Wednesday, 20 December 2017

ತಾ.ಪಂ. ಗ್ರಾ.ಪಂ. ಉಪಚುನಾವಣೆ ಫಲಿತಾಂಶ ,ವಿಶ್ವಮಾನವ ದಿನ ಅರ್ಥಪೂರ್ಣ ಆಚರಣೆಗೆ ತೀರ್ಮಾನ (20-12-2017)


ತಾ.ಪಂ. ಗ್ರಾ.ಪಂ. ಉಪಚುನಾವಣೆ ಫಲಿತಾಂಶ 

ಚಾಮರಾಜನಗರ, ಡಿ. 20 - ವಿವಿಧ ಕಾರಣಗಳಿಂದ ತೆರವಾಗಿದ್ದ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ನಡೆದ ಉಪಚುಣಾವಣೆಯ ಮತ ಎಣಿಕೆ ಕಾರ್ಯ ನಡೆದಿದ್ದು ಫಲಿತಾಂಶದ ವಿವರ ಹಿಗಿದೆ.
ಚಾಮರಾಜನಗರ ತಾಲ್ಲೂಕು ಪಂಚಾಯಿತಿಯ ಹರದನಹಳ್ಳಿ ಕ್ಷೇತ್ರ:
ವಿಜೇತರು - ಹೆಚ್.ಎಂ. ಮಹದೇವ ಶೆಟ್ಟಿ – 2827 ಮತಗಳು (ಕಾಂಗ್ರೆಸ್)
ಇತರೆ ಅಭ್ಯರ್ಥಿಗಳು ಪ್ರಕಾಶ ಶೆಟ್ಟಿ – 2024 ಮತಗಳು (ಬಿಜೆಪಿ)
ನೋಟ – 102
ಕೊಳ್ಳೇಗಾಲ ಗೋಪಿನಾಥಂ ಗ್ರಾಮ ಪಂಚಾಯಿತಿ ಕ್ಷೇತ್ರ:
ವಿಜೇತರು – ವಸಂತ – 293 ಮತಗಳು
ಇತರೆ ಅಭ್ಯರ್ಥಿ - ಇರಳಪ್ಪನ್ – 209 ಮತಗಳು
ಗುಡ್ಲುಪೇಟೆ ತಾಲ್ಲೂಕು ತೆರಕಣಾಂಬಿ ಗ್ರಾಮ ಪಂಚಾಯಿತಿ ಕ್ಷೇತ್ರ:
ವಿಜೇತರು - ಸಿದ್ದರಾಜು – 560 ಮತಗಳು
ಇತರೆ ಅಭ್ಯರ್ಥಿಗಳು - ಮಹೇಶ್ ನಾಯಕ – 139 ಮತಗಳು
ಚಿನ್ನಮ್ಮ – 56 ಮತಗಳು
ಬಲಚವಾಡಿ ಗ್ರಾಮ ಪಂಚಾಯಿತಿ ಗುರುವಿನಪುರ ಕ್ಷೇತ್ರ:
ವಿಜೇತರು – ಜಿ. ಎಸ್. ರಘು – 396 ಮತಗಳು
ಇತರೆ ಅಭ್ಯರ್ಥಿಗಳು - ಜಿ.ಎನ್. ಲೊಕೇಶ್ – 371 ಮತಗಳು
ಎಂ. ನಾಗೇಂದ್ರಪ್ಪ – 28 ಮತಗಳು
ಚಾಮರಾಜನಗರ ತಾಲ್ಲೂಕು ಅಮಚವಾಡಿ ಗ್ರಾಮ ಪಂಚಾಯಿತಿ ಕ್ಷೇತ್ರ:
ವಿಜೇತರು – ಮಹದೇವೇಗೌಡ – 324 ಮತಗಳು
ಇತರೆ ಅಭ್ಯರ್ಥಿಗಳು - ಎನ್. ಮಹೇಶ್ – 251 ಮತಗಳು
ಚಾಮರಾಜನಗರ ತಾಲ್ಲೂಕು ಬದನಗುಪ್ಪೆ ಗ್ರಾಮ ಪಂಚಾಯಿತಿ ಕ್ಷೇತ್ರ:
ವಿಜೇತರು - ಬಿ.ಪಿ ಮಹದೇವಸ್ವಾಮಿ – 395 ಮತಗಳು
ಇತರೆ ಅಭ್ಯರ್ಥಿಗಳು - ನಾರಾಯಣ – 301 ಮತಗಳು
ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಗ್ರಾಮ ಪಂಚಾಯಿತಿಯಿಂದ ಮಹದೇವಮ್ಮ, ಹೊನ್ನಹಳ್ಳಿ ಗ್ರಾಮ ಪಂಚಾಯಿತಿ ವಡ್ಡಗೆರೆ ಕ್ಷೇತ್ರದಿಂದ ನಂಜುಂಡಸ್ವಾಮಿ, ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಕುರುಬರ ಹುಂಡಿ ಕ್ಷೇತ್ರದಿಂದ ನಿರ್ಮಲಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದಾರೆ.
ಡಿ. 21,22 ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ, ಡಿ. 20 - ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ(ಗೀತಾ ಮಹದೇವ ಪ್ರಸಾದ್) ಅವರು ಡಿಸೆಂಬರ್ 21 ಹಾಗೂ 22ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಡಿಸೆಂಬರ್ 21ರಂದು ಬೆಳಿಗ್ಗೆ 10 ಗಂಟೆಗೆ ಗುಂಡ್ಲುಪೇಟೆ ತಾಲ್ಲೂಕಿನ ಬನ್ನಿತಾಳಪುರದಲ್ಲಿ ಸಹಕಾರ ಬ್ಯಾಂಕ್ ಮತ್ತು ಶುದ್ದ ನೀರು ಘಟಕ ಉದ್ಘಾಟಿಸುವರು. ಬಳಿಕ ಗಾಂಧಿ ಗ್ರಾಮ ಮತ್ತು ಹುತ್ತೂರು ಏತ ನೀರಾವರಿ ಯೋಜನೆಯ ಕೆರೆ ಕಾಮಗಾರಿಯನ್ನು ವಿಕ್ಷೀಸುವರು. ಡಿಸೆಂಬರ್ 22ರಂದು ಬೆಳಿಗ್ಗೆ 10 ಗಂಟೆಗೆ ಕೊಳ್ಳೇಗಾಲಕ್ಕೆ ಆಗಮಿಸಿ ಅಲ್ಲಿನ ಎಂ.ಜಿ.ಎಸ್.ವಿ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಉದ್ದೋಗ ಮೇಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 11.30 ಗಂಟೆಗೆ ನಗರಕ್ಕೆ ಆಗಮಿಸಿ ಜಿಲ್ಲಾ ಖನಿಜ ಪ್ರತಿಪ್ಠಾನ ಸಭೆ ಹಾಗು 12 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯ ಮಂತ್ರಿಗಳ ಭೇಟಿ ಕಾರ್ಯಕ್ರಮ ಕುರಿತು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಸಚಿವರ ವಿಶೇಷಾಧಿಕಾರಿ ತಿಳಿಸಿದ್ದಾರೆ.

ವಿಶ್ವಮಾನವ ದಿನ ಅರ್ಥಪೂರ್ಣ ಆಚರಣೆಗೆ ತೀರ್ಮಾನ  ..vss

ಚಾಮರಾಜನಗರ, ಡಿ. 20 - ಜಿಲ್ಲಾಡಳಿತ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ವಿಶ್ವಮಾನವÀ ದಿನ ಆಚರಣೆಯನ್ನು ಡಿಸೆಂಬರ್ 29ರಂದು ಅರ್ಥಪೂರ್ಣವಾಗಿ ನಗರದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಸಂಬಂಧ ಪೂರ್ವಭಾವಿ ಸಭೆಯಲ್ಲಿ ವಿಶ್ವಮಾನವ ದಿನವನ್ನು ಸಕಲ ಸಿದ್ಧತೆಯೊಂದಿಗೆ ಯಶಸ್ವಿಯಾಗಿ ಏರ್ಪಾಡು ಮಾಡಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ ವಿಶ್ವಮಾನವ ದಿನಾಚರಣೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಗಳು ಹಾಗೂ ಸಂದೇಶಗಳನ್ನು ಪರಿಣಾಮಕಾರಿಯಾಗಿ ತಲುಪಿಸಬೇಕಿದೆ. ಹೀಗಾಗಿ ಎಲ್ಲರ ಸಹಕಾರ ಅಗತ್ಯವಿದೆ. ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಲು ನೀಡಲಾಗುವ ಸಲಹೆಗಳನ್ನು ಪರಿಗಣಿಸಲಾಗುವುದು ಎಂದರು.
ವಿಶ್ವಮಾನವ ಸಂದೇಶವನ್ನು ನೀಡುವ ದಿಸೆಯಲ್ಲಿ ಸಣ್ಣಪುಸ್ತಕವನ್ನು ಪ್ರಕಟಿಸಿ ವಿತರಿಸಲು ಕ್ರಮ ತೆಗೆದುಕೊಳ್ಳಬೇಕು. ಇನ್ನಿತರ ಕಾರ್ಯಕ್ರಮಗಳ ಮೂಲಕವೂ ಅರ್ಥಪೂರ್ಣ ಸಂದೇಶ ವಿಚಾರಗಳು ಮನವರಿಕೆ ಮಾಡಿಕೊಡುವ ದಿಸೆಯಲ್ಲಿ ಕಾರ್ಯೋನ್ಮುಖರಾಗಿ ಸಿದ್ಧತೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಗಾಯತ್ರಿ ಅವರು ಸೂಚಿಸಿದರು.
ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಆಹ್ವಾನ ಪತ್ರಿಕೆಯನ್ನು ಶಿಷ್ಠಾಚಾರ ಅನುಸಾರ ಮುದ್ರಿಸಿ ತಲುಪಿಸುವ ಕೆಲಸವನ್ನು ನಿರ್ವಹಿಸಬೇಕು. ಸಂಘಸಂಸ್ಥೆಗಳ ಮುಖಂಡರಿಗೂ ಆಹ್ವಾನ ಪತ್ರವನ್ನು ನೀಡಬೇಕು. ಯಾವುದೇ ಗೊಂದಲಗಳಿಗೆ ಅವಕಾಶವಾಗಬಾರದು ಎಂದರು.
ಮುಖ್ಯ ಭಾಷಣಕಾರರನ್ನು ಆಹ್ವಾನಿಸಬೇಕಿದ್ದು ಈ ಸಂಬಂಧ ಮುಖಂಡರ ಸಲಹೆಯನ್ನು ತೆಗೆದುಕೊಳ್ಳಲಾಗುತ್ತದೆ. ಅಂತಿಮವಾಗಿ ಮುಖ್ಯಭಾಷಣಕಾರರನ್ನು ಆಯ್ಕೆ ಮಾಡಿ ಆಹ್ವಾನ ಮಾಡಲಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.
ಕುವೆಂಪು ಅವರ ಕಾವ್ಯ, ಕೃತಿ ಹಾಗೂ ಅವರ ವಿಶ್ವಮಾನವ ಸಂದೇಶಗಳ ಕುರಿತು ಗೀತಗಾಯನ, ನೃತ್ಯರೂಪಕ, ನಾಟಕ, ಇನ್ನಿತರ ಪರಿಣಾಮಕಾರಿ ಕಾರ್ಯಕ್ರಮಗಳ ಮೂಲಕ ವಿಶ್ವಮಾನವ ದಿನವನ್ನು ಹಮ್ಮಿಕೊಳ್ಳಬೇಕು. ಮೆರವಣಿಗೆ ಏರ್ಪಾಡು, ಪುಸ್ತಕಗಳ ವಿತರಣೆ ಮಾಡಬೇಕು ಎನ್ನುವುದೂ ಸೇರಿದಂತೆ ಇನ್ನಿತರ ಹಲವು ಸಲಹೆಗಳು ಸಭೆಯಲ್ಲಿ ಹಾಜರಿದ್ದ ಮುಖಂಡರಿಂದ ವ್ಯಕ್ತವಾದವು.
ಈ ಸಂಬಂಧ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾಧಿಕಾರಿಯವರು ಪಟ್ಟಣದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಮೆರವಣಿಗೆಗೆ ತೊಡಕಾಗುತ್ತದೆ. ಆದ್ದರಿಂದ ಮೆರವಣಿಗೆ ಆಯೋಜಿಸಲು ಸಾಧ್ಯವಾಗುವುದಿಲ್ಲ. ಉಳಿದಂತೆ ನೀಡಲಾಗುವ ಸಲಹೆಗಳನ್ನು ಅನುದಾನ ಲಭ್ಯತೆ ಅನುಸಾರ ನೋಡಿಕೊಂಡು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಹದೇವಯ್ಯ, ಮುಖಂಡರಾದ ಸೋಮಶೇಖರ ಬಿಸಲ್ವಾಡಿ, ನಿಜಧ್ವನಿ ಗೋವಿಂದರಾಜು, ಸಿ.ಎಂ. ನರಸಿಂಹಮೂರ್ತಿ, ಜಿ. ಬಂಗಾರು, ಬ್ಯಾಡಮೂಡ್ಲು ಬಸವಣ್ಣ, ನಾಗೇಶ್, ಶಿವಣ್ಣ, ಜಿಲ್ಲಾ ಮಟ್ಟದ ಅಧಿಕಾರಿಗಳು, ಇತರೆ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

ಡಿ. 23ರಂದು ಉಮ್ಮತ್ತೂರಿನಲ್ಲಿ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡಾಕೂಟ

ಚಾಮರಾಜನಗರ, ಡಿ. 20 :- ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಧ್ಯಾನ್ ಚಂದ್ ಸಂತೇಮರಹಳ್ಳಿ ಹೋಬಳಿ ಮಟ್ಟದ ಕ್ರೀಡಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 23ರಂದು ಬೆಳಿಗ್ಗೆ 11 ಗಂಟೆಗೆ ಉಮ್ಮತ್ತೂರಿನ ಶ್ರೀ ಮಂಟೇಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಂತೇಮರಹಳ್ಳಿ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡೋತ್ಸವ ಏರ್ಪಡಿಸಲಾಗಿದೆ.
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ ಕ್ರೀಡಾಕೂಟ ಉದ್ಘಾಟಿಸುವರು. ಉಮ್ಮತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ. ಗೀತಾರವೀಶ್ ಅಧ್ಯಕ್ಷತೆ ವಹಿಸುವರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಜಿಲ್ಲಾ ಪಂಚಾಯತ್ ಸದಸ್ಯರಾದ ಶೀಲಾ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಹದೇವಸ್ವಾಮಿ, ತಾಲೂಕು ಪಂಚಾಯಿತಿ ಸದಸ್ಯರಾದ ಸುಧಾ, ಧ್ಯಾನ್ ಚಂದ್ ಸಂತೇಮರಹಳ್ಳಿ ಹೋಬಳಿ ಮಟ್ಟದ ಕ್ರೀಡಾ ಸಂಘದ ಗೌರವಾಧ್ಯಕ್ಷರಾದ ಶ್ರೀಕಂಠಸ್ವಾಮಿ, ಅಧ್ಯಕ್ಷರಾದ ಕೆ. ನಾಗಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.


ಡಿ. 21ರಂದು ವಿದ್ಯುತ್ ವ್ಯತ್ಯಯ 

ಚಾಮರಾಜನಗರ, ಡಿ. 20- ಚಾಮರಾಜನಗರ ತಾಲೂಕಿನ ಅಟ್ಟುಗೂಳಿಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಡಿಸೆಂಬರ್ 21ರಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಿದ್ದಯ್ಯನಪುರ, ಹೊಂಗಲವಾಡಿ, ಕೋಳಿಪಾಳ್ಯ, ದೊಡ್ಡಮೋಳೆ, ಬಂಧೀಗೌಡನಹಳ್ಳಿ ಹಾಗೂ ಅಟ್ವುಗೂಳಿಪುರ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
 ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಡಿ. 26ರಿಂದ ನಗರದಲ್ಲಿ ಕೆಪಿಎಸ್‍ಸಿ ಪರೀಕ್ಷೆಗೆ ತರಬೇತಿ
ಚಾಮರಾಜನಗರ, ಡಿ. 20 - ಚಾಮರಾಜನಗರದ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯು ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಬಿ ಮತ್ತು ಸಿ ವೃಂದದ ಹುದ್ದೆಗೆ  ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಡಿಸೆಂಬರ್ 26 ರಿಂದ  ಜನವರಿ 12ರವರೆಗೆ ಸ್ಟಡಿ ಸರ್ಕಲ್ ಕಾರ್ಯಕ್ರಮಡಿ ಉಚಿತ ಪರೀಕ್ಷಾಪೂರ್ವ ತರಬೇತಿ ಆಯೋಜಿಸಿದೆ.
ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಡಿಸೆಂಬರ್ 26ರ ಒಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ಜಿಲ್ಲಾ ಉದ್ಯೋಗಾಧಿಕಾರಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 28ರಂದು ಕಲ್ಲುಪುರದಲ್ಲಿ ಅಂಚೆ ಸಂತೆ

ಚಾಮರಾಜನಗರ, ಡಿ. 20 :– ಅಂಚೆ ಇಲಾಖೆಯು ಹರವೆ ಹೋಬಳಿಯ ಕಲ್ಲುಪುರ ಗ್ರಾಮದಲ್ಲಿ ಡಿಸೆಂಬರ್ 28ರಂದು ಅಂಚೆ ಸಂತೆ ಏರ್ಪಡಿಸಲಾಗಿದೆ.
ಈ ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ, ಇತರೆ ಅಂಚೆ ಜೀವವಿಮೆ ಇನ್ನಿತರ ಅಂಚೆ ಯೋಜನೆಗಳನ್ನು ಸ್ವೀಕರಿಸಲಾಗುತ್ತದೆ.
ಕಲ್ಲುಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಅಂಚೆಸಂತೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಗುಂಡ್ಲುಪೇಟೆ : ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ
ವಿಕಲಚೇತನರಿಂದ ಅರ್ಜಿ ಆಹ್ವಾನ


ಚಾಮರಾಜನಗರ, ಡಿ. 20 - ಗುಂಡ್ಲುಪೇಟೆ ತಾಲೂಕಿನ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ ನೇಮಕಾತಿಗೆ ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ತಾಲೂಕಿನ ಕೋಟೆಕೆರೆ, ನಿಟ್ರೆ, ಅಗತಗೌಡನಹಳ್ಳಿ, ತೆರಕಣಾಂಬಿ, ಪಡಗೂರು, ಕೆಲಸೂರು, ಮಂಗಲ, ಪುತ್ತನಪುರ, ವಡ್ಡಗೆರೆ, ಮೂಕಹಳ್ಳಿ, ಕೂತನೂರು ಹಾಗೂ ಅಣ್ಣೂರು ಗ್ರಾಮ ಪಂಚಾಯಿತಿಗಳಲ್ಲಿ ನೇಮಕ ಮಾಡಿಕೊಳ್ಳಲಿದೆ.
ಅಭ್ಯರ್ಥಿಗಳು 18 ರಿಂದ 45ರ ವಯೋಮಾನದವರಾಗಿದ್ದು ಆರೋಗ್ಯವಂತರಾಗಿದ್ದು ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು. ಸಂಬಂಧಿಸಿದ ಗ್ರಾಮ ಪಂಚಾಯಿತಿಗೆ ಸೇರಿದ್ದು ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಅಂಧರಿಗೆ, ಭಾಗಶ: ಶ್ರವಣದೋಷವುಳ್ಳವರಿಗೆ, ದೈಹಿಕ ಅಂಗವಿಕಲರಿಗೆ ಅವಕಾಶ ಕಲ್ಪಿಸಲಾಗುವುದು. ಅಂಗವಿಕಲತೆಯು ಶೇ. 40ಕ್ಕಿಂತ ಹೆಚ್ಚು ಹಾಗೂ 75ಕ್ಕಿಂತ ಕಡಿಮೆ ಇದ್ದು ವೈದ್ಯರಿಂದ ವೈದ್ಯಕೀಯ ಹಾಗೂ ಗುರುತಿನ ಪ್ರಮಾಣ ಪತ್ರ ಹೊಂದಿರಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ, ಸೌಲಭ್ಯ ಕಲ್ಪಿಸಲು ಸಮರ್ಥರಿರಬೇಕು. ಗೌರವಧನದ ಆಧಾರದ ಮೇಲೆ ಕಾರ್ಯ ನಿರ್ವಹಿಸಬೇಕು.
ನಿಗದಿತ ಅರ್ಜಿಯನ್ನು ಗುಂಡ್ಲುಪೇಟೆ ತಾಲೂಕು ಪಂಚಾಯಿತಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 27ರೊಳಗೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಅಲೆಮಾರಿ, ಅರೆಅಲೆಮಾರಿ, ಇತರೆ ಸಮುದಾಯ ಅಭ್ಯರ್ಥಿಗಳಿಂದ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಡಿ. 20 - ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿü ನಿಗಮದ ವತಿಯಿಂದ 2015-16 ಹಾಗೂ 2016-17ನೇ ಸಾಲಿನ ಪರಿಶಿಷ್ಠ ಪಂಗಡದ ಉಪಯೋಜನೆಯಡಿ ಪರಿಶಿಷ್ಠ ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಮತ್ತು ಸಾಲ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ದೋಗ ಬ್ಯಾಂಕ್ ಲಿಂಕ್ಡ್ ಸಾಲ ಯೋಜನೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಮೈಕ್ರೋ ಕ್ರೆಡಿಟ್ ಕಿರುಸಾಲ ಯೋಜನೆ, ಜಮೀನು ಇಲ್ಲದಿರುವ ಭೂರಹಿತ ಕೃಷಿ ಕಾಮಿಕರಿಗೆ ಭೂ ಒಡೆತನ ಯೊಜನೆಯಡಿ ಜಮೀನು ಖರೀದಿಸಿ ಕೊಡುವುದು ಯೋಜನಾ ಕಾರ್ಯಕ್ರಮಗಳಾಗಿವೆ.
ಫಲಾಪೇಕ್ಷಿಗಳು ನಿಗಮದ ಕಚೇರಿಯಿಂದ ಅರ್ಜಿ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಯೊಂದಿಗೆ ಡಿಸೆಂಬರ್ 29ರ ಒಳಗೆ ನಿಗಮದ ಕಚೇರಿಗೆ ಅರ್ಜಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08226-223856 ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಡಿ. 21ರಂದು ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮ

ಚಾಮರಾಜನಗರ, ಡಿ. 20 - ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 21ರಂದು ಮಧ್ಯಾಹ್ನ 3 ಗಂಟೆಗೆ ನಗರದ ಸತ್ಯಮಂಗಲ ರಸ್ತೆಯಲ್ಲಿರುವ ಶ್ರೀ ಶಿವಕುಮಾರ ಭವನದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೀತಾ ಮಹದೇವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಜ್ಯೋತಿ ಬೆಳಗಿಸುವರು. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾದ ಹೆಚ್.ಸಿ. ರುದ್ರಪ್ಪ ಉಪಸ್ಥಿತರಿರುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರ್ ಕುಮಾರ್ ಮೀನಾ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಆರ್. ಉಮೇಶ್, ನಗರ ಸಭೆ ಅಧ್ಯಕ್ಷರಾದ ಶೋಭಾ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಯೋಗೇಶ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಜಿಲ್ಲಾ ಪಂಚಾಯತ್ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕರಾದ ಸತೀಶ್ ಶೆಟ್ಟಿ, ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ನಗರದ ವೈ.ಆರ್. ಮಹೇಶ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

















ಕಾನೂನು ಗೌರವಿಸಿ: ಸಿವಿಲ್ ನ್ಯಾಯಾಧೀಶರಾದ ಆರ್. ಪಿ ನಂದೀಶ್ (19-12-2017)

   

ಕಾನೂನು ಗೌರವಿಸಿ: ಸಿವಿಲ್ ನ್ಯಾಯಾಧೀಶರಾದ ಆರ್. ಪಿ ನಂದೀಶ್

ಚಾಮರಾಜನಗರ, ಡಿ. 18 :- ಕಾನೂನು ಒಂದು ಸಂಕೀರ್ಣವಾದ ಭಾಷೆಯಾಗಿದ್ದು, ಅದನ್ನು ಗೌರವಿಸಿ ಪಾಲಿಸುವುದನ್ನು ಪ್ರತಿಯೊಬ್ಬರು ಕಲಿಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಆರ್. ಪಿ. ನಂದೀಶ್ ಅವರು ಅಭಿಪ್ರಾಯ ಪಟ್ಟರು. 
ನಗರದ ಜೆ.ಎಸ್.ಎಸ್ ಮಹಿಳಾ ಕಾಲೇಜಿನ ಸಂಭಾಗಣದಲ್ಲಿಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜೆ.ಎಸ್.ಎಸ್ ಮಹಿಳಾ ಕಾಲೇಜು ಹಾಗೂ ಸಾಧನಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಕಾಯ್ದೆ-ಕಾನೂನುಗಳನ್ನು ಜನರ ರಕ್ಷಣೆಗಾಗಿಯೇ ಜಾರಿಗೊಳಿಸಲಾಗಿದೆ. ಆದರೆ ನಿತ್ಯ ಜೀವನದಲ್ಲಿ ಕಾನೂನು ಉಲ್ಲಂಘನೆಯಾಗುತ್ತ್ತಿದೆ. ಕಾನೂನಿನ ಅರಿವಿಲ್ಲವೆಂದು ಯಾರೂ ಸಹ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಈಗಿನಿಂದಲೇ ಕಾನೂನನ್ನು ಗೌರವಿಸಿ ಪಾಲಿಸಲು ನಿತ್ಯಜೀವನದಲ್ಲಿ ನೈತಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ವಿವಾಹ ವಿಚ್ಚೇದನ, ಭ್ರಷ್ಟಚಾರ, ಕಳ್ಳತನದಂತಹ ಪ್ರಕರಣಗಳು ಹೆಚ್ಚಾಗುತ್ತಲಿದೆ. ಇದು ಕಾನೂನಿನ ಅರಿವಿನ ಕೊರತೆಯಿಂದ ಸಂಭವಿಸುತ್ತಿವೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ತರಗತಿ ಬೋಧನೆಯ ಜೊತೆಗೆ ಭವಿಷ್ಯದ ಉತ್ತಮ ಜೀವನದ ಕುರಿತು ನೈತಿಕ ತಿಳುವಳಿಕೆಗಳ ಅರಿವು ಮೂಡಿಸುವುದರ ಮೂಲಕ ಉತ್ತಮ ನಾಗರಿಕರಾಗುವಂತೆ ಮಾಡಿ ಸದೃಢ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬೇಕು ಎಂದು ತಿಳಿಸಿದರು.
ಇಂದಿನ ಮಕ್ಕಳು, ಯುವಕರು ಯುಟೂಬ್, ಫೇಸ್‍ಬುಕ್, ವಾಟ್ಸಾಪ್ ನಂತಹ ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿದಾರೆ. ಪೊಷಕರು ಇದಕ್ಕೆ ಅವಕಾಶ ಮಾಡಿಕೊಡದೆ ಓದಿನತ್ತ ಮಕ್ಕಳು ಗಮನ ಹರಿಸುವಂತೆ ಮಾಡಬೇಕು. ಆ ಮೂಲಕ ವಿದ್ಯಾರ್ಥಿಗಳನ್ನು ಭವಿಷ್ಯದ ಸತ್ಪ್ರ್ಪಜೆಗಳಾಗಿ ರೂಪಿಸಲು ಪೋಷಕರು ಸಕ್ರಿಯರಾಗಬೇಕು ಎಂದು ನಂದೀಶ್ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ಮನೋರೋಗ ತಜ್ಞರಾದ ವತ್ಸಲ ಇಂದಿನ ದಿನಗಳಲ್ಲಿ ಕುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಮಾನಸಿಕ ಒತ್ತಡ ಮುಖ್ಯ ಕಾರಣವಾಗಿದೆ. ಒತ್ತಡವು ಈ ಶತಮಾನದ ಅತಿದೊಡ್ಡ ಖಾಯಿಲೆಯಾಗಿದೆ. ಒತ್ತಡದಂತಹ ದುಷ್ಪರಿಣಾಮದಿಂದ ಹೊರಬರಲು ವಿದ್ಯಾರ್ಥಿ ದೆಸೆಯಿಂದಲೇ ಒತ್ತಡಮುಕ್ತ ಜೀವನವನ್ನು ಅಳವಡಿಸಿಕೊಳ್ಳಬೇಕಾಗಿದೆ. ಮಾನಸಿಕ ಒತ್ತಡ ಎದುರಾದಾಗ ಪೋಷಕರು, ಸೇಹಿತರು, ಶಿಕ್ಷಕರು ಮತ್ತು ವೈದ್ಯರೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕಾನೂನು ಅರಿವು ಕುರಿತು ಮಾತನಾಡಿದರು.
ಜೆ.ಎಸ್.ಎಸ್ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲರಾದ ಎ. ಜಿ. ಶಿವಕುಮಾರ್ ಅವರು ಕಾರ್ಯಕ್ರಮದ ಅಧ್ಯತಕ್ಷತೆ ವಹಿಸಿದ್ದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ. ಮಹಾಲಿಂಗಪ್ಪ, ಸಾಧನಾ ಸಂಸ್ಥೆಯ ನಿರ್ದೇಶಕರದ ಟಿ.ಜೆ. ಸುರೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
   


ಡಿ. 20ರಂದು ವಿಶ್ವ ಮಾನವ ದಿನಾಚರಣೆ ಪೂರ್ವಭಾವಿ ಸಭೆ

ಚಾಮರಾಜನಗರ, ಡಿ. 19- ವಿಶ್ವ ಮಾನವ ದಿನಾಚರಣೆಯನ್ನು ಚಾಮರಾಜನಗರ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸುವ ಕುರಿತು ಪೂರ್ವಭಾವಿ ಸಭೆಯನ್ನು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 20ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ.
ಈ ಸಭೆಗೆ ಎಲ್ಲ ಸಂಘಸಂಸ್ಥೆ, ಸಮುದಾಯದ ಮುಖಂಡರು, ಪ್ರತಿನಿಧಿಗಳು, ನಾಗರಿಕರು ಹಾಜರಾಗಿ ಅಗತ್ಯ ಸಲಹೆ ನೀಡುವಂತೆ ಕೋರಲಾಗಿದೆ.

ಡಿ. 20ರಂದು ನಗರಸಭಾ ಸದಸ್ಯರಿಗೆ ಸ್ವಚ್ಚ ಸರ್ವೇಕ್ಷಣೆ ಸಭೆ

ಚಾಮರಾಜನಗರ, ಡಿ. 19- ಚಾಮರಾಜನಗರ ನಗರಸಭೆ ವತಿಯಿಂದ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ನಗರಸಭಾ ಸದಸ್ಯರುಗಳಿಗೆ ಸ್ವಚ್ಚ ಸರ್ವೇಕ್ಷಣೆ-2018ರ ಕುರಿತು ಡಿಸೆಂಬರ್ 20ರಂದು ಮಧ್ಯಾಹ್ನ 3 ಗಂಟೆಗೆ ನಗರಸಭೆ ಕಚೇರಿ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ ಎಂದು ಪೌರಾಯುಕ್ತರ ಪ್ರಕಟಣೆ ತಿಳಿಸಿದೆ. 

ಕೊಳ್ಳೇಗಾಲ : ಕಂದಾಯ ನ್ಯಾಯಾಲಯದ ಪ್ರಕರಣ ಮುಂದೂಡಿಕೆ
ಚಾಮರಾಜನಗರ, ಡಿ. 19 - ಕ್ರಿಸ್‍ಮಸ್ ಹಬ್ಬದ ಅಂಗವಾಗಿ ಜಿಲ್ಲೆಯ ಎಲ್ಲಾ ಸಿವಿಲ್ ನ್ಯಾಯಾಲಯಗಳಿಗೆ  ಡಿಸೆಂಬರ್ 31ರವರೆಗೆ ರಜೆ ಘೋಷಿಸಿರುವುದರಿಂದ ಕಂದಾಯ ನ್ಯಾಯಾಲಯಗಳಲ್ಲಿ ಈ ಅವಧಿಯಲ್ಲಿರುವ ಪ್ರಕರಣಗಳನ್ನು ವಿಚಾರಣೆ ಮಾಡದಂತೆ ಮುಂದೂಡಲು ಕೋರಿರುವುದರಿಂದ ರಜೆ ಅವಧಿಯ ಪ್ರಕರಣಗಳನ್ನು ಮುಂದೂಡಿರುವುದಾಗಿ ಕೊಳ್ಳೇಗಾಲ ಉಪವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 23ರಂದು ನೇರ ಫೋನ್-ಇನ್ ಕಾರ್ಯಕ್ರಮ

ಚಾಮರಾಜನಗರ, ಡಿ. 19 - ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಡಿಸೆಂಬರ್ 23ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

ಡಿ. 23ರಂದು ಪ.ಜಾ. ನಿರುದ್ಯೋಗಿ ಅಭ್ಯರ್ಥಿಗಳಿಗೆ ಲಘುವಾಹನ ಚಾಲನಾ ತರಬೇತಿಗೆ ಸಂದರ್ಶನ

ಚಾಮರಾಜನಗರ, ಡಿ. 19 :- ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕ, ಯುವತಿಯರಿಗೆ ಡಿಸೆಂಬರ್ 23ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಲಘು ವಾಹನ ಚಾಲನಾ ತರಬೇತಿ ನೀಡುವ ಸಂಬಂಧ ನೇರ ಸಂದರ್ಶನ ಏರ್ಪಡಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ


ಚಾಮರಾಜನಗರ, ಡಿ. 19 :- ಚಾಮರಾಜನಗರ ತಾಲೂಕಿನ ಶಿವಪುರ, ಸಂತೆಮರಹಳ್ಳಿ, ಗೋವಿಂದವಾಡಿ, ಮಸಗಾಪುರ, ಕೊತ್ತಲವಾಡಿ, ಹೆಬ್ಬಸೂರು, ದೊಡ್ಡಮೋಳೆ, ನವಿಲೂರು, ಯರಗನಹಳ್ಳಿ, ಮುಕ್ಕಡಹಳ್ಳಿ, ಹರವೆ ಹಾಗೂ ಕೆಂಪನಪುರ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ ನೇಮಕಾತಿಗಾಗಿ ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು 18 ರಿಂದ 45ರ ವಯೋಮಾನದವರಾಗಿದ್ದು ಆರೋಗ್ಯವಂತರಾಗಿರಬೇಕು. ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು. ಸಂಬಂಧಿಸಿದ ಸ್ಥಳೀಯ ಗ್ರಾಮ ಪಂಚಾಯಿತಿಗೆ ಸೇರಿದವರಾಗಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಅಂಧರಿಗೆ, ಭಾಗಶ: ಶ್ರವಣದೋಷವುಳ್ಳವರಿಗೆ, ದೈಹಿಕ ಅಂಗವಿಕಲರಿಗೆ ಅವಕಾಶ ಕಲ್ಪಿಸಲಾಗುವುದು. ಅಂಗವಿಕಲತೆಯು ಶೇ. 40ಕ್ಕಿಂತ ಹೆಚ್ಚು ಹಾಗೂ 75ಕ್ಕಿಂತ ಕಡಿಮೆ ಇದ್ದು ವೈದ್ಯರಿಂದ ವೈದ್ಯಕೀಯ ಹಾಗೂ ಗುರುತಿನ ಪ್ರಮಾಣ ಪತ್ರ ಹೊಂದಿರಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ, ಸೌಲಭ್ಯ ಕಲ್ಪಿಸಲು ಸಮರ್ಥರಿರಬೇಕು. ಗೌರವಧನದ ಆಧಾರದ ಮೇಲೆ ಕಾರ್ಯ ನಿರ್ವಹಿಸಬೇಕು.
ನಿಗದಿತ ಅರ್ಜಿಯನ್ನು ನಗರದ ತಾಲೂಕು ಪಂಚಾಯಿತಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 30ರೊಳಗೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಅಧ್ಯಯನಕ್ಕೆ ವೇತನ, ಫೆಲೋಶಿಪ್, ಶುಲ್ಕ ವಿನಾಯಿತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಚಾಮರಾಜನಗರ, ಡಿ. 19- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2017-18ನೇ ಸಾಲಿನಲ್ಲಿ ಪೂರ್ಣಾವಧಿ ಪಿಎಚ್‍ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ. ಹಾಗೂ ಇತರೆ ಓಬಿಸಿಗೆ ಸೇರಿದ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ನೀಡುವ ಮಾಸಿಕ ವ್ಯಾಸಂಗ ವೇತನ, ಫೆಲೋಷಿಪ್ ಹಾಗೂ ನಿಗಧಿತ ಶುಲ್ಕ ವಿನಾಯಿತಿಗೆ ಈ ಹಿಂದೆ ಆಯ್ಕೆಯಾಗಿದ್ದು ಪ್ರಸ್ತುತ ಸಾಲಿನಲ್ಲಿ ಮುಂದುವರೆಯುತ್ತಿರುವ ಅರ್ಹ ನವೀಕರಣ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
2017ರ ಏಪ್ರಿಲ್ 1ರಿಂದಿಚೆಗೆ ಪ್ರಥಮ ವರ್ಷದಲ್ಲಿ ಪೂರ್ಣಾವಧಿ ಪಿಎಚ್‍ಡಿ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಂದ ಈ ಮೊದಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಅಂತಹವರು ಈಗಲೂ ಸಹ  ಅರ್ಜಿ ಸಲ್ಲಿಸಬಹುದಾಗಿದೆ.
2, 3 ಮತ್ತು 4ನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸದಿದ್ದಲ್ಲಿ ಡಿಸೆಂಬರ್ 23ರವರೆಗೆ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಇಲಾಖಾ ವೆಬ್ ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನೋಡಬಹುದು. ಅಥವ ಸಹಾಯವಾಣಿ ಸಂಖ್ಯೆ 080-65970004ನ್ನು ಸಂಪರ್ಕಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.





Monday, 18 December 2017

ಡಿ. 19ರಂದು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ (18-12-2017)

   

ಡಿ. 19ರಂದು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟ£

ಚಾಮರಾಜನಗರ, ಡಿ. 18 :- ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆಯು ವಾರ್ಷಿಕ ಕ್ರೀಡಾಕೂಟವನ್ನು ಡಿಸೆಂಬರ್ 19 ರಿಂದ 21ರವರೆಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಚರಿಸಲಿದೆ.
ಡಿಸೆಂಬರ್ 19ರಂದು ಬೆಳಿಗ್ಗೆ 8 ಗಂಟೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ) ವಿಜಯ್ ಲಾಲ್ ಮೀನಾ ಕ್ರೀಡಾಕೂಟ ಉದ್ಘಾಟಿಸುವರು. ಜಿಲ್ಲಾಧಿಕಾರಿಗಳಾದ ಬಿ. ರಾಮು ಅಧ್ಯಕ್ಷತೆ ವಹಿಸುವರು.
ಡಿಸೆಂಬರ್ 21ರಂದು ಸಂಜೆ 4 ಗಂಟೆಗೆ ಕ್ರೀಡಾಕೂಟದ  ಸಮಾರೋಪ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕರಾದ ವಿಫುಲ್ ಕುಮಾರ್ ಆಗಮಿಸುವರು. ಪ್ರಿಯಾಂಕ ಸಿನ್ಹಾ ಬಹುಮಾನ ವಿತರಿಸುವರು ಎಂದು ಪ್ರಕಟಣೆ ತಿಳಿಸಿದೆ.


ಡಿ. 21ರಂದು ಆಕಾಶವಾಣಿಯಲ್ಲಿ ಚಾ.ನಗರ ಎ.ಪಿ.ಎಂ.ಸಿ ಅಧ್ಯಕ್ಷರ ಸಂದರ್ಶನ ಪ್ರಸಾರ

ಚಾಮರಾಜನಗರ, ಡಿ. 18 - ಮೈಸೂರು ಆಕಾಶವಾಣಿ ವತಿಯಿಂದ ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರು ಹಾಗೂ ರಾಜ್ಯ ಕೃಷಿ ಮಾರಾಟ ಮಂಡಳಿ ಸದಸ್ಯರೂ ಆದ ಬಿ.ಕೆ. ರವಿಕುಮಾರ್ ಅವರೊಂದಿಗೆ ನಡೆಸಿರುವ ಸಂದರ್ಶನವು ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದಲ್ಲಿ ಡಿಸೆಂಬರ್ 21ರಂದು ಸಂಜೆ 6.40ಕ್ಕೆ ಪ್ರಸಾರವಾಗಲಿದೆ.
ಆಸಕ್ತ ರೈತಬಾಂಧವರು ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 18ರಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿ ಸಮ್ಮೇಳನ 

ಚಾಮರಾಜನಗರ, ಡಿ. 18 :- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ರೇವಾ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮಾನವಕುಲದ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ವಿಷಯದಡಿ 2018ರ ಜನವರಿ 18 ಹಾಗೂ 19ರಂದು ಸಮ್ಮೇಳನವನ್ನು ರೇವಾ ವಿಶ್ವವಿದ್ಯಾನಿಲಯದ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಿದೆ.
ತಾಂತ್ರಿಕ ಅಧಿವೇಶನದಲ್ಲಿ ಖ್ಯಾತ ವಿಜ್ಞಾನಿಗಳಿಂದ ಮತ್ತು ಸಂಶೋಧಕರಿಂದ ಉಪನ್ಯಾಸ ಏರ್ಪಡಿಸಲಾಗಿದೆ. ಸಮ್ಮೇಳನದಲ್ಲಿ ವಿವಿಧ ವಿಶ್ವ ವಿದ್ಯಾನಿಲಯಗಳ ಸ್ನಾತಕೋತ್ತರ, ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರಾಧ್ಯಾಪಕರು. ವಿಜ್ಞಾನಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿಜ್ಞಾನ ಆಸಕ್ತರು ಭಾಗವಹಿಸುವರು. ಭೌತ, ಗಣಿತ ವಿಜ್ಞಾನ, ರಸಾಯನ, ಜೀವ ವಿಜ್ಞಾನ, ಎಂಜಿನಿಯರಿಂಗ್ ಹಾಗೂ ಅಂತರ ಶಾಸ್ತ್ರೀಯ ವಿಜ್ಞಾನಗಳಿಗೆ ಸಂಬಂಧಿಸಿದ ವೈಜ್ಞಾನಿಕ ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸಲು ಅವಕಾಶವಿದೆ. ತಜ್ಞರ ಸಮಿತಿಯಿಂದ ಆಯ್ಕೆಯಾದ ಪ್ರತಿ ವಿಷಯದ 4 ಅತ್ಯುತ್ತಮ ಪ್ರಾತ್ಯಕ್ಷಿಕೆಗಳಿಗೆ ಬಹುಮಾನ ನೀಡಲಾಗುವುದು.
ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ನೊಂದಾಯಿಸಲು ಹಾಗೂ ಸಂಶೋಧನಾ ಪ್ರಸ್ತುತಿಯ ಸಾರಾಂಶ ಕಳುಹಿಸಲು ಜನವರಿ 5 ಕಡೆಯ ದಿನ.
ಹೆಚ್ಚಿನ ವಿವರಗಳನ್ನು ಅಕಾಡೆಮಿ ಸಮ್ಮೇಳನದ ವೆಬ್ ತಾಣ ತಿತಿತಿ.ಞsಣಚಿಛಿoಟಿಜಿeಡಿeಟಿಛಿe.ಛಿom ದಲ್ಲಿ ಹಾಗೂ ಹಿರಿಯ ವೈಜ್ಞಾನಿಕಾಧಿಕಾರಿ ಡಾ. ಎ.ಎಂ. ರಮೇಶ್ (ಮೊಬೈಲ್ 9845258894) ಇವರಿಂದ ಪಡೆಯಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪÀ್ರಕಟಣೆ ತಿಳಿಸಿದÉ.

ಡಿ. 29ರಂದು ಚಾ.ನಗರ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ

ಚಾಮರಾಜನಗರ, ಡಿ. 18 ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯು ಡಿಸೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಅಧ್ಯಕ್ಷರ ಕೊಠಡಿಯಲ್ಲಿ (ಕೊಠಡಿ ಸಂಖ್ಯೆ 301) ಅಧ್ಯಕ್ಷರಾದ ಸುಹೇಲ್ ಅಲಿಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 19ರಂದು ನಗರದಲ್ಲಿ ಕಾನೂನು ಅರಿವು ಕಾರ್ಯಕ್ರಮ

ಚಾಮರಾಜನಗರ, ಡಿ. 18 - ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜೆಎಸ್‍ಎಸ್ ಮಹಿಳಾ ಕಾಲೇಜು ಹಾಗೂ ಸಾಧನಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 19ರಂದು ಮಧ್ಯಾಹ್ನ 12 ಗಂಟೆಗೆ ನಗರದ ಜೆಎಸ್‍ಎಸ್ ಮಹಿಳಾ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್.ಜಿ. ನಾಗರತ್ನ ಉದ್ಘಾಟಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಜೆ.ಎಸ್.ಎಸ್. ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಎ.ಜಿ. ಶಿವಕುಮಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಭಾಷಣಕಾರರಾಗಿ ಜಿಲ್ಲಾ ಆಸ್ಪತ್ರೆ ಮನೋರೋಗ ತಜ್ಞರಾದ ವತ್ಸಲ ಆಗಮಿಸುವರು.
ಮುಖ್ಯ ಅತಿಥಿಗಳಾಗಿ ಎವೈಎಸ್‍ಪಿ ಎಸ್.ಇ. ಗಂಗಾಧರಸ್ವಾಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್ ಹಾಗೂ ಜೆಎಸ್‍ಎಸ್ ಪದವಿಪೂರ್ವ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಬಿ. ಮಹಾಲಿಂಗಪ್ಪ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಡಿ. 22ರಂದು ಕೊಳ್ಳೇಗಾದಲ್ಲಿ ಉದ್ಯೋಗ ಮೇಳ 

ಚಾಮರಾಜನಗರ, ಡಿ. 18 - ಉದ್ಯೋಗ ಮತ್ತು ತರಬೇತಿ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಎಸ್. ಜಯಣ್ಣ ಮತ್ತು ಆರ್. ಧ್ರುವನಾರಾಯಣ ಅಭಿಮಾನಿ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 22ರಂದು ಬೆಳಿಗ್ಗೆ 10 ಗಂಟೆಗೆ ಕೊಳ್ಳೇಗಾಲದ ಎಂ.ಜಿ.ಎಸ್.ವಿ ಕಾಲೇಜು ಅವರಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಮೈಸೂರಿನ ಖಾಸಗಿ ಕಂಪನಿಗಳಾದ ಜುಬಿಲಿಯಂಟ್, ಗ್ರಾಸ್ ರೂಟ್, ಒರಿಯಂಟ್ ಬೆಲ್, ವೇದ ಸಾಫ್‍ಟೆಕ್, ರಾಕ್ ಮೈಂಡ್ ಪೀ.ಲಿ. ಈಗಲ್ ಟೆಕ್ನಾಲಜಿ, ನಾರಾಯಣ ಸೂಪರ್ ಸ್ವೆಷಾಲಿಟಿ ಆಸ್ಪತ್ರೆ, ಅಪೋಲೋ ಆಸ್ಪತ್ರೆ, ಪ್ರೋಟಿಸ್ ಆಸ್ಪತ್ರೆ, ಭರತ್ ಆಸ್ಪತ್ರೆ, ಸುಪ್ರಿಯಾ ಆಸ್ಪತ್ರೆ, ಭಾರತೀಯ ಜೀವ ವಿಮಾ ನಿಗಮ, ಸೆಕ್ಯೂರಿಟಿ, ಆಸ್ಪತ್ರೆ ಮತ್ತು ಹಣಕಾಸಿನ ಸೇವೆಗಳು ಸೇರಿದಂತೆ ಐ. ಟಿ. ಬಿ. ಟಿ ಪಿ. ಜಿ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ.
ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ, ಡಿಪ್ಲೋಮೊ, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ನರ್ಸಿಂಗ್, ಬಿ.ಎಸ್.ಸಿ, ನರ್ಸಿಂಗ್, ಎ.ಎನ್.ಎಂ. ಜಿ.ಎನ್.ಎಂ. ವಿದ್ಯಾರ್ಹತೆ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವ 18 ರಿಂದ  40 ವರ್ಷದೊಳಗಿನ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಮೇಳ ಆಯೋಜಿಸಲಾಗಿದೆ.
ಉದ್ಯೋಗ ಮೇಳದಲ್ಲಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯಾರ್ಥಿಗಳು ತಮ್ಮ ಸ್ವ- ವಿವರದೊಂದಿಗೆ ಹಾಗೂ ಅಂಕ ಪಟ್ಟಿ ದಾಖಲೆಯೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ದೂರವಾಣಿ ಸಂಖ್ಯೆ 08226-224430 ಅಥವಾ 9480166210 ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆ ತಿಳಿಸಿದೆÉ.



Sunday, 17 December 2017

ಕೆಎಸ್‍ಆರ್‍ಟಿಸಿ : 318 ಮಂದಿ ಪ್ರಯಾಣಿಕರಿಂದ 39,254 ರೂ. ದಂಡ ವಸೂಲಿ (16-12-2017)

   

ಕೆಎಸ್‍ಆರ್‍ಟಿಸಿ : 318 ಮಂದಿ ಪ್ರಯಾಣಿಕರಿಂದ 39,254 ರೂ. ದಂಡ ವಸೂಲಿ

ಚಾಮರಾಜನಗರ, ಡಿ. 16 - ಚಾಮರಾಜನಗರ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನವೆಂಬರ್ ಮಾಹೆಯಲ್ಲಿ 1928 ಬಸ್ಸುಗಳನ್ನು ಮಾರ್ಗ ತನಿಖೆಗೆ ಒಳಪಡಿಸಿ 205 ಪ್ರಕರಣಗಳನ್ನು ಪತ್ತೆ ಹಚ್ಚಿದೆ.
ಟಿಕೆಟ್ ಪಡೆಯದೇ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ 318 ಮಂದಿ ಪ್ರಯಾಣಿಕರಿಗೆ 39,254 ರೂ. ದಂಡ ವಿಧಿಸಲಾಗಿದೆ ಎಂದು ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಆಶೋಕ್ ಕುಮಾರ್ ಪÀ್ರಕಟಣೆಯಲ್ಲಿ ತಿಳಿಸಿದ್ದಾರÉ.
ಜ. 8ರಿಂದ ನಗರದಲ್ಲಿ ಆಧಾರ್ ಅದಾಲತ್ ಕಾರ್ಯಕ್ರಮ
ಚಾಮರಾಜನಗರ, ಡಿ. 16 - ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್ ಸಂಖ್ಯೆ ಅತ್ಯಂತ ಪ್ರಯೋಜನಕಾರಿಯಾಗಿರುವ ಹಿನ್ನೆಲೆಯಲ್ಲಿ ಆಧಾರ್ ನೋಂದಣಿ ಮಹತ್ವ ಪಡೆದಿದೆ.
ಜಿಲ್ಲೆಯಲ್ಲಿ ಆಧಾರ್ ಅದಾಲತ್ ಕಾರ್ಯಕ್ರಮವನ್ನು ಜಿಲ್ಲಾಡಳಿತವು ಬೆಂಗಳೂರಿನ ಇ-ಆಡಳಿತ ಕೇಂದ್ರದ (ಸಿಇಜಿ) ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡುವ ದೃಷ್ಠಿಯಿಂದ 2018ರ ಜನವರಿ 8 ರಿಂದ 12ರವರೆಗೆ ನಗರದ ಸತ್ತಿ ರಸ್ತೆಯಲ್ಲಿರುವ ಡಿ. ದೇವರಾಜ ಅರಸು ಭವನದಲ್ಲಿ ಆಧಾರ್ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಆಧಾರ್ ತಿದ್ದುಪಡಿ, ಅಪ್‍ಡೇಷನ್, ಹೊಸ ನೋಂದಣಿ ಹಾಗೂ ಆಧಾರ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಚಾಲನಾ ಪರವಾನಗಿ ಪ್ರತಿ ಅಥವಾ ಇನ್ನಿತರೆ ವಿಳಾಸ ದಾಖಲಾತಿಗಳೊಂದಿಗೆ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.


ಗುಂಡ್ಲುಪೇಟೆ :  ವಿಕಲಚೇತರ ವಾಹನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಡಿ. 16- ಗುಂಡ್ಲುಪೇಟೆ ಪುರಸಭಾ ವತಿಯಿಂದ ಪಟ್ಟಣದಲ್ಲಿ ವಾಸವಿರುವ ವಿಕಲಚೇತನರಿಗೆ ಎಸ್ ಎಫ್ ಸಿ ಶೇ.3ರ ಯೋಜನೆಯಡಿ ಮೂರು ಚಕ್ರದ ಸ್ಕೂಟರ್ ವಿತರಿಸಲಾಗುತ್ತದೆ.
ವಿಕಲಚೇತನರು ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ  ಡಿಸೆಂಬರ್ 28ರ ಒಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಪುರಸಭೆ ಕಚೇರಿಯನ್ನು üಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಚಾ.ನಗರ ನಗರಸಭೆ : ಆಸ್ತಿ ತೆರಿಗೆ, ನೀರಿನ ಕಂದಾಯ ಪಾವತಿಸಲು ಸೂಚನೆ

ಚಾಮರಾಜನಗರ, ಡಿ. 16- ಚಾಮರಾಜನಗರದ ನಗರಸಭಾ ವ್ಯಾಪ್ತಿಗೆ ಒಳಪಡುವ ಕಟ್ಟಡ, ನಿವೇಶನಗಳ ಮಾಲೀಕರುಗಳು ಆಸ್ತಿ ತೆರಿಗೆ ಹಾಗೂ ನೀರಿನ ಕಂದಾಯವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿರುವವರು ತೆರಿಗೆ ಪಾವತಿಸುವಂತೆ ಸೂಚಿಸಿದೆ.
ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ತೊಂದರೆಯಾಗಿರುವುದರಿಂದ ಮಾಲೀಕರುಗಳು ಕೂಡಲೇ ಆಸ್ತಿ ತೆರಿಗೆ ಹಾಗೂ ನೀರಿನ ಕಂದಾಯ ಪಾವತಿಸುವಂತೆ ತಿಳಿಸಿದೆ.
ಅಕ್ರಮ ನಲ್ಲಿ ಸಂಪರ್ಕ ಹೊಂದಿರುವವರು ನಿಗಧಿತ ಶುಲ್ಕ ಪಾವತಿಸಿ ಸಕ್ರಮಗೊಳಿಸಿಕೊಳ್ಳುವಂತೆಯೂ ನಗರಸಭೆ ಪೌರಾಯುಕ್ತರಾದ ಬಿ. ಫೌಜಿಯಾ ತರನ್ನುಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಳ್ಳೇಗಾಲ : ವಿವಿಧ ಯೋಜನೆಯಡಿ ತರಬೇತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಡಿ. 16 - ಕೊಳ್ಳೇಗಾಲ ನಗರಸಭೆಯು ಪಟ್ಟಣದ ನಿರುದ್ಯೋಗಿ ವಿದ್ಯಾವಂತ ಯುವಕ ಯುವತಿಯರಿಗೆ ಪ್ರಸಕ್ತ ಸಾಲಿನಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆಯಡಿ ನಲ್ಮ್ ಅಭಿಯಾನ ಯೋಜನೆಯ ಇಎಸ್‍ಟಿಪಿ ಕೌಶಲ್ಯ ತರಬೇತಿಗೆ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಉಪಘಟಕದಡಿ ಸಿವಿಂಗ್ ಮಿಷನ್ ಆಪರೇಟರ್, ಸೆಲ್ಫ್ ಎಂಪ್ಲಾಯ್ಡ ಟೈಲರ್, ಟ್ಯಾಕ್ಸಿ ಡ್ರೈವರ್, ಡೊಮೆಸ್ಟಿಕ್ ಐಟಿ ಹೆಲ್ಪ್ ಡೆಸ್ಕ್ ಅಟೆಂಡೆಂಟ್, ವೆಬ್ ಡೆವಲಪರ್, ಪ್ಲಂಬರ್ (ಜನರಲ್) ಮತ್ತು ಅಸಿಸ್ಟೆಂಟ್ ಎಲೆಕ್ಟ್ರೀಷಿಯನ್ ತರಬೇತಿಗೆ ಅರ್ಜಿ ಆಹ್ವಾನಿಸಿದೆ.
5ನೇ ತರಗತಿ ವಿದ್ಯಾರ್ಹತೆ ಉಳ್ಳವರಿಗೆ ಸಿವಿಂಗ್ ಮಿಷನ್ ಆಪರೇಟರ್ ಹಾಗೂ ಪ್ಲಂಬರ್ (ಜನರಲ್), 8ನೇ ತರಗತಿ ವಿದ್ಯಾರ್ಹತೆಯವರಿಗೆ ಸೆಲ್ಫ್ ಎಂಪ್ಲಾಯ್ಡ ಟೈಲರ್, ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆಯವರಿಗೆ ಟ್ಯಾಕ್ಸಿ ಡ್ರೈವರ್ ಹಾಗೂ ಅಸಿಸ್ಟೆಂಟ್ ಎಲೆಕ್ಟ್ರೀಷಿಯನ್, ಪಿಯುಸಿ ವಿದ್ಯಾರ್ಹತೆಯವರಿಗೆ ಡೊಮೆಸ್ಟಿಕ್ ಐಟಿ ಹೆಲ್ಪ್ ಡೆಸ್ಕ್ ಅಟೆಂಡೆಂಟ್, ವೆಬ್ ಡೆವಲಪರ್ ತರಬೇತಿಗೆ ಅರ್ಜಿ ಸಲ್ಲಿಸಬಹುದು.
ಆಸಕ್ತ 18 ರಿಂದ 40ರ ವಯೋಮಿತಿಯವರು ಅರ್ಜಿಯನ್ನು ಪುರಸಭೆ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 23ರೊಳಗೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಕಚೇರಿಯನ್ನು ಸಂಪರ್ಕಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 23ರಂದು ಗ್ರಾಮೀಣ ಕ್ರೀಡೋತ್ಸವ ಕ್ರೀಟಾಕೂಟ

ಚಾಮರಾಜನಗರ, ಡಿ. 16 - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ಶ್ರೀ ಮಂಟೇಸ್ವಾಮಿ ದೇವಾಲಯದ ಆವರಣದಲ್ಲಿ ಗ್ರಾಮೀಣ ಕ್ರೀಡೋತ್ಸವವನ್ನು ಡಿಸೆಂಬರ್ 23ರಂದು ಬೆಳಿಗ್ಗೆ 10.30 ಗಂಟೆಗೆ  ಏರ್ಪಡಿಸಲಾಗಿದೆ.
ಸ್ಪರ್ಧೆಗಳು ಎರಡು ವಿಭಾಗದಲ್ಲಿ ನಡೆಯಲಿದ್ದು ಪುರುಷರ ವಿಭಾಗದಲ್ಲಿ ವಾಲಿಬಾಲ್  ಹಾಗೂ ಮಹಿಳೆಯರ ವಿಭಾಗದಲ್ಲಿ ಕಬಡ್ಡಿ ಗುಂಪು ಸ್ಪರ್ಧೆ ನÀಡೆಸಲಾಗುವುದು. ಪ್ರಥಮ ಬಹುಮಾನವಾಗಿ 5 ಸಾವಿರ ರೂ, ದ್ವಿತೀಯ ಬಹುಮಾನವಾಗಿ 3 ಸಾವಿರ ರೂ. ನೀಡಲಾಗುವುದು.
ತಾಲೂಕಿನ ಚಂದಕವಾಡಿ ಹಾಗೂ ಸಂತೆಮರಹಳ್ಳಿ ಹೋಬಳಿಯ ಆಸಕ್ತ ಶಾಲಾ ಕಾಲೇಜು, ಯುವಕ ಸಂಘಗಳು, ಸ್ತ್ರೀಶಕ್ತಿ ಸಂಘಗಳು, ಮಹಿಳಾ ಸಂಘಗಳು, ಪುರುಷ ಸ್ವಸಹಾಯ ಸಂಘಗಳು ಭಾಗವಹಿಸಬಹುದು.
ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ, ಪಡಿತರ ಚೀಟಿ ಅಥವಾ ಇತರೆ ದಾಖಲಾತಿಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಘಟಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ (ದೂರವಾಣಿ ಸಂಖ್ಯೆ 08226-224932) ಅಥವಾ ಮೊಬೈಲ್ ಸಂಖ್ಯೆ 9482718278, 9880211027ನ್ನು ಸಂಪರ್ಕಿಸುವಂತೆ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸರ್ಕಾರದಿಂದ ವಿಕಲಚೇತರ ಸಬಲೀಕರಣ ಯೋಜನೆ ಸಮರ್ಪಕ ಅನುಷ್ಠಾನ : ಡಾ. ಗೀತಾ ಮಹದೇವಪ್ರಸಾದ್ 
ಸಭಾ ಕಾರ್ಯಕ್ರಮಕ್ಕೂ ಮೊದÀಲು ಉಸ್ತುವಾರಿ ಸಚಿವರು, ಶಾಸಕರು, ಇತರೆ ಗಣ್ಯರು ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನಗಳನ್ನು ವಿತರಿಸಿದರು. ವಿಶೇಷಚೇತನರ ಜಾಥಾ ಸಹ ಕಾರ್ಯಕ್ರಮಕ್ಕೂ ಮೊದಲು ನಡೆಯಿತು.

ಚಾಮರಾಜನಗರ, ಡಿ. 16 - ಕರ್ನಾಟಕ ರಾಜ್ಯವು ದೇಶದಲ್ಲೇ ವಿಕಲಚೇತನರ ಸಬಲೀಕರಣ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿರುವ ಅತ್ಯುತ್ತಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಕ್ಕರೆ, ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನ ಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ತಿಳಿಸಿದರು.
ನಗರದ ಜೆ.ಎಚ್. ಪಟೇೀಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಸೌಲಭ್ಯಗಳನ್ನು ತಲುಪಿಸುತ್ತಿದೆ. ಸಮರ್ಪಕವಾಗಿ ಯೋಜನೆ ಅನುಷ್ಠಾನಗೊಳಿಸುತ್ತಿರುವುದಕ್ಕೆ 2016ನೇ ಸಾಲಿನಲ್ಲಿ ರಾಜ್ಯ ಸರ್ಕಾರ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ. 2017-18ನೇ ಸಾಲಿನ ಆಯವ್ಯಯದಲ್ಲಿ ವಿಕಲಚೇತನರ ಕಾರ್ಯಕ್ರಮಗಳಿಗೆ ಒಂದು ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದರು.
ಅಂಗವೈಕಲ್ಯತೆ ಇರುವವರನ್ನು ವಿಕಲಚೇತನರೆಂದು ಕರೆಯುವ ಬದಲು ವಿಶೇಷಚೇತನರು ಎಂದು ಕರೆಯಲು ಬಯಸುತ್ತೇನೆ. ಏಕೆಂದರೆ ನಿಮ್ಮೆಲ್ಲರಲ್ಲಿ ವಿಶೇಷಚೇತನ ಅಡಗಿದೆ. ವಿಶೇಷಚೇತನರು ಸಮಾಜದ ಅವಿಭಾಜ್ಯದ ಅಂಗವಾಗಿ ಬಾಳಲು ಅನುಕೂಲಕರ ವಾತಾವರಣ ಕಲ್ಪಿಸಿಕೊಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಅಂಗವಿಕಲತೆ ಶಾಪವಲ್ಲ. ಅಂಗವೈಕಲ್ಯತೆಯನ್ನು ಮೀರಿ ಹಲವಾರು ವಿಶೇಷಚೇತನರು ಕ್ರೀಡೆ, ಸಾಹಿತ್ಯ, ಚಿತ್ರಕಲೆ, ರಂಗಭೂಮಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅವರ ಪ್ರತಿಭೆ ಹೊರಹೊಮ್ಮಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ವಿಶೇಷಚೇತನರು ಯಾವುದೇ ಮರ್ಜಿಗೆ ಒಳಪಡದೆ ಅನುಕಂಪ ಅಪೇಕ್ಷಿಸದೆ ತಮ್ಮದೇ ಆದ ಕ್ಷೇತ್ರಗಳಲ್ಲಿ ಧ್ರುವತಾರೆಯಂತೆ ಮಿಂಚುತ್ತಿದ್ದಾರೆ ಎಂದು ಶ್ಲಾಘಿಸಿದರು.
ವಿಶೇಷಚೇತನರು ಯಾವುದೇ ಕೀಳರಿಮೆ ಹೊಂದದೆ ಏಕಾಗ್ರತೆ ಪರಿಶ್ರಮದಿಂದ ಈಗಾಗಲೇ ವಿವಿಧ ರಂಗಗಳಲ್ಲಿ ಅದ್ವಿತೀಯ ಸಾಧನೆ ಗೈದ ಸಾಧಕರನ್ನು ಮಾದರಿಯಾಗಿಟ್ಟುಕೊಂಡು ಅವರದ್ದೇ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ  ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ವಿಕಲಚೇತನರು ಅಸಹಾಯಕರಲ್ಲ. ಎಲ್ಲರಂತೆ ಅವರಿಗೂ ಪ್ರತಿಭೆ ಇದೆ. ಅದಕ್ಕೆ ಪ್ರೋತ್ಸಾಹ ನೀಡಬೇಕಿದೆ. ಸರ್ಕಾರ ಸಹ ಸಾಕಷ್ಟು ಉತ್ತೇಜನಕಾರಿಯಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಇದರ ಸದ್ಭಳಕೆ ಮಾಡಿಕೊಂಡು ಮುಂದೆಬರಬೇಕೆಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್ ಮಾತನಾಡಿ ವಿಕಲಚೇತನರಿಗೆ ಪೋಷಕರು ವಿಶೇಷ ಕಾಳಜಿ ತೋರಬೇಕು. ಪೌಷ್ಠಿಕ ಆಹಾರವನ್ನು ನೀಡಬೇಕು. ಪ್ರೀತಿ ವಾತ್ಸಲ್ಯದಿಂದ ಕಂಡು ಅವರ ಚಟುವಟಿಕೆಗಳಿಗೆ ಸದಾ ನೆರವಾಗಬೇಕು ಎಂದು ಮನವಿ ಮಾಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು ಮಾತನಾಡಿ ವಿಕಲಚೇತನರು ಸಂಘಟಿತರಾಗಿ ಅವಕಾಶಗಳನ್ನು ಪಡೆಯಲು ಮುಂದೆ ಬರುತ್ತಿರುವುದು ಸಂತಸದ ವಿಷಯವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರತಿಭಾವಂತರು ಇದ್ದಾರೆ. ಅವರನ್ನು ಗುರುತಿಸಿ ನೆರವಾದರೆ ಉತ್ತಮ ಸಾಧನೆ ಮಾಡಲು ಪ್ರೇರೇಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ತಾವೂ ಸಹ ಆಸಕ್ತಿ ವಹಿಸಿರುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ಅನೇಕ ವಿಕಲಚೇತನರು ಕಣ್ಣು ತೆರೆಸುವ ಸಾಧನೆಗಳ ಮೂಲಕ ಮುಂದಾಗಿದ್ದಾರೆ. ನಾವು ಎಲ್ಲರಿಗಿಂತ ಸಮರ್ಥರಾಗಿದ್ದೇವೆ ಎಂಬ ಆತ್ವವಿಶ್ವಾಸ ಬೆಳೆಸಿಕೊಳ್ಳಬೇಕು. ಯಾರೂ ಪರಿಪೂರ್ಣರಲ್ಲ. ಇಲ್ಲದೇ ಇರುವ ಅಂಶಗಳ ಬಗ್ಗೆ ಕೊರಗದೆ ಸಿಗುವ ಅವಕಾಶಗಳನ್ನು ಬಳಸಿಕೊಂಡು ಮುಂದೆ ಬರಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಕೆರೆಹಳ್ಳಿ ನವೀನ್, ಸದಸ್ಯರಾದ ಉಮಾವತಿ, ನಗರಸಭೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ರೇಣುಕ ಮಲ್ಲಿಕಾರ್ಜುನ್, ಮುಖಂಡರಾದ ರಂಗಸ್ವಾಮಿ, ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಇತರರು ಉ¥ಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದÀಲು ಉಸ್ತುವಾರಿ ಸಚಿವರು, ಶಾಸಕರು, ಇತರೆ ಗಣ್ಯರು ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನಗಳನ್ನು ವಿತರಿಸಿದರು. ವಿಶೇಷಚೇತನರ ಜಾಥಾ ಸಹ ಕಾರ್ಯಕ್ರಮಕ್ಕೂ ಮೊದಲು ನಡೆಯಿತು.

ನಗರ, ಪಟ್ಟಣ ಅಭಿವೃದ್ಧಿ ಕಾಮಗಾರಿ ತ್ವರಿತ ಪೂರ್ಣಗೊಳಿಸಲು ಉಸ್ತುವಾರಿ ಸಚಿವರ ಸೂಚನೆ 

ಚಾಮರಾಜನಗರ, ಡಿ. 16 :- ಜಿಲ್ಲೆಯ ನಗರ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಕೈಗೊಂಡಿರುವ ಹೆದ್ದಾರಿ, ಮುಖ್ಯರಸ್ತೆ, ಕುಡಿಯುವ ನೀರಿನ ಕಾಮಗಾರಿಯೂ ಸೇರಿದಂತೆ ಎಲ್ಲ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಕೇಂದ್ರವಾದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು, ಹನೂರು ಭಾಗಗಳಲ್ಲಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಚಾಮರಾಜನಗರ ಪಟ್ಟಣದಲ್ಲಿ ಹಲ ತಿಂಗಳಿಂದ ಹೆದ್ದಾರಿ ಕಾಮಗಾರಿ ಸಾಗಿದೆ. ಈ ಕೆಲಸ ಶೀಘ್ರವಾಗಿ ಪೂರ್ಣಗೊಳಿಸಬೇಕು. ಹಗಲಿರುಳು ಕಾಮಗಾರಿ ನಿರ್ವಹಿಸಬೇಕು ಎಂದರು.
ಕಾಮಗಾರಿ ವಿಳಂಬವಾದರೆ ಜನರಿಗೂ ತೊಂದರೆಯಾಗಲಿದೆ. ವಾಹನ ಸಂಚಾರಕ್ಕೂ ಮತ್ತಷ್ಟು ಅಡಚಣೆಯಾಗುತ್ತದೆ. ಹೀಗಾಗಿ ಹೆಚ್ಚು ಕಾರ್ಮಿಕರು ಹಾಗೂ ಯಂತ್ರಗಳ ನೆರವಿನಿಂದ ಕಾಮಗಾರಿಯನ್ನು ಚುರುಕುಗೊಳಿಸಬೇಕು. ಯಾವುದೇ ಅಡಚಣೆಗಳಿದ್ದರೂ ಸ್ಥಳೀಯವಾಗಿ ಇಲಾಖೆಗಳನ್ನು ಸಂಪರ್ಕಿಸಿ ಸಮನ್ವಯ ಸಾಧಿಸಿ ಕಾಮಗಾರಿ ಪೂರೈಸಬೇಕು ಎಂದು ಸಚಿವರು ತಿಳಿಸಿದರು.
ಒಳಚರಂಡಿ, ಮ್ಯಾನ್‍ಹೋಲ್ ನಿರ್ಮಾಣ ಕೆಲಸವನ್ನು ಪೂರ್ಣ ಮಾಡಬೇಕು. ಯಾವ ಭಾಗದಲ್ಲಿ ಅಗತ್ಯವಿದೆ ಎಂಬುದನ್ನು  ರಸ್ತೆ ಕೆಲಸದ ಸಮಯದಲ್ಲಿಯೇ ಗುರುತಿಸಬೇಕು. ಅವಶ್ಯವಿರುವ ಕಡೆ ಕಾಮಗಾರಿ ನಿರ್ವಹಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸ್ಥಳ ಪರಿಶೀಲಿಸಿ ಪ್ರಕ್ರಿಯೆ ಆರಂಭಿಸುವಂತೆ ಸಚಿವರು ತಿಳಿಸಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ ಪಟ್ಟಣದಲ್ಲಿ ಕೈಗೊಂಡಿರುವ ಕೆಲಸಗಳನ್ನು ಅಪೂರ್ಣ ಮಾಡಬಾರದು. ಕೆಲವೆಡೆ ಕಾಮಗಾರಿ ಆರಂಭಿಸಲು ಯಾವುದೇ ತೊಡಕು ಇಲ್ಲ. ಆದರೂ ವಿಳಂಬ ಮಾಡಲಾಗುತ್ತಿದೆ. ಇನ್ನುಮುಂದೆ ಇದಕ್ಕೆ ಅವಕಾಶ ನೀಡದೆ ವ್ಯಾಪಕವಾಗಿ ಕೆಲಸ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ನಗರದ ರಸ್ತೆಗಳು ಏಕಕಾಲದಲ್ಲಿ ಆರಂಭವಾಗಿರುವುದರಿಂದ ಸಂಚಾರ ಸುಗಮ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ಪರ್ಯಾಯ ರಸ್ತೆ ಕೆಲಸವನ್ನು ಮೊದಲು ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಗುಂಡ್ಲುಪೇಟೆ, ಯಳಂದೂರು ಸೇರಿದಂತೆ ಸ್ಥಳೀಯ ನಗರ ಸಂಸ್ಥೆಗಳ ಜನಪ್ರತಿನಿಧಿಗಳು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.









Friday, 15 December 2017

ತಾಲೂಕು, ಗ್ರಾಮ ಪಂಚಾಯಿತಿ ಉಪಚುನಾವಣೆ : ಮದ್ಯ ಮಾರಾಟ ನಿಷೇಧ,ಮಾದಾಪುರ ಜಿ.ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ (15-12-2017),ಮಾದಾಪುರ ಜಿ.ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ (15-12-2017)


ಚಾಮರಾಜನಗರ..................vss

ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಕಾರ್ಯಕಾರಿ ಸಮಿತಿಗೆ ಜಿಲ್ಲೆಯಿಂದ ನೂತನವಾಗಿ ಆಯ್ಕೆಯಾದವರನ್ನ ಕೆಪಿಟಿಸಿಎಲ್ ವೀರಶೈವ  ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು. 

   ನಗರದ ಮಹಾಮನೆಯಲ್ಲಿ ಕೆಪಿಟಿಸಿಎಲ್ ವೀರಶೈವ ನೌಕರರು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸಂಘದ ಅಧ್ಯಕ್ಷ  ಪರಮೇಶ್ವರಪ್ಪ ಮಾತನಾಡಿ, ರಾಜ್ಯ ಸಮಿತಿಗೆ ಜಿಲ್ಲೆಯಿಂದ  ಆಯ್ಕೆಯಾಗಿರುವುದು ಸ್ವಾಗತಾರ್ಹ.  ಯಾವುದೇ ಕ್ಷೇತ್ರದಲ್ಲಿ ಅಭಿವೃದ್ದಿ ಆಗಬೇಕಾದರೆ ಅಲ್ಲಿನ ಒಗ್ಗಟ್ಟು ಬಹು ಮುಖ್ಯ. ನೌಕರರ ಹಾಗು ಗುತ್ತಿಗೆದಾರರ ನಡುವಿನ ಸಂಭಂದ ಒಂದು ನಾಣ್ಯದ ಎರಡು ಮುಖ ಇದ್ದ ಹಾಗೆ. ಆಗಾಗಿ ಎಲ್ಲರೂ ಒಂದುಗೂಡಿ ಕೆಲಸ ನಿರ್ವಹಿಸಿದರೆ ಅಭಿವೃದ್ದಿ ಹಾಗು ಶೀಘ್ರಗತಿಯಲ್ಲಿ ಕೆಲಸಗಳು ಮುಗಿಯುತ್ತವೆ. ಆದ್ದರಿಂದ ಎಲ್ಲರೂ ಜೊತೆಗೂಡಿ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸೋಣ ಎಂದರು.
   ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಹೊಸೂರುಜಗದೀಶ್, ಜಿಲ್ಲೆಯಿಂದ ನನ್ನನ್ನು ಆರಿಸಿ ಕಳುಹಿಸಿರುವುದಕ್ಕೆ ಎಲ್ಲರಿಗೂ ಕೃತಜ್ಞನಾಗಿ ಜಿಲ್ಲೆಯ ಅಭಿವೃದ್ದಿಗೆ ಪ್ರಾಮಾಣಿಕವಾಗಿ ನನ್ನ ಅವಧಿಯಲ್ಲಿ ದುಡಿಯುತ್ತೇನೆ. ಆಗೆಯೇ ಎಲ್ಲರ ಸಹಕಾರವು ಕೂಡ ಅಭಿವೃದ್ದಿ ಕೆಲಸಕ್ಕೆ ಮುಖ್ಯವಾಗಿದೆ. ಕೋಟಿಗಟ್ಟಲೇ ಟೆಂಡೆರ್ ಕರೆದು ಸ್ಥಳೀಯ ಗುತ್ತಿಗೆದಾರರಿಗೆ ಕೆಲಸವಿಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ 5 ಲಕ್ಷದವರೆಗಿನ ಕಾಮಗಾರಿಯನ್ನು ತುಂಡುಗುತ್ತಿಗೆ ಆಧಾರದ ಮೇಲೆ ನೀಡಿದರೆ ಸ್ಥಳೀಯರಿಗೆ ಅನುಕೂಲವಾಗುತ್ತದೆ. ಇದನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸಂಘಕ್ಕೆ ಒತ್ತಡ ತರಲಾಗುವುದು ಎಂದರು.
ಚಾಮರಾಜನಗರ
    ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಕಾರ್ಯಕಾರಿ ಸಮಿತಿಗೆ ಜಿಲ್ಲೆಯಿಂದ ನೂತನವಾಗಿ ಆಯ್ಕೆಯಾದ ಹೊಸೂರುಜಗದೀಶ್ ಅವರನ್ನು ಕೆಪಿಟಿಸಿಎಲ್ ವೀರಶೈವ  ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
   ನಗರದ ಮಹಾಮನೆಯಲ್ಲಿ ಕೆಪಿಟಿಸಿಎಲ್ ವೀರಶೈವ ನೌಕರರು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸಂಘದ ಅಧ್ಯಕ್ಷ  ಪರಮೇಶ್ವರಪ್ಪ ಮಾತನಾಡಿ, ರಾಜ್ಯ ಸಮಿತಿಗೆ ಜಿಲ್ಲೆಯಿಂದ  ಆಯ್ಕೆಯಾಗಿರುವುದು ಸ್ವಾಗತಾರ್ಹ.  ಯಾವುದೇ ಕ್ಷೇತ್ರದಲ್ಲಿ ಅಭಿವೃದ್ದಿ ಆಗಬೇಕಾದರೆ ಅಲ್ಲಿನ ಒಗ್ಗಟ್ಟು ಬಹು ಮುಖ್ಯ. ನೌಕರರ ಹಾಗು ಗುತ್ತಿಗೆದಾರರ ನಡುವಿನ ಸಂಭಂದ ಒಂದು ನಾಣ್ಯದ ಎರಡು ಮುಖ ಇದ್ದ ಹಾಗೆ. ಆಗಾಗಿ ಎಲ್ಲರೂ ಒಂದುಗೂಡಿ ಕೆಲಸ ನಿರ್ವಹಿಸಿದರೆ ಅಭಿವೃದ್ದಿ ಹಾಗು ಶೀಘ್ರಗತಿಯಲ್ಲಿ ಕೆಲಸಗಳು ಮುಗಿಯುತ್ತವೆ. ಆದ್ದರಿಂದ ಎಲ್ಲರೂ ಜೊತೆಗೂಡಿ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸೋಣ ಎಂದರು.
   ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಹೊಸೂರುಜಗದೀಶ್, ಜಿಲ್ಲೆಯಿಂದ ನನ್ನನ್ನು ಆರಿಸಿ ಕಳುಹಿಸಿರುವುದಕ್ಕೆ ಎಲ್ಲರಿಗೂ ಕೃತಜ್ಞನಾಗಿ ಜಿಲ್ಲೆಯ ಅಭಿವೃದ್ದಿಗೆ ಪ್ರಾಮಾಣಿಕವಾಗಿ ನನ್ನ ಅವಧಿಯಲ್ಲಿ ದುಡಿಯುತ್ತೇನೆ. ಆಗೆಯೇ ಎಲ್ಲರ ಸಹಕಾರವು ಕೂಡ ಅಭಿವೃದ್ದಿ ಕೆಲಸಕ್ಕೆ ಮುಖ್ಯವಾಗಿದೆ. ಕೋಟಿಗಟ್ಟಲೇ ಟೆಂಡೆರ್ ಕರೆದು ಸ್ಥಳೀಯ ಗುತ್ತಿಗೆದಾರರಿಗೆ ಕೆಲಸವಿಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ 5 ಲಕ್ಷದವರೆಗಿನ ಕಾಮಗಾರಿಯನ್ನು ತುಂಡುಗುತ್ತಿಗೆ ಆಧಾರದ ಮೇಲೆ ನೀಡಿದರೆ ಸ್ಥಳೀಯರಿಗೆ ಅನುಕೂಲವಾಗುತ್ತದೆ. ಇದನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸಂಘಕ್ಕೆ ಒತ್ತಡ ತರಲಾಗುವುದು ಎಂದರು. 

ತಾಲೂಕು, ಗ್ರಾಮ ಪಂಚಾಯಿತಿ ಉಪಚುನಾವಣೆ : ಮದ್ಯ ಮಾರಾಟ ನಿಷೇಧ

ಚಾಮರಾಜನಗರ, ಡಿ. 15 :- ಚಾಮರಾಜನಗರ ತಾಲೂಕು ಹಾಗೂ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಡಿಸೆಂಬರ್ 17ರಂದು ಮತದಾನ ಹಾಗೂ ಡಿಸೆಂಬರ್ 20ರಂದು ಮತ ಎಣಿಕೆ ನಡೆಯಲಿರುವ ಹಿನ್ನೆಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಬಿ. ರಾಮು ಅವರು ಸದರಿ ಸಂದರ್ಭಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಚಾಮರಾಜನಗರ ತಾಲೂಕು ಹರದನಹಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರಕ್ಕೆ ಹಾಗೂ ತಾಲೂಕಿನ ಬದನಗುಪ್ಪೆ, ಸಂತೆಮರಹಳ್ಳಿ, ಅಮಚವಾಡಿ, ಹೊನ್ನಹಳ್ಳಿ ಕ್ಷೇತ್ರ ವ್ಯಾಪ್ತಿ, ಕೊಳ್ಳೇಗಾಲ ತಾಲೂಕಿನ ಗೋಪಿನಾಥಂ ಹಾಗೂ ಗುಂಡ್ಲುಪೇಟೆ ತಾಲೂಕಿನ ಬಲಚವಾಡಿ, ತೆರಕಣಾಂಬಿ ಮತ್ತು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಡಿಸೆಂಬರ್ 15ರ ಮಧ್ಯರಾತ್ರಿಯಿಂದ ಡಿಸೆಂಬರ್ 17ರ ಮಧ್ಯರಾತ್ರಿವರೆಗೆ ಮತದಾನದ ನಿಮಿತ್ತ ಎಲ್ಲಾ ರೀತಿಯ ಮದ್ಯ ಮಾರಾಟ, ಶೇಖರಣೆ ಹಾಗೂ ಹಂಚಿಕೆಯನ್ನು ನಿಷೇಧಿಸಲಾಗಿದೆ.
ಮತ ಎಣಿಕೆ ನಡೆಯಲಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 19ರ ಮಧ್ಯರಾತ್ರಿಯಿಂದ ಡಿಸೆಂಬರ್ 20ರ ಸಂಜೆ 5 ಗಂಟೆಯವರೆಗೆ ಎಲ್ಲ ರೀತಿಯ ಮಧ್ಯ ಮಾರಾಟ, ಶೇಖರಣೆ ಮತ್ತು ಹಂಚಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.


ಡಿ. 16ರಂದು ನಗರದಲ್ಲಿ ವಿಶ್ವ ವಿಕಲಚೇತರ ದಿನಾಚರಣೆ

ಚಾಮರಾಜನಗರ, ಡಿ. 15 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಶ್ರಯದಲ್ಲಿ ಎಲ್ಲರಿಗೂ ಸುಸ್ಥಿರ ಮತ್ತು ಚೇತೋಹಾರಿಯಾದ ಪರಿವರ್ತನಾ ಸಮಾಜ ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಡಿಸೆಂಬರ್ 16ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿನ ಜೆ.ಎಚ್. ಪಟೇೀಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಕ್ಕರೆ, ಸಣ್ಣ ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜು), ಕೆ.ಟಿ. ಶ್ರೀಕಂಠೇಗೌಡ, ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಆರ್. ಉಮೇಶ್, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆಯ ಅಧ್ಯಕ್ಷರಾದ ಶೋಭ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು,  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಸನ್ಮಾನ ಹಾಗೂ ಬಹುಮಾನ ವಿತರಣೆ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ರೈತರಿಗೆ ವಾಹನ ಚಾಲನಾ ತರಬೇತಿ

ಚಾಮರಾಜನಗರ, ಡಿ. 15:- ನಗರದ ಪ್ರಾದೇಶಿಕ ಸಾರಿಗೆ ಇಲಾಖೆಯು ರೈತ ಸಾರಥಿ ಯೋಜನೆಯಡಿ ಕೃಷಿ ಟ್ರಾಕ್ಟರ್ ಮತ್ತು ಟ್ರೈಲರ್ ಹೊಂದಿರುವ ರೈತರಿಗೆ ಮತ್ತು ಅವರು ಹೊಂದಿರುವ ಮೋಟಾರು ಸೈಕಲ್‍ಗೆ ಕಲಿಕಾ ಲೈಸೆನ್ಸ್ ಮತ್ತು ಚಾಲನಾ ತರಬೇತಿ ನೀಡಿ ಅನುಜ್ಞಾ ಪತ್ರ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತ ಬಾಂಧವರು ಸಾರಿಗೆ ಕಚೇರಿಯನ್ನು ಸಂಪರ್ಕಿಸಿ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ

ಚಾಮರಾಜನಗರ, ಡಿ. 15:- ಜಿಲ್ಲೆಯ ನಾಲ್ಕೂ ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳು ಡಿಸೆಂಬರ್ 18 ರಿಂದ 28ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯಾ ತಾಲೂಕಿನ ಸರ್ಕಾರಿ ಅತಿಥಿಗೃಹಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸಲಿದ್ದಾರೆ.
ಡಿಸೆಂಬರ್ 18ರಂದು ಕೊಳ್ಳೇಗಾಲ, 19ರಂದು ಯಳಂದೂರು, 27ರಂದು ಚಾಮರಾಜನಗರ ಹಾಗೂ 28ರಂದು ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರಿಂದ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸುವರು.
ಸರ್ಕಾರಿ ಕಚೇರಿಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪ್ರಪತ್ರಗಳಲ್ಲಿ ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ತಾಲೂಕು ಮಟ್ಟದ ಯುವಜನ ಮೇಳ 

ಚಾಮರಾಜನಗರ, ಡಿ. 15 - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಯುವಜನ ಮೇಳವನ್ನು ಕೋಳ್ಳೆಗಾಲ ಹಾಗೂ ಯಳಂದೂರು ತಾಲೂಕುಗಳಲ್ಲಿ ಏರ್ಪಡಿಸಲಾಗಿದೆ.
ಕೊಳ್ಳೇಗಾಲದ ಎಸ್‍ವಿಕೆ ಕಾಲೇಜಿನಲ್ಲಿ ಡಿಸೆಂಬರ್ 19ರಂದು ಹಾಗೂ ಯಳಂದೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಡಿಸೆಂಬರ್ 22ರಂದು ನಡೆಸಲಾಗುವುದು. ಸ್ಪರ್ಧಾ ದಿನದಂದು ಬೆಳಿಗ್ಗೆ 9 ಗಂಟೆಗೆ ಆಯಾ ತಾಲೂಕಿನ ವ್ಯವಸ್ಥಾಪಕರಲ್ಲಿ ವರದಿ ಮಾಡಿಕೊಳ್ಳುವಂತೆ ತಿಳಿಸಿದೆ.
ವೈಯಕ್ತಿಕವಾಗಿ ಭಾವಗೀತೆ, ಲಾವಣಿ, ರಂಗಗೀತೆ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳಿವೆ.
ಗುಂಪು ಸ್ಪರ್ಧೆಗಳಾಗಿ ಗೀಗೀ ಪದ (5 ಮಂದಿ), ಕೋಲಾಟ ಹಾಗೂ ಜಾನಪದ ನೃತ್ಯ (12 ಮಂದಿ), ಸೋಬಾನೆ ಪದ (4 ಮಂದಿ), ಭಜನೆ (8 ಮಂದಿ), ಜಾನಪದ ಗೀತೆ ಹಾಗೂ ಚರ್ಮವಾದ್ಯ ಮೇಳ (6 ಮಂದಿ) ಸ್ಪರ್ಧೆಗಳು ನಡೆಯಲಿವೆ.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ (ದೂರವಾಣಿ ಸಂಖ್ಯೆ 08226-224932) ಅಥವಾ ಮೊಬೈಲ್ ಸಂಖ್ಯೆ 9482718278, 9880211027ನ್ನು ಸಂಪರ್ಕಿಸುವಂತೆ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 19ರಂದು ನಗರದಲ್ಲಿ ಪ.ಜಾ., ಪ.ಪಂ. ರೈತರಿಗೆ ಅರಿವು ಕಾರ್ಯಕ್ರಮ 

ಚಾಮರಾಜನಗರ, ಡಿ. 15:- ತೋಟಗಾರಿಕೆ ಇಲಾಖೆ ವತಿಯಿಂದ ಸೂಕ್ಷ್ಮ ಹನಿ ನೀರಾವರಿ ಯೋಜನೆ (ಡ್ರಿಪ್) ಹಾಗೂ ವಿವಿಧ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದ ರೈತಬಾಂಧವರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಡಿಸೆಂಬರ್ 19ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜಮೀನು ಹೊಂದಿದ್ದು ನೀರಾವರಿ ಸೌಲಭ್ಯವಿರುವವರಿಗೆ ಇಲಾಖಾ ವತಿಯಿಂದ ದೊರೆಯುವ ಸವಲತ್ತುಗಳ ಕುರಿತು ತಿಳಿಸಲಾಗುವುದು.
ರೈತಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 27ರಂದು ವಾಹನಗಳ ಬಹಿರಂಗ ಹರಾಜು

ಚಾಮರಾಜನಗರ, ಡಿ. 15:- ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಮುಟ್ಟುಗೋಲು ಹಾಕಿಕೊಂಡು ತಾಲೂಕಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಭಿರಕ್ಷೆಗೆ ಇಡಲಾಗಿರುವ ಮ್ಯಾಕ್ಸಿಕ್ಯಬ್ ವಾಹನಗಳನ್ನು ಹಾಗೂ ಜೆಸಿಬಿಯನ್ನು ಯಥಾ ಸ್ಥಿತಿಯಲ್ಲಿ ಚಾಮರಾಜನಗರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಡಿಸೆಂಬರ್ 27ರಂದು ಬೆಳಿಗ್ಗೆ 11.30 ಗಂಟೆಗೆ ಬಹಿರಂಗ ಹರಾಜು ಮಾಡಲಾಗುವುದು.
ನಗರದ ಪಟ್ಟಣ ಪೊಲೀಸ್ ಠಾಣೆ, ಕೊಳ್ಳೇಗಾಲದ ಗ್ರಾಮಾಂತರ ಹಾಗೂ ಪಟ್ಟಣ ಪೊಲೀಸ್ ಠಾಣೆ ಮತ್ತು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ವಾಹನವನ್ನು ಅಭಿರಕ್ಷೆಗೆ ಇಡಲಾಗಿದೆ.
ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು ವಾಹನಗಳನ್ನು ಆಯಾ ಪೊಲೀಸ್ ಠಾಣೆಯಲ್ಲಿ ಪರಿಶೀಲಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹನಿ ನೀರಾವರಿಗೆ ಸಹಾಯಧನ : ಹೆಸರು ನೊಂದಾಯಿಸಲು ಮನವಿ

ಚಾಮರಾಜನಗರ, ಡಿ. 15:- ತೋಟಗಾರಿಕೆ ಇಲಾಖೆಯು ಸೂಕ್ಷ್ಮ ಹನಿ ನೀರಾವರಿ ಯೋಜನೆಯನ್ನು ಜಿಲ್ಲೆಯಾದ್ಯಂತ ಅನುಷ್ಠಾನಗೊಳಿಸುತ್ತಿದ್ದು ಸಹಾಯಧನ ನೀಡಲಿದೆ.
ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡದ ರೈತರು ತರಕಾರಿ, ಹೂವು, ಹಣ್ಣು, ತೋಟದ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಶೇ. 90ರ ಸಹಾಯಧನ ಲಭಿಸಲಿದೆ.
ತರಕಾರಿ, ಹೂವು. ಅರಿಶಿನ ಇತ್ಯಾದಿ ಕಡಿಮೆ ಅಂತರದ (1.2*0.6 ಮೀ) ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಂಡಲ್ಲಿ ಗರಿಷ್ಟ ಪ್ರತಿ ಹೆಕ್ಟೇರ್‍ಗೆ ಶೇ.90ರಂತೆ ರೂ. 109160 (ರೂ.101013+8147), ಬಾಳೆ ಪಪ್ಪಾಯಿ ಬೆಳೆಗೆ (2*2 ಮೀ. ಅಂತರದ) ರೂ. 83802 (ರೂ. 65824+17978) ರಷ್ಟು ಸಹಾಯಧನವನ್ನು ಎರಡು ಕಂತiಗಳಲ್ಲಿ ಪಡೆಯಲು ಅವಕಾಶವಿದೆ.
ಆಸಕ್ತ ರೈತರು ಪ್ರಸಕ್ತ ಸಾಲಿನ ಪಹಣಿ, ಚೆಕ್ ಬಂದಿ, ಕಂದಾಯ ಇಲಾಖೆಯಿಂದ ಮುಟೇಶನ್, ಗ್ರಾಮ ಲೆಕ್ಕಾಧಿಕಾರಿಗಳಿಂದ ನೀರಿನ ಮೂಲಕ ವಿವರ (ಕಡ್ಡಾಯ), ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಜೆರಾಕ್ಸ್, ದರಪಟ್ಟಿ ಹಾಗೂ ಹನಿ ನೀರಾವರಿ ತಾಕಿಗೆ ರೂಟ್ ಮ್ಯಾಪ್ (ಕಂಪನಿ, ಡೀಲರ್‍ಗಳಿಂದ), ಜಾತಿ ಪ್ರಮÁಣ ಪತ್ರ, ಬ್ಯಾಂಕ್ ಖಾತೆ ವಿವರ (ಐಎಫ್‍ಸಿ ಕೋಡ್‍ನೊಂದಿಗೆ), ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ(ರಾಷ್ಟ್ರೀಕೃತ ಬ್ಯಾಂಕ್ ಖಾತೆ ಮಾತ್ರ), ಬೇಬಾಕಿ – ರೇಷ್ಮೆ ಮತ್ತು ಕೃಷಿ ಇಲಾಖೆಯಿಂದ, ಮಣ್ಣು ಮತ್ತು ನೀರು ಪರೀಕ್ಷೆ ವರದಿ, ಭಾವಚಿತ್ರ ಇತ್ಯಾದಿ ವಿವರಗಳೊಂದಿಗೆ ಆಯಾ ತಾಲೂಕಿನ ತೋಟಗಾರಿಕೆ ಕಚೇರಿಯಲ್ಲಿ ಹೆಸರನ್ನು ನೊಂದಾಯಿಸಿಕೊಂಡು ಯೋಜನೆಯ ಸದುಪಯೋಗ ಪಡೆಯುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಾದಾಪುರ ಜಿ.ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ


ಚಾಮರಾಜನಗರ, ಡಿ. 15:- ಮಾದಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು ಅವರು ಇಂದು ಚಾಲನೆ ನೀಡಿದರು.
ಮಾದಾಪುರ ಕ್ಷೇತ್ರಕ್ಕೆ ಒಳಪಡುವ ಮಂಗಲದ ಹೊಸೂರು, ಮಸಗಾಪುರ, ಜಾಲಹಳ್ಳಿಹುಂಡಿ ಹೊಸಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಟ್ಟರು. ಹಂಡರಕಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯಡಿ ಚರಂಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು.
ಬಳಿಕ ಮಂಗಲ ಗ್ರಾಮದಲ್ಲಿ ಉಪ ಆರೋಗ್ಯ ಕೇಂದ್ರ ಹಾಗೂ ಪಶುವೈದ್ಯ ಆಸ್ಪತ್ರೆ ಕಟ್ಟಡ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಇದೇವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು ಅವರು ಮಂಗಲ ಗ್ರಾಮವು ಹೆದ್ದಾರಿ ವ್ಯಾಪ್ತಿಗೆ ಬರುವುದರಿಂದ ವಾಹನ ಸಂಚಾರವು ಹೆಚ್ಚಿದೆ. ಜನಸಂಖ್ಯೆಯೂ ಹೆಚ್ಚು ಇರುವ ಹಿನ್ನೆಲೆಯಲ್ಲಿ ಇಲ್ಲಿನ ಉಪಕೇಂದ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಪಶುವೈದ್ಯ ಆಸ್ಪತ್ರೆ ಸೇವೆಯೂ ಸಹ ಈ ಭಾಗಕ್ಕೆ ಹೆಚ್ಚು ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಅಭಿವೃದ್ಧಿಪಡಿಸುವ ಕೆಲಸಗಳಿಗೆ ಆದ್ಯತೆ ನೀಡಲಾಗಿದೆ ಎಂದು ಬಾಲರಾಜು ತಿಳಿಸಿದರು.
ಗ್ರಾಮೀಣ ಭಾಗದ ಜನರು ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಬೇಕು. ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿಟ್ಟುಕೊಂಡು ಆರೋಗ್ಯದತ್ತ ಗಮನ ನೀಡಬೇಕು ಎಂದು ಬಾಲರಾಜು ಅವರು ಸಲಹೆ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಾಕಮ್ಮ, ಉಪಾಧ್ಯಕ್ಷರಾದ ಪುಷ್ಪ ಕುಮಾರ್, ಸದಸ್ಯರಾದ ಶಿವಣ್ಣ, ಇನ್ನಿತರ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪಲ್ಸ್ ಪೋಲಿಯೋ ಕುರಿತು ಕಾರ್ಯಗಾರ 

ಚಾಮರಾಜನಗರ ಡಿ-15-ಪಲ್ಸ್ ಪೋಲಿಯೋ ಒಂದು ರಾಷ್ಟ್ರೀಯ ಅಭಿಯಾನ ಆರೋಗ್ಯ ಕ್ಷೇತ್ರದಲ್ಲಿ ಆದಂತ ಕ್ರಾಂತಿಕಾರಿಕ ಬದಲಾವಣೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವು ಒಂದು ದೇಶದ ಮೂಲೆ ಮೂಲೆಯಲ್ಲಿ ಎಲ್ಲ ಮಕ್ಕಳಿಗೂ  ಎಕ ಕಾಲದಲ್ಲಿ ಪಲ್ಸ್ ಪೋಲಿಯೋ ಹಾಕುವುದ ಮೂಲಕ ಈ ಕಾರ್ಯಕ್ರಮ ಯಾಶಸ್ವಿಯಾಗಿದೆ ಎಂದು ಜಿಲ್ಲಾ ಪಂಚಾಯಿತ್ ಕಾರ್ಯನಿರ್ವಣಾಧಿಕಾರಿ ಡಾ, ಹರೀಶ್‍ಕುಮಾರ್ ತಿಳಿಸಿದರು.
 ನಗರದ ಜಿಲ್ಲಾಡಳಿತ ಭವನದ ನೂತನ ಕೆ.ಡಿ.ಪಿ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಚಾಮರಾಜನಗರ ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಗಳು ಉತ್ತಮ ಮಟ್ಟದಲ್ಲಿ ನಡೆದಿದೆ. ಮುಖ್ಯವಾಗಿ ಅಭಿವೃದ್ದಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಮಹಿಳೆಯಾರು ಮತ್ತು ಮಕ್ಕಳು ಈ ವಿಚಾರದ ಬಗ್ಗೆ ವಿಶೇಷ ಗಮನ ಕೊಡಬೇಕು ಮೊದಲು ಎಲ್ಲಾರೂ ಆರೋಗ್ಯವಾಂತರಾದರೆ ನಂತರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಸರ್ಕಾರದಿಂದ ಹಮ್ಮಿಕೊಳ್ಳುವ ವಿವಿಧ ಕಾರ್ಯಕ್ರಮಗಳ ಮೂಲಕ ಎಲ್ಲರಿಗೂ ತಲುಪಲು ಸಾಧ್ಯ ಎಂದು ತಿಳಿಸಿದರು.
ಆರೋಗ್ಯ ಮತ್ತು ಶಿಕ್ಷಣ ನಿಡುವುದು ಎಲ್ಲವೂ ಸರ್ಕಾರದ ಕೆಲಸ ಮಾತ್ರವಲ್ಲ ಸಮುದಾಯದ ಪಾತ್ರವು ಬಹಳ ಮುಖ್ಯವಾಗಿದೆ  ಈ ಇಲಾಖೆಯ ಜೊತೆಗೂಡಿ ಶಿಕ್ಷಣಇಲಾಖೆ ಆರೋಗ್ಯ ಇಲಾಖೆಯ ಕ್ರಾರ್ಯಕ್ರಮಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ಜಿಲ್ಲೆಯು ಶೈಕ್ಷಣಿಕವಾಗಿ ಹಿಂದೆ ಇದ್ದೆವೆ ಶೇ% 60 ರಷ್ಟು ಸಾಕ್ಷರಿಲ್ಲ ಇಲ್ಲಿ ಬಂದಿರುವ ವಲಯ ಮಟ್ಟದ ಅಧಿಕಾರಿಗಳು 100 ರಷ್ಟು ಸಾಧನೆ ಮಾಡಿ ಜಿಲ್ಲೆಗೆ ಬಂದಿದ್ದಾರೆ ಅಭಿಯಾನಗಳು ಯಾಶಸ್ವಿಯಾಗಬೇಕಾದರೆ ಸಮುದಾಯದಿಂದ ಹೆಚ್ಚಿನ ಜನರು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು  ನಮ್ಮ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು  ನಿಷ್ಠೆ ಮತ್ತು ಪ್ರಮಾಣಿಕತೆಯಿಂದ ಕೆಲಸಗಳನ್ನು ನಿರ್ವಸಿದರೆ ಇಂತಹ ಕಾರ್ಯಕ್ರಗಳು ಉತ್ತಮ ಮಟ್ಟದಲ್ಲಿ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಆರೋಗ್ಯ ಅಧಿಕಾರಿ ಕೆ.ಹೆಚ್.ಪ್ರಸಾದ್ ಜಿಲ್ಲೆಯಲ್ಲಿ 75000 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಬೇಕಿದೆ. ಕಳೆದ 3 ವರ್ಷದ ಅಂದಾಜ್ ಮೊತ್ತ 74 ಸಾವಿದ 75ಸಾವಿರ ಮಕ್ಕಳಿಗೆ ನಮ್ಮ ಅಂದಾಜು 80000 ಸಾವಿರ ಬೆರೆ ಕಡೆಯಿಂದ ಬಂದ ಮಕ್ಕಳು ಬಸ್ಸ್ ನಿಲ್ಧಾಣ ಇನ್ನು ಮುಂತಾದ ಕಡೆ 5000 ಮಕ್ಕಳನ್ನು ಅಂದಾಜು ಮಾಡಲಾಗಿದೆ. ಪ್ರತಿ ಸಾಲ 99% ನಿಂದ 100% ಯಾಶಸ್ವಿಯಾಗಿದ್ದೇವೆ. ಆಶಾ ಕಾರ್ಯಕರ್ತೆಯನ್ನು ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದಾರೆ ಎಲ್ಲಾ ಕಾರ್ಯಕರ್ತೆಯಾರಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಯಾವರೀತಿ ಮಾಡಬೇಕು ಎಂದು ತಿಳಿಸುವ ಕಾರ್ಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ  ಪೋಲಿಯೋ ನಿರ್ಮೂಲನೆ ಮಾಡಲು ನಮ್ಮ ಸರ್ಕಾರಗಳು ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ಆರ್.ಸಿ.ಹೆಚ್ ಅಧಿಕಾರಿ ಕೆ.ಎಂ. ವಿಶ್ವೇಶ್ವರಯ್ಯ ಮಾತನಾಡಿ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಎಲ್ಲಾರನ್ನು ಜೊತೆಗೂಡಿಸಿ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಈ ಕಾರ್ಯಕ್ರಮಕ್ಕೆ ಮುಖ್ಯವಾಗಿ ವಾಹನದ ವ್ಯಾವಸ್ಥೆ ಮುಖ್ಯ  ಮೊದಲನೆ ಹಂತದ ಕಾರ್ಯಕ್ರಮಕ್ಕೆ ವಾಹನಗಳು ದೊರೆಯುತ್ತದೆ  ಅದರೆ 2ನೇ ಹಂತದ ಕರ್ಯಕ್ರಮಕ್ಕೆ ವಾಹನದ ಕೊರತೆ ಇರುತ್ತದೆ. ಸರ್ಕಾರಿ ವಾಹನದ ಜೊತೆಗೆ ಖಾಸಗಿ ವಾಹನಗಳನ್ನು ಪಡೆದು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಯಾಶಸ್ವಿ ಗೊಳಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅರೋಗ್ಯ ಇಲಾಖೆಯ ಎಸ್.ಎಂ.ಒ. ಸತೀಶ್‍ಚಂದ್ರ, ಅವರು ಕಾರ್ಯಗಾರದಲ್ಲಿ ಮಾಹಿತಿ ನೀಡಿದರು. ಡಾ. ಅನಿಲ್‍ಕುಮಾರ್, ರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




Thursday, 14 December 2017

ನಿನಗೆ ಪೊಲೀಸರೇ ನಿನ್ನ ಟಾರ್ಗೇಟ್ ಹಾ.! ಅನ್ನೊವರು ಇದನ್ನು ಓದಿ..

ಅಂದಿನ ಠಾಣೆಗೂ, ಇಂದಿನ ಠಾಣೆಗೂ ವ್ಯತ್ಯಾಸ...?

 
ನನ್ನ ಹಕ್ಕಿಗಾಗಿ ಎಸ್ಪಿ ರಂಗಸ್ವಾಮಿನಾಯಕ್ ಅವರ ವಿರುದ್ದವೇ ಅವರ ಸಮಕ್ಷಮದಲ್ಲಿ ಮಾನವ ಹಕ್ಕು ಆಯೋಗದ ರಾಜ್ಯಾದ್ಯಕ್ಷೆ ಮೀರಾ ಸೆಕ್ಷೆನಾ ಅವರಿಗೆ ದೂರಿನ ಮಾಹಿತ ನೀಡುತ್ತಿರುವುದು... ಹಾಗಿದ್ದರೆ ಆ ದೂರು ಯಾವುದು? ತಪ್ಪಿತಸ್ಥನ ಮೇಲೆ ಕ್ರಮ ಕೈಗೊಳ್ಳೋಕೆ  ಇವರಿಂದ ಸಾದ್ಯವಾಯ್ತಾ.?

ನನ್ನನ್ನು, ನಿನಗೆ ಪೊಲೀಸರೇ ನಿನ್ನ ಟಾರ್ಗೇಟ್ ಹಾ.! ಅನ್ನೊವರು ಇದನ್ನು ಓದಿ..ಯಾಕೆ. ಹಾಗೇ ಅನ್ನೋದ್ ಅಂತ ಗೊತ್ತಾಗುತ್ತೆ!

ಸತ್ಯ ಘಟನೆಗಳ ಅನುಭವ ಈ ಮನದಾಳದ ಮಾತು.................
ನನ್ನ ಜೀವನದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗಳ ನಡುವೆ ಆದ ಕಿರಿಕ್.. ..........................................................................................

ಹೇಳಭೆಕಾದ ಅನಿವಾರ್ಯತೆ ಬಂದಿದೆ. ಕೆಲವರು ಸಿಕ್ಕಿ ಕೇಳೋದು ಒಂದೆ, ಏನ್ ಸರ್ ಈ ತರಹ ಬರೀತೀರಲ್ಲ. ಬೇರೇ ಯಾರು ಸಿಗೋಲ್ವ ಅಂತ ಅದು ನನ್ನ ಬಗ್ಗೆ ಗೊತ್ತಿರೋವ್ರು. ಅದ್ಕೆ ನಾನು ಹೇಳೋದು, ಬೇರೆಯವರು ಬರೋಕೆ ಎದುರ್ತಾರೆ, ಬಕೆಟ್ ಹಿಡಿಬೇಕು. ದಾಖಲೆ ಇದೆ. ಬರೆಯುತ್ತಿದ್ದೇನೆ. ಮುಂದೆ ಕಾನೂನು ಹೋರಾಟಕ್ಕೆ  ಬಂದರೂ  ಸಿದ್ದ ಎಷ್ಟೋ ಪ್ರಕರಣ ದಾಖಲಸಿದೇ ಕೈ ಬಿಟ್ಟದ್ದು ಹೋರಗೆ ಬರಬಹುದು.. ಕೇವಲ ನನ್ನದಷ್ಟೆ.
ನನ್ನ ಸ್ನೇಹಿತರು ಹಾಗೂ ನಲ್ಮೆಯ ಓದುಗರಿಗೆ ಸ್ವಾಗತ, ಸಂಪೂರ್ಣವಾಗಿ ಓದಲು ಕನಿಷ್ಟ 10 ನಿಮಿಷ  ಬೇಕು ಸಮಯವಿದ್ದರೆ ಮಾತ್ರ ಓದಿ..

ಬಹುತೇಕರು ನನ್ನನ್ನು ಪೊಲೀಸರನ್ನೆ ಟಾರ್ಗೇಟ್ ಮಾಡಿಕೊಂಡು ಸುದ್ದಿಯನ್ನ ಪತ್ರಿಕೆಯಲ್ಲೋ, ಮುಖಪುಸ್ತಕದಲ್ಲೋ ಹಾಕಿ ತೇಜೋವದೇ ಮಾಢುವುದೇ ಇವರ ಕೆಲಸ ಎನ್ನೋ ಅದೇಷ್ಟೋ ಮುಟ್ಟಾಳ ಜನರಿಗೆ ಶಾಕ್ ಹಾಗೋ ಅಂತಹ ಸುದ್ದಿನೂ ಹೇಳ್ತೀನಿ ಕೇಳಿ…ಇದು ನನ್ನ ಜೀವನದಲ್ಲಿ ಆದ.ಸತ್ಯ ಘಟನೆಗಳ ಚಿತ್ರಣ..ಯಾರೋ ಮಾಡಿದ ತಪ್ಪಿಗೆ ಇಲಾಖೆ ತೆಗಳುತ್ತಿಲ್ಲ.ಅಲ್ಲಿರುವ  ಜನರನ್ನಷ್ಟೆ ತಿಳಿದಿರಲಿ..

ಬಹುಶಃ ಇಲ್ಲಿಗೆ 12, (2005)  ವರ್ಷವಾಗಿರಬಹುದು. ಒಂದು (ರಾ) ಠಾಣೆಯಲ್ಲಿ ನಮ್ಮ ತಾತ ನಮ್ಮ ತಾಯಿಯ ಮೇಲೆ ಆಸ್ತಿ ವಿಚಾರ ಸಂಬಂದ ದೂರು ಕೊಟ್ಟಿದ್ದರು ಆವಾಗ ನಾನು ದ್ವಿತೀಯ ಪಿ.ಯು. ವಿದ್ಯಾರ್ಥಿ. ನನಗೆ ಠಾಣೆ ಮೆಟ್ಟಿಲು ಅದೇ ಮೊದಲು. ಹೋಗಲೇ ಬೇಕಾದ ಅನಿವಾರ್ಯ. ಆದಿನ ಮನೆಗೆ ಬಂದ ಪೇದೆ…. (ಎನ್ ) ಗೌರವಯುತವಾಗಿ ಮಾತಾಡಿದ್ದು ಬಹುಶಃ  ಅದೇ ಮೊದಲು  ನಾನು ನೋಡಿದ್ದು, ಠಾಣೆಯಲ್ಲಿ ಇನ್ಸ್‍ಪೆಕ್ಟರ್ ಯಾರ್ಯಾರಿಗೋ ಬೈಯುತ್ತಿದ್ದ ಕಚಡಾ  ಮಾತು ಅಬ್ಬಾ… ಈ ತರಹನೂ ಇದೇ ಎಂದೇ ಗೊತ್ತಾಗಿದ್ದು. ಅದೇನೆ ಇರಲಿ ನಾನು ಮಾಡದ ತಪ್ಪಿಗೆ ಇನ್ಸ್‍ಪೆಕ್ಟರ್ ನನ್ನನ್ನು ಬೈಯ್ದು ಕಳುಹಿಸಿದ್ದೇ ನನಗೆ ಕೋಪ ಬರಲು ಪ್ರಾರಂಭವಾಯಿತು. ಆದರೂ ತಡೆದು ಮೌನವಹಿಸಿದೆ. ಆವಾಗಲೇ ನಾನು ಅಂದೇ ನಿರ್ದರಿಸಿದ್ದು, ಅಂತಹವರು ಯಾರೇ ಇರಲಿ, ನನಗೆ ಏನೇ ಆಗಲೀ, ಆಗುವುದು ಶತಸಿದ್ದ,  ಆ ರೂಪರೇಷ ಮಾಢೋಕು ಹೆದರದವರು ಏನಾದರೂ ಮಾಢಿಕೊಳ್ಳಲಿ ಎಂದು ಅವರ ವಿರುದ್ದ ಕಾನೂನು ಸಮರ ಸಾರೋ ನಿರ್ಣಯ.
ಅಂಬೇಡ್ಕರ್ ಒಂದು ಕಡೆ ಹೆಳುತ್ತಾರೆ ಎಲ್ಲಿ ,ಏನನ್ನ ಕಳೆದುಕೊಂಡಿದ್ದಿಯಾ, ಅಲ್ಲಿ ಹುಡುಕು ಮತ್ತೆ ಅದು ಸಿಕ್ಕೆ ಸಿಗುತ್ತದೆ ಎಂದು , ಅವರ ಮಾತನ್ನು ಅಂದೇ ಯೋಚಿಸಿ ಅದನ್ನು ಅಳವಡಿಸಿಕೊಂಡೆ ಹಾಗಿಯೇ ನಿಂತೆ…., ಶಿಕ್ಷಣ ಸಂಘಟನೆ, ಹೋರಾಟದ ಮಹತ್ವದ ನಿಲುವು ತಾಳಿದ ಮಹಾನ್ ವ್ಯಕ್ತಿಯ ಮಾತಿನ ಹಿಂದೆ ಇವರ ಈ ವಾಕ್ಯ ಸದಾ ಕಿವಿಯಲ್ಲೆ ಗುರು ಎನ್ನುತ್ತಿತ್ತು

ಪ್ರಕರಣ-1  (2011)

 ನಗರದ ಠಾಣೆ (ಪ) ಯೊಂದರಲ್ಲಿ ದೂರು ಕೊಟ್ಟೆ ( ಗುರುಟೀಕ್)…ಅಲ್ಲಿರುವ  ಪುಣ್ಯಾತ್ಮ ವಿಚಾರಣೆ ಮಾಡುವುದಿರಲಿ,  ಮಾತಾಡೆ  ಅದೇನ್ ನೋಡಿ ಎಂದು ಬೇರೆಯವರಿಗೆ ಹೇಳಿದರು. ಟೀಕ್ ಕಂನಿಯ ಬಾಂಡ್ ಬೇರೆಯವರ ಬಳಿ ಇದೆ ನ್ಯಾಯಾಲಯಕ್ಕೆ ಬೇಕಾಗಿದೆ. ಕೊಡಿಸಿಕೊಡಿ ಎಂದೆ.  ಆ ಬಾಂಡ್ ಬೇಕು ಎಂಬುದಾದರೆ 50 ರೂಪಾಯಿ ಪೇಟ್ರೋಲ್ ಹಾಕಿಸಿ ಎಂದರು, ಅಯ್ಯೋ ಇಲಾಖೆ ಹಣ ಕೊಡೊದಿಲ್ಲವೇನೋ ಎಂದು ತಿಳಿದು ಹಾಕಿಸಿದೆ. ತದ ನಂತರದ ದಿನದಲ್ಲಿ ಗೊತ್ತಾಯ್ತು ಅದಕ್ಕೆ ಇಲಾಖೆಯಿಂದ ಹಣ ಬರುತ್ತದೆ. ಎಂದು…ಎಂತ ಸ್ಥಿತಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ವೆರಿಫಿಕೇಷನ್ ಗೆ ಬಂದರೆ ಬಂಡಲ್ ಗಟ್ಟಲೆ ಎ4 ಸೈಜ್ ಪೇಪರ್ ತರಿಸಿಕೊಳ್ಳೋ ಉದಾಹರಣೆ ಕಣ್ಣೆದುರೇ ಸಿಕ್ಕಿತು. ವಿದ್ಯಾರ್ಥೀಗಳನ್ನ ಅದರ ಬಗ್ಗೆ ಕೇಳಿದರೆ ಏನು ಮಾಡೋದು ಸರ್.......ಅಂತ ಹೇಳೋ ವಿದ್ಯಾರ್ಥಿಗಳು ಹೋಗುವಾಗ ಹಾಳಾಗಲಿ ಹೋಗಲಿ ಎಂಬ ಶಾಪ ಹಾಕಿ ಹೋಗುತ್ತಿದ್ದು ಇನ್ನು ಕಿವಿಯಲ್ಲಿ ಹರಿದಾಡುತ್ತಿದೆ.
ವೃತ್ತಿಗೆ ಬಂದು ಸಾಮಾಜಕ ನ್ಯಾಯದ ಹೋರಾಟಕ್ಕೆ ಇಳಿದಿ ಬಿಡೋಣೋ ಎಂದು ನಿರ್ಧರಿಸಿದೆ.. ತಪ್ಪು ಮಾಡಿದ ಆರಕ್ಷಕರ ವಿರುದ್ದ ತಿರುಗಿ ಬಿದ್ದೆ. ನನಗೆ ಬಿದ್ದಿದ್ದು ಅಪವಾಧಗಳ,ಆರೋಪಗಳ ಸುರಿಮಳೆ ಅದನ್ನು ಬದಿಗಿಟ್ಟು ನಡೆದೆ.. ಅಪವಾಧಗಳ,ಆರೋಪಗಳ ಹೇಳಿದವರ ಹಿನ್ನಲೆ ಶೋದಿಸುತ್ತಾ ಹೊರಟೆ. ಆದರೆ ಅವರನ್ನ ಸಮಾಜ ಆಡುವ ವ್ಯವಸ್ಥೆ ಬೇರೆ ಇರುವಾಗ ನಾನೇಕೆ ಅವರನ್ನು ಆಡುತ್ತಾ ನಿಲ್ಲಲ್ಲಿ. ಮುಂದೆ ಭಗವಂತ ಇದ್ದಾನೆ ಎಂದು ಮೌನ ವಹಿಸಿದೆ..

ಪ್ರಕರಣ-2  (2012)

ವಾಹನ ದಾಖಲೆ ಇಲ್ಲ ಎಂದು 1300 ಕೇಳಿದ ಪೇದೆಗಳು: ಒಮ್ಮೆ ಪಟ್ಟಣ ವ್ಯಾಪ್ತಿಯಿಂದ ಗ್ರಾಮಾಂತರ ಕಡೆಗೆ ಹೋಗಬೇಕಾದಾಗ ವಾಹನ ದಾಖಲೆ ತಪಾಷಣೆ ಮಾಢುತ್ತಿದ್ದರು. ಸರಿ ನಮ್ಮ ವಾಹನವೂ ತಪಾಷಣೆಗೆ ನಿಂತಿತು. ನಮ್ಮ ವಾಹನದಲ್ಲಿ ಎಲ್ಲವೂ ಇತ್ತು. ಹಿಂದೆ ಕುಳಿತಿದ್ದ ವ್ಯಕ್ತಿ (ಹುದ್ದೆ) ಅಂತ ಹೇಳು ಗುರು ಅಂತ ಹೇಳಿದೆ.. ದರಿದ್ರ ನಮಗೇನು ಪ್ರತ್ಯೇಕ ಕಾನೂನು ಇದೀಯಾ ಕಾನೂನು ಗೌರವಿಸೋಣ, ವಾಹನ ದಾಖಲೆ ಇದೀಯಾ ಎಂದೆ. ಇದೆ ಅಂತೆಳಿದ, ಮುಚ್ಕೊ ಕೂತ್ಕೊ ಎಂದಿದ್ದೆ ಸುಮ್ಮನಾದ.

ದಾಖಲೆ ಕೇಳಲು ಪ್ರಾರಂಬಿಸಿದರು ವಾಹನದ ದಾಖಲೆ ಸರಿಯಾಗಿತ್ತು. ಏನೋ ಹಣ ವಸೂಲಿ ಕಾಯಕ ಮಾಡಲೇಬೆಕೆಂದು ನಿಂತಿದ್ದ ಅವರಿಗೆ  ಏನೇನೋ ಕೇಳಿ ಇಂಟರ್ ಸೆಪ್ಟರ್ ವಾಹನದ ಹಿಂದೆ ಮಾತಾಡುವಂತೆ ಇನ್ನೊಬ್ಬ ಸೂಚಿಸಿದರು.. ಆ ವ್ಯಕ್ತಿ (ಎಮ್) 300 ಕೇಳಿದ.. ನಾನೇಕೆ ಕೋಡಲಿ ದಂಡ ತಾನೆ ಹಾಕಿ ಎಂದೆ. ಏನು ನೋಡದೇ ಬಿಲ್ ಹರಿದ.. ಆಗಲೆ ಅಂದಿನ ಎಸ್ಪಿ ರಾಜೇಂದ್ರ ಪ್ರಸಾದ್ ಗೆ ವ್ಯವಸ್ಥೆ ಬಗ್ಗೆ ಹೇಳಿ ದೂರು ಕೊಟ್ಟೆ, ಮಾಡದ ತಪ್ಪಿಗೆ ದಂಡ ಕಟ್ಟಾಯ್ತು, ಈಗ ತಪ್ಪು ಮಾಡೇ ಮಾಡಿ ( ಅತಿ ವೇಗದ ಚಾಲನೆ) ಬರುತ್ತೇನೆ ಎಂದು ಕೇವಲ 4 ನಾಲ್ಕು ನಿಮಮಿಷದಲ್ಲಿ ಏನೇಲ್ಲ ಮಾಡಬೇಕಾಗಿತ್ತು ಎಲ್ಲವನ್ನು ಕಾನೂನನ್ವಯ ಮುಗಿಸಿದೆ… ವಿಚಿತ್ರ ಅಂದ್ರೆ ಇದೇ ನೋಡಿ..ಹಿರಿಯ ಎಸ್ ಐ. (ಬಿ) ಅವರು ದಯಮಾಡಿ ನನಗೋಷ್ಕರ ಕ್ಷಮಿಸಿ ಸರ್ ಅವರಿಗೇನು ಗೊತ್ತಿಲ್ಲ ಎಂದು ಕೇಳಿಕೊಂಡರು. ಅವರ ವಯೋವೃತ್ತಿ ಅಂಚಿನಲ್ಲಿ ದೂರು ಕೊಟ್ಟರೆ ಅವರ ಬಹುತೇಕ ಸೌಲಭ್ಯಗಳಿಗೆ ಕೊಕ್ಕೆಯಾಗುತ್ತದೆ ಎಂದು ಹಿರಿಯರೂ ಬೇಡ ಎಂದು ಸಲಹೆ ನೀಡಿದರು.  ಆವಗಾ ಉಳಿದ ಅವರುಗಳು (ಎಮ್&ವಿ&.ಬಿ) ಬದುಕಿದರು. ಆದರೆ ಸತ್ಯ ತಿಳಿದಿರಲಿ ಈಗ ಒಬ್ಬೋಬ್ಬರು ಅಮಾನತು, ಮತ್ತೊಬ್ಬನಿಗೆ (ಅಪಘಾತ) ಭಗವಂತ ಕೊಟ್ಟ ಶಿಕ್ಷೆ ಎದುರಿಸುತ್ತಿದ್ದಾರೆ.
ಈ ತರಹ ಅನುಭವಗಳು ಅದೇಷ್ಟೋ ಜನರಿಗೆ ಸಂಚಾರಿ ಠಾಣೆಗಳಲ್ಲಿ ಆಗುತ್ತಲೆ ಇರುತ್ತದೆ. ಕಾನೂನು ಪಾಲಿಸಿ. ಅವರದ್ದು ತಪ್ಪಿದ್ದರೆ ಹಿರಿಯ ಅದಿಕಾರಿಗಳಿ ದೂರು ಕೊಡಿ. ಕ್ರಮವಹಿಸಿಲಿಲ್ಲವೇ. ನ್ಯಾಯಾಲಯದ ಮುಖ ಮಾಡಿ.. ನಿಮ್ಮನ್ನ ಗೌರವಿಸೋದು ಬಹುಶಃ ಅಲ್ಲಿಂದ ನೀವು ನ್ಯಾಯ ಪಡೆದಾಗಲೇ ನೆನಪಿರಲಿ..


ಪ್ರಕರಣ -3.....(ಶೀಘ್ರದಲ್ಲೇ ಪುಲ್ ಡಿಟೇಲ್... 20 ಸಾವಿರವಲ್ಲ, 50 ಕೊಟ್ಟರೂ ವಿಚಾರಣೆ ನಡೆಯಲಿ ಎಂದೆ)

(2013-14)

ಬಂಡೀಪುರ ವ್ಯಾಪ್ತಿಯಲ್ಲಿ  ಚೆಕ್ ಪೋಸ್ಟ್ ಮಾಢಿ ಹಣ ವಸೂಲಿ ಮಾಡುತ್ತಿದ್ದ ಪೇದೆಯ(ವಿ) ಬಗ್ಗೆ ಸ್ನೇಹಿತ ಪ್ರಶಾಂತ್ ಹಾಗೂ ನಾನು ಸವಿವರವಾಗಿ ಸುದ್ದಿ ಪ್ರಕಟಿಸಿ ಹಂತ ಹಂತವಾಗಿ ಪ್ರಕರಣವನ್ನ ತನಿಖೆ ವಿಚಾರಣೆ ನಡೆಸಿ ಶಿಕ್ಷೆಯನ್ನು ಕೊಡಿಸಿದೆ. ಆದರೆ ಮನಸ್ಸಿಗೆ ಬೇಜಾರಾಗಿದ್ದು ತಲೆ ಹಿಡುಕ ಕೆಲ ಪತ್ರಕರ್ತರ ವ್ಯವಸ್ಥೆ. ಮಾಡಿದ್ದು ಸರಿ ಎಂಬುದನ್ನು  ಮಾಡದೇ ಅವನ್ಯಾಕೆ ಮಾಡುತ್ತಾರೆ ಎಂದು ? 50, 100 ಕ್ಕೆ ನಿಂತಿದ್ದ ಕೆಲವು ಪತ್ರಕರ್ತರು ಪೇದೆ  ಅವರ ಬೆಂಬಲಕ್ಕೆ ನಿಂತರು. ಅದಕ್ಕಾಗಿಯೇ ಅವನು ಅಂದು ಪೇಪರ್ ಅವರ ಬಂಡವಾಳ ನಂಗೆ ಗೊತ್ತಿಲ್ವ ,?  ದುಡ್ಡು ಕೊಟ್ರೆ ಮುಚ್ಕೊಂಡಿರ್ತಾರೆ ಎಂದ ಮಾತು.. ನಾನು ಆ ಮಾತಿಗೆ ಅಂದಉ ಬೇಜಾರು ಮಾಡಿಕೊಳ್ಳಲೆ ಇಲ್ಲ. ಕಾರಣ ಅವರ ಮಾತು ಬಹುತೇಕ ವಾಸ್ತವವಾಗಿತ್ತು. ಆ ಚೆಕ್ ಪೋಸ್ಟ್ ಅಲ್ಲಿ ವಸೂಲಿಯಾದ ಹಣ ಹಂತ ಹಂತವಾಗಿ ಕೆಲವು ಪತ್ರಕರ್ತರನ್ನು ಸೇರಿ ತಲುಪುತ್ತಿತ್ತು.
ಕಾನೂನು ಅರಿಯದವರು, ಒಂದಕ್ಷರನ್ನು ಬರೆಯದವರು, ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ಎದುರಿಸುವವರು, ಪತ್ರಿಕೋದ್ಯಮ ಅರಿಯದವರು, ವೃತ್ತಿಬದ್ದತೆ ಗೊತ್ತಿಲ್ಲದವರೇ ವೃತ್ತಿಗೆ ಕಾಲಿಟ್ಟಾಗ ಆ ಪೇದೆ ಮಾತು ಸತ್ಯವಾಗಿತ್ತು.

ಪ್ರಕರಣ -4 (2015)

ಬಹುತೇಕರು ಎಸ್ಪಿ ಕುಲದೀಪ್ ಅವರ ಬಗ್ಗೆ ಬರೆಯುತ್ತಿದ್ದಾಗ ನನ್ನನ್ನು “ಏನು ಅವರ ದತ್ತು ಪುತ್ರ ಎಂಬವನಂತೆ ಬಿಂಬಿಸಿದ” ಅದೆಷ್ಟೋ   ಮುಟ್ಟಾಳರಿಗೆ ಹೇಳೋದು ಒಂದೆ. ಅವರ ಬಗ್ಗೆ ನಿಮಗೇಷ್ಟು ಗೊತ್ತು.? ಕೆಲವರಿಗೆ ಸಂಬಳ ಆಗದೇ ಇದ್ದಾಗ ವಿಲವಿಲನೆ ಒದ್ದಾಡುತ್ತಿದ್ದ ಅದೇಷ್ಟೋ ಪ್ರಾಮಾಣಿಕರು , ಯಾರು ಅವರಿಗೆ ನಿಮ್ಮ ಸಮಸ್ಯೆ ಹೇಳಲಿಲ್ಲ. ಆ ಸಮಸ್ಯೆ ಮುಂದೆ ಇಟ್ಟಾಗ ಕೇವಲ ನಿಮಿಷಗಳಲ್ಲಿ ಪರಿಹಾರವಾಗಿದ್ದು ಕೇವಲ ಒಂದು ಕರೆ, ಅದು ಯಾರು ಮಾಢಿದ್ದು ಎಂಬುದು ಕೆಲವರಿಗೆ ಮಾತ್ರ ಗೊತ್ತಿರೋದು ವೇತನವಾಗದಿರಲು ಅಲ್ಲಿ ಯಾರ ತಪ್ಪಾಗಿತ್ತು ಎಂಬುದು. ಗೊತ್ತೆ ಇಲ್ಲ,  ಜೈನ್ .ಅವರ ಮಾಢಿದ ಕೆಲಸಗಳು ಒಬ್ಬೊಬ್ಬರಿಗೆ ಗೊತ್ತಿದ್ದೆ ಎಲ್ಲವನ್ನು ಕ್ರೋಡಿಕರಿಸಿದರೆ ಆಡಳಿತ ವ್ಯವಸ್ಥೆ ಹೇಗಿದೆ ಎಂಬುದು ಉನ್ನತ ಅದಿಕಾರಿಗಳಿಗೆ ಗೊತ್ತಾಗೋದು ಬೀದಿಯಲ್ಲಿ ನಿಂತು ಮಾತಾಡಿದರೆ ಎಲ್ಲವೂ ವ್ಯರ್ಥ.
ನ್ಯಾಯಕ್ಕಾಗಿ ನಾನೇ ಪ್ರಕರಣವೊಂದನ್ನು ಅವರಿಗೆ ಅರ್ಜಿ ಮೇಲೆ ಅರ್ಜಿ ಕೊಟ್ಟರೂ ನನಗೆ ನ್ಯಾಯ ಕೊಡಿಸಲೇ ಇಲ್ಲ ಹಾಗಂತ ಅವರನ್ನು (ಎಸ್ಪಿ ಕುಲದೀಪ್ ಜೈನ್) ನಾನು ಸರಿಯಿಲ್ಲ ಎಂದರೆ ನನ್ನನ್ನು ಮುಟ್ಟಾಳ ಎಂದುಕೊಳ್ಳಬೇಕು. ಒಬ್ಬರ ಅನುಕೂಲಕ್ಕೆ 99 ಜನರ ಬಲಿ ಕೊಟ್ಟ ಅದಿಕಾರಿಯಾಗಿರಲಿಲ್ಲ. ನಾನು ಕಳಿಸಿದ ಬಹುತೇಕ ದೂರಿಗೆ ಶೇ 99% ಸ್ಪಂದಿಸಿದರೂ ನನ್ನ ಈ ಒಂದು ದೂರಿಗೆ ಪರಿಹಾರ ಕೊಡಿಸಲೇ ಇಲ್ಲ. ನಾನು ಉಳಿದವರಂತೆ ಸರಿಯಿಲ್ಲ ಎನ್ನಬಹುದಿತ್ತು. ನನ್ನ ಪ್ರಕರಣದಲ್ಲಿ ಇದುವರೆಗೆ ಐದು ಎಸ್ಪಿಗಳು ಬಂದು ಹೋದರು ನನ್ನ ಪ್ರಕರಣಕ್ಕೆ ಫಲ… ನೋ ಯೂಸ್.  ಆದರೆ. ಇವರಲ್ಲಿ ಮಾನವ ಹಕ್ಕು ಆಯೋಗ ಕೊಟ್ಟ ಆದೇಶ, ಲೋಕಾಯುಕ್ತ ಆದೇಶದಲ್ಲಿ  ಪೇಧೆ (ವಿ) ಮೂರು ತಿಂಗಳ ವೇತನ ಬಡ್ತಿ ಕಡಿಮೆಗೊಳಿಸಿದ ಕೀರ್ತಿ ಇವೆರಡು ಆಯೋಗಕ್ಕೆ ಸೇರಬೇಕು..

ಖಾಸಗೀ ಅರ್ಜಿ ವಿಚಾರಣೆಯಲ್ಲಿ ಅದೇಷ್ಟೋ ಪೇದೆಗಳು ( ಅ, ಮ ಸೇರಿದಂತೆ ಬಹುತೇಕತರು ಗೊತ್ತೇ ಇರುವ, ಒಂದೇ ವರ್ಗಕ್ಕೆ ಸೇರಿರುವ ಕೆಲವರು ) ಇವರುಗಳು ಮಾಡದ ಆರೋಪಗಳನ್ನು ಹೇಳಿಕೆಗಳಲ್ಲಿ ದಾಖಲಸಿ ಖುಷಿ ಪಟ್ಟರೋ ಹೊರತು ಇಂದು ದೇವರು ಕೊಟ್ಟ ಹೊಡೆತಗಳಿಗೆ ತಪ್ಪಿಸಿಕೊಳ್ಳಲಾಗದೇ ಪರದಾಡುತ್ತಿದ್ದಾರೆ.(  ಹೇಳಿಕೆ ಪ್ರತಿಗಳನ್ನು ಶೀಘ್ರದಲ್ಲಿ ಅಪ್ ಲೋಡ್ ಮಾಡಲಾಗುವುದು)

ಪ್ರಕರಣ -5 (2016)ಸಿದ್ದಾಪ್ಪಾಜಿ ಎಂಬ ಯುವಕ ತನ್ನ  ತಾಯಿಯೊಬ್ಬಳ ಜೊತೆ  2016 ರಲ್ಲಿ ಠಾಣೆ (ಸ) ಯೊಂದರಲ್ಲಿ ದೂರು ದಾಖಲಸಿಲು ಹೋದರೆ ಅದು ನ್ಯಾಯಾಲಯದ ಆದೇಶ ಹಿಡಿದು ಹೋದರೂ ಅಲ್ಲಿರುವ ಪೇದೆ  (ಎಮ್) ಅವರನ್ನ  ಬೈಯ್ದು ಕಳಿಸೇ ಬಿಟ್ಟ ಪ್ರಸಂಗ ಹೇಳತೀರದು. ಮತ್ತೆ ಯಾರು ಯಾಕೆ ಹೇಳಿದರು ಎಂದು ಪರಿಶೀಲಿಸೋಣ ಎಂಧು ನಾನು ಅತ್ತ ಹೋದಾಗ ಒಬ್ಬ ವ್ಯಕ್ತಿಗೆ ಹೇಗೆ ಸ್ಪಂದಿಸಬೇಕೊ ಎಂಬುದನ್ನು ಮರೆತ ಪೇದೆ, ಹಿರಿಯ ಅದಿಕಾರಿಗಳಿಗೆ ಅಲ್ಲಿಯೇ ನಿಂತು ದೂರು ಹೇಳಿದರೂ ಅದೇನು ಕಿತ್ಕೋತಾರೆ ಹೇಳಿಕೊಳ್ಳಿ ಎನ್ನೊ ಪೇದೆ ಭಾಷೆಯಂತು  ಮತ್ತೆ ನನ್ನ 12 ವರ್ಷದ ಹಿಂದಿನ ಅನುಭವ ಮತ್ತೆ ಬೇರೆಯವರ ಪ್ರಕರಣದಲ್ಲಿ ನೆನಪಿಕೊಂಡಾಯಿತು. ಅಲ್ಲಿಯೇ ಡಿವೈಸ್ಪಿ (ಗ) ಅವರಿಗೆ ಹೇಳಿ,ನಂತರ  ಡಿ.ಜಿ.ಪಿ ದೂರು ಹೋದಾಗ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಮುಂದೆ ಠಾಣೆಗಳಲ್ಲಿ ಸೌಜನ್ಯದಿಂದ ವರ್ತಿಸುವಂತೆ ಲಿಖಿತ ಆದೇಶ ಡಿ.ಜಿ.ಪಿ ಅವರಿಂದ ಎಲ್ಲಾ ಠಾಣೆಗಳಿಗೂ ರವಾನೆಯಾದವು. (ಡಿ.ಜಿ.ಪಿ ಅವರಿಗೆ ಧನ್ಯವಾದಗಳು)

ನನ್ನ ಹೋರಾಟ ಹತ್ತಿಕ್ಕಲು ಕೆಲವು ಕುತಂತ್ರಿಗಳು ಮಾಡಿದ ರಣ ತಂತ್ರಗಳು ವೈಫಲ್ಯ ಹಿಡಿದಿದೆ. ಸಂಚಾರ ಠಾಣೆಯಲ್ಲಿ ನಡೆದ ಅವ್ಯವಸ್ಥೆ ಬಗ್ಗೆ ಎಸ್ಪಿ ಅವರಿಗೆ ಸತ್ಯವೊಂದು ಗೊತ್ತಾಗಿ ಛೀಮಾರಿ ಹಾಕಿರುವ ಘಟನೆ ತಿಳಿದಿದೆ. ನೀವು ಮಾಡಿರುವ ತಪ್ಪು ಒಪ್ಪಿಕೊಳ್ಳಿ, ಕಾನೂನು ಹೋರಾಟ ತಾಕತ್ತಿದ್ದರೆ ಎದುರಿಸಿ, ಅದು ಬಿಟ್ಟು ಅನ್ಯ ವರ್ಗಗಳ  ಜನರ ಗಲಾಟೆಗಿಳಿಸಿ ಹೋರಾಟ ಅದುಮುವ ಪ್ರಯತ್ನ ಕೊನೆಯಾಗಲಿ. ಅದು ನಡೆಯಲೇಬೆಕೆಂಬ ದೇವರ ಆಟವೊಂದಿದ್ದರೆ ಏನು ಮಾಡಲಾಗದು.
.
ನ್ಯಾಯಕ್ಕಾಗಿ ನ್ಯಾಯಾಲಯದ ಮೇಟ್ಟೇಲೇರಿಸಿ ಕಾನೂನು ಅರಿವು, ಜ್ಞಾನ ಪಡೆದುಕೊಳ್ಳುವಲ್ಲಿ ಸಹಕಾರಿಯಾಗುತ್ತಿರುವ ತಪ್ಪು ಮಾಡಿದ, ಮಾಡದ ಆರಕ್ಷಕ ಸಿಬ್ಬಂದಿಗಳಿಗೆ ಧನ್ಯವಾದಗಳು.. ಇವೆಲ್ಲ ಸತ್ಯ ಘಟನೆಗಳಾದರೂ ಎಲ್ಲವೂ ವರೀಷ್ಟಾಧಿಕಾರಿಗಳ ಕಚೇರಿಗಳಲ್ಲಿನ ಕಡತದಲ್ಲಿ ಬಿದ್ದಿವೆ. ನನ್ನ ಹೋರಾಟ ಇಲಾಖೆ,ವ್ಯವಸ್ಥೆ ವಿರುದ್ದ ಅಲ್ಲ ವ್ಯಕ್ತಿ ವಿರುದ್ದ ಎಂಬುದ ಮರೆಯದಿರಿ..ಇಲಾಖೆ ತೇಜೋವಧೆಯೂ ಅಲ್ಲ… ನೆನಪಿರಲಿ.

ಆರಕ್ಷಕ ವರ್ಗ ನಮ್ಮ ಬೆಂಬಲಕ್ಕೂ ಇದೆ. ಅವರಿಗೂ ನನ್ನ ಅಬಿನಂದನೆಗಳು: ಯಾರೋ ಒಬ್ಬರು ಇಬ್ಬರು ಮಾಡಿದ ತಪ್ಪಿಗೆ ಇಡೀ ಜನರೇ ತಪ್ಪು ಎನ್ನುತ್ತಿಲ್ಲ. ಕೆಲವರು ಪ್ರತ್ಯಕ್ಷವಾಗಿ, ಪರೋಕ್ಷವಾಗಿಯೂ ಬೆಂಬಲ ನೀಡಿದ್ದಾರೆ. ಕಾನೂನು ಹೋರಾಟ ಎಂದರೆ ನಮ್ಮದು ಅಭ್ಯಂತರವಿಲ್ಲ. ನಿಮ್ಮ ಬೆಂಬಲ ನಾವು ಎಂದು ಸಹಕರಿಸಿದ್ದಾರೆ. ಅದರಲ್ಲಿ....
 ವರ್ತಕರ ಭವನ ಮುಂಬಾಗ (ಎಮ್ ) ವ್ಯಕ್ತಿಗೆ ಅಪಘಾತವಾದಾಗ ಸ್ಥಳಕ್ಕೆ ಬಂದು ಬೆಂಬಲಕ್ಕೆ ಬಂದ ಎಸ್ಪಿ ರಾಜೇಂದ್ರ  (2014)ಪ್ರಸಾದ್, ದೂರಿಗೆ ಸ್ಪಂದಿಸಿ ಕ್ರಮವಹಿಸಿದ ಜೈನ್,(2015) & ಐ.ಜಿ.ಪಿ.  ವಿಪುಲ್ ಕುಮಾರ್ (2016), ಡಿ.ಜಿ.ಪಿ ದತ್ತಾ,(2017) ಸೌಜನ್ಯಯುವತಾಗಿ ವರ್ತಿಸಿರ 12 ವರ್ಷದ ಹಿಂದಿನ ಪೇದೆ (ಎನ್) ಇಂದಿನ ಬೀಟ್ ಪೇದೆ (ಪಿ) ಸೇರಿದಂತೆ  ಇನ್ನ ಕೆಲವರು ಇದ್ದಾರೆ ನಮ್ಮ ಹೆಸರು ಹೇಳಲಿಲ್ಲ ಎಂದು ಭಾವಿಸಬೇಡಿ, ನೀವು ಮಾಢುವ ಕೆಲಸ ಭಗವಂತ ಗುರ್ತಿಸಿ ನಿಮ್ಮನ್ನು ಕುಟುಂಬದವರನ್ನು ಕಾಪಾಡುತ್ತಾನೆ..  

(ಹಲ್ಲೆಗೊಳಗಾದ ಪೇದೆ (ಸಿ) ಬೆಂಬಲಕ್ಕೆ ನಿಂತ ನನಗೆ ಸಿಕ್ಕಿದ್ದು ಇಲಾಖೆಯವರಿಂದಲೇ  ಬೆದರಿಕೆ. ನಾನು ದೈರ್ಯ ಮಾಢಿ  ಹೋರಾಟ ನಡೆಸಿದ ಮೇಲೆ ತಪ್ಪಿತಸ್ಥನಿಗೆ ಸಿಕ್ಕಿದ್ದು ಕೇವಲ ದಂಡ ಮುಂದಿನ ಸ್ಟೋರಿ. ಸುದ್ದಿ ಮಾಡೋ ತಾಕತ್ತು ಕೆಲವು ಮಾದ್ಯಮಕ್ಕೂ ಇರಲಿಲ್ಲ. ಪೇದೆ ರಕ್ಷಣೆ ಮಾಡೋ ಸೌಜನ್ಯ ಇಲಾಖೆಗೂ ಅಂದು ಇರಲಿಲ್ಲ.ಇದೊಂದೆ ಅಲ್ಲ ಇನ್ನು ಇದೆ ... ಆಂದಿನ ನನ್ನ ಹೋರಾಟದ ಫಲ..ಇಂದು  ಠಾಣೆಗಳಲ್ಲಿ ವಿಸಿಟರ್ ಬುಕ್ ಇದೆ  ಇದರಿಂದ ಅನಗತ್ಯ  ವ್ಯಕ್ತಿಗಳು ಅನಾವಶ್ಯಕವಾಗಿ ಹೋಗುವುದು ತಪ್ಪಿದೆ, ಮುಂದೆ ಸಿ.ಸಿ.ಕ್ಯಾಮೆರಾಗಳ ಅಳವಡಿಕೆಗೂ ಡಿ.ಜಿ.ಪಿ ಅವರಿಗೂ ಪತ್ರ ಬರೆಯಲಾಗಿದೆ , ಕ್ರಮವಹಿಸುವ ಬಗ್ಗೆ ತಿಳಿಸಿದ್ದಾರೆ. ಅಂದು ಇಂದಿಗೂ ಅಜಗಜಾಂತರ ವ್ಯತ್ಯಾಸವಿದೆ ಇಂದು ಜನಸ್ನೇಹಿಯಾಗಲು ಹೊರಟಿದೆ ಯಶಸ್ವಿಯಾಗಲಿ, ಇಲಾಖೆಯ ಉನ್ನತ,  ಅದರಲ್ಲೂ  ನನಗೆ ಸ್ಪಂದಿಸಿದ ಹಿರಿಯು ಅದಿಕಾರಿಗಳಿಗೆ ದನ್ಯವಾದಗಳು )  

ಹೋರಾಟ ತಪ್ಪಿತಸ್ಥನ ಮೇಲೆ ಹೊರತು, ನನಗೆ ದೌರ್ಜನ್ಯ ಎಸಗಿದವರ ಮೇಲೆ ಹೊರತು ಅನ್ಯರ ಮೇಲಲ್ಲ. ನೆನಪಿರಲಿ  ಹೀಗಿದ್ದ ಮೇಲೆ ನಾನು ವಿರೋಧಿಯಾಗಿ ಬಿಂಬಿಸೋ ನೀವು, ಬಹುಶಃ ತಪ್ಪು ಎಸಗಿದ್ದೀರಾ ಎಂಬುದನ್ನು ಬಿಂಬಿಸಿಕೊಳ್ಳುತ್ತೀದ್ದೀರಾ ಇರಲಿ... 


ಪೂರ್ಣವಾಗಿ ಓದಿದ್ದರೆ, ಠಾಣೆಗಳಲ್ಲಿ ಯಾವುದಾದರೂ ನೋವು ನೀವು ಅನುಭವಿಸಿದ್ದರೆ ಇದನ್ನು ಶೇರ್ ಮಾಢಿ, ಆಗಿರುವ ನೋವುಗಳ ಬಗ್ಗೆ   ಕಾಮೇಂಟ್ ಹಾಕಿ............

ಓದುಗರಿಗೆ ಧನ್ಯವಾದಗಳು… ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಕೆಲವರಿಗೆ ಗೊಂದಲವಾಗಿರಬಹುದು ಎನ್, ಪಿ.ವಿ. ಇನ್ನಿತರ ಪದಗಳ ಬಗ್ಗೆ... ಗೊಂದಲವಾಗಬೇಡಿ... ಎನ್ ಅಂದರೆ ನವೀನ, ನಂಜಯ್ಯ, ಪಿ ಅಂದರೆ ಪ್ರಸಾದ್, ಪ್ರವೀಣ  ಅನ್ನೋ ತರಹ ಸಿಬ್ಬಂದಿಗಳ ಹೆಸರಷ್ಟೆ.. ಇನ್ನ ಇಸವಿಗಳು ನಿಮಗೆ ಗೊತ್ತೆ.ಇದೆ 


ಅರ್ಜಿಗಳ ತ್ವರಿತ ವಿಲೇವಾರಿಗೆ ಕಂದಾಯ ಸಚಿವರ ಕಟ್ಟುನಿಟ್ಟಿನ ಸೂಚನೆ..VSS,ಆರೋಗ್ಯ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ: ಜಿಲ್ಲಾ ಉಸ್ತುವಾರಿ ಸಚಿವರಾದ ಗೀತ ಮಹದೇವಪ್ರಸಾದ್ (14-12-2017)

 

ಅರ್ಜಿಗಳ ತ್ವರಿತ ವಿಲೇವಾರಿಗೆ ಕಂದಾಯ ಸಚಿವರ ಕಟ್ಟುನಿಟ್ಟಿನ ಸೂಚನೆ..VSS


ಚಾಮರಾಜನಗರ, ಡಿ. 14 :- ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸ್ವೀಕರಿಸಲಾಗುವ ಅರ್ಜಿಗಳನ್ನು ವಿಳಂಬ ಮಾಡದೆ ತ್ವರಿತವಾಗಿ ವಿಲೇವಾರಿ ಮಾಡುವಂತೆ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕಂದಾಯ ಕಾನೂನು 94 ಎ.ಬಿ.ಸಿ ಹಾಗೂ 94 ಸಿ.ಸಿ ಅರ್ಜಿಗಳ ವಿಲೇವಾರಿ ಸೇರಿದಂತೆ ಕಂದಾಯ ಇಲಾಖೆಯ ಇತರೆ ವಿಷಯಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈ ಹಿಂದೆ ಹಲವು ಕಡೆ ಭೂಮಿ ಇಲ್ಲದವರಿಗೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಫಲಾನುಭವಿಗಳು ಸಾಗುವಳಿ ಚೀಟಿಪಡೆದು ಅನುಭವದಲ್ಲಿದ್ದಾರೆ ಆದರೂ ಭೂಮಿ ಸರ್ವೇ ಮಾಡಿಸಿ ಹದ್ದುಬಸ್ತು ಗುರುತಿಸಿ ನೀಡಲಾಗಿಲ್ಲ ಎಂದು ಶಾಸಕರಾದ ಎಸ್.ಜಯಣ್ಣ, ಆರ್.ನರೇಂದ್ರ ಹಾಗೂ ಸಿ.ಪುಟ್ಟರಂಗಶೆಟ್ಟಿರವರು ಸಚಿವರ ಗಮನ ಸೆಳೆದರು.
ಈ ನಿಟ್ಟಿನಲ್ಲಿ ದರಖಾಸ್ತು ಸೇರಿದಂತೆ ಅರ್ಹ ಜಮೀನುಗಳು ಸಾಗುವಳಿಯಾಗುತ್ತಿದ್ದರೆ ಅವುಗಳನ್ನು ಪಕ್ಕಪೋಡಿ ಮಾಡಿ ಹಕ್ಕುದಾರರಿಗೆ ಹಂಚಿಕೆ ಮಾಡಬೇಕು ಎಂದು ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಸೂಚಿಸದರು.
ಅದಿವಾಸಿಗಳು ಹಾಗೂ ಇತರೆ ವರ್ಗದವರಿಗೆ ಮಂಜೂರಾಗಿರುವ ಭೂಮಿಯನ್ನು ಕಂದಾಯ ಇಲಾಖೆ ಜೊತೆ ಗೂಡಿ ಸರ್ವೇ ಮಾಡಿಸಬೇಕು, ಹಕ್ಕುದಾರರಿಗೆ ಅಗತ್ಯ ಅನುಕೂಲಗಳನ್ನು ನಿಯಮಾನುಸಾರ ಕಲ್ಪಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.
ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಯವಾಗಿ ನಿರ್ವಹಣೆ ಮಾಡಬೇಕು, ದುರಸ್ತು ಇನ್ನಿತರ ಕೆಲಸ ಮಾಡುವುದು ತಹಶೀಲ್ದಾರರ ಮುಖ್ಯ ಕರ್ತವ್ಯವಾಗಿದೆ. ನಿವೇಶನ ರಹಿತರನ್ನು  ಪಟ್ಟಿಮಾಡಿ ಅದನ್ನು ಪ್ರಕಟಿಸಿ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಕಳುಹಿಸಬೇಕು ಎಂದರು.
ಪ್ರತಿ ಗ್ರಾಮದಲ್ಲ್ಲೂ ಸ್ಮಶಾನಕ್ಕೆ ಭೂಮಿ ಗುರುತಿಸಿ ನೀಡಬೇಕು. ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದರೆ ಖಾಸಗಿಯಾಗಿಯಾದರೂ ಖರೀದಿಸಿ ಸ್ಮಶಾನಕ್ಕೆ ಅಧ್ಯತೆ ಮೇರೆಗೆ ಭೂಮಿ ನೀಡಬೇಕು. ಈ ಬಗ್ಗೆ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಗಮನನೀಡಬೇಕು ಎಂದು ಕಂದಾಯ ಸಚಿವರು ನಿರ್ದೇಶನ ನೀಡಿದರು.
ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳೀಯ ಶಾಸಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಆಯಾ ಭಾಗದ ಜನಪ್ರತಿನಿಧಿಗಳನ್ನು ಅಹ್ವಾನಿಸಿ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ಮುಂದಾಗಬೇಕೆಂದು ಕಂದಾಯ ಸಚಿವರು ತಿಳಿಸಿದರು.
ಲೋಕಸಭಾ ಸದಸ್ಯರಾದ ಆರ್.ದ್ರುವನಾರಾಯಣ ಮಾತನಾಡಿ ಕಂದಾಯ ಇಲಾಖೆಯಲ್ಲಿ ಭೂ ಪ್ರಕರಣ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಪ್ರಕ್ರಿಯೆ ಚುರುಕಾಗಿ ನಿರ್ವಹಿಸಲು ಅಧಿಕಾರಿಗಳು ಮುಂದಾಗಬೇಕು. ವಿಳಂಬಧೋರಣೆ ಅನುಸರಿಸಬಾರದು ಎಂದರು.
ಸಕ್ಕರೆ, ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ.ಮೋಹನ ಕುಮಾರಿ ಉರುಫ್ ಗೀತ ಮಹದೇವಪ್ರಸಾದ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ಉಪಾಧ್ಯಕ್ಷರಾದ ಜೆ.ಯೋಗೇಶ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಎಸ್.ಜಯಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಹೆಚ್.ವಿ.ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಜಿ.ಪಂ ಕೈಗಾರಿಕೆ ಹಾಗೂ ಕೃಷಿ ಸ್ಥಾಯಿಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದರ್ ಕುಮಾರ್ ಮೀನ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಉಪವಿಭಾಗಾಧಿಕಾರಿ ಫೌಜಿಯಾ ತರನಂ ಇತರರು ಸಭೆಯಲ್ಲಿ ಹಾಜರಿದ್ದರು.

****************************************************************************   



ಆರೋಗ್ಯ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ: ಜಿಲ್ಲಾ ಉಸ್ತುವಾರಿ ಸಚಿವರಾದ ಗೀತ ಮಹದೇವಪ್ರಸಾದ್ 


ಚಾಮರಾಜನಗರ, ಡಿ. 14:- ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನಿಡಿದ್ದು, ಕಳೆದ 5 ವರ್ಷಗಳಲ್ಲಿ 6,500 ಕೋಟಿ ರೂಗಳನ್ನು ಆರೋಗ್ಯ ಸೇವೆ ಸೌಲಭ್ಯಕ್ಕಾಗಿ ವೆಚ್ಚ ಮಾಡಿದೆ ಎಂದು ಸಕ್ಕರೆ ಸಣ್ಣ ಕೈಗಾರಿಕೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ.ಮೋಹನಕುಮಾರಿ ಉರುಫ್ ಗೀತ ಮಹದೇವಪ್ರಸಾದ್ ತಿಳಿಸಿದರು.
ಗುಂಡ್ಲುಪೇಟೆ ಪಟ್ಟಣದಲ್ಲಿಂದು 10.8 ಕೋಟಿ ರೂ ವೆಚ್ಚದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸಮಗ್ರ ಆರೋಗ್ಯ ರಕ್ಷಣೆಗಾಗಿ ರಾಜ್ಯ ಸರ್ಕಾರ ಸಂಕಲ್ಪ ಮಾಡುವ ಮೂಲಕ ಹತ್ತು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ. ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ಅಮೂಲ್ಯವಾದ ಬದಲಾವಣೆಯನ್ನು ಕಾಣಲು ಸಾದ್ಯವಾಗಿದೆ. ಪ್ರತಿ ಜಿಲ್ಲೆಗೂ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡುತ್ತಿದೆ. ಸಮರೋಪಾದಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಯಲ್ಲಿ ಜನರಿಕ್ ಔಷಧಿ ಮಳಿಗೆಗಳನ್ನು ತೆರೆಯಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಇನ್ನು ಒಂದು ತಿಂಗಳಲ್ಲಿ ಡಯಾಲಿಸಿಸ್ ಘಟಕಗಳು ಪ್ರಾರಂಭವಾಗಲಿವೆ. ಐ.ಸಿ.ಯು ತುರ್ತು ಚಿಕಿತ್ಸಾ ಘಟಕಗಳು ಸಹ ಕಾರ್ಯಾರಂಭವಾಗಲಿವೆ. ಜಿಲ್ಲಾ ಆಸ್ಪತ್ರೆಯಲ್ಲಿ ಸಿ.ಟಿ ಸ್ಕಾನ್ ಹಾಗೂ ಎಂ.ಆರ್.ಐ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರ್ಯ ಚಾಲನೆಯಲ್ಲಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ  ತಾಯಿ ಮಕ್ಕಳ 3 ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಸ್ತುತ ಉದ್ಘಾಟನೆಯಾಗಿರುವ ಗುಂಡ್ಲುಪೇಟೆಯ ತಾಯಿ ಮಕ್ಕಳ ಆಸ್ಪತ್ರೆಯನ್ನು 10.8 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸಂತೇಮರಹಳ್ಳಿಯಲ್ಲಿಯೂ 60 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ನಿರ್ಮಿಸಲಾಗಿದೆ. ಕೊಳ್ಳೇಗಾಲದಲ್ಲಿ 30 ಹಾಸಿಗೆ ಸಾಮಥ್ರ್ಯವುಳ್ಳ ಆಸ್ಪತ್ರ್ರೆಯನ್ನು 8 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲು ಅನುಮೋದನೆ ನೀಡಲಾಗಿದೆ ಎಂದರು.
ಬೇಗೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೊಳ್ಳೇಗಾಲ ತಾಲ್ಲೂಕಿನ ರಾಮಾಪುರದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ. ಕಾಡಂಚಿನ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ನೀಡಲು ಹಾಡಿಗಳಿಗೆ ಉಚಿತ ಸಂಚಾರಿ ಘಟಕಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲೋಕಸಬಾ ಸದಸ್ಯರಾದ ಆರ್. ದ್ರುವನಾರಾಯಣ ಅವರು ತಾಯಿ ಶಿಶು ಮರಣ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯಕ್ರಮವು ಆರೋಗ್ಯ ಕ್ಷೇತ್ರದಲ್ಲಿನ ಕ್ರಾಂತಿಕಾರಿಕ ಬದಲಾವಣೆಗೆ ಅನುವು ಮಾಡಿಕೊಟ್ಟು ಅನುಕೂಲ ಕಲ್ಪಿಸಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ|| ಕೆ.ಹೆಚ್.ಪ್ರಸಾದ್ ರವರು ಜಿಲ್ಲೆಯಲ್ಲಿ ಕೈಗೊಂಡಿರುವ ಆರೋಗ್ಯ ಸೇವೆ ಹಾಗೂ ಪ್ರಸ್ತುತ ನಿರ್ಮಾಣ ಮಾಡಲಾಗಿರುವ ಆಸ್ಪತ್ರೆಯಲ್ಲಿ ಲಭಿಸುವ ಅನುಕೂಲಗಳ ಬಗ್ಗೆ ವಿವರ ನೀಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ಉಪಾಧ್ಯಕ್ಷರಾದ ಜೆ.ಯೋಗೇಶ್, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ಪುರಸಭೆ ಅಧ್ಯಕ್ಷರಾದ ಪಿ.ಗಿರೀಶ್, ಉಪಾಧ್ಯಕ್ಷರಾದ ಜಿ.ಕೆ.ನಾಗೇಂದ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಹೆಚ್.ಎನ್.ನಟೇಶ್, ಉಪಾಧ್ಯಕ್ಷರಾದ ರೂಪ, ಜಿಲ್ಲಾ ಪಂಚಾಯತ್ ಸ್ತಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ.ಬೊಮ್ಮಯ್ಯ, ಕೆರೆಹಳ್ಳಿ ನವೀನ್, ಸದಸ್ಯರಾದ ಚೆನ್ನಪ್ಪ, ಮುಖಂಡರಾದ ಮುನಿರಾಜು, ಕೊಡಸೋಗೆ ಶಿವಬಸಪ್ಪ, ಬಾಗ್ಯಮ್ಮ, ಚಂದ್ರಪ್ಪ, ಎ.ಪಿ.ಎಂ.ಸಿ ಅಧ್ಯಕ್ಷರಾದ ಶಿವಪ್ಪ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು