Friday, 30 September 2016

01-10-2016 ಚಾಮರಾಜನಗರದಲ್ಲಿ ಖಾಕಿ ಸರ್ಪ ಕಾವಲಿನಡಿ ಗಣಪತಿ ವಿಸರ್ಜನಾ ಮಹೋತ್ಸವ








ಚಾಮರಾಜನಗರದಲ್ಲಿ ಖಾಕಿ ಸರ್ಪ ಕಾವಲಿನಡಿ ಗಣಪತಿ ವಿಸರ್ಜನಾ ಮಹೋತ್ಸವ

ಸ್ಥಳದಲ್ಲೇ ಮೊಕ್ಕಂ ಹೂಡಿದ ಎಸ್ಪಿ ಕುಲದೀಪ್ ಕುಮಾರ್ ಜೈನ್, ಪೂಜೆಯಲ್ಲಿ ಭಾಗಿ

               ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ,:-     ಪೊಲೀಸ್ ಗಣಪ ಎಂದೇ ಪ್ರಸಿದ್ದಿಯಾದ ಚಾಮರಾಜನಗರದ ರಥದ ಬೀದಿಯಲ್ಲಿರುವ ಶ್ರೀ ವಿದ್ಯಾ ಗಣಪತಿ ಮಂಡಳಿಯವರು ಪ್ರತಿಷ್ಟಾಪಿಸಲಾದ ಸಾರ್ವಜನಿಕ ಗಣಪತಿಯ 55 ನೇ ವರ್ಷದ ವಿಸರ್ಜನಾ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನಡೆಯಿತು.
ಚಾಮರಾಜನಗರ ರಥದ ಬೀದಿಯಲ್ಲಿ ಪ್ರತಿಷ್ಟಾಪಿಸಲಾಗಿರುವ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಜಿಲ್ಲಾ ಪೊಲೀಸ್ ವರೀಷ್ಟಾಧಿಕಾರಿ  ಕುಲದೀಪ್ ಕುಮಾರ್  ಜೈನ್ ಅವರು ಪೂಜೆ ಸಲ್ಲಿಸಿ ಪ್ರಮುಖ ರಸ್ತೆ ದಾಟುವ ತನಕ ಖುದ್ದು ನಿಂತು ಮೆರವಣಿಗೆ ಸುಗಮವಾಗುವಂತೆ ನೋಡಿಕೊಂಡರು.
ವಿಸರ್ಜನಾ ಮಹೋತ್ಸವದ ಮೆರವಣಿಗೆಯಲ್ಲಿ ನಂದಿದ್ವಜ, ಗೊರವರ ಕುಣಿತ, ಕರಗ, ಗಾರುಡಿಗ ಗೊಂಬೆ, ಮಹಿಳಾ ವೀರಗಾಸೆ, ಮಂಗಳ ವಾದ್ಯ ಸೇರಿದಂತೆ ಇನ್ನಿತರ ಕಲಾತಂಡಗಳು  ಮೆರವಣೆಗೆಯಲ್ಲಿ ಭಾಗವಹಿಸಿ ಜನರ ಮನ ಸೆಳÉದವು.
ಮೆರವಣಿಗೆಯು ಇಂದು ನಗರದ ಖಡಕ್‍ಪುರ ಮೊಹಲ್ಲಾ, ಅಂಬೇಡ್ಕರ್ ಬಡಾವಣೆ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ರಸ್ತೆ, ದೇವಾಂಗ 3ನೇ ಬೀದಿ, ನಾಗಪ್ಪ ಶೆಟ್ಟರ ವೃತ್ತ, ದೊಡ್ಡಂಗಡಿ ಬೀದಿ, ಗುಂಡ್ಲುಪೇಟೆ ವೃತ್ತ, ಗಾಡಿಖಾನೆ ಮೊಹಲ್ಲಾ ಬೀದಿ, ಮೇಗಲ ಪರಿವಾರ ನಾಯಕರ ಬೀದಿ, ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆ, ಮಾರ್ಕೆಟ್ ವೃತ್ತ, ಸಂತೇಮರಹಳ್ಳಿ ವೃತ್ತ, ಆದಿಶಕ್ತಿ ದೇವಸ್ಥಾನದ ಬೀದಿ, ಬಣಜಿಗರ ಬೀದಿ, ಭ್ರಮರಾಂಭ ಬಡಾವಣೆಯ 1ನೇ ಮತ್ತು 2ನೇ ಕ್ರಾಸ್,  ಕುರುಬರ ಬೀದಿ, ಹಳ್ಳದ ಬೀದಿ, ಅಗ್ರಹಾರ ಬೀದಿ, ಪೊಲೀಸ್ ಕಚೇರಿ ರಸ್ತೆ, ಖಾಸಗಿ ಬಸ್ ನಿಲ್ದಾಣದ ರಸ್ತೆ, ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ರಸ್ತೆ, ಜೈನರ ಬೀದಿ, ಆಂಜನೇಯಸ್ವಾಮಿ ದೇವಸ್ಥಾನದ ಬೀದಿಯಲ್ಲಿ ಸಂಚರಿಸಿ ದೊಡ್ಡ ಅರಸಿನಕೊಳದಲ್ಲಿ ವಿಸರ್ಜನೆ ಮಾಡಲಾಯಿತು.
ವ್ಯಾಪಕ ಪೋಲೀಸ್ ಬಂದೂಬಸ್ತ್: ಚಾಮರಾಜನಗರ ಪಟ್ಟಣವನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಿ, ಗಸ್ತು ವ್ಯವಸ್ಥೆಗಾಗಿ 07 ಮೊಬೈಲ್ ಗಳನ್ನು ನೇಮಿಸಲಾಗಿದೆ. ಪಟ್ಟಣದ ಸೂಕ್ಷ್ಮ ಸ್ಥಳಗಳಲ್ಲಿ ಫಿಕ್ಸೆಡ್ ಪಾಯಿಂಟ್ ಮತ್ತು ಗಗನ ಪಹರೆ ನೇಮಿಸಲಾಗಿತ್ತು.   ಸಾರ್ವಜನಿಕರಿಗೆ ಅಡಚಣೆಯಾಗದಂತೆ ಬದಲಿ ಸಂಚಾರಿ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.
ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಅವರು ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ಮೆರವಣಿಗೆ ಹಾದುಹೋಗಲಿರುವ ಬೀದಿಗಳ ಕಟ್ಟಡಗಳ ಮೇಲೆ ಹತ್ತಿ ಕುಳಿತುಕೊಳ್ಳುವುದು ಹಾಗೂ ಗುಂಪುಗೂಡಿ ಮೆರವಣಿಗೆ ವೀಕ್ಷಿಸುವುದನ್ನು ಸೆಕ್ಷನ್ 144 ರನ್ವಯ ನಿಷೇಧಿಸಿ ಆದೇಶ ಹೊರಡಿಸಿದ್ದರು.
ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸ್ಪಿ ಕುಲದೀಪ್ ಕುಮಾರ್  ಜೈನ್ ವ್ಯಾಪಕ ಪೊಲೀಸ್ ಬಂದೂಬಸ್ತ್ ಏರ್ಪಾಡು ಮಾಡಿದ್ದರು. ಡಿವೈಸ್ಪಿ ಗಂಗಾದರ್ ಸ್ವಾಮಿ, ಜಿಲ್ಲೆಯ ಎಲ್ಲಾ ಸಬ್‍ಇನ್ಸ್‍ಪೆಕ್ಟರ್, ಇನ್ಸ್‍ಪೆಕ್ಟರ್ ಹಾಜರಿದ್ದರು
ಗಣಪತಿ ವಿಸರ್ಜನಾ ಮಹೋತ್ಸವದ ಕರ್ತವ್ಯಕ್ಕೆ ಎಸ್.ಪಿ. ರವರ ನೇತೃತ್ವದಲ್ಲಿ 06 ಡಿಎಸ್‍ಪಿ,   16 ಸರ್ಕಲ್ ಇನ್ಸ್‍ಪೆಕ್ಟರ್,  25 ಸಬ್ ಇನ್ಸ್‍ಪೆಕ್ಟರ್,  ಎಎಸ್.ಐ 58, 30 ಜನ ಸಿಬ್ಬಂದಿಗಳ ಚಾಮರಾಜ ಕಮಾಂಡೋ ಪಡೆ ಸೇರಿದಂತೆ ಎರಡು ಕಮಾಂಡೋ ಪಡೆ , 490 ಮುಖ್ಯ / ಸಾಮಾನ್ಯ ಪೊಲೀಸ್ ಪೇದೆ, 30 ಮಹಿಳಾ ಪೇದೆ, 6 ಕೆ.ಎಸ್.ಆರ್.ಪಿ ಪ್ಲಟೂನ್, 04 ಡಿ.ಎ.ಆರ್ ಪ್ಲಟೂನ್ ಮತ್ತು 300 ಜನ ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ  ಸಾವಿರದ ಐನೂರಕ್ಕೂ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್‍ಗಾಗಿ ನಿಯೋಜನೆ ಮಾಡಲಾಗಿತ್ತು. ಜೊತೆಗೆ 02 ಫೈರ್ ಟೆಂಡರ್‍ಗಳು, 01 ಆಂಬುಲೆನ್ಸ್ ವಾಹನವನ್ನು ಸಹ ನಿಯೋಜಿಸಲಾಗಿತ್ತು.


                       *************************************************






No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು