ಸೆ. 22ರಂದು ತಾಲೂಕು ಪ.ಜಾ, ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ
ಚಾಮರಾಜನಗರ, ಸೆ. 20 (ಕರ್ನಾಟಕ ವಾರ್ತೆ):- ಚಾಮರಾಜನಗರ ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯು ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 22ರಂದು ಮಧ್ಯಾಹ್ನ 2.30 ಗಂಟೆಗೆ ನಗರದ ಕರಿನಂಜನಪುರ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಸೆ. 27ರಂದು ಮಹದೇಶ್ವರ ಬೆಟ್ಟದಲ್ಲಿ ಗೋಲಕ ಹಣ ಎಣಿಕೆ
ಚಾಮರಾಜನಗರ, ಸೆ. 20 (ಕರ್ನಾಟಕ ವಾರ್ತೆ):- ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಗೋಲಕಗಳ ಹಣ ಎಣಿಕೆ ಕಾರ್ಯವು ಸೆಪ್ಟೆಂಬರ್ 27ರಂದು ಬೆಳಿಗ್ಗೆ ನಡೆಯಲಿದೆ.
ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ಸಹಯೋಗದೊಂದಿಗೆ ಹಣ ಎಣಿಕೆ ಕಾರ್ಯವು ನಡೆಸಲಾಗುವುದೆಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆÉ.
ಕೊಠಡಿ ಬಾಡಿಗೆಗೆ ಲಭ್ಯ
ಚಾಮರಾಜನಗರ, ಸೆ. 20 (ಕರ್ನಾಟಕ ವಾರ್ತೆ):- ನಗರದ ಹೌಸಿಂಗ್ ಬೋಡ್ ಕಾಲೋನಿಯ ತಹಸೀಲ್ದಾರ್ ನಿವಾಸ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾ ಕೃಷಿಕ ಸಮಾಜ ಕಟ್ಟಡದ ನೆಲಮಾಳಿಗೆಯಲ್ಲಿ ವಿಶಾಲವಾದ ಕೊಠಡಿಗಳು ಬಾಡಿಗೆಗೆ ಲಭ್ಯವಿದೆ.
ಸುಮಾರು 1000 ಚದರ ಅಡಿಗಳಲ್ಲಿ ವಾಣಿಜ್ಯ ಕಚೇರಿ ಅಥವಾ ಬ್ಯಾಂಕ್ ನಡೆಸಲು ಸೂಕ್ತವಾಗಿರುವ ಕೊಠಡಿಗಳು ಬಾಡಿಗೆಗೆ ಲಭ್ಯವಿದ್ದು ಆಸಕ್ತರು ಜಿಲ್ಲಾಡಳಿತ ಭವನದಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಗುಂಡ್ಲುಪೇಟೆ : ಉದ್ದಿಮೆ ಪರವಾನಗಿ ಪಡೆಯಲು ಸೂಚನೆ
ಚಾಮರಾಜನಗರ, ಸೆ. 20 (ಕರ್ನಾಟಕ ವಾರ್ತೆ):- ಗುಂಡ್ಲುಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಹೋಟೆಲ್, ಅಂಗಡಿ, ಇತರೆ ಉದ್ದಿಮೆ ಮಾಲೀಕರು ಪ್ರಸಕ್ತ ಸಾಲಿಗೆ ಪರವಾನಗಿ ಪಡೆಯುವಂತೆ ಸೂಚಿಸಲಾಗಿದೆ.
ಪರವಾನಗಿ ಪಡೆಯದೆ ಉದ್ದಿಮೆ ನಡೆಸುವುದು ಪುರಸಭಾ ಕಾಯಿದೆ 1964ರ ಪ್ರಕರಣ 250ರ ರೀತ್ಯ ಕಾನೂನು ಬÁಹಿರವಾಗಿದೆ.
7 ದಿನಗಳ ಒಳಗೆ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಪುರಸಭಾ ಕಚೇರಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಅರ್ಜಿ ನಮೂನೆ ನೀಡಲಿದ್ದಾರೆ. ಪುರಸಭಾ ಕಚೇರಿಯಲ್ಲಿಯೂ ಅಗತ್ಯ ದಾಖಲಾತಿಗಳನ್ನು ಒದಗಿಸಿ ಪರವಾನಗಿ ಪಡೆಯಬೇಕು. ತಪ್ಪಿದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದೆಂದು ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಳಂದೂರು : ವಿದ್ಯಾರ್ಥಿ ವೇತನಕ್ಕೆ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 20 (ಕರ್ನಾಟಕ ವಾರ್ತೆ):- ಯಳಂದೂರು ತಾಲೂಕಿನಲ್ಲಿ ಪರಿಶಿಷ್ಟ ವರ್ಗದ 9 ಹಾಗೂ 10ನೇ ತರಗತಿ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ಹೊಸದಾಗಿ ಎನ್ ಎಸ್ ಪಿ ಮುಖಾಂತರ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸೂಚಿಸಿದೆ.
ಎನ್ ಎಸ್ ಪಿ ವೆಬ್ ಸೈಟನ್ನು ಹೊಸ ಆವೃತ್ತಿಯೊಂದಿಗೆ ಪ್ರಾರಂಭಿಸಿರುವ ಕಾರಣ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೂ ಹೊಸದಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ವಿದ್ಯಾರ್ಥಿಗಳು ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಸುವುದು ಕಡ್ಡಾಯವಾಗಿದೆ. ಬÁ್ಯಂಕ್ ಖಾತೆ ಸಂಖ್ಯೆ, ಆಧಾರ್ ಕಾರ್ಡ್, ಜಾತಿ ಆದಾಯ ಪ್ರಮಾಣ ಪತ್ರ ಜೆರಾಕ್ಸ್ ಪ್ರತಿಗಳನ್ನು ಸಂಬಂಧಪಟ್ಟ ಶಾಲಾ ಕಾಲೇಜಿನಿಂದ ದೃಢೀಕರಿಸಿ ನೀಡುವುದು ಕಡ್ಡಾಯವಾಗಿದೆ. ವೆಬ್ ಸೈಟ್ hಣಣಠಿ://sಛಿhoಟಚಿಡಿshiಠಿs.gov.iಟಿ ನಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ. ಅರ್ಜಿ ಸಲ್ಲಿಕೆ ಸಂಬಂಧ ತೊಂದರೆ ಉಂಟಾದಲ್ಲಿ ಸಹಾಯವಾಣಿ : 0120-6619540 ಇ ಮೇಲ್ ಟಿsಠಿಜiಡಿeಛಿಣoಡಿsಠಿ@gmಚಿiಟ.ಛಿom ಅಥವಾ sಣತಿeಟಜಿಚಿಡಿe@gmಚಿiಟ.ಛಿom ಸಂಪರ್ಕಿಸಬೇಕು. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 30 ಕಡೆಯ ದಿನವಾಗಿದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಶಸ್ವಿನಿ ಯೋಜನೆ ನೋಂದಣಿಗೆ ಅವಧಿ ವಿಸ್ತರಣೆ
ಚಾಮರಾಜನಗರ, ಸೆ. 20 (ಕರ್ನಾಟಕ ವಾರ್ತೆ):- 2016-17ನೇ ಸಾಲಿನಲ್ಲಿ ಗ್ರಾಮೀಣ ಹಾಗೂ ನಗರ ಯಶಸ್ವಿನಿ ಸಹಕಾರ ರೈತರ ಆರೋಗ್ಯ ರಕ್ಷಣಾ ಯೋಜನೆಯಡಿ ನೊಂದಾಯಿಸಿಕೊಳ್ಳುವ ಅವಧಿಯನ್ನು ಸರ್ಕಾರ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.
ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದನಾ ಸಹಕಾರ ಸಂಘಗಳು, ಇತರೆ ಸಹಕಾರ ಸಂಘಗಳ ಸದಸ್ಯರು ಯಶಸ್ವಿನಿ ಯೋಜನೆಗೆ ನೊಂದಾಯಿಸಿಕೊಳ್ಳುವ ಮೂಲಕ ಯೋಜನೆಯ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಆಯಾ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿಗಳ ಕಚೇರಿ, ಚಾಮರಾಜನಗರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮತ್ತು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಸಂಪರ್ಕಿಸುವಂತೆ ಸಹಕಾರ ಸಂಘಗಳ ಉಪನಿಬಂಧಕರಾದ ಪಿ. ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲ: ಮನೆ ನಿರ್ಮಾಣ ಸಹಾಯಧನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 21 (ಕರ್ನಾಟಕ ವಾರ್ತೆ):- ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯಡಿಯಲ್ಲಿ 2016-17ನೇ ಸಾಲಿಗೆ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಅರ್ಹ ಮಹಿಳಾ ಫಲಾನುಭವಿಗಳು, ವಿಧುರ, ಹಿರಿಯ ನಾಗರಿಕರು, ವಿಕಲಚೇತನರು ಮತ್ತು ಮಾಜಿ ಸೈನಿಕ ಫಲಾನುಭವಿಗಳಿಂದ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲು ಅರ್ಜಿ ಅಹ್ವಾನಿಸಲಾಗಿದೆ.
ಸ್ವಂತ ಖಾಲಿ ನಿವೇಶನ, ಕಚ್ಚಾಮನೆ, ಹಾಗೂ ಗುಡಿಸಲು ಹೊಂದಿರುವವರು ಸಹಾಯಧನ ಪಡೆಯಬಹುದು.
ಜಾತಿ ಮತ್ತು ವರಮಾನ ಪತ್ರ, ಆಧಾರ್ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಫಲಾನುಭವಿಯ ಹೆಸರಿನಲ್ಲಿರುವ ಖಾಲಿ ನಿವೇಶನದ ದಾಖಲೆ ಮತ್ತು 2016-17ನೇ ಸಾಲಿನ ಖಾಲಿ ನಿವೇಶನದ ನಮೂನೆ-3 ಸೇರಿದಂತೆ ಎಲ್ಲ ದಾಖಲಾತಿಗಳು ನಗರಸಭೆಯ ವ್ಯಾಪ್ತಿಯ ವಿಳಾಸದಲ್ಲಿರಬೇಕು ಮತ್ತು ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 29 ಕಡೆಯ ದಿನ. ಅಪೂರ್ಣ ಹಾಗೂ ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ಸಂಬಂಧಪಟ್ಟ ಶಾಖೆಯಲ್ಲಿ ಪಡೆಯುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 24ರಂದು ನಗರದಲ್ಲಿ ಉದ್ಯೋಗ ಮೇಳ
ಚಾಮರಾಜನಗರ, ಸೆ. 21 (ಕರ್ನಾಟಕ ವಾರ್ತೆ):- ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಸೆಪ್ಟೆಂಬರ್ 24ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿರುವ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.
ಮೈಸೂರು ಮತ್ತು ಬೆಂಗಳೂರಿನಲ್ಲಿ ಶಾಖೆಗಳನ್ನು ಹೊಂದಿರುವ ರ್ಯಾಕ್‍ಮಂಡ್ ಟೆಕ್ನಾಲಜಿಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಖಾಸಗಿ ಕಂಪನಿಗೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ, ಡಿಪ್ಲೋಮಾ ಹಾಗೂ ಬಿ.ಇ ವಿದ್ಯಾರ್ಹತೆಯುಳ್ಳ ಪುರುಷ ಮತ್ತು ಮಹಿಳಾ ನಿರುದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ವಯೋಮಿತಿ 18ರಿಂದ 35 ವರ್ಷದೊಳಗಿರಬೇಕು. ಮಾಸಿಕ ಸಂಭಾವನೆ 8000 ರೂ. ನಿಂದ 24,000 ರೂ. ನೀಡಲಾಗುವುದು. ಅಸಕ್ತರು ಸ್ವವಿವಿರಗಳೊಂದಿಗೆ ಸಂದರ್ಶನಕ್ಕೆ ಹಾಗರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗಾಧಿಕಾರಿ 08226-224430 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಸೆ. 25ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 21 (ಕರ್ನಾಟಕ ವಾರ್ತೆ):- ಸಂತೇಮರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಪ್ಟೆಂಬರ್ 25ರಂದು ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಹೊನ್ನೂರು, ಸಂತೇಮರಹಳ್ಳಿ, ನವಿಲೂರು, ಅಲ್ದೂರು, ಕುದೇರು, ಮಂಗಲ ವಾಟರ್ ಸಪ್ಲೈ, ಕೆಂಪನಪುರ, ಅಂಬಳೆ ಹಾಗೂ ಚಂಗಡಿಪುರ ಫೀಡರ್‍ಗಳಿಂದ ಸರಬರಾಜಾಗುವ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 25ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 21 (ಕರ್ನಾಟಕ ವಾರ್ತೆ):- ಚಾಮರಾಜನಗರ-ಹೊನ್ನಹಳ್ಳಿ ಮಾರ್ಗದ ವಿದ್ಯುತ್ ನಿರ್ವಹಣೆ ಕಾಮಗಾರಿಯನ್ನು ಸೆಪ್ಟೆಂಬರ್ 24ರಂದು ಹಮ್ಮಿಕೊಳ್ಳಲಾಗಿದೆ.
ಹೊನ್ನಹಳ್ಳಿ ವಿತರಣಾ ಕೇಂದ್ರದಿಂದ ಸರಬರಾಜಾಗುವ ಅರಕಲವಾಡಿ, ಯರಗನಹಳ್ಳಿ, ಸುವರ್ಣನಗರ, ಫ್ಯಾಕ್ಟರಿ, ಡೊಳ್ಳಿಪುರ, ಪುಣಜನೂರು, ಬಿಸಲವಾಡಿ, ಅಮಚವಾಡಿ, ಎನ್‍ಜೆವೈ ಮಾದಲವಾಡಿ, ಎನ್.ಜೆ.ವೈ ಚನ್ನಪ್ಪನಪುರ ಮತ್ತು ಅಟ್ಟುಗೂಳಿಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಸಿದ್ದಯ್ಯನಪುರ, ಹೊಂಗಲವಾಡಿ, ಕೋಳಿಪಾಳ್ಯ, ಬಂದಿಗೌಡನಹಳ್ಳಿ, ಅಟ್ಟುಗೂಳಿಪುರ, ಎನ್.ಜೆ.ವೈ ದೊಡ್ಡಮೋಳೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 25ರೊಳಗೆ ಉದ್ದಿಮೆ ಪರವಾನಗಿ ಪಡೆಯಲು ನಗರಸಭೆ ಮನವಿ
ಚಾಮರಾಜನಗರ, ಸೆ. 21 (ಕರ್ನಾಟಕ ವಾರ್ತೆ):- ನಗರಸಭಾ ವ್ಯಾಪ್ತಿಯಲ್ಲಿ ಅಂಗಡಿ, ವ್ಯಾಪಾರ, ಉದ್ದಿಮೆ, ಆಯಿಲ್ ಮಿಲ್, ರೈಸ್ ಮಿಲ್, ಪ್ಲೋರ್ ಮಿಲ್, ವರ್ಕ್‍ಶಾಪ್, ಹೋಟೇಲ್, ಟೀ ಸ್ಟಾಲ್, ಲಾಡ್ಜಿಂಗ್, ಸ್ವೀಟ್ ಸ್ಟಾಲ್, ಕಾಂಡಿಮೆಂಟ್ಸ್, ವೆಲ್ಡಿಂಗ್ ಶಾಪ್ ಇನ್ನಿತರ ವಹಿವಾಟು ನಡೆಸುತ್ತಿರುವ ಮಾಲೀಕರು ನಗರಸಭೆಯಿಂದ ಅಧಿಕೃತ ಉದ್ದಿಮೆ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.
ಪ್ರಸ್ತುತ ಲಭ್ಯವಿರುವ ಹಿಂದಿನ ದಾಖಲೆಗಳನ್ವಯ ಅನೇಕರು ಪರವಾನಗಿ ಪಡೆಯದೆ ಉದ್ದಿಮೆ ಮುಂದುವರೆಸುತ್ತಿರುವುದು ಕಂಡುಬಂದಿದೆ. 2016-17ನೇ ಸಾಲಿನ ಚಾಲ್ತಿ ಅವಧಿಯಲ್ಲಿ ಪರವಾನಗಿ ನವೀಕರಿಸದೆ ಇರುವವರು ಸೆಪ್ಟೆಂಬರ್ 25ರೊಳಗೆ ಪರವಾನಗಿಯನ್ನು ಪಡೆದುಕೊಳ್ಳಬೇಕು.
ತಪ್ಪಿದಲ್ಲಿ ಪರವಾನಗಿ ನವೀಕರಿಸಿಕೊಳ್ಳದ ಉದ್ದಿಮೆದಾರರಿಗೆ ದಂಡ ವಿಧಿಸುವುದಲ್ಲದೆ, ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುತ್ತದೆ. ಇದಕ್ಕೆ ಅಸ್ಪದ ಕೊಡದೆ ಸಂಬಂಧಪಟ್ಟವರು ಪರವಾನಗಿ ಪಡೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಸೆ. 25ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 21 (ಕರ್ನಾಟಕ ವಾರ್ತೆ):- ಸಂತೇಮರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಪ್ಟೆಂಬರ್ 25ರಂದು ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಹೊನ್ನೂರು, ಸಂತೇಮರಹಳ್ಳಿ, ನವಿಲೂರು, ಅಲ್ದೂರು, ಕುದೇರು, ಮಂಗಲ ವಾಟರ್ ಸಪ್ಲೈ, ಕೆಂಪನಪುರ, ಅಂಬಳೆ ಹಾಗೂ ಚಂಗಡಿಪುರ ಫೀಡರ್‍ಗಳಿಂದ ಸರಬರಾಜಾಗುವ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 24ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 21 (ಕರ್ನಾಟಕ ವಾರ್ತೆ):- ಚಾಮರಾಜನಗರ-ಹೊನ್ನಹಳ್ಳಿ ಮಾರ್ಗದ ವಿದ್ಯುತ್ ನಿರ್ವಹಣೆ ಕಾಮಗಾರಿಯನ್ನು ಸೆಪ್ಟೆಂಬರ್ 24ರಂದು ಹಮ್ಮಿಕೊಳ್ಳಲಾಗಿದೆ.
ಹೊನ್ನಹಳ್ಳಿ ವಿತರಣಾ ಕೇಂದ್ರದಿಂದ ಸರಬರಾಜಾಗುವ ಅರಕಲವಾಡಿ, ಯರಗನಹಳ್ಳಿ, ಸುವರ್ಣನಗರ, ಫ್ಯಾಕ್ಟರಿ, ಡೊಳ್ಳಿಪುರ, ಪುಣಜನೂರು, ಬಿಸಲವಾಡಿ, ಅಮಚವಾಡಿ, ಎನ್‍ಜೆವೈ ಮಾದಲವಾಡಿ, ಎನ್.ಜೆ.ವೈ ಚನ್ನಪ್ಪನಪುರ ಮತ್ತು ಅಟ್ಟುಗೂಳಿಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಸಿದ್ದಯ್ಯನಪುರ, ಹೊಂಗಲವಾಡಿ, ಕೋಳಿಪಾಳ್ಯ, ಬಂದಿಗೌಡನಹಳ್ಳಿ, ಅಟ್ಟುಗೂಳಿಪುರ, ಎನ್.ಜೆ.ವೈ ದೊಡ್ಡಮೋಳೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 24ರಂದು ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ಸೆ. 22 (ಕರ್ನಾಟಕ ವಾರ್ತೆ):- ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಸೆಪ್ಟೆಂಬರ್ 24ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಕ್ತ ವಿವಿ ಪರೀಕ್ಷೆ ಸೆ. 27ಕ್ಕೆ ನಿಗಧಿ
ಚಾಮರಾಜನಗರ, ಸೆ. 22 (ಕರ್ನಾಟಕ ವಾರ್ತೆ):- ಕಾವೇರಿ ಜಲವಿವಾದದ ಸಂಬಂಧ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಸೆಪ್ಟೆಂಬರ್ 14ರಂದು ಮುಂದೂಡಲಾಗಿದ್ದ ಬಿಎ, ಬಿಕಾಂ, ಎಂಎ, ಎಂಕಾಂ, ಎಂಸಿಜೆ ಪರೀಕ್ಷೆಯನ್ನು ಸೆಪ್ಟೆಂಬರ್ 27ರಂದು ನಡೆಸಲಿದೆ.
ಪರೀಕ್ಷೆಗಳ ಪರಿಷ್ಕøತ ವೇಳಾಪಟ್ಟಿಯನ್ನು ವಿವಿ ವೆಬ್‍ವÉೈಟ್‍ನಲ್ಲಿ ಪ್ರಕಟಿಸಲಾಗಿದೆ. ಮಾಹಿತಿಗೆ ಮೈಸೂರಿನ ಕೇಂದ್ರ ಕಚೇರಿಯ ದೂರವಾಣಿ ಸಂಖ್ಯೆ 0821-2519942, ಪ್ರಾದೇಶಿಕ ಕೇಂದ್ರ ದೂ.ಸಂಖ್ಯೆ 8494911240, 9448500718, 8722080011, 9740701186, 9731250740 ಸಂಪರ್ಕಿಸುವಂತೆ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಎಸ್. ಮಹದೇವ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ಸದಸ್ಯರ ಹುದ್ದೆಗೆ ನಿವೃತ್ತ ಅಧಿಕಾರಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 22 (ಕರ್ನಾಟಕ ವಾರ್ತೆ):- ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತಿ ಇರುವ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಅಧಿಕಾರಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಲು ಪೊಲೀಸ್ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರ ಹುದ್ದೆಗೆ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಅಧಿಕಾರಿಗಳು ಸ್ವವಿವರವುಳ್ಳ ಅರ್ಜಿಯನ್ನು ಸೆಪ್ಟೆಂಬರ್ 29ರೊಳಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲೂ ದಸರಾ ಮಹೋತ್ಸವ: ಡಿ.ಸಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆ
ಚಾಮರಾಜನಗರ, ಸೆ. 23 (ಕರ್ನಾಟಕ ವಾರ್ತೆ):- ಇತಿಹಾಸ, ಸಂಸ್ಕøತಿ, ಪರಂಪರೆಯನ್ನು ಬಿಂಬಿಸುವ ನಾಡಹಬ್ಬ ದಸರಾ ಮಹೋತ್ಸವವನ್ನು ಚಾಮರಾಜನಗರ ಜಿಲ್ಲಾಕೇಂದ್ರ ಹಾಗೂ ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಮಟ್ಟದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಿದ್ದು, ಈ ಸಂಬಂಧ ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಬಿ. ರಾಮು ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ದಸರಾ ಮಹೋತ್ಸವ ಆಚರಣೆ ಸಂಬಂಧ ಪೂರ್ವಭಾವಿ ಸಿದ್ಧತೆಗಳ ಕುರಿತು ಸಮಾಲೋಚಿಸಲಾಯಿತು.
ಜಿಲ್ಲಾಮಟ್ಟದಲ್ಲಿ ನಾಲ್ಕು ದಿನಗಳ ಕಾಲ ಹಾಗೂ ವಿಧಾನಸಭಾ ಕ್ಷೇತ್ರಮಟ್ಟದಲ್ಲಿ ಎರಡು ದಿನಗಳ ಕಾಲ ದಸರಾ ಆಚರಣೆ ಕೈಗೊಳ್ಳಲು ಚರ್ಚಿಸಲಾಯಿತು. ದಸರಾ ಮಹೋತ್ಸವವನ್ನು ಸುಗಮವಾಗಿ ನಿರ್ವಹಿಸುವ ಸಂಬಂಧ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಯಿತು. ದಸರಾ ಮಹೋತ್ಸವ ನಡೆಸುವ ದಿನಾಂಕಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.
ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರವಾರು ನಡೆಸಲಾಗುವ ದಸರಾ ಉತ್ಸವ ಸಂಬಂಧ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಆಯಾ ಭಾಗದ ಶಾಸಕರು, ಜನಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿದ್ದು, ಆಚರಣೆ ಸಂಬಂಧ ಚರ್ಚಿಸಿ ಕಾರ್ಯಕ್ರಮ ಆಯೋಜನೆ ಕುರಿತು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದರು.
ದಸರಾ ಕಾರ್ಯಕ್ರಮ ನಡೆಯುವ ಸ್ಥಳ, ವೇದಿಕೆ, ಸಾಂಸ್ಕøತಿಕ ಕಾರ್ಯಕ್ರಮಗಳ ಏರ್ಪಾಡು ಸೇರಿದಂತೆ ಎಲ್ಲ ಪೂರ್ವಸಿದ್ಧತೆಯನ್ನು ಎಲ್ಲರ ವಿಶ್ವಾಸ ಪಡೆದು ಯಶಸ್ವಿಯಾಗಿ ನೆರವೇರಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಕಾರ್ಯಕ್ರಮಗಳು ಅರ್ಥಪೂರ್ಣ ಮಾಹಿತಿ ನೀಡುವ ಜತೆಗೆ ಗುಣಮಟ್ಟದಿಂದಿರಬೇಕು. ಏಕತಾನತೆಗೆ ಅವಕಾಶ ನೀಡದೇ ವಿಭಿನ್ನವಾಗಿ ಮೂಡಿಬರಬೇಕು. ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಬೇಕು. ಕಾಲೇಜು ವಿದ್ಯಾರ್ಥಿಗಳಿಂದಲೂ ವೈವಿಧ್ಯಮಯ ಕಾರ್ಯಕ್ರಮ ನೀಡಲು ಪೂರ್ವಸಿದ್ಧತೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಡುವ ಯುವ ಸಾಂಸ್ಕøತಿಕ ಕಾರ್ಯಕ್ರಮಗಳ ಕುರಿತು ಪ್ರದರ್ಶಿಸುವ ಪರಿಕಲ್ಪನೆ ಬಗ್ಗೆ ಆಯಾ ಕಾಲೇಜು ಪ್ರಾಂಶುಪಾಲರು ಮೊದಲೆ ಮಾಹಿತಿ ನೀಡಬೇಕು. ಕಾರ್ಯಕ್ರಮ ಪ್ರದರ್ಶನ ಬಗ್ಗೆ ತಾಲೀಮು ಆರಂಭಿಸಬೇಕು ಎಂದರು.
ಯಾವುದೇ ಲೋಪಕ್ಕೆ ಅವಕಾಶವಾಗದಂತೆ ದಸರಾ ಮಹೋತ್ಸವ ಆಚರಣೆ ಮಾಡಬೇಕು. ಗೊಂದಲಕ್ಕೆ ಆಸ್ಪದ ನೀಡಬಾರದು. ಕಾರ್ಯಕ್ರಮ ಆಯೋಜನೆ ಸಂಬಂಧ ರೂಪುರೇಷೆಗಳನ್ನು ಸಿದ್ಧಪಡಿಸಿ ಎಲ್ಲರ ಸಹಕಾರದೊಂದಿಗೆ ನಾಡಹಬ್ಬ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಸರಸ್ವತಿ, ಡಿ.ವೈ.ಎಸ್.ಪಿ. ಗಂಗಾಧರಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ನಗರಸಭಾ ಆಯುಕ್ತಾರದ ರಾಜಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಕೆ.ಎಚ್. ಪ್ರಸಾದ್, ಆಹಾರ, ನಾಗರಿಕ ಹಾಗೂ ಗ್ರಾಹಕ ಸರಬರಾಜು ವ್ಯವಹಾರಗಳ ಇಲಾಖೆ ಉಪನಿರ್ದೇಶಕರಾದ ಆರ್. ರಾಚಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಸತೀಶ್ ಇನ್ನಿತರ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ಕಾಲೇಜು ಪ್ರಾಂಶುಪಾಲರು ಸಭೆಯಲ್ಲಿ ಹಾಜರಿದ್ದರು.
**********
ಸೆ. 26ರಂದು ಮುಖ್ಯಮಂತ್ರಿಯವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಸೆ. 24 (ಕರ್ನಾಟಕ ವಾರ್ತೆ):- ಮುಖ್ಯ ಮಂತ್ರಿಯವರಾದ ಸಿದ್ದರಾಮಯ್ಯ ಅವರು ಸೆಪ್ಟಂಬರ್ 26 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 11.40 ಗಂಟೆಗೆ ಮಹದೇಶ್ವರ ಬೆಟ್ಟಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸುವರು. ಮಧ್ಯಾಹ್ನ 12.00 ಗಂಟೆಗೆ ಮಲೈ ಮಹದೇಶ್ವರ ಸ್ವಾಮಿ ದರ್ಶನ ಹಾಗೂ ಪೂಜೆಗೆ ತೆರಳುವರು. 12.30 ಗಂಟೆಗೆ
ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಿರುವ ಒಳಚರಂಡಿ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3.30 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಪ್ರಕಟಣೆ ತಿಳಿಸಿದೆ.
ಸೆ. 26ರಂದು ಮುಖ್ಯಮಂತ್ರಿಯವರಿಂದ ಮಹದೇಶ್ವರಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ
ಚಾಮರಾಜನಗರ, ಸೆ. 25 (ಕರ್ನಾಟಕ ವಾರ್ತೆ):- ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೊಳ್ಳೇಗಾಲದ ಮಹದೇಶ್ವರಬೆಟ್ಟದಲ್ಲಿ ಕೈಗೊಳ್ಳಲಿರುವ ಒಳಚರಂಡಿ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮವು ಸೆಪ್ಟೆಂಬರ್ 26ರಂದು ಬೆಳಿಗ್ಗೆ 10.30 ಗಂಟೆಗೆ ಮಲೆ ಮಹದೇಶ್ವರ ಬೆಟ್ಟದ ಬಯಲು ರಂಗಮಂದಿರದ ಅವರಣದಲ್ಲಿ ನೆರವೇರಲಿದೆ.
ಮಹದೇಶ್ವರಬೆಟ್ಟದ ಸಾಲೂರು ಬೃಹನ್ಮಠಾಧ್ಯಕ್ಷರಾದ ಪ್ರಣವ ಶ್ರೀ ಪಟ್ಟದ ಗುರುಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು.
ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸುವರು. ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಜ್ಯೋತಿ ಬೆಳಗಿಸುವರು. ಶಾಸಕರಾದ ನರೇಂದ್ರ ಅವರು ಅಧ್ಯಕ್ಷತೆ ವಹಿಸುವರು.
ಲೋಕೋಪಯೋಗಿ, ಬಂದರು, ಒಳನಾಡು ಮತ್ತು ಜಲಸಾರಿಗೆ ಸಚಿವರಾದ ಡಾ. ಹೆಚ್.ಸಿ. ವiಹದೇವಪ್ಪ, ನಗರಾಭಿವೃದ್ಧಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವರಾದ ರೋಷನ್ ಬೇಗ್, ಜವಳಿ ಮತ್ತು ಮುಜರಾಯಿ ರಾಜ್ಯ ಸಚಿವರಾದ ರುದ್ರಪ್ಪ ಮಾನಪ್ಪ ಲಮಾಣಿ, ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಶಾಸಕರಾದ ಎಸ್.ಜಯಣ್ಣ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಕೊಳ್ಳೇಗಾಲ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಸ್. ರಾಜು, ಉಪಾಧ್ಯಕ್ಷರಾದ ಲತಾ ರಾಜಣ್ಣ, ಜಿಲ್ಲಾ ಪಂಚಾಯತ್ ಸದಸ್ಯರಾದ ಇರ್ಷಾದ್ ಭಾನು, ತಾಲೂಕು ಪಂಚಾಯತ್ ಸದಸ್ಯರಾದ ಹಲಗತಂಬಡಿ, ಮಹದೇಶ್ವರ ಬೆಟ್ಟದ ಗ್ರಾಮಪಂಚಾಯತ್ ಅಧ್ಯಕ್ಷರಾದ ರುಕ್ಮಿಣಿ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಸೆ. 26ರಂದು ಕೆ.ವಿ.ಕೆಯಲ್ಲಿ ಬಾನುಲಿ ಸರಣಿ ಮತ್ತು ಸಂವಾದ ಕಾರ್ಯಕ್ರಮ
ಚಾಮರಾಜನಗರ, ಸೆ. 25 (ಕರ್ನಾಟಕ ವಾರ್ತೆ):- ತೋಟಗಾರಿಕಾ ಮಹಾವಿದ್ಯಾಲಯ ಮೈಸೂರು, ತೋಟಗಾರಿಕಾ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಆಕಾಶವಾಣಿ ಮೈಸೂರು ಇವರ ಸಹಯೋಗದಲ್ಲಿ ತೋಟಗಾರಿಕಾ ಬೆಳೆಗಳ ಸಮಗ್ರ ಉತ್ಪಾದನಾ ತಂತ್ರಜ್ಞಾನಗಳ ಬಗ್ಗೆ ಬಾನುಲಿ ಸರಣಿ ಮತ್ತು ಸಂವಾದ ಕುರಿತ ಫಲ-ಸಿರಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 26ರಂದು ಬೆಳಿಗ್ಗೆ 11 ಗಂಟೆಗೆ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಕೆ.ಎಂ. ಇಂದಿರೇಶ್ ಅಧ್ಯಕ್ಷತೆ ವಹಿಸುವರು.
ಮೈಸೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕರಾದ ಎಚ್. ಶ್ರೀನಿವಾಸ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸುವರು. ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರಾದ ಡಾ. ದೊರೆಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕ ಹಾಗೂ ಕೃಷಿ ವಿಜ್ಞಾನ ಕೇಂದ್ರದ ತಜ್ಞರುಗಳಿಂದ ತಾಂತ್ರಿಕ ಅಧಿವೇಶನ ಮತ್ತು ಪ್ರಾತ್ಯೆಕ್ಷಿಕೆಗಳನ್ನು ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿದೆ.
ಸೆ. 26ರಂದು ಶ್ರೀ ಮಲೆ ಮಹದೇಶ್ವರ ಬೆಟದಲ್ಲಿ ನೆರವೇರಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ ವಿವರ
ಚಾಮರಾಜನಗರ, ಸೆ. 25 (ಕರ್ನಾಟಕ ವಾರ್ತೆ):- ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿಯವರಿಂದ ನೆರವೇರಲಿರುವ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾಮಗಾರಿಗಳ ವಿವರ ಇಂತಿದೆ.
2710 ಲಕ್ಷ ರೂ. ವೆಚ್ಚದಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರದ ಸಮಗ್ರ ಒಳಚರಂಡಿ ಯೋಜನೆ ಕಾಮಗಾರಿ, 427.60 ಲಕ್ಷ ರೂ. ವೆಚ್ಚದಲ್ಲಿ ಅಂತರಗಂಗೆಯಲ್ಲಿ ಕಲ್ಯಾಣಿ ನಿರ್ಮಿಸಿ ಅಬಿವೃದ್ಧಿಪಡಿಸುವ ಕಾಮಗಾರಿ, 476 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನದ ಮುಂಭಾಗದಲ್ಲಿರುವ ಬಯಲು ರಂಗಮಮದಿರ ಅವರಣದಲ್ಲಿ ಭಕ್ತಾಧಿಗಳು ತಂಗಲು ಶೆಡ್ ನಿಮಾಣ ಕಾಮಗಾರಿ, 486 ಲಕ್ಷ ರೂ. ವೆಚ್ಚದಲ್ಲಿ 12 ಕೊಠಡಿಗಳ ಡಾಮೇಟರಿ ನಿರ್ಮಣ ಕಾಮಗಾರಿ, 330 ಲಕ್ಷ ರೂ. ವೆಚ್ಚದ ಪ್ರಾಧಿಕಾರದ ನೌಕರರಿಗೆ ಪಾಸ್ಟ್‍ಟ್ರಾಕ್ ವಸತಿಗೃಹಗಳ ನಿರ್ಮಾಣ, 100 ಲಕ್ಷ ರೂ. ವೆಚ್ಚದಲ್ಲಿ ಶ್ರೀಕ್ಷೇತ್ರದ ಬಸ್ ನಿಲ್ದಾಣ ಅವರಣದಲ್ಲಿ 72 ಸಂಖ್ಯೆಯ ಅಂಗಡಿ ಮಳಿಗೆಗಳ ನಿರ್ಮಾಣ ಮತ್ತು ಶ್ರೀಕ್ಷೇತ್ರದ ಅವರಣದಲ್ಲಿ ಒಂದು ಆಧುನಿಕ ಸುಸಜ್ಜಿತ ಉಪಹಾರ ಮಂದಿರ ನಿರ್ಮಾಣ ಕಾಮಗಾರಿಗಳಿಗೆ ಶಿಲಾನ್ಯಾಸ ನೇರವೇರಿಸುವರು.
56 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಶೂನ್ಯ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ 51 ಲಕ್ಷ ರೂ. ವೆಚ್ಚದಲ್ಲಿ ವಸತಿಗೃಹಗಳ ಬಟ್ಟೆಗಳನ್ನು ಯಂತ್ರಗಳಿಂದ ಶುಚಿಗೊಳಿಸುವ ಘಟಕಗಳನ್ನು ಮುಖ್ಯಮಂತ್ರಿಯವರು ಉದ್ಘಾಟಿಸಲಿದ್ದಾರೆ.
ಶ್ರೀಕ್ಷೇತ್ರದ ದೀಪಗಿರಿ ವಡ್ಡುವಿನಲ್ಲಿ 100 ಅಡಿ ಎತ್ತರದ ಮಹದೇಶ್ವರರ ವಿಗ್ರಹವನ್ನು ನಿರ್ಮಿಸುವ ಘೋಷಣೆಯನ್ನು ಸಹ ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸೆ. 28ರಂದು ಜಿಲಾಡಳಿತದಿಂದ ಶ್ರೀಕೃಷ್ಣ ಜಯಂತಿ
ಚಾಮರಾಜನಗರ, ಸೆ. 26 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆವತಿಯಿಂದ ಸೆಪ್ಟೆಂಬರ್ 28ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಉದ್ಘಾಟನೆ ನೆರವೇರಿಸುವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್.ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕೆ.ಟಿ. ಶ್ರೀಕಂಠೇಗೌಡ, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪಿ. ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಅಮಚವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಸುರೇಶ್ ಎನ್, ಋಗ್ವೇದಿ ಅವರು ಕಾರ್ಯಕ್ರಮದ ಪ್ರಧಾನ ಭಾಷಣ ಮಾಡುವರು ಕಾರ್ಯಕ್ರಮದ ನಂತರ ನಗರದ ಕು. ಅಕ್ಷತಾ ಎಸ್, ಜೈನ್ ಮತ್ತು ತಂಡದವರಿಂದ ಶ್ರೀಕೃಷ್ಣ ನೃತ್ಯರೂಪಕವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸೆ. 27ರಂದು ಬೇಗೂರಿನಲ್ಲಿ ಅಂಚೆ ಸಂತೆ
ಚಾಮರಾಜನಗರ, ಸೆ. 26 (ಕರ್ನಾಟಕ ವಾರ್ತೆ):- ಅಂಚೆ ಇಲಾಖೆವತಿಯಿಂದ ಸೆಪ್ಟೆಂಬರ್ 27ರಂದು ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಏರ್ಪಡಿಸಲಾಗಿದೆ.
ಅಂಚೆಸಂತೆ ಕಾರ್ಯಕ್ರಮದಲ್ಲಿ ಅಂಚೆ ಉಳಿತಾಯ ಯೋಜನೆ, ಅವರ್ತಕ ಖಾತೆ, ಸುಕನ್ಯಾ ಸಮೃದ್ಧಿ, ಸಾರ್ವಜನಿಕ ಭವಿಷ್ಯ ನಿಧಿ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮಾ ಮತ್ತು ಜೀವ ವಿಮೆ ಯೋಜನೆಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಪರಿಶೀಲಿಸಿ ಸ್ಥಳದಲ್ಲೆ ಸ್ವೀಕರಿಸಲಾಗುವುದು.
ಸುತ್ತಮುತ್ತಲ ಗಾಮೀಣ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಂಚೆ ಇಲಾಖೆ ನಂಜನಗೂಡು ವಿಭಾಗದ ಅಧೀಕ್ಷಕರಾದ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 28ರಂದು ಅಮಚವಾಡಿಯಲ್ಲಿ ಅಂಚೆ ಸಂತೆ
ಚಾಮರಾಜನಗರ, ಸೆ. 26 (ಕರ್ನಾಟಕ ವಾರ್ತೆ):- ಅಂಚೆ ಇಲಾಖೆವತಿಯಿಂದ ಸೆಪ್ಟೆಂಬರ್ 28ರಂದು ಚಾಮರಾಜನಗರ ತಾಲೂಕಿನ ಅಮಚವಾಡಿಯಲ್ಲಿ ಏರ್ಪಡಿಸಲಾಗಿದೆ.
ಅಂಚೆಸಂತೆ ಕಾರ್ಯಕ್ರಮದಲ್ಲಿ ಅಂಚೆ ಉಳಿತಾಯ ಯೋಜನೆ, ಅವರ್ತಕ ಖಾತೆ, ಸುಕನ್ಯಾ ಸಮೃದ್ಧಿ, ಸಾರ್ವಜನಿಕ ಭವಿಷ್ಯ ನಿಧಿ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮಾ ಮತ್ತು ಜೀವ ವಿಮೆ ಯೋಜನೆಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಪರಿಶೀಲಿಸಿ ಸ್ಥಳದಲ್ಲೆ ಸ್ವೀಕರಿಸಲಾಗುವುದು.
ಸುತ್ತಮುತ್ತಲ ಗಾಮೀಣ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಂಚೆ ಇಲಾಖೆ ನಂಜನಗೂಡು ವಿಭಾಗದ ಅಧೀಕ್ಷಕರಾದ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ, ಸಂಘಸಂಸ್ಥೆ ಹಾಗೂ ಶಿಕ್ಷಕರಿಂದ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 26 (ಕರ್ನಾಟಕ ವಾರ್ತೆ):- ಪ್ರಸಕ್ತ ಸಾಲಿನ ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ವಿಕಲಚೇತನರ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ವಿಶೇಷ ಶಾಲೆಗಳಲ್ಲಿ 15 ವರ್ಷಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿಕಲಚೇತನರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಲ್ಲಿಸಿರುವ ಅಸಕ್ತ ವ್ಯಕ್ತಿ, ಸಂಸ್ಥೆ ಹಾಗೂ ಶಿಕ್ಷಕರು ಅರ್ಜಿ ನಮೂನೆಯನ್ನು ಇಲಾಖೆಯ ವೆಬ್‍ಸೈಟ್ hಣಣಠಿ//ತಿತಿತಿ.ತಿeಟಜಿಚಿಡಿeoಜಿಜisಚಿbಟeಜ.ಞಚಿಡಿ.ಟಿiಛಿ.iಟಿ ನಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ: 25, ಅಕ್ಟೋಬರ್ 14ರೊಳಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾನಿ ಸಂಖ್ಯೆ: 08226-223688ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಸೆ. 28ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 26 (ಕರ್ನಾಟಕ ವಾರ್ತೆ):- ದೊಡ್ಡರಾಯಪೇಟೆ ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಸೆಪ್ಟೆಂಬರ್ 28ರಂದು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಚಾಮರಾಜನಗರ ಟೌನ್-1, ರಾಮಸಮುದ್ರ, ಸೋಮವಾರಪೇಟೆ ಟೌನ್-2, ಬೇಡರಪುರ, ಮಂಗಲ, ಶಿವಪುರ, ಕೋಡಿಮೋಳೆ, ಕಾಗಲವಾಡಿ, ಹರದನಹಳ್ಳಿ, ಟಿ.ಕೆ. ಮೋಳೆ, ಗೂಳೀಪುರ, ಎನ್.ಜೆ.ವೈ. ಮಾದಾಪುರ ಮಾರ್ಗಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಚ್ಚ ಭಾರತ್ ಅಭಿಯಾನ: ವಿಶೇಷ ಸ್ವಚ್ಚತಾ ಸಪ್ತಾಹ
ಚಾಮರಾಜನಗರ, ಸೆ. 26 (ಕರ್ನಾಟಕ ವಾರ್ತೆ):- ಸ್ವಚ್ಛ ಭಾರತ್ ಮಿಷನ್ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲಾ ಪಂಚಾಯತಿವತಿಯಿಂದ ಜಿಲ್ಲೆಯಾದ್ಯಂತ ಸೆ. 26ರಿಂದ ಒಂದು ವಾರಗಳ ಕಾಲ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಏರ್ಪಡಿಸಿರುವ ವಿಶೇಷ ಸ್ವಚ್ಛತಾ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸೆ.27ರಂದು ಶೌಚಾಲಯ ನಿರ್ಮಿಸಲು ಈಗಾಗಲೇ ಕಾರ್ಯಾದೇಶ ವಿತರಿಸಿರುವ ಫಲಾನುಭವಿಗಳಿಗೆ ಗುಂಡಿ ತೆಗೆಯುವಂತೆ ಉತ್ತೇಜಿಸಲು ಕಾರ್ಯಕ್ರಮ ಆಯೋಜಿಸುವುದು. ಸೆ.28ರಂದು ಶಾಲಾ ಮತ್ತು ಅಂಗನವಾಡಿ ಕೇಂದ್ರದ ಆವರಣ ಮತ್ತು ಆಟದ ಮೈದಾನಗಳನ್ನು ಸ್ವಚ್ಛಗೊಳಿಸುವುದು.
ಸೆ.29ರಂದು ಗ್ರಾಮದಲ್ಲಿರುವ ನೀರಿನ ಟ್ಯಾಂಕ್, ತೊಂಬೆಗಳನ್ನು ಸ್ವಚ್ಛಗೊಳಿಸುವುದು. ನೀರಿನ ಸೋರಿಕೆಯನ್ನು ತಡೆಗಟ್ಟುವುದು. ವೈಯಕ್ತಿಕ, ಕುಟುಂಬ ಹಾಗೂ ಗ್ರಾಮದ ಸ್ವಚ್ಛತೆ ಕುರಿತು ಅರಿವು ಮೂಡಿಸುವುದು.
ಸೆ.30ರಂದು ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ತಿಳಿವಳಿಕೆ ಮೂಡಿಸುವುದು. ಗ್ರಾಮದ ಸುತ್ತಮುತ್ತ ಬಿದ್ದಿರುವ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಪರಿಸರ ಸ್ವಚ್ಛಗೊಳಿಸುವುದು.
ಆ.1ರಂದು ಸ್ಥಳೀಯ ಮಹಿಳಾ ಸ್ವಸಹಾಯ ಸಂಘ ಹಾಗೂ ಇತರೆ ಸಂಘ-ಸಂಸ್ಥೆಗಳ ಸಭೆ ಕರೆದು ಗ್ರಾಮ/ ಗ್ರಾಮ ಪಂಚಾಯಿತಿಯನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸಲು ಕ್ರಿಯಾ ಯೋಜನೆ ರೂಪಿಸುವುದು. ಆ. 2ರಂದು ವಿಶೇಷ ಗ್ರಾಮ ಸಭೆ ನಡೆಸುವುದು. ಗ್ರಾಮದಲ್ಲಿ ಸಾಮೂಹಿಕ ಶ್ರಮದಾನ ಮಾಡುವುದು.
ವಿಶೇಷ ಸ್ವಚ್ಛತಾ ಸಪ್ತಾಹದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು, ಸಂಘ-ಸಂಸ್ಥೆಯ ಸದಸ್ಯರು, ಸ್ಥಳೀಯ ಮುಖಂಡರು, ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿ ಸಪ್ತಾಹವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಅವರು ಮನವಿ ಮಾಡಿದ್ದಾರೆ
ಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳಿಗೆ ಮೂಲ ಸೌಕರ್ಯ: ಸಿ.ಎಂ.
ಚಾಮರಾಜನಗರ ಸೆ.26 (ಕರ್ನಾಟಕ ವಾರ್ತೆ) ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾದಿಕಾರ ರಚನೆಯಾದ ಬಳಿಕ ಮಹದೇಶ್ವರ ಬೆಟ್ಟದಲ್ಲಿ ಭಕ್ತಾಧಿಗಳ ಸೌಕರ್ಯಕ್ಕೆ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯರವರು ತಿಳಿಸಿದರು.
ಕೊಳ್ಳೇಗಾಲ ತಾಲ್ಲೂಕಿನ ಮಹದೇಶ್ವರ ಬೆಟ್ಟದ ಬಯಲು ರಂಗ ಮಂದಿರ ಆವರಣದಲ್ಲಿ ಇಂದು ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾದಿಕಾರದವತಿಯಿಂದ ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಪುಣ್ಯ ಯಾತ್ರ ಕ್ಷೇತ್ರಗಳನ್ನು ಅಭಿವೃದ್ದಿ ಪಡಿಸುವ ಕಾರ್ಯವನ್ನು ಮಾಡುತ್ತಿದೆ. ಮಹದೇಶ್ವರ ಬೆಟ್ಟಕ್ಕೆ ತನ್ನದೆ ಆದ ಇತಿಹಾಸವಿದೆ. ವರ್ಷದಲ್ಲಿ ಅಂದಾಜು 20 ಲಕ್ಷ ಭಕ್ತಾದಿಗಳು ಭೀಟಿ ನೀಡುತ್ತಿದ್ದಾರೆ. ಯಾತ್ರಾರ್ಥಿಗಳಿಗೆ ಕುಡಿಯುವ ನೀರು, ಸ್ನಾನದ ವ್ಯವಸ್ಥೆ ಸೇರಿದಂತೆ ಇನ್ನು ಅಗತ್ಯ ಸೌಲಭ್ಯ ಒದಗಿಸಿದರೆ ಮತ್ತಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಬರಲಿದ್ದಾರೆ. ಹೀಗಾಗಿ ಅಗತ್ಯ ಸೌಕರ್ಯಗಳನ್ನು ಒದಗಿಸಿವಲ್ಲಿ ಪ್ರಾಧಿಕಾರ ಮುಂದಾಗಿದೆ ಎಂದರು.
ಈ ಹಿಂದೆ ಕ್ಷೇತ್ರದ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 37 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಇಂದು ಒಳಚರಂಡಿ ಅಂತರಗಂಗೆ ಕಲ್ಯಾಣಿ ಅಭಿವೃದ್ದಿ, ತಂಗಲು ಶೆಡ್ ನಿರ್ಮಾಣ, ಡಾರ್‍ಮೆಟರಿ, ಸುಸಜ್ಜಿತ ಉಪಹಾರ ಮಂದಿರ, ನೌಕರರಿಗೆ ವಸತಿ ಗೃಹ, ಅಂಗಡಿ ಮಳಿಗೆಗಳ ನಿರ್ಮಾಣ ಸೇರಿದಂತೆ ಒಟ್ಟು 47 ಕೋಟಿ ರೂ ವೆಚ್ಚದ ಕಾಮಗಾರಿಗೆ ಚಾಲನೆ ಕೊಡಲಾಗಿದೆ. ಅಲ್ಲದೆ ಶ್ಯೂನ್ಯ ಘನತಾಜ್ಯ ವಿಲೇವಾರಿ ಘಟಕ, ವಸತಿ ಗೃಹಗಳ ಬಟ್ಟೆಗಳನ್ನು ಯಂತ್ರಗಳಿಂದ ಶುಚಿಗೊಳಿಸುವ ಘಟಕವನ್ನು ಉದ್ಘಾಟಿಸಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.
ಕ್ಷೇತ್ರದಲ್ಲಿ ಕೈಗೊಳ್ಳುವ ಒಳಚರಂಡಿ ಕಾಮಗಾರಿಗೆ ಮತ್ತಷ್ಟು ಹಣಕಾಸು ನೆರವು ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಹದೇವ ಪ್ರಸಾದ್ ಹಾಗೂ ಶಾಸಕರಾದ ನರೇಂದ್ರ ಮನವಿ ಮಾಡಿದ್ದಾರೆ. ಒಳಚರಂಡಿಗೆ ಸರ್ಕಾರದ ವತಿಯಿಂದಲೂ ಅವಶ್ಯ ನೆರವು ನೀಡುವುದಾಗಿ ಮುಖ್ಯಮಂತ್ರಿಯವರು ತಿಳಿಸಿದರು.
ಸಹಕಾರ ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್.ಮಹದೇವ ಪ್ರಸಾದ್ ಮಾತನಾಡಿ ಮಹದೇಶ್ವರ ದೇವಾಲಯದ ಆದಾಯವು 42 ಕೋಟಿ ರೂ ಗಳಿಂದ 52 ಕೋಟಿಗೆ ಹೆಚ್ಚಳವಾಗಿದೆ. ಈ ವರ್ಷ ದೇವಾಲಯದ ಆದಾಯ 60 ಕೋಟಿ ರೂ ದಾಟುವ ನಿರೀಕ್ಷೆ ಇದೆ. ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯ ಕೈಗೊಂಡಿದ್ದು ಇಲ್ಲಿನ ಬದಲಾವಣೆಯನ್ನು ಭಕ್ತಾಧಿಗಳು ಗಮನಿಸಿದ್ದಾರೆ ಎಂದರು.
ಕ್ಷೇತ್ರದಲ್ಲಿ ಸುರಕ್ಷತೆಗಾಗಿ 13 ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ರಸ್ತೆ ಡಾಂಬರೀಕರಣ ಮಾಡಲಾಗಿದೆ. ಒಟ್ಟು 43 ಎಕರೆ ಪ್ರದೇಶದಲ್ಲಿ 21 ಕೋಟಿ ರೂ ವೆಚ್ಚದಲ್ಲಿ ಮಹದೇಶ್ವರರ 100 ಅಡಿ ಎತ್ತರದ ಪ್ರತಿಮೆ ನಿರ್ಮಾಣ, ಹಸಿರು ವನ, ಬಿಲ್ವವನ, ಧ್ಯಾನಮಂದಿರ, ವಸ್ತು ಸಂಗ್ರಹಾಲಯ, ಮಕ್ಕಳ ಆಟದ ಉದ್ಯಾನವನ ಸೇರಿದಂತೆ ಇತರೆ ಕೆಲಸಗಳನ್ನು ನಿರ್ವಹಿಸಲಾಗುತ್ತದೆ ಎಂದು ಸಚಿವರಾದ ಮಹದೇವ ಪ್ರಸಾದ್ ತಿಳಿಸಿದರು.
ಮುಜರಾಯಿ ಸಚಿವರಾದ ರುದ್ರಪ್ಪ ಮಾನಪ್ಪ ¯ಮಾಣಿ ಮಾತನಾಡಿ ರಾಜ್ಯದಲ್ಲಿಯೇ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ಮಾದರಿಯಾಗಿದೆ. ಭಕ್ತಾದಿಗಳಿಗೆ ಹೆಚ್ಚು ಮೂಲ ಸೌಕರ್ಯ ಕಲ್ಪಿಸುವ ಮೂಲಕ ಗಮನಾರ್ಹವಾಗಿ ಮಾರ್ಪಡಾಗಲಿದೆ ಎಂದರು.
ಲೋಕೊಪಯೋಗಿ ಸಚಿವರಾದ ಡಾ|| ಎಚ್.ಸಿ,ಮಹದೇವಪ್ಪ ಮಾತನಾಡಿ ಜಿಲ್ಲೆಯಲ್ಲಿ 800 ಕೋಟಿ ರೂ ವೆಚ್ಚದಲ್ಲಿ ರಸ್ತೆ, ಸೇತುವೆ ಹಾಗೂ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಜಿಲ್ಲೆಯ ಪ್ರವಾಸೋದ್ಯಮ, ವ್ಯಾಪಾರ ವಹಿವಾಟು ಅನುಕೂಲಕ್ಕಾಗಿ ರಸ್ತೆ ಅಭಿವೃದ್ದಿ ಪಡಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಲೋಕಸಭಾ ಸದಸ್ಯರಾದ ಆರ್.ದ್ರುವನಾರಾಯಣ ಮಾತಾನಾಡಿ ಮಹದೇಶ್ವರ ಬೆಟ್ಟದಲ್ಲಿ ಈ ಹಿಂದೆ ಮೂಲ ಸೌಕರ್ಯಗಳ ಕೊರತೆ ಇತ್ತು. ಆದರೆ ಇತ್ತಿಚಗೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಕಾಳಜಿಯಿಂದ ಮೂಲ ಸೌಲಭ್ಯಗಳ ಕೊರತೆ ನೀಗಿದೆ. ರಾಜ್ಯದಲ್ಲಿಯೆ ಅತೀ ಹೆಚ್ಚು ಆದಾಯ ಹೊಂದಿರುವ 2ನೇ ದೇವಾಲಯವೆಂಬ ಹೆಗ್ಗಳಿಕೆಗೆ ಮಹದೇಶ್ವರ ದೇವಾಲಯ ಪಾತ್ರವಾಗಿದೆ ಎಂದರು.
ಶಾಸಕರಾದ ಆರ್.ನರೇಂದ್ರ ಮಾತಾನಾಡಿ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಇರುವ ಬೇಡಗಂಪಣ ಸಮುದಾಯವನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ತರುವ ಕೆಲಸ ಮಾಡಬೇಕಿದೆ. ಹನೂರು ಭಾಗದ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ 350 ಕೋಟಿ ವೆಚ್ಚದ ಬಹು ಗ್ರಾಮ ಕುಡಿಯುವ ನೀರು ಯೋಜನೆಗೆ ವಿಸ್ತøತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗಿದೆ. ರಾಮನಗುಡ್ಡ, ಹುಣಸೆಹುಬ್ಬೆ, ಗುಂಡಾಲ್ ಜಲಾಶಯದಿಂದ ಕುಡಿಯುವ ನೀರು ಉದ್ದೇಶಕ್ಕಾಗಿ ಅಭಿವೃದ್ದಿ ಕೆಲಸಗಳನ್ನು ಶೀಘ್ರವಾಗಿ ಕೈಗೊಳ್ಳಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಮುಖ್ಯಮಂತ್ರಿಯವರು ಬೇಡಗಂಪಣ ಸಮುದಾಯದ ಜನರಿಗೆ ಮನೆ ನಿರ್ಮಿಸಿಕೊಳ್ಳಲು ಮಂಜೂರಾತಿ ಹಕ್ಕು ಪತ್ರಗಳನ್ನು ವಿತರಿಸಿದರು. ಕ್ಷೇತ್ರದ ದೀಪಗಿರಿ ವಡ್ಡುವಿನಲ್ಲಿ 100 ಅಡಿ ಎತ್ತರದ ಮಹದೇಶ್ವರ ಪ್ರತಿಮೆ ನಿಮಾರ್ಣ ಮಾಡುವ ಕುರಿತು ಘೋಷಣೆ ಮಾಡಿದರು.
ವಿಧಾನ ಪರಿಷತ್ ಉಪಸಭಾಪತಿವರಾದ ಮರಿತಿಬ್ಬೇಗೌಡ, ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ಶಾಸಕರಾದ ಎಸ್.ಜಯಣ್ಣ, ಆರ್.ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಸ್.ರಾಜು, ಉಪಾಧ್ಯಕ್ಷರಾದ ಲತಾ ರಾಜಣ್ಣ, ಸದಸ್ಯರಾದ ಹಲಗ ತಂಬಡಿ, ಜಿ.ಪಂ. ಸದಸ್ಯರಾದ ಇರ್ಷಾದ್ ಭಾನು, ಗ್ರಾ.ಪಂ ಅಧ್ಯಕ್ಷರಾದ ರುಕ್ಮಿಣಿ, ಪ್ರಾದೇಶಿಕ ಆಯುಕ್ತರಾದ ಕುಂಜಪ್ಪ, ಜಿಲ್ಲಾಧಿಕಾರಿ ಬಿ.ರಾಮು, ಜಿ.ಪಂ. ಸಿಇಒ ಹೆಪ್ಸಿಬಾ ರಾಣಿ ಕೊರ್ಲಾ ಪಾಟಿ, ಪ್ರಾಧಿಕಾರದ ಕಾರ್ಯದರ್ಶಿ ಡಿ.ಭಾರತಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
No comments:
Post a Comment