Saturday, 10 December 2016

16-10-2016 ರಿಂದ 31-10-2016 ವರೆಗಿನ ಸುದ್ದಿಗಳು

ಅ. 16ರಂದು ನಗರದಲ್ಲಿ ವಿಕಲಚೇತನರಿಗೆ ಸಾಧನಾ ಸಲಕರಣೆ ವಿತರಣೆ
ಚಾಮರಾಜನಗರ, ಅ. 15 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ನವದೆಹಲಿಯ ಪಂಡಿತ್ ದೀನದಯಾಳ್ ಉಪಾಧ್ಯಾಯ ದಕ್ಷಿಣ ಪ್ರಾದೇಶಿಕ ಕೇಂದ್ರ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಗರದ ಸತ್ತಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಅಕ್ಟೋಬರ್ 16ರಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರ ತಾಲೂಕಿನ ವಿಕಲಚೇತನರಿಗೆ ಸಾಧನಾ ಸಲಕರಣೆ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕೆ.ಟಿ. ಶ್ರೀಕಂಠೇಗೌಡ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್. ವಿ. ಚಂದ್ರು, ನಗರಸಭೆಯ ಅಧ್ಯಕ್ಷರಾದ ಎಸ್. ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್. ಜೈನ್, ನವದೆಹಲಿಯ ಪಂಡಿತ್ ದೀನದಯಾಳ್ ಉಪಾಧ್ಯಾಯ ನ್ಯಾಷನಲ್ ಇನ್ಸ್ಟಿಟೂಟ್ ಫಾರ್ ಪರ್ಸನ್ಸ್ ವಿತ್ ಪಿಸಿಕಲ್ ಡಿಸೆಬಿಲಿಟೀಸ್‍ನ ಸಹಾಯಕ ಪ್ರಾಧ್ಯಾಪಕರಾದ ಡಾ. ಬಿ. ಪಾಂಡಿಯನ್ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಅದ್ದೂರಿಯಾಗಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ
ಚಾಮರಾಜನಗರ, ಅ. 15 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ನಗರದಲ್ಲಿಂದು ಅದ್ದೂರಿಯಾಗಿ ಆಚರಿಸಲಾಯಿತು.
ಮೊದಲಿಗೆ ನಗರದ ಪ್ರವಾಸಿ ಮಂದಿರದಲ್ಲಿ ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್ ಮಹದೇವಪ್ರಸಾದ್‍ರವರು ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಬಳಿಕ ವಿವಿಧ ಜಾನಪದ ಕಲಾ ತಂಡಗಳೊಡನೆ ಸಾಗಿದ ಮೆರವಣಿಗೆ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಅಂತಿಮವಾಗಿ ಸಮಾರಂಭ ಸ್ಥಳವಾದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸಮಾವೇಶಗೊಂಡಿತು.
ವಾಲ್ಮೀಕಿ ಭವನದಲ್ಲಿ ನಡೆದ ವೇಧಿಕೆ ಸಮಾರಂಭವನ್ನು ಉದ್ಘಾಟಿಸಿದ ಲೋಕಸಭಾ ಸದಸ್ಯರಾದ ಆರ್.ಧ್ರುವ ನಾರಾಯಣ ಮಾತನಾಡಿ ಶ್ರೇಷ್ಟ ಕೃತಿ ರಾಮಾಯಣ ರಚಿಸಿದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಇಡಿ ದೇಶಾದ್ಯಂತ ಆಚರಿಸಲಾಗುತ್ತಿದೆ. ಕರ್ನಾಟಕ ರಾಜ್ಯವು ಸೇರಿದಂತೆ ಉತ್ತರ ಪ್ರದೇಶ ಪಂಜಾಬ್ ಇನ್ನಿತರೆಡೆ ಶ್ರದ್ಧಾ ಭಕ್ತಿಯಿಂದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ವಾಲ್ಮೀಕಿ ಅವರ ರಚಿಸಿದ ರಾಮಾಯಣದ ರಾಮರಾಜ್ಯದ ಪರಿಕಲ್ಪನೆಯನ್ನು ಆದರ್ಶವಾಗಿಟ್ಟು ಕೊಂಡು ಬದುಕು ಸಾಗಿಸಬೇಕಿದೆ. ಗಾಂಧೀಜಿ ಅವರ ಆಶಯವು ಕೂಡ ರಾಮರಾಜ್ಯದ ಕಲ್ಪನೆಯಾಗಿತ್ತು ಎಂದು ಧ್ರುವ ನಾರಾಯಣ ತಿಳಿಸಿದರು.
ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ 20 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಹಲವಾರು ಯೋಜನೆ ಜಾರಿಗೆ ತಂದು ಅನುಷ್ಟಾನ ಮಾಡುತ್ತಿದೆ. ಈ ಸೌಲಭ್ಯಗಳ ಪ್ರಯೋಜನ ಪಡೆದು ಪರಿಶಿಷ್ಟ ವರ್ಗಗಳ ಸಮುದಾಯ ಆರ್ಥಿಕವಾಗಿ ಮುಂದೆ ಬರಬೇಕೆಂದು ಧ್ರುವ ನಾರಾಯಣ ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿರವರು ವಾಲ್ಮೀಕಿ ರಾಮಾಯಣ ಹಲವಾರು ಮಹತ್ವದ ಹಾಗೂ ಉದಾತ್ತ ಧ್ಯೇಯ ಉಳ್ಳ ಸಂದೇಶ ನೀಡಿದೆ. ರಾಮರಾಜ್ಯದ ಆಶಯವನ್ನು ಬಿತ್ತಿದೆ. ಇಂತಹ ಮೇರು ಕೃತಿ ರಚಿಸಿದ  ವಾಲ್ಮೀಕಿ ಅವರ ಜಯಂತಿಯನ್ನು ಯಶಸ್ವಿಯಾಗಿ ಜಿಲ್ಲಾ ಕೇಂದ್ರದಲ್ಲಿ ಆಚರಿಸಲು ಕಾರಣರಾದ ಸಮುದಾಯ ಪ್ರತಿನಿಧಿ, ಎಲ್ಲಾ ನಾಗರಿಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಮಾತನಾಡಿ ಶಿಕ್ಷಣಕ್ಕೆ ಆಧ್ಯತೆ ನೀಡಬೇಕು ಶಿಕ್ಷಣ ಪಡೆದು ಉತ್ತಮ ಸ್ಥಾನಮಾನ ಹುದ್ದೆಗಳನ್ನು ಪಡೆದು ಉನ್ನತ ಪ್ರಜೆಗಳಾಗಿ ರೂಪು ಗೊಳ್ಳಬೇಕು ಪರಿಶಿಷ್ಟ ವರ್ಗದ ಕಲ್ಯಾಣಕ್ಕೆ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕೆಂದರು.
ಮೈಸೂರಿನ ಪ್ರಗತಿಪರ ಚಿಂತಕರಾದ ಡಾ.ಮ.ಪು.ಪೂರ್ಣಾನಂದ ಮುಖ್ಯಭಾಷಣ ಮಾಡಿದರು.
ಇದೇ ವೇಳೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಮೆರವಣಿಗೆ ವೇಳೆ ಕಲಾ ಪ್ರದರ್ಶನ ನೀಡುತ್ತಿದ್ದು ಹಠಾತ್ ಅಸ್ವಸ್ಥರಾಗಿ ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅಸುನೀಗಿದ ಗೊರವರ ಕುಣಿತ ಕಲಾವಿದರಾದ ಗಿರಿಗೌಡ ಅವರಿಗೆ 3 ನಿಮಿಷಗಳ ಮೌನ ಆಚರಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ನಗರ ಸಭೆ ಅದ್ಯಕ್ಷರಾದ ಎಸ್.ಎನ್..ರೇಣುಕಾ, ಉಪಾಧ್ಯಕ್ಷರಾದ ಆರ್.ಎಂ.ರಾಜಪ್ಪ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಬಸವರಾಜು, ತಾಲ್ಲೂಕುಪಂಚಾಯತ್ ಅಧ್ಯಕ್ಷರಾದ ಎಚ್.ವಿ.ಚಂದ್ರು ಉಪಾದ್ಯಕ್ಷರಾದ ಪಿ.ಎನ್.ದಯಾನಿಧಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫಿ, ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ.ಬೊಮ್ಮಯ್ಯ, ಅರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ.ಸದಾಶಿವಮೂರ್ತಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಾಪಾಟಿ,  ಮುಖಂಡರಾದ ಸೋಮನಾಯಕ, ಸುರೇಶನಾಯಕ, ಸುಂದರ್ ಚೆಂಗುಮಣಿ, ಶ್ರೀನಿವಾಸನಾಯಕ, ದೊಡ್ಡನಾಯಕ, ಬಿ.ಕೆ.ರವಿಕುಮಾರ್, ಸೋಮು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಸರಸ್ವತಿ ಇತರರು ಮುಖಂಡರು ಉಪಸ್ಥಿತರಿದ್ದರು.

ವಿಕಲಚೇತನರಿಗೆ ಸಮರ್ಪಕವಾಗಿ ಸೌಲಭ್ಯ ತಲುಪಿಸಿ: ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ, ಅ. 16 (ಕರ್ನಾಟಕ ವಾರ್ತೆ):- ವಿಕಲಚೇತನರ ಕಲ್ಯಾಣಕ್ಕೆ ಮೀಸಲಾಗಿರುವ ಶೇ. 3ರಷ್ಟು ಅನುದಾನವನ್ನು ಪೂರ್ಣಪ್ರಮಾಣದಲ್ಲಿ ಬಳಕೆ ಮಾಡುವ ಮೂಲಕ ವಿಕಲಚೇತನರಿಗೆ ಸಮರ್ಪಕವಾಗಿ ಸೌಲಭ್ಯಗಳನ್ನು ತಲುಪಿಸುವಂತಾಗಬೇಕು ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಆವರಣದಲ್ಲಿಂದು  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ನವದೆಹಲಿಯ ಪಂಡಿತ್ ದೀನದಯಾಳ್ ಉಪಾಧ್ಯಾಯ ದಕ್ಷಿಣ ಪ್ರಾದೇಶಿಕ ಕೇಂದ್ರ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ತಾಲೂಕಿನ ವಿಕಲಚೇತನರಿಗೆ ಸಾಧನಾ ಸಲಕರಣೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು..
ವಿಕಲಚೇತನರಿಗೆ ಅನುಕಂಪ ವ್ಯಕ್ತಪಡಿಸುವುದಕ್ಕಿಂತ  ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ. ಪ್ರತಿ ಇಲಾಖೆ ಹಾಗೂ ಪಂಚಾಯಿತ್ ವ್ಯಾಪ್ತಿಯಲ್ಲಿ ವಿಕಲಚೇತನರ ಕಲ್ಯಾಣ ಯೋಜನೆಗಳಿಗೆ ನಿಗದಿತ ಪ್ರಮಾಣದಲ್ಲಿ ಅನುದಾನ ವೆಚ್ಚ ಮಾಡಬೇಕಿದೆ. ಜನಪ್ರತಿ ನಿಧಿಗಳು ಸೇರಿದಂತೆ ಎಲ್ಲರಿಗೂ ವಿಕಲಚೇತನರಿಗೆ ಅನುಕೂಲವಾಗುವ ಸವಲತ್ತುಗಳನ್ನು ತಲುಪಿಸುವ ಮಹತ್ವದ ಹೊಣೆಗಾರಿಕೆ ಇದೆ ಎಂದು ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಚಾಮರಾಜನಗರ ತಾಲ್ಲೂಕಿನಲ್ಲಿ 43 ಗ್ರಾಮ ಪಂಚಾಯಿತಿಗಳಿದ್ದು ಈಭಾಗಗಳಿಂದ ಬಂದ ವಿಕಲಚೇತನರನ್ನು ತಪಾಸಣೆಗೆ ಓಳಪಡಿಸಲಾಗಿತ್ತು. ಈ ಪೈಕಿ 437 ಜನರಿಗೆ 680 ಅವಶ್ಯಕ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಜಿಲ್ಲಾ ಕೇಂದ್ರದಲ್ಲಿ ಹೆಚ್ಚು ಸಂಖ್ಯೆಯಲ್ಲಿ ವಿಕಲಚೇತನರಿಗೆ ಸಲಕರಣೆ ತಲುಪಿಸುವ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಉತ್ತಮ ಕೆಲಸವಾಗಿದೆ ಎಂದು ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಮಾತನಾಡಿ ವಿಕಲಚೇತನರಿಗೆ ಅಗತ್ಯವಿರುವ ಸಾಧನ ಸಲಕರಣೆ, ಅಂಗವಿಕಲರವೇತನ ಸೇರಿದಂತೆ ಇತರೆ ನೆರವನ್ನು ಸರ್ಕಾರ ನೀಡುತ್ತಿದೆ. ವಿಕಲಚೇತನರು ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಉದ್ದೇಶದೊಂದಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ವಿಶೇಷವಾಗಿ ಶಿಕ್ಷಣಕ್ಕೆ ಓತ್ತುನೀಡಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್.ವಿ.ಚಂದ್ರು ಮಾತನಾಡಿ ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮಕ್ಕಳು, ಗರ್ಭಿಣಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ವಿತರಿಸುತ್ತಿರುವ ಪೌಷ್ಠಿಕ ಆಹಾರ ಮಾದರಿಯಲ್ಲಿ ವಿಕಲಚೇತನರಿಗೂ ನೀಡುವಂತಾಗಬೇಕೆಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ ಮಾತನಾಡಿ ನವದೆಹಲಿಯ ಪಂಡಿತ್ ದೀನದಯಾಳ್ ಉಪಾಧ್ಯಾಯ ನ್ಯಾಷನಲ್ ಸಂಸ್ಥೆಯು ಜಿಲ್ಲೆಯ ವಿಕಲಚೇತನರ ನೆರವಿಗೆ ಮುಂದಾಗಿರುವುದು ಪ್ರಶಂಸನೀಯವಾಗಿದೆ. ಇನ್ನೂ ಮೂರುವರ್ಷಗಳ ಕಾಲ ಜಿಲ್ಲೆಗೆ ಇದೇ ರೀತಿಯಲ್ಲಿ ನೆರವು ಕಾರ್ಯಕ್ರಮ ಮುಂದುವರೆಸಿದರೆ ಗರಿಷ್ಠ ಸಂಖ್ಯೆಯ ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲಾ ಪಂಚಾಯತಿ ಸದಸ್ಯರಾದ ಆರ್.ಬಾಲರಾಜು ಮಾತನಾಡಿ ವಿಕಲಚೇತನರಿಗೆ ತಪಾಸಣೆ ನಡೆಸಿ ಅಗತ್ಯ ಸಾಧನ ಸಲಕರಣೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಾ ಪಾಟಿ ಅವರು ಕಾಳಜಿ ವಹಿಸಿರುವುದು ಶ್ಲಾಘನೀಯವಾಗಿದೆ. ವಿಕಲಚೇತನರು ಕೀಳರಿಮೆಯಿಂದ ಹೊರಬಂದು ಆತ್ಮವಿಶ್ವಾಸಮೂಡಿಸುವಂತಹ ಕಾರ್ಯಕ್ರಮವನ್ನು ಅಯೋಜನೆ ಮಾಡಬೇಕೆಂದು ಸಲಹೆ ಮಾಡಿದರು.
ಜಿ.ಪಂ.ಕೃಷಿ ಮತ್ತು ಕೈಗಾರಿಕೆ ಸ್ಥಾಯಿಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಜಿ.ಪಂ. ಸದಸ್ಯರಾದ ಶಶಿಕಲಾಸೋಮಲಿಂಗಪ್ಪ,  ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ,ಸದಸ್ಯರಾದ ನಾಗಸುಂದರಮ್ಮ, ಪುಟ್ಟಸ್ವಾಮಿ,ರತ್ನಮ್ಮ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ,   ನವದೆಹಲಿಯ ಪಂಡಿತ್ ದೀನದಯಾಳ್ ಉಪಾಧ್ಯಾಯ ನ್ಯಾಷನಲ್ ಇನ್ಸ್ಟಿಟೂಟ್ ಫಾರ್ ಪರ್ಸನ್ಸ್ ವಿತ್ ಪಿಸಿಕಲ್ ಡಿಸೆಬಿಲಿಟೀಸ್‍ನ ಸಹಾಯಕ ಪ್ರಾಧ್ಯಾಪಕರಾದ ಡಾ. ಬಿ. ಪಾಂಡಿಯನ್, ಉಪವಿಭಾಗಧಿಕಾರಿ ಕವಿತಾರಾಜರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಕೆ.ಎಚ್.ಪ್ರಸಾದ್, ಜಿಲ್ಲಾ ಪರಿಶಿಷ್ಠವರ್ಗಗಳ ಕಲ್ಯಾಣಧಿಕಾರಿ ಸರಸ್ವತಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅ. 17ರಂದು ಗುಂಡ್ಲುಪೇಟೆಯಲ್ಲಿ ವಿಕಲಚೇತನರಿಗೆ ಸಾಧನಾ ಸಲಕರಣೆ ವಿತರಣೆ ಕಾರ್ಯಕ್ರಮ
ಚಾಮರಾಜನಗರ, ಅ. 16 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ನವದೆಹಲಿಯ ಪಂಡಿತ್ ದೀನದಯಾಳ್ ಉಪಾಧ್ಯಾಯ ದಕ್ಷಿಣ ಪ್ರಾದೇಶಿಕ ಕೇಂದ್ರ ಹಾಗೂ ಸಂಗಮ ಪ್ರತಿಷ್ಠಾನ  ಸಹಯೋಗದೊಂದಿಗೆ ಗುಂಡ್ಲುಪೇಟೆ ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಕ್ಟೋಬರ್ 17ರಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ ತಾಲೂಕಿನ ವಿಕಲಚೇತನರಿಗೆ ಸಾಧನಾ ಸಲಕರಣೆ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್.ಎನ್.ನಟೇಶ್‍ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ,ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, , ಶಾಸಕರಾದ ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕೆ.ಟಿ. ಶ್ರೀಕಂಠೇಗೌಡ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು,  ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದ ರೂಪಸ್ವಾಮಿ. ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷರಾದ ಮಹದೇವಯ್ಯ, ಪುರಸಭೆ ಅಧ್ಯಕ್ಷರಾದ ಭಾಗ್ಯ, ಉಪಾಧ್ಯಕ್ಷರಾದ ಟಿ.ರಂಗಸ್ವಾಮಿ, ಜಿಲ್ಲಾ ಪಂಚಾಯತಿ ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷರಾದ ಬಿ.ಕೆ.ಬೊಮ್ಮಯ್ಯ, ಜಿ.ಪಂ. ಸದಸ್ಯರಾದ ಕೆ.ಎಸ್. ಮಹೇಶ್, ಚನ್ನಪ್ಪ, ಅಶ್ವಿನಿವಿಶ್ವನಾಥ, ರತ್ನಮ್ಮ, ಶ್ರೀಕಂಠಪ್ಪ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್. ಜೈನ್, ನವದೆಹಲಿಯ ಪಂಡಿತ್ ದೀನದಯಾಳ್ ಉಪಾಧ್ಯಾಯ ನ್ಯಾಷನಲ್ ಇನ್ಸ್ಟಿಟೂಟ್ ಫಾರ್ ಪರ್ಸನ್ಸ್ ವಿತ್ ಪಿಸಿಕಲ್ ಡಿಸೆಬಿಲಿಟೀಸ್‍ನ ಸಹಾಯಕ ಪ್ರಾಧ್ಯಾಪಕರಾದ ಡಾ. ಬಿ. ಪಾಂಡಿಯನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.


ಸಿದ್ಧ ಉಡುಪು ಉದ್ಯಮಶೀಲತಾ ಅಭಿವೃದ್ಧಿ ತರಬೇತಿ : ಅರ್ಜಿ ಆಹ್ವಾನ
ಚಾಮರಾಜನಗರ, ಅ. 18 (ಕರ್ನಾಟಕ ವಾರ್ತೆ):- ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಧಾರವಾಡದ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದೊಂದಿಗೆ ಒಂದು ತಿಂಗಳ ಸಿದ್ಧ ಉಡುಪು ತಯಾರಿಕೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ನೀಡಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ಉಚಿತವಾಗಿದೆ. ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿದ್ದು, 18 ರಿಂದ 35 ವರ್ಷದ ವಯೋಮಿತಿಯಲ್ಲಿರಬೇಕು. ಟೈಲರಿಂಗ್ ಬಗ್ಗೆ ತರಬೇತಿ ಪಡೆದಿರಬೇಕು. ಸ್ವಂತ ಉದ್ಯೋಗ ಸ್ಥಾಪಿಸಲು ಇಚ್ಛೆಯುಳ್ಳವರಾಗಿರಬೇಕು. ಅಲ್ಲದೆ ಶೇ. 25ರಷ್ಟು ಸ್ವಂತ ಬಂಡವಾಳ ಹೂಡಲು ಶಕ್ತರಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.
ತರಬೇತಿಯಲ್ಲಿ ಉದ್ಯಮಗಳ ಆಯ್ಕೆ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಹಾಗೂ ಹಣಕಾಸು ನಿರ್ವಹಣೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೊಠಡಿ ಸಂಖ್ಯೆ 331ರ ಜಿಲ್ಲಾ ಕೈಗಾರಿಕಾ ಕೇಂದ್ರ (ಸಿಡಾಕ್) ದ ಉಪನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅಕ್ಟೋಬರ್ 20ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಕಚೇರಿ ದೂರವಾಣಿ ಸಂಖ್ಯೆ 08226 -226346, ಮೊಬೈಲ್ 7760145784ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಅ. 24ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ. ಸಭೆ
ಚಾಮರಾಜನಗರ, ಅ. 18 (ಕರ್ನಾಟಕ ವಾರ್ತೆ):- ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸಿರುವ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯು ಅಕ್ಟೋಬರ್ 24ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ನ. 3ರಂದು ವಿಶೇಷ ಚೇತನರ ಕುಂದುಕೊರತೆ ಸಭೆ
ಚಾಮರಾಜನಗರ, ಅ. 18 (ಕರ್ನಾಟಕ ವಾರ್ತೆ):- ಚಾಮರಾಜನಗರ ತಾಲೂಕು ಮಟ್ಟದ ವಿಶೇಷ ಚೇತನರ ಕುಂದುಕೊರತೆ ಸಭೆಯು ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 3ರಂದು ಮಧ್ಯಾಹ್ನ 3 ಗಂಟೆಗೆ ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
ಕುಂದುಕೊರತೆಗಳಿದ್ದಲ್ಲಿ ವಿಶೇಷಚೇತನರು ತಹಸೀಲ್ದಾರ್ ಅವರ ಸಮ್ಮುಖದಲ್ಲಿಯೇ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ತಾಲೂಕು ಸಮನ್ವಯಕಾರರಾದ ರಾಜೇಶ್ ಅವರ ಮೊಬೈಲ್ ಸಂಖ್ಯೆ 8105720709, ಕಚೇರಿ ಸಂಖ್ಯೆ 08226 – 222603 ಅಥವಾ 223688ಗೆ ಕರೆ ಮಾಡುವಂತೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಅ. 22ರಂದು ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ಅ. 19 (ಕರ್ನಾಟಕ ವಾರ್ತೆ):- ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ 22ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಅ. 19 (ಕರ್ನಾಟಕ ವಾರ್ತೆ):- ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಅಕ್ಟೋಬರ್ 20 ಹಾಗೂ 24ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಕ್ಟೋಬರ್ 20ರಂದು ಬೆಳಿಗ್ಗೆ 10.30 ಗಂಟೆಗೆ ಕೊಳ್ಳೇಗಾಲ ತಾಲೂಕಿನ ಮುಳ್ಳೂರಿಗೆ ಆಗಮಿಸಿ ಬಸವ ಭವನದ ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಅಕ್ಟೋಬರ್ 24ರಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರಕ್ಕೆ ಆಗಮಿಸಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿರುವ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಅ. 21ರಂದು ಪೊಲೀಸ್ ಹುತಾತ್ಮರ ದಿನಾಚರಣೆ
ಚಾಮರಾಜನಗರ, ಅ. 19 (ಕರ್ನಾಟಕ ವಾರ್ತೆ):- ಜಿಲ್ಲಾ ಪೊಲೀಸ್ ಇಲಾಖೆಯು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಅಕ್ಟೋಬರ್ 21ರಂದು ಬೆಳಿಗ್ಗೆ 8 ಗಂಟೆಗೆ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಹಮ್ಮಿಕೊಂಡಿದೆ.
ಜಿಲ್ಲಾಧಿಕಾರಿ ಬಿ. ರಾಮು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

ಅ. 27ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ
ಚಾಮರಾಜನಗರ, ಅ. 19 (ಕರ್ನಾಟಕ ವಾರ್ತೆ):- ನಾಗರಿಕರ ಕುಂದುಕೊರತೆ, ಸಮಸ್ಯೆ, ಅಹವಾಲು ಆಲಿಸುವ ಸಲುವಾಗಿ ಸಹಕಾರ, ಸಕ್ಕರೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರ ಅಧ್ಯಕ್ಷತೆ ಹಾಗೂ ಇತರೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಅಕ್ಟೋಬರ್ 27ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ.
ಈ ಸಭೆಯಲ್ಲಿ ನಾಗರಿಕರು ತಮ್ಮ ಅಹವಾಲು, ಕುಂದುಕೊರತೆ ಸಮಸ್ಯೆಗಳನ್ನು ಸಲ್ಲಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಜನಸಂಪರ್ಕ ಸಭೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫ್ಯಾಷನ್ ಡಿಸೈನಿಂಗ್ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಅ. 19 (ಕರ್ನಾಟಕ ವಾರ್ತೆ):- ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಧಾರವಾಡದ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದೊಂದಿಗೆ ಯಳಂದೂರು ತಾಲೂಕಿನ ನಿರುದ್ಯೋಗಿ ಅಭ್ಯರ್ಥಿಗಳಿಗೆ ಒಂದು ತಿಂಗಳ ಫ್ಯಾಷನ್ ಡಿಸೈನಿಂಗ್ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯನ್ನು ನೀಡಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ಉಚಿತವಾಗಿದೆ. ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿದ್ದು, 18 ರಿಂದ 40 ವರ್ಷದ ವಯೋಮಿತಿಯಲ್ಲಿರಬೇಕು. ಟೈಲರಿಂಗ್ ಬಗ್ಗೆ ತರಬೇತಿ ಪಡೆದಿರಬೇಕು. ಸ್ವಂತ ಉದ್ಯೋಗ ಸ್ಥಾಪಿಸಲು ಇಚ್ಛೆಯುಳ್ಳವರಾಗಿರಬೇಕು. ಅಲ್ಲದೆ ಶೇ. 25ರಷ್ಟು ಸ್ವಂತ ಬಂಡವಾಳ ಹೂಡಲು ಶಕ್ತರಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.
ತರಬೇತಿ ಅವಧಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ, ಬ್ಯಾಂಕುಗಳಿಂದ ದೊರೆಯುವ ಸೌಲಭ್ಯ ಹಾಗೂ ಸ್ವಂತ ಉದ್ಯಮ ಸ್ಥಾಪನೆ ಕುರಿತು ಮಾಹಿತಿ ನೀಡಲಾಗುವುದು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೊಠಡಿ ಸಂಖ್ಯೆ 331ರ ಜಿಲ್ಲಾ ಕೈಗಾರಿಕಾ ಕೇಂದ್ರ (ಸಿಡಾಕ್) ದ ಉಪನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅಕ್ಟೋಬರ್ 30ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಕಚೇರಿ ದೂರವಾಣಿ ಸಂಖ್ಯೆ 08226 - 226346, ಮೊಬೈಲ್ 7760145784ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಅಕ್ಟೋಬರ್ 20ರಂದು ಕೇಬಲ್ ಟಿವಿ ಡಿಜಿಟಲೀಕರಣ ಕುರಿತು ಸಭೆ
ಚಾಮರಾಜನಗರ, ಅ. 19 (ಕರ್ನಾಟಕ ವಾರ್ತೆ): ಕೇಬಲ್ ಟಿವಿ ಡಿಜಿಟಲೀಕರಣ  ಕಾರ್ಯಕ್ರಮ ಅನುಷ್ಠಾನ ಕುರಿತ ಸಭೆಯು ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 20ರಂದು ಬೆಳಗ್ಗೆ 11ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
ಈ ಸಭೆಗೆ ಜಿಲ್ಲಾ ವ್ಯಾಪ್ತಿಯ ಕೇಬಲ್ ಆಪರೇಟರ್‍ಗಳು ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅ. 21ರಂದು ಕೇಂದ್ರ ಸಾಂಖ್ಯಿಕ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಅ. 20 (ಕರ್ನಾಟಕ ವಾರ್ತೆ):- ಕೇಂದ್ರ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವರಾದ ಡಿ.ವಿ. ಸದಾನಂದಗೌಡ ಅವರು ಅಕ್ಟೋಬರ್ 21ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಚಾಮರಾಜನಗರಕ್ಕೆ ಆಗಮಿಸುವರು. 10.30 ಗಂಟೆಗೆ ನಗರದಲ್ಲಿ ನಮೋ ಜನಚೇತನ ಟ್ರಸ್ಟ್‍ನ ಪ್ರಾರಂಭೋತ್ಸವ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಪ್ರಕಟಣೆ ತಿಳಿಸಿದೆ.

ಸೆಟ್ ಟಾಪ್ ಬಾಕ್ಸ್ ಅಳವಡಿಸಿಕೊಳ್ಳದ ಕೇಬಲ್ ಟಿವಿ ಸಂಪರ್ಕ ಕಡಿತ : ಜಿಲ್ಲಾಧಿಕಾರಿ
ಚಾಮರಾಜನಗರ, ಅ. 20 (ಕರ್ನಾಟಕ ವಾರ್ತೆ):- ಜಿಲ್ಲೆಯ ನಗರ, ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ಕೇಬಲ್ ಟಿವಿ ವೀಕ್ಷಕರು, ಗ್ರಾಹಕರು ಕಡ್ಡಾಯವಾಗಿ ಸೆಟ್ ಟಾಪ್ ಬಾಕ್ಸ್ ಅಳವಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕೇಬಲ್ ಸಂಪರ್ಕವನ್ನು ಕಡಿತಗೊಳಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕೇಬಲ್ ಟಿವಿ ಡಿಜಟಲೀಕರಣ ಅನುಷ್ಠಾನ ಸಂಬಂಧ ಕರೆಯಲಾಗಿದ್ದ ಕೇಬಲ್ ಟಿವಿ ಆಪರೇಟರ್‍ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಪ್ರದೇಶಗಳಲ್ಲಿ 3ನೇ ಹಂತದಲ್ಲಿ ಸಂಪೂರ್ಣವಾಗಿ ಕೇಬಲ್ ಟಿವಿ ಜಾಲವನ್ನು ಡಿಜಟಲೀಕರಣಗೊಳಿಸಲು ಈಗಾಗಲೇ ಗಡುವು ನಿಗದಿ ಮಾಡಲಾಗಿತು. ಈ ಹಿಂದೆಯೂ ಸಭೆ ನಡೆಸಿ ಪ್ರತಿ ಗ್ರಾಹಕರು ಕೇಬಲ ಟಿವಿ ವೀಕ್ಷಣೆಗೆ ಕಡ್ಡಾಯವಾಗಿ ಸೆಟ್ ಟಾಪ್ ಬಾಕ್ಸ್ ಅಳವಡಿಸಿಕೊಳ್ಳಬೇಕೆಂಬ ಬಗ್ಗೆ ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು ಎಂದರು.
ಕೇಬಲ್ ಟಿವಿ ವೀಕ್ಷಣೆಗೆ ಸೆಟ್ ಟಾಪ್ ಬಾಕ್ಸ್ ಅಳವಡಿಸಿಕೊಳ್ಳದೇ ಇರುವವರಿಗೆ ಮನವರಿಕೆ ಮಾಡಿ ತಕ್ಷಣವೇ ಸೆಟ್ ಟಾಪ್ ಬಾಕ್ಸ್ ಅಳವಡಿಸಿಕೊಳ್ಳಲು ಸೂಚಿಸಬೇಕು. ಇಲ್ಲವಾದಲ್ಲಿ ನಿರ್ದಾಕ್ಷಿಣ್ಯವಾಗಿ ಕೇಬಲ್ ಸಂಪರ್ಕವನ್ನು ಕಡಿತಗೊಳಿಸಬೇಕು. ಅನಲಾಗ್ ವ್ಯವಸ್ಥೆಯನ್ನು ನಿಲ್ಲಿಸಿ ಅಕ್ಟೋಬರ್ 31ರೊಳಗೆ ಸಂಪೂರ್ಣವಾಗಿ ಡಿಜಿಟಲೀಕರಣ ವ್ಯವಸ್ಥೆಗೆ ಮಾರ್ಪಾಡು ಮಾಡಿ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೇಬಲ್ ಟಿವಿ ಆಪರೇಟರ್‍ಗಳಿಗೆ ನಿರ್ದೇಶನ ನೀಡಿದರು.
ಸೆಟ್ ಟಾಪ್ ಬಾಕ್ಸ್ ಅಳವಡಿಕೆ ಕೆಲಸವು ಅಕ್ಟೋಬರ್ 31ರೊಳಗೆ ಸಂಪೂರ್ಣವಾಗಬೇಕು. ಡಿಜಿಟಲೀಕರಣ ವ್ಯವಸ್ಥೆಯು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಗೊಳಪಡುವ ಪ್ರದೇಶಗಳಲ್ಲಿ ಶೇ. 100ರಷ್ಟು ಪ್ರಗತಿಯಾಗಲೇಬೇಕು. ಇನ್ನು ಯಾವುದೇ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ ಸೆಟ್ ಟಾಪ್ ಬಾಕ್ಸ್ ಅಳವಡಿಸಿಕೊಳ್ಳದೇ ಇರುವ ಗ್ರಾಹಕರಿಗೆ ನಿಯಮಗಳ ಬಗ್ಗೆ ವಿವರಿಸಿ ಸಮರ್ಪಕವಾಗಿ ಪ್ರಕ್ರಿಯೆ ನಿರ್ವಹಿಸಬೇಕೆಂದು ಸೂಚಿಸಿದರು.
4ನೇ ಹಂತದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲೂ ಸಹ ಸೆಟ್ ಟಾಪ್ ಬಾಕ್ಸ್ ಅಳವಡಿಕೆ ಕಾರ್ಯ ಪೂರ್ಣಗೊಳಿಸಲು ಡಿಸೆಂಬರ್ 31ರ ಗಡುವು ನಿಗದಿಯಾಗಿದೆ. ಆದರೆ ಗ್ರಾಮಾಂತರ ಭಾಗಗಳಲ್ಲಿಯೂ ತ್ವರಿತವಾಗಿ ವೀಕ್ಷಕರು, ಗ್ರಾಹಕರು ಸೆಟ್ ಟಾಪ್ ಬಾಕ್ಸ್ ಪಡೆದು ಅಳವಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೈಗೊಳ್ಳುವಲ್ಲಿ ಆಪರೇಟರ್‍ಗಳು ನಿಗಾ ವಹಿಸಬೇಕು. ಮುಂದಿನ ತಿಂಗಳ ಸಭೆಯ ವೇಳೆಗೆ ಈಗಿರುವ ಪ್ರಗತಿ 4 ಪಟ್ಟು ಹೆಚ್ಚಳವಾಗಬೇಕು ಎಂದು ರಾಮು ಅವರು ತಾಕೀತು ಮಾಡಿದರು.
ಕೇಬಲ್ ಟಿವಿ ಆಪರೇಟರ್‍ಗಳು ಕೇಂದ್ರ ಅನುಮೋದಿತ ಪಟ್ಟಿಯಲ್ಲಿ ಇರುವ ಚಾನಲ್‍ಗಳನ್ನು ಮಾತ್ರ ಪ್ರಸಾರ ಮಾಡಬೇಕು. ನಿಷೇಧಿತ ಚಾನಲ್‍ಗಳನ್ನು ಪ್ರಸಾರ ಮಾಡುವಂತಿಲ್ಲ. ಪ್ರಚೋದನಾತ್ಮಕ ಶಾಂತಿ ಕದಡುವ ವಿಷಯ ಆಧಾರಿತ ಚಾನಲ್‍ಗಳನ್ನು ಪ್ರಸಾರ ಮಾಡಬಾರದು. ಅಲ್ಲದೆ ಎಲ್ಲಿಯೋ ನಡೆದ ಪ್ರಚೋದನಾತ್ಮಕ ವಿಷಯವನ್ನು ಡೌನ್ ಲೋಡ್ ಮಾಡಿಕೊಂಡು ಸಹ ಪ್ರಸಾರ ಮಾಡಬಾರದು. ನಿಷೇದಿತ ಚಾನಲ್‍ಗಳನ್ನು ಪ್ರಸಾರ ಮಾಡುವುದು ಕಂಡುಬಂದಲ್ಲಿ ಸಂಬಂಧಪಟ್ಟ ಕೇಬಲ್ ಆಪರೇಟರ್‍ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಡಿವೈಎಸ್‍ಪಿ ಗಂಗಾಧರಸ್ವಾಮಿ,  ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ಕೇಬಲ್ ಆಪರೇಟರ್‍ಗಳು ಸಭೆಯಲ್ಲಿ ಹಾಜರಿದ್ದರು.



ಅ. 22ರಂದು ತಾ.ಪಂ. ಕೆಡಿಪಿ ಸಭೆ
ಚಾಮರಾಜನಗರ, ಅ. 20 (ಕರ್ನಾಟಕ ವಾರ್ತೆ):- ಚಾಮರಾಜನಗರ ತಾಲೂಕಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 22ರಂದು ಬೆಳಿಗ್ಗೆ 10.30 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ. 22ರಂದು ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ಅ. 20 (ಕರ್ನಾಟಕ ವಾರ್ತೆ):- ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ 22ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅ. 22ರಂದು ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ಅ. 21 (ಕರ್ನಾಟಕ ವಾರ್ತೆ):- ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ 22ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ. 22ರಂದು ತಾ.ಪಂ. ಕೆಡಿಪಿ ಸಭೆ
ಚಾಮರಾಜನಗರ, ಅ. 21 (ಕರ್ನಾಟಕ ವಾರ್ತೆ):- ಚಾಮರಾಜನಗರ ತಾಲೂಕಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 22ರಂದು ಬೆಳಿಗ್ಗೆ 10.30 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ. 22ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಅ. 21 (ಕರ್ನಾಟಕ ವಾರ್ತೆ):- ತಾಲೂಕಿನ ಪಣ್ಯದಹುಂಡಿ ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯು ಅಕ್ಟೋಬರ್ 22ರಂದು ನಡೆಯಲಿದೆ. ಹೀಗಾಗಿ ಬೆಂಡರವಾಡಿ, ಪಣ್ಯದಹುಂಡಿ, ಬದನಗುಪ್ಪೆ ಇಂಡಸ್ಟ್ರಿಯಲ್, ಎನ್ ಜೆವೈ ಕೆಲ್ಲಂಬಳ್ಳಿ ಮಾರ್ಗಗಳಿಗೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿದಾರರು ಕಡ್ಡಾಯವಾಗಿ ಆಧಾರ್ ಸಂಖ್ಯೆ ನೀಡಲು ಸೂಚನೆ
ಚಾಮರಾಜನಗರ, ಅ. 21 (ಕರ್ನಾಟಕ ವಾರ್ತೆ):- ಸಾಮಾಜಿಕ ಭದ್ರತಾ ಯೋಜನೆಯಡಿ ವಿಧವಾ, ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ಮನಸ್ವಿನಿ ಮತ್ತು ಮೈತ್ರಿ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಲು ತಿಳಿಸಿದೆ.
ಗ್ರಾಮೀಣ ಭಾಗದ ಪಿಂಚಣಿ ಫಲಾನುಭವಿಗಳು ಸಂಬಂಧಪಟ್ಟ ಹೋಬಳಿ ನಾಡಕಚೇರಿಗಳಲ್ಲಿ, ನಗರ ವ್ಯಾಪ್ತಿಯ ಫಲಾನುಭವಿಗಳು ಕಸಬಾ ರಾಜಸ್ವ ನಿರೀಕ್ಷಕರ ಕಚೇರಿಯಲ್ಲಿ ಅಕ್ಟೋಬರ್ 25ರ ಒಳಗೆ ಸಲ್ಲಿಸಬೇಕು. ತಪ್ಪಿದಲ್ಲಿ ನವೆಂಬರ್ ಮಾಹೆಯಿಂದ ಆಧಾರ್ ಸಂಖ್ಯೆ ಸಲ್ಲಿಸದ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ತಹಸೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಅ. 26ರಂದು ಚಂದಕವಾಡಿಯಲ್ಲಿ ಜನಸಂಪರ್ಕ ಸಭೆ
ಚಾಮರಾಜನಗರ, ಅ. 21 (ಕರ್ನಾಟಕ ವಾರ್ತೆ):- ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 26ರಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರ ತಾಲೂಕಿನ ಚಂದಕವಾಡಿ ಹೋಬಳಿ ನಾಡಕಚೇರಿ ಆವರಣದಲ್ಲಿ ಜನಸಂಪರ್ಕ ಸಭೆ ನಡೆಯಲಿದೆ.
ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಜನಸಂಪರ್ಕ ಸಭೆಯ ಸದುಪಯೋಗ ಮಾಡಿಕೊಳ್ಳುವಂತೆ ತಾಲೂಕು ತಹಸೀಲ್ದಾರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಅ. 25ರಂದು ಮಹದೇಶ್ವರ ಬೆಟ್ಟದಲ್ಲಿ ಗೋಲಕ ಹಣ ಎಣಿಕೆ
ಚಾಮರಾಜನಗರ, ಅ. 21 (ಕರ್ನಾಟಕ ವಾರ್ತೆ):- ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಗೋಲಕಗಳ ಹಣ ಎಣಿಕೆ ಕಾರ್ಯವು ಅಕ್ಟೋಬರ್ 25ರಂದು ಬೆಳಿಗ್ಗೆ ನಡೆಯಲಿದೆ.
ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ಸಹಯೋಗದೊಂದಿಗೆ ಹಣ ಎಣಿಕೆ ಕಾರ್ಯವು ನಡೆಸಲಾಗುವುದೆಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆÉ.

ಅ. 27ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ
ಚಾಮರಾಜನಗರ, ಅ. 21 (ಕರ್ನಾಟಕ ವಾರ್ತೆ):- ನಾಗರಿಕರ ಕುಂದುಕೊರತೆ, ಸಮಸ್ಯೆ, ಅಹವಾಲು ಆಲಿಸುವ ಸಲುವಾಗಿ ಸಹಕಾರ, ಸಕ್ಕರೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರ ಅಧ್ಯಕ್ಷತೆ ಹಾಗೂ ಇತರೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಅಕ್ಟೋಬರ್ 27ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ.
ಈ ಸಭೆಯಲ್ಲಿ ನಾಗರಿಕರು ತಮ್ಮ ಅಹವಾಲು, ಕುಂದುಕೊರತೆ ಸಮಸ್ಯೆಗಳನ್ನು ಸಲ್ಲಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಜನಸಂಪರ್ಕ ಸಭೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
                                                                       
ವಾರ್ತಾ ವಿಶೇಷ:
ಅ. 24 ರಿಂದ ಕಾಲುಬಾಯಿ ಜ್ವರ ತಡೆಗೆ 11ನೇ ಸುತ್ತಿನ ಲಸಿಕೆ ಆಂದೋಲನ : ಪಶುಪಾಲನೆ ಇಲಾಖೆ ಸಜ್ಜು
ಜಾನುವಾರುಗಳಿಗೆ ತಗಲುವ ಕಾಲುಬಾಯಿ ಜ್ವರವನ್ನು ಪರಿಣಾಮಕಾರಿಯಾಗಿ ತಡೆಯುವ ಉದ್ದೇಶದಿಂದ ಜಿಲ್ಲಾದ್ಯಂತ ಅಕ್ಟೋಬರ್ 24 ರಿಂದ ನವೆಂಬರ್ 12ರವರೆಗೆ 11ನೇ ಸುತ್ತಿನ ಲಸಿಕೆ ನೀಡುವ ಕಾರ್ಯ ವ್ಯಾಪಕವಾಗಿ ನಡೆಯಲಿದ್ದು ಇದಕ್ಕಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಜ್ಜುಗೊಂಡಿದೆ.
ಜಿಲ್ಲೆಯಲ್ಲಿ ಜಾನುವಾರು ಗಣತಿ ಪ್ರಕಾರ ಒಟ್ಟು 259092 ಜಾನುವಾರುಗಳನ್ನು ಗುರುತಿಸಲಾಗಿದೆ. ಚಾಮರಾಜನಗರ ತಾಲೂಕಿನಲ್ಲಿ 76239, ಗುಂಡ್ಲುಪೇಟೆ ತಾಲೂಕಿನಲ್ಲಿ 70258, ಕೊಳ್ಳೇಗಾಲ ತಾಲೂಕಿನಲ್ಲಿ 100112 ಮತ್ತು ಯಳಂದೂರು ತಾಲೂಕಿನಲ್ಲಿ 12483 ಜಾನುವಾರುಗಳು ಇವೆ ಎಂದು ಗಣತಿಯಲ್ಲಿ ಗುರುತಿಸಲಾಗಿದೆ.
ಜಾನುವಾರುಗಳಿಗೆ ಲಸಿಕೆ ನೀಡುವ ಸಲುವಾಗಿ ಜಾನುವಾರು ಸಂಖ್ಯೆಗಳಿಗೆ ಅನುಗುಣವಾಗಿ ಒಟ್ಟು 27 ಲಸಿಕಾ ತಂಡ ರಚಿಸಲಾಗಿದೆ. ಪ್ರತಿ ತಂಡದಲ್ಲಿ ಐದರಿಂದ ಆರು ಮಂದಿ ಅರೆತಾಂತ್ರಿಕ ಸಿಬ್ಬಂದಿ ಇದ್ದು ಪಶುವೈದ್ಯರೊಬ್ಬರು ತಂಡದ ಮುಖ್ಯಸ್ಥರಾಗಿ ಇರಲಿದ್ದಾರೆ. ಚಾಮರಾಜನಗರ ತಾಲೂಕಿನಲ್ಲಿ 9, ಗುಂಡ್ಲುಪೇಟೆ ತಾಲೂಕಿನಲ್ಲಿ 7, ಕೊಳ್ಳೇಗಾಲ ತಾಲ್ಲೂಕಿಗೆ 8 ಹಾಗೂ ಯಳಂದೂರು ತಾಲ್ಲೂಕಿಗೆ 3 ತಂಡಗಳನ್ನು ನಿಯೋಜಿಸಲಾಗಿದೆ.
ನಿಯೋಜಿತವಾಗಿರುವ ಪ್ರತೀ ತಂಡವು ಒಂದು ದಿನಕ್ಕೆ 750 ರಾಸುಗಳಿಗೆ ಲಸಿಕೆ ನೀಡಲಿವೆ. ಒಟ್ಟು 27 ತಂಡಗಳಿಂದ ಪ್ರತಿ ದಿನ 20250 ಜಾನುವಾರುಗಳಿಗೆ ಲಸಿಕೆ ನೀಡಲು ಗುರಿ ನೀಡಲಾಗಿದೆ. ಹೀಗಾಗಿ 15 ರಿಂದ 20 ದಿನಗಳೊಳಗೆ ಎಲ್ಲಾ ರಾಸುಗಳಿಗೆ ಲಸಿಕೆ ಹಾಕಬಹುದಾಗಿದೆ.
ಲಸಿಕೆಯನ್ನು ಸ್ಥಳೀಯ ಹಾಗೂ ಮಿಶ್ರತಳಿ ದನಗಳು, ಎಮ್ಮೆಗಳು, ಹಂದಿಗಳಿಗೆ ಕೊಡಲಾಗುತ್ತದೆ. 3 ತಿಂಗಳಿಗಿಂತ ಕಡಿಮೆ ವಯಸ್ಸಿನ ಕರುಗಳು ಹಾಗೂ 6 ತಿಂಗಳು ತುಂಬಿರುವ ಗರ್ಭ ಧರಿಸಿದ ರಾಸುಗಳಿಗೆ ಲಸಿಕೆ ನೀಡುವುದನ್ನು ಮುಂದೂಡಲಾಗುತ್ತದೆ. ಪ್ರತೀ ರಾಸುವಿಗೆ ಪ್ರತ್ಯೇಕ ಡಿಸ್ ಪೋಸಲ್ ಸಿರಿಂಜ್ ಹಾಗೂ ಸೂಜಿಗಳನ್ನು ಉಪಯೋಗಿಸಲಾಗುತ್ತದೆ. ಬೆಳಿಗ್ಗೆ 6 ರಿಂದ 11.30 ಗಂಟೆ ಹಾಗೂ ಸಂಜೆ 5 ರಿಂದ 7 ಗಂಟೆ ಅವಧಿಯೊಳಗೆ ಲಸಿಕೆ ನೀಡಲು ಸೂಚಿಸಲಾಗಿದೆ.
ಪಶುಪಾಲನೆ ಇಲಾಖೆಗೆ 2,65,350 ಡೋಸ್ ಲಸಿಕೆ ಸರಬರಾಜಾಗುತ್ತಿದೆ. ಚಾಮರಾಜನಗರ ತಾಲೂಕು ಪಶುವೈದ್ಯ ಆಸ್ಪತ್ರೆಯ ವಾಕ್-ಇನ್-ಕೂಲರ್‍ನಲ್ಲಿ 84400 ಹಾಗೂ ಉಳಿದ 1.80,950 ಡೋಸ್ ಲಸಿಕೆಯನ್ನು ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಯಳಂದೂರಿನ ಪಶುವೈದ್ಯ ಆಸ್ಪತ್ರೆಯ ಬಾಟಲ್ ಕೂಲರ್ಸ್ ಯಂತ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಎಲ್ಲ ಹಂತದಲ್ಲೂ ಲಸಿಕೆಯ ಶೀತಲಿ ಸರಪಳಿ ನಿರ್ವಹಣೆ ಮಾಡಲಾಗುತ್ತಿದೆ. ಲಸಿಕೆಯನ್ನು ಕೊಂಡೊಯ್ಯಲು ವ್ಯಾಕ್ಸಿನ್ ಕ್ಯಾರಿಯರ್ ನೀಡಲಾಗುತ್ತಿದೆ.
ಲಸಿಕಾ ತಂಡಗಳು ಗ್ರಾಮಗಳಿಗೆ ಭೇಟಿ ನೀಡಲು  ಒಟ್ಟು 27 ವಾಹನ ವ್ಯವಸ್ಥೆ ಮಾಡಲಾಗಿದೆ. ಚಾಮರಾಜನಗರ ತಾಲೂಕಿಗೆ 9, ಗುಂಡ್ಲುಪೇಟೆ ತಾಲೂಕಿಗೆ 7, ಕೊಳ್ಳೇಗಾಲ ತಾಲ್ಲೂಕಿಗೆ 8 ಹಾಗೂ ಯಳಂದೂರು ತಾಲ್ಲೂಕಿಗೆ 3 ವಾಹನಗಳನ್ನು ನಿಯೋಜಿಸಲಾಗಿದೆ.
ಕಾರ್ಯಕ್ರಮ ಸಂಬಂಧ ರೈತರು, ಹೈನುಗಾರಿಕೆ ಅವಲಂಬಿತರಿಗೆ ಅರಿವು ಮೂಡಿಸುವ ಉದ್ದೇಶದಿಂದ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ಪ್ರತಿ ಗ್ರಾಮದಲ್ಲೂ ಭಿತ್ತಿಪತ್ರ ಹಾಗೂ ಕರಪತ್ರಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ದೊಡ್ಡ ಗ್ರಾಮಗಳಲ್ಲಿ ಬ್ಯಾನರ್‍ಗಳನ್ನು ಹಾಕಲಾಗುತ್ತಿದೆ. ಗ್ರಾಮ ಪಂಚಾಯತ್ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕವೂ ಸಹ ಪ್ರಚಾರಕ್ಕಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಚಾರಕ್ಕಾಗಿ 760 ಪೋಸ್ಟರ್ಸ್, 600 ಬ್ಯಾನರ್‍ಗಳು ಹಾಗೂ ಹೆಚ್ಚು ಸಂಖ್ಯೆಯಲ್ಲಿ ಕರಪತ್ರಗಳನ್ನು ಮುದ್ರಿಸಲಾಗಿದೆ.
ಲಸಿಕೆಯನ್ನು ಪ್ರತಿ ದಿನ ಯಾವ ಗ್ರಾಮಕ್ಕೆ ಯಾವ ತಂಡ ಲಸಿಕೆ ನೀಡಲಿದೆ ಎಂಬ ವೇಳಾಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಪ್ರತಿ ಗ್ರಾಮದಲ್ಲಿ ನೀಡಲಾಗುವ ಲಸಿಕೆ ಹಾಗೂ ಇದನ್ನು ನಿರ್ವಹಿಸುವ ಪಶುಪಾಲಕರ ಮಾಹಿತಿಯನ್ನು ಆಯಾ ದಿನವೇ ತಾಲೂಕು ಉಸ್ತುವಾರಿ ಅಧಿಕಾರಿಗೆ ಕಳುಹಿಸಲಾಗುತ್ತದೆ. ಲಸಿಕೆ ವಿವರವನ್ನು ಕಳೆದ ಸುತ್ತಿನಲ್ಲಿ ಪಶುಪಾಲಕರಿಗೆ ನೀಡಿರುವ ಜಾನುವಾರು ಮಾಹಿತಿ ಪಾಸ್ ಪುಸ್ತಕಗಳಲ್ಲಿ ದಾಖಲು ಮಾಡಲಾಗುತ್ತದೆ. ಗ್ರಾಮವಾರು ಲಸಿಕೆ ಮಾಹಿತಿ ವರದಿಯನ್ನು ತಾಲ್ಲೂಕು ಉಸ್ತುವಾರಿ ಅಧಿಕಾರಿಗಳು ಅದೇ ದಿನ ಮಧ್ಯಾಹ್ನ 3 ಗಂಟೆಯೊಳಗೆ ಆನ್ ಲೈನ್ ಮೂಲಕ ರವಾನಿಸಲಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕುಗಳ ಲಸಿಕೆ ಮಾಹಿತಿಯನ್ನು ಜಿಲ್ಲಾ ಕೇಂದ್ರಕ್ಕೆ ಪ್ರತಿ ದಿನ 4 ಗಂಟೆಯೊಳಗೆ ರವಾನಿಸಲಾಗುತ್ತದೆ. ಕ್ರೋಡೀಕರಿಸಿದ ಮಾಹಿತಿಯನ್ನು ರಾಜ್ಯಕೇಂದ್ರ ಕಚೇರಿಗೆ ಸಂಜೆ 5 ಗಂಟೆಯೊಳಗೆ ಸಲ್ಲಿಸಲಾಗುತ್ತದೆ. ಯಾವುದೇ ಗ್ರಾಮದ ಲಸಿಕೆ ಪ್ರಗತಿ ನಿರ್ವಹಣೆ ಮಾಹಿತಿಯನ್ನು ನಾಗರಿಕರು ವೀಕ್ಷಿಸಲು ಅವಕಾಶವಿದೆ.
ಲಸಿಕೆ ಮಾಡುವ ಮೊದಲು ಜಾನುವಾರುಗಳಲ್ಲಿ ಜಂತು ನಿವಾರಣೆ ಮಾಡುವುದು ಸೂಕ್ತವೆಂದು ನಿರ್ಧರಿಸಲಾಗಿದೆ. ಇದರಿಂದ ಲಸಿಕೆಯಿಂದ ಉಂಟುಮಾಡುವ ರೋಗನಿರೋಧಕ ಶಕ್ತಿ ಹೆಚ್ಚಾಗಲಿದೆ. ಈ ಉದ್ದೇಶಕ್ಕಾಗಿಯೇ ಸಾಮೂಹಿಕ ಜಂತುನಿವಾರಣಾ ಕಾರ್ಯಕ್ರಮವನ್ನು  ಕಳೆದ ಅಕ್ಟೋಬರ್ 10ರಂದು ನಡೆಸಲಾಗಿದೆ. ಲಸಿಕೆ ಮಾಡುವ ಮೊದಲು ಫೀಕಲ್  ಮಾದರಿಗಳನ್ನು ಶೇಖರಿಸಿ ಜಂತುನಾಶಕ ಸೇವನೆ ಮಾಡಿಸಿದ ಬಳಿಕ ಅದೇ ರಾಸುಗಳಲ್ಲಿ 21 ದಿನಗಳ ನಂತರ ಪರೀಕ್ಷೆ ನಡೆಸಲಾಗುತ್ತದೆ.
ಲಸಿಕೆ ಉಪಯುಕ್ತತೆಯನ್ನು ಅಳೆಯಲು ಜಿಲ್ಲೆಯ ಆಯ್ದ 10 ಗ್ರಾಮಗಳಲ್ಲಿ 20 ಜಾನುವಾರುಗಳಿಂದ ಲಸಿಕೆ ನೀಡುವ ಮೊದಲು ಸೀರಂ ಶೇಖರಿಸಲಾಗುತ್ತದೆ. ಲಸಿಕೆ ಮಾಡಿದ 28 ದಿನಗಳ ಬಳಿಕ ಅದೇ ರಾಸುಗಳಿಂದ ಸೀರಂ ಶೇಖರಿಸಿ ರೋಗನಿರೋಧಕ ಶಕ್ತಿ ಪರೀಕ್ಷೆ ನಡೆಸಲಾಗುತ್ತದೆ.
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ ಹಾಗು ಅರಣ್ಯ ಇಲಾಖೆ ಲಸಿಕಾ ಆಂದೋಲನಕ್ಕೆ ಸಹಕರಿಸಿವÉ. ಇಲಾಖೆಯ ಲಸಿಕಾ ತಂಡವು ನಿಗದಿತ ದಿನಾಂಕಗಳಂದು ಭೇಟಿ ಕೊಡುವ ಸಂದರ್ಭದಲ್ಲಿ ಜಾನುವಾರು ಮಾಲೀಕರು, ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಕಾಲುಬಾಯಿ ಜ್ವರ ತಡೆಗೆ ಆಯೋಜಿಸಿರುವ ವಿಶೇಷ ಲಸಿಕೆ ನೀಡುವ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಬಾಲಸುಂದರ್ ಮನವಿ ಮಾಡಿದ್ದಾರೆ.

ಅ. 24ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ. ಸಭೆ
ಚಾಮರಾಜನಗರ, ಅ. 22 (ಕರ್ನಾಟಕ ವಾರ್ತೆ):- ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸಿರುವ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯು ಅಕ್ಟೋಬರ್ 24ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇರ ಫೋನ್ ಇನ್ ಕಾರ್ಯಕ್ರಮ : ಕುಡಿಯುವ ನೀರು ಸಮಸ್ಯೆ ಪ್ರಸ್ತಾಪ
ಚಾಮರಾಜನಗರ, ಅ. 22 (ಕರ್ನಾಟಕ ವಾರ್ತೆ):- ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಇಂದು ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಕುಡಿಯುವ ನೀರು, ರಸ್ತೆ ದುರಸ್ತಿ, ಕೆಎಸ್‍ಆರ್‍ಟಿಸಿ ಬಸ್ಸುಗಳ ನಿಯೋಜನೆ ಬೇಡಿಕೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಪಟ್ಟ  ದೂರುಗಳು ದಾಖಲಾದವು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ. ರಾಮು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಅವರ ಸಮ್ಮುಖದಲ್ಲಿ ನಡೆದ ಒಂದು ಗಂಟೆಯ ಅವಧಿಯ ಕಾರ್ಯಕ್ರಮದಲ್ಲಿ ಒಟ್ಟು 33 ಕುಂದುಕೊರತೆ ದೂರುಗಳು ಕೇಳಿಬಂದವು.
ಸತ್ತೇಗಾಲದಿಂದ ನಾಗರಿಕರೊಬ್ಬರು ಕರೆ ಮಾಡಿ ಸ್ಥಳೀಯ ಭಾಗÀದಲ್ಲಿ ನೀರು ಪೂರೈಕೆ ಸಂಪರ್ಕ ಪಡೆಯಲಾಗಿದೆ. ಆದರೆ ನೀರು ಪೂರೈಕೆಯಾಗುತ್ತಿಲ್ಲ ಎಂದು ಗಮನ ಸೆಳೆದರು. ಹನೂರು ಪಟ್ಟಣದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ಮತ್ತೊಬ್ಬರು ತಿಳಿಸಿದರು.
ಸಂತೆಮರಹಳ್ಳಿ ಹೋಬಳಿಯ ಬಸವಟ್ಟಿ ಗ್ರಾಮದಿಂದ ಕರೆ ಮಾಡಿದ ಗ್ರಾಮಸ್ಥರೊಬ್ಬರು ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಗೊಂಡು 3 ವರ್ಷವಾಗಿದೆ. ಆದರೂ ಟ್ಯಾಂಕ್‍ಗೆ ನೀರು ತುಂಬಿಸುತ್ತಿಲ್ಲ ಎಂದು ದೂರಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ವಿದ್ಯುತ್ ಸಂಪರ್ಕ ತೊಂದರೆಯಿಂದ ನೀರು ತುಂಬಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿಯೇ ಈ ವರ್ಷ 15 ಲಕ್ಷ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆ ತಯಾರಾಗಿದ್ದು ಸಮಸ್ಯೆ ಪರಿಹಾರವಾಗಲಿದೆ ಎಂದರು.
ಹೆಬ್ಬಸೂರು ಗ್ರಾಮದಲ್ಲಿ ಕೆರೆಕಟ್ಟೆಗಳು ಬತ್ತಿಹೋಗಿವೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕೆಂದು ಅಲ್ಲಿನ ಗ್ರಾಮಸ್ಥರೊಬ್ಬರು ಕೋರಿದರು. ಕುರಟ್ಟಿ ಹೊಸೂರು ಗ್ರಾಮದಿಂದ ಮತ್ತೊಬ್ಬರು ಕರೆ ಮಾಡಿ ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಸಿಗುತ್ತಿಲ್ಲವೆಂದು ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಮೇವು ಖರೀದಿಸಿ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ. ನೀರಾವರಿ ಸೌಲಭ್ಯ ಇರುವ ಕಡೆ ಮೇವು ಬೆಳೆಯುವಂತೆ   ಕೋರಲಾಗಿದೆ. ಈ ಸಂಬಂಧ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ ಎಂದರು.
ಹೆಬ್ಬಸೂರಿನಿಂದ ಕರೆ ಮಾಡಿದ ಸ್ಥಳೀಯ ಗ್ರಾಮಸ್ಥರೊಬ್ಬರು ಗ್ರಾಮದ ಸುತ್ತಮುತ್ತಲ ಪ್ರದೇಶಕ್ಕೆ ಕೆಎಸ್‍ಆರ್‍ಟಿಸಿ ಬಸ್ಸುಗಳು ಸಂಚರಿಸುತ್ತಿವೆ. ಆದರೆ ದೊಡ್ಡ ಗ್ರಾಮವಾದ ಹೆಬ್ಬಸೂರಿಗೆ ಕೆಎಸ್‍ಆರ್‍ಟಿಸಿ ಬಸ್ಸು ನಿಯೋಜನೆ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಿಗೆ ದಿನನಿತ್ಯ ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದರು. ಈ ಸಂಬಂಧ ಅಗತ್ಯ ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿದರು.
ನೂತನವಾಗಿ ಆರಂಭವಾಗಿರುವ ವೈದ್ಯಕೀಯ ಕಾಲೇಜಿಗೆ ಬಸ್ ವ್ಯವಸ್ಥೆ ಮಾಡಬೇಕು. ಕ್ಯಾಂಪಸ್ ವ್ಯಾಪ್ತಿಯಲ್ಲಿ ದೂರವಾಣಿ ಸಂಪರ್ಕ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಯೋರ್ವರು ಜಿಲ್ಲಾಧಿಕಾರಿಯವರ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಾಣಾಧಿಕಾರಿಗಳೊಂದಿಗೆ ಈಗಾಗಲೇ ಬಸ್ಸು ಸಂಚಾರವನ್ನು ಆರಂಭಿಸಲು ಚರ್ಚಿಸಲಾಗಿದೆ. ದೂರವಾಣಿ ಸಂಪರ್ಕ ಸೌಲಭ್ಯ ಕಲ್ಪಿಸಲು ಭಾರತ್ ಸಂಚಾರ್ ನಿಗಮ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ನಗರದ ಬಂದೀಖಾನೆಯಿಂದ ತ್ಯಾಜ್ಯಯುಕ್ತ ನೀರು ಹರಿಯಬಿಡಲಾಗಿದೆ. ಇದರಿಂದ ಸುತ್ತಮುತ್ತಲಗಳಲ್ಲಿ ದುರ್ನಾತ ಬೀರುತ್ತಿದೆ. ಈ ಬಗ್ಗೆ ಈ ಹಿಂದೆ ದೂರು ನೀಡಿದ್ದರೂ ಯಾವುದೇ ಪರಿಹಾರವಾಗಿಲ್ಲವೆಂದು ಸ್ಥಳೀಯರೊಬ್ಬರು ತಿಳಿಸಿದರು. ಈ ಬಗ್ಗೆ ಅಧಿಕಾರಿಗಳನ್ನು ಕಳುಹಿಸಿ ಶೀಘ್ರ ಪರಿಹಾರ ಕೈಗೊಳ್ಳಲು ಸೂಚಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ನಗರದ ರೈಲು ನಿಲ್ದಾಣ ರಸ್ತೆ ಸರಿಪಡಿಸಬೇಕೆಂಬ ಮನವಿಯು ಕೇಳಿಬಂತು. ರಸ್ತೆ ಕಾಮಗಾರಿ ಕೈಗೊಳ್ಳಲು ಹಣ ಮಂಜೂರಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಯಳಂದೂರಿನಿಂದ ವೈ ಕೆ ಮೋಳೆಗೆ ಸಾಗುವ ರಸ್ತೆಯೂ ಬಹಳ ವರ್ಷಗಳಿಂದ ಹಾಳಾಗಿದೆ. ಆದರೂ ದುರಸ್ತಿಗೆ ಕ್ರಮ ತೆಗೆದುಕೊಂಡಿಲ್ಲವೆಂದು ಅಲ್ಲಿನ  ನಿವಾಸಿಯೊಬ್ಬರ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಪರಿಶೀಲಿಸಿ ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಪಡಿತರ, ವಿದ್ಯುತ್ ದೀಪ ಅಳವಡಿಕೆ, ಕೆರೆ ಒತ್ತುವರಿ, ಸಂತೆಮರಹಳ್ಳಿಯ ಹೆರಿಗೆ ಆಸ್ಪತ್ರೆಯಲ್ಲಿ ವೈದ್ಯರೇ ಹಣ ಪಡೆಯುವ ಬಗೆಗಿನ ದೂರು ಸೇರಿದಂತೆ ಇನ್ನಿತರ ಸಮಸ್ಯೆಗಳು ಫೋನ್ ಇನ್ ಕಾರ್ಯಕ್ರಮದಲ್ಲಿ ಪ್ರಸ್ತಾಪವಾದವು.
ಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತಾಡಿದ ಜಿಲ್ಲಾಧಿಕಾರಿಯವರು ದೂರುದಾರರಿಗೆ ಪರಿಹಾರ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಬೇಕು. ಅಧಿಕಾರಿಗಳು ಕುಂದುಕೊರತೆ ಕೇಳಿಬಂದ ಗ್ರಾಮಗಳಿಗೆ ಭೇಟಿ ನೀಡಿ  ಸಮಸ್ಯೆ ಅರಿತು ತ್ವರಿತವಾಗಿ ಪÀರಿಹರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕನ್ನಡ ರಾಜೋತ್ಸವ ಅದ್ದೂರಿ ಆಚರಣೆಗೆ ತೀರ್ಮಾನ
ಚಾಮರಾಜನಗರ, ಅ. 22 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತದ ವತಿಯಿಂದ ಎಲ್ಲರ ಸಹಕಾರದೊಂದಿಗೆ ನವೆಂಬರ್ 1ರಂದು ಜಿಲ್ಲಾ ಕೇಂದ್ರದಲ್ಲಿ ಕನ್ನಡ ರಾಜೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.
    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕನ್ನಡ ರಾಜೋತ್ಸವ ಅಚರಣೆ ಸಂಬಂಧ ಜಿಲ್ಲಾಧಿಕಾರಿ ಬಿ. ರಾಮು ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.
ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ಎಂದಿನಂತೆ ನಾಡಹಬ್ಬ ಕನ್ನಡ ರಾಜ್ಯೋತ್ಸವವನ್ನು ಈ ಬಾರಿಯೂ ಸಕಲ ಸಿದ್ಧತೆಗಳೊಂದಿಗೆ ಆಚರಿಸಲಾಗುತ್ತದೆ. ಕಾರ್ಯಕ್ರಮ ಹಮ್ಮಿಕೊಳ್ಳುವ ಸಂಬಂಧ ಸಲಹೆಯನ್ನು ನೀಡಬೇಕೆಂದು ಸಭೆಯ ಆರಂಭದಲ್ಲೇ ಮನವಿ ಮಾಡಿದರು.
ಕಾರ್ಯಕ್ರಮ ಸುಗಮ ನಿರ್ವಹಣೆಗಾಗಿ ಅಧಿಕಾರಿಗಳನ್ನೂ ಒಳಗೊಂಡಂತೆ ಸಮಿತಿ ರಚನೆ ಮಾಡಲಾಗುತ್ತದೆ. ಪ್ರತಿ ಸಮಿತಿಯು ಪ್ರತೀ ಹಂತದ ಸಿದ್ಧತೆಗಳನ್ನು ಕೈಗೊಳ್ಳುವಲ್ಲಿ ನಿರ್ವಹಿಸಬೇಕಿರುವ ಜವಾಬ್ದಾರಿಯನ್ನು ನಿಗದಿ ಮಾಡಲಾಗುತ್ತದೆ. ಸಮಿತಿ ಸದಸ್ಯರು ಸಭೆ ನಡೆಸಿ ಕಾರ್ಯೋನ್ಮುಖರಾಗಲು ಸೂಚನೆ ನೀಡಲಾಗುತ್ತದೆ ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಾಜೋತ್ಸವ ದಿನದಂದು ಶಾಲಾ ಕಾಲೇಜು ಮಕ್ಕಳು ನೀಡಲಿರುವ ನಾಡು ನುಡಿ ಕುರಿತ ಸಾಂಸ್ಕøತಿಕ ಕಾರ್ಯಕ್ರಮ, ಪಥ ಸಂಚಲನ, ಇನ್ನಿತರ  ಸಿದ್ಧತೆಗಾಗಿ ತಾಲೀಮು ಆರಂಭಿಸಬೇಕು. ಕಾಲಾವಕಾಶವು ಕಡಿಮೆ ಇರುವ ಹಿನ್ನೆಲೆಯಲ್ಲಿ ಹೆಚ್ಚು ಅವಧಿಯಲ್ಲಿ ಸಿದ್ದತಾ ಕೆಲಸಗಳು ಪೂರ್ಣವಾಗಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಧಿಕಾರಿಗಳು, ಕಚೇರಿ ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಬೇಕು. ಈ ಬಾರಿ ಹಾಜರಾತಿಯನ್ನು ಹಿರಿಯ ಅಧಿಕಾರಿಗಳೇ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಗೈರು ಹಾಜರಾತಿಯನ್ನು ಸಹಿಸುವುದಿಲ್ಲ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಕನ್ನಡಪರ ಸಂಘಟನೆಗಳ ಮುಖಂಡರು ಕನ್ನಡ ಅನುಷ್ಠಾನ ಸಂಬಂಧ ತೋರಲಾಗುತ್ತಿರುವ ನಿರ್ಲಕ್ಷ್ಯ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರಾಮು ಅವರು ಕನ್ನಡ ಅನುಷ್ಠಾನ ಕಾರ್ಯಕ್ರಮಗಳ ಬಗ್ಗೆ ಪ್ರತ್ಯೇಕ ಸಭೆ ನಿಗದಿ ಮಾಡಿ ವಿವರವಾಗಿ ಚರ್ಚಿಸಿ ಪರಿಹರಿಸಲು ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಸರಸ್ವತಿ, ಸಂಘಟನೆಗಳ ಮುಖಂಡರಾದ ಶಾ. ಮುರಳಿ, ಚಾ.ರಂ. ಶ್ರೀನಿವಾಸಗೌಡ, ವೆಂಕಟರಮಣ ಪಾಪು, ಚಾ.ಗು. ನಾಗರಾಜು, ಚಾ.ಹ. ಶಿವರಾಜು, ಸಿ.ಸಿ. ಪ್ರಕಾಶ್, ನಿಜಧ್ವನಿ ಗೋವಿಂದರಾಜು, ಆಲೂರು ನಾಗೇಂದ್ರ, ಬ್ಯಾಡಮೂಡ್ಲು ಬಸವಣ್ಣ, ಜಿ. ಬಂಗಾರು, ಇತರ ಮುಖಂಡರು, ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.


ಅ. 23ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಅ. 22 (ಕರ್ನಾಟಕ ವಾರ್ತೆ):- ಚಾಮರಾಜನಗರ ಪಟ್ಟಣದಲ್ಲಿ ಅಕ್ಟೋಬರ್ 23ರಂದು ವಿದ್ಯುತ್ ನಿರ್ವಹಣಾ ಕಾಮಗಾರಿಯು ನಡೆಯಲಿದೆ. ಹೀಗಾಗಿ ಪಟ್ಟಣದ ಸಂತೆಮರಹಳ್ಳಿ ವೃತ್ತ, ನಂಜನಗೂಡು ಮುಖ್ಯ ರಸ್ತೆ, ಗಾಳೀಪುರ, ಸತ್ತಿ ರಸ್ತೆ, ಆರ್‍ಟಿಓ ಕಚೇರಿ ವ್ಯಾಪ್ತಿ, ಸೋಮವಾರಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಾ.ನಗರ : ವಸತಿ ಯೋಜನೆ ಸೌಲಭ್ಯಕ್ಕೆ ಪ.ಜಾ, ಪ.ಪಂ. ವರ್ಗದವರಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಅ. 22 (ಕರ್ನಾಟಕ ವಾರ್ತೆ):- ಚಾಮರಾಜನಗರ ನಗರಸಭೆಯು ವಸತಿ ರಹಿತರಿಗೆ ವಸತಿ ಕಲ್ಪಿಸುವ ಸಲುವಾಗಿ ವಾಜಪೇಯಿ ವಸತಿ ಯೋಜನೆಯಡಿ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಸತಿ ರಹಿತರಿಂದ ಅರ್ಜಿ ಆಹ್ವಾನಿಸಿದೆ.
ನಗರಸಭೆ ವ್ಯಾಪ್ತಿಯಲ್ಲಿ ವಾಸವಾಗಿದ್ದು ನಿವೇಶನ ಹೊಂದಿರುವ (ನಗರಸಭೆಯಲ್ಲಿ ಖಾತೆ ಹೊಂದಿರುವ)  ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಅಕ್ಟೋಬರ್ 25ರ ಒಳಗೆ ಪಡೆದು ಭರ್ತಿ ಮಾಡಿ ಅಕ್ಟೋಬರ್ 27ರೊಳಗೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕರಡು ಮತದಾರರ ಪಟ್ಟಿ ಪ್ರಕಟ
ಚಾಮರಾಜನಗರ, ಅ. 22 (ಕರ್ನಾಟಕ ವಾರ್ತೆ):- ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ನವೆಂಬರ್ ತಿಂಗಳೊಳಗೆ ಚುನಾವಣೆ ನಡೆಸುವ ಸಂಬಂಧ ಕರಡು ಮತದಾರರ ಪಟ್ಟಿ (ಮತದಾರರ ಪ್ರಾರಂಭಿಕ ಪಟ್ಟಿ) ಯನ್ನು ಆಯಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಎಲ್ಲ ಕೃಷಿಕ ಕ್ಷೇತ್ರಗಳು, ಗ್ರಾಮ ಲೆಕ್ಕಿಗರ ಕಚೇರಿ ಹಾಗೂ ತಾಲೂಕು ತಹಸೀಲ್ದಾರ್ ಕಚೇರಿಯಲ್ಲಿ ಅಕ್ಟೋಬರ್ 20ರಂದು ಸಾರ್ವಜನಿಕರ ಮಾಹಿತಿಗೆ ಪ್ರಚುರಪಡಿಸಲಾಗಿದೆ.
 ಸಂಬಂಧಿಸಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ಯಾವುದೇ ಕ್ಲೈಮು ಅಥವಾ ಯಾವುದೇ ಹೆಸರನ್ನು ಸೇರಿಸಿರುವ ಬಗ್ಗೆ ಆಕ್ಷೇಪಣೆ, ಯಾವುದೇ ನಮೂದಿನಲ್ಲಿರುವ ವಿವರಗಳ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ನವೆಂಬರ್ 20ರೊಳಗೆ ಸಂಬಂಧಪಟ್ಟ ತಹಸೀಲ್ದಾರ್ ಕಚೇರಿಯಲ್ಲಿ ದಾಖಲು ಮಾಡಬಹುದು. ಅಥವಾ ಸೂಚಿಸಲಾಗಿರುವ ದಿನಾಂಕಕ್ಕೆ ಮುಂಚೆ ತಲುಪಿಸಬಹುದೆಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅ. 27ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ
ಚಾಮರಾಜನಗರ, ಅ. 21 (ಕರ್ನಾಟಕ ವಾರ್ತೆ):- ನಾಗರಿಕರ ಕುಂದುಕೊರತೆ, ಸಮಸ್ಯೆ, ಅಹವಾಲು ಆಲಿಸುವ ಸಲುವಾಗಿ ಸಹಕಾರ, ಸಕ್ಕರೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರ ಅಧ್ಯಕ್ಷತೆ ಹಾಗೂ ಇತರೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಅಕ್ಟೋಬರ್ 27ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ.
ಈ ಸಭೆಯಲ್ಲಿ ನಾಗರಿಕರು ತಮ್ಮ ಅಹವಾಲು, ಕುಂದುಕೊರತೆ ಸಮಸ್ಯೆಗಳನ್ನು ಸಲ್ಲಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಜನಸಂಪರ್ಕ ಸಭೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಸತಿ ಯೋಜನೆ ಪ್ರಗತಿ ಸಾಧನೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತಾಕೀತು
ಚಾಮರಾಜನಗರ, ಅ. 22 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ವಸತಿ ಯೋಜನೆಯಡಿ ಇರುವ ವಿವಿಧ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾಂiÀರ್iದರ್ಶಿಗಳಾದ ಶಂಭುದಯಾಳ್ ಮೀನಾ, ತಾಕೀತು ಮಾಡಿದರು.
ನಗರದ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ತಾಲ್ಲೂಕುಗಳಲ್ಲಿ ಇನ್ನೂ 2013-14ನೇ ಸಾಲಿನಡಿ ವಸತಿ ಯೋಜನೆಯಡಿ ಆಯ್ಕೆಯಾಗಿರುವ ಕೆಲ ಫಲಾನುಭವಿಗಳು ಮನೆ ನಿರ್ಮಾಣ ಪೂರ್ಣಗೊಳಿಸಿಲ್ಲ. ಆರಂಭಿಕ ಹಂತದಲ್ಲಿ ಉಳಿದಿರುವ ಈ ಮನೆಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಅಧಿಕಾರಿಗಳು ಈ ಸಂಬಂಧ ಆಯಾ ವ್ಯಾಪ್ತಿಯಲ್ಲಿ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.
ವಸತಿ ಯೋಜನೆ ಪ್ರಗತಿ ಹೆಚ್ಚಳವಾಗಲು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಆಗಾಗ್ಗೆ ಪ್ರಗತಿ ಪರಾಮರ್ಶೆ ಸಭೆ ನಡೆಸಬೇಕು. ಪಂಚಾಯತ್ ಅಭಿವೃಧ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು ವಸತಿ ನಿರ್ಮಾಣ ಪೂರ್ಣವಾಗಲು ನಿಗಾ ವಹಿಸಬೇಕು. ಜಿಲ್ಲಾ ಮಟ್ಟದಲ್ಲಿಯೂ ವಸತಿ ಯೋಜನೆ ನಿಗಧಿತ ಅವಧಿಯೊಳಗೆ ಗುರಿ ಮುಟ್ಟಲು ಸಭೆ ನಡೆಸಬೇಕು ಎಂದು ಶಂಭುದಯಾಳ್ ಮೀನಾ ತಿಳಿಸಿದರು.
ಜಿಲ್ಲೆಯಲ್ಲಿನ ಮೇವು, ಕುಡಿಯುವ ನೀರು, ಕೃಷಿ ಬೆಳೆ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಿದ ಉಸ್ತುವಾರಿ ಕಾರ್ಯದರ್ಶಿರವರು ಮೇವು ಬೆಳೆಗೆ ಉತ್ತೇಜಿಸುವಂತೆ ಸೂಚಿಸಿದರು. ಕುಡಿಯು ನೀರಿಗೆ ಅಭಾವ ತಲೆದೋರದಂತೆ ಇರುವ ಯೋಜನೆಗಳನ್ನು ಪೂರ್ಣಗೊಳಿಸಿ ಜನರು ಜಾನುವಾರುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ಜಿಲ್ಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಬೆಳೆ ಹಾನಿಗೆ ಸಂಬಂಧಿಸಿದಂತೆ ನೀಡಿರುವ ಮಾಹಿತಿಯನ್ನು ಒಳಗೊಂಡ ವರದಿಯನ್ನು ಕಳುಹಿಸಲಾಗಿದೆ. ಬೆಳೆ ಪರಿಹಾರಕ್ಕೆ ರೈತರ ಬ್ಯಾಂಕ್ ಖಾತೆ, ಆಧಾರ್ ವಿವರಗಳನ್ನು ಸಂಗ್ರಹಿಸಲಾಗಿದೆ ಎಂದರು.
ಎಲ್ಲಾ ರೈತರು ಆಧಾರ್ ನೊಂದಣಿ ಮಾಡಿಸಿಕೊಳ್ಳಲು ಅರಿವು ಮೂಡಿಸಬೇಕು. ಎಲ್ಲಾ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಅಗತ್ಯವಿದೆ ಎಂಬ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡಬೇಕು. ಬ್ಯಾಂಕ್ ಖಾತೆಗೆ ಆದಾರ್ ಸಂಖ್ಯೆಯನ್ನು ಜೋಡಣೆ ಮಾಡುವ ಪ್ರಕ್ರಿಯೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಶಂಭುದಯಾಳ್ ಮೀನಾ ತಿಳಿಸಿದರು.
ಇನ್ನಿತರ ಇಲಾಖೆ ಕಾರ್ಯಕ್ರಮಗಳ ಕುರಿತು ಪ್ರಗತಿ ಪರಿಶೀಲಿಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ, ಉಪ ಕಾರ್ಯದರ್ಶಿ ಮುನಿರಾಜಪ್ಪ, ಜಿಲ್ಲಾ ಮಟ್ಟದ ಉಪ ವಿಭಾಗಾಧಿಕಾರಿ ಕವಿತಾ ರಾಜಾರಾಂ, ತಹಶೀಲ್ದಾರರಾದ ಪುರಂದರ, ಚಂದ್ರಮೌಳಿ, ಸಿದ್ದು, ಮಹೇಶ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಡಿಸೆಂಬರ್ ಅಂತ್ಯದೊಳಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಪೂರ್ಣಗೊಳಿಸಲು ಉಸ್ತುವಾರಿ ಸಚಿವರ ಸೂಚನೆ  
ಚಾಮರಾಜನಗರ, ಅ. 24 (ಕರ್ನಾಟಕ ವಾರ್ತೆ):- ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ಹಳ್ಳಿಗಳಿಗೆ ನದಿಮೂಲದಿಂದ ಶಾಶ್ವತವಾಗಿ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೀರು ಸಮಸ್ಯೆಯನ್ನು ನೀಗಿಸಲು ಅನುಷ್ಟಾವಾಗುತ್ತಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಬಹುಗ್ರಾಮ ಕುಡಿಯುವ ನೀರು ಯೋಜನೆ ಪೂರ್ಣಗೊಂಡರೆ ಚಾಮರಾಜನಗರ, ಗುಂಡ್ಲುಪೇಟೆ ಭಾಗದ ಗ್ರಾಮಗಳಿಗೆ ಕುಡಿಯುವ ನೀರು ಸಮಸ್ಯೆ ಪರಿಹಾರವಾಗಲಿದೆ. ಉಳಿದ ಭಾಗಗಳಲ್ಲಿಯು ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು ಯೋಜನೆಗಳನ್ನು ಅನುಷ್ಠಾನ ಮಾಡಬೇಕೆಂದು ಸಚಿವರು ತಿಳಿಸಿದರು.
ಅಭಾವ ಪರಿಸ್ಥಿತಿ ಇರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರು, ಮೇವು ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕಿದೆ. ಮೇವು ಬೆಳೆಯಲು ನೀರಿನ ಅನುಕೂಲ ಹಾಗೂ ಸಿಬ್ಬಂದಿಯಿರುವ ಫಾರಂಗಳನ್ನು ಗುರುತಿಸಬೇಕು. ಮೇವು ಲಭ್ಯವಿರುವುದನ್ನು ವೀಕ್ಷಿಸಲು ಅಧಿಕಾರಿಗಳು ಕ್ಷೇತ್ರಪ್ರವಾಸ ಮಾಡಬೇಕು. ಎಲ್ಲಿ ಮೇವು ಲಭ್ಯವಿದೆಯೋ ಅಲ್ಲಿ ಖರೀದಿಸಿ ಅಭಾವ ಪರಿಸ್ಥಿತಿಯಲ್ಲಿ ವಿತರಿಸಬೇಕು ಎಂದರು.
ವಸತಿ ಯೋಜನೆಗಳಿಗೆ ಅಗತ್ಯವರುವ ನಿವೇಶನ ದೊರಕಿಸಿಕೊಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆ ಕರೆದು ಅಗತ್ಯ ಮಾರ್ಗದರ್ಶನ ಮಾಡಬೇಕು. ಸರ್ಕಾರಿ ಜಮೀನು, ಗ್ರಾಮಠಾಣಾಗಳನ್ನು ಪರಿಶೀಲಿಸಬೇಕು. ಖಾಸಗಿ ಜಮೀನು ಖರೀದಿಸಿಯಾದರೂ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ಸಚಿವರು ತಿಳಿಸಿದರು.
ಹಾಸ್ಟಲ್, ಶಾಲೆ, ಕಾಲೇಜು, ಅಂಗನವಾಡಿ, ಸಮುದಾಯ ಭವನಗಳು, ಪ್ರವಾಸೋದ್ಯಮ ಚಟುವಟಿಕೆಗಳಿಗೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡುವ ಪ್ರಕ್ರಿಯೆಗೆ ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಜಮೀನು ಲಭ್ಯತೆಯಲ್ಲ ಎಂಬ ಕಾರಣಕ್ಕೆ ಯಾವುದೇ ಅಭಿವೃದ್ಧಿ ಕಾಮಗಾರಿ ಮುಂದೂಡಬಾರದು. ಅಧಿಕಾರಿಗಳು ಕಾರ್ಯಕ್ರಮ ಅನುಷ್ಠಾನಕ್ಕೆ ತೊಡಕು ಕಂಡುಬಂದಲ್ಲಿ ತಮ್ಮನ್ನು ಸೇರಿದಂತೆ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಎಂದರು.
ಗ್ರಾಮಗಳಲ್ಲಿಯೂ ಅಕ್ರಮ ಮದ್ಯ ಮಾರಾಟವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಇದಕ್ಕೆ ಅವಕಾಶ ನೀಡಬಾರದು ಎಂದು ಸಚಿವರು ಸೂಚಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಆರ್. ನರೇಂದ್ರ ಅವರು ವೈನ್‍ಸ್ಟೋರ್‍ಗಳಿಂದಲೇ ಗ್ರಾಮಗಳ ಪೆಟ್ಟಿಗೆ ಅಂಗಡಿಗಳಿಗೆ ಮದ್ಯ ಸರಬರಾಜು ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಸಬೇಕು ಎಂದರು.
ಜಿಲ್ಲಾಧಿಕಾರಿ ಬಿ. ರಾಮು ಪ್ರತಿಕ್ರಿಯಿಸಿ ಶೀಘ್ರದಲ್ಲೇ ವೈನ್‍ಸ್ಟೋರ್ ಮಾಲೀಕರು ಹಾಗೂ ಅಧಿಕಾರಿಗಳ ಸಭೆ ಕರೆದು ಅಕ್ರಮವಾಗಿ ಮದ್ಯ ಸರಬರಾಜು ಹಾಗೂ ಮಾರಾಟ ಮಾಡದಿರಲು ಸೂಚಿಸುವುದಾಗಿ ತಿಳಿಸಿದರು.
ವಿವಿಧ ಇಲಾಖೆಗಳ ಪ್ರಗತಿಯನ್ನು ಸುದೀರ್ಘ ಅವಧಿಯಲ್ಲಿ ಉಸ್ತುವಾರಿ ಸಚಿವರು ಪರಿಶೀಲಿಸಿದರು.
ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎಸ್. ಜಯಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಉಪಾಧ್ಯಕ್ಷರಾದ ಎಸ್. ಬಸವರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್. ಜೈನ್, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಚಂದ್ರಶೇಖರ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಸದಾಶಿವಮೂರ್ತಿ, ಬಿ.ಕೆ. ಬೊಮ್ಮಯ್ಯ, ಕೆರೆಹಳ್ಳಿ ನವೀನ್ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಅಕ್ಟೋಬರ್ 25ರಂದು ಹೆಣ್ಣುಮಕ್ಕಳ ರಕ್ಷಣೆ ಕುರಿತ ಅರಿವು ಕಾರ್ಯಕ್ರಮ  
ಚಾಮರಾಜನಗರ, ಅ. 24 (ಕರ್ನಾಟಕ ವಾರ್ತೆ):-  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾಧನಾ ಸಂಸ್ಥೆ ಆಶ್ರಯದಲ್ಲಿ ಹೆಣ್ಣುಮಕ್ಕಳ ರಕ್ಷಣೆ ಕುರಿತ ಅರಿವು ಕಾರ್ಯಕ್ರಮವನ್ನು ನಗರದ ಜಿಲ್ಲಾ ನ್ಯಾಯಾಲಯ ಅವರಣದಲ್ಲಿರುವ ವ್ಯಾಜ್ಯಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಅಕ್ಟೋಬರ್ 25ರಂದು ಬೆಳಿಗ್ಗೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್, ಮಳವಳ್ಳಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್. ವಿರೂಪಾಕ್ಷ ಅಧ್ಯಕ್ಷತೆ ವಹಿಸುವರು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಎಂ. ಭೃಂಗೇಶ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್, ಡಿ. ರಾಘವೇಂದ್ರ, ದೀಪಾ, ಜಿಲ್ಲಾ ಸರ್ಕಾರಿ ವಕೀಲರಾದ ಎಚ್.ಎನ್. ಲೋಕೇಶ್, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಸರ್ವೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಂ. ರಶ್ಮಿ, ಬಾಲಕಿಯರ ಬಾಲಮಂದಿರದ ಅಧ್ಯಕ್ಷರಾದ ಟಿ.ಜೆ. ಸುರೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.


ಅ. 26ರಂದು ಚಂದಕವಾಡಿಯಲ್ಲಿ ಜನಸಂಪರ್ಕ ಸಭೆ
ಚಾಮರಾಜನಗರ, ಅ. 25 (ಕರ್ನಾಟಕ ವಾರ್ತೆ):- ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 26ರಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರ ತಾಲೂಕಿನ ಚಂದಕವಾಡಿ ಹೋಬಳಿ ನಾಡಕಚೇರಿ ಆವರಣದಲ್ಲಿ ಜನಸಂಪರ್ಕ ಸಭೆ ನಡೆಯಲಿದೆ.
ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಜನಸಂಪರ್ಕ ಸಭೆಯ ಸದುಪಯೋಗ ಮಾಡಿಕೊಳ್ಳುವಂತೆ ತಾಲೂಕು ತಹಸೀಲ್ದಾರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಅ. 27ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ
ಚಾಮರಾಜನಗರ, ಅ. 25 (ಕರ್ನಾಟಕ ವಾರ್ತೆ):- ನಾಗರಿಕರ ಕುಂದುಕೊರತೆ, ಸಮಸ್ಯೆ, ಅಹವಾಲು ಆಲಿಸುವ ಸಲುವಾಗಿ ಸಹಕಾರ, ಸಕ್ಕರೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರ ಅಧ್ಯಕ್ಷತೆ ಹಾಗೂ ಇತರೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಅಕ್ಟೋಬರ್ 27ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ.
ಈ ಸಭೆಯಲ್ಲಿ ನಾಗರಿಕರು ತಮ್ಮ ಅಹವಾಲು, ಕುಂದುಕೊರತೆ ಸಮಸ್ಯೆಗಳನ್ನು ಸಲ್ಲಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಜನಸಂಪರ್ಕ ಸಭೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಕೌಟ್ ಮಾಸ್ಟರ್ ಲಾಜರ್ ನಿಧನಕ್ಕೆ ಶ್ರದ್ಧಾಂಜಲಿ
ಚಾಮರಾಜನಗರ, ಅ. 25 (ಕರ್ನಾಟಕ ವಾರ್ತೆ):- ಇತ್ತೀಚೆಗೆ ನಡೆದ ಅಪಘಾತದಲ್ಲಿ ಮೃತಪಟ್ಟ ಸ್ಕೌಟ್ ಮಾಸ್ಟರ್ ಹಾಗೂ ಕೊಳ್ಳೇಗಾಲ ಪ್ರಕಾಶ್ ಪಾಳ್ಯದ ಹಿರಿಯ ಪ್ರಾಥಮಿಕ ಶಾಲೆಯ ಎ. ಲಾಜರ್ ಅವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯು ಶ್ರದ್ಧಾಂಜಲಿ ಸಲ್ಲಿಸಿದೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯು ನಗರದ ಕೇಂದ್ರ ಕಚೇರಿಯಲ್ಲಿ ಲಾಜರ್ ಅವರ ನಿಧನಕ್ಕೆ ಒಂದು ನಿಮಿಷಗಳ ಮೌನ ಆಚರಿಸುವ ಮೂಲಕ ಗೌರವ ಸಲ್ಲಿಸಿತು. ಜಿಲ್ಲಾ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಜಿ.ಆರ್. ಅಶ್ವತ್ ನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲಾಜರ್ ಅವರ ಸೇವೆಯನ್ನು ಸ್ಮರಿಸಲಾಯಿತು.
ಶಿಸ್ತು, ಸಮಯಪಾಲನೆ, ಬಡವರಿಗೆ ಧನಸಹಾಯ, ಸ್ಕೌಟ್ ಮಕ್ಕಳಿಗೆ ಉಚಿತ ಸಮವಸ್ತ್ರ ಇನ್ನಿತರ ಸಲಕರಣೆಗಳನ್ನು ಒದಗಿಸುವಲ್ಲಿ ಅಪಾರ ಕಾಳಜಿ ತೋರುತ್ತಿದ್ದರು. ರಾಜ್ಯ ಹಾಗೂ ಜಿಲ್ಲಾ ಜಾಂಬೂರಿ ರ್ಯಾಲಿಗಳಲ್ಲಿ ನಾಯಕತ್ವ ವಹಿಸಿ ಜಿಲ್ಲಾ ಸಂಸ್ಥೆಗೆ ಕೀರ್ತಿ ತಂದಿದ್ದರೆಂದು ಸಂಸ್ಥೆಯ ಪ್ರತಿನಿಧಿಗಳು ಸ್ಮರಿಸಿದರು.
ಲಾಜರ್ ಅವರ ಅಗಲಿಕೆ ನೋವನ್ನು ಅವರ ಕುಟುಂಬದ ಸದಸ್ಯರು ಹಾಗೂ ಬಳಗದವರು ಹಾಗೂ ಸ್ನೇಹಿತರಿಗೆ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಸಭೆಯಲ್ಲಿ ಪ್ರತಿನಿಧಿಗಳು ವ್ಯಕ್ತಪಡಿಸಿದರು.
ಜಿಲ್ಲಾ ಸ್ಕೌಟ್ ಆಯುಕ್ತರಾದ ಮಲ್ಲಿಕಾರ್ಜುನಸ್ವಾಮಿ, ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಯಳಂದೂರು : ವಸತಿ ಯೋಜನೆ ಪ್ರಯೋಜನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಅ. 25 (ಕರ್ನಾಟಕ ವಾರ್ತೆ):- ಯಳಂದೂರು ಪಟ್ಟಣ ಪಂಚಾಯಿತಿಯು ವಾಜಪೇಯಿ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ನೀಡಲಾಗುವ ಆರ್ಥಿಕ ನೆರವಿಗೆ ಅರ್ಜಿ ಆಹ್ವಾನಿಸಿದೆ.
ಒಟ್ಟು 1.20 ಲಕ್ಷ ರೂ.ಗಳನ್ನು ಮನೆ ನಿರ್ಮಾಣ ವೆಚ್ಚಕ್ಕೆ ನೀಡಲಾಗುತ್ತದೆ. ಪರಿಶಿಷ್ಟ ಜಾತಿಗೆ 37, ಪರಿಶಿಷ್ಟ ಪಂಗಡದವರಿಗೆ 46, ಅಲ್ಪಸಂಖ್ಯಾತರಿಗೆ 1 ಹಾಗೂ ಸಾಮಾನ್ಯ ವರ್ಗದವರಿಗೆ 5 ಮನೆ ನಿರ್ಮಾಣ ಗುರಿ ನಿಗದಿ ಮಾಡಲಾಗಿದೆ.
ಅರ್ಜಿದಾರರು ಸ್ವಂತ ನಿವೇಶನ ಹೊಂದಿರಬೇಕು. ಸಂಬಂಧಿಸಿದ ಖಾತಾ ಹಕ್ಕುಪತ್ರ ಹೊಂದಿರಬೇಕು. ಅರ್ಜಿಯೊಂದಿಗೆ ಜಾತಿ, ಆದಾಯ ಪ್ರಮಾಣ ಪತ್ರ, ಬಿಪಿಎಲ್ ಪಡಿತರ ಚೀಟಿ, ವಾಸಸ್ಥಳ ದೃಢೀಕರಣ ಪತ್ರ ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ನವೆಂಬರ್ 5ರೊಳಗೆ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಪಟ್ಟಣ ಪಂಚಾಯಿತಿ ಕಾರ್ಯಾಲಯ ಸಂಪರ್ಕಿಸುವಂತೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಕಲಚೇತನರ ಕ್ಷೇತ್ರದ ಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಅ. 25 (ಕರ್ನಾಟಕ ವಾರ್ತೆ):- ವಿಕಲಚೇತನರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿ, ಸ್ವಯಂಸೇವಾಸಂಸ್ಥೆ ಹಾಗೂ ವಿಶೇಷ ಶಾಲೆಗಳಲ್ಲಿ 15 ವರ್ಷಗಳಿಗೈ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವವರು ಹಾಗೂ ಶಿಕ್ಷಕರಿಗೆ ನೀಡಲಾಗುವ ರಾಜ್ಯಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆಯನ್ನು ವೆಬ್ ಸೈಟ್ ತಿತಿತಿ.ತಿeಟಜಿಚಿಡಿeoಜಿಜisಚಿbಟeಜ.ಞಚಿಡಿ.ಟಿiಛಿ.iಟಿ ನಲ್ಲಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕಚೇರಿಗೆ ಅಕ್ಟೋಬರ್ 28ರೊಳಗೆ ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ. 08226-223688 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಅ. 27ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ
ಚಾಮರಾಜನಗರ, ಅ. 26 (ಕರ್ನಾಟಕ ವಾರ್ತೆ):- ನಾಗರಿಕರ ಕುಂದುಕೊರತೆ, ಸಮಸ್ಯೆ, ಅಹವಾಲು ಆಲಿಸುವ ಸಲುವಾಗಿ ಸಹಕಾರ, ಸಕ್ಕರೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರ ಅಧ್ಯಕ್ಷತೆ ಹಾಗೂ ಇತರೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಅಕ್ಟೋಬರ್ 27ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ.
ಈ ಸಭೆಯಲ್ಲಿ ನಾಗರಿಕರು ತಮ್ಮ ಅಹವಾಲು, ಕುಂದುಕೊರತೆ ಸಮಸ್ಯೆಗಳನ್ನು ಸಲ್ಲಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಜನಸಂಪರ್ಕ ಸಭೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ. 27ರಂದು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಗುದ್ದಲಿ ಪೂಜೆ
ಚಾಮರಾಜನಗರ, ಅ. 26 (ಕರ್ನಾಟಕ ವಾರ್ತೆ):- ರಾಷ್ಟ್ರೀಯ ಹೆದ್ದಾರಿ 209ಕ್ಕೆ ಸಂಬಂಧಪಟ್ಟ ರಸ್ತೆ ಅಗಲೀಕರಣ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮವು ಅಕ್ಟೋಬರ್ 27ರಂದು ಬೆಳಿಗ್ಗೆ 10 ಗಂಟೆಗೆ ಯಳಂದೂರು ಪಟ್ಟಣದಲ್ಲಿ ಹಾಗೂ ಮಧ್ಯಾಹ್ನ 12 ಗಂಟೆಗೆ ಚಾಮರಾಜನಗರ ಪಟ್ಟಣದಲ್ಲಿ ನಡೆಯಲಿದೆ.
ಲೋಕೋಪಯೋಗಿ ಸಚಿವರಾದ ಎಚ್.ಸಿ. ಮಹದೇವಪ್ಪ, ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಜಿಲ್ಲೆಯ ಶಾಸಕರು, ಇತರೆ ಜನಪ್ರತಿನಿಧಿಗಳು ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.

ನ. 1ರಂದು ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ
ಚಾಮರಾಜನಗರ, ಅ. 26 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ನವೆಂಬರ್ 1ರಂದು ಬೆಳಿಗ್ಗೆ 9 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಧ್ವಜಾರೋಹಣ ನೆರವೇರಿಸುವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ನಗರಸಭೆ ಅಧ್ಯಕ್ಷರಾದ ಎಸ್. ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫೀ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
 ಅಂದು ಸಂಜೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನÀದ ಮುಂಭಾಗದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 5.30ರಿಂದ 6.30 ಗಂಟೆಯವರೆಗೆ ಸಿ.ಎಂ ನರಸಿಂಹಮೂರ್ತಿ ಮತ್ತು ತಂಡದವರು ಕನ್ನಡ ಗೀತೆಗಳ ಗಾಯನ ಪ್ರಸ್ತುತಪಡಿಸಲಿದ್ದಾರೆ. 6.30 ರಿಂದ 7.30 ಗಂಟೆಯವರೆಗೆ ವಿವಿಧ ಶಾಲಾ ಕಾಲೇಜು ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. 7.30 ರಿಂದ 8.30 ಗಂಟೆಯವರೆಗೆ ಚಾಮರಾಜನಗರದ ಕಲಾಸರಸ್ವತಿ ನಾಟ್ಯ ಸಂಸ್ಥೆಯ ಕಲಾವಿದರು ಅಕ್ಷತಾ ಎಸ್ ಜೈನ್ ನಿರ್ದೇಶನದಲ್ಲಿ ಕನ್ನಡ ವೈಭವ ಎಂಬ ನೃತ್ಯರೂಪಕ ಪ್ರಸ್ತುತಪಡಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.



ಅ. 28ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ  ಕುರಿತ ಅರಿವು ಕಾರ್ಯಕ್ರಮ  
ಚಾಮರಾಜನಗರ, ಅ. 26 (ಕರ್ನಾಟಕ ವಾರ್ತೆ):-  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕುರಿತ ಅರಿವು ಕಾರ್ಯಕ್ರಮವನ್ನು ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಅಕ್ಟೋಬರ್ 28ರಂದು ಬೆಳಿಗ್ಗೆ 10.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್, ಮಳವಳ್ಳಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಎಚ್. ಪ್ರಸಾದ್ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಅನಿಲ್ ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್. ವಿರೂಪಾಕ್ಷ, ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ. ನಾಗರಾಜ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಂದ್ರ, ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ. ಜನಾರ್ಧನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ನಗರದÀ ಜಿಲ್ಲಾ ಆಸ್ಪತ್ರೆಯ ಮನೋತಜ್ಞರಾದ ಡಾ. ರಾಜೇಶ್ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಸಿ. ರಾಜು ಅವರು ಮಾನಸಿಕ ಆರೋಗ್ಯದ ಕುರಿತು ಉಪನ್ಯಾಸ ನೀಡುವರೆಂದು ಪ್ರಕಟಣೆ ತಿಳಿಸಿದೆ.


ಕೊಳ್ಳೇಗಾಲ : ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಅ. 26 (ಕರ್ನಾಟಕ ವಾರ್ತೆ):- ಕೊಳ್ಳೇಗಾಲ ನಗರಸಭೆಯು 2016-17ನೇ ಸಾಲಿನ ಶೇ.24.10, ಶೇ. 7.25 ಹಾಗೂ ಶೇ.3ರ ಎಸ್ ಎಫ್ ಸಿ ಮುಕ್ತನಿಧಿ, ನಗರಸಭಾ ಅನುದಾನದಡಿ ನೀಡಲಿರುವ ವಿವಿಧ ಸೌಲಭ್ಯಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ವಿಕಲಚೇತನರಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿಯನ್ನು ನವೆಂಬರ್ 15 ವಿತರಿಸಲಾಗುತ್ತದೆ. ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ನವೆಂಬರ್ 21 ಕಡೆಯ ದಿನವಾಗಿದೆ. ಅರ್ಜಿಯೊಂದಿಗೆ ಸಲ್ಲಿಸಲಾಗುವ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಬೇಕಿದೆ. ಹೆಚ್ಚಿನ ಮಾಹಿತಿಗೆ ನಗರಸಭೆ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕುಡಿಯುವ ನೀರು, ಮೇವು ಪೂರೈಕೆಗೆ ಆದ್ಯತೆ : ಸಿ. ಪುಟ್ಟರಂಗಶೆಟ್ಟಿ
ಚಾಮರಾಜನಗರ, ಅ. 26 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು ಹಾಗೂ ಮೇವು ಪೂರೈಕೆಗೆ ಆದ್ಯತೆ ನೀಡಲಾಗುವುದೆಂದು ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ತಾಲೂಕಿನ ಚಂದಕವಾಡಿ ಹೋಬಳಿ ನಾಡಕಚೇರಿ ಆವರಣದಲ್ಲಿ ಇಂದು ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿಯೂ ಅಭಾವ ಪರಿಸ್ಥಿತಿ ಎಲ್ಲೆಡೆ ಇದೆ. ಹೀಗಾಗಿ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು. ಜಾನುವಾರುಗಳಿಗೆ ಮೇವು ಕೊರತೆ ಉಂಟಾಗದಂತೆ ನೋಡಿಕೊಳ್ಳುವ ಸಲುವಾಗಿ ಮೇವು ಖರೀದಿ ಪ್ರಕ್ರಿಯೆಯನ್ನು ಸಹ ನಡೆಸಲಾಗುತ್ತದೆ. ಗೋಶಾಲೆ ಪ್ರಾರಂಭಕ್ಕೂ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಶಾಸಕರು ತಿಳಿಸಿದರು.
ಚಂದಕವಾಡಿ ಹೋಬಳಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಚಂದಕವಾಡಿ, ಕೋಡಿಮೋಳೆ, ನಲ್ಲೂರು ಹಾಗೂ ನಾಗವಳ್ಳಿಯಲ್ಲಿ ರಸ್ತೆ ಬದಿಯಲ್ಲಿ ಬಾಕ್ಸ್ ಚರಂಡಿಗಳನ್ನು ಸಹ ನಿರ್ಮಾಣ ಮಾಡಲಾಗುತ್ತದೆ. ಚಂದಕವಾಡಿ ಸೇತುವೆ ಪುನಶ್ಚೇತನ ಕಾಮಗಾರಿಯನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ತಾಲೂಕಿನಲ್ಲಿ 150 ರಿಂದ 160 ಅರ್ಹ ಫಲಾನುಭವಿಗಳಿಗೆ ಬಗರ್ ಹುಕುಂ ಸಾಗುವಳಿಯಡಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ವಿವಿಧ ನಿಗಮಗಳಿಗೆ ಸಾಲಸೌಲಭ್ಯ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಆಯ್ಕೆ ಪ್ರಕ್ರಿಯೆ ಕೈಗೊಂಡು ಸವಲತ್ತುಗಳನ್ನು ಪಡೆಯಲು ಅನುಕೂಲ ಕಲ್ಪಿಸಲಾಗುವುದು ಎಂದು ಪುಟ್ಟರಂಗ ಶೆಟ್ಟಿ ಅವರು ತಿಳಿಸಿದರು.
ಪಡಿತರ ವಿತರಣೆಯಲ್ಲಿ ಲೋಪವಾಗುತ್ತಿದೆ ಎಂಬ ಬಗ್ಗೆ ಸಭೆಯಲ್ಲಿ ಸಾಕಷ್ಟು ದೂರುಗಳು ವ್ಯಕ್ತವಾಗಿವೆ. ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ವಿಚಕ್ಷಣಾ ದಳ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರೆ ಪಡಿತರ ವ್ಯವಸ್ಥೆಯನ್ನು ಸುಧಾರಿಸಬಹುದು. ಈ ಬಗ್ಗೆ ಸ್ಥಳೀಯವಾಗಿ ಪರಿಣಾಮಕಾರಿಯಾಗಿ ಕಾರ್ಯೋನ್ಮುಖರಾಗಬೇಕೆಂದು ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ ಮಾತನಾಡಿ ವೈದ್ಯರು ಹಾಗೂ ನರ್ಸ್ ಹುದ್ದೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರು ಹಾಗೂ ನರ್ಸ್ ಹುದ್ದೆಗಳಿಗೆ ನಿಯೋಜನೆ ಮಾಡುವ ಮೂಲಕ ಅನುಕೂಲ ಕಲ್ಪಿಸಿಕೊಡಲಾಗುತ್ತದೆ ಎಂದರು.
ಜನರ ಬಳಿಗೆ ತೆರಳಿ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗುತ್ತದೆ. ಸಭೆಯಲ್ಲಿ ಕೇಳಿಬರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಲು  ಕಾರ್ಯೋನ್ಮುಖರಾಗಲಿದ್ದೇವೆ. ಜನತೆ ಜನಸಂಪರ್ಕ ಸಭೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸದಾಶಿವಮೂರ್ತಿ ಸಲಹೆ ಮಾಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು ಜಿಲ್ಲೆಯಲ್ಲಿ ಇಲಾಖೆ ಅಧಿಕಾರಿಗಳು ಸರ್ಕಾರದ ಯೋಜನೆ ಸೌಲಭ್ಯವನ್ನು ಸಕಾಲದಲ್ಲಿ ತಲುಪಿಸಬೇಕು. ಮನಸ್ವಿನಿ ಸೇರಿದಂತೆ ಇತರೆ ಫಲಾನುಭವಿಗಳಿಗೆ ನೀಡಲಾಗುವ ಮಾಸಿಕ ವೇತನ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ ಪ್ರಯೋಜನ ಪಡೆಯಲು ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಹೆಚ್ಚಿನ ಪರಿಶ್ರಮ ವಹಿಸಿದರೆ ಜನರ ಸಮಸ್ಯೆಗಳು ಶೀಘ್ರ ಪರಿಹಾರವಾಗಲಿದೆ ಎಂದರು.
ಜನಸಂಪರ್ಕ ಸಭೆಯಲ್ಲಿ ಪಡಿತರ ವಿತರಣೆ, ವಿದ್ಯಾರ್ಥಿ ವೇತನ, ಮರಳು ಅಭಾವ, ಅಂಗನವಾಡಿ ಕಟ್ಟಡ, ಅಂತ್ಯಸಂಸ್ಕಾರ ನೆರವು, ರಸ್ತೆ, ಒಳಚರಂಡಿ ಸೇರಿದಂತೆ ನಾನಾ ಸಮಸ್ಯೆಗಳನ್ನು ಗ್ರಾಮಸ್ಥರು ಪ್ರಸ್ತಾಪಿಸಿದರು. ಲಿಖಿತ ಅರ್ಜಿಗಳನ್ನು ಸಹ ಶಾಸಕರಿಗೆ ಸಲ್ಲಿಸಿದರು.
ತಾಲೂಕು ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಸದಸ್ಯರಾದ ಮಹದೇವಸ್ವಾಮಿ, ಕುಮಾರನಾಯಕ, ಶೈಲಜ, ಮಾವು ಅಭಿವೃದ್ಧಿ ನಿಗಮದ ನಿರ್ದೇಶಕರಾದ ಬಿ.ಕೆ. ರವಿಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿದ್ದಪ್ಪಾಜಿ, ಶಿವಮ್ಮ, ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ, ತಹಸೀಲ್ದಾರ್ ಪುರಂಧರ, ಉಪತಹಸೀಲ್ದಾರ್ ಶಂಕರರಾವ್, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವಣ್ಣ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಅಕ್ಟೋಬರ್ 27, ನವೆಂಬರ್ 1ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ ಅ 26(ಕರ್ನಾಟಕ ವಾತೆ) ಸಹಕಾರ ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉsಸ್ತುವಾರಿ ಸಚಿವರಾದ ಹೆಚ್.ಎಸ್.ಮಹದೇವ ಪ್ರಸಾದ್ ಅವರು ಅಕ್ಟೋಬರ್ 27 ಹಾಗೂ ನವೆಂಬರ್ 1ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಕ್ಟೋಬರ್ 27ರಂದು ಬೆಳಿಗ್ಗೆ 10.30 ಗಂಟೆಗೆ ಯಳಂದೂರಿಗೆ ಆಗಮಿಸಿ ರಾಷ್ಟ್ರೀಯ ಹೆದ್ದಾರಿ 209 ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳುವರು. ಮಧ್ಯಾಹ್ನ 12.30 ಗಂಟೆಗೆ ನಗರಕ್ಕೆ ಆಗಮಿಸಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ನಗರದಲ್ಲಿ ಜಿಲ್ಲಾ ಮಟ್ಟದ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳುವರು. ಸಂಜೆ 5 ಗಂಟೆಗೆ ಮೈಸೂರಿಗೆ ತೆರಳುವರು.

ನವೆಂಬರ್ 1ರಂದು ಬೆಳಿಗ್ಗೆ ಚಾಮರಾಜನಗರಕ್ಕೆ ಆಗಮಿಸಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳುವರು. ಮಧ್ಯಾಹ್ನ 2 ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ಆಪ್ತ ಕಾರ್ಯದರ್ಶಿಯವರು ತಿಳಿಸಿದ್ದಾರೆ.

ಅಕ್ಟೋಬರ್ 27 ಲೊಕೋಪಯೋಗಿ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ ಅ 26(ಕರ್ನಾಟಕ ವಾತೆ) ಲೊಕೋಪಯೋಗಿ ಸಚಿವರಾದ ಡಾ: ಹೆಚ್ ಸಿ ಮಹದೇವಪ್ಪ ಅಕ್ಟೋಬರ್ 27 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಕ್ಟೋಬರ್ 27ರಂದು ಬೆಳಿಗ್ಗೆ 11.30 ಗಂಟೆಗೆ ಯಳಂದೂರಿಗೆ ಆಗಮಿಸಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಳುವರು ಮಧ್ಯಾಹ್ನ 1.30 ಗಂಟೆಗೆ ನಗರಕ್ಕೆ ಆಗಮಿಸಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡುವÀ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 2.15 ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ಆಪ್ತ ಕಾರ್ಯದರ್ಶಿಯವರು ತಿಳಿಸಿದ್ದಾರೆ.




ಚಾಮರಾಜನಗರ ಯಳಂದೂರು ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಚಾಲನೆ
ಚಾಮರಾಜನಗರ/ಯಳಂದೂರು ಅ.27 (ಕರ್ನಾಟಕ ವಾರ್ತೆ)- ಚಾಮರಾಜನಗರ ಜಿಲ್ಲಾ ಕೇಂದ್ರ ಹಾಗೂ ಯಳಂದೂರು ಪಟ್ಟಣ ಪರಿಮಿತಿಯ ರಾಷ್ಟ್ರೀಯ ಹೆದ್ದಾರಿ 209 ವಿಸ್ತರಣೆ ಮತ್ತು ಅಭಿವೃದ್ದಿ ಕಾಮಗಾರಿಗೆ ಇಂದು ಚಾಲನೆ ದೊರೆಯಿತು.
ಲೋಕೋಪಯೋಗಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಚಾಮರಾಜನಗರ ಹಾಗೂ ಯಳಂದೂರು ಪಟ್ಟಣದಲ್ಲಿ ಹೆದ್ದಾರಿ ವಿಸ್ತರಣೆಗೆ ಗುದ್ದಲಿಪೂಜೆ ನೆರವೇರಿಸಿದರು.
ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವರಾದ ಮಹದೇವಪ್ಪ ಅವರು ಚಾಮರಾಜನಗರದಿಂದ ಗುಂಡ್ಲುಪೇಟೆ ವರೆಗಿನ 35 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವ ಸಂಭಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಗುಂಡ್ಲುಪೇಟೆ ಯಲ್ಲಿನ ರಾಷ್ಟ್ರೀಯ ಹೆದ್ದಾರಿಯನ್ನು  ಸಂಪರ್ಕಿಸಲಾಗುತ್ತದೆ. ಈ ಕಾರ್ಯದಿಂದ ವಾಣಿಜ್ಯ ಉದ್ಯಮ ವಹಿವಾಟು ಮತ್ತು ಪ್ರವಾಸೋಧ್ಯಮಕ್ಕೆ  ಅನುಕೂಲವಾಗುತ್ತದೆ ಎಂದರು.
ಸರ್ಕಾರ ರಾಜ್ಯದಲ್ಲಿ 10 ಸಾವಿರಕ್ಕು ಹೆಚ್ಚು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಿದೆ.  12 ಸಾವಿರ ಕಿ.ಮೀ. ಹೆಚ್ಚು ರಸ್ತೆಯನ್ನು ಅಭಿವೃದ್ದಿ ಪಡಿಸಲಾಗಿದೆ. ಇನ್ನು 20 ಸಾವಿರ ಕಿ.ಮೀ. ರಸ್ತೆಯನ್ನು ಅಭಿವೃದ್ದಿ ಪಡಿಸಲಾಗುತ್ತದೆ ಎಂದರು.
ಚಾಮರಾಜನಗರ ಪಟ್ಟಣದ ಬಿ.ರಾಚಯ್ಯ ಜೋಡಿರಸ್ತೆಯನ್ನು 100 ಅಡಿ ರಸ್ತೆಯನ್ನಾಗಿ ಅಭಿವೃದ್ದಿ ಪಡಿಸುವ ಕ್ರಿಯಾ ಯೋಜನೆಗೆ ಇಲಾಖೆಯಿಂದ ತ್ವರಿತವಾಗಿ ಅನುಮೋದನೆ ನೀಡಲಾಗುವುದು. ಜಿಲ್ಲಾ ಆಡಳಿತ ಭವನದ ಆವರಣದಲ್ಲಿರುವ ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಗೋಪುರ ನಿರ್ಮಾಣ ಮಾಡುವಂತೆಯು ಪ್ರಸ್ತಾವನೆ ಬಂದಿದೆ ಈ ಕುರಿತು ಸಹ ಕ್ರಮ ವಹಿಸಲಾಗುವುದು ಎಂದು ಮಹದೇವಪ್ಪ ತಿಳಿಸಿದರು.
ಸಹಕಾರ ಸಕ್ಕರೆ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್.ಮಹದೇವಪ್ರಸಾದ್ ಮಾತನಾಡಿ, ರಾಜ್ಯ ಸರ್ಕಾರ ರಸ್ತೆ ಅಭಿವೃದ್ದಿಗೆ ಹೆಚ್ಚು ಗಮನ ನೀಡಿದೆ. ಜಿಲ್ಲೆಯಲ್ಲಿ 150 ಕಿ.ಮೀ. ರಾಜ್ಯ ಹೆದ್ದಾರಿ ರಸ್ತೆಯನ್ನು 100 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗಿದೆ. ಲೋಕೋಪಯೋಗಿ ಇಲಾಖೆಯು 85 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ 209ರ ವಿಸ್ತರಣೆಯಿಂದಾಗಿ ವಸತಿ ಕಳೆದುಕೊಳ್ಳಲಿರುವ ಜನರಿಗೆ ಯಡಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಬಳಿ ನಿವೇಶನ ನೀಡಿ 3.65 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುತ್ತದೆ. ಕಟ್ಟಡಗಳ ಮಾಲೀಕರಿಗು ಪರಿಹಾರ ವಿತರಣೆ ಮಾಡಲಾಗುತ್ತದೆ. ರಸ್ತೆ ಅಗಲೀಕರಣದಿಂದ ಜಿಲ್ಲೆಯ ಅಭಿವೃದ್ದಿಗೆ ಅನುಕೂಲವಾಗಲಿದೆ. ಹೀಗಾಗಿ ಜನತೆ ಸಹಕಾರ ನೀಡಬೇಕೆಂದು ಉಸ್ತುವಾರಿ ಸಚಿವರು ಮನವಿ ಮಾಡಿದರು.
ಲೋಕಸಭಾ ಸದಸ್ಯರಾದ ಆರ್.ದ್ರುವನಾರಾಯಣ ಮಾತನಾಡಿ, ಬೆಂಗಳೂರು, ಕನಕಪುರ, ಕೊಳ್ಳೇಗಾಲ, ಯಳಂದೂರು, ನಗರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು 1200 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಪಟ್ಟಣ ಪ್ರದೇಶಗಳಲ್ಲಿ ಬೈಪಾಸ್ ನಿರ್ಮಾಣವಾಗಲಿದೆ. ಕಾಮಗಾರಿಗೆ ಶೇ.75 ರಷ್ಟು ಭೂ ಸ್ವಾದೀನ ಪ್ರಕ್ರೀಯೆ ಪೂರ್ಣವಾಗಿದೆ ಎಂದರು.
ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ನಗರದಲ್ಲಿ ಒಳಚರಂಡಿ ಕಾಮಗಾರಿಯಿಂದ ಬಹುತೇಕ ರಸ್ತೆ ಹಾಳಾಗಿದೆ. ಹೀಗಾಗಿ ನಗರಕ್ಕೆ ಮತ್ತು ತಾಲೂಕಿಗೆ ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗದ ಕಲ್ಯಾಣ ಅನುದಾನದಡಿ ರಸ್ತೆ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಕೋರಿದರು.
ಶಾಸಕರಾದ ಎಸ್.ಜಯಣ್ಣ ಮಾತನಾಡಿ, ರಸ್ತೆ ವಿಸ್ತರಣೆಯಿಂದ ಅಂಗಡಿ ಮುಂಗಟ್ಟು ಮನೆ ಕಳೆದುಕೊಳ್ಳುವ ಮಾಲೀಕರಿಗೆ ಪರಿಹಾರ ನೀಡಲು ಜಿಲ್ಲಾಡಳಿತ ಸಿದ್ದವಾಗಿದೆ. ಹೀಗಾಗಲೇ ರಸ್ತೆ ಅಗಲೀಕರಣದಿಂದ ನಷ್ಟವಾಗಲಿರುವ ಆಸ್ತಿ, ಪಾಸ್ತಿಗಳನ್ನು ಗುರುತಿಸಲಾಗಿದೆ. ಅಭಿವೃದ್ದಿಯ ಹಿತ ದೃಷ್ಠಿಯಿಂದ ಜನತೆ ಕೈಜೋಡಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಅದ್ಯಕ್ಷರಾದ ಎಂ.ರಾಮಚಂದ್ರ, ಉಪಾದ್ಯಕ್ಷರಾದ ಬಸವರಾಜು, ಜಿ.ಪಂ.ಸದಸ್ಯರಾದ ಕೆ.ಪಿ.ಸದಾಶಿವಮೂರ್ತಿ, ಯೋಗೇಶ್, ಉಮಾವತಿಸಿದ್ದರಾಜು, ಯಳಂದೂರು ತಾ.ಪಂ.ಅದ್ಯಕ್ಷರಾದ ನಂಜುಂಡಯ್ಯ, ಪಟ್ಟಣ ಪಂಚಾಯಿತಿ ಅದ್ಯಕ್ಷರಾದ ಲಿಂಗರಾಜು, ಉಪಾದ್ಯಕ್ಷರಾದ ಬೀಮಪ್ಪ, ಚಾಮರಾಜನಗರ ತಾಲೂಕು ಪಂಚಾಯಿತಿ ಅದ್ಯಕ್ಷರಾದ ಹೆಚ್.ವಿ.ಚಂದ್ರು, ನಗರಸಭೆ ಅದ್ಯಕ್ಷರಾದ ರೇಣುಕಾ, ಉಪಾದ್ಯಕ್ಷರಾದ ಆರ್.ಎಂ.ರಾಜಪ್ಪ, ಚೂಡಾ ಅದ್ಯಕ್ಷ ಸಯ್ಯದ್‍ರಫಿ, ಜಿಲ್ಲಾಧಿಕಾರಿ ಬಿ.ರಾಮು ಇತರರು ಉಪಸ್ಥಿತರಿದ್ದರು.    
ನಾಗರಿಕರ ಸಮಸ್ಯೆ ಇತ್ಯರ್ಥಕ್ಕೆ ಕ್ರಮ: ಎಚ್.ಎಸ್.ಮಹದೇವಪ್ರಸಾದ್



ಚಾಮರಾಜನಗರ ಅ.27 (ಕರ್ನಾಟಕ ವಾರ್ತೆ)- ನಾಗರಿಕರ ಕುಂದುಕೊರತೆ ಆಲಿಸಿ ಪರಿಹರಿಸುವ ಸಲುವಾಗಿ ಆಯೋಜಿಸಲಾಗಿರುವ ಜನಸಂಪರ್ಕ ಸಭೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಗಂಬೀರವಾಗಿ ಪರಿಗಣಿಸಿ ಪರಿಹಾರ ಒದಗಿಸಲಾಗುವುದೆಂದು ಸಹಕಾರ ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್.ಮಹದೇವಪ್ರಸಾದ್ ತಿಳಿಸಿದರು.
  ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ ವತಿಯಿಂದ ನಾಗರಿಕರ ಸಮಸ್ಯೆ ಆಲಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜನಸಂಪರ್ಕ ಸಭೆಯಲ್ಲಿ ಜನತೆಯಿಂದ ಅರ್ಜಿ ಸ್ವೀಕರಿಸಿದ ಬಳಿಕ ಸಚಿವರು ಮಾತನಾಡಿದರು.
 ಇಂದಿನ ಜನಸಂಪರ್ಕ ಸಭೆಯಲ್ಲಿ 133 ಅರ್ಜಿಗಳು ಬಂದಿವೆ. ಕಂದಾಯ ಇಲಾಖೆಗೆ ಸಂಭಂದ ಪಟ್ಟಂತೆ 43 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ರೈತ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು ಇತರರು ಸಾಮೂಹಿಕವಾಗಿ ಸಮಸ್ಯೆಗಳ ಕುರಿತು ಅರ್ಜಿಯನ್ನು ಸಲ್ಲಿಸಿದ್ದಾರೆ. ಅಲ್ಲದೆ ವೈಯಕ್ತಿಕವಾಗಿಯೂ ಸಮಸ್ಯೆಗಳನ್ನು ಕುರಿತ ಮನವಿಗಳನ್ನು ಸ್ವೀಕರಿಸಲಾಗಿದೆ ಎಂದರು.
  ಸಾರಿಗೆ ಸೌಲಭ್ಯ ವ್ಯವಸ್ಥೆ ಒದಗಿಸಲು ಮನವಿ ಬಂದಿದೆ. ರಾಷ್ಟ್ರೀಯ ವಿಸ್ತರಣೆಯಿಂದ ಮನೆ ಇನ್ನಿತರ ಆಸ್ತಿ, ಪಾಸ್ತಿ ಕಳೆದು ಕೊಳ್ಳುವ ಮಾಲೀಕರು ಪರಿಹಾರ ಕೋರಿ ಸಂಭಂದ ಅರ್ಜಿ ನೀಡಿದ್ದಾರೆ, ಕೆರೆಗಳ ಹೂಳು ತೆಗೆಯುವಿಕೆ, ಶವ ಸಂಸ್ಕಾರ ನೆರವು ಧನ, ವಿವಿಧ ನಿಗಮಗಳಿಂದ ಸಾಲ ಸೌಲಭ್ಯ ಇತರೆ ಸವಲತ್ತುಗಳನ್ನು ಒದಗಿಸುವಂತೆ ಕೋರಿ ಮನವಿಗಳು ಹೆಚ್ಚಾಗಿ ಬಂದಿವೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
  ಜನಸಂಪರ್ಕ ಸಭೆಯಲ್ಲಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸ್ಥಳದಲ್ಲಿಯೇ ತಾವೇ ಖುದ್ದು ಷರಾ ಬರೆದು ವಹಿಸ ಬೇಕಿರುವ ಕ್ರಮಗಳ ಬಗ್ಗೆ ಸೂಚಿಸಿದ್ದೇನೆ. ಸಂಭಂದಪಟ್ಟ ಅರ್ಜಿದಾರರಿಗೆ ತ್ವರಿತವಾಗಿ ಸಮಸ್ಯೆ ಇತ್ಯರ್ಥ ಪಡಿಸಲು ನಿರ್ದೇಶನ ನೀಡಲಿದ್ದೇನೆ. ಸಭೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಗಂಭೀರವಾಗಿ ಪರಿಶೀಲಿಸಲು ಕಟ್ಟು ನಿಟ್ಟಿನ ನಿರ್ದೇಶನ ನೀಡುವುದಾಗಿ ಸಚಿವರು ತಿಳಿಸಿದರು.
 ಕಳೆದ ಜಿಲ್ಲಾ ಮಟ್ಟದ  ಜನ ಸಂಪರ್ಕ ಸಭೆಯಲ್ಲಿ 165 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 160 ಅರ್ಜಿಗಳನ್ನು ಪರಿಶೀಲಿಸಿ ಇತ್ಯರ್ಥ ಪಡಿಸಲಾಗಿದೆ. ಬಾಕಿ ಉಳಿದ 5 ಅರ್ಜಿಗಳಿಗು ಸಂಭಂದ ಪಟ್ಟಂತೆ ಶೀಘ್ರ ವಿಲೇವಾರಿ ಮಾಡಿ ಪರಿಹರಿಸಲು ಕ್ರಮ ವಹಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
   ಶಾಸಕರಾದ ಸಿ.ಪುಟ್ಟರಂಗಶೆಟ್ಟಿ,  ಎಸ್.ಜಯಣ್ಣ, ಜಿ.ಪಂ.ಅದ್ಯಕ್ಷರಾದ ರಾಮಚಂದ್ರ, ಉಪಾಧ್ಯಕ್ಷ ಬಸವರಾಜು, ನಗರಸಭೆ ಅದ್ಯಕ್ಷರಾದ ರೇಣುಕಾ, ತಾ.ಪಂ.ಅದ್ಯಕ್ಷರಾದ ಎಚ್.ವಿ.ಚಂದ್ರು, ಚೂಡಾ ಅದ್ಯಕ್ಷ ಸಯ್ಯದ್‍ರಪ್ಥ್ಭಿ, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್ ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ ಇತರರು ಹಾಜರಿದ್ದರು.


ಮಾನಸಿಕ ರೋಗ ಪರಿಹಾರಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಜಿಲ್ಲಾ ನ್ಯಾಯಾಧೀಶರ ಸಲಹೆ
ಚಾಮರಾಜನಗರ, ಅ. 28 (ಕರ್ನಾಟಕ ವಾರ್ತೆ):-  ಮಾನಸಿಕ ಅಸ್ವಸ್ಥತೆ ಸಂಬಂಧ ರೋಗಗಳಿಗೆ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕೇ ವಿನಹ ಮೂಢನಂಬಿಕೆ ಪದ್ಧತಿಗಳಿಗೆ ಮೊರೆಹೋಗಬಾರದೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್‍ಎಫ್‍ಮಳವಳ್ಳಿ ಸಲಹೆ ಮಾಡಿದರು.
ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ  ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ ಆರೋಗ್ಯಕಕ್ಕೆ ನೀಡುವ ಮಹತ್ವವನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕಿದೆ. ಮಾನÀಸಿಕ ರೋಗಗಳ ಪರಿಹಾರಕ್ಕೆ ಮೂಢನಂಬಿಕೆಗಳಿಗೆ ಜೋತು ಬೀಳಬಾರದು. ಮಾನಸಿಕ ತಜ್ಞರು, ಸಮಾಲೋಚಕರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರು ಮಾನಸಿಕ ರೋಗಿಗಳನ್ನು ಗುರುತಿಸಿ ಸರಿಯಾದ ಚಿಕಿತ್ಸೆ ಪಡೆಯಲು ತಿಳಿವಳಿಕೆ  ನೀಡಬೇಕು. ಮಾನಸಿಕ ರೋಗ ಬಗೆಗಿನ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು,
ಮನೋ ತಜ್ಞರಾದ ಡಾ.ರಾಜೇಶ್ ಮಾತನಾಡಿ  ಮಾನಸಿಕ ಕಾಯಿಲೆ ಎಂದೊಡನೆ ಭಯಭೀತರಾಗಬೇಕಿಲ್ಲ. ಮಾನಸಿಕ ರೋಗ ಪರಿಹಾರಕ್ಕೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಲಭ್ಯವಿದೆ. ಉತ್ತಮ ಗುಣಮಟ್ಟದ ಔಷಧಿಗಳು ಸಹ ದಾಸ್ತನು ಇದೆ ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್.ವಿರೂಪಾಕ್ಷ ಮಾತನಾಡಿ ಎಲ್ಲಾ ನಾಗರಿಕರಿಗೂ ಸಿಗುವ ರಕ್ಷಣೆ, ಹಕ್ಕುಗಳು ಮಾನಸಿಕ ಅಸ್ವಸ್ಥರಿಗೂ ಇವೆ. ಆಸ್ತಿ ಪಾಲುದಾರಿಕೆಯಲ್ಲಿ ಮಾನಸಿಕ ಅಸ್ವಸ್ಥರಿದ್ದರೂ ಸಹ ಅವರ ಪಾಲಿನ ಹಕ್ಕು ಇದ್ದೇ ಇರುತ್ತದೆ. ಮಾನಸಿಕ ರೋಗಿಗಳ ಪೋಷಣೆ ಜೀವನ ನಿರ್ವಹಣೆಗೆ ಹೊಣೆಗಾರಿಕೆ ಇರುತ್ತದೆ ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ. ರಾಜು, ಡಾ.ಮಹದೇವು, ಡಾ.ನಾಗರಾಜು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆಯುರ್ವೇದ ಚಿಕಿತ್ಸಾ ಪದ್ಧತಿ ಮಹತ್ವ ತಿಳಿಸಲು ಸಲಹೆ
ಚಾಮರಾಜನಗರ, ಅ. 28 (ಕರ್ನಾಟಕ ವಾರ್ತೆ):- ಭಾರತೀಯ ಮೂಲದ ಆಯುರ್ವೇದ ಚಿಕಿತ್ಸಾ ಪದ್ಧತಿ ಮಹತ್ವದ ಬಗ್ಗೆ   ವ್ಯಾಪಕವಾಗಿ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಆಯುರ್ವೇದ ದಿನ ಆಚರಣೆ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚೀನ ಆಯುರ್ವೇದ ಚಿಕಿತ್ಸೆಯು ಹಲವಾರು ರೋಗಗಳ ಪರಿಹಾರಕ್ಕೆ ನೆರವಾಗಲಿದೆ. ಪೂರ್ವಜರ ಕಾಲದಲ್ಲಿ ಅನೇಕ ನೋವು, ಕಾಯಿಲೆಗಳನ್ನು ಆಯುರ್ವೇದ ಗಿಡಮೂಲಿಕೆಗಳಿಂದ ಗುಣಪಡಿಸಲಾಗುತ್ತಿತ್ತು. ಇಂತಹ ಚಿಕಿತ್ಸಾವಿಧಾನವನ್ನು ಇನ್ನು ಹೆಚ್ಚು ಪ್ರಮಾಣದಲ್ಲಿ ಜನರಿಗೆ ಪರಿಚಯಸಬೇಕಿದೆ ಎಂದರು.
ಆಯುರ್ವೇದ ಔಷಧಿಗಳ ಸೇವನೆಯಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಕೆಲವೊಂದು ನಿರ್ದಿಷ್ಟ ರೋಗಗಳಿಗೆ ಆಯುರ್ವೇದ ಔಷಧ ಪರಿಣಾಮಕಾರಿಯಾಗಿದೆ ಹೀಗಾಗಿ ಈ ಬಗ್ಗೆ ಆಯಷ್ ಇಲಾಖೆ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದು ರಾಮಚಂದ್ರ ರವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ರೇಣುಕಾ ರವರು ಮನೆ ಮದ್ದಿನಿಂದಲೇ ಹಲವಾರು ಅನಾರೋಗ್ಯವನ್ನು ಪರಿಣಾಮಕಾರಿಯಾಗಿ ಗುಣಪಡಿಸಿಕೊಳ್ಳಬಹುದು. ಆಹಾರ ಸೇವನೆ ಬಗ್ಗೆ ಕಾಳಜಿ ವಹಿಸಬೇಕು. ವ್ಯಾಯಮ, ಧ್ಯಾನ ಇನ್ನಿತರ ವಿಧಾÀನಗಳ ಮೂಲಕ ಉತ್ತಮವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ ಸದಾಶಿವಮೂರ್ತಿ ಮಾತನಾಡಿ ಬದಲಾದ ಜೀವನ ಶೈಲಿ ಹಾಗೂ ಆರೋಗ್ಯ ಸೇವನೆ ಪದ್ಧತಿಯು ಹಲವಾರು ರೋಗಗಳಿಗೆ ಕಾರಣವಾಗುತ್ತಿದೆ. ರೋಗ ಪರಿಹಾರಕ್ಕೆ ಆಯುರ್ವೇದ ಸೇರಿದಂತೆ ಪ್ರಾಚೀನ ಪದ್ಧತಿಗಳನ್ನು ಅನುಸರಿಸಿದರೆ ಅನೇಕ ಕಾಯಿಲೆಗಳು ಸುಧಾರಣೆ ಯಾಗಲಿದೆ. ಹೀಗಾಗಿ ಹಳೆಯ ರೋಗ ನಿವಾರಣಾ ಪದ್ಧತಿಗಳ ಬಗ್ಗೆಯೂ ಹೆಚ್ಚಿನ ಆಸಕ್ತಿ ವಹಿಸಬೇಕಿದೆ ಎಂದರು.
ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ ಚಂದ್ರು, ಜಿಲ್ಲಾ ಪಂಚಾಯತ್ ಕೈಗಾರಿಕೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಜಿಲ್ಲಾ ಪಂಚಾಯತ್ ಸದಸ್ಯರಾದ ಕೃಷ್ಣ ಆಯುಷ್ ಅಧಿಕಾರಿ ಡಾ.ಪುನೀತ್‍ಬಾಬು, ಶ್ರೀನಿವಾಸ್, ಡಾ.ಮಹದೇವು, ಉಪಸ್ಥಿತರಿದ್ದರು.
ಮದ್ಯ ಮಾರಾಟ ನಿಷೇಧ
ಚಾಮರಾಜನಗರ, ಅ. 28 (ಕರ್ನಾಟಕ ವಾರ್ತೆ):- ಆಗರ, ಮಾಂಬಳ್ಳಿಯಲ್ಲಿ ಹಿಂಡಿಮಾರಮ್ಮಹಬ್ಬ ಹಾಗೂ ಕೊಂಡೋತ್ಸವ ಹಿನ್ನೆಲೆಯಲ್ಲಿ  ಸದರಿ ಗ್ರಾಮದ ಸುತ್ತ ಮುತ್ತಲ 5 ಕೀ.ಮೀ. ವ್ಯಾಪ್ತಿಯಲ್ಲಿ ಅಕ್ಟೋಬರ್ 30 ರ ಬೆಳಿಗ್ಗೆ 6 ಗಂಟೆಯಿಂದ ನವೆಂಬರ್ 2ರ ಮಧ್ಯರಾತ್ರಿ 12 ಗಂಟೆಯ ವರೆಗೆ ಎಲ್ಲಾ ಬಗೆಯ  ಮದ್ಯ ಮಾರಾಟ, ಅಕ್ರಮಸಾಗಣಿಕೆ, ದಾಸ್ತನು ನಿಷೇಧಿಸಿ ಜಿಲ್ಲಾಧಿಕಾರಿ ಬಿ.ರಾಮು ಅವರು ಆದೇಶ ಹೊರಡಿಸಿದ್ದಾರೆ.
ದೀಪಾವಳಿ : ವಾಯು, ಶಬ್ದ ಮಾಲಿನ್ಯ ತಡೆಯಲು ಸೂಚನೆ
ಚಾಮರಾಜನಗರ, ಅ. 28 (ಕರ್ನಾಟಕ ವಾರ್ತೆ):- ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ದ ವಾಯು ಮಾಲಿನ್ಯ ನಿಯಂತ್ರಣದಲ್ಲಿಡಲು ಹಾಗೂ ಸಾರ್ವಜನಿಕ ಆಸ್ತಿ ಆರೋಗ್ಯ, ಸಂರಕ್ಷಣೆ ದೃಷ್ಟಿಯಯಿಂದ ಹಲವು ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಬಿ,ರಾಮು ಸೂಚಿಸಿದ್ದಾರೆ,.
125 ಡೆಸಿಬಲ್‍ಗಳಿಗಿಂತ ಹೆಚ್ಚು ಶಬ್ದ ಉಂಟು ಮಾಡುವ ಪಟಾಕಿಗಳ ದಾಸ್ತಾನು ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ. ರಾತ್ರಿ 10 ರಿಂದ ಬೆಳಗಿನ 6 ಗಂಟೆಯವರೆಗೆ ಪಟಾಕಿ ಸಿಡಿಸುವಂತಿಲ್ಲ. ದಿನದ ಯಾವುದೇ ಸಮಯದಲ್ಲಿ ನಿಶಬ್ದ ವಲಯಗಳೆಂದು ಘೋಷಿಸಲ್ಪಟ್ಟಿರುವ ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ ಇನ್ನಿತರ ಸ್ಥಳಗಳ ಸುತ್ತ ಮುತ್ತ ಯಾವುದೇ ರೀತಿಯ ಶಬ್ದ ಉಂಟು ಮಾಡುವ ಪಟಾಕಿ  ಹಾಗೂ ಸಿಡಿಮದ್ದುಗಳ ಬಳಕೆಯನ್ನು ನಿಷೇಧಿಸಲಾಗಿದೆ.
ಸೂಚಿಸಿರುವ ಕ್ರಮಗಳನ್ನು ಉಲ್ಲಂಘಿಸಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗುವುದು. ನಾಗರಿಕರು ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ದ ಹಾಗೂ ವಾಯುಮಾಲಿನ್ಯ ನಿಯಂತ್ರಣದಲ್ಲಿಡಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಬಿ.ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆಸ್ತಿ ಘೋಷಣೆ ಸಲ್ಲಿಸದ  ಜಿ.ಪಂ. ತಾ.ಪಂ. ಸದಸ್ಯರಿಗೆ  ಚುನಾವಣಾ ಆಯೋUದಿಂದ ನೋಟೀಸು : ಅಹವಾಲು ಸಲ್ಲಿಕೆಗೆ ಸೂಚನೆ

ಚಾಮರಾಜನಗರ, ಅ. 28 (ಕರ್ನಾಟಕ ವಾರ್ತೆ):-   ಆಸ್ತಿ ಮತ್ತು ಹೊಣೆಗಾರಿಕೆ ಬಗ್ಗೆ ಘೋಷಣೆ  ಸಲ್ಲಿಸದೆ ಇರುವ  ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು  ಪಂಚಾಯಿತಿಯ ಒಟ್ಟು    41 45  ಸದಸ್ಯರಿಗೆ ರಾಜ್ಯ ಚುನಾವಣಾ ಆಯೋಗ ನೋಟೀಸು ನೀಡಿದ್ದು  ಏಳು ದಿನಗಳ ಒಳಗೆ ಆಯೋಗಕ್ಕೆ ಅಹವಾಲು ಸಲ್ಲಿಸುವಂತೆ ಸೂಚಿಸಿದೆ.
ಕರ್ನಾಟಕ ಗ್ರಾಮ  ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾಯಿತ ಸದಸ್ಯರ ಆಸ್ತಿ ಘೋಷಣೆ ) ನಿಯಮಗಳು, 2016ರ ನಿಯಮ , 3ರಂತೆ ಪ್ರತಿಯೊಬ್ಬ ಗ್ರಾಮ ಪಂಚಾಯಿತಿ,  ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯ ಸದಸ್ಯರು ಸಂಬಂಧಪಟ್ಟ ಅಧಿಕಾರಿಯ ಮೂಲಕ ರಾಜ್ಯ ಚುನಾವಣಾ ಆಯೋಗದ ಮುಂದೆ ನಮೂನೆ-1 ರಲ್ಲಿ ಅವರು ಹೊಂದಿರುವ ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ಹೊಂದಿರುವ ಎರಡು ಲಕ್ಷಕ್ಕಿಂತ ಹೆಚ್ಚಿನ ಚರ ಮತ್ತು ಸ್ಥಿರ ಆಸ್ತಿಯ ಮತ್ತು ಹೊಣೆಗಾರಿಕೆಯ ಬಗ್ಗೆ ಘೋಷಣೆ ಪ್ರತಿ ವರ್ಷ ಸಲ್ಲಿಸತಕ್ಕದ್ದಾಗಿರುತ್ತದೆ.
ಈ ವರ್ಷ ಅಂದರೆ 2016 ಕ್ಕೆ ಸಂಬಂಧಿಸಿದಂತೆ ಚುನಾಯಿತ  ಸದಸ್ಯರು ಸೆಪ್ಟಂಬರ್ 30 ರೂಳಗೆ ಅವರ  ಹಾಗೂ ಕುಟುಂಬದ ಒಟ್ಟು ಆಸ್ತಿ ಮತ್ತು ಹೊಣೆಗಾರಿಕೆ ಬಗ್ಗೆ ಘೋಷಣೆ ಸಲ್ಲಿಸುವಂತೆ ಹಾಗೂ ಈ ಬಗ್ಗೆ ಆಧಿಕಾರಿಗಳು  ಆಕ್ಟೋಬರ್ 7ರೂಳಗರ ಆಯೋಗಕೆ ವರಧಿಯನ್ನು ಕಳುಹಿಸುವಂತೆ ಸೂಚನೆ ನೀಡಲಾಗಿತ್ತು .
ಅದರಂತೆ ರಾಜ್ಯದ ಒಟ್ಟು  30 ಜಿಲ್ಲಾ ಪಂಚಾಯಿತಿಯ 1083 ಸದಸ್ಯರ ಪೈಕಿ 394 ಸದಸ್ಯರು ಘೋಷಣೆ ಸಲ್ಲಿಸಿದ್ದಾರೆ. ಒಟ್ಟು 176 ತಾಲ್ಲೂಕು ಪಂಚಾಯಿತಿಯ 3903 ಸದಸ್ಯರ ಪೈಕಿ 447 ಸದಸ್ಯರು ಮಾತ್ರ ಘೋಷಣೆ ಸಲ್ಲಿಸಿದ್ದಾರೆ. ಒಟ್ಟಾರೆ 4986 ಸದಸ್ಯರ ಪೈಕಿ 841 ಸದಸ್ಯರು ಮಾತ್ರ ಘೋಷಣೆ ಸಲ್ಲಿಸಿದ್ದು ಇನ್ನು ಉಳಿದ 4145 ಸದಸ್ಯರು ಘೋಷಣೆ ಸಲ್ಲಿಸಿಲ್ಲ .
ಈ ಹಿನ್ನೆಲೆಯಲ್ಲಿ ಆಸ್ತಿ ಮತ್ತು ಹೊಣೆಗಾರಿಕೆ ಬಗ್ಗೆ ಘೋಷಣೆ  ಸಲ್ಲಿಸದೆ ಇರುವ   ಜಿಲ್ಲಾ ಹಾಗೂ ತಾಲ್ಲೂಕು  ಪಂಚಾಯಿತಿಯ ಒಟ್ಟು    41 45  ಸದಸ್ಯರಿಗೆ ನಿಯಮಾನುಸಾರ ನೋಟೀಸು ನೀಡಲಾಗಿದೆ.  ನೋಟೀಸು ತಲುಪಿದ  ದಿನಾಂಕದಿಂದ ಏಳು ದಿನಗಳ ಒಳಗೆ ರಾಜ್ಯ ಚುನಾವಣಾ ಆಯೋಗಕ್ಕೆ  ಸದಸ್ಯರು ಅವರ ಅಹವಾಲು ಸಲ್ಲಿಸದೆ ಇದ್ದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್‍ಅಧಿನಿಯಮ 1993ರ ಪ್ರಕರಣ 136ಬಿ ಹಾಗೂ 175 ಬಿ ಅಡಿಯಲ್ಲಿ ಕ್ರಮ ತೆಗೆದು ಕೊಳ್ಳಲಾಗುವುದು ಎಂದುರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿರವರಾದ ಎಸ್.ಆರ್. ನಾಗರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಚಾಮರಾಜನಗರದಲ್ಲಿ ಮುಕುಂದ ಮುರಾರಿ ನೋಡಲು ಬಂದ ಸೃಜ.!
ಚಾಮರಾಜನಗರ: ಚಿತ್ರಮಂದಿರಗಳಿಗೆ ಸಾಮಾನ್ಯವಾಗಿ ಚಿತ್ರಗಳನ್ನು ನೋಡಲು ಹೋಗುವುದು ಜನರು ಮಾತ್ರ ಆದರೆ ಇಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಶ್ವಾನವೊಂದು ಚಿತ್ರಮಂದಿರಕ್ಕೆ ಹೋಗಿ ಬಂದಿದ್ದು ನೋಡಿ ಜನರು ಗಾಬರಿಯಾದರು.
ಇದೇನಿದು ಅಂತ ಹುಬ್ಬೇರಿಸಬೇಡಿ ಆದರೂ ಸತ್ಯ . ಇಂದು ಬಸವೇಶ್ವರ ಚಿತ್ರಮಂದಿರಕ್ಕೆ ಉಪೇಂದ್ರ ನಟನೆಯ ಮುಕುಂದ ಮುರಾರಿ ನೋಡಲು ಪೊಲೀಸ್ ಇಲಾಖೆಯ ಶ್ವಾನ ಬಂದಿದೆ ಎಂದು ಎಲ್ಲರೂ ತಿಳಿದುಕೊಂಡಿದ್ದರೆ ಅದು ಇಲಾಖಾ ದಿನನಿತ್ಯದಂತೆ ಇಂದು ಚಿತ್ರಮಂದಿರ ಪರಿಶೀಲನೆಗೆ ಸೂಚಿಸಲಾಗಿತ್ತು ಎಂದು ತಿಳಿದುಬಂದಿದೆ.
ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಚಲನಚಿತ್ರ ಮಂದಿರ ತಪಾಷಣೆಗೆ ಪೊಲೀಸ್ ಇಲಾಖೆಗೆ ಸೇರಿದ  ಸೃಜ ಎಂಬ ಹೆಸರಿನ ಬಾಂಬ್ ಪತ್ತೆದಾರಿಕೆ ಶ್ವಾನ ತಪಾಷಣೆ ಮಾಡಿ ಮತ್ತೆ ತನ್ನ ಕೆಂದ್ರ ಸ್ಥಾನಕ್ಕೆ ಹೊರಟಿತು.
ಚಲನಚಿತ್ರ ನೋಡಲು ಬಂದಿದ್ದ ಜನರು ಮಾತ್ರ ಪೊಲೀಸ್ ವಾಹನ ಹಾಗೂ ಬಂದಿದ್ದ ಶ್ವಾನ ನೋಡಿ ಬಹುಶಃ ಹುಸಿ ಕರೆ ಮಾಡಿರುವ ಉದ್ದೇಶದಿಂದ ತಪಾಷಣೆಗೆ ಬಂದಿರಬೇಕು ಎಂದು ಸ್ವಲ್ಪ ಕಾಲ ಆತಂಕಕಾರಿಯಾಗಿ ಜನರು ನೋಡುತ್ತಿದ್ದರು.




ನ. 1ರಂದು ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ
ಚಾಮರಾಜನಗರ, ಅ. 31 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ನವೆಂಬರ್ 1ರಂದು ಬೆಳಿಗ್ಗೆ 9 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಧ್ವಜಾರೋಹಣ ನೆರವೇರಿಸುವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ನಗರಸಭೆ ಅಧ್ಯಕ್ಷರಾದ ಎಸ್. ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫೀ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
 ಅಂದು ಸಂಜೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನÀದ ಮುಂಭಾಗದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 5.30ರಿಂದ 6.30 ಗಂಟೆಯವರೆಗೆ ಸಿ.ಎಂ ನರಸಿಂಹಮೂರ್ತಿ ಮತ್ತು ತಂಡದವರು ಕನ್ನಡ ಗೀತೆಗಳ ಗಾಯನ ಪ್ರಸ್ತುತಪಡಿಸಲಿದ್ದಾರೆ. 6.30 ರಿಂದ 7.30 ಗಂಟೆಯವರೆಗೆ ವಿವಿಧ ಶಾಲಾ ಕಾಲೇಜು ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. 7.30 ರಿಂದ 8.30 ಗಂಟೆಯವರೆಗೆ ಚಾಮರಾಜನಗರದ ಕಲಾಸರಸ್ವತಿ ನಾಟ್ಯ ಸಂಸ್ಥೆಯ ಕಲಾವಿದರು ಅಕ್ಷತಾ ಎಸ್ ಜೈನ್ ನಿರ್ದೇಶನದಲ್ಲಿ ಕನ್ನಡ ವೈಭವ ಎಂಬ ನೃತ್ಯರೂಪಕ ಪ್ರಸ್ತುತಪಡಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.



 








 




































                                                                       




















































































01-10-2016ರಿಂದ 15-10-2016 ಸುದ್ದಿಗಳು


ಚಾಮರಾಜನಗರದಲ್ಲಿ ಖಾಕಿ ಸರ್ಪ ಕಾವಲಿನಡಿ ಗಣಪತಿ ವಿಸರ್ಜನಾ ಮಹೋತ್ಸವ
   ಸ್ಥಳದಲ್ಲೇ ಮೊಕ್ಕಂ ಹೂಡಿದ ಎಸ್ಪಿ ಕುಲದೀಪ್ ಕುಮಾರ್ ಜೈನ್, ಪೂಜೆಯಲ್ಲಿ ಭಾಗಿ
 ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ,:- ಪೊಲೀಸ್ ಗಣಪ ಎಂದೇ ಪ್ರಸಿದ್ದಿಯಾದ ಚಾಮರಾಜನಗರದ ರಥದ ಬೀದಿಯಲ್ಲಿರುವ ಶ್ರೀ ವಿದ್ಯಾ ಗಣಪತಿ ಮಂಡಳಿಯವರು ಪ್ರತಿಷ್ಟಾಪಿಸಲಾದ ಸಾರ್ವಜನಿಕ ಗಣಪತಿಯ 55 ನೇ ವರ್ಷದ ವಿಸರ್ಜನಾ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನಡೆಯಿತು.
ಚಾಮರಾಜನಗರ ರಥದ ಬೀದಿಯಲ್ಲಿ ಪ್ರತಿಷ್ಟಾಪಿಸಲಾಗಿರುವ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಜಿಲ್ಲಾ ಪೊಲೀಸ್ ವರೀಷ್ಟಾಧಿಕಾರಿ  ಕುಲದೀಪ್ ಕುಮಾರ್  ಜೈನ್ ಅವರು ಪೂಜೆ ಸಲ್ಲಿಸಿ ಪ್ರಮುಖ ರಸ್ತೆ ದಾಟುವ ತನಕ ಖುದ್ದು ನಿಂತು ಮೆರವಣಿಗೆ ಸುಗಮವಾಗುವಂತೆ ನೋಡಿಕೊಂಡರು.
ವಿಸರ್ಜನಾ ಮಹೋತ್ಸವದ ಮೆರವಣಿಗೆಯಲ್ಲಿ ನಂದಿದ್ವಜ, ಗೊರವರ ಕುಣಿತ, ಕರಗ, ಗಾರುಡಿಗ ಗೊಂಬೆ, ಮಹಿಳಾ ವೀರಗಾಸೆ, ಮಂಗಳ ವಾದ್ಯ ಸೇರಿದಂತೆ ಇನ್ನಿತರ ಕಲಾತಂಡಗಳು  ಮೆರವಣೆಗೆಯಲ್ಲಿ ಭಾಗವಹಿಸಿ ಜನರ ಮನ ಸೆಳÉದವು.
ಮೆರವಣಿಗೆಯು ಇಂದು ನಗರದ ಖಡಕ್‍ಪುರ ಮೊಹಲ್ಲಾ, ಅಂಬೇಡ್ಕರ್ ಬಡಾವಣೆ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ರಸ್ತೆ, ದೇವಾಂಗ 3ನೇ ಬೀದಿ, ನಾಗಪ್ಪ ಶೆಟ್ಟರ ವೃತ್ತ, ದೊಡ್ಡಂಗಡಿ ಬೀದಿ, ಗುಂಡ್ಲುಪೇಟೆ ವೃತ್ತ, ಗಾಡಿಖಾನೆ ಮೊಹಲ್ಲಾ ಬೀದಿ, ಮೇಗಲ ಪರಿವಾರ ನಾಯಕರ ಬೀದಿ, ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆ, ಮಾರ್ಕೆಟ್ ವೃತ್ತ, ಸಂತೇಮರಹಳ್ಳಿ ವೃತ್ತ, ಆದಿಶಕ್ತಿ ದೇವಸ್ಥಾನದ ಬೀದಿ, ಬಣಜಿಗರ ಬೀದಿ, ಭ್ರಮರಾಂಭ ಬಡಾವಣೆಯ 1ನೇ ಮತ್ತು 2ನೇ ಕ್ರಾಸ್,  ಕುರುಬರ ಬೀದಿ, ಹಳ್ಳದ ಬೀದಿ, ಅಗ್ರಹಾರ ಬೀದಿ, ಪೊಲೀಸ್ ಕಚೇರಿ ರಸ್ತೆ, ಖಾಸಗಿ ಬಸ್ ನಿಲ್ದಾಣದ ರಸ್ತೆ, ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ರಸ್ತೆ, ಜೈನರ ಬೀದಿ, ಆಂಜನೇಯಸ್ವಾಮಿ ದೇವಸ್ಥಾನದ ಬೀದಿಯಲ್ಲಿ ಸಂಚರಿಸಿ ದೊಡ್ಡ ಅರಸಿನಕೊಳದಲ್ಲಿ ವಿಸರ್ಜನೆ ಮಾಡಲಾಯಿತು.
ವ್ಯಾಪಕ ಪೋಲೀಸ್ ಬಂದೂಬಸ್ತ್: ಚಾಮರಾಜನಗರ ಪಟ್ಟಣವನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಿ, ಗಸ್ತು ವ್ಯವಸ್ಥೆಗಾಗಿ 07 ಮೊಬೈಲ್ ಗಳನ್ನು ನೇಮಿಸಲಾಗಿದೆ. ಪಟ್ಟಣದ ಸೂಕ್ಷ್ಮ ಸ್ಥಳಗಳಲ್ಲಿ ಫಿಕ್ಸೆಡ್ ಪಾಯಿಂಟ್ ಮತ್ತು ಗಗನ ಪಹರೆ ನೇಮಿಸಲಾಗಿತ್ತು.   ಸಾರ್ವಜನಿಕರಿಗೆ ಅಡಚಣೆಯಾಗದಂತೆ ಬದಲಿ ಸಂಚಾರಿ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.
ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಅವರು ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ಮೆರವಣಿಗೆ ಹಾದುಹೋಗಲಿರುವ ಬೀದಿಗಳ ಕಟ್ಟಡಗಳ ಮೇಲೆ ಹತ್ತಿ ಕುಳಿತುಕೊಳ್ಳುವುದು ಹಾಗೂ ಗುಂಪುಗೂಡಿ ಮೆರವಣಿಗೆ ವೀಕ್ಷಿಸುವುದನ್ನು ಸೆಕ್ಷನ್ 144 ರನ್ವಯ ನಿಷೇಧಿಸಿ ಆದೇಶ ಹೊರಡಿಸಿದ್ದರು.
ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸ್ಪಿ ಕುಲದೀಪ್ ಕುಮಾರ್  ಜೈನ್ ವ್ಯಾಪಕ ಪೊಲೀಸ್ ಬಂದೂಬಸ್ತ್ ಏರ್ಪಾಡು ಮಾಡಿದ್ದರು. ಡಿವೈಸ್ಪಿ ಗಂಗಾದರ್ ಸ್ವಾಮಿ, ಜಿಲ್ಲೆಯ ಎಲ್ಲಾ ಸಬ್‍ಇನ್ಸ್‍ಪೆಕ್ಟರ್, ಇನ್ಸ್‍ಪೆಕ್ಟರ್ ಹಾಜರಿದ್ದರು
ಗಣಪತಿ ವಿಸರ್ಜನಾ ಮಹೋತ್ಸವದ ಕರ್ತವ್ಯಕ್ಕೆ ಎಸ್.ಪಿ. ರವರ ನೇತೃತ್ವದಲ್ಲಿ 06 ಡಿಎಸ್‍ಪಿ,   16 ಸರ್ಕಲ್ ಇನ್ಸ್‍ಪೆಕ್ಟರ್,  25 ಸಬ್ ಇನ್ಸ್‍ಪೆಕ್ಟರ್,  ಎಎಸ್.ಐ 58, 30 ಜನ ಸಿಬ್ಬಂದಿಗಳ ಚಾಮರಾಜ ಕಮಾಂಡೋ ಪಡೆ ಸೇರಿದಂತೆ ಎರಡು ಕಮಾಂಡೋ ಪಡೆ , 490 ಮುಖ್ಯ / ಸಾಮಾನ್ಯ ಪೊಲೀಸ್ ಪೇದೆ, 30 ಮಹಿಳಾ ಪೇದೆ, 6 ಕೆ.ಎಸ್.ಆರ್.ಪಿ ಪ್ಲಟೂನ್, 04 ಡಿ.ಎ.ಆರ್ ಪ್ಲಟೂನ್ ಮತ್ತು 300 ಜನ ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ  ಸಾವಿರದ ಐನೂರಕ್ಕೂ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್‍ಗಾಗಿ ನಿಯೋಜನೆ ಮಾಡಲಾಗಿತ್ತು. ಜೊತೆಗೆ 02 ಫೈರ್ ಟೆಂಡರ್‍ಗಳು, 01 ಆಂಬುಲೆನ್ಸ್ ವಾಹನವನ್ನು ಸಹ ನಿಯೋಜಿಸಲಾಗಿತ್ತು *************************************************
ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಣೆಗೆ ತೀರ್ಮಾನ  
ಚಾಮರಾಜನಗರ, ಅ. 01 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ ಹಾಗೂ ಎಲ್ಲಾ ಸಮುದಾಯ, ಸಂಘಟನೆಗಳ ಸಹಕಾರದೊಂದಿಗೆ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಅಕ್ಟೋಬರ್ 15ರಂದು ನಗರದಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಬಿ. ರಾಮು ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಎಂದಿನಂತೆ ಈ ಬಾರಿಯು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಜಿಲ್ಲಾಧಿಕಾರಿ ಬಿ. ರಾಮು ಮಾತನಾಡಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಿಲ್ಲಾಡಳಿತದ ವತಿಯಿಂದ ಎಲ್ಲರ ಸಹಕಾರ ಪಡೆದು ಯಶಸ್ವಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯು ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲು ಎಲ್ಲರ ಸಲಹೆ ಪಡೆದು ಕಾರ್ಯೋನ್ಮುಖರಾಗಲಿದ್ದೇವೆ ಎಂದರು.
ಈ ಬಾರಿ ನಗರದ ಪ್ರಮುಖ ಸ್ಥಳದಲ್ಲಿ ವಾಲ್ಮೀಕಿ ಭವನ ನಿರ್ಮಾಣಗೊಂಡು ಉದ್ಘಾಟನೆ ಸಹ ನೆರವೇರಿದೆ. ಹೀಗಾಗಿ ವಾಲ್ಮೀಕಿ ಭವನದಲ್ಲಿಯೆ ಕಾರ್ಯಕ್ರಮ ಹಮ್ಮಿಕೊಂಡರೆ ಅರ್ಥಪೂರ್ಣವಾಗುತ್ತದೆ. ಹೆಚ್ಚು ಜನರು ಸಮಾವೇಶಗೊಳ್ಳುವ ಹಿನ್ನಲೆಯಲ್ಲಿ ಭವನದ ಅವರಣದಲ್ಲಿ ವಿಶಾಲವಾಗಿ ಶಾಮಿಯಾನ ಹಾಕಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸುವ ಜನತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಪ್ರವಾಸಿ ಮಂದಿರದಿಂದ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರ ಮೆರವಣಿಗೆಯನ್ನು ಸಹ ಅದ್ದೂರಿಯಾಗಿ ನಡೆಸಲಾಗುವುದು. ನಾದಸ್ವರ ಇನ್ನಿತರ ಕಲಾತಂಡಗಳೊಡನೆ ಮೆರವಣಿಗೆ ಸಾಗಲು ಅವಶ್ಯಕ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು ಎಂದರು.
ವೇದಿಕೆ ಸಮಾರಂಭದಲ್ಲಿ ವಾಲ್ಮೀಕಿ ಅವರ ವಿಚಾರಧಾರೆಗಳ ಕುರಿತು ಉಪನ್ಯಾಸ ಏರ್ಪಡಿಸಲಾಗುವುದು. ವಾಲ್ಮೀಕಿ ಅವರ ಕುರಿತು ಹೆಚ್ಚು ಅಧ್ಯಯನ ಮಾಡಿರುವ ಉಪನ್ಯಾಸಕರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಂದು ನಗರದಲ್ಲಿ ವಿಶೇಷ ಸ್ವಚ್ಚತೆ ಕಾರ್ಯ ಕೈಗೊಂಡು ತಳಿರು ತೋರಣಗಳಿಂದ ಸಿಂಗರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಆಹ್ವಾನ ಪತ್ರಿಕೆಯನ್ನು ಶೀಘ್ರ ಮುದ್ರಿಸಿ ವಿತರಿಸಲಾಗುವುದು. ಜಯಂತಿಯನ್ನು ಒಂದು ವರ್ಗಕ್ಕೆ ಸೀಮಿತಗೊಳಿಸದೆ ಎಲ್ಲ ಸಮುದಾಯ, ಸಂಘಟನೆಗಳು ಪಾಲ್ಗೊಳ್ಳುವ ಮೂಲಕ ಅದ್ಧೂರಿಯಾಗಿ ಆಚರಿಸೋಣ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಸಹ ಕಾರ್ಯಕ್ರಮ ಆಯೋಜನೆ ಸಂಬಂಧ ಅಗತ್ಯ ಸಲಹೆ ನೀಡಿ ಮಾತನಾಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೆಶಕರಾದ ಸರಸ್ವತಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಬಿ.ಎಸ್. ವಿನಯ್, ಮುಖಂಡರಾದ ಶಾ. ಮುರಳಿ, ಸುರೇಶ್‍ನಾಯಕ, ಕಣ್ಣೇಗಾಲ ಮಹದೇವನಾಯಕ, ಆರ್. ಸುಂದರ್, ಚಾ.ಸಿ. ಸೋಮನಾಯಕ, ಚಾ.ರಂ. ಶ್ರೀನಿವಾಸಗೌಡ, ಚೆಂಗುಮಣಿ, ಸೋಮಶೇಖರ್ ಬಿಸಲ್ವಾಡಿ, ಸಿ.ಎಂ. ಕೃಷ್ಣಮೂರ್ತಿ, ವೆಂಕಟರಮಣ ಪಾಪು, ಗು. ಪುರುಷೋತ್ತಮ್, ಶಿವರಾಜು, ಆಲೂರು ನಾಗೇಂದ್ರ, ಸುರೇಶ್ ನಾಗ್, ಜಿ. ಬಂಗಾರು, ಪರ್ವತರಾಜು, ಚಾ.ಗು. ನಾಗರಾಜು, ಸಿ.ಸಿ. ಪ್ರಕಾಶ್, ಶಿವು ಇತರೆ ಮುಖಂಡರು, ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಅಗತ್ಯ ಸಲಹೆ ನೀಡಿದರು.
ನಾಡಹಬ್ಬ ದಸರಾ: ಸಂಘಟನೆ, ಸಮುದಾಯ ಮುಖಂಡರೊಂದಿಗೆ ಸಮಾಲೋಚನೆ    
ಚಾಮರಾಜನಗರ, ಅ. 01 (ಕರ್ನಾಟಕ ವಾರ್ತೆ):- ನಾಡಹಬ್ಬ ದಸರಾ ಮಹೋತ್ಸವವನ್ನು ಸಾಂಪ್ರಾದಾಯಿಕ ಹಾಗೂ ಅರ್ಥಪೂರ್ಣವಾಗಿ ಹಮ್ಮಿಕೊಳ್ಳುವ ಸಂಬಂಧ ಜಿಲ್ಲಾಧಿಕಾರಿ ಬಿ. ರಾಮು ಅವರು ವಿವಿಧ ಸಂಘಟನೆ, ಸಮುದಾಯ ಮುಖಂಡರೊಂದಿಗೆ ಇಂದು ಪೂರ್ವಭಾವಿ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ದಸರಾ ಮಹೋತ್ಸವ ಆಚರಣೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ದಸರಾ ಆಚರಣೆ ಕುರಿತು ಸಮಾಲೋಚನೆ ನಡೆಸಿ ಸಂಘಟನೆ, ಸಮುದಾಯ ಮುಖಂಡರಿಂದ ಸಲಹೆ ಕೇಳಿದರು.
ದಸರಾ ಮಹೋತ್ಸವ ಆಚರಣೆ ಹಿನ್ನಲೆಯಲ್ಲಿ ಕೈಗೊಳ್ಳಬೇಕಿರುವ ಉದ್ಘಾಟನೆ ಕಾರ್ಯಕ್ರಮ, ವಿಧಾನಸಭಾ ಕ್ಷೇತ್ರವಾರು ಹಾಗೂ ಜಿಲ್ಲಾಕೇಂದ್ರದಲ್ಲಿ ಆಯೋಜಿಸಬೇಕಿರುವ ಸಾಂಸ್ಕøತಿಕ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ವಿವಿರ ನೀಡಿದರು.
ಅಕ್ಟೋಬರ್ 7, 8 ಹಾಗೂ 9ರಂದು ದಸರಾ ಆವರಣೆಯನ್ನು ಜಿಲ್ಲಾಮಟ್ಟದಲ್ಲಿ ಆಯೋಜಿಸಲಾಗುತ್ತದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2 ದಿನಗಳ ಕಾಲ ಕಾರ್ಯಕ್ರಮ ಏರ್ಪಾಡು ಮಾಡಲಾಗುತ್ತದೆ. ಆಯಾ ವಿಧಾನಸಭಾ ಜನಪ್ರತಿನಿಧಿಗಳ ಸಮ್ಮುಖದಲ್ಲಿ ತೀರ್ಮಾನಿಸಿ ಸ್ಥಳೀಯವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಜಿಲ್ಲಾಮಟ್ಟದಲ್ಲಿ 3 ದಿನಗಳ ಕಾಲ ದಸರಾ ಆಚರಣೆ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲಾಗುತ್ತದೆ. ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಕಲಾವಿದರು, ಸೇರಿದಂತೆ ಎಲ್ಲರಿಗೂ ಕಾರ್ಯಕ್ರಮದಲ್ಲಿ ನೀಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಸಂಸ್ಕøತಿ, ಪರಂಪರೆ ಬಿಂಬಿಸುವ ನಾಡಹಬ್ಬವನ್ನು ಸಾಂಪ್ರಾದಾಯಿಕವಾಗಿ ಆಚರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಇದೇ ವೇಳೆ ಕಾರ್ಯಕ್ರಮ ಆಚರಣೆ ಸಂಬಂಧ ಸಭೆಯಲ್ಲಿ ಹಾಜರಿದ್ದ ಮುಖಂಡರು, ಕಲಾವಿದರು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೆಶಕರಾದ ಸರಸ್ವತಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಬಿ.ಎಸ್. ವಿನಯ್, ಮುಖಂಡರಾದ ಶಾ. ಮುರಳಿ, ಸುರೇಶ್‍ನಾಯಕ, ಕಣ್ಣೇಗಾಲ ಮಹದೇವನಾಯಕ, ಆರ್. ಸುಂದರ್, ಚಾ.ಸಿ. ಸೋಮನಾಯಕ, ಚಾ.ರಂ. ಶ್ರೀನಿವಾಸಗೌಡ, ಚೆಂಗುಮಣಿ, ಸೋಮಶೇಖರ್ ಬಿಸಲ್ವಾಡಿ, ಸಿ.ಎಂ. ಕೃಷ್ಣಮೂರ್ತಿ, ವೆಂಕಟರಮಣ ಪಾಪು, ಗು. ಪುರುಷೋತ್ತಮ್, ಶಿವರಾಜು, ಆಲೂರು ನಾಗೇಂದ್ರ, ಸುರೇಶ್ ನಾಗ್, ಜಿ. ಬಂಗಾರು, ಪರ್ವತರಾಜು, ಚಾ.ಗು. ನಾಗರಾಜು, ಸಿ.ಸಿ. ಪ್ರಕಾಶ್, ಶಿವು ಇತರೆ ಮುಖಂಡರು, ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಅಗತ್ಯ ಸಲಹೆ ನೀಡಿದರು.

ಅಕ್ಟೋಬರ್ 2ರಂದು ನಗರದಲ್ಲಿ ಗಾಂಧೀ ಜಯಂತಿ ಆಚರಣೆ    
ಚಾಮರಾಜನಗರ, ಅ. 01 (ಕರ್ನಾಟಕ ವಾರ್ತೆ):- ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಹಾತ್ಮ ಗಾಂಧೀ ಜಯಂತಿ ಆಚರಣೆ ಕಾರ್ಯಕ್ರಮವನ್ನು ಅಕ್ಟೋಬರ್ 2ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ಗಂಟೆಗೆ ಭಜನಾ ಕಾರ್ಯಕ್ರಮ, 10.30 ಗಂಟೆಗೆ ಸರ್ವಧರ್ಮ ಪ್ರಾರ್ಥನೆ, 10.40 ಗಂಟೆಗೆ ಶಾಲಾ ಮಕ್ಕಳಿಂದ ಗಾಂಧೀ ವೇಷ-ಭೂಷಣ ಪ್ರದರ್ಶನ ಕಾರ್ಯಕ್ರಮ ಏರ್ಪಾಡು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಅ. 3ರಂದು ಕೊಳ್ಳೇಗಾಲದಲ್ಲಿ ವನ್ಯಜೀವಿ ಸಪ್ತಾಹ ಆಚರಣೆ ಸಮಾರೋಪ    
ಚಾಮರಾಜನಗರ, ಅ. 01 (ಕರ್ನಾಟಕ ವಾರ್ತೆ):- ಅರಣ್ಯ ಇಲಾಖೆ ಹಮ್ಮಿಕೊಂಡಿರುವ 62ನೇ ವನ್ಯಜೀವಿ ಸಪ್ತಾಹ ಆಚರಣೆ ಸಮಾರೋಪ ಸಮಾರಂಭವು ಅಕ್ಟೋಬರ್ 3ರಂದು ಬೆಳಿಗ್ಗೆ 10.30 ಗಂಟೆಗೆ ಕೊಳ್ಳೇಗಾಲ ಪಟ್ಟಣದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ.
ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವ ಪ್ರಸಾದ್ ಅವರು ಉದ್ಘಾಟನೆ ನೆರವೇರಿಸುವರು. ಶಾಸಕರಾದ ಎಸ್. ಜಯಣ್ಣ ಅದ್ಯಕ್ಷತೆ ವಹಿಸುವರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ,  ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಶಾಸಕರಾದ ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ ನಾಗರಾಜು), ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ರಾಜು, ನಗರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ, ಸದಸ್ಯರಾದ ಶಾಂತರಾಜು ಬಸ್ತೀಪುರ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್. ಜೈನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅರ್.ಎಸ್. ಸುರೇಶ್, ಬಿ.ಜೆ. ಹೊಸಮಠ್, ಅಜಯ್ ಮಿಶ್ರಾ, ಬಿ.ಪಿ. ರವಿ,ಸಿ. ಜಯರಾಂ, ಎಸ್.ಎಸ್. ಲಿಂಗರಾಜ, ಟಿ. ಹೀರಾಲಾಲ್, ಚೋಳರಾಜ,ಆರ್.ಎಚ್. ನಾಗರಾಜು, ವನ್ಯಜೀವಿ ಮಂಡಳಿ ಸದಸ್ಯರಾದ ಜಿ. ಮಲ್ಲೇಶಪ್ಪ, ಡಾ. ಎಂ. ಜಡೇಗೌಡ, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.
   ***************
ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ಸಹಕಾರ: ಡಿ.ಸಿ    
ಚಾಮರಾಜನಗರ, ಅ. 01 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲೂ ಚುನಾವಣಾ ಆಯೋಗದ ನಿರ್ದೇಶನದಂತೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ನಡೆಸುವ ಪ್ರಕ್ರಿಯೆಗೆ ಎಲ್ಲರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ಪ್ರಕಟಿಸಿ ಪ್ರಚುರಪಡಿಸುವ ಸಂಬಂಧ ನಡೆದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕರಡು ಮತದಾರರ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ಈ ಸಂಬಂಧ ಹಕ್ಕು, ಆಕ್ಷೇಪಣೆಗಳನ್ನು ತಾಲೂಕಿನ ಮತಗಟ್ಟೆಗಳಲ್ಲಿ ಬಿ.ಎಲ್.ಓ ಮೂಲಕ ಹಾಗೂ ಆಯಾ ತಾಲೂಕು ಕಚೇರಿಯಲ್ಲಿ ಅಕ್ಟೋಬರ್ 1ರಿಂದ 31ರ ವರೆಗೆ ಸ್ವೀಕರಿಸಲಾಗುತ್ತದೆ. ಅಕ್ಟೋಬರ್ 7 ಹಾಗೂ 14ರಂದು ಭಾವಚಿತ್ರವಿರುವ ಮತದಾರರ ಪಟ್ಟಿಯಲ್ಲಿರುವ ಮತದಾರರ ಹೆಸರನ್ನು ಪರಿಶೀಲಿಸಲು ಬರುವ ಮತದಾರರ ಹೆಸರುಗಳನ್ನು ಗ್ರಾಮಸಭೆ, ಸ್ಥಳೀಯ ಸಂಘಸಂಸ್ಥೆಗಳಲ್ಲಿ ಓದಲಾಗುತ್ತದೆ ಎಂದರು.
ಅಕ್ಟೋಬರ್ 16 ಮತ್ತು 23ರಂದು ರಾಜಕೀಯ ಪಕ್ಷಗಳು ನೇಮಕ ಮಾಡಿರುವ ಮತಗಟ್ಟೆ ಮಟ್ಟದ ಏಜೆಂಟರಿಂದ ಹಕ್ಕು ಆಕ್ಷೇಪಣೆಗಳನ್ನು ಸ್ವೀಕರಿಸಲು ವಿಶೇಷ ಆಂದೋಲನ ನಡೆಸಲಾಗುವುದು. ಅಕ್ಟೋಬರ್ 30ರಂದು ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುವುದು. ನವೆಂಬರ್ 24ರಂದು ಮತದಾರರ ಪಟ್ಟಿಗೆ ಹೆಸರುಗಳ ಸೇರ್ಪಡೆ ಹಾಗೂ ಭಾವಚಿತ್ರಗಳ ಸೇರ್ಪಡೆ ಹಾಗೂ ಪೂರಕ ಪಟ್ಟಿಗಳನ್ನು ಸಿದ್ಧಪಡಿಸಲಾಗುವುದು. 2017ರ ಜನವರಿ, 10 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಕರಡು ಮತದಾರರ ಪಟ್ಟಿ ಪ್ರಕಟಣೆ ಹೊರಡಿಸಿರುವ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಪಟ್ಟಿಯಲ್ಲಿ ಕಂಡುಬಂದಿರುವ ಲೋಪದೋಷಗಳನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಮತದಾರರ ಹೆಸರು 2 ಕಡೆ ಸೇರ್ಪಡೆಯಾಗಿದ್ದಲ್ಲಿ ಅದನ್ನು ಕೈಬಿಡಲಾಗುತ್ತದೆ. ಶೇ. 100ರಷ್ಟು ದೋಷರಹಿತ ಮತದಾರರ ಪಟ್ಟಿ ಸಿದ್ಧತೆಗೆ ಗಮನ ನೀಡಲಾಗುತ್ತದೆ ಎಂದರು.
ಮತದಾರರ ಪಟ್ಟಿ ಪ್ರಚುರಪಡಿಸುವ ಕಾರ್ಯಕ್ಕೆ ರಾಜಕೀಯ ಪಕ್ಷಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದೇ ವೇಳೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಕರಡು ಮತದಾರರ ಪಟ್ಟಿಯನ್ನು ವಿತರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಉಪವಿಭಾಗಾಧಿಕಾರಿ ಕವಿತಾರಾಜಾರಾಂ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ರಾಜಕೀಯ ಪಕ್ಷಗಳಪ್ರತಿನಿಧಿಗಳಾದ ಕೆ.ಪಿ. ಸದಾಶಿವಮೂರ್ತಿ, ಸಿ.ಎಂ. ಕೃಷ್ಣಮೂರ್ತಿ, ನೂರೊಂದುಶೆಟ್ಟಿ, ಬ್ಯಾಡಮೂಡ್ಲು ಬಸವಣ್ಣ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪಟಾಕಿ, ಬಿಡಿ ಪೆಟ್ರೋಲ್ ಮಾರಾಟ ನಿಷೇಧ    
ಚಾಮರಾಜನಗರ, ಅ. 01 (ಕರ್ನಾಟಕ ವಾರ್ತೆ):- ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಲಯದ ವಿಚಾರಣೆ ಇರುವ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಮುಂಜಾಗರುಕತಾ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಎಲ್ಲ ಬಗೆಯ ಪಟಾಕಿ ಹಾಗೂ ಬಿಡಿ ಪೆಟ್ರೋಲ್ ಮಾರಾಟವನ್ನು ಅಕ್ಟೋಬರ್ 1ರಿಂದ 7ರವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಬಿ. ರಾಮು ಆದೇಶ ಹೊರಡಿಸಿದ್ದಾರೆ.

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ    
ಚಾಮರಾಜನಗರ, ಅ. 01 (ಕರ್ನಾಟಕ ವಾರ್ತೆ):- ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್.ಮಹದೇವಪ್ರಸಾದ್ ಅವರು ಅಕ್ಟೋಬರ್ 3ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅ. 3ರಂದು ಬೆಳಿಗ್ಗೆ 10.30 ಗಂಟೆಗೆ ಕೊಳ್ಳೇಗಾಲ ಪಟ್ಟಣದಲ್ಲಿ ನಡೆಯಲಿರುವ ರಾಷ್ಟ್ರೀಯ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 1.30 ಗಂಟೆಗೆ ಚಾಮರಾಜನಗರಕ್ಕೆ ಆಗಮಿಸಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಸಂಜೆ 4.30 ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅರ್ಥಪೂರ್ಣವಾಗಿ ನಡೆದ ಗಾಂಧೀ ಜಯಂತಿ
ಚಾಮರಾಜನಗರ, ಅ. 02 (ಕರ್ನಾಟಕ ವಾರ್ತೆ):- ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ನಗರದಲ್ಲಿಂದು ಆಚರಿಸಲಾಯಿತು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಗಾಂಧೀಜಿ ಕುರಿತು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು ವಿಶೇಷ ಗಮನ ಸೆಳೆಯಿತು.
ತೆರಕಣಾಂಬಿಯ ಸಿದ್ಧನಗೌಡ ಪಾಟೀಲ ಅವರು ಗಾಂಧೀ ಕುರಿತ ಗೀತೆಗಳ ಗಾಯನ ಹಾಗೂ ಭಜನಾ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಗಾಂಧೀ ಜಯಂತಿ ಅಂಗವಾಗಿ ಹೊರತಂದಿರುವ ಜನಪದ, ಮಾರ್ಚ್ ಆಫ್ ಕರ್ನಾಟಕ ವಿಶೇಷಾಂಕಗಳು, ನಮ್ಮ ಗಾಂಧೀ ತಾತ, ನನ್ನ ಜೀವನವೇ ನನ್ನ ಸಂದೇಶ, ಬಾಪೂಜಿ ಸೇವಾಕೇಂದ್ರ ಕುರಿತ ಕಿರುಹೊತ್ತಿಗೆಗಳನ್ನು ಬಿಡುಗಡೆ ಮಾಡಲಾಯಿತು.
ಧಾರ್ಮಿಕ ಗುರುಗಳಾದ ಸಿದ್ಧ ಮಲ್ಲೇಶ್ವರ ವಿರಕ್ತ ಮಠದ ಚನ್ನಬಸವೇಶ್ವರ ಸ್ವಾಮೀಜಿ, ಮಹಮದ್ ಜಿಯಾ ಉಲ್ಲಾ ಹಾಗೂ ಫಾದರ್ ರೆವರೆಂಡ್ ಪುಟ್ಟರಾಜು ಅವರು ಸರ್ವಧರ್ಮ ಪ್ರಾರ್ಥನೆ ಮಾಡಿದರು.
ಚಿಕ್ಕ ಮಕ್ಕಳು ಗಾಂಧೀ ವೇಷಧಾರಿಗಳಾಗಿ ವೇದಿಕೆಯಲ್ಲಿ ನಿಂತು ಗಾಂಧೀಜಿಯವರ ಸಂದೇಶವನ್ನು ಸಾರಿದರು. ಗಾಂಧೀಯವರಿಗೆ ಪ್ರಿಯವಾಗಿದ್ದ ರಘುಪತಿ ರಾಘವ ರಾಜಾರಾಂ ಸೇರಿದಂತೆ ಇತರೆ ಗೀತೆಗಳನ್ನು ಹಾಡಿದರು.
ವೇದಿಕೆ ಮುಂಭಾಗದಲ್ಲಿ ಬದನವಾಳುವಿನಿಂದ ಬಂದಿದ್ದ ಮಹಿಳೆಯರು ಗಾಂಧೀ ಅವರಿಗೆ ಪ್ರಿಯವಾಗಿದ್ದ ಚರಕದ ಮೂಲಕ ನೂಲು ತೆಗೆಯುವ ಪ್ರದರ್ಶನವನ್ನು ನೀಡಿದ್ದು ಸಭಿಕರಲ್ಲಿ ವಿಶೇಷ ಅಸಕ್ತಿ ಮೂಡಿಸಿತು.
ಗಾಂಧೀ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಅಹಿಂಸಾ ಮಾರ್ಗದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಧೀಮಂತ, ಮಹಾತ್ಮ ಗಾಂಧೀಜಿ ಅವರು. ಅವರ ಸಹನೆ ಹಾಗೂ ಅಹಿಂಸಾ ತತ್ವವನ್ನು ಇಡೀ ವಿಶ್ವವೇ ಗೌರವಿಸಿದೆ. ಗಾಂಧೀ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಪ್ರಸ್ತುತ ಸಂದರ್ಭದಲ್ಲಿರುವ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್ ಆಡಳಿತ ವ್ಯವಸ್ಥೆಯು ಗಾಂಧೀಜಿಯವರ ಕನಸಾಗಿತ್ತು. ಅವರ ಆಶಯದಂತೆ ಗ್ರಾಮ ಆಡಳಿತ ವ್ಯವಸ್ಥೆ ಬಂದಿದೆ ಎಂದು ರಾಮಚಂದ್ರ ತಿಳಿಸಿದರು.
ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ಗಾಂಧೀಜಿ ಅವರು ಸಾರ್ವಕಾಲಿಕ ಸತ್ಯ. ಶಾಂತಿಯ ಪ್ರತಿರೂಪ ಆಗಿದ್ದಾರೆ. ಶಾಂತಿಮಂತ್ರವನ್ನು ಜಪಿಸಿದ ಗಾಂಧೀಯವರನ್ನು ಪ್ರಪಂಚದ ಎಲ್ಲ ದೇಶಗಳು ಸ್ಮರಣೆ ಮಾಡುತ್ತಿವೆ. ಮನುಕುಲದ ಒಳಿತಿಗೆ ಚಿಂತನೆ ಮಾಡಿದ ಗಾಂಧೀಯವರ ಆದರ್ಶಗಳಿಗೆ ಒಲವು ವ್ಯಕ್ತವಾಗಿದೆ ಎಂದರು.
ತ್ಯಾಗ, ಶಾಂತಿ, ಅಹಿಂಸೆ ಮಾರ್ಗವನ್ನು ಪ್ರತಿಪಾದಿಸಿದ ಗಾಂಧೀಜಿಯವರ ವಿಚಾರಧಾರೆಗಳ ಬಗ್ಗೆ ಇಂದಿನ ಪೀಳಿಗೆಗೆ ಹೆಚ್ಚು ಅರಿವು ಮೂಡಿಸುವ ಪ್ರಯತ್ನ ಮಾಡಬೇಕಿದೆ. ಮಾನವೀಯತೆಯನ್ನು ತೋರುವ ಗುಣವನ್ನು ಬೆಳೆಸಿಕೊಳ್ಳಬೇಕಿದೆ. ಹೀಗಾದಾಗ ಮಾತ್ರ ಗಾಂಧೀ ಅವರಿಗೆ ಗೌರವ ಕೊಟ್ಟಂತಾಗುತ್ತÀದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯ ಪಟ್ಟರು.
ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್.ವಿ. ಚಂದ್ರು, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುನಿರಾಜಪ್ಪ, ಪದ್ಮಾವತಿ ವೆಂಕಟರಾಮ್, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಸ      
ಅ. 4ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ವಿಚಾರಸಂಕಿರಣ  
ಚಾಮರಾಜನಗರ, ಅ. 03 (ಕರ್ನಾಟಕ ವಾರ್ತೆ):- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ಅಕ್ಟೋಬರ್ 4ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅವರಣದಲ್ಲಿ ವಿಚಾರಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜಿಲ್ಲಾಧಿಕಾರಿ ಬಿ. ರಾಮು ಕಾರ್ಯಕ್ರಮ ಉದ್ಘಾಟಿಸುವರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಚ್.ಎಸ್. ಪ್ರೇಮಲತಾ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಮಹಿಳಾ ವಿಮೋಚನೆ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಯಶೋಧ ವಿಷಯ ಮಂಡನೆ ಮಾಡುವರು.
ಡಾ. ಬಿ.ಆರ್. ಅಂಬೇಡ್ಕರ್-ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಅರ್ಥೈಸುವಿಕೆ ಕುರಿತು ಬನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಕೃಷ್ಣರಾಜೇಂದ್ರ ಭರತ್ ವಿಷಯ ಮಂಡಿಸುವರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಸತೀಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ಪಿ. ದೇವರಾಜು ಉಪಸ್ಥಿತರಿರುವರು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆ ತಿಳಿಸಿದೆ.

ಅಕ್ಟೋಬರ್ ಅಂತ್ಯದೊಳಗೆ ಸೆಟ್‍ಟಾಪ್ ಬಾಕ್ಸ್ ಅಳವಡಿಕೆಗೆ ಡಿ.ಸಿ ಸೂಚನೆ  
ಚಾಮರಾಜನಗರ, ಅ. 03 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಟಿ.ವಿ ವೀಕ್ಷಣೆಗೆ ಸೆಟ್‍ಟಾಪ್ ಬಾಕ್ಸ್‍ನ್ನು ಅಕ್ಟೋಬರ್ 31ರೊಳಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಬಿ. ರಾಮು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೇಬಲ್ ಟಿ.ವಿ ಡಿಜಿಟಲೀಕರಣ  ಅನುಷ್ಠಾನ ಸಂಬಂಧ ನಡೆದ ಕೇಬಲ್ ಟಿ.ವಿ ಅಪರೇಟರ್‍ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನರಂಜನೆಯ ಉದ್ದೇಶದಿಂದ ಟೆಲಿವಿಷನ್(ಟಿ.ವಿ)ಗೆ ಇಂದು ಎಲ್ಲರು ಅವಲಂಬಿತರಾಗಿದ್ದಾರೆ. ಆದರೆ ಸೆಟ್‍ಟಾಪ್ ಬಾಕ್ಸ್ ಅಳವಡಿಸಿಕೊಂಡಿಲ್ಲ. ಸೆಟ್ ಟಾಪ್ ಬಾಕ್ಸ್ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರದ ಆದೇಶವಾಗಿದ್ದು, ಸರ್ಕಾರದ ಆದೇಶಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕಾಗಿದೆ ಎಂದರು.
ಸೆಟ್‍ಟಾಪ್ ಬಾಕ್ಸ್ ಅಳವಡಿಕೆಗೆ ಯಾವುದೇ ವಿಳಂಬ, ನೆಪಗಳನ್ನು ಹೇಳದೆ ಜಿಲ್ಲೆಯ ಎಲ್ಲಾ ಕೇಬಲ್ ಅಪರೇಟರ್‍ಗಳು ಸೆಟ್‍ಟಾಪ್ ಬಾಕ್ಸ್ ಅಳವಡಿಸಿಕೊಳ್ಳಲು ಟಿ.ವಿ. ವೀಕ್ಷಕರು, ಗ್ರಾಹಕರಿಗೆ  ತಿಳಿಸಬೇಕು ಎಂದು ಸೂಚಿಸಿದರು.
ಟಿ.ವಿ. ಗಳಿಗೆ ಸೆಟ್‍ಟಾಪ್ ಬಾಕ್ಸ್ ಉಪಯೋಗಿಸುವಲ್ಲಿ ಸಾಮಾನ್ಯವಾಗಿ ಎಲ್ಲ ಜಿಲ್ಲೆಗಳು ಶೇ. 100ರಷ್ಟು ಸಾಧನೆಗೈದಿವೆ. ಈ ವಿಷಯದಲ್ಲಿ ಜಿಲ್ಲೆಯ ಸಾಧನೆ ಶೂನ್ಯವಾಗಿದೆ. ಇತರೆ ಜಿಲ್ಲೆಗಳಂತೆ ನಾವು ಶೇ. 100ರಷ್ಟು ಸಾಧನೆ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಮೊದಲು ಸೆಟ್‍ಟಾಪ್ ಬಾಕ್ಸ್ ಉಪಯೋಗದ ಬಗ್ಗೆ ಜನರಲ್ಲಿ ತಿಳಿಹೇಳಿ ನಂತರ ಯಾರು ಅಳವಡಿಸಿಕೊಳ್ಳುವುದಿಲ್ಲವೋ ಅಂತಹವರ ಕೇಬಲ್ ಸಂಪರ್ಕವನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಿ. ಈ ಹಿಂದೆಯೆ ಎಲ್ಲ ಕೇಬಲ್ ಅಪರೇಟರ್‍ಗಳಿಗೂ ಸೆಟ್‍ಟಾಪ್ ಬಾಕ್ಸ್ ಅಳವಡಿಸಿಕೊರ್ಲಲುವ ಸಂಬಂಧ  ಸೂಚನೆ ನೀಡಲಾಗಿತ್ತು. ಆದರೆ ಅಪರೇಟರ್‍ಗಳು ಸೂಚನೆ ಪಾಲಿಸಿಲ್ಲ. ಸೂಚಿತ ಅವಧಿಯೊಳಗೆ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು..
ಎಲ್ಲ ಕೇಬಲ್ ಅಪರೇಟರ್‍ಗಳು ಗ್ರಾಹಕರ ಮನವೊಲಿಸಿ ಸೆಟ್‍ಟಾಪ್ ಬಾಕ್ಸ್ ಉಪಯೋಗಿಸಲು ಪ್ರೇರೆಪಿಸಬೇಕು. ಅಕ್ಟೋಬರ್ 15ರೊಳಗೆ ಶೇ. 60ರಷ್ಟು ಗುರಿ ಪೂರ್ಣಗೊಳಿಸಿಬೇಕು. ಅಕ್ಟೋಬರ್  ಅಂತ್ಯದೊಳಗೆ ಸೆಟ್ ಟಾಪ್ ಬಾಕ್ಸ್ ಅಳವಡಿಸಿಕೊಳ್ಳುವಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು. ತಪ್ಪಿದಲ್ಲಿ ಕೇಬಲ್ ಅಪರೇಟರ್‍ಗಳ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ತಾಕೀತು ಮಾಡಿದರು.
ಪೊಲೀಸ್ ಉಪ ಅದೀಕ್ಷಕರಾದ ಗಂಗಾಧರಸ್ವಾಮಿ, ನಗರಸಭೆ ಪೌರಾಯುಕ್ತರಾದ ರಾಜಣ್ಣ, ಯೋಜನಾ ನಿರ್ದೆಶಕರಾದ ರವಿಕುಮಾರ್, ಜಿಲ್ಲಾ ಹಾಗೂ ತಾಲೂಕು ಕೇಬಲ್ ಅಪರೇಟರ್ ಮಾಲೀಕರ ಸಂಘದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಜಿಲ್ಲೆಯ ಎಲ್ಲ ಕೇಬಲ್ ಅಪರೇಟರ್‍ಗಳು ಹಾಗೂ ಇನ್ನಿತರರು ಸಭೆಯಲ್ಲಿ ಹಾಜರಿದ್ದರು.

ಅ. 5, 6ರಂದು ವಿಭಾಗಮಟ್ಟದ ಬಾಲಕ, ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ  
ಚಾಮರಾಜನಗರ, ಅ. 03 (ಕರ್ನಾಟಕ ವಾರ್ತೆ):- ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಜೆ.ಎಸ್.ಎಸ್.ವಿದ್ಯಾಸಂಸ್ಥೆ ವತಿಯಿಂದ ಅಕ್ಟೋಬರ್ 5 ಮತ್ತು 6ರಂದು  ರಂದು 17 ವರ್ಷ ವಯೋಮಿತಿಯ ಬಾಲಕ, ಬಾಲಕಿಯರ ಮೈಸೂರು ವಿಭಾಗಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ನಗರದ ಜೆ.ಎಸ್.ಎಸ್. ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
 ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಅಕ್ಟೋಬರ್ 5ರಂದು ಬೆಳಿಗ್ಗೆ 10 ಗಂಟೆಗೆ ಕ್ರೀಡಾ ದ್ವಜಾರೊಹಣ ನೆರವೇರಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಪಂದ್ಯಾವಳಿಯನ್ನು ಉದ್ಘಾಟನೆ ಮಾಡುವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ ಅವರು ಘನ ಉಪಸ್ಥಿತಿ ವಹಿಸುವರು.  ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಕ್ರೀಡಾಜ್ಯೋತಿ ಸ್ವೀಕಾರ ಮಾಡುವರು
ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕೆ.ಟಿ. ಶ್ರೀಕಂಠೇಗೌಡ, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ.ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ,  ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪಿ. ಎನ್. ದಯಾನಿಧಿ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಮಂಗಳೂರು ಜಿಲ್ಲೆಗಳ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅ.7ರಂದು ಚಾ.ನಗರಸಭೆ ಸಾಮಾನ್ಯ ಸಭೆ
ಚಾಮರಾಜನಗರ, ಅ. 04 (ಕರ್ನಾಟಕ ವಾರ್ತೆ):- ಚಾಮರಾಜನಗರ ನಗರಸಭೆಯ ಸಾಮಾನ್ಯ ಸಭೆಯು ಅಧ್ಯಕ್ಷರಾದ ಎಸ್.ಎನ್ ರೇಣುಕಾ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 7ರಂದು ಬೆಳಿಗ್ಗೆ 11 ಗಂಟೆಗೆ ನಗರಸಭೆ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಕೃತಿಗಳ ಅಧ್ಯಯನದಿಂದ ಬೌದ್ಧಿಕ ಜ್ಞಾನ : ಜಿಲ್ಲಾಧಿಕಾರಿ ಬಿ.ರಾಮು
ಚಾಮರಾಜನಗರ, ಅ. 04 (ಕರ್ನಾಟಕ ವಾರ್ತೆ):- ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬರಹ ಪುಸ್ತಕಗಳನ್ನು ಅಧ್ಯಯನ ಮಾಡುವುದರಿಂದ ಬೌದ್ಧಿಕ ಜ್ಞಾನ, ಆತ್ಮಬಲ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ವಿಶೇಷವಾಗಿ ಅಂಬೇಡ್ಕರ್ ಕುರಿತ ಕೃತಿಗಳನ್ನು ಹೆಚ್ಚು ಓದಬೇಕಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ವಿಚಾರಸಂಕಿರಣವನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಜೀವನವೇ ಒಂದು ಸಂದೇಶವಾಗಿದೆ. ಅಗಾಧ ಪಾಂಡಿತ್ಯ ಜ್ಞಾನ ಹೊಂದಿದ್ದ ಅಂಬೇಡ್ಕರ್ ಅವರ ಬದುಕು ಹಾಗೂ ಚಿಂತನೆಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡಿದಂತೆಲ್ಲಾ ಭೌದ್ಧಿಕ ಬೆಳವಣಿಗೆಯಾಗಲಿದೆ. ವಿದ್ಯಾರ್ಥಿಗಳು ಅಂಬೇಡ್ಕರ್ ಬಗೆಗಿನ ಪುಸ್ತಕಗಳನ್ನು ಓದಿ ವಿಚಾರಧಾರೆಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಸಮಾನತೆ ಮಂತ್ರವನ್ನು ಹೇಳಿಕೊಟ್ಟವರಲ್ಲಿ ಅಂಬೇಡ್ಕರ್ ಅವರೇ ಅಗ್ರಗಣ್ಯರು. ಮನುಷ್ಯತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟ ನಾಯಕರಲ್ಲಿ ಅಂಬೇಡ್ಕರ್ ಅವರು ಉನ್ನತ ಸ್ಥಾನದಲ್ಲಿ ನಿಲ್ಲುತ್ತಾರೆ. ಶಿಕ್ಷಣ, ಸಾಮಾಜಿಕ ಸ್ಥಾನಮಾನಗಳನ್ನು ನಿರಾಕರಣೆ ಮಾಡಿದ ಸಂದರ್ಭದಲ್ಲಿ ಹೋರಾಟ ಮಾಡುವ ಮೂಲಕ ಮುಂದಾದ ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದರು.
ವಿದ್ಯಾರ್ಥಿಗಳಿಗೆ ಅವರದ್ದೇ ಆದ ದೃಷ್ಠಿಕೋನ ಇರಬೇಕು. ವಿದ್ಯಾರ್ಥಿಗಳಿಗೆ ಸಾಕಷ್ಟು ವಿಫುಲ ಅವಕಾಶಗಳಿವೆ. ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಗುರಿ ಹೊಂದಬೇಕು. ಹೊಣೆಗಾರಿಕೆ ಹಾಗೂ ಅಂತರ್ಗತವಾಗಿರುವ ಮನೋಶಕ್ತಿಯಿಂದ ಮೇಲೆ ಬರಬೇಕು ಎಂದು ಜಿಲ್ಲಾಧಿಕಾರಿಯವರು ಸಲಹೆ ಮಾಡಿದರು.
ಮಹಿಳಾ ವಿಮೋಚನೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ವಿಷಯ ಕುರಿತು ಉಪನ್ಯಾಸ ನೀಡಿದ ಮೈಸೂರು ಮಹಾರಾಜ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಯಶೋಧ ಅವರು ಮಹಿಳೆಯರಿಗೆ ಸಂವಿಧಾನಾತ್ಮಕ ಕಾನೂನುಗಳು ಹಾಗೂ ಹಕ್ಕುಗಳನ್ನು ಪಡೆಯಲು ಅಂಬೇಡ್ಕರ್ ಅವರು ಅವಕಾಶ ನೀಡಿದ್ದಾರೆ. ಹೀಗಾಗಿಯೇ ಅಂಬೇಡ್ಕರ್ ಅವರನ್ನು ಮಹಿಳಾ ಹಕ್ಕುಗಳ ಹರಿಕಾರರೆಂದೇ ಕರೆಯಲಾಗುತ್ತದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಅರ್ಥೈಸುವಿಕೆ ವಿಷಯ ಕುರಿತು ಮಾತನಾಡಿದ ಬನ್ನೂರು ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಡಾ. ಕೃಷ್ಣರಾಜೇಂದ್ರ ಭರತ್ ಅವರು ಅಂಬೇಡ್ಕರ್ ಅವರು ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ದಲಿತ ವರ್ಗಗಳಿಗೆ ಪ್ರಾಧಾನ್ಯತೆ ಮತ್ತು ಅವಕಾಶಗಳಿಗೆ ಒಲವು ವ್ಯಕ್ತಪಡಿಸಿದರು ಎಂದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ಎಚ್.ಎಸ್. ಪ್ರೇಮಲತಾ ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ವಿಭಾಗದ ರಾಜ್ಯಶಾಸ್ತ್ರ ವಿಭಾಗದ ಸಂಯೋಜಕರಾದ ಡಾ. ಪಿ. ದೇವರಾಜು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಸತೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ಎ. ರಮೇಶ್, ಮುಖಂಡರಾದ ವೆಂಕಟರಮಣ (ಪಾಪು), ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಮ್ಮ ಗ್ರಾಮ-ನಮ್ಮ ಯೋಜನೆ ಕುರಿತ ವಿಶೇಷ ಪ್ರಚಾರ ಕಲಾಜಾಥಾಗೆ ಚಾಲನೆ  
ಚಾಮರಾಜನಗರ, ಅ. 04 (ಕರ್ನಾಟಕ ವಾರ್ತೆ):- ಗ್ರಾಮಗಳ ಅಭಿವೃದ್ಧಿ ಯೋಜನೆಯನ್ನು ತಯಾರಿಸಲು ರೂಪಿಸಿರುವ ನಮ್ಮಗ್ರಾಮ-ನಮ್ಮ ಯೋಜನೆ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿರುವ ವಿಶೇಷ ಪ್ರಚಾರ ಕಲಾಜಾಥಾಗೆ ಇಂದು ಚಾಲನೆ ನೀಡಲಾಯಿತು.
ಜಿಲ್ಲಾಡಳಿತ ಭವನದ ಅವರಣದಲ್ಲಿಂದು ವಿಶೇಷವಾಗಿ ವಿನ್ಯಾಸಗೊಳಿಸಿರುವ ನಮ್ಮ ಗ್ರಾಮ-ನಮ್ಮ ಯೋಜನೆ ಮಾಹಿತಿ ಕುರಿತ ಪ್ರಚಾರ ವಾಹನಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಹಸಿರು ನಿಶಾನೆ ತೋರುವ ಮೂಲಕ ಕಲಾಜಾಥಾವನ್ನು ಉದ್ಘಾಟಿಸಿದರು.
ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆ ಸದಾಶಯಗಳ ಸಾಧನೆಗಾಗಿ ಗ್ರಾಮಪಂಚಾಯಿತಿಗಳ ಪಂಚವಾರ್ಷಿಕ ಅಭಿವೃದ್ಧಿ ಮುನ್ನೋಟವನ್ನು ಸಮುದಾಯದ ಸಹಭಾಗಿತ್ವದೊಂದಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೆ ಸ್ಥಳೀಯ ಅಗತ್ಯ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುವ ನಮ್ಮ ಗ್ರಾಮ-ನಮ್ಮ ಯೋಜನೆಯು ಯಶಸ್ವಿಯಾಗಲೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಮಚಂದ್ರ ಆಶಿಸಿದರು.
ಯೋಜನೆಯ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಹಮ್ಮಿಕೊಂಡಿರುವ ಪ್ರಚಾರ ಕಾರ್ಯವು ಫಲಪ್ರದವಾಗಲಿ. ಗ್ರಾಮದಲ್ಲಿ ಅನುಷ್ಠಾನವಾಗಿರುವ ಯೋಜನೆ, ಕಾರ್ಯಕ್ರಮಗಳು ಗ್ರಾಮೀಣರಿಗಾಗಿ ಎಂಬ ಮನೋಭಾವನೆ ಮೂಡಿಸಲು ರೂಪಿಸಲಾಗಿರುವ ನಮ್ಮ ಗ್ರಾಮ-ನಮ್ಮ ಯೋಜನೆ ಆಶಯಗಳು ಜನತೆಗೆ ತಲುಪಲಿ ಎಂದು ರಾಮಚಂದ್ರ ಅವರು ಹಾರೈಸಿದರು.
ಒಟ್ಟು 20 ದಿನಗಳ ಕಾಲ ಜಿಲ್ಲೆಯ ನಾಲ್ಕು ತಾಲೂಕುಗಳ 40 ಗ್ರಾಮ ಪಂಚಾಯಿತಿ ಕೇಂದ್ರಗಳಿಗೆ ವಿಶೇಷ ಪ್ರಚಾರ ಕಲಾಜಾಥಾ ಭೇಟಿ ನೀಡಿ ಹಾಡು, ಬೀದಿನಾಟಕಗಳ ಮೂಲಕ ಯೋಜನೆಯ ಮಹತ್ವವನ್ನು ಸಾರಲಿದೆ.
ಉದ್ಘಾಟನಾ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಕೃಷಿ ಮತ್ತು ಕೈಗಾರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುನಿರಾಜಪ್ಪ, ಮುಖ್ಯ ಯೊಜನಾಧಿಕಾರಿ ಮಾದೇಶು, ಮುಖ್ಯ ಲೆಕ್ಕಾಧಿಕಾರಿ ಮುದ್ದುರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ಎ. ರಮೇಶ್, ಇತರರು ಹಾಜರಿದ್ದರು.

ಅ. 5ರಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಾಂಸ್ಕøತಿಕ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ
ಚಾಮರಾಜನಗರ, ಅ. 04 (ಕರ್ನಾಟಕ ವಾರ್ತೆ):- ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಸಕ್ತ ಸಾಲಿನ ಸಾಂಸ್ಕøತಿಕ, ಕ್ರೀಡೆ ಹಾಗೂ ಎನ್.ಎಸ್.ಎಸ್. ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಅಕ್ಟೋಬರ್ 5ರಂದು ಬೆಳಿಗ್ಗೆ 10 ಗಂಟೆಗೆ ಕಾಲೇಜು ಅವರಣದಲ್ಲಿ ನಡೆಯಲಿದೆ.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ. ಆರ್. ಸುಮತಿ ಅಧ್ಯಕ್ಷತೆ ವಹಿಸುವರು.
ಲೋಕಸಭಾ ಸದಸ್ಯರರಾದ ಆರ್. ಧ್ರುವನಾರಾಯಣ ಅವರು ಗೌರವಾನ್ವಿತ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ವೆಂಕಟಸ್ವಾಮಿ ಅವರು ಪ್ರಧಾನ ಭಾಷಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.


ಅ.7ರಂದು ನಗರದಲ್ಲಿ ದಸರಾ ಮಹೋತ್ಸವ ಉದ್ಘಾಟನೆ
ಚಾಮರಾಜನಗರ, ಅ. 05 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಅಕ್ಟೋಬರ್ 7 ರಿಂದ 9ರವರೆಗೆ ಮೂರು  ದಿನಗಳ ಕಾಲ ದಸರಾ ಮಹೋತ್ಸವ ನಡೆಯಲಿದೆ.
ಅಕ್ಟೋಬರ್ 7ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯದೊಂದಿಗೆ ಚಾಮರಾಜನಗರ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ.
ಅಂದು ಸಂಜೆ 6.30 ಗಂಟೆಗೆ ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಲೋಕೋಪಯೋಗಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಜ್ಯೋತಿ ಬೆಳಗಿಸುವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ನಗರಸಭೆಯ ಅಧ್ಯಕ್ಷರಾದ ಎಸ್. ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಚ್. ವಿ. ಚಂದ್ರು, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳು
ಚಾಮರಾಜನಗರ, ಅ. 05 (ಕರ್ನಾಟಕ ವಾರ್ತೆ):- ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನ ಆವರಣದ ಶ್ರೀ ಚಾಮರಾಜೇಶ್ವರ ವೇದಿಕೆಯಲ್ಲಿ ದಸರಾ ಮಹೋತ್ಸವ ಅಂಗವಾಗಿ ಅಕ್ಟೋಬರ್ 7 ರಿಂದ 10ರವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದ್ದು ವಿವರ ಇಂತಿವೆ.
ಅಕ್ಟೋಬರ್ 7ರಂದು ಸಂಜೆ 4 ರಿಂದ 4.30ರವರೆಗೆ ಸಿದ್ದಯ್ಯನಪುರದ ಶ್ರೀ ಮಂಟೇಲಿಂಗೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಅವರಿಂದ ರಂಗಗೀತೆ, 4.30 ರಿಂದ 5.30ರವರೆಗೆ ಸಿ.ಎಂ. ನರಸಿಂಹಮೂರ್ತಿ, ಬಿ. ಬಸವರಾಜು, ಎಸ್. ನಟರಾಜು, ಲತಾ, ಮಹಾಲಿಂಗಸ್ವಾಮಿ, ಎಂ. ಮಂಜುನಾಥ್, ಜೆ.ಬಿ. ಮಹೇಶ್, ಜೆ.ಬಿ. ರಾಜೇಶ್ ಹಾಗೂ ಎಸ್. ಚರಣ್ ಅವರಿಂದ ಸುಗಮ ಸಂಗೀತ, 5.30 ರಿಂದ 6 ಗಂಟೆವರೆಗೆ ಅರಸೀಕೆರೆ ಕುಮಾರಯ್ಯ ಮತ್ತು ತಂಡದಿಂದ ಚಿಟ್ಟಿಮೇಳ, ಮೇಲುಕೋಟೆ ಶಿವಣ್ಣ ಮತ್ತು ತಂಡದಿಂದ ಪಟ ಕುಣಿತ, ಮಂಡ್ಯ ಅನಿಲಕುಮಾರ್ ಮತ್ತು ತಂಡದಿಂದ ಡೊಳ್ಳು ಕುಣಿತ, 7 ರಿಂದ 8ರವರೆಗೆ ಬೆಂಗಳೂರಿನ ಅರ್ಥಾ ಡ್ಯಾನ್ಸ್ ಗ್ರೂಪ್ ಅವರಿಂದ ನೃತ್ಯರೂಪಕ, 8 ರಿಂದ 10 ಗಂಟೆಯವರೆಗೆ ರಾಜ್ಯ ಪ್ರಶಸ್ತಿ ವಿಜೇತರಾದ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ನವೀನ್ ಸಜ್ಜು ಮತ್ತು ಸೈಕ್ಲೂನ್ ಡ್ಯಾನ್ಸ್ ಅಕಾಡೆಮಿ ಅವರಿಂದ ಚಲನಚಿತ್ರ ಮತ್ತು ಜನಪದ ಸಂಜೆ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 8ರಂದು ಸಂಜೆ 4 ರಿಂದ 4.30ರವರೆಗೆ ಮಂಗಲದ ಶ್ರೀ ಶಂಕರÉೀಶ್ವರ ಕಲಾ ಸಂಘದವರಿಂದ ರಂಗಗೀತೆ, 4.30 ರಿಂದ 5.30ರವರೆಗೆÀ ಜಿ. ರಾಜಪ್ಪ, ಹೊಂಗನೂರು ನಾಗರಾಜು, ನಾಗಮಹದೇವ, ರಾಮಣ್ಣ, ಪಿ. ನಾಗೇಶ್, ಹೆಚ್.ಎಂ. ಶಿವಣ್ಣ, ರಂಗು ಅಮ್ಮನಪುರ, ಮಾದೇಶ ಬಂಡಿಗೆರೆ, ಮಂಜುನಾಥ್ ಅಮಚವಾಡಿ ಅವರಿಂದ ಜನಪದ ಝೇಂಕಾರ, 5.30 ರಿಂದ 5.45 ಗಂಟೆವರೆಗೆ ಕಾಸರವಾಡಿ ದೇವರಾಜು ಮತ್ತು ತಂಡದಿಂದ ಪೂಜಾ ಕುಣಿತ, ರಾಮಸಮುದ್ರದ ಆರ್.ಎಂ. ಶಿವಮಲ್ಲೇಗೌಡ ಮತ್ತು ತಂಡದಿಂದ ಗೊರವರ ಕುಣಿತ, 6.30 ರಿಂದ 7.30ರವರೆಗೆ ಬೆಂಗಳೂರಿನ ಎಂ.ಡಿ. ಪಲ್ಲವಿ ಮತ್ತು ತಂಡದಿಂದ ಸುಗಮ ಸಂಗೀತ, 7.30 ರಿಂದ 9.30ರವರೆಗೆ ಮಂಡ್ಯ ರಮೇಶ್ ಮತ್ತು ತಂಡದಿಂದ ಚಾಮಚೆಲುವೆ ನಾಟಕ, 9.30 ರಿಂದ 10.30ರವರೆಗೆ ಮೈಸೂರಿನ ಶ್ರೀನಿವಾಸ್ ಮತ್ತು ತಂಡ (ವಿಷ್ಣು ಮ್ಯೂಸಿಕ್ ಗ್ರೂಪ್) ಅವರಿಂದ ಸಂಗಿತ ರಸಮಂಜರಿ ಏರ್ಪಾಡಾಗಿದೆ.
ಅಕ್ಟೋಬರ್ 9ರಂದು ಸಂಜೆ 4 ರಿಂದ 4.30ರವರೆಗೆ ರಾಮಸಮುದ್ರದ ನಿಂಗಶೆಟ್ಟಿ ಮತ್ತು ತಂಡದಿಂದ ತಂಬೂರಿ ಪದ, 4.30 ರಿಂದ 5.15ರವರೆಗೆ ರಾಮಸಮುದ್ರದ ಪಿ. ಮಹೇಶ, ಕಲೆ ನಟರಾಜು, ಸುರೇಶನಾಗ್, ಮಂಜು ಎಸ್. ಗಾಳೀಪುರ, ರಂಗಸ್ವಾಮಿ ಸಿ, ಅರ್ಜುನ್ ಸುರಾಗ್, ಮಹದೇವ ಯಡಿಯೂರು, ಮಲ್ಲಣ್ಣ, ಮಹದೇವಸ್ವಾಮಿ ಕಮರವಾಡಿ ಅವರಿಂದ ಜನಪದ ಝೇಂಕಾರ, 5.15 ರಿಂದ 6 ಗಂಟೆಯವರೆಗೆ ನಗರದ ಶಾರದಾ ನೃತ್ಯ ಶಾಲೆಯವರಿಂದ ನೃತ್ಯ ರೂಪಕ,  6 ರಿಂದ 8ರವರೆಗೆ ತಬಲ ನಾಣಿಯವರ ಹಾಸ್ಯರಂಜಿನಿ ತಂಡದಿಂದ ನಗೆಹಬ್ಬ, 8 ರಿಂದ 10 ಗಂಟೆಯವರೆಗೆ ಸಂಗೀತ ರವೀಂದ್ರನಾಥ್, ಸಂತೋಷ್ ವೆಂಕಿ, ದೀಪಕ್ ದೊಡ್ಡೇರಿ, ಸಿಂಚನ್ ದೀಕ್ಷಿತ್, ಸಂಗೀತ ರಾಜೀವ್, ವ್ಯಾಸರಾಜ್, ಚಿನ್ಮಯಿ, ಆಕಾಂಕ್ಷ ಬಾದಾಮಿ ಅವರಿಂದ ಚಲನಚಿತ್ರ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್À 10ರಂದು ಸಂಜೆ 6 ರಿಂದ 10ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ಕಾರ್ಯಕ್ರಮ ನಡೆಯಲಿದ್ದು ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.


ಅ.7ರಂದು ನಗರದಲ್ಲಿ ದಸರಾ ಮಹೋತ್ಸವ ಉದ್ಘಾಟನೆ
ಚಾಮರಾಜನಗರ, ಅ. 05 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಅಕ್ಟೋಬರ್ 7 ರಿಂದ 10ರವರೆಗೆ ದಸರಾ ಮಹೋತ್ಸವ ನಡೆಯಲಿದೆ.
ಅಕ್ಟೋಬರ್ 7ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯದೊಂದಿಗೆ ಚಾಮರಾಜನಗರ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ.
ಅಂದು ಸಂಜೆ 6.30 ಗಂಟೆಗೆ ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಲೋಕೋಪಯೋಗಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಜ್ಯೋತಿ ಬೆಳಗಿಸುವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ನಗರಸಭೆಯ ಅಧ್ಯಕ್ಷರಾದ ಎಸ್. ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಚ್. ವಿ. ಚಂದ್ರು, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.


ತಾಲೂಕು, ಮುಖ್ಯ ಪಟ್ಟಣಗಳಿಗೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಭೇಟಿ: ನಾಗರಿಕರಿಂದ ದೂರು ಸ್ವೀಕಾರ
ಚಾಮರಾಜನಗರ, ಅ. 05 (ಕರ್ನಾಟಕ ವಾರ್ತೆ):- ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತಾಲೂಕು ಹಾಗೂ ಮುಖ್ಯ ಪಟ್ಟಣಕ್ಕೆ ಭೇಟಿ ನೀಡಿ ನಾಗರಿಕರಿಂದ ದೂರು ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ.
ಅಕ್ಟೋಬರ್ 6ರಂದು ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ಗುಂಡ್ಲುಪೇಟೆ ಸರ್ಕಾರಿ ಅತಿಥಿಗೃಹ, ಅಕ್ಟೋಬರ್ 14ರಂದು ಮಧ್ಯಾಹ್ನ 3ರಿಂದ 5 ಗಂಟೆಯವರೆಗೆ ಚಾಮರಾಜನಗರದ ಸರ್ಕಾರಿ ಅತಿಥಿಗೃಹ, ಅಕ್ಟೋಬರ್ 18ರಂದು ಬೆಳಿಗ್ಗೆ 11ರಿಂದ 1 ಗಂಟೆಯವರೆಗೆ ಯಳಂದೂರಿನ ಸರ್ಕಾರಿ ಅತಿಥಿಗೃಹ, ಅಕ್ಟೋಬರ್ 24ರಂದು ಮಧ್ಯಾಹ್ನ 3ರಿಂದ 5 ಗಂಟೆಯವರೆಗೆ ಕೊಳ್ಳೇಗಾಲದ ಸರ್ಕಾರಿ ಅತಿಥಿಗೃಹ, ಅಕ್ಟೋಬರ್ 28ರಂದು ಮಧ್ಯಾಹ್ನ 3ರಿಂದ 5 ಗಂಟೆಯವರೆಗೆ ಹನೂರಿನ ಸರ್ಕಾರಿ ಅತಿಥಿಗೃಹದಲ್ಲಿ ನಾಗರಿಕರು ಅರ್ಜಿ ಸಲ್ಲಿಸಬಹುದಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಲಂಚದ ಹಣಕ್ಕೆ ಒತ್ತಾಯ, ಕೆಲಸ ಮಾಡಿಕೊಡುವಲ್ಲಿ ವಿಳಂಬ, ಇನ್ನಿತರ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಉಪ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಯಳಂದೂರು : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ಚಾಮರಾಜನಗರ, ಅ. 06 (ಕರ್ನಾಟಕ ವಾರ್ತೆ):- ಯಳಂದೂರು ತಾಲೂಕಿಗೆ ಸಂಬಂಧಿಸಿದಂತೆ ಖಾಲಿ ಇದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಪ್ರಕಟಿಸಲಾಗಿದೆ.
ಆಯ್ಕೆ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಅಕ್ಟೋಬರ್ 18ರೊಳಗೆ ಯಳಂದೂರು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಲಿಖಿತವಾಗಿ ಅಗತ್ಯ ದಾಖಲೆಗಳೊಡನೆ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳ ತಾತ್ಕಾಲಿಕ ಪಟ್ಟಿ ಪ್ರಕಟ
ಚಾಮರಾಜನಗರ, ಅ. 06 (ಕರ್ನಾಟಕ ವಾರ್ತೆ):- ಚಾಮರಾಜನಗರ ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಖಾಲಿ ಇದ್ದ 5 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 20 ಸಹಾಯಕಿಯರ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಂತೆಮರಹಳ್ಳಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಪ್ರಕಟಿಸಲಾಗಿದೆ.
ಆಯ್ಕೆ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಅಕ್ಟೋಬರ್ 18ರೊಳಗೆ ತಾಲೂಕಿನ ಸಂತೆಮರಹಳ್ಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಲಿಖಿತವಾಗಿ ಅಗತ್ಯ ದಾಖಲೆಗಳೊಡನೆ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಅ. 06 (ಕರ್ನಾಟಕ ವಾರ್ತೆ):- ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವ ಅಭ್ಯರ್ಥಿಗಳಿಗೆ ಲಘು ವಾಹನ ಚಾಲನಾ ತರಬೇತಿ ನೀಡುವ ಸಲುವಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ಕನಿಷ್ಟ 10ನೇ ತರಗತಿ ತೇರ್ಗಡೆಯಾಗಿರಬೇಕು. 18 ರಿಂದ 35ರ ವಯೋಮಿತಿಯೊಳಗಿರಬೇಕು. (ವಯೋಮಿತಿ ಮೀರುತ್ತಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ) ಕುಟುಂಬದ ಆದಾಯ 2 ಲಕ್ಷ ರೂ. ಮೀರಿರಬಾರದು. ಜಿಲ್ಲಾ ವೈದ್ಯಾಧಿಕಾರಿಗಳಿಂದ ದೈಹಿಕ ಅರ್ಹತೆ ಪ್ರಮಾಣ ಪತ್ರ ಪಡೆದು ಲಗತ್ತಿಸಬೇಕು.
ನಿಗದಿತ ನಮೂನೆ ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಅಕ್ಟೋಬರ್ 25ರೊಳಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ಚಾ.ನಗರ : ವಸತಿ ಯೋಜನೆ ಸೌಲಭ್ಯಕ್ಕೆ ವಸತಿ ರಹಿತರಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಅ. 06 (ಕರ್ನಾಟಕ ವಾರ್ತೆ):- ಚಾಮರಾಜನಗರ ನಗರಸಭೆಯು ವಾಜಪೇಯಿ ವಸತಿ ಯೋಜನೆಯಡಿ ವಸತಿ ರಹಿತರಿಗೆ ವಸತಿ ಕಲ್ಪಿಸುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗ ಹಾಗೂ ಅಲ್ಪಸಂಖ್ಯಾತ ವಸತಿ ರಹಿತರಿಗೆ ವಸತಿ ಯೋಜನೆ ಸೌಲಭ್ಯ ಪಡೆಯಲು ಗುರಿ ನಿಗದಿ ಮಾಡಲಾಗಿದೆ.
ನಗರಸಭಾ ವ್ಯಾಪ್ತಿಯಲ್ಲಿ ವಾಸವಾಗಿದ್ದು ನಿವೇಶನ ಹೊಂದಿರುವ (ಖಾತೆ ಹೊಂದಿರುವವರು) ನಗರಸಭೆ ಕಚೇರಿಯಿಂದ ಅಕ್ಟೋಬರ್ 15ರೊಳಗೆ ಅರ್ಜಿ ಪಡೆದು ಭರ್ತಿ ಮಾಡಿ ಅಕ್ಟೋಬರ್ 20ರೊಳಗೆ ಸಲ್ಲಿಸಬೇಕು. ವಿವರಗಳಿಗೆ ನಗರಸಭೆ ಕಾರ್ಯಾಲಯ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




ಮಕ್ಕಳಿಗೆ ಮಾದಕ ದ್ರವ್ಯ, ಔಷಧ, ತಂಬಾಕು ಉತ್ಪನ್ನ ನೀಡುವವರ ವಿರುದ್ಧ ಕ್ರಮ
ಚಾಮರಾಜನಗರ, ಅ. 06 (ಕರ್ನಾಟಕ ವಾರ್ತೆ):- ಮಕ್ಕಳಿಗೆ ವೈದ್ಯರ ಸೂಚನೆಯನ್ನು ಹೊರತುಪಡಿಸಿ ಮಾದಕ ದ್ರವ್ಯ, ಔಷಧ ಅಥವಾ ತಂಬಾಕು ಉತ್ಪನ್ನದಂತಹ ವಸ್ತುಗಳನ್ನು ನೀಡುವವರಿಗೆ ಅಥವಾ ನೀಡಲು ಕಾರಣರಾದವರಿಗೆ 7 ವರ್ಷಗಳ ಕಾರಾಗೃಹ ಸಜೆ ಹಾಗೂ 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಿಳಿಸಿದೆ.
ಬಾಲನ್ಯಾಯ (ಮಕ್ಕಳ ಪಾಲನೆ,ಪೋಷಣೆ ಮತ್ತು ರಕ್ಷಣೆ) ಕಾಯಿದೆ 2015ರ ಪ್ರಕಾರ ಮಕ್ಕಳನ್ನು ಮಾದಕ ದ್ರವ್ಯ, ಔಷಧ ಅಥವಾ ತಂಬಾಕು ಉತ್ಪನ್ನದಂತಹ ವಸ್ತುಗಳನ್ನು ಮಾರಾಟ ಮಾಡಲು, ಸಾಗಣೆ, ಪೂರೈಕೆ ಅಥವಾ ಕಳ್ಳಸಾಗಣೆಗಾಗಿ ಬಳಸಿಕೊಂಡರೆ 7 ವರ್ಷಗಳ ಕಾರಾಗೃಹ ಕಠಿಣ ಸಜೆ ಹಾಗೂ 1 ಲಕ್ಷ ರೂ. ದಂಡ ವಿಧಿಸಬಹುದಾದ ಅಪರಾಧವಾಗುತ್ತದೆ.
ಸದರಿ ಕಾನೂನನ್ನು ಉಲ್ಲಂಘಿಸಿದರೆ ಬಾಲನ್ಯಾಯ ಕಾಯಿದೆಯಡಿ ಪ್ರಕರಣ ದಾಖಲಿಸಲು ಸಂಬಂಧಪಟ್ಟ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಅಥವಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಬೇಕು.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾ ಅಧಿಕಾರಿಗಳನ್ನು (ದೂ.ಸಂ. 08226-222354) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಅ. 24ಕ್ಕೆ ತಾಲೂಕು ಪ.ಜಾ., ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ ಮುಂದೂಡಿಕೆ
ಚಾಮರಾಜನಗರ, ಅ. 06 (ಕರ್ನಾಟಕ ವಾರ್ತೆ):- ಚಾಮರಾಜನಗರ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಅಕ್ಟೋಬರ್ 14ರಂದು ನಿಗದಿ ಮಾಡಲಾಗಿದ್ದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಲಾಗಿದೆ ಎಂದು ತಾಲೂಕು ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲನ್ಯಾಯ ಕಾಯಿದೆಯಡಿ ಸರ್ಕಾರೇತರ ಸ್ವಯಂಸಂಸ್ಥೆಗಳ ನೋಂದಣಿಗೆ ಸೂಚನೆ
ಚಾಮರಾಜನಗರ, ಅ. 06 (ಕರ್ನಾಟಕ ವಾರ್ತೆ):- ಬಾಲನ್ಯಾಯ (ಪಾಲನೆ ಮತ್ತು ರಕ್ಷಣೆ) ಕಾಯಿದೆಯಡಿ ನೋಂದಣಿ ಮಾಡಿಕೊಳ್ಳದೇ ಇರುವ ಸರ್ಕಾರೇತರ ಸ್ವಯಂಸಂಸ್ಥೆಗಳು ಕೂಡಲೇ ಜಿಲ್ಲಾ ಮಕಳ ರಕ್ಷಣಾ ಅಧಿಕಾರಿಗಳನ್ನು ಸಂಪರ್ಕಿಸಿ ನಿಗದಿತ ನಮೂನೆಯಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ಸೂಚಿಸಿದ್ದಾರೆ.
ಈಗಾಗಲೇ ಬಾಲನ್ಯಾಯ ಕಾಯಿದೆಯಡಿ ನೋಂದಣಿಯಾಗಿರುವ ಸಂಸ್ಥೆಗಳು ನೋಂದಣಿ ಅವಧಿ ಮುಗಿಯು 3 ತಿಂಗಳ ಮುಂಚಿತವಾಗಿ ನವೀಕರಣಕ್ಕೆ ಪ್ರಸ್ತಾವನೆಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಸಲ್ಲಿಸಬೇಕು. ತಪ್ಪಿದಲ್ಲಿ ಸೆಕ್ಷನ್ 42(1)ಅನ್ವಯ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ. ದಂಡ  ಪ್ರತ್ಯೇಕ ಅಪರಾಧವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಸಂಸ್ಥೆಯು ಯಾವುದೇ ಕಾಯಿದೆಯಡಿ ನೊಂದಣಿಯಾಗಿದ್ದರೂ ಅದನ್ನು ಹಿಂಪಡೆಯಲು ಅಥವಾ ರದ್ದುಪಡಿಸಲು ಕ್ರಮ ಜರುಗಿಸಲಾಗುವುದು. ಮಕ್ಕಳ ಮೇಲೆ ದೌರ್ಜನ್ಯ ನಡೆದಲ್ಲಿ ಹಾಗೂ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದಲ್ಲಿ ಸಂಸ್ಥೆಯ ಮುಖ್ಯಸ್ಥರೇ ನೇರವಾಗಿ ಹೊಣೆಗಾರರಾಗುತ್ತಾರೆ.
ನಾಗರಿಕರು ತಮ್ಮ ಆಸುಪಾಸಿನಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳು ಇದ್ದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಇಲ್ಲವೇ ನಗರದ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಬಿ.ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ.7ರಂದು ನಗರದಲ್ಲಿ ದಸರಾ ಮಹೋತ್ಸವ ಉದ್ಘಾಟನೆ
ಚಾಮರಾಜನಗರ, ಅ. 06 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಅಕ್ಟೋಬರ್ 7 ರಿಂದ 10ರವರೆಗೆ ನಾಲ್ಕು  ದಿನಗಳ ಕಾಲ ದಸರಾ ಮಹೋತ್ಸವ ನಡೆಯಲಿದೆ.
ಅಕ್ಟೋಬರ್ 7ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯದೊಂದಿಗೆ ಚಾಮರಾಜನಗರ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ.
ಅಂದು ಸಂಜೆ 6.30 ಗಂಟೆಗೆ ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಲೋಕೋಪಯೋಗಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಜ್ಯೋತಿ ಬೆಳಗಿಸುವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ನಗರಸಭೆಯ ಅಧ್ಯಕ್ಷರಾದ ಎಸ್. ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಚ್. ವಿ. ಚಂದ್ರು, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳು
ಚಾಮರಾಜನಗರ, ಅ. 06 (ಕರ್ನಾಟಕ ವಾರ್ತೆ):- ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನ ಆವರಣದ ಶ್ರೀ ಚಾಮರಾಜೇಶ್ವರ ವೇದಿಕೆಯಲ್ಲಿ ದಸರಾ ಮಹೋತ್ಸವ ಅಂಗವಾಗಿ ಅಕ್ಟೋಬರ್ 7 ರಿಂದ 10ರವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದ್ದು ವಿವರ ಇಂತಿವೆ.
ಅಕ್ಟೋಬರ್ 7ರಂದು ಸಂಜೆ 4 ರಿಂದ 4.30ರವರೆಗೆ ಸಿದ್ದಯ್ಯನಪುರದ ಶ್ರೀ ಮಂಟೇಲಿಂಗೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಅವರಿಂದ ರಂಗಗೀತೆ, 4.30 ರಿಂದ 5.30ರವರೆಗೆ ಸಿ.ಎಂ. ನರಸಿಂಹಮೂರ್ತಿ, ಬಿ. ಬಸವರಾಜು, ಎಸ್. ನಟರಾಜು, ಲತಾ, ಮಹಾಲಿಂಗಸ್ವಾಮಿ, ಎಂ. ಮಂಜುನಾಥ್, ಜೆ.ಬಿ. ಮಹೇಶ್, ಜೆ.ಬಿ. ರಾಜೇಶ್ ಹಾಗೂ ಎಸ್. ಚರಣ್ ಅವರಿಂದ ಸುಗಮ ಸಂಗೀತ, 5.30 ರಿಂದ 6 ಗಂಟೆವರೆಗೆ ಅರಸೀಕೆರೆ ಕುಮಾರಯ್ಯ ಮತ್ತು ತಂಡದಿಂದ ಚಿಟ್ಟಿಮೇಳ, ಮೇಲುಕೋಟೆ ಶಿವಣ್ಣ ಮತ್ತು ತಂಡದಿಂದ ಪಟ ಕುಣಿತ, ಮಂಡ್ಯ ಅನಿಲಕುಮಾರ್ ಮತ್ತು ತಂಡದಿಂದ ಡೊಳ್ಳು ಕುಣಿತ, 7 ರಿಂದ 8ರವರೆಗೆ ಬೆಂಗಳೂರಿನ ಅರ್ಥಾ ಡ್ಯಾನ್ಸ್ ಗ್ರೂಪ್ ಅವರಿಂದ ನೃತ್ಯರೂಪಕ, 8 ರಿಂದ 10 ಗಂಟೆಯವರೆಗೆ ರಾಜ್ಯ ಪ್ರಶಸ್ತಿ ವಿಜೇತರಾದ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ನವೀನ್ ಸಜ್ಜು ಮತ್ತು ಸೈಕ್ಲೂನ್ ಡ್ಯಾನ್ಸ್ ಅಕಾಡೆಮಿ ಅವರಿಂದ ಚಲನಚಿತ್ರ ಮತ್ತು ಜನಪದ ಸಂಜೆ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 8ರಂದು ಸಂಜೆ 4 ರಿಂದ 4.30ರವರೆಗೆ ಮಂಗಲದ ಶ್ರೀ ಶಂಕರÉೀಶ್ವರ ಕಲಾ ಸಂಘದವರಿಂದ ರಂಗಗೀತೆ, 4.30 ರಿಂದ 5.30ರವರೆಗೆÀ ಜಿ. ರಾಜಪ್ಪ, ಹೊಂಗನೂರು ನಾಗರಾಜು, ನಾಗಮಹದೇವ, ರಾಮಣ್ಣ, ಪಿ. ನಾಗೇಶ್, ಹೆಚ್.ಎಂ. ಶಿವಣ್ಣ, ರಂಗು ಅಮ್ಮನಪುರ, ಮಾದೇಶ ಬಂಡಿಗೆರೆ, ಮಂಜುನಾಥ್ ಅಮಚವಾಡಿ ಅವರಿಂದ ಜನಪದ ಝೇಂಕಾರ, 5.30 ರಿಂದ 5.45 ಗಂಟೆವರೆಗೆ ಕಾಸರವಾಡಿ ದೇವರಾಜು ಮತ್ತು ತಂಡದಿಂದ ಪೂಜಾ ಕುಣಿತ, ರಾಮಸಮುದ್ರದ ಆರ್.ಎಂ. ಶಿವಮಲ್ಲೇಗೌಡ ಮತ್ತು ತಂಡದಿಂದ ಗೊರವರ ಕುಣಿತ, 6.30 ರಿಂದ 7.30ರವರೆಗೆ ಬೆಂಗಳೂರಿನ ಎಂ.ಡಿ. ಪಲ್ಲವಿ ಮತ್ತು ತಂಡದಿಂದ ಸುಗಮ ಸಂಗೀತ, 7.30 ರಿಂದ 9.30ರವರೆಗೆ ಮಂಡ್ಯ ರಮೇಶ್ ಮತ್ತು ತಂಡದಿಂದ ಚಾಮಚೆಲುವೆ ನಾಟಕ, 9.30 ರಿಂದ 10.30ರವರೆಗೆ ಮೈಸೂರಿನ ಶ್ರೀನಿವಾಸ್ ಮತ್ತು ತಂಡ (ವಿಷ್ಣು ಮ್ಯೂಸಿಕ್ ಗ್ರೂಪ್) ಅವರಿಂದ ಸಂಗಿತ ರಸಮಂಜರಿ ಏರ್ಪಾಡಾಗಿದೆ.
ಅಕ್ಟೋಬರ್ 9ರಂದು ಸಂಜೆ 4 ರಿಂದ 4.30ರವರೆಗೆ ರಾಮಸಮುದ್ರದ ನಿಂಗಶೆಟ್ಟಿ ಮತ್ತು ತಂಡದಿಂದ ತಂಬೂರಿ ಪದ, 4.30 ರಿಂದ 5.15ರವರೆಗೆ ರಾಮಸಮುದ್ರದ ಪಿ. ಮಹೇಶ, ಕಲೆ ನಟರಾಜು, ಸುರೇಶನಾಗ್, ಮಂಜು ಎಸ್. ಗಾಳೀಪುರ, ರಂಗಸ್ವಾಮಿ ಸಿ, ಅರ್ಜುನ್ ಸುರಾಗ್, ಮಹದೇವ ಯಡಿಯೂರು, ಮಲ್ಲಣ್ಣ, ಮಹದೇವಸ್ವಾಮಿ ಕಮರವಾಡಿ ಅವರಿಂದ ಜನಪದ ಝೇಂಕಾರ, 5.15 ರಿಂದ 6 ಗಂಟೆಯವರೆಗೆ ನಗರದ ಶಾರದಾ ನೃತ್ಯ ಶಾಲೆಯವರಿಂದ ನೃತ್ಯ ರೂಪಕ,  6 ರಿಂದ 8ರವರೆಗೆ ತಬಲ ನಾಣಿಯವರ ಹಾಸ್ಯರಂಜಿನಿ ತಂಡದಿಂದ ನಗೆಹಬ್ಬ, 8 ರಿಂದ 10 ಗಂಟೆಯವರೆಗೆ ಸಂಗೀತ ರವೀಂದ್ರನಾಥ್, ಸಂತೋಷ್ ವೆಂಕಿ, ದೀಪಕ್ ದೊಡ್ಡೇರಿ, ಸಿಂಚನ್ ದೀಕ್ಷಿತ್, ಸಂಗೀತ ರಾಜೀವ್, ವ್ಯಾಸರಾಜ್, ಚಿನ್ಮಯಿ, ಆಕಾಂಕ್ಷ ಬಾದಾಮಿ ಅವರಿಂದ ಚಲನಚಿತ್ರ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್À 10ರಂದು ಸಂಜೆ 6 ರಿಂದ 10ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ಕಾರ್ಯಕ್ರಮ ನಡೆಯಲಿದ್ದು ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಅ. 7 ಮತ್ತು 8ರಂದು ಉಸ್ತುವಾರಿ ಸಚುವರ ಜಿಲ್ಲಾ ಪ್ರವಾಸ  
ಚಾಮರಾಜನಗರ, ಅ. 06 (ಕರ್ನಾಟಕ ವಾರ್ತೆ):- ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಅಕ್ಟೋಬರ್ 7 ಮತ್ತು 8 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅ. 7 ರಂದು ಮಧ್ಯಾಹ್ನ 2.30 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಬರಪರಿಹಾರ ಟಾಸ್ಕ್‍ಪೋರ್ಸ್ ಸಮಿತಿ ಸಭೆಯಲ್ಲಿ ಭಾಗವಹಿಸುವರು. ನಂತರ ಡೀಮ್ಡ್ ಫಾರೆಸ್ಟ್ ವಿಷಯಕ್ಕೆ ಸಂಬಂಧಿಸಿದ ಸಭೆಯಲ್ಲಿ ಪಾಲ್ಗೊಳ್ಳುವರು.
ಸಂಜೆ 6 ಗಂಟೆಗೆ ಜಿಲ್ಲಾ ದಸರಾ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ 8 ಗಂಟೆಗೆ ಮೈಸೂರಿಗೆ ತೆರಳುವರು.
ಅ. 8 ರಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ  ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 4 ಗಂಟೆಗೆ ಗುಂಡ್ಲುಪೇಟೆಯ ಪುರಸಭೆ ಬಯಲು ರಂಗಮಂದಿರದಲ್ಲಿ ನಡೆಯಲಿರುವ ಗ್ರಾಮೀಣ ದಸರಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ಮೈಸೂರಿಗೆ ತರಳುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.  
ದಸರಾ ಮಹೋತ್ಸವ: ಸಾಂಪ್ರಾದಾಯಿಕ ಚಾಲನೆ
ಚಾಮರಾಜನಗರ, ಅ. 07 (ಕರ್ನಾಟಕ ವಾರ್ತೆ):- ಚಾಮರಾಜನಗರ ಜಿಲ್ಲಾಕೇಂದ್ರದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ದಸರಾ ಮಹೋತ್ಸವಕ್ಕೆ ಇಂದು ಬೆಳಿಗ್ಗೆ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಸಾಂಪ್ರಾದಾಯಿಕವಾಗಿ ಚಾಲನೆ ದೊರೆತಿದೆ.
ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ ರಾಮಚಂದ್ರ, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ ಉಪಾಧ್ಯಕ್ಷರಾದ ಆರ್. ಎಂ. ರಾಜಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ದಯಾನಿಧಿ ಇತರೆ ಜನಪ್ರತಿನಿಧಿಗಳೊಂದಿಗೆ ಚಾಮರಾಜೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾ ದಸರಾ ಮಹೋತ್ಸವಕ್ಕೆ ಸಾಂಪ್ರಾದಾಯಿಕವಾಗಿ ಚಾಲನೆ ದೊರೆಯಿತು.
ಚಾಮರಾಜೇಶ್ವರಸ್ವಾಮಿ, ಚಾಮುಂಡೇಶ್ವರಿದೇವಿ ಹಾಗೂ ಕೆಂಪನಂಜಾಂಬ ದೇವಾಲಯದಲ್ಲಿ ಗಣ್ಯರು ಪೂಜೆ ಸಲ್ಲಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫೀ, ನಗರಸಭಾ ಸದಸ್ಯರಾದ ಮಹೇಶ್‍ಉಪ್ಪಾರ್, ಬಂಗಾರು, ಮುಖಂಡರಾದ ಸುರೇಶ್‍ನಾಯಕ, ಬಿ.ಕೆ. ರವಿಕುಮಾರ್, ಜಿಲ್ಲಾಧಿಕಾರಿ ಬಿ. ರಾಮು, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ತಹಶೀಲ್ದಾರ್ ಕೆ. ಪುರಂದರ ಇತರರು ಇದ್ದರು.

ಅ. 15ರಂದು ನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ
ಚಾಮರಾಜನಗರ, ಅ. 07 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಅಕ್ಟೋಬರ್ 15ರಂದು ಮಧ್ಯಾಹ್ನ 12.30 ಗಂಟೆಗೆ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ 10 ಗಂಟೆಗೆ ವಿವಿಧ ಜಾನಪದ ಕಲಾತಂಡಗಳೊಡನೆ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಪ್ರವಾಸಿ ಮಂದಿರದ ಬಳಿ ಚಾಲನೆ ನೀಡುವರು.
ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವ ಪ್ರಸಾದ್ ಅವರು ಸಮಾರಂಭ ಉದ್ಘಾಟಿಸುವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.

ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು.
ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜು), ಕೆ.ಟಿ. ಶ್ರೀಕಂಠೇಗೌಡ, ಆರ್. ಧರ್ಮಸೇನ, ನಗರಸಭೆಯ ಅಧ್ಯಕ್ಷರಾದ ಎಸ್. ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್. ವಿ. ಚಂದ್ರು, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮೈಸೂರಿನ ಪ್ರಗತಿಪರ ಚಿಂತಕರಾದ ಡಾ. ಮ.ಪು. ಪೂರ್ಣಾನಂದ ಮುಖ್ಯ ಭಾಷಣಕಾರರಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
 ಚುನಾವಣಾ ಆಯೋಗಕ್ಕೆ ಸಲ್ಲಿಸದ ಆಸ್ತಿ ವಿವರ
ಸಹಕಾರ ಸಚಿವ ಮಹದೇವಪ್ರಸಾದ್‍ಗೆ ಕಂಟಕ : ಸಮನ್ಸ್ ಜಾರಿಗೊಳಿಸಿದ ನ್ಯಾಯಾಲಯ
ಗುಂಡ್ಲುಪೇಟೆ: ಪಟ್ಟಣದ ನ್ಯಾಯಾಲಯವು ತಾಲ್ಲೂಕಿನ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಮತ್ತು ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರಿಗೆ ಡಿ 21 ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವ ಸಮನ್ಸ್ ಜಾರಿಗೊಗೊಳಿಸುವಂತೆ 2 ನೇ ಬಾರಿಗೆ ಪೊಲೀಸ್ ಇಲಾಖೆಗೆ ಆದೇಶ ನೀಡಿದೆ.
ಈ ಬಾರಿ ವಿಧಾನ ಸಬಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ನೀಡಿದ್ದ ಆಸ್ತಿವಿವರಗಳ ಪ್ರಮಾಣಪತ್ರದಲ್ಲಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅರೇಪುರ ಗ್ರಾಮದಲ್ಲಿ ಸನಂ.165ರಲ್ಲಿ 3.22 ಎಕರೆ ಜಮೀನನ್ನು ಹೊಂದಿರುವುದನ್ನು ಘೋಷಣೆ ಮಾಡಿಕೊಂಡಿರಲಿಲ್ಲ. ಇದು ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗಿದ್ದು, ಸಚಿವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್ 23 ನವೆಂಬರ್ 2013ರಂದು ಪಟ್ಟಣದ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಅಂದಿನ ನ್ಯಾಯಾಧಿಶ ಡಿ.ಕಮಲಾಕ್ಷ ಅವರು ದೂರುದಾರ ಎಲ್.ಸುರೇಶ್ ಅವರನ್ನು ವಿಚಾರಣೆ ನಡೆಸಿದ ನಂತರ ಆರೋಪ ಮೇಲ್ನೋಟಕ್ಕೆ ಸತ್ಯವೆಂದು ಕಂಡುಬಂದ ಹಿನ್ನೆಲೆಯಲ್ಲಿ 12 ಜೂನ್ 2014ರಂದು ಸಚಿವ ಎಚ್.ಎಸ್.ಮಹದೇವಪ್ರಸಾದ್ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶ ನೀಡಿ ಸಮನ್ಸ್ ಜಾರಿಗೊಳಿಸಿತ್ತು. ಆದರೆ ಇದನ್ನು ಪೊಲೀಸರು ಜಾರಿಗೊಳಿಸಲು ವಿಫಲರಾಗಿದ್ದರು. ಇದರ ವಿರುದ್ದ ಸಚಿವರು ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ದೂರುದಾರು ತಡೆಯಾಜ್ಞೆ ತೆರವುಗೊಳಿಸಿತು. ಈ ಹಿನ್ನೆಲೆಯಲ್ಲಿ ಈ ವಿಚಾರಣೆಯ ದಿನಾಂಕವನ್ನು ಡಿ.21ಕ್ಕೆ ನಿಗದಿಗೊಳಿಸಿ ನ್ಯಾಯಾಧೀಶ ಜೆ.ಯೋಗೇಶ್ ಸಮನ್ಸ್ ಜಾರಿಗೊಳಿಸುವಂತೆ ಆದೇಶ ನೀಡಿ 2 ನೇ ಬಾರಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ.

ಪ್ರಥಮ, ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ    
ಚಾಮರಾಜನಗರ, ಅ. 07 (ಕರ್ನಾಟಕ ವಾರ್ತೆ):- ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮಪಡಿಸುವ ಸದುದ್ದೇಶದಿಂದ ಅಕ್ಟೋಬರ್ 8ರಂದ 23ರವರೆಗಿನ ಮಧ್ಯಂತರ ರಜಾ ದಿನಗಳಲ್ಲಿ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತರಬೇತಿಗಾಗಿ ಪ್ರತಿ ತಾಲೂಕಿನಲ್ಲಿ ನೋಡೆಲ್ ಕೇಂದ್ರಗಳನ್ನು ತರೆಯಲಾಗಿದ್ದು, ನೋಡೆಲ್ ಕೇಂದ್ರ ಪ್ರಾಚಾರ್ಯರನ್ನು ಸಂಯೋಜಕರನ್ನಾಗಿ ನೇಮಕಮಾಡಲಾಗಿದೆ.
ಚಾಮರಾಜನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮರಿಸ್ವಾಮಿ ಮೊ. 9663120662, ಗುಂಡ್ಲುಪೇಟೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಬಸವಣ್ಣ ಮೊ. 9449680209, ಯಳಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರಸಾದ್ ಮೊ. 9742104994 ಮತ್ತು ಕೊಳ್ಳೇಗಾಲ ಎಸ್.ವಿ.ಕೆ. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಉಷಾದೇವಿ ಮೊ. 8861910866 ಇವರನ್ನು ತರಬೇತಿ ತರಬೇತಿ ಕಾರ್ಯಕ್ರಮದ ನಿರ್ವಹಣೆಯ ಸಂಯೋಜಕರಾಗಿ ನೇಮಿಸಿದೆ.
ಜಿಲ್ಲೆಯ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮನವಿ ಮಾಡಿದ್ದಾರೆ.
ಅ. 8 ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಅ. 07 (ಕರ್ನಾಟಕ ವಾರ್ತೆ):- ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಅಕ್ಟೋಬರ್ 8 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅ. 8 ರಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 4 ಗಂಟೆಗೆ ಗುಂಡ್ಲುಪೇಟೆಯ ಪುರಸಭೆ ಬಯಲು ರಂಗಮಂದಿರದಲ್ಲಿ ನಡೆಯಲಿರುವ ಗ್ರಾಮೀಣ ದಸರಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ಮೈಸೂರಿಗೆ ತರಳುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.
ದಸರಾ ರಜೆ ಅವಧಿಯಲ್ಲಿ ವಿಶೇಷ ತರಬೇತಿ ಕಾರ್ಯಕ್ರಮ

     ಚಾಮರಾಜನಗರ, ಅ.10- ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಸರ್ಕಾರಿ ಪ್ರೌಢಶಾಲೆಗಳಲ್ಲಿ 9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಕಲಿಕೆಯಲ್ಲಿ ಹಿಂದುಳಿದ ಇತರೆ ವರ್ಗದ ವಿದ್ಯಾರ್ಥಿಗಳಿಗೆ ದಸರಾ ರಜೆ ಅವಧಿಯಲ್ಲಿ ವಿಶೇಷ ತರಬೇತಿ ಕಾರ್ಯಕ್ರಮವನ್ನು ರಾಜ್ಯದ 17 ಹಿಂದುಳಿದ ಜಿಲ್ಲೆಗಳು ಮತ್ತು 107 ತಾಲ್ಲೂಕುಗಳಲ್ಲಿ ನಡೆಸಲು ಆಯ್ಕೆ ಮಾಡಲಾಗಿದೆ.
     ಅದರನ್ವಯ ಚಾಮರಾಜನಗರ ಜಿಲ್ಲೆಯೂ ಸಹ ಆಯ್ಕೆಯಾಗಿದ್ದು ದಸರ ರಜೆ ಅವಧಿಯಲ್ಲಿ ದಿನಾಂಕ:            8-10-2016ರಿಂದ 23-10-2016ರವರೆಗೆ ಒಟ್ಟು 12ದಿನಗಳು (ದಿನಾಂಕ:10,11,12 ಮತ್ತು 15ನೇ ತಾರೀಖಿನ ರಜೆ ದಿನಗಳನ್ನು ಹೊರತುಪಡಿಸಿ) ನಡೆಸಲು ಯೋಜಿಸಲಾಗಿದ್ದು. ದಿನಾಂಕ: 8-10-2016ರಿಂದ ಜಿಲ್ಲೆಯ ಐದು ಶೈಕ್ಷಣಿಕ ತಾಲ್ಲೂಕುಗಳಲ್ಲಿಯೂ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಪ್ರಾರಂಭಿಸಲಾಗಿದೆ. ಪ್ರತಿ ಕೇಂದ್ರದಲ್ಲಿಯೂ ಒಟ್ಟು ಎರಡು ತರಗತಿಗಳು ಸೇರಿ 240 ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಅವಕಾಶವಿದ್ದು ಪ್ರಸ್ತುತ 1175 ವಿದ್ಯಾರ್ಥಿಗಳು ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ದಾಖಲಾಗಿದ್ದಾರೆ. ತರಬೇತಿ ನೀಡಲು ಇಂಗ್ಲೀಷ್, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ನುರಿತ 89 ಸಂಪನ್ಮೂಲ ಶಿಕ್ಷಕರು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ತರಬೇತಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಹಾಜರಾತಿಯನ್ನು ಬಯೋಮೆಟ್ರಿಕ್ ಅಳವಡಿಕೆ ಮೂಲಕ ಮಾಡಲಾಗುತ್ತಿದ್ದು, ಕ್ರಿಯಾ ಯೋಜನೆ, ವೇಳಾಪಟ್ಟಿ ಮತ್ತು ಮಾಡ್ಯೂಲ್ಗಳಿಗೆ ಅನುಗುಣವಾಗಿ ತರಬೇತಿಯನ್ನು ನೀಡಲಾಗುತ್ತಿದೆ. ಪ್ರತಿ ಕೇಂದ್ರದಲ್ಲಿಯೂ ಉಸ್ತುವಾರಿ ಅಧಿಕಾರಿಗಳನ್ನು ನೇಮಿಸಲಾಗಿದೆ. ವಿಶೇಷ ತರಬೇತಿ ಅವಧಿಯಲ್ಲಿ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನದ ವರದಿಯನ್ನು ಅಂದಂದೇ ರಾಜ್ಯ ಕಚೇರಿಗೆ ವರದಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುಳರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮೇವು ಬೆಳೆಯಲು ಮನವಿ
ಚಾಮರಾಜನಗರ ಆ. 11 (ಕರ್ನಾಟಕ ವಾರ್ತೆ) ಬರಗಾಲ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಹೊಂದಿರುವ ರೈತರು, ಬೆಳೆಗಾರರು ಮೇವು ಬೆಳೆಸುವಂತ್ತೆ ಪಶುಪಾಮನಾ ಇಲಾಖೆ ಮನವಿ ಮಾಡಿದೆ.
ಮೇವು ಬೀಜಗಳನ್ನು ಪಶುಪಾಲನಾ ಇಲಾಖೆಯಿಂದ ವಿತರಿಸಲಿದೆ, ಮೇವು ಬೆಳೆದ ರ್ಯತರು, ಬೆಳೆಗಾರರಿಂದ ಕಂದಾಯ ಇಲಾಖೆಯವರು ನಿಗದಿತ ದರದಲ್ಲಿ ಮೇವನ್ನು ಖರೀದಿಸಲಿದ್ದಾರೆ.
ಈ ಮೇವನ್ನು ಶೇ. 50 ರಷ್ಟು ದರದಲ್ಲಿ ಅಗತ್ಯ ವಿರುವ ರೈತರಿಗೆ ವಿತರಿಸಲಾಗುತ್ತದೆ.
ಮೇವು ಬೆಳೆಯಲು. ಆಸಕ್ತಿ ಇರುವ ರೈತರು ಪಹಣಿಯೊಂದಿಗೆ ಹತ್ತಿರದ ಗ್ರಾಮ ಪಂಚಾಯಿತಿ ಅಥವ ಹಾಲು ಉತ್ಪಾದಕರ ಸಹಕಾರ ಸಂಘ ಪಶುಪಾಲನಾ ಆಸ್ಪತ್ರೆ, ಇಲ್ಲಿ  ನೊಂದಾಣಿ ಮಾಡಿಕೊಳ್ಳಲು ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ. ಬಾಲಸುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ. 15ರಂದು ನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ
ಚಾಮರಾಜನಗರ, ಅ. 13 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಅಕ್ಟೋಬರ್ 15ರಂದು ಮಧ್ಯಾಹ್ನ 12.30 ಗಂಟೆಗೆ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ 10 ಗಂಟೆಗೆ ವಿವಿಧ ಜಾನಪದ ಕಲಾತಂಡಗಳೊಡನೆ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಪ್ರವಾಸಿ ಮಂದಿರದ ಬಳಿ ಚಾಲನೆ ನೀಡುವರು.
ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವ ಪ್ರಸಾದ್ ಅವರು ಸಮಾರಂಭ ಉದ್ಘಾಟಿಸುವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು.
ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜು), ಕೆ.ಟಿ. ಶ್ರೀಕಂಠೇಗೌಡ, ಆರ್. ಧರ್ಮಸೇನ, ನಗರಸಭೆಯ ಅಧ್ಯಕ್ಷರಾದ ಎಸ್. ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್. ವಿ. ಚಂದ್ರು, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮೈಸೂರಿನ ಪ್ರಗತಿಪರ ಚಿಂತಕರಾದ ಡಾ. ಮ.ಪು. ಪೂರ್ಣಾನಂದ ಮುಖ್ಯ ಭಾಷಣಕಾರರಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

ಅ. 17ರಿಂದ 21ರವರೆಗೆ ಲೋಕಸಭಾ ಸದಸ್ಯರ ಪ್ರವಾಸ ಕಾರ್ಯಕ್ರಮ
ಚಾಮರಾಜನಗರ, ಅ. 13 (ಕರ್ನಾಟಕ ವಾರ್ತೆ):- ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಅಕ್ಟೋಬರ್ 17ರಿಂದ 21ರವರೆಗೆ ಶಿಲಾಂಗ್, ಗೌಹಾಟಿ, ಕಾಜಿರಂಗ ಮತ್ತು ಕೊಲ್ಕತ್ತಾದಲ್ಲಿ ಪರಿವೀಕ್ಷಣಾ ಪ್ರವಾಸ ಕೈಗೊಂಡಿದ್ದಾರೆ.
ಪ್ರವಾಸ ಸಂದರ್ಭದಲ್ಲಿ ವಿವಿಧ ಕಂಪನಿ, ಸಂಸ್ಥೆ, ಬ್ಯಾಂಕ್‍ಗಳು ಹಾಗೂ ಕಾರ್ಪೋರೇಷನ್‍ಗಳಿಗೆ ಭೇಟಿ ನೀಡಿ ಅಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸುವರು. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಸಲ್ಲಿಸುತ್ತಿರುವ ಸೇವೆ ಹಾಗೂ ನೌಕರರಿಗೆ ನಿಯಮಾನುಸಾರ ಸರ್ಕಾರದ ಸವಲತ್ತುಗಳು ತಲುಪಿರುವ ಕುರಿತು ಸಮಾಲೋಚನೆ ನಡೆಸುವರು ಎಂದು ಸಂಸದರ ಅಪ್ತ ಕಾರ್ಯದರ್ಶಿಯವರು ತಿಳಿಸಿದ್ದಾರೆ.

ಅ. 14ರಂದು ರೈತ ಉತ್ಪಾದಕರ ಕಂಪನಿಯ ಯಂತ್ರೋಪಕರಣ ಮತ್ತು ಕೀಟನಾಶಕ ಔಷಧಿ ಮಳಿಗೆ ಉದ್ಘಾಟನೆ
ಚಾಮರಾಜನಗರ, ಅ. 13 (ಕರ್ನಾಟಕ ವಾರ್ತೆ):- ಉಡಿಗಾಲ ರೈತ ಉತ್ಪಾದಕರ ಕಂಪನಿ ನಿಯಮಿತ ವತಿಯಿಂದ ಅಕ್ಟೋಬರ್ 14ರಂದು ಬೆಳಿಗ್ಗೆ 10.30 ಗಂಟೆಗೆ ಉಡಿಗಾಲದ ಜೆ.ಎಸ್.ಎಸ್ ಪ್ರೌಢಶಾಲೆ ಪಕ್ಕದಲ್ಲಿರುವ ಎಫ್.ಪಿ.ಒ ಕಚೇರಿ ಅವರಣದಲ್ಲಿ ರೈತ ಉತ್ಪಾದಕರ ಕಂಪನಿಯ ಯಂತ್ರೊಪಕರಣಗಳು ಮತ್ತು ಕೀಟನಾಶಕಗಳ ಔಷಧಿ ಮಳಿಗೆ ಉದ್ಘಾಟನೆ ಹಾಗೂ ಕಂಪನಿಯ ಧ್ಯೇಯೋದ್ದೇಶಗಳ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಎಂ. ತಿರುಮಲೇಶ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಉಡಿಗಾಲದ ರೈತ ಉತ್ಪಾದಕರ ಕಂಪನಿಯ ವ್ಯವಸ್ಥಾಕಪ ನಿರ್ದೇಶಕರಾದ ಬಿ. ರವಿಶಂಕರ್ ಅಧ್ಯಕ್ಷತೆ ವಹಿಸುವರು. ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಎಚ್.ಎಂ. ನಾಗರಾಜು ಯಂತ್ರೋಪಕರಣಗಳಿಗೆ ಚಾಲನೆ ನೀಡುವರು. ತೋಟಗಾರಿಕಾ(ಸುಜಲಾ) ಇಲಾಖೆಯ ಉಪನಿರ್ದೇಶಕರು ಹಾಗೂ ಯೋಜನಾಧಿಕಾರಿ ಕೆ.ಎ. ವಿಜಯಕುಮಾರ್ ಅವರು ಔಷಧಿ ಮಳಿಗೆ ಉದ್ಘಾಟಿಸುವರು.
ಕೃಷಿ ಇಲಾಖೆಯ ಉಪನಿರ್ದೇಶಕರಾದ ಬಿ. ಯೋಗೀಶ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಕೆ.ಸಿ. ಮಹದೇವಸ್ವಾಮಿ ಹಾಗೂ ಇಕೋವಾ ಸಂಸ್ಥೆಯ ರಾಜ್ಯ ಸಂಯೋಜಕರಾದ ಗೋಪಾಲ್‍ಹೆಗ್ಗಡೆ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಜನೌಷಧಿ ಯೋಜನೆ: ಅರ್ಜಿ ಆಹ್ವಾನ
ಚಾಮರಾಜನಗರ, ಅ. 13 (ಕರ್ನಾಟಕ ವಾರ್ತೆ):- ಕೇಂದ್ರಸರ್ಕಾರದ ಜನೌಷಧಿ ಯೋಜನೆಯಡಿಯಲ್ಲಿ ಜನಸಾಮಾನ್ಯರಿಗೆ ಅತೀ ಕಡಿಮೆ ವೆಚ್ಚದಲ್ಲಿ ಔಷಧಿಗಳನ್ನು ಒದಗಿಸಲು ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಜನೌಷಧಿ ಯೋಜನೆ ಅನುಷ್ಟಾನಗೊಳಿಸುವ ಸಂಬಂಧ ನೊಂದಾಯಿತ ಹಾಗೂ ದತ್ತಿ ಸಂಘಗಳು ಮತ್ತು ಸೊಸೈಟಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಕಚೇರಿಯಿಂದ ಅರ್ಜಿಗಳನ್ನು ಪಡೆದು ಭರ್ತಿಮಾಡಿ ಅಕ್ಟೋಬರ್ 20ರೊಳಗೆ ಕಚೇರಿ ಕೆಲಸದ ವೇಳೆಯಲ್ಲಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ತ್ರೀಶಕ್ತಿ ಗುಂಪುಗಳಿಗೆ 2 ಲಕ್ಷ ರೂ. ಬಡ್ಡಿರಹಿತ ಸಾಲ: ಅರ್ಜಿ ಆಹ್ವಾನ
ಚಾಮರಾಜನಗರ, ಅ. 13 (ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2016-17ನೇ ಸಾಲಿಗೆ ಸ್ತ್ರೀಶಕ್ತಿ ಗುಂಪಿನ ಸದಸ್ಯರ ಆದಾಯೋತ್ಪನ್ನ ಚಟುವಟಿಕೆಗಳ ಘಟಕ ಹಾಗೂ ಸಣ್ಣ ಉದ್ದಿಮೆಯನ್ನು ಸ್ಥಾಪಿಸಿ ಅರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಕಿರುಸಾಲ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಸಮಾಜದಲ್ಲಿ ಸ್ತ್ರೀಶಕ್ತಿ ಗುಂಪುಗಳು ಅರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರತಿ ಸ್ತ್ರೀಶಕ್ತಿ ಗುಂಪಿಗೆ 2 ಲಕ್ಷ ರೂ. ಗಳವರೆಗೆ ಬಡ್ಡಿರಹಿತ ಸಾಲ ನೀಡಲಾಗುವುದು. ಈ ಸಂಬಂಧ ಕಿರುಸಾಲ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಉಚಿತವಾಗಿ ನೀಡಲಾಗುವುದು. ಸ್ತ್ರೀಶಕ್ತಿ ಗುಂಪುಗಳು ಬ್ಯಾಂಕ್ ಖಾತೆ ಹೊಂದಿದ್ದು, ಖಾತೆ ಚಾಲ್ತಿಯಲ್ಲಿರಬೇಕು. ಸ್ತ್ರೀಶಕ್ತಿ ಗುಂಪುಗಳು ಅರ್ಥಿಕವಾಗಿ ಸದೃಢವಾಗಿದ್ದು, ಗುಂಪಿನ ಉಳಿತಾಯ ಗರಿಷ್ಠ 2 ಲಕ್ಷ ರೂ. ಗಳಿಗೂ ಮೇಲಿರಬೇಕು. ಈಗಾಗಲೇ ಕಿರುಸಾಲ ಯೋಜನೆಯಡಿ ಪ್ರಯೋಜನ ಪಡೆಯದೆ ಇರುವ ಸಂಘಗಳು ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತಾರೆ.
ಗುಂಪುಗಳು ವ್ಯವಸ್ಥಿತ ರೀತಿಯಲ್ಲಿ ದಾಖಲೆಗಳನ್ನು ನಿರ್ವಹಿಸಿರಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆವತಿಯಿಂದ ಸುತ್ತುನಿಧಿ, ಪ್ರೋತ್ಸಾಹಧನ ನೀಡುವಾಗ ಗುಂಪುಗಳು ಮಾರ್ಗಸೂಚಿಗಳನ್ನು ಬಳಸಿ ಮೌಲ್ಯಮಾಪನದ ಮಾಡಬೇಕು. ಅದರಲ್ಲಿ ಎ ಶ್ರೇಣಿಯ ಗುಂಪುಗಳಿಗೆ ಪ್ರಥಮಾದ್ಯತೆ ನೀಡಲಾಗುವುದು. ಎ ಶ್ರೇಣಿಯ ಗುಂಪುಗಳು ಲಭ್ಯವಿದ್ದಲ್ಲಿ ಬಿ ಶ್ರೇಣಿಯ ಗುಂಪುಗಳನ್ನು ಪರಿಗಣಿಸಬೇಕು.
ಸ್ತ್ರೀಶಕ್ತಿ ಗುಂಪುಗಳು ನಿಗಮದಿಂದ ಪಡೆಯುವ ಸಾಲವನ್ನು ಗುಂಪಿನಿಂದ ಉತ್ಪಾದನಾ ಘಟಕ, ಸಣ್ಣ ಉದ್ದಿಮೆ ಸ್ಥಾಪಿಸಲು ಮಾತ್ರ ಬಳಸಿಕೊಳ್ಳಬೇಕು ಮತ್ತು ಗುಂಪಿನ ಸದಸ್ಯರೆಲ್ಲರೂ ಈ ಘಟಕದ ಪಾಲುದಾರರಾಗಿರುತ್ತಾರೆ.
ಸಾಲಪಡೆಯಲು ಅರ್ಜಿ ಹಾಕುವ ಸ್ತ್ರೀಶಕ್ತಿ ಗುಂಪು ತಾಲೂಕು ಮಟ್ಟದ ಒಕ್ಕೂಟದಲ್ಲಿ ನೊಂದಾವಣೆಯಾಗಿ ಸದಸ್ಯತ್ವ ಹೊಂದಿರಬೇಕು. ಅರ್ಜಿಯನ್ನು ಆಯಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಕ್ಟೋಬರ್ 28ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ. 18ರಿಂದ 28ರವರೆಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ
ಚಾಮರಾಜನಗರ, ಅ. 13 (ಕರ್ನಾಟಕ ವಾರ್ತೆ):- ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಧಾರವಾಡ(ಸಿಡಾಕ್)ದ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದೊಂದಿಗೆ ಸ್ವಂತ ಉದ್ಯೋಗ ಸ್ಥಾಪಿಸಲು ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ಉದ್ಯಮಶೀಲರು ಹಾಗೂ ನಿರುದ್ಯೋಗಿ ಯುವಕ, ಯುವತಿಯರಿಗೆ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಅಕ್ಟೋಬರ್ 18ರಿಂದ 28ರವರೆಗೆ ಗುಂಡ್ಲುಪೇಟೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ತರಬೇತಿ ಉಚಿತವಾಗಿದೆ. ಅಸಕ್ತರು ಕನಿಷ್ಟ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿದ್ದು, 18ರಿಂದ 35 ವರ್ಷದ ವಯೋಮಿತಿಯಲ್ಲಿರಬೇಕು. ಸ್ವಂತ ಉದ್ಯೋಗ ಸ್ಥಾಪಿಸುವ ಇಚ್ಛೆಯುಳ್ಳವರಾಗಿರಬೇಕು. ಅಲ್ಲದೆ ಶೇ. 25ರಷ್ಟು ಸ್ವಂತ ಬಂಡವಾಳ ಹೂಡಲು ಶಕ್ತರಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.
ತರಬೇತಿಯಲ್ಲಿ ಉದ್ಯಮ, ಉದ್ಯಮಶೀಲತೆ, ಉದ್ಯಮಗಳ ಆಯ್ಕೆ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಹಾಗೂ ಹಣಕಾಸು ನಿರ್ವಹಣೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು.
ಆಸಕ್ತರು ಅಕ್ಟೋಬರ್ 18ರಂದು ಬೆಳಿಗ್ಗೆ 10 ಗಂಟೆಗೆ ಗುಂಡ್ಲುಪೇಟೆಯ ಊಟಿ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಡಳಿತ ಭವನದಲ್ಲಿರುವ ಕೊಠಡಿ ಸಂಖ್ಯೆ: 331ರ ಜಿಲ್ಲಾ ಕೈಗಾರಿಕಾ ಕೇಂದ್ರ(ಸಿಡಾಕ್)ದ ಉಪನಿರ್ದೇಶಕರನ್ನು (ಕಚೇರಿ ದೂರವಾಣಿ ಸಂಖ್ಯೆ 08226-226346, ಮೊ. 7760145784ನ್ನು) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


ಅ. 15ರಂದು ನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ
ಚಾಮರಾಜನಗರ, ಅ. 14 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಅಕ್ಟೋಬರ್ 15ರಂದು ಹಮ್ಮಿಕೊಳ್ಳಲಾಗಿದೆ..
ಬೆಳಿಗ್ಗೆ 10 ಗಂಟೆಗೆ ವಿವಿಧ ಜಾನಪದ ಕಲಾತಂಡಗಳೊಡನೆ ಸಾಗಲಿರುವ  ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಪ್ರವಾಸಿ ಮಂದಿರದ ಬಳಿ ಚಾಲನೆ ನೀಡುವರು.
ಮಧ್ಯಾಹ್ನ 12.30 ಗಂಟೆಗೆ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆಯಲಿರುವ ಸಮಾರಂಭವನ್ನು ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವ ಪ್ರಸಾದ್ ಅವರು ಉದ್ಘಾಟಿಸುವರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು.
ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜು), ಕೆ.ಟಿ. ಶ್ರೀಕಂಠೇಗೌಡ, ಆರ್. ಧರ್ಮಸೇನ, ನಗರಸಭೆಯ ಅಧ್ಯಕ್ಷರಾದ ಎಸ್. ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್. ವಿ. ಚಂದ್ರು, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮೈಸೂರಿನ ಪ್ರಗತಿಪರ ಚಿಂತಕರಾದ ಡಾ. ಮ.ಪು. ಪೂರ್ಣಾನಂದ ಮುಖ್ಯ ಭಾಷಣಕಾರರಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ಯುವ ಸಂಘ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಅ. 14 (ಕರ್ನಾಟಕ ವಾರ್ತೆ):-ನೆಹರು ಯುವ ಕೇಂದ್ರವು ಯುವಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಯುವ ಸಂಘಟನೆಗೆ ನೀಡುವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
 2015-16ನೇ ಸಾಲಿನಲ್ಲಿ ಯುವ ಜನ ಚಟುವಟಿಕೆಗಳಾದ  ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮ, ಸಮುದಾಯ ಅಭಿವೃದ್ಧಿ, ಸಮಾಜಸೇವೆ, ಜಾಗೃತಿ ಕಾರ್ಯಕ್ರಮದ ಶಿಬಿರಗಳು, ರಾಷ್ಟ್ರೀಯ, ಅಂತರಾಷ್ಟ್ರೀಯ ದಿನಾಚರಣೆಗಳು ಇನ್ನಿತರ ಕಾರ್ಯಕ್ರಮಗಳನ್ನು ಸಂಘಟಿಸಿರಬೇಕು.
ಯುವಕ, ಯುವತಿ ಮಂಡಳಿಯು ಕರ್ನಾಟಕ ರಾಜ್ಯ ಸಂಘಗಳ ನೋಂದಣಿ ಕಾಯ್ದೆ 1960 ರಡಿಯಲ್ಲಿ ನೋಂದಣಿಯಾಗಿ ನೆಹರು ಯುವ ಕೇಂದ್ರದಲ್ಲಿ ಸಂಯೋಜನೆಗೊಂಡು 3 ವರ್ಷಗಳನ್ನು ಪೂರ್ಣಗೊಳಿಸಿರಬೇಕು ಹಾಗೂ 2016-17 ನೇ ಸಾಲಿಗಾಗಿ ನವೀಕರಣಗೊಂಡಿರಬೇಕು.
 ಯುವ ಮಂಡಳಿ ಪ್ರಶಸ್ತಿಯು 25,000ರೂ ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಹೊಂದಿದೆ.ಆಸಕ್ತ ಅರ್ಹ ಯುವ ಸಂಘಟನೆಗಳು ಮಹಿಳಾ ಮಂಡಳಿಗಳು ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ನೆಹರು ಯುವಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿಯವರಲ್ಲಿ ಪಡೆದು ಭರ್ತಿ ಮಾಡಿ ಅಕ್ಟೋಬರ್ 21ರೊಳಗೆ ಸಲ್ಲಿಸಬೇಕಿದೆ ವಿವರಗಳಿಗೆ ನೆಹರು ಯುವಕೇಂದ್ರ ದೂರವಾಣಿ ಸಂಖ್ಯೆ 08226-222120 ಸಂಪರ್ಕಿಸುವಂತೆ ನೆಹರು ಯುವಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಸ್ ಸಿದ್ದರಾಮಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಅ. 14(ಕರ್ನಾಟಕ ವಾರ್ತೆ):- ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್ ಮಹದೇವಪ್ರಸಾದ್ ಅವರು ಅಕ್ಟೋಬರ್ 15 ಹಾಗೂ 17ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
 ಅಕ್ಟೋಬರ್ 15ರಂದು ಮಧ್ಯಾಹ್ನ 12.30 ಗಂಟೆಗೆ ನಗರಕ್ಕೆ ಆಗಮಿಸಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3ಗಂಟೆಗೆ ಮೈಸೂರಿಗೆ ತೆರಳುವರು.
  ಅಕ್ಟೋಬರ್17ರಂದು ಬೆಳಿಗ್ಗೆ 10.30ಗಂಟೆಗೆ ಗುಂಡ್ಲುಪೇಟೆಗೆ ಆಗಮಿಸಿ ಅಂಗವಿಕಲರಿಗೆ ಸಲಕರಣೆ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3ಗಂಟೆಗೆ ಬೆಂಗಳೂರಿಗೆ ತೆರಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಎಸ್‍ಎನ್‍ಸಿಯು ತಾತ್ಕಾಲಿಕ ಸ್ಥಗಿತ
ಚಾಮರಾಜನಗರ, ಅ. 14(ಕರ್ನಾಟಕ ವಾರ್ತೆ):-ನಗರದ ಜಿಲ್ಲಾ ಆಸ್ಪತ್ರೆಯ ಎಸ್‍ಎನ್‍ಸಿಯು ವಿಭಾಗದ ಎಲೆಕ್ಟ್ರಿಕಲ್ ವೈರಿಂಗ್ ಮತ್ತು ಕಾಂಗರೂ ಮದರ್ ಕೇರ್ ವಾರ್ಡ್‍ನ ಸಿವಿಲ್‍ಕಾಮಗಾರಿಗಾಗಿ ಉನ್ನತಿಕರಣ ಪ್ರಕ್ರಿಯೆ ನಡೆಸಬೇಕಿರುವ ಹಿನ್ನಲೆಯಲ್ಲಿ ಅಕ್ಟೋಬರ್ 17ರಿಂದ 26ರವರೆಗೆ ಅಂದರೆ ಒಟ್ಟು 10ದಿನಗಳ ಕಾಲ ಎಸ್‍ಎನ್‍ಸಿಯು ಸೇವೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಅ. 16ರಂದು ನಗರದಲ್ಲಿ ವಿಕಲಚೇತನರಿಗೆ ಸಾಧನಾ ಸಲಕರಣೆ ವಿತರಣೆ
ಚಾಮರಾಜನಗರ, ಅ. 14 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ನವದೆಹಲಿಯ ಪಂಡಿತ್ ದೀನದಯಾಳ್ ಉಪಾಧ್ಯಾಯ ದಕ್ಷಿಣ ಪ್ರಾದೇಶಿಕ ಕೇಂದ್ರ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಗರದ ಸತ್ತಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಅಕ್ಟೋಬರ್ 16ರಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರ ತಾಲೂಕಿನ ವಿಕಲಚೇತನರಿಗೆ ಸಾಧನಾ ಸಲಕರಣೆ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕೆ.ಟಿ. ಶ್ರೀಕಂಠೇಗೌಡ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್. ವಿ. ಚಂದ್ರು, ನಗರಸಭೆಯ ಅಧ್ಯಕ್ಷರಾದ ಎಸ್. ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್. ಜೈನ್, ನವದೆಹಲಿಯ ಪಂಡಿತ್ ದೀನದಯಾಳ್ ಉಪಾಧ್ಯಾಯ ನ್ಯಾಷನಲ್ ಇನ್ಸ್ಟಿಟೂಟ್ ಫಾರ್ ಪರ್ಸನ್ಸ್ ವಿತ್ ಪಿಸಿಕಲ್ ಡಿಸೆಬಿಲಿಟೀಸ್‍ನ ಸಹಾಯಕ ಪ್ರಾಧ್ಯಾಪಕರಾದ ಡಾ. ಬಿ. ಪಾಂಡಿಯನ್ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಅ. 17ರಿಂದ ನವೆಂಬರ್ 10ರವರೆಗೆ ಡಿಜಿಟಲ್ ಇಂಡಿಯಾ ಮಾಹಿತಿ
ಚಾಮರಾಜನಗರ, ಅ. 14 (ಕರ್ನಾಟಕ ವಾರ್ತೆ):- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಡಿಜಿಟಲ್ ಇಂಡಿಯಾ ಕುರಿತು ಜಿಲ್ಲೆಯ ಅಟಲ್‍ಜೀ ಜನಸ್ನೇಹಿ ಕೇಂದ್ರ, ಗ್ರಾಮ ಪಂಚಾಯಿತಿ ಕಚೇರಿ, ಶಾಲಾ-ಕಾಲೇಜುಗಳು ಮತ್ತು ಅಂಚೆ ಕಚೇರಿಗಳಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 10ರ ವರೆಗೆ ಸಂಚಾರಿ ವಾಹನದ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ. 17ರೊಳಗೆ ಆಧಾರ್ ಸಂಖ್ಯೆ ನೊಂದಾಯಿಸಲು ಸೂಚನೆ
ಚಾಮರಾಜನಗರ, ಅ. 14 (ಕರ್ನಾಟಕ ವಾರ್ತೆ):- ಆಧಾರ್ ಸಂಖ್ಯೆಯನ್ನು ನೊಂದಾಯಿಸಲು ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮಪಂಚಾಯಿತಿ, ಹೋಬಳಿ ಮಟ್ಟದಲ್ಲಿ ಜನಸ್ನೇಹಿ ಕೇಂದ್ರ, ತಾಲೂಕು ಮಟ್ಟದಲ್ಲಿ ಖಾಸಗಿ ಸೇವಾ ಕೇಂದ್ರ ಹಾಗೂ ತಾಲೂಕು ಕಚೇರಿಯ ಆಹಾರ ಶಾಖೆಯಲ್ಲಿ ನೊಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಆಧಾರ್ ಸಂಖ್ಯೆ ನೊಂದಾಯಿಸದೆ ಇರುವ ಪಡಿತರ ಚೀಟಿದಾರರಿಗೆ ಪಡಿತರ ಹಂಚಿಕೆಯನ್ನು ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು. ಹೀಗಾಗಿ ನೊಂದಾಯಿಸದಿರುವ ಎಲ್ಲಾ ಪಡಿತರ ಚೀಟಿದಾರರು ಹಾಗೂ ಸದಸ್ಯರು ಅಕ್ಟೋಬರ್ 17ರೊಳಗೆ ನಿಗದಿಪಡಿಸಿರುವ ಕೇಂದ್ರಗಳಲ್ಲಿ ಆಧಾರ್ ಸಂಖ್ಯೆಯನ್ನು ನೊಂದಾಯಿಸಿಕೊಳ್ಳಬೇಕು.
ಈ ಬಗ್ಗೆ ದೂರುಗಳಿದ್ದಲ್ಲಿ ಆಹಾರ ಇಲಾಖೆಯ ಸಹಾಯವಾಣಿ ಸಂಖ್ಯೆ 1967 ಹಾಗೂ ಎಲ್ಲಾ ತಾಲೂಕುಗಳ ಆಹಾರ ಶಾಖೆಯ ಶಿರಸ್ತೇದಾರರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ. 24ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ. ಸಭೆ
ಚಾಮರಾಜನಗರ, ಅ. 14 (ಕರ್ನಾಟಕ ವಾರ್ತೆ):- ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸಿರುವ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯು ಅಕ್ಟೋಬರ್ 24ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಚ್ಚ ಭಾರತ್ ಮಿಷನ್ ಪ್ರಗತಿ ಹಿನ್ನಡೆ: ಗ್ರಾ.ಪಂ. ಕಾರ್ಯದರ್ಶಿ ವೇತನಬಡ್ತಿ ಕಡಿತ
ಚಾಮರಾಜನಗರ, ಅ. 14 (ಕರ್ನಾಟಕ ವಾರ್ತೆ):- ಸ್ವಚ್ಚ ಭಾರತ್ ಮಿಷನ್ ಅನುಸಾರ ಶೌಚಾಲಯ ನಿರ್ಮಾಣ ವಿಷಯದಲ್ಲಿ ನೀಡಿದ ಆದೇಶ, ಸೂಚನೆಗಳನ್ನು ಪಾಲಿಸದೆ ಪ್ರಗತಿಯಲ್ಲಿ ಹಿನ್ನಡೆ ತೋರಿದ ಯಳಂದೂರು ತಾಲೂಕು ಅಗರ ಗ್ರಾಮಪಂಚಾಯಿತಿಗೆ ನಿಯೋಜನೆಯಾಗಿರುವ ಕೊಳ್ಳೇಗಾಲ ತಾಲೂಕಿನ ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಗ್ರೇಡ್-2 ಕಾರ್ಯದರ್ಶಿ ಚಿಕ್ಕತಾಂಡಶೆಟ್ಟಿ ಅವರಿಗೆ ಒಂದು ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮ ಸಹಿತವಾಗಿ ಕಡಿತಗೊಳಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಆದೇಶಿಸಿದ್ದಾರೆ.


ಒಂದು ಕೋಟಿ ರೂ. ವೆಚ್ಚದ ಸಾಧನ ಸಲಕರಣೆ ವಿತರಣೆ : ಎಚ್.ಎಸ್. ಮಹದೇವ ಪ್ರಸಾದ್
ಚಾಮರಾಜನಗರ, ಅ.17 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿಕಲಚೇತನರಿಗೆ ಆರೋಗ್ಯ ತಪಾಸಣೆ ಕೈಗೊಂಡಿದ್ದು ಒಂದು ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದು ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವ ಪ್ರಸಾದ್ ತಿಳಿಸಿದರು.
ಗುಂಡ್ಲುಪೇಟೆ ಪಟ್ಟಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ, ತಾಲೂಕು ಪಂಚಾಯತ್, ನವದೆಹಲಿಯ ಪಂಡಿತ್ ದೀನದಯಾಳ್ ಉಪಾಧ್ಯಾಯ ದಕ್ಷಿಣ ಪ್ರಾದೇಶಿಕ ಕೇಂದ್ರ ಹಾಗೂ ಸಂಗಮ ಪ್ರತಿಷ್ಠಾನ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನರ ಸಾಧನ ಸಲಕರಣೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 20,600 ವಿಕಲಚೇತನರಿದ್ದಾರೆಂದು ಸಮೀಕ್ಷೆ ವರದಿಗಳು ತಿಳಿಸಿವೆ. ವಿಕಲಚೇತನರಿಗೆ ತಪಾಸಣೆ ನಡೆಸಿ ಅವರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಿ ನೆರವು ನೀಡುವ ಉದ್ದೇಶದಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಕೇಂದ್ರದ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಳೆದ ಎರಡೂವರೆ ತಿಂಗಳ ಹಿಂದೆ ಸಂಸ್ಥೆಯು ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನಲ್ಲಿ ತಪಾಸಣಾ ಶಿಬಿರ ನಡೆಸಿತ್ತು ಎಂದರು.
ಚಾಮರಾಜನಗರ ತಾಲೂಕಿನಲ್ಲಿ 421 ಹಾಗೂ ಗುಂಡ್ಲುಪೇಟೆ ತಾಲೂಕಿನಲ್ಲಿ 560 ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ವಿತರಿಸಿದ್ದೇವೆ. ಕೊಳ್ಳೇಗಾಲ ತಾಲೂಕಿನಲ್ಲಿಯೂ ಇತ್ತೀಚೆಗಷ್ಟೇ ತಪಾಸಣಾ ಶಿಬಿರ ನಡೆಸಲಾಗಿದೆ. ಅಲ್ಲಿಯೂ ಸಹ ವಿಕಲಚೇತನರಿಗೆ ಶೀಘ್ರದಲ್ಲಿಯೇ ಸಲಕರಣೆಗಳನ್ನು ವಿತರಿಸಲಾಗುತ್ತದೆ. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇರುವ ವಿಕಲಚೇತನರಿಗೆ ಅಗತ್ಯ ನೆರವು ನೀಡುವ ಉದ್ದೇಶವಿದೆ. ಅಂಗವಿಕಲರ ಕಲ್ಯಾಣ ಇಲಾಖೆ ಹಾಗೂ ಶಾಸಕರ ಅನುದಾನ ಸೇರಿದಂತೆ ಇತರ ಲಭÀ್ಯ ಅನುದಾನ ಬಳಕೆ ಮಾಡಿಕೊಂಡು ಸೌಲಭ್ಯಗಳನ್ನು ದೊರಕಿಸಲು ಮುಂದಾಗುವುದಾಗಿ ಸಚಿವರು ತಿಳಿಸಿದರು.
ವಿಕಲಚೇತನರಿಗೆ ಆತ್ಮಸ್ಥೈರ್ಯ ತುಂಬುವುದರ ಜತೆಗೆ ಎಲ್ಲರಂತೆ ಅವರೂ ಸಹÀ ದಿನನಿತ್ಯದ ಜೀವನ ವ್ಯವಹಾರಕ್ಕೆ ಸಿದ್ಧರಾಗುವಂತೆ ಉತ್ತೇಜನ ನೀಡಬೇಕಿದೆ. ಇದಕ್ಕೆ ಪೂರಕವಾದ ನೆರವು ಕೊಡಬೇಕಿದೆ. ಸರ್ಕಾರದ ಸೌಲಭ್ಯಗಳನ್ನು ಅಧಿಕಾರಿಗಳು ಸಮರ್ಪಕವಾಗಿ ತಲುಪಿಸಿ ವಿಕಲಚೇತನರು ಸಹ ಅವರ ಸಾಮಥ್ರ್ಯಕ್ಕೆ ಅನುಗುಣವಾಗಿ ದುಡಿಯಲು ಅವಕಾಶ ಕಲ್ಪಿಸಬೇಕಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಹೆಚ್ಚು ಸಂಖ್ಯೆಯಲ್ಲಿ ವಿಕಲಚೇತನ ಫಲಾನುಭವಿಗಳಿಗೆ ಅವಶ್ಯಕ ಸಾಧನ ಸಲಕರಣೆ ವಿತರಿಸುವ ಮಾನವೀಯವುಳ್ಳ ಕಾರ್ಯಕ್ರಮವನ್ನು ಎಲ್ಲ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ನೆರವಿನೊಂದಿಗೆ ಹಮ್ಮಿಕೊಂಡಿರುವುದು ಪ್ರಶಂಸನೀಯವಾಗಿದೆ ಎಂದು ಸಚಿವರು ನುಡಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಎಸ್. ಮಹೇಶ್ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ಕಾಳಜಿಯಿಂದಾಗಿ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಿಸುವ ಬೃಹತ್ ಕಾರ್ಯಕ್ರಮ ಅರ್ಥಪೂರ್ಣವಾಗಿ ಯಶಸ್ವಿಯಾಗಿದೆ. ಇದರಿಂದ ಅನೇಕ ವಿಶೇಷ ಚೇತನರಿಗೆ ಸೌಲಭ್ಯ ಸಿಕ್ಕಿದಂತಾಗಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ವಿಕಲಚೇತನರಿಗೆ ನರವು ಕಲ್ಪಿಸುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಕೇಂದ್ರವು ವರ್ಷಕ್ಕೆ 4 ಸ್ಥಳಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಈ ಬಾರಿ ಚಾಮರಾಜನಗರ ಜಿಲ್ಲೆಯಲ್ಲೇ 3 ಪಟ್ಟಣಗಳಲ್ಲಿ ತಪಾಸಣೆ ಶಿಬಿರ ಆಯೋಜಿಸಿದೆ. ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿನಲ್ಲಿ ತಪಾಸಣೆ ವೇಳೆ ನ್ಯೂನತೆ ಇರುವ ಶೇ.90ರಷ್ಟು ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡು ವಿತರಿಸುತ್ತಿದೆ ಎಂದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ದಕ್ಷಿಣ ಪ್ರಾದೇಶಿಕ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಿ. ಪಾಂಡಿಯನ್ ಮಾತನಾಡಿ ಕೇಂದ್ರವು ಇದುವರೆಗೆ 16 ರಾಜ್ಯಗಳಲ್ಲಿ ವಿಕಲಚೇತನರಿಗೆ ಆರೋಗ್ಯ ತಪಾಸಣೆ ಹಾಗೂ ಸಲಕರಣೆ ವಿತರಿಸುವ ಕಾರ್ಯಕ್ರಮ ನಡೆಸಿದೆ. ಆದರೆ ಚಾಮರಾಜನಗರ ಜಿಲ್ಲೆಯು ಸುವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಿ ಮಾದರಿಯಾಗಿದೆ. ಎರಡೂವರೆ ತಿಂಗಳ ಹಿಂದೆಯಷ್ಟೇ ತಪಾಸಣಾ ಶಿಬಿರ ನಡೆಸಿ ಆದ್ಯತೆ ಮೇರೆಗೆ ಸಾಧನ ಸಲಕರಣೆಯನ್ನು ಶೀಘ್ರವಾಗಿ ವಿತರಿಸಲ್ಪಟ್ಟ ಜಿಲ್ಲೆ ಎಂಬ ಹೆಗ್ಗಳಿಕೆ ಚಾಮರಾಜನಗರ ಪಾತ್ರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತ್ರಿಚಕ್ರ ವಾಹನ, ಗಾಲಿ ಕುರ್ಚಿ, ಸಿಪಿ ಕುರ್ಚಿ, ಎಲ್ಬೋ ಕ್ರಚಸ್, ಕೃತಕಾಂಗ, ಚಾಲಿಪರ್ಸ್, ನಡಿಗೆ ಸಾಧನ, ಇನ್ನಿತರ ಸಲಕರಣೆಗಳನ್ನು ವಿಕಲಚೇತನ ಫಲಾನುಭವಿಗಳಿಗೆ ವಿತರಿಸಲಾಯಿತು. ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಕೇಂದ್ರದ ವೈದ್ಯರ ತಂಡವನ್ನು ಗೌರವಿಸಲಾಯಿತು.
ಪುರಸಭೆ ಅಧ್ಯಕ್ಷರಾದ ಭಾಗ್ಯಮ್ಮ, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದ ರೂಪಾಸ್ವಾಮಿ, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಜಿಲ್ಲಾ ಪಂಚಾಯತ್ ಸದಸ್ಯರಾದ ಅಶ್ವಿನಿ ವಿಶ್ವನಾಥ, ರತ್ನಮ್ಮ ಶ್ರೀಕಂಠಪ್ಪ, ತಾಲೂಕು ಪಂಚಾಯತ್ ಸದಸ್ಯರಾದ ಜಗದೀಶ್ ಮೂರ್ತಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಾ ಕಮ್ಮಾರ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಡಿಜಿಟಲ್ ಇಂಡಿಯಾ ಮಾಹಿತಿ ಪ್ರಚಾರ ಅಭಿಯಾನಕ್ಕೆ ಡೀಸಿ ಚಾಲನೆ
ಚಾಮರಾಜನಗರ, ಅ. 17 (ಕರ್ನಾಟಕ ವಾರ್ತೆ):- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಡಿಜಿಟಲ್ ಇಂಡಿಯಾ ಕುರಿತು ಜಿಲ್ಲೆಯ ಅಟಲ್‍ಜೀ ಜನಸ್ನೇಹಿ ಕೇಂದ್ರ, ಗ್ರಾಮ ಪಂಚಾಯಿತಿ ಕಚೇರಿ, ಶಾಲಾ-ಕಾಲೇಜುಗಳು ಮತ್ತು ಅಂಚೆ ಕಚೇರಿಗಳಲ್ಲಿ ಮಾಹಿತಿ ನೀಡುವ ಸಂಚಾರಿ ಪ್ರಚಾರ ವಾಹನಕ್ಕೆ ಇಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಚಾಲನೆ ನೀಡಿದರು.
ನಗರದ ಜಿಲ್ಲಾಡಳಿತ ಭವನ ಆವರಣದಲ್ಲಿಂದು ವಿಶೇಷವಾಗಿ ಆಯ್ದ  ಗ್ರಾಮಪಂಚಾಯಿತಿಗಳಲ್ಲಿ ಡಿಜಿಟಲ್ ಇಂಡಿಯಾ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ರೂಪುಗೊಳಿಸಲಾಗಿರುವ ಪ್ರಚಾರ ವಾಹನ ಸಂಚಾರಕ್ಕೆ  ಜಿಲ್ಲಾಧಿಕಾರಿಯವರು ನಿಶಾನೆ ತೋರಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಬಿ,.ರಾಮು ಗ್ರಾಮೀಣ ಭಾಗದ ಜನರಿಗೆ ಡಿಜಿಟಲ್ ಇಂಡಿಯಾದಿಂದ ಆಗಿರುವ ಅನುಕೂಲತೆಗಳನ್ನು ಅರಿವು ಮೂಡಿಸುವ ಉದ್ದೇಶದಿಂದ ಪ್ರಚಾರ ವಾಹನ ಸಂಚರಿಸಲಿದೆ. ಗ್ರಾಮೀಣ ಜನತೆ ಡಿಜಿಟಲೀಕರಣದಿಂದ ಲಭ್ಯವಾಗುತ್ತಿರುವ ಸೌಲಭ್ಯಗಳನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಇಂಡಿಯಾ ಬಗೆಗಿನ ಮಾಹಿತಿಯನ್ನು ವಿದ್ಯಾವಂತರು ತಿಳಿಸಿಕೊಡಬೇಕು. ಕಾರ್ಯಕ್ರಮಗಳ ಅರಿವನ್ನು ಮೂಡಿಸುವಲ್ಲಿ ಎಲ್ಲರ ಸಹಕಾರವು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ಅಭಿಪ್ರಾಯಪಟ್ಟರು.
ಪ್ರಚಾರ ವಾಹನದಲ್ಲಿ ಆಧಾರ್ ನೋಂದಣಿ ಬಗೆಗಿನ ಮಾಹಿತಿಯು ಇದೆ. ಎಲ್ ಇಡಿ ಪರದೆ ಮೂಲಕ ಅಗತ್ಯ ಪ್ರಮಾಣ ಪತ್ರಗಳನ್ನು ಪಡೆಯುವ ವಿಧಾನ, ಡಿಜಿಟಲ್ ಲಾಕರ್ ತೆರೆಯುವಿಕೆ, ಇನ್ನಿತರ ದಾಖಲೆಗಳ ಡಿಜಿಟಲೀಕರಣ ಇನ್ನಿತರ ಅವಶ್ಯಕ ವಿವರಗಳನ್ನೊಳಗೊಂಡ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಅಲ್ಲದೆ ಬೀದಿ ನಾಟಕದ ಮೂಲಕ ಕಲಾವಿದರು ಡಿಜಿಟಲೀಕರಣದ ಮಹತ್ವ ಹಾಗೂ ಉಪಯೋಗ ಬಳಕೆಯ ಬಗ್ಗೆಯೂ ತಿಳಿವಳಿಕೆ ನೀಡಲಿದ್ದಾರೆ.
ಕಾರ್ಯಕ್ರಮ ಚಾಲನೆ ಸಂದರ್ಭದಲ್ಲಿ ಎನ್ ಐಸಿ ಅಧಿಕಾರಿ ಯತಿರಾಜು, ಆಧಾರ್ ನೋಂದಣಿ ಅಧಿಕಾರಿ ರಾಂಪ್ರಸಾದ್, ಇತರರು ಹಾಜರಿದ್ದರು.















 
 











 








             













22-10-2016 ರಿಂದ 31-10-2016 ವರೆಗಿನ ಚಾಮರಾಜನಗರ ಸುದ್ದಿಗಳು


ಸೆ. 22ರಂದು ತಾಲೂಕು ಪ.ಜಾ, ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ
ಚಾಮರಾಜನಗರ, ಸೆ. 20 (ಕರ್ನಾಟಕ ವಾರ್ತೆ):- ಚಾಮರಾಜನಗರ ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯು ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 22ರಂದು ಮಧ್ಯಾಹ್ನ 2.30 ಗಂಟೆಗೆ ನಗರದ ಕರಿನಂಜನಪುರ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಸೆ. 27ರಂದು ಮಹದೇಶ್ವರ ಬೆಟ್ಟದಲ್ಲಿ ಗೋಲಕ ಹಣ ಎಣಿಕೆ
ಚಾಮರಾಜನಗರ, ಸೆ. 20 (ಕರ್ನಾಟಕ ವಾರ್ತೆ):- ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಗೋಲಕಗಳ ಹಣ ಎಣಿಕೆ ಕಾರ್ಯವು ಸೆಪ್ಟೆಂಬರ್ 27ರಂದು ಬೆಳಿಗ್ಗೆ ನಡೆಯಲಿದೆ.
ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ಸಹಯೋಗದೊಂದಿಗೆ ಹಣ ಎಣಿಕೆ ಕಾರ್ಯವು ನಡೆಸಲಾಗುವುದೆಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆÉ.


ಕೊಠಡಿ ಬಾಡಿಗೆಗೆ ಲಭ್ಯ
ಚಾಮರಾಜನಗರ, ಸೆ. 20 (ಕರ್ನಾಟಕ ವಾರ್ತೆ):- ನಗರದ ಹೌಸಿಂಗ್ ಬೋಡ್ ಕಾಲೋನಿಯ ತಹಸೀಲ್ದಾರ್ ನಿವಾಸ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾ ಕೃಷಿಕ ಸಮಾಜ ಕಟ್ಟಡದ ನೆಲಮಾಳಿಗೆಯಲ್ಲಿ ವಿಶಾಲವಾದ ಕೊಠಡಿಗಳು ಬಾಡಿಗೆಗೆ ಲಭ್ಯವಿದೆ.
ಸುಮಾರು 1000 ಚದರ ಅಡಿಗಳಲ್ಲಿ ವಾಣಿಜ್ಯ ಕಚೇರಿ ಅಥವಾ ಬ್ಯಾಂಕ್ ನಡೆಸಲು ಸೂಕ್ತವಾಗಿರುವ ಕೊಠಡಿಗಳು ಬಾಡಿಗೆಗೆ ಲಭ್ಯವಿದ್ದು ಆಸಕ್ತರು ಜಿಲ್ಲಾಡಳಿತ ಭವನದಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಗುಂಡ್ಲುಪೇಟೆ : ಉದ್ದಿಮೆ ಪರವಾನಗಿ ಪಡೆಯಲು ಸೂಚನೆ
ಚಾಮರಾಜನಗರ, ಸೆ. 20 (ಕರ್ನಾಟಕ ವಾರ್ತೆ):- ಗುಂಡ್ಲುಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಹೋಟೆಲ್, ಅಂಗಡಿ, ಇತರೆ ಉದ್ದಿಮೆ ಮಾಲೀಕರು ಪ್ರಸಕ್ತ ಸಾಲಿಗೆ ಪರವಾನಗಿ ಪಡೆಯುವಂತೆ ಸೂಚಿಸಲಾಗಿದೆ.
ಪರವಾನಗಿ ಪಡೆಯದೆ ಉದ್ದಿಮೆ ನಡೆಸುವುದು ಪುರಸಭಾ ಕಾಯಿದೆ 1964ರ ಪ್ರಕರಣ 250ರ ರೀತ್ಯ ಕಾನೂನು ಬÁಹಿರವಾಗಿದೆ.
7 ದಿನಗಳ ಒಳಗೆ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಪುರಸಭಾ ಕಚೇರಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಅರ್ಜಿ ನಮೂನೆ ನೀಡಲಿದ್ದಾರೆ. ಪುರಸಭಾ ಕಚೇರಿಯಲ್ಲಿಯೂ ಅಗತ್ಯ ದಾಖಲಾತಿಗಳನ್ನು ಒದಗಿಸಿ ಪರವಾನಗಿ ಪಡೆಯಬೇಕು. ತಪ್ಪಿದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದೆಂದು ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಳಂದೂರು : ವಿದ್ಯಾರ್ಥಿ ವೇತನಕ್ಕೆ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 20 (ಕರ್ನಾಟಕ ವಾರ್ತೆ):- ಯಳಂದೂರು ತಾಲೂಕಿನಲ್ಲಿ ಪರಿಶಿಷ್ಟ ವರ್ಗದ 9 ಹಾಗೂ 10ನೇ ತರಗತಿ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ಹೊಸದಾಗಿ ಎನ್ ಎಸ್ ಪಿ ಮುಖಾಂತರ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸೂಚಿಸಿದೆ.
ಎನ್ ಎಸ್ ಪಿ ವೆಬ್ ಸೈಟನ್ನು ಹೊಸ ಆವೃತ್ತಿಯೊಂದಿಗೆ ಪ್ರಾರಂಭಿಸಿರುವ ಕಾರಣ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೂ ಹೊಸದಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ವಿದ್ಯಾರ್ಥಿಗಳು ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಸುವುದು ಕಡ್ಡಾಯವಾಗಿದೆ. ಬÁ್ಯಂಕ್ ಖಾತೆ ಸಂಖ್ಯೆ, ಆಧಾರ್ ಕಾರ್ಡ್, ಜಾತಿ ಆದಾಯ ಪ್ರಮಾಣ ಪತ್ರ ಜೆರಾಕ್ಸ್ ಪ್ರತಿಗಳನ್ನು ಸಂಬಂಧಪಟ್ಟ ಶಾಲಾ ಕಾಲೇಜಿನಿಂದ ದೃಢೀಕರಿಸಿ ನೀಡುವುದು ಕಡ್ಡಾಯವಾಗಿದೆ. ವೆಬ್ ಸೈಟ್ hಣಣಠಿ://sಛಿhoಟಚಿಡಿshiಠಿs.gov.iಟಿ ನಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ. ಅರ್ಜಿ ಸಲ್ಲಿಕೆ ಸಂಬಂಧ ತೊಂದರೆ ಉಂಟಾದಲ್ಲಿ ಸಹಾಯವಾಣಿ : 0120-6619540 ಇ ಮೇಲ್ ಟಿsಠಿಜiಡಿeಛಿಣoಡಿsಠಿ@gmಚಿiಟ.ಛಿom ಅಥವಾ sಣತಿeಟಜಿಚಿಡಿe@gmಚಿiಟ.ಛಿom ಸಂಪರ್ಕಿಸಬೇಕು. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 30 ಕಡೆಯ ದಿನವಾಗಿದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಶಸ್ವಿನಿ ಯೋಜನೆ ನೋಂದಣಿಗೆ ಅವಧಿ ವಿಸ್ತರಣೆ
ಚಾಮರಾಜನಗರ, ಸೆ. 20 (ಕರ್ನಾಟಕ ವಾರ್ತೆ):- 2016-17ನೇ ಸಾಲಿನಲ್ಲಿ ಗ್ರಾಮೀಣ ಹಾಗೂ ನಗರ ಯಶಸ್ವಿನಿ ಸಹಕಾರ ರೈತರ ಆರೋಗ್ಯ ರಕ್ಷಣಾ ಯೋಜನೆಯಡಿ ನೊಂದಾಯಿಸಿಕೊಳ್ಳುವ ಅವಧಿಯನ್ನು ಸರ್ಕಾರ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.
ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದನಾ ಸಹಕಾರ ಸಂಘಗಳು, ಇತರೆ ಸಹಕಾರ ಸಂಘಗಳ ಸದಸ್ಯರು ಯಶಸ್ವಿನಿ ಯೋಜನೆಗೆ ನೊಂದಾಯಿಸಿಕೊಳ್ಳುವ ಮೂಲಕ ಯೋಜನೆಯ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಆಯಾ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿಗಳ ಕಚೇರಿ, ಚಾಮರಾಜನಗರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮತ್ತು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಸಂಪರ್ಕಿಸುವಂತೆ ಸಹಕಾರ ಸಂಘಗಳ ಉಪನಿಬಂಧಕರಾದ ಪಿ. ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲ: ಮನೆ ನಿರ್ಮಾಣ ಸಹಾಯಧನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 21 (ಕರ್ನಾಟಕ ವಾರ್ತೆ):- ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯಡಿಯಲ್ಲಿ 2016-17ನೇ ಸಾಲಿಗೆ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಅರ್ಹ ಮಹಿಳಾ ಫಲಾನುಭವಿಗಳು, ವಿಧುರ, ಹಿರಿಯ ನಾಗರಿಕರು, ವಿಕಲಚೇತನರು ಮತ್ತು ಮಾಜಿ ಸೈನಿಕ ಫಲಾನುಭವಿಗಳಿಂದ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲು ಅರ್ಜಿ ಅಹ್ವಾನಿಸಲಾಗಿದೆ.
ಸ್ವಂತ ಖಾಲಿ ನಿವೇಶನ, ಕಚ್ಚಾಮನೆ, ಹಾಗೂ ಗುಡಿಸಲು ಹೊಂದಿರುವವರು ಸಹಾಯಧನ ಪಡೆಯಬಹುದು.
ಜಾತಿ ಮತ್ತು ವರಮಾನ ಪತ್ರ, ಆಧಾರ್ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಫಲಾನುಭವಿಯ ಹೆಸರಿನಲ್ಲಿರುವ ಖಾಲಿ ನಿವೇಶನದ ದಾಖಲೆ ಮತ್ತು 2016-17ನೇ ಸಾಲಿನ ಖಾಲಿ ನಿವೇಶನದ ನಮೂನೆ-3 ಸೇರಿದಂತೆ ಎಲ್ಲ ದಾಖಲಾತಿಗಳು ನಗರಸಭೆಯ ವ್ಯಾಪ್ತಿಯ ವಿಳಾಸದಲ್ಲಿರಬೇಕು ಮತ್ತು ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 29 ಕಡೆಯ ದಿನ. ಅಪೂರ್ಣ ಹಾಗೂ ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ಸಂಬಂಧಪಟ್ಟ ಶಾಖೆಯಲ್ಲಿ ಪಡೆಯುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 24ರಂದು ನಗರದಲ್ಲಿ ಉದ್ಯೋಗ ಮೇಳ
ಚಾಮರಾಜನಗರ, ಸೆ. 21 (ಕರ್ನಾಟಕ ವಾರ್ತೆ):- ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಸೆಪ್ಟೆಂಬರ್ 24ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿರುವ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.
ಮೈಸೂರು ಮತ್ತು ಬೆಂಗಳೂರಿನಲ್ಲಿ ಶಾಖೆಗಳನ್ನು ಹೊಂದಿರುವ ರ್ಯಾಕ್‍ಮಂಡ್ ಟೆಕ್ನಾಲಜಿಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಖಾಸಗಿ ಕಂಪನಿಗೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ, ಡಿಪ್ಲೋಮಾ ಹಾಗೂ ಬಿ.ಇ ವಿದ್ಯಾರ್ಹತೆಯುಳ್ಳ ಪುರುಷ ಮತ್ತು ಮಹಿಳಾ ನಿರುದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ವಯೋಮಿತಿ 18ರಿಂದ 35 ವರ್ಷದೊಳಗಿರಬೇಕು. ಮಾಸಿಕ ಸಂಭಾವನೆ 8000 ರೂ. ನಿಂದ 24,000 ರೂ. ನೀಡಲಾಗುವುದು. ಅಸಕ್ತರು ಸ್ವವಿವಿರಗಳೊಂದಿಗೆ ಸಂದರ್ಶನಕ್ಕೆ ಹಾಗರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗಾಧಿಕಾರಿ 08226-224430 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಸೆ. 25ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 21 (ಕರ್ನಾಟಕ ವಾರ್ತೆ):- ಸಂತೇಮರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಪ್ಟೆಂಬರ್ 25ರಂದು ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಹೊನ್ನೂರು, ಸಂತೇಮರಹಳ್ಳಿ, ನವಿಲೂರು, ಅಲ್ದೂರು, ಕುದೇರು, ಮಂಗಲ ವಾಟರ್ ಸಪ್ಲೈ, ಕೆಂಪನಪುರ, ಅಂಬಳೆ ಹಾಗೂ ಚಂಗಡಿಪುರ ಫೀಡರ್‍ಗಳಿಂದ ಸರಬರಾಜಾಗುವ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 25ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 21 (ಕರ್ನಾಟಕ ವಾರ್ತೆ):- ಚಾಮರಾಜನಗರ-ಹೊನ್ನಹಳ್ಳಿ ಮಾರ್ಗದ ವಿದ್ಯುತ್ ನಿರ್ವಹಣೆ ಕಾಮಗಾರಿಯನ್ನು ಸೆಪ್ಟೆಂಬರ್ 24ರಂದು ಹಮ್ಮಿಕೊಳ್ಳಲಾಗಿದೆ.
ಹೊನ್ನಹಳ್ಳಿ ವಿತರಣಾ ಕೇಂದ್ರದಿಂದ ಸರಬರಾಜಾಗುವ ಅರಕಲವಾಡಿ, ಯರಗನಹಳ್ಳಿ, ಸುವರ್ಣನಗರ, ಫ್ಯಾಕ್ಟರಿ, ಡೊಳ್ಳಿಪುರ, ಪುಣಜನೂರು, ಬಿಸಲವಾಡಿ, ಅಮಚವಾಡಿ, ಎನ್‍ಜೆವೈ ಮಾದಲವಾಡಿ, ಎನ್.ಜೆ.ವೈ ಚನ್ನಪ್ಪನಪುರ ಮತ್ತು ಅಟ್ಟುಗೂಳಿಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಸಿದ್ದಯ್ಯನಪುರ, ಹೊಂಗಲವಾಡಿ, ಕೋಳಿಪಾಳ್ಯ, ಬಂದಿಗೌಡನಹಳ್ಳಿ, ಅಟ್ಟುಗೂಳಿಪುರ, ಎನ್.ಜೆ.ವೈ ದೊಡ್ಡಮೋಳೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 25ರೊಳಗೆ ಉದ್ದಿಮೆ ಪರವಾನಗಿ ಪಡೆಯಲು ನಗರಸಭೆ ಮನವಿ
ಚಾಮರಾಜನಗರ, ಸೆ. 21 (ಕರ್ನಾಟಕ ವಾರ್ತೆ):- ನಗರಸಭಾ ವ್ಯಾಪ್ತಿಯಲ್ಲಿ ಅಂಗಡಿ, ವ್ಯಾಪಾರ, ಉದ್ದಿಮೆ, ಆಯಿಲ್ ಮಿಲ್, ರೈಸ್ ಮಿಲ್, ಪ್ಲೋರ್ ಮಿಲ್, ವರ್ಕ್‍ಶಾಪ್, ಹೋಟೇಲ್, ಟೀ ಸ್ಟಾಲ್, ಲಾಡ್ಜಿಂಗ್, ಸ್ವೀಟ್ ಸ್ಟಾಲ್, ಕಾಂಡಿಮೆಂಟ್ಸ್, ವೆಲ್ಡಿಂಗ್ ಶಾಪ್ ಇನ್ನಿತರ ವಹಿವಾಟು ನಡೆಸುತ್ತಿರುವ ಮಾಲೀಕರು ನಗರಸಭೆಯಿಂದ ಅಧಿಕೃತ ಉದ್ದಿಮೆ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.
ಪ್ರಸ್ತುತ ಲಭ್ಯವಿರುವ ಹಿಂದಿನ ದಾಖಲೆಗಳನ್ವಯ ಅನೇಕರು ಪರವಾನಗಿ ಪಡೆಯದೆ ಉದ್ದಿಮೆ ಮುಂದುವರೆಸುತ್ತಿರುವುದು ಕಂಡುಬಂದಿದೆ. 2016-17ನೇ ಸಾಲಿನ ಚಾಲ್ತಿ ಅವಧಿಯಲ್ಲಿ ಪರವಾನಗಿ ನವೀಕರಿಸದೆ ಇರುವವರು ಸೆಪ್ಟೆಂಬರ್ 25ರೊಳಗೆ ಪರವಾನಗಿಯನ್ನು ಪಡೆದುಕೊಳ್ಳಬೇಕು.
ತಪ್ಪಿದಲ್ಲಿ ಪರವಾನಗಿ ನವೀಕರಿಸಿಕೊಳ್ಳದ ಉದ್ದಿಮೆದಾರರಿಗೆ ದಂಡ ವಿಧಿಸುವುದಲ್ಲದೆ, ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುತ್ತದೆ. ಇದಕ್ಕೆ ಅಸ್ಪದ ಕೊಡದೆ ಸಂಬಂಧಪಟ್ಟವರು ಪರವಾನಗಿ ಪಡೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಸೆ. 25ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 21 (ಕರ್ನಾಟಕ ವಾರ್ತೆ):- ಸಂತೇಮರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಪ್ಟೆಂಬರ್ 25ರಂದು ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಹೊನ್ನೂರು, ಸಂತೇಮರಹಳ್ಳಿ, ನವಿಲೂರು, ಅಲ್ದೂರು, ಕುದೇರು, ಮಂಗಲ ವಾಟರ್ ಸಪ್ಲೈ, ಕೆಂಪನಪುರ, ಅಂಬಳೆ ಹಾಗೂ ಚಂಗಡಿಪುರ ಫೀಡರ್‍ಗಳಿಂದ ಸರಬರಾಜಾಗುವ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 24ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 21 (ಕರ್ನಾಟಕ ವಾರ್ತೆ):- ಚಾಮರಾಜನಗರ-ಹೊನ್ನಹಳ್ಳಿ ಮಾರ್ಗದ ವಿದ್ಯುತ್ ನಿರ್ವಹಣೆ ಕಾಮಗಾರಿಯನ್ನು ಸೆಪ್ಟೆಂಬರ್ 24ರಂದು ಹಮ್ಮಿಕೊಳ್ಳಲಾಗಿದೆ.
ಹೊನ್ನಹಳ್ಳಿ ವಿತರಣಾ ಕೇಂದ್ರದಿಂದ ಸರಬರಾಜಾಗುವ ಅರಕಲವಾಡಿ, ಯರಗನಹಳ್ಳಿ, ಸುವರ್ಣನಗರ, ಫ್ಯಾಕ್ಟರಿ, ಡೊಳ್ಳಿಪುರ, ಪುಣಜನೂರು, ಬಿಸಲವಾಡಿ, ಅಮಚವಾಡಿ, ಎನ್‍ಜೆವೈ ಮಾದಲವಾಡಿ, ಎನ್.ಜೆ.ವೈ ಚನ್ನಪ್ಪನಪುರ ಮತ್ತು ಅಟ್ಟುಗೂಳಿಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಸಿದ್ದಯ್ಯನಪುರ, ಹೊಂಗಲವಾಡಿ, ಕೋಳಿಪಾಳ್ಯ, ಬಂದಿಗೌಡನಹಳ್ಳಿ, ಅಟ್ಟುಗೂಳಿಪುರ, ಎನ್.ಜೆ.ವೈ ದೊಡ್ಡಮೋಳೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 24ರಂದು ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ಸೆ. 22 (ಕರ್ನಾಟಕ ವಾರ್ತೆ):- ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಸೆಪ್ಟೆಂಬರ್ 24ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಕ್ತ ವಿವಿ ಪರೀಕ್ಷೆ ಸೆ. 27ಕ್ಕೆ ನಿಗಧಿ
ಚಾಮರಾಜನಗರ, ಸೆ. 22 (ಕರ್ನಾಟಕ ವಾರ್ತೆ):- ಕಾವೇರಿ ಜಲವಿವಾದದ ಸಂಬಂಧ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಸೆಪ್ಟೆಂಬರ್ 14ರಂದು ಮುಂದೂಡಲಾಗಿದ್ದ ಬಿಎ, ಬಿಕಾಂ, ಎಂಎ, ಎಂಕಾಂ, ಎಂಸಿಜೆ ಪರೀಕ್ಷೆಯನ್ನು ಸೆಪ್ಟೆಂಬರ್ 27ರಂದು ನಡೆಸಲಿದೆ.
ಪರೀಕ್ಷೆಗಳ ಪರಿಷ್ಕøತ ವೇಳಾಪಟ್ಟಿಯನ್ನು ವಿವಿ ವೆಬ್‍ವÉೈಟ್‍ನಲ್ಲಿ ಪ್ರಕಟಿಸಲಾಗಿದೆ. ಮಾಹಿತಿಗೆ ಮೈಸೂರಿನ ಕೇಂದ್ರ ಕಚೇರಿಯ ದೂರವಾಣಿ ಸಂಖ್ಯೆ 0821-2519942, ಪ್ರಾದೇಶಿಕ ಕೇಂದ್ರ ದೂ.ಸಂಖ್ಯೆ 8494911240, 9448500718, 8722080011, 9740701186, 9731250740 ಸಂಪರ್ಕಿಸುವಂತೆ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಎಸ್. ಮಹದೇವ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ಸದಸ್ಯರ ಹುದ್ದೆಗೆ ನಿವೃತ್ತ ಅಧಿಕಾರಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 22 (ಕರ್ನಾಟಕ ವಾರ್ತೆ):- ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತಿ ಇರುವ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಅಧಿಕಾರಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಲು ಪೊಲೀಸ್ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರ ಹುದ್ದೆಗೆ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಅಧಿಕಾರಿಗಳು ಸ್ವವಿವರವುಳ್ಳ ಅರ್ಜಿಯನ್ನು ಸೆಪ್ಟೆಂಬರ್ 29ರೊಳಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲೂ ದಸರಾ ಮಹೋತ್ಸವ: ಡಿ.ಸಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆ
ಚಾಮರಾಜನಗರ, ಸೆ. 23 (ಕರ್ನಾಟಕ ವಾರ್ತೆ):- ಇತಿಹಾಸ, ಸಂಸ್ಕøತಿ, ಪರಂಪರೆಯನ್ನು ಬಿಂಬಿಸುವ ನಾಡಹಬ್ಬ ದಸರಾ ಮಹೋತ್ಸವವನ್ನು ಚಾಮರಾಜನಗರ ಜಿಲ್ಲಾಕೇಂದ್ರ ಹಾಗೂ ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಮಟ್ಟದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಿದ್ದು, ಈ ಸಂಬಂಧ ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಬಿ. ರಾಮು ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ದಸರಾ ಮಹೋತ್ಸವ ಆಚರಣೆ ಸಂಬಂಧ ಪೂರ್ವಭಾವಿ ಸಿದ್ಧತೆಗಳ ಕುರಿತು ಸಮಾಲೋಚಿಸಲಾಯಿತು.
ಜಿಲ್ಲಾಮಟ್ಟದಲ್ಲಿ ನಾಲ್ಕು ದಿನಗಳ ಕಾಲ ಹಾಗೂ ವಿಧಾನಸಭಾ ಕ್ಷೇತ್ರಮಟ್ಟದಲ್ಲಿ ಎರಡು ದಿನಗಳ ಕಾಲ ದಸರಾ ಆಚರಣೆ ಕೈಗೊಳ್ಳಲು ಚರ್ಚಿಸಲಾಯಿತು. ದಸರಾ ಮಹೋತ್ಸವವನ್ನು ಸುಗಮವಾಗಿ ನಿರ್ವಹಿಸುವ ಸಂಬಂಧ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಯಿತು. ದಸರಾ ಮಹೋತ್ಸವ ನಡೆಸುವ ದಿನಾಂಕಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.
ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರವಾರು ನಡೆಸಲಾಗುವ ದಸರಾ ಉತ್ಸವ ಸಂಬಂಧ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಆಯಾ ಭಾಗದ ಶಾಸಕರು, ಜನಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿದ್ದು, ಆಚರಣೆ ಸಂಬಂಧ ಚರ್ಚಿಸಿ ಕಾರ್ಯಕ್ರಮ ಆಯೋಜನೆ ಕುರಿತು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದರು.
ದಸರಾ ಕಾರ್ಯಕ್ರಮ ನಡೆಯುವ ಸ್ಥಳ, ವೇದಿಕೆ, ಸಾಂಸ್ಕøತಿಕ ಕಾರ್ಯಕ್ರಮಗಳ ಏರ್ಪಾಡು ಸೇರಿದಂತೆ ಎಲ್ಲ ಪೂರ್ವಸಿದ್ಧತೆಯನ್ನು ಎಲ್ಲರ ವಿಶ್ವಾಸ ಪಡೆದು ಯಶಸ್ವಿಯಾಗಿ ನೆರವೇರಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಕಾರ್ಯಕ್ರಮಗಳು ಅರ್ಥಪೂರ್ಣ ಮಾಹಿತಿ ನೀಡುವ ಜತೆಗೆ ಗುಣಮಟ್ಟದಿಂದಿರಬೇಕು. ಏಕತಾನತೆಗೆ ಅವಕಾಶ ನೀಡದೇ ವಿಭಿನ್ನವಾಗಿ ಮೂಡಿಬರಬೇಕು. ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಬೇಕು. ಕಾಲೇಜು ವಿದ್ಯಾರ್ಥಿಗಳಿಂದಲೂ ವೈವಿಧ್ಯಮಯ ಕಾರ್ಯಕ್ರಮ ನೀಡಲು ಪೂರ್ವಸಿದ್ಧತೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಡುವ ಯುವ ಸಾಂಸ್ಕøತಿಕ ಕಾರ್ಯಕ್ರಮಗಳ ಕುರಿತು ಪ್ರದರ್ಶಿಸುವ ಪರಿಕಲ್ಪನೆ ಬಗ್ಗೆ ಆಯಾ ಕಾಲೇಜು ಪ್ರಾಂಶುಪಾಲರು ಮೊದಲೆ ಮಾಹಿತಿ ನೀಡಬೇಕು. ಕಾರ್ಯಕ್ರಮ ಪ್ರದರ್ಶನ ಬಗ್ಗೆ ತಾಲೀಮು ಆರಂಭಿಸಬೇಕು ಎಂದರು.
ಯಾವುದೇ ಲೋಪಕ್ಕೆ ಅವಕಾಶವಾಗದಂತೆ ದಸರಾ ಮಹೋತ್ಸವ ಆಚರಣೆ ಮಾಡಬೇಕು. ಗೊಂದಲಕ್ಕೆ ಆಸ್ಪದ ನೀಡಬಾರದು. ಕಾರ್ಯಕ್ರಮ ಆಯೋಜನೆ ಸಂಬಂಧ ರೂಪುರೇಷೆಗಳನ್ನು ಸಿದ್ಧಪಡಿಸಿ ಎಲ್ಲರ ಸಹಕಾರದೊಂದಿಗೆ ನಾಡಹಬ್ಬ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಸರಸ್ವತಿ, ಡಿ.ವೈ.ಎಸ್.ಪಿ. ಗಂಗಾಧರಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ನಗರಸಭಾ ಆಯುಕ್ತಾರದ ರಾಜಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಕೆ.ಎಚ್. ಪ್ರಸಾದ್, ಆಹಾರ, ನಾಗರಿಕ ಹಾಗೂ ಗ್ರಾಹಕ ಸರಬರಾಜು ವ್ಯವಹಾರಗಳ ಇಲಾಖೆ ಉಪನಿರ್ದೇಶಕರಾದ ಆರ್. ರಾಚಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಸತೀಶ್ ಇನ್ನಿತರ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ಕಾಲೇಜು ಪ್ರಾಂಶುಪಾಲರು ಸಭೆಯಲ್ಲಿ ಹಾಜರಿದ್ದರು.

 **********
ಸೆ. 26ರಂದು ಮುಖ್ಯಮಂತ್ರಿಯವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಸೆ. 24 (ಕರ್ನಾಟಕ ವಾರ್ತೆ):- ಮುಖ್ಯ ಮಂತ್ರಿಯವರಾದ ಸಿದ್ದರಾಮಯ್ಯ ಅವರು  ಸೆಪ್ಟಂಬರ್ 26 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಬೆಳಿಗ್ಗೆ 11.40 ಗಂಟೆಗೆ ಮಹದೇಶ್ವರ ಬೆಟ್ಟಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸುವರು. ಮಧ್ಯಾಹ್ನ 12.00 ಗಂಟೆಗೆ ಮಲೈ ಮಹದೇಶ್ವರ ಸ್ವಾಮಿ ದರ್ಶನ ಹಾಗೂ ಪೂಜೆಗೆ ತೆರಳುವರು. 12.30 ಗಂಟೆಗೆ
ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಿರುವ ಒಳಚರಂಡಿ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3.30 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಪ್ರಕಟಣೆ  ತಿಳಿಸಿದೆ.

ಸೆ. 26ರಂದು ಮುಖ್ಯಮಂತ್ರಿಯವರಿಂದ ಮಹದೇಶ್ವರಬೆಟ್ಟದಲ್ಲಿ  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ
ಚಾಮರಾಜನಗರ, ಸೆ. 25 (ಕರ್ನಾಟಕ ವಾರ್ತೆ):- ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೊಳ್ಳೇಗಾಲದ ಮಹದೇಶ್ವರಬೆಟ್ಟದಲ್ಲಿ ಕೈಗೊಳ್ಳಲಿರುವ ಒಳಚರಂಡಿ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮವು ಸೆಪ್ಟೆಂಬರ್ 26ರಂದು ಬೆಳಿಗ್ಗೆ 10.30 ಗಂಟೆಗೆ ಮಲೆ ಮಹದೇಶ್ವರ ಬೆಟ್ಟದ ಬಯಲು ರಂಗಮಂದಿರದ ಅವರಣದಲ್ಲಿ ನೆರವೇರಲಿದೆ.
ಮಹದೇಶ್ವರಬೆಟ್ಟದ ಸಾಲೂರು ಬೃಹನ್ಮಠಾಧ್ಯಕ್ಷರಾದ ಪ್ರಣವ ಶ್ರೀ ಪಟ್ಟದ ಗುರುಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು.
ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸುವರು. ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಜ್ಯೋತಿ ಬೆಳಗಿಸುವರು. ಶಾಸಕರಾದ ನರೇಂದ್ರ ಅವರು ಅಧ್ಯಕ್ಷತೆ ವಹಿಸುವರು.
ಲೋಕೋಪಯೋಗಿ, ಬಂದರು, ಒಳನಾಡು ಮತ್ತು ಜಲಸಾರಿಗೆ ಸಚಿವರಾದ ಡಾ. ಹೆಚ್.ಸಿ. ವiಹದೇವಪ್ಪ, ನಗರಾಭಿವೃದ್ಧಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವರಾದ ರೋಷನ್ ಬೇಗ್, ಜವಳಿ ಮತ್ತು ಮುಜರಾಯಿ ರಾಜ್ಯ ಸಚಿವರಾದ ರುದ್ರಪ್ಪ ಮಾನಪ್ಪ ಲಮಾಣಿ, ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ,  ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಶಾಸಕರಾದ ಎಸ್.ಜಯಣ್ಣ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಕೊಳ್ಳೇಗಾಲ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಸ್. ರಾಜು, ಉಪಾಧ್ಯಕ್ಷರಾದ ಲತಾ ರಾಜಣ್ಣ, ಜಿಲ್ಲಾ ಪಂಚಾಯತ್ ಸದಸ್ಯರಾದ ಇರ್ಷಾದ್ ಭಾನು, ತಾಲೂಕು ಪಂಚಾಯತ್ ಸದಸ್ಯರಾದ ಹಲಗತಂಬಡಿ, ಮಹದೇಶ್ವರ ಬೆಟ್ಟದ ಗ್ರಾಮಪಂಚಾಯತ್ ಅಧ್ಯಕ್ಷರಾದ ರುಕ್ಮಿಣಿ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಸೆ. 26ರಂದು ಕೆ.ವಿ.ಕೆಯಲ್ಲಿ ಬಾನುಲಿ ಸರಣಿ ಮತ್ತು ಸಂವಾದ ಕಾರ್ಯಕ್ರಮ
ಚಾಮರಾಜನಗರ, ಸೆ. 25 (ಕರ್ನಾಟಕ ವಾರ್ತೆ):- ತೋಟಗಾರಿಕಾ ಮಹಾವಿದ್ಯಾಲಯ ಮೈಸೂರು, ತೋಟಗಾರಿಕಾ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಆಕಾಶವಾಣಿ ಮೈಸೂರು ಇವರ ಸಹಯೋಗದಲ್ಲಿ ತೋಟಗಾರಿಕಾ ಬೆಳೆಗಳ ಸಮಗ್ರ ಉತ್ಪಾದನಾ ತಂತ್ರಜ್ಞಾನಗಳ ಬಗ್ಗೆ ಬಾನುಲಿ ಸರಣಿ ಮತ್ತು ಸಂವಾದ ಕುರಿತ ಫಲ-ಸಿರಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 26ರಂದು ಬೆಳಿಗ್ಗೆ 11 ಗಂಟೆಗೆ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಕೆ.ಎಂ. ಇಂದಿರೇಶ್ ಅಧ್ಯಕ್ಷತೆ ವಹಿಸುವರು.
ಮೈಸೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕರಾದ ಎಚ್. ಶ್ರೀನಿವಾಸ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸುವರು. ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರಾದ ಡಾ. ದೊರೆಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕ ಹಾಗೂ ಕೃಷಿ ವಿಜ್ಞಾನ ಕೇಂದ್ರದ ತಜ್ಞರುಗಳಿಂದ ತಾಂತ್ರಿಕ ಅಧಿವೇಶನ ಮತ್ತು ಪ್ರಾತ್ಯೆಕ್ಷಿಕೆಗಳನ್ನು ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿದೆ.

ಸೆ. 26ರಂದು ಶ್ರೀ ಮಲೆ ಮಹದೇಶ್ವರ ಬೆಟದಲ್ಲಿ ನೆರವೇರಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ ವಿವರ
ಚಾಮರಾಜನಗರ, ಸೆ. 25 (ಕರ್ನಾಟಕ ವಾರ್ತೆ):- ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿಯವರಿಂದ ನೆರವೇರಲಿರುವ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾಮಗಾರಿಗಳ ವಿವರ ಇಂತಿದೆ.
2710 ಲಕ್ಷ ರೂ. ವೆಚ್ಚದಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರದ ಸಮಗ್ರ ಒಳಚರಂಡಿ ಯೋಜನೆ ಕಾಮಗಾರಿ, 427.60 ಲಕ್ಷ ರೂ. ವೆಚ್ಚದಲ್ಲಿ ಅಂತರಗಂಗೆಯಲ್ಲಿ ಕಲ್ಯಾಣಿ ನಿರ್ಮಿಸಿ ಅಬಿವೃದ್ಧಿಪಡಿಸುವ ಕಾಮಗಾರಿ, 476 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನದ ಮುಂಭಾಗದಲ್ಲಿರುವ ಬಯಲು ರಂಗಮಮದಿರ ಅವರಣದಲ್ಲಿ ಭಕ್ತಾಧಿಗಳು ತಂಗಲು ಶೆಡ್ ನಿಮಾಣ ಕಾಮಗಾರಿ, 486 ಲಕ್ಷ ರೂ. ವೆಚ್ಚದಲ್ಲಿ 12 ಕೊಠಡಿಗಳ ಡಾಮೇಟರಿ ನಿರ್ಮಣ ಕಾಮಗಾರಿ, 330 ಲಕ್ಷ ರೂ. ವೆಚ್ಚದ ಪ್ರಾಧಿಕಾರದ ನೌಕರರಿಗೆ ಪಾಸ್ಟ್‍ಟ್ರಾಕ್ ವಸತಿಗೃಹಗಳ ನಿರ್ಮಾಣ, 100 ಲಕ್ಷ ರೂ. ವೆಚ್ಚದಲ್ಲಿ ಶ್ರೀಕ್ಷೇತ್ರದ ಬಸ್ ನಿಲ್ದಾಣ ಅವರಣದಲ್ಲಿ 72 ಸಂಖ್ಯೆಯ ಅಂಗಡಿ ಮಳಿಗೆಗಳ ನಿರ್ಮಾಣ ಮತ್ತು ಶ್ರೀಕ್ಷೇತ್ರದ ಅವರಣದಲ್ಲಿ ಒಂದು ಆಧುನಿಕ ಸುಸಜ್ಜಿತ ಉಪಹಾರ ಮಂದಿರ ನಿರ್ಮಾಣ ಕಾಮಗಾರಿಗಳಿಗೆ ಶಿಲಾನ್ಯಾಸ ನೇರವೇರಿಸುವರು.
56 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಶೂನ್ಯ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ 51 ಲಕ್ಷ ರೂ. ವೆಚ್ಚದಲ್ಲಿ ವಸತಿಗೃಹಗಳ ಬಟ್ಟೆಗಳನ್ನು ಯಂತ್ರಗಳಿಂದ ಶುಚಿಗೊಳಿಸುವ ಘಟಕಗಳನ್ನು ಮುಖ್ಯಮಂತ್ರಿಯವರು ಉದ್ಘಾಟಿಸಲಿದ್ದಾರೆ.
ಶ್ರೀಕ್ಷೇತ್ರದ ದೀಪಗಿರಿ ವಡ್ಡುವಿನಲ್ಲಿ 100 ಅಡಿ ಎತ್ತರದ ಮಹದೇಶ್ವರರ ವಿಗ್ರಹವನ್ನು ನಿರ್ಮಿಸುವ ಘೋಷಣೆಯನ್ನು ಸಹ ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸೆ. 28ರಂದು ಜಿಲಾಡಳಿತದಿಂದ ಶ್ರೀಕೃಷ್ಣ ಜಯಂತಿ  
ಚಾಮರಾಜನಗರ, ಸೆ. 26 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆವತಿಯಿಂದ ಸೆಪ್ಟೆಂಬರ್ 28ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
 ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಉದ್ಘಾಟನೆ ನೆರವೇರಿಸುವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್.ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕೆ.ಟಿ. ಶ್ರೀಕಂಠೇಗೌಡ, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ,  ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪಿ. ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಅಮಚವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಸುರೇಶ್ ಎನ್, ಋಗ್ವೇದಿ ಅವರು ಕಾರ್ಯಕ್ರಮದ ಪ್ರಧಾನ ಭಾಷಣ ಮಾಡುವರು ಕಾರ್ಯಕ್ರಮದ ನಂತರ ನಗರದ ಕು. ಅಕ್ಷತಾ ಎಸ್, ಜೈನ್ ಮತ್ತು ತಂಡದವರಿಂದ ಶ್ರೀಕೃಷ್ಣ ನೃತ್ಯರೂಪಕವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸೆ. 27ರಂದು ಬೇಗೂರಿನಲ್ಲಿ ಅಂಚೆ ಸಂತೆ  
ಚಾಮರಾಜನಗರ, ಸೆ. 26 (ಕರ್ನಾಟಕ ವಾರ್ತೆ):- ಅಂಚೆ ಇಲಾಖೆವತಿಯಿಂದ ಸೆಪ್ಟೆಂಬರ್ 27ರಂದು ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಏರ್ಪಡಿಸಲಾಗಿದೆ.
ಅಂಚೆಸಂತೆ ಕಾರ್ಯಕ್ರಮದಲ್ಲಿ ಅಂಚೆ ಉಳಿತಾಯ ಯೋಜನೆ, ಅವರ್ತಕ ಖಾತೆ, ಸುಕನ್ಯಾ ಸಮೃದ್ಧಿ,  ಸಾರ್ವಜನಿಕ ಭವಿಷ್ಯ ನಿಧಿ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮಾ ಮತ್ತು ಜೀವ ವಿಮೆ ಯೋಜನೆಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಪರಿಶೀಲಿಸಿ ಸ್ಥಳದಲ್ಲೆ ಸ್ವೀಕರಿಸಲಾಗುವುದು.
ಸುತ್ತಮುತ್ತಲ ಗಾಮೀಣ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಂಚೆ ಇಲಾಖೆ ನಂಜನಗೂಡು ವಿಭಾಗದ ಅಧೀಕ್ಷಕರಾದ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 28ರಂದು ಅಮಚವಾಡಿಯಲ್ಲಿ ಅಂಚೆ ಸಂತೆ
ಚಾಮರಾಜನಗರ, ಸೆ. 26 (ಕರ್ನಾಟಕ ವಾರ್ತೆ):- ಅಂಚೆ ಇಲಾಖೆವತಿಯಿಂದ ಸೆಪ್ಟೆಂಬರ್ 28ರಂದು ಚಾಮರಾಜನಗರ ತಾಲೂಕಿನ ಅಮಚವಾಡಿಯಲ್ಲಿ ಏರ್ಪಡಿಸಲಾಗಿದೆ.
ಅಂಚೆಸಂತೆ ಕಾರ್ಯಕ್ರಮದಲ್ಲಿ ಅಂಚೆ ಉಳಿತಾಯ ಯೋಜನೆ, ಅವರ್ತಕ ಖಾತೆ, ಸುಕನ್ಯಾ ಸಮೃದ್ಧಿ,  ಸಾರ್ವಜನಿಕ ಭವಿಷ್ಯ ನಿಧಿ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮಾ ಮತ್ತು ಜೀವ ವಿಮೆ ಯೋಜನೆಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಪರಿಶೀಲಿಸಿ ಸ್ಥಳದಲ್ಲೆ ಸ್ವೀಕರಿಸಲಾಗುವುದು.
ಸುತ್ತಮುತ್ತಲ ಗಾಮೀಣ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಂಚೆ ಇಲಾಖೆ ನಂಜನಗೂಡು ವಿಭಾಗದ ಅಧೀಕ್ಷಕರಾದ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ, ಸಂಘಸಂಸ್ಥೆ ಹಾಗೂ ಶಿಕ್ಷಕರಿಂದ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ  
ಚಾಮರಾಜನಗರ, ಸೆ. 26 (ಕರ್ನಾಟಕ ವಾರ್ತೆ):- ಪ್ರಸಕ್ತ ಸಾಲಿನ ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ವಿಕಲಚೇತನರ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ವಿಶೇಷ ಶಾಲೆಗಳಲ್ಲಿ 15 ವರ್ಷಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿಕಲಚೇತನರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಲ್ಲಿಸಿರುವ ಅಸಕ್ತ ವ್ಯಕ್ತಿ, ಸಂಸ್ಥೆ ಹಾಗೂ ಶಿಕ್ಷಕರು ಅರ್ಜಿ ನಮೂನೆಯನ್ನು ಇಲಾಖೆಯ ವೆಬ್‍ಸೈಟ್ hಣಣಠಿ//ತಿತಿತಿ.ತಿeಟಜಿಚಿಡಿeoಜಿಜisಚಿbಟeಜ.ಞಚಿಡಿ.ಟಿiಛಿ.iಟಿ ನಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ: 25,  ಅಕ್ಟೋಬರ್ 14ರೊಳಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾನಿ ಸಂಖ್ಯೆ: 08226-223688ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಸೆ. 28ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 26 (ಕರ್ನಾಟಕ ವಾರ್ತೆ):- ದೊಡ್ಡರಾಯಪೇಟೆ ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಸೆಪ್ಟೆಂಬರ್ 28ರಂದು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಚಾಮರಾಜನಗರ ಟೌನ್-1, ರಾಮಸಮುದ್ರ, ಸೋಮವಾರಪೇಟೆ ಟೌನ್-2, ಬೇಡರಪುರ, ಮಂಗಲ, ಶಿವಪುರ, ಕೋಡಿಮೋಳೆ, ಕಾಗಲವಾಡಿ, ಹರದನಹಳ್ಳಿ, ಟಿ.ಕೆ. ಮೋಳೆ, ಗೂಳೀಪುರ, ಎನ್.ಜೆ.ವೈ. ಮಾದಾಪುರ ಮಾರ್ಗಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಚ್ಚ ಭಾರತ್ ಅಭಿಯಾನ: ವಿಶೇಷ ಸ್ವಚ್ಚತಾ ಸಪ್ತಾಹ
ಚಾಮರಾಜನಗರ, ಸೆ. 26 (ಕರ್ನಾಟಕ ವಾರ್ತೆ):- ಸ್ವಚ್ಛ ಭಾರತ್ ಮಿಷನ್ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲಾ ಪಂಚಾಯತಿವತಿಯಿಂದ ಜಿಲ್ಲೆಯಾದ್ಯಂತ ಸೆ. 26ರಿಂದ ಒಂದು ವಾರಗಳ ಕಾಲ  ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಏರ್ಪಡಿಸಿರುವ ವಿಶೇಷ ಸ್ವಚ್ಛತಾ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸೆ.27ರಂದು ಶೌಚಾಲಯ ನಿರ್ಮಿಸಲು ಈಗಾಗಲೇ ಕಾರ್ಯಾದೇಶ ವಿತರಿಸಿರುವ ಫಲಾನುಭವಿಗಳಿಗೆ ಗುಂಡಿ ತೆಗೆಯುವಂತೆ ಉತ್ತೇಜಿಸಲು ಕಾರ್ಯಕ್ರಮ ಆಯೋಜಿಸುವುದು. ಸೆ.28ರಂದು ಶಾಲಾ ಮತ್ತು ಅಂಗನವಾಡಿ ಕೇಂದ್ರದ ಆವರಣ ಮತ್ತು ಆಟದ ಮೈದಾನಗಳನ್ನು ಸ್ವಚ್ಛಗೊಳಿಸುವುದು.
 ಸೆ.29ರಂದು ಗ್ರಾಮದಲ್ಲಿರುವ ನೀರಿನ ಟ್ಯಾಂಕ್, ತೊಂಬೆಗಳನ್ನು ಸ್ವಚ್ಛಗೊಳಿಸುವುದು. ನೀರಿನ ಸೋರಿಕೆಯನ್ನು ತಡೆಗಟ್ಟುವುದು. ವೈಯಕ್ತಿಕ, ಕುಟುಂಬ ಹಾಗೂ ಗ್ರಾಮದ ಸ್ವಚ್ಛತೆ ಕುರಿತು ಅರಿವು ಮೂಡಿಸುವುದು.
ಸೆ.30ರಂದು ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ತಿಳಿವಳಿಕೆ ಮೂಡಿಸುವುದು. ಗ್ರಾಮದ ಸುತ್ತಮುತ್ತ ಬಿದ್ದಿರುವ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಪರಿಸರ ಸ್ವಚ್ಛಗೊಳಿಸುವುದು.
ಆ.1ರಂದು ಸ್ಥಳೀಯ ಮಹಿಳಾ ಸ್ವಸಹಾಯ ಸಂಘ ಹಾಗೂ ಇತರೆ ಸಂಘ-ಸಂಸ್ಥೆಗಳ ಸಭೆ ಕರೆದು ಗ್ರಾಮ/ ಗ್ರಾಮ ಪಂಚಾಯಿತಿಯನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸಲು ಕ್ರಿಯಾ ಯೋಜನೆ ರೂಪಿಸುವುದು. ಆ. 2ರಂದು ವಿಶೇಷ ಗ್ರಾಮ ಸಭೆ ನಡೆಸುವುದು. ಗ್ರಾಮದಲ್ಲಿ ಸಾಮೂಹಿಕ ಶ್ರಮದಾನ ಮಾಡುವುದು.
ವಿಶೇಷ ಸ್ವಚ್ಛತಾ ಸಪ್ತಾಹದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು, ಸಂಘ-ಸಂಸ್ಥೆಯ ಸದಸ್ಯರು, ಸ್ಥಳೀಯ ಮುಖಂಡರು, ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿ ಸಪ್ತಾಹವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಅವರು ಮನವಿ ಮಾಡಿದ್ದಾರೆ
ಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳಿಗೆ ಮೂಲ ಸೌಕರ್ಯ: ಸಿ.ಎಂ.
ಚಾಮರಾಜನಗರ ಸೆ.26 (ಕರ್ನಾಟಕ ವಾರ್ತೆ) ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾದಿಕಾರ ರಚನೆಯಾದ ಬಳಿಕ ಮಹದೇಶ್ವರ ಬೆಟ್ಟದಲ್ಲಿ ಭಕ್ತಾಧಿಗಳ ಸೌಕರ್ಯಕ್ಕೆ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯರವರು ತಿಳಿಸಿದರು.
ಕೊಳ್ಳೇಗಾಲ ತಾಲ್ಲೂಕಿನ ಮಹದೇಶ್ವರ ಬೆಟ್ಟದ ಬಯಲು ರಂಗ ಮಂದಿರ ಆವರಣದಲ್ಲಿ ಇಂದು ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾದಿಕಾರದವತಿಯಿಂದ ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಪುಣ್ಯ ಯಾತ್ರ ಕ್ಷೇತ್ರಗಳನ್ನು ಅಭಿವೃದ್ದಿ ಪಡಿಸುವ ಕಾರ್ಯವನ್ನು ಮಾಡುತ್ತಿದೆ. ಮಹದೇಶ್ವರ ಬೆಟ್ಟಕ್ಕೆ ತನ್ನದೆ ಆದ ಇತಿಹಾಸವಿದೆ. ವರ್ಷದಲ್ಲಿ ಅಂದಾಜು 20 ಲಕ್ಷ ಭಕ್ತಾದಿಗಳು ಭೀಟಿ ನೀಡುತ್ತಿದ್ದಾರೆ. ಯಾತ್ರಾರ್ಥಿಗಳಿಗೆ ಕುಡಿಯುವ ನೀರು, ಸ್ನಾನದ ವ್ಯವಸ್ಥೆ ಸೇರಿದಂತೆ ಇನ್ನು ಅಗತ್ಯ ಸೌಲಭ್ಯ ಒದಗಿಸಿದರೆ ಮತ್ತಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಬರಲಿದ್ದಾರೆ. ಹೀಗಾಗಿ ಅಗತ್ಯ ಸೌಕರ್ಯಗಳನ್ನು ಒದಗಿಸಿವಲ್ಲಿ ಪ್ರಾಧಿಕಾರ ಮುಂದಾಗಿದೆ ಎಂದರು.
ಈ ಹಿಂದೆ ಕ್ಷೇತ್ರದ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 37 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಇಂದು ಒಳಚರಂಡಿ ಅಂತರಗಂಗೆ ಕಲ್ಯಾಣಿ ಅಭಿವೃದ್ದಿ, ತಂಗಲು ಶೆಡ್ ನಿರ್ಮಾಣ, ಡಾರ್‍ಮೆಟರಿ, ಸುಸಜ್ಜಿತ ಉಪಹಾರ ಮಂದಿರ, ನೌಕರರಿಗೆ ವಸತಿ ಗೃಹ, ಅಂಗಡಿ ಮಳಿಗೆಗಳ ನಿರ್ಮಾಣ ಸೇರಿದಂತೆ ಒಟ್ಟು 47 ಕೋಟಿ ರೂ ವೆಚ್ಚದ ಕಾಮಗಾರಿಗೆ ಚಾಲನೆ ಕೊಡಲಾಗಿದೆ. ಅಲ್ಲದೆ ಶ್ಯೂನ್ಯ ಘನತಾಜ್ಯ ವಿಲೇವಾರಿ ಘಟಕ, ವಸತಿ ಗೃಹಗಳ ಬಟ್ಟೆಗಳನ್ನು ಯಂತ್ರಗಳಿಂದ ಶುಚಿಗೊಳಿಸುವ ಘಟಕವನ್ನು ಉದ್ಘಾಟಿಸಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.
ಕ್ಷೇತ್ರದಲ್ಲಿ ಕೈಗೊಳ್ಳುವ ಒಳಚರಂಡಿ ಕಾಮಗಾರಿಗೆ ಮತ್ತಷ್ಟು ಹಣಕಾಸು ನೆರವು ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಹದೇವ ಪ್ರಸಾದ್ ಹಾಗೂ ಶಾಸಕರಾದ ನರೇಂದ್ರ ಮನವಿ ಮಾಡಿದ್ದಾರೆ. ಒಳಚರಂಡಿಗೆ ಸರ್ಕಾರದ ವತಿಯಿಂದಲೂ ಅವಶ್ಯ ನೆರವು ನೀಡುವುದಾಗಿ ಮುಖ್ಯಮಂತ್ರಿಯವರು ತಿಳಿಸಿದರು.
ಸಹಕಾರ ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್.ಮಹದೇವ ಪ್ರಸಾದ್ ಮಾತನಾಡಿ ಮಹದೇಶ್ವರ ದೇವಾಲಯದ ಆದಾಯವು 42 ಕೋಟಿ ರೂ ಗಳಿಂದ 52 ಕೋಟಿಗೆ ಹೆಚ್ಚಳವಾಗಿದೆ. ಈ ವರ್ಷ ದೇವಾಲಯದ ಆದಾಯ 60 ಕೋಟಿ ರೂ ದಾಟುವ ನಿರೀಕ್ಷೆ ಇದೆ. ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯ ಕೈಗೊಂಡಿದ್ದು ಇಲ್ಲಿನ ಬದಲಾವಣೆಯನ್ನು ಭಕ್ತಾಧಿಗಳು ಗಮನಿಸಿದ್ದಾರೆ ಎಂದರು.
ಕ್ಷೇತ್ರದಲ್ಲಿ ಸುರಕ್ಷತೆಗಾಗಿ 13 ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ರಸ್ತೆ ಡಾಂಬರೀಕರಣ ಮಾಡಲಾಗಿದೆ. ಒಟ್ಟು 43 ಎಕರೆ ಪ್ರದೇಶದಲ್ಲಿ 21 ಕೋಟಿ ರೂ ವೆಚ್ಚದಲ್ಲಿ ಮಹದೇಶ್ವರರ 100 ಅಡಿ ಎತ್ತರದ ಪ್ರತಿಮೆ ನಿರ್ಮಾಣ, ಹಸಿರು ವನ, ಬಿಲ್ವವನ, ಧ್ಯಾನಮಂದಿರ, ವಸ್ತು ಸಂಗ್ರಹಾಲಯ, ಮಕ್ಕಳ ಆಟದ ಉದ್ಯಾನವನ ಸೇರಿದಂತೆ ಇತರೆ ಕೆಲಸಗಳನ್ನು ನಿರ್ವಹಿಸಲಾಗುತ್ತದೆ ಎಂದು ಸಚಿವರಾದ ಮಹದೇವ ಪ್ರಸಾದ್ ತಿಳಿಸಿದರು.
ಮುಜರಾಯಿ ಸಚಿವರಾದ ರುದ್ರಪ್ಪ ಮಾನಪ್ಪ ¯ಮಾಣಿ ಮಾತನಾಡಿ ರಾಜ್ಯದಲ್ಲಿಯೇ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ಮಾದರಿಯಾಗಿದೆ. ಭಕ್ತಾದಿಗಳಿಗೆ ಹೆಚ್ಚು ಮೂಲ ಸೌಕರ್ಯ ಕಲ್ಪಿಸುವ ಮೂಲಕ ಗಮನಾರ್ಹವಾಗಿ ಮಾರ್ಪಡಾಗಲಿದೆ ಎಂದರು.
ಲೋಕೊಪಯೋಗಿ ಸಚಿವರಾದ ಡಾ|| ಎಚ್.ಸಿ,ಮಹದೇವಪ್ಪ ಮಾತನಾಡಿ ಜಿಲ್ಲೆಯಲ್ಲಿ 800 ಕೋಟಿ ರೂ ವೆಚ್ಚದಲ್ಲಿ ರಸ್ತೆ, ಸೇತುವೆ ಹಾಗೂ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಜಿಲ್ಲೆಯ ಪ್ರವಾಸೋದ್ಯಮ, ವ್ಯಾಪಾರ ವಹಿವಾಟು ಅನುಕೂಲಕ್ಕಾಗಿ ರಸ್ತೆ ಅಭಿವೃದ್ದಿ ಪಡಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಲೋಕಸಭಾ ಸದಸ್ಯರಾದ ಆರ್.ದ್ರುವನಾರಾಯಣ ಮಾತಾನಾಡಿ ಮಹದೇಶ್ವರ ಬೆಟ್ಟದಲ್ಲಿ ಈ ಹಿಂದೆ ಮೂಲ ಸೌಕರ್ಯಗಳ ಕೊರತೆ ಇತ್ತು. ಆದರೆ ಇತ್ತಿಚಗೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಕಾಳಜಿಯಿಂದ ಮೂಲ ಸೌಲಭ್ಯಗಳ ಕೊರತೆ ನೀಗಿದೆ. ರಾಜ್ಯದಲ್ಲಿಯೆ ಅತೀ ಹೆಚ್ಚು ಆದಾಯ ಹೊಂದಿರುವ 2ನೇ ದೇವಾಲಯವೆಂಬ ಹೆಗ್ಗಳಿಕೆಗೆ ಮಹದೇಶ್ವರ ದೇವಾಲಯ ಪಾತ್ರವಾಗಿದೆ ಎಂದರು.
ಶಾಸಕರಾದ ಆರ್.ನರೇಂದ್ರ ಮಾತಾನಾಡಿ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಇರುವ ಬೇಡಗಂಪಣ ಸಮುದಾಯವನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ತರುವ ಕೆಲಸ ಮಾಡಬೇಕಿದೆ. ಹನೂರು ಭಾಗದ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ 350 ಕೋಟಿ ವೆಚ್ಚದ ಬಹು ಗ್ರಾಮ ಕುಡಿಯುವ ನೀರು ಯೋಜನೆಗೆ ವಿಸ್ತøತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗಿದೆ. ರಾಮನಗುಡ್ಡ, ಹುಣಸೆಹುಬ್ಬೆ, ಗುಂಡಾಲ್ ಜಲಾಶಯದಿಂದ ಕುಡಿಯುವ ನೀರು ಉದ್ದೇಶಕ್ಕಾಗಿ ಅಭಿವೃದ್ದಿ ಕೆಲಸಗಳನ್ನು ಶೀಘ್ರವಾಗಿ ಕೈಗೊಳ್ಳಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಮುಖ್ಯಮಂತ್ರಿಯವರು ಬೇಡಗಂಪಣ ಸಮುದಾಯದ ಜನರಿಗೆ ಮನೆ ನಿರ್ಮಿಸಿಕೊಳ್ಳಲು ಮಂಜೂರಾತಿ ಹಕ್ಕು ಪತ್ರಗಳನ್ನು ವಿತರಿಸಿದರು. ಕ್ಷೇತ್ರದ ದೀಪಗಿರಿ ವಡ್ಡುವಿನಲ್ಲಿ 100 ಅಡಿ ಎತ್ತರದ ಮಹದೇಶ್ವರ ಪ್ರತಿಮೆ ನಿಮಾರ್ಣ ಮಾಡುವ ಕುರಿತು ಘೋಷಣೆ ಮಾಡಿದರು.
ವಿಧಾನ ಪರಿಷತ್ ಉಪಸಭಾಪತಿವರಾದ ಮರಿತಿಬ್ಬೇಗೌಡ, ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ಶಾಸಕರಾದ ಎಸ್.ಜಯಣ್ಣ, ಆರ್.ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಸ್.ರಾಜು, ಉಪಾಧ್ಯಕ್ಷರಾದ ಲತಾ ರಾಜಣ್ಣ, ಸದಸ್ಯರಾದ ಹಲಗ ತಂಬಡಿ, ಜಿ.ಪಂ. ಸದಸ್ಯರಾದ ಇರ್ಷಾದ್ ಭಾನು, ಗ್ರಾ.ಪಂ ಅಧ್ಯಕ್ಷರಾದ ರುಕ್ಮಿಣಿ, ಪ್ರಾದೇಶಿಕ ಆಯುಕ್ತರಾದ ಕುಂಜಪ್ಪ, ಜಿಲ್ಲಾಧಿಕಾರಿ ಬಿ.ರಾಮು, ಜಿ.ಪಂ. ಸಿಇಒ ಹೆಪ್ಸಿಬಾ ರಾಣಿ ಕೊರ್ಲಾ ಪಾಟಿ, ಪ್ರಾಧಿಕಾರದ ಕಾರ್ಯದರ್ಶಿ ಡಿ.ಭಾರತಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.






















ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ಲೋಕಾಅದಾಲತ್‍ನಲ್ಲಿ 4403 ಪ್ರಕರಣ ಇತ್ಯರ್ಥ, ವಾರ್ಷಿಕದಲ್ಲಿ ದಾಖಲಾದ ಪ್ರಕರಣದ ವಿವರಣೆ ನೀಡಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ

ವಿಶೇಷ ವರದಿ.. ರಾಮಸಮುದ್ರ ಎಸ್..ವೀರಭದ್ರಸ್ವಾಮಿ

ವಾರ್ಷಿಕದಲ್ಲಿ ದಾಖಲಾದ ಪ್ರಕರಣದ ವಿವರಣೆ ನೀಡಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ
ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ಲೋಕಾಅದಾಲತ್‍ನಲ್ಲಿ 4403 ಪ್ರಕರಣ ಇತ್ಯರ್ಥ
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: 2016 ಪೆಬ್ರವರಿಯಿಂದ ಡಿಸೆಂಬರ್ 10 ರವರೆಗಿನ ಅವದಿಯಲ್ಲಿ ಒಟ್ಟು ವ್ಯಾಜ್ಯಪೂರ್ವ ಹಾಗೂ ಕ್ರಿಮಿನಲ್, ಸಿವಿಲ್ ಪ್ರಕರಣ ಸೇರಿದಂತೆ 4403 ಪ್ರಕರಣಗಳು ಇತ್ಯರ್ಥಗೊಂಡಿದೆ ಎಂದು ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ನ್ಯಾಯಾದೀಶರಾದ ಲಕ್ಷ್ಮಣ್ ಫಕೀರಪ್ಪ ಎಸ್ ಮಳವಳ್ಳಿ ಮಾದ್ಯಮಗಳಿಗೆ ತಿಳಿಸಿದ್ದಾರೆ.
ಕಾನೂನು ಸೇವೆಗಳ ಪ್ರಾದಿಕಾರ ವತಿಯಿಂದ ನಡೆಯುವ ಪ್ರತಿ ಎರಡನೇ ಶನಿವಾರ ನಡೆಯುತ್ತಿರುವ ಲೋಕಾ ಅದಾಲತ್‍ನಲ್ಲಿ ವ್ಯಾಜ್ಯಪೂರ್ವಪ್ರಕರಣಗಳ  ಬಗ್ಗೆ ವಿವರಣೆ ನೀಡಿದ ನ್ಯಾಯಾದೀಶರು ಪೆಬ್ರವರಿ 13 ರಲ್ಲಿ 1292 ರಲ್ಲಿ 171 ಪ್ರಕರಣ ಇತ್ಯರ್ಥವಾಗಿದೆ .ಮಾರ್ಚ್ 12 ರಲ್ಲಿ 300 ರಲ್ಲಿ 92 ಪ್ರಕರಣ, ಜೂನ್ 11 ರಲ್ಲಿ 9 ಪ್ರಕರಗಳ ಪೈಕಿ 9ನ್ನು ಇತ್ಯರ್ಥಪಡಿಸಿದೆ.
ಜುಲೈ 9 ರಂದು 569 ರಲ್ಲಿ 207 ಪ್ರಕರಣಗಳು, ಆಗಸ್ಟ್ 8 ರಲ್ಲಿ 1001 ಪ್ರಕರಣಗಳಲ್ಲಿ 183, ಸೆಪ್ಟೆಂಬರ್ 10 ರಂದು 70 ಪ್ರಕರಣಗಳಲ್ಲಿ 50 ಪ್ರಕರಣಗಳು, ಅಕ್ಟೋಬರ್ 8 ರಂದು 425 ರಲ್ಲಿ 236 ಪ್ರಕರಣಗಳು, ನವೆಂಬರ್ 12 ರಲ್ಲಿ 101 ಪ್ರಕರಣಗಳಲ್ಲಿ 3, ಡಿಸೆಂಬರ್ 10 ರಲ್ಲಿ 10 ಪ್ರಕರಣಗಳ ಪೈಕಿ 5 ಒಟ್ಟು 3777 ಪ್ರಕರಣಗಳ ಪೈಕಿ 956 ಪ್ರಕರಣಗಳನ್ನು ಕಕ್ಷಿದಾರರು, ವಕೀಲರ ಸಹಕಾರದಿಂದ ಇತ್ಯರ್ಥಪಡಿದ್ದೇವೆ ಎಂದರು.
ನ್ಯಾಯಾಲಯದಲ್ಲಿಯೂ ಬಾಕಿ ಉಳಿದ ಇತರೇ ಪ್ರಕಣಗಳ ಅಂಕಿ ಅಂಶಗಳನ್ನು ವಿವರಿಸಿದ ಅವರು
ಪೆಬ್ರವರಿ 13 ರಲ್ಲಿ 290 ರಲ್ಲಿ 90 ಪ್ರಕರಣ ಇತ್ಯರ್ಥವಾಗಿದೆ .ಮಾರ್ಚ್ 12 ರಲ್ಲಿ 587 ರಲ್ಲಿ 279 ಪ್ರಕರಣ, ಏಪ್ರಿಲ್ ಅಲ್ಲಿ 432 ಅಲ್ಲಿ 432 ಪ್ರಕರಣಗಳು, ಜೂನ್ 11 ರಲ್ಲಿ 322 ಪ್ರಕರಗಳ ಪೈಕಿ 249 ನ್ನು ಇತ್ಯರ್ಥಪಡಿಸಿದೆ.
ಜುಲೈ 9 ರಂದು 140 ರಲ್ಲಿ 117 ಪ್ರಕರಣಗಳು, ಆಗಸ್ಟ್ 8 ರಲ್ಲಿ 318 ಪ್ರಕರಣಗಳಲ್ಲಿ 98, ಸೆಪ್ಟೆಂಬರ್ 10 ರಂದು 468 ಪ್ರಕರಣಗಳಲ್ಲಿ 301 ಪ್ರಕರಣಗಳು, ಅಕ್ಟೋಬರ್ 8 ರಂದು 563 ರಲ್ಲಿ 563 ಪ್ರಕರಣಗಳು, ನವೆಂಬರ್ 12 ರಲ್ಲಿ 701 ಪ್ರಕರಣಗಳಲ್ಲಿ 481 , ಡಿಸೆಂಬರ್ 10 ರಲ್ಲಿ 1080 ಪ್ರಕರಣಗಳ ಪೈಕಿ 837 ಒಟ್ಟು 4901 ಪ್ರಕರಣಗಳ ಪೈಕಿ 3447 ಪ್ರಕರಣಗಳನ್ನು ವಿಲೆವಾರಿ ಮಾಡಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್ ವ್ಯವಹಾರಗಳು, ಸಂಚಾರಿ ಠಾಣೆಗೆ ಸಂಬಂದಿಸಿದ ಪ್ರಕರಣಗಳು, ಕಂದಾಯ, ಕಾರ್ಮಿಕ, ವಿಮಾ ಪಾಲಿಸಿ, ವಿದ್ಯುತ್ ನೀರಿಗೆ ಸಂಬಂದಿಸಿದ ಪ್ರಕರಣಗಳು, ಕ್ರಿಮಿನಲ್ ಸಿವಿಲ್ ಪ್ರಕರಣಗಳು ಸೇರಿದ್ದಾಗಿದೆ  ಭೂಸ್ವಾದೀನ ಪ್ರಕರಣಕ್ಕೆ ಸಂಬಂದಿಸಿದಂತೆ 84 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.
ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ 8490085 ಮೌಲ್ಯದ 956 ವ್ಯಾಜ್ಯಪೂರ್ವ ಪ್ರಕರಣಗಳು, 14284943 ಮೌಲ್ಯದ ಪ್ರಮಾಣದ 3447 ಸಿವಿಲ್ ಪ್ರಕರಣಗಳು ಸೇರಿ 22775028 ರಷ್ಟು ಮೌಲ್ಯದ 4403 ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದಾಗಿ ನ್ಯಾಯಾದೀಶರು ತಿಳಿಸಿದ್ದಾರೆ.
ಹೆಚ್ಚುವರಿ ಜಿಲ್ಲಾ ನ್ಯಾಯಾದೀಶರಾದ ಬೃಂಗೇಶ್,ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾದೀಶರಾದ ನಂದೀಶ್, ಪ್ರದಾನ ಶ್ರೇಣಿ ನ್ಯಾಯಾಧೀಶ ರಾಘವೇಂದ್ರ ಅವರು ಹಾಜರಿದ್ದರು

********************

Sunday, 4 December 2016

05-12-2016. ಚಾಮರಾಜನಗರ (ಜಯಲಲಿತಾ ಅನಾರೋಗ್ಯ: ಜಿಲ್ಲೆಯ ಗಡಿಭಾಗದಲ್ಲಿ ವ್ಯಾಪಕ ಬಂದೂಬಸ್ತ್ ನಿಯೋಜನೆ)

ಜಯಲಲಿತಾ ಅನಾರೋಗ್ಯ: ಜಿಲ್ಲೆಯ ಗಡಿಭಾಗದಲ್ಲಿ ವ್ಯಾಪಕ ಬಂದೂಬಸ್ತ್ ನಿಯೋಜನೆ
 ವರದಿ : ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಹೃದಯಾಘಾತ ಹಿನ್ನಲೆಯಲ್ಲಿ ಚಾಮರಾಜ ನಗರದ ಎಲ್ಲಾ ಚೆಕ್ ಪೋಸ್ಟ್ ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವರೀಷ್ಟಾದಿಕಾರಿ ಬಂದೂಬಸ್ತ್ ಮಾಡಿದ್ದಾರೆ. ಕಳೆದ ರಾತ್ರಿ ಹೃದಯಾಘಾತ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆಯೆ ಅನಾಹುತಗಳ,ಅವಘಡಗಳು ಸಂಭವಿಸಬಹುದೆಂದು ಮುಂಜಾಗ್ರತವಾಗಿ ಜಿಲ್ಲೆಯ ಎಂಟು ಕಡೆ ಇರುವ ಚೆಕ್ ಪೋಸ್ಟ್ ಅಲ್ಲಿ ಪೊಲೀಸ್ ಸಿಬ್ಬಂದಿಯನ್ನು ಚಾಮರಾಜನಗರ ಪೊಲೀಸ್ ವರೀಷ್ಠಾದಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ನಿಯೋಜಿಸಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ದ ಪಾಲಾರ್,ಗುಂಡ್ಲುಪೇಟೆ ಬಂಡೀಪುರ,ಮೂಲೆಹೊಳೆ,  ಕಕ್ಕೇನಹಳ್ಳ, ಚಾಮರಾಜನಗರದ ಬಿಸಲವಾಡಿ,ಎಲೆಕಟ್ಟೆ ಸೇರಿದಂತೆ ಎಂಟು ಕಡೆ ಭದ್ರತೆ ನಿಯೋಜಿದ್ದಾರೆ. 

ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು