಭಾಗಗಳಿಗೆ ತಲುಪುವಂತಾಗಬೇಕು ಎನ್ನುವ ಉದ್ದೇಶದಿಂದ ಈ ತರಬೇತಿ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಸೂಕ್ತ ತರಬೇತಿ ದೊರೆತರೆ ಪ್ರತಿಭೆಗಳು ಮತ್ತಷ್ಟು ಬೆಳೆಯಲು ಸಹಕಾರಿಯಾಗಲಿದೆ ಎಂದರು.
ಹಿರಿಯ ಕಲಾವಿದರಾದ ಟಿ. ರಾಜಾರಾಮ್, ಸಿ.ಎಂ. ನರಸಿಂಹಮೂರ್ತಿ, ಸದಸ್ಯ ಸಂಚಾಲಕರಾದ ಆನಂದ ಮಾದಲಗೆರೆ, ಶಿಬಿರದ ನಿರ್ದೇಶಕರಾದ ಬಿ. ಬಸವರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ: ಆನ್‍ಲೈನ್‍ನಲ್ಲಿ ಪರಿಶೀಲಿಸಲು ಮನವಿ
ಚಾಮರಾಜನಗರ, ಸೆ. 06 :- ಭಾರತ ಸರ್ಕಾರದ ಕಾರ್ಮಿಕ ಇಲಾಖೆಯ ಬೀಡಿ ಕಾರ್ಮಿಕರ ಕಲ್ಯಾಣನಿಧಿ ವತಿಯಿಂದ 2018-19ನೇ ಸಾಲಿಗೆ ಜಿಲ್ಲೆಯ ಬೀಡಿ ಕಾರ್ಮಿಕರ ಅವಲಂಬಿತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಸಲುವಾಗಿ ಆನ್‍ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು.
ಈ ಸಂಬಂಧ ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯದ ಮುಖ್ಯಸ್ಥರು ಮತ್ತು ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರು ವಿದ್ಯಾರ್ಥಿವೇತನ ಕೋರಿ ಆನ್‍ಲೈನ್ ದಾಖಲಾಗಿರುವ ಅರ್ಜಿಗಳನ್ನು ಬೀಡಿ ಕಾರ್ಮಿಕರ ಮಕ್ಕಳಿಗೆ ಒದಗಿಸುವ ಧನಸಹಾಯ ಕಾಲಂ(ವೆಬ್‍ಸೈಟ್ hಣಣಠಿ:/ತಿತಿತಿ.sಛಿhoಟಚಿಡಿshiಠಿs.gov.iಟಿ)  ನಲ್ಲಿ ತುರ್ತಾಗಿ ಪರಿಶೀಲನೆ ಮಾಡಬೇಕು. 
ಪರಿಶೀಲನಾ ಪ್ರಕ್ರಿಯೆಯಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ಧನಸಹಾಯ ಅರ್ಜಿಗಳನ್ನು ಪರಿಶೀಲಿಸಲು ಸೆಪ್ಟೆಂಬರ್ 15 ಕಡೆಯ ದಿನ. ಮೆಟ್ರಿಕ್ ನಂತರದ ಅರ್ಜಿಗಳನ್ನು ಪರಿಶೀಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿದೆ. ಅಂತಿಮ ದಿನಾಂಕದ ನಂತರ ವಿದ್ಯಾರ್ಥಿವೇತನವು ಮಂಜೂರಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಿಛಿಟತಿobಟಡಿ-ಞಚಿ@ಟಿiಛಿ.iಟಿ ಅಥವಾ ದೂರವಾಣಿ ಸಂ: 080-23471706 ನ್ನು ಸಂಪರ್ಕಿಸುವಂತೆ ಬೀಡಿ ಕಾರ್ಮಿಕರ ಕಲ್ಯಾಣನಿಧಿ ಚಿಕಿತ್ಸಾಲಯದ ವೈದ್ಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿಭಾಗ್ಯ ಯೋಜನೆಯಡಿ ಹಸಿರು ಮನೆ, ನೆರಳು ಪರದೆಮನೆ ನಿರ್ಮಾಣಕ್ಕಾಗಿ ಸಹಾಯಧನ
ಚಾಮರಾಜನಗರ, ಸೆ. 06- ತೋಟಗಾರಿಕಾ ಇಲಾಖೆವತಿಯಿಂದ 2018-19ನೇ ಸಾಲಿಗೆ ಕೃಷಿಭಾಗ್ಯ ಯೋಜನೆಯನ್ನು ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕುಗಳಲ್ಲಿ ಅನುಷ್ಟಾನಗೊಳಿಸಲಗುತ್ತಿದೆ.
ಈ ಯೋಜನೆಯಡಿ ಪ್ರತಿ ಫಲಾನುಭವಿ ಕುಟುಂಬಕ್ಕೆ ಗರಿಷ್ಠ 1 ಎಕರೆ ಪ್ರದೇಶದಲ್ಲಿ ಹಸಿರು ಮನೆ ಹಾಗೂ ನೆರಳು ಪರದೆಮನೆ ಘಟಕ ನಿರ್ಮಾಣಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಸಾಮಾನ್ಯ ವರ್ಗದಲ್ಲಿ ಮಾತ್ರ ಅನುದಾನ (ಶೇ. 50 ರಂತೆ ಸಹಾಯಧನ)ಲಭ್ಯವಿದ್ದು, ಅಸಕ್ತ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 8ರೊಳಗೆ ಸಲ್ಲಿಸುವಂತೆ ತೋಟಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ : ಅವಧಿ ವಿಸ್ತರಣೆÀ
ಚಾಮರಾಜನಗರ, ಸೆ. 06 - ಸಮಾಜ ಕಲ್ಯಾಣ ಇಲಾಖೆವತಿಯಿಂದ 2018-19ನೇ ಶೈಕ್ಷಣಿಕ ಸಾಲಿನಲ್ಲಿ ಮೆಟ್ರಿಕ್ ನಂತರದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದನ ಮಂಜೂರು ಮಾಡುವ ಸಲುವಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಆಗಸ್ಟ್ 30ನ್ನು ಕಡೆಯ ದಿನಾಂಕವಾಗಿ ನಿಗದಿಗೊಳಿಸಲಾಗಿತ್ತು.
ವಿದ್ಯಾರ್ಥಿಗಳು ಅನಿವಾರ್ಯ ಕಾರಣಗಳಿಂದ ನಿಗಧಿತ ಅವಧಿಯೊಳಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಕಡೆಯ ದಿನಾಂಕವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 14ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆÀ
ಚಾಮರಾಜನಗರ, ಸೆ. 06 - ಜನರ ಕುಂದುಕೊರತೆ,ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 14ರಂದು ಬೆಳಿಗ್ಗೆ 11 ಗಂಟೆಗೆ ಚಾಮರಾಜನಗರ ತಾಲೂಕು ಕಚೇರಿಯಲ್ಲಿ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ.
ಅಂದು ನಡೆಯಲಿರುವ ಸಭೆಗೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಹವಾಲು ನೀಡುವ ಮೂಲಕ ಸಭೆಯ ಸದುಪಯೋಗ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
x

ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು