Friday, 19 January 2018

ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆ ಪರಿಶೀಲನೆ ಕಾರ್ಯ ಸಮರ್ಪಕವಾಗಿ ನಿರ್ವಹಿಸಿ : ಡಿಸಿ ಸೂಚನೆ... #vss (19-01-2018)


ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆ ಪರಿಶೀಲನೆ ಕಾರ್ಯ ಸಮರ್ಪಕವಾಗಿ ನಿರ್ವಹಿಸಿ : ಡಿಸಿ ಸೂಚನೆ... vss

ಚಾಮರಾಜನಗರ, ಜ. 19 :- ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ನಡೆದಿರುವ ಪ್ರಕ್ರಿಯೆಯನ್ನು ಹೋಬಳಿ ಮಟ್ಟದಲ್ಲಿ ಪರಿಶೀಲಿಸುವ ಸಲುವಾಗಿ ನೇಮಕವಾಗಿರುವ ನೋಡಲ್ ಅಧಿಕಾರಿಗಳು ವ್ಯಾಪಕ ಭೇಟಿ ನೀಡಿ ಪರಿಷ್ಕರಣೆ ಕಾರ್ಯದ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಬಿ. ರಾಮು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ನೇಮಕವಾಗಿರುವ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೇಮಕವಾಗಿರುವ ನೋಡಲ್ ಅಧಿಕಾರಿಗಳು ನಿಗದಿಪಡಿಸಿರುವ ಹೋಬಳಿಗಳಲ್ಲಿ ವ್ಯಾಪಕ ಪ್ರವಾಸ ಕೈಗೊಂಡು ಮತಗಟ್ಟೆ ಮಟ್ಟದ ಅಧಿಕಾರಿಗಳು ಸಂಬಂಧಿಸಿದ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ನಮೂನೆ 6,7,8 ಮತ್ತು 8ಎ ಅರ್ಜಿಗಳನ್ನು ಸ್ವೀಕರಿಸಿರುವ ಬಗ್ಗೆ ಹಾಗೂ ಈ ಅರ್ಜಿಗಳನ್ನು ತಹಸೀಲ್ದಾರ್ ಕಚೇರಿಗೆ ನೀಡಿ ಸ್ವೀಕೃತಿ ಪಡೆದಿದ್ದಾರೆಯೇ ಎಂದು ಪರಿಶೀಲಿಸಬೇಕು. ಪರಿಷ್ಕರಣೆ ಸಂದರ್ಭದಲ್ಲಿ ನಮೂನೆ 7ನ್ನು ಸ್ವೀಕರಿಸದೇ ಇದ್ದಲ್ಲಿ ವಿವರಣೆ ಪಡೆದು ಮತದಾರರ ನೋಂದಣಾಧಿಕಾರಿಗಳಿಗೆ ವರದಿ ಸಲ್ಲಿಸಿ ಪ್ರತಿಯೊಂದಿಗೆ ಜಿಲ್ಲಾ ಅಧಿಕಾರಿ ಕಚೇರಿಗೂ ಮಾಹಿತಿ ಸಲ್ಲಿಸುವಂತೆ ಬಿ. ರಾಮು ಅವರು ಸೂಚಿಸಿದರು.
ಹೋಬಳಿ ವ್ಯಾಪ್ತಿಯಲ್ಲಿ ಪ್ರತಿ ಗ್ರಾಮಗಳ ಮನೆಮನೆಗೆ ಭೇಟಿ ಪರಿಷ್ಕರಣಾ ಕಾರ್ಯ ಹೇಗೆ ನಡೆದಿದೆ ಎಂಬುದನ್ನು ಖುದ್ದು ಪರಿಶೀಲಿಸಬೇಕು. ಪರಿಶೀಲಿಸಿದ ಕಾರ್ಯ ಕುರಿತ ವರದಿಯನ್ನು ಆಯಾ ಸಂಜೆಯೇ ಸಲ್ಲಿಸಬೇಕು. ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಯಾವ ರೀತಿ ಕಾರ್ಯ ನಿರ್ವಹಿಸಿದ್ದಾರೆ ಎಂಬ ಬಗ್ಗೆ ಪರಿಶೀಲಿಸಬೇಕು. ಭಾನುವಾರವೂ ಸಹ ರಜೆ ಪಡೆಯದೆ ಕೆಲಸ ನಿರ್ವಹಿಸಬೇಕು. ಎಲ್ಲ ಮತಗಟ್ಟೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ತಹಸೀಲ್ದಾರರು ಪ್ರತಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಮತಗಟ್ಟೆ ಸಂಖ್ಯೆ ಬರೆಸಿ ಅದರ ಛಾಯಾಚಿತ್ರವನ್ನು ತಹಸೀಲ್ದಾರರಿಗೆ ಕಳುಹಿಸಬೇಕು. ಸ್ವೀಕೃತವಾಗಿರುವ ನಮೂನೆಗಳ ಮಾಹಿತಿಯನ್ನು ಸಲ್ಲಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮತಗಟ್ಟೆಗಳ ಪರಿಶೀಲನೆ ಕೆಲಸವನ್ನು ಯಾವುದೇ ಲೋಪವಿಲ್ಲದಂತೆ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವು ಯಾವುದೇ ಲೋಪಕ್ಕೆ ಅವಕಾಶವಾಗದಂತೆ ನಿರ್ವಹಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಪ್ರತಿದಿನ ನಡೆಯುತ್ತಿರುವ ಕೆಲಸದ ವರದಿ ಕಡ್ಡಾಯವಾಗಿ ಸಲ್ಲಿಸಬೇಕು. ವಿಕಲಚೇತನರ ಪಟ್ಟಿಯನ್ನು ತಯಾರಿಸಿ ವಿಕಲಚೇತನರು ಯಾವುದೇ ಗೊಂದಲಕ್ಕೆ ಆಸ್ಪದವಿರದಂತೆ ಮತದಾನ ಮಾಡಲು ಅನುಕೂಲಗಳನ್ನು ಕಲ್ಪಿಸಲೂ ಸಹ ವಿಶೇಷ ಕ್ರಮ ತೆಗೆದುಕೊಳ್ಳಬೇಕು ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪರಿಶೀಲನೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮನೆಮನೆಗೆ ತೆರಳಿ ಪರಿಶೀಲಿಸಿದ ಸಂಬಂಧ ದಾಖಲೆಗಳನ್ನು ಸಹ ಸಲ್ಲಿಸಬೇಕು. ಯಾವುದೇ ವಿಳಂಬಕ್ಕೆ ಅವಕಾಶವಾಗದಂತೆ ಸೂಚಿಸಲಾಗಿರುವ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಹರೀಶ್ ಕುಮಾರ್ ಅವರು ಸೂಚಿಸಿದರು.
ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಂ, ನೇಮಕವಾಗಿರುವ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಇಂದಿರಾಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್,ಏಕವಲ್ಯ ಮಾದರಿ ವಸತಿಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ 

ಚಾಮರಾಜನಗರ, ಜ. 19:- ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಸ್ಥಾಪಿಸಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಇಂದಿರಾಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಜನವರಿ 25ರವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ಜನವರಿ 13 ಕಡೆಯ ದಿನವಾಗಿತ್ತು.  ಪೋಷಕರು ಹಾಗೂ ಜಿಲ್ಲಾ ಸಮನ್ವಯಾಧಿಕಾರಿಗಳ ಕೋರಿಕೆ ಮೇರೆಗೆ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಿದೆ.
ಅರ್ಜಿಯನ್ನು ಜಿಲ್ಲಾ ಮಟ್ಟದ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ತಾಲೂಕಿನ ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚೆನ್ನಮ್ಮ, ಏಕಲವ್ಯ ಮಾದರಿ ಶಾಲೆಗಳಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ವಸತಿಶಾಲಾ ಪ್ರಾಂಶುಪಾಲರಿಗೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

     ಜ. 20ರಂದು ನಗರ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯ 

ಚಾಮರಾಜನಗರ, ಜ. 19 - ಚಾಮರಾಜನಗರ ಪಟ್ಟಣದಲ್ಲಿ, ರಸ್ತೆ ಅಗಲಿಕರಣ ಹಿನ್ನೆಲೆಯಲ್ಲಿ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿಯನ್ನು ಜನವರಿ 20ರಂದು ಸೆಸ್ಕ್ ಕೈಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಚಾಮರಾಜನಗರ ಪಟ್ಟಣದ ಹೌಸಿಂಗ್‍ಬೋರ್ಡ್, ಕೋರ್ಟ್‍ರಸ್ತೆ, ಕರಿನಂಜನಪುರ, ಟಿ.ಕೆ ಮೋಳೆ, ಬಿ. ರಾಚಯ್ಯ ಜೋಡಿರಸ್ತೆ, ಚಂದುಕಟ್ಟೆ ಮೋಳೆ, ಬ್ಯಾಡಮೂಡ್ಲು, ದೊಡ್ಡಮೋಳೆ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.




Thursday, 18 January 2018

ಜ. 28ರಂದು ಪಲ್ಸ್ ಪೋಲಿಯೊ : ಪೂರ್ವಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ (18-01-2018)


ಜ. 28ರಂದು ಪಲ್ಸ್ ಪೋಲಿಯೊ : ಪೂರ್ವಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ

  ಚಾಮರಾಜನಗರ, ಜ. 18 - ಜಿಲ್ಲೆಯಲ್ಲಿ ಮೊದಲ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಜನವರಿ 28ರಂದು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಅಗತ್ಯ ಪೂರ್ವಸಿದ್ದತೆಯನ್ನು ಕೈಗೊಳ್ಳುವಂತೆ  ಜಿಲ್ಲಾಧಿಕಾರಿ ಬಿ. ರಾಮು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪಲ್ಸ್ ಪೋಲಿಯೋ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಜಿಲ್ಲೆಯಲ್ಲಿ ಆಗ ತಾನೆ ಹುಟ್ಟಿದ ಮಗುವಿನಿಂದ ಹಿಡಿದು 5 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಪಲ್ಸ್ ಪೋಲಿಯೋ ಹನಿ ನೀಡುವ ಕೇಂದ್ರಗಳನ್ನು ತೆರೆಯಬೇಕು. ಶಾಲೆ ಅಂಗನವಾಡಿಗಳಲ್ಲಿ ಪಲ್ಸ್ ಪೋಲಿಯೋ ಬೂತುಗಳನ್ನು ತೆರೆಯಲು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಅವಶ್ಯ ಕ್ರಮ ವಹಿಸಬೇಕು ಎಂದು  ಜಿಲ್ಲಾಧಿಕಾರಿ ತಿಳಿಸಿದರು.


ಪಲ್ಸ್ ಪೋಲಿಯೋ ಹನಿ ಶೇಖರಣೆಗೆ ನಿರಂತರ ವಿದ್ಯುತ್ ಸರಬರಾಜು ಅವಶ್ಯಕವಿದೆ. ಈ ಹಿನ್ನೆಲೆಯಲ್ಲಿ ಜನವರಿ 25 ರಿಂದ 31ರವರೆಗೆ ನಿರಂತರವಾಗಿ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 24 ಗಂಟೆಗಳ ಅವಧಿಯು ವಿದ್ಯುತ್ ಸರಬರಾಜು ಮಾಡಬೇಕು. ವಿದ್ಯುತ್ ಅಡಚಣೆಗೆ ಅವಕಾಶವಾಗದ ಹಾಗೆ ಚೆಸ್ಕಾಂ ಅಧಿಕಾರಿಗಳು  ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯಾದ್ಯಂತ ವ್ಯಾಪಕವಾಗಿ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಬೇಕಿರುವ ಹಿನ್ನೆಲೆಯಲ್ಲಿ ಅಗತ್ಯವಿರುವ ವಷ್ಟು ವಾಹನಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆರೋಗ್ಯ ಇಲಾಖೆಗೆ ನಿಯೋಜಿಸಬೇಕು. ಇಲಾಖೆಗಳ ವಾಹನಗಳು  ಸುಸ್ಥಿತಿಯಲ್ಲಿ ಇರುವ ಬಗ್ಗೆ ದೃಢೀಕರಿಸಿ ವರದಿ ಸಲ್ಲಿಸಬೇಕು. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ವಾಹನದ ಕೊರತೆ ಎದುರಾಗಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಗಳು ಹಾಗೂ ದುರ್ಗಮ ಅರಣ್ಯ ಪ್ರದೇಶಗಳು ಹೆಚ್ಚು ಇವೆ. ಹೀಗಾಗಿ ಈ ಭಾಗದ ಜನತೆಗೂ ಪಲ್ಸ್ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ತಲುಪಲು ಎಲ್ಲಾ ಸಿದ್ಧತೆ ಕೈಗೊಳ್ಳಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ವಾಪ್ತಿಯಲ್ಲಿ ಪಲ್ಸ್ ಪೋಲಿಯೋ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡÀಬೇಕು ಎಂದರು.
ಸರ್ಕಾರಿ, ಖಾಸಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಇತರೆ ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲೂ ಬೂತ್‍ಗಳನ್ನು ತೆರೆಯಬೇಕು. ಮುಖ್ಯ ಸ್ಥಳಗಳಲ್ಲಿ ಬಸ್‍ಗಳನ್ನು ನಿಲುಗಡೆ ಮಾಡಿ ಪೋಲಿಯೋ ಹನಿ ಹಾಕಿಸಲು ಪೊಲೀಸರು ಸಹಕರಿಸಬೇಕು. ಸಂಚಾರಿ ವಾಹನಗಳ ಮೂಲಕವೂ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.
ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ ಸ್ಥಳೀಯ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ನಿಯೋಜಿತರಾಗುವ ಸಿಬ್ಬಂದಿ ಅಧಿಕಾರಿಗಳಿಗೆ ಅವಶ್ಯವಿರುವ ಎಲ್ಲ ಬಗೆಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸಬೇಕು. ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಬೇಕು. ಇದರಿಂದ ಪೋಷಕರಿಗೂ ಕಾರ್ಯಕ್ರಮದ ಅರಿವು ಉಂಟಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸ್ವಯಂ ಸೇವಾ ಸಂಸ್ಥೆಗಳು, ನರ್ಸಿಂಗ್ ಶಾಲೆಗಳ ವಿದ್ಯಾರ್ಥಿ ಸಿಬ್ಬಂದಿ ಸಹಕಾರ ಅಗತ್ಯವಿದೆ. ವಿವಿಧ ಇಲಾಖೆಗಳು ಕೂಡ ತೊಡಗಿಕೊಂಡು ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶ್ವಸಿ ಗೊಳಿಸಲು ಕಾರ್ಯೋನ್ಮುಖರಾಗಬೇಕೆಂದು ಜಿಲ್ಲಾಧಿಕಾರಿ ರಾಮು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್.ಪ್ರಸಾದ್, ಜಿಲ್ಲಾ ಲಸಿಕಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ರಘುರಾಂ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.
   

ನಗರದಲ್ಲಿ ಕೇಂದ್ರತಂಡದಿಂದ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ ಆರಂಭ 

ಚಾಮರಾಜನಗರ, ಜ. 18 - s ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಕೈಗೊಂಡಿರುವ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ ಕಾರ್ಯವು ಇಂದಿನಿಂದ ಆರಂಭಗೊಂಡಿದೆ . 




ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆಗಾಗಿ ಕೇಂದ್ರ ಸರ್ಕಾರದಿಂದ ನಿಯೋಜನೆಗೊಂಡಿರುವ ಹಿರಿಯ ಅಧಿಕಾರಿ ನಾಗೇಂದ್ರ ಮತ್ತು ಇತರೆ ಅಧಿಕಾರಿಗಳ ತಂಡ ಚಾಮರಾಜನಗರ ಪಟ್ಟಣಕ್ಕೆ ಇಂದು ಆಗಮಿಸಿದರು. ಕೇಂದ್ರ ತಂಡವನ್ನು ನಗರಸಭಾ ಅಧ್ಯಕ್ಷರಾದ ಶೋಭ, ಪೌರಾಯುಕ್ತರಾದ ಬಿ.ಫೌಜಿಯಾ ತರನ್ನುಂ ಸ್ವಾಗತಿಸಿದರು.
ಸ್ವಚ್ಛ ಸರ್ವೇಕ್ಷಣೆ ಸಮೀಕ್ಷಾ ತಂಡಕ್ಕೆ ಇದುವರೆಗೆ ವಾರ್ಡ್‍ಗಳಲ್ಲಿ ಕೈಗೊಂಡಿರುವ
ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆಗಾಗಿ ಕೇಂದ್ರ ಸರ್ಕಾರದಿಂದ ನಿಯೋಜನೆಗೊಂಡಿರುವ ಹಿರಿಯ ಅಧಿಕಾರಿ ನಾಗೇಂದ್ರ ಮತ್ತು ಇತರೆ ಅಧಿಕಾರಿಗಳ ತಂಡ ಚಾಮರಾಜನಗರ ಪಟ್ಟಣಕ್ಕೆ ಇಂದು ಆಗಮಿಸಿದರು. ಕೇಂದ್ರ ತಂಡವನ್ನು ನಗರಸಭಾ ಅಧ್ಯಕ್ಷರಾದ ಶೋಭ, ಪೌರಾಯುಕ್ತರಾದ ಬಿ.ಫೌಜಿಯಾ ತರನ್ನುಂ ಸ್ವಾಗತಿಸಿದರು.
ಸ್ವಚ್ಛ ಸರ್ವೇಕ್ಷಣೆ ಸಮೀಕ್ಷಾ ತಂಡಕ್ಕೆ ಇದುವರೆಗೆ ವಾರ್ಡ್‍ಗಳಲ್ಲಿ ಕೈಗೊಂಡಿರುವ

ಸ್ವಚ್ಛತಾ ಕ್ರಮಗಳ ಬಗ್ಗೆ ವಿವರ ನೀಡಿದ ಪೌರಾಯುಕ್ತರಾದ ಫೌಜಿಯಾ ತರನ್ನುಂ ರವರು ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ 31ವಾರ್ಡ್‍ಗಳು ಇವೆ. ಎಲ್ಲಾ ವಾರ್ಡುಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ತಮ್ಮ ಸಮೀಕ್ಷೆ ವೇಳೆಯಲ್ಲಿಯೂ ಸೂಚಿಸಲಾಗುವ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದರು.
ಇದೇವೇಳೆ ನಗರಸಭೆ ಅಧ್ಯಕ್ಷರಾದ ಶೋಭರವರು ಮಾತನಾಡಿ ಸ್ವಚ್ಛ ಸರ್ವೇಕ್ಷಣೆ ಯಶಸ್ವಿಗೊಳ್ಳಲು ಎಲ್ಲರ ಸಹಕಾರ ಬೇಕಿದೆ, ಆರೋಗ್ಯ ಶಾಖೆ ಸ್ವಚ್ಛತೆ ಕಾರ್ಯಕ್ಕೆ ವಿಶೇಷವಾಗಿ ಆಧ್ಯತೆ ನೀಡಿ ಶ್ರಮಿಸಬೇಕಿದೆ. ನಾಗರೀಕರೂ ಸಹಾ ವಾರ್ಡ್‍ಗಳಲ್ಲಿ ನೈರ್ಮಲ್ಯ ಉತ್ತಮವಾಗಿರಲು ಸಹಕಾರ ನೀಡಬೇಕು, ಮನೆಮನೆಗೆ ಕಸ ಸಂಗ್ರಹಣೆ ಮಾಡಲು ಬರುವ ಆಟೋ ಟಿಪ್ಪರ್‍ಗಳಿಗೆ ಕಸ ನೀಡಬೇಕು. ನಗರಸಭೆ ನೀಡುವ ಸೂಚನೆಗಳನ್ನು ಪಾಲಿಸಿ ಸ್ವಚ್ಛ ನಗರವನ್ನಾಗಿಸಲು ಕೈಜೋಡಿಸಬೇಕು ಎಂದರು.
ಬಳಿಕ ಕೇಂದ್ರ ತಂಡವು ನಗರಸಭಾ ವ್ಯಾಪ್ತಿಯಲ್ಲಿ ಕೈಗೊಂಡಿರುವ ಸ್ವಚ್ಛತಾ ಕೆಲಸಕ್ಕೆ ಸಂಬಂದಿಸಿದ ದಾಖಲೆಗಳನ್ನು ಪರಿಶೀಲಿಸಿತು. ತದನಂತರ ವಾರ್ಡ್‍ಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುವ ಕೆಲಸ ಆರಂಭಿಸಿತು.
ಮೊದಲಿಗೆ ಡಾ||ಬಿ.ಆರ್.ಅಂಬೇಡ್ಕರ್ ಬಡಾವಣೆಗೆ ಭೇಟಿ ನೀಡಿ ಸ್ವಚ್ಛತಾಕೆಲಸ ಹೇಗೆ ನಡೆದಿದೆ ಎಂಬ ಬಗ್ಗೆ ಖುದ್ಧು ಪರಿಶೀಲನೆ ನಡೆಸಿತು. ಸ್ಥಳೀಯ ಬಡಾವಣೆಯ ನಾಗರೀಕರಿಂದಲೇ ನೈರ್ಮಲ್ಯ ಕಾರ್ಯದ ಬಗ್ಗೆ ಅಭಿಪ್ರಾಯ ಸಂಗ್ರಹಣೆ ಮಾಡಿತು. ನಾಗರೀಕರು ನೀಡಿದ ಪ್ರತಿಕ್ರಿಯೆಯನ್ನು ದಾಖಲು ಮಾಡಿಕೊಂಡಿತು.
ಬಳಿಕ ಶಂಕರಪುರ, ಭ್ರಮರಾಂಬ ಬಡಾವಣೆಗೂ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ಕೇಂದ್ರ ತಂಡ ಮುಂದುವರೆಸಿತು. ಅಲ್ಲಿಯೂ ಪರಿಶೀಲಿಸಿ ನಾಗರೀಕರಿಂದ ಅಭಿಪ್ರಾಯ ಕೇಳಿ ಪ್ರತಿಕ್ರಿಯೆಯನ್ನು ದಾಖಲು ಮಾಡಲಾಯಿತು.
ನಗರಸಭೆ ಸದಸ್ಯರಾದ ಚಿನ್ನಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಟಿ.ಎಸ್.ಸತ್ಯಮೂರ್ತಿ ಪರಿಸರ ಅಭಿಯಂತರರಾದ ಗಿರಿಜಮ್ಮ, ಹಿರಿಯ ಆರೋಗ್ಯ ನಿರೀಕ್ಷಕರಾದ ಎಸ್.ಸರವಣ, ಕೆ.ಎಂ.ಮಹದೇವಸ್ವಾಮಿ ಇದ್ದರು.


ಮತದಾರರ ಜಾಗೃತಿ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ:ಜಿಲ್ಲಾಧಿಕಾರಿ ಬಿ.ರಾಮು 

ಚಾಮರಾಜನಗರ, ಜ.18 - ಜಿಲ್ಲೆಯಲ್ಲಿ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ದಿಸೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಬಿ.ರಾಮು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಮತದಾರರ ಜಾಗೃತಿ ಅಭಿಯಾನ ಅಂಗವಾಗಿ ನಡೆದ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳೂ ಸೇರಿದಂತೆ ಇತರೆ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮತದಾನ ಕಾರ್ಯವು ಅತ್ಯಂತ ಪವಿತ್ರವಾಗಿದ್ದು, ಅರ್ಹರೆಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬೇಕಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಲು ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜನರನ್ನ ಜಾಗೃತಗೊಳಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವ ಕೆಲಸಕ್ಕೆ ಅಧಿಕಾರಿಗಳು ಪರಿಣಾಮಕಾರಿಯಾಗಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಮಾತನಾಡಿ ಮತದಾರರ ಪಟ್ಟಿಯಲ್ಲಿನ ಲೋಪದೋಷಗಳು ಸಾಮಾನ್ಯವಾಗಿ ಚರ್ಚೆಯಾಗುತ್ತದೆ. ಇದಕ್ಕೆ ಅವಕಾಶವಾಗದಂತೆ ಅರ್ಹರೆಲ್ಲರಿಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ಇನ್ನಿತರ ಮಾರ್ಪಾಡುಗಳನ್ನು ನಿಗಧಿತ ಅವಧಿಯೊಳಗೆ ಮಾಡಿದರೆ ಯಾವುದೇ ಗೊಂದಲಕ್ಕೆ ಅವಕಾಶವಾಗುವುದಿಲ್ಲ. ಹೀಗಾಗಿ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಆಧ್ಯತೆ ನೀಡಬೇಕು ಎಂದರು.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆಯಾ ಭಾಗದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ನೆರವಾಗಲಿದ್ದಾರೆ. ಮತಗಟ್ಟೆ ಮಟ್ಟದ ಅಧಿಕಾರಿಗಳಾಗಿ ಸ್ಥಳೀಯ ಜನರ ನೋಂದಣಿ ಮಾರ್ಪಾಡುಗಳಿಗೆ ಸ್ಪಂದಿಸಲಿದ್ದಾರೆ. ಜಿಲ್ಲಾ ಹಾಗೂ ತಾಲ್ಲೋಕುಮಟ್ಟದ ಅಧಿಕಾರಿಗಳು ವ್ಯಾಪಕವಾಗಿ 18 ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಉತ್ತೇಜಿಸಬೇಕು. ಹೆಸರು ಸೇರ್ಪಡೆ ಮಾಡದಿರುವ ಇತರರಿಗೂ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅರಿವು ಮೂಡಿಸಬೇಕು. ದೋಷರಹಿತ ಮತದಾರರ ಪಟ್ಟಿ ಸಿದ್ದವಾಗಲು ಶ್ರಮಿಸಬೇಕು ಎಂದು ಹರೀಶ್ ಕುಮಾರ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಕೆ.ಹೆಚ್.ಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಬಸವರಾಜು, ಜಿಲ್ಲಾ ಸರ್ಜನ್ ರಘುರಾಂ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೋಕುಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.



ಜ. 19ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ, ಜ. 18 - ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ಅವರು ಜನವರಿ 19ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ ಕ್ಷೇತ್ರಕ್ಕೆ ಆಗಮಿಸಿ ಪ್ರವಾಸ ಕೈಗೊಂಡು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಸಂಜೆ 4 ಗಂಟೆಗೆ ಮೈಸೂರಿಗೆ ತೆರಳುವರು ಎಂದು ಸಚಿವರ ವಿಶೇಷಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 20ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ 

ಚಾಮರಾಜನಗರ, ಜ. 18 - ಚಾಮರಾಜನಗರ ತಾಲೂಕಿನ ಚಂದಕವಾಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಜನವರಿ 20ರಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹಿರಿಕೆರೆ, ಕಾಳಿಕಾಂಬ, ಚಂದÀಕವಾಡಿ, ರೇಚಂಬಳ್ಳಿ, ಮಲ್ಲೇದೇವನಹಳ್ಳಿ, ನವೋದಯ, ಹೊಂಡರಬಾಳು, ಜ್ಯೋತಿಗೌಡನಪುರ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಜ. 20ರಂದು ನಗರದಲ್ಲಿ ಮರಗಳ ಹರಾಜು

ಚಾಮರಾಜನಗರ, ಜ. 18 :- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಚಾಮರಾಜನಗರ ಉಪವಿಭಾಗ ಕಚೇರಿಯ ಆವರಣದಲ್ಲಿರುವ ಬಾಗೆ ಮರ, 3 ನೀಲಗಿರಿ ಮರ ಹಾಗೂ ಒಂದು ಕಾಡು ಜಾತಿಯ ಮರವನ್ನು ಜನವರಿ 20ರಂದು ನಗರದ ಉಪವಿಭಾಗ ಕಚೇರಿ ಆವರಣದಲ್ಲಿ ಬಹಿರಂಗ ಹರಾಜು ಮಾಡಲಿದೆ.
ಬಾಗೆ ಮರವನ್ನು ಅಂದು ಬೆಳಿಗ್ಗೆ 11.30 ಗಂಟೆಗೆ, ನೀಲಗಿರಿ ಹಾಗೂ ಕಾಡು ಜಾತಿ ಮರವನ್ನು ಮಧ್ಯಾಹ್ನ 12.30 ಗಂಟೆಗೆ ಹರಾಜು ಮಾಡಲಾಗುವುದು.
ಬಹಿರಂಗ ಹರಾಜಿನಲ್ಲಿ ಸಾರ್ವಜನಿಕರು ಭಾಗವಹಿಸಬಹುದಾಗಿದ್ದು ಭದ್ರತಾ ಠೇವಣಿ ಇನ್ನಿತರ ವಿವರಗಳಿಗೆ ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ  ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ (08226-223904) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Wednesday, 17 January 2018

ಸಂಸದ ಧ್ರುವನಾರಾಯಣ ಅವರಿಂದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಪರಿಶೀಲನೆ , ಹಳೆ ವಿದ್ಯುತ್ ತಂತಿ ಕಂಬ ಬದಲಿಸಲು ಜಿ.ಪಂ. ಅಧ್ಯಕ್ಷರ ಸೂಚನೆ(17-01-2018)


ಸಂಸದ ಧ್ರುವನಾರಾಯಣ ಅವರಿಂದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಪರಿಶೀಲನೆ 
 ಚಾಮರಾಜನಗರ, ಜ. 17- ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 209 ವಿಸ್ತರಣೆ ಕಾಮಗಾರಿಯ ವಿವಿಧ ಸ್ಥಳಕ್ಕೆ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಬೆಂಗಳೂರಿನಿಂದ  ಚಾಮರಾಜನಗರ ಜಿಲ್ಲೆಯ ಮಾರ್ಗವಾಗಿ ತಮಿಳುನಾಡಿನ ದಿಂಡಿಗಲ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 209ರ ವಿಸ್ತರಣೆ ಕಾಮಗಾರಿಯು 1961.94 ಕೋಟಿ ರೂ.ಗಳಾಗಿದ್ದು ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ಸ್ಥಳಗಳಿಗೆ ಧ್ರುವನಾರಾಯಣ ಅವರು ಭೇಟಿ ಕೊಟ್ಟು ವೀಕ್ಷಣೆ ಮಾಡಿದರು.
ಮೊದಲಿಗೆ ನಗರದ ಹೊರವಲಯ ಸೋಮವಾರಪೇಟೆ ಬಳಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದರು. ಹಲಹೊತ್ತು ನಿಂತು ಅಲ್ಲಿನ ಕಾಮಗಾರಿಯನ್ನು ವೀಕ್ಷಿಸಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು. ಬಳಿಕ ನಂಜನಗೂಡು-ಮೈಸೂರು ಮುಖ್ಯ ರಸ್ತೆಯ ಬಳಿ ತೆರಳಿ ಅಲ್ಲಿಯೂ ಕಾಮಗಾರಿ ನಿರ್ವಹಣೆ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ದೊಡ್ಡರಾಯಪೇಟೆ ಬಳಿ ನಿರ್ಮಾಣವಾಗಲಿರುವ ಬೈಪಾಸ್ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟು ಪ್ರಗತಿಯಲ್ಲಿರುವ ಕೆಲಸವನ್ನು ಪರಿಶೀಲಿಸಿದರು. ತದನಂತರ ಸಂತೆಮರಹಳ್ಳಿ ಬಳಿಯೂ ಬೈಪಾಸ್ ನಿರ್ಮಾಣಕ್ಕೆ ಗುರುತಿಸಲÁಗಿರುವ ಜಾಗಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕಾಮಗಾರಿ ನಿರ್ವಹಣೆ ಸಂಬಂಧ ಅಗತ್ಯ ಸೂಚನೆಯನ್ನು ಧ್ರುವನಾರಾಯಣ ಅವರು ನೀಡಿದರು.
ರಾಷ್ಟ್ರೀಯ ಹೆದ್ದಾರಿ 209 ವಿಸ್ತರಣೆ ಕಾಮಗಾರಿ ಕುರಿತು ಸುದ್ದಿಗಾರರಿಗೆ ವಿವರ ನೀಡಿದ ಧ್ರುವನಾರಾಯಣ ಅವರು ಒಟ್ಟು ರಸ್ತೆ ನಿರ್ಮಾಣಕ್ಕೆ 1008 ಕೋಟಿ ರೂ. ಹಾಗೂ ಭೂಸ್ವಾಧೀನಕ್ಕಾಗಿ 953.94 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಜಿಲ್ಲೆಯಲ್ಲಿ 67.400 ಕಿ.ಮೀ. ಉದ್ದದಷ್ಟು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಗಲಿದೆ. 2 ತಿಂಗಳ ಹಿಂದೆಯೇ ಕಾಮಗಾರಿ ಆರಂಭವಾಗಿತ್ತು. ಇದುವರೆಗೆ 44 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.
ಬೆಂಗಳೂರಿನಿಂದ ಕನಕಪುರದವರೆಗೆ ಚತುಷ್ಪಥ ಹೆದ್ದಾರಿಯಾಗಿ ಅಭಿವೃದ್ಧಿಗೊಳ್ಳಲಿದೆ. ಚಾಮರಾಜನಗರ ತಾಲೂಕಿನಲ್ಲಿ 7.570 ಕಿ.ಮೀ., ಕೊಳ್ಳೇಗಾಲ ತಾಲೂಕಿನಲ್ಲಿ 8.060 ಕಿ.ಮೀ, ಸತ್ತೇಗಾಲ ಬಳಿ 6.580 ಕಿ.ಮೀ.ನಷ್ಟು ಬೈಪಾಸ್ ನಿರ್ಮಾಣವಾಗಲಿದೆ. ಒಟ್ಟಾರೆ 42.14 ಕಿ.ಮೀ. ನಷ್ಟು ಬೈಪಾಸ್ ನಿರ್ಮಾಣವಾಗಲಿದೆ ಎಂದು ಧ್ರುವನಾರಾಯಣ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 3 ಬೃಹತ್ ಸೇತುವೆಗಳು ನಿರ್ಮಾಣವಾಗಲಿವೆ. ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ, ಮುಡಿಗುಂಡ ಹಾಗೂ ಚಾಮರಾಜನಗರ ತಾಲೂಕಿನ ಚಿಕ್ಕಹೊಳೆ ಬಳಿ ಈ ಬೃಹತ್ ಸೇತುವೆಗಳನ್ನು ನಿರ್ಮಿಸಲಾಗುತ್ತದೆ. 12 ಕಿರು ಸೇತುವೆಗಳು ನಿರ್ಮಾಣಗೊಳ್ಳಲಿವೆ. ಅಲ್ಲದೆ ಒಂದು ರೈಲ್ವೆ ಮೇಲು ಸೇತುವೆ, 3 ವೆಹಿಕಲ್ ಅಂಡರ್ ಪಾಸ್ ಸಹ ಬರಲಿದೆ ಎಂದು ಲೋಕಸಭಾ ಸದಸ್ಯರು ತಿಳಿಸಿದರು.
ಚಾಮರಾಜನಗರ ಸಮೀಪ ರೈಲು ಹಳಿಯನ್ನು ದಾಟಿ ಬೈಪಾಸ್ ಹಾದುಹೋಗಲಿದ್ದು ಇಲ್ಲಿಯೇ ರೈಲ್ವೆ ಮೇಲು ಸೇತುವೆ ನಿರ್ಮಾಣವಾಗಲಿದೆ. 193 ಕನ್ವರ್ಟ್‍ಗಳು ನಿರ್ಮಾಣಗೊಳ್ಳಲಿವೆ. ಒಟ್ಟಾರೆ ರಾಷ್ಟ್ರೀಯ ಹೆದ್ದಾರಿ 209ರ ಅಭಿವೃದ್ಧಿಯಿಂದ ಜಿಲ್ಲೆಯ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಧ್ರುವನಾರಾಯಣ ಅವರು ತಿಳಿಸಿದರು.
ಹೆದ್ದಾರಿ ಭೂಸ್ವಾಧೀನಕ್ಕಾಗಿ ಕೊಳ್ಳೇಗಾಲ ತಾಲೂಕಿನಲ್ಲಿ 19.71 ಕೋಟಿ ರೂ., ಯಳಂದೂರು ತಾಲೂಕಿನಲ್ಲಿ 16.62, ಚಾಮರಾಜನಗರ ತಾಲೂಕಿನಲ್ಲಿ 39.34 ಕೋಟಿ ರೂ.ಗಳನ್ನು ಪರಿಹಾರÀವಾಗಿ ನೀಡಲಾಗುತ್ತದೆ. ಇದುವರೆಗೆ ಕೊಳ್ಳೇಗಾಲ ತಾಲೂಕಿಗೆ 8.54 ಕೋಟಿ ರೂ., ಯಳಂದೂರಿಗೆ 3.56 ಕೋಟಿ. ರೂ., ಚಾಮರಾಜನಗರ ತಾಲೂಕಿಗೆ 14.97 ಕೋಟಿ ರೂ. ಪರಿಹಾರವಾಗಿ ವಿತರಿಸಲಾಗಿದೆ ಎಂದು ಧ್ರುವನಾರಾಯಣ ವಿವರಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ನಗರಸಭೆ ಅಧ್ಯಕ್ಷರಾದ ಶೋಭಾ ಪುಟ್ಟಸ್ವಾಮಿ, ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆ ವ್ಯವಸ್ಥಾಪಕ ಶ್ರೀಧರ್, ರವೀಂದ್ರನಾಥ್, ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಜ. 18ರಂದು ಶಿವಯೋಗಿ ಸಿದ್ಧರಾಮ, ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ ಜಯಂತಿ ಆಚರಣೆ ಪೂರ್ವಭಾವಿ ಸಭೆ 

ಚಾಮರಾಜನಗರ, ಜ. 17 - ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿ ಶಿವಯೋಗಿ ಸಿದ್ಧರಾಮ, ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ ಮತ್ತು ಮಡಿವಾಳ ಮಾಚಿದೇವರ ಜಯಂತಿ ಆಚರಿಸುವ ಸಂಬಂಧ ಚರ್ಚಿಸುವ ಸಲುವಾಗಿ ಜನವರಿ 18ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆಡಿಪಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ನಾಲ್ಕೂ ಜಯಂತಿಗಳನ್ನು ಹಮ್ಮಿಕೊಳ್ಳುವ ಸಂಬಂಧ ನಡೆಯಲಿರುವ ಪೂರ್ವಭಾವಿ ಸಭೆಗೆ ವಿವಿಧ ಸಂಘಸಂಸ್ಥೆಯ ಮುಖಂಡರು, ಕನ್ನಡಪರ ಸಂಸ್ಥೆಯ ಮುಖಂಡರು, ಸಮುದಾಯ ಪ್ರತಿನಿಧಿಗಳು, ಮುಖಂಡರು, ನಾಗರಿಕರು ಹಾಜರಾಗಿ ಸಲಹೆ ನೀಡುವಂತೆ ಜಿಲ್ಲಾಡಳಿತದ ಪ್ರಕಟಣೆ ಕೋರಿದೆ.
   

ಗ್ರಾಮೀಣ ಭಾಗಗಳಲ್ಲಿ ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ಜಾಗೃತಗೊಳಿಸಲು ಸಿ.ಇ.ಒ ಸೂಚನೆ 

ಚಾಮರಾಜನಗರ, ಜ.12 - ಗ್ರಾಮೀಣ ಭಾಗಗಳಲ್ಲಿ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವ್ಯಾಪಕವಾಗಿ ತಿಳಿವಳಿಕೆ ನೀಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮುಂದಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಸೂಚಿಸಿದರು.
ಮತದಾರರ ಜಾಗೃತಿ ಅಭಿಯಾನ ಅಂಗವಾಗಿ ಯಳಂದೂರು, ಕೊಳ್ಳೇಗಾಲ ಮತ್ತು ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತ್ಯೇಕವಾಗಿ ನಡೆದ ಪಿ.ಡಿ.ಒ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಂಘ ಸಂಸ್ಥೆಯ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜನವರಿ 22 ರವರೆಗೆ ಚುನಾವಣಾ ಆಯೋಗದಿಂದ ಕಡ್ಡಾಯವಾಗಿ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಮತ್ತು ದೋಷಗಳಿದ್ದಲ್ಲಿ ಸರಿಪಡಿಸಲು ಸೂಚನೆ ನೀಡಲಾಗಿದೆ. ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಈ ಬಗ್ಗೆ ಜನರಿಗೆ ಅರಿವನ್ನು ಮೂಡಿಸಬೇಕಾಗಿರುವುದರಿಂದ ಗ್ರಾಮಗಳಲ್ಲಿ ಟಾಂ ಟಾಂ ಮೂಲಕ ಪ್ರಚುರಪಡಿಸುವಂತೆ ಹರೀಶ್ ಕುಮಾರ್ ಅವರು ನಿರ್ದೇಶನ ನೀಡಿದರು.
ಆಶಾ ಕಾರ್ಯಕತೆಯರು, ಅಂಗನವಾಡಿ ಕಾರ್ಯಕತೆಯರು ಹಾಗೂ ಸಂಘ ಸಂಸ್ಥೆಯ ಪ್ರತಿನಿಧಿಗಳು ಗ್ರಾಮೀಣಾ ಭಾಗಗಳಲ್ಲಿ ಮನೆ ಮನೆಗೆ ತೆರಳಿ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಮತ್ತು ವಿಳಾಸಗಳಲ್ಲಿ ದೋಷಗಳಿದ್ದಲ್ಲಿ ಸರಿಪಡಿಸಿಕೊಳ್ಳಲು ಮನವರಿಕೆ ಮಾಡಿಕೊಡಬೇಕು ಎಂದರು.
ಮರಣ ಅಥವಾ ಎರಡು ಕಡೆ ಮತದಾರರ ಪಟ್ಟಿಯಲ್ಲಿ ಇರುವಂತಹ ಹೆಸರುಗಳನ್ನು ತೆಗೆದು ಹಾಕಲು ಸಂಬಂಧಪಟ್ಟ ನಮೂನೆಗಳನ್ನು ಅಗತ್ಯ ಮಾಹಿತಿಯೊಂದಿಗೆ ಭರ್ತಿ ಮಾಡಿ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿ ಅಥವಾ ತಾಲ್ಲೂಕು ಕಚೇರಿಗೆ ಸಲ್ಲಿಸುವಂತೆ ತಿಳಿಸಬೇಕು. ಎಲ್ಲರಿಗೂ ಮತದಾನದ ಮಹತ್ವದ ಬಗ್ಗೆ ತಿಳಿಸಿಕೊಟ್ಟು ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳವಂತೆ ಅರಿವು ಮೂಡಿಸಬೇಕು ಎಂದು ಹರೀಶ್ ಕುಮಾರ್ ಅವರು ತಿಳಿಸಿದರು.
ಕೊಳ್ಳೇಗಾಲ ತಾಲ್ಲೂಕು ಕೇಂದ್ರದ ಗುರುಭವನದಲ್ಲಿ ನಡೆದ ಮತಗಟ್ಟೆ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿ.ಇ.ಒ ರವರು ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವುದು ಮತ್ತು ಮರಣ ಅಥವಾ ಎರಡು ಕಡೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದನ್ನು ತೆಗೆದು ಹಾಕಲು ಕ್ರಮ ತೆಗೆದುಕೊಳ್ಳಬೇಕು.  ಎಲ್ಲಾ ಮತಗಟ್ಟೆ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಂದ ನಮೂನೆ-6,7,8 ಮತ್ತು ನಮೂನೆ(8ಎ) ಗಳನ್ನು ಪಡೆದು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಇತರೆ ಪ್ರಕ್ರಿಯೆಯನ್ನು ಮನೆ ಮನೆಗೆ ತೆರಳಿ ನಿರ್ವಹಿಸಬೇಕೆಂದು ಸೂಚಿಸಿದರು.
ಉಪ ವಿಭಾಗಾಧಿಕಾರಿ ಫೌಜಿಯಾ ತರನಮ್ ಮಾತನಾಡಿ ಮತಗಟ್ಟೆ ಅಧಿಕಾರಿಗಳು ಗ್ರಾಮಗಳಲ್ಲಿ ಜನರ ಜೊತೆ ಹೆಚ್ಚಿನ ಸಂಪರ್ಕ ವಿಟ್ಟುಕೊಳ್ಳಬೇಕು. ನಿಮ್ಮ ಮತಗಟ್ಟೆಯ ವ್ಯಾಪ್ತಿಯಲ್ಲಿ ಇರುವಂತಹ ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ನಿಮ್ಮ ವಿವರಗಳನ್ನು ದೊರವಾಣಿ ಸಂಖ್ಯೆಯ ಸಮೇತ ನಾಮಫಲಕದಲ್ಲಿ ಹಾಕಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎನ್.ಮುನಿರಾಜಪ್ಪ, ಮುಖ್ಯ ಯೋಜನಾಧಿಕಾರಿ ಮಾದೇಶು, ಮುಖ್ಯ ಲೆಕ್ಕಾಧಿಕಾರಿ ಬಸವರಾಜು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶಿಧರ್, ಪ್ರಕಾಶ್, ರಮೇಶ್ ಇತರರು ಉಪಸ್ಥಿತರಿದ್ದರು.
   

ಹಳೆ ವಿದ್ಯುತ್ ತಂತಿ ಕಂಬ ಬದಲಿಸಲು ಜಿ.ಪಂ. ಅಧ್ಯಕ್ಷರ ಸೂಚನೆ

ಚಾಮರಾಜನಗರ, ಜ. 17 - ಜಿಲ್ಲೆಯಲ್ಲಿ ಹಳೆಯ ಕಬ್ಬಿಣದ  ಹಾಗೂ ಮರದ ವಿದ್ಯುತ್ ಕಂಬಗಳನ್ನು ಬದಲಿಸದ ಕಾರಣ ರೈತರ ಜಮೀನುಗಳಲ್ಲಿ ವಿದ್ಯುತ್ ತಂತಿ ಬಿದ್ದು, ಬೆಳೆ ಹಾನಿ ಪ್ರಾಣಹಾನಿಯಂತಹ ಪ್ರಕರಣಗಳು ಸಂಭವಿಸುತ್ತಿದೆ. ಈ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಸೂಚನೆ ನೀಡಿದರು.
      ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ವಿದ್ಯುತ್  ಇಲಾಖೆಯಲ್ಲಿ ಅನುದಾನದ ಸಮಸ್ಯೆಯಿಲ್ಲ. ಅನುದಾನ ಲಭ್ಯ ಇರುವಾಗ ಕಂಬ ತಂತಿ ಬದಲಿಸಲು ನಿಮಗೇನು ತೊಂದರೆ? ನಿಮ್ಮ ಲೈನ್‍ಮೆನ್‍ಗಳು ಏನು ಮಾಡುತ್ತಿದ್ದಾರೆ ಎಂದು ಸೆಸ್ಕ್ ಎಇಇ ಅವರನ್ನು ಪ್ರಶ್ನಿಸಿದರು.
      ಉಪಾಧ್ಯಕ್ಷರಾದ ಯೋಗೇಶ್ ಅವರು ಮಾತನಾಡಿ, ಬೇಸಿಗೆ ಕಾಲ ಆರಂಭವಾಗುತ್ತಿದೆ. ಈ ಸಮಯದಲ್ಲಿ ಕಬ್ಬಿನ ಗದ್ದೆಗಳಲ್ಲಿ ವಿದ್ಯುತ್ ತಂತಿಗಳು ಕಳಚಿ ಬಿದ್ದು, ವರ್ಷದಿಂದ ಬೆಳೆದ ಬೆಳೆಗೆ ಬೆಂಕಿ ತಗುಲುತ್ತದೆ. ಹೀಗೆ ಬೆಂಕಿ ತಗುಲಿ ಉಳಿದುಕೊಂಡ ಕಬ್ಬಿಗೂ ಸಕ್ಕರೆ ಕಾರ್ಖಾನೆಯವರು ಸರಿಯಾದ ಬೆಲೆ ನೀಡುವುದಿಲ್ಲ. ಇದರಿಂದ ರೈತರಿಗೆ ಬಹಳ ಅನ್ಯಾಯವಾಗುತ್ತಿದೆ. ಚಾಮುಂಡೇಶ್ವರಿ ವಿದ್ಯುತ್ ನಿಗಮ (ಸೆಸ್ಕ್) ಅಧಿಕಾರಿಗಳು ಹಳೆಯ ಕಂಬಗಳನ್ನ ಬದಲಿಸಬೇಕು. ವಿದ್ಯುತ್ ತಂತಿ ಜೋಲಾಡುತ್ತಿದ್ದರೆ ಅದನ್ನು ಸರಿಪಡಿಸಬೇಕು ಎಂದರು.
      ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್ ಮಾತನಾಡಿ ಈ ಹಿಂದಿನಿಂದಲೂ ಮರದ, ಕಬ್ಬಿಣದ, ಹಾಗೂ ಟೊಳ್ಳಾದ ವಿದ್ಯುತ್ ಕಂಬಗಳನ್ನು ತೆಗೆಸಿಹಾಕಲಾಗುವುದು ಎಂದು ಅಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು.
     ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಅರಸು ಅಭಿವೃದ್ಧಿ ನಿಗಮದಲ್ಲಿ ಕೊರೆಸಲಾದ ಬೋರ್‍ವೆಲ್‍ಗಳಿಗೆ ನಿಗದಿತ ವೇಳೆಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಇದರಿಂದ ಫಲಾನುಭವಿಗಳಿಗೆ ಸರ್ಕಾರ ಸೌಲಭ್ಯ ನೀಡಿದರೂ, ಅದು ತಲುಪುತ್ತಿಲ್ಲ ಎಂದು ನವೀನ್ ದೂರಿದರು.
     ಅಧ್ಯಕ್ಷ ರಾಮಚಂದ್ರ ಅವರು ಸೆಸ್ಕ್ ಎಇಇ ಗೆ ಸೂಚನೆ ನೀಡಿ, ಕೂಡಲೇ ಹಳೆಯ ಶಿಥಿಲ ಮರದ, ಕಬ್ಬಿಣದ ವಿದ್ಯುತ್ ಕಂಬಗಳನ್ನು ಬದಲಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ಅಂಬೇಡ್ಕರ್ ನಿಗಮ ಇತ್ಯಾದಿ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಆದ್ಯತೆಯ ಮೇಲೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು  ಎಂದು ಸೂಚಿಸಿದರು.
    ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹರೀಶ್‍ಕುಮಾರ್ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಎಷ್ಟು ಮಂದಿ ನಕಲಿ ವೈದ್ಯರಿದ್ದಾರೆ? ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರನ್ನು ಪ್ರಶ್ನಿಸಿದರು.
     ಡಿಎಚ್‍ಓ ಡಾ. ಪ್ರಸಾದ್ ಉತ್ತರಿಸಿ ಕಳೆದ ವರ್ಷ ನಾಲ್ವರು ವೈದ್ಯರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಅದರಲ್ಲಿ ಓರ್ವ ಶಿಕ್ಷಕರೂ ಇದ್ದಾರೆ ಎಂದರು. ಇತ್ತೀಚಿಗೆ ತೆರಕಣಾಂಬಿಯಲ್ಲಿ ಖಾಸಗಿ ವೈದ್ಯೆಯರೊಬ್ಬರ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.
 



















Tuesday, 16 January 2018

ಮತದಾರರಿಗೆ ಚುನಾವಣಾ ನೊಂದಣಿ ಅರಿವು ಮೂಡಿಸಿ: ಸಿ.ಇ.ಒ,ಕೊಳವೆಬಾವಿ ಕೊರೆಯಲು ಅನುಮತಿ ಕಡ್ಡಾಯ : ಸುರಕ್ಷತಾ ಕ್ರಮಗಳನ್ನು ಪಾಲಿಸಿ - ಜಿಲ್ಲಾಧಿಕಾರಿ ಬಿ. ರಾಮು ಸೂಚನೆ (16-01-2018)


ಮತದಾರರಿಗೆ ಚುನಾವಣಾ ನೊಂದಣಿ ಅರಿವು ಮೂಡಿಸಿ: ಸಿ.ಇ.ಒ

ಚಾಮರಾಜನಗರ, ಜ. 16- 18 ವರ್ಷ ವಯೋಮಿತಿ ದಾಟಿದ ಪ್ರತಿಯೊಬ್ಬ ಮತದಾರರನ್ನು ಜ. 22ರೊಳಗೆ ನೊಂದಾಯಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ಜಿ.ಪಂ. ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಮಟ್ಟದ ಚುನಾವಣಾ ಪೂರ್ವ ಸಭೆಯನ್ನದ್ದೇಶಿಸಿ ಅವರು ಮಾತನಾಡಿದರು.ಚುನಾವಣಾ ಪೂರ್ವ ಸಿದ್ದತೆಯಲ್ಲಿ ಮತದಾರರ ವ್ಯವಸ್ಥಿತ ನೊಂದಣಿ ಮತ್ತು ಚುನಾವಣಾ ಪಾಲ್ಗೊಳ್ಳುವಿಕೆ (Sveeಠಿ) ಅತ್ಯಂತ ಮಹತ್ವದ್ದಾಗಿದೆ. 2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ 18 ವರ್ಷ ವಯೋಮಿತಿ ಮೀರಿದವರನ್ನು ಕಡ್ಡಾಯವಾಗಿ ನೊಂದಾಯಿಸಲು ಕ್ರಮವಹಿಸಬೇಕು. ಶಾಲಾ ಕಾಲೇಜಿನ ಮುಖ್ಯಸ್ಥರು ವಿದ್ಯಾರ್ಥಿ ಮತದಾರರ ನೊಂದಾವಣೆಗೆ ನಮೂನೆ 6ನ್ನು ಕಡ್ಡಾಯವಾಗಿ ವಿತರಿಸಿ ಭರ್ತಿಮಾಡಿ ಸಲ್ಲಿಸಬೇಕು ಎಂದರು.ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಬಹುಮುಖ್ಯವಾಗಿದೆ. ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಮತ್ತು ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ಕ್ಷೇತ್ರಮಟ್ಟದ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಲು ಕ್ರಮವಹಿಸುವಂತೆ ತಿಳಿಸಿದರು.ಮಹಿಳೆಯರು, ವಿಕಲಚೇತನರು, ಹೆಚ್.ಐ.ವಿ ಪೀಡಿತರು, ಲಿಂಗತ್ವ ಅಲ್ಪಸಂಖ್ಯಾತರುಗಳನ್ನು ಭೇಟಿ ಮಾಡಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು. ಈ ನಿಟ್ಟನಲ್ಲಿ ಕ್ಷೇತ್ರಮಟ್ಟದ ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಂಡು ಅರಿವು ಮೂಡಿಸುವ ಕೆಲಸವಾಗಬೇಕು. ಜಿಲ್ಲೆಯಾದ್ಯಂತ ಜ. 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಕಡ್ಡಾಯವಾಗಿ ಕ್ಷೇತ್ರಮಟ್ಟದಲ್ಲಿ ಆಯೋಜಿಸುವಂತೆ ಸೂಚನೆರ ನೀಡಿದರು.ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಯವರು ಮತ್ತು ಪಂಚಾಯತ್ ಅಬಿವೃದ್ಧಿ ಅಧಿಕಾರಿಗಳು 18 ವರ್ಷ ಮೀರಿದ ಯುವ ಮತದಾರರ ಹೆಸರನ್ನು ಸೇರ್ಪಡೆಗೊಳಿಸಲು ಗ್ರಾಮಗಳಲ್ಲಿ ಟಾಂ ಟಾಂ ಪ್ರಚಾರ ನೀಡಬೇಕು ಇದಕ್ಕಾಗಿ ಹೊಸ ಮತದಾರರ ನೊಂದಣಿ ದಿನಾಂಕವನ್ನು ಚುನಾವಣಾ ಆಯೋಗವು ಜ. 12ರಿಂದ ಜ. 22 ರವರೆಗೆ ವಿಸ್ತರಿಸಿದೆ ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು ನೊಂದಣಿ ಸಮಯದಲ್ಲಿ ವಿಕಲಚೇತನರಿಗೆ ಸೂಕ್ತ ವ್ಯವಸ್ತೆ ಕಲ್ಪಿಸಬೇಕು. ಗುಡ್ಡಗಾಡು ಪ್ರದೇಶದ ನಿವಾಸಿಗಳಿಗೆ ಸೂಕ್ತ ಮಾಹಿತಿ ನೀಡಿ ನೊಂದಣಿಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಬೇಕು. ನಮೂನೆ 6ರಲ್ಲಿ ಹೊಸದಾಗಿ ನೊಂದಣಿ ಮಾಡುವುದು, ನಮೂನೆ 6(ಎ) ವಿದೇಶದಲ್ಲಿ ನಾಗರೀಕತ್ವ, ನಮೂನೆ 7 ರಲ್ಲಿ ಮರಣ ಹಾಗೂ ಮದುವೆಯಾಗಿ ಹೊರಹೋಗಿರುವವರನ್ನು ರದ್ದು ಮಾಡುವುದು, ನಮೂನೆ 8 ರಲ್ಲಿ ವರ್ಗಾವಣೆ ಮಾಡುವುದು, ನಮೂನೆ 8(ಎ) ನಲ್ಲಿ ಹೆಸರು ಮತ್ತು ಇತರೆ ತಿದ್ದುಪಡಿಗೆ ಅವಕಾಶ ಕಲ್ಪಿಸುವುದನ್ನು ತ್ವರಿತವಾಗಿ ಮಾಡಬೇಕಾಗಿದೆ ಎಂದು ಹರೀಶ್‍ಕುಮಾರ್ ಅವರು ತಿಳಿಸಿದರು.ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ. ಜಿಲ್ಲಾ ಆರೋಗ್ಯಾಧಿಕಾರಿ ಹಾಗು ಇತರೆ ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು.


ಕೊಳವೆಬಾವಿ ಕೊರೆಯಲು ಅನುಮತಿ ಕಡ್ಡಾಯ : ಸುರಕ್ಷತಾ ಕ್ರಮಗಳನ್ನು ಪಾಲಿಸಿ - ಜಿಲ್ಲಾಧಿಕಾರಿ ಬಿ. ರಾಮು ಸೂಚನೆ

ಚಾಮರಾಜನಗರ, ಜ. 16: ಜಿಲ್ಲೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಯಲು 15 ದಿನ ಮುಂಚಿತವಾಗಿಯೇ ಸಂಬಂಧಪಟ್ಟ ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ನಿರಾಕ್ಷೇಪಣಾ ಪತ್ರ ಪಡೆಯಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ.
ಜಮೀನು ಮಾಲೀಕರು, ಬೋರ್‍ವೆಲ್ ಕೊರೆಯುವವರು 15 ದಿನ ಮುಂಚಿತವಾಗಿಯೇ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಆಯುಕ್ತರು ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಿ ನಿರಾಪೇಕ್ಷಣಾ ಪತ್ರ ಪಡೆದುಕೊಳ್ಳಬೆಕು. ಅಧಿಸೂಚಿತ ಪ್ರದೇಶದಲ್ಲಿ ಕೊಳವೆಬಾವಿ ಕೊರೆಯುವ ಮೊದಲು ಜಿಲ್ಲಾಮಟ್ಟದ ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಅನುಷ್ಠಾನ ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಖಾಸಗಿ ಬೋರ್ ವೆಲ್ ಪಡೆಯಬೇಕಾದಲ್ಲಿ ಕರ್ನಾಟಕ ಅಂತರ್ಜಲ ಸಂರಕ್ಷಣಾ ಕಾಯಿದೆ ಪ್ರಕಾರ ಸಾರ್ವಜನಿಕ ಕೊಳವೆ ಬಾವಿ, ತೆರೆದ ಬಾವಿಯಿಂದ 500 ಮೀ. ಅಂತರದಲ್ಲಿ ಯಾವುದೇ ರೀತಿಯ ಇನ್ನೊಂದು ಬಾವಿ ಕೊರೆಯುವಂತಿಲ್ಲ. ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011ರಂತೆ ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೊಂದಣಿಯಾಗಿ ನಮೂನೆ 7ಎ ಹೊಂದಿರುವ ರಿಗ್ ವಾಹನಗಳಿಂದ ಮಾತ್ರ ಕೊಳವೆ ಬಾವಿಗಳನ್ನು ಕೊರೆಸಬೇಕು. ಬೋರ್ ವೆಲ್ ಕೊರೆಯುವಾಗ ಸ್ಥಳದಲ್ಲಿ ರಿಗ್ ಮಾಲೀಕರು  ಹಾಗೂ ಕೊರೆಸುವವರ ಹೆಸರು ಇರುವ ನಾಮಫಲಕಗಳನ್ನು ಹಾಕಬೇಕು.
ಸಫಲ ಅಥವಾ ವಿಫಲ ಕೊಳವೆ ಬಾವಿಗಳಿಗೆ ಕೇಸಿಂಗ್ ಅಳವಡಿಸಿ ಸುತ್ತ ಕಾಂಕ್ರೀಟ್ ಪ್ಲಾಟ್ ಫಾರಂ ನಿರ್ಮಿಸಿ ಪೈಪ್‍ಗೆ ಭದ್ರವಾಗಿ ಕ್ಯಾಪ್ ಹಾಕಿ ವೆಲ್ಡಿಂಗ್ ಮಾಡಿಸಬೇಕು. ಒಂದುವೇಳೆ ಕೊಳವೆ ಬಾವಿಗಳನ್ನು ಸುರಕ್ಷಿತವಾಗಿ ಮುಚ್ಚದೇ ಇದ್ದು ಯಾವುದೇ ಅನಾಹುತ ಸಂಭವಿಸಿದಲ್ಲಿ ಬೋರ್‍ವೆಲ್ ಕೊರೆದ ಸಂಸ್ಥೆ ಹಾಗೂ ಜಮೀನಿನ ಮಾಲೀಕರೇ ನೇರ ಹೊಣೆಗಾರರಾಗುತ್ತಾರೆ. ಸುರಕ್ಷತೆ ವಹಿಸದೇ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ವೈಫಲ್ಯ ಕಂಡುಬಂದಲ್ಲಿ ಜಿಲ್ಲಾಡಳಿತದಿಂದ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ.
ರಿಗ್ ಮಾಲೀಕರು ಏಜೆನ್ಸಿಯವರು ಕೊಳವೆ ಬಾವಿ ಕೊರೆಯುವ ಕಾರ್ಯ ಮುಕ್ತಾಯವಾದ ಕೂಡಲೇ ನಮೂನೆ 1 ಸಿಯಲ್ಲಿ ವಿವರಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯತ್, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ಅಧಿಕಾರಿಗಳಿಗೆ ಹಾಗೂ ಅಧಿನಿಯಮದ ಪ್ರಕಾರ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
ಗ್ರಾಮಾಂತರ ಪ್ರದೇಶದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಕಾರ್ವನಿರ್ವಾಹಕ ಅಧಿಕಾರಿಗಳು, ನಗರ ಪಟ್ಟಣ ಪ್ರದೇಶದಲ್ಲಿ ಕಿರಿಯ ಎಂಜಿನಿಯರ್, ಅನುಷ್ಠಾನ ಅಧಿಕಾರಿಗಳು ಮೇಲ್ವಿಚಾರಕರಾಗಿ ಇರುತ್ತಾರೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 17ರಂದÀು ಜಿ.ಪಂ. ಕೆಡಿಪಿ ಸಭೆ 

ಚಾಮರಾಜನಗರ, ಜ. 16 - ಚಾಮರಾಜನಗರ ಜಿಲ್ಲಾ ಪಂಚಾಯತ್ ಮಾಸಿಕ ಕೆಡಿಪಿ ಸಭೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಜನವರಿ 17ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಜ. 18ರಂದು ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಾಗಾರ ಉದ್ಘಾಟನಾ ಸಮಾರಂಭ

ಚಾಮರಾಜನಗರ, ಜ. 16 - ಜಿಲ್ಲಾ ಪಂಚಾಯತ್‍ನ ಕೈಮಗ್ಗ ಮತ್ತು ಜವಳಿ ಇಲಾಖೆಯು ಕೊಳ್ಳೇಗಾಲದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಜನವರಿ 18ರಂದು ಬೆಳಿಗ್ಗೆ 11 ಗಂಟೆಗೆ ಸರ್ಕಾರದ ನೂತನ ಜವಳಿ ನೀತಿ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಒಂದು ದಿನದ ಕಾರ್ಯಾಗಾರ ಹಮ್ಮಿಕೊಂಡಿದೆ.
ಸಕ್ಕರೆ ಹಾಗೂ ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ಅವರು ಸಮಾರಂಭ ಉದ್ಘಾಟಿಸುವರು. ಶಾಸಕರಾದ ಎಸ್. ಜಯಣ್ಣ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಎಸ್. ಜಯಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಆರ್. ಉಮೇಶ್, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಆಲಿಖಾನ್, ಜಿಲ್ಲಾ  ಪಂಚಾಯತ್ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ನವೀನ್, ಕೊಳ್ಳೇಗಾನ ನಗರಸಭೆ ಅಧ್ಯಕ್ಷರಾದ ಶಾಂತರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಆರ್. ರಾಜು, ನಗರಸಭೆ ಉಪಾಧ್ಯಕ್ಷರಾದ ಶಿವಾನಂದ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಲತಾ ರಾಜಣ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿಶೇಷ ಆಹ್ವಾನಿತರಾಗಿ ಜವಳಿ ಅಭಿವೃದ್ಧಿ ಆಯುಕ್ತರಾದ ಆರ್. ಗಿರೀಶ್, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜವಳಿ ಅಭಿವೃದ್ಧಿ ಆಯುಕ್ತರ ಪತ್ರಾಂಕಿತ ಸಹಾಯಕರಾದ ವಿಜಯಕುಮಾರ್ ಬಿ. ನಿರಾಳೆ, ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿನಿರ್ದೇಶಕರಾದ ಎಸ್. ಪ್ರಕಾಶ್, ಎ. ಸುರೇಶ್ ಕುಮಾರ್ ಪಾಲ್ಗೊಳ್ಳುವರು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 19ರಂದು ಚಾ.ನಗರ ತಾಲೂಕು ಮಟ್ಟದ ಯುವಜನ ಮೇಳ 

ಚಾಮರಾಜನಗರ, ಜ. 16 :- ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಸವಾಪುರದ ಗೌತಮಬುದ್ಧ ಸಾಂಸ್ಕøತಿಕ ಕಲಾ ಮತ್ತು ಕ್ರೀಡಾ ಯುವಜನ ಸಂಘ ಮತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರುಗಳ ವತಿಯಿಂದ ಚಾಮರಾಜನಗರ ತಾಲೂಕು ಮಟ್ಟದ ಯುವಜನ ಮೇಳವನ್ನು ಜನವರಿ 19ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅಧ್ಯಕ್ಷತೆ ವಹಿಸುವರು.
ನಗರಸಭೆ ಅಧ್ಯಕ್ಷರಾದ ಶೋಭ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ನವೀನ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ದಯಾನಿಧಿ, ಚಂದಕವಾಡಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಆರ್. ಬಾಲರಾಜು, ಮಾದಾಪುರ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎಸ್. ಬಾಲರಾಜು, ಅಮಚವಾಡಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಲಾ, ಉಡಿಗಾಲ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ. ಚಂದ್ರಕಲಾ ಚಂದ್ರಶೇಖರ್, ಸಂತೆಮರಹಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಶೀಲಾ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್.ಎಸ್. ಪ್ರೇಮಲತಾ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಾರ್ಯಕ್ರಮದ ಅಂಗವಾಗಿ ಭಾವಗೀತೆ, ರಂಗಗೀತೆ, ಏಕಪಾತ್ರಾಭಿನಯ, ಲಾವಣಿ, ಜಾನಪದ ನೃತ್ಯ, ಕೋಲಾಟ, ಭಜನೆ, ಸೋಬಾನೆ ಪದ, ರಾಗಿ ಬೀಸುವ ಕಲ್ಲಿನ ಪದ ಹಾಗೂ ಚರ್ಮವಾದ್ಯ ಮೇಳ ಸ್ಪರ್ಧೆಗಳು ನಡೆಯಲಿವೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಎಂ ಚಲುವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಕಲಚೇತನರ ರಿಯಾಯಿತಿ ಬಸ್‍ಪಾಸ್ ನವೀಕರಣೆ 

ಚಾಮರಾಜನಗರ, ಜ. 16:- ಚಾಮರಾಜನಗರ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಜಿಲ್ಲೆಯ ತಾಲೂಕುಗಳಲ್ಲಿನ ವಿಕಲಚೇತನ ಫಲಾನುಭವಿಗಳಿಗೆ 2018ನೇ ಸಾಲಿಗೆ ರಿಯಾಯಿತಿ ದರದ ಬಸ್ ಪಾಸುಗಳನ್ನು ನವೀಕರಿಸುವ ಸಂಬಂಧü ಆಯಾ ತಾಲೂಕುಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಕ್ರಮ ಕೈಗೊಳ್ಳಲಿದೆ. ಮಾನ್ಯತೆ ಇರುವ 31.12.2017ರ ಬಸ್ ಪಾಸುಗಳನ್ನು ಫೆಬ್ರವರಿ 28ರವರೆಗೆ ಮಾತ್ರ ಪರಿಗಣಿಸಲಾಗುವುದು.
ಚಾಮರಾಜನಗರ ತಾಲೂಕಿನ ವಿಕಲಚೇತನರಿಗೆ ಜನವರಿ 18 ರಿಂದ 20ರವರೆಗೆ ನಗರದ ಬಸ್ ನಿಲ್ದಾಣದಲ್ಲಿ, ಗುಂಡ್ಲುಪೇಟೆ ತಾಲೂಕಿನವರಿಗೆ ಜನವರಿ 22 ಹಾಗೂ 23ರಂದು ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ, ಕೊಳ್ಳೇಗಾಲ ಹಾಗೂ ಯಳಂದೂರಿನವರಿಗೆ ಜನವರಿ 25 ರಿಂದ 27ರವರೆಗೆ ಕೊಳ್ಳೇಗಾಲ ಘಟಕದಲ್ಲಿ ಹಾಗೂ ನಂಜನಗೂಡು ವಿಕಲಚೇತನರಿಗೆ ಜನವರಿ 29 ರಿಂದ 31ರವರೆಗೆ ನಂಜನಗೂಡು ಘಟಕದಲ್ಲಿ ನವೀಕರಿಸಲಾಗುವುದು.
ನವೀಕರಣಕ್ಕೆ ಇಚ್ಚಿಸುವವರು 2017ನೇ ಸಾಲಿನಲ್ಲಿ ಪಡೆದಿರುವ ಬಸ್ ಪಾಸ್, ಅಂಗವಿಕಲರ ಗುರುತಿನ ಚೀಟಿ ಹಾಗೂ ನಕಲು ಪ್ರತಿ, ಆಧಾರ್ ಕಾರ್ಡ್ ನಕಲು ಪ್ರತಿ, ಇತ್ತೀಚಿನ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಪಾಸ್ ದರ  660 ರೂ.ಗಳನ್ನು ಪಾವತಿಸಬೇಕು.
ತಾಲೂಕು ಕೇಂದ್ರಗಳಲ್ಲಿ ಆಯಾ ದಿನದಂದು ಫಲಾನುಭವಿಗಳು ಖುದ್ದು ಹಾಜರಿದ್ದು ಬಸ್ ಪಾಸ್‍ಗಳನ್ನು ನವೀಕರಿಸಿಕೊಳ್ಳಬೇಕು. ಫೆಬ್ರವರಿ 28ರ ನಂತರ ಯಾವುದೇ ವಿಕಲಚೇತನರ ಬಸ್ ಪಾಸ್‍ಗಳನ್ನು ನವೀಕರಿಸಲು ಅವಕಾಶವಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 17ರಂದು ಚಾ.ನಗರ ಸಭೆ ಸಾಮಾನ್ಯ ಸಭೆ

ಚಾಮರಾಜನಗರ, ಜ. 16 - ಚಾಮರಾಜನಗರ ನಗರಸಭೆಯ ಸಾಮಾನ್ಯ ಸಭೆಯು ಜನವರಿ 17ರಂದು ಮಧ್ಯಾಹ್ನ 3 ಗಂಟೆಗೆ ನಗರಸಭೆ ಕಚೇರಿ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷರಾದ ಶೋಭಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 24ರಂದು ಪ.ಜಾ, ಪ.ಪಂಗಡವರಿಗೆ ವೃತ್ತಿಪರ ಕೌಶಲ್ಯಾಭಿವೃದ್ಧಿ ತರಬೇತಿಗೆ ನೇರ ಆಯ್ಕೆ

ಚಾಮರಾಜನಗರ, ಜ. 16- ಮೈಸೂರಿನಲ್ಲಿರುವ ಕೇಂದ್ರೀಯ ಪ್ಲಾಸ್ಟಿಕ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯು ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದ ನಿರುದ್ಯೋಗಿ ಯುವಕ ಯುವತಿಯರಿಗೆ ಬೇಸಿಕ್ ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್ ಮತ್ತು ವಿವಿಧ ವೃತ್ತಿಪರ ಕೌಶಲ್ಯಾಭಿವೃದ್ಧಿ ತರಬೇತಿಗೆ ಜನವರಿ 24ರಂದು ನೇರ ಆಯ್ಕೆ ನಡೆಸಲಿದೆ.
ತರಬೇತಿ 6 ತಿಂಗಳದಾಗಿದ್ದು ಉಚಿತ ಊಟ, ವಸತಿ ಹಾಗೂ ಮಾಸಿಕ 500 ರೂ.ಗಳ ಶಿಷ್ಯ ವೇತನ ನೀಡಲಿದೆ. 18 ರಿಂದ 35ರ ವಯೋಮಿತಿಯ ಕನಿಷ್ಟ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ, ಐಟಿಐ, ಡಿಪ್ಲೊಮಾ ಪದವಿ ಅಭ್ಯರ್ಥಿಗಳು ಅರ್ಹರು.
ಹೆಚ್ಚಿನ ಮಾಹಿತಿಗೆ ಮೈಸೂರಿನ ಹೆಬ್ಬಾಳದ ಕೈಗಾರಿಕಾ ಕೇಂದ್ರಲ್ಲಿರುವ ಸಿಪೆಟ್ (ದೂ.ಸಂಖ್ಯೆ 0821-2510681, ಮೊಬೈಲ್ 9632688884) ಸಂಪರ್ಕಿಸುವಂತೆ ಸಿಪೆಟ್ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮ : ಶಾಲಾ ಮುಖ್ಯಸ್ಥರಿಂದ ಅರ್ಜಿ ಆಹ್ವಾನ

ಚಾಮರಾಜನಗರ, ಜ. 16:- ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದಾದ್ಯಂತ ಪ್ರೌಢಶಾಲೆಗಳಲ್ಲಿ ನನ್ನ ನೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.
ಯೋಜನೆಯಡಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರೌಢಶಾಲೆಗಳು ಶಾಲೆಗಳಲ್ಲಿ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಬಹುದಾಗಿದೆ. ಕಾರ್ಯಕ್ರಮಕ್ಕೆ ಪ್ರಾಧಿಕಾರವು 5000 ರೂ.ಗಳ ಗರಿಷ್ಟ ಮಿತಿಯೊಂದಿಗೆ ವಾಸ್ತವಿಕ ವೆಚ್ಚ ಭರಿಸಲಿದೆ.
ಕಾರ್ಯಕ್ರಮದ ದಿನಾಂಕ, ಆಹ್ವಾನಿಸುವ ಇಬ್ಬರು ತೀರ್ಪುಗಾರರ ಹೆಸರು, ಇತ್ಯಾದಿ ವಿವರಗಳೊಂದಿಗೆ ಆಯಾ ಶಾಲಾ ಮುಖ್ಯಸ್ಥರು ಜನವರಿ 20ರೊಳಗೆ ಸ್ವಯಂ ಅರ್ಜಿ ಸಲ್ಲಿಸಬೇಕು. ಕಾರ್ಯಕ್ರಮದ ಮುನ್ನ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ.
ಅರ್ಜಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002 (ದೂ.ಸಂ. 080-22484516, 22107704) ಇವರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರನ್ನು ಅಥವಾ ಪ್ರಾಧಿಕಾರದ ವೆಬ್ ಸೈಟ್ ತಿತಿತಿ.ಞಚಿಟಿಟಿಚಿಜಚಿಠಿusಞಚಿಞಚಿಠಿಡಿಚಿಜhiಞಚಿಡಿಚಿ.ಛಿom ಸಂಪರ್ಕಿಸುವಂತೆ ಪ್ರಾಧಿಕಾರದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Friday, 12 January 2018

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಹಕ್ಕು ಆಕ್ಷೇಪಣೆ ಸಲ್ಲಿಕೆಗೆ ಜ. 22ರವರೆಗೂ ಕಾಲಾವಕಾಶ ವಿಸ್ತರಣೆ (12-01-2018)

   

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಹಕ್ಕು ಆಕ್ಷೇಪಣೆ ಸಲ್ಲಿಕೆಗೆ ಜ. 22ರವರೆಗೂ ಕಾಲಾವಕಾಶ ವಿಸ್ತರಣೆ 

ಚಾಮರಾಜನಗರ, ಜ. 12 - ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹೆಸರು ಸೇರ್ಪಡೆ ಹಕ್ಕು ಆಕ್ಷೇಪಣೆ ಸಲ್ಲಿಕೆಗೆ ಜನವರಿ 22ರವರೆಗೂ ಕಾಲಾವಕಾಶ ವಿಸ್ತರಿಸಲಾಗಿದ್ದು ಜಿಲ್ಲೆಯ ಜನತೆ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಮನವಿ ಮಾಡಿಕೊಂಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು ದಿನಾಂಕ 1.1.2018ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಈ ಸಂಬಂಧ ಹಕ್ಕು ಆಕ್ಷೇಪಣೆ ಸಲ್ಲಿಸಲು ಜನವರಿ 12ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಚುನಾವಣಾ ಆಯೋಗವು  ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಹಕ್ಕು ಆಕ್ಷೇಪಣೆ ಸಲ್ಲಿಸಲು ಮತ್ತಷ್ಟು ಅವಕಾಶ ನೀಡುವ ಸಲುವಾಗಿ ಜನವರಿ 22ರವರೆಗೂ ಕಾಲಾವಕಾಶ ವಿಸ್ತರಣೆ ಮಾಡಿದೆ ಎಂದರು.
18 ವರ್ಷ ತುಂಬಿದ ಅರ್ಹ ಮತದಾರರು ನಮೂನೆ 6ರ ಅರ್ಜಿಗಳನ್ನು ಸಂಬಂಧಿಸಿದ ತಹಸೀಲ್ದಾರ್ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು. ನಿಗದಿತ ದಿನಾಂಕದೊಳಗೆ ಮತದಾರರ ನೊಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಹಸೀಲ್ದಾರ್ ಕಚೇರಿಯ ಚುನಾವಣಾ ಶಾಖೆಗೆ ಸಲ್ಲಿಸಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, 18 ವರ್ಷ ತುಂಬಿದ ಯುವ ಮತದಾರರನ್ನು ಪಟ್ಟಿಗೆ ಸೇರ್ಪಡೆ, ಮರಣ ಹೊಂದಿದ ಮತದಾರರ ಹೆಸರನ್ನು ಕೈಬಿಡುವುದು ವಿಶೇಷ ಆಂದೋಲನ ಕಾರ್ಯಕ್ರಮದಲ್ಲಿ ನಡೆಸಲಿದೆ. ವಿಶೇಷ ಆಂದೋಲನವನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮಾಡಲು ಸೂಚಿಸಲಾಗಿದೆ. ಈ ಸಂಬಂಧ ಮತಗಟ್ಟೆ ಮಟ್ಟದ ಅಧಿಕಾರಿಗಳ (ಬಿಎಲ್‍ಓ) ಸಭೆ ನಡೆಸಲಾಗುತ್ತದೆ ಎಂದರು.
ವಿಶೇಷ ಆಂದೋಲನ ಜನವರಿ 22ರವರೆಗೂ ನಡೆಯಲಿದೆ. ಹಕ್ಕು ಆಕ್ಷೇಪಣೆಗಳನ್ನು ಫೆಬ್ರವರಿ 12ರಂದು ಇತ್ಯರ್ಥಪಡಿಸಲಾಗುತ್ತದೆ. ಮತದಾರರ ಪಟ್ಟಿಗೆ ಹೆಸರುಗಳ ಸೇರ್ಪಡೆ, ಫೋಟೋಗಳ ಸೇರ್ಪಡೆ ಪೂರಕ ಪಟ್ಟಿಗಳನ್ನು ಫೆಬ್ರವರಿ 24ರಂದು ಸಿದ್ಧಪಡಿಸಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 28ರಂದು ಪ್ರಕಟಿಸಲಾಗುತ್ತದೆ.
ಮತದಾರರ ಪಟ್ಟಿಯಲ್ಲಿ ಕಂಡುಬರುವ ಲೋಪದೋಷಗಳನ್ನು ಸರಿಪಡಿಸಿ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಿ ಶೇ.100ರಷ್ಟು ದೋಷರಹಿತ ಮತದಾರರ ಪಟ್ಟಿಗೆ ಸಿದ್ಧತೆಗೆ ಎಲ್ಲಾ ಕ್ರಮ ವಹಿಸಲಾಗಿದೆ. ಮತದಾರರ ಪಟ್ಟಿಗೆ ಹಕ್ಕು ಆಕ್ಷೇಪಣೆಗಳನ್ನು ಸಲ್ಲಿಸಲು ಜನವರಿ 22ರವರೆಗೆ ಕಾಲಾವಕಾಶ ಇರುವುದರಿಂದ ಜಿಲ್ಲೆಯ ಜನತೆ ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಮನವಿ ಮಾಡಿಕೊಂಡರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ ಗಾಯತ್ರಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಜ. 17ರಂದು ಚಾ.ನಗರ ಸಭೆ ಸಾಮಾನ್ಯ ಸಭೆ

ಚಾಮರಾಜನಗರ, ಜ. 12  ಚಾಮರಾಜನಗರ ನಗರಸಭೆಯ ಸಾಮಾನ್ಯ ಸಭೆಯು ಜನವರಿ 17ರಂದು ಮಧ್ಯಾಹ್ನ 3 ಗಂಟೆಗೆ ನಗರಸಭೆ ಕಚೇರಿ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷರಾದ ಶೋಭಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 18ರಂದು ಅಡುಗೆಯವರು, ಅಡುಗೆ ಸಹಾಯಕರ ಹುದ್ದೆಗೆ ಕೌನ್ಸೆಲಿಂಗ್

ಚಾಮರಾಜನಗರ, ಜ. 12 - ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಡುಗೆಯವರು ಹಾಗೂ ಅಡುಗೆ ಸಹಾಯಕರ ಹುದ್ದೆಗಳ ನೇಮಕಾತಿ ಸಂಬಂಧ ಅಂತಿಯ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ವತಿಯಿಂದ ಜನವರಿ 18ರಂದು ನಗರದ ಸತ್ಯಮಂಗಲ ರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಡಿಪೋ ಹತ್ತಿರದ ಡಿ. ದೇವರಾಜ ಅರಸು ಭವನದಲ್ಲಿ ಕೌನ್ಸೆಲಿಂಗ್ ನಡೆಸಲಾಗುವುದು.
ಅಡುಗೆಯವರ ಹುದ್ದೆಗೆ ಅಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಅಡುಗೆ ಸಹಾಯಕರ ಹುದ್ದೆಗೆ ಮಧ್ಯಾಹ್ನ 1.30 ರಿಂದ ಸಂಜೆ 5.30ರವರೆಗೆ ಕೌನ್ಸೆಲಿಂಗ್ ನಡೆಯಲಿದೆ.
ರಾಜ್ಯಾದ್ಯಂತ ಏಕರೂಪ ಮಾದರಿಯಲ್ಲಿ ಒಂದೇ ಸಮಯದಲ್ಲಿ ಕೌನ್ಸೆಲಿಂಗ್ ನಡೆಯಲಿರುವುದರಿಂದ ಅಭ್ಯರ್ಥಿಗಳು ಆಯಾ ಹುದ್ದೆಗೆ ನಿಗಧಿಪಡಿಸಿದ ಸಮಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ತಿತಿತಿ.ಛಿhಚಿmಚಿಡಿಚಿರಿಚಿಟಿಚಿgಚಿಡಿ.ಟಿiಛಿ.iಟಿ ಸಂಪರ್ಕಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ

ಚಾಮರಾಜನಗರ, ಜ. 12- ಜಿಲ್ಲೆಯ ನಾಲ್ಕೂ ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳು ಜನವರಿ 20 ರಿಂದ 24ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯಾ ತಾಲೂಕಿನ ಸರ್ಕಾರಿ ಅತಿಥಿಗೃಹದಲ್ಲಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸಲಿದ್ದಾರೆ.
ಜನವರಿ 20ರಂದು ಯಳಂದೂರು, 22ರಂದು ಕೊಳ್ಳೇಗಾಲ, 23ರಂದು ಚಾಮರಾಜನಗರ ಹಾಗೂ 24ರಂದು ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರಿಂದ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸುವರು.
ಸರ್ಕಾರಿ ಕಚೇರಿಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪ್ರಪತ್ರಗಳಲ್ಲಿ ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಜ. 19ರಂದು ಚಾ.ನಗರ ತಾಲೂಕು ಮಟ್ಟದ ಯುವಜನ ಮೇಳ 

ಚಾಮರಾಜನಗರ, ಜ. 12 :- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಚಾಮರಾಜನಗರ ತಾಲೂಕು ಮಟ್ಟದ ಯುವಜನ ಮೇಳವನ್ನು ಜನವರಿ 19ರಂದು ಕರಿನಂಜನಪುರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದು ಬೆಳಿಗ್ಗೆ 9 ಗಂಟೆಗೆ ತಾಲೂಕಿನ ವ್ಯವಸ್ಥಾಪಕರಲ್ಲಿ ವರದಿ ಮಾಡಿಕೊಳ್ಳುವಂತೆ ತಿಳಿಸಿದೆ.
ವೈಯಕ್ತಿಕವಾಗಿ ಭಾವಗೀತೆ, ಲಾವಣಿ, ರಂಗಗೀತೆ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳಿವೆ.
ಗುಂಪು ಸ್ಪರ್ಧೆಗಳಾಗಿ ಗೀಗೀ ಪದ (5 ಮಂದಿ), ಕೋಲಾಟ ಹಾಗೂ ಜಾನಪದ ನೃತ್ಯ (12 ಮಂದಿ), ಸೋಬಾನೆ ಪದ (4 ಮಂದಿ), ಭಜನೆ (8 ಮಂದಿ), ಜಾನಪದ ಗೀತೆ ಹಾಗೂ ಚರ್ಮವಾದ್ಯ ಮೇಳ (6 ಮಂದಿ) ಸ್ಪರ್ಧೆಗಳು ನಡೆಯಲಿವೆ.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ (ದೂರವಾಣಿ ಸಂಖ್ಯೆ 08226-224932) ಅಥವಾ ಮೊಬೈಲ್ ಸಂಖ್ಯೆ 9482718278, 9880211027ನ್ನು ಸಂಪರ್ಕಿಸುವಂತೆ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
   

ಯುವಜನರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಜಾಗೃತಿ ಮೂಡಿಸಿ:ಡಿಸಿ

 ಚಾಮರಾಜನಗರ, ಜ.12 - ಜಿಲ್ಲೆಯಲ್ಲಿ 18 ವರ್ಷ ತುಂಬಿರುವ ಎಲ್ಲಾ ಅರ್ಹ ಯುವಜನರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅಗತ್ಯ ಜಾಗೃತಿ ಉಂಟು ಮಾಡುವಂತೆ ಜಿಲ್ಲಾಧಿಕಾರಿ ಬಿ.ರಾಮು ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಮತದಾರರ ಜಾಗೃತಿ ಅಭಿಯಾನ ಹಿನ್ನೆಲೆಯಲ್ಲಿ ನಡೆದ ಕಾಲೇಜು ಪ್ರಾಂಶಪಾಲರ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣೆ ಹಿನ್ನೆಲೆಯಲ್ಲಿ ಎಲ್ಲರು ಮತದಾನ ಮಾಡುವ ಮಹತ್ವದ ಬಗ್ಗೆ ತಿಳಿಸಿಕೊಡಬೇಕಿದೆ. 18 ವರ್ಷ ತುಂಬಿರುವ ಎಲ್ಲರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬೇಕಿದೆ. ಮತದಾನ ಮಾಡುವ ಹಕ್ಕನ್ನು ನೀಡಿದ್ದು, ಇದರ ಬಗ್ಗೆ ಯುವಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲದಿರುವ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುವುದು ಮತ್ತು ಕಾಲೇಜುಗಳಲ್ಲಿ ಮತದಾರರ ಸಾಕ್ಷರತೆ ಕ್ಲಬ್‍ಗಳನ್ನು ರಚಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಸ್ತುತ ವಿದ್ಯುನ್ಮಾನ ಮತ ಯಂತ್ರಗಳನ್ನು (ಇ.ವಿ.ಎಂ) ಚುನಾವಣೆಯಲ್ಲಿ ಬಳಸಲಾಗುತ್ತಿದೆ. ಮತದಾರನು ತಾನು ಯಾರಿಗೆ ಮತ ಹಾಕಿದ್ದೇನೆ ಎಂಬುದನ್ನು ವಿ.ವಿ.ಪ್ಯಾಟ್‍ಗಳ ಮೂಲಕ ತಿಳಿದುಕೊಳ್ಳಲು ಅವಕಾಶವಿದೆ.              ಜಿಲ್ಲೆಯಲ್ಲಿ ಮೊದಲ ಬಾರಿಗೆ ವಿ.ವಿ.ಪ್ಯಾಟ್‍ನ್ನು ಕಳೆದ ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಬಳಸಲಾಗಿತ್ತು. ಈ ವಿ.ವಿ.ಪ್ಯಾಟ್ ಹಾಗೂ ಇ.ವಿ.ಎಂ ಬಗ್ಗೆ ನೂತನವಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಯುವಜನರಿಗೆ ತಿಳಿವಳಿಕೆ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ರಾಮು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಅವರು ಮಾತನಾಡಿ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮತದಾರರ ಸಾಕ್ಷರತೆ ಕ್ಲಬ್‍ಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ಮತದಾನದ ಪ್ರಾಮುಖ್ಯತೆ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಮತದಾನದ ಮಹತ್ವ ಕುರಿತು ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ರಾಷ್ಟ್ರೀಯ ಮತದಾರರ ದಿನಾಚರಣೆಯಂದು ಬಹುಮಾನಗಳನ್ನು ವಿತರಿಸಲಾಗುವುದು. ಈ ಹಿನ್ನಲೆಯಲ್ಲಿ ಪ್ರಾಂಶುಪಾಲರು ಅಗತ್ಯ ಪ್ರಕ್ರಿಯೆಗೆ ಮುಂದಾಗಬೇಕೆಂದು ಹರೀಶ್ ಕುಮಾರ್ ಅವರು ನಿರ್ದೇಶನ ನೀಡಿದರು.
ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮತದಾರರ ಸಾಕ್ಷರತ ಕ್ಲಬ್‍ಗಳನ್ನು ನಿರ್ವಹಣೆಗೆ ಸಮಾಜ ಶಾಸ್ತ್ರ ಶಿಕ್ಷಕರು, ಉಪನ್ಯಾಸಕರು ಅಥವಾ ಈ ಹಿಂದೆ ಚುನಾವಣಾ ಕರ್ತವ್ಯ ನಿರ್ವಹಿಸಿ ಅನುಭವ ಹೊಂದಿರುವ ಬೋಧಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಳ್ಳಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಕಚೇರಿಗೆ ಮಾಹಿತಿ ನೀಡಬೇಕು ಎಂದು ಹರೀಶ್ ಕುಮಾರ್ ತಿಳಿಸಿದರು.
ಮತದಾರರ ಸಾಕ್ಷರತೆ ಕ್ಲಬ್‍ಗಳಿಗೆ ಇ.ವಿ.ಎಂ ಮತ್ತು ವಿ.ವಿ.ಪ್ಯಾಟ್‍ಗಳ ಬಳಕೆಯ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಡಲಾಗುವುದು. ಜಿಲ್ಲೆಯಲ್ಲಿ ಹೆಚ್ಚಾಗಿ ಹಾಡಿಗಳಿದ್ದು, ಸಾಕ್ಷರತೆಯ ಪ್ರಮಾಣ ಕಡಿಮೆ ಇರುವಂತಹ ಹಾಡಿಗಳಲ್ಲಿ ವ್ಯಾಪಕವಾಗಿ ಅರಿವು ಮೂಡಿಸಲಾಗುವುದು ಎಂದು ಹರೀಶ್ ಕುಮಾರ್ ಅವರು ನುಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಮಾತನಾಡಿ ಕಾಲೇಜಿನಲ್ಲಿರುವ 18 ವರ್ಷ ತುಂಬಿದ ಎಲ್ಲಾ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ನಮೂನೆ-6ನ್ನು ಭರ್ತಿಮಾಡಿ ಪ್ರಾಂಶಪಾಲರ ಸಹಿಯೊಂದಿಗೆ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರ್‍ರವರ ಕಚೇರಿಗೆ ಸಲ್ಲಿಸಬೇಕೆಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ಫೌಜಿಯಾ ತರನ್ನಮ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಹದೇವಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಎಲ್ಲಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಕನ್ನಡ ಸಾಹಿತ್ಯಕ್ಕೆ ಶ್ರೀಮಂತ ಇತಿಹಾಸ:ಡಾ.ಗೀತ ಮಹದೇವಪ್ರಸಾದ್ 

ಚಾಮರಾಜನಗರ, ಜ.12:- ಕನ್ನಡ ಸಾಹಿತ್ಯಕ್ಕೆ ಶ್ರೀಮಂತ ಚರಿತ್ರೆಯಿದೆ. ಅದರ ವ್ಯಾಪ್ತಿ ಅತ್ಯಂತ ವಿಶಾಲವಾಗಿದೆ ಎಂದು ಸಕ್ಕರೆ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ತಿಳಿಸಿದರು.
ಗುಂಡ್ಲುಪೇಟೆಯಲ್ಲಿ ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆರಂಭಗೊಂಡ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ಭಾಷೆಯ ಸಾಹಿತ್ಯ ಜೀವಂತವಾಗಿದ್ದರೆ ಅದು ನಿಂತ ನೀರಾಗುವುದಿಲ್ಲ. ಬದಲಾಗಿ ಅದು ಸದಾ ಹರಿಯುವ ನೀರಿನಂತೆ ಸಮೃದ್ಧವಾಗಿರುತ್ತದೆ, ಕ್ರಿಯಾಶೀಲವಾಗಿರುತ್ತದೆ. ಪ್ರತಿಯೊಂದು ಕಾಲದಲ್ಲಿಯೂ ಸಾಹಿತ್ಯ ತನ್ನನ್ನು ತಾನು ಬದಲಾವಣೆಗೆ ಒಡ್ಡಿಕೊಳ್ಳುತ್ತದೆ. ಹೊಸದನ್ನು ಸೇರಿಸಿಕೊಂಡು ಹಳೆಯದನ್ನು ಸ್ಮರಿಸಿಕೊಂಡು ಮುಂದೆ ಸಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಪ್ರತಿಯೊಂದು ಸಾಹಿತ್ಯವೂ ಆಯಾ ದೇಶಗಳ, ಆಯಾ ಕಾಲಘಟ್ಟಗಳ ಜೊತೆ ಮುಖಾಮುಖಿಯಾಗುವುದರ ಮೂಲಕವೇ ರೂಪುಗೊಳ್ಳುತ್ತದೆ ಎಂದು ತಿಳಿಸಿದರು.
ಸಾಹಿತ್ಯವು ಸಮಾಜದ ಒಟ್ಟು ಪರಿಸ್ಥಿತಿಯ ಪ್ರಭಾವಕ್ಕೆ ಒಳಗಾಗಿಯೋ ಅಥವಾ ಆಯಾ ಸಾಮಾಜಿಕ ಮನಸ್ಥಿತಿಯನ್ನು ವಿರೋಧಿಸುವ ಹೋರಾಟದ ಫಲವಾಗಿಯೋ ರೂಪುಗೊಳ್ಳುತ್ತದೆ. ಆದರೆ ಸೃಜನಶೀಲ ಸಾಹಿತ್ಯ ಈ ಎರಡೂ ರೀತಿಯ ಒತ್ತಡಗಳನ್ನೂ ಮೀರಿ, ಅದರಾಚೆಗೆ ಸ್ವತಂತ್ರ ಅಭಿವ್ಯಕ್ತಿ ಪಡೆದುಕೊಳ್ಳುತ್ತದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು ಹೇಳಿದರು.
ಮುದ್ದುಮಾದಪ್ಪ ದತ್ತಿ ಪ್ರಶಸ್ತಿ ಪ್ರದಾನ ಮಾಡಿದ ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ ಮಾತನಾಡಿ, ಕನ್ನಡ ಭಾಷೆ, ನೆಲ ಜಲಕ್ಕೆ ಧಕ್ಕೆಯಾದಾಗ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯ ಮೂಲಕ ಹಾಗೂ ಕವಿಗಳು ಸಾಹಿತಿಗಳು ತಮ್ಮ ಬರಹಗಳ ಮೂಲಕ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿದರು.
ಸಚಿವರಾದ ದಿ. ಮಹದೇವಪ್ರಸಾದ್ ಅವರು, ಕನ್ನಡ ಮತ್ತು ಸಂಸ್ಕøತಿ ಸಚಿವರಾಗಿದ್ದಾಗ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಿಗೆ 5 ಲಕ್ಷ ರೂ. ಅನುದಾನ ನೀಡುವ ಮೂಲಕ ಪ್ರೋತ್ಸಾಹ ನೀಡಿದರು. ಅವರನ್ನು ನಾವಿಂದು ಸ್ಮರಿಸಿಕೊಳ್ಳಬೇಕು ಎಂದರು.
ಶೀಲಾ ಸತ್ಯೇಂದ್ರಸ್ವಾಮಿ ಅವರಿಗೆ ಮುದ್ದುಮಾದಪ್ಪ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ. ಮಲೆಯೂರು ಗುರುಸ್ವಾಮಿ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು.
ಹಿರಿಯ ಸಾಹಿತಿ ಸಂಶೋಧಕ, ಜಿಜಿ. ಮಂಜುನಾಥನ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ವಿನಯ್, ಮಂಗಳಾ ಮುದ್ದುಮಾದಪ್ಪ, ಜಿ.ಪಂ. ಉಪಾದ್ಯಕ್ಷ ಯೋಗೇಶ್, ಸದಸ್ಯರಾದ ಕೆ.ಎಸ್. ಮಹೇಶ್, ಬಿ.ಕೆ. ಬೊಮ್ಮಯ್ಯ, ಚೆನ್ನಪ್ಪ, ಕಾಡಾ ಆಧ್ಯಕ್ಷ ಎಚ್.ಎಸ್. ನಂಜಪ್ಪ, ಮಾಜಿ ಅಧ್ಯಕ್ಷರಾದ ಎ.ಎಂ. ನಾಗಮಲ್ಲಪ್ಪ, ಸೋಮಶೇಖರ ಬಿಸಲವಾಡಿ, ತಾಲೂಕು ಅಧ್ಯಕ್ಷ ಚಿದಾನಂದಸ್ವಾಮಿ, ಮಲ್ಲಿಕಾರ್ಜುನಪ್ಪ, ನಾಗರಾಜಶರ್ಮನ್, ಗುರುಪ್ರಸಾದ್, ಜಿ. ರಾಜಪ್ಪ, ನವಮಿ ಬಂಡಿಗೆರೆ, ಪಳನಿಸ್ವಾಮಿ, ಬಾಹುಬಲಿ ಜಯರಾಜ್, ರೈತ ಸಂWದ ಮಹೇಶ್‍ಪ್ರಭು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




ನೀವು ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದೀರಾ.? ನೀವು ಬುದ್ದಿವಂತರಾದರೆ ಇದನ್ನು ಓದಿ….***

ನೀವು ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದೀರಾ.? ನೀವು ಬುದ್ದಿವಂತರಾದರೆ ಇದನ್ನು ಓದಿ….***

10 ನಿಮಿಷ ಸಮಯ ಮಾಢಿಕೊಂಡು ಓದುವಂತವರಾಗಿ, ಇಲ್ಲದಿದ್ದರೆ ಇದನ್ನ ಓದಲೇ ಬೇಡಿ. ಶೇರ್ ಮಾಡಿ ಮುಂದಿನ ಬುದ್ದಿವಂತ ಜನ ಓದುತ್ತಾರೆ. ನಾವು ಸಂದರ್ಶಕರ ಪುಸ್ತಕದ ಬಗ್ಗೆ, ಅದರ ಆಗು ಹೋಗುಗಳು, ಮಹತ್ವ, ಯಶಸ್ವಿಯಾಗಿ ನಡೆಯುತ್ತಿದಿಯೇ.? ಎಂಬುದರ ಬಗ್ಗೆ  ನೇರ ಮಾತು

ಸಂದರ್ಶಕರೇ…ಎಚ್ಚರ.. ನೀವು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ಅಂಶಗಳು…

ಅರೆ ಇದೇನಿದು? ಪೊಲೀಸ್ ಠಾಣೆ ಮೆಟ್ಟಿಲು ಏಕೆ ಹತ್ತಬೇಕು, ನಾವು ಬುದ್ದಿವಂತರು ಅನ್ನೊದನ್ನ ನಿರ್ದರಿಸೋಕೆ ಇವರ್ಯಾರು ಎಂದು ಕೊಂಡಿದ್ದೀರಾ? ಹೌದು ನೀವು ಮೆಟ್ಟಿಲು ಏರಬೇಕಾದ ಅನಿವಾರ್ಯವಿದ್ದಾಗ ಕೆಲವು ಮುಂಜಾಗ್ರತ ಕ್ರಮವಹಿಸಿ ಇಲ್ಲದಿದ್ದರೆ ನೀವು ನಿಜವಾಗಲೂ ದಡ್ಡರೇ..!
ನೀವು ಪೊಲೀಸ್ ಠಾಣೆಗೆ  ಹೋಗುವಾಗಲೆ ಅಲ್ಲಿ ಸ್ವಾಗತಕಾರರು ನಿಮ್ಮನ್ನ ಸ್ವಾಗತಿಸಲು ಕಾದು ಕುಳಿತಿರುತ್ತಾರೆ ಅಷ್ಟೇ ಅಲ್ಲ ನಿಮಗೆ ಯಾವ ತರಹದ ಸಹಾಯ ಠಾಣಾ ವ್ಯಾಪ್ತಿಯಲ್ಲಿ ಆಗಬೇಕು ಎಂಬುದನ್ನು ತಿಳಿಸುತ್ತಾರೆ.

ಸಂದರ್ಶಕರ ಪುಸ್ತಕ ಎಂದರೇನು?

ಮೊಬೈಲ್ ಕಳೆದುಕೊಂಡಾಗ, ಜಗಳವಾಡಿಕೊಂಡಾಗ, ಹಣಕಾಸು, ಲೇವಾದೇವಿ ವ್ಯವಹಾರ ,ಮೋಸ ವಂಚನೆ ಪ್ರಕರಣಗಳ ದಾಖಲು ಮಾಡಬೇಕಾದಾಗ ಅಥವಾ ಯಾರಾದರನ್ನ ನೋಡಬೇಕಾದರೆ ಠಾಣೇಯಲ್ಲಿ ನಿಮ್ಮ ಹೆಸರು, ವಿಳಾಸ, ವೃತ್ತಿ ,ಏನಕ್ಕಾಗಿ, ಯಾರನ್ನ ನೋಡಲು ಬಂದಿದ್ದೀರಾ, ? ಎಂಬ ಇತ್ಯಾದಿ ಅಂಶಗಳು ಪುಸ್ತಕದಲ್ಲಿ ನೊಂದಣೆಯಾಗುತ್ತದೆ ಅದೇ ಸಂದರ್ಶಕರ ಪುಸ್ತಕ ಎಂದು ಕರೆಯಲ್ಪಡುತ್ತದೆ. ಆದರೆ ಈಗ ಉನ್ನತೀಕರಿಸಿ ಈ ಸಂದರ್ಶಕರು ಎಂದು ಕಂಪ್ಯೂಟರ್ ಅಲ್ಲಿ ನಮೂದಿಸಲಾಗುತ್ತಿದೆ.
ನಾ ಕಂಡಂತೆ ಚಾಮರಾಜನಗರದಲ್ಲಿ ಜಿಲ್ಲಾ ಪೊಲೀಸ್ ವರೀಷ್ಟಾಧಿಕಾರಿ ಮದುಕರ್ ಶೆಟ್ಟಿ ಅವರು ಹಿಂದೆ  ಎಸ್ಪಿ ಅವರ ಹುದ್ದೆಯಲ್ಲಿ ಅದಿಕಾರದಲ್ಲಿದ್ದಾಗ ಈ ಯೋಜನೆ ಜಾರಿಯಲ್ಲಿತ್ತು ಅಷ್ಟೇ ಅಲ್ಲ ಚಾಚು ತಪ್ಪದೆ ಪಾಲನೆಯಾಗುತ್ತಿತ್ತು. ನಂತರ ಇವರು ಬೇರೆಡೆಗೆ ವರ್ಗಾವಣೆಯಾದ ಮೇಲೆ ಇದನ್ನು ಕಂತೆ ಕಟ್ಟಿ ಗುಡ್ ಬೈ ಹೇಳಿದ್ದರು.
ಸಡನ್ ಆಗಿ ಮತ್ತೆ ಕಾಣಿಸಿಕೊಂಡಿದ್ದೆ 2015 ರ ಎಸ್ಪಿ ಕುಲದೀಪ್ ಕುಮಾರ್ ಜೈನ್ ಅವರ ಅವದಿಯಲ್ಲಿ ಅದೂ ಅವರ ಕಚೇರಿಯಲ್ಲಿ,,… ಇನ್ನ ಯಾವುದೇ ಠಾಣೆಯಲ್ಲಿ ಇರಲಿಲ್ಲ.. ಈ ಪುಸ್ತಕ ಇಡುವಂತೆ ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಅವರು ಎರಡು ಬಾರಿ ಜೈನ್ ಅವರಿಗೆ ಅರ್ಜಿ ಸಲ್ಲಿಸಿದ್ದರು.ಅಷ್ಟೇ ಅಲ್ಲ ದಕ್ಷಿಣ ವಲಯ ಮಹಾನಿರ್ದೇಶಕರಿಗೆ, ಬೆಂಗಳೂರು ಮಹಾನಿರ್ದೇಶಕರಿಗೂ ಮನವಿ ಮಾಢಲಾಗಿತ್ತು.
ಈಗ ಎಲ್ಲೆಡೆ ಠಾಣೆಗಳಲ್ಲಿ ಸಂದರ್ಶಕರ ಪುಸ್ತಕ ರಾರಾಜಿಸುತ್ತಿದೆ. ಸ್ವಾಗತಕಾರರು ಸಹಾಯ ಬೇಕೆ ಎಂಬ ಪುಟ್ಟ ನಾಮಫಲಕ ಹಾಕಿ ತಮ್ಮ ಸಂದರ್ಶಕರನ್ನು ಬರ ಮಾಡಿಕೊಳ್ಳುತ್ತಿದ್ದಾರೆ. ಬೀಟ್ ವ್ಯವಸ್ಥೆಯಿಂದ ಕಡಿಮೆಯಾಗಿದ್ದ ಠಾಣೇಗಳಲ್ಲಿ ಜನರ ದರ್ಶನ, ಈಗ ಸಂದರ್ಶಕರ ಪುಸ್ತಕ ಬಂದ ಮೇಲಂತು ಮೊದಲು ಠಾಣೆಗೆ ಬರುತ್ತಿದ್ದ ಜನರು, ಮದ್ಯವರ್ತಿಗಳ ಸಂಖ್ಯೆ ತೀರ ಕಡಿಮೆಯಾಗಿದೆ.

ಸಂದರ್ಶಕರ ಪುಸ್ತ ಅಗತ್ಯವೇನು?

 ಹೌದು ಇದರ ಅಗತ್ಯ ಏನಿದೆ ಅಂತೆಲ್ಲ ಕೇಳಬಹುದು.. ಮುಂದೆ ನೀವು ಮೆಟ್ಟಿಲು ಏರಿದಾಗ ಬಹುಶಃ ನಿಮಗೆ ಗೊತ್ತಾಗುತ್ತದೆ. ನನಗೆ ಅನುಭವಕ್ಕೆ ಬಂದಂತೆ, ಹೊಂಗನೂರು ಗಲಭೆ ಪ್ರಕರಣದಲ್ಲಿ ಕೆಲವರು ಟಪಾಲು ವಿಬಾಗಕ್ಕೆ ಅರ್ಜಿ ಕೊಟ್ಟು ಬಂದು ಅರ್ಜಿ ಕೊಟ್ಟಿದ್ದೇನೆ, ಏನು ಕ್ರಮ ತೆಗೆದುಕೊಂಡಿದ್ದೀರಾ ಎಂದು ಸಾರ್ವಜನಿಕ ಕೇಳಿದಾಗ ಎಸ್ಪಿ ಜೈನ್ ಕೊಟ್ಟ ಉತ್ತರ ಇಷ್ಟೆ…,, ನಿನಗೆ ನ್ಯಾಯ ಬೇಕಿದ್ದರೆ ನೇರವಾಗಿ ನನ್ನ ಬಳಿ ಬರಬೇಕಿತ್ತು. ಯಾವುದೋ ಅರ್ಜಿಯನ್ನು ಎಲ್ಲಿಗೋ ಕೊಟ್ಟು ಹೋದರೆ ಅದು ನನ್ನ ಬಳಿ ಬರುವ ತನಕ ವಿಳಂಬವಾಗಬಹುದು ಅಥವಾ ಅದರ ವಿಚಾರ ಏನು ಎಂಬುದು ತಿಳಿಯಲು ಸಮಯವಕಾಶ ಬೇಕಾಗಬಹುದು ಎಂದಿದ್ದರು.
ಸುಮ್ಮನಾಗದ ಸಾರ್ವಜನಿಕ ನಿಮ್ಮನ್ನು ನೋಡಿಯೇ ಅರ್ಜಿ ಕೊಟ್ಟು ಬಂದು ಮಾತನಾಢುತ್ತಿರುವುದು ಎಂದಾಗ ನೀವು ಎಲ್ಲಿಗೆ ಯಾಕೆ ಬಂದಿದ್ದೀರೀ, ಯಾವಾಗ ಬಂದಿದ್ದೀರಾ ಎಂಬ ಎಲ್ಲಾ ಅಂಶ ಕಛೇರಿಯಲ್ಲಿ ಸಿಗುತ್ತದೆ ಬನ್ನಿ ತೋರಿಸುತ್ತೇವೆ ಎಂದರು. ನೂರಾರು ಜನರ ಮದ್ಯೆ ಈ  ಖಡಕ್ ಉತ್ತರಕ್ಕೆ ಆತನಿಗೆ ಬೆವರು ಇಳಿದೇ ಹೋಯಿತು.
ಇದು ಇಲಾಖೆಯದು ಒಂದು ಕಡೆಯಾದರೆ ನನ್ನ ಸ್ವಂತ ಅನುಭವ ಕಥೆಯೂ ಇದೆ ಕೇಳಿ….ಒಂದು ಮಾನವ ಹಕ್ಕು ಆಯೋಗ ಮತ್ತು ಎಸ್ಪಿ ಅವರ ಆದೇಶದ ಅರ್ಜಿ ವಿಚಾರಣೆ ಚಾಮರಾಜನಗರದಿಂದ ಗುಂಡ್ಲುಪೇಟೆಗೆ ಹೋಗಿ ಬರಬೇಕಾದ ಸ್ಥಿತಿಯನ್ನು ಅಲ್ಲಿನ ಪೇದೆ …(ವಿ…..ಪೇದೆ ಮೊದಲ ಹೆಸರು.)  ಸೃಷ್ಟಿ ಮಾಢಿದ್ದರು.
ಎಷ್ಟೇ ಆದರೂ ಇವರ ಆದೇಶ ಉಲ್ಲಂಘನೆ ಮಾಢುವುದು ಬೇಡ ಎಂದು ಠಾಣೆಗೆ ಹೋದರೆ ಅಲ್ಲಿ ನಾಟಕೀಯ ವ್ಯವಸ್ಥೆ ಇನ್ಸ್‍ಪೆಕ್ಟರ್ (ಪ್ರ) ಅವರದ್ದು, ನಾನು ಅಲ್ಲಿದ್ದೀನಿ, ಇಲ್ಲಿದೀನಿ ಅಂತ, ಹೋಗಿರುವುದಕ್ಕೆ ನಾನು ಸಾಕ್ಷಿಯಿಲ್ಲ. ಏನು ಮಾಡೋದು  ಯೋಚಿಸಿ ಅಲ್ಲಿ ಪೊಟೋ ತೆಗೆದು ವರೀಷ್ಠಾಧಿಕಾರಿ  ಜೈನ್ ಅವರಿಗೆ ಕಳುಹಿಸಬೇಕಾದ ಸ್ಥಿತಿ ಎದುರಾಯಿತು. ನಾನೇನು ವಿದ್ಯಾವಂತ, ಆಂಡ್ರಾಯ್ಡ್ ಮೊಬೈಲ್, ಸಾಮಾಜಿಕ ಜಾಲತಾಣದ ಅರಿವು, ಹಿರಿಯ ಅದಿಕಾರಿಗಳÀ ದೂರವಾಣಿ ಸಂಖ್ಯೆ ಗೊತ್ತಿತ್ತು ಕಳಿಸಿದೆ. ಠಾಣೆಗೆ  ಬಂದವರೆಲ್ಲ ಕಳಿಸಬೇಕಲ್ಲ.. ರೈತರು, ಕೂಲಿಕಾರರು, ಬರುತ್ತಾರೆ ಅವರಿಗೆ ಗದ್ಗರಿತ ಮಾತು ಕೇಳಿ ಭಯ ಉಂಟುಮಾಡುವವರು ಇರುವಾಗ ಇನ್ನೆಲ್ಲಿ ಎಸ್ಪಿ ಅವರ ಜೊತೆ ದರ್ಶನ, ಸಂದರ್ಶನ ನೀವೆ ಹೇಳಿ. ಆದರೂ ನಿಮಗೆ ಒಂದಷ್ಟು ಟಿಪ್ಟ್ ಕೊಡ್ತೇವೆ ಪಾಲಿಸಿ.

ನಿಮಗಿಷ್ಟು ಟಿಪ್ಸ್….:.

1) ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದಂತೆಯೇ ನೀವು ನೇರವಾಗಿ ಸ್ವಾಗತಕಾರರ ಬಳಿ ಹೋಗಿ  ಅವರು ಕೇಳಿದ ನಿಮ್ಮ ಮಾಹಿತಿಯನ್ನು ನೀಡಿ ಹಾಗೇ ಅವರ ಹೆಸರು. ಇಲಾಖೆ ನೀಡಿದ ಫೊನ್ ನಂಬರ್ ಪಡೆಯಿರಿ.
2)ಕಡ್ಡಾಯವಾಗಿ ನೀವು ಪ್ರವೇಶ ಕೊಟ್ಟ ಸಮಯವನ್ನು ಸಂದರ್ಶಕರ ಪುಸ್ತಕದಲ್ಲಿ ಅವರು ಬರೆದುಕೊಳ್ಳುವಂತೆ ಹೇಳಿ, ಬರುವಾಗ ನೀವು ಆ ಜಾಗ ಬಿಡುವ ಸಮಯ ಕಡ್ಡಾಯವಾಗಿ ನಮೂದಿಸಿ ಬನ್ನಿ.
3) ನಿಮ್ಮ ಖಾಸಗೀ ವಾಹನಗಳನ್ನು ಠಾಣೆಯ ಹೊರಗಡೆ ನಿಲ್ಲಿಸಿ, ಒಳಗಡೆ ತೆಗೆದುಕೊಂಡು ಪಾರ್ಕಿಂಗ್ ಸಮಸ್ಯೆಗೆ ನೀವು ಕಾರಣರಾಗಬೇಡಿ.
4) ನಿಮಗೆ ಅಲ್ಲಿ ಯಾರಾದರೂ ಸರಿಯಾಗಿ ಸ್ಪಂದಿಸದಿದ್ದರೆ ಹಿರಿಯ ಅದಿಕಾರಿಗಳು ,ವರೀಷ್ಟಾಧಿಕಾರಿಗಳ ಬಳಿ ಅಪ್ಪಣೆ ಪಡೆದು ಮೌಖಿತ, ಲಿಖಿತ ದೂರು ಸಲ್ಲಿಸಿ.
5) ನಿಮ್ಮ ವಿಚಾರಣೆ  ಮಾಡುವ ಅದಿಕಾರಿಗಳು, ಸ್ಥಳದಲ್ಲಿರುವ ಪೇದೆಗಳು, ಸಿಬ್ಬಂದಿಗಳು ಯಾರು ಏನು? ( ಒಂದೆ ಹೆಸರಿನವರು ಇಬ್ಬರು ಮೂವರು ಇದ್ದರೆ ಕಷ್ಟ, ಆದರೆ (ಮೆಟಲ್) ಸಂಖ್ಯೆ ಬದಲಾಗಿರುತ್ತದೆ.
5) ಹಣಕಾಸು ವ್ಯವಹಾರಿವಿದ್ದರೆ ಚೆಕ್, ಡಿ.ಡಿ ಮೂಲಕ ವ್ಯವಹರಿಸಿ ನಿಮಗೆ ಆದಾಯ ಅದಿಕಾರಿಗಳಿಂದ ವಿಚಾರಣೆ ತಪ್ಪಬಹುದು

ಡಿ.ಜಿ.ಪಿ ಅವರೇ ಧನ್ಯವಾದಗಳು, 

ನಾನು ಬರೆದ  ಕೆಲವು ಪತ್ರಗ ಳನ್ನ ಓದಿ ಈಗಾಗಲೇ ಅಂದು ( ಆರ್.ಕೆ.ದತ್ತ ಅವರು ಕ್ರಮ ತೆಗೆದುಕೊಂಡಿರುತ್ತೀರಿ ಧನ್ಯವಾದಗಳು, ಇನ್ನು ಸಿ.ಸಿ.ಕ್ಯಾಮೆರಾ ಅಳವಡಿಕೆ ಬಗ್ಗೆ ಅನುಮೋದನೆ ಸಲ್ಲಿಕೆ ಕುರಿತು ತಿಳಿಸಿರುತ್ತೀರಿ. ಆದರೆ  ಇಂದು ಚಾಮರಾಜನಗರದಲ್ಲಿರುವ ಇಲಾಖೆಯ ಸಿ.ಸಿ.ಕ್ಯಾಮೆರಾ ಕೆಟ್ಟಿದೆ. ಈಗಾಗಲೇ ಚಾಲ್ತಿ ಮಾಢಿರುವ ಸಂದರ್ಶಕರ ಪುಸ್ತಕದ ವಿವರ  (ನನಗೆ ತಿಳಿದು ಬಂದಂತೆ 23-11-2017)  ಸರಿಯಾಗಿ ಮಾಹಿತಿ ಪಡೆಯುತ್ತಿಲ್ಲ ಅಷ್ಟೇ  ಅಲ್ಲಿ ನಮೂದಿಸುತ್ತಿಲ್ಲ ಎಂಬ ಗಂಬೀರ ಆರೋಪ ಮಾಢುತ್ತಿದ್ದೇನೆ. ಅದನ್ನು  ಇಂದಿನ ಡಿ.ಜಿ.ಪಿ ನೀಲಮಣಿ ರಾಜು ಅವರಿಗೆ  ಪತ್ರ ಮುಖೆನಾ ತಿಳಿಸುತ್ತಿದ್ದೇನೆ.  ಗಂಬೀರವಾಗಿ ಪರಿಗಣಿಸಿ ಪರಿಶೀಲಿಸಿ..….


 ಸಂಪರ್ಕಿಸಿ...
ಚಾಮರಾಜನಗರ ನಿವಾಸಿಗಳಾಗಿದ್ದರೆ ದಯಮಾಡಿ ಎಸ್ಪಿ--9480804600, 9480804601, 

ಕಚೇರಿ: ಜೋಡಿ ರಸ್ತೆ, ಗುರುಮಲ್ಲೇಶ್ವರ ವಿರಕ್ತ ಮಠ ಸಮೀಪ..
ಬೆಂಗಳೂರು: ಮಹಾನಿರ್ದೇಶಕರು, ನೃಪತುಂಗರಸ್ತೆ
ಮೈಸೂರು: ನಜರ್ ಬಾದ್ , 


ಇಂತಿ ...ರಾಮಸಮುದ್ರ ಎಸ್.ವೀರಭದ್ರಸ್ವಾಮಿ


Thursday, 11 January 2018

ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿಯವರಿಂದ ಅಭಿವೃದ್ಧಿ ಕಾಮಗಾರಿ ವೀಕ್ಷಣೆ : ಪ್ರಾಧಿಕಾರದ ಸಭೆ (11-01-2018)

 ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿಯವರಿಂದ ಅಭಿವೃದ್ಧಿ ಕಾಮಗಾರಿ ವೀಕ್ಷಣೆ : ಪ್ರಾಧಿಕಾರದ ಸಭೆ

ಚಾಮರಾಜನಗರ, ಜ. 11- ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಹದೇಶ್ವರ ಬೆಟ್ಟದಲ್ಲಿ ಇಂದು ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಮಲೈಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಬಳಿಕ ಮಲೈಮಹದೇಶ್ವರ ಸ್ವಾಮಿ ಕ್ಷೇತ್ರಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದರು.
ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಸಲುವಾಗಿ ಬುಧವಾರ ಮುಖ್ಯಮಂತ್ರಿಯವರು ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಚಾಮರಾಜನಗರ ತಾಲೂಕಿನ ನಾಗವಳ್ಳಿ, ಕೊಳ್ಳೇಗಾಲ ಹಾಗೂ ಹನೂರು ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಬುಧವಾರ ರಾತ್ರಿ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಮುಖ್ಯಮಂತ್ರಿಯವರು ವಾಸ್ತವ್ಯ ಹೂಡಿದ್ದರು.
ಇಂದು ಬೆಳಿಗ್ಗೆ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿದ ಮುಖ್ಯಮಂತ್ರಿಯವರು ದೇವರ ದರ್ಶನ ಪಡೆದರು. ಬಳಿಕ ಮಲೈಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಅಂತರಗಂಗೆ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟರು. ಅಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಪ್ರಾಧಿಕಾರದ ವತಿಯಿಂದಲೇ ನಿರ್ಮಾಣ ಮಾಡುತ್ತಿರುವ ಅಂಗಡಿ ಮಳಿಗೆಗಳ ಕಾಮಗಾರಿಯನ್ನು ಸಹ ಪರಿಶೀಲಿಸಿದರು.
ದೇವಾಲಯದ ಬಳಿ ಜನರ ನೆರಳಿಗಾಗಿ ನಿರ್ಮಾಣ ಮಾಡಲಾಗಿರುವ ಬೃಹತ್ ರಂಗಮಂದಿರವನ್ನು ಕೆಲಹೊತ್ತು ನಿಂತು ಮುಖ್ಯಮಂತ್ರಿಯವರು ವೀಕ್ಷಿಸಿದರು. ಮಹದೇಶ್ವರ ಬೆಟ್ಟದಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಆದಷ್ಟು ಶೀಘ್ರವೇ ಪೂರ್ಣಗೊಳಿಸಬೇಕೆಂದು ಮುಖ್ಯಮಂತ್ರಿಯವರು ಸೂಚಿಸಿದರು.
ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿಯವರು ಪ್ರಾಧಿಕಾರದ ಸಭೆಯನ್ನು ನಡೆಸಿದರು. ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್), ಶಾಸಕರಾದ ಆರ್. ನರೇಂದ್ರ, ಸಿ.ಪುಟ್ಟರಂಗಶೆಟ್ಟಿ, ಎಸ್. ಜಯಣ್ಣ, ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಕೊಪ್ಪಾಳಿ ಮಹದೇವನಾಯ್ಕ, ಜವರೇಗೌಡ, ಕೀಳನಪುರದ ಮಹದೇವಪ್ಪ, ಕಾವೇರಿ ಶಿವಕುಮರ್, ದೇವರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಪ್ರಾಧಿಕಾರದ ಕಾರ್ಯದರ್ಶಿ ಎ.ಜೆ. ರೂಪ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಗಣೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಮಾರ್, ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
   

ಮತದಾನದ ಮಹತ್ವದ ಅರಿವು ಮೂಡಿಸಿ:ಜಿ.ಪಂ ಸಿ.ಇ.ಒ ಡಾ.ಕೆ.ಹರೀಶ್ ಕುಮಾರ್  

ಚಾಮರಾಜನಗರ, ಜ. 11  ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಗೊಳ್ಳಲು ವಿದ್ಯಾರ್ಥಿಗಳಿಗೂ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದ್ದು, ಈ ಸಂಬಂಧ ಅಗತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದರು.
ಹನೂರು ತಾಲ್ಲೂಕಿನ ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯಲ್ಲಿ ಇಂದು ರಾಷ್ಟ್ರೀಯ ಮತದಾರರ ದಿನ ಆಚರಣೆ ಹಿನ್ನೆಲೆಯಲ್ಲಿ ಮತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಉಂಟು ಮಾಡುವ ದಿಸೆಯಲ್ಲಿ ಕೈಗೊಳ್ಳಬೇಕಿರುವ ವಿವಿಧ ಚಟುವಟಿಕೆಗಳ ಕುರಿತ ಸಭೆಯಯಲ್ಲಿ ಅವರು ಮಾತನಾಡಿದರು.
ಶಾಲಾ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮತದಾರರಾಗಲಿದ್ದಾರೆ. ಹೀಗಾಗಿ ಮತದಾನದ ಮಹತ್ವ ತಿಳಿಯಬೇಕಿದೆ. 18 ವರ್ಷ ತುಂಬಿದ ಎಲ್ಲರು ಮತದಾರರಾಗುವುದರಿಂದ ಮತದಾನದ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದರು.
ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಮತದಾನ ಪ್ರಕ್ರಿಯೆ ಹಂತಗಳು ಹಾಗೂ ಇದಕ್ಕೆ ಸಂಬಂಧಿಸಿದ ಇನ್ನಿತರ ವಿಷಯಗಳ ಕುರಿತು ಮನದಟ್ಟಾಗುವಂತೆ ಮಾಹಿತಿ ನೀಡÀಬೇಕು. ಮತದಾನದ ಜಾಗೃತಿ ಮೂಡಿಸಲು ಚರ್ಚಾ ಸ್ಪರ್ಧೆ, ಪ್ರಬಂಧ, ಚಿತ್ರಕಲೆ ಸ್ಪರ್ಧೆಯನ್ನು ಹಮ್ಮಿಕೊಳ್ಳಬೇಕು ಎಂದು ಹರೀಶ್ ಕುಮಾರ್ ರವರು ತಿಳಿಸಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಮತದಾರರ ಸಾಕ್ಷರತೆ ಕ್ಲಬ್‍ಗಳನ್ನು ರಚಿಸಿ ಆ ಮೂಲಕ ನಿರಂತರವಾಗಿ ಮತದಾರರ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಡಬೇಕು ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಸೇರ್ಪಡೆ, ಮರಣ ಹೊಂದಿರುವ, ವಲಸೆ ಹೋಗಿರುವ ಮತದಾರರ ಹೆಸರುಗಳನ್ನು ಕೈಬಿಡುವ ಪ್ರಕ್ರಿಯೆ ಬಗ್ಗೆ ಪೋಷಕರಲ್ಲೂ ತಿಳಿವಳಿಕೆ ನೀಡಬೇಕಿದೆ ಎಂದರು.
ಉಪ ವಿಭಾಗಾಧಿಕಾರಿ ಫೌಜಿಯ ತರನಮ್ ಮಾತನಾಡಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತದಾನದ ಮಹತ್ವವನ್ನು ತಿಳಿಸಿಕೊಡುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ಫೌಜಿಯ ತರನಮ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಹದೇವಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್, ಬಿ.ಆರ್.ಸಿ, ಸಿ.ಆರ್.ಪಿ ಗಳು ಸಭೆಯಲ್ಲಿ ಹಾಜರಿದ್ದರು.



ಗುಂಡ್ಲುಪೇಟೆ : ಜ. 12, 13ರÀಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಚಾಮರಾಜನಗರ, ಜ. 11 - ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಗುಂಡ್ಲುಪೇಟೆ ಗುರುಭವನದಲ್ಲಿ ಜನವರಿ 12 ಹಾಗೂ 13ರಂದು ನಡೆಯಲಿದೆ.
ಜನವರಿ 12ರಂದು ಬೆಳಿಗ್ಗೆ 10.30 ಗಂಟೆಗೆ ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಖ್ಯಾತ ಸಾಹಿತಿಗಳಾದ ಸಿ. ನಾಗಣ್ಣ ಸಮ್ಮೇಳನ ಉದ್ಘಾಟಿಸುವರು. ಸಕ್ಕರೆ ಹಾಗೂ ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎಸ್. ಆಶಯ ನುಡಿ ನುಡಿಯುವರು.
ಸಂಸದರಾದ ಆರ್. ಧ್ರುವನಾರಾಯಣ ದಿ. ಮುದ್ದು ಮಾದಪ್ಪ ದತ್ತಿ ಪ್ರಶಸ್ತಿಯನ್ನು ಸಾಹಿತಿಗಳಾದ ಶೀಲಾ ಸತ್ಯೇಂದ್ರಸ್ವಾಮಿ ಅವರಿಗೆ ಪ್ರಧಾನ ಮಾಡುವರು.
ಹಿರಿಯ ಸಾಹಿತಿ ಮತ್ತು ಸಂಶೋಧಕರಾದ ಜಿ.ಜಿ. ಮಂಜುನಾಥನ್ ಸಮೇಳನಾಧ್ಯಕ್ಷರ ನುಡಿಗಳನ್ನಾಡುವರು.
ಖ್ಯಾತ ಸಾಹಿತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮಲೆಯೂರು ಗುರುಸ್ವಾಮಿ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡುವರು. ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎ.ಎಂ. ನಾಗಮಲ್ಲಪ್ಪ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಸೋಮಶೇಖರ ಬಿಸಲ್ವಾಡಿ ಪುಸ್ತಕ ಲೋಕಾರ್ಪಣೆ ಮಾಡುವರು.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎಸ್. ಜಯಣ್ಣ, ಆರ್. ನರೇಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷರಾದ ಪಿ. ಗಿರೀಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಧ್ವಜಾರೋಹಣ ನೆರವೇರಿಸುವರು. 8.30 ಗಂಟೆಗೆ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಎಸ್. ಮಹೇಶ್ ಮೆರವಣಿಗೆಗೆ ಚಾಲನೆ ನೀಡುವರು. ಪುರಸಭೆ ಉಪಾಧ್ಯಕ್ಷರಾದ ಜಿ.ಕೆ. ನಾಗೇಂದ್ರ ಪುಷ್ಪಾರ್ಚನೆ ಮಾಡುವರು. ಆರಕ್ಷಕ ಉಪನಿರೀಕ್ಷಕರಾದ ಬಿ.ಎಸ್. ಶಿವರುದ್ರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಸಮ್ಮೇಳನದಲ್ಲಿ ವಿವಿಧ ವಿಷಯಗಳ ಕುರಿತು ಗೋಷ್ಠಿ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.

ಜ. 13ರಂದು ನಗರದಲ್ಲಿ ಜಿಲ್ಲಾ ಯುವಜನ ಸಮಾವೇಶ

ಚಾಮರಾಜನಗರ, ಜ. 1- ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ. ನೆಹರು ಯುವ ಕೇಂದ್ರ, ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಹಾಗೂ ರಂಗವಾಹಿನಿ ಇವರ ಸಹಯೋಗದಲ್ಲಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಯುವಜನ ಸಮಾವೇಶವನ್ನು ಜನವರಿ 13ರಂದು ಬೆಳಿಗ್ಗೆ 11 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸಂಸದರಾದ ಆರ್. ಧ್ರುವನಾರಾಯಣ ಸಮಾವೇಶ ಉದ್ಘಾಟಿಸುವರು. ಕೆಆರ್ ಡಿಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಶಿವಬಸವಯ್ಯ ಯುವಜನರಿಗೆ ಸಂದೇಶ ನೀಡುವರು.
ದೀನಬಂಧು ಸಂಸ್ಥೆಯ ನಿರ್ದೇಶಕರಾದ ಜಿ.ಎಸ್. ಜಯದೇವ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಮೈಸೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಕೆ.ಎಂ. ಪ್ರಸನ್ನಕುಮಾರ್ ಅತಿಥಿ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದÉ.

ವಿವಿಧ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಜ. 11- ಜಿಲ್ಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾಗಾಂಧಿ. ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಿಗೆ 2018-19ನೇ ಸಾಲಿನ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸ್ಥಳೀಯ ವಸತಿ ಶಾಲೆ, ತಾಲೂಕು ಮಟ್ಟದ ಕಚೇರಿ ಹಾಗೂ ತಾಲೂಕು ಬಿಇಓ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸಮೀಪದ ಯಾವುದಾದರೂ ವಸತಿ ಶಾಲೆಗೆ ಜನವರಿ 13ರ ಸಂಜೆ 5.30ರ ಒಳಗೆ ಸಲ್ಲಿಸಬೇಕು.
ಪ್ರವೇಶ ಪರೀಕ್ಷೆ ಫೆಬ್ರವರಿ 18ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ವಸತಿ ಶಾಲಾ ಪ್ರಾಂಶುಪಾಲರನ್ನು (ದೂ.ಸಂ. 08229-232228, ಮೊಬೈಲ್ 9164373076) ಸಂಪರ್ಕಿಸುವಂತೆ ಮೊರಾರ್ಜಿ ದೇಸಾಯಿ ವಸತಿಶಾಲೆ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ : ಜ. 12 ರಿಂದ ರಾಷ್ಟ್ರೀಯ ಯುವದಿನ, ಸಪ್ತಾಹ ಆಚರಣೆ

 ಚಾಮರಾಜನಗರ, ಜ. 11- ನೆಹರು ಯುವ ಕೇಂದ್ರ, ಜಿಲ್ಲೆಯ ಯುವ, ಮಹಿಳಾ ಸಂಘಟನೆಗಳು ಹಾಗೂ ಜಿಲ್ಲೆಯ ವಿವಿಧ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಮತ್ತು ಪ್ರೌಢಶಾಲೆಗಳ ಸಯಯೋಗದಲ್ಲಿ ದಿವ್ಯಚೇತನ ಸ್ವಾಮಿ ವಿವೇಕಾನಂದರವರ 155ನೇ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನ ಹಾಗೂ ಸಪ್ತಾಹ ದಿನಾಚರಣೆಯನ್ನು ಜನವರಿ 12 ರಿಂದ 19ರವರೆಗೆ ಜಿಲ್ಲೆಯ ವಿವಿಧೆಡೆ ಹಮ್ಮಿಕೊಳ್ಳಲಾಗಿವೆ.
ಜನವರಿ 12 – ರಾಷ್ಟ್ರೀಯ ಯುವ ದಿನ:-
ಕೊಳ್ಳೇಗಾಲದ ಜೆ.ಎಸ್.ಎಸ್. ಮಹಿಳಾ ಕಾಲೇಜು ಹಾಗೂ ಮುಡಿಗುಂಡದ ವಾಲ್ಮೀಕಿ ಸಮಾಜಸೇವಾ ಸಮಿತಿ ಆಶ್ರಯದಲ್ಲಿ ಕೊಳ್ಳೇಗಾಲದ ಜೆ.ಎಸ್.ಎಸ್. ಮಹಿಳಾ ಕಾಲೇಜು ಆವರಣದಲ್ಲಿ ಜನವರಿ 12ರಂದು ಮಧ್ಯಾಹ್ನ 12 ಗಂಟೆಗೆ ರಾಷ್ಟ್ರೀಯ ಯುವ ದಿನ ಆಚರಿಸಲಿದ್ದು ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಸಿ.ಎಂ. ನರಸಿಂಹಮೂರ್ತಿ ಕಾರ್ಯಕ್ರಮ ಉದ್ಘಾಟಿಸುವರು. ಕಾಲೇಜಿನ ಪ್ರಾಂಶುಪಾಲರಾದ ಉಮೇಶ್ ಅಧ್ಯಕ್ಷತೆ ವಹಿಸುವರು. ರೋಟರಿ ಸಂಸ್ಥೆಯ ಕಾರ್ಯದರ್ಶಿ ಜೋಸೆಫ್ ಅಲೆಗ್ಜಾಂಡರ್ ಅತಿಥಿ ಉಪನ್ಯಾಸ ನೀಡುವರು. ರೋಟರಿ ಸಂಸ್ಥೆ ಅಧ್ಯಕ್ಷರಾದ ಪುಟ್ಟ ಅರಸಶೆಟ್ಟಿ ಹಾಗೂ. ಜೆ.ಎಸ್.ಎಸ್. ಮಹಿಳಾ ಕಾಲೇಜು ಎನ್ ಎಸ್ ಎಸ್ ಅಧಿಕಾರಿ ಸ್ಮಿತಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಜನವರಿ 13 – ಸಾಂಸ್ಕøತಿಕ ದಿನ:-
ಚಾಮರಾಜನಗರ ಸಂಯುಕ್ತ ಯುವಜನ ಸಂಘದ ಆಶ್ರಯದಲ್ಲಿ ತಾಲೂಕಿನ ಆಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ  ಜನವರಿ 13ರಂದು ಬೆಳಿಗ್ಗೆ 10 ಗಂಟೆಗೆ ಸಾಂಸ್ಕøತಿಕ ದಿನಾಚರಣೆ ಆಚರಿಸಲಿದ್ದು ಸಮಾಜ ಕಾರ್ಯಕರ್ತರಾದ ಶೇಖಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಪ್ರಭುಸ್ವಾಮಿ ಅಧ್ಯಕ್ಷತೆ ವಹಿಸುವರು. ಶಾಲೆಯ ಕನ್ನಡ ಶಿಕ್ಷಕರಾದ ಮಹದೇವಮ್ಮ ಅತಿಥಿ ಉಪನ್ಯಾಸ ನೀಡುವರು. ಆಲೂರಿನ ಶ್ರೀ ಮಹದೇಶ್ವರ ಬೀಸು ಕಂಸಾಳೆ ಕಲಾಸಂಘ ಅಧ್ಯಕ್ಷರಾದ ಶಿವಣ್ಣ ಹಾಗೂ. ಗ್ರಾಮದ ಯಜಮಾನರಾದ ಮಹದೇವಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಜನವರಿ 14 – ಭಾಗವಹಿಸುವಿಕೆಯ ದಿನ:-
ಹೆÉೂನ್ನೂರಿನ ಜಗಜ್ಯೋತಿ ಶ್ರೀ ಬಸವೇಶ್ವರ ಯುವಕರ ಸಂಘದೊಂದಿಗೆ ಯಳಂದೂರು ತಾಲೂಕು ಹೊನ್ನೂರಿನ ಯುವಸಂಘದ ಆವರಣದಲ್ಲಿ  ಜನವರಿ 14ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮದ ಅಂಗವಾಗಿ ಭಾಗವಹಿಸುವಿಕೆಯ ದಿನವನ್ನು ಆಚರಿಸಲಿದೆ. ಹೊನ್ನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಮಹದೇವಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಜಗಜ್ಯೋತಿ ಶ್ರೀ ಬಸವೇಶ್ವರ ಯುವಕರ ಸಂಘದ ಆಧ್ಯಕ್ಷರಾದ ಎಂ. ಜಗದೀಶ್ ಅಧ್ಯಕ್ಷತೆ ವಹಿಸುವರು. ಹೊನ್ನೂರಿನ ಭೀಮರಾವ್ ಜೀ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಉಮೇಶ್ ಅತಿಥಿ ಉಪನ್ಯಾಸ ನೀಡುವರು.  ಮುಖ್ಯ ಅತಿಥಿಗಳಾಗಿ ಹೊನ್ನೂರಿನ ನಾಡಗೌಡರಾದ ಮರಿಸ್ವಾಮಿ ಹಾಗೂ ಗ್ರಾಮದ ಮುಖಂಡರಾದ ಸಿದ್ದರಾಜು ಪಾಲ್ಗೊಳ್ಳುವರು.
ಜನವರಿ 15 – ಸಮಾಜ ಸೇವಾ ದಿನ:-
ಗುಂಡ್ಲುಪೇಟೆ ತಾಲೂಕಿನ ಶಿವಪುರದ ಜೆ.ಎಸ್.ಎಸ್. ಪ್ರೌಢಶಾಲೆ ಹಾಗೂ ಕಸ್ತೂರಿ ಕನ್ನಡ ಕಲಾಬಳಗದ ಸಂಘಟನೆಯೊಂದಿಗೆ ಶಿವಪುರದ ಜೆ.ಎಸ್.ಎಸ್. ಪ್ರೌಢಶಾಲೆಯಲ್ಲಿ  ಜನವರಿ 15ರಂದು ಬೆಳಿಗ್ಗೆ 11 ಗಂಟೆಗೆ ಸಮÁಜ ಸೇವಾ ದಿನವನ್ನು ಆಚರಿಸಲಿದೆ. ಶಿವಪುರ ಜೆ.ಎಸ್.ಎಸ್. ಪ್ರೌಢಶಾಲೆಯ ಗಣಿತ ಶಿಕ್ಷಕರಾದ ಲಿಂಗರಾಜು ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಶಿಕ್ಷಕರಾದ ಜೆ.ಎನ್. ಲೋಕೇಶ್ ಅಧ್ಯಕ್ಷತೆ ವಹಿಸುವರು.  ಕನ್ನಡ ಶಿಕ್ಷಕರಾದ ಹೆಚ್.ಪಿ. ಪಶುಪತಿ ಅತಿಥಿ ಉಪನ್ಯಾಸ ನೀಡುವರು.  ಮುಖ್ಯ ಅತಿಥಿಗಳಾಗಿ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ಎಸ್. ಬಸವಣ್ಣ, ಹಿಂದಿ ಶಿಕ್ಷಕರಾದ ಬಿ. ಮೀನಾಕ್ಷಿ, ದೈಹಿಕ ಶಿಕ್ಷಕರಾದ ಶಾಂತ ಮಲ್ಲೇಶ್ ಹಾಗೂ ಗಣಿತ ಶಿಕ್ಷಕರಾದ ಬಸವಣ್ಣ ಪಾಲ್ಗೊಳ್ಳುವರು.
ಜನವರಿ 16 – ಭಾಗವಹಿಸುವಿಕೆಯ ದಿನ:-
ಸತ್ತೇಗಾಲದ ಸರ್ಕಾರಿ ಪ್ರೌಢಶಾಲೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸತ್ಯಾದ್ರಿ ಯುವಕರ ಸಂಘದೊಂದಿಗೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಜನವರಿ 16ರಂದು ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮದ ಅಂಗವಾಗಿ ದೈಹಿಕ ದಕ್ಷತಾ ದಿನವನ್ನು ಆಚರಿಸಲಿದೆ. ಸತ್ತೇಗಾಲ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಭಾಗ್ಯಲಕ್ಷ್ಮಿ ಕಾರ್ಯಕ್ರಮ ಉದ್ಘಾಟಿಸುವರು. ಕೊಳ್ಳೇಗಾಲ ರೋಟರಿ ಸಂಸ್ಥೆಯ ಆಧ್ಯಕ್ಷರಾದ ಪುಟ್ಟ ಅರಸಶೆಟ್ಟಿ ಅಧ್ಯಕ್ಷತೆ ವಹಿಸುವರು. ರೋಟರಿ ಸಂಸ್ಥೆ ಕಾರ್ಯದರ್ಶಿಗಳಾದ ಜೋಸೆಫ್ ಅಲೆಗ್ಜಾಂಡರ್ ಅತಿಥಿ ಉಪನ್ಯಾಸ ನೀಡುವರು.  ಮುಖ್ಯ ಅತಿಥಿಗಳಾಗಿ ಡಾ. ಬಿ.ಆರ್. ಅಂಬೇಡ್ಕರ್ ಸಹ್ಯಾದ್ರಿ ಯುವಕರ ಸಂಘದ ಅಧ್ಯಕ್ಷರಾದ ಜಯಚಂದ್ರ ಹಾಗೂ ರೋಟರಿ ಸಂಸ್ಥೆ ಸದಸ್ಯರಾದ ಜೆ.ಕುಮಾರಸ್ವಾಮಿ ಪಾಲ್ಗೊಳ್ಳುವರು.
ಜನವರಿ 17 – ಯುವಜನರು ಮತ್ತು ಶಾಂತಿ ದಿನ:-
ಕಾಗಲವಾಡಿಯ ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆ ಹಾಗೂ ಹುರುಳಿನಂಜನಪುರದ ಉದಯ್ ಭೀಮ್ ಯುವಜನ ಸಂಘದ ಆಶ್ರಯದಲ್ಲಿ ಜನವರಿ 17ರಂದು ಬೆಳಿಗ್ಗೆ 10 ಗಂಟೆಗೆ ಕಾಗÀಲವಾಡಿಯ ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆಯಲ್ಲಿ ಯುವಜನರು ಮತ್ತು ಶಾಂತಿ ದಿನಾಚರಣೆ ಪ್ರಯುಕ್ತ ಕಾಗಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಮ್ಮ ಕಾರ್ಯಕ್ರಮ ಉದ್ಘಾಟಿಸುವರು. ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಬಿ. ಮಹದೇವಯ್ಯ ಅಧ್ಯಕ್ಷತೆ ವಹಿಸುವರು. ಕನ್ನಡ ಶಿಕ್ಷಕರಾದ ರವಿ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಕಾಗಲವಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ದೇವಿ, ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆಯ ಗಣಿತ ಶಿಕ್ಷಕರಾದ ನಾಗೇಂದ್ರ ಪ್ರಸಾದ್ ಹಾಗೂ ಚಾಮರಾಜನಗರದ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕøತರಾದ ಮಂಜುನಾಥ ಆಗಮಿಸುವರು.
ಜನವರಿ 18 – ಕೌಶಲ್ಯಾಭಿವೃದ್ಧಿ ದಿನ:-
ಯಳಂದೂರಿನ ಬಿಳಿಗಿರಿ ಪ್ರಥಮದರ್ಜೆ ಕಾಲೇಜು ಹಾಗೂ ಚಂದನ ಮಹಿಳಾ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಜನವರಿ 18ರಂದು ಬೆಳಿಗ್ಗೆ 11 ಗಂಟೆಗೆ ಕೌಶಲ್ಯಾಭಿವೃದ್ಧಿ ದಿನವನ್ನು ಆಚರಿಸಲÁಗುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಕಾರ್ಯದರ್ಶಿಗಳಾದ ವಿ.ಎಂ. ರಾವÀುಚಂದ್ರ ಉದ್ಘಾಟಿಸುವರು. ಕಾಲೇಜಿನ ಪ್ರಾಂಶುಪಾಲರಾದ ಎಂ.ವಿ. ಪುಷ್ಟಕುಮಾರ್ ಅಧ್ಯಕ್ಷತೆ ವಹಿಸುವರು. ನಗರದ ಯುವ ಪರಿವರ್ತಕರಾದ ರವಿಕುಮಾರ್ ಅತಿಥಿ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಯಳಂದೂರಿನ ಬಿಳಿಗಿರಿ ರೋವರ್ ಸ್ಕೌಟ್ ಲೀಡರ್ ಡಿ.ವಿ. ಪ್ರಕಾಶ್ ಮೂರ್ತಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಡಿ.ಬಿ. ಶಿವರುದ್ರಪ್ಪ, ಚಂದನ ಮಹಿಳಾ ಅಭಿವೃದ್ಧಿ ಸಂಘದ ತಾಲೂಕು ಸಂಯೋಜಕರಾದ ಸುಂದ್ರಮ್ಮ ಪಾಲ್ಗೊಳ್ಳುವರು.
ಜನವರಿ 19 – ಜಾಗೃತಿ ದಿನ ಹಾಗೂ ಯುವ ಸಪ್ತಾಹ ಸಮಾರೋಪ:-
ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಾದಾಪಟ್ಟಣದ ಚೆನ್ನಬಸವೇಶ್ವರ ಕಲಾ ಬಳಗದ ಸಂಘಟನೆಯೊಂದಿಗೆ ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜನವರಿ 19ರಂದು ಬೆಳಿಗ್ಗೆ 11 ಗಂಟೆಗೆ ಜಾಗೃತಿ ದಿನ ಮತ್ತು ಯುವ ಸಪ್ತಾಹದ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ.
ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಜಿ. ಮಲ್ಲೇಶ್ ಅಧ್ಯಕ್ಷತೆ ವಹಿಸುವರು. ಕನ್ನಡ ಉಪನ್ಯಾಸಕರಾದ ಗಣೇಶ್ ಅತಿಥಿ ಉಪನ್ಯಾಸಕರಾಗಿ ಭಾಗವಹಿಸುವರು. ಗುಂಡ್ಲುಪೇಟೆ ಸಂಜೀವಿನಿ ಯೋಜನೆ ಸಂಯೋಜಕರಾದ ಸುಬ್ಬಮ್ಮ, ಸಮಷ್ಟಿ ಸಮಗ್ರ ಅಭಿವೃದ್ಧಿ ಟ್ರಸ್ಟ್‍ನ ಕಾರ್ಯನಿರ್ವಾಹಕರಾದ ಗಂಗಾಧರಸ್ವಾಮಿ ಹಾಗೂ ಚಾಮರಾಜನಗರದ ನವಸಮೃದ್ಧಿ ಗ್ರಾಮೀಣಾಭಿವೃದ್ಧಿ ಅಧ್ಯಕ್ಷರಾದ ಕಾಳಿಂಗಸ್ವಾಮಿ ಸಿದ್ದಾರ್ಥ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ನೆಹರು ಯುವ ಕೇಂದ್ರದ ಪ್ರಕಟಣೆ ತಿಳಿಸಿದೆ.


ಜಿಲ್ಲಾ ಮಟ್ಟದ ನಾಟಕ, ಜಾನಪದ ನೃತ್ಯ ಸ್ಪರ್ಧೆಗೆ ಅರ್ಜಿ ಆಹ್ವಾನ

ಚಾಮರಾಜನಗರ, ಜ. 11 ಕನ್ನಡ ಮತ್ತು ಸಂಸ್ಕøತಿ ಇಲಾಖೆಯು 2017-18ನೇ ಸಾಲಿನಲ್ಲಿ ಮೈಸೂರು ವಲಯದ 8 ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ ಆಯೋಜಿಸಲು ಉದ್ದೇಶಿಸಲಾಗಿದೆ.
ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಕಾಲೇಜಿನ ಪ್ರಾಂಶುಪಾಲರು ಜನವರಿ 22ರ ಸಂಜೆ 4 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು.
ನಾಟಕದ ಆಯ್ಕೆ, ನಾಟಕದ ನಿರ್ದೇಶಕರು ಮತ್ತು ಜಾನಪದ ನೃತ್ಯ ಪ್ರಕಾರದ ಆಯ್ಕೆ, ತರಬೇತುದಾರರು ಮುಂತಾದ ವಿವರಗಳನ್ನು ಪರಿಗಣಿಸಿ ಕಾಲೇಜುಗಳನ್ನು ಸ್ಪರ್ಧೆ ಆಯ್ಕೆ ಮಾಡಿ ಸ್ಪಧೆ ನಡೆಯುವ ಸ್ಥಳ. ದಿನಾಂಕವನ್ನು ತಿಳಿಸಲಾಗುವುದು.
ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆಯ ನಿಯಮಾವಳಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದುಕೊಳ್ಳುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣÉಯಲ್ಲಿ ತಿಳಿಸಿದ್ದಾರÉ.

ಜ. 15ರಂದು ಸುಗ್ಗಿಹುಗ್ಗಿ ಕಾರ್ಯಕ್ರಮ

ಚಾಮರಾಜನಗರ, ಜ. 11 :- ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕೃಷಿ ಇಲಾಖೆ ಸಹಯೋಗದಲ್ಲಿ ಚಾಮರಾಜನಗರ ತಾಲೂಕು ಕೆಂಪನಪುರದಲ್ಲಿ ಜನವರಿ 15ರಂದು ಸಂಜೆ 4 ಗಂಟೆಗೆ ಸುಗ್ಗಿ ಹುಗ್ಗಿ ಕಾರ್ಯಕ್ರಮ ಆಯೋಜಿಸಿದೆ.
ಸಕ್ಕರೆ ಹಾಗೂ ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಎಸ್. ಜಯಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಮೆರವಣಿಗೆಗೆ ಚಾಲನೆ ನೀಡುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಸಾಧಕರಿಗೆ ಸನ್ಮಾನ ಮಾಡುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು. ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಕೆಂಪನಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ.ಎಂ. ಗುರುಸಿದ್ದಪ್ಪ, ಉಪಾಧ್ಯಕ್ಷರಾದ ತೊಳಸಮ್ಮ ಆಗಮಿಸುವರು.
ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಜ. 12ರಂದು ಕಾನೂನು ಅರಿವು ನೆರವು ಕಾರ್ಯಕ್ರಮ

ಚಾಮರಾಜನಗರ, ಜ. 11 - ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮನೋನಿಧಿ ಇನ್ಸ್‍ಸ್ಟಿಟ್ಯೂಷನ್, ಸಾಧನ ಸಂಸ್ಥೆ ಇವರ ಸಹಯೋಗದಲ್ಲಿ ಜನವರಿ 12ರಂದು ಮಧ್ಯಾಹ್ನ 12 ಗಂಟೆಗೆ ನಗರದ ಹೌಸಿಂಗ್ ಬೋರ್ಡ್‍ನಲ್ಲಿರುವ ಮನೋನೊಧಿ ಇನ್ಸ್‍ಸ್ಟಿಟ್ಯೂಷನ್‍ನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಕಾರ್ಯಕ್ರಮ ಉದ್ಘಾಟಿಸುವರು. ಮನೋನಿಧಿ ಇನ್ಸ್‍ಸ್ಟಿಟ್ಯೂಷನ್‍ನ ಕಾರ್ಯದರ್ಶಿ ಶೈಲಜಾ ಕೃಪಾನಿಧಿ ಅಧ್ಯಕ್ಷತೆ ವಹಿಸುವರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಅರ್. ಅರುಣ್ ಕುಮಾರ್ ಹಾಗೂ ಬಾಲ ನ್ಯಾಯ ಮಂಡಳಿ ಸದಸ್ಯರಾದ ಟಿ.ಜಿ. ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು