Tuesday, 14 June 2016

ಜಿಲ್ಲಾ ಉಸ್ತುವಾರಿ ಸಚಿವರ ಪುತ್ರನ ಹೆಸರಿನಲ್ಲಿ ನಡೆಯುತ್ತಿದಿಯೇ ಻ಕ್ರಮ ಗಣಿಗಾರಿಕೆ, ಸಿದ್ದಣ್ಣ ೇನು ನಿನ್ನ ಕೃಪೆ..! 13-06-2016 ಚಾಮರಾಜನಗರ ಪ್ರಮುಖ ಸುದ್ದಿಗಳು



ಸಹಕಾರ ಸಚಿವ ಮಹದೇವಪ್ರಸಾದ್ ಪುತ್ರನ ಬಿಳಿಕಲ್ಲು ಗಣಿ ಮೇಲೆ ದಾಳಿ ಲಾರಿ ಟಿಪ್ಪರ್ ಜಪ್ತಿ
ಚಾಮರಾಜನಗರ.ಜೂ.13: ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಮತ್ತು ಸಕ್ಕರೆ ಖಾತೆ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಪುತ್ರ ಹೆಚ್.ಎಂ. ಗಣೇಶ್‍ಪ್ರಸಾದ್ ಮಾಲಿಕತ್ವದಲ್ಲಿ ನಡೆಯುತ್ತಿದ್ದ ಬಿಳಿಕಲ್ಲು ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಧಾಳಿ ನಡೆಸಿ, ಟಿಪ್ಪರ್ ಮತ್ತು ಲಾರಿಯನ್ನು ಜಪ್ತಿ ಪಡಿಸಿಕೊಂಡಿದ್ದಾರೆ.
ಗುಂಡ್ಲುಪೇಟೆ ತಾಲ್ಲೂಕಿನ ಬೆಳಚವಾಡಿ ಗ್ರಾಮದ ಸರ್ವೆ ನಂ: 243 ರಲ್ಲಿ ಸಹಕಾರ ಮತ್ತು ಸಕ್ಕರೆ ಖಾತೆ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಪುತ್ರ ಹೆಚ್.ಎಂ. ಗಣೇಶ್ ಪ್ರಸಾದ್ ಮಾಲಿಕತ್ವದಲ್ಲಿ ಬಿಳಿಕಲ್ಲು ಗಣಿಗಾರಿಕೆ ನಡೆಯುತ್ತಿತ್ತು ಎಂದು ತಿಳಿದುಬಂದಿದ್ದು ಇದು ಅಕ್ರಮವಾಗಿ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಗುಂಡ್ಲುಪೇಟೆ ಬಿ.ಜೆ.ಪಿ ಮುಖಂಡರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ದಾಳಿ ನಡೆಸಿದರು.
ಸಚಿವ ಮಹದೇವಪ್ರಸಾದ್ ಪುತ್ರ ಗಣೇಶ್ ಪ್ರಸಾದ್ ಮಾಲಿಕತ್ವದಲ್ಲಿರುವ ಜಮೀನು ಸರ್ವೆ ನಂ 243 ರಲ್ಲಿ ಖುಷ್ಕಿ ಜಮೀನು ಹಾಗೂ ಜೋಳ ಬೆಳಸಲಾಗುತ್ತಿದೆ ಎಂದು ಆರ್.ಟಿ.ಸಿಯಲ್ಲಿ ನಮೂದಾಗಿದೆ. ಆದೆ ಇಲ್ಲಿ ಬಿಳಿಕಲ್ಲು ಗಣಿಗಾರಿಕೆ ಮಾಡಲಾಗುತ್ತಿರುವುದು ಬೆಳಕಿಗೆ ಬಂದಿದ್ದು, ಈ ಸ್ಥಳದಲ್ಲಿ 400 ಅಡಿ ವಿಸ್ತೀರ್ಣದಲ್ಲಿ 80 ಅಡಿ ಆಳದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ.
ಸ್ಥಳಕ್ಕೆ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೃಷ್ಣವೇಣಿ ಮತ್ತಿತ್ತರ ಅಧಿಕಾರಿಗಳು ಗಣಿಗಾರಿಯಲ್ಲಿ ತೊಡಗಿದ್ದ ಯಂತ್ರೋಪಕರಣಗಳನ್ನು ಸ್ಥಗಿತಗೊಳಿಸಿ, ಲಾರಿ ಮತ್ತು ಟಿಪ್ಪರ್‍ನ್ನು ಜಪ್ತಿ ಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ

ಜೂ. 14ರಂದು ಮಲೇರಿಯಾ ವಿರೋಧಿ ಮಾಸಾಚರಣೆ ಜಾಥಾ
ಚಾಮರಾಜನಗರ, ಜೂ. - ಆರೋಗ್ಯ ಇಲಾಖೆ ವತಿಯಿಂದ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಜೂನ್ 14ರಂದು ಬೆಳಿಗ್ಗೆ 10 ಗಂಟೆಗೆ ನಗರದ ಚಾಮರಾಜೇಶ್ವರ ದೇವಾಲಯ ಆವರಣದಲ್ಲಿ ಜಾಥಾ ಹೊರಡಲಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಜೂ. 15ರಂದು ಮಹದೇಶ್ವರ ಬೆಟ್ಟದಲ್ಲಿ ಸಿಸಿ ಕ್ಯಾಮರಾ ಸರ್ವರ್ ಲೈನ್, ಅಂಗಡಿ ಮಳಿಗೆಗಳ ಉದ್ಘಾಟನೆ
ಚಾಮರಾಜನಗರ, ಜೂ. -ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಿಸಿ ಕ್ಯಾಮರಾ ಸರ್ವರ್ ಲೈನ್ ಮತ್ತು ಅಂಗಡಿ ಮಳಿಗೆಗಳ ಉದ್ಘಾಟನಾ ಸಮಾರಂಭವು  ಜೂನ್ 15ರಂದು ಬೆಳಿಗ್ಗೆ 10.30 ಗಂಟೆಗೆ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಬಯಲು ರಂಗಮಂದಿರ ಆವರಣದಲ್ಲಿ ನಡೆಯಲಿದೆ.
ಸಹಕಾರ, ಸಕ್ಕರೆ ಖಾತೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್.ಮಹದೇವಪ್ರಸಾದ್ ಉದ್ಘಾಟನೆ ನೆರವೇರಿಸುವರು.  ಮುಜರಾಯಿ ಹಾಗೂ ಅಬಕಾರಿ ಸಚಿವರಾದ ಮನೋಹರ ತಹಸೀಲ್ದಾರ್ ದೀಪ ಬೆಳಗಿಸುವರು. ಶಾಸಕರಾದ ಆರ್. ನರೇಂದ್ರ ಅಧ್ಯಕ್ಷತೆ ವಹಿಸುವರು. ಸಾಲೂರು ಬೃಹನ್ಮಠ ಅಧ್ಯಕ್ಷರಾದ ಪಟ್ಟದ ಗುರುಸ್ವಾಮಿ ದಿವ್ಯ ಸಾನಿಧ್ಯ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಜಯಣ್ಣ, ಗೋ. ಮಧುಸೂದನ್, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಕೊಳ್ಳೇಗಾಲ ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಜು, ಜಿಲ್ಲಾ ಪಂಚಾಯತ್ ಸದಸ್ಯರಾದ ಇರ್ಷಾದ್ ಭಾನು, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಲತಾ ರಾಜಣ್ಣ, ಸದಸ್ಯರಾದ ಹಲಗ ತಂಬಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರುಕ್ಮಿಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿನಿಲಯ, ಆಶ್ರಮಶಾಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸೂಚನೆ
ಚಾಮರಾಜನಗರ, ಜೂ. 13- ಜಿಲ್ಲೆಯಲ್ಲಿರುವ ವಿದ್ಯಾರ್ಥಿನಿಲಯ, ಆಶ್ರಮ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ಕ್ರಮವಹಿಸುವಂತೆ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಅವರು ಸೂಚನೆ ನೀಡಿದ್ದಾರೆ.
ಗುಂಡ್ಲುಪೇಟೆ ತಾಲೂಕು ಬೇಗೂರು ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಇಂದು ಭೇಟಿ ನೀಡಿದ ಅವರು ಅಧಿಕಾರಿಗಳಿಗೆ ವಿದ್ಯಾರ್ಥಿನಿಲಯ, ಆಶ್ರಮಶಾಲೆಗಳಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು.
ವಿದ್ಯಾರ್ಥಿನಿಲಯ, ಆಶ್ರಮ ಶಾಲೆಗಳಲ್ಲಿ ಇರುವ ಮಂಜೂರಾತಿ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಬೇಕಿದೆ. ಕಳೆದ 5 ವರ್ಷಗಳಲ್ಲಿ ವಿದ್ಯಾರ್ಥಿನಿಲಯ, ಆಶ್ರಮ ಶಾಲೆಗಳಲ್ಲಿ ಬಂದಿರುವ ಫಲಿತಾಂಶವನ್ನು ಅಧ್ಯಯನ ಮಾಡಿ ಗುಣಮಟ್ಟದ ಶಿಕ್ಷಣ ನೀಡುವ ಸಂಬಂಧ ಯೋಜನೆ ರೂಪಿಸಬೇಕೆಂದು ಉಮಾ ಮಹದೇವನ್ ಅವರು ತಿಳಿಸಿದರು.
ಆಶ್ರಮ ಶಾಲೆ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣಬೇಕು. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು.  ವಿದ್ಯಾರ್ಥಿನಿಲಯಗಳಲ್ಲಿ ಸಮಿತಿಗಳನ್ನು ರಚಿಸಿ ಈ ಕುರಿತ ಮಾಹಿತಿಯನ್ನು ಪ್ರಕಟಣಾ ಫಲಕದಲ್ಲಿ ಪ್ರದರ್ಶಿಸಬೇಕು. ಯಾವುದೇ ವಿದ್ಯಾರ್ಥಿಗೆ ನೋವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗಕ್ಕೆ ಮಹತ್ವ ನೀಡುವುದರ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿನಿಲಯ, ಆಶ್ರಮಶಾಲೆ ವಿದ್ಯಾರ್ಥಿಗಳಿಗಾಗಿಯೇ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ದಿನಾಚರಣೆ ಹಮ್ಮಿಕೊಳ್ಳಬೇಕು. ಈ ಸಂದರ್ಭದಲ್ಲಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಯುವಜನ ಸೇವಾ ಇಲಾಖೆಯಿಂದ ಸಂಗೀತ ಉಪಕರಣಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಪ್ರಧಾನ ಕಾರ್ಯದರ್ಶಿಯವರು ತಿಳಿಸಿದರು.
ವಿದ್ಯಾರ್ಥಿನಿಲಯಗಳಲ್ಲಿ ನೀಡಲಾಗುತ್ತಿರುವ ಊಟ ಉಪಹಾರಗಳ ಕುರಿತು ಮಾಹಿತಿ ಪಡೆದ ಪ್ರಧಾನ ಕಾರ್ಯದರ್ಶಿಯವರು ಸಂಜೆಯ ವೇಳೆ ಲಘು ಉಪಾಹಾರವನ್ನು ಕಡ್ಡಾಯವಾಗಿ ನೀಡುವಂತೆ ನಿರ್ದೇಶ ನ ನೀಡಿದರು, ಅಲ್ಲದೆ ವಿದ್ಯಾರ್ಥಿನಿಲಯಗಳಲ್ಲಿ ಗ್ರಂಥಾಲಯ ತೆರೆಯುವಂತೆಯೂ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಅವರು ಸಮಾಲೋಚನೆ ನಡೆಸಿದರು. ಪರಿಸರ ಸಂರಕ್ಷಣೆ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಅವರು ವಸತಿ ಶಾಲೆ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಮುಖ್ಯ ಯೋಜನಾಧಿಕಾರಿ ಮಾದೇಶು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜೇಶ್ ಜಿ. ಗೌಡ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸರಸ್ವತಿ, ಇತರೆ ಅಧಿಕಾರಿಗಳು ಹಾಜರಿದ್ದರು.


ಎನ್‍ಎಂಎಂಎಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ
ಚಾಮರಾಜನಗರ, ಜೂ. 13 - ನಗರದ ಆದರ್ಶ ಶಾಲೆಯ ವಿದ್ಯಾರ್ಥಿಗಳು 2015-16ನೇ ಸಾಲಿನಲ್ಲಿ ನಡೆದ ಎನ್‍ಎಂಎಂಎಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಒಟ್ಟು 21 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಪೈಕಿ ಎ. ಇಕ್ರಾ ಐಮನ್, ಬಿ. ಜ್ಯೋತಿ, ಆರ್.ಕೆ. ಕೀರ್ತಿ, ಎಂ. ಮಾಯಾದೇವಿ, ಎಚ್.ಆರ್. ಪ್ರಿಯ, ತಂಜೀಮ್ ಜಗ್ರಾ, ತೇಜಸ್, ವಿರಾಸ್ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳನ್ನು ಶಿಕ್ಷಕ ವೃಂದ ಹಾಗೂ ಪೋಷಕರು ಅಭಿನಂದಿಸಿದ್ದಾರೆಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕೃಷಿ ಆಹಾರ ಉತ್ಪನ್ನಗಳ ಕೈಗಾರಿಕಾ ತರಬೇತಿ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆÀ
ಚಾಮರಾಜನಗರ, ಜೂ. 13- ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಆಶ್ರಯದಲ್ಲಿ ಜುಲೈ ತಿಂಗಳಲ್ಲಿ ಹಮ್ಮಿಕೊಳ್ಳಲಿರುವ ಕೃಷಿ ಮತ್ತು ಆಹಾರ ಉತ್ಪನ್ನಗಳ ಕೈಗಾರಿಕೆ ತರಬೇತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಜೂನ್ 20ರವರೆಗೆ ವಿಸ್ತರಿಸಲಾಗಿದೆ.
ಅಭ್ಯರ್ಥಿಗಳು ಕನಿಷ್ಟ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು. 18 ರಿಂದ 40ರ ವಯೋಮಿತಿಯೊಳಗಿರಬೇಕು. ತರಬೇತಿ ಅವಧಿಯಲ್ಲಿ ಸ್ವಂತ ಉದ್ಯೋಗ ಸ್ಥಾಪನೆ, ಬ್ಯಾಂಕು, ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆಯಿಂದ ದೊರೆಯುವ ಹಣಕಾಸು ಸೌಲಭ್ಯ, ಕೃಷಿ ಆಹಾರ ಉತ್ಪನ್ನಗಳ ತಯಾರಿಕೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಗುತ್ತದೆ.
ಆಸಕ್ತರು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರ ಕಚೇರಿಯಲ್ಲಿ (ಕೊಠಡಿ ಸಂಖ್ಯೆ 331) ಅರ್ಜಿ ಪಡೆದು ಜೂನ್ 20ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ, ಉಪನಿರ್ದೇಶಕರು ಅಥವಾ ದೂ.ಸಂ. 08226-226346, ಮೊಬೈಲ್ 7760145784 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಗುಂಡ್ಲುಪೇಟೆ : ಪ್ಲಾಸ್ಟಿಕ್ ನಿಷೇಧ ಆದೇಶ ಪಾಲನೆಗೆ ಸೂಚನೆ
ಚಾಮರಾಜನಗರ, ಜೂ. 13 - ಗುಂಡ್ಲುಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿದ್ದು, ಅಂಗಡಿ ಮಾಲೀಕರು ತಮ್ಮ ಬಳಿಯಿರುವ ಪ್ಲಾಸ್ಟಿಕ್ ವಸ್ತುಗಳನ್ನು 7 ದಿನಗಳ ಒಳಗೆ ವಿಲೇಗೊಳಿಸುವಂತೆ ಸೂಚಿಸಲಾಗಿದೆ.
ಪ್ಲಾಸ್ಟಿಕ್‍ನಿಂದ ತಯಾರಿಸಿದ ಕ್ಯಾರಿ ಬ್ಯಾಗ್, ಭಿತ್ತಿ ಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಕ್ಲಿಂಗ್ ಫಿಲ್ಕ್ಸ್, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಥರ್ಮಾಕೋಲ್‍ನಿಂದ ತಯಾರಿಸಿದ ವಸ್ತುಗಳನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬಳಕೆ, ಮಾರಾಟ ಮಾಡುವುದು ಕಂಡುಬಂದಲ್ಲಿ ಕರ್ನಾಟಕ ಮುನಿಸಿಪಲ್ ಕಾಯಿದೆ ಹಾಗೂ ಪರಿಸರ ಸಂರಕ್ಷಣಾ ಕಾಯಿದೆ ಅನ್ವಯ ಮೊಕದ್ದಮೆ ಹೂಡಲು ಕ್ರಮ ವಹಿಸಲಾಗುತ್ತದೆ.
ಅಂಗಡಿ ಮಾಲೀಕರು ಪ್ಲಾಸ್ಟಿಕ್ ನಿಷೇಧಿಸಿದೆ ಎಂಬ ನಾಮಫಲಕಗಳನ್ನು ಅಂಗಡಿಯಲ್ಲಿ ಅಳವಡಿಸಬೇಕು. ಪರಿಸರಕ್ಕೆ ಉಂಟಾಗುವ ಹಾನಿಯನ್ನು ತಡೆಯಲು ಜಾರಿಗೊಳಿಸಿರುವ ಪ್ಲಾಸ್ಟಿಕ್ ನಿಷೇಧ ಕ್ರಮವನ್ನು ಕಟ್ಟುನಿಟ್ಟಾಗಿ ಪಟ್ಟಣ ವ್ಯಾಪ್ತಿ ಪಾಲಿಸುವಂತೆ ಪುರಸಭೆ  ಅಧ್ಯಕ್ಷರಾದ ರಮೇಶ್, ಉಪಾಧ್ಯಕ್ಷರಾದ ಎಸ್. ಸುರೇಶ್ ಕುಮಾರ್ ಮತ್ತು ಮುಖ್ಯಾಧಿಕಾರಿ ಎಚ್.ಕೆ. ನಾಗಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಕೊಳ್ಳೇಗಾಲ : ವಿವಿಧ ಕೌಶಲ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 13 :- ಕೊಳ್ಳೇಗಾಲ ನಗರಸಭೆಯು 2016-17ನೇ ಸಾಲಿನಲ್ಲಿ ದೀನ ದಯಾಳ್ ಅಂತ್ಯೋದಯ ಯೋಜನೆ - ನಲ್ಮ್ ಅಭಿಯಾನ ಯೋಜನೆಯಡಿ ವಿವಿಧ ಕೌಶಲ ತರಬೇತಿ ನೀಡಲಿದ್ದು ಪಟ್ಟಣ ವ್ಯಾಪ್ತಿಯ ಯುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
8ನೇ ತರಗತಿ ವಿದ್ಯಾರ್ಹತೆ ಉಳ್ಳವರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮೇಂಟೆನೆನ್ಸ್ ಆಫ್ ಮೊಬೈಲ್ ಫೋನ್, ಗಾರ್ಮೆಂಟ್ ಕನ್ಸ್ಟ್ರಕ್ಷನ್ ಟೆಕ್ನಿಕ್ಸ್, ಹ್ಯಾಂಡ್ ಎಂಬ್ರಾಯಿಡರಿ ಜರದೋಸಿ ವರ್ಕ್, ಬ್ಯುಟಿಷಿಯನ್, ದ್ವಿಚಕ್ರ ವಾಹನ ಬೇಸಿಕ್ ಆಟೋಮೊಟಿವ್ ಮತ್ತು ಓವರ್ ಹೌಲಿಂಗ್ ತರಬೇತಿ ನೀಡಲಾಗುತ್ತದೆ.
ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಉಳ್ಳವರಿಗೆ ಕಂಪ್ಯೂಟರ್ ಹಾರ್ಡ್‍ವೇರ್ ಮತ್ತು ನೆಟ್ ವರ್ಕಿಂಗ್, ಡಿಪ್ಲೊಮಾ ಇನ್ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ಕೋರ್ಸ್, ಕಂಪ್ಯೂಟರ್ ಫಂಡಮೆಂಟಲ್ಸ್ ಮತ್ತು ಎಂಎಸ್ ಆಫೀಸ್, ಇಂಟರ್ ನೆಟ್, ಡಿಟಿಪಿ, ಲಘು ವಾಹನ ಹಾಗೂ ಭಾರಿ ವಾಹನ ಚಾಲನೆ ತರಬೇತಿ ನೀಡಲಾಗುತ್ತದೆ.
ಪಿಯುಸಿ ವಿದ್ಯಾರ್ಹತೆ ಹೊಂದಿರುವವರು ಅಕೌಂಟಿಂಗ್ ಮತ್ತು ಟ್ಯಾಲಿ ವಿಷಯದಲ್ಲಿ ತರಬೇತಿ ಪಡೆಯಬಹುದಾಗಿದೆ.
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಪಡಿತರ ಚೀಟಿ, ಆಧಾರ್ ಕಾರ್ಡ್, ವಿದ್ಯಾರ್ಹತೆ, ಜಾತಿ, ಆದಾಯ ಪ್ರಮಾಣ ಪತ್ರ, ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಜೂನ್ 25ರ ಒಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ನಗರಸಭಾ ಕಚೇರಿಯಲ್ಲಿ ಪಡೆಯುವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಲ್ಮ್ ಅಭಿಯಾನ ಯೋಜನೆಯಡಿ ಸಾಲ, ಸಹಾಯಧನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 13:- ಕೊಳ್ಳೇಗಾಲ ನಗರಸಭೆಯು ನಲ್ಮ್ ಅಭಿಯಾನ ಯೋಜನೆಯಡಿ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ವೈಯಕ್ತಿಕ ಹಾಗೂ ಗುಂಪು ಉದ್ಯಮ ಶೀಲತೆ ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಅರ್ಜಿಗಳನ್ನು ಕಾರ್ಯಪಡೆ ಸಮಿತಿಯಲ್ಲಿಟ್ಟು ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ. ಸದರಿ ಯೋಜನೆಯಲ್ಲಿ ರಚಿಸಿರುವ ಮಹಿಳಾ ಸ್ವಸಹಾಯ ಸಂಘಗಳು ಗುಂಪು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಜೂನ್ 25 ಕಡೆಯ ದಿನವಾಗಿದೆ. ವಿವರಗಳಿಗೆ ನಗರಸಭಾ ಕಚೇರಿ ಸಂಪರ್ಕಿಸುವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ರಾಷ್ಟ್ರೀಯ ಅಲ್ಪಸಂಖ್ಯಾತರ ವಿವಿದೋದ್ದೇಶ ಸಹಕಾರ ಸಂಘ ನೋಂದಣಿ ರದ್ದು ಮಾಡಲು ತೀರ್ಮಾನ : ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಚಾಮರಾಜನಗರ, ಜೂ. 13 - ನಗರದ ರಾಷ್ಟ್ರೀಯ ಅಲ್ಪಸಂಖ್ಯಾತರ ವಿವಿದೋದ್ದೇಶ ಸಹಕಾರ ಸಂಘವು ಬೈಲಾ ಪ್ರಕಾರ ಕಾರ್ಯನಿರ್ವಹಿಸದೇ ಇರುವ ಹಿನ್ನೆಲೆಯಲ್ಲಿ ಈ ಸಹಕಾರ ಸಂಘದ ನೋಂದಣಿ ರದ್ದುಗೊಳಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ.
ಸಹಕಾರ ಸಂಘ ಕಾರ್ಯಚಟುವಟಿಕೆ ಮುನ್ನಡೆಸಿಕೊಂಡು ಹೋಗಲು ಆಸಕ್ತಿ ಇದ್ದಲ್ಲಿ ಹಾಗೂ ನೋಂದಣಿ ರದ್ದು ಮಾಡುವ ಕುರಿತು ಆಕ್ಷೇಪಣೆ ಇದ್ದಲ್ಲಿ 20 ದಿನಗಳೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಚಾಮರಾಜನಗರದ ಉಪವಿಭಾಗದ ಸಹಕಾರ ಸಂಘಗಳ ನಿಬಂಧಕರ ಕಚೇರಿಗೆ ಮಾಹಿತಿ ಸಲ್ಲಿಸಬಹುದು. ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆ, ಅಹವಾಲು ಸಲ್ಲಿಕೆಯಾಗದಿದ್ದಲ್ಲಿ ಸಂಘದ ನೋಂದಣಿ ರದ್ದು ಮಾಡಲು ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಿದ್ಯಾರ್ಥಿನಿಲಯ, ಆಶ್ರಮಶಾಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸೂಚನೆ
ಚಾಮರಾಜನಗರ, ಜೂ. 13 - ಜಿಲ್ಲೆಯಲ್ಲಿರುವ ವಿದ್ಯಾರ್ಥಿನಿಲಯ, ಆಶ್ರಮ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ಕ್ರಮವಹಿಸುವಂತೆ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಅವರು ಸೂಚನೆ ನೀಡಿದ್ದಾರೆ.
ಗುಂಡ್ಲುಪೇಟೆ ತಾಲೂಕು ಬೇಗೂರು ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಇಂದು ಭೇಟಿ ನೀಡಿದ ಅವರು ಅಧಿಕಾರಿಗಳಿಗೆ ವಿದ್ಯಾರ್ಥಿನಿಲಯ, ಆಶ್ರಮಶಾಲೆಗಳಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು.
ವಿದ್ಯಾರ್ಥಿನಿಲಯ, ಆಶ್ರಮ ಶಾಲೆಗಳಲ್ಲಿ ಇರುವ ಮಂಜೂರಾತಿ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಬೇಕಿದೆ. ಕಳೆದ 5 ವರ್ಷಗಳಲ್ಲಿ ವಿದ್ಯಾರ್ಥಿನಿಲಯ, ಆಶ್ರಮ ಶಾಲೆಗಳಲ್ಲಿ ಬಂದಿರುವ ಫಲಿತಾಂಶವನ್ನು ಅಧ್ಯಯನ ಮಾಡಿ ಗುಣಮಟ್ಟದ ಶಿಕ್ಷಣ ನೀಡುವ ಸಂಬಂಧ ಯೋಜನೆ ರೂಪಿಸಬೇಕೆಂದು ಉಮಾ ಮಹದೇವನ್ ಅವರು ತಿಳಿಸಿದರು.
ಆಶ್ರಮ ಶಾಲೆ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣಬೇಕು. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು.  ವಿದ್ಯಾರ್ಥಿನಿಲಯಗಳಲ್ಲಿ ಸಮಿತಿಗಳನ್ನು ರಚಿಸಿ ಈ ಕುರಿತ ಮಾಹಿತಿಯನ್ನು ಪ್ರಕಟಣಾ ಫಲಕದಲ್ಲಿ ಪ್ರದರ್ಶಿಸಬೇಕು. ಯಾವುದೇ ವಿದ್ಯಾರ್ಥಿಗೆ ನೋವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗಕ್ಕೆ ಮಹತ್ವ ನೀಡುವುದರ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿನಿಲಯ, ಆಶ್ರಮಶಾಲೆ ವಿದ್ಯಾರ್ಥಿಗಳಿಗಾಗಿಯೇ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ದಿನಾಚರಣೆ ಹಮ್ಮಿಕೊಳ್ಳಬೇಕು. ಈ ಸಂದರ್ಭದಲ್ಲಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಯುವಜನ ಸೇವಾ ಇಲಾಖೆಯಿಂದ ಸಂಗೀತ ಉಪಕರಣಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಪ್ರಧಾನ ಕಾರ್ಯದರ್ಶಿಯವರು ತಿಳಿಸಿದರು.
ವಿದ್ಯಾರ್ಥಿನಿಲಯಗಳಲ್ಲಿ ನೀಡಲಾಗುತ್ತಿರುವ ಊಟ ಉಪಹಾರಗಳ ಕುರಿತು ಮಾಹಿತಿ ಪಡೆದ ಪ್ರಧಾನ ಕಾರ್ಯದರ್ಶಿಯವರು ಸಂಜೆಯ ವೇಳೆ ಲಘು ಉಪಾಹಾರವನ್ನು ಕಡ್ಡಾಯವಾಗಿ ನೀಡುವಂತೆ ನಿರ್ದೇಶನ ನೀಡಿದರು, ಅಲ್ಲದೆ ವಿದ್ಯಾರ್ಥಿನಿಲಯಗಳಲ್ಲಿ ಗ್ರಂಥಾಲಯ ತೆರೆಯುವಂತೆಯೂ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಅವರು ಸಮಾಲೋಚನೆ ನಡೆಸಿದರು. ಪರಿಸರ ಸಂರಕ್ಷಣೆ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಅವರು ವಸತಿ ಶಾಲೆ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಮುಖ್ಯ ಯೋಜನಾಧಿಕಾರಿ ಮಾದೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜೇಶ್ ಜಿ. ಗೌಡ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸರಸ್ವತಿ, ಇತರೆ ಅಧಿಕಾರಿಗಳು ಹಾಜರಿದ್ದರು.


ವಾಣಿಜ್ಯ ಪರೀಕ್ಷೆ : ನಿಷೇಧಾಜ್ಞೆ
  ಚಾಮರಾಜನಗರ, ಜೂ. 13 - ನಗರದ ಆದರ್ಶ ವಿದ್ಯಾಲಯದಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ವಾಣಿಜ್ಯ ಪರೀಕ್ಷೆ ನಡೆಯುತ್ತಿರುವ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷೆಗಳು ಜೂನ್ 13ರಿಂದ ಆರಂಭವಾಗಿದ್ದು, ಜೂನ್ 24ರವರೆಗೆ ನಡೆಯಲಿವೆ. ಪರೀಕ್ಷಾ ಕಾರ್ಯವು ನ್ಯಾಯೋಚಿತವಾಗಿ ನಡೆಯುವಂತೆ ನೊಡಿಕೊಳ್ಳುವ ಉದ್ದೇಶದಿಂದ ಜೂನ್ 13ರಿಂದ 24ರವರೆಗೆ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಪರೀಕ್ಷಾ ಕೇಂದ್ರ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.
ಅಲ್ಲದೆ, ಪರೀಕ್ಷಾಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಸದರಿ ದಿನಗಳಂದು ಬೆಳಿಗ್ಗೆ 9ರಿಂದ ಸಂಜೆ 5.30ರವರೆಗೆ ಮುಚ್ಚುವಂತೆಯೂ ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿಸಿರುವ ಸಿಬ್ಬಂದಿ ವರ್ಗದವರಿಗೆ ನಿಷೇಧಾಜ್ಞೆ ಆದೇಶವು ಅನ್ವಯವಾಗುವುದಿಲ್ಲವೆಂದು ತಿಳಿಸಲಾಗಿದೆ.  




Saturday, 11 June 2016

12-06-2016 ಚಾಮರಾಜನಗರ ಸುದ್ದಿಗಳು

ಚಾಮರಾಜನಗರ: ಜಿಲ್ಲೆಯ ಯಳಂದೂರಿನ ಸ್ಯಾನ್ ಐಟಿ ಸಲ್ಯೂಸನ್ಸ್ ಪ್ರೈ.ಲಿ. ವತಿಯಿಂದ ಕೌಶಲ್ಯ ಅಬಿವೃದ್ದಿ ಮತ್ತು ಸ್ಥಳ ನಿಯುಕ್ತಿ ಯೋಜನೆಯಡಿ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ನಡೆಯಿತು.
ಯಳಂದೂರು ಪಟ್ಟಣ ಪಂಚಾಯ್ತಿ ವತಿಯಿಂದ ನಡೆದ ಸಲ್ಮ್ ಯೋಜನೆಯ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮವನ್ನು ಪಟ್ಟಣ ಪಂಚಾಯ್ತಿ ಅದ್ಯಕ್ಷರಾದ ಬಿ. ರವಿ ಉದ್ಘಾಟಿಸಿದರು.
ವಿದ್ಯಾರ್ಥಿಗಳು ಇಂದು ತಮ್ಮ ವಿದ್ಯಾಭ್ಯಾಸದ ಜೊತೆಗೆ ವಿವಿದ ಕೌಶಲ್ಯ ತರಬೇತಿಗಳನ್ನು ಪಡೆದು ಜೀವನದ ಬದುಕು ರೂಪಿಸಿಕೊಳ್ಳುವಲ್ಲಿ ಇಂತಹ ಕಂಪ್ಯೂಟರ್ ತರಬೇತಿ ಕಾರ್ಯಕ್ರಮಗಳು ಅನುಕೂಲವಾಗಲಿದೆ ಎಂದರು.
ಪಟ್ಟಣ ಪಂಚಾಯ್ತಿ ಸದಸ್ಯರಾದ ಉಮಾಶಂಕರ್ ಅವರು ಮಾತನಾಡಿ ಇಂದಿನ ಆದುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಶಿಕ್ಷಣ ಅಗತ್ಯವಾಗಿದೆ.  ವೈಜ್ಞಾನಿಕವಾಗಿ ಮುಂದುವರೆದಂತೆ ವ್ಯಕ್ತಿಯೂ ಮುಂದುವರೆಯಲು ಸಾದ್ಯವಾಗಿದೆ ಎಂದರು.
ಪಂಚಾಯ್ತಿಯ ಸಂಘಟನಾ ಅಧಿಕಾರಿ ಪರಶಿವಮೂರ್ತಿ ಮಾತನಾಡಿ ತರಬೇತಿ ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಲು ಬ್ಯಾಂಕ್‍ಗಳು ಕೂಡ ಇಲಾಖೆ ಮುಖಾಂತರ ಸಾಲ ಸೌಲಭ್ಯ ನೀಡಲಿದೆ ಆದ್ದರಿಂದ ಸದುಪಯೋಗಪಡಿಸಿಕೊಂಡು ಸದೃಡವಾಗಿ ಮುಂದೆ ಬನ್ನಿ ಎಂದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ಸ್ಯಾನ್ ಐಟಿ ಸಲ್ಯೂಸನ್ಸ್ ಪ್ರೈ.ಲಿ. ನೂಡಲ್ ಅದಿಕಾರಿ ಬಿಳಿಗಿರಿರಂಗ ಮಾತನಾಡಿ ಕೇವಲ ವಿದ್ಯಾರ್ಥಿಗಳು ಉಚಿತ ತರಬೇತಿ ಎಂದು ಇಂತಹ ಯೋಜನೆಗಳನ್ನು ನಿಲ್ರ್ಯಕ್ಷಿಸದೇ, ತರಬೇತಿ ಪಡೆದು ಜೀವನದ ದಿಕ್ಕನ್ನು ಬದಲಿಸಿಕೊಳ್ಳಲು ನೀವೇ ಸಾರ್ಥಕರಾಗಿರುತ್ತೀರಿ ಎಂದರು.


Friday, 10 June 2016

07-06-2016 ರಿಂದ 10-06-2016 ರವರೆಗಿನ ಚಾಮರಾಜನಗರ ಪ್ರಮುಖ ಸುದ್ದಿಗಳು ( ವಾರ್ತಾ ಇಲಾಖೆ ಸುದ್ದಿಗಳಿದು)

ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ : ಜಿಲ್ಲೆಯಲ್ಲಿ 11 ಮತಗಟ್ಟೆ ಸ್ಥಾಪನೆ
ಚಾಮರಾಜನಗರ, ಜೂ. 07:- ರಾಜ್ಯ ವಿಧಾನ ಪರಿಷತ್ತಿಗೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಜೂನ್ 9ರಂದು ನಡೆಯಲಿರುವ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 11 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿ 2, ಚಾಮರಾಜನಗರ ತಾಲೂಕು ಕಚೇರಿಯಲ್ಲಿ 3, ಯಳಂದೂರು ತಾಲೂಕು ಕಚೇರಿಯಲ್ಲಿ 1, ಕೊಳ್ಳೇಗಾಲ ತಾಲೂಕು ಕಚೇರಿಯಲ್ಲಿ 3 ಮತ್ತು ಹನೂರು ಪಟ್ಟಣದ ವಿಶೇಷ ತಹಸೀಲ್ದಾರ್ ಕಚೇರಿಯಲ್ಲಿ 1 ಹಾಗೂ ರಾಜಸ್ವ ನಿರೀಕ್ಷಕರ ಕಚೇರಿಯಲ್ಲಿ 1 ಮತಗಟ್ಟೆ ತೆರೆಯಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 8832 ಮತದಾರರಿದ್ದಾರೆ. ಇವರಲ್ಲಿ 6768 ಪುರುಷರು, 2064 ಮಹಿಳಾ ಮತದಾರರಿದ್ದಾರೆ. ಜೂನ್ 8ರಂದು ನಗರದ ಜಿಲ್ಲಾಡಳಿತ ಭವನದಲ್ಲಿ ಮಸ್ಟರಿಂಗ್ ಕಾರ್ಯ ನಡೆಯಲಿದೆ.
ಜೂನ್ 9ರಂದು ಮತಗಟ್ಟೆಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮತಗಟ್ಟೆ ಅಧಿಕಾರಿಗಳು ನೀಡುವ ವೈಲೆಟ್ ಸ್ಕೆಚ್ ಪೆನ್‍ನಲ್ಲಿ ಮಾತ್ರವೇ ಪ್ರಾಶಸ್ತ್ಯ ಮತವನ್ನು ನೀಡಲು ಸೂಚಿಸುವಂತೆ ತಿಳಿಸಲಾಗಿದೆ. ಮತದಾರರಿಗೆ ಎಡಗೈ ಮಧ್ಯದ ಬೆರಳಿಗೆ ಶಾಯಿ ಹಚ್ಚಲಾಗುತ್ತದೆ. ಮತ ಎಣಿಕೆಯು ಜೂನ್ 13ರಂದು ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ.
ಚುನಾವಣಾ ಗುರುತಿನ ಚೀಟಿ (ಎಪಿಕ್ ಕಾರ್ಡ್) ಹೊಂದಿಲ್ಲದಿರುವವರು ಗುರುತಿಗಾಗಿ ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ, ರಾಜ್ಯ, ಸಾರ್ವಜನಿಕ ವಲಯ, ಕಂಪನಿಗಳು ಅವರ ನೌಕರರಿಗೆ ನೀಡಿರುವ ಸೇವಾ ಗುರುತಿನ ಪತ್ರ, ಬ್ಯಾಂಕ್, ಅಂಚೆ ಕಚೇರಿ ಪಾಸ್ ಬುಕ್, ಆದಾಯ ತೆರಿಗೆ ಗುರುತಿನ ಪತ್ರ (ಪಾನ್ ಕಾರ್ಡು), ಎನ್‍ಪಿಆರ್ ಅಡಿ ಆರ್‍ಜಿಐ ನೀಡಿರುವ ಸ್ಮಾರ್ಟ್ ಕಾರ್ಡ್, ಆರೋಗ್ಯ ವಿಮೆ ಯೋಜನೆ ಸ್ಮಾರ್ಟ್ ಕಾರ್ಡ್, ಪಿಂಚಣಿ ದಾಖಲೆ, ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ, ಶಸ್ತ್ರಾಸ್ತ್ರ ಪರವಾನಗಿ, ವಿಕಲಚೇತನರ ಪ್ರಮಾಣ ಪತ್ರ, ಮಾಜಿ ಸೈನಿಕರ ಗುರುತಿನ ಚೀಟಿಯಂತಹ ದಾಖಲೆಗಳನ್ನು ಹಾಜರುಪಡಿಸಬಹುದು.

ಚಾ.ನಗರ ತಾಲೂಕು : ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 07:- ಚಾಮರಾಜನಗರ ತಾಲೂಕಿನ ವಿವಿದೆಡೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಿರ್ವಹಣೆಯಾಗುತ್ತಿರುವ ಮೆಟ್ರಿಕ್ ಪೂರ್ವ ವಿವಿಧ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
2016-17ನೇ ಸಾಲಿನಲ್ಲಿ 5 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪ್ರವರ್ಗ 1, 2ಎ, 2ಬಿ, 3ಎ, 3ಬಿ ಹಾಗೂ ಪರಿಶಿಷ್ಟ ಜಾತಿ ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಚಾಮರಾಜನಗರ ಪಟ್ಟಣದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ, ಬಾಲಕರ ವಿದ್ಯಾರ್ಥಿನಿಲಯ, ಶ್ರೀ ಮುರುಘರಾಜೇಂದ್ರ ಅನುದಾನಿತ ಖಾಸಗಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಜೆಎಸ್‍ಎಸ್ ಅನುದಾನಿತ ಅನಾಥಾಲಯ, ವೆಂಕಟಯ್ಯನ ಛತ್ರ, ಅರಕಲವಾಡಿ, ಕಾಗಲವಾಡಿಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅವಕಾಶವಿದೆ.
ವಿದ್ಯಾರ್ಥಿಗಳಿಗೆ ಉಚಿತ ಊಟವಸತಿ, ಸಮವಸ್ತ್ರ, ಪಠ್ಯಪುಸ್ತಕ ಇನ್ನಿತರ ಸೌಲಭ್ಯ ಒದಗಿಸಲಾಗುತ್ತದೆ. ಅರ್ಜಿಗಳನ್ನು ಆಯಾ ನಿಲಯದ ಮೇಲ್ವಿಚಾರಕರು ಅಥವಾ ನಗರದ ಸತ್ಯಮಂಗಲ ರಸ್ತೆಯ ಡಿ. ದೇವರಾಜ ಅರಸು ಭವನದಲ್ಲಿರುವ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಕಚೇರಿಯಿಂದ ಅರ್ಜಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 30ರೊಳಗೆ ಸಲ್ಲಿಸಬೇಕು. ವಿವರಗಳಿಗೆ ದೂರವಾಣಿ ಸಂಖ್ಯೆ 08226-222069 ಸಂಪರ್ಕಿಸಬಹುದು.



ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 07:- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2015-16ನೇ ಸಾಲಿನಲ್ಲಿ ಸಾಂಸ್ಕøತಿಕ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯಚಟುವಟಿಕೆ ಮಾಡಿರುವ ಯುವ ಸಂಘ ಹಾಗೂ ವ್ಯಕ್ತಿಗಳಿಗೆ ನೀಡುವ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
ಪರಸರ ರಕ್ಷಣೆ, ಗ್ರಾಮ ನೈರ್ಮಲೀಕರಣ, ಶ್ರಮದಾನ, ಸಾಮೂಹಿಕ ವಿವಾಹ, ಜಾನಪದ ಕಲೆ, ವ್ಯಕ್ತಿತ್ವ ವಿಕಸನ, ಆರೋಗ್ಯ ಕಾರ್ಯಕ್ರಮ, ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ಕಾನೂನು ಅರಿವು, ಕ್ರೀಡಾ ತರಬೇತಿ, ಮನರಂಜನೆ, ಆಟದ ಬಯಲುಗಳ ಅಭಿವ್ಥದ್ಧಿ, ವಾಚನಾಲಯ, ಸಾಮಾಜಿಕ ಪಿಡುಗುಗಳ ಬಗ್ಗೆ ತಿಳುವಳಿಕೆ, ಯುವ ಮುಂದಾಳತ್ವ ತರಬೇತಿ, ಆರೋಗ್ಯ ಜಾಗೃತಿ, ಸ್ವಯಂ ಉದ್ಯೋಗ ಕುರಿತ ತರಬೇತಿ, ಸಾರ್ವಜನಿಕ ಸ್ವತ್ತುಗಳ ರಕ್ಷಣೆ, ಅರಣ್ಯೀಕರಣ, ಹೆಚ್‍ಐವಿ ಕುರಿತು ಜಾಗೃತಿಯಂತಹ ಚಟುವಟಿಕೆಯಲ್ಲಿ ತೊಡಗಿರುವವರಿಗೆ ವೈಯಕ್ತಿಕ ಪ್ರಶಸ್ತಿ ನೀಡಲಾಗುತ್ತದೆ.
ಯುವಜನ ಸಾಂಘಿಕ ಪ್ರಶಸ್ತಿಗೆ ಪರಿಸರ ಸಂರಕ್ಷಣೆ, ಅರಣ್ಯೀಕರಣ, ಗ್ರಾಮ ನೈರ್ಮಲೀಕರಣ, ಸಾರ್ವಜನಿಕ ಸ್ವತ್ತುಗಳು, ಕೊಳಚೆ ನಿರ್ಮೂಲನ, ದುರ್ಬಲರಿಗೆ ಸಹಾಯ, ಸಾಮೂಹಿಕ ಉಳಿತಾಯ, ಸಣ್ಣ ಉಳಿತಾಯಕ್ಕೆ ಪ್ರೋತ್ಸಾಹ, ಆಟದ ಬಯಲುಗಳ ಅಭಿವೃದ್ಧಿ, ಪ್ರತಿಭಾನ್ವಿತ ಕ್ರೀಡಾಪಟುಗಳ ಶೋಧನೆ, ಕ್ರೀಡಾ ತರಬೇತಿ, ಕ್ರೀಡಾ ಸ್ಪರ್ಧೆ ಆಯೋಜನೆ, ಮನರಂಜನಾ ಚಟುವಟಿಕೆ, ಸಾಧನೆ, ಜಾನಪದ ಕಲೆಗಳನ್ನು ಜನಪ್ರಿಯಗೊಳಿಸುವಿಕೆ, ಸ್ಥಳೀಯ ಮಟ್ಟದ ಸಾಂಸ್ಕøತಿಕ ಚಟುವಟಿಕೆಯಲ್ಲಿ ಸಾಧನೆ ಮಾಡಿರುವ ಸಂಘಗಳನ್ನು ಆಯ್ಕೆ ಮಾಡಲಾಗುತ್ತದೆ.
ಇಲಾಖೆಯಲ್ಲಿ ನೊಂದಾಯಿತರಾಗಿದ್ದು ದಿನಾಂಕ 1.4.2015ರಿಂದ 31.3.2016ರವರೆಗೆ ಸಾಧನೆ ಮಾಡಿರುವ 15 ರಿಂದ 35ರ ವಯೋಮಿತಿಯಲ್ಲಿರುವವರು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ  ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆದು ಜೂನ್ 29ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಸದರಿ ಕಚೇರಿ ಅಥವಾ ದೂ.ಸಂ. 08226-224932, ಮೊಬೈಲ್ 9482718278 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದÉ.
ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ : ಮತ ಚಲಾಯಿಸಲು ಅನುಮತಿ
ಚಾಮರಾಜನಗರ, ಜೂ. 08 :- ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಜೂನ್ 9ರಂದು ನಡೆಯಲಿರುವ ಮತದಾನದಲ್ಲಿ ಸರ್ಕಾರದ ಎಲ್ಲ ಕಚೇರಿ, ಶಿಕ್ಷಣ ಸಂಸ್ಥೆ, ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಖಾಸಗಿ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರರಿಗೆ ಸಂಬಂಧಿಸಿದ ಪ್ರಾಧಿಕಾರಿಗಳು ಮತ ಚಲಾಯಿಸಲು ಅನುಮತಿ ನೀಡುವಂತೆ ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಧಾರ್ ಆಧಾರಿತ ಪಡಿತರ ಕೂಪನ್ ವಿತರಣೆಗೆ ಖಾಸಗಿ ಫೋಟೋ ಬಯೋ ಕೇಂದ್ರ ತೆರೆಯಲು ಅವಕಾಶ
ಚಾಮರಾಜನಗರ, ಜೂ. 09 - ಜಿಲ್ಲೆಯಲ್ಲಿ ಖಾಸಗಿ ಫೋಟೋ ಬಯೋಕೇಂದ್ರಗಳ ಮೂಲಕ ಪಡಿತರ ಆಧಾರ್ ಆಧಾರಿತ ಕೂಪನ್‍ಗಳನ್ನು ವಿತರಿಸಲು ಅವಕಾಶ ನೀಡಲಾಗಿದ್ದು ಆಸಕ್ತಿಯುಳ್ಳವರು ಅಗತ್ಯ ದಾಖಲಾತಿಗಳೊಂದಿಗೆ ಆಹಾರ ನಾಗರಿಕ ಇಲಾಖೆಗೆ ಮನವಿ ಸಲ್ಲಿಸಬಹುದಾಗಿದೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರ ಚೀಟಿದಾರರು ಆಧಾರ್ ಆಧಾರಿತ ಕೂಪನ್‍ಗಳನ್ನು ಪಡೆಯಲು ಅವಕಾಶವಾಗುವಂತೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಟಲ್ ಜೀ ಜನಸ್ನೇಹಿ ಕೇಂದ್ರ, ತಾಲೂಕು ಕೇಂದ್ರಗಳಲ್ಲಿರುವ ಖಾಸಗಿ ಸೇವಾ ಕೇಂದ್ರಗಳೊಂದಿಗೆ ಹೆಚ್ಚುವರಿ ಕೇಂದ್ರಗಳನ್ನು ತೆರೆಯಲು ಸರ್ಕಾರ ಆದೇಶಿಸಿದೆ.
ಖಾಸಗಿ ಕೇಂದ್ರದವರು ಕೂಪನ್ ವಿತರಣೆಗೆ ಅವಶ್ಯಕವಿರುವ ಕಂಪ್ಯೂಟರ್, ಯುಪಿಎಸ್, ಲೇಸರ್ ಪ್ರಿಂಟರ್, ಇಂಟರ್ ನೆಟ್, ಬೆರಳಚ್ಚು ಬಯೋಮೆಟ್ರಿಕ್, ಐರೀಸ್ ಸ್ಕ್ಯಾನರ್ ಮತ್ತು ಬಾರ್ ಕೋಡೆಡ್ ಕೂಪನ್ ರೀಡರ್‍ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಕೂಪನ್ ಪಡೆಯಲು ಬರುವ ಪಡಿತರ ಚೀಟಿದಾರರು ಕೂರಲು ಸ್ಥಳಾವಕಾಶ ಹಾಗೂ ನೆರಳಿನ ಸೌಲಭ್ಯ ಇರಬೇಕು. ಕೇಂದ್ರಗಳಲ್ಲಿ ಕಂಪ್ಯೂಟರ್ ಮಾನಿಟರ್‍ಗಳನ್ನು ಹೆಚ್ಚುವರಿಯಾಗಿ ಹೊಂದಿದ್ದು ಅದನ್ನು ಕೂಪನ್ ಪಡೆಯಲು ಬರುವ ಕಾರ್ಡುದಾರರಿಗೂ ಪ್ರದರ್ಶಿಸಬೇಕಾಗುವುದು. ಏಕೆಂದರೆ ಖಾಸಗಿ ಕೂಪನ್ ವಿತರಣಾ ಕೇಂದ್ರದವರು ಏನನ್ನು ದಾಖಲಿಸುತ್ತಿದ್ದಾರೆ ಎಂಬುದನ್ನು ಪಡಿತರ ಚೀಟಿದಾರರು ಖಾತರಿ ಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಖಾಸಗಿ ಕೂಪನ್ ವಿತರಣಾ ಕೇಂದ್ರಗಳನ್ನು ನೋಂದಾಯಿಸುವವರು ಅವರಿಗೆ ನಿಬಂಧನೆಗಳನ್ನು ಲಿಖಿತ ಮೂಲಕ ನೀಡಿ ಅವರೊಂದಿಗೆ ಛಾಪಾ ಕಾಗದದಲ್ಲಿ ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಒಪ್ಪಂದದಲ್ಲಿ ಇಲಾಖೆಯ ನಿರ್ದೇಶನಗಳನ್ನು ಉಲ್ಲಂಘಿಸುವ ವಿತರಣಾ ಕೇಂದ್ರಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುತ್ತದೆ ಎಂಬ ಅಂಶವನ್ನು ಕಡ್ಡಾಯವಾಗಿ ನಮೂದಿಸಲಾಗುತ್ತದೆ.
ಬೆರಳಚ್ಚು ಬಯೋಮೆಟ್ರಿಕ್‍ಗೆ ನಿಗದಿ ಮಾಡಲಾದ ಸ್ಕ್ಯಾನರ್, ಲೇಸರ್ ಸ್ಕ್ಯಾನರ್ ಯಂತ್ರಗಳನ್ನು ಖರೀದಿಸಿಕೊಂಡು ಕೂಪನ್ ವಿತರಣಾ ಕಾರ್ಯ ನಿರ್ವಹಿಸಬೇಕು. ಪಡಿತರ ಚೀಟಿದಾರರಿಗೆ ಕೂಪನ್ ಸೃಜಿಸಲು ಖಾಸಗಿ ಕೂಪನ್ ವಿತರಣಾ ಕೇಂದ್ರಗಳಿಗೆ ಪ್ರತಿ ಕೂಪನ್‍ಗೆ 3 ರೂ. ದರ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಸಂಗ್ರಹಿಸಲಾದ ಕೂಪನ್ ಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಲು ಪ್ರತಿ ಕೂಪನ್‍ಗೆ 0.20 ರೂ.ಗಳನ್ನು ನಿಗದಿ ಮಾಡಲಾಗಿದೆ. ಈ ಮೊತ್ತವನ್ನು ಖಾಸಗಿ ಕೂಪನ್ ವಿತರಣಾ ಕೇಂದ್ರಗಳ ಬ್ಯಾಂಕ್ ಖಾತೆಗೆ ತಿಂಗಳ ಕೊನೆಯಲ್ಲಿ ಇಲಾಖೆಯಿಂದ ಜಮೆ ಮಾಡಲಾಗುವುದರಿಂದ ಪಡಿತರ ಚೀಟಿ ಸೃಜಿಸಲು ಅಥವಾ ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಲು ಯಾವುದೇ ಶುಲ್ಕವನ್ನು ಖಾಸಗಿ ಕೇಂದ್ರದವರು ಅರ್ಜಿದಾರರಿಂದ ಪಡೆಯುವಂತಿಲ್ಲ.
ಈ ಎಲ್ಲಾ ನಿಬಂಧನೆಗಳಿಗೆ ಒಳಪಟ್ಟು ಖಾಸಗಿ ಬಯೋ ಕೂಪನ್ ವಿತರಣಾ ಕೇಂದ್ರವನ್ನು ತೆರೆಯಲು ಆಸಕ್ತಿಯುಳ್ಳವರು ನಗರದ ಜಿಲ್ಲಾಡಳಿತ ಭವನದಲ್ಲಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಜೂನ್ 14ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಮನವಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ. 19ರಂದು ಭೂಮಾಪಕರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ
ಚಾಮರಾಜನಗರ, ಜೂ. 09 :- ಪೋಡಿ ಮುಕ್ತ ಅಭಿಯಾನ ಯೋಜನೆ ಅನುಷ್ಠಾನಕ್ಕಾಗಿ ಅರ್ಹ ಅಭ್ಯರ್ಥಿಗಳಿಗೆ ಪರವಾನಗಿ ನೀಡಿ ಭೂಮಾಪಕರಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದ್ದು ಇದರಂತೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಜೂನ್ 19ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ.
ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ವೆಬ್ ಸೈಟ್ bhoomoರಿiಟಿi.ಞಚಿಡಿಟಿಚಿಣಚಿಞಚಿ.gov.iಟಿ/ಟsಡಿeಛಿಡಿuiಣmeಟಿಣ ಇಂದ ಪಡೆದುಕೊಳ್ಳಬಹುದೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜೂ. 12ರಂದು ನಗರದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
ಚಾಮರಾಜನಗರ, ಜೂ. 09 - ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಇತರೆ ಇಲಾಖೆ ಸೇವಾ ಸಂಘಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆಯನ್ನು ಜೂನ್ 12ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಾಲಯ ಬಳಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಡಿ. ರಾಘವೇಂದ್ರ ಅವರು ಜಾಥಾಗೆ ಚಾಲನೆ ನೀಡುವರು.
ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಉದ್ಘಾಟಿಸುವರು. ಜಿಲ್ಲಾಧಿಕಾರಿ ಬಿ.ರಾಮು ಅವರು ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಸಿ. ಶಿವಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಮಹದೇವು, ವಕೀಲರ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ, ಕಾರ್ಯದರ್ಶಿ ಚಿನ್ನಸ್ವಾಮಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಟಿ.ಜೆ. ಸುರೇಶ್, ಆದಿವಾಸಿ ಮತ್ತು ಗ್ರಾಮೀಣಾಭಿವೃದ್ಧಿ ಸಂಘದ ನಿರ್ದೇಶಕರಾದ ಬಿ.ಎಸ್. ಬಸವರಾಜು, ಮಕ್ಕಳ ಸಹಾಯವಾಣಿ ಸಂಯೋಜಕರಾದ ಅರುಣ್ ರಾಯ್, ಜಿಲ್ಲಾ ದ್ವಿಚಕ್ರ ವಾಹನ ದುರಸ್ತಿಗಾರರ ಸಂಘದ ಅಧ್ಯಕ್ಷರಾದ ಮುಜಾಹಿದ್ ಉಲ್ಲಾಖಾನ್, ಡಾ. ಬಿ.ಆರ್. ಅಂಬೇಡ್ಕರ್ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷರಾದ ಸಿದ್ದರಾಜು ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸುªರು

ವಿಧಾನ ಪರಿಷತ್ ಚುನಾವಣೆ : ಜಿಲ್ಲೆಯಲ್ಲಿ ಶೇ.55.23ರಷ್ಟು ಮತದಾನ
ಚಾಮರಾಜನಗರ, ಜೂ. 09 -  ಕರ್ನಾಟಕ ವಿಧಾನ ಪರಿಷತ್ತಿಗೆ ದಕ್ಷಿಣ ಪಧವೀಧರ ಕ್ಷೇತ್ರದಿಂದ ನಡೆದ ಚುನಾವಣೆಗೆ ಜಿಲ್ಲೆಯಲ್ಲಿ ಶೇ.55.23ರಷ್ಟು ಮತದಾನವಾಗಿದೆ.
ಜಿಲ್ಲೆಯಲ್ಲಿ 6768 ಪುರಷರು, ಮತ್ತು  2064 ಮಹಿಳಾ ಮತದಾರರು ಸೇರಿದಂತೆ ಒಟ್ಟು 8832 ಮತದಾರರಿದ್ದಾರೆ. ಈ ಪೈಕಿ 3868 ಪುರಷರು,  1010 ಮಹಿಳೆಯರು ಸೇರಿದಂತೆ ಒಟ್ಟು 4878 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಚಾಮರಾಜನಗರ ತಾಲ್ಲೂಕಿನಲ್ಲಿ 2241 ಪುರಷರು, ಹಾಗೂ 708 ಮಹಿಳೆಯರು ಸೇರಿದಂತೆ ಒಟ್ಟು 2949 ಮತದಾರರು ಇದ್ದಾರೆ. ಇವರಲ್ಲಿ 1205 ಪುರಷರು, 309 ಮಹಿಳೆಯರು ಸೇರಿದಂತೆ ಒಟ್ಟು 1514 ಮಂದಿ ಮತ ಚಲಾಯಿಸಿದ್ದಾರೆ. ಒಟ್ಟಾರೆ ಚಾಮರಾಜನಗರ ತಾಲ್ಲೂಕಿನಲ್ಲಿ ಶೇ 51.34ರಷ್ಟು ಮತದಾನವಾಗಿದೆ.
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 1290 ಪುರಷರು, ಹಾಗೂ 280 ಮಹಿಳೆಯರು ಸೇರಿದಂತೆ ಒಟ್ಟು 1570 ಮತದಾರರು ಇದ್ದಾರೆ. ಈ ಪೈಕಿ 785 ಪುರಷರು, 150 ಮಹಿಳೆಯರು ಸೇರಿದಂತೆ ಒಟ್ಟು 935 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಶೇ 59.55ರಷ್ಟು ಮತದಾನ ನಡೆದಿದೆ.

ಯಳಂದೂರು ತಾಲ್ಲೂಕಿನಲ್ಲಿ 647 ಪುರಷರು, ಹಾಗೂ 230 ಮಹಿಳೆಯರು ಸೇರಿದಂತೆ ಒಟ್ಟು 877ಮತದಾರರು ಇದ್ದಾರೆ. ಈ ಪೈಕಿ 436 ಪುರಷರು, 136 ಮಹಿಳೆಯರು ಸೇರಿದಂತೆ ಒಟ್ಟು 572 ಮಂದಿ ಮತ ಚಲಾಯಿಸಿದ್ದಾರೆ. ಒಟ್ಟಾರೆ ಯಳಂದೂರು ತಾಲ್ಲೂಕಿನಲ್ಲಿ ಶೇ 65.22ರಷ್ಟು ಮತದಾನವಾಗಿದೆ.

ಕೊಳ್ಳೇಗಾಲ ತಾಲ್ಲೂಕಿನಲ್ಲಿ 2590 ಪುರಷರು, ಹಾಗೂ 846 ಮಹಿಳೆಯರು ಸೇರಿದಂತೆ ಒಟ್ಟು 3436 ಮತದಾರರು ಇದ್ದಾರೆ. ಇವರಲ್ಲಿ 1442 ಪುರಷರು, 415 ಮಹಿಳೆಯರು ಸೇರಿದಂತೆ ಒಟ್ಟು 1857 ಮಂದಿ ಮತ ಚಲಾಯಿಸಿದ್ದಾರೆ. ಒಟ್ಟಾರೆ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಶೇ 54.05ರಷ್ಟು ಮತದಾನವಾಗಿದೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 65.22 ರಷ್ಟು ಯಳಂದೂರು ತಾಲ್ಲೂಕಿನಲ್ಲಿ ಮತದಾನ ನಡೆದಿದೆ. ಚಾಮರಾಜನಗರ ತಾಲ್ಲೂಕಿನ 59ನೇ ಮತಗಟ್ಟೆಯಲ್ಲಿ ಅತಿ ಕಡಿಮೆ ಅಂದರೆ ಶೇ.43.37ರಷ್ಟು ಮತದಾನವಾಗಿದೆ.

ಜೂ. 11ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಜೂ. 10- ನಗರದಲ್ಲಿ ಜೂನ್ 11ರಂದು ವಿದ್ಯುತ್ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ಪಚ್ಚಪ್ಪ ವೃತ್ತ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಸಂತೆಮರಹಳ್ಳಿ ವೃತ್ತ, ರಂಗನಾಥ ಕಲ್ಯಾಣ ಮಂಟಪ, ಚಿಕ್ಕ ಅಂಗಡಿ ಬೀದಿ, ದೊಡ್ಡ ಅಂಗಡಿ ಬೀದಿ, ಭ್ರಮರಾಂಭ ಬಡಾವಣೆ, ಶಂಕರಪುರ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ. 14ರಂದು ಮಲೇರಿಯಾ ವಿರೋಧಿ ಮಾಸಾಚರಣೆ ಜಾಥಾ
ಚಾಮರಾಜನಗರ, ಜೂ. 10 - ಆರೋಗ್ಯ ಇಲಾಖೆ ವತಿಯಿಂದ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಜೂನ್ 14ರಂದು ಬೆಳಿಗ್ಗೆ 10 ಗಂಟೆಗೆ ನಗರದ ಚಾಮರಾಜೇಶ್ವರ ದೇವಾಲಯ ಆವರಣದಲ್ಲಿ ಜಾಥಾ ಹೊರಡಲಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ, ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 10:- ಸಾರ್ವಜನಿಕ ಶಿಕ್ಷಣ ಇಲಾಖೆಯು 2016-17ನೇ ಸಾಲಿಗೆ ಜಿಲ್ಲೆಯಿಂದ ಉತ್ತಮ ಶಿಕ್ಷಕರನ್ನು ರಾಜ್ಯ, ರಾಷ್ಟ್ರ ಪ್ರಶಸ್ತಿಗೆ ಪರಿಗಣಿಸಲು ಅರ್ಜಿ ಆಹ್ವಾನಿಸಿದೆ.
10 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರು ರಾಜ್ಯ ಪ್ರಶಸ್ತಿಗೆ ಹಾಗೂ 15 ವರ್ಷ ಸೇವೆ ಪೂರೈಸಿರುವ ಶಿಕ್ಷಕರು ಮತ್ತು ಕನಿಷ್ಟ 20 ವರ್ಷ ಸೇವೆ ಸಲ್ಲಿಸಿರುವ ಮುಖ್ಯೋಪಾಧ್ಯಾಯರನ್ನು ರಾಷ್ಟ್ರ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಪ್ರಸ್ತಾವನೆಯು 50 ಪುಟಗಳನ್ನು ಮೀರಿರಬಾರದು. ಶೈಕ್ಷಣಿಕ ಸಾಧನೆಗಳನ್ನು ಬಿಂಬಿಸುವಂತಿರಬೇಕು.
ಸಮೂಹ ಸಂಪನ್ಮೂಲ ವ್ಯಕ್ತಿಗಳು ಅರ್ಜಿ ಪರಿಶೀಲಿಸಿ ಅರ್ಹ ಶಿಕ್ಷಕರ ಪಟ್ಟಿಯನ್ನು ಜೂನ್ 16ರ ಒಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಚ್ಚಾರಿತ್ಯವನ್ನು ಹೊಂದಿರುವ ಯಾವುದೇ ದೂರು ವಿಚಾರಣೆ, ನ್ಯಾಯಾಲಯದ ಪ್ರಕರಣಗಳು ಇಲ್ಲದಿರುವುದನ್ನು ದೃಢಪಡಿಸಿಕೊಂಡು ಪರಿಶೀಲಿಸಿ ಮಾನದಂಡ ಮಾಗೂ ಮಾರ್ಗಸೂಚಿ ಪ್ರಕಾರ ಡಯಟ್ ಪ್ರಾಶುಪಾಲರಿಗೆ ಜೂನ್ 21ರೊಳಗೆ ವರದಿ ಸಲ್ಲಿಸಬೇಕು. ಡಯಟ್ ಪ್ರಾಂಶುಪಾಲರು ಪ್ರಸ್ತಾವನೆಗಳನ್ನು ಕ್ಷೇತ್ರ ಭೇಟಿ ಮೂಲಕ ಖುದ್ದು  ಪರಿಶೀಲಿಸಿ ಅರ್ಹ ತಲಾ 2 ಪ್ರಸ್ತಾವನೆಗಳನ್ನು ಜೂನ್ 28ರೊಳಗೆ ಜಿಲ್ಲಾ ಆಯ್ಕೆ ಸಮಿತಿಗೆ ಸಲ್ಲಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪಿಯು ಪರೀಕ್ಷಾ ಶುಲ್ಕ ಪಾವತಿಗೆ ಅವಧಿ ವಿಸ್ತರಣೆÀ
ಚಾಮರಾಜನಗರ, ಜೂ. 10 - ಜುಲೈ ತಿಂಗಳಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ದಂಡಶುಲ್ಕವಿಲ್ಲದೆ ಸಂದಾಯ ಮಾಡಲು ಜೂನ್ 11ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಹನ ಚಾಲನಾ ತರಬೇತಿಗೆ ಪಜಾ, ಪಪಂ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 10 - ನಗರದಲ್ಲಿರುವ ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ವಾಹನ ಚಾಲನಾ ತರಬೇತಿ ನೀಡಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿದ್ದು ವಾಹನ ಚಾಲನೆಗೆ ಅಗತ್ಯವಿರುವ ದೈಹಿಕ ಅರ್ಹತೆ ಹೊಂದಿರಬೇಕು. ಲಘು ಮೋಟಾರ್ ವಾಹನ ಚಾಲನೆ ತರಬೇತಿಗೆ ಕನಿಷ್ಟ 18 ವರ್ಷ ವಯಸ್ಸಾಗಿರಬೇಕು. ಭಾರಿ ವಾಹನ ತರಬೇತಿಗೆ ಕನಿಷ್ಟ 20 ವರ್ಷ ವಯಸ್ಸಾಗಿದ್ದು ಲಘು ಮೋಟಾರು ವಾಹನ ಪರವಾನಗಿ ಪಡೆದು 1 ವರ್ಷ ಪೂರೈಸಿರಬೇಕು. ತರಬೇತಿಗೆ ತಗಲುವ ವೆಚ್ಚದಲ್ಲಿ ಶೇ. 25ರಷ್ಟನ್ನು ಅಭ್ಯರ್ಥಿಗಳು ಭರಿಸಬೇಕು.
ಅರ್ಜಿಯನ್ನು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜೂನ್ 20ರವರೆಗೂ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ವಿತರಿಸಲಾಗುತ್ತದೆ. ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಜೂನ್ 24 ಕಡೆಯ ದಿನವಾಗಿದೆ. ವಿವರಗಳಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜೂ.11, 12ರಂದು ನಗರಕ್ಕೆ ನೀರು ವ್ಯತ್ಯಯ
ಚಾಮರಾಜನಗರ, ಜೂ. 10 :- ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಟಿ. ನರಸೀಪುರದ ಪಂಪ್ ಹೌಸ್ ಹತ್ತಿರದ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು ನೀರೆತ್ತುವ ಪಂಪಿಗೆ ಸಾಕಷ್ಟು ನೀರು ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜೂನ್ 11, 12ರಂದು ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ನಾಗರಿಕರು ಹತ್ತಿರದ ಲಭ್ಯವಿರುವ ತೊಂಬೆ, ಕೈ ಪಂಪ್, ಕೊಳವೆ ಬಾವಿಗಳಿಂದ ನೀರು ಉಪಯೋಗಿಸಿಕೊಂಡು ಸಹಕರಿಸುವಂತೆ ನಗರಸಭೆ ಪೌರಾಯುಕ್ತರಾದ ಎಂ.ಜಿ. ರಮೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕ್ರೀಡಾ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 10 - ರಾಜ್ಯ ಸರ್ಕಾರದ ವತಿಯಿಂದ ಉನ್ನತ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಕೊಡಮಾಡುವ ಏಕಲವ್ಯ ಪ್ರಶಸ್ತಿ, ಹಿರಿಯ ತರಬೇತಿದಾರರು ಹಾಗೂ ಕ್ರೀಡಾಪಟುವಿಗೆ ಕೊಡುವ ಜೀವನ ಪರ್ಯಂತ ಸಾಧನೆ ಪ್ರಶಸ್ತಿ ಮತ್ತು ಗ್ರಾಮೀಣ ಕ್ರೀಡೆಗಳಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ನೀಡುವ ಕ್ರೀಡಾರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆ ವಿವರಗಳು ವೆಬ್ ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿಥಿouಣhಠಿoಡಿಣಚಿಟ.iಟಿ ನಲ್ಲಿ ಲಭ್ಯವಿದೆ. ಭರ್ತಿ ಮಾಡಿದ ಅರ್ಜಿಗಳನ್ನು ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಯುವ ಕೇಂದ್ರ, ನೃಪತುಂಗ ರಸ್ತೆ, ಬೆಂಗಳೂರು–560001 ಇವರಿಗೆ ಜೂನ್ 20ರ ಒಳಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ (ದೂ.ಸಂ. 08226-224932, ಮೊಬೈಲ್ 9611172984) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಚರ್ಚ್ ನವೀಕರಣ, ಸಮುದಾಯ ಭವನ ನಿರ್ಮಾಣ ಸೇರಿ ಇತರೆ ಕೆಲಸಗಳಿಗೆ ಸಹಾಯಧನ : ಕ್ರೈಸ್ತರ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 10 :- ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕ್ರೈಸ್ತರ ಅಭಿವೃದ್ಧಿ ಯೋಜನೆಯಡಿ ಚರ್ಚ್ ನವೀಕರಣ, ದುರಸ್ತಿ, ಆವರಣ ಗೋಡೆ, ಸ್ಮಶಾನ ಅಭಿವೃದ್ಧಿ, ಸಮುದಾಯ ಭವನದ ಕಟ್ಟಡ ನಿರ್ಮಾಣ, ಅನಾಥಾಶ್ರಮ, ವೃದ್ದಾಶ್ರಮ, ಎಚ್‍ಐವಿ, ವಿಕಲಚೇತನ ಸೇವಾಸಂಸ್ಥೆಗಳಿಗೆ ಅನುದಾನ ನೀಡಲು ಅರ್ಜಿ ಆಹ್ವಾನಿಸಿದೆ.
ಆಸಕ್ತ ಕ್ರೈಸ್ತ ಸಂಘಸಂಸ್ಥೆಗಳು ಅಂದಾಜು ನಕ್ಷೆ, ಇನ್ನಿತರ ವಿವರಗಳೊಂದಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯವರಿಗೆ ಜುಲೈ 30ರೊಳಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಯನ್ನು ಸದರಿ ಕಚೇರಿಯಿಂದ ಪಡೆಯಬಹುದು. ದೂರವಾಣಿ ಸಂಖ್ಯೆ 08226-222180 ಸಂಪರ್ಕಿಸಿ ಕೂಡ ವಿವರ ಪಡೆಯಬಹುದೆಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ಶಿವಕುಮಾರ್ ತಿಳಿಸಿದ್ದಾರೆ.






Monday, 6 June 2016

03-06-2016 ರಿಂದ 06-06-2016 ರ ವರೆಗಿನ ಚಾಮರಾಜನಗರ ಪ್ರಮುಖ ಸುದ್ದಿಗಳು








ಜೂನ್3, 2016


ಉದ್ಯೋಗ ಅವಕಾಶಕ್ಕೆ ವರದಾನವಾಗಿರುವ ಗುಂಡ್ಲುಪೇಟೆ ಜಿ.ಟಿ.ಟಿ.ಸಿ  ಕೇಂದ್ರ
ಗುಂಡ್ಲುಪೇಟೆಯ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಉದ್ಯೋಗಾವಕಾಶಕ್ಕೆ ನೆರವಾಗುವ ಅಲ್ಪಾವಧಿ ಮತ್ತು ದೀರ್ಘಾವಧಿಯ ತರಬೇತಿಗಳನ್ನು ನೀಡುತ್ತಿದ್ದು ಜಿಲ್ಲೆಯ ಯುವ ಜನರು ಇದರ ಪ್ರಯೋಜನ ಪಡೆಯಲು ಅವಕಾಶವಿದೆ.
 ಗುಂಡ್ಲುಪೇಟೆ ಪಟ್ಟಣದಲ್ಲಿ 2007 ರಲ್ಲಿ ಫ್ರಾರಂಭವಾದ ತರಬೇತಿ ಕೇಂದ್ರದಲ್ಲಿ ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್ ದೀರ್ಘಾವಧಿ ಕೋರ್ಸು ಅಧ್ಯ್ಯಯನಕ್ಕೆ ಅವಕಾಶ ನೀಡಿದ್ದು ಇದುವರೆಗೆ 150 ವಿದ್ಯಾರ್ಥಿಗಳು ತರಬೇತಿ ಪಡೆದು ರಾಷ್ಟ್ರಮಟ್ಟದ ಪ್ರತಿಷ್ಠಿತ ಕೈಗಾರಿಕೆ ಉದ್ಯಮಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ನೌಕರಿ ಅವಕಾಶ ಲಭಿಸಿದೆ.
ಟೂಲ್ ಮತ್ತು ಡೈ ಮೇಕಿಂಗ್ ಕೋರ್ಸಿಗೆ ಪ್ರತಿ ವರ್ಷ 30 ವಿದ್ಯಾರ್ಥಿಗಳಿಗೆ ಮಾತ್ರÀ ಪ್ರವೇಶಕ್ಕೆ ಅವಕಾಶವಿದೆ. ಈ ಕೋರ್ಸು ವ್ಯಾಸಂಗಮಾಡಿದ ವಿದ್ಯಾರ್ಥಿಗಳಿಗೆ ದೇಶವಿದೇಶಗಳಲ್ಲು ಹೆಚ್ಚಿನÀ ಉದ್ಯೋಗ ಅವಕಾಶ ಇರುವ ಹಿನ್ನಲೆಯಲ್ಲಿ ಸಹಜವಾಗಿ ಕೋರ್ಸು ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಇದೆ. ಜಿಲ್ಲೆಯಲ್ಲಿ ಇಂತಹ ಕೋರ್ಸು ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿರುವುದು ವರದಾನವೆಂದೆ ಭಾವಿಸಬಹುದು.
ತರಬೇತಿ ಕೇಂದ್ರದಲ್ಲಿ ಇತರೆ ಸರ್ಟಿಫೈಡ್ ಡಿಪ್ಲೊಮಾ ಕೋರ್ಸು ವ್ಯಾಸಂಗಮಾಡಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಟೂಲ್ ಮ್ಯಾನುಪ್ಯಾಕ್ಚರಿಂಗ್, ಟೂಲ್ ರೂಂ ಮೆಷಿನಿಷ್ಟ್, ಟೂಲ್ ಅಂಡ್ ಡೈ ಟೆಕ್ನಿಷಿಯನ್ ಕೋರ್ಸುಗಳಲ್ಲಿ ತರಬೇತಿ ನೀಡಲಾಗುತ್ತಿದೆ.
ತರಬೇತಿ ಕೇಂದ್ರವು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಾಯೋಜನೆಯಡಿ ವಿಶೇಷಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಟೂಲ್ ರೂಂ ಮೆಷಿನಿಷ್ಟ್, ಸಿ.ಎನ್.ಸಿ ಟೆಕ್ನಾಲಜಿಸ್ಟ್ ಕ್ಯಾಡ್/ಕ್ಯಾಮ್ ಸ್ಪೆಷಲಿಸ್ಟ್, ಟರ್ನರ್, ಮಿಲ್ಲರ್ ವಿಷಯದಲ್ಲಿ ಅಲ್ಪಾವಧಿಯ ತರಬೇತಿಯನ್ನು ನೀಡುತ್ತಿದೆ.
ಪೌರಾಡಳಿತ ನಿರ್ದೇಶನಾಲಯ ಪ್ರಾಯೋಜನೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ನಲ್ಮ್) ಯೋಜನೆಯಡಿ ಸಿ.ಎನ್.ಸಿ.ಟರ್ನಿಂಗ್, ಸಿ.ಎನ್.ಸಿ ಮಿಲ್ಲಿಂಗ್, ಕ್ಯಾಡ್/ಸಾಲಿಡ್ ವಕ್ರ್ಸ, ಟರ್ನರ್, ಮಿಲ್ಲರ್, ಗ್ರೈಂಡರ್ ವಿಷಯದಲ್ಲಿ ಅಲ್ಪಾವಧಿಯ ತರಬೇತಿಯನ್ನು ಪಟ್ಟಣ ಪಂಚಾಯಿತಿ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳಿಗೆ ಕೊಡಲಾಗುತ್ತಿದೆ.
ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಟೂಲ್ ರೂಂ ಮೆಷಿನಿಷ್ಟ್, ಸಿ.ಎನ್.ಸಿ ಟರ್ನಿಂಗ್ ಮೆಷಿನ್ ಆಪರೇಟರ್, ಸಿ.ಎನ್.ಸಿ ಮಿಲ್ಲಿಂಗ್ ಮೆಷಿನ್ ಆಪರೇಟರ್ ತರಬೇತಿಯನ್ನು ಗ್ರಾಮೀಣ ಅಭ್ಯರ್ಥಿಗಳು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ನೂತನ ಸೌಕರ್ಯ, ತಂತ್ರ ವಿಧಾನಗಳನ್ನು ಬಳಸಿಕೊಂಡು ಕೈಗಾರಿಕೆಗಳಲ್ಲಿ ಗರಿಷ್ಠ ಉತ್ಪಾದನೆಗಾಗಿ ತರಬೇತಿ ಹಾಗೂ ಆವಿಷ್ಕಾರಕ್ಕಾಗಿ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವ ಮಹತ್ತರ ಗುರಿಯೊಂದಿಗೆ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಆರಂಭವಾಗಿದೆ. ಉನ್ನತ ಗುಣಮಟ್ಟದ ತರಬೇತಿಯನ್ನು ನೀಡುತ್ತಿರುವ ಕೇಂದ್ರದ ಮುಖ್ಯ ಉದ್ದೇಶವು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಅಭ್ಯರ್ಥಿಗಳು ಆರ್ಥಿಕ ಸ್ವಾವಲಂಬನೆ ಸಾಧಿಸಲು ಬೇಕಿರುವ ತರಬೇತಿ ತಂತ್ರಜ್ಝಾನ ಕ್ರಮಗಳನ್ನು ರೂಪಿಸುವುದು ಆಗಿದೆ.
.ಗುಂಡ್ಲುಪೇಟೆ ಪಟ್ಟಣದ ಹೊಸೂರು ರಸ್ತೆಯಲ್ಲಿರುವ ದುಂದಾಸನಪುರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕೋರ್ಸುಗಳ ಪ್ರವೇಶಕ್ಕಾಗಿ ಈಗಾಗಲೇ ಅರ್ಜಿಗಳನ್ನು ವಿತರಿಸಲಾಗುತ್ತಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 7ರೊಳಗೆ ಸಲ್ಲಿಸಬೇಕಿದೆ. ಉದ್ಯೋಗಾವಕಾಶಗಳನ್ನು ಒದಗಿಸುವ ಕೋರ್ಸುಗಳ ಅಧ್ಯ್ಯಯನಕ್ಕೆ  ಅಭ್ಯರ್ಥಿಗಳು ಮುಂದೆ ಬರಬೇಕು. ಜಿಲ್ಲೆಯ ಏಕೈಕ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಯೋಜನವನ್ನು ಪೂರ್ಣಪ್ರಮಾಣದಲ್ಲಿ ಪಡೆದುಕೊಳ್ಳಬೇಕು ಎಂದು ಪ್ರಾಂಶುಪಾಲರಾದ ಗಣಪತಿ ಎಸ್. ಮೇತ್ರಿ ಮನವಿ ಮಾಡುತ್ತಾರೆ.
 ವಿವರಗಳಿಗೆ ದೂರವಾಣಿ 08229-222344, ಅಥವಾ ಮೊಬೈಲ್ 9880800692 ಸಂಪರ್ಕಿಸುವಂತೆಯು ಅವರು ಮಾಹಿತಿ ನೀಡಿದ್ದಾರೆÉ.


ಜೂನ್ 4ರಂದು ನಗರದಲ್ಲಿ ವಿಶ್ವಪರಿಸರ ದಿನಾಚರಣೆ: ವಿವಿಧ ಕಾರ್ಯಕ್ರಮ ಆಯೋಜನೆ.
ಚಾಮರಾಜನಗರ: ಜೂನ್3- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಓ.ಡಿ.ಪಿ ಸಂಸ್ಥೆ ಮತ್ತು ರಂಗವಾಹಿನಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ  ಜೂನ್4ರಂದು ನಗರದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
 ಬೆಳಿಗ್ಗೆ 10.30  ಗಂಟೆಗೆ  ನಗರದ  ಜಿಲ್ಲಾಡಳಿತ ಭವನದ ಆವರದಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್  ಪ್ರತಿಮೆ ಬಳಿ ಶಾಲಾ ವಿದ್ಯಾರ್ಥಿಗಳಿಗಾಗಿ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ದೆ ನಡೆಯಲಿದೆ. ಈ ಕಾರ್ಯಕ್ರವನ್ನು  ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಉದ್ಘಾಟಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕರಾದ ಪಿ.ಮಮತ ಬಹುಮಾನ ವಿತರಿಸುವವರು.
ಮದ್ಯಾಹ್ನ 4ಗಂಟೆಗೆ ಜಿಲಾಡಳಿತ ಭವನದ ಆವರಣದಲ್ಲಿ 100 ಸಸಿಗಳನ್ನು  ನಡೆಯುವ  ಕಾರ್ಯಕ್ರಮವಿದ್ದು  ಜಿಲ್ಲಾಧಿಕಾರಿ  ಬಿ.ರಾಮು ಇದಕ್ಕೆ ಚಾಲನೆ ನೀಡುವವರು.
ಜೂನ್5ರಂದು ಬೆಳಿಗ್ಗೆ 10ಗಂಟೆಗೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ  ಪರಿಸರ ಕುರಿತು ಬೀದಿ ನಾಟಕ್ಕೆ ಪರಿಸರ ಅಧಿಕಾರಿ ಬಿ.ಎಂ.ಪ್ರಕಾಶ್ ಚಾಲನೆ ನೀಡುವವರು. ಜೂನ್ 6ರಂದು ಬೆಳಗ್ಗೆ 9.30 ಗಂಟೆಗೆ ಚಾಮರಾಜೇಶ್ವರ ದೇವಾಲಯ ಬಳಿ ಪರಿಸರ ಜಾಥ ಕಾರ್ಯಕ್ರವನ್ನು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್.ಜೈನ್ ಉದ್ಘಾಟಿಸುವರು ಎಂದು ಪ್ರಟಣೆ ತಿಳಿಸಿದೆ.

ಜೂನ್ 16ರಂದು ಕೊತ್ತಲವಾಡಿ ಗ್ರಾಮದಲ್ಲಿ  ಅಂಚೆ ಸಂತೆ
ಚಾಮರಾಜನಗರ: ಜೂನ್3- ಅಂಚೆ ಇಲಾಖೆಯು ಗುಂಡ್ಲುಪೇಟೆ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಜೂನ್16ರಂದು ಅಂಚೆ ಸಂÀತೆ ಕಾರ್ಯಕ್ರಮವನ್ನು  ಹಮ್ಮಿಕೊಂಡಿದೆ.
ಅಂಚೆ ಸಂತೆಯಲ್ಲಿ  ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ದಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ,  ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ  ಜೀವವಿಮೆ ಮತ್ತು  ಅಂಚೆ ಜೀವವಿಮೆ ಇನ್ನಿತರ ಅಂಚೆ ಇಲಾಖೆಯ ಸಂಬಂಧ ಯೋಜನೆಗಳನ್ನು ಸ್ಥಳದಲ್ಲೇ  ಸ್ವಿಕರಿಸಲಾಗುತ್ತದೆ.

ಸುತ್ತಮುತ್ತಲ ಗ್ರಾಮಸ್ಥರು ಅಂಚೆ ಸಂತೆ ಕಾರ್ಯಕ್ರಮದ  ಸದುಪಯೋಗ ಮಾಡಿಕೊಳ್ಳುವಂತೆ ಅಂಚೆ ವಿಭಾಗದ ಅಧೀಕ್ಷರಾದ ಜಿ.ಸಿ. ಶ್ರೀನಿವಾಸ್ ಕೋರಿದ್ದಾರೆ.

ಜೂನ್3, 2016

ನರೇಗಾ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಜಿ.ಪಂ ಸಿ.ಇ.ಓ ಸೂಚನೆ
ಚಾಮರಾಜನಗರ: ಜೂನ್3- ಬಹು ಪ್ರಮುಖ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಪ್ರತಿವಾರ ಗುರಿ ನಿಗಧಿ ಮಾಡಿಕೊಂಡು ಅದರಂತೆ ಸಾಧನೆ ಮಾಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳು ನಿಗಾವಹಿಸಬೇಕು. ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಎಂ.ಐ.ಎಸ್ ಸಂಯೋಜಕರಿಂದ ಪ್ರತಿ ದಿನ ವರದಿ ಪಡೆಯಬೇಕು. ಕಡಿಮೆ ಪ್ರಗತಿ ಇರುವ ಗ್ರಾಮ ಪಂಚಾಯಿತಿಗಳಿಗೆ ಭೇಟಿನೀಡಿ ಹೆಚ್ಚು ಸಾಧನೆಯಾಗಲು ಕ್ರಮವಹಿಸೀಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಸಂಪರ್ಕದಲ್ಲಿದ್ದು, ಗಣನೀಯ ಪ್ರಗತಿಗೆ ಮುಂದಾಗಬೇಕೆಂದು ಹೆಪ್ಸಿಬಾ ರಾಣಿ ತಿಳಿಸಿದರು.
ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪಾರದರ್ಶಕವಾಗಿ ನಿರ್ವಹಿಸಬೇಕು. ಯೋಜನೆ ಸಂಬಂಧ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ಅನುಷ್ಠಾನ ಇಲಾಖೆಗಳಿಗೆ ಸುತ್ತೋಲೆ, ಮಾರ್ಗಸೂಚಿ ಹಾಗೂ ಕೈಪಿಡಿಗಳನ್ನು ವಿತರಿಸಲಾಗಿದೆ. ಈ ಪ್ರಕಾರವೇ ಕಾರ್ಯೋನ್ಮುಖರಾಗಬೇಕು. ಪ್ರತಿ ಕಾಮಗಾರಿವಾರು ಪ್ರತ್ಯೇಕ ಕಡತ ತೆರದು ದಾಖಲೆಗಳನ್ನು ಇಡಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕೆ ಗ್ರಾಮ ಪಂಚಾಯಿತಿಯ ಆಸ್ತಿವಹಿಯಲ್ಲಿ ವಿವರವನ್ನು ನಮೂದಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಪ್ರಮುಖವಾಗಿ ವೈಯಕ್ತಿಕ ಕಾಮಗಾರಿ ನಿರ್ವಹಿಸಬೇಕು. ಜಲಸರಂಕ್ಷಣೆ ಕಾಮಗಾರಿಯಾದ ಚೆಕ್‍ಡ್ಯಾಂ, ಭೂಮಿ ಸಮತಟ್ಟು, ಸಂರಕ್ಷಣೆ, ಅರಣ್ಯೀಕರಣ ಕೆಲಸಗಳಿಗೆ ಒತ್ತು ನೀಡಬೇಕು. ಕಾಮಗಾರಿ ನಡೆಯುವ ಸ್ಥಳದಲ್ಲಿ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಕಾಮಗಾರಿ ಸಾಮಗ್ರಿಗಳ ಬಗ್ಗೆ ದಾಸ್ತಾನು ವಹಿಯಲ್ಲಿ ದಾಖಲಿಸಬೇಕು ಎಂದು ಹೆಪ್ಸಿಬಾ ರಾಣಿ ತಿಳಿಸಿದರು.
ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಗ್ರಾಮಗಳಲ್ಲಿ ಜನರಿಗೆ ಅರಿವು ಮೂಡಿಸುವ ಚಟುವಟಿಕೆ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕು. ಪ್ರತಿ ಗುರುವಾರ ರೋಜ್‍ಗಾರ್ ದಿವಸವನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಯೋಜನೆ ಸಂಬಂಧ ಪ್ರಗತಿ ಪರಿಶೀಲಿಸಿ ವರದಿ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಸೂಚಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಮುನಿರಾಜಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಎಂ.ಐ.ಎಸ್ ಸಂಯೋಜಕರು, ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಜೂ. 6ರಂದು ವಿಶ್ವಪರಿಸರ ದಿನಾಚರಣೆ
ಚಾಮರಾಜನಗರ, ಜೂ. 04 - ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ವತಿಯಿಂದ ಜೂನ್ 6ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ವ್ಯಾಜ್ಯಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್. ಮಳವಳ್ಳಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸುವರು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಂ. ಭೃಂಗೇಶ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ಪಿ. ನಂದೀಶ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಡಿ. ರಾಘವೇಂದ್ರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದÉ.

ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 04 - ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿ ತರಬೇತಿಗೆ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಎಲೆಕ್ಟ್ರೀಷಿಯನ್, ಫಿಟ್ಟರ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಐಟಿಇಎಸ್‍ಎಂ, ಟರ್ನರ್, ಎಂಆರ್‍ಎಸಿ, ಮೆಕಾನಿಕ್ ಡೀಸೆಲ್, ಡ್ರೆಸ್ ಮೇಕಿಂಗ್, ಎಂಎಂವಿ ವಿಷಯಗಳಲ್ಲಿ ತರಬೇತಿ ಪಡೆಯಬಹುದಾಗಿದೆ.  
ಎಸ್‍ಎಸ್‍ಎಲ್‍ಸಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಕೆಗೆ ಜೂನ್ 6 ಕಡೆಯ ದಿನವಾಗಿದೆ. ವಿವರಗಳಿಗೆ ವೆಬ್ ಸೈಟ್ ತಿತಿತಿ.emಠಿಣಡಿg.ಞಚಿಡಿ.ಟಿiಛಿ.iಟಿ  ಮತ್ತು ತಿತಿತಿ.ಜeಣಞಚಿಡಿ.ಛಿom/ಚಿಜmissioಟಿ-2016 ನೋಡಬಹುದು.
ಹನೂರು : ಕೌಶಲ್ಯ ಅಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 04 (ಕರ್ನಾಟಕ ವಾರ್ತೆ):- ಹನೂರು ಪಟ್ಟಣ ಪಂಚಾಯಿತಿಯು ದೀನ್‍ದಯಾಳು ಅಂತ್ಯೋದಯ ಯೋಜನೆ ನಲ್ಮ್ ಅಭಿಯಾನದಡಿ ನೀಡಲಿರುವ ಸ್ವಯಂ ಉದ್ಯೋಗ ಮತ್ತು ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನಿಸಿದೆ.
ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಜೂನ್ 8ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಪಟ್ಟಣ ಪಂಚಾಯಿತಿ ಕಚೇರಿ ಸಂಪರ್ಕಿಸುವಂತೆ ಮುಖ್ಯಾಧಿಕಾರಿ ತಿಳಿಸಿದ್ದಾರÉ.

ಗುಂಡ್ಲುಪೇಟೆ : ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 04 - ಗುಂಡ್ಲುಪೇಟೆ ಪಟ್ಟಣದಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
5 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುವ ಹಿಂದುಳಿದ ಪ್ರವರ್ಗಗಳಿಗೆ ಸೇರಿದ ವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ.
ಅರ್ಜಿಗಳನ್ನು ವಿದ್ಯಾರ್ಥಿನಿಲಯ ಮೇಲ್ವಿಚಾರಕರು ಅಥವಾ ಗುಂಡ್ಲುಪೇಟೆ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಅವರಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 10 ರೊಳಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.



ಕೊಳ್ಳೇಗಾಲ : ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 04:- ಕೊಳ್ಳೇಗಾಲ ತಾಲೂಕಿನ ವಿವಿಧೆಡೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಪರಿಶಿಷ್ಟ ಜಾತಿಯ ಮೆಟ್ರಿಕ್ ಪೂರ್ವ ಬಾಲಕರ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಸಂಬಂಧಪಟ್ಟ ವಿದ್ಯಾರ್ಥಿನಿಲಯ ಅಥವಾ ಕೊಳ್ಳೇಗಾಲ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 8 ರೊಳಗೆ ಸಲ್ಲಿಸಬೇಕು. ವಿವರಗಳಿಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಗುಂಡ್ಲುಪೇಟೆ : ವಿವಿಧ ವಿದ್ಯಾರ್ಥಿನಿಲಯ, ಆಶ್ರಮಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 04 - ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಿದ್ಯಾರ್ಥಿನಿಲಯ ಹಾಗೂ ಆಶ್ರಮ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಗುಂಡ್ಲುಪೇಟೆ ಪಟ್ಟಣದ ಬಾಲಕರ ವಿದ್ಯಾರ್ಥಿನಿಲಯ, ಬಾಲಕಿಯರ ವಿದ್ಯಾರ್ಥಿನಿಲಯ, ಎಸ್‍ಟಿ ಬಾಲಕಿಯರ ವಿದ್ಯಾರ್ಥಿನಿಲಯ, ಕಬ್ಬಳ್ಳಿಯಲ್ಲಿರುವ ಬಾಲಕರ ವಿದ್ಯಾರ್ಥಿನಿಲಯ, ಬಾಲಕಿಯರ ವಿದ್ಯಾರ್ಥಿನಿಲಯ, ಬೊಮ್ಮಲಾಪುರ, ಹಂಗಳ, ಬಾಚಹಳ್ಳಿಯಲ್ಲಿರುವ ಬಾಲಕರ ವಿದ್ಯಾರ್ಥಿನಿಲಯ, ಬೇಗೂರಿನಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯ, ಬಂಡೀಪುರ, ಮದ್ದೂರಿನಲ್ಲಿರುವ ಎಸ್‍ಟಿ ಆಶ್ರಮ ಶಾಲೆಗೆ ಪ್ರವೇಶ ನೀಡಲಾಗುತ್ತದೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ 6 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುವವರು ಅರ್ಜಿ ಸಲ್ಲಿಸಬಹುದು. ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಆಶ್ರಮ ಶಾಲೆಗಳಲ್ಲಿ 1ನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ. ಆಶ್ರಮ ಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗೂ ಎಸ್‍ಟಿ ವಿದ್ಯಾರ್ಥಿಗಳಿಗೆ ದಾಖಲು ಮಾಡಿಕೊಳ್ಳಲಾಗುತ್ತದೆ.
ಅರ್ಜಿಗಳನ್ನು ಗುಂಡ್ಲುಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಆಯಾ ವಿದ್ಯಾರ್ಥಿನಿಲಯಗಳಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 10 ರೊಳಗೆ ಆಯಾ ನಿಲಯಗಳ ಮೇಲ್ವಿಚಾರಕರಿಗೆ ಸಲ್ಲಿಸಬೇಕು

ಕೊಳ್ಳೇಗಾಲ : ವಿವಿಧ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 04- ಕೊಳ್ಳೇಗಾಲದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2016-17ನೇ ಸಾಲಿಗೆ 4 ವೃತ್ತಿ ತರಬೇತಿ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯುತ್ ಕರ್ಮಿ, ವಿದ್ಯುನ್ಮಾನ ದುರಸ್ತಿದಾರ, ಜೋಡಣೆಗಾರ, ಸೀವಿಂಗ್ ಟೆಕ್ನಾಲಜಿ ವಿಷಯ ತರಬೇತಿಗೆ ಅರ್ಜಿ ಸಲ್ಲಿಸಬಹುದು. ವಿವರಗಳಿಗೆ ವೆಬ್ ಸೈಟ್ ತಿತಿತಿ.emಠಿಣಡಿg.ಞಚಿಡಿ.ಟಿiಛಿ.iಟಿ ಅಥವಾ ತಿತಿತಿ.ಜeಣಞಚಿಡಿಟಿಚಿಣಚಿಞಚಿ.oಡಿg.iಟಿ ನೊಡಬಹುದು. ದೂರವಾಣಿ ಸಂಖ್ಯೆ 08224-254936 ಸಂಪರ್ಕಿಸಿಯೂ ಪ್ರಾಚಾರ್ಯರಿಂದ ಮಾಹಿತಿ ಪಡೆಯುವಂತೆ ಪ್ರಕಟಣೆ ತಿಳಿಸಿದೆ.
ಜೂ. 7ರಿಂದ ಶಾಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ
ಚಾಮರಾಜನಗರ, ಜೂ. 04 (ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2016-17ನೇ ಸಾಲಿಗೆ ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ವಿತರಿಸಲಿದ್ದು ವಿದ್ಯಾರ್ಥಿಗಳು ನಿಗದಿತ ಶುಲ್ಕದೊಂದಿಗೆ ತಮ್ಮ ಶೈಕ್ಷಣಿಕ ಸಂಸ್ಥೆಗಳ ಮೂಲಕ ನಿಗಮಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಸಿದೆ.
ಮೊದಲನೇ ಹಂತದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜೂನ್ 7 ರಿಂದ ಶೈಕ್ಷಣಿಕ ಸಂಸ್ಥೆಗಳ ಮೂಲಕ ಬಸ್ ಪಾಸ್‍ಗಳನ್ನು ವಿತರಿಸಲಿದೆ. ವಿದ್ಯಾರ್ಥಿಗಳು ಭರ್ತಿ ಮಾಡಿದ ಅರ್ಜಿ ಹಾಗೂ ನಿಗದಿತ ಶುಲ್ಕದೊಂದಿಗೆ ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆ ಮೂಲಕ ನಿಗಮಕ್ಕೆ ಸಲ್ಲಿಸಿ ಬಸ್‍ಪಾಸ್ ಪಡೆದುಕೊಳ್ಳಬೇಕು. ಶೈಕ್ಷಣಿಕ ಸಂಸ್ಥೆಯಿಂದ ವಾಸಸ್ಥಳಕ್ಕೆ 60 ಕಿ.ಮೀ. ಗರಿಷ್ಟ ಅಂತರವಿರುವ ವಿದ್ಯಾರ್ಥಿಗಳು ಬಸ್‍ಪಾಸ್ ಪಡೆಯಬಹುದು ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ್ಲ ತಿಳಿಸಿದ್ದಾರೆ.




ಮನೋವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿ ಸಂಪರ್ಕ
ಚಾಮರಾಜನಗರ, ಜೂ. 04 :- ಕರ್ನಾಟಕ ರಾಜ್ಯ ಮುಕ್ತ ವಿವಿ ಮನೋವಿಜ್ಞಾನ ಅಧ್ಯಯನ ವಿಭಾಗವು 2015-16ನೇ ಸಾಲಿನ ಅಂತಿಮ ಬಿಎ ಮನೋವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿ ಸಂಪರ್ಕ ಕಾರ್ಯಕ್ರಮವನ್ನು, ಜೂನ್ 7 ರಿಂದ 12ರವರೆಗೆ ಬೆಂಗಳೂರಿನ ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹಾಗೂ ಮೈಸೂರಿನ ಮುಕ್ತ ವಿವಿ ಆವರಣದ ವಿಜ್ಞಾನ ಭವನದಲ್ಲಿ ಜೂನ್ 15 ರಿಂದ 20ರವರೆಗೆ ಏರ್ಪಡಿಸಿದೆ.
ಜೂನ್ 12ರಂದು ಬೆಂಗಳೂರಿನಲ್ಲಿ, ಜೂನ್ 20ರಂದು ಮೈಸೂರಿನಲ್ಲಿ ಪ್ರಾಯೋಗಿಕ ಪರೀಕ್ಷೆ ನಿಗದಿ ಮಾಡಿದೆ. ಮನೋವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡಿರುವ ಅಂತಿಮ ಬಿಎ ವಿದ್ಯಾರ್ಥಿಗಳು ಪ್ರಾಯೋಗಿಕ ತರಗತಿ ಸಂಪರ್ಕ ಕಾರ್ಯಕ್ರಮ ಮತ್ತು ಪರೀಕ್ಷೆಗೆ ಹಾಜರಾಗುವಂತೆ ವಿವಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಎಸ್. ಮಹದೇವ ತಿಳಿಸಿದ್ದಾರೆ.


ವಿಶ್ವಪರಿಸರ ದಿನಾಚರಣೆ : ಜಿಲ್ಲಾಡಳಿತದಿಂದ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಚಾಲನೆ
ಚಾಮರಾಜನಗರ, ಜೂ. 04 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಂಗವಾಹಿನಿ ಹಾಗೂ ಒಡಿಪಿ ಸಂಸ್ಥೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಇಂದು ನಗರದಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾಡಳಿತ ಭವನದ ಆವರಣದಲ್ಲಿ ವಿವಿಧ ಫಲಪುಷ್ಪಗಳ 100 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಬಿ.ರಾಮು ಚಾಲನೆ ನೀಡಿದರು. ತಾವೇ ಸ್ವತಃ ಗಿಡ ನೆಟ್ಟು ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಬಿ.ರಾಮು ಇತರೆ ಅಧಿಕಾರಿಗಳಿಗೂ ಗಿಡ ನೆಡುವ ಕೆಲಸಕ್ಕೆ ಮಾದರಿಯಾದರು. ಬಳಿಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಗಿಡ ನೆಟ್ಟು ನೀರೆರೆದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಬಿ.ರಾಮು ಅವರು ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲೂ ಈ ಹಿಂದಿನ ಸಮಯಕ್ಕೆ ಹೋಲಿಸಿದರೆ ಇತ್ತೀಚೆಗೆ ತಾಪಮಾನದಲ್ಲಿ ಗಣನೀಯವಾಗಿ ಹೆಚ್ಚಳ ದಾಖಲಾಗಿರುವುದು ಕಂಡುಬಂದಿದೆ. ಹೀಗಾಗಿ ಪರಿಸರ ಸಮತೋಲನಕ್ಕೆ ನಾವೆಲ್ಲರೂ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎಂದರು.
ವಿಶ್ವ ಪರಿಸರ ದಿನವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ 100 ಗಿಡಗಳನ್ನು ನೆಡುವ ಮಹತ್ವದ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದು ಜಿಲ್ಲಾಡಳಿತ ಭವನಕ್ಕೆ ಮಾತ್ರ ಸೀಮಿತಗೊಳಿಸುವುದಿಲ್ಲ. ತಾಲೂಕು ಮಟ್ಟದ ಕಚೇರಿಗಳಲ್ಲೂ ಸಸಿ ಗಿಡಗಳನ್ನು ನೆಟ್ಟು ಉತ್ತಮ ಪರಿಸರ ನಿರ್ಮಾಣಕ್ಕೆ ಮುಂದಾಗಲಿದ್ದೇವೆ. ಹಸಿರೀಕರಣಕ್ಕೆ ಒತ್ತು ನೀಡಲಿದ್ದೇವೆ. ವಿಶೇಷವಾಗಿ ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅರಣ್ಯೀಕರಣ ಕಾರ್ಯಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮೊದಲು ಜಿಲ್ಲಾಡಳಿತ ಭವನದ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿ ಇರುವ ಉದ್ಯಾನವನದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಪರಿಸರ ಕುರಿತು ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಸ್ವತಃ ಕ್ಯಾನ್‍ವಾಸ್ ಮೇಲೆ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹೆಪ್ಸಿಬಾರಾಣಿ ಪರಿಸರ ಕಾಳಜಿ ಪ್ರತಿಯೊಬ್ಬರಲ್ಲೂ ಇರಬೇಕು. ದೈನಂದಿನ ಜೀವನದಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಪರಿಸರ ಸಂರಕ್ಷಣೆ ಮಾಡಿದರೆ ನಮ್ಮನ್ನು ಪರಿಸರವೇ ಕಾಪಾಡುತ್ತದೆ. ಹೀಗಾಗಿ ಈ ಸಂದೇಶವನ್ನು ವ್ಯಾಪಕವಾಗಿ ತಲುಪಿಸಬೇಕಿದೆ ಎಂದರು.
ಪರಿಸರ ಪÉೂೀಷಣೆ ಜಾಗೃತಿಗಾಗಿ ವಿಶ್ವಸಂಸ್ಥೆಯು ವಿಶ್ವಪರಿಸರ ದಿನಾಚರಣೆ ಆರಂಭಿಸಿತು. ಪ್ರತೀವರ್ಷ ಜೂನ್ ಮಾಹೆಯಲ್ಲಿ ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಎಲ್ಲೆಡೆ ನಡೆಸಲಾಗುತ್ತಿದೆ. ಇದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪರಿಸರ ಕುರಿತ ಸಂರಕ್ಷಣೆ ಅರಿವು ನಿರಂತರವಾಗಿ ಇರಬೇಕು. ಉತ್ಸಾಹ ಸ್ಪೂರ್ತಿಯಿಂದ ಸುತ್ತಮುತ್ತಲ ಪರಿಸರವನ್ನು ಕಾಪಾಡಬೇಕು ಎಂದು ಹೆಪ್ಸಿಬಾರಾಣಿ ತಿಳಿಸಿದರು.
ಉತ್ತಮ ಪರಿಸರವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ತಾವೂ ಸಹ ಉತ್ಸುಕರಾಗಿದ್ದು 60 ಸಸಿಗಳನ್ನು ನೆಡುವ ಉದ್ದೇಶ ಹೊಂದಿದ್ದೇನೆ. ಪ್ರತಿಯೊಬ್ಬರೂ ಸೇರಿ ಪರಿಸರ ಸಂರಕ್ಷಿಸುವ ಕಾರ್ಯದಲ್ಲಿ ಭಾಗಿಯಾದರೆ ಮಹತ್ವದ ಉದ್ದೇಶ ಯಶಸ್ವಿಯಾಗುತ್ತದೆ ಎಂದು ಹೆಪ್ಸಿಬಾರಾಣಿ ಹೇಳಿದರು.
ಉದ್ಘಾಟನೆ ಕಾರ್ಯಕ್ರಮದ ಬಳಿಕ ನೂರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಉದ್ಯಾನವನದಲ್ಲಿ ಕುಳಿತು ಪರಿಸರ ಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದರು.
ಪರಿಸರ ಅಧಿಕಾರಿ ಪ್ರಕಾಶ್, ಉಪಪರಿಸರ ಅಧಿಕಾರಿ ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಮತ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸರಸ್ವತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಭಾಸ್ಕರ್, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ನಾಗರಾಜು, ಹಿರಿಯ ಸಹಾಯಕ ನಿರ್ದೇಶಕರಾದ ಡಾ. ಆನಂದ್, ರಂಗವಾಹಿನಿ ಸಂಸ್ಥೆಯ ಅಧ್ಯಕ್ಷರಾದ ಸಿ.ಎಂ. ನರಸಿಂಹಮೂರ್ತಿ, ಕಲಾವಿದರಾದ ಸಂಪತ್‍ಕುಮಾರ್, ಕಲೆ ನಟರಾಜು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಹೊಣೆಗಾರಿಕೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಬಿ.ರಾಮು ಸೂಚನೆ.

ಚಾಮರಾಜನಗರ ಜೂನ್ 04  ಕರ್ನಾಟಕ  ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ ಕಾರ್ಯಕ್ಕಾಗಿ ನೇಮಕವಾಗಿರುವ ಅಧಿಕಾರಿ, ಸಿಬ್ಬಂದಿ ಯಾವುದೇ ಗೊಂದಲಕ್ಕೆ ಅವಕಾಶವಾಗದ ಹಾಗೆ ಹೊಣೆಗಾರಿಕೆಯಿಂದ ಕರ್ತವ್ಯನಿರ್ವಹಿಸಬೇಕೆಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ರಾಮು ಸೂಚನೆ ನೀಡಿದರು.

ನಗರದ ಜಿಲ್ಲಾ ಆಡಳಿತ ಭವನದಲ್ಲಿರುವ ಕೆ.ಡಿ.ಪಿ.ಸಭಾಂಗಣದಲ್ಲಿ ಇಂದು ಮತಗಟ್ಟೆಗಳಿಗೆ ನೇಮಕ ಮಾಡಿರುವ ಪ್ರಿಸೈಡಿಂಗ್ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮತದಾನ ಕೇಂದ್ರದಲ್ಲಿ ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಬೇಕು. ಚುನಾವಣಾ ಸಂಬಂಧ ಚುನಾವಣಾ ಆಯೋಗವು ಹೊರಡಿಸಿರುವ ಕೈಪಿಡಿಯನ್ನು ಸಂಪೂರ್ಣವಾಗಿ ಮನನ ಮಾಡಿಕೊಂಡು ಆ ಪ್ರಕಾರವೇ ಕೆಲಸ ನಿರ್ವಹಿಸಬೇಕು. ಯಾವುದೇ ಲೋಪಕ್ಕೆ ಅವಕಾಶವಿಲ್ಲದಂತೆ ಕರ್ತವ್ಯ ಮಾಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಮತಗಟ್ಟೆಯಲ್ಲಿ ಮುಕ್ತ ಹಾಗೂ ನಿಪ್ಷಕ್ಷಪಾತವಾಗಿ ಮತದಾನ ಕಾರ್ಯನಡೆಯುವಂತೆ ನೋಡಿಕೊಳ್ಳುವುದು ಪ್ರಿಸೈಡಿಂಗ್ ಅಧಿಕಾರಿಗಳ ಮುಖ್ಯ ಜವಾಬ್ದಾರಿಯಾಗಿದೆ. ಹೀಗಾಗಿ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ರಾಮು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ ಮಾತನಾಡಿ ಮತದಾನದ ಹಿಂದಿನ ದಿನದಂದು ಅಂದರೆ ಮಸ್ಟರಿಂಗ್ ನಡೆಯುವ ದಿನದಂದು ಚೆಕ್‍ಲಿಸ್ಟ್ ಪ್ರಕಾರ ಎಲ್ಲಾ ಮತದಾನ ಸಾಮಗ್ರಿಗಳು  ಇದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ನಿಗಧಿತ ಸಮಯದಲ್ಲಿ ಮಸ್ಟರಿಂಗ್ ಸ್ಥಳಕ್ಕೆ ಹಾಜರಿರಬೇಕು ಎಂದರು.

ಮತದಾನದ ವೇಳೆ ಮತ ಚಲಾಯಿಸುವ ಮತದಾರರ ಎಡಗೈ ಮಧÀ್ಯದ ಬೆರಳಿಗೆ ಶಾಯಿ ಹಚ್ಚಲು ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಅದರಂತೆ ಕ್ರಮ ಕೈಗೊಳ್ಳಬೇಕು. ಪ್ರಾಶಸ್ತ್ಯಾನುಸಾರ ಕ್ರಮದಲ್ಲಿ ಅಂಕಿಗಳಲ್ಲಿ ನೇರಳೆ ಬಣ್ಣದ ಸ್ಕೆಚ್‍ಪೆನ್‍ನಲ್ಲಿ ಮತಚಲಾಯಿಸುವ ಬಗ್ಗೆ ಮತದಾರರಿಗೆ ತಿಳಿಸಬೇಕೆಂದು ಭಾರತಿಯವರು ತಿಳಿಸಿದರು.

ಮತಗಟ್ಟೆ ಅಧಿಕಾರಿ ನಿರ್ವಹಿಸಬೇಕಿರುವ ಕಾರ್ಯವಿಧಾನಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದ ಭೂದಾಖಲೆಗಳ ಉಪ ನಿರ್ದೇಶಕರಾದ ಸೋಮಸುಂದರ ರವರು ಮತಗಟ್ಟೆ ಸಿಬ್ಬಂದಿ ಉಮೇದುವಾರರ ಪೊಲಿಂಗ್ ಏಜೆಂಟರುಗಳು ಕುಳಿತುಕೊಳ್ಳುವ ಸ್ಥಳವನ್ನು ಮತ್ತು ವೋಟಿಂಗ್ ಕಂಪಾರ್ಟ್‍ಮೆಂಟ್ ಇಡುವ ಸ್ಥಳವನ್ನು ಮತದಾನದ ಹಿಂದಿನ ದಿನವೇ ನಿರ್ಧರಿಸಬೇಕು ಎಂದರು.
ಸಭೆಯಲ್ಲಿ ಚುನಾವಣಾ ಕೆಲಸಕ್ಕೆ ನಿಯೋಜಿತರಾಗಿರುವ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.





ಯಶಸ್ವಿಯಾಗಿ ನಡೆದ ಪರಿಸರ ಜಾಗೃತಿ ಜಾಥಾ
ಚಾಮರಾಜನಗರ, ಜೂ. 06 - ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ  ಹಾಗೂ ವಿವಿಧ ಸಂಘಸಂಸ್ಥೆಗಳ ವತಿಯಿಂದ ನಗರದಲ್ಲಿ ಇಂದು ಜಾಗೃತಿ ಜಾಥಾ ನಡೆಯಿತು.
ಚಾಮರಾಜೇಶ್ವರ ದೇವಾಲಯ ಬಳಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್¯ಪಾಟಿ ಅವರು ವಿದ್ಯಾರ್ಥಿಗಳು ನಡೆಸಿದ ಪರಿಸರ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಬಳಿಕ ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ತಂಡದವರು ಶಾಲಾ ಬ್ಯಾಂಡ್ ವಾದನದೊಡನೆ ಪರಿಸರ ಕುರಿತು ಅರಿವು ಮೂಡಿಸುವ ಜಾಥಾದಲ್ಲಿ ಹೆಜ್ಜೆ ಹಾಕಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರೂ ಸಹ ವಿದ್ಯಾರ್ಥಿಗಳ ಜಾಗೃತಿ ಜಾಥಾದಲ್ಲಿ ಜತೆಗೂಡಿ ಮುನ್ನಡೆದರು.
ನೂರಾರು ಸಂಖ್ಯೆಯಲ್ಲಿ ಸಾಗಿದ ಶಾಲಾವಿದ್ಯಾರ್ಥಿಗಳು ‘ಮನೆಗೊಂದು ಮರ ಊರಿಗೊಂದು ವನ’, ‘ಮರಗಳನ್ನು ಬೆಳಸಿ ನಾಡನ್ನು ಉಳಿಸಿ’, ‘ಕಾಡಿದ್ದರೆ ನಾಡು ನಾಡಿದ್ದರೆ ನಾವು’ ಹೀಗೆ ಹತ್ತುಹಲವು ಪ್ರಕೃತಿ ಉಳಿಸಿ ಪೋಷಣೆ ಮಾಡುವ ಮಹತ್ವದ ಸಂದೇಶವನ್ನು ಸಾರುವ ಫಲಕಗಳನ್ನು ಹಿಡಿದಿದ್ದರು.
ಮುಖ್ಯ ಬೀದಿಗಳಲ್ಲಿ ಸಾಗಿದ ವಿದ್ಯಾರ್ಥಿಗಳು ಪರಿಸರ ಕಾಪಾಡುವ ಘೋಷಣೆಯನ್ನು ಸಹ ಮೊಳಗಿಸಿದರು. ವಿದ್ಯಾರ್ಥಿಗಳೊಂದಿಗೆ ಅಧಿಕಾರಿಗಳು ಸಹ ಸಾಥ್ ನೀಡಿದರು. ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರಿಂದ ಜಾಥಾ ಕಾರ್ಯಕ್ರಮವು ಜನರ ಗಮನ ಸೆಳೆಯಲು ಯಶಸ್ವಿಯಾಯಿತು. ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ಜಾಥಾ ಜಿಲ್ಲಾಡಳಿತ ಭವನದ ಆವರಣದಲ್ಲಿ ಮುಕ್ತಾಯವಾಯಿತು.
 ಜಿಲ್ಲ್ವಾ ಪರಿಸರ ಅಧಿಕಾರಿ ಪ್ರಕಾಶ್, ಉಪ ಪರಿಸರಾಧಿಕಾರಿ ಉಮಾಶಂಕರ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಡಾ. ಆನಂದ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಪರಿಸರ ಸಮತೋಲನ ಕಾಯ್ದುಕೊಳ್ಳದಿದ್ದರೆ ಆಪತ್ತು : ಜಿಲ್ಲಾ ನ್ಯಾಯಾಧೀಶರ ಕಳವಳ
ಚಾಮರಾಜನಗರ, ಜೂ. 06 :- ಪರಿಸರ ಸಮತೋಲನ ಕಾಯ್ದುಕೊಳ್ಳದಿದ್ದರೆ ಅರಣ್ಯ ಹಾಗೂ ಅಪರೂಪದ ಪ್ರಾಣಿ ಸಂಕುಲಗಳಿಗೂ ಆಪತ್ತು ಎದುರಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್. ಮಳವಳ್ಳಿ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ವತಿಯಿಂದ ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ವ್ಯಾಜ್ಯಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಿತಿಮೀರಿದ ಪರಿಸರ ಮಾಲಿನ್ಯದಿಂದ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಪರಿಸರ ಸಮತೋಲನ ಕಾಯ್ದುಕೊಳ್ಳಬೇಕಾದರೆ ಶೇ. 33ರಷ್ಟು ಅರಣ್ಯ ಪ್ರದೇಶ ಇರಲೇಬೇಕು. ಆದರೆ ಈ ಪ್ರಮಾಣದಲ್ಲಿ ವನಸಂಪತ್ತು ಇಲ್ಲದಿರುವುದರಿಂದ ಹವಾಮಾನದಲ್ಲಿ ವೈಪರೀತ್ಯವಾಗುತ್ತಿದೆ. ಮಳೆಯ ಪ್ರಮಾಣ ಕ್ಷೀಣಿಸುತ್ತಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಅರಣ್ಯ ನಾಶದಿಂದ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಅರಣ್ಯ ಸಂರಕ್ಷಣೆಯಾಗದಿದ್ದರೆ ಸಸ್ಯಪ್ರಾಣಿ ಸಂಕುಲಗಳು ಮುಂದಿನ ಕಾಲಮಾನದ ಹೊತ್ತಿಗೆ ಮರೆಯಾಗಬಹುದು. ಹೀಗಾಗಿ ಪರಿಸರ ಕಾಳಜಿ ಪ್ರತಿಯೊಬ್ಬರಲ್ಲೂ ಬರಬೇಕು. ಕಾಡು ಉಳಿಸುವುದರ ಜತೆಗೆ ನಮ್ಮ ನೆರೆಹೊರೆಯಲ್ಲೂ ಮರಗಿಡಗಳನ್ನು ಪೋಷಣೆ ಮಾಡಬೇಕು. ಅರಣ್ಯ ಇಲಾಖೆ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸುತ್ತಿದೆ. ಜನತೆ ಈ ಸೌಲಭ್ಯ ಪಡೆದು ಸಸಿ ನೆಟ್ಟು ಅವುಗಳ ಕಾಪಾಡುವ ಜವಾಬ್ದಾರಿ ಹೊಂದಬೇಕು ಎಂದರು.
ನಗರ ಪ್ರದೇಶಗಳಲ್ಲಿ ವಾಹನ ದಟ್ಟಣೆಯಿಂದ ಶುದ್ಧ ಗಾಳಿ ಸೇವನೆಗೂ ಕಂಟಕವಾಗಿದೆ. ಇದರಿಂದ ಉಸಿರಾಟ ಕಾಯಿಲೆಯಿಂದ ಬಳಲುವವರ ಸಂಖ್ಯೆಯೂ ಹೆಚ್ಚಳವಾಗಲಿದೆ. ಮುಂದಿನ ಪೀಳಿಗೆಗೂ ಉತ್ತಮ ಆರೋಗ್ಯ ಹಾಗೂ ಪರಿಸರವನ್ನು ಕಲ್ಪಿಸುವುದು ಎಲ್ಲರ ಕಳಕಳಿಯಾಗಬೇಕು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಂ. ಭೃಂಗೇಶ್ ಮಾತನಾಡಿ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದು ಸಲ್ಲದು. ಮರಗಳನ್ನು ಕಡಿದ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚು ಸಸಿಗಳನ್ನು ನೆಡಬೇಕೆಂಬ ನಿಯಮವಿದೆ. ಇದನ್ನು ಪಾಲನೆ ಮಾಡುವ ಮೂಲಕ ಪರಿಸರ ಸಮತೋಲನ ಕಾಯ್ದುಕೊಳ್ಳಬೇಕು. ಪ್ರಕೃತಿ ದತ್ತವಾದ ಜೀವ ವೈವಿಧ್ಯತೆ ಹಾಗೂ ಆಹಾರ ಸರಪಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ ಅವರು ಪೂರ್ವಿಕರ ಆಹಾರ ಪದ್ಧತಿ ಪರಿಸರ ಪ್ರೇಮವನ್ನು ಪ್ರತಿಯೊಬ್ಬರೂ ಪ್ರಸ್ತುತ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ. ಗಿಡಮರಗಳ ಪೋಷಣೆಯೊಂದಿಗೆ ಪೌಷ್ಠಿಕ ಆಹಾರ ಸೇವನೆಗೂ ಮಹತ್ವ ನೀಡಿದ ಹಿಂದಿನ ಜನರು ದೀರ್ಘಾವಧಿ ಕಾಲ ಆರೋಗ್ಯವಂತರಾಗಿದ್ದರು ಎಂಬುದನ್ನು ಮನಗಾಣಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ಪಿ. ನಂದೀಶ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಡಿ. ರಾಘವೇಂದ್ರ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಚಿನ್ನಸ್ವಾಮಿ, ಹಿರಿಯ ವಕೀಲರಾದ ನರಸಿಂಹಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಇತರೆ ನ್ಯಾಯಾಧೀಶರು ಗಿಡ ನೆಟ್ಟು ನೀರೆರೆದರು.

ಮಹಿಳಾ ಅಭಿವೃದ್ಧಿ ನಿಗಮದಿಂದ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 06 - 2016-17ನೇ ಸಾಲಿಗೆ ಮಹಿಳಾ ಅಭಿವೃದ್ಧಿ ನಿಗಮವು ಮಹಿಳೆಯರಿಗಾಗಿ ಸಾಲಸೌಲಭ್ಯ ಹಾಗೂ ಸಹಾಯಧನ ಒದಗಿಸಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಸಾಲದ ಮೊತ್ತವನ್ನು ಬ್ಯಾಂಕ್ ನೀಡಲಿದೆ. ಇದಕ್ಕೆ ಪೂರಕವಾದ ಸಹಾಯಧನವನ್ನು ಮಹಿಳಾ ಅಭಿವೃದ್ಧಿ ನಿಗಮವು ಕೊಡಲಿದೆ. 18 ರಿಂದ 45ರ ವಯೋಮಿತಿಯೊಳಗಿರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಜೂನ್ 25 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ನಗರದ ಪಿಡಬ್ಲ್ಯೂಡಿ ಕಾಲೋನಿಯಲ್ಲಿರುವ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ (ದೂ.ಸಂ. 08226-222603) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದÉ.

ಜೂ. 17ರಂದು ವಸತಿಶಾಲೆ ಪ್ರವೇಶಕ್ಕೆ 2ನೇ ಹಂತದ ಕೌನ್ಸೆಲಿಂಗ್
ಚಾಮರಾಜನಗರ, ಜೂ. 06 - 2016-17ನೇ ಸಾಲಿಗೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ ವಸತಿ ಶಾಲೆಯ 6ನೇ ತರಗತಿ ಪ್ರವೇಶಕ್ಕೆ ಉಳಿದಿರುವ ಸೀಟುಗಳನ್ನು ಹಂಚಿಕೆ ಮಾಡಲು 2ನೇ ಹಂತದ ಕೌನ್ಸೆಲಿಂಗ್ ಅನ್ನು ಜೂನ್ 17ರಂದು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ನಡೆಸಲಾಗುತ್ತದೆ.
ವಿದ್ಯಾರ್ಥಿಗಳು ಅಗತ್ಯ ಮೂಲ ದಾಖಲೆಗಳೊಂದಿಗೆ ಕೌನ್ಸೆಲಿಂಗ್‍ಗೆ ಹಾಜರಾಗುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜೇಶ್ ಜಿ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಉಚಿತ ಯೋಗ ಶಿಬಿರ
ಚಾಮರಾಜನಗರ, ಜೂ. 06 - ಕೇಂದ್ರ ಆಯುಷ್ ಮಂತ್ರಾಲಯ, ಕೇಂದ್ರೀಯ ಯೋಗ ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ, ಇನ್ನಿತರ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಉಚಿತ ಯೋಗ ಶಿಬಿರವನ್ನು ನಗರದಲ್ಲಿ ಆರಂಭಿಸಲಾಗಿದೆ.
ನಗರದ ಜಿಲ್ಲಾ ಭವನದಲ್ಲಿ ಶ್ರೀ ಪತಂಜಲಿ ಯೋಗ ಮಂದಿರ ಸಹಯೋಗದೊಂದಿಗೆ  ಜೂನ್ 21ರವರೆಗೂ ಶಿಬಿರ ಆಯೋಜಿತವಾಗಿದೆ. ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಉಚಿತ ಯೋಗ ತರಬೇತಿ ನೀಡಲಾಗುತ್ತದೆ. ಮಾಹಿತಿಗೆ ಮೊಬೈಲ್ 9449792324 ಅಥವಾ 9242882447 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



ಡಿಇಡಿ, ಡಿಪಿಇಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 06:- ಪ್ರಸಕ್ತ ಶೈಕ್ಷಣಿಕ ಸಾಲಿನ ಡಿಇಡಿ, ಡಿಪಿಇಡಿ ಕೋರ್ಸಿನ ವ್ಯಾಸಂಗದ ಸರ್ಕಾರಿ ಕೋಟಾ ಸೀಟುಗಳ ಭರ್ತಿಗಾಗಿ ಆನ್ ಲೈನ್ ಮೂಲಕ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಜೂನ್ 30 ಕಡೆಯದಿನವಾಗಿದೆ. ಶುಲ್ಕ ಪಾವತಿಗೆ ಜುಲೈ 4 ಕಡೆಯ ದಿನವಾಗಿದೆ. ವಿವರಗಳಿಗೆ ವೆಬ್ ಸೈಟ್ ತಿತಿತಿ.sಛಿhooಟeಜuಛಿಚಿಣioಟಿ ನೋಡುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಂಡ್ಲುಪೇಟೆ : ವೃತ್ತಿ ತರಬೇತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಚಾಮರಾಜನಗರ, ಜೂ. 06 - ಗುಂಡ್ಲುಪೇಟೆಯ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್ ಕೋರ್ಸು ಹಾಗೂ ಇತರೆ ಸರ್ಟಿಫೈಡ್ ಹಾಗೂ ಅಲ್ಪಾವಧಿ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಸ್ಲಲಿಸುವ ಅವಧಿಯನ್ನು ಜೂನ್ 11ರವರೆಗೆ ವಿಸ್ತರಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಗುಂಡ್ಲುಪೇಟೆ ಪಟ್ಟಣದ ಹೊಸೂರು ರಸ್ತೆಯಲ್ಲಿರುವ ದುಂದಾಸನಪುರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರನ್ನು (08229-222344, ಮೊಬೈಲ್ 9880800692) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದÉ.

ಜೂ. 9ರಂದು ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ
ಚಾಮರಾಜನಗರ, ಜೂ. 0:- ಚೆನ್ನೈನ ಫಸ್ಟ್ ಸೋರ್ಸ್ ಕಂಪನಿಯು ಕನ್ನಡ ವಾಯ್ಸ್ ಪ್ರೋಸೆಸ್ ಮತ್ತು ಟೀಮ್ ಲೀಡರ್ ಸೂಪರ್‍ವೈಸರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಜೂನ್ 9ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ನೇರ ಸಂದರ್ಶನ ಏರ್ಪಡಿಸಿದೆ.
ಏರ್‍ಟೆಲ್‍ನಲ್ಲಿ ಕನ್ನಡ ವಾಯ್ಸ್ ಪ್ರೋಸೆಸ್ ಮತ್ತು ಟೀಂ ಲೀಟರ್ ಸೂಪರ್‍ವೈಸರ್ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತದೆ. ಅಭ್ಯರ್ಥಿಗಳು 18 ರಿಂದ 35ರ ವಯೋಮಿತಿಯೊಳಗಿರಬೇಕು. ಎಸ್‍ಎಸ್‍ಎಲ್‍ಸಿ ಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಸ್ವವಿವರದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗಾಧಿಕಾರಿ ಸಿ.ಎಂ ಉಮಾ (ದೂ.ಸಂ. 08226-224430, ಮೊಬೈಲ್ 08547994717) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ವಿವಿಧ ಸಾಲಸೌಲಭ್ಯ, ಗಂಗಾ ಕಲ್ಯಾಣ ಯೋಜನೆ ಪ್ರಯೋಜನಕ್ಕೆ ವಿಶ್ವಕರ್ಮ ಸಮುದಾಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 06 ( ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮವು ವಿವಿಧ ಸಾಲಸೌಲಭ್ಯ ಹಾಗೂ ಇತರೆ ಯೋಜನೆಗಳಿಗೆ ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪಜಾತಿಗೆ ಸೇರಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪಂಚವೃತ್ತಿ ಅಭಿವೃದ್ಧಿ, ಸ್ವಯಂ ಉದ್ಯೋಗ, ಅರಿವು ಶೈಕ್ಷಣಿಕ ಸಾಲ ಯೋಜನೆ, ನೇರ ಸಾಲ ಯೋಜನೆ, ಗಂಗಾ ಕಲ್ಯಾಣ ಸಾಲ ಯೋಜನೆಗೆ ಆರ್ಥಿಕ ನೆರವು ನೀಡಲಾಗುತ್ತದೆ.
ಅಭ್ಯರ್ಥಿಗಳು 18 ರಿಂದ 55ರ ವಯೋಮಿತಿಯೊಳಗಿರಬೇಕು. ಕುಟುಂಬದ ವಾರ್ಷಿಕ ವರಮಾನವು ಗ್ರಾಮಾಂತರ ಪ್ರದೇಶದವರಾಗಿದ್ದಲ್ಲಿ 40 ಸಾವಿರ ಹಾಗು ಪಟ್ಟಣ ಪ್ರದೇಶದವರಾಗಿದ್ದಲ್ಲಿ 55 ಸಾವಿರ ರೂ.ಗಿಂತ ಕಡಿಮೆ ಇರಬೇಕು. ಅರಿವು ಶೈಕ್ಷಣಿಕ ಸಾಲ ಯೋಜನೆಗೆ ವರಮಾನದ ಮಿತಿಯು 3.5 ಲಕ್ಷ ರೂ. ನಿಗದಿ ಮಾಡಲಾಗಿದೆ.
ಸಾಲಸೌಲಭ್ಯ ಯೋಜನೆ ಪಡೆಯಲು ಇಚ್ಚಿಸುವವರು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ (3ನೇ ಮಹಡಿ, ಕೊಠಡಿ ಸಂಖ್ಯೆ 305)ದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಜೂನ್ 30ರೊಳಗೆ ಅರ್ಜಿ ಪಡೆಯಬಹದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜುಲೈ 17ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ವೆಬ್ ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/ಞvಛಿಜಛಿಟ  ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Thursday, 2 June 2016

26-05-2016 ರಿಂದ 01-06-2016 ಚಾಮರಾಜನಗರ ಪ್ರಮುಖ ಸುದ್ದಿಗಳು




ಸ್ತ್ರೀಶಕ್ತಿ ಭವನ ಮಾರುಕಟ್ಟೆ ಮಳಿಗೆ ಹಂಚಿಕೆ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಚಾಮರಾಜನಗರ, ಮೇ. 26 ):- ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಗರದಲ್ಲಿ ನಿರ್ಮಾಣಮಾಡಿರುವ ಸ್ತ್ರೀಶಕ್ತಿ ಭವನದ ಮಾರುಕಟ್ಟೆ ಮಳಿಗೆಗಳನ್ನು ಬಾಡಿಗೆ ಆಧಾರದಲ್ಲಿ ಹಂಚಿಕೆ ಮಾಡುವ ಸಂಬಂಧ ಕರೆಯಲಾಗಿದ್ದ ಅರ್ಜಿ ಸಲ್ಲಿಕೆ ಅವಧಿಯನ್ನು ಜೂನ್ 6ರವರೆಗೆ ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಈಹಿಂದೆ ಮೇ 20ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯೊಳಗೆ ಸಾಕಷ್ಟು ಅರ್ಜಿಗಳು ಬರದ ಕಾರಣ ಅರ್ಜಿ ಸಲ್ಲಿಸುವ ಅವಧಿಯನ್ನು ಜೂನ್ 6ರವರೆಗೂ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಮೇ 28ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಮೇ. 26:- ತಾಲೂಕಿನ ಪಣ್ಯದಹುಂಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೇ 28ರಂದು ತ್ರೈಮಾಸಿಕ ನಿರ್ವಹಣೆ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಂಡರವಾಡಿ, ಪಣ್ಯದಹುಂಡಿ, ಬದನಗುಪ್ಪೆ, ಇಂಡಸ್ಟ್ರಿಯಲ್ ಎನ್‍ಜೆವೈ, ಕೆಲ್ಲಂಬಳ್ಳಿ ಪ್ರದೇಶಗಳಿಗೆ  ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೋಂದಣಿ ರದ್ದುಗೊಳಿಸಲು ಪ್ರಸ್ತಾವನೆ
ಚಾಮರಾಜನಗರ, ಮೇ. 26 :- ತಾಲೂಕಿನ ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಬೈಲಾ ಪ್ರಕಾರ ಕಾರ್ಯನಿರ್ವಹಿಸದೇ ನಿಷ್ಕ್ರಿಯವಾಗಿರುವ ಹಿನ್ನೆಲೆಯಲ್ಲಿ ನೋಂದಣಿ ರದ್ದುಗೊಳಿಸುವ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ.
ಸಹಕಾರ ಸಂಘದ ಮೂಲ ಉದ್ದೇಶ ಈಡೇರಿಸುವಲ್ಲಿ ವಿಫಲವಾಗಿದ್ದು ಯಾವುದೇ ಚಟುವಟಿಕೆಗಳನ್ನು ನಡೆಸದೇ ಇರುವುದು ಗಮನಕ್ಕೆ ಬಂದಿದೆ. ಹೀಗಾಗಿ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಕಾಯಿದೆ 1959 ಮತ್ತು ನಿಯಮ 1960ರಡಿ ಸದರಿ ಸಂಘದ ನೋಂದಣಿ ರದ್ದುಗೊಳಿಸುವ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಈ ಸಂಘದ ಕಾರ್ಯಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಹೋಗಲು ಆಸಕ್ತಿ ಇದ್ದಲ್ಲಿ ಹಾಗೂ ರದ್ದುಗೊಳಿಸುವ ಕ್ರಮದ ಬಗ್ಗೆ ಆಕ್ಷೇಪಣೆ ಇದ್ದಲ್ಲಿ 20 ದಿನಗಳ ಒಳಗೆ ಅಗತ್ಯ ದಾಖಲಾತಿಗಳೊಂದಿಗೆ ನಗರದ ಉಪವಿಭಾಗದ ಸಹಕಾರ ಸಂಘಗಳ ನಿಬಂಧಕರ ಕಚೇರಿಗೆ ಮಾಹಿತಿ ಒದಗಿಸಬೇಕು. ಇಲ್ಲವಾದಲ್ಲಿ ಸಂಘದ ನೋಂದಣಿ ರದ್ದು ಮಾಡಲು ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 26 - ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಲಭ್ಯವಿರುವ ವಿವಿಧ ವೃತ್ತಿ ತರಬೇತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಗುಂಡ್ಲುಪೇಟೆ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಮತ್ತು ಕೋಪಾ ವಿಷಯಗಳಲ್ಲಿ ಸೀಟುಗಳು ಲಭ್ಯವಿದೆ. ಕೊಳ್ಳೇಗಾಲ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕಟಿಂಗ್ ಅಂಡ್ ಸೀವಿಂಗ್, ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಮತ್ತು ಫಿಟ್ಟರ್ ವಿಷಯಗಳಲ್ಲಿ ಸೀಟುಗಳು ಲಭ್ಯವಿದೆ.
ಕಟಿಂಗ್ ಅಂಡ್ ಸೀವಿಂಗ್ ವಿಷಯಕ್ಕೆ ಎಸ್ ಎಸ್ ಎಲ್ ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾಗಿರುವ ಅಭ್ಯರ್ಥಿಗಳು ಪ್ರವೇಶ ಪಡೆಯಬಹುದು. ಉಳಿದ ವಿಷಯಗಳಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಸಲ್ಲಿಕೆಗೆ ಜೂನ್ 6 ಕಡೆಯ ದಿನವಾಗಿದೆ. ವಿವರಗಳಿಗೆ ವೆಬ್ ಸೈಟ್ ತಿತಿತಿ.emಠಿಣಡಿg.ಞಚಿಡಿ.ಟಿiಛಿ.iಟಿ ಮತ್ತು ವೆಬ್ ಸೈಟ್  ತಿತಿತಿ.ಜeಣಞಚಿಡಿಟಿಚಿಣಚಿಞಚಿ.oಡಿg.iಟಿ ನೋಡಬಹುದು. ಅಲ್ಲದೆ ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರನ್ನು (ದೂ.ಸಂ.08229-222853, ಮೊಬೈಲ್ 9900251218 ಮತ್ತು 8453875110) ಸಂಪರ್ಕಿಸಿ ಮಾಹಿತಿ ಪಡೆಯಬಹುದೆಂದು ಪ್ರಕಟಣೆ ತಿಳಿಸಿದೆ.

ಆಹಾರಧಾನ್ಯ ವಿತರಣೆ ಸಾಗಾಣಿಕೆಗೆ ಪರವಾನಗಿ ಕಡ್ಡಾಯ
ಚಾಮರಾಜನಗರ, ಮೇ. 26 - ಜಿಲ್ಲೆಯಲ್ಲಿರುವ ಎಲ್ಲಾ ಸಗಟು ಆಹಾರಧಾನ್ಯ ಮಾರಾಟಗಾರರು, ಸಾಗಾಣಿಕೆ ಗುತ್ತಿಗೆದಾರರು ಹಾಗೂ ಚಿಲ್ಲರೆ, ನ್ಯಾಯಬೆಲೆ ಅಂಗಡಿಯವರು ಕಡ್ಡಾಯವಾಗಿ ಪರವಾನಗಿ ಪಡೆದುಕೊಂಡು ಉದ್ದಿಮೆ ನಡೆಸುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸೂಚಿಸಿದೆ.
ಪರವಾನಗಿ ಪಡೆಯದೆ ಆಹಾರಧಾನ್ಯ ವಿತರಣೆ ಅಥವಾ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಅನುಸಾರ ಅಗತ್ಯ ಕ್ರಮ ಜರುಗಿಸಲಾಗುತ್ತದೆಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಆರ್. ರಾಚಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಆಹಾರ ಉತ್ಪನ್ನಗಳ ಕೈಗಾರಿಕೆ ಕೌಶಲ್ಯ ಉದ್ಯಮಶೀಲತಾ ತರಬೇತಿ
ಚಾಮರಾಜನಗರ, ಮೇ. 26:- ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಸಿಡಾಕ್ ಆಶ್ರಯದಲ್ಲಿ ಕೃಷಿ ಮತ್ತು ಆಹಾರ ಉತ್ಪನ್ನಗಳ ಕೈಗಾರಿಕೆ ಕುರಿತ ಕೌಶಲ್ಯ ಆಧಾರಿತ ಉದ್ಯಶೀಲತಾ ತರಬೇತಿಯನ್ನು ನಗರದಲ್ಲಿ ಆಯೋಜಿಸಲಾಗಿದೆ.
ತರಬೇತಿ ಪಡೆಯಲು ಇಚ್ಚಿಸುವವರು ಅರ್ಜಿ ಸಲ್ಲಿಸಬೇಕಿದೆ.ಕನಿಷ್ಟ ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿದ್ದು 18 ರಿಂದ 40ರ ವಯೋಮಿತಿಯೊಳಗಿರುವ ಅಭ್ಯರ್ಥಿಗಳು ತರಬೇತಿ ಪಡೆಯಬಹುದು.
ತರಬೇತಿ ಅವಧಿಯಲ್ಲಿ ಕೃಷಿ ಮತ್ತು ಆಹಾರ ಉತ್ಪನ್ನಗಳ ತಯಾರಿಕೆಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಜತೆಗೆ ಬ್ಯಾಂಕು ಮತ್ತು ಕೈಗಾರಿಕೆ ವಾಣಿಜ್ಯ ಇಲಾಖೆಯಿಂದ ದೊರೆಯುವ ಹಣಕಾಸು ನೆರವು ಕುರಿತು ಮಾಹಿತಿ ನೀಡಲಾಗುತ್ತದೆ.
ಆಸಕ್ತರು ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರಮ ಉಪನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಜೂನ್ 10ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಸದರಿ ಕಚೇರಿ ಅಥವಾ ದೂ.ಸಂ. 08226-226346, ಮೊಬೈಲ್ 7760145784 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಮೇ 28ರಂದು ಕೊಳ್ಳೇಗಾಲಕ್ಕೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರ ಭೇಟಿ
ಚಾಮರಾಜನಗರ, ಮೇ. 26- ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ನಾರಾಯಣ ಅವರು ಮೇ 28ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಗೆ ಕೊಳ್ಳೇಗಾಲಕ್ಕೆ ಆಗಮಿಸುವರು. 10.30 ಗಂಟೆಗೆ ಪೌರಕಾರ್ಮಿಕರ ಕಾಲೋನಿಗಳಿಗೆ ಭೇಟಿ ನೀಡುವರು. ಮಧ್ಯಾಹ್ನ 12 ಗಂಟೆಗೆ ನಗರಸಭೆ ಕಾರ್ಯಾಲಯದಲ್ಲಿ ಪೌರ ಕಾರ್ಮಿಕರ ಕುಂದುಕೊರತೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸುವರೆಂದು ಪ್ರಕಟಣೆ ತಿಳಿಸಿದೆ.

ವಿಧಾನಪರಿಷತ್ ಚುನಾವಣೆ : 17 ಅಭ್ಯರ್ಥಿಗಳು ಅಂತಿಮ ಕಣದಲ್ಲಿ
ಚಾಮರಾಜನಗರ, ಮೇ. 26 - ಕರ್ನಾಟಕ ವಿಧಾನ ಪರಿಷತ್ತಿಗೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು 17 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಮೈ.ವಿ. ರವಿಶಂಕರ್(ಭಾರತೀಯ ಜನತಾ ಪಕ್ಷ), ಡಾ. ಹೆಚ್.ಎನ್. ರವೀಂದ್ರ(ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ), ಕೆ.ಟಿ. ಶ್ರೀಕಂಠೇಗೌಡ(ಜಾತ್ಯಾತೀತ ಜನತಾದಳ), ಹೆಚ್.ಕೆ. ಕೃಷ್ಣ(ಕರುನಾಡು  ಪಾರ್ಟಿ), ಕೆ.ಪಿ. ಚಿದಾನಂದ(ಸಮಾಜವಾದಿ ಪಾರ್ಟಿ), ನಾಗಭೂಷಣ ಆರಾಧ್ಯ(ಸಮಾಜವಾದಿ ಜನತಾ(ಕರ್ನಾಟಕ)ಪಾರ್ಟಿ), ವಾಟಾಳ್ ನಾಗರಾಜ್(ಕನ್ನಡ ಚಳವಳಿ ವಾಟಾಳ್ ಪಕ್ಷ), ಡಾ. ಕೃಷ್ಣಮೂರ್ತಿ ಚಮರಂ(ಪಕ್ಷೇತರ), ಆರ್.ಕೆ. ಗೋವಿಲ್(ಪಕ್ಷೇತರ), ಪ್ರೊ. ಕೆ.ಎಸ್. ಭಗವಾನ್(ಪಕ್ಷೇತರ), ಹೆಚ್.ಎನ್. ಮಂಚೇಗೌಡ(ಪಕ್ಷೇತರ), ಮಂಜು ಜಿ.ಎನ್(ಪಕ್ಷೇತರ), ಪಿ.ಎಸ್. ಯಡೂರಪ್ಪ(ಪಕ್ಷೇತರ), ಎಂ.ಎನ್. ರವಿಶಂಕರ(ಪಕ್ಷೇತರ), ರಾಜೀವ್ ಶ್ರೀರಂಗರಾಜು(ಪಕ್ಷೇತರ), ಜಿ.ಎಸ್. ವಿಶ್ವನಾಥ (ಪಕ್ಷೇತರ), ವೀರಭದ್ರಸ್ವಾಮಿ ಎನ್(ಪಕ್ಷೇತರ), ಅವರುಗಳು ಅಂತಿಮ ಕಣದಲ್ಲಿದ್ದಾರೆ ಎಂದು ಕರ್ನಾಟಕ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಎ.ಎಂ. ಕುಂಜಪ್ಪ ತಿಳಿಸಿದ್ದಾರೆ.  

ಮೇ. 28ರಂದು ನೇರ ಫೋನ್ ಇನ್ ಕಾರ್ಯಕ್ರಮ

ಚಾಮರಾಜನಗರ, ಮೇ. 27 - ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನೇರ ಫೋನ್ ಇನ್ ಕಾರ್ಯಕ್ರಮವನ್ನು ಮೇ 28ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ತಮ್ಮ ಕುಂದುಕೊರತೆಗಳಿದ್ದಲ್ಲಿ ದೂ.ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ. 30ರಂದು ಹೊಂಗನೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಮ್ಮುಖದಲ್ಲಿ ಶಾಂತಿಸಭೆ

ಚಾಮರಾಜನಗರ, ಮೇ. 27 :- ಹೊಂಗನೂರಿನ ಪ್ರಕರಣ ಹಿನ್ನಲೆಯಲ್ಲಿ ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಹಾಗೂ ಶಾಸಕರಾದ ಎಸ್. ಜಯಣ್ಣ ಅವರ ಸಮ್ಮುಖದಲ್ಲಿ ಶಾಂತಿ ಸಭೆಯು ಮೇ 30 ರಂದು ಬೆಳಿಗ್ಗೆ 11 ಗಂಟೆಗೆ ಹೊಂಗನೂರು ಗ್ರಾಮದ ಆಸ್ಪತ್ರೆ ಆವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕೊಳ್ಳೇಗಾಲ: ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 2- ಸಮಾಜ ಕಲ್ಯಾಣ ಇಲಾಖೆಯಿಂದ ಕೊಳ್ಳೆಗಾಲ ತಾಲೂಕಿನ ವಿವಿಧೆಡೆ ನಿರ್ವಹಣೆಯಾಗುತ್ತರುವ ಪರಿಶಿಷ್ಠ ಜಾತಿಯ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಸಂಬಂಧಿಸಿದ ವಿದ್ಯಾರ್ಥಿ ನಿಲಯ ಅಥವಾ ಕೊಳ್ಳೇಗಾಲ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಜೂನ್ 8 ಕಡೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ ಸಮಾಜ ಕಲ್ಯಾಣ ಇಲಾಖೆ ಕಚೇರಿ (ದೂ ಸಂ: 08224-253196) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಚಾ ನಗರ ತಾಲೂಕು: ಪರಿಶಿಷ್ಠ ವರ್ಗದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ.
ಚಾಮರಾಜನಗರ, ಮೇ. 27:-ನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ  ವಿದ್ಯಾರ್ಥಿ ನಿಲಯ, ಮೆಟ್ರಿಕ್ ನಂತರದ ಬಾಲಕ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ತಾಲೂಕಿನ ಪುಣಜನೂರು ಬೇಡಗುಳಿ, ರಂಗಸಂದ್ರ, ಕೆ.ಗುಡಿ, ಮುರಟಿಪಾಳ್ಯ, ಕೋಳಿಪಾಳ್ಯದಲ್ಲಿರುವ ಆಶ್ರಮ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ 5 ರಿಂದ 10 ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಪಿಯುಸಿ ಯಿಂದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು  ಆಶ್ರಮ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಯವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರವೇಶ ಲಭಿಸಲಿದೆ.
ಆಸಕ್ತ ಪರಿಶಿಷ್ಠ ವರ್ಗದ ಹಾಗೂ ಇತರೆ ಜನಾಂಗದ ವಿದ್ಯಾರ್ಥಿಗಳು ಸಂಬಂಧಪಟ್ಟ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರು ಅಥವಾ ನಗರದ ಖಾಸಗಿ ಬಸ್ ನಿಲ್ದಾಣ ರಸ್ತಯಲ್ಲಿರುವ ತಾಲೂಕು ಪರಿಶಿಷ್ಠ ವರ್ಗಗಳ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಜೂನ್ 1 ರಿಂದ ಅರ್ಜಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಜೂನ್ 15 ರ ಒಳಗೆ ಸಲ್ಲಿಸಬೇಕು.
ಪರಿಶಿಷ್ಠ ವರ್ಗದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಪರಿಶಿಷ್ಠ ಜಾತಿ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ವಿವರಗಳಿಗೆ 08226-223823 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




ಆರೋಗ್ಯ ಶಿಕ್ಷಣದ ಅರಿವು ಅಗತ್ಯ: ತಹಶೀಲ್ದಾರ್ ಮಹದೇವು
ಚಾಮರಾಜನಗರ, ಮೇ. 27- ಡೆಂಗ್ಯೂ ರೊಗ ನಿಯಂತ್ರಣಕ್ಕೆ ನಾಗರಿಕರಲ್ಲಿ ಆರೋಗ್ಯ ಶಿಕ್ಷಣದ ಅರಿವು ಮೂಡಿಸಬೇಕು ಎಂದು ತಹಶೀಲ್ದಾರ್ ಎಸ್.ಎಂ. ಮಹದೇವು ತಿಳಿಸಿದರು.
ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಕಾರ್ಯಕ್ರಮದ ಅನುಷ್ಠಾನ ಸಂಬಂಧ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿಂದು ನಡೆದ ಡೆಂಗ್ಯೂ ರೋಗ ನಿಯಂತ್ರಣೆ ಕುರಿತ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿವರ್ಷ ಮೇ. 16ರಂದು ರಾಷ್ಟ್ರೀಯ ಡೆಂಗ್ಯೂ ದಿನವನ್ನು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ರೋಗ ನಿಯಂತ್ರಣಕ್ಕೆ ತಾಲೂಕಿನ ಗ್ರಾಮ ಪಂಚಾಯಿತಿ, ಶಿಕ್ಷಣ, ಕಂದಾಯ, ನೀರಾವರಿ, ಸಮಾಜ ಕಲ್ಯಾಣ, ಮೀನುಗಾರಿಕೆ, ನಗರಾಭಿವೃದ್ಧಿ, ಕೈಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳು ಆರೋಗ್ಯ ಇಲಾಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದರು.
ವ್ಯಕ್ತಿಯನ್ನು ತೀವ್ರವಾಗಿ ಬಾದಿಸುವ ಡೆಂಗ್ಯೂ ರೋಗ ತಡೆಗಟ್ಟಲು ಮುಖ್ಯವಾಗಿ ಸಾರ್ವಜನಿಕರಿಗೆ ಅರೋಗ್ಯ ಶಿಕ್ಷಣ ನೀಡಬೇಕು. ಗ್ರಾಮೀಣ ಭಾಗದ ಜನರು ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು. ಡೆಂಗ್ಯೂ ನಿವಾರಣೆಗಾಗಿ ವ್ಯಾಪಕವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ಕ್ರಿಯಾಶೀಲರಾಗಬೇಕು ಎಂದು ಮಹದೇವು ತಿಳಿಸಿದರು.
ಅರಂಭದಲ್ಲಿ ಡೆಂಗ್ಯೂ ರೋಗ ನಿಯಂತ್ರಣೆ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ರೋಗ ಲಕ್ಷಣಗಳು, ಹರಡುವ ಬಗೆ, ಚಿಕಿತ್ಸೆ ಪಡೆಯುವ ಬಗ್ಗೆ ವಿವರಿಸಿ ಎಲ್ಲ ಇಲಾಖೆಗಳು ತಮ್ಮ ಕಚೇರಿಯ ಒಳಾಂಗಣ, ಹೊರಾಂಗಣದಲ್ಲಿ ಅನಾವಶ್ಯಕ ನೀರು ನಿಲ್ಲದಂತೆ ಕ್ರಮ ವಹಿಸುವುದು ಹಾಗೂ ಒಣ ದಿನ ಆಚರಿಸುವುದು ಅಗತ್ಯ. ಡೆಂಗ್ಯೂ ಕುರಿತ ಹೆಚ್ಚಿನ ಮಾಹಿತಿಯನ್ನು  WWW.ಟಿhಠಿ.gov.iಟಿ/mobiಟe.ಚಿಠಿಠಿ ವೆಬ್‍ಸೈಟ್‍ನಲ್ಲಿ ಪಡೆಯಬಹುದು ಎಂದರು.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಶಾಂತ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಯಾಲಜಿಸ್ಟ್ ಚಂದ್ರಶೇಖರ್, ಶಿಕ್ಷಣ ಇಲಾಖೆಯ ಸಂಯೋಜಕರಾದ ಚಿನ್ನಸ್ವಾಮಿ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಜ್ಯೋತಿಗೌಡನಪುರ : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ
ಚಾಮರಾಜನಗರ, ಮೇ. 27 - ತಾಲೂಕಿನ ಜ್ಯೋತಿಗೌಡನಪುರ ಸರ್ಕಾರಿ ಪ್ರೌಢಶಾಲೆಯು ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 85ರಷ್ಟು ಫಲಿತಾಂಶ ಪಡೆದಿದೆ.
ಶಾಲೆಯ ವಿ. ಅನಿತಾ 551 ಅಂಕ(ಶೇ.88.16), ಜೆ.ಬಿ. ಪೂಜಾಶ್ರೀ 537 ಅಂಕ(85.92) ಮತ್ತು ಜೆ.ಎಸ್. ಪೂರ್ಣಿಮಾ 533 ಅಂಕ(85.28) ಪಡೆದು ಅತ್ಯುನ್ನತಾ ಶ್ರೇಣಿ(ಡಿಸ್ಟಿಂಕ್ಷನ್) ಹೊಂದಿದ್ದು, ಬಿ. ಬಸವರಾಜು 514 ಅಂಕ(82.24), ಜಿ. ತೇಜಾವತಿ 506 ಅಂಕ(80.96), ಚಂದ್ರಶೇಖರ 501 ಅಂಕ(80.16)ಗಳನ್ನು ಗಳಿಸಿದ್ದಾರೆ. ಇವರೊಂದಿಗೆ ಇನ್ನೂ ಹಲವಾರು ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕರಾದ ಡಾ. ಎಚ್.ಬಿ. ಬಸವರಾಜು ತಿಳಿಸಿದ್ದಾರೆ.  
ಮೇ. 30ರಂದು ಮಹಿಳಾ ಚಿಂತನೆ, ಶರಣರ ವಚನಗಳ ಕುರಿತ ಕಾರ್ಯಾಗಾರ
 ಚಾಮರಾಜನಗರ, ಮೇ. 27 - ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್‍ನಲ್ಲಿ ಕನ್ನಡ ವಿಭಾಗದ ವಿದ್ಯಾರ್ಥಿಗಳಿಗಾಗಿ ಮೇ. 30 ರಂದು ಬೆಳಿಗ್ಗೆ 10.30 ಗಂಟೆಗೆ “ಪ್ರಸ್ತುತ ಕನ್ನಡ ಸಾಹಿತ್ಯದಲ್ಲಿ ಮಹಿಳಾ ಚಿಂತನೆಗಳು ಮತ್ತು ಶರಣರ ವಚನಗಳು ಹಾಗೂ ಸಮಕಾಲೀನ ಸಂದರ್ಭ” ಕುರಿತು ಕಾರ್ಯಗಾರವನ್ನು ಆಯೋಜಿಸಲಾಗಿದೆ.
ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪದ್ಮಾಶೇಖರ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಬಂಜಗೆರೆ ಜಯಪ್ರಕಾಶ್ ಮತ್ತು ಪತ್ರಿಕೋದ್ಯಮಿ ಜಿ.ಪಿ. ಬಸವರಾಜು ಅವರುಗಳು ಕಾರ್ಯಗಾರದಲ್ಲಿ ಭಾಗವಹಿಸುವರು ಎಂದು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

***************

ಗಣಿ ಇಲಾಖೆ ಸಂಬಂಧ ಪರಿಸರ ವಿಮೋಚನಾ ಪತ್ರಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ
ಚಾಮರಾಜನಗರ, ಮೇ 28 - ಉಪಖನಿಜಗಳ ಗಣಿಗಾರಿಕೆಗೆ ಪರಿಸರ ವಿಮೋಚನಾ ಪತ್ರ ನೀಡುವ ಪ್ರಕ್ರಿಯೆಯನ್ನು ವಿಕೇಂದ್ರೀಕರಿಸಲಾಗಿದ್ದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರ (ಡಿಇಐಎಎ) ಮತ್ತು ನೀರಾವರಿ ಇಲಾಖೆಯ ಹಿರಿಯ ಕಾರ್ಯನಿರ್ವಾಹಕ ಅಭಿಯಂತರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ತಜ್ಞ ನಿಷ್ಕರ್ಷ (ಡಿಇಎಸಿ) ಸಮಿತಿಗಳನ್ನು ರಚಿಸಲಾಗಿದೆ.
ಗಣಿ ಇಲಾಖೆಗೆ ಸಂಬಂಧಿಸಿದಂತೆ ಪರಿಸರ ವಿಮೋಚನಾ ಪತ್ರ ನೀಡುವ ಸಂಬಂಧ ಜಿಲ್ಲಾಧಿಕಾರಿ ಕಚೇರಿಯನ್ನು ಅಧಿಕೃತಗೊಳಿಸಿ ಈ ಕೂಡಲೇ ಜಾರಿಗೆ ಬರುವಂತೆ ಕಾರ್ಯೋನ್ಮುಖಗೊಳಿಸಲಾಗಿದೆ. ಜಿಲ್ಲೆಗೆ ಸಂಬಂಧಿಸಿದಂತೆ ಪರಿಸರ ವಿಮೋಚನಾ ಪತ್ರ ಅವಶ್ಯವಿರುವ ಅರ್ಜಿದಾರರು ಅರ್ಜಿಗಳನ್ನು ನೇರವಾಗಿ ಅಗತ್ಯ ದಾಖಲೆಗಳೊಂದಿಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 29ರಂದು ನಗರಕ್ಕೆ ನೀರು ಸರಬರಾಜು ವ್ಯತ್ಯಯ
ಚಾಮರಾಜನಗರ, ಮೇ 28:- ನಗರಕ್ಕೆ ನೀರು ಪೂರೈಕೆಯಾಗುವ ಮಾರ್ಗದಲ್ಲಿ ಏರುಕೊಳವೆ ದುರಸ್ತಿ ಕಾರ್ಯ ನಡೆಸಬೇಕಿರುವ ಹಿನ್ನೆಲೆಯಲ್ಲಿ ಮೇ 29ರಂದು ಚಾಮರಾಜನಗರಕ್ಕೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ನಾಗರಿಕರು ಲಭ್ಯವಿರುವ ತೊಂಬೆ ಹಾಗೂ ಕೈಪಂಪ್, ಕೊಳವೆ ಬಾವಿಗಳಿಂದ ನೀರು ಉಪಯೋಗಿಸಿಕೊಂಡು ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಫೋನ್ ಇನ್ ಕಾರ್ಯಕ್ರಮ : ಸಮಸ್ಯೆ ಬಿಚ್ಚಿಟ್ಟ ವಿಕಲಚೇತನರು
ಚಾಮರಾಜನಗರ, ಮೇ 28 - ಜಿಲ್ಲೆಯ ಜನತೆಯ ಕುಂದುಕೊರತೆ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಇಂದು ನಡೆದ ನೇರಫೋನ್ ಇನ್ ಕಾರ್ಯಕ್ರಮದಲ್ಲಿ ವಿಕಲಚೇತನರು ತಾವು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟದ್ದು ಗಮನ ಸೆಳೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ರಾಮು ಅವರ ನೇತೃತ್ವದಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ 26 ದೂರುಗಳು ದಾಖಲಾದವು.
ಮೂಲಸೌಕರ್ಯ ಸಮಸ್ಯೆಗಳೇ ಹೆಚ್ಚು ಕೇಳಿಬರುತ್ತಿದ್ದ ಪೋನ್ ಇನ್ ಕಾರ್ಯಕ್ರಮದಲ್ಲಿ ಇಂದು ವಿಕಲಚೇತನರಿಗೆ ನೆರವು ನೀಡಬೇಕೆಂಬ ಮನವಿಗಳು ಸಾಕಷ್ಟು ಕೇಳಿಬಂದವು.
ಕೌದಳ್ಳಿಯಿಂದ ಮಹಿಳೆಯೊಬ್ಬರು ಕರೆ ಮಾಡಿ ತಮ್ಮ ಮನೆಯಲ್ಲಿ ಮೂವರು ಅಂಗವಿಕಲರಿದ್ದಾರೆ. ಇವರಿಗೆ ಪಿಂಚಣಿ ಸೌಲಭ್ಯ ಲಭ್ಯವಿಲ್ಲ. ನೆರವು ಲಭಿಸಿದರೆ ತಮ್ಮ ಸಂಕಷ್ಟ ಪರಿಹಾರವಾಗಲಿದೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅಗತ್ಯ ನೆರವು ಕಲ್ಪಿಸಲಾಗುವುದು ಎಂದರು.
ಧನಗೆರೆಯಿಂದ ಯುವತಿಯೊಬ್ಬರು ಕರೆ ಮಾಡಿ ತಾವು ಅಂಗವೈಕಲ್ಯರಾಗಿದ್ದು ಪಿಯುಸಿವರೆಗೆ ವ್ಯಾಸಂಗ ಮಾಡಿದ್ದೇನೆ. ಕಡುಬಡತನವಿದ್ದು ಅಗತ್ಯ ಸಹಾಯವನ್ನು ಒದಗಿಸಬೇಕೆಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಕಂಪ್ಯೂಟರ್ ತರಬೇತಿಯಂತಹ ಪ್ರಯೋಜನವನ್ನು ಒದಗಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
ಹುತ್ತೂರು ಗ್ರಾಮದಿಂದ ಮಹಿಳೆಯೊಬ್ಬರು ತಾವು ವಿಕಲಚೇತನರಾಗಿದ್ದು ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಕೊಡುವಂತೆ ಮನವಿ ಮಾಡಿದರು. ಈ ಸಂಬಂಧ ಉತ್ತರಿಸಿದ ಜಿಲ್ಲಾಧಿಕಾರಿಯವರು ವಿಕಲಚೇತನರ ಕೋಟದಡಿ ಮನೆ ಸೌಲಭ್ಯ ನೀಡಲು ಅವಕಾಶವಿದೆ. ಈ ಬಗ್ಗೆ ಅಗತ್ಯ ಪ್ರಕ್ರಿಯೆ ಕೈಗೊಳ್ಳಲು ಮುಂದಾಗುವುದಾಗಿ ತಿಳಿಸಿದರು.
ಮುಡಿಗುಂಡದಿಂದ ಮತ್ತೋರ್ವ ಮಹಿಳೆಯೋರ್ವರು ದೂರವಾಣಿ ಕರೆ ಮಾಡಿ ತಮ್ಮ ಮಗುವಿಗೆ ವಾಕ್ ಥೆರಪಿ ಅಗತ್ಯವಿದೆ. ಈ ಚಿಕಿತ್ಸೆ ಒದಗಿಸಲು ನೆರವು ಕಲ್ಪಿಸಬೇಕೆಂದು ಕೋರಿದರು. ಜಿಲ್ಲಾಧಿಕಾರಿ ರಾಮು ಅವರು ಸಭೆಯಲ್ಲಿದ್ದ ವಿಕಲಚೇತನ ಅಧಿಕಾರಿಗೆ ಕೂಡಲೇ ಮಗುವಿಗೆ ಚಿಕಿತ್ಸೆ ನೀಡÀಲು ಅವಶ್ಯ ಏರ್ಪಾಡು ಮಾಡುವಂತೆ ಸೂಚಿಸಿದರು.
ಯಳಂದೂರಿನಿಂದ ಸ್ಥಳೀಯ ನಿವಾಸಿಯೊಬ್ಬರು ಪಟ್ಟಣದ ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ತಿಳಿಸಿದರು. ನಿಯಮಾನುಸಾರ ಡೊನೇಷನ್ ಪಡೆಯುವಂತಿಲ್ಲ. ನಿರ್ದಿಷ್ಟ ದೂರುಗಳಿದ್ದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಖುದ್ದು ದೂರು ನೀಡಿದರೆ ಕ್ರಮ ವಹಿಸಲಾಗುವುದು. ನಿಯಮಾನುಸಾರ ಪಡೆಯಬೇಕಾದ ಶುಲ್ಕ ವಿವರವನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ರಾಮು ಉತ್ತರಿಸಿದರು.
ಚರಂಡಿ ಸ್ಪಚ್ಚತೆ, ತ್ಯಾಜ್ಯ ವಿಲೇವಾರಿಯಲ್ಲಿ ನಿರ್ಲಕ್ಷ್ಯ, ಮರಳು ಅಭಾವದಿಂದ ಉಂಟಾಗಿರುವ ಸಮಸ್ಯೆ ಸೇರಿದಂದೆ ಇತರೆ ಹಲವು ತೊಂದರೆಗಳನ್ನು ಫೋನ್ ಇನ್ ಕಾರ್ಯಕ್ರಮದಲ್ಲಿ ನಾಗರಿಕರು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ,  ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಉದ್ಯೋಗ ಖಾತರಿ ಯೋಜನೆ ಪ್ರಗತಿ ಹೆಚ್ಚಳಕ್ಕೆ ಉಸ್ತುವಾರಿ ಕಾರ್ಯದರ್ಶಿ ಸೂಚನೆ
 ಚಾಮರಾಜನಗರ, ಮೇ 28- ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚು ಜನರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುವಂತೆ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶಂಭುದಯಾಳ್ ಮೀನಾ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ವಿವಿಧ ಇಲಾಖೆಗಳ ಯೋಜನೆ ಹಾಗೂ ಬರಪರಿಹಾರ ಕಾಮಗಾರಿಯಡಿ ಕೈಗೊಂಡಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯಕ್ಕೆ ನೆರವಾಗುವ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಜಿಲ್ಲೆಯಲ್ಲಿ ಜಾಬ್ ಕಾರ್ಡ್ ನೋಂದಣಿ ಮಾಡಿಸಿರುವವರ ಸಂಖ್ಯೆಯೂ ಹೆಚ್ಚಿದೆ. ಆದರೆ ಉದ್ಯೋಗಕ್ಕೆ ಮುಂದಾಗಿರುವವರ ಸಂಖ್ಯೆ ಕಡಿಮೆ ಇದೆ. ಉದ್ಯೋಗ ಖಾತರಿ ಯೋಜನೆಯ ಪ್ರಯೋಜನವನ್ನು ಮನವರಿಕೆ ಮಾಡಿಕೊಡುವ ಮೂಲಕ ಹೆಚ್ಚು ಉದ್ಯೋಗವನ್ನು ಸ್ಥಳೀಯವಾಗಿ ಒದಗಿಸುವ ಕೆಲಸ ಅಧಿಕಾರಿಗಳು ಮಾಡಬೇಕೆಂದು ತಿಳಿಸಿದರು.
ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರಗತಿ ಹೆಚ್ಚಳ ಮಾಡಬೇಕಿದೆ. ಇದಕ್ಕಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ಕಾಲಕಾಲಕ್ಕೆ ಪ್ರಗತಿ ಪರಾಮರ್ಶೆ ಮಾಡಬೇಕಿದೆ. ಪ್ರಸಕ್ತ ಸಾಲಿಗೆ ಎಲ್ಲ ಅಗತ್ಯ ರೂಪುರೇಷೆಗಳನ್ನು ತಯಾರಿಸಿ ಹೆಚ್ಚಿನ ಗುರಿ ಸಾಧನೆಗೆ ಕಾರ್ಯೋನ್ಮುಖರಾಗುವಂತೆ ಶಂಭುದಯಾಳ್ ಮೀನಾ ತಿಳಿಸಿದರು.
ಕುಡಿಯುವ ನೀರಿನ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಜನರ ಸಮಸ್ಯೆ ಆಲಿಕೆಗೆ ಸಹಾಯವಾಣಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಕಚೇರಿಗಳಲ್ಲಿ ಜನರ ಅಹವಾಲು ಆಲಿಕೆಗೆ ಸರಿಯಾದ ವ್ಯವಸ್ಥೆ ಮಾಡಬೇಕು, ಕುಂದುಕೊರತೆಗಳ ದಾಖಲು ಕಾರ್ಯವು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಉಸ್ತುವಾರಿ ಕಾರ್ಯದರ್ಶಿ ನಿರ್ದೇಶನ ನೀಡಿದರು.
ಜಿಲ್ಲೆಯ ಮಳೆ, ಬೆಳೆ, ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಉಸ್ತುವಾರಿ ಕಾರ್ಯದರ್ಶಿಗಳು ಉತ್ತಮ ಮಳೆಯಾದಲ್ಲಿ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರವನ್ನು ದಾಸ್ತಾನು ಮಾಡಿಕೊಂಡಿರಬೇಕು. ಕೃಷಿ ಇಲಾಖೆ ಕಾರ್ಯಕ್ರಮ ಯೋಜನೆಗಳು ಸಮರ್ಪಕವಾಗಿ ರೈತರನ್ನು ತಲುಪಲು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಇದೇವೇಳೆ ಮಾತನಾಡಿ ಜಿಲ್ಲಾಧಿಕಾರಿ ಬಿ. ರಾಮು ಅವರು ಜಿಲ್ಲೆಯ ಬರಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳಬೇಕಿರುವ ಕಾಮಗಾರಿ ಹಾಗೂ ಪರಿಸ್ಥಿತಿ ಅಧ್ಯಯನಕ್ಕೆ ಪ್ರತಿ ವಾರ ಸಭೆ ಕರೆಯಲಾಗುತ್ತಿದೆ. ಈ ಸಭೆಯಲ್ಲಿ ಹÉೂೀಬಳಿ, ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳಿಂದ ಆಯಾ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತಿದೆ. ವಿಶೇಷವಾಗಿ ಕುಡಿಯುವ ನೀರು, ಮೇವು ಅಭಾವ ತಲೆದೋರದಂತೆ ವಹಿಸಬೇಕಿರುವ ಕ್ರಮಗಳ ಬಗ್ಗೆ ಸೂಚಿಸಲಾಗುತ್ತಿದೆ ಎಂದರು.
ಕ್ಷೀರಭಾಗ್ಯ, ಗಿರಿಜನರಿಗೆ ಒದಗಿಸಲಾಗುತ್ತಿರುವ ಪೌಷ್ಠಿಕ ಆಹಾರ ಕಾರ್ಯಕ್ರಮಗಳ ಬಗ್ಗೆ ವಿವರ ಪಡೆದ ಉಸ್ತುವಾರಿ ಕಾರ್ಯದರ್ಶಿಗಳು ಮಕ್ಕಳ ಪೌಷ್ಠಿಕತೆ ಆರೋಗ್ಯ ಬಗ್ಗೆ ತಪಾಸಣೆ ನಡೆಸಬೇಕು. ಸೌಲಭ್ಯಗಳನ್ನು ಒದಗಿಸಿದ ಬಳಿಕ ಯಾವ ಪ್ರಮಾಣದಲ್ಲಿ ಮಕ್ಕಳು ಸುಧಾರಿಸಿ ಕೊಂಡಿದ್ದಾರೆ ಎಂಬ ಬಗ್ಗೆ ಮೌಲ್ಯಮಾಪನವಾಗಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಅವರು ಇತ್ತೀಚೆಗೆ ಪರಿಶಿಷ್ಟ ವರ್ಗಗಳೂ ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಪೌಷ್ಠಿಕ ಆಹಾರ ವಿತರಣೆ ಕುರಿತು ಚರ್ಚಿಸಲಾಗಿದೆ. ಮಕ್ಕಳ ಆರೋಗ್ಯ ಸುಧಾರಣೆ ಯಾವ ಮಟ್ಟದಲ್ಲಿ ಉತ್ತಮವಾಗಿದೆ ಎಂಬ ಬಗ್ಗೆ ತಿಳಿದುಕೊಳ್ಳಲು ಆರೋಗ್ಯ ಇಲಾಖೆಯೊಂದಿಗೆ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿರುವ ವಿವಿಧ ವಸತಿ ಯೋಜನೆಗಳನ್ನು ಸಕಾಲಕ್ಕೆ ಪೂರ್ಣಗೊಳಿಸಬೇಕು. ಇನ್ನು ಮನೆ ನಿರ್ಮಾಣ ಕಾರ್ಯ ಆರಂಭಿಸದಿರುವ ಫಲಾನುಭವಿಗಳನ್ನು ಸಂಪರ್ಕಿಸಿ ಅಗತ್ಯ ಮಾರ್ಗದರ್ಶನ ಮಾಡಬೇಕು. ವಸತಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಗಂಭೀರವಾಗಿ ಪ್ರಗತಿ ಪರಿಶೀಲಿಸಬೇಕು ಎಂದು ಶಂಭುದಯಾಳ್ ಮೀನಾ ಸೂಚಿಸಿದರು.
ಮೇವು ಲಭ್ಯತೆ, ಕ್ಷೀರಭಾಗ್ಯ, ಅನ್ನಭಾಗ್ಯ, ಬೆಳೆ ಪರಿಹಾರ, ಸ್ವಚ್ಚ ಭಾರತ್ ಮಿಷನ್, ಪೋಡಿ ಮುಕ್ತ ಅಭಿಯಾನ, ಕೃಷಿ ಅಭಿಯಾನ, ವಿಮೆ ಯೋಜನೆ, ಸೇರಿದಂತೆ ಇತರೆ ಇಲಾಖೆ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.
ಮೇ 30ರಂದು ಶಾಲಾ ಪ್ರಾರಂಭೋತ್ಸವ
 ಚಾಮರಾಜನಗರ, ಮೇ 28:- ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮೇ 30ರಂದು ಶಾಲಾ ಪ್ರಾರಂಭೋತ್ಸವವನ್ನು ವಿಶಿಷ್ಟವಾಗಿ ಹಮ್ಮಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಮತ ತಿಳಿಸಿದ್ದಾರೆ.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ಪ್ರಾರಂಭವಾಗುತ್ತಿದ್ದು ಮೇ 30ರಂದು ಶಾಲೆಗಳ ಎಸ್‍ಡಿಎಂಸಿ ಸದಸ್ಯರು ಗ್ರಾಮಸ್ಥರ ಸಹಕಾರದೊಂದಿಗೆ ಮಕ್ಕಳಿಗೆ ಸ್ವಾಗತ ಕೋರಬೇಕಿದೆ. ಅಂದು ಸಿಹಿ ಊಟದ ವ್ಯವಸ್ಥೆ ಮಾಡುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಹೊಸದಾಗಿ ಶಾಲೆಗೆ ದಾಖಲಾಗುವ ಮಕ್ಕಳನ್ನು ಆಂದೋಲನ ಮೂಲಕ ಪ್ರೇರೇಪಿಸಬೇಕಿದೆ. ಶಾಲಾ ಆರಂಭದಂದು ಎಲ್ಲ ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಬರಮಾಡಿಕೊಳ್ಳಬೇಕೆಂದು ಮಮತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ : ನೀತಿಸಂಹಿತೆ ಕಟ್ಟುನಿಟ್ಟಿನ ಪಾಲನೆಗೆ ಡೀಸಿ ಸೂಚನೆ
 ಚಾಮರಾಜನಗರ, ಮೇ 28 - ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಜಾರಿಯಲ್ಲಿರುವ ನೀತಿಸಂಹಿತೆ ಪಾಲನೆ ಮಾಡುವ ಕಾರ್ಯವನ್ನು ಅತ್ಯಂತ ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
 ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚುನಾವಣಾ ನೀತಿಸಂಹಿತೆ ಸಂಬಂಧ ಕರೆಯಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ನೀತಿಸಂಹಿತೆಯು ಜೂನ್ 15ರವರೆಗೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಮುಖಂಡರು ಚುನಾವಣಾ ಸಂಬಂಧ ಮಾಡುವ ಎಲ್ಲ ಸಭೆಗಳ ಬಗ್ಗೆ ನಿಗಾ ವಹಿಸಬೇಕು. ಮಾದರಿ ನೀತಿಸಂಹಿತೆ ಉಲ್ಲಂಘನೆಯಾಗುತ್ತಿದೆಯೇ ಎಂಬ ಬಗ್ಗೆ ಗಮನ ನೀಡಬೇಕು. ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ವರದಿ ಮಾಡಬೇಕು ಎಂದರು.
 ಅಭ್ಯರ್ಥಿಗಳು ರಾಜಕೀಯ ಪಕ್ಷದವರು ನಡೆಸುವ ಪ್ರಚಾರ ಇನ್ನಿತರ ಎಲ್ಲಾ ಸಭೆಯನ್ನು ಕಡ್ಡಾಯವಾಗಿ ವೀಡಿಯೋ ಚಿತ್ರೀಕರಣ ಮಾಡಬೇಕು. ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ಮತದಾರರನ್ನು ಪ್ರೇರೇಪಿಸುವ ಯಾವುದೇ ಚಟುವಟಿಕೆಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲು ಮಾಡಿ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ನೀತಿಸಂಹಿತೆ ಪಾಲನೆ ಕುರಿತು ನಿಗಾ ವಹಿಸಲು ನೇಮಕವಾಗಿರುವ ಅಧಿಕಾರಿಗಳು ಚುನಾವಣೆ ಪ್ರಕ್ರಿಯೆ ಮುಗಿಯುವ ತನಕ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ವಹಿಸಬೇಕಿರುವ ಜವಾಬ್ದಾರಿಯನ್ನು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಬೇಕು. ಯಾವುದೇ ಸ್ಥಳದಲ್ಲಿ ನೀತಿಸಂಹಿತೆ ಉಲ್ಲಂಘನೆಯಾದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಅಂತರರಾಜ್ಯ ಸಂಪರ್ಕಿಸುವ ಪುಣಜನೂರು, ಪಾಲಾರ್, ಮೂಲೆಹೊಳೆಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಇಲ್ಲಿ 24 ಗಂಟೆಗಳ ಅವಧಿಯಲ್ಲೂ ನಿರಂತರವಾಗಿ ಕಣ್ಗಾವಲು ಇಡಬೇಕು. ಅಕ್ರಮವಾಗಿ ಮದ್ಯ, ಹಣ ಸಾಗಾಣಿಕೆ, ಇನ್ನಿತರ ವಸ್ತುಗಳು ರವಾನೆಯಾಗುತ್ತಿದಲ್ಲಿ ಕೂಡಲೇ ವಶಪಡಿಸಿಕೊಳ್ಳಬೇಕು. ಅಬಕಾರಿ ಸಿಬ್ಬಂದಿಯೊಂದಿಗೆ ಇತರೆ ಇಲಾಖೆ ಅಧಿಕಾರಿಗಳು ಚೆಕ್ ಪೋಸ್ಟ್ ತಂಡಕ್ಕೆ ನೇಮಕವಾಗಿದ್ದಾರೆ. ತಪಾಸಣಾ ಕಾರ್ಯ ಹೇಗೆ ಸಾಗುತ್ತಿದೆ ಎಂಬ ಬಗ್ಗೆ ನೇಮಕವಾಗಿರುವ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ರಾಮು ನಿರ್ದೇಶನ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ, ಜಿಲ್ಲಾಮಟ್ಟದ ಅಧಿಕಾರಿಗಳು, ಪೊಲೀಸ್, ಅಬಕಾರಿ ಇಲಾಖೆ ಅಧಿಕಾರಿ, ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.



ಮೇ 30ರಂದು ಕಂದಾಯ ಸಚಿವರ ಜಿಲ್ಲಾ ಪ್ರವಾಸ
 ಚಾಮರಾಜನಗರ, ಮೇ 28 :- ಕಂದಾಯ ಸಚಿವರಾದ ವಿ. ಶ್ರೀನಿವಾಸ ಪ್ರಸಾದ್ ಅವರು ಮೇ 30ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ ನಗರಕ್ಕೆ ಸಚಿವರು ಆಗಮಿಸುವರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವರೆಂದು ಸಚಿವರ ಆಪ್ರ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.
ಮೇ. 30ರಂದು ಹೊಂಗನೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಮ್ಮುಖದಲ್ಲಿ ಶಾಂತಿಸಭೆ

ಚಾಮರಾಜನಗರ, ಮೇ 28 :- ಹೊಂಗನೂರಿನ ಪ್ರಕರಣ ಹಿನ್ನಲೆಯಲ್ಲಿ ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಹಾಗೂ ಶಾಸಕರಾದ ಎಸ್. ಜಯಣ್ಣ ಅವರ ಸಮ್ಮುಖದಲ್ಲಿ ಶಾಂತಿ ಸಭೆಯು ಮೇ 30 ರಂದು ಬೆಳಿಗ್ಗೆ 11 ಗಂಟೆಗೆ ಹೊಂಗನೂರು ಗ್ರಾಮದ ಆಸ್ಪತ್ರೆ ಆವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮೇ. 31ರಂದು ಕಾನೂನು ಅರಿವು ಕಾರ್ಯಕ್ರಮ
ಚಾಮರಾಜನಗರ, ಮೇ 30 - ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಮೇ 31ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ವಿಶ್ವ ತÀಂಬಾಕು ಸೇವನೆ ವಿರೋಧಿ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸುವರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ. ಭೃಂಗೇಶ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ಪಿ. ನಂದೀಶ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಡಿ. ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಮೇ. 31ರಂದು ರಿಸೆಂಟ್ ಟ್ರೆಂಡ್ಸ್ ಇನ್ ಮ್ಯಾನೇಜ್‍ಮೆಂಟ್ ಕುರಿತ ಕಾರ್ಯಾಗಾರ
ಚಾಮರಾಜನಗರ, ಮೇ 30- ಎಂಬಿಎ ವಿಭಾಗದ ವಿದ್ಯಾರ್ಥಿಗಳಿಗಾಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್‍ನಲ್ಲಿ ಮೇ 31ರಂದು ಬೆಳಿಗ್ಗೆ 10.30 ಗಂಟೆಗೆ ರಿಸೆಂಟ್ ಟ್ರೆಂಡ್ಸ್ ಇನ್ ಮ್ಯಾನೇಜ್‍ಮೆಂಟ್ ಕುರಿತು ಕಾರ್ಯಗಾರವನ್ನು ಆಯೋಜಿಸಲಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದ ಎಂಬಿಎ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎಸ್.ಜೆ. ಮಂಜುನಾಥ್, ಪ್ರೊ. ಡಿ. ಆನಂದ್, ಸಹಾಯಕ ಪ್ರಾಧ್ಯಾಪಕರಾದ ಡಾ. ಆರ್. ಮಹೇಶ್, ಡಾ. ಎಂ. ಅಮೂಲ್ಯ ಮತ್ತು ಭಾರತೀಯ ಜೀವ ವಿಮಾ ನಿಗಮದ ಹೈಯರ್ ಗ್ರೇಡ್ ಅಸಿಸ್ಟೆಂಟ್ ಜೆ. ಸುರೇಶ್ ಕಾರ್ಯಗಾರದಲ್ಲಿ ಭಾಗವಹಿಸುವರು ಎಂದು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಶಿವಬಸವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ. 8ರಿಂದ ಚಾಮರಾಜೇಶ್ವರಸ್ವಾಮಿ ಗಿರಿಜಾಕಲ್ಯಾಣ ಮಹೋತ್ಸವ
ಚಾಮರಾಜನಗರ, ಮೇ 30 - ಇತಿಹಾಸ ಪ್ರಸಿದ್ಧ ನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ಚಾಮರಾಜೇಶ್ವರ ಸ್ವಾಮಿ ಅವರ ಗಿರಿಜಾಕಲ್ಯಾಣ ಮಹೋತ್ಸವವು ಜೂನ್ 8 ರಿಂದ 13ರವರೆಗೆ ಶ್ರದ್ಧಾಭಕ್ತಿಯಿಂದ ಜರುಗಲಿದೆ.
ಜೂನ್ 8ರಂದು ಸಂಜೆ 6 ಗಂಟೆಗೆ ಎಣ್ಣೆ ಅರಿಶಿನ ನಂತರ 8 ಗಂಟೆಗೆ ವರಪೂಜಾ ಮಹೋತ್ಸವ, ಜೂನ್ 9ರಂದು ಬೆಳಿಗ್ಗೆ 10ಗಂಟೆಗೆ ಅಂಕುರಾರ್ಪಣಪೂರ್ವಕ ಕನ್ನಡಿ ಕಳಸ ತರಲಾಗುತ್ತದೆ. 4 ಗಂಟೆಗೆ ನಾಂದಿ ನಡೆದು, ಗ್ರಹಯಜ್ಞ ಪ್ರಾರಂಭವಾಗಿ, 5 ಗಂಟೆಗೆ ಕಾಶೀಯಾತ್ರೆ ಮಹೋತ್ಸವ, ರಾತ್ರಿ 7.45 ರಿಂದ 9 ಗಂಟೆಯವರೆಗೆ ಸಲ್ಲುವ ಧನುರ್ ಲಗ್ನದಲ್ಲಿ ಅಕ್ಷತಾರೋಹಣ, ಧಾರಾಮಹೋತ್ಸವ, ಪ್ರಧಾನ ಹೋಮ, ಮಂಗಳಾರತಿ ನೆರವೇರಲಿದೆ.
ಜೂನ್ 10ರಂದು ಬೆಳಿಗ್ಗೆ 10 ಗಂಟೆಗೆ ಔಪಾಸನೆ ಉರುಟಣೆ ಉಯ್ಯಾಲೋತ್ಸವ, ರಾತ್ರಿ 8 ಗಂಟೆಗೆ ಔಪಾಸನ ಉಯ್ಯಾಲೋತ್ಸವ, ಜೂನ್ 11ರಂದು ಬೆಳಿಗ್ಗೆ 10 ಗಂಟೆಗೆ ಔಪಾಸನೆ ಉರುಟಣೆ ಉಯ್ಯಾಲೋತ್ಸವ, ರಾತ್ರಿ 8 ಗಂಟೆಗೆ ಔಪಾಸನಾ ಪಾಕಿನಿ ಮಹೋತ್ಸವ ನಡೆಯಲಿದೆ.
ಜೂನ್ 12ರಂದು ಬೆಳಿಗ್ಗೆ 10 ಗಂಟೆಗೆ ಔಪಾಸನೆ ಉರುಟಣೆ ಉಯ್ಯಾಲೋತ್ಸವ, ರಾತ್ರಿ 8 ಗಂಟೆಗೆ ಔಪಾಸನೆ ಶೇಷ ಹೋಮ ನಾಕಬಲಿ, ಹೊಳಲು ಸುತ್ತುವುದು, ಗಜಾರೋಹಣ ಪೂರ್ವಕ ಗೃಹಪ್ರವೇಶ ಮಹೋತ್ಸವ ಜರುಗಲಿದೆ.
ಜೂನ್ 13ರಂದು ಬೆಳ್ಳಿಗ್ಗೆ 10 ಗಂಟೆಗೆ ದೇವತಾ ಉದ್ವಾಸನೆ, ವಿವಾಹದೀಕ್ಷಾ ವಿಸರ್ಜನೆ, ಸ್ಥಂಭ ಪೂಜಾ, ರಾತ್ರಿ 7 ಗಂಟೆಗೆ ಪುಷ್ಪಾಂದೋಳಿಕೋತ್ಸವ ಶಯನೋತ್ಸವವು ನಡೆಯಲಿದೆ.
ಗಿರಿಜಾ ಕಲ್ಯಾಣ ಮಹೋತ್ಸವ ಅಂಗವಾಗಿ ಪ್ರತಿದಿನ ಸಂಜೆ ಸಂಗೀತ, ಹರಿಕಥೆ ಇನ್ನಿತರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು, ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ, ತಹಸಿಲ್ದಾರ್ ಎಸ್.ಎಂ. ಮಹದೇವು ಹಾಗೂ ಚಾಮರಾಜೇಶ್ವರ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಮಂಜೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಂಗನೂರು: ಶಾಂತಿ ನೆಲೆಸಲು ಸಹಕರಿಸಿ-ಸಚಿವರಾದ ಎಚ್.ಎಸ್. ಮಹದೇವಪ್ರಸಾದ್
ಚಾಮರಾಜನಗರ, ಮೇ. 30 - ಹೊಂಗನೂರಿನಲ್ಲಿ ನಡೆದಿರುವ ಕಹಿ ಘಟನೆಯನ್ನು ಮರೆತು ಗ್ರಾಮವನ್ನು ಸಹಜ ಸ್ಥಿತಿಗೆ ತರುವ ಪ್ರಕ್ರಿಯೆಗೆ ಸರ್ವರು ಸಹಕರಿಸಿ ಶಾಂತಿ ನೆಲೆಸಲು ಕೈಜೋಡಿಸಬೇಕೆಂದು ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಮನವಿ ಮಾಡಿದರು.
ತಾಲೂಕಿನ ಹೊಂಗನೂರಿನಲ್ಲಿ ಕಳೆದ ತಿಂಗಳು ನಡೆದ ಪ್ರಕರಣದ ಹಿನ್ನಲೆಯಲ್ಲಿ ಗ್ರಾಮದ ಅಸ್ಪತ್ರೆ ಅವರಣದಲ್ಲಿ ನಡೆದ ಶಾಂತಿ ಸಭೆಯನ್ನುದ್ದೇಶಿಸಿ ಸಚಿವರು ಮಾತನಾಡಿದರು.
ವಿಶ್ವ ಗೌರವಕ್ಕೆ ಪಾತ್ರರಾಗಿರುವ ಅಂಬೇಡ್ಕರ್ ಅವರ ಹಾದಿಯಲ್ಲಿ ಎಲ್ಲ ಸಮುದಾಯ, ಜನಪ್ರತಿನಿಧಿಗಳು, ಸಂಸ್ಥೆಗಳು ಮುನ್ನಡೆಯಬೇಕಿದೆ. ಮಹಾ ಮಾನವತಾವಾದಿಯಾದ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡುವಂತಹ ಘಟನೆಗಳು ಮರುಕಳಿಸಬಾರದು. ಗ್ರಾಮದಲ್ಲಿ ನಡೆದ ಅಪಮಾನ ಘಟನೆ ಮತ್ತು ಬಳಿಕ ನಡೆದಿರುವ ಗಲಭೆ, ಇತರೆ ಪ್ರಕರಣ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ತನಿಖೆ ಮುಕ್ತವಾಗಿ ನಡೆಯುತ್ತಿದೆ. ಯಾವುದೇ ಒತ್ತಡ ಹೇರಲಾಗಿಲ್ಲ ಎಂದರು.
ಗ್ರಾಮದಲ್ಲಿ ಪ್ರಕರಣ ನಡೆದ ನಂತರ ಸಹಜ ಸ್ಥಿತಿಗೆ ತರುವ ಕೆಲಸ ಮುಖ್ಯವಾಗಿದೆ. ಕುಟುಂಬದ ಅರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ತಾಳ್ಮೆ, ಸಹನೆ, ಪರಸ್ಪರ ಸೌಹಾರ್ದತೆ ಇದ್ದಾಗ ಶಾಂತಿ ನೆಲೆಗೊಳ್ಳುತ್ತದೆ. ಹೀಗಾಗಿ ಎಲ್ಲರೂ ಗ್ರಾಮದ ಶಾಂತಿಗೆ ಪೂರಕವಾಗಿ ಕೆಲಸ ಮಾಡೋಣವೆಂದರು.
ಇದೇ ಸಂದರ್ಭದಲ್ಲಿ ಪ್ರಕರಣವನ್ನು ಬೇರೊಂದು ತನಿಖಾ ಸಂಸ್ಥೆಗೆ ವಹಿಸಬೇಕೆಂಬ ವಿವಿಧ ಮುಖಂಡರ ಮನವಿಗೆ ಪ್ರತಿಕ್ರಿಯಿಸಿದ ಸಚಿವರು ಸಭೆಯಲ್ಲಿ ವ್ಯಕ್ತವಾದ ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಯವರು ಹಾಗೂ ಗೃಹ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಗಲಭೆ ಪ್ರಕರಣದಲ್ಲಿ ಆಸ್ತಿ-ಪಾಸ್ತಿ ಹಾನಿಯಾದ 97 ಜನರಿಗೆ ಪರಿಹಾರ ಹಣ ಮಂಜೂರಾಗಿದೆ. ಈ ಪರಿಹಾರ ಹಣವನ್ನು ಶೀಘ್ರದಲ್ಲೇ ಅಧಿಕಾರಿಗಳು ವಿತರಿಸಲಿದ್ದಾರೆ. ಸಂತ್ರಸ್ತ ಜನರಿಗೆ ಆತ್ಮಸ್ಥೈರ್ಯ ತುಂಬುವ ದಿಸೆಯಲ್ಲಿ ಎಲ್ಲರೂ ಮುಂದಾಗಬೇಕಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮಾತನಾಡಿ ಅಂಬೇಡ್ಕರ್ ಅವರ ಭಾವಚಿತಕ್ಕೆ ಅಪಮಾನ ಮಾಡಿದಂತಹ ಪ್ರಕರಣಗಳು ಮರುಕಳಿಸಬಾರದು. ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಮುಂದುವರೆದಿರುವ ತನಿಖೆಯಲ್ಲಿ ಯಾರು ಸಹ ಹಸ್ತಕ್ಷೇಪ ಮಾಡಿಲ್ಲ. ಇಲ್ಲಿ ಆತ್ಮಸಾಕ್ಷಿ ಮುಖ್ಯವಾಗಲಿದೆ. ಯಾವುದೇ ತನಿಖೆ ನಡೆದರೂ ತಮ್ಮ ಅಭ್ಯಂತರವಿಲ್ಲ. ತಪ್ಪಿತಸ್ಥರಿಗೆ ಪ್ರೋತ್ಸಾಹ ನೀಡುವುದಿಲ್ಲ ಎಂದರು.
ಶಾಸಕರಾದ ಎಸ್. ಜಯಣ್ಣ ಮಾತನಾಡಿ ಗ್ರಾಮದ ಜನತೆಯಲ್ಲಿ ಮನೆ ಮಾಡಿರುವ ಅಪನಂಬಿಕೆ ಹೋಗಲಾಡಿಸಬೇಕಿದೆ. ನ್ಯಾಯ ಒದಗಿಸುವ ದಿಸೆಯಲ್ಲಿ ಮುಕ್ತವಾಗಿದ್ದೇವೆ. ಶಾಂತಿ ನೆಲೆಸುವುದು ಮೊದಲ ಆದ್ಯತೆಯಾಗಿದೆ. ಊರಿನ ಶಾಂತಿಗೆ ಭಂಗ ಬಾರದಿರಲು ಎಲ್ಲರೂ ಸಹಕರಿಸಬೇಕು ಎಂದರು.
ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಮಾಜಿ ಜಿ.ಪಂ. ಸದಸ್ಯರಾದ ಲಕ್ಷ್ಮೀಪುಟ್ಟಸ್ವಾಮಿ, ಮುಖಂಡರಾದ ಎನ್. ಮಹೇಶ್, ಸಿ.ಎಂ. ಕೃಷ್ಣಮೂರ್ತಿ, ಚಂದ್ರು, ರಾಮು, ಪುಟ್ಟಸ್ವಾಮಿ, ಆರ್.ಪಿ. ನಂಜುಂಡಸ್ವಾಮಿ, ಚಿತ್ರದುರ್ಗದ ಛಲವಾದಿ ಗುರುಪೀಠದ ಸ್ವಾಮಿಜೀ, ಇತರರು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಮಚಂದ್ರ, ಸದಸ್ಯರಾದ ಕೆ.ಪಿ. ಸದಾಶಿವಮೂರ್ತಿ, ಯೋಗೇಶ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪಕುಮಾರ್ ಆರ್. ಜೈನ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವಕುಮಾರ್, ಪುಟ್ಟಬುದ್ಧಿ, ಮಾಜಿ ನಗರಸಭೆ ಅಧ್ಯಕ್ಷರಾದ ನಂಜುಂಡಸ್ವಾಮಿ ಇತರರು ಸಭೆಯಲ್ಲಿ ಹಾಜರಿದ್ದರು.
 



ಜೂನ್ 1 ರಿಂದ 7ರವರೆಗೆ ಡಿಇಡಿ, ಪಿಪಿಟಿ ಪರೀಕ್ಷಾ ಸಂಬಂಧ ನಿಷೇದಾಜ್ಞೆ
ಚಾಮರಾಜನಗರ, ಮೇ 31 :- ನಗರದ ಕೋರ್ಟ್ ರಸ್ತೆಯಲ್ಲಿರುವ ಶ್ರೀ ರಾಮಚಂದ್ರ ಡಿ.ಇಡಿ ಕಾಲೇಜಿನಲ್ಲಿ ಜೂನ್ 1 ರಿಂದ 7ರವರೆಗೆ ಪ್ರಥಮ, ದ್ವಿತೀಯ ಡಿ.ಇಡಿ ಮತ್ತು ಪಿಪಿಟಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕಾರ್ಯ ನ್ಯಾಯೋಚಿತವಾಗಿ ಹಾಗೂ ಅಕ್ರಮಗಳು ನಡೆಯದಂತೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಸಂಬಂಧ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕ ನಿಷೇಧಿತ ಸ್ಥಳವೆಂದು ಘೋಷಿಸಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ದಿನಗಳಂದು 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 9 ರಿಂದ ಸಂಜೆ 5.30ರವರೆಗೆ ಮುಚ್ಚಲು ಆದೇಶಿಸಿದೆ.
ಈ ನಿಷೇದಾಜ್ಞೆಯು ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ವರ್ಗದವರಿಗೆ ಮತ್ತು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ವಿಶ್ವ ತಂಬಾಕು ರಹಿತ ದಿನ : ಜಿಲ್ಲಾಮಟ್ಟದ ಜಾಗೃತಿ ಜಾಥಾಗೆ ಚಾಲನೆ
ಚಾಮರಾಜನಗರ, ಮೇ 31 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕಗಳ ಸಹಯೋಗದೊಂದಿಗೆ ತಾಲೂಕಿನ ಸಂತೇಮರಹಳ್ಳಿಯಲ್ಲಿಂದು ಜಿಲ್ಲಾಮಟ್ಟದ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹೇಮಾ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ. ಹೇಮಾ ಅವರು ಪ್ರತಿವರ್ಷದಂತೆ ಈ ಬಾರಿಯು ಸಹ ಮೇ. 31ನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತಿದೆ. 2003ರ ಕೋಟ್ಪಾ ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡಗಳ ಮೂಲಕ ಮೇ. 20 ರಿಂದ 25ರವರೆಗೆ ನಾಗರಿಕರಲ್ಲಿ ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಗಿದೆ ಎಂದರು.
ಬೀಡಿ, ಸಿಗರೇಟ್, ಸಿಗ್ಯಾರ್‍ಗಳಲ್ಲಿ 7000 ರಾಸಾಯನಿಕಗಳಿದ್ದು, 69ರಷ್ಟು ಕ್ಯಾನ್ಸರ್‍ಕಾರಕ ವಸ್ತುಗಳಿವೆ. ಧೂಮಪಾನರಹಿತ ಜಗಿಯುವ ತಂಬಾಕಿನಲ್ಲಿ 3095 ರಸಾಯನಿಕಗಳಿದ್ದು, 28ರಷ್ಟು ಕ್ಯಾನ್ಸರ್‍ಕಾರಕಗಳಿವೆ. ತಂಬಾಕಿನಲ್ಲಿ ತಂಬಾಕು ಸೇವನೆಯಿಂದ ವಿಶ್ವದಲ್ಲಿ ಪ್ರತಿವರ್ಷ 60 ಲಕ್ಷ ಜನರು ಹಾಗೂ ಭಾರತದಲ್ಲಿ 10 ಲಕ್ಷ ಜನ ಮರಣ ಹೊಂದುತ್ತಿದ್ದಾರೆ. ದೇಶದಲ್ಲಿ ಪ್ರತಿದಿನ 2200 ಕ್ಕಿಂತ ಹೆಚ್ಚು ಮಂದಿ ತಂಬಾಕು ಸಂಬಂಧಿತ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ತಂಬಾಕು ಸೇವನೆಯನ್ನು ಜನರು ತ್ಯಜಿಸಿ ಪ್ರಜ್ಞಾವಂತ ನಾಗರಿಕರಾಗುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಮಾ ತಿಳಿಸಿದರು.
ಜಿಲ್ಲಾ ಸರ್ವೇಲೆನ್ಸ್ ಹಾಗೂ ಜಿಲ್ಲಾ ತಂಬಾಕು ನೋಡೆಲ್ ಅಧಿಕಾರಿ ಡಾ. ನಾಗರಾಜು, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಅನಿಲ್‍ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ವೈ. ನಂದ, ತಾಲೂಕು ಆರೊಗ್ಯಾಧಿಕಾರಿ ಡಾ. ಶ್ರೀನಿವಾಸ್, ಪ್ರಭಾರ ಉಪ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿನಾಯಕ್, ಕಿರಿಯ ಪುರುಷ ಆರೋಗ್ಯ ಸಹಾಯಕ ಸಂಪಿಗಯ್ಯ ಹಾಗೂ ಇನ್ನಿತರರು ಹಾಜರಿದ್ದರು.
ವಿಶ್ವ ತಂಬಾಕು ರಹಿತ ದಿನದ ಆಂಗವಾಗಿ ಆಯೋಜಿಸಲಾಗಿದ್ದ ಜಾಥಾ ಸಮುದಾಯ ಆರೋಗ್ಯ ಕೇಂದ್ರದಿಂದ ಹೊರಟು ಸಂತೇಮರಹಳ್ಳಿಯ ವೃತ್ತದ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆಯ ಸಂತೆ ಮೈದಾನದಲ್ಲಿ ಸಂಚರಿಸಿತು.
ಕಾರ್ಯಕ್ರಮದ ಪ್ರಯುಕ್ತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅವರಣದಲ್ಲಿ ತಂಬಾಕು ಉತ್ಪನ್ನಗಳ ವಸ್ತುಪ್ರದರ್ಶನ ಏರ್ಪಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.  

ಡಿಪ್ಲೊಮಾ ಇನ್ ಟೂಲ್ ಡೈಮೇಕಿಂಗ್ ಕೋರ್ಸಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 01 - ಗುಂಡ್ಲುಪೇಟೆಯ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್ ಕೋರ್ಸು ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ಕೇಂದ್ರದಲ್ಲಿ ಅರ್ಜಿಗಳನ್ನು ಈಗಾಗಲೇ ವಿತರಿಸಲಾಗುತ್ತಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಜೂನ್ 7 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಗುಂಡ್ಲುಪೇಟೆ ಪಟ್ಟಣದ ಹೊಸೂರು ರಸ್ತೆಯಲ್ಲಿರುವ ದುಂದಾಸನಪುರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರನ್ನು (08229-222344, ಮೊಬೈಲ್ 9880800692) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದÉ.

ಜೂನ್4ರಂದು ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಸ್ಫಧರ್É
ಚಾಮರಾಜನಗರ, ಜೂ. 01:- ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ  ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಫ್ರೌಡಶಾಲಾ ಮಕ್ಕಳಿಗಾಗಿ  ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಯನ್ನು  ಜೂನ್4ರಂದು  ಬೆಳಿಗ್ಗೆ 10 ಗಂಟೆಗೆ  ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ (ಡಾ|| ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ)  ಏರ್ಪಡಿಸಲಾಗಿದೆ.
 ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ  ಡ್ರಾಯಿಂಗ್ ಶೀಟ್ ನೀಡಲಾಗುತ್ತದೆ.  ಉಳಿದ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳೆ ತರಬೇಕು.  ಭಾಗವಹಿಸಲು   ಆಸಕ್ತಿ ಉಳ್ಳವರು  ಸ್ಥಳದಲ್ಲಿಯೇ  ತಮ್ಮ ಹೆಸರು ನೊಂದಾಯಿಸಿ ಕೊಳ್ಳಬಹುದು ಹೆಚ್ಚನ ವಿವರಗಳಿಗೆ ಜಿಲ್ಲಾ ಉಪ ಪರಿಸರ ಅಧಿಕಾರಿ ಪಿ.ಕೆ ಉಮಾಶಂಕರ್ (ಮೊ:9448160267 ಕಚೇರಿ ದೂ. ಸಂ 08226-223846) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಲೋಕ ಸಭಾ ಸದಸ್ಯರಾದ ಆರ್. ದ್ರುವನಾರಾಯಣ ಪ್ರವಾಸ.
ಚಾಮರಾಜನಗರ, ಜೂ. 01 - ಲೋಕಸಭಾ ಸದಸ್ಯರಾದ ಆರ್. ದ್ರುವನಾರಾಯಣ ಅವರು ಕೇಂದ್ರ ಪರಿಶಿಷ್ಟ ಜಾತಿ ಮತ್ತು  ಪರಿಶಿಷ್ಟ ವರ್ಗಗಳ  ಕಲ್ಯಾಣ ಸಂಸದೀಯ ಸಮಿತಿ ತಂಡದೊಂದಿಗೆ ಜೂನ್4ರಿಂದ 9ರವರೆಗೆ  ಲೆಹ್, ಜಮ್ಮು ಮತ್ತು ದÀರ್ಮಶಾಲಾ ಸ್ಥಳಗಳಿಗೆ ಪರಿವೀಕ್ಷಣೆಗಾಗಿ ಪ್ರವಾಸ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಬ್ಯಾಂಕುಗಳು, ವಿಮಾ ಕಂಪನಿಗಳಿಗೆ ಬೇಟಿ   ನೀಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ  ಕಲ್ಯಾಣ ಸಂಘದ ಪದಾಧಿಕಾರಿಗಳೊಂದಿಗೆ  ಸಮಾಲೋಚನೆ ನಡೆಸಲಾಗುತ್ತದೆ. ವಿಜ್ಞಾನಿಗಳನ್ನೊಳಗೊಂಡಂತೆ  ಡಿ.ಆರ್.ಡಿ.ಒ ನಿದೇರ್ಶಕರು ಹಾಗೂ ಅಧಿಕಾರಗಳೊಂದಿಗೆ ಚರ್ಚೆ ನಡೆಸುವರು. ಭಾರತ ಆಹಾರ ನಿಗಮದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ನೌಕರರ ಕುಂದುಕೊರತೆಗಳ ಬಗ್ಗೆ ಸಮಲೋಚಿಸುವವರು ಎಂದು  ಪ್ರಕಟಣೆ ತಿಳಿಸಿದೆ.
ಅಲ್ಪ ಸಂಖ್ಯಾತರ ಅಬಿವೃದ್ದಿ ನಿಗಮದಿಂದ  ಸಾಲ ಸೌಲಭ್ಯ : ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 01- ಜಿಲ್ಲೆಯ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮವು    ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸಾ¯ ಸೌಲಭ್ಯ ಒದಗಿಸಲಿದ್ದು, ಅಲ್ಪ ಸಂಖ್ಯಾತರ ಅಭ್ಯರ್ಥಿಗಳಿಂದ  ಅರ್ಜಿ ಆಹ್ವಾನಿಸಿದೆ
 ಸ್ವಾವಲಂಬನಾ, ಅರಿವು (ವಿದ್ಯಾಬ್ಯಾಸ ಸಾಲ) ಯೋಜನೆ, ಶ್ರಮಶಕ್ತಿ, ಕಿರು(ಮೈಕ್ರೋ) ಸಾಲ ಮತ್ತು ಸಹಾಯಧ£,À ಗಂಗಾ ಕಲ್ಯಾಣ, ಭೂಖರೀದಿ ಯೋಜನೆ, ಕ್ರಿಶ್ಚಿಯನ್  ಅಭಿವೃದ್ದಿ (ಅರಿವು, ಶ್ರಮ ಶಕ್ತಿ, ಮೈಕ್ರೋ ಸಾಲ ಸಹಾಯಧನ, ಗೃಹ ಸಾಲದ ಮೇಲಿನ ಬಡ್ಡಿ ಸಹಾಯಧನ) ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅಲ್ಪ ಸಂಖ್ಯಾತ ಜನಾಗಂಕ್ಕೆ ಸೇರಿದ ಮುಸ್ಲಿಂ, ಕ್ರೈಸ್ತ, ಜೈನ, ಭೌದ್ದ, ಸಿಖ್ಖ್, ಪಾರ್ಸಿ ಸಮುದಾಯದ ಅಭ್ಯರ್ಥಿಗಳು ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು
ಅಭ್ಯರ್ಥಿಗಳು 18 ರಿಂದ 55ರ ವಯೋಮಿತಿಯೊಳಗಿರÀಬೇಕು, ಕುಟುಂಬದ ವಾರ್ಷಿಕ ಆದಾಯ  ಗ್ರಾಮಾಂತರ ಪ್ರದÉೀ±ದವರಾಗಿದ್ದಲ್ಲಿ 81000ರೂ, ನಗರ ಪ್ರಧೇಶದವರಾಗಿದ್ದಲ್ಲಿ 103000ರೂ  ಮೀರಿರಬಾರದು. ಅರಿವು ಯೋಜನೆಗೆ  600000ರೂ ಮೀರಿರಬಾರದು.
ಅರ್ಜಿಯನ್ನು  ನಿಗಮದ ವೆಬ್‍ಸೈಟ್ ತಿತಿತಿ.ಞmಜಛಿ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ  ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು  ಜಾತಿ, ಆದಾಯ  ಪ್ರಮಾಣ ಪತ್ರ, ಆಧಾರ್, ಬ್ಯಾಂಕ್ ಖಾತೆ ಪುಸ್ತಕ, ಪಡಿತರ ಚೀಟಿ ಪ್ರತಿಯೊಂದಿಗೆ  ಜೂನ್ 30ರೊಳಗೆ ನಗರದ ಜಿಲ್ಲಾ ಆಢಳಿತ ಭವನದಲ್ಲಿ ಇರುವ ಕರ್ನಾಟಕ ಅಲ್ಪ ಸಂಖ್ಯಾಂತರ  ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರ  ಕಚೇರಿಗೆ  ಸಲ್ಲಿಸಬೇಕು.  ಸಂಪೂರ್ಣ ವಿವರಗಳಿಗೆ ಕರ್ನಾಟಕ ಅಲ್ಪ ಸಂಖ್ಯಾಂತರ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರ  ಕಚೇರಿ( ದೂ ಸಂ.08226-222332) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.










Tuesday, 24 May 2016

ಪೊಲೀಸ್ ಪ್ರತಿಭಟನೆ : ಪ್ರತಿಭಟವನೆಗೆ ಅವಕಾಶವಿಲ್ಲ, ಪ್ರತಿಭಟಿಸಿದರೆ ಮೇಲಾಧಿಕಾರಿಗಳ ಆದೇಶದಂತೆ ಕ್ರಮ: ಐ.ಜಿ.ಪಿ (24-05-2016 to 25-05-2016 )ಚಾಮರಾಜನಗರ ಪ್ರಮುಖ ಸುದ್ದಿಗಳು






ಪೊಲೀಸ್ ಪ್ರತಿಭಟನೆ : ಪ್ರತಿಭಟವನೆಗೆ ಅವಕಾಶವಿಲ್ಲ, ಪ್ರತಿಭಟಿಸಿದರೆ ಮೇಲಾಧಿಕಾರಿಗಳ ಆದೇಶದಂತೆ ಕ್ರಮ: ಐ.ಜಿ.ಪಿ
   ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ:  ಅಖಿಲ ಕರ್ನಾಟಕ ರಾಜ್ಯ ಪೊಲೀಸ್ ಮಹಾ ಸಂಘದ ಅದ್ಯಕ್ಷ ವಿ.ಶಶಿದರ್ ಅವರು ಮುಂದಿನ ತಿಂಗಳು  4 ರಂದು ಪೊಲೀಸ್ ಪ್ರತಿಭಟನೆಯ ಕುರಿತಾಗಿ ಗೃಹ ಸಚಿವರಿಗೆ ನೀಡಿರುವ ಮನವಿ ಹಿನ್ನಲೆಯಲ್ಲಿ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಬಿಜಯ್ ಕುಮಾರ್ ಸಿಂಗ್ ಚಾಮರಾಜನಗರ ನ್ಯೂಸ್ 24*7 ಗೆ ಪ್ರತಿಕ್ರಿಸಿದ್ದಾರೆ.
ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಕಿರುಕುಳದ ಮಾನಸಿಕ ರಜೆಗೆ ಬಗ್ಗೆ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಬಿಜಯ್ ಕುಮಾರ್ ಸಿಂಗ್ ಅವರು ಹೇಳಿರುವಂತೆ ಇಲಾಖೆಯಲ್ಲಿ ಸಂಘ ಮಾಡಿಕೊಳ್ಳಲು ಅವಕಾಶವಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಪ್ರತಿಭಟಿಸಲು ಹಕ್ಕು ಇಲ್ಲವೇ ಇಲ್ಲ ಎಂದಿದ್ದಾರೆ.
ಇನ್ನು ದಿನಗಳು ಬಾಕಿ ಇದೆ. ಪ್ರತಿಭಟನೆಗೆ ಹಾಲಿ ಕಾರ್ಯನಿರ್ವಹಿಸುತ್ತಿರುವ ಅದ್ಯಕ್ಷ ಎಂಬುವವರು ಇಲಾಖೆಯಲ್ಲಿ ಇಲ್ಲವೇ ಇಲ್ಲ ಹೀಗಿರುವಾಗ ಪ್ರತಿಭಟಿಸುವ ಪ್ರಶ್ನೆಯೇ ಇಲ್ಲ. ಅಂತಹ ಸನ್ನಿವೇಶ ಬಂದರೆ ಮೇಲಾದಿಕಾರಿಗಳ ಆದೇಶದಂತೆ ಕ್ರಮ ವಹಿಸಲಾಗುವುದು ಎಂದಿದ್ದಾರೆ.
*************************************




ಜಿ.ಪಂ. ನೂತನ ಸಿ.ಇ.ಒ ಹೆಪ್ಸಿಬಾರಾಣಿ ಕೊರ್ಲಪಟಿ ಅಧಿಕಾರ ಸ್ವೀಕಾರ
ಚಾಮರಾಜನಗರ, ಮೇ. 23 -ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಹೆಪ್ಸಿಬಾರಾಣಿ ಕೊರ್ಲಪಟಿ ಅವರು ಇಂದು ಅಧಿಕಾರ ಸ್ವೀಕರಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಬಿ. ರಾಮು ಅವರಿಂದ ಅಧಿಕಾರ ಸ್ವೀಕರಿಸಿದ ಹೆಪ್ಸಿಬಾರಾಣಿ ಕೊರ್ಲಪಟಿ ಅವರು ಈ ಮೊದಲು ಮಂಗಳೂರು ನಗರಪಾಲಿಕೆ ಆಯುಕ್ತರಾಗಿದ್ದು, ನಂತರ ವಿಜಯಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿಯಾಗಿಯು ಕಾರ್ಯನಿರ್ವಹಿಸಿದ್ದರು.
ಈ ಹಿಂದೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಡಾ. ಕೆ.ಎಚ್. ನರಸಿಂಹಮೂರ್ತಿ ಅವರು ಕಳೆದ ಏಪ್ರಿಲ್ 30ರಂದು ವಯೋನಿವೃತ್ತಿ ಹೊಂದಿದ್ದರಿಂದ ಜಿಲ್ಲಾಧಿಕಾರಿ ಬಿ. ರಾಮು ಅವರು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪ್ರಭಾರ ವಹಿಸಿಕೊಂಡಿದ್ದು, ಇಂದು ನೂತನ ಸಿ.ಇ.ಒ ಹೆಪ್ಸಿಬಾರಾಣಿ ಕೊರ್ಲಪಟಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.  
ನಂತರ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಪರಿಚಯಿಸಿ ಮಾತನಾಡಿದ ಜಿಲ್ಲಾಧಿಕಾರಿ ರಾಮು ಅವರು ಪ್ರತಿವರ್ಷದಂತೆ ಈ ಬಾರಿಯು ಸಹ ಸರ್ಕಾರದ ಸೌಲಭ್ಯ, ಸವಲತ್ತುಗಳನ್ನು ಜನರಿಗೆ ತಲುಪಿಸಲು ಹಾಗೂ ಫಲಾನುಭವಿಗಳನ್ನು ಆಯ್ಕೆ ಮಾಡಲು ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು ಎಂದರು.
ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಗಳ ಕಾರ್ಯಕ್ರಮಗಳಲ್ಲಿ ಈಗಾಗಲೇ ಶೇ. 90ರಷ್ಟು ಪ್ರಗತಿ ಸಾಧಿಸಲಾಗಿದೆ. ಕಾರ್ಯಕ್ರಮ ಅನುಷ್ಠಾನಗೊಳಿಸಲು ನಿಗದಿಪಡಿಸುವ ಅರ್ಥಿಕ ಮತ್ತು ಬೌತಿಕ ಗುರಿಯನ್ನು ಸಕಾಲದಲ್ಲಿ ಮುಟ್ಟಲು ಸಂಬಂದಪಟ್ಟ ಇಲಾಖೆಗಳು ಜಿಲ್ಲಾ ಪಂಚಾಯಿತಿಗೆ ಪೂರ್ಣಪ್ರಮಾಣದ ಸಹಕಾರ ನೀಡಬೇಕು ಎಂದು ರಾಮು ಅವರು ಸಲಹೆ ಮಾಡಿದರು.
ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಟಿ ಅವರು ಮಾತನಾಡಿ ಕಾರ್ಯಕ್ರಮಗಳ ಅನುಷ್ಟಾನಕ್ಕಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕುಮಟ್ಟದ ಎಲ್ಲಾ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಹಾಜರಿದ್ದರು.

 ****************************************
ವಿಧಾನಪರಿಷತ್ ಚುನಾವಣೆ : ಇಂದು 11 ನಾಮಪತ್ರ ಸಲ್ಲಿಕೆ
ಚಾಮರಾಜನಗರ, ಮೇ. 23 :- ಕರ್ನಾಟಕ ವಿಧಾನ ಪರಿಷತ್ತಿಗೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಇಂದು 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್, ಜಾತ್ಯಾತೀತ ಜನತಾದಳ ಪಕ್ಷದಿಂದ ಕೆ.ಟಿ. ಶ್ರೀಕಂಠೇಗೌಡ, ಸಮಾಜವಾದಿ ಪಕ್ಷದಿಂದ ಕೆ.ಪಿ. ಚಿದಾನಂದ, ಕರುನಾಡು ಪಾರ್ಟಿಯಿಂದ ಹೆಚ್.ಕೆ. ಕೃಷ್ಣ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಆರ್.ಕೆ. ಗೋವಿಲ್, ಹೆಚ್.ಎನ್. ಮಂಚೇಗೌಡ, ರವಿಶಂಕರ ಎಂ.ಎನ್, ವೀರಭದ್ರಸ್ವಾಮಿ ಎನ್, ವೈ.ಎಸ್. ಸಿದ್ದರಾಜು, ಮಂಜು ಜಿ.ಎನ್, ವಿಶ್ವನಾಥ ಜಿ.ಎಸ್. ಅವರುಗಳು ನಾಮಪತ್ರ ಸಲ್ಲಿಸಿದ್ದಾರೆಂದು ಕರ್ನಾಟಕ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಎ.ಎಂ. ಕುಂಜಪ್ಪ ತಿಳಿಸಿದ್ದಾರೆ.



ಸಾಂಕ್ರಾಮಿಕ ರೋಗ ತಡೆಗೆ ಅರಿವು ಮೂಡಿಸಿ : ಬಿ. ರಾಮು
ಚಾಮರಾಜನಗರ, ಮೇ. 24 :- ಸಾಂಕ್ರಾಮಿಕ ರೋಗಗಳ ತಡೆಗೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಪರಿಣಾಮಕಾರಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಬಿ. ರಾಮು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಡೆಂಗಿ ನಿಯಂತ್ರಣ ಕ್ರಮಗಳ ಕುರಿತು ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೋಂಕು ಹೊಂದಿದ ಈಡಿಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಹರಡಬಹುದಾದ ಡೆಂಗಿ ರೋಗ ಹಾಗೂ ಇತರೆ ಸಾಂಕ್ರಮಿಕ ರೋಗಗಳನ್ನು ನಿಯಂತ್ರಿಸಲು ಆರೋಗ್ಯ ಶಿಕ್ಷಣವನ್ನು ಮನಮುಟ್ಟುವಂತೆ ನೀಡಬೇಕು. ಆರೋಗ್ಯ ರಕ್ಷಣೆಗೆ ಪಾಲಿಸಬೇಕಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ತಿಳಿವಳಿಕೆ ನೀಡಬೇಕು ಎಂದು ರಾಮು ತಿಳಿಸಿದರು.
ರೋಗ ತಡೆಗೆ ಅನುಸರಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಶಾಲಾ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಇವರ ಮೂಲಕ ಪೋಷಕರಿಗೆ ಆರೋಗ್ಯ ಸಲಹೆಗಳನ್ನು ತಲುಪಿಸುವುದು ಸಹ ಪರಿಣಾಮಕಾರಿ ಕ್ರಮಗಳಲ್ಲಿ ಪ್ರಮುಖವಾಗಿದೆ. ಹೀಗಾಗಿ ಶಾಲಾ ಆರಂಭದಲ್ಲಿಯೇ ಶಿಕ್ಷಕರು ವೈದ್ಯಾಧಿಕಾರಿಗಳು, ಆಶಾ, ಆರೋಗ್ಯ ಕಾರ್ಯಕರ್ತೆಯರು ಒಟ್ಟಾಗಿ ಶಾಲಾ ಹಂತದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಬೇಕು. ಅಷ್ಟೇ ಅಲ್ಲ ಉದ್ದೇಶಿತ ಗುರಿ ಈಡೇರಿದೆಯೇ ಎಂಬ ಬಗ್ಗೆ ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ರೋಗ ಹರಡುವಿಕೆಗೆ ಕಾರಣವಾಗುವ ಸೊಳ್ಳೆಗಳು ಅಭಿವೃದ್ಧಿ ಹೊಂದುವ ನೀರಿನ ಶೇಖರಣೆ ಸ್ಥಳಗಳನ್ನು ಸ್ವಚ್ಚಪಡಿಸಿಕೊಳ್ಳಲು ಸಲಹೆ ನೀಡಬೇಕು. ನಗರಸಭೆ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಸೀಲ್ದಾರರು ಸಭೆ ನಡೆಸಿ ಸ್ವಚ್ಚತಾ ಸುರಕ್ಷತಾ ಕೆಲಸಗಳ ಬಗ್ಗೆ ಸೂಚಿಸಬೇಕು. ಸಭೆ ನಡೆಸಿದರಷ್ಟೇ ಸಾಲದು. ಕಾರ್ಯಕ್ರಮ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು ಎಂದರು.
ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಹಲ ಇಲಾಖೆಗಳು ನಿಗಾ ವಹಿಸಬೇಕಿದೆ. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ನಗರಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮೀನುಗಾರಿಕೆ, ಸಮಾಜ ಕಲ್ಯಾಣ, ಕೈಗಾರಿಕೆ, ನೀರಾವರಿ ಇಲಾಖೆಗಳು ತಮ್ಮ ವ್ಯಾಪ್ತಿಯ ಕಾರ್ಯಕ್ಷೇತ್ರದಲ್ಲಿ ಅವಶ್ಯಕ ಕೆಲಸಗಳನ್ನು ನಿರ್ವಹಿಸುವುದರ ಜತೆಗೆ ರೋಗ ಹರಡದಂತೆ ಹತೋಟಿಯ ಕ್ರಮಗಳನ್ನೂ ಮಾಡಬೇಕಿದೆ. ಕಾರ್ಮಿಕರು, ವಿದ್ಯಾರ್ಥಿಗಳು, ಮಕ್ಕಳು ವಾಸಿಸುವ ಸ್ಥಳಗಳಲ್ಲಿ ಆರೋಗ್ಯ ತಪಾಸಣೆ, ಸೊಳ್ಳೆ ನಿರೋಧಕ ವಸ್ತುಗಳ ಅಳವಡಿಕೆ, ನೈರ್ಮಲ್ಯ ಪಾಲನೆ ಬಗ್ಗೆ ತಿಳಿಸಿಕೊಡಬೇಕಿದೆ ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಅನಿಲ್ ಕುಮಾರ್ ಮಾತನಾಡಿ ಸಾಂಕ್ರಾಮಿಕ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಎಲ್ಲ ಇಲಾಖೆಗಳ ಸಮನ್ವಯ, ಸಹಕಾರ ಅಗತ್ಯವಿದೆ. ಇದಕ್ಕಾಗಿಯೇ ಸಮನ್ವಯ ಸಮಿತಿ ಸಭೆ ನಿಗದಿ ಮಾಡಲಾಗುತ್ತಿದ್ದು ಸಭೆಯಲ್ಲಿ ತೀರ್ಮಾನವಾಗುವ ವಿಚಾರಗಳನ್ನು ಅನುಷ್ಠಾನ ಮಾಡುವುದರಿಂದ ಉದ್ದೇಶಿತ ಕಾರ್ಯಕ್ರಮ ಫಲಪ್ರದವಾಗಲಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಂಡುವಿಜಯನ್, ಜಿಲ್ಲಾ ಸರ್ಜನ್ ಡಾ. ರಘುರಾಂ,  ಆರ್‍ಸಿಎಚ್ ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪಿ. ಮಮತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.

ಅಲೆಮಾರಿ, ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಾಲೆಗೆ ಸೇರ್ಪಡೆ
ಚಾಮರಾಜನಗರ, ಮೇ. 24 - ಜಿಲ್ಲೆಯಲ್ಲಿ ಇರುವ ಪ್ರತಿಷ್ಠಿತ ಶಾಲೆಗಳಿಗೆ 2016-17ನೇ ಸಾಲಿನಲ್ಲಿ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳನ್ನು 6ನೇ ತರಗತಿಗೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಸೇರ್ಪಡೆ ಮಾಡಲಿದೆ.
ಕೊಳ್ಳೇಗಾಲ ಪಟ್ಟಣದ ಎಸ್‍ಡಿಎ ಇಂಗ್ಲೀಷ್ ಹೈಸ್ಕೂಲ್ (ಸವೆಂತ್ ಡೇ), ಹನೂರಿನ ವಿವೇಕಾನಂದ ಎಚ್‍ಪಿಎಸ್ ಶಾಲೆಗೆ ಸೇರ್ಪಡೆ ಮಾಡಲಿದ್ದು ಎಲ್ಲಾ ಶುಲ್ಕ, ಸಮವಸ್ತ್ರ, ಪಠ್ಯಪುಸ್ತಕ, ಪ್ರವಾಸ ಇನ್ನಿತರ ವೆಚ್ಚವನ್ನು ಇಲಾಖೆಯೇ ಭರಿಸಲಿದೆ.
ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಗೊಲ್ಲ, ಹೆಳವ, ಬುಡಬುಡಿಕೆ, ಬುಂಡೇಬೆಸ್ತ, ದರ್ವೇಸ್, ಬಾಜಿಗರ್, ದೊಂಬಿದಾಸ, ಜೋಗಿ, ಬೈರಾಗಿ ಗೋಂದಣಿ, ಇನ್ನಿತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಜೂನ್ 8ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ (ದೂ.ಸಂ. 08226-222180) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದÉ.

ಮೇ. 25ರಂದು ಸಾಹಿತ್ಯ ಅವಲೋಕನ ಕುರಿತು ಕಾರ್ಯಾಗಾರ
ಚಾಮರಾಜನಗರ, ಮೇ. 24 - ಆಂಗ್ಲ ವಿಷಯ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಅವಲೋಕನ (ಆನ್ ಓವರ್ ವ್ಯೂ ಆಫ್ ಲಿಟರೇಚರ್) ಕುರಿತ ಒಂದು ದಿನದ ಕಾರ್ಯಾಗಾರವನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್‍ನಲ್ಲಿ ಮೇ 25ರಂದು ಬೆಳಿಗ್ಗೆ 10.30 ಗಂಟೆಗೆ ಆಯೋಜಿಸಲಾಗಿದೆ.
ಮೈಸೂರು ವಿವಿ ಆಂಗ್ಲ ವಿಭಾಗದ ಅಧ್ಯಕ್ಷರಾದ ಪ್ರೊ. ಸಿ.ಪಿ. ರವಿಚಂದ್ರ, ಪ್ರಾಧ್ಯಾಪಕರಾದ ಪ್ರೊ. ಮಹದೇವ, ಪ್ರೊ. ಎಚ್.ಎಂ. ರುದ್ರಮುನಿ, ಸಹಪ್ರಾಧ್ಯಾಪಕರಾದ ಪ್ರೊ. ರಮೇಶ್ ಜಯರಾಮಯ್ಯ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಆರ್. ರಾಮಚಂದ್ರ ಕಾರ್ಯಾಗಾರದಲ್ಲಿ ಭಾಗವಹಿಸುವರು ಎಂದು ಸ್ನಾತಕೋತ್ತರ ಕೇಂದ್ರ ನಿರ್ದೇಶಕರಾದ ಪ್ರೊ. ಶಿವಬಸವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊರಾರ್ಜಿ ಪದವಿಪೂರ್ವ ವಿಜ್ಞಾನ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 24:- ಜಿಲ್ಲೆಯಲ್ಲಿರುವ ಮೊರಾರ್ಜಿ ದೇಸಾಯಿ ಪದವಿಪೂರ್ವ ವಸತಿ ವಿಜ್ಞಾನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಪಿಸಿಎಂಬಿ ಮತ್ತು ಪಿಸಿಎಂಸಿ ಸಂಯೋಜನೆ ವಿಷಯಗಳ ತರಗತಿಗೆ ತಲಾ 40 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ.
ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಶೇ.50ರಷ್ಟು ವಿದ್ಯಾರ್ಥಿನಿಯರಿಗೆ ಹಾಗೂ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಸೀಟು ನೀಡಲಾಗುತ್ತದೆ. ಪ್ರವೇಶ ಪಡೆದವರಿಗೆ ಉಚಿತವಾಗಿ ಊಟ, ವಸತಿ, ಸಮವಸ್ತ್ರ, ಇನ್ನಿತರ ಸಾಮಗ್ರಿಗಳನ್ನು ನೀಡಲಾಗುತ್ತದೆ.
ಅರ್ಜಿಗಳನ್ನು ಚಾಮರಾಜನಗರ ತಾಲೂಕಿನ ಕೋಡಿಉಗನೆಯಲ್ಲಿರುವ ಮೊರಾರ್ಜಿ ದೇಸಾಯಿ ಪದವಿಪೂರ್ವ ವಸತಿ ಕಾಲೇಜು, ಉಮ್ಮತ್ತೂರಿನ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ, ಕೊಳ್ಳೇಗಾಲ ತಾಲೂಕಿನ ಹನೂರು, ಯಳಂದೂರು ತಾಲೂಕಿನ ಮೆಲ್ಲಹಳ್ಳಿ ಗೇಟ್‍ನಲ್ಲಿರುವ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಹಾಗು ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿಪುರ,  ಗುಂಡ್ಲುಪೇಟೆ ತಾಲೂಕಿನ ಬೇಗೂರುನಲ್ಲಿರುವ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಮೇ 30ರೊಳಗೆ ಸಲ್ಲಿಸಬೇಕು.
ಹೆಚ್ಚಿನ ವಿವರವನ್ನು ಚಾಮರಾಜನಗರದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಅಥವಾ ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚೆನ್ನಮ್ಮ ವಸತಿಶಾಲೆ ಪ್ರಾಚಾರ್ಯರಿಂದ ಪಡೆಯುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಣ್ಣು ಮಾದರಿ ಪರೀಕ್ಷೆಗೆ ಸಹಕರಿಸಲು ಕೃಷಿ ಇಲಾಖೆ ಮನವಿ
ಚಾಮರಾಜನಗರ, ಮೇ. 24:- ಉತ್ತಮ ಫಸಲು ಪಡೆಯಲು ಮಣ್ಣಿನ ಫಲವತ್ತತೆ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯು ಮಣ್ಣು ಪರೀಕ್ಷೆ ಕಾರ್ಯಕ್ರಮವನ್ನು ನಡೆಸುತ್ತಿದ್ದು ಇದಕ್ಕೆ  ರೈತರು ಸಹಕರಿಸುವಂತೆ ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.
ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಪರೀಕ್ಷಿಸಿ ಇದರ ಆಧಾರದ ಮೇಲೆ ಅವಶ್ಯಕ ಪೋಷಕಾಂಶಗಳನ್ನು ನೀಡಬೇಕಿದೆ. ಇದಕ್ಕಾಗಿ ಮಣ್ಣು ಮಾದರಿ ಸಂಗ್ರಹಿಸಲು ಕೃಷಿ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರೈತರು ತಮ್ಮ ಜಮೀನುಗಳಿಗೆ ಮಣ್ಣು ಮಾದರಿ ಸಂಗ್ರಹಣೆಗೆ ಬರುವ ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಅಗತ್ಯ ಸಹಕಾರ ನೀಡಬೇಕೆಂದು ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಚಾ. ನಗರ ತಾಲೂಕು : ವಿವಿಧ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 24:- ಚಾಮರಾಜನಗರ ತಾಲೂಕಿನ ವಿವಿಧೆಡೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ವಹಣೆಯಾಗುತ್ತಿರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಚಾಮರಾಜನಗರ ಪಟ್ಟಣ, ಸಂತೆಮರಹಳ್ಳಿ, ಚಂದಕವಾಡಿ, ಉಡಿಗಾಲ, ವೆಂಕಟಯ್ಯನ ಛತ್ರ, ಬಿಸಲವಾಡಿ, ಕುದೇರು, ಆಲೂರು, ಹರವೆ, ಹೊಂಗನೂರು, ಜನ್ನೂರು ಗ್ರಾಮಗಳಲ್ಲಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ 5 ರಿಂದ 10ನೇ ತರಗತಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು.
ಚಾಮರಾಜನಗರ ಪಟ್ಟಣ, ಕುದೇರು, ಹರದನಹಳ್ಳಿಯಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಪಿಯುಸಿಯಿಂದ ಅಂತಿಮ ಪದವಿ, ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವವರು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿನಿಲಯಗಳಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಹಾಗೂ ಇತರೆ ಜನಾಂಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳೂ ಸಹ ಅರ್ಜಿ ಸಲ್ಲಿಸಬಹುದು.
ಅರ್ಜಿಗಳನ್ನು ಮೇ 1 ರಿಂದ ಆಯಾ ವಿದ್ಯಾರ್ಥಿಗಳ ನಿಲಯ ಪಾಲಕರು, ನಗರÀದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 15ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08226-223143 ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ದಾಶರಥಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಿಧಾನಪರಿಷತ್ ಚುನಾವಣೆ : 19 ನಾಮಪತ್ರಗಳು ಕ್ರಮಬದ್ಧ
ಚಾಮರಾಜನಗರ, ಮೇ. 24 :- ಕರ್ನಾಟಕ ವಿಧಾನ ಪರಿಷತ್ತಿಗೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಸಲ್ಲಿಸಿದ್ದ ನಾಮಪತ್ರಗಳನ್ನು ಪರಿಶೀಲಿಸಿದ್ದು, ನಾಮನಿರ್ದೇಶಿತರಾದ 19 ಉಮೇದುವಾರರ ನಾಮಪತ್ರಗಳು ಕ್ರಮಬದ್ಧವಾಗಿವೆ.
ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಉಮೇದುವಾರರಾದ ಭಾರತೀಯ ಜನತಾ ಪಕ್ಷದ ಎಂ.ವಿ. ರವಿಶಂಕರ್, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಡಾ. ಹೆಚ್.ಎನ್. ರವೀಂದ್ರ ಮತ್ತು ಜಾತ್ಯಾತೀತ ಜನತಾದಳದ ಕೆ.ಟಿ. ಶ್ರೀಕಂಠೇಗೌಡ ಅವರುಗಳ ನಾಮಪತ್ರ ಕ್ರಮಬದ್ಧವಾಗಿವೆ.
ನೊಂದಾಯಿತ ರಾಜಕೀಯ ಪಕ್ಷಗಳ ಉಮೇದುವಾರರಾದ ಕರುನಾಡು ಪಕ್ಷದ ಹೆಚ್.ಕೆ. ಕೃಷ್ಣ, ಸಮಾಜವಾದಿ ಪಕ್ಷದ ಕೆ.ಪಿ. ಚಿದಾನಂದ, ಸಮಾಜವಾದಿ ಜನತಾ(ಕರ್ನಾಟಕ) ಪಕ್ಷದ ನಾಗಭೂಷಣ ಆರಾಧ್ಯ, ಮತ್ತು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರು ಕ್ರಮಬದ್ಧವಾಗಿ ನಾಮನಿರ್ದೇಶಿತರಾಗಿದ್ದಾರೆ.
ಇತರ ಉಮೇದುವಾರರಾದ ಡಾ. ಕೃಷ್ಣಮೂರ್ತಿ, ಆರ್.ಕೆ. ಗೋವಿಲ್, ಪ್ರೊ. ಕೆ.ಎಸ್. ಭಗವಾನ್, ಹೆಚ್.ಎನ್. ಮಂಚೇಗೌಡ, ಮಂಜು ಜಿ.ಎನ್, ಪಿ.ಎಸ್. ಯಡೂರಪ್ಪ, ರವಿಚಂದ್ರೇಗೌಡ ಎನ್.ಆರ್, ಎಂ.ಎನ್. ರವಿಶಂಕರ, ರಾಜೀವ್ ಎಸ್, ವಿಶ್ವನಾಥ ಜಿ.ಎಸ್, ವೀರಭದ್ರಸ್ವಾಮಿ ಎನ್, ವೈ.ಎಸ್. ಸಿದ್ದರಾಜು ಅವರುಗಳು ಪಕ್ಷೇತರರಾಗಿ ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧವಾಗಿವೆ ಎಂದು ಕರ್ನಾಟಕ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಎ.ಎಂ. ಕುಂಜಪ್ಪ ತಿಳಿಸಿದ್ದಾರೆ.
















ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು