Saturday, 20 May 2017

20-05-2017 ನರೇಗಾ ಅಡಿ ಉದ್ಯೋಗ ಅವಕಾಶ ಒದಗಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಸೂಚನೆ.

ನರೇಗಾ ಅಡಿ ಉದ್ಯೋಗ ಅವಕಾಶ ಒದಗಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಸೂಚನೆ.

ಚಾಮರಾಜನಗರ, ಮೇ. 20:- ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚು ಜನರಿಗೆ ಉದ್ಯೋಗ ಅವಕಾಶ ನೀಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ತ.ಮ.ವಿಜಯಭಾಸ್ಕರ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚು ಜನರಿಗೆ ಉದ್ಯೋಗ ಲಭಿಸಲು ಅನುವಾಗುವಂತೆ ಕಾಮಗಾರಿಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ಸಮುದಾಯ ಕಾಮಗಾರಿಗಳನ್ನು ಹೆಚ್ಚಾಗಿ ತೆಗೆದುಕೊಳ್ಳಬೇಕು ಇದರಿಂದ ಹೆಚ್ಚು ಮಾನವ ದಿನಗಳ ಸೃಜನೆ ಮಾಡಬಹುದು ಎಂದರು.


ಜಿಲ್ಲೆಯಲ್ಲಿ ಬರಗಾಲ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗೋಶಾಲೆಗಳನ್ನು ತೆರೆಯಲಾಗಿದೆ. ಗೋಶಾಲೆಗೆ ಜಾನುವಾರುಗಳನ್ನು ತರುವವರು ಸುಮ್ಮನೆ ಕುಳಿತುಕೊಳ್ಳುವ ಬದಲಿ ಗೋಶಾಲೆ ಸಮೀಪದಲ್ಲೆ ಇರುವ ಸ್ಥಳಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಮಾಡಲು ಅವಕಾಶ ನೀಡಿದರೆ ಜನರ ಆರ್ಥಿಕ ಪರಿಸ್ಥಿತಿಯು ಸುಧಾರಣೆಗೊಳ್ಳಲಿದೆ. ಹೀಗಾಗಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡಲೇ ಈ ಸಂಬಂಧ ಅಗತ್ಯವಿರುವ ಕ್ರಮವಹಿಸಬೇಕೆಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದರು.
ಮೇವು ಬೆಳೆಯಲು ಜನರನ್ನು ಪ್ರೇರೆಪಿಸಬೇಕು. ಮೇವು ಕಿಟ್‍ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸುವ ಮೂಲಕ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿ ಸಾಕಷ್ಟು ಮೇವು ಬೆಳೆದು ಸ್ಥಳೀಯವಾಗಿ ಬಳಕೆ ಮಾಡಿಕೊಳ್ಳಲು ಈಗಿನಿಂದಲೆ ಬೇಕಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಮೇವು ಅಭಾವ ಕಾಡದಂತೆ ಮುನ್ನೆಚರಿಕೆ ವಹಿಸಬೇಕು ಎಂದರು.

ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ಪರಾಮರ್ಶೆ ನಡೆಸಿದ ಹೆಚ್ಚುವರಿ ಕಾರ್ಯದರ್ಶಿಯವರು ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ಜನರಿಗೆ ಶುದ್ದ ಕುಡಿಯುವ ನೀರು ಪೂರೈಸಬೇಕು. ಪ್ರಸ್ತುತ ಅಭಾವ ಪರಿಸ್ಥಿತಿ ಇರುವ ಗ್ರಾಮಗಳಲ್ಲಿ ಅಗತ್ಯಕ್ಕೆ ತಕ್ಕಂತೆ ತಾತ್ಕಾಲಿಕವಾಗಿ ನೀರು ಒದಗಿಸುವ ಕೆಲಸ ನಿರ್ವಹಿಸಬೇಕು. ಯಾವುದೇ ಕಾರಣಕ್ಕು ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಕೃಷಿ, ಅರಣ್ಯ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಹಲವಾರು ಉಪಯೋಗಿ ಯೋಜನೆಗಳು ಇವೆ. ಇದರ ಬಳಕೆಗೆ ಅಧಿಕಾರಿಗಳು ಮಾರ್ಗದರ್ಶನ ಮಾಡಬೇಕು. ಬೆಳೆ ಪರಿಹಾರ ಒದಗಿಸಲು ಅನುಕೂಲವಾಗುವಂತೆ ರೈತರ ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಮಾಡುವ ಕೆಲಸವನ್ನು ನಿಗಧಿತ ವೇಳೆಗೆ ಪೂರ್ಣಗೊಳಿಸಬೇಕು. ಸಾಮಾಜಿಕ ಭದ್ರತ ಯೋಜನೆಯಡಿ ಫಲಾನುಭವಿಗಳು ಪಿಂಚಣಿ, ಮಾಸಾಶನ ಪಡೆಯಲು ಅನುಕೂಲವಾಗುವಂತೆ ಆಧಾರ್ ಜೋಡಣೆ ಕಾರ್ಯವನ್ನು ಸಹ ನಿಗಧಿಪಡಿಸಲಾಗಿರುವ ಗಡುವಿನೊಳಗೆ ಮುಗಿಸಬೇಕು ಎಂದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು ಇದು ಬಳಕೆಯಾಗಬೇಕು. ಶೌಚಾಲಯ ಬಳಕೆಗೆ ಉತ್ತೇಜಿಸಲು ಶಾಲಾ ಮಕ್ಕಳನ್ನು ಬಳಸಿಕೊಳ್ಳಬೇಕು. ಶಾಲೆಯ ಬೆಳಗಿನ ಪ್ರಾರ್ಥನೆ ಸಮಯದಲ್ಲಿ ಶೌಚಾಲಯ ಬಳಸುವುದರಿಂದ ಆಗುವ ಅನುಕೂಲತೆಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಮೂಲಕ ಅವರ ಪೋಷಕರಿಗು ಈ ಬಗ್ಗೆ ಅರಿವು ಮೂಡಿಸುವಂತೆ ಶಿಕ್ಷಕರು ತಿಳಿವಳಿಕೆ ನೀಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತಿಳಿಸಿದರು.
ವಿವಿಧ ಇಲಾಖೆ ಇತರೆ ಯೋಜನೆಗಳ ಬಗ್ಗೆ ಸಭೆಯಲ್ಲಿ ಪರಿಶೀಲಿಸಲಾಯಿತು.
ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಉಪ ವಿಭಾಗಾಧಿಕಾರಿ ಎಂ.ಜಿ.ರೂಪ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಜಿಲ್ಲೆಯ ವಿವಿಧ ಭಾಗಗಳಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಭೇಟಿ: ಕಾಮಗಾರಿ ಅಭಿವೃದ್ಧಿ ಯೋಜನೆ ಪರಿಶೀಲನೆ.

ಚಾಮರಾಜನಗರ, ಮೇ. 20 - ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಯೋಜನೆ ಹಾಗೂ ಕಾಮಗಾರಿ ಸ್ಥಳಕ್ಕೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ತ.ಮ.ವಿಜಯಭಾಸ್ಕರ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳಗಿನಿಂದಲೆ ಭೇಟಿ ಕಾರ್ಯಕ್ರಮವನ್ನು ಆರಂಭಿಸಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಮೊದಲಿಗೆ ಹರದನಹಳ್ಳಿಯ ಮರಗದ ಕೆರೆ ಬಳಿಕೆ ಬಂಡಿಗೆರೆ ಕೆರೆಯನ್ನು ವೀಕ್ಷಿಸಿದರು. ಸ್ಥಳೀಯ ಜನರೊಂದಿಗೆ ಮಾತನಾಡಿ ಶೌಚಾಲಯ, ಪಡಿತರ ವಿತರಣೆ, ಉದ್ಯೋಗ ಖಾತರಿ ಯೋಜನೆ ಹೇಗೆ ನಿಮಗೆ ತಲುಪುತ್ತಿದೆ ಎಂದು ಪ್ರಶ್ನಿಸಿದರು. ಬಳಿಕ ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಲಾಗುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು. ಗಂಗಾ ಕಲ್ಯಾಣ ಯೋಜನೆಯಡಿ ಪ್ರಯೋಜನ ಪಡೆದಿರುವ ಫಲಾನುಭವಿಯೊಬ್ಬರ ತೋಟಕ್ಕೆ ತೆರಳಿ ವೀಕ್ಷಣೆ ಮಾಡಿದರು.
ಬಳಿಕ ಹುತ್ತೂರು ಗೋಶಾಲೆಗೆ ತೆರಳಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ವೀಕ್ಷಿಸಿದರು. ಜಾನುವಾರು ಮಾಲೀಕರಿಂದ ಅಹವಾಲು ಆಲಿಸಿದರು. ಬೊಮ್ಮಲಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಖುದ್ದು ಪರಿಶೀಲನೆ ಮಾಡಿದರು. ಹಂಗಳ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಲ್ಯಾಣಿ ನವೀಕರಣ ಕಾಮಗಾರಿ, ತೆರಕಣಾಂಬಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಮೇಲುಕಾಮನಹಳ್ಳಿಯಲ್ಲಿ ಗಿರಿಜನರಿಗೆ ನಿರ್ಮಿಸಲಾಗಿರುವ ಮನೆಗಳ ವೀಕ್ಷಣೆ ಮಾಡಿದರು.
ಹರವೆಯಲ್ಲಿ ಪ್ರಾಥಮಿಕ ಆರೋಗ್ಯ ಕೆಂದ್ರ, ಸುಜಲ ಕಾಮಗಾರಿ, ಕೃಷಿ ಹೊಂಡ, ನಿರ್ಮಾಣ ಹಂತದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಾರ್ಗ ಮಧ್ಯದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಲಾಗುತ್ತಿರುವ ಕಾಮಗಾರಿ ವೀಕ್ಷಿಸಿದರು. ಪುತ್ತನಪುರ ಗ್ರಾಮ ಪಂಚಾಯಿತಿ ಕಚೇರಿಗೂ ಭೇಟಿ ನೀಡಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಭೇಟಿ ನೀಡಿದರು.










Friday, 19 May 2017

19-05-2017 ಖಾತೆ ಆಂದೋಲನ ಸದುಪಯೋಗಕ್ಕೆ ಶಾಸಕರ ಸಲಹೆ,ವಾಹನ ಚಾಲನಾ ತರಬೇತಿಗೆ ಪಜಾ, ಪಪಂ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಖಾತೆ ಆಂದೋಲನ ಸದುಪಯೋಗಕ್ಕೆ ಶಾಸಕರ ಸಲಹೆ

 ಚಾಮರಾಜನಗರ, ಮೇ. 19 - ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಮನೆ, ನಿವೇಶನದಾರರು ಅಗತ್ಯ ಯೋಜನೆ ಹಾಗೂ ಪರಿಹಾರ ಸೌಲಭ್ಯಗಳನ್ನು ಪಡೆಯಲು ಅನುವಾಗುವಂತೆ ಮನೆ ಬಾಗಿಲಿಗೆ ಬಂದು ಖಾತೆ ಮಾಡಿಕೊಡಲಾಗುತ್ತಿದ್ದು ಅರ್ಹರು ಈ ಅನುಕೂಲವನ್ನು ಪಡೆದುಕೊಳ್ಳಬೇಕೆಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ಚೆನ್ನಿಪುರಮೋಳೆಯಲ್ಲಿಂದು ನಗರಸಭಾ ವತಿಯಿಂದ ಹಮ್ಮಿಕೊಳ್ಳಲಾಗಿರುವ ಖಾತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದ ಯಾವುದೇ ವಸತಿ ಯೋಜನೆ ಅಥವಾ ಪರಿಹಾರ ಪಡೆಯಲು ಖಾತೆಗೆ ಸಂಬಂಧಿಸಿದ ದಾಖಲೆಗಳು ಅವಶ್ಯವಾಗಿವೆ. ಹಲವಾರು ಮಂದಿ ಅವರ ಸ್ವಾಧೀನದಲ್ಲಿರುವ ಮನೆ ಇನ್ನಿತರ ಆಸ್ತಿಗಳಿಗೆ ಸಂಬಂಧಿಸಿದಂತೆ ಖಾತೆಯನ್ನು ಹಲವಾರು ಕಾರಣಗಳಿಂದ ಪ್ರಸ್ತುತ ಸಂದರ್ಭಕ್ಕೆ ಹೊಂದದೇ ಇರುವುದು ಕಂಡುಬರುತ್ತಿದೆ. ಇದರಿಂದ ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿ ಮನೆ ಇನ್ನಿತರ ಆಸ್ತಿಪಾಸ್ತಿಗಳಿಗೆ ಹಾನಿಯಾದಾಗ ಪರಿಹಾರ ಪಡೆಯಲು ತೊಡಕಾಗುತ್ತಿದೆ. ಈ ನಿಟ್ಟಿನಲ್ಲಿ ಮನೆ ಬಾಗಿಲಿಗೆ ತೆರಳಿ ಖಾತೆ ಮಾಡಿಕೊಡುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದರು.


ಎಲ್ಲಾ ಬಡಾವಣೆಗಳಲ್ಲೂ ಖಾತೆ ಆಂದೋಲನ ಕೈಗೊಳ್ಳಲಾಗುತ್ತದೆ. ಅಗತ್ಯ ದಾಖಲೆಗಳನ್ನು ಪಡೆದು ಖಾತೆ ಮಾಡಿಕೊಡುವ ಕೆಲಸವನ್ನು ಅಧಿಕಾರಿಗಳು ಆಯಾ ಬಡಾವಣೆಯಲ್ಲಿಯೇ ನಿರ್ವಹಿಸಲಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಳೀಯರು ಸ್ಪಂದಿಸಬೇಕು. ಎಲ್ಲ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಲಾಗಿದ್ದು ಖಾತೆ ಆಂದೋಲನ ಸೌಲಭ್ಯವನ್ನು ಪಡೆದುಕೊಳ್ಳಲು ಮುಂದೆ ಬರಬೇಕು ಎಂದು ಪುಟ್ಟರಂಗಶೆಟ್ಟಿಯವರು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರೂ ಆದ ನಂಜುಂಡಸ್ವಾಮಿಯರವರು ಮಾತನಾಡಿ ಖಾತೆ ಆಂದೋಲನದಂತಹ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು. ಇನ್ನು ಹೆಚ್ಚಿನ ಅಧಿಕಾರಿಗಳನ್ನು ಖಾತೆ ಆಂದೋಲನಕ್ಕೆ ನಿಯೋಜಿಸಲಾಗುತ್ತದೆ. ವಾರ್ಡ್‍ಗಳಲ್ಲೇ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು ಜನತೆ ಅವರಲ್ಲಿರುವ ಲಭ್ಯ ದಾಖಲೆಗಳನ್ನು ಒದಗಿಸಿದರೆ ಖಾತೆ ಮÁಡಿಕೊಡಲಾಗುತ್ತದೆ ಎಂದರು.
ನಗರಸಭೆ ಆಯುಕ್ತರಾದ ರಾಜಣ್ಣ ಮಾತನಾಡಿ ಖಾತೆ ಆಂದೋಲನದಲ್ಲಿ ಲಭ್ಯವಿರುವ ದಾಖಲೆಗಳನ್ನು ಸ್ವೀಕರಿಸಿ ಖಾತೆ ಮಾಡಿಕೊಡುವ ಪ್ರಕ್ರಿಯೆ ನಿರ್ವಹಿಸಲಾಗುತ್ತಿದೆ. ಎಲ್ಲಾ ಬಗೆಯ ನೆರವು ನೀಡಿ ಪೂರ್ಣ ಪ್ರಮಾಣದಲ್ಲಿ ಖಾತೆ ಮಾಡಿಕೊಡಲಾಗುತ್ತದೆ. ಜನತೆ ಈ ಆಂದೋಲನಕ್ಕೆ ಪೂರಕ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ನಗರಸಭೆ ಸದಸ್ಯರಾದ ಕೆಂಪರಾಜು, ಮಹೇಶ್ ಉಪ್ಪಾರ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

****************************

ಮೇ. 20ರಂದು ಗುಂಡ್ಲುಪೇಟೆ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಚಾಮರಾಜನಗರ, ಮೇ. 19 - ಗುಂಡ್ಲುಪೇಟೆ ವಿದ್ಯುತ್ ಮಾರ್ಗದಲ್ಲಿ ಮೇ 20ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಬೊಮ್ಮಲಾಪುರ, ತೆರಕಣಾಂಬಿ, ಹರವೆ, ಹಂಗಳ, ಬೇಗೂರು ಹಾಗೂ ಕಬ್ಬಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ನಾಗರಿಕರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಜತೆ ಸಹಕರಿಸುವಂತೆ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರÉ.


ಕೃಷಿ ಚಟುವಟಿಕೆಗಳಿಗೆ ಸೌಲಭ್ಯ : ಬಿತ್ತನೆ ಕಾರ್ಯದಲ್ಲಿ ತೊಡಗಲು ಮನವಿ

ಚಾಮರಾಜನಗರ, ಮೇ. 19 :- ಜಿಲ್ಲೆಯಲ್ಲಿ ಮುಂಗಾರು ಆಶಾದಾಯಕವಾಗಿದ್ದು ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.
ಜನವರಿಯಿಂದ ಇದುವರೆಗೆ ಪೂರ್ವಮುಂಗಾರಿನ ಭಾಗವಾಗಿ ವಾಡಿಕೆಯಷ್ಟು ಹಾಗೂ ಕೆಲವೆಡೆ ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆಯಾಗಿದ್ದು ಒಟ್ಟಾರೆ 213.77 ಮಿ.ಮೀ. ಮಳೆಯಾಗಿದೆ. ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ಇಂತಹ ವಾರ್ತಾವರಣದಿಂದ ಈಗಾಗಲೇ ಕೆಲವು ರೈತರು ಬಿತ್ತನೆ ಕಾರ್ಯವನ್ನು ಕೈಗೊಂಡಿದ್ದಾರೆ. ಆದರೆ ಕೆಲ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳು ಕೈಗೊಳ್ಳದಿರುವುದು ಕಂಡುಬಂದಿದೆ.
ಈಗಾಗಲೇ ರೈತಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬೇಕಾದ ಜೋಳ, ಸೂರ್ಯಕಾಂತಿ, ನೆಲಗಡಲೆ, ಹಲಸಂದೆ, ಹೆಸರು, ಉದ್ದು, ಮುಸುಕಿನಜೋಳ ಮುಂತಾದ ಬಿತ್ತನೆ ಬೀಜಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ. ಪರಿಕರ ಮಾರಾಟಗಾರರ ಬಳಿ ಹಾಗೂ ಮಾರ್ಕೆಟಿಂಗ್ ಫೆಡರೇಷನ್ ಮತ್ತು ಸೊಸೈಟಿಗಳಲ್ಲಿ ಸಾಕಷ್ಟು ರಸಗೊಬ್ಬರವೂ ದಾಸ್ತಾನು ಇದೆ.
ಈ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮತ್ತು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳನ್ನು ಭೇಟಿ ಮಾಡುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಕೊಳ್ಳೇಗಾಲ : ಪರಿಶಿಷ್ಟ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 19 - ಕೊಳ್ಳೇಗಾಲ ತಾಲೂಕು ವ್ಯಾಪ್ತಿಯ ವಿವಿಧೆಡೆ ಇರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ವಹಣೆಯ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಕೊಳ್ಳೇಗಾಲ ಪಟ್ಟಣದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಮೆಟ್ರಿಕ್ ನಂತರದ ಬಾಲಕಿಯರ ಹಾಗೂ ಬಾಲಕರ ವಿದ್ಯಾರ್ಥಿನಿಲಯ, ಬಂಡಳ್ಳಿ, ಒಡೆಯರಪಾಳ್ಯದಲ್ಲಿರುವ ಮೆಟ್ರಿಕ್ ಪೂರ್ವ  ಬಾಲಕರ ವಿದ್ಯಾರ್ಥಿನಿಲಯ, ಮಲೆಮಹದೇಶ್ವರ ಬೆಟ್ಟದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅವಕಾಶವಿದೆ.
ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ತಿಂಡಿ, ಸಮವಸ್ತ್ರ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ವಿಶೇಷ ಬೋಧನೆ, ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಆಸಕ್ತ ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಸಂಬಂಧಪಟ್ಟ ವಿದ್ಯಾರ್ಥಿನಿಲಯ ಅಥವಾ ಕೊಳ್ಳೇಗಾಲ ಪಟ್ಟಣದ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಿಂದ ಪಡೆದು ಭರ್ತಿ ಮಾಡಿ ಜೂನ್ 10ರೊಳಗೆ ಸಲ್ಲಿಬೇಕು.
ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 08224-255060 ಸಂಪರ್ಕಿಸುವಂತೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಲ್. ಗಂಗಾಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮೇ 23, 24ರಂದು ವಸತಿಶಾಲೆಗಳ ಪ್ರವೇಶಕ್ಕೆ ಕೌನ್ಸಲಿಂಗ್ 

ಚಾಮರಾಜನಗರ, ಮೇ. 19:- 2017-18ನೇ ಸಾಲಿಗೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ, ಏಕಲವ್ಯ ವಸತಿಶಾಲೆಯಲ್ಲಿ 6ನೇ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಮೇ 23 ಹಾಗೂ 24ರಂದು ನಗರದ ಕೋರ್ಟ್ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕೌನ್ಸೆಲಿಂಗ್ ನಡೆಯಲಿದೆ.
ವಿದ್ಯಾರ್ಥಿಗಳ ಪ್ರವೇಶ ಪರೀಕ್ಷಾ ಫಲಿತಾಂಶ ಈಗಾಗಲೇ ಪ್ರಕಟಿಸಲಾಗಿದ್ದು ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಮೇ 23ರಂದು ಪರಿಶಿಷ್ಟ ಜಾತಿ, ವಿಶೇಷ ವರ್ಗದ ವಿದ್ಯಾರ್ಥಿಗಳು ಮತ್ತು ಆಯಾ ವರ್ಗದಡಿ ಕಾಯ್ದಿರಿಸಿದ ಸೀಟುಗಳಿಗೆ ಮತ್ತು ಮೇ 24ರಂದು ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಹಾಗೂ ಆಯಾ ವರ್ಗದಡಿ ಕಾಯ್ದಿರಿಸಿದ ಸೀಟುಗಳಿಗೆ ಕೌನ್ಸೆಲಿಂಗ್ ನಡೆಯಲಿದೆ.
ಅರ್ಹ ವಿದ್ಯಾರ್ಥಿಗಳಿಗೆ ಈಗಾಗಲೇ ಪತ್ರ ರವಾನಿಸಲಾಗಿದ್ದು ಅಗತ್ಯ ದಾಖಲೆಗಳೊಂದಿಗೆ ಕೌನ್ಸೆಲಿಂಗ್ ಗೆ ಹಾಜರಾಗುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಕೆ.ಎಚ್. ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಹನ ಚಾಲನಾ ತರಬೇತಿಗೆ ಪಜಾ, ಪಪಂ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 19 - ಪ್ರಾದೇಶಿಕ ಸಾರಿಗೆ ಇಲಾಖೆಯು ಲಘು ಹಾಗೂ ಭಾರೀ ವಾಹನ ಚಾಲನಾ ತರಬೇತಿ ನೀಡಲಿದ್ದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿರಬೇಕು. ಲಘು ಮೋಟಾರು ವಾಹನ ಚಾಲನೆ ತರಬೇತಿಗೆ ಕನಿಷ್ಟ 18 ವರ್ಷ ವಯಸ್ಸಾಗಿರಬೇಕು. ಭಾರೀ ವಾಹನ  ತರಬೇತಿಗೆ ಕನಿಷ್ಟ 20 ವರ್ಷ ವಯಸ್ಸಾಗಿರಬೇಕು ಮತ್ತು ಲಘು ಮೋಟಾರು ವಾಹನ ಪರವಾನಗಿ ಪಡೆದು ಒಂದು ವರ್ಷ ತುಂಬಿರಬೇಕು. ತರಬೇತಿಗೆ ತಗಲುವ ವೆಚ್ಚದಲ್ಲಿ ಶೇ. 25ರಷ್ಟನ್ನು ಅಭ್ಯರ್ಥಿಗಳು ಭರಿಸಬೇಕು.  ಅರ್ಜಿಯನ್ನು ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಈಗಾಗಲೇ ವಿತರಿಸುತ್ತಿದ್ದು ಮೇ 27ರವರೆಗೂ ಬೆಳಿಗ್ಗೆ 11 ರಿಂದ 1.30ರ ಗಂಟೆಯವರೆಗೆ ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಮೇ 31 ಕಡೆಯ ದಿನವಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನ್ ಲೈನ್ ಮೂಲಕವೂ ಕೌಶಲ ಯೋಜನೆ ನೋಂದಣಿಗೆ ಅವಕಾಶ

ಚಾಮರಾಜನಗರ, ಮೇ. 19 :- ಮುಖ್ಯಮಂತ್ರಿಗಳ ಕರ್ನಾಟಕ ಕೌಶಲ್ಯ ಯೋಜನೆಯಡಿ ನಿರುದ್ಯೋಗಿ ಯುವಜನರಿಗೆ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯವನ್ನು ಮೇ 22ರವರೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದಲ್ಲಿ ನಡೆಸಲಾಗುತ್ತಿದ್ದು ಹೆಚ್ಚಿನ ಯುವಜನರು ಪ್ರಯೋಜನ ಪಡೆಯಲು ಅವಕಾಶವಿದೆ.
ನೊಂದಣಿಗೆ ಬರುವ ಯುವ ಅಭ್ಯರ್ಥಿಗಳು ಆಧಾರ್, ಮೊಬೈಲ್ ಸಂಖ್ಯೆ ಹಾಗೂ ಇ ಮೇಲ್ ಐಡಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅಗತ್ಯ ದೃಢೀಕರಣ ಪತ್ರದೊಂದಿಗೆ ಬರುವ ಅಭ್ಯರ್ಥಿಗಳನ್ನು ನೋಂದಾಯಿಸಲಾಗುತ್ತದೆ. ಯುವ ಅಭ್ಯರ್ಥಿಗಳು ಆನ್ ಲೈನ್ ಮೂಲಕವೂ ಸಹ ನೋಂದಾಯಿಸಬಹುದಾಗಿದೆ. ತಿತಿತಿ.ಞಚಿushಚಿಟಞಚಿಡಿ.ಛಿom ಹಾಗೂ ಮೊಬೈಲ್ ಆಪ್ ಉಇಖಿ ಏ ಏಂUSಊಂಐಏಂಖಒಔಃIಐಇ ಂPP ಔಓ>ಉಔಔಉಐಇPಐಂಙ  ಮುಖಾಂತರ ನೋಂದಣಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಹಸೀಲ್ದಾರ್ ಕೆ. ಪುರಂಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, 18 May 2017

18-05-2017 ಇಂಜಿನಿಯರಿಂಗ್ ವಿದ್ಯಾರ್ಥಿನಿ:ಆತ್ಮಹತ್ಯೆಗೆ ಯತ್ನ

ಇಂಜಿನಿಯರಿಂಗ್ ವಿದ್ಯಾರ್ಥಿನಿ:ಆತ್ಮಹತ್ಯೆಗೆ ಯತ್ನ


ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ ಮೇ 18: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪ್ರಿಯಕರನಿಂದ     ಮೋಸಕ್ಕೆ ಬಲಿಯಾಗಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.ಆರ್. ರಕ್ಷಿತ (21  ) ಮೈಸೂರಿನ ಗಂಗೋತ್ರಿ ಲೇಔಟ್ ನ ನಿವಾಸಿ ಎಂದು ತಿಳಿದುಬಂದಿದೆ.     ಈಕೆ ಚಾಮರಾಜನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿ.ಎಸ್.ವಿಭಾಗದ 6  ಸೆಮಿಷ್ಟರ್ ನಲ್ಲಿ  ವ್ಯಾಸಂಗ ಮಾಡುತ್ತಿದ್ದಳು. 
ಪ್ರತಿದಿನ ಮೈಸೂರಿನಿಂದ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ  ಪ್ರಯಾಣಿಸುತ್ತಿದ್ದಳು. ಇದೇ ಸಂದರ್ಭದಲ್ಲಿ  ಕೆ ಎಸ್ ಆರ್ ಟಿ ಸಿ ಡ್ರೈವರ್  ಶ್ರೀನಿವಾಸ್  ಜೊತೆ ಪ್ರೇಮಾಂಕುರ  ಬೆಳೆಯಿತು ಎನ್ನಲಾಗಿದೆ.  ಈತ  ಚಾಮರಾಜನಗರದ ಕುರುಬರಹುಂಡಿ ಗ್ರಾಮದವನು. 4 ತಿಂಗಳ ಹಿಂದೆ ರಕ್ಷಿತಾಗೆ ತಾಳಿ ಕಟ್ಟಿದ್ದ ಎನ್ನಲಾಗಿದೆ.
ಶ್ರೀನಿವಾಸ ಕೊರಮ ಸಮುದಾಯಕ್ಕೆ ಸೇರಿದವನು. ರಕ್ಷಿತ ಒಕ್ಕಲಿಗ ಗೌಡ ಸಮುದಾಯದ ಹುಡುಗಿ.  ಆದರೆ ಶ್ರೀನಿವಾಸನ ಮನೆಯಲ್ಲಿ ಅಂತರ್ಜಾತಿ ವಿವಾಹಕ್ಕೆ ವಿರೋಧವಿತ್ತು.  ನಿನ್ನೆ ಶ್ರೀನಿವಾಸನ ಅಕ್ಕ ಹುಡುಗಿಯ ತಾಳಿಯನ್ನು ಕಿತ್ತುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸುವುದಕ್ಕಾಗಿ ರಕ್ಷಿತಾಳ ತಂದೆ ಇಂದು ಬೆಳಿಗ್ಗೆ, ಚಾಮರಾಜನಗರದ ಕೆ ಎಸ್ ಆರ್ ಟಿ ಸಿ ಬಸ್ ಡಿಪೋಗೆ ಆಕೆಯನ್ನು ಕರೆದುಕೊಂಡು ಬಂದಿದ್ದಾರೆ. ಶ್ರೀನಿವಾಸ್  ಡಿಪೋ ಗೆ ಇನ್ನೂ ಬಂದಿಲ್ಲವಾದ್ದರಿಂದೋ ಏನೋ ಬೇಸತ್ತು  ಶೌಚಾಲಯಕ್ಕೆ  ಹೋಗುವುದಾಗಿ ತಂದೆಗೆ ತಿಳಿಸಿ, ಪೆಟ್ರೋಲ್ ಮಿಶ್ರಿತ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ.
  ಬೆಂಕಿ ಹಚ್ಚಿಕೊಂಡ ಆರ್. ರಕ್ಷಿತ ರನ್ನು ತಕ್ಷಣ ಚಾಮರಾಜನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಿಕೊಡಲಾಗಿದೆ .
ಪಟ್ಟಣ ಠಾಣೆಯಲ್ಲಿ ದೂರು ಧಾಖಲಿಸಿಕೊಂಡು ಈಗಾಗಲೇ ಚಾಲಕ ಶ್ರನಿವಾಸ್ ಅನ್ನು ಬಂದಿಸಲಾಗಿದೆ ಎಂದು ತಿಳಿದುಬಂದಿದೆ



 

 




ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ

ಚಾಮರಾಜನಗರ, ಮೇ. 18 :- ಜಿಲ್ಲೆಯ ನಾಲ್ಕೂ ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳು ಮೇ 22 ರಿಂದ 25ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯಾ ತಾಲೂಕಿನ ಸರ್ಕಾರಿ ಅತಿಥಿಗೃಹಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸುವರು.
ಮೇ 22ರಂದು ಕೊಳ್ಳೇಗಾಲ, 23ರಂದು ಯಳಂದೂರು, 24ರಂದು ಚಾಮರಾಜನಗರ ಹಾಗೂ 25ರಂದು ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರಿಂದ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸುವರು.
ಸರ್ಕಾರಿ ಕಚೇರಿಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪ್ರಪತ್ರಗಳಲ್ಲಿ ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಮೇ. 19ರಂದು ಜಿಲ್ಲೆಯಲ್ಲಿ ಲೋಕಸಭಾ ಸದಸ್ಯರ ಪ್ರವಾಸ : ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಚಾಮರಾಜನಗರ, ಮೇ. 18- ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಮೇ 19ರಂದು ಕೊಳ್ಳೇಗಾಲ ತಾಲೂಕಿನ ಹನೂರು ವಿಧಾನ ಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ದೊಡ್ಡಿಂದುವಾಡಿ ಗ್ರಾಮದ ಡೈರಿ ಹತ್ತಿರ ಉಪ್ಪಾರ ಸಮುದಾಯ ಭವನದ ಅಡುಗೆ ಮನೆ ಕಟ್ಟಡ ಉದ್ಘಾಟನೆ, ಬಂಡಳ್ಳಿ ಗ್ರಾಮದಲ್ಲಿ ಪಶು ಆಸ್ಪತ್ರೆ ಕಟ್ಟಡ, ಶಾಗ್ಯ ಹಾಗೂ ಸೂಳೇರಿಪಾಳ್ಯ ಗ್ರಾಮಗಳಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ, ರಾಮಾಪುರ ಹಾಗೂ ಗೆಜ್ಜಲವತ್ತ ಗ್ರಾಮಗಳಲ್ಲಿ ಡಾ. ಬಾಬು ಜಗಜೀವನರಾಂ ಸಮುದಾಯ ಭವನ ಕಟ್ಟಡ ಹಾಗೂ ಲೊಕ್ಕನಹಳ್ಳಿ ಗ್ರಾಮದಲ್ಲಿ ಉಪ್ಪಾರ ಸಮುದಾಯ ಭವನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಬೈಲೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಧ್ರುವನಾರಾಯಣ ಭಾಗವಹಿಸುವರು ಎಂದು ಸಂಸದರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಆದರ್ಶ ಶಾಲೆ ಪ್ರವೇಶ ಪರೀಕ್ಷಾ ಫಲಿತಾಂಶ ಪ್ರಕಟ

ಚಾಮರಾಜನಗರ, ಮೇ. 18 - 2017-18ನೇ ಸಾಲಿಗೆ ಆದರ್ಶ ವಿದ್ಯಾಲಯಕ್ಕೆ 6ನೇ ತರಗತಿಯ ಪ್ರವೇಶಕ್ಕೆ ನಡೆದ ಪರೀಕ್ಷಾ ಫಲಿತಾಂಶವನ್ನು ಶಾಲೆಯಲ್ಲಿ ಪ್ರಕಟಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಮುಖ್ಯಸ್ಥರನ್ನು ಸಂಪರ್ಕಿಸುವಂತೆ ವಿದ್ಯಾಲಯದ ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಎಂಇಜಿಪಿ ಯೋಜನೆಯಡಿ ಸಾಲಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 18- ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ 2017-18ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆಯಡಿಯಲ್ಲಿ ಬ್ಯಾಂಕಿನಿಂದ ಆರ್ಥಿಕ ಸೌಲಭ್ಯ ಒದಗಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯದ ರೆವಿನ್ಯೂ ದಾಖಲಾತಿಗಳ ಪ್ರಕಾರ ವರ್ಗೀಕರಿಸಿದ ಯಾವುದೇ ಗ್ರಾಮೀಣ ಪ್ರದೇಶ ಮತ್ತು 2001ರ ಜನಗಣತಿಯಲ್ಲಿ 20 ಸಾವಿರ ಜನರಿಗಿಂತ ಕಡಿಮೆ ಇರುವ ಪಟ್ಟಣವೆಂದು ವರ್ಗೀಕರಿಸಿರುವ ಪ್ರದೇಶದಲ್ಲಿನ ಅಭ್ಯರ್ಥಿಗಳು ಅರ್ಹರು.
ಸಾಮಾನ್ಯ ವರ್ಗದವರು 21 ರಿಂದ 35 ವರ್ಷದೊಳಗಿರಬೇಕು. ವಿಶೇಷ ವರ್ಗದವರಿಗೆ 45 ವರ್ಷ. (ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಯೋಧರು ಹಾಗೂ ಅಂಗವಿಕಲರಿಗೆ ಗರಿಷ್ಠ ವಯೋಮಿತಿ ಅನ್ವಯವಾಗಲಿದೆ).
ಕನಿಷ್ಟ 8ನೇ ತರಗತಿ ಉತ್ತೀರ್ಣರಾಗಿರಬೇಕು. ಆದಾಯದ ಮಿತಿ ಇರುವುದಿಲ್ಲ.
ಪ್ರಥಮ ಪೀಳಿಗೆ ಉದ್ಯಮಶೀಲರಿಗೆ ಮಾತ್ರ ಪ್ರತಿ ಫಟಕಕ್ಕೆ ಗರಿಷ್ಟ 10 ಲಕ್ಷ ಯೋಜನಾ ವೆಚ್ಚದ ಕಿರು ಉತ್ಪಾದನಾ ಘಟಕಗಳನ್ನು ಹಾಗೂ ಸೇವಾ ಉದ್ಯಮಗಳನ್ನು ಪ್ರಾರಂಭಿಸಲು ವಿವಿಧ ಹಣಕಾಸು ಸಂಸ್ಥೆಗಳ ಮೂಲಕ ಸಾಲ ನೀಡಲಾಗುವುದು. ಹಿಂದಿನ ವರ್ಷದಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗಿ ಬ್ಯಾಂಕಿನಿಂದ ಸಾಲ ಮಂಜೂರಾಗದೇ ಇರುವ ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸಬೇಕು.
ಸಾಮನ್ಯ ವರ್ಗದ ಉದ್ಯಮಶೀಲರಿಗೆ ಯೋಜನಾ ವೆಚ್ಚದ ಶೇ. 25ರಷ್ಟು (ಗರಿಷ್ಟ 2 ಲಕ್ಷದ 50 ಸಾವಿರ ರೂ.ವರೆಗೆ) ಹಾಗೂ ವಿಶೇಷ ವರ್ಗದ ಉದ್ಯಮಶೀಲರಿಗೆ ಯೋಜನಾ ವೆಚ್ಚದ ಶೇ. 35ರಷ್ಟು (ಗರಿಷ್ಟ 3 ಲಕ್ಷದ 50 ಸಾವಿರ ರೂ.ವರೆಗೆ) ಸಹಾಯಧನ ನೀಡಲಾಗುವುದು.
ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಜೂನ್ 12ರೊಳಗೆ ತಿತಿತಿ.ಛಿmegಠಿ.ಞಚಿಡಿ.ಟಿiಛಿ.iಟಿ ವೆಬ್ ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರ (ಕೊ. ಸಂ. 323)ಮತ್ತು ಖಾದಿ ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಅಧಿಕಾರಿಯವರನ್ನು (ಕೊ. ಸಂ. 332) ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 18 - ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2017-18ನೇ ಸಾಲಿಗೆ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ತಾಲೂಕು ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿಯ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
5 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಚಾಮರಾಜನಗರ ಟೌನ್, ಸಂತೇಮರಹಳ್ಳಿ, ಚಂದಕವಾಡಿ, ಉಡಿಗಾಲ, ವೆಂಕಟಯ್ಯನಛತ್ರ, ಬಿಸಲವಾಡಿ, ಕುದೇರು, ಆಲೂರು, ಹರವೆ, ಹೊಂಗನೂರು ಹಾಗೂ ಜನ್ನೂರು ಗ್ರಾಮಗಳಲ್ಲಿನ ಮೆಟ್ಟಿಕ್ ಪೂರ್ವ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು.
ಚಾಮರಾಜನಗರ ಪಟ್ಟಣದಲ್ಲಿರುವ ಬಾಲಕ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ, ಕುದೇರಿನಲ್ಲಿರುವ  ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯಕ್ಕೆ ಪ್ರಥಮ ಪಿಯುಸಿ.ಯಿಂದ ಅಂತಿಮ ಬಿಎ, ಬಿಎಸ್ಸಿ.ವರೆಗೂ ಹಾಗೂ ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳಿಗೆ ಹರದನಹಳ್ಳಿಯ ವರ್ಗೀಕೃತ ವಿದ್ಯಾರ್ಥಿನಿಲಯದಲ್ಲಿ ಪ್ರವೇಶಕ್ಕೆ ಅವಕಾಶವಿದೆ.
ಚಾಮರಾಜನಗರ ಪಟ್ಟಣದಲ್ಲಿರುವ ಸ್ನಾತಕೋತ್ತರ ಕಾಲೇಜು ಬಾಲಕರ ವಿದ್ಯಾರ್ಥಿನಿಲಯಕ್ಕೆ ಅರ್ಜಿ ಸಲ್ಲಿಸಬಹುದು
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ಇತರೆ ಜನಾಂಗದ ವಿದ್ಯಾರ್ಥಿಗಳು ಆಯಾ ವಿದ್ಯಾರ್ಥಿನಿಲಯಗಳ ನಿಲಯಪಾಲಕರು ಅಥವಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಜೂನ್ 5ರೊಳಗೆ ಸಲ್ಲಿಬೇಕು.
ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 08226-223143 ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಂದ ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 18 :- ಕಲೆ, ಸಾಂಸ್ಕøತಿಕ ಯಾವುದೇ ಕ್ಷೇತ್ರದಲ್ಲಿ ನಾವೀನ್ಯತೆ, ರಾಷ್ಟ್ರೀಯ  ಮಟ್ಟದಲ್ಲಿ ತಾರ್ಕಿಕ ಸಾಧನೆ, ಕ್ರೀಡೆ, ಸಮÁಜಸೇವೆ, ಸಂಗೀತ ಮತ್ತು ಕೇಂದ್ರ ಆಯ್ಕೆ ಸಮಿತಿಯ ಮಾನ್ಯತೆಗೆ ಯೋಗ್ಯವಾದ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ.
5 ರಿಂದ 18ರ ವಯೋಮಿತಿಯೊಳಗಿನ ಅಂದರೆ ದಿನಾಂಕ 1.8.1999 ಹಾಗೂ ನಂತರ ಜನಿಸಿದ ಮಕ್ಕಳನ್ನು 2017ರ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ರಾಷ್ಟ್ರ ಮಟ್ಟದ ಪ್ರಶಸ್ತಿಯು 20 ಸಾವಿರ ರೂ. ನಗದು, 10 ಸಾವಿರ ರೂ, ಮೌಲ್ಯದ ಪುಸ್ತಕ ಓಚರ್, ಒಂದು ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಪ್ರತೀ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಒಂದು ಬೆಳ್ಳಿ ಪದಕ, 10 ಸಾವಿರ ರೂ. ನಗದು, 3 ಸಾವಿರ ರೂ. ಮೌಲ್ಯದ ಪುಸ್ತಕ ಓಚರ್ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.
ಪ್ರಶಸ್ತಿಗೆ ಆಯ್ಕೆಯಾಗಲು ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿರಬೇಕು. ಅಸಾಧಾರಣ ಸಾಧನೆಯನ್ನು ಸಮರ್ಥಿಸಲು ಪೂರಕ ದಾಖಲಾತಿಗಳನ್ನು ಒದಗಿಸಬೇಕು. ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.
ನಿಗದಿತ ನಮೂನೆಯ ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳೆಯರ ಮತ್ತು ಮಕ್ಕಳÀ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಡೆದು ಅರ್ಜಿಯನ್ನು ಆಂಗ್ಲ ಭಾಷೆಯಲ್ಲಿ ಭರ್ತಿ ಮಾಡಿ ಮೇ 30ರ ಒಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಯನ್ನು ಕಚೇರಿಯಿಂದ ಪಡೆದುಕೊಳ್ಳುವಂತೆ ಮಹಿಳೆಯರ ಮತ್ತು ಮಕ್ಕಳÀ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.










Wednesday, 17 May 2017

17-05-2017 ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಕ್ಕೆ ಸಜ್ಜಾಗಿ : ಜಿಲ್ಲಾಧಿಕಾರಿ ಸೂಚನೆ


ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಕ್ಕೆ ಸಜ್ಜಾಗಿ : ಜಿಲ್ಲಾಧಿಕಾರಿ ಸೂಚನೆ


ಚಾಮರಾಜನಗರ, ಮೇ. 17 - ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಸಮುದಾಯದ ಕಲ್ಯಾಣಕ್ಕಾಗಿ ವಿಶೇಷ ಘಟಕ ಹಾಗೂ ಉಪಯೋಜನೆಯಡಿ ನಿಗದಿಯಾಗಿರುವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಧಿಕಾರಿಗಳು ಸಜ್ಜಾಗುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ವಿಶೇಷ ಘಟಕ ಹಾಗೂ ಉಪಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶೇಷ ಘಟಕ ಹಾಗೂ ಉಪಯೋಜನೆಯಡಿ ಅನುದಾನ ನಿಗದಿಯಾಗುತ್ತಿದೆ. ಅನುದಾನಕ್ಕೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ. ಹೀಗಾಗಿ ವಿಳಂಬ ಮಾಡದೆ ಕಾರ್ಯಕ್ರಮ ಅನುಷ್ಠಾನಕ್ಕೆ ಅಗತ್ಯವಿರುವ ಪ್ರಕ್ರಿಯೆಗೆ ಅಧಿಕಾರಿಗಳು ಸಿದ್ಧರಾಗಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
  ಈಗಾಗಲೇ ಹಲವಾರು ಇಲಾಖೆಗಳಿಗೆ ರಾಜ್ಯ ಹಾಗೂ ಜಿಲ್ಲಾವಾರು ಯೋಜನೆಗಳಿಗೆ ಅನುದಾನ ನಿಗದಿಗೊಂಡಿದೆ. ಇಂತಹ ಇಲಾಖೆಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾರ್ಯಕ್ರಮ ಅನುಷ್ಠಾನಕ್ಕೆ ರೂಪುರೇಷೆ ಸಿದ್ಧಪಡಿಸಿಕೊಳ್ಳಬೇಕು. ಫಲಾನುಭವಿಗಳ ಆಯ್ಕೆ, ಅನುದಾನ ಹಂಚಿಕೆ, ಇನ್ನಿತರ ಅವಶ್ಯಕ ಕೆಲಸಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂದರು.
ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳ ಅನುದಾನ ಖಜಾನೆಗೆ ತಲುಪಿದ ಬಳಿಕ ಅನುಷ್ಠಾನ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುವ ಧೋರಣೆಯನ್ನು ತಾವು ಸಹಿಸುವುದಿಲ್ಲ. ಅಧಿಕಾರಿಗಳು ಅನುದಾನ ಲಭ್ಯತೆಗೆ ಅನುಗುಣವಾಗಿ ಪೂರ್ವಸಿದ್ಧತೆಯೊಂದಿಗೆ ಕಾರ್ಯಕ್ರಮಗಳನ್ನು ತಲುಪಿಸಲು ಎಲ್ಲ ಏರ್ಪಾಡುಗಳನ್ನು ಕೈಗೊಂಡಿರಬೇಕು ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.
ಅನುದಾನ ಸಕಾಲದಲ್ಲಿ ಬಿಡುಗಡೆ ಮಾಡುವಂತೆ ಆಯಾ ಇಲಾಖೆಗಳ ಕೇಂದ್ರ ಕಚೇರಿಗೆ ಪತ್ರ ವ್ಯವಹಾರ ಮಾಡಬೇಕು. ಆರ್ಥಿಕ ವರ್ಷದ ಕೊನೆಯ ಅವಧಿಯಲ್ಲಿ ಕಾರ್ಯಕ್ರಮ ಅನುಷ್ಠಾನ ಮಾಡುವ ಪ್ರಕ್ರಿಯೆಯನ್ನು ಕೈಬಿಡಬೇಕು. ಡಿಸೆಂಬರ್ ಅಂತ್ಯದ ಒಳಗೆ ಪೂರ್ಣಪ್ರಮಾಣದಲ್ಲಿ ಪರಿಶಿಷ್ಟÀ ಕಲ್ಯಾಣ ಯೋಜನೆಗಳನ್ನು ಶೇ. 100ರಷ್ಟು ಪೂರ್ಣಗೊಳಿಸಬೇಕೆಂದು ರಾಮು ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
  ಜಿಲ್ಲೆಯ ಹಲ ಭಾಗದಲ್ಲಿ ಮಳೆಯಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಇಂತಹ ಪ್ರದೇಶಗಳಲ್ಲಿ ವಿಶೇಷ ಘಟಕ ಉಪಯೋಜನೆಯಡಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ನೆರವು ನೀಡಬೇಕು. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ವ್ಯಾಪಕ ಪ್ರವಾಸ ಮಾಡಿ ವರದಿ ಮಾಡಬೇಕು. ರೈತರಿಗೆ ಬೆಳೆಗಾರರಿಗೆ ಅಗತ್ಯ ಮಾರ್ಗದರ್ಶನ ಮಾಡಿ ಪ್ರಸ್ತುತ ಸಂದರ್ಭಕ್ಕೆ ಅನುಗುಣವಾದ ಬೆಳೆ ಬೆಳೆಯಲು ಸಲಹೆ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಆಹಾರ ಇಲಾಖೆ ಪನಿರ್ದೇಶಕರಾದ ಆರ್. ರಾಚಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ನಾಗರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಸತೀಶ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಆರ್. ಸರಸ್ವತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಮೇ. 19ರಂದು ಜಿಲ್ಲೆಯಲ್ಲಿ ಲೋಕಸಭಾ ಸದಸ್ಯರ ಪ್ರವಾಸ : ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ಚಾಮರಾಜನಗರ, ಮೇ. 17 (:- ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಮೇ 19ರಂದು ಕೊಳ್ಳೇಗಾಲ ತಾಲೂಕಿನ ಹನೂರು ವಿಧಾನ ಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ದೊಡ್ಡಿಂದುವಾಡಿ ಗ್ರಾಮದ ಡೈರಿ ಹತ್ತಿರ ಉಪ್ಪಾರ ಸಮುದಾಯ ಭವನದ ಅಡುಗೆ ಮನೆ ಕಟ್ಟಡ ಉದ್ಘಾಟನೆ, ಬಂಡಳ್ಳಿ ಗ್ರಾಮದಲ್ಲಿ ಪಶು ಆಸ್ಪತ್ರೆ ಕಟ್ಟಡ, ಶಾಗ್ಯ ಹಾಗೂ ಸೂಳೇರಿಪಾಳ್ಯ ಗ್ರಾಮಗಳಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ, ರಾಮಾಪುರ ಹಾಗೂ ಗೆಜ್ಜಲವತ್ತ ಗ್ರಾಮಗಳಲ್ಲಿ ಡಾ. ಬಾಬು ಜಗಜೀವನರಾಂ ಸಮುದಾಯ ಭವನ ಕಟ್ಟಡ ಹಾಗೂ ಲೊಕ್ಕನಹಳ್ಳಿ ಗ್ರಾಮದಲ್ಲಿ ಉಪ್ಪಾರ ಸಮುದಾಯ ಭವನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಬೈಲೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಧ್ರುವನಾರಾಯಣ ಭಾಗವಹಿಸುವರು

ಮೇ. 23ರಂದು ನಗರದಲ್ಲಿ ಕವಿ ಸರ್ವಜ್ಞ ಜಯಂತಿ ದಿನಾಚರಣೆ
ಚಾಮರಾಜನಗರ, ಮೇ. 17 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕವಿ ಸರ್ವಜ್ಞ ಜಯಂತಿಯನ್ನು ಮೇ 23ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 9.30 ಗಂಟೆಗೆ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಬಳಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಸರ್ವಜ್ಞ ಅವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡುವರು. ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಉದ್ಫಾಟಿಸುವರು.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಕವಿ ಸರ್ವಜ್ಞರ  ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ ಅವರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು. ಶಾಸಕರಾದ ಎಸ್.ಜಯಣ್ಣ, ಆರ್. ನರೇಂದ್ರ, ಎಂ.ಸಿ. ಮೋಹನ ಕುಮಾರಿ ಉರುಫ್ ಗೀತಾ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ವೆಂಕಟಯ್ಯನಛತ್ರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಭಾರÀ ಪ್ರಾಂಶುಪಾಲರಾದ ಮಹೇಶ್ ಹರವೆ ಮುಖ್ಯ ಭಾಷಣ ಮಾಡುವರು.
ಕಾರ್ಯಕ್ರಮಕ್ಕೂ ಮೊದಲು ನಗರದ ಕದಳಿ ಮಹಿಳಾ ವೇದಿಕೆಯಿಂದ ವಚನಗಾಯನ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿವಿಧ ಸಾಲಸೌಲಭ್ಯಕ್ಕೆ ವಿಶ್ವಕರ್ಮ ಸಮುದಾಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 17 :- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮವು 2017-18ನೇ ಸಾಲಿಗೆ ವಿವಿಧ ಸಾಲಸೌಲಭ್ಯ ನೀಡಲಿದ್ದು ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪಜಾತಿಗೆ ಸೇರಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ರಾಜ್ಯ ಸರ್ಕಾರದ ಯೋಜನೆಗಳಡಿ ಪಂಚವೃತ್ತಿ ಅಭಿವೃದ್ಧಿ, ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಸ್ವಯಂ ಉದ್ಯೋಗ ಸಾಲ, ಅರಿವು ಶೈಕ್ಷಣಿಕ ಸಾಲ, ಗಂಗಾ ಕಲ್ಯಾಣ, ಮಹಿಳೆಯರಿಗೆ ಕಿರು ಸಾಲ, ಕಮ್ಮಾರಿಕೆ, ಅಕ್ಕಸಾಲಿ ಮತ್ತು ಬಡ ಉದ್ಯಮಿಗಳಿಗೆ ವಿಶೇಷ ಪ್ಯಾಕೇಜ್ ಯೋಜನೆಗಳಲ್ಲಿ ಸಾಲಸೌಲಭ್ಯ ದೊರೆಯಲಿದೆ.
ಎನ್‍ಬಿಸಿಎಫ್‍ಡಿಸಿ ಯೋಜನೆಯಡಿ ಕೃಷಿ, ಸಣ್ಣ ವ್ಯಾಪಾರ, ಸೇವಾವಲಯ, ಸಾರಿಗೆ ವಲಯಕ್ಕೆ ಸಾಲ ದೊರೆಯಲಿದೆ. ಶೈಕ್ಷಣಿಕ ಸಾಲ ಯೋಜನೆಯಡಿ ದೇಶ ಹಾಗೂ ವಿದೇಶದಲ್ಲಿ ವ್ಯಾಸಂಗಕ್ಕೆ, ನ್ಯೂ ಸ್ವರ್ಣಿಮಾ ಯೋಜನೆಯಡಿ ಮಹಿಳೆಯರಿಗೆ ಸಾಲ, ಶಿಲ್ಪ ಸಂಪದ, ಸ್ವಯಂ ಸಕ್ಷಮ ಸಾಲ, ಮೈಕ್ರೋ ಫೈನಾನ್ಸ್, ಕೃಷಿ ಸಂಪದ, ಮಹಿಳಾ ಸಮೃದ್ಧ ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಾಗೂ ವೈಯಕ್ತಿಕವಾಗಿ ಸಾಲಸೌಲಭ್ಯ ನೀಡಲಾಗುತ್ತದೆ.
ಅಭ್ಯರ್ಥಿಗಳು 18 ರಿಂದ 55ರ ವಯೋಮಿತಿಯೊಳಗಿರಬೇಕು. ಶೈಕ್ಷಣಿಕ ಸಾಲಕ್ಕೆ 18 ರಿಂದ 30ರ ವಯೋಮಿತಿಯೊಳಗಿರಬೇಕು. ಸಾಲಸೌ¯ಭ್ಯ ಪಡೆಯಲು ಇಚ್ಚಿಸುವವರು ನಿಗದಿತ ನಮೂನೆಯ ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಮೇ 18 ರಿಂದ ಜೂನ್ 2ರವರೆಗೆ ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 17ರ ಒಳಗೆ ಸಲ್ಲಿಸಬೇಕು. ಸಂಪೂರ್ಣ ಮಾಹಿತಿಯನ್ನು ನಿಗಮದ ವ್ಯವಸ್ಥಾಪಕರ ಕಚೇರಿ (ದೂ.ಸಂ.08226-223587) ಅಥವಾ ವೆಬ್ ಸೈಟ್ ತಿತಿತಿ.ಞvಛಿಜಛಿಟ.ಛಿom ನಿಂದ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ಮೇ. 23ರಂದು ಕೊಳ್ಳೇಗಾಲದಲ್ಲಿ ಪಜಾ. ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ : ಕುಂದುಕೊರತೆ ಸಲ್ಲಿಕೆಗೆ ಅವಕಾಶ
ಚಾಮರಾಜನಗರ, ಮೇ. 17 - ಕೊಳ್ಳೇಗಾಲ ತಾಲೂಕಿನ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯು ಮೇ 23ರಂದು ಮಧ್ಯಾಹ್ನ 3 ಗಂಟೆಗೆ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸಂಬಂಧಿಸಿದಂತೆ ಕುಂದುಕೊರತೆಗಳ ಬಗ್ಗೆ ಚರ್ಚಿಸಲು ಇಚ್ಚಿಸಿದಲ್ಲಿ ನಾಗರಿಕರು ಸಂಘಸಂಸ್ಥೆಗಳು ಲಿಖಿತವಾಗಿ ಮೇ 20ರೊಳಗೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.








16-05-2017 ಜೈನ ಧರ್ಮದಲ್ಲಿ ಸತ್ಯ ಅಹಿಂಸೆಗೆ ಒತ್ತು : ಸಿ.ಪುಟ್ಟರಂಗಶೆಟ್ಟಿ,ಬಹುಗ್ರಾಮ ಕುಡಿಯುವ ನೀರು ಯೋಜನೆ ತ್ವರಿತ ಪೂರ್ಣಗೊಳಿಸಿ : ಯು ಟಿ ಖಾದರ್


ಬಹುಗ್ರಾಮ ಕುಡಿಯುವ ನೀರು ಯೋಜನೆ ತ್ವರಿತ ಪೂರ್ಣಗೊಳಿಸಿ : ಯು ಟಿ ಖಾದರ್


ಚಾಮರಾಜನಗರ, ಮೇ. 16 :- ಚಾಮರಾಜನಗರ ತಾಲೂಕಿನ 166 ಹಾಗೂ ಗುಂಡ್ಲುಪೇಟೆ ತಾಲೂಕಿನ 131 ಗ್ರಾಮಗಳಿಗೆ ನದಿ ಮೂಲದಿಂದ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಬಾಕಿ ಇರುವ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಲ್ಲ ಗ್ರಾಮಗಳಿಗೆ ನೀರು ಪೂರೈಸುವಂತೆ ಆಹಾರ, ನಾಗರಿಕ ಸರಬರಾಜು ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಬಾಕಿ ಇರುವ ವಿದ್ಯುತ್ ಸಂಪರ್ಕ ಇತರೆ ಕಾಮಗಾರಿಗಳನ್ನು ವಿಳಂಬ ಮಾಡದೆ ಶೀಘ್ರವಾಗಿ ಮುಗಿಸಬೇಕು. ನೀರಿನ ಬವಣೆ ನೀಗಿಸುವ ಸಲುವಾಗಿ ಜೂನ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಉದ್ದೇಶಿತ ಎಲ್ಲ ಗ್ರಾಮಗಳಿಗೂ ಸಮರ್ಪಕವಾಗಿ ನೀರು ಪೂರೈಸುವ ಕೆಲಸ ಆಗಲೇಬೇಕು ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ರಿಸೀವಿಂಗ್ ಚೇಂಬರ್ಸ್ ಇನ್ನು ಶೇ. 50ರಷ್ಟು ಅಗತ್ಯವಿದ್ದರೆ ಅದಕ್ಕೆ ಬೇಕಾಗುವ ನೆರವನ್ನು ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಆದಷ್ಟು ಕೂಡಲೇ ನೀಡಲಾಗುತ್ತದೆ. ಮೇ 31ರೊಳಗೆ ಪ್ರಸ್ತುತ ಕೈಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಿದರು.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಗತಿ ಪರಿಶೀಲಿಸಿದ ಸಚಿವರು ಗ್ರಾಮೀಣ ಭಾಗದಲ್ಲಿ ಕೆಲವೆಡೆ ಉದ್ಯೋಗ ನೀಡದೇ ಇರುವ ಬಗ್ಗೆ ಖುದ್ದು ನನಗೆ ದೂರುಗಳು ಬಂದಿವೆ. ಬರಗಾಲ ಸಂದರ್ಭದಲ್ಲಿ ಯಾರೂ ಸಹ ಉದ್ಯೋಗ ಅರಸಿ ಹೊರಭಾಗಗಳಿಗೆ ತೆರಳಲು ಅವಕಾಶ ನೀಡದೇ ಸ್ಥಳೀಯವಾಗಿ ಕೆಲಸ ನೀಡಿ ಸಕಾಲದಲ್ಲಿ ಹಣ ಪಾವತಿ ಮಾಡಬೇಕು. ಉದ್ಯೋಗ ನೀಡದೇ ಇರುವ ಬಗ್ಗೆ ಮತ್ತೆ ದೂರುಗಳು ಕೇಳಿಬಂದರೆ ಹಾಗೂ ನಿಗದಿತ ಗುರಿಗೆ ಅನುಗುಣವಾಗಿ ಸಾಧನೆ ಮಾಡದೇ ಇದ್ದರೆ ಹೋಬಳಿ ನೋಡಲ್ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಜಿಲ್ಲೆಯ ಕೆಲ ಅನುದಾನಿತ ಶಾಲೆಗಳಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶದಲ್ಲಿ ತೀವ್ರÀ ಕುಸಿತ ಕಂಡುಬಂದಿದೆ. ಸರ್ಕಾರದ ವೇತನ ಪಡೆಯುವ ಶಿಕ್ಷಕರು ಹೇಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ಪರಿಶೀಲಿಸಬೇಕಿದೆ. ಫಲಿತಾಂಶ ಕಡಿಮೆ ಬಂದಿರುವ ಬಗ್ಗೆ ವಿಶ್ಲೇಷಿಸಿ ಕಾರಣಗಳನ್ನು ತಿಳಿದುಕೊಳ್ಳಲು ಶೀಘ್ರವೇ ಅನುದಾನಿತ ಶಾಲೆಗಳ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರ ಸಭೆ ಕರೆಯಬೇಕು. ಫಲಿತಾಂಶ ಸುಧಾರಣೆಗೆ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.
ಬರಲಿರುವ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಮಾಡುವ ಮೂಲಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ತಕ್ಷಣದಿಂದಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಮುಂದಾಗಬೇಕೆಂದು ತಿಳಿಸಿದರು.
ತೋಟಗಾರಿಕೆ, ಮೇವು, ಕೃಷಿ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಿದ ಸಚಿವರು ಮಳೆಯಾಗಿರುವ ಪ್ರದೇಶದಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಇತರೆ ಕೃಷಿ ಪರಿಕರಗಳಿಗೆ ಅಭಾವವಾಗದಂತೆ ನೋಡಿಕೊಳ್ಳಬೇಕು. ಜಾನುವಾರುಗಳಿಗೆ ಮೇವು ಕೊರತೆ ಕಾಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದರು.
ತೋಟಗಾರಿಕೆ ಇಲಾಖೆಯಿಂದ ಹನೂರು ಭಾಗಕ್ಕೆ ಬೇಡಿಕೆ ಇರುವ ಆಲೂಗೆಡ್ಡೆ ಬಿತ್ತನೆ ಬೀಜವನ್ನು ರಾಷ್ಟ್ರೀಯ ಬೀಜ ನಿಗಮದಿಂದ 100 ಟನ್ ಖರೀದಿಸಿರುವ ಬಗ್ಗೆ ಮಾಹಿತಿ ಪಡೆದ ಶಾಸಕ ಆರ್. ನರೇಂದ್ರ ಅವರು ಇನ್ನೂ ಹೆಚ್ಚುವರಿಯಾಗಿ ಬೀಜ ಖರೀದಿಸಿ ರೈತರಿಗೆ ಬೆಳೆಗಾರರಿಗೆ ವಿತರಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೈಗೊಂಡಿರುವ ಹೆದ್ದಾರಿ ನಿರ್ಮಾಣ ಕಾಮಗಾರಿ ಸೇರಿದಂತೆ ಇತರೆ ಅಭಿವೃದ್ಧಿ ಯೋಜನೆಗಳು ಹಾಗೂ  ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.
ಶಾಸಕರಾದ ಎಸ್. ಜಯಣ್ಣ, ಜಿಲ್ಲಾಧಿಕಾರಿ ಬಿ. ರಾಮು, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮೇ. 17ರಂದು ಪಡಗೂರಿನಲ್ಲಿ ಅಂಚೆ ಸಂತೆ

ಚಾಮರಾಜನಗರ, ಮೇ. 16 - ಅಂಚೆ ಇಲಾಖೆ ವತಿಯಿಂದ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹೋಬಳಿಯ ಪಡಗೂರು ಗ್ರಾಮದಲ್ಲಿ ಅಂಚೆ ಸಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆ, ಜೀವನ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆಜೀವ ವಿಮೆ, ಸಾಮಾನ್ಯ ಅಂಚೆ ಜೀವ ವಿಮೆ, ಇತರೆ ಯೋಜನೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಸ್ವೀಕರಿಸಲಾಗುತ್ತದೆ.
ಅಂಚೆ ಸಂತೆಯ ಸದುಪಯೋಗ ಮಾಡಿಕೊಳ್ಳುವಂತೆ ಅಂಚೆ ಅಧೀಕ್ಷಕರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಳಂದೂರು : ಪ.ಜಾ. ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ – ಮನವಿ ಸಲ್ಲಿಕೆಗೆ ಅವಕಾಶ
ಚಾಮರಾಜನಗರ, ಮೇ. 16 :- ಯಳಂದೂರು ತಾಲೂಕು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಹಿತರಕ್ಷಣಾ (ಕ್ಷೇಮಾಭಿವೃದ್ಧಿ) ಸಭೆಯು ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಮೇ 18ರಂದು ಬೆಳಿಗ್ಗೆ 11 ಗಂಟೆಗೆ ಯಳಂದೂರು ಪಟ್ಟಣದ ತಹಸೀಲ್ದಾರ್ ಸಭಾಂಗಣದಲ್ಲಿ ನಡೆಯಲಿದೆ.
ಸಮಿತಿಗೆ ಮಹದೇವಪ್ಪ ಸಿದ್ದೇಶ್ವರಪೇಟೆ ಮಾಂಬಳ್ಳಿ (ಮೊಬೈಲ್ ನಂ. 9739825516), ಆರ್. ನಾಗರಾಜು, ಅಗರ (ಮೊ. ಸಂ. 9986585161), ಮಹದೇವಶೆಟ್ಟಿ ಬಿನ್ ನಾಗರಂಗಮ್ಮ, ವೈ ಕೆ ಮೋಳೆ (ಮೊ.ನಂ. 9480003951) ಇವರು ನಾಮನಿರ್ದೇಶಿತ ಸದದ್ಯರಾಗಿ ನೇಮಕವಾಗಿರುತ್ತಾರೆ. ವೈಯಕ್ತಿಕ ವಿಷಯಗಳನ್ನು ಹೊರತುಪಡಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಸಮುದಾಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ತೊಂದರೆಗಳು ಇದ್ದಲ್ಲಿ ಸಮಿತಿಯ ಸದಸ್ಯರು ಅಥವಾÀ ತಹಸೀಲ್ದಾರ್ ಅಥವಾ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕರಿಗೆ ಮನವಿ ಸ್ಲಲಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ಜೈನ ಧರ್ಮದಲ್ಲಿ ಸತ್ಯ ಅಹಿಂಸೆಗೆ ಒತ್ತು : ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ, ಮೇ. 16 - ಸತ್ಯ ಹಾಗೂ ಅಹಿಂಸಾ ಮಾರ್ಗ ಪಾಲನೆಗೆ ಅತಿಹೆಚ್ಚು ಒತ್ತು ನೀಡಿರುವ ಪೈಕಿ ಜೈನಧರ್ಮಕ್ಕೆ ಅಗ್ರಸ್ಥಾನವಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ವರಿಗೂ ಲೇಸನ್ನೇ ಬಯಸಿದ ಮಹಾವೀರರು ಸತ್ಯ ಹಾಗೂ ಅಹಿಂಸೆಯನ್ನು ಪ್ರತಿಪಾದಿಸಿದರು. ಸುಳ್ಳು, ಕಪಟ ತ್ಯಜಿಸಿ ಉನ್ನತ ಮಾರ್ಗದಲ್ಲಿ ನಡೆಯಬೇಕೆಂಬ ಶ್ರೇಷ್ಠ ಮೌಲ್ಯಗಳನ್ನು ತಮ್ಮ ಸಂದೇಶದ ಮೂಲಕ ಸಾರಿದರು ಎಂದರು.
ಮಹಾವೀರರು ರಾಜ ವೈಭೋಗವನ್ನು ತ್ಯಜಿಸಿ ತಪಸ್ಸು ಸಾಧನೆ ಮಾಡಿ ಶಾಂತಿಯುತ ಜೀವನ ಸಂದೇಶಗಳಿಗೆ ಮಾದರಿಯಾಗಿದ್ದಾರÉ. ಸತ್ಯ ಅಹಿಂಸೆಯನ್ನು ಪ್ರತಿಪಾದಿಸಿದ ಧರ್ಮಗಳಲ್ಲಿ ಜೈನಧರ್ಮವು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಶಾಂತಿಪ್ರಿಯತೆಗೆ ಹೆಸರಾಗಿದೆ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.

ಜೈನಧರ್ಮದ ಸಮುದಾಯ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ವಿಶೇಷವಾಗಿ ವಾಣಿಜ್ಯ ವಹಿವಾಟು ಉದ್ಯಮಗಳಲ್ಲಿ ತೊಡಗಿಕೊಂಡಿರುವ ಸಮುದಾಯದ ಜನರು ತಮ್ಮದೇ ಆದ ಪ್ರಗತಿಪರ ಚಟುವಟಿಕೆಗಳಿಂದ ನಗರದ ಪ್ರಗತಿಗೂ ಕಾರಣರಾಗಿದ್ದಾರೆ ಎಂದು ಪುಟ್ಟರಂಗಶೆಟ್ಟಿಯವರು ಸ್ಮರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು ಅವರು ತ್ಯಾಗ ಪ್ರಧಾನವೇ ಜೈನ ಧರ್ಮದ ಮುಖ್ಯ ಸಾರವಾಗಿದೆ. ಅಹಿಂಸೆ ಸತ್ಯ ಮಾರ್ಗವನ್ನು ಪಾಲನೆ ಮಾಡುವ ಮಹತ್ವವನ್ನು ತಿಳಿಸಿದ ಮಹಾವೀರರ ಜಯಂತಿ ಆಚರಣೆಯು ಅರ್ಥಪೂರ್ಣವಾಗಿದೆ. ತಾಲೂಕಿನ ಕನಕಗಿರಿಯು ಜೈನರ ಪವಿತ್ರ ಕ್ಷೇತ್ರವಾಗಿರುವುದು ಜಿಲ್ಲೆಗೆ ಹಮ್ಮೆ ತರುವ ಸಂಗತಿ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ಮಹಾವೀರರ ಅಹಿಂಸೆ ಸತ್ಯ ಸಂದೇಶಗಳು ಅಗತ್ಯವಾಗಿವೆ. ಶಾಂತಿಯಿಂದ ಎಲ್ಲವನ್ನು ಸಾಧಿಸಬಹುದೆಂಬ ವಿಷಯ ಮನದಟ್ಟಾಗಬೇಕಿದೆ ಎಂದರು.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರಾದ ಪ್ರೊ. ಪ್ರೀತಿ ಶ್ರೀ ಮಂದರ್ ಕುಮಾರ್ ಮುಖ್ಯ ಭಾಷಣ ಮಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಸತೀಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ. ನಾಗವೇಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದಲ್ಲಿ ನಡೆದ ಭಗವಾನ್ ಮಹಾವೀರರ ಭಾವಚಿತ್ರದ ಮೆರವಣಿಗೆಗೆ ಚಾಮರಾಜೇಶ್ವರ ದೇವಾಲಯ ಬಳಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕಾ ಇತರರು ಚಾಲನೆ ನೀಡಿದರು.

Monday, 15 May 2017

15-05-2017 ಕೌಶಲ್ಯ ಕರ್ನಾಟಕ ತರಬೇತಿ ನೊಂದಣಿ ವೆಬ್ ಪೋರ್ಟಲ್‍ಗೆ ಚಾಲನೆ ,ಮಾವು ಮಾರಾಟ ಮತ್ತು ಪ್ರದರ್ಶನ,

ಕೌಶಲ್ಯ ಕರ್ನಾಟಕ ತರಬೇತಿ ನೊಂದಣಿ ವೆಬ್ ಪೋರ್ಟಲ್‍ಗೆ ಚಾಲನೆ 



ಚಾಮರಾಜನಗರ, ಮೇ. 15 :- ಮುಖ್ಯಮಂತ್ರಿಗಳ ಕರ್ನಾಟಕ ಕೌಶಲ್ಯ ಕರ್ನಾಟಕ ಯೋಜನೆಯಡಿ ನಿರುದ್ಯೋಗಿ ಯುವಜನರ ಬೇಡಿಕೆ ಸಮೀಕ್ಷೆ ಮತ್ತು ನೊಂದಣಿಯ ವೆಬ್ ಪೋರ್ಟಲ್ ಕಾರ್ಯಕ್ರಮಕ್ಕೆ ನಗರದಲ್ಲಿಂದು ಚಾಲನೆ ದೊರೆಯಿತು.
ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇದು ಮುಖ್ಯಮಂತ್ರಿಯವರ ಬಹುದಿನಗಳ ಕನಸಿನ ಯೋಜನೆಯಾಗಿದೆ. ಯುವಕರು ದೇಶದ ಸಂಪತ್ತು. ಇಂದಿನ ಯುವಜನತೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿಗಳ ಜತೆಗೆ ವೃತ್ತಿ ನೈಪುಣ್ಯತೆ, ಕೌಶಲ್ಯ ತರಬೇತಿ ಪಡೆದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದರು.

ವಿದ್ಯಾಭ್ಯಾಸ ಮುಗಿಸಿದ ಯುವಕರಿಗೆ ಸರ್ಕಾರಿ ಕೆಲಸವೇ ಬೇಕೆಂದಿಲ್ಲ. ಸರ್ವರು ವೃತ್ತಿ ಕೌಶಲ್ಯ ಶಿಕ್ಷಣ ಪಡೆದು ಸ್ವಉದ್ಯೋಗ ಆರಂಭಿಸಿ ಸ್ವಾವಲಂಬಿಯಾಗಿ ಜೀವನ ನಡೆಸಲು ಅನುಕೂಲ ಮಾಡಿಕೊಡುವ ಸಲುವಾಗಿ ಸರ್ಕಾರವು ಆಧ್ಯತೆ ನೀಡಿದೆ. ಆಧುನಿಕ ತಂತ್ರಜ್ಞಾನ ಬಳಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ನಿಟ್ಟಿನಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಕರ್ನಾಟಕ ಕೌಶಲ್ಯ ಯೋಜನೆಯು ನಿರುದ್ಯೋಗಿ ಯುವಜನರಿಗೆ ಮಾರ್ಗದರ್ಶಿಯಾಗಿದೆ. ಮೊದಲು ಸಂಪನ್ಮೂಲ ಕೇಂದ್ರದಲ್ಲಿ ಹಾಗೂ ಆಯಾ ತಾಲೂಕು ಕೇಂದ್ರಗಳಲ್ಲಿ ಆನ್‍ಲೈನ್ ನೊಂದಣಿ ಮಾಡಿಸಿದ ನಂತರ ಅವರವರÀ ಪ್ರತಿಭೆಗನುಗುಣವಾಗಿ 3ರಿಂದ 6 ತಿಂಗಳು ತÀರಬೇತಿ ನೀಡಿ ಪ್ರಮಾಣಪತ್ರ ವಿತರಿಸಲಾಗುವುದು. ಆಯಾ ತಾಲೂಕು ಹಾಗೂ ಜಿಲ್ಲಾಕೇಂದ್ರಗಳಲ್ಲಿ ಉದ್ಯೋಗ ಮೇಳ ಆಯೋಜಿಸಿ ವಿವಿಧ ಕಂಪನಿ ಮತ್ತು ಕಾರ್ಖಾನೆಗಳಲ್ಲಿ ಉದ್ಯೋಗವಕಾಶ ಕಲ್ಪಿಸÀಲಾಗುವುದು ಎಂದು ಸಚಿವರು ತಿಳಿಸಿದರು.

ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಮಾತನಾಡಿ ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಯವಕ, ಯುವತಿಯರಿಗೆ ವೃತ್ತಿ ಕೌಶಲ್ಯ ಹಾಗೂ ನೈಪುಣ್ಯತೆ ತರಬೇತಿ ಅತ್ಯವಶ್ಯಕವಾಗಿದೆ. ಸಂಪನ್ಮೂಲ ಕೇಂದ್ರದ ಮೂಲಕ ವರ್ಷಕ್ಕೆ 5 ಲಕ್ಷ ಯುವಜನರಿಗೆ ವೃತ್ತಿ ನೈಪುಣ್ಯತೆ ತರಬೇತಿ ನೀಡುವ ಗುರಿಯನ್ನು ಹೊಂದಲಾಗಿದೆ. ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಹೆಚ್ಚಿನ ಕೈಗಾರಿಕೆಗಳನ್ನು ತೆರೆಯುವಂತೆ ಕೈಗಾರಿಕಾ ಸಚಿವರೊಂದಿಗೆ ಈಗಾಗಲೇ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ಮುಖ್ಯಮಂತ್ರಿಯವರ ಕರ್ನಾಟಕ ಕೌಶಲ್ಯ ತರಬೇತಿ ಯೋಜನೆಯಡಿ ವೃತ್ತಿ ನೈಪುಣ್ಯತೆಯ ಕೆಲವೇ ವಿಷಯಗಳನ್ನು ಮಾತ್ರ ಹೊಂದಿಲ್ಲ. ಕೃಷಿ, ತೋಟಗಾರಿಕೆ ಹಾಗೂ ರೇಷ್ಮೇ ವಿಷಯಗಳು ಸೇರಿದಂತೆ ಇತರೆ ಪ್ರಮುಖ ವೃತ್ತಿಯಲ್ಲಿ ತರಬೇತಿ ನೀಡುವುದು ಸಹ ಸೇರಿದೆ. ಪ್ರತಿ 2 ತಿಂಗಳಿಗೊಮ್ಮೆ ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಸಭೆ ಕರೆದು ಯೋಜನೆಯ ಪ್ರಗತಿ ಕುರಿತು ಚರ್ಚಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಜಿಲ್ಲೆಗೆ ಉತ್ತಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳು, ಶಾಲೆ ಹಾಗೂ ಮುಖ್ಯೋಪಾಧ್ಯಾಯರನ್ನು ಪ್ರಮಾಣಪತ್ರ ಹಾಗೂ ಸ್ಮರಣಿಕೆ ಫಲಕಗಳನ್ನು ನೀಡಿ ಸನ್ಮಾನಿಸಲಾಯಿತು.      
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. 
ಶಾಸಕರಾದ ಆರ್. ನರೇಂದ್ರ, ನಗರಸಭೆ ಅಧ್ಯಕ್ಷರಾದ ಎನ್.ಎಸ್. ರೇಣುಕ, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಆಲಿಖಾನ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ, ಜಿಲ್ಲಾಧಿಕಾರಿ ಬಿ. ರಾಮು, ಹೆಚ್ಚುವೆಇ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಜಿನಾ ಪಿ. ಮಲಾಕಿ, ಅವರುಗಳು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸುವರು.

ಕೌಶಲ್ಯ ತರಬೇತಿ ನೊಂದಣಿ : ಆಧಾರ್, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಕಡ್ಡಾಯ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ, ಮೇ. 15:- ಮುಖ್ಯಮಂತ್ರಿಗಳ ಕರ್ನಾಟಕ ಕೌಶಲ್ಯ ಕರ್ನಾಟಕ ಯೋಜನೆಯಡಿ ನಿರುದ್ಯೋಗಿ ಯುವಜನರ ಬೇಡಿಕೆ ಸಮೀಕ್ಷೆ ಮತ್ತು ನೊಂದಣಿಯು ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದಲ್ಲಿ ಮೇ 22ರ ವರೆಗೂ ನಡೆಯಲಿದೆ. 
ನೊಂದಾಯಿಸಿಕೊಳ್ಳುವ ನಿರುದ್ಯೋಗಿ ಯುವಜನರು ಆಧಾರ್‍ಸಂಖ್ಯೆ, ಮೊಬೈಲ್‍ಸಂಖ್ಯೆ ಹಾಗೂ ಇ-ಮೇಲ್ ಐಡಿ ಯನ್ನು ಕಡ್ಡಾಯವಾಗಿ ಹೊಂದಿರಬೇಕು. ಈಗಾಗಲೇ ನೊಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳುವಂತೆ ತಹಶೀಲ್ದಾರ್ ಕೆ. ಪುರಂದರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮೇ. 16ರಂದು ನಗರದಲ್ಲಿ ಶ್ರೀ ಭಗವಾನ್ ಮಾಹಾವೀರ ಜಯಂತಿ 

ಚಾಮರಾಜನಗರ, ಮೇ. 15 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಯೋಗದೊಂದಿಗೆ ಮೇ 16 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶ್ರೀ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀಕ್ಷೇತ್ರ ಕನಕಗಿರಿ ಜೈನಮಠದ ಸ್ವಸ್ತಿ ಶ್ರೀ ಭುವನಕೀರ್ತಿ ಭಟ್ಟಾರಕಸ್ವಾಮಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು.
ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. 
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ ಅವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.
ಶಾಸಕರಾದ ಎಸ್.ಜಯಣ್ಣ, ಆರ್. ನರೇಂದ್ರ, ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಮೈಸೂರು ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಎನ್.ಎಸ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಆಲಿಖಾನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪÀ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ  ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮೈಸೂರು ವಿ.ವಿ. ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಪ್ರೀತಿ ಶ್ರೀ ಮಂದರ್‍ಕುಮಾರ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡುವರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ 9.30 ಗಂಟೆಗೆ ನಗರದ ಚಾಮರಾಜೇಶ್ವರ ದೇವಸ್ಥಾನದ ಬಳಿ ವಿವಿಧ ಜಾನಪದ ಕಲಾತಂಡಗಳೊಡನೆ ಸಾಗಲಿರುವ ಭಗವಾನ್ ಮಹಾವೀರರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಚಾಲನೆ ನೀಡುವರು.
ವೇದಿಕೆ ಕಾರ್ಯಕ್ರಮದ ನಂತರ ನಗರದ ಕುಮಾರಿ ಅಕ್ಷತಾ ಜೈನ್ ಮತ್ತು ತಂಡದವರಿಂದ ನೃತ್ಯರೂಪಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. 
















Sunday, 14 May 2017

ದರ್ಮೇಂದ್ರ ಕುಮಾರ್ ಮೀನಾ ಮುಂದಿನ ಎಸ್ಪಿ ಸಾರಥಿ ( ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆ, (25-05-2017) ಬೆನಿಫಟ್ ಸ್ಕೀಂ ದಂದೆ ಸೇರಿದಂತೆ ಅಕ್ರಮವನ್ನ ಮಟ್ಟ ಹಾಕಿದ ಐ. ಪಿ.ಎಸ್ ಆದಿಕಾರಿ)

ಅಕ್ರಂ ದಂದೆಗಳನ್ನ ಮಟ್ಟ ಹಾಕಿದ ಚಾಮರಾಜನಗರದ   ಐ. ಪಿ.ಎಸ್ ಆದಿಕಾರಿ

ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆ, ಶ್ರೀ ಧರ್ಮೇಂದ್ರ ಕುಮಾರ್ ಮೀನಾ, (ಐಪಿಎಸ್.) ಚಾ.ನಗರ ಜಿಲ್ಲಾ ನೂತನ ಎಸ್ ಪಿ..

*ಚಾಮರಾಜನಗರ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆ, ರಾ.ಎಸ್.ವೀರಭದ್ರಸ್ವಾಮಿ*

 ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಧರ್ಮೇಂದ್ರ ಕುಮಾರ್ ಮೀನಾ, ಐಪಿಎಸ್..ಚಾ.ನಗರ ಜಿಲ್ಲಾ ನೂತನ ಎಸ್ ಪಿ..ಆಗಿ  ಅವರು ಅದಿಕಾರ ವಹಿಸಿಕೊಳ್ಳಲಿದ್ದಾರೆ.


 

ಸದ್ಯದ ಸರ್ಕಾರದ ಆದೇಶನ್ವಯ  ಚಾಮರಾಜನಗರ ನೂತನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಡಾ.ರೋಹಿಣಿ ಕಟೋಚ್, ಅವರನ್ನು ನೇಮಿಸಿದ್ದು ಯಾಕೊ ಏನೊ ತಕ್ಷಣ ಬದಲಾವಣೆ ಮಾಡಿದೆ.  ಶ್ರೀ ಧರ್ಮೇಂದ್ರ ಕುಮಾರ್ ಮೀನಾ, ಐಪಿಎಸ್..ಚಾ.ನಗರ ಜಿಲ್ಲಾ ನೂತನ ಎಸ್ ಪಿ. ಪೊಲೀಸ್ ವರಿಷ್ಠಾದಿಕಾರಿಯಾಗಿ ಅದಿಕಾರ ವಹಿಸಿಕೊಳ್ಳಲಿದ್ದಾರೆ.

 *ರಾಮಸಮುದ್ರ ವೀರಭದ್ರಸ್ವಾಮಿ*

ಚಾಮರಾಜನಗರ:ಐ. ಪಿ.ಎಸ್ ಆದಿಕಾರಿಯಾಗಿ ಬಂದರೆ ಚಾಮರಾಜನಗರಕ್ಕೆ ಉಳಿಯೋದೆ ಅತ್ಯಲ್ಪ ಆದರೆ ಈಗಿನ ಚಾಮರಾಜನಗರ ಎಸ್ಪಿ ಆಗಿರುವ ಕುಲದೀಪ್ ಕುಮಾರ್ ಆರ್ ಜೈನ್ ಅವರು ಈಗ  ಮೂರನೇ ವರ್ಷದತ್ತ ಹೆಜ್ಜೆ ಹಾಕಲು ಇಪ್ಪತ್ತು ದಿನ ಬಾಕಿ ಇರುವಾಗಲೇ ವರ್ಗಾವಣೆಯಾಗಿದ್ದಾರೆ.

*ಚಾಮರಾಜನಗರಕ್ಕೆ ಬಂದ ಮೊದಲ ವರ್ಷದಲ್ಲೆ ಕೆಲವರಿಗೆ ನೋಟಿಸ್

 ಚಾಮರಾಜನಗರಕ್ಕೆ ಬಂದ ಮೊದಲ ವರ್ಷದಲ್ಲೆ ಕೆಲವರಿಗೆ ನೋಟಿಸ್ನೀಡಿ ಎಚ್ಚರಿಕೆ ನೀಡಿ, ಮರಳು ದಂದೆಕೋರರು, ಕರಿಕಲ್ಲು ದಂದೆಕೋರರಿಂದ ಸೆಣಸಾಟ ಮಾಡಿ ಆಡಳಿತ ಖಡಕ್ ಆಗಿ ನೀಡಿದ್ದ  ಎಸ್ಪಿ ಅವರಿಗೇ ಗೊತ್ತಿಲ್ಲದ ಅದೇಷ್ಟೋ ವಿಚಾರಗಳನ್ನು ಅವರ ಹಾಗೂ ನಿಮ್ಮ ಮುಂದೆ ಇಡಲು ಪುಟ್ಟ ಪ್ರಯತ್ನವಷ್ಟೆ..

ಈಗಾಗಲೇ ಅವರ ಆಡಳಿತದ ಮೊದಲ ವರ್ಷದ  ಎಲ್ಲಾ ವಿಚಾರಗಳನ್ನು ನಿಮ್ಮ ಮುಂದೆ ಇಟ್ಟಿದ್ದೇವು.(ತೂಗುಗತ್ತಿಯಲ್ಲೇ ನಡೆದು ಒಂದು ವರ್ಷ ಪೂರೈಸಿದ ಎಸ್ಪಿ ಕುಲದೀಪ್ ಕುಮಾರ್ ಜೈನ್")  ಈಗ  ಎರಡನೇ ವರ್ಷದಲ್ಲೆ ನಡೆದ  ಅದೇಷ್ಟೋ ವಿಚಾರಗಳನ್ನು ನಮಗೆ ತಿಳಿದಷ್ಟು ಪ್ರಕಟ ಮಾಢುತ್ತಿದ್ದೇವೆ. ಇದರಲ್ಲಿ ತಪ್ಪು ಒಪ್ಪು ಇದ್ದರೆ ತಿದ್ದುಪಡಿಗೆ ಸಂಬಂದಿಸಿದ ವ್ಯಕ್ತಿಗಳು ತಿಳಿ ಹೇಳಲು ಅವಕಾಶವಿದ್ದು ಇಲ್ಲಿ ಇಲಾಖೆಯನ್ನಾಗಲೀ, ಸಿಬ್ಬಂದಿಗಳಾನ್ನಾಗಲೀ ನೋಯಿಸುವುದು ಅಲ್ಲ..

* ರಾಜ್ಯದಲ್ಲಿ ಹೆಚ್ಚಿದ ಬಡ್ಡಿ ದಂದೆ ಕೋರರಿಗೆ ಸ್ವಲ್ಪ ಮಟ್ಟಿಗೆ ಕಡಿವಾಣ!

ರಾಜ್ಯದಲ್ಲಿ ಹೆಚ್ಚಿದ ಬಡ್ಡಿ ದಂದೆ ಕೋರರ ವಿರುದ್ದ ಸರ್ಕಾರ ಪೋಲೀಸ್ ಇಲಾಖೆ ಮೂಲಕ ನಿಂತಾಗ   ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ಅವರ ಮಾರ್ಗದರ್ಶನಲ್ಲಿ ನಡೆದ ಕೆಲಸಕ್ಕೆ   ಪಟ್ಟಣದಲ್ಲಿ ಶ್ರೀಕಾಂತ್, ಗುಂಡ್ಲುಪೇಟೆಯಲ್ಲಿ ಸಂದೀಪ್ ಕುಮಾರ್ ಅವರು  ಶ್ರಮಿಸಿ  ಅದೇಷ್ಟೋ ಬಡ್ಡಿ ನೀಡಿದ ಅದೇಷ್ಟೋ ಜನರನ್ನು ಜೈಲಿಗೆ ತಳ್ಳಿದವರಲ್ಲಿ ಇವರ ಪಾತ್ರ ಅಷ್ಟಿಷ್ಟಲ್ಲ  ಎಂದರೆ ತಪ್ಪಾಗಲಾರದು.

* ಚಾಮರಾಜನಗರಲ್ಲಿ ಬೆನಿಫಟ್ ಸ್ಕೀಂ ದಂದೆ ಕಡಿವಾಣ

  ಬೆನಿಫಟ್ ಸ್ಕೀಂ ದಂದೆ ಆರ್ಭಟ ಚಾಮರಾಜನಗರ , ಮೈಸೂರು, ಮಂಗಳೂರು, ಬೆಂಗಳೂರು ವರೆಗೂ ನಡೆಯುತ್ತಿದ್ದವು.  ಇಲ್ಲಿ ಒಬ್ಬರಾ ಇಬ್ಬರ ಬಹುತೇಕ ನಾಲ್ಕೈದು ಪೋಲೀಸ್ ಸಿಬ್ಬಂದಿಗಳು, ಒಬ್ಬ ಉನ್ನತ ಮಟ್ಟದ ಅದಿಕಾರಿಯೋರ್ವರು ಶಾಮೀಲಾಗಿ ನಾವಿದ್ದೇವೆ ,ಮಾಡಿ ಎಂದು ಸಾಥ್ ನೀಡಿ ನಡೆಸುತ್ತಿದ್ದರು .
ಬೆನಿಫಟ್ ಸ್ಕೀಂ ದಂದೆಯ ಬಗ್ಗೆ ದೂರನ್ನ ರಾಜ್ಯ ಪೋಲೀಸ್ ಮಹಾನಿರ್ದೆಶಕರಿಗೆ ದೂರು ಇಟ್ಟಾಗ ದೂರು ಮಹಾನಿರ್ದೇಶಕರಿಗೆ ತಲುಪಿ ಚಾಮರಾಜನಗರದೆಡೆಗೆ ಬರಲಾರಂಬಿಸಿತು. ಆಧರೆ ಆ ವೇಳೆಗೆ ಅದರ ವಿಚಾರಣೆ ನಡೆಸುವಂತೆ ಡಿವೈಸ್ಪಿ ಅವರಿಗೆ ಸೂಚಿಸಿದಾಗ ಇನ್ನ ಮುಂದೆ ಇಂತಹ ಕೃತ್ಯ ಮಾಡದಂತೆ  ಖಡಕ್ ಆದೇಶ ನೀಡಿದರೂ ಕ್ಯಾರೆ ಎನ್ನದೇ ಊರು ಬಿಟ್ಟು  ಊರಿಗೆ ಪಲಾಯನ ಗೈಯ್ದರು. ಆದರೂ ವಿಚಾರಣೆ ಸಂದರ್ಭದಲ್ಲಿ ಅಂದಿನ   ಡಿವೈಸ್ಪಿ ಸಾಹೇಬ್ರಿಗೂ   ಚಳ್ಳೆ ಹಣ್ಣು ತಿನ್ನಿಸಿದರು ಎಂದರೆ ತಪ್ಪಾಗಲಾರದು.
 ಕೆಲ ಪೊಲೀಸ್ ಸಿಬ್ಬಂದಿಗಳ ಸಾಥ್ ಇಂದ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದರೂ ವಕೀಲರೋಬ್ಬರು ಗ್ರಾಹಕ ನ್ಯಾಯಾಲಯದಲ್ಲೆ ಪ್ರಕರಣ ದಾಖಲಸಿ ಪರಿಹಾರ ಪಡದೇ ಬಿಟ್ಟರು. ಹಾಗಾದರೆ ಅದು ನಡೆದುದ್ದೇ ಸಕ್ರಮವೆ , ಅಕ್ರಮವೇ ಎಂದು ಪರಿಶೀಲನೆ ಮಾಡಲೇ ಇಲ್ಲ. ಹೇಗೂ ಅದು ಇಂದು ಇವರ ಕರ್ತವ್ಯ ನಿರ್ಲಕ್ಷ, ಬೇಜವಬ್ದಾರಿತನದಿಂದ ಲೋಕಾಯುಕ್ತರ ಮೆಟ್ಟಿಲು ಹೇರಿತು. ಜಿಲ್ಲಾದಿಕಾರಿ, ವರೀಷ್ಟಾಧಿಕಾರಿ, ಡಿವೈಸ್ಪಿ ಅವರ ವಿರುದ್ದ  ದೂರು ದೂರಾಗಿಯೇ ಆಮೆ ಗತಿಯಲ್ಲಿ ವಿಚಾರಣೆ ನಡೆಯುತ್ತಲೇ   ಇದೆ.ಇದೇಕೋ ಇನ್ನ ಜಾಸ್ತಿಯಾಗುತ್ತದೆ ಎಂದು ಅರಿತ ಡಿವೈಸ್ಪಿ ಚಾಮರಾಜನಗರ ಜಿಲ್ಲೆ ಸುತ್ತಮುತ್ತ ನಡೆಯುವ ಇಂತಹವರ ಮೇಲೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ ಮೇಲೆ ನಿಂತೇ ಹೋಯಿತು. ಆದರೂ ಇಲಾಖೆಗೆ ಗೊತ್ತಿಲ್ಲದೇ ಅಲ್ಲೋಂದು ಇಲ್ಲೋಂದು ನಡೆಯುತ್ತಲೇ ಇದ್ದರೂ ದೈರ್ಯವಾಗಿ ಮಾಢುವ ತಾಕತ್ತು ಯಾರಿಗೂ ಬರಲೇ ಇಲ್ಲ. ಮನಿ ಲೆಂಡಿಂಗ್ ಆಕ್ಟ್ ಅಲ್ಲಿ ನೋಂದಣಿ ಮಾಡಿಸುವುದಾಗಲೇ, ತೆರಿಗೆ ಕಟ್ಟುವುದಕ್ಕಾಗಲೀ ತಾಕತ್ತು ಇರುವುದೇ ಇಲ್ಲ.ಆದರೂ ದೂರುದಾರನಿಗೆ ಆಮೀಷ, ಗೊಡ್ಡು ಬೆದರಿಕೆ, ಬೀದಿಯಲ್ಲಿ ಅನಗತ್ಯ ವಿಚಾರ ತೆಗೆದುಕೊಂಡು ಗಲಾಟೆ, ಹೇಗಾದರೂ ಮಾಡಿ ಸಿಕ್ಕಿಸಿಕೊಳ್ಳಲೇ ಬೇಕೆಂಬ ಪೊಲೀಸರ ಜೊತೆ ಸಂಚು, ಎಲ್ಲವನ್ನೂ ಮಾಢಿ ವಿಫಲರಾಗಿ  ಮೂಲೆಗುಂಪಾದರು. ಬೀದಿಯಲ್ಲಿ ನಿಂತು ಮಾತಾಡೋ ಅದೆಷ್ಟೋ ಜನರು ಸಾಕ್ಷಿ ಇಲ್ಲದೇ ಬೀದಿ ನಾಯಿಗಳಂತೆ ಅರಚಾಡುತ್ತಿದ್ದರೆ ಅದೇಷ್ಟೋ ಜನರಿಗೆ ಇನ್ನ ಕಟ್ಟಿಸಿಕೊಂಡ ಹಣಕ್ಕೆ ಪದಾರ್ಥ ಕೊಡಲಾಗದೇ ನಾವು ಏನು ಮಾಡೇ ಇಲ್ಲ ಎಂದು ಟೋಪಿ ಹಾಕಿಯೇ ಬಿಟ್ಟರು. ಆಧರೆ ಈಗ ಜನಪ್ರತಿನಿದಿಗಳ ಬೆಂಬಲ ಇದೆ ಎಂದಷ್ಟೇ ಹೊರತು ಕಾನೂನಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಸಾದ್ಯವೇ ಇಲ್ಲ  ಎಂಬುದನ್ನ ಮರೆಯುವಂತಿಲ್ಲ.


ಸಿ.ಸಿ.ಕ್ಯಾಮೆರಾ ಅಳವಡಿಕೆಗೆ  ಆದೇಶ ಜಾರಿ ,ಬೇಜವಬ್ದಾರಿತನದಿಂದ ವರ್ತಿಸಿದ ಶಾಲಾ ಕಾಲೇಜುಗಳು!

ಮಹಿಳಾ ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳ ಬಗ್ಗೆ ವರದಿಗಳು ಕೇಳಿ ಬರುತ್ತಿದ್ದಂತೆ ಎಚ್ಚೆತ್ತ ರಾಜ್ಯ ಪೋಲಿಸ್ ಇಲಾಖೆ ರಕ್ಷಣೆಗೆ ಮುಂದಾಗಲು ಹತ್ತು ಹಲವಾರು ಕ್ರಮಗಳನ್ನು ಕೈಗೊಂಡಿತು. ಅದರಂತೆ ಶಾಲೆಗಳಲ್ಲಿ ಕಡ್ಡಾಯವಾಗಿ ಸಿ.ಸಿ.ಕ್ಯಾಮೆರಾ ಹಾಕಿ, ಹಾಕಿದರೆ ಉತ್ತಮ ನಿಮಗೂ ಶಾಲೆಗೂ ಗೌರವ ಬರುತ್ತದೆ ಮುಂದೆ ಅನಾಹುತ  ಆದರೆ ಅದಕ್ಕೆ ಜವಬ್ದಾರ ನೀವುಗಳೆ ಆಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಲೇ ಬರುತ್ತಿದ್ದರು.ಆದರೂ ಎಷ್ಟೋ ವಿದ್ಯಾಸಂಸ್ಥೆಗಳು ಅಳವಡಿಸಿಕೊಂಡರೆ (ಪಟ್ಟಣದಲ್ಲಿ ಸೇವಾಭಾರತಿ ಕಾಲೇಜು ನಂಬರ್ 1)   ಕೆಲವರು ಬೆಜವಬ್ದಾರಿತನ ವರ್ತಿಸಿದರು. ಇನ್ನ ಕೆಲವರು ಹಾಕಿಸಿ ಕೆಲಸ ನಿರ್ವಹಿಸದೇ ಇದ್ದರೂ ಪೋಸ್ ಕೊಡಲಾರಂಬಿಸಿದವರು.   ಮಾಹಿತಿ ಹಕ್ಕಿನಲ್ಲಿ ಲಬ್ಯವಾಗಿರುವ ಮಾಹಿತಿ ಪ್ರಕಾರ ಪರೀಕ್ಷಾ ಸಮಯದಲ್ಲಿ ಪಟ್ಟಣಧಲ್ಲಿ ಸೇವಾಬಾಋಇ ಬಿಟ್ಟರೆ  ಜೆ.ಎಸ್.ಎಸ್. ಕಾಲೇಜು ಅಲ್ಲಿ ಇರಲೇ ಇಲ್ಲ.ಆದರೂ ಹಾಕಿದ್ದೇವೆ   ಎಂದರೋ ಹೊರತು ಇರಲಿಲ್ಲ.)  ಎಷ್ಟೇ ಯಾಕೆ ಇಲ್ಲಿನ ಸ್ಥಳೀಯ ಆಡಳಿತ ಮಂಡಳಿ ಬೀದಿಯಲ್ಲಿ ನಿಂತು ಮಾತನಾಢುತ್ತಾರೋ ಹೊರತು ಉಪನ್ಯಾಸಕರ ಹಿತ ಕ಻ಪಾಡುವಲ್ಲಿ ವೈಫಲ್ಯ ಮೆರೆದಿದ್ದರು ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಕಾಲೇಜಿನ ಆವರಣದಲ್ಲಿ ಉಪನ್ಯಾಸಕರೋಬ್ಬರನ್ನು ಒದೆಯುತ್ತಿದ್ದರು ರಕ್ಷಣೆಗೆ ಬರಲಿಲ್ಲ. ಕ್ಯಾಮೆರಾದಲ್ಲಿ ರೆಕಾರ್ಡ್ ಕೂಡ ಆಗಲಿಲ್ಲ. ಇದನ್ನು ಪ್ರಶ್ನಿಸಿದ ನಮಗೆ ಉತ್ತರ ಬಂದಿದ್ದು ಮಾತ್ರ ಶೂನ್ಯ. ಸಂಸ್ಥೆಯ ಬಗ್ಗೆ ಇಲ್ಲ ಸಲ್ಲದ  ಆರೋಪ  ಮಾತನಾಢುತ್ತಿರಿ ಎಂದು ಆದರೆ ಸುಳ್ಳಾದರೆ  ಪತ್ರಕರ್ತ ವೀರಭದ್ರಸ್ವಾಮಿ   ಕೇಳಿದ ಸಿ.ಸಿ.ಪುಟೇಜ್ ಯಾಕೆ ಇರಲಿಲ್ಲ. ಯಾಕೆ ದೂರು ಕೊಡಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಿರಲೇ ಇಲ್ಲ. ಕೇಳಿದರೆ ವಿದ್ಯಾಪೀಠ ಕೇಳಬೇಕು ಎನ್ನುವ ನೀವು ಸಮರ್ಪಕ ಮಾಹಿತಿಯನ್ನು ಶ್ರೀ ಪರಮಪೂಜ್ಯರ ಗಮನಕ್ಕೆ ತಂದಿದ್ದೀರಾ ಎಂದು ಅದೇನೆ ಇರಲಿ ಮುಂದೆ ನಮ್ಮ ನಿಮ್ಮ ರಕ್ಷಣೇಗಾದರೂ ಬೇಕಾಗುತ್ತದೆ ನೆನಪಿರಲಿ.
ಕ್ಯಾಮೆರಾ ಅಳವಡಿಕೊಳ್ಳದಿದ್ದರೆ ಎಂತಹ ಸಮಾಜ ಸ್ವಾಸ್ಥ್ಯ ಕೆಡುವಂತಹ ಸ್ಥಿತಿ ಬಂದಾಗ ಪ್ರತಿಬಟನೆ ನಡೆದೆ ಹೋಗಿದೆ ಇತ್ತ  , ನ್ಯಾಯಾಲಯದಲ್ಲಿ ದಾವೆ ಪ್ರಕರಣಗಳಿಗೆ ನೀವೆ ಹೊಣೆ ಎಂಬಂತೆ ಉತ್ತರ ಸಿಕ್ಕಿದೆ.
ಪತ್ರಕರ್ತರೋಬ್ಬರ ವಿರುದ್ದ ಕಾಲೇಜು ಕೆಲ  ಉಪನ್ಯಾಸಕರು, ನಿರ್ದೇಶಕರು ವಿದ್ಯಾರ್ಥಿಗಳಿಗೆ ತಮ್ಮ ವರ್ತನೆ ತಿದ್ದಿಕೊಳ್ಳುವುದನ್ನು ಬಿಟ್ಟು ಪ್ರತಿಭಟನೆಗೆ ಇಳಿಸಿ ತಮ್ಮ ಬೇಳೆ ಬೇಯಿಸಿಕೊಂಡರು. ಆ ಪತ್ರಕರ್ತ ಬನ್ನಿ ತಾಕತ್ತಿದ್ದರೆ ನ್ಯಾಯಾಲಯದಲ್ಲಿ ಪ್ರಕರಣ   ಇತ್ಯರ್ಥ ಪಡಿಸಿಕೊಳ್ಳೋಣ  ಎಂದರೆ ಅವರ ವಿರುದ್ದ  ರಾಷ್ಟ್ರ ನಾಯಕರ ಹೆಸರು ಬಳಕೆ ಮಾಢಿಕೊಂಡು , ತಮ್ಮ  ಅದಿಕಾರ ದುರುಪಯೋಗ ಮಾಢಿಕೊಂಡರು. ಇದಕ್ಕೆ ಠಾಣೇಯಲ್ಲಿ ದಾಖಲಾದ, ದೂರು ಪ್ರತಿ ದೂರುಗಳೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು)

* ಪೊಲೀಸರಿಂದಲೇ ಮಾಹಿತಿ ಸೋರಿಕೆ: ಗುಪ್ತವಾಗಿಯೇ ಕಡಿವಾಣ.!

ಯಾವುದೇ ಇಲಾಖೆಯಲ್ಲಿ ಗೌಪ್ಯತೆ ಕಾಪಾಡಬೇಕಾದ್ದು ಆಯಾ ಇಲಾಕೆ ಮುಖ್ಯಸ್ಥರು, ಹಾಗೂ ಅದರ ಜವಬ್ದಾರಿ ಹೊತ್ತ ಅದಿಕಾರಿಗಳಿಗೆ ಇದ್ದರೂ ಅದು ಮಾತ್ರ ಸಂಪೂರ್ಣ ಸೋರಿಕೆಯಾಗುತ್ತಿತ್ತು.
ಬಹುತೇಕ ಸರಗಳ್ಳತನ, ಅಪಘಾತ, ದರೋಡೆಯಂತಹ  ಅಪರಾಧ ಪ್ರಕರಣಗಳ ಮಾಹಿತಿ ವರೀಷ್ಟಾದಿಕಾರಿಗಳಿಗೆ ಗೊತ್ತಾಗುತ್ತಿತ್ತೋ ಬಿಡುತ್ತಿತ್ತೋ ಗೊತ್ತಿಲ್ಲ. ಅದು ಬೀದಿಯಲ್ಲಿ ನಿಂತು ಮಾತನಾಢೋ ಜನರಿಗೆ ಗೊತ್ತಾಗುತ್ತಿತ್ತು. ಕೆಲವೊಮ್ಮೆ ಗೌಪ್ಯತೆ ಕಾಪಾಡಬೇಕಾದ ಸಿಬ್ಬಂದಿಗಳು ಪತ್ರಕರ್ತರಿಂದ ಶಹಬ್ಬಾಸ್ ಗಿರಿ ಪಡೆಯಲೇಂದೆ ಸಂಪೂರ್ಣ ವಿಡಿಯೋ ಕಳಿಸಿಬಿಡುತ್ತಿದ್ದರು ಇದಕ್ಕೆ ಹೊಂಗನೂರಿನಲ್ಲಿ ನಡೆದ ಪ್ರಕರಣವಾಗಿರಬಹುದು, ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದ ಬೃಹತ್ ಪ್ರಮಾಣದಲ್ಲಿ ಹಣ  ಕಳ್ಳತನದ ಸಂಪೂರ್ಣ ವಿವರ  ಬಹುತೇಕ ಜನರಿಗೆಲ್ಲರಿಗೂ ಗೊತ್ತಿದ್ದರೂ ಅದಿಕೃತವಾಗಿ  ಪೊಲೀಸರು  ವಿಚಾರಣೆ ಮಾಡದೇ ಘೋಷಿಸುವಂತಿರಲಿಲ್ಲ.ಆದರೂ ಎಲ್ಲೋ ಮಾಹಿತಿ ಸೋರಿಕೆಯಾಗುತ್ತಿದೆ ಎಂದು ಅದರ ತಡೆಗೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನೆಲ್ಲಾ ಗುಪ್ತಚಾರವಾಗಿ ಮಾಢಿ ಮುಗಿಸಿದ್ದಾರೆ. 

ಜಿಲ್ಲಾ ಪೊಲೀಸ್ ಇಲಾಖೆಗೆ ಅಚ್ಚುಮೆಚ್ಚು ಎರಡು ಶ್ವಾನಗಳು 

ದರೋಡೆ, ಕಳ್ಳತನ, ಕೊಲೆಯಂತಹ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ನಮ್ಮ ಪ್ರೀತಿಯ ಶ್ವಾನಗಳು, 1) ಬಾಂಬ್ ಪತ್ತೆಗೆ ಸೃಜ ಎಂಬ ಹೆಸರಿನ ಶ್ವಾನ
2) ಅಪರಾದ ಪ್ರಕರಣಗಳಿಗೆ ಲಚ್ಚಿ ಎಂಬ ಹೆಸರಿನ ಶ್ವಾನ
ಪುಟ್ಟ ಈ ಎರಡು ಶ್ವಾನಗಳು   ಚಾಮರಾಜನಗರ ಪೊಲೀಸ್ ಇಲಾಖೆಗೆ ಸೇರ್ಪಡೆಯಾದವು . ನಂತರ ನಿಮಗೆ ತಿಳಿದೇ ಇದೆ  ಹೊಂಗನೂರು, ಕೊಳ್ಳೆಗಾಲದಲ್ಲಿ ನಡೆದ  ಅಹಿತಕರ ಘಟನೆ ಪ್ರಕರಣಗಳು, ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದ ಕಳ್ಳತನ, ಚಾಮರಾಜೇಶ್ವರ ರಥೋತ್ಸವ ಕ್ಕೆ ಬೆಂಕಿ ಹಾಕಿದ ಕಿಡಿಗೇಡಿಗಳ ಪತ್ತೆ  ,ಇನ್ನಿತರ ಪ್ರಕರಣಳನ್ನುಪತ್ತೆ   ಹಚ್ಚಿದ ಕೀರ್ತಿ     ಈ ಪುಟ್ಟ ಶ್ವಾನಗಳಿಗೆ ಸಲ್ಲಬೇಕು.

ಪೇಸ್ ಬುಕ್& ವಾಟ್ಸಾಫ್ ದೂರುಗಳಿಗೆ ಮನ್ನಣೆ : 

ಬಹುತೇಕ ಜನರು ಪೇಸ್ ಬುಕ್& ವಾಟ್ಸಾಫ್ ಅಲ್ಲೇ ಮುಳುಗಿರುವುದು ಜಾಸ್ತಿಯಾಗಿರುವುದು ಸಾಮಾನ್ಯ. ಜಿಲ್ಲೆಯಲ್ಲಿ ನಡೆದ ಕಳ್ಳತನ , ಸಿಬ್ಬಂದಿಗಳು ಭೇದಿಸಿದ ಪ್ರಕರಣಗಳ ಬಗ್ಗೆ ಮಾಹಿತಿ, ಇಲಾಖೆ ತೆಗೆದುಕೊಂಡ ಕಠಿಣ ಕ್ರಮಗಳ ಬಗ್ಗೆ ಪ್ರಚಾರ ಮಾಡಲು " ಚಾಮರಾಜನಗರ ಜಿಲ್ಲಾ ಪೊಲೀಸ್ "ಎಂಬ ಪೇಸ್ ಬುಕ್  ಖಾತೆ ತೆರೆದು ಪ್ರಚಾರ ಮಾಡಲು ಹೊರಟರು.
ಮುಂದುವರೆದು ಯಾವುದೇ ಸಾರ್ವಜನಿಕರು ನೇರವಾಗಿ ದೂರು ನೀಡಲು ಅಂಜಿದರೆ ಯುವ ಜನತೆ ವಾಟ್ಸಾಫ್ ಅಲ್ಲೇ ದೂರು ದಾಖಲಿಸಲು ತಮ್ಮದೇ ಆದ  ಇಲಾಖೆ ನಂಬರ್ 9480804600  ನೀಡಿದರು. ಅವರ ಹೆಸರು ಗೌಪ್ಯತೆಯಾಗಿಟ್ಟು ವಿಚಾರಣೆ ಮಾಡಿ ಶಿಕ್ಷೆ ಗುರಿಪಡಿಸಿರುವ ಎಷ್ಟೋ ತಾಜಾ ಉದಾಹರಣೆಗಳಿದೆ.

ಸತ್ಯ ಘಟನೆ:  ಉದಾಹರಣೆಗೆ 

 ಠಾಣೆಯೊಂದರಲ್ಲಿ ದೂರು ಪಡೆಯಲು ಗಂಟೆಗಟ್ಟಲೆ ಕಾಯಿಸುವ , ಅಸೌಜನ್ಯಯುತವಾಗಿ ನಡೆದುಕೊಳ್ಳುವ ಸಿಬ್ಬಂದಿಗಳ ವಿರುದ್ದ ದೂರು ನೀಡಿದಾಗ ಯಾವುದೇ ಮುಲಾಜಿಲ್ಲದೇ ಕ್ರಮ ತೆಗೆದುಕೊಂಡು ಎಚ್ಚರಿಕೆ ನೀಡಿ ಹಿಂಬರಹ ಪತ್ರವನ್ನು ಸಿಬ್ಬಂದಿಗಳ ಮೂಲಕ ದೂರುದಾರನಿಗೆ   ತಲುಪಿಸಿದ ಘಟನೆಯೂ ನಡೆದಿದೆ.

ದೂರು ನೀಡಲು ಬಂದ ದೂರುದಾರರನ್ನು   ಯಾವುದೇ ಠಾಣೆಗಳಲ್ಲಿ ಗಂಟೆಗಟ್ಟಲೆ ಕಾಯಿಸಬಾರದು , ಸೌಜನ್ಯಯುತವಾಗಿ  ಅವರೊಂದಿಗೆ  ವರ್ತಿಸಬೇಕು ಎಂದು ಕಟ್ಟುನಿಟ್ಟಿನ  ಆದೇಶ ಹೊರಡಿಸಿ ಎಚ್ಚರಿಕೆ ನೀಡಿದ್ದರು. ಆದರೆ ದೂರು ಯಾರೇ ನೀಡಿದರೂ ದೂರುದಾರರ  ಹೆಸರರನ್ನು ಗೌಪ್ಯವಾಗಿಡುವ ಇವರ ಕ್ರಮ ಶ್ಲಾಘನೀಯವಾದದ್ದು. 



ಇದುವರೆಗೆ ಆಡಳಿತದಲ್ಲಿ, ತಪ್ಪು    ಎಸಗಿದ ಒಂದಿಬ್ಬರು ಪೇದೆಗಳನ್ನು  ಪೂರ್ಣವಾಗಿ ವಜಾ ಮಾಡಿದರೆ, 10 ರಿಂದ 15 ಸಿಬ್ಬಂಧಿಗಳನ್ನು ಯಾವುದೇ ಮುಲಾಜಿಲ್ಲದೆ. ಅಮಾನತು ಮಾಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಅಬಿನಂದನೆಗಳು......................



ಸುದ್ದಿಗಳು ಆಗಾಗ ಬದಲಾಗುತ್ತಿರುತ್ತದೆ. ಇದಕ್ಕೆ ಸಂಪೂರ್ಣ ಜವಬ್ದಾರರು ನಾವೇ? ತಪ್ಪನ್ನು ಕೇಳಲು ಸಂಬಂಧಿಸಿದ ಅದಿಕಾರಿಯೇ ಹೊರತು ಬೇರೆ ಯಾರಿಗೂ ಹಕ್ಕಿಲ್ಲ.!



********************************

ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು