Sunday, 25 December 2016

ಚಾಮರಾಜನಗರದ ನಿವಾಸಿಯೋರ್ವರು ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ಏನಿತ್ತು ಗೊತ್ತಾ..?.....ನೀವೆ ನೋಡಿ..ಇಷ್ಟ ಆದರೆ ಶೇರ್ ಮಾಡಿ....25-12-2016

ಗೆ,
ಗೌರವಾನ್ವಿತ ಪ್ರದಾನಿಯವರು
ನವದೆಹಲಿ,ಭಾರತ ದೇಶ

ಇಂದ,.......................................
ಆರ್.ಟಿ.ಐ. ಹಾಗೂ ಸಾಮಾಜಿಕ ಕಾರ್ಯಕರ್ತ
ಚಾಮರಾಜನಗರ ಜಿಲ್ಲೆ
ಕರ್ನಾಟಕ ರಾಜ್ಯ, -ಪಿನ್-571342


ಮಾನ್ಯರೇ, 
ವಿಷಯ: ನೋಟ್ ಬ್ಯಾನ್ ಹಾಗೂ ಆರ್ಥಿಕ ಕ್ರಾಂತಿ ಉಂಟು ಮಾಡಿದ ತಮಗೆ ಅಭಿನಂದನೆ     ಕೋರುವ ಸಂಬಂದ
ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ನೋಟ್ ಅಮಾನ್ಯ ಮಾನ್ಯ ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನೆ ಬುಡಮೇಲು ಮಾಢುವ ಮೂಲಕ ಆರ್ಥಿಕ ಕ್ರಾಂತಿ ಉಂಟು ಮಾಡಿ ವ್ಯವಸ್ಥೆಯನ್ನೆ ಕ್ಯಾಶ್ ಲೆಸ್ ಮಾಡುವ ಯೋಜನೆಗೆ ತುಂಬಾ ಹೃದಯದ ಅಬಿನಂದನೆಗಳು, ಇತ್ತೀಚೆಗಷ್ಟೇ ನನ್ನ ಪುಟ್ಟ ಮನವಿ ಪತ್ರದಲ್ಲಿ  5000 ರೂಪಾಯಿಗೆ ತೆರಿಗೆ ಪಾವತಿ ಸಂಬಂದ ಕೇಳಿದಾಗ ತಾವು ತಿಳಿಸಿರುವಂತೆ 2000 ನಗದುರಹಿತ ಯೋಜನೆಗೆ 2% ತೆರಿಗೆ ಮಾಡಿದ್ದೀರಾ ಅಷ್ಟೇ ಅಲ್ಲ ಚಾಮರಾಜನಗರದಲ್ಲಿ ಬಹುತೇಕ ಎಲ್ಲಾ ಎಟಿಎಮ್ ಗಳು ಬಾಗಿಲು ಹಾಕಿ ಕನಿಷ್ಟು ತುರ್ತು ಸೇವೆಗೂ ಬೇರೆಯವರನ್ನು ಅವಲಂಬಿಸಿರಬೇಕಾಗಿರುವುದರಿಂದ ಕನಿಷ್ಟ ಬಹುತೇಕ ಸಾಮಾನ್ಯರೂ 2 ಲಕ್ಷ ಹಣ ಇಡಲೇಬೇಕಾದ ಸ್ಥಿತಿ ಇದ್ದೇ ಇದೆ ಪರಿಶೀಲಿಸಿ ಅವರಿಗೆ ಹೆಚ್ಚು ತೆರಿಗೆ ಆಗದಂತೆ 5 ಲಕ್ಷದ ವರೆಗೆ ಮಾಢಿ ಎಂದು ಮನವಿ ಮಾಡಿದ್ದೇ ಆ ಪತ್ರವನ್ನು ಪುರಷ್ಕರಿಸಿ ಈಗ 4 ಲಕ್ಷದವೆರೆಗೆ ತೆರಿಗೆ ರಹಿತ ಮಾಢಲು ಸಿದ್ದತೆ ಮಾಡುತ್ತೀರುತ್ತೀರಿ ಎಂದು ಭಾವಿಸಿರುತ್ತೇನೆ. ಇದಕ್ಕೂ ತಮ್ಮ ಕಡೆಯಿಂದ ಧನ್ಯವಾದಗಳು. ಇನ್ನು ಕೆಲವು ಪ್ರಮುಖ ಬೇಡಿಕೆಗಳು ನನ್ನಲ್ಲಿದೆ ಅದನ್ನು ಪರಿಶೀಲಸಿ ಭ್ರಷ್ಟತೆ ತೊಡೆದು ಹಾಕಿ ಇಡೀ ವ್ಯವಸ್ಥೆಯನ್ನು ಸರಿದೊಗಿಸಲು ಕೋರುತ್ತೇನೆ.
ನೋಟ್ ಬ್ಯಾನ್ ಮಾಡುವದರಿಂದ ಭ್ರಷ್ಟತೆ ಕಡಿಮೆಯಾಗುತ್ತದೆ ಎಂದರೆ ಆದರೆ ಅದು ಮಾತ್ರ ಇನ್ನು ನಿಂತಿಲ್ಲ. ಇದನ್ನು ತೊಡೆದು ಹಾಕಬೇಕಾದ ಮಾದ್ಯಮದವರು ಪರೋsÀಕ್ಷವಾಗಿ ಸಹಕಾರಕ್ಕೆÀ ನಿಂತು ಅವರೂ ಕೂಡ ಮನೆ ಮೇಲೆ ಮನೆ ಕಟ್ಟುತ್ತಾ ಬಡವರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.
ಆರ್ಥಿಕ ಕ್ರಾಂತಿ ನೆಪದಲ್ಲಿ ನೋಟ್ ಬ್ಯಾನ್ ಮಾಡಿದರೂ ಪರೋಕ್ಷವಾಗಿ ಬ್ಯಾಂಕ್ ಸಿಬ್ಬಂಧಿಗಳು ಕಾಳಧನಿಕರಿಗೆ ಕೈಜೋಡಿಸಿ ಕೇಕೆ ಹಾಕುತ್ತಿದ್ದಾರೆ ಅವರಿಗೆ ಕೇವಲ ವರ್ಗಾವಣೆ, ಅಮಾನತು ಶಿಕ್ಷೆ ಸಾಕೇ.? ಸಂಪೂರ್ಣ ವಜಾ ಯಾಕೇ ಮಾಡಬಾರದು ಹಾಗೂ ಜೈಲು ಶಿಕ್ಷೆ ವಿಧಿಸಬಾರದು.
ಕೆಲವು ಶಿಕ್ಷಣ ಸಂಸ್ಥೆಗಳು , ಸರ್ಕಾರೇತರ ಸಂಘಸಂಸ್ಥೆಗಳು ಆದಾಯ ತೆರಿಗೆ ಇಲಾಖಾ ವ್ಯಾಪ್ತಿಯಲ್ಲಿ ನೋಂದಣಿ ಮಾಡಿಕೊಳ್ಳದೇ ಬಡವರ ಪಾಲಾಗಬೇಕಾಗಿದ್ದ ಕಡ್ಡಾಯ ಶಿಕ್ಷಣ (ಆರ್.ಟಿ.ಇ) ಶ್ರೀಮಂತರಿಗೆ ಮಾರಾಟ ಮಾಡಿ ಸುಲಿಗೆ ಮಾಡಿ ಶಿಕ್ಷಣ ಕೇವಲ ಮರಿಚೀಕೆಯಾಗುತ್ತಿದೆ. ಇಷ್ಟು ದಿನ ಮಾಡಿದ ಈ ದಂದೆಗೂ ತಮ್ಮಿಂದ ಕಡಿವಾಣ ಬೀಳಬೇಕಾಗಿದೆ.
ಸದ್ಯದಲ್ಲಿಯೇ ತರಲಿರುವ ಬೇನಾಮಿ ಆಸ್ತಿ ಸಂಬಂದ ಯಾರೇ ಆಗಲಿ ನಮ್ಮ ದ್ವನಿ ಬಡವರ ಪರವಾಗಿ ಎಂದಿರುವ ನೀವು ಇಲ್ಲದವರಿಗೆ ನೀಡಬೇಕಾಗಿರುವ ಕನಿಷ್ಟ ಸವಲತ್ತು ನೀಡಬೇಕಾಗಿದೆ.

********************************************************

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು