ಭರದಿಂದ ಸಾಗಿರುವ ಇತಿಹಾಸ ಪ್ರಸಿದ್ದ ಬಿಳಿಗಿರಿರಂಗನಾಥಸ್ವಾಮಿ, ಚಾಮರಾಜೇಶ್ವರಸ್ವಾಮಿ ರಥ
ನಿರ್ಮಾಣ ಕಾರ್ಯ
ಚಾಮರಾಜನಗರ, ಸೆಪ್ಟೆಂಬರ್ 8 (ಕರ್ನಾಟಕ ವಾರ್ತೆ):- ಇತಿಹಾಸ ಪ್ರಸಿದ್ದ ಬಿಳಿಗಿರಿರಂಗನಬೆಟ್ಟದ ಬಿಳಿರಂಗನಾಥಸ್ವಾಮಿ ಬ್ರಹ್ಮರಥ ಹಾಗೂ ಚಾಮರಾಜನಗರ ಪಟ್ಟಣದ ಚಾಮರಾಜೇಶ್ವರಸ್ವಾಮಿ ಬ್ರಹ್ಮರಥದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಭಕ್ತರ ಆಶಯದಂತೆ ರಥೋತ್ಸವದ ವೇಳೆಗೆ ಈ ಎರಡೂ ರಥಗಳು ಸಿದ್ದಗೊಳ್ಳುವ ನಿರೀಕ್ಷೆಯಿದೆ.
ರಥ ಶಿಥಿಲಗೊಂಡ ಹಿನ್ನಲೆಯಲ್ಲಿ ಹಾಗೂ ಬಿಳಿರಂಗನಾಥಸ್ವಾಮಿ ದೇವಾಲಯ ಜೀರ್ಣೋದ್ದಾರ ಕಾರಣದಿಂದ ಕಳೆದ 4 ವರ್ಷಗಳಿಂದ ಏಪ್ರಿಲ್ ಇಲ್ಲವೇ ಮೇ ತಿಂಗಳಿನಲ್ಲಿ ನಡೆಯುತ್ತಿದ್ದ ಬಿಳಿಗಿರಿರಂಗನನಾಥಸ್ವಾಮಿ ಬ್ರಹ್ಮ ರಥೋತ್ಸವ ಸ್ಥಗಿತಗೊಂಡಿತ್ತು. ಚಾಮರಾಜೇಶ್ವರ ಸ್ವಾಮಿ ಬ್ರಹ್ಮರಥಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ರಥ ಸುಟ್ಟುಹೋಗಿ ಕಳೆದ 4 ವರ್ಷಗಳಿಂದ ಆಷಾಢ ಮಾಸದಲ್ಲಿ ನಡೆಯುತ್ತಿದ್ದ ಬ್ರಹ್ಮರಥೋತ್ಸವ ನಿಂತು ಹೋಗಿತ್ತು. ಇದರಿಂದ ಭಕ್ತಾಧಿಗಳಿಗೆ ಬಾರಿ ನಿರಾಶೆಯಾಗಿತ್ತು.
ರಥ ನಿರ್ಮಾಣ ಕೆಲಸವನ್ನು ಬೇಗ ಕೈಗೊಳ್ಳುವಂತೆ ಸಾಕಷ್ಟು ಒತ್ತಾಯವು ಭಕ್ತರಿಂದ, ಸಾರ್ವಜನಿಕರಿಂದ ಕೇಳಿಬಂದಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಚಾಮರಾಜೇಶ್ವರ ಬ್ರಹ್ಮರಥ ನಿರ್ಮಾಣಕ್ಕೆ ಮುಂದಾಗಿ ಲೋಕೋಪಯೋಗಿ ಇಲಾಖೆಗೆ ನಿರ್ಮಾಣ ಕಾಮಗಾರಿ ಹೊಣೆಯನ್ನು ವಹಿಸಿದೆ.
ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥವನ್ನು 96 ಲಕ್ಷ ರೂ ವೆಚ್ಚದಲ್ಲಿ ಹಾಗೂ ಚಾಮರಾಜೇಶ್ವರ ಬ್ರಹ್ಮರಥವನ್ನು 99 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಟೆಂಡರ್ ಕರೆದು ಬೆಂಗಳೂರಿನ ರಥಶಿಲ್ಪಿ ಬಿ.ಎಸ್ ಬಡಿಗೇರ ಮತ್ತು ಸನ್ಸ್ ರವರಿಗೆ ಬ್ರಹ್ಮರಥ ನಿರ್ಮಾಣ ಕಾಮಗಾರಿಯನ್ನು ನಿರ್ಮಿಸಲು ಕಾರ್ಯಾದೇಶ ನೀಡಲಾಗಿದೆ.
ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥಕ್ಕಾಗಿ ಬೇಕಾಗುವ 706.65 ಘನ ಅಡಿ ಬಿ ದರ್ಜೆಯ ಟೀಕ್ ಮರ ಹಾಗೂ ಚಾಮರಾಜೇಶ್ವರ ಬ್ರಹ್ಮ ರಥಕ್ಕಾಗಿ ಅಗತ್ಯವಿರುವ 691.91 ಘನ ಅಡಿ ಬಿ ದರ್ಜೆಯ ಟೀಕ್ ಮರವನ್ನು ಕಾರವಾರ ಜಿಲ್ಲೆಯ ಕಿರವತ್ತು ಸರ್ಕಾರಿ ಮರಮುಟ್ಟು ಸಂಗ್ರಹಾಲಯದಿಂದ ಖರೀದಿಸಲಾಗಿದೆ. ಖರೀದಿಸಿದ ಈ ಮರವನ್ನು ಸುಮಾರು ಎರಡೂವರೆ ತಿಂಗಳ ಕಾಲ ಕತ್ತರಿಸಿ ಒಣಗಿಸಲು ಇಡಲಾಗಿತ್ತು. ಕತ್ತರಿಸಿ ಒಣಗಿಸಿದ ಬಳಿಕ ರಥದ ನಿರ್ಮಾಣ ಕಾಮಗಾರಿ ನಿರ್ವಹಿಸಲಿರುವ ಬಿ.ಎಸ್.ಬಡಿಗೇರ ಅವರ ಬೆಂಗಳೂರಿನಲ್ಲಿರುವ ವರ್ಕ್‍ಶಾಪ್‍ಗೆ ಸಾಗಿಸಲಾಗಿದ್ದು ಅಲ್ಲಿಯೇ ರಥದ ನಿರ್ಮಾಣ ಕೆಲಸ ಭರದಿಂದ ನಡೆದಿದೆ.
ಪ್ರಧಾನ ಶಿಲ್ಪಿ ಬಿ.ಎಸ್.ಬಡಿಗೇರ ಹಾಗೂ ಇತರೆ ಮುಖ್ಯ ಶಿಲ್ಪಿ ಶಿವಕುಮಾರ ಬಡಿಗೇರ, ಎಚರೇಶ ಬಡಿಗೇರ ಅವರ ನೇತೃತ್ವದಲ್ಲಿ 10 ರಿಂದ 13 ಶಿಲ್ಪಿಗಳು ರಥದ ನಿರ್ಮಾಣ, ಕೆತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಬಿಳಿಗಿರಿರಂಗನಾಥಸ್ವಾಮಿ ರಥವು 16 ಅಡಿಯಲ್ಲಿ ನಿರ್ಮಾಣವಾಗಲಿದ್ದು, 29 ಫ್ರೇಮ್ ಗಳು ಬರಲಿವೆ. ಈಗಾಗಲೇ ಈ ಎಲ್ಲಾ 29 ಫ್ರೇಮ್ ಗಳ ಕೆಲಸ ಪೂರ್ಣವಾಗಿದೆ. ಚಾಮರಾಜೇಶ್ವರ ಬ್ರಹ್ಮರಥವು 16 ಅಡಿಯಲ್ಲಿ ನಿರ್ಮಾಣವಾಗಲಿದ್ದು, 26 ಫ್ರೇಮ್‍ಗಳು ಇರಲಿವೆ. ಇದರಲ್ಲಿ ಈಗಾಗಲೇ 20 ಫ್ರೇಮ್‍ಗಳು ಪೂರ್ಣಗೊಂಡಿವೆ.
ಫ್ರೇಮ್ ಕೆಲಸಗಳ ಬಳಿಕ ಪುರಾಣದಲ್ಲಿ ಬರುವ ದೇವಾನು ದೇವತೆಗಳ ವಿಗ್ರಹ ಇತರೆ ಕುಸರಿ ಕೆತ್ತನೆ ಕೆಲಸಗಳನ್ನು ಆರಂಭಿಸಬೇಕಿದೆ. ಇದಕ್ಕೂ ಮೊದಲು ರಥ ನಿರ್ಮಾಣವಾಗುತ್ತಿರುವ ಕಾರ್ಯಗಾರಕ್ಕೆ ದೇವಾಲಯದ ಆಗಮಿಕರನ್ನು ಕರೆದೊಯ್ದು ರಥ ನಿರ್ಮಾಣ ಕಾರ್ಯ ಪರಿಶೀಲಿಸಿ ಸೂಕ್ತ ಸಲಹೆಗಳನ್ನು ಪಡೆಯುವಂತೆ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಭಕ್ತರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಚಾರಿತ್ರಿಕ, ಪುರಾಣ ಪ್ರಸಿದ್ದ ಚಾಮರಾಜೇಶ್ವರ ಹಾಗೂ ಬಿಳಿಗಿರಿರಂಗನಾಥಸ್ವಾಮಿ ರಥ ನಿರ್ಮಾಣ ಕೆಲಸ ವೇಗದಿಂದ ನಡೆದಿದೆ. ಏಪ್ರಿಲ್ ಅಥವಾ ಮೇ ಮಾಹೆಯಲ್ಲಿ ಬರುವ ಚಿತ್ತಾ ನಕ್ಷತ್ರ ಪುಣ್ಯ ದಿನದಂದು ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ನಡೆದುಕೊಂಡು ಬಂದಿದೆ. ಅದೇ ರೀತಿ ಚಾಮರಾಜೇಶ್ವರ ರಥೋತ್ಸವವು ಆಷಾಢ ಮಾಸದಲ್ಲಿ ನಡೆಯಲಿದೆ. ಈ ಎರಡೂ ರಥಗಳ ನಿರ್ಮಾಣ ಕೆಲಸವು ಪೂರ್ಣಗೊಂಡು ನೂತನ ರಥಗಳೊಂದಿಗೆ ಮುಂಬರುವ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ಜಿಲ್ಲಾಧಿಕಾರಿಯವರಾದ ಡಾ.ಎಂ.ಆರ್.ರವಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 11 ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ
ಚಾಮರಾಜನಗರ, ಸೆಪ್ಟೆಂಬರ್ 8 (ಕರ್ನಾಟಕ ವಾರ್ತೆ):- ಅರಣ್ಯ ಇಲಾಖೆ ವತಿಯಿಂದ ಅರಣ್ಯ ಸಂಪತ್ತನ್ನು ಕಳ್ಳಕಾಕರಿಂದ ರಕ್ಷಿಸುವ ಸಂದರ್ಭದಲ್ಲಿ ಕೆಚ್ಚೆದೆಯಿಂದ ಹೋರಾಡಿ ವೀರ ಮರಣವನ್ನಪ್ಪಿದ ದಿವಂಗತರ ನೆನಪಿಗಾಗಿ ಸೆಪ್ಟೆಂಬರ್ 11 ರಂದು ಬೆಳಿಗ್ಗೆ 9 ಗಂಟೆಗೆ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ನಗರದ ಅರಣ್ಯ ಕೇಂದ್ರ ಸಸ್ಯ ಕ್ಷೇತ್ರದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಚಾಮರಾಜನಗರ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 9 ರಂದು ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ
ಚಾಮರಾಜನಗರ, ಸೆಪ್ಟೆಂಬರ್ 8 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶ್ರೀ ನಾರಾಯಣ ಗುರು ಜಯಂತಿಯನ್ನು ಸೆಪ್ಟೆಂಬರ್ 9 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಗುವುದು.
ಕೊರೊನಾ ವೈರಸ್ ಹಿನ್ನಲೆಯಲ್ಲಿ ಪುಷ್ಪಾರ್ಚನೆ ಮೂಲಕ ಶ್ರೀ ನಾರಾಯಣ ಗುರು ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು ಎಂದು ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 15 ರಂದು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ
ಚಾಮರಾಜನಗರ, ಸೆಪ್ಟೆಂಬರ್ 8 (ಕರ್ನಾಟಕ ವಾರ್ತೆ):- ಜಿಲ್ಲಾ ಪಂಚಾಯತ್‍ನ ಸಾಮಾನ್ಯ ಸಭೆಯು ಅಧ್ಯಕ್ಷರಾದ ಎಂ. ಅಶ್ವಿನಿ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 15 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಳಚೆ ಪ್ರದೇಶ ಘೋಷಿಸಲು ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಿ
ಚಾಮರಾಜನಗರ, ಸೆಪ್ಟೆಂಬರ್ 8 (ಕರ್ನಾಟಕ ವಾರ್ತೆ):- ಗುಂಡ್ಲುಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಬಿ.ಜಿ.ಆರ್ ಬಡಾವಣೆ ಈಗಿನ 17ನೇ ವಾರ್ಡ್ ಹಳೆಯ 19ನೇ ವಾರ್ಡ್‍ಅನ್ನು ಕೊಳಚೆ ಪ್ರದೇಶವೆಂದು ಘೋಷಿಸಲು ಉದ್ದೇಶಿಸಿದ್ದು ಈ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 16ರೊಳಗೆ ಸಲ್ಲಿಸುವಂತೆ ಗುಂಡ್ಲುಪೇಟೆ ಮುಖ್ಯ ಅಧಿಕಾರಿ ತಿಳಿಸಿದ್ದಾರೆ.
ಗುಂಡ್ಲುಪೆಟೆ ತಾಲೂಕಿನ ಆದಿ ಜಾಂಬವ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರು ಬಿ.ಜಿ.ಆರ್ ಬಡಾವಣೆ ಈಗಿನ 17ನೇ ವಾರ್ಡ್ ಹಳೆಯ 19ನೇ ವಾರ್ಡ್‍ಅನ್ನು ಕೊಳಚೆ ಪ್ರದೇಶವೆಂದು ಘೋಷಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಮೈಸೂರು ಉಪವಿಭಾಗದ ಸಹಾಯಕ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಅವರು ಮಾಹಿತಿ ಮತ್ತು ದಾಖಲೆಗಳನ್ನು ಸಿದ್ದಪಡಿಸಿ ಸಲ್ಲಿಸುವಂತೆ ತಿಳಿಸಿದ್ದಾರೆ.
ಈಗಾಗಲೇ ಸಮೀಕ್ಷೆ ಮೂಲಕ 70 ಮನೆಗಳನ್ನು ಗುರುತಿಸಿದ್ದು, ಸದರಿ ಸ್ಥಳವನ್ನು ಕೊಳಚೆ ಪ್ರದೇಶವೆಂದು ಘೋಷಿಸಲು ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲಾತಿಯನ್ನು ಸೆಪ್ಟೆಂಬರ್ 16 ಸಂಜೆ 4 ಗಂಟೆ ಒಳಗೆ ಕಚೇರಿಗೆ ಗುಂಡ್ಲುಪೇಟೆ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.
ಇ-ಸಂಜೀವಿನಿ ಸೌಲಭ್ಯವನ್ನು ಹೆಚ್ಚು ಬಳಸಿಕೊಳ್ಳಿ
ಚಾಮರಾಜನಗರ, ಸೆಪ್ಟೆಂಬರ್ 8 (ಕರ್ನಾಟಕ ವಾರ್ತೆ):- ಸಾರ್ವಜನಿಕರು ತಾವು ಇರುವಲ್ಲಿಂದಲೇ ಅನಾರೋಗ್ಯಕ್ಕೆ ಉಚಿತವಾಗಿ ತಜ್ಞರ ಸಲಹೆ ಚಿಕಿತ್ಸೆ ಪಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟೆಲಿ ಮೆಡಿಸಿನ್ ಸೇವೆ ಪ್ರಾರಂಭಿಸಿದೆ.
ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಮೊಬೈಲ್‍ನಲ್ಲಿಯೇ ಉಚಿತವಾಗಿ ಟೆಲಿ ಮೆಡಿಸಿನ್ ಮೂಲಕ ವೈದ್ಯರ ಸಲಹೆಯನ್ನು ನೀಡಿ ಚಿಕಿತ್ಸೆ ಒದಗಿಸಲು ಇ-ಸಂಜೀವಿನಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ.
ಸಾಮಾನ್ಯವಾಗಿ ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿರುವ ರೋಗಿಗಳೂ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೆ ಇರುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಚಿಂತಿಸದೆ ಮನೆಯಿಂದಲೇ ತಮ್ಮ ಆಂಡ್ರಾಯ್ಡ್ ಮೊಬೈಲ್ ಮೂಲಕ ಅನಾರೋಗ್ಯ, ಖಾಯಿಲೆಗಳಿಗೆ ಸಂಬಂಧಿಸಿದ ತಜ್ಞ ವೈದ್ಯರ ಸಲಹೆ ಪಡೆಯುವ ಸೌಲಭ್ಯವನ್ನು ಇಲಾಖೆಯು ಕಲ್ಪಿಸಿದೆ.
ಏನಿದು? ಇ-ಸಂಜೀವಿನಿ
ಕೊರೊನಾ ಸೋಂಕಿನಿಂದ ದೂರಸರಿಯುವುದಕ್ಕಾಗಿ ಮನೆಯಲಿಯೇ ಇದ್ದು ಸುರಕ್ಷಿತವಾಗಿರಿ ಎಂದು ಸರ್ಕಾರವು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ. ಇಂತಹ ಸಂದರ್ಭಗಳಲ್ಲಿ ಆರೋಗ್ಯದ ತೊಂದರೆಗಳು ಕಂಡುಬಂದಾಗ ಮನೆಯಲ್ಲಿ ಕುಳಿತು ಚಿಕಿತ್ಸೆ ಪಡೆಯಲು ಕೇಂದ್ರ ಆರೋಗ್ಯ ಮಂತ್ರಾಲಯ, ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ ಎಂಬ ಹೆಸರಿನಲ್ಲಿ ಲಿಂಕ್‍ನ ಆ್ಯಪ್ ಯೊಂದನ್ನು ಸಿದ್ದಪಡಿಸಿದೆ.
ಆ್ಯಪ್ ಡೌನ್‍ಲೌಡ್ ಮಾಡಿಕೊಳ್ಳುವುದು, ಬಳಸುವುದು ಹೇಗೆ?
ಆಂಡ್ರಾಯ್ಡ್ ಮೊಬೈಲ್‍ನಲ್ಲಿ ಉಚಿತವಾಗಿ ಪ್ಲೇ ಸ್ಟೋರ್ ಮೂಲಕ ಡೌನ್‍ಲೌಡ್ ಮಾಡಿಕೊಳ್ಳಬಹುದು. ಆ್ಯಪ್ ನ ಮೂಲಕ ರೋಗಿಯ ನೋಂದಣಿ, ಜನರೇಟ್ ಟೋಕನ್ ಪ್ರಕ್ರಿಯೆ, ಮೊಬೈಲ್ ಸಂಖ್ಯೆ ನಮೂದಿಸಿ ಒ.ಟಿ.ಪಿ ಪಡೆದು ನೊಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಟೋಕನ್ ಪಡೆಯಬಹುದು. ನಂತರ ರೋಗಿಯು ಲಾಗಿನ್ ಮಾಡಿ ಸಂಪೂರ್ಣ ವಿವರ ಹಾಗೂ ದಾಖಲಾತಿಗಳನ್ನು ಅಪ್‍ಲೋಡ್ ಮಾಡಿ ಯಾವ ತಜ್ಞ ವೈದ್ಯರ ಸಲಹೆ ಪಡೆಯಬೇಕು ಎಂದು ಆಯ್ಕೆ ಮಾಡಿಕೊಳ್ಳಬೇಕು. ವೈದ್ಯರ ಲಭ್ಯತೆಗಾಗಿ ನಿರೀಕ್ಷಿಸಿ ನಂತರ ವೈದ್ಯರು ಪರದೆಯಲ್ಲಿ ಮೂಡಿದಾಗ ವೀಡಿಯೋ ಸಂವಾದದ ಮೂಲಕ ಸಂಪರ್ಕಿಸಿ ವೈದ್ಯರಿಂದ ಸಲಹೆ ಪಡೆದು ಚೀಟಿ, ಇ-ಪ್ರಿಸ್ಕ್ರಿಪ್ಷ್‍ನ್ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ.
ಆ್ಯಪ್‍ನ ಕಾರ್ಯಾಚರಣೆ
ಆ್ಯಪ್‍ನ ಸೇವೆ ಪಡೆಯಲು ಮೊಬೈಲ್ ಅಥವಾ ಕಂಪ್ಯೂಟರ್‍ನ ಗೂಗಲ್ ನಲ್ಲಿ ಇ ಸಂಜೀವಿನಿ ಒಪಿಡಿ ಎಂಬುದಾಗಿ ನಮೂದಿಸಬೇಕು. ನಂತರ ಕೇಂದ್ರ ಆರೋಗ್ಯ ಸಚಿವಾಲಯದ ಮುಖಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ಪೇಷೆಂಟ್ ರಿಜಿಷ್ಟ್ರೇಷನ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿದರೆ, ನಿಮಗೊಂದು ಒಟಿಪಿ ನಂಬರ್ ಬರಲಿದೆ, ರಿಜಿಷ್ಟ್ರೇಷನ್ ಅಪ್ಲೀಕೇಷನ್ ಒಂದು ತೆರೆದುಕೊಳ್ಳುತ್ತದೆ.
ವೀಡಿಯೋ ಕಾಲ್‍ನಲ್ಲಿ ಸಂಪರ್ಕ
ರೋಗಿಯ ಸಂಪರ್ಕ ಲಿಂಗ, ವಯಸ್ಸು, ಮೊಬೈಲ್ ನಂಬರ್, ವಿಳಾಸವನ್ನು ನಮೂದಿಸಿ ಲಾಗಿನ್ ಆಗಬೇಕು. ಈ ವೇಳೆ ನಿಮಗೊಂದು ಟೋಕನ್ ನಂಬರ್ ಬರಲಿದೆ. ಆ ನಂಬರ್ ನೀಡಿ, ವೈದ್ಯರನ್ನು ವೀಡಿಯೋ ಕಾಲ್ ಮೂಲಕ ಸಂಪರ್ಕಿಸಬಹುದು. ಈ ಸೇವೆಯೂ ಪ್ರತಿ ದಿನ ಬೆಳಗ್ಗೆ 10 ರಿಂದ 5 ರವರೆಗೆ ಲಭ್ಯವಿರುತ್ತದೆ. ಒಮ್ಮೆ ರಿಜಿಸ್ಟರ್ ಆದರೆ, ಮತ್ತೆ ಆಗುವ ಅಗತ್ಯವಿಲ್ಲ. ವೀಡಿಯೋ ಕಾಲ್ ಮೂಲಕವೇ, ವೈದ್ಯರು ರೋಗಿಗಳೊಂದಿಗೆ ಸಮಾಲೋಚಿಸಿ ಚಿಕಿತ್ಸೆ ಔಷಧ ಪಡೆದುಕೊಳ್ಳಬಹುದು.
ಅಗತ್ಯಕ್ಕೆ ತಕ್ಕಷ್ಟು ಯೂರಿಯಾ ಬಳಸಲು ರೈತರಿಗೆ ಸಲಹೆ
ಚಾಮರಾಜನಗರ, ಸೆಪ್ಟೆಂಬರ್ 10 (ಕರ್ನಾಟಕ ವಾರ್ತೆ):- ಜಿಲ್ಲೆಯ ರೈತ ಬಾಂಧವರು ಅಗತ್ಯಕ್ಕಿಂತ ಹೆಚ್ಚಿನ ಯೂರಿಯಾವನ್ನು ಖರೀದಿಸದೆ ಬೆಳೆಗಳಿಗೆ ಶಿಫಾರಸ್ಸು ಮಾಡಿದ ಪ್ರಮಾಣವನ್ನು ಮಾತ್ರವೇ ಬೆಳೆಗಳಿಗೆ ಬಳಸುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.
ಜಿಲ್ಲೆಯಲ್ಲಿ ಭತ್ತ ಮತ್ತು ಕಬ್ಬು ಬೆಳೆ ಬಿತ್ತನೆ ಕಾರ್ಯ ಪ್ರಗತಿಯಲ್ಲಿದ್ದು, ಈ ಬೆಳೆಗಳಿಗೆ ಯೂರಿಯಾ ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ಬಳಸುತ್ತಿರುವುದರಿಂದ ಯೂರಿಯಾ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ.
ಚಾಮರಾಜನಗರ ತಾಲ್ಲೂಕಿನಲ್ಲಿ 185, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 135, ಕೊಳ್ಳೇಗಾಲ ತಾಲ್ಲೂಕಿನಲ್ಲಿ 230, ಯಳಂದೂರು ತಾಲ್ಲೂಕಿನಲ್ಲಿ 75 ಹಾಗೂ ನಗರದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯಲ್ಲಿ 107.100 ಸೇರಿದಂತೆ ಒಟ್ಟು 732.10 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ದಾಸ್ತಾನು ಇದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ವಾಡಿಕೆ ಮಳೆ 420.7 ಮಿ.ಮೀ ಇದ್ದು ಪ್ರಸ್ತುತ 616.4 ಮಿ.ಮೀ ಮಳೆ ಆಗಿದೆ, ಶೇ. 47 ರಷ್ಟು ಹೆಚ್ಚು ಮಳೆಯಾಗಿರುತ್ತದೆ. ಮುಂಗಾರು ಹಂಗಾಮಿನಲ್ಲಿ 1,20,680 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಪ್ರಸ್ತುತ 1,10,749 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಚಿiÀiÁಗಿದೆ. ಶೇ. 91.77 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೇನಾ ನೇಮಕಾತಿ ರ್ಯಾಲಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆಪ್ಟೆಂಬರ್ 10 (ಕರ್ನಾಟಕ ವಾರ್ತೆ):- ಭಾರತೀಯ ಸೇನೆಯಿಂದ ವಿವಿಧ ಹುದ್ದೆಗಳಿಗೆ ಚಾಮರಾಜನಗರ ಜಿಲ್ಲೆಯೂ ಸೇರಿದಂತೆ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳಿಗಾಗಿ ಸೇನಾ ನೇಮಕಾತಿ ರ್ಯಾಲಿಯನ್ನು ಸೆಪ್ಟೆಂಬರ್ 19 ರಿಂದ 2021ರ ಮಾರ್ಚ್ 31ರವರೆಗೆ ಆಯೋಜಿಸಲಾಗುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೈನಿಕ-ಜಿಡಿ, ಸೈನಿಕ ಟೆಕ್ನಿಕಲ್, ಸೈನಿಕ ಕುಶಲಕರ್ಮಿ, ಕ್ಲರ್ಕ್ ಹಾಗೂ ನರ್ಸಿಂಗ್ (ಟೆಕ್) ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ಸ್ಥಳ, ಊರು ಹಾಗೂ ದಿನಾಂಕವನ್ನು ಕೋವಿಡ್ ಹಿನ್ನೆಲೆಯಲ್ಲಿ ನಂತರ ನಿಗದಿಪಡಿಸಲಾಗುತ್ತದೆ.
ಅಭ್ಯರ್ಥಿಯು 17 2/1 ರಿಂದ 23 ವರ್ಷದ ವಯೋಮಿತಿಯಲ್ಲಿರಬೇಕು. 8ನೇ, 10ನೇ ತರಗತಿ ಹಾಗೂ ಪಿ.ಯು.ಸಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಹಾಗೂ ವಿವರಗಳಿಗೆ ಯನ್ನು ವೆಬ್ ಪೋರ್ಟಲ್ ತಿತಿತಿ.ರಿoiಟಿಜiಚಿಟಿಚಿಡಿmಥಿ.ಟಿiಛಿ.iಟಿ ನಲ್ಲಿ ನೋಡಬಹುದು.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಅಥವಾ ದೂರವಾಣಿ ಸಂ. 08226-224430 ಅನ್ನು ಸಂಪರ್ಕಿಸುವಂತೆ ಉದ್ಯೋಗಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.20ರಂದು ಸಿವಿಲ್ ಕಾನ್ಸ್‍ಟೇಬಲ್ ನೇಮಕಾತಿಗೆ ಲಿಖಿತ ಪರೀಕ್ಷೆ
ಚಾಮರಾಜನಗರ, ಸೆಪ್ಟೆಂಬರ್ 10 (ಕರ್ನಾಟಕ ವಾರ್ತೆ):- ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ 2,200 ಅಭ್ಯರ್ಥಿಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ಸೆಪ್ಟೆಂಬರ್ 20ರಂದು ಬೆಳಗ್ಗೆ 11 ಗಂಟೆ ಯಿಂದ ಮಧ್ಯಾಹ್ನ 12.30ರವರೆಗೆ ಜಿಲ್ಲೆಯ 8 ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.
ಲಿಖಿತ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ಪೊಲೀಸ್ ಇಲಾಖೆಯ ವೆಬ್‍ಸೈಟ್ ತಿತಿತಿ.ಞsಠಿ.gov.iಟಿ ನಿಂದ ಪಡೆದುಕೊಳ್ಳಬಹುದಾಗಿದೆ.
ನಗರದ ಬಿ. ರಾಚಯ್ಯ ಜೋಡಿ ರಸ್ತೆಯ ಜೆ.ಎಸ್.ಎಸ್. ಬಾಲಕಿಯರ ಪ್ರೌಢಶಾಲೆ, ಸತ್ಯಮಂಗಲ ರಸ್ತೆಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚೆನ್ನಿಪುರದಮೋಳೆ ರಸ್ತೆಯ ಸೇವಾ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಸೇವಾ ಭಾರತಿ ಪಬ್ಲಿಕ್ ಶಾಲೆ, ಸೋಮವಾರ ಪೇಟೆಯ ಎಂ.ಸಿ.ಎಸ್. ಪಬ್ಲಿಕ್ ಸ್ಕೂಲ್ ಹಾಗೂ ಯೂನಿವರ್ಸ್ ಇಂಗ್ಲೀಷ್ ಸ್ಕೂಲ್‍ಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮೊಬೈಲ್, ಲ್ಯಾಪ್‍ಟಾಪ್, ಕ್ಯಾಲ್ಕುಲೇಟರ್, ಪೇಜರ್, ಚಿಟ್ಸ್, ನೋಟ್ ಬುಕ್, ಎಲೆಕ್ಟ್ರಾನಿಕ್ ಉಪಕರಣ ಹಾಗೂ ಇತರೆ ಸಾಮಾಗ್ರಿಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವಂತಿಲ್ಲ.
ಕರ್ನಾಟಕ ರಾಜ್ಯದ ಪೊಲೀಸ್ ನೇಮಕಾತಿಯನ್ನು ಪಾರದರ್ಶಕ, ಗಣಕೀಕೃತ, ಸಂಪೂರ್ಣ ವಸ್ತು ನಿಷ್ಠ, ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ ನಡೆಸಲಾಗುತ್ತದೆ. ಅಭ್ಯರ್ಥಿಯು ಇಲಾಖೆಯ ಹೊರಗಾಗಲಿ, ಒಳಗಾಗಲಿ ಉದ್ಯೋಗ ಪಡೆಯುವ ಸಲುವಾಗಿ ಯಾವುದೇ ವ್ಯಕ್ತಿಗೆ ಹಣ ನೀಡುವುದು, ಯಾವುದೇ ವಿಧವಾದ ಪಾರತೋಷಕ ನೀಡುವುದನ್ನು ಮಾಡಬಾರದು. ಯಾವುದೇ ವಿಧವಾದ ಹಣ ವಸೂಲಾತಿಗೆ ಯಾರಿಗೂ ಅಧಿಕಾರ ನೀಡಿರುವುದಿಲ್ಲ. ಈ ದಿಸೆಯಲ್ಲಿ ಮಧ್ಯವರ್ತಿಗಳ ಭರವಸೆಗಳಿಗೆ ಅಭ್ಯರ್ಥಿಗಳು ಮಾರು ಹೋಗಬಾರದೆಂದು ಪೊಲೀಸ್ ಅಧೀಕ್ಷಕರಾದ ದಿವ್ಯಾಸಾರಾ ಥಾಮಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 11 ರಂದು ನಗರದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ
ಚಾಮರಾಜನಗರ, ಸೆಪ್ಟೆಂಬರ್ 10 (ಕರ್ನಾಟಕ ವಾರ್ತೆ):- ಅರಣ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಸೆಪ್ಟೆಂಬರ್ 11 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸಸ್ಯ ಕ್ಷೇತ್ರದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಡಿ.ವಿನಯ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬೋಯರ್ ಹರ್ಷಲ್ ನಾರಾಯಣ್‍ರಾವ್ ಅವರು ಸಮಾರಂಭದಲ್ಲಿ ಉಪಸ್ಥಿತರಿರುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಸಂತೋಷ್ ಕುಮಾರ್ ಅವರು ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‍ಕುಮಾರ್ ಅವರಿಂದ 25 ಮಾದರಿ ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ
ಚಾಮರಾಜನಗರ, ಸೆಪ್ಟೆಂಬರ್ 7 (ಕರ್ನಾಟಕ ವಾರ್ತೆ):- ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ 25 ಗ್ರಾಮ ಪಂಚಾಯಿತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿಸುವ ವಿಶೇಷ ಕಾರ್ಯಕ್ರಮಕ್ಕೆ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‍ಕುಮಾರ್ ಅವರು ಇಂದು ಚಾಲನೆ ನೀಡಿದರು.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಸರ್ಕಾರಿ ಶಾಲೆಯ ಅವರಣದಲ್ಲಿ ಈ ಮಾದರಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ಹಾಗೂ ಹನೂರು ತಾಲೂಕಿನ ಆಯ್ದ ಗ್ರಾಮ ಪಂಚಾಯಿತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಇನ್ನಷ್ಟು ಗ್ರಾಮ ಪಂಚಾಯಿತಿಗಳ ವಿಸ್ತರಣೆಯನ್ನು ಮುಂದಿನ ಹಂತದಲ್ಲಿ ಮಾಡಲಾಗುವುದು ಉಸ್ತುವಾರಿ ಸಚಿವರು ತಿಳಿಸಿದರು.
ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯ ಉದ್ದೇಶದೊಂದಿಗೆ ಯೋಜನೆ ರೂಪಿಸಲಾಗಿದೆ. ನರೇಗಾ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ಸ್ಥಳೀಯವಾಗಿ ಉದ್ಯೋಗ ನೀಡುವುದರ ಜೊತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಮಹತ್ತರ ಧ್ಯೇಯವನ್ನು ಯೋಜನೆ ಹೊಂದಿದೆ ಎಂದರು.
ಯೋಜನೆಯಡಿ ಗ್ರಾಮಗಳ ನೈರ್ಮಲ್ಯ, ಕೊಳಚೆ ನೀರಿನ ಸಮರ್ಪಕ ನಿರ್ವಹಣೆಗೆ ಸೋಕ್‍ಪಿಟ್‍ಗಳ ನಿರ್ಮಾಣ ಮಾಡಲಾಗುತ್ತದೆ. ಮನೆಯ ಹಿತ್ತಲಿನಲ್ಲಿ ಪೌಷ್ಠಿಕ ತೋಟ ನಿರ್ಮಾಣವು ಸಹ ಆಗಲಿದೆ. ಶಾಲೆಗಳಲ್ಲಿಯೂ ಪೌಷ್ಠಿಕ ತೋಟ ನಿರ್ಮಾಣವನ್ನು ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಕಾರ್ಯ ಚಟುವಟಿಕೆಗಳ ಬಗ್ಗೆ ಉತ್ಸಾಹ ತುಂಬಬಹುದಾಗಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಮಳೆ ನೀರು ಕೊಯ್ಲು ಸಹ ಯೋಜನೆಯಡಿ ಕೈಗೊಂಡಿರುವ ಪ್ರಮುಖ ಗುರಿಯಾಗಿದೆ. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಇತರೆ ಉದ್ದೇಶಗಳಿಗೆ ಬಳಸುವ ಹಿನ್ನೆಲೆಯಲ್ಲಿ ಮಳೆ ನೀರು ಕೊಯ್ಲು ಕಾಮಗಾರಿಯನ್ನು ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.
ಮಹಿಳಾ ಸ್ವಸಹಾಯ ಸಂಘಗಳ ಅರ್ಥಿಕ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮಾದರಿ ಗ್ರಾಮ ಪಂಚಾಯಿತಿ ಯೋಜನೆಯಡಿ ಸಂಜೀವಿನಿ ಶೆಡ್ ನಿರ್ಮಾಣ ಮಾಡಲಾಗುತ್ತದೆ. ಅತ್ಯಂತ ಪೌಷ್ಠಿಕ ಆಹಾರ ಎನಿಸಿರುವ ಹಣಬೆ ಬೇಸಾಯಕ್ಕೂ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ ಎಂದ ಸುರೇಶ್‍ಕುಮಾರ್ ಅವರು ನಮ್ಮ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿ ಯೋಜನೆ ಇತರೆ ಜಿಲ್ಲೆಗಳಿಗೂ ಮಾದರಿಯಾಗಲಿ ಎಂದು ಹಾರೈಸಿದರು.
ಶಾಸಕರಾದ ಆರ್. ನರೇಂದ್ರ ಅವರು ಮಾತನಾಡಿ ನೂತನ ಮಾದರಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಯೋಜನೆ ಎಲ್ಲಾ ಗ್ರಾಮಗಳಿಗೂ ಅನುಕೂಲವಾಗಲಿ. ಅಭಿವೃದ್ಧಿ ಕೆಲಸಗಳು ತ್ವರಿತವಾಗಿ ನಡೆಯಲಿ ಎಂದು ಆಶಿಸಿದರು.
ಕೊಳ್ಳೇಗಾಲ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಸುರೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬೋಯರ್ ಹರ್ಷಲ್ ನಾರಾಯಣ್‍ರಾವ್, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಲ್. ಗಂಗಾಧರ್, ತಹಶೀಲ್ದಾರ್ ಕೆ. ಕುನಾಲ್, ಜಿಲ್ಲಾ ಪಂಚಾಯಿತ್ ಉಪ ಕಾರ್ಯದರ್ಶಿ ಧರಣೇಶ್, ಇತರರು ಉಪಸ್ಥಿತರಿದ್ದರು.
ನಾರಾಯಣ ಗುರು ಅವರ ಚಿಂತನೆಗಳು ದಾರಿದೀಪ : ಶಾಸಕÀರಾದ ಸಿ. ಪುಟ್ಟರಂಗ ಶೆಟ್ಟಿ
ಚಾಮರಾಜನಗರ, ಸೆಪ್ಟೆಂಬರ್ 09 (ಕರ್ನಾಟಕ ವಾರ್ತೆ):- ಅಸ್ಪøಶ್ಯತೆ, ಅಜ್ಞಾನ, ಅಂಧಶ್ರದ್ಧೆ ವಿರುದ್ಧ ಹೋರಾಟ ನಡೆಸಿ, ಸಮ ಸಮಾಜ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಟ್ಟ ನಾರಾಯಣ ಗುರು ಅವರ ಚಿಂತನೆಗಳು ಪ್ರತಿಯೊಬ್ಬರಿಗೂ ದಾರಿದೀಪ ಎಂದು ಶಾಸಕರಾದ ಸಿ. ಪುಟ್ಟರಂಗ ಶೆಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇರಳದಲ್ಲಿ ಶೋಷಿತ ಸಮುದಾಯಗಳು ಅನುಭವಿಸುತ್ತಿದ್ದ ಅಸಮಾನತೆಯ ವಿರುದ್ಧ ಹೋರಾಟ ನಡೆಸಿದವರು. ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದಾಗ ಸ್ವತಃ ಅವರು ಶಿವನ ದೇವಸ್ಥಾನವನ್ನು ನಿರ್ಮಿಸಿದರು. ಶೋಷಿತರ ವಿದ್ಯಾಭ್ಯಾಸಕ್ಕಾಗಿ ಕೇರಳದ ಕರಾವಳಿ ಪ್ರದೇಶದ ಕಾಲಡಿಯಲ್ಲಿ ಪಾಠಶಾಲೆಯನ್ನು ತೆರೆದರು. ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತÀರಾಗಿ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದವರು ಎಂದು ಹೇಳಿದರು.
ನಾರಾಯಣ ಗುರುಗಳ ಚಿಂತನೆ, ಆಧ್ಯಾತ್ಮ ವಿಷಯಗಳು ಮುನ್ನಲೆಗೆ ಬರಬೇಕಾದರೆ ಅವರ ಪುಸ್ತಕವನ್ನು ಹೆಚ್ಚು ಓದಿ ನಾರಾಯಣ ಗುರುಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಅನೇಕ ಸಾಧಕರು, ಸಮಾಜ ಸುಧಾರಕರು ನಾರಾಯಣ ಗುರು ಅವರ ಕುರಿತ ಗ್ರಂಥಗಳನ್ನು ಅಧ್ಯಯನ ಮಾಡಿ ಪ್ರಭಾವಿತರಾಗಿದ್ದರು. ನಾರಾಯಣ ಗುರು ಜಯಂತಿ ಜಯಂತಿ ಅಚರಣೆಗೆ ಸೀಮಿತವಾಗದೇ ಜೀವನದಲ್ಲಿ ಅವರ ಆದರ್ಶ, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಬಿ. ಶಾಂತಮೂರ್ತಿ ಅವರು ಮಾತನಾಡಿ ನಾರಾಯಣ ಗುರುಗಳ ಸಂದೇಶ, ಅವರ ಜೀವನ ನಮಗೆ ಆದರ್ಶವಾಗಿದೆ. ದೇಶದಲ್ಲಿ ಅಸಮಾನತೆಯನ್ನು ಹೋಗಲಾಡಿಸಲು ಇವರಂತೆ ಎಲ್ಲರೂ ಶ್ರಮಿಸಿ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖಂಡರು ಹಾಗೂ ವಿಚಾರವಾದಿಗಳಾದ ಅರಕಲವಾಡಿ ನಾಗೇಂದ್ರ ಅವರು ಮಾತನಾಡಿ ಕೇರಳಕ್ಕೆ ಸೀಮಿತವಾಗಿದ್ದ ಸಾಮಾಜಿಕ ಚಳವಳಿಯನ್ನು ಇಡೀ ದೇಶವೇ ತಿರುಗಿ ನೋಡುವ ರೀತಿ ಮಾಡಿದ ಕೀರ್ತಿ ನಾರಾಯಣ ಗುರು ಅವರಿಗೆ ಸಲ್ಲುತ್ತದೆ. ಹಠ ಸಾಧನೆ, ಯೋಗವನ್ನು ಬಲ್ಲವರಾಗಿದ್ದು, ಎಲ್ಲವನ್ನು ಜಯಿಸುವ ಶಕ್ತಿಯನ್ನು ಬೆಳೆಸಿಕೊಂಡಿದ್ದರು ಎಂದರು.
ನಾರಾಯಣಗುರು ಅವರು ಆರಂಭದಲ್ಲಿ ಆಧ್ಯಾತ್ಮದೆಡೆ ಒಲವು ಹೊಂದಿದ್ದರು. ಸಮಾಜದಲ್ಲಿ ಅಸಮಾನತೆಯನ್ನು ಕಂಡು ಬಳಿಕ ಸಾಮಾಜಿಕ ಪರಿವರ್ತನೆಗೆ ಮುಂದಾದರು. ದೇವಸ್ಥಾನದಲ್ಲಿ ಸುಂದರವಾದ ಉದ್ಯಾನವನ, ಗ್ರಂಥಾಲಯವನ್ನು ಸ್ಥಾಪಿಸಿದರು. ಅನೇಕ ಹೋರಾಟಗಾರರು, ವಿಚಾರವಾದಿಗಳು ನಾರಾಯಣಗುರು ಅವರ ಹೋರಾಟದಿಂದ ಪ್ರೇರಣೆ ಯಾಗಿದ್ದರು ಎಂದು ಅರಕಲವಾಡಿ ನಾಗೇಂದ್ರ ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಕೆ. ಗಿರೀಶ್, ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ವೆಂಕಟೇಶ್, ನಿಜಧ್ವನಿ ಗೋವಿಂದರಾಜು, ಜಿ. ಬಂಗಾರು, ಬ್ಯಾಡಮೂಡ್ಲು ಬಸವಣ್ಣ, ಶ್ರೀನಿವಾಸ್, ಸಿ.ಎಸ್. ಪುಟ್ಟಣ್ಣ, ಪರ್ವತರಾಜು, ಇತರರು ಉಪಸ್ಥಿತರಿದ್ದರು.
ಸೆಪ್ಟೆಂಬರ್ 11 ರಂದು ನಗರದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ
ಚಾಮರಾಜನಗರ, ಸೆಪ್ಟೆಂಬರ್ 09 (ಕರ್ನಾಟಕ ವಾರ್ತೆ):- ಅರಣ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಸೆಪ್ಟೆಂಬರ್ 11 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸಸ್ಯ ಕ್ಷೇತ್ರದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಡಿ.ವಿನಯ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ದಿವ್ಯಾ ಸಾರಾ ಥಾಮಸ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬೋಯರ್ ಹರ್ಷಲ್ ನಾರಾಯಣ್‍ರಾವ್ ಅವರು ಸಮಾರಂಭದಲ್ಲಿ ಉಪಸ್ಥಿತರಿರುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಸಂತೋಷ್ ಕುಮಾರ್ .ಜಿ ಅವರು ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.