Sunday, 17 September 2017

ವಿಶ್ವಕರ್ಮ ಸಮುದಾಯ ಶಿಕ್ಷಣಕ್ಕೂ ಆದ್ಯತೆ ನೀಡಲು ಜಿ,ಪಂ.ಅಧ್ಯಕ್ಷರ ಸಲಹೆ (17-09-2017) VEERABHADRA SWAMY S RAAMASAMUDRA

   

ವಿಶ್ವಕರ್ಮ ಸಮುದಾಯ ಶಿಕ್ಷಣಕ್ಕೂ ಆದ್ಯತೆ ನೀಡಲು ಜಿ,ಪಂ.ಅಧ್ಯಕ್ಷರ ಸಲಹೆ

ಚಾಮರಾಜನಗರ, ಸೆ. 17- ವಿಶ್ವಕರ್ಮ ಸಮುದಾಯ ಶೈಕ್ಷಣಿಕಾವಾಗಿ ಮುಂದೆ ಬರಲು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಸಲಹೆ ಮಾಡಿದರು.
ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಕರ್ಮ ಸಮುದಾಯ ಪಂಚ ಕಸುಬುಗಳಿಂದ ವಿಶ್ವದಲ್ಲೇ ಮಾನ್ಯತೆ ಪಡೆದುಕೊಂಡಿದೆ. ದಿನನಿತ್ಯದ ಬದುಕಿನಲ್ಲಿ ಅವಶ್ಯವಿರುವ ಪರಿಕರಗಳು ವಿಶೇಷವಾಗಿ ರೈತ ಸಮುದಾಯದ ಕೃಷಿ ಚಟುವಟಿಕೆಗಳಿಗೆ ಬೇಕಿರುವ ಉಪಕರಣಗಳ ತಯಾರಿಕೆಯಲ್ಲಿ ಸಿದ್ದಹಸ್ತರಾಗಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಕುಲಕಸುಬು ಜೊತೆಗೆ ಶೈಕ್ಷಣಿಕ ರಂಗದಲ್ಲಿ ಆಸಕ್ತಿ ವಹಿಸಬೇಕು ಎಂದು ರಾಮಚಂದ್ರ ತಿಳಿಸಿದರು.

ರಾಜ್ಯ ಸರ್ಕಾರ ಶಿಕ್ಷಣ ಕೇತ್ರದ ಪ್ರಗತಿಗೆ ಹಲವಾರು ಅನುಕೂಲಕರ ಯೋಜನೆಗಳನ್ನು ರೂಪಿಸಿದೆ. ಎಲ್ಲರೂ ಶಿಕ್ಷಣ ಪಡೆದು ಸಮಾಜದಲ್ಲಿ ಅಭಿವೃದ್ಧಿಯಾಗಬೇಕೆಂದು ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬರು ಅಧ್ಯಯನ, ವ್ಯಾಸಂಗಕ್ಕೆ ಮಹತ್ವ ನೀಡಬೇಕೆಂದು ರಾಮಚಂದ್ರ ಅಭಿಪ್ರಾಯಪಟ್ಟರು.

ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ವಿಶ್ವಕರ್ಮ ಸಮುದಾಯ ಪ್ರಸ್ತುತ ಸಂದರ್ಭಗಳಿಗೆ ಅನುಗುಣವಾಗಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ನೂತನ ಆವಿಷ್ಕಾರ ತಂತ್ರಜ್ಞಾನದ ಬಗ್ಗೆ ತಿಳಿವಳಿಕೆ ಹೊಂದಲು ಶಿಕ್ಷಣ ಅತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕೆಂದು ಹೇಳಿದರು.


ವಿಶ್ವಕರ್ಮ ಸಮುದಾಯಕ್ಕೆ ಸರ್ಕಾರ ಪ್ರತ್ಯೇಕವಾಗಿ ನಿಗಮ ಸ್ಥಾಪಿಸಿದೆ. ಈ ಮೂಲಕ ಸಮುದಾಯದ ಜನತೆಗೆ ನೆರವಾಗುವ ಯೋಜನೆಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ನಿಗಮಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕೆಂದು ಮನವಿ ಮಾಡಲಾಗಿದೆ. ಸರ್ಕಾರ ಒದಗಿಸಲಿರುವ ಸೌಲಭ್ಯಗಳನ್ನು ಪಡೆಯಲು ವಿಶ್ವಕರ್ಮ ಸಮಾಜದ ಜನರು ಮುಂದೆ ಬರಬೇಕು ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.

ತಾಲ್ಲೂಕು ಪಂಚಾಂiÀiತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು ಮಾತನಾಡಿ ವಿಶ್ವಕರ್ಮ ಸಮುದಾಯ ಜನರು ನಿರಂತರ ಕಾಯಕ ಯೋಗಿಗಳು ಆಗಿದ್ದಾರೆ. ಬೇಲೂರು, ಹಳೆಬೀಡುವಿನಂತಹ ಐತಿಹಾಸಿಕ ವಾಸ್ತುಶಿಲ್ಪ  ದೇವಾಲಯಗಳನ್ನು ರಚಿಸುವ ಮೂಲಕ ಜನಮಾನಸದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಇಂತಹ ನೈಪುಣ್ಯತೆ ಹೊಂದಿರುವ ಸಮುದಾಯದ ಕೊಡುಗೆ ಇಂದಿಗು ಮುಂದುವರೆದಿದೆ ಎಂದು ಶ್ಲಾಘಿಸಿದರು.

ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿಸಮಿತಿ ಅಧ್ಯಕ್ಷರಾದ ಕೆ.ಪಿ.ಸದಾಶಿವಮೂರ್ತಿ, ಮುಖ್ಯಕಾಂiÀರ್iನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಅಮಚವಾಡಿ ಕಾಲೇಜು ಉಪನ್ಯಾಸಕರಾದ ಪ್ರಭುಸ್ವಾಮಿಅವರು ಶ್ರೀ ವಿಶ್ವಕರ್ಮರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಕನ್ನಡ ಮತ್ತು ಸಂಸೃತಿ ಇಲಾಖೆ ಸಹಾಯಕನಿರ್ದೇಶಕರಾದ ಡಿ.ನಾಗವೇಣಿ, ಸಮಾಜದ  ಮುಖಂಡರಾದ ಸೋಮಣ್ಣಚಾರ್, ಕಾಂತರಾಜು, ಅನಂತು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ರಾಜ್ಯ ಸಚಿವರ ಜಿಲ್ಲಾ ಪ್ರವಾಸ  


ಚಾಮರಾಜನಗರ, ಸೆ. 17  ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ರಾಜ್ಯ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಸೆಪ್ಟೆಂಬರ್ 18 ಮತ್ತು 20ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಸೆ. 18ರಂದು ಬೆಳಿಗ್ಗೆ 11 ಗುಂಡ್ಲುಪೇಟೆಯಲ್ಲಿ ಸಾರ್ವಜನಿಕರನ್ನು ಭೇಟಿ ಅಹವಾಲು ಸ್ವೀಕರಿಸುವರು. 12 ಗಂಟೆಗೆ ಗುಂಡ್ಲುಪೇಟೆಯ ಆದರ್ಶ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವರು. ಸಂಜೆ 4 ಗಂಟೆಗೆ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಕ್ಷೇಮಾಭಿವೃದ್ಧಿ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಸೆ. 20ರಂದು ಬೆಳಿಗ್ಗೆ 10.30 ಗಂಟೆಗೆ ಗುಂಡ್ಲುಪೇಟೆ ತಾಲೂಕಿನ ಶಿವಪುರದಲ್ಲಿ ಪಶು ಚಿಕಿತ್ಸಾಲಯದ ಕಟ್ಟಡದ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 11.30 ಗಂಟೆಗೆ ಬೊಮ್ಮಲಾಪುರದಲ್ಲಿ ಪಶು ಚಿಕಿತ್ಸಾಲಯದ ಕಟ್ಟಡದ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12.30 ಗಂಟೆಗೆ ಸಾಗಡೆ, ಕೆಂಗಾಟಿ ಲೋಕೋಪಯೋಗಿ ರಸ್ತೆಗೆ ಗುದ್ದಲಿಪೂಜೆ ನೆರವೇರಿಸುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  





Saturday, 16 September 2017

ಭಯಕ್ಕೆ ಮತ್ತೋಂದು ಹೆಸರೇ ಭದ್ರ ವೀರಭದ್ರ ¨ RAMASAMUDRA S VEERABHADRA SWAMY

  ಭಯಕ್ಕೆ ಮತ್ತೋಂದು ಹೆಸರೇ ಭದ್ರ ವೀರಭದ್ರ ¨     


ಭಾಗವದ್ವಜಕ್ಕೆ ಬೆಂಕಿ: ಆರೋಪಿಗಳ ಬಂದನ, ಮಗ ತಪ್ಪು ಮಾಡಿಲ್ಲ ಎಂದು ಠಾಣೆ ಮುಂದೆ ಪೋಷಕರ ಆಕ್ರಂದನ (19-09-2017)

ಭಾಗವದ್ವಜಕ್ಕೆ ಬೆಂಕಿ: ಆರೋಪಿಗಳ ಬಂಧನ.    .VSS

ಚಾಮರಾಜನಗರ ಪಟ್ಟಣ ಠಾಣೆ ಮುಂದೆ ಪೊಲೀಸ್ ಬಂದೂಬಸ್ತ್ 



ಠಾಣೆ ಮುಂದೆ ಪೋಷಕರ ಅಳಲು..VSS


   ಚಾಮರಾಜನಗರ : ಗಾಳೀಪುರ ಬಡಾವಣೆಯ ದೇವಾಸ್ಥಾನದ ಮೇಲೆ ಹಾಕಲಾಗಿದ್ದ ದ್ವಜ ಕಿತ್ತು ಗಾಡಿ ಮೇಲೆ ಇಟ್ಟು  ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ಇಬ್ಬರನ್ನು ಬಂದಿಸಿದ್ದಾರೆ.
ಆರೋಪಿಗಳಾದ ಗಾಳಿಪುರ ಬಡಾವಣೆ ಪ್ರಕಾಶ. ಆರ್. ಮತ್ತು ಬಂಗಾರು ಎಂದು ತಿಳಿದುಬಂದಿದೆ.
13/14-09-2017 ರಂದು ಮಧ್ಯರಾತ್ರಿ ಸುಮಾರು 1-00 ಗಂಟೆ ಸಮಯದಲ್ಲಿ ತಮ್ಮ ಮನೆಯ ಮುಂಭಾಗ ನಿಲ್ಲಿಸಿದ್ದ ತನ್ನ (ಕೆಎ-10 ಕ್ಯೂ-5726 ರ) ಮೋಟಾರ್ ಬೈಕ್ ಮತ್ತು ಪಕ್ಕದಲ್ಲೆ ಕೇಸರಿ ಬಣ್ಣದ ಚಿಕ್ಕ ಧ್ವಜ ಮತ್ತು ಗಣಪತಿ ದೇವಸ್ಥಾನದ ಮೇಲೆ ಕಟ್ಟಿದ್ದ ಕೇಸರಿ ಬಣ್ಣದ ಧ್ವಜವನ್ನು ಕಿತ್ತು ಬೈಕಿನ ಹತ್ತಿರ ಕಿಡಿಗೇಡಿಗಳು ಬೆಂಕಿ ಹಾಕಿರುವುದು ದಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟಾಗಿರುತ್ತದೆ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಗಾಳಿಪುರ ಬಡಾವಣೆಯ ಶ್ರೀ, ರಂಗಸ್ವಾಮಿನಾಯಕ ಎಂಬುವರು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು.

VSS


ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ ಮೊ.ನಂ: 258/2017 ಕಲಂ: 295(ಎ), 427 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಈಗ ಆರೋಪಿಗಳಿಬ್ಬರನ್ನು ಬಂದಿಸಿದ್ದಾರೆ
ಆರಕ್ಷಕ ಅಧೀಕ್ಷಕರಾದ ಶ್ರೀಧರ್ಮೇಂದರ್ ಕುಮಾರ್ ಮೀನಾ ರವರ ನಿರ್ದೇಶನದಂತೆ ಹಾಗೂ ಅಪರ ಆರಕ್ಷಕ ಅಧೀಕ್ಷಕರಾದ ಶ್ರೀಮತಿ ಗೀತಾ ರವರು ಹಾಗೂ ಚಾಮರಾಜನಗರ ಉಪವಿಭಾಗ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್. ಈ. ಗಂಗಾಧರಸ್ವಾಮಿ ರವರ  ಮಾರ್ಗದರ್ಶನದಲ್ಲಿ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಶ್ರೀ ಮಹದೇವಯ್ಯ ರವರು ಹಾಗೂ ಪಿ.ಎಸ್.ಐ ಎಸ್. ಎಲ್ ಸಾಗರ್, ಹಾಗೂ ಸಿಬ್ಬಂದಿಯವರು ಮಾಹಿತಿ ಸಂಗ್ರಹಿಸಿದ್ದರು. ಆರೋಪಿಗಳನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಅವರನ್ನು 14 ದಿನಗಳ ಕಾಲ  ನ್ಯಾಯಾಂಗ ಬಂದನದ ವಶಕ್ಕೆ ನೀಡಿದ್ದಾರೆ.
***********************************************
ರಾಮಸಮುದ್ರ ಎಸ್ ವೀರಭದ್ರಸ್ವಾಮಿ
*******************************************

ಬಂಧನ ಖಂಡಿಸಿ ಪ್ರತಿಭಟನೆ: ತಮ್ಮ ಮಕ್ಕಳು ತಪ್ಪು ಮಾಡಿಲ್ಲ. ಅಮಾಯಕರನ್ನು ಬಂದಿಸಿ ಕರೆದೊಯ್ದಿದ್ದಾರೆ ಎಂದು ಆರೋಪಿಸಿ ಠಾಣೆ ಮುಂದೆ ಪ್ರತಿಭಟಿಸಿ ಅಳಲು ತೋಡಿಕೊಂಡರು. 

*****************************************************************************

 ಮನುಕುಲದ ಒಳಿತಿಗೆ ನಾರಾಯಣಗುರು ಅವಿರತ ಶ್ರಮ : ಜಿ.ಪಂ. ಅಧ್ಯಕ್ಷ ಎಂ. ರಾಮಚಂದ್ರ  

ಚಾಮರಾಜನಗರ, ಸೆ. 16:- ಬ್ರಹ್ಮಶ್ರೀ ನಾರಾಯಣ ಗುರು ಅವರು ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂದು ಸಾರುವ ಮೂಲಕ ಇಡೀ ಮನುಕುಲದ ಒಳಿತಿಗೆ ಅಪಾರವಾಗಿ ಶ್ರಮಿಸಿದರು ಎಂದು ಜಿಲ್ಲಾ ಪಂಚಾಯತ್  ಅಧ್ಯಕ್ಷÀರಾದ ಎಂ. ರಾಮಚಂದ್ರ ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು  ಮಾತನಾಡಿದರು.
ನಾರಾಯಣ ಗುರು ಅವರು ಕೇರಳದಲ್ಲಿ ಜನಿಸಿ ಇಡೀ ದೇಶಾದ್ಯಂತ ಸಂಚರಿಸಿ ವೈಚಾರಿಕತೆ ಬಗ್ಗೆ ಸಾರಿದರು. ದೀನದಲಿತರು, ಶೋಷಿತರಿಗೆ ಭರವಸೆ ನೀಡಿ ಅವರ ಉನ್ನತಿಗೆ ಹಲವಾರು ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದರು. ಎಲ್ಲರೂ ಒಂದೇ ಎಂಬ ಮೌಲ್ಯವನ್ನು ಪ್ರತಿಪಾದಿಸಿದರು ಎಂದರು.
ಶಿಕ್ಷಣದಿಂದ ಮಾತ್ರ ಸರ್ವಾಂಗೀಣ ಪ್ರಗತಿ ಸಾಧ್ಯವೆಂಬುದನ್ನು ಇಂದು ಕಂಡುಕೊಂಡಿದ್ದೇವೆ. ಆದರೆ ನಾರಾಯಣಗುರು ಅವರು ಹಿಂದಿನ ಶತಮಾನದಲ್ಲೇ ಶಿಕ್ಷಣದ ಮಹತ್ವವನ್ನು ಮನಗಂಡಿದ್ದರು. ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟರು. ಈ ಮೂಲಕ ದೇಶಕ್ಕೆ ಮಾದರಿಯಾದರು ಎಂದು ರಾಮಚಂದ್ರ ತಿಳಿಸಿದರು.
ಎಲ್ಲಾ ಬಡವರು, ನೊಂದವರ ಪರ ನಿಂತು ಅವರ ಅಭ್ಯುದಯಕ್ಕೆ ಶ್ರಮಿಸಿದ ಮಹಾಪುರುಷರು, ದಾರ್ಶನಿಕರು ಹಾಗೂ ಸಮಾಜಸುಧಾರಕರ ಜಯಂತಿ ಕಾರ್ಯಕ್ರಮವನ್ನು ನಿರ್ದಿಷ್ಟ ಜಾತಿಗೆ ಸೀಮಿತಗೊಳಿಸಿ ಭಾಗವಹಿಸುವುದು ಸಲ್ಲದು. ಎಲ್ಲರೂ ಎಲ್ಲಾ ವರ್ಗಕ್ಕೆ ಒಳ್ಳೆಯದನ್ನೇ ಬಯಸಿದ್ದಾರೆ. ಹೀಗಾಗಿ ಎಲ್ಲಾ ಜಯಂತಿ ಕಾರ್ಯಕ್ರಮಗಳಲ್ಲಿ ಸರ್ವ ಸಮುದಾಯಗಳು ಭಾಗವಹಿಸುವಂತಾಗÀಬೇಕು ಎಂದು ರಾಮಚಂದ್ರ ಆಶಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಜಾತೀಯತೆ ಹೋಗಬೇಕೆಂಬ ಉದ್ದೇಶದಿಂದ ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್, ಬ್ರಹ್ಮಶ್ರೀ ನಾರಾಯಣಗುರು ಅವರು ವಿಶೇಷವಾಗಿ ಕಾಳಜಿ ವಹಿಸಿದ್ದರು. ಸಮಾಜದಲ್ಲಿ ಸಮಾನತೆ ಇರಬೇಕೆಂಬ ಆಶಯ ಆದರ್ಶಗಳು ಈಡೇರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮಹಾಪುರುಷರ, ದಾರ್ಶನಿಕರ ಜಯಂತಿ ಆಚರಣೆ ಕಾರ್ಯಕ್ರಮಗಳಿಂದ ಉತ್ತಮ ಮೌಲ್ಯಗಳ ಅರಿವು ಸಹ ಹೆಚ್ಚಾಗುತ್ತಿದೆ. ಹೀಗಾಗಿ ಇಂತಹ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಮಾಜದ ಉನ್ನತಿ ಮಾರ್ಗದರ್ಶನಕ್ಕೆ ಪೂರಕವಾಗುವ ಅವಕಾಶಗಳÀು ಸದುಪಯೋಗವಾಗಬೇಕು ಎಂದು.
ಪ್ರಗತಿಪರ ಸಾಹಿತಿ ಹಾಗೂ ಪತ್ರಕರ್ತರಾದ ಡಾ, ಕೃಷ್ಣಮೂರ್ತಿ ಚಮರಂ ಮಾತನಾಡಿ ನಾರಾಯಣಗುರು ಅವರು ಜಾತಿ ವ್ಯವಸ್ಥೆಯನ್ನು ಮೆಟ್ಟಿನಿಂತು ಮಾನವಹಕ್ಕುಗಳನ್ನು ತಂದುಕೊಡಬೇಕೆಂಬ ಸದುದ್ದೇಶದಿಂದ ಅವಿರತವಾಗಿ ಶ್ರಮಿಸಿದರು. ಸಾಮಾಜಿಕ ಅಸಮಾನತೆ ಹೋಗಲಾಡಿಸಲು ನಿರಂತರವಾಗಿ ತೊಡಗಿಕೊಂಡರು. ಸರ್ವಧರ್ಮ ಸಮನ್ವಯ ಸಭೆ ಏರ್ಪಡಿಸಿ ಎಲ್ಲಾ ಧರ್ಮಗಳ ಸಾರವು ಮಾನವಕುಲದ ಒಳಿತನ್ನೇ ಬಯಸಲಿದೆ ಎಂಬ ಉದಾತ್ತ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಮುಂದಾದರು ಎಂದರು.
ಸಮಾನತÉಯ ಭಾವ ಬರದಿದ್ದರೆ ಅಖಂಡ ಭಾರತ ಕಟ್ಟಲು ಸಾಧ್ಯವಿಲ್ಲ ಎಂದಿದ್ದ ನಾರಾಯಣಗುರು ಸೇರಿದಂತೆ ಸರ್ವರ ಕಲ್ಯಾಣ ಬಯಸಿದ ಮಹಾನ್ ದಾರ್ಶನಿಕರು ಸಮಾಜಸುಧಾರಕ ತತ್ವ ಸಿದ್ದಾಂತಗಳನ್ನು ಮುಂದಿನ ಪೀಳಿಗೆಗೂ ವರ್ಗಾಯಿಸುವ ಸಾಮಾಜಿಕ ಜವಾಬ್ದಾರಿ ಎಲ್ಲರಲ್ಲೂ ಬರಬೇಕಿದೆ. ಸದೃಢ ಸಮಾಜ ಕಟ್ಟುವ ದಿಸೆಯಲ್ಲಿ ಎಲ್ಲರೂ ಶಪಥ ಮಾಡಬೇಕಿದೆ ಎಂದು ಕೃಷ್ಣಮೂರ್ತಿ ಚಮರಂ ಅಭಿಪ್ರಾಯ ವ್ಯಕ್ತಪಡಿಸಿದರು.
ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಎಂ.ಚಿನ್ನಸ್ವಾಮಿ ಮಾತನಾಡಿದರು. ಎಪಿಎಂಸಿ ಅಧ್ಯಕ್ಷರಾದ ಬಿ,ಕೆ. ರವಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಉಪವಿಭಾಗಾಧಿಕಾರಿ ಎ.ಜೆ. ರೂಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಿ. ನಾಗವೇಣಿ, ಮುಖಂಡರಾದ ಜಯಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸೆಪ್ಟೆಂಬರ್ 17ರಂದು ನಗರದಲ್ಲಿ ವಿಶ್ವಕರ್ಮ ಜಯಂತಿ

ಚಾಮರಾಜನಗರ, ಸೆ. 16:- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ವಿಶ್ವಕರ್ಮ ಅವರ ಜಯಂತಿ ಕಾರ್ಯಕ್ರಮವನ್ನು ಸೆಪ್ಟಂಬರ್ 17ರಂದು ಬೆಳಗ್ಗೆ 11 ಗಂಟೆಗೆ ನಗರದ ಜೆ. ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಉದ್ಘಾಟನೆ ನೆರವೇರಿಸುವರು. ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ಘನ ಉಪಸ್ಥಿತಿ ವಹಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಬ್ರಹ್ಮರ್ಷಿ ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಷನೆ ಮಾಡುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಅವರುಗಳು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಮೈಸೂರಿನ ಪ್ರಸಾರಾಂಗಣದ ಸಿ. ನಾಗಣ್ಣಚಾರ್ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು. ಬೆಳಿಗ್ಗೆ 9.30 ಗಂಟೆಗೆ ವೇದಿಕೆಯಲ್ಲಿ ಕಾಡಹಳ್ಳಿಯ ರಾಜಮೂರ್ತಿ ಮತ್ತು ತಂಡದವರಿಂದ ಹಾಡುಗಾರಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಗರ್ಭಿಣಿ, ಬಾಣಂತಿಯರಿಗೆ ಪೌಷ್ಠಿಕ ಬಿಸಿ ಊಟ ನೀಡುವ ಮಾತೃಪೂರ್ಣ ಯೋಜನೆಗೆ ವ್ಯಾಪಕ ಸಿದ್ಧತೆ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ, ಸೆ. 16: ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಠಿಕ ಬಿಸಿಯೂಟ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮಾತೃಪೂರ್ಣ ಯೋಜನೆÉ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಸಿದ್ಧತೆ ನಡೆಯುತ್ತಿದೆ.
ಗರ್ಭಿಣಿ ಹಾಗೂ ಬಾಣಂತಿಯರಿಗೆ ಸಮತೋಲಿತ ಪೌಷ್ಠಿಕ ಆಹಾರವನ್ನು ಪ್ರತಿ ತಿಂಗಳಲ್ಲಿ 25 ದಿನಗಳ ಕಾಲ ನೀಡುವ ಮಾತೃಪೂರ್ಣ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಅಕ್ಟೋಬರ್ 2ರಂದು ಜಿಲ್ಲಾದ್ಯಂತ ಚಾಲನೆಗೊಳ್ಳಲಿದೆ.
ಪೂರಕ ಪೌಷ್ಠಿಕಾಂಶಗಳನ್ನು ನೀಡುವುದರಿಂದ ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯ ಸುಧಾರಣೆಯಾಗಲಿದೆ. ಹೆರಿಗೆ ಸಮಯದಲ್ಲಿ ಗರ್ಭಿಣಿ, ತಾಯಿ ಶಿಶು ಮರಣ ಪ್ರಮಾಣ ತಡೆಗಟ್ಟಲು, ಕಡಿಮೆ ತೂಕದ ಶಿಶುಗಳ ಜನನ ನಿಯಂತ್ರಣ, ರಕ್ತ ಹೀನತೆ ಹೋಗಲಾಡಿಸುವ ಉದ್ದೇಶದೊಂದಿಗೆ ಮಾತೃಪೂರ್ಣ ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ.
ಪ್ರತಿ ಫಲಾನುಭವಿ ಊಟಕ್ಕೆ 150 ಗ್ರಾಂ ಅಕ್ಕಿ, 30 ಗ್ರಾಂ ತೊಗರಿಬೇಳೆ, 16 ಗ್ರಾಂ ಎಣ್ಣೆ, 200 ಎಂಎಲ್ ಹಾಲು, 1 ಮೊಟ್ಟೆ, 50 ಗ್ರಾಂ ತರಕಾರಿ, ಬೆಲ್ಲ ಹಾಗೂ ಕಡಲೆಬೀಜದಿಂದ ಮಾಡಿದ ಚಿಕ್ಕಿ ಅಗತ್ಯಾನುಸಾರವಾಗಿ ಮಸಾಲ ಪದಾರ್ಥಗಳನ್ನು ಬಳಸಲಾಗುತ್ತದೆ.
ಯೋÀಜನೆಯಡಿ ಮಧಾÀಹ್ನದ ಒಂದು ಪೂರ್ಣ ಪೌಷ್ಠಿಕ ಬಿಸಿ ಊಟದಲ್ಲಿ ಅನ್ನ, ಸಾಂಬಾರ್, ಪಲ್ಯದ ಜತೆಗೆ ಬೇಯಿಸಿದ ಮೊಟ್ಟೆ, 200 ಮಿಲಿ ಹಾಲು ನೀಡಲಾಗುತ್ತದೆ. ಮೊಟ್ಟೆ ತಿನ್ನದವರಿಗೆ ಮೊಳಕೆ ಬರಿಸಿದ ಕಾಳು ನೀಡಲಾಗುತ್ತದೆ. ಇದರಿಂದಾಗಿ ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ಒಂದು ದಿನಕ್ಕೆ ಅಗತ್ಯವಿರುವ ಪ್ರೋಟೀನ್ ಕ್ಯಾಲರಿ ಮತ್ತು ಕ್ಯಾಲ್ಸಿಯಂ ಅಂಶಗಳು ಸುಮಾರು 40 ರಿಂದ 45ರಷ್ಟು ಪೌಷ್ಠಿಕ ಬಿಸಿ ಊಟದಲ್ಲಿ ಲಭ್ಯವಾಗಲಿದೆ.
ಅಂಗನವಾಡಿ ಕೇಂದ್ರಗಳಲ್ಲಿಯೇ ಪೌಷ್ಠಿಕಾಂಶದ ಅಡುಗೆ ತಯಾರಿಸಿ ನೀಡಲಾಗುತ್ತದೆ. ಊಟದ ನಂತರ ಕಬ್ಬಿಣಾಂಶದ ಮಾತ್ರೆಯನ್ನು ಸೇವಿಸಲು ಬೆಂಬಲ ನೀಡುವ ಯೋಜನೆಯೂ ಕಾರ್ಯಕ್ರಮದಲ್ಲಿ ಸೇರಿದೆ.
ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರ ಆರೈಕೆ, ಪೌಷ್ಠಿಕಾಂಶ ಆಹಾರ ಸೇವನೆ, ನಿಯಮಿತ ಆರೋಗ್ಯ ತಪಾಸಣೆ ಮತ್ತು ಆಪ್ತ ಸಮಾಲೋಚನೆ ಸೇವೆಯೂ ಸಹ ಲಭಿಸಲಿದೆ. ಆರೋಗ್ಯ ಬೆಳವಣಿಗೆ ನಿರ್ವಹಣೆ, ಮಾಹಿತಿ ಸೇವೆಯನ್ನು ಸಹ ನೀಡಲಾಗುತ್ತದೆ.
ಪೌಷ್ಠಿಕ ಆಹಾರ ತಯಾರಿಕೆಗೆ ಬೇಕಿರುವ ಪಾಕೋಪಕರಣ, ತೂಕದ ಯಂತ್ರ ಖರೀದಿಗೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ಜಿಲ್ಲೆಯಲ್ಲಿರುವ 5 ಶಿಶು ಅಭಿವೃದ್ಧಿ ಯೋಜನೆಯಡಿ (ಚಾಮರಾಜನಗರ, ಸಂತೆಮರಹಳ್ಳಿ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ) ಒಟ್ಟು 1371 ಅಂಗನವಾಡಿ ಹಾಗೂ 50 ಮಿನಿ ಅಂಗನವಾಡಿ ಕೇಂದ್ರಗಳಿವೆ. ಈ ಎಲ್ಲಾ ಕೇಂದ್ರಗಳ ಮೂಲಕ ಮಾತೃಪೂರ್ಣ ಯೋÀಜನೆ ಅನುಷ್ಠಾನ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಭರದ ಸಿದ್ಧತೆ ಕೈಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 16784 ಫಲಾನುಭವಿಗಳನ್ನು ಗುರುತಿಸಲಾಗಿದೆ.  ಜಿಲ್ಲೆಯಲ್ಲಿ ಒಟ್ಟು 8570 ಗರ್ಭಿಣಿಯರು ಹಾಗೂ 8204 ಬಾಣಂತಿಯರನ್ನು ಗುರುತಿಸಿ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯ 16 ಹೋಬಳಿ ಕೇಂದ್ರ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಯೋಜನೆಯ ಮಹತ್ವ ಪ್ರಯೋಜನ ಹಾಗೂ ಅನುಷ್ಠಾನದ ಬಗ್ಗೆ ಸಭೆಗಳ ಮೂಲಕ ಮಾಹಿತಿ ನೀಡಲಾಗಿದೆ. ಬಾಲವಿಕಾಸ ಸಮಿತಿ ಸಭೆಗಳಲ್ಲೂ ಯೋಜನೆಗೆ ಸಂಬಂಧಿಸಿದಂತೆ ಮನವರಿಕೆ ಮಾಡಿಕೊಡಲಾಗಿದೆ.
ಯೋಜನೆ ಯಶಸ್ವಿ ಅನುಷ್ಠಾನಕ್ಕಾಗಿ ಜನಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳು, ಸಂಘಸಂಸ್ಥೆಗಳ ಸಹಕಾರ ಕೋರಿದ್ದು ಯೋಜನೆ ಸಂಬಂಧ ಮಾಹಿತಿಯನ್ನು ಒದಗಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಯೋಜನೆ ಜಾರಿಯಲ್ಲಿ ನಿರ್ವಹಿಸುವ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಪೂರ್ಣ ಪ್ರಮಾಣದಲ್ಲಿ ಎಲ್ಲಾ ಸಿದ್ಧತೆಯೊಂದಿಗೆ ಮಾತೃಪೂರ್ಣ ಯೋಜನೆ ಆರಂಭಿಸಲು ಸಜ್ಜಾಗುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಬಸವರಾಜು ಅವರು ಮಾಹಿತಿ ನೀಡಿದರು.
**************************************************

ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ರಾಜ್ಯ ಸಚಿವರ ಜಿಲ್ಲಾ ಪ್ರವಾಸ  

ಚಾಮರಾಜನಗರ, ಸೆ. 16 :- ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ರಾಜ್ಯ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಸೆಪ್ಟೆಂಬರ್ 18 ಮತ್ತು 20ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಸೆ. 18ರಂದು ಬೆಳಿಗ್ಗೆ 11 ಗುಂಡ್ಲುಪೇಟೆಯಲ್ಲಿ ಸಾರ್ವಜನಿಕರನ್ನು ಭೇಟಿ ಅಹವಾಲು ಸ್ವೀಕರಿಸುವರು. 12 ಗಂಟೆಗೆ ಗುಂಡ್ಲುಪೇಟೆಯ ಆದರ್ಶ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡುವರು. ಸಂಜೆ 4 ಗಂಟೆಗೆ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಕ್ಷೇಮಾಭಿವೃದ್ಧಿ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸೆ. 20ರಂದು ಬೆಳಿಗ್ಗೆ 10.30 ಗಂಟೆಗೆ ಗುಂಡ್ಲುಪೇಟೆ ತಾಲೂಕಿನ ಶಿವಪುರದಲ್ಲಿ ಪಶು ಚಿಕಿತ್ಸಾಲಯದ ಕಟ್ಟಡದ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 11.30 ಗಂಟೆಗೆ ಬೊಮ್ಮಲಾಪುರದಲ್ಲಿ ಪಶು ಚಿಕಿತ್ಸಾಲಯದ ಕಟ್ಟಡದ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12.30 ಗಂಟೆಗೆ ಸಾಗಡೆ, ಕೆಂಗಾಟಿ ಲೋಕೋಪಯೋಗಿ ರಸ್ತೆಗೆ ಗುದ್ದಲಿಪೂಜೆ ನೆರವೇರಿಸುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    

ವ್ಯಾಪಾರ ವಹಿವಾಟು ನಷ್ಟ ತಪ್ಪಿಸಲು ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಬೇಕು 

ಚಾಮರಾಜನಗರ, ಸೆ. 16:- ಗ್ರಾಹಕರು ಅವರಿಗಿರುವ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಿದಾಗ ವ್ಯಾಪಾರ ವಹಿವಾಟು ಸೇವೆಯಲ್ಲಿ ಉಂಟಾಗುವ ನಷ್ಟದಿಂದ ತಪ್ಪಿಸಿಕೊಳ್ಳಬಹುದು ಎಂದು ಅಹಾರ ಇಲಾಖೆಯ ಆಹಾರ ನಿರೀಕ್ಷಕರಾದ ವಿಶ್ವನಾಥ ತಿಳಿಸಿದರು.
ಚಾಮರಾಜನಗರ ತಾಲೂಕಿನ ಮುತ್ತಿಗೆ ಗ್ರಾಮದಲ್ಲಿಂದು ನಡೆದ ಗ್ರಾಹಕರ ಅದಾಲತ್ ಉದ್ಘಾಟಿಸಿ ಅವರು ಮಾಹಿತಿ ನೀಡಿದರು.
ಗ್ರಾಹಕರು ಯಾವುದೇ ಸರಕು ಕೊಂಡಾಗ, ಸೇವೆ ಪಡೆದಾಗ ಸಂಬಂಧಪಟ್ಟ ಅಂಗಡಿ ಮಾಲೀಕರು, ಸೇವಾ ಸಂಸ್ಥೆಗಳಿಂದ ರಶೀದಿ ಪಡೆಯಬೇಕು. ಸೇವೆ ಅಥವಾ ವಸ್ತುವಿನಲ್ಲಿ ನ್ಯೂನತೆ ಕಂಡುಬಂದಾಗ ಗ್ರಾಹಕರ ವೇದಿಕೆಯಲ್ಲಿ ದೂರು ನೀಡಿ ಪರಿಹಾರ ಕಂಡುಕೊಳ್ಳಬಹುದು ಎಂದರು.
ಗ್ರಾಹಕರ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ 90 ದಿನದೊಳಗೆ ಪ್ರಕರಣ ಇತ್ಯರ್ಥವಾಗಲಿದೆ. ದೋಷಪೂರಿತ ವಸ್ತು, ಸೇವಾನ್ಯೂನತೆ ಮಾಡಿದ ಸಂಬಂಧಪಟ್ಟ ಸಂಸ್ಥೆಗಳಿಂದ ಗ್ರಾಹಕರಿಗೆ ಪರಿಹಾರ ನೀಡಲು ಆದೇಶಿಸುತ್ತದೆ ಎಂದರು.
ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಲಹೆಗಾರರಾದ ಶಿವರಾಜಮ್ಮ ಮಾತನಾಡಿ ಯಾವುದೇ ಸರಕು, ಸೇವೆಯಲ್ಲಿ ಗ್ರಾಹಕರು ಮೋಸ ಹೋದಾಗ ಗ್ರಾಹಕ ವೇದಿಕೆಯಲ್ಲಿ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಿದರೆ ನಾವು ಅದನ್ನು ಪರಿಶೀಲಿಸಿ ಅಗತ್ಯ ಪರಿಹಾರ ದೊರಕಿಸಲು ಮುಂದಾಗಲು ನರವಾಗುತ್ತೇವೆ ಎಂದರು.
ಶ್ರೀಗಂಧ ಮಹಿಳಾ ಅಭಿವೃದ್ದಿ ಸಂಘದ ಉಪಾಧ್ಯಕ್ಷರಾದ ಮಹದೇವಮ್ಮ, ನ್ಯಾಯಬೆಲೆ ಅಂಗಡಿ ಮಾಲೀಕರಾದ ಪ್ರಕಾಶ್, ಮುಖಂಡರಾದ ಸಿದ್ದರಾಮೇಗೌಡ, ಬೀರೆಗೌಡ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


































ವಿದ್ಯಾರ್ಥಿಗಳ ಬಹುಮುಖ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಪುಟ್ಟರಂಗಶೆಟ್ಟಿ (15-09-2017)

                                                                    

ವಿದ್ಯಾರ್ಥಿಗಳ ಬಹುಮುಖ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಪುಟ್ಟರಂಗಶೆಟ್ಟಿ 

ಚಾಮರಾಜನಗರ, ಸೆ. 15:- ವಿದ್ಯಾರ್ಥಿಗಳು ಪಾಠ, ಪ್ರವಚನಗಳಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಬಹುಮುಖ ಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ನಗರದ ಸಿ.ಆರ್. ಬಾಲರಪಟ್ಟಣ ಪ್ರೌಢಶಾಲೆಯಲ್ಲಿಂದು ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳಲ್ಲಿ ಹಲವಾರು ಬಗೆಯ ಪ್ರತಿಭೆಯಿದೆ. ಅದು ಅನಾವರಣಗೊಳ್ಳಲು ಶಿಕ್ಷಕರು ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಸೂಕ್ತ ವೇದಿಕೆ ಒದಗಿಸಿಕೊಡಬೇಕು. ವಿದ್ಯಾರ್ಥಿಗಳು ವ್ಯಾಸಂಗಕ್ಕೆ ನೀಡುವಷ್ಟೆ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಾದ ಕಲೆ. ಕ್ರೀಡೆ, ಜಾನಪದ ಸಂಸ್ಕøತಿ ಬಿಂಬಿಸುವಂತಹ ಚಟುವಟಿಕೆಗಳಲ್ಲಿ ಹೆಚ್ಚು ತೋಡಗಿಸಿಕೊಳ್ಳಬೇಕು. ಆ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿ ಕಡ್ಡಾಯ ಶಿಕ್ಷಣ ನೀತಿ ಜಾರಿಗೊಳಿಸಿದೆ. ಪ್ರತಿಭಾ ಕಾರಂಜಿಯಂತಹ ಪ್ರೋತ್ಸಾಹದಾಯಕ ಕಾರ್ಯಕ್ರಮಗಳಿಗೆ ಧನಸಹಾಯ ನೀಡುತ್ತಿದೆ. ಶಿಕ್ಷಕರು ಇದನ್ನು ಸದ್ಭಳಕೆ ಮಾಡಿ ಮಕ್ಕಳಲ್ಲಿರುವ ಬಹುಮುಖ ಪ್ರÀತಿಭೆಯನ್ನು ಹೆಕ್ಕಿ ತೆಗೆಯಬೇಕು ಎಂದು ಪುಟ್ಟರಂಗಶೆÉಟ್ಟಿ ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ.ಸದಾಶಿವಮೂರ್ತಿ ಅವರು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮೊದಲು ಖಾಸಗಿ ಶಾಲೆಗಳಿಗೆ ಮಾತ್ರ ಸೀಮಿತವಾಗಿತ್ತು. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಸಹ ಇಂತಹ ಕಾರ್ಯಕ್ರಮ ರೂಪಿಸಿದೆ. ಮಕ್ಕಳು ಪ್ರತಿಭಾ ಕಾರಂಜಿ ಸ್ಫರ್ದೆಯಲ್ಲಿ ಭಾಗವಹಿಸಿ ವಿಜೇತರಾಗಿ ರಾಜ್ಯಮಟ್ಟದಲ್ಲಿ ತಮ್ಮ ಪ್ರತಿಭೆ ಹೊರಸೂಸಬೇಕು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ,ಎನ್. ಬಾಲರಾಜು, ಆರ್. ಬಾಲರಾಜು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ನೇತ್ರಾವತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶಿವಣ್ಣ, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಸಿದ್ದಮಲ್ಲಪ್ಪ, ಕಾರ್ಯಕ್ರಮದ ನೋಡೆಲ್ ಅಧಿಕಾರಿಗಳಾದ ರಾಜು, ಅಕ್ಷರ ದಾಸೋಹ ಅಧಿಕಾರಿ ಟಿ. ಸ್ವಾಮಿ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.


ಪರಿಶಿಷ್ಟ ಜಾತಿ, ಪಂಗÀಡದ ಪತ್ರಿಕೋದ್ಯಮ  ಪದವೀಧರ ಅಭ್ಯರ್ಥಿಗಳಿಗೆ ವೃತ್ತಿ ನಿರೂಪಣಾ ಕೌಶಲ್ಯ, ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ ಆಹ್ವಾನ

ಚಾಮರಾಜನಗರ, ಸೆ. 15 - ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪತ್ರಿಕೋದ್ಯಮ ಪದವಿ, ಸ್ನಾತಕೋತ್ತರ ಪದವಿ, ವಿದ್ಯುನ್ಮಾನ ಮಾಧ್ಯಮದಲ್ಲಿ ಪದವಿ, ಪಿ.ಜಿ. ಡಿಪ್ಲೊಮಾ ಪಡೆದ ಅಭ್ಯರ್ಥಿಗಳಿಗಾಗಿ ಆರು ದಿವಸಗಳ ವೃತ್ತಿ ನಿರೂಪಣಾ ಕೌಶಲ್ಯ, ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. 
     ಅಭ್ಯರ್ಥಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದಿಂದ ಅರ್ಜಿ ನಮೂನೆಯನ್ನು ಪಡೆಯಬಹುದು.  ಇಲ್ಲವೆ ಇಲಾಖೆಯ ವೆಬ್‍ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿiಟಿಜಿoಡಿmಚಿಣioಟಿ.gov.iಟಿ  ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.
     ಅಭ್ಯರ್ಥಿ ಹೆಸರು, ಜನ್ಮ ದಿನಾಂಕ, ಖಾಯಂ ವಿಳಾಸ, ವಿದ್ಯಾರ್ಹತೆ, ಜಾತಿ, ಶೇಕಡಾವಾರು ಅಂಕ, ಉದ್ಯೋಗ ವಿವರ ಈ ಹಿಂದೆ ಯಾವುದಾದರು ತರಬೇತಿ ಪಡೆದ ವಿವರ ಹಾಗೂ ವಿಶೇಷ ಸಾಧನೆಗಳನ್ನೊಳಗೊಂಡ ಸ್ವ ವಿವರಗಳ ಮಾಹಿತಿಗಳನ್ನು ಭರ್ತಿ ಮಾಡಿ ಸ್ವ ವಿಳಾಸ ಇರುವ ಲಕೋಟೆಯೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.
     ಅರ್ಜಿಯೊಂದಿಗೆ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ವಿಳಾಸ ಹಾಗೂ ವಯಸ್ಸನ್ನು ದೃಢೀಕರಿಸುವ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ಸೆಪ್ಟೆಂಬರ್ 21ರ ಸಂಜೆ 5 ಗಂಟೆಯೊಳಗೆ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು 560 001 ಇವರಿಗೆ ಸಲ್ಲಿಸಬೇಕು.
     ಲಕೋಟೆಯ ಮೇಲ್ಬಾಗದಲ್ಲಿ "ವೃತ್ತಿ ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ" ಎಂದು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ಸುದ್ದಿ ಮತ್ತು ಪತ್ರಿಕಾ ವಿಭಾಗದ, ಉಪ ನಿರ್ದೇಶಕರು ಇವರನ್ನು ದೂರವಾಣಿ ಸಂಖ್ಯೆ 080- 22028037/87 ರ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 
ಹಿಂದುಳಿದ ವರ್ಗದ ಪತ್ರಿಕೋದ್ಯಮ ಪದವೀಧರ ಅಭ್ಯರ್ಥಿಗಳಿಗೆ ವೃತ್ತಿ ನಿರೂಪಣಾ ಕೌಶಲ್ಯ, ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. - ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿಂದುಳಿದ ವರ್ಗದÀ ಪತ್ರಿಕೋದ್ಯಮ ಪದವಿ, ಸ್ನಾತಕೋತ್ತರ ಪದವಿ, ವಿದ್ಯುನ್ಮಾನ ಮಾಧ್ಯಮದಲ್ಲಿ ಪದವಿ, ಪಿ.ಜಿ. ಡಿಪ್ಲೊಮಾ ಪಡೆದ ಅಭ್ಯರ್ಥಿಗಳಿಗಾಗಿ ಆರು ದಿವಸಗಳ ವೃತ್ತಿ ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ.
     ಕೆಟಗರಿ 1, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದಿಂದ ಅರ್ಜಿ ನಮೂನೆಯನ್ನು ಪಡೆಯಬಹುದು.  ಇಲ್ಲವೆ ಇಲಾಖೆಯ ವೆಬ್‍ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿiಟಿಜಿoಡಿmಚಿಣioಟಿ.gov.iಟಿ  ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.
     ಅಭ್ಯರ್ಥಿ ಹೆಸರು, ಜನ್ಮ ದಿನಾಂಕ, ಖಾಯಂ ವಿಳಾಸ, ವಿದ್ಯಾರ್ಹತೆ, ಜಾತಿ, ಶೇಕಡಾವಾರು ಅಂಕ, ಉದ್ಯೋಗ ವಿವರ ಹಾಗೂ ಈ ಹಿಂದೆ ಯಾವುದಾದರು ತರಬೇತಿ ಪಡೆದ ವಿವರ ಮತ್ತು ವಿಶೇಷ ಸಾಧನೆಗಳನ್ನೊಳಗೊಂಡ ಸ್ವ ವಿವರಗಳ ಮಾಹಿತಿಗಳನ್ನು ಭರ್ತಿ ಮಾಡಿ ಸ್ವ ವಿಳಾಸ ಇರುವ ಲಕೋಟೆಯೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.
     ಅರ್ಜಿಯೊಂದಿಗೆ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ವಿಳಾಸ ಹಾಗೂ ವಯಸ್ಸನ್ನು ಧೃಢೀಕರಿಸುವ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ಅಕ್ಟೋಬರ್ 3ರ ಸಂಜೆ  5 ಗಂಟೆಯೊಳಗೆ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು 560 001 ಇವರಿಗೆ ಸಲ್ಲಿಸಬೇಕು.
     ಲಕೋಟೆಯ ಮೇಲ್ಬಾಗದಲ್ಲಿ  "ವೃತ್ತಿ ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ (ಹಿಂದುಳಿದ ವರ್ಗ)" ಎಂದು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ಸುದ್ದಿ ಮತ್ತು ಪತ್ರಿಕಾ ವಿಭಾಗದ, ಉಪ ನಿರ್ದೇಶಕರು ಇವರನ್ನು ದೂರವಾಣಿ ಸಂಖ್ಯೆ 080- 22028037/87 ರ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

ಮಹದೇಶ್ವರ ಬೆಟ್ಟದಲ್ಲಿ ಮಹಾಲಯ, ದಸರಾ, ದೀಪಾವಳಿ ಜಾತ್ರಾ ಮಹೋತ್ಸವ

ಚಾಮರಾಜನಗರ, ಸೆ. 15:- ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಮಲೆಮಹದೇಶ್ವರ ಸ್ವಾಮಿಯ ಮಹಾಲಯ ಜಾತ್ರಾ ಮಹೋತ್ಸವವು ಸೆಪ್ಟೆಂಬರ್ 18 ರಿಂದ 20ರವರೆಗೆ, ದಸರಾ ಜಾತ್ರಾ ಮಹೋತ್ಸವವು ಸೆಪ್ಟೆಂಬರ್ 21 ರಿಂದ 30ರವರೆಗೆ ಹಾಗೂ  ದೀಪಾವಳಿ ಜಾತ್ರಾ ಮಹೋತ್ಸವವು ಅಕ್ಟೋಬರ್ 18 ರಿಂದ 20ರವರೆಗೆ ನಡೆಯಲಿದೆ.
ಸೆಪ್ಟೆಂಬರ್ 18ರಂದು ಎಣ್ಣೆಮಜ್ಜನ, ತೈಲಾಭಿಷೇಕ, ವಿಶೇಷಸೇವೆ ಉತ್ಸವಗಳು ಜರುಗಲಿವೆ. 19 ಹಾಗೂ 20ರಂದು ಮಹಾಲಯ ಅಮಾವಾಸ್ಯೆ ವಿಶೇಷಸೇವೆ ಉತ್ಸವ ನಡೆಯಲಿದೆ.
ಸೆಪ್ಟೆಂಬರ್ 21ರಂದು ಶರನ್ನವರಾತ್ರಾರಂಭ, ಉಯ್ಯಾಲೋತ್ಸವ ಪ್ರಾರಂಭವಾಗಲಿದೆ. 29ರಂದು ಮಹಾನವಮಿ ಆಯುಧಪೂಜೆ, 30ರಂದು ವಿಜಯದಶಮಿ, ಕುದುರೆ ಮಹÉೂೀತ್ಸವ, ದಶಮಿ ಪೂಜೆ ನಡೆಯಲಿವೆ. ರಾತ್ರಿ ನೈವೇದ್ಯ ನಂತರ ತೆಪ್ಪೋತ್ಸವ ನಡೆಯಲಿದೆ.
ಅಕ್ಟೋಬರ್ 18ರಂದು ದೀಪಾವಳಿ ಜಾತ್ರೆ ಪ್ರಾರಂಭವಾಗಲಿದ್ದು ನರಕಚತುದರ್ಶಶಿ ಎಣ್ಣೆಮಜ್ಜನ ಅಭಿಷೇಕ ಸೇವೆ ಉತ್ಸವಾದಿಗಳು ಜರುಗಲಿವೆ. 19ರಂದು ಅಮಾವಾಸ್ಯೆ, ಹಾಲುರವೆ ಉತ್ಸವ ನಡೆಯಲಿದೆ. 20ರಂದು ದೀಪಾವಳಿ ಮಹಾರಥೋತ್ಸವವು ಬೆಳಿಗ್ಗೆ 9.20 ರಿಂದ 10.10 ಗಂಟೆಯವರೆಗೆ ನಡೆಯಲಿದೆ. ರಾತ್ರಿ ತೆಪ್ಪೋತ್ಸವ ಜರುಗಲಿದೆ.
ಕಾರ್ತೀಕ ಸೋಮವಾರದಂದೂ ಸಹ ವಿಶೇಷ ಉತ್ಸವಗಳು ನಡೆಯಲಿವೆ. ಕಾರ್ತೀಕ ಸೋಮವಾರವಾದ ಅಕ್ಟೋಬರ್ 23, 30 ನವೆಂಬರ್ 6ರಂದು ವಿಶೇಷ ಸೇವೆ ಉತ್ಸವಾದಿಗಳು ನಡೆಯಲಿವೆ. ನವೆಂಬರ್ 13ರ 4ನೇ ಕಾರ್ತೀಕ ಸೋಮವಾರದಂದು  ಶ್ರೀ ಮಹದೇಶ್ವರ ಜ್ಯೋತಿ ದರ್ಶನ ಹಾಗೂ ತೆಪ್ಪೋತ್ಸವ ನಡೆಯಲಿದೆ. 16ರಂದು ಎಣ್ಣೆಮಜ್ಜನ ವಿಶೇಷ ಸೇವೆ ಉತ್ಸವ, 17 ಹಾಗೂ 18ರಂದು ಕಾರ್ತಿಕ ಅಮಾವಾಸ್ಯೆ ವಿಶೇಷ ಸೇವೆ ಉತ್ಸವ ನಡೆಯಲಿದೆ. ಪ್ರತಿದಿನ ಸಂಜೆ 7 ಗಂಟೆಗೆ ಬಂಗಾರದ ರಥೋತ್ಸವ ನಡೆಯಲಿದೆ.
ಈ ಎಲ್ಲ ವಿಶೇಷ ಸೇವೆ, ಉತ್ಸವ ಮತ್ತು ಮಹಾರಥೋತ್ಸವವು ಸಾಲೂರು ಬೃಹನ್ಮಠ ಅಧ್ಯಕ್ಷರಾದ ಶ್ರೀ ಗುರುಸ್ವಾಮಿ ಹಾಗೂ ಇಮ್ಮಡಿ ಮಹದೇವಸ್ವಾಮಿ ಅವರ ನೇತೃತ್ವದಲ್ಲಿ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.
                                  

ಸೆ. 16,17ರಂದು ವಿದ್ಯುತ್ ವ್ಯತ್ಯಯ

ಚಾಮರಾಜನಗರ, ಸೆ. 15 - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಸೆಪ್ಟೆಂಬರ್ 16 ಹಾಗೂ 17ರಂದು ಉಗೆನೆದಹುಂಡಿ ಕುಡಿಯುವ ನೀರಿನ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಬೇಕಾಗಿರುವುದರಿಂದ ತೆರಕಣಾಂಬಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ವಿದ್ಯುತ್‍ನಲ್ಲಿ ವ್ಯತ್ಯಯವಾಗಲಿದೆ.
ಗುರುವಿನಪುರ ಎನ್ ಜೆ ವೈ ಮಾರ್ಗದಲ್ಲಿ ಬರುವ ತೆರಕಣಾಂಬಿ, ಗುರುವಿನಪುರ, ಲಕ್ಕೂರು, ತೆರಕಣಾಂಬಿ ಹುಂಡಿಯಲ್ಲಿ ಬೆಳಿಗ್ಗೆ  10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ಷಿಕ ಶಿಲ್ಪ ಕಲಾ ಪ್ರದರ್ಶನಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಸೆ. 15  ಕರ್ನಾಟಕ ಶಿಲ್ಪ ಕಲಾ ಅಡಾಡೆಮಿಯು ಸಾಂಪ್ರದಾಯಿಕ ಮತ್ತು ಸಮಕಾಲೀನ ಶಿಲ್ಪಕಲೆಯ 13ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ.
ಕರ್ನಾಟಕದಲ್ಲಿ ಹುಟ್ಟಿದ ಅಥವಾ ಶಿಲ್ಪಕಲಾ ಪ್ರದರ್ಶನಕ್ಕೆ 5 ವರ್ಷ ಮೊದಲು ರಾಜ್ಯದಲ್ಲಿ ನೆಲೆಸಿರುವ 18 ರಿಂದ 45ರ ವಯೋಮಿತಿಯ ಶಿಲ್ಪಿಗಳು ಪ್ರದರ್ಶನದಲ್ಲಿ ಭಾಗವಹಿಸಬಹುದು.
ಪ್ರದರ್ಶನಕ್ಕೆ ಕಳುಹಿಸುವ ಶಿಲ್ಪಗಳು ಗರಿಷ್ಟ 2 ಅಡಿಗಳ ಪ್ರಮಾಣದ ಲೋಹ, ಮರ, ಕಲ್ಲು ಮಿಶ್ರ ಮಾದ್ಯಮದಲ್ಲಿರಬೇಕು. ಅತ್ಯುತ್ತಮ ಕಲಾಕೃತಿಗೆ ತಲಾ 25 ಸಾವಿರ ರೂ.ಗಳ ಬಹುಮಾನ ಕೊಡಲಾಗುವುದು.
ಶಿಲ್ಪಕೃತಿಗಳನ್ನು ವಿವರಣಾ ಪತ್ರದ ಜತೆ ಅಕ್ಟೋಬರ್ 10ರೊಳಗಾಗಿ ಅಕಾಡೆಮಿ ಕಚೇರಿಗೆ ಖುದ್ದಾಗಿ ತಲುಪಿಸಬೇಕು. ಪ್ರವೇಶ ಶುಲ್ಕ 300 ರೂ. ಪ್ರವೇಶ ಪಡೆಯಲು ಇಚ್ಚಿಸುವವರು ವಿವರಣಾ ಪತ್ರವನ್ನು ಅಕಾಡೆಮಿಯಲ್ಲಿ ಪಡೆಯಬಹುದು.
ಹೆಚ್ಚಿನ ವಿವರಗಳಿಗೆ ರಿಜಿಸ್ಟ್ರಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, 1ನೇ ಮಹಡಿ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು - 560002 (ದೂ.ಸಂ.080-22278725) ಇವರನ್ನು ಸಂಪರ್ಕಿಸಲು ಕೋರಿದೆ.
ವಿವರಣಾ ಪತ್ರವನ್ನು ಶಿಲ್ಪಕಲಾ ಅಕಾಡೆಮಿಯಲ್ಲಿ ಅಥವ ಜಿಲ್ಲೆಯ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಥವಾ ಅಕಾಡೆಮಿ ಅಂತರ್ಜಾಲ ತಿತಿತಿ.ಞಚಿಡಿಟಿಚಿಣಚಿಞಚಿshiಟಠಿಚಿಞಚಿಟಚಿಚಿಛಿಚಿಜemಥಿ.oಡಿg  ಇಲ್ಲಿ ಸಹ ಪಡೆಯಬಹುದಾಗಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಹೆಚ್.ವಿ. ಇಂದ್ರಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಮನ ಸೆಳೆದ ಭಾರತ ಯಾತ್ರೆ ಬೆಂಬಲಿತ ಬೃಹತ್ ಜಾಥಾ

ಚಾಮರಾಜನಗರ, ಸೆ. 15  ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಮತ್ತು ಕಳ್ಳಸಾಗಾಣಿಕೆ ವಿರುದ್ಧ ಹೋರಾಡಲು ನೋಬೆಲ್ ಪಾರಿತೋಷಕ ಪುರಸ್ಕøತರಾದ ಕೈಲಾಸ್ ಸತ್ಯಾರ್ಥಿ ಅವರು ಕೈಗೊಂಡಿರುವ ಭಾರತ ಯಾತ್ರೆ ಬೆಂಬಲಿಸಿ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲೂ ವಿದ್ಯಾರ್ಥಿಗಳ ಬೃಹತ್ ಜಾಥಾ ಕಾರ್ಯಕ್ರಮ ಇಂದು ನಡೆಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘ ಹಾಗೂ ಸಾಧನಾ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ನಗರದ ಪ್ರವಾಸಿ ಮಂದಿರದ ಬಳಿ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾ ನ್ಯಾಯಾಧೀಶರು ಮಕ್ಕಳ ಹಕ್ಕುಗಳನ್ನು ಕಾಪಾಡಬೇಕಿದೆ. ಬಾಲ್ಯವಿವಾಹ ಪದ್ಧತಿ ಸಮಾಜದಲ್ಲಿ ದೊಡ್ಡ ಪಿಡುಗು ಆಗಿದೆ. 18 ವರ್ಷಕ್ಕೂ ಮುಂಚೆ ಹೆಣ್ಣುಮಕ್ಕಳಿಗೆ ಹಾಗೂ 21 ವರ್ಷಕ್ಕೂ ಮೊದಲು ಗಂಡುಮಕ್ಕಳಿಗೆ ವಿವಾಹ ಮಾಡುವಂತಿಲ್ಲ. ಈ ಸಂಬಂಧ ಕಾಯಿದೆ ಸಹ ಜಾರಿಗೆ ಬಂದಿದೆ. ಈ ಕುರಿತು ವ್ಯಾಪಕವಾಗಿ ಅರಿವು ಮೂಡಿಸಬೇಕಿದೆ ಎಂದರು.

ಬಾಲ್ಯವಿವಾಹ ಆಗುವುದರಿಂದ ಹೆಣ್ಣುಮಕ್ಕಳ ಮಾನಸಿಕ, ದೈಹಿಕ ಹಾಗೂ ಆರೋಗ್ಯ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಬಾಲ್ಯವಿವಾಹವಾದ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣ ಅಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಬಾಲ್ಯ ವಿವಾಹ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಯಬೇಕೆಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಗ್ರಾಮ ಸುತ್ತಮುತ್ತಲ ಪ್ರದೇಶದಲ್ಲಿ ಬಾಲ್ಯವಿವಾಹ ತಡೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕು. ಜನರಿಗೆ ಬಾಲ್ಯವಿವಾಹದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮನದಟ್ಟಾಗುವಂತೆ ತಿಳಿವಳಿಕೆ ನೀಡಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ ಇನ್ನಿತರ ಸಂಘಸಂಸ್ಥೆಗಳು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಶ್ರಮಿಸುತ್ತಿವೆ. ಇದಕ್ಕೆ ಸರ್ವರೂ ಕೈಜೋಡಿಸಬೇಕೆಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಬಳಿಕ ಪ್ರಾರಂಭವಾದ ವಿದ್ಯಾರ್ಥಿಗಳ ಜಾಗೃತಿ ಜಾಥಾ ನಗರದ ಚಾಮರಾಜೇಶ್ವರ ದೇವಾಲಯ ಬಳಿ ತಲುಪಿತು. ಇದೇ ವೇಳೆ ಸಮಾವೇಶಗೊಂಡ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಜಿ.ಜೆ. ಸುರೇಶ್ ಅವರು ನೊಬೆಲ್ ಪಾರಿತೋಷಕ ಪುರಸ್ಕøತರಾದ ಕೈಲಾಸ್ ಸತ್ಯಾರ್ಥಿ ಅವರು ಸುರಕ್ಷಿತ ಬಾಲ್ಯ - ಸುರಕ್ಷಿತ ಭಾರತ ಎಂಬ ಆಶಯವನ್ನಿಟ್ಟುಕೊಂಡು ಭಾರತದ ಉದ್ದಗಲಕ್ಕೂ ಭಾರತ ಯಾತ್ರೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಕ್ಕಳ ಶ್ರೇಯೋಭಿವೃದ್ಧಿಗೆ ಪೂರಕವಾಗಿರುವ ಕಾರ್ಯಕ್ರಮವನ್ನು  ಜಿಲ್ಲೆಯಲ್ಲೂ ಬೆಂಬಲಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಭಾರತ ಯಾತ್ರೆ ಕಾರ್ಯಕ್ರಮ ಬೆಂಬಲಿಸಿ ವಿದ್ಯಾರ್ಥಿಗಳ ಸಹಿ ಸಂಗ್ರಹ ಕಾರ್ಯಕ್ರಮವನ್ನು ಏರ್ಪಾಡು ಮಾಡಲಾಗಿತ್ತು. ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಸಹಿ ಹಾಕುವ ಮೂಲಕ ಭಾರತ ಯಾತ್ರೆಗೆ ತಮ್ಮ ಸಹಮತ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರೆಜಿನಾ ಮೆಲಾಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾ ಅಧಿಕಾರಿ ಬಸವರಾಜು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶೀಲ, ಎಲ್. ಸುರೇಶ್, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸೆ. 16ರಂದು ಮುತ್ತಿಗೆ ಗ್ರಾಮದಲ್ಲಿ ಗ್ರಾಹಕ ಅದಾಲತ್

ಚಾಮರಾಜನಗರ, ಸೆ. 15 (ಕರ್ನಾಟಕ ವಾರ್ತೆ):- ಆಹಾರ ಇಲಾಖೆ ಸಹಯೋಗದೊಂದಿಗೆ ನಗರದ ಶ್ರೀಗಂಧ ಮಹಿಳಾ ಅಭಿವೃದ್ಧಿ ಸಂಘ ಗ್ರಾಹಕ ಅದಾಲತ್ ಕಾರ್ಯಕ್ರಮವನ್ನು ಚಾಮರಾಜನಗರ ತಾಲೂಕಿನ ಮುತ್ತಿಗೆ ಗ್ರಾಮದ ಶಾಲಾ ಆವರಣದಲ್ಲಿ ಸೆಪ್ಟೆಂಬರ್ 16ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಸೆಪ್ಟೆಂಬರ್ 16ರಂದು ನಗರದಲ್ಲಿ ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ

ಚಾಮರಾಜನಗರ, ಸೆ. 15 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಬ್ರಹ್ಮರ್ಷಿ ನಾರಾಯಣ ಗುರು ಅವರ ಜಯಂತಿ ಕಾರ್ಯಕ್ರಮವನ್ನು ಸೆಪ್ಟಂಬರ್ 16ರಂದು ಬೆಳಗ್ಗೆ 11 ಗಂಟೆಗೆ ನಗರದ ಜೆ. ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಉದ್ಘಾಟನೆ ನೆರವೇರಿಸುವರು. ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ಘನ ಉಪಸ್ಥಿತಿ ವಹಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಬ್ರಹ್ಮರ್ಷಿ ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಷನೆ ಮಾಡುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಅವರುಗಳು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಗುಂಡ್ಲುಪೇಟೆಯ ಪ್ರಗತಿಪರ ಚಿಂತಕರು ಹಾಗೂ ಪತ್ರಕರ್ತರಾದ ಡಾ. ಕೃಷ್ಣಮೂರ್ತಿ ಚಮರಂ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು. ಬೆಳಿಗ್ಗೆ 9.30 ಗಂಟೆಗೆ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


                                 







                                     



Thursday, 14 September 2017

ಕೇಸರಿ ದ್ವಜ : ಬೆಂಕಿ‌ಹಾಕಿದ ದುಷ್ಕರ್ಮಿಗಳು (14-09-2017)


 ಕೇಸರಿ ದ್ವಜ ಮತ್ತು ಸ್ಕೂಟರ್ ಬೆಂಕಿ‌ಹಾಕಿದ ದುಷ್ಕರ್ಮಿಗಳು

ವರದಿ: ರಾಮಸಮುದ್ರ ಎಸ್ ವೀರಭದ್ರಸ್ವಾಮಿ ‌ 

(ವಾಹನದ ನಂಬರ್ ಅನ್ನು ನಾವೇ ಅಳಸಿಲಾಗಿದೆ. ಕ್ಷಮಸಿ)

 ಚಾಮರಾಜನಗರ: ಕಿಡಿಗೇಡಿಗಳು ಕೇಸರಿ ದ್ವಜ ಮತ್ತು ಸ್ಕೂಟರ್ ಬೆಂಕಿ‌ಹಾಕಿದ ಘಟನೆ ನಗರದ ಗಾಳೀಪುರ ಬಡಾವಣೆಯಲ್ಲಿ ನಡೆದಿದೆ. 

 *ಗಾಳೀಪುರ ಬಡಾವಣೆ ನಾಯಕರ ಬೀದಿ ಎರಡನೆ ತಿರುವಿನಲ್ಲಿ ಈ ಘಟನೆ ನಡೆದಿದೆ. *ಗಣಪತಿ ದೇವಾಲಯದ ಮೇಲೆ ಇದ್ದ ಕೇಸರಿ ದ್ವಜ ಹಾಗೂ ರಂಗಸ್ವಾಮಿ ಅವರಿಗೆ ಸೇರಿದ ಬೈಕ್ ಗೆ ಬೆಂಕಿ ಹಾಕಿದ್ದಾರೆ. 

ಆರೋಪಿಗಳ ಬಂದನಕ್ಕೆ ಆಗ್ರಹಿಸಿ ಜಿಲ್ಲಾದಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಹಿಂದೂಪರ ಸಂಘಟನೆಗಳು


*ಸ್ಥಳಕ್ಕೆ ಡಿವೈಸ್ಪಿ ಗಂಗಾದರ ಸ್ವಾಮಿ ಹಾಜರಿದ್ದು ವ್ಯಾಪಕ ಪೊಲೀಸ್ ಬಂದೂ ಬಸ್ತ್ ನಿಯೋಜಿಸಿದ್ದಾರೆ . ಸ್ಥಳಕ್ಕೆ ಶ್ವಾನದಳ ಕರೆಯಿಸಿ ಪರಿಶೀಲನೆ ಮಾಡಲಾಗಿದೆ.






ಸ್ಥಳಕ್ಕೆ ಎಸ್ಪಿ ದರ್ಮೇಂದ್ರ ಕುಮಾರ್ ಮೀನಾ, ಎಎಸ್ಪಿ ಗೀತಾ ಪ್ರಸನ್ನ ಅವರು ಭೇಟಿ ಮಾಡಿ ಪರಶೀಲಿಸುತ್ತಿರುವುದು.. ಚಿತ್ರ .ಎಸ್.ವೀರಭದ್ರಸ್ವಾಮಿ .ರಾಮಸಮುದ್ರ


_____________________________________

ಚಾಮರಾಜನಗರ ದಸರಾ ಮಹೋತ್ಸವ : ಆಹಾರ ಮಳಿಗೆ ತೆರೆಯಲು ಅರ್ಜಿ ಆಹ್ವಾನ

ಚಾಮರಾಜನಗರ, ಸೆ. 14 - ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸೆಪ್ಟೆಂಬರ್ 25 ರಿಂದ 28ರವರೆಗೆ ನಡೆಯಲಿರುವ 4 ದಿನಗಳ ದಸರಾ ಮಹೋತ್ಸವದಲ್ಲಿ ವಿವಿಧ ಅಭಿರುಚಿಯುಳ್ಳ ಆಹಾರ ಮಳಿಗೆಗಳನ್ನು ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ದಸರಾ ಮಹೋತ್ಸವ ನಡೆಯುವ ಚಾಮರಾಜೇಶ್ವರ ದೇವಾಲಯ ಬಳಿ 10*10 ಚದರ ಅಡಿ ಅಳತೆಯ ಮಳಿಗೆಗಳನ್ನು ನಿರ್ಮಿಸಿ ಆಹಾರ ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗುತ್ತಿದೆ. 
ಆಹಾರ ಮಳಿಗೆಯಲ್ಲಿ ಭಾಗವಹಿಸುವವರು ನೇರ ಆಹಾರ ತಯಾರಕರು, ಗೃಹಿಣಿಯರು, ಕೇಟರರ್ಸ್ ಅಥವ ಹೋಟೆಲ್ ಮಾರಾಟಗಾರರಾಗಿರಬೇಕು. ಆಹಾರದ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿಯಲ್ಲಿ ಜಿಲ್ಲಾ ಅಂಕಿತ ಅಧಿಕಾರಿಗಳಿಂದ ನೊಂದಾಯಿಸಲ್ಪಟ್ಟಿರಬೇಕು. 
ಅರ್ಜಿದಾರರು ಕಡ್ಡಾಯವಾಗಿ ಅನುಭವ ನೋಂದಣಿ ಮತ್ತು ಯಾವ ಶೈಲಿಯ ಆಹಾರ ತಯಾರಿಸುತ್ತೇವೆ ಎಂಬ ಬಗ್ಗೆ ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 20 ಕಡೆಯ ದಿನವಾಗಿದೆ. ಅರ್ಜಿಗಳನ್ನು ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಚಾಮರಾಜನಗರ ಜಿಲ್ಲೆ ಮತ್ತು ಕಾರ್ಯಾಧ್ಯಕ್ಷರು, ದಸರಾ ಮಹೋತ್ಸವ 2017ರ ಆಹಾರ ಸಮಿತಿ ಇವರ ಹೆಸರಿಗೆ 100 ರೂ. ಡಿಡಿ ಅಥವಾ ನಗದು ಪಾವತಿಸಿ ಪಡೆಯಬಹುದು. 
ಆಹಾರ ಮಳಿಗೆಯಲ್ಲಿ ಭಾಗವಹಿಸುವವರು ದಸರಾ ಮಹೋತ್ಸವ ಸಮಿತಿ ವಿಧಿಸುವ ಶುಲ್ಕ ಪಾವತಿಸಲು ಹಾಗೂ ಇತರೆ ಷರತ್ತುಗಳನ್ನು ಪೂರೈಸಲು ಬದ್ಧರಾಗಿರಬೇಕು. 
ಹೆಚ್ಚಿನ ಮಾಹಿತಿಗೆ ಆರ್. ರಾಚಪ್ಪ, ಉಪನಿರ್ದೇಶಕರು ಹಾಗೂ ಆಹಾರ ಸಮಿತಿಯ ಕಾರ್ಯಾಧ್ಯಕ್ಷರು, ದೂ.ಸಂ. 08226-224660, ಮೊಬೈಲ್ ಸಂಖ್ಯೆ 9739875870 ಅಥವಾ ಎ.ಜೆ. ಶ್ರೀನಿವಾಸ್, ಸಹಾಯಕ ನಿರ್ದೇಶಕರು, ಉಪನಿರ್ದೇಶಕರ ಕಚೇರಿ, ಆಹಾರ ಶಾಖೆ, ಮೊಬೈಲ್ ಸಂಖ್ಯೆ 9448413218 ಅಥವಾ ಕೆ.ಎಂ. ಲಿಂಗರಾಜು, ಲೆಕ್ಕಾಧೀಕ್ಷಕರು, ಆಹಾರ ಶಾಖೆ, ಮೊಬೈಲ್ ಸಂಖ್ಯೆ 8073160006 ಸಂಪರ್ಕಿಸುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೆಶಕರು ಹಾಗೂ ಆಹಾರ ಸಮಿತಿ ಕಾರ್ಯಾಧ್ಯಕ್ಷರು ಆಗಿರುವ ಆರ್. ರಾಚಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.
  

 ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ವಾಟಾಳ್ ಮನವಿ


 ಚಾಮರಾಜನಗರ, ಸೆ.14- ಚಾಮರಾಜನಗರದ ನಗರಸಭಾ ವ್ಯಾಪ್ತಿಗೆ ಒಳಪಟ್ಟಿರುವ ಎಲ್ಲಾ ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅದ್ಯಕ್ಷ ವಾಟಾಳ್ ನಾಗರಾಜ್ ಅವರು ಒತ್ತಾಯಿಸಿದರು.
 ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಬಿ.ರಾಮು ಅವರನ್ನು ಭೇಟಿ ಮಾಡಿ ಚಾಮರಾಜನಗರ ಸವiಗ್ರ ಅಭಿವೃದ್ದಿಗೆ ಒತ್ತಾಯಿಸಿ ಮನವಿ ಪತ್ರ ನೀಡಿದರು. 
 ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ಅವರು, ಚಾಮರಾಜನಗರ ಸಮಗ್ರ ಅಭಿವೃದ್ದಿಗೆ ಕೂಡಲೇ ತೀವ್ರ ಗಮನ ಹರಿಸಬೇಕು ಇಲ್ಲವಾದಲ್ಲಿ ಮುಂದಿನ ತಿಂಗ ಳು 10 ರಂದು ಚಾಮರಾಜನಗರ ಬಂದ್‍ಗೆ ಕರೆ ನೀಡಲಾಗುವುದು ಎಂದು ವಾಟಾಳ್ ಎಚ್ಚರಿಸಿದರು.
 ಒಳ ಚರಂಡಿ ಕಾಮಗಾರಿ ಪ್ರಾರಂಭವಾಗಿ ಸುಮಾರು 10 ವರ್ಷ ಕಳೆದಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ ಬೇಗ ಕೆಲಸ  ಮುಗಿಸಬೇಕು ಚಾಮರಾಜನಗರ ಧೂಳಿನಿಂದ ಕೂಡಿದ್ದು ಧೂಳು ರಹಿತ ನಗರವನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.
 ಚಾಮರಾಜನಗರ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು. ಚಾಮರಾಜನಗರಕ್ಕೆ ಕಾವೇರಿ ಕುಡಿಯುವ ನೀರಿನ ಎರಡನೇ ಹಂತ ಆಗಬೇಕು. ನಗರದ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಬಡ ಜನರಿಗೆ ನಿವೇಶನಗಳನ್ನು ನೀಡುವುದರ ಜೊತೆಗೆ 5 ಸಾವಿರ ನಿವೇಶನಗಳುಳ್ಳ ಸುಂದರವಾದ ಉಪನಗರ ಆಗಬೇಕು ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು. 
  ಶ್ರೀ ಚಾಮರಾಜೇಶ್ವರ ರಥೋತ್ಸವ ಮುಂದಿನ ಸಾಲಿನಲ್ಲಾದರೂ ನಡೆಯಬೇಕು ರಥ ನಿರ್ಮಾಣ ಮಾಡಲು  ನುರಿತ ಕುಶಲಕರ್ಮಿಗಳನ್ನು ಕರೆತಂದು ರಥವನ್ನು ಕೆತ್ತನೆ ಮಾಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಅಭಿವೃದ್ದಿ ಆಗಬೇಕು ಅರ್ಧಕ್ಕೆ ನಿಂತಿರುವ ರಂಗಮಂದಿರ ಕಾಮಗಾರಿ ತಕ್ಷಣವೇ ಮುಗಿಸಬೇಕು. ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ನದಿ ಪಾತ್ರಗಳಿಂದ ಖಾಯಂ ಕುಡಿಯುವ ನೀರು ಕಲ್ಪಿಸಬೇಕು ಎಂದು ವಾಟಾಳ್ ಆಗ್ರಹಿಸಿದರು. 
 ನಗರದ ಶಂಕರಪುರ ಮತ್ತು ಭ್ರಮರಾಂಭ ಬಡಾವಣೆಯ ನಿವಾಸಿಗಳು ಅದರಲ್ಲೂ ಮಹಿಳೆಯರೇ ಹೆಚ್ಚಾಗಿ ಮೂಲಭೂತ ಕಲ್ಪಿಸಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದ ಸಂದರ್ಭದಲ್ಲಿ ಅವರ ಮೇಲೆ ಹಾಗು ಸಾರ್ವಜನಿಕರ ಮೇಲೆ ಕೇಸು ದಾಖಲೆ ಮಾಡಿರುವುದು ಸರಿಯಾದ ಕ್ರಮವಲ್ಲ ಇದು ತೀವ್ರ ಖಂಡನೀಯ ಈ ವಾರದೊಳಗೆ ಅವರ ಎಲ್ಲಾ ಕೇಸುಗಳನ್ನು ವಜಾ ಮಾಡದಿದ್ದಲ್ಲಿ ಮಹಿಳೆಯರ ಜೊತೆ ಸೇರಿ ಪೋಲಿಸರ ಈ ಕ್ರಮದ ವಿರುದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ  ಬೃಹತ್ ಪ್ರತಿಭಟನೆ ನಡೆಸುವುದಾಗಿ ವಾಟಾಳ್ ಎಚ್ಚರಿಸಿದರು. 
  ಕರ್ನಾಟಕದ ಎಲ್ಲಾ ಬ್ಯಾಂಕುಗಳಲ್ಲಿ ಆಡಳಿತ ಬಾಷೆ ಕನ್ನಡದಲ್ಲೆ ಎಲ್ಲಾ ವ್ಯವಹಾರ ಮಾಡಬೇಕು ಸಾರ್ವಜನಿಕರಿಗೆ ನೀಡುವ ಎಲ್ಲಾ ವ್ಯವಹಾರಗಳ ಅರ್ಜಿ ನಮೂನೆಗಳು  ಸಹ ಕನ್ನಡದಲ್ಲೇ ಮುದ್ರಿಸಿರಬೇಕು. ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಕನ್ನಡದಲ್ಲೇ ಓದಿದವರಿಗೆ ಉದ್ಯೋಗ ನೀಡಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಒತ್ತಾಯಿಸಿ ಇದೇ ಸೆ.17 ರಂದು ಬೆಂಗಳೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‍ಗೆ  ಕನ್ನಡ ಒಕ್ಕೂಟದ ವತಿಯಿಂದ ಮುತ್ತಿಗೆ ಹಾಕುವ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದ ಎಂದು ವಾಟಾಳ್ ತಿಳಿಸಿದರು. 
_+______________________________________________________________________
     

ಸೆಪ್ಟೆಂಬರ್ 15ರಂದು ನಗರದಲ್ಲಿ ಭಾರತ ಯಾತ್ರೆ ಕಾರ್ಯಕ್ರಮ

ಚಾಮರಾಜನಗರ, ಸೆ. 14 :- ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘ  ಹಾಗೂ ಸಾಧನ ಸಂಸ್ಥೆಯ ಸಹಯೋಗದೊಂದಿಗೆ ಸೆಪ್ಟೆಂಬರ್ 15ರಂದು ಸುರಕ್ಷಿತ ಬಾಲ್ಯ-ಸುರಕ್ಷಿತ ಭಾರತ ಕಲ್ಪನೆಯೊಂದಿಗೆ ಭಾರತ ಯಾತ್ರೆ ಕಾರ್ಯಕ್ರಮವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10.30 ಗಂಟೆಗೆ ನಗರದ ಪ್ರವಾಸಿ ಮಂದಿರದಿಂದ ಆರಂಭವಾಗುವ ಜಾಥಾ ಕಾರ್ಯಕ್ರಮಕ್ಕೆ ಪಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್, ಮಳವಳ್ಳಿ ಅವರು ಚಾಲನೆ ನೀಡಲಿದ್ದಾರೆ. ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಹಾಗೂ ಭಾರತ ಯಾತ್ರೆಯಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕøತರಾದ ಕೈಲಾಶ್ ಸತ್ಯಾರ್ಥಿಯವರ ಪ್ರತಿನಿಧಿ ಪ್ರಸನ್ನ ಅವರು ಇದೇ ಸಂದರ್ಭದಲ್ಲಿ ಹಾಜರಿರುವರು.
ಬೆಳಿಗ್ಗೆ 11.30 ಗಂಟೆÀಗೆ ಚಾಮರಾಜೇಶ್ವರ ದೇವಾಲಯದ ಮುಂಭಾಗ ಸಹಿ ಸಂಗ್ರಹಣೆ ಕಾರ್ಯ ನಡೆಯಲಿದೆ. ಕಾರ್ಯಕ್ರಮವನ್ನು ಸಿ.ಜೆ.ಎಂ. ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಅವರು ಉದ್ಘಾಟಿಸಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶರಾದ ಮಂಜುಳ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಜಿನಾ ಮಾಲಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದೇಶಕರಾದ ಬಸವರಾಜು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಜಯಶೀಲ, ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆಗಳು,  ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕಳ್ಳ ಸಾಗಾಣಿಕೆ ತೆಡೆಗಟ್ಟಲು ನೇತೃತ್ವದಲ್ಲಿ ಕೈಗೊಳ್ಳಲಾಗಿರುವ ಭಾರತ ಯಾತ್ರೆಯು ನಗರಕ್ಕೆ ಆಗಮಿಸಲಿದೆ. ಜಾಥಾ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ 500 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಟಿ.ಜೆ ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 15ರಂದು ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ

ಚಾಮರಾಜನಗರ, ಸೆ. 14 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 15ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸಿ.ಆರ್. ಬಾಲರಪಟ್ಟಣ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಉದ್ಘಾಟನೆ ನೆರವೇರಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸÀುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ ಘನ ಉಪಸ್ಥಿತರಿರುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಉದ್ಘಾಟನೆ ನೆರವೇರಿಸುವರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು,  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರೆಜಿನ ಪಿ ಮೆಲಾಕಿ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ

ಚಾಮರಾಜನಗರ, ಸೆ. 14 (ಕರ್ನಾಟಕ ವಾರ್ತೆ):- 2017-18ನೇ ಸಾಲಿನ 14/17 ವರ್ಷ ವಯೋಮಿತಿಯ ಶಾಲಾ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟವು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ದಿನಾಂಕ 21.9.2017ರಂದು ಪ್ರೌಢಶಾಲಾ ವಿಭಾಗ ಮತ್ತು 22.9.2017ರಂದು ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಅಥ್ಲೆಟಿಕ್ಸ್ ಕ್ರೀಡಾಕೂಟವು ಶ್ರೀ ಮಹದೇಶ್ವರ ಕಾಲೇಜು ಕ್ರೀಡಾಂಗಣ ಕೊಳ್ಳೇಗಾಲದಲ್ಲಿ ನಡೆಯಲಿದೆ. ಆದ್ದರಿಂದ ತಾಲೂಕು ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಮೇಲ್ಕಂಡ ಸ್ಥಳದಲ್ಲಿ ಬೆಳಿಗ್ಗೆ 8.30ಕ್ಕೆ ಹಾಜರಾಗಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಲ್ಲಿ ವರದಿ ಮಾಡಿಕೊಳ್ಳುವಂತೆ ತಿಳಿಸಿದೆ.
ಸೆಪ್ಟೆಂಬರ್ 17, 18ರಂದು ವಿಭಾಗಮಟ್ಟದ ದಸರಾ ಫುಟ್ ಬಾಲ್ ಪಂದ್ಯ
ಚಾಮರಾಜನಗರ, ಸೆ. 14- ಪ್ರಸಕ್ತ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಫುಟ್ ಬಾಲ್ ಪಂದ್ಯಾವಳಿ(ಪುರುಷರಿಗೆ)ಯನ್ನು ಸೆಪ್ಟೆಂಬರ್ 17 ಮತ್ತು 18 ರಂದು ಬೆಳಿಗ್ಗೆ 10 ಗಂಟೆಗೆ ಗುಂಡ್ಲುಪೇಟೆಯ ಡಿ. ದೇವರಾಜ ಅರಸು ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆ ತಿಳಿಸಿದೆ.
ಪಿ.ಎಂ.ಇ.ಜಿ.ಪಿ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 14 (ಕರ್ನಾಟಕ ವಾರ್ತೆ):- ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ವಿಶೇಷ ಡ್ರೈವ್ ಮೂಲಕ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮ (ಪಿಎಂಇಜಿಪಿ)ದಡಿಯಲ್ಲಿ ಕೈಗಾರಿಕಾ ಘಟಕಗಳಿಗೆ ಹಾಗೂ ಸೇವಾ ಘಟಕಗಳಿಗೆ ಸಾಲಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
 ಈ ಯೋಜನೆಯಡಿ ಶೇ. 25 ರಿಂದ ಶೇ. 35ರವರೆಗೆ ಸಹಾಯಧನ (ಮಾರ್ಜಿನ್‍ಮನಿ) ನೀಡಲಾಗುವುದು. ಯೋಜನಾ ವೆಚ್ಚದ ಶೇ.5ರಷ್ಡು ಸ್ವಂತ ಬಂಡವಾಳವನ್ನು ಹೂಡಬೇಕಾಗುತ್ತದೆ. ಉತ್ಪಾದನಾ ಕ್ಷೇತ್ರದ ಉದ್ಯೋಗದ ಸಲುವಾಗಿ ಗರಿಷ್ಟ ರೂ. 25 ಲಕ್ಷದ ತನಕ ಹಾಗೂ ಸೇವಾ ಕ್ಷೇತ್ರದ ಸಲುವಾಗಿ ಗರಿಷ್ಟ ರೂ. 10 ಲಕ್ಷದ ತನಕ ಸಾಲವನ್ನು ನೀಡಲಾಗುತ್ತದೆ. ಈ ಯೋಜನೆಯು ಹೊಸ ಉದ್ದಿಮೆದಾರರಿಗೆ ಮಾತ್ರ. ಹಾಲಿ ಇರುವ ಘಟಕಗಳಿಗೆ ಅನ್ವಯಿಸುವುದಿಲ್ಲ.
ಸಾಲವನ್ನು ಅಂಗೀಕೃತ ರಾಷ್ಟ್ರೀಕೃತ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಖಾಸಗಿ ವಲಯದ ವಾಣಿಜ್ಯ ಬ್ಯಾಂಕುಗಳು ನೀಡುತ್ತವೆ. ಅರ್ಜಿಗಳನ್ನು ಆನ್ ಲೈನ್ ಮೂಲಕವೇ ಸಲ್ಲಿಸತಕ್ಕದ್ದು. ಫೋಟೋ, ಆಧಾರ್ ಕಾರ್ಡ್, ವಿಳಾಸದ ಪುರಾವೆ, ವಿದ್ಯಾರ್ಹತೆ. ಜಾತಿ ಪ್ರಮಾಣ ಪತ್ರ, ಜನಸಂಖ್ಯಾ ಪ್ರಮಾಣ ಪತ್ರ (ಗ್ರಾಮೀಣರಿಗೆ ಮಾತ್ರ), ಯೋಜನಾ ವರದಿಯನ್ನು ಲಗತ್ತಿಸಿಸಬೇಕು.
ಯಾವುದೇ ವ್ಯಕ್ತಿಯು ಅಥವ ಅವರ ಕುಟುಂಬದ ಸದಸ್ಯರು ಪಿಎಂಇಜೆಪಿ, ಪಿಎಂಆರ್‍ವೈ, ಆರ್ ಇ ಜಿಪಿ ಹಾಗೂ ಇತರೆ ಯೋಜನೆಯಡಿ ಸಹಾಯಧನವನ್ನು ಹಿಂದೆ ಪಡೆದಿದ್ದರೆ ಅಂತಹ ವ್ಯಕ್ತಿಗಳು ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಅರ್ಜಿ ಹಾಕಲು ಅರ್ಹರಾಗಿರುವುದಿಲ್ಲ.
ಆಸಕ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಏಗಿIಅ ವೆಬ್ ಸೈಟ್ ತಿತಿತಿ.ಞviಛಿ.oಡಿg.iಟಿ / ತಿತಿತಿ.ಠಿmegಠಿ.iಟಿ ನೋಡಬಹುದು.  ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 10 ಕಡೆಯ ದಿನ.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರ, ಖಾದಿ ಗ್ರಾಮೋದ್ಯೋಗ ಮಂಡಳಿ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಚಾಮರಾಜನಗರ ದಸರಾ ಮಹೋತ್ಸವ : ಆಹಾರ ಮಳಿಗೆ ತೆರೆಯಲು ಅರ್ಜಿ ಆಹ್ವಾನ

ಚಾಮರಾಜನಗರ, ಸೆ. 14 - ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸೆಪ್ಟೆಂಬರ್ 25 ರಿಂದ 28ರವರೆಗೆ ನಡೆಯಲಿರುವ 4 ದಿನಗಳ ದಸರಾ ಮಹೋತ್ಸವದಲ್ಲಿ ವಿವಿಧ ಅಭಿರುಚಿಯುಳ್ಳ ಆಹಾರ ಮಳಿಗೆಗಳನ್ನು ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ದಸರಾ ಮಹೋತ್ಸವ ನಡೆಯುವ ಚಾಮರಾಜೇಶ್ವರ ದೇವಾಲಯ ಬಳಿ 10*10 ಚದರ ಅಡಿ ಅಳತೆಯ ಮಳಿಗೆಗಳನ್ನು ನಿರ್ಮಿಸಿ ಆಹಾರ ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗುತ್ತಿದೆ.
ಆಹಾರ ಮಳಿಗೆಯಲ್ಲಿ ಭಾಗವಹಿಸುವವರು ನೇರ ಆಹಾರ ತಯಾರಕರು, ಗೃಹಿಣಿಯರು, ಕೇಟರರ್ಸ್ ಅಥವ ಹೋಟೆಲ್ ಮಾರಾಟಗಾರರಾಗಿರಬೇಕು. ಆಹಾರದ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿಯಲ್ಲಿ ಜಿಲ್ಲಾ ಅಂಕಿತ ಅಧಿಕಾರಿಗಳಿಂದ ನೊಂದಾಯಿಸಲ್ಪಟ್ಟಿರಬೇಕು.
ಅರ್ಜಿದಾರರು ಕಡ್ಡಾಯವಾಗಿ ಅನುಭವ ನೋಂದಣಿ ಮತ್ತು ಯಾವ ಶೈಲಿಯ ಆಹಾರ ತಯಾರಿಸುತ್ತೇವೆ ಎಂಬ ಬಗ್ಗೆ ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 20 ಕಡೆಯ ದಿನವಾಗಿದೆ. ಅರ್ಜಿಗಳನ್ನು ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಚಾಮರಾಜನಗರ ಜಿಲ್ಲೆ ಮತ್ತು ಕಾರ್ಯಾಧ್ಯಕ್ಷರು, ದಸರಾ ಮಹೋತ್ಸವ 2017ರ ಆಹಾರ ಸಮಿತಿ ಇವರ ಹೆಸರಿಗೆ 100 ರೂ. ಡಿಡಿ ಅಥವಾ ನಗದು ಪಾವತಿಸಿ ಪಡೆಯಬಹುದು.
ಆಹಾರ ಮಳಿಗೆಯಲ್ಲಿ ಭಾಗವಹಿಸುವವರು ದಸರಾ ಮಹೋತ್ಸವ ಸಮಿತಿ ವಿಧಿಸುವ ಶುಲ್ಕ ಪಾವತಿಸಲು ಹಾಗೂ ಇತರೆ ಷರತ್ತುಗಳನ್ನು ಪೂರೈಸಲು ಬದ್ಧರಾಗಿರಬೇಕು.
ಹೆಚ್ಚಿನ ಮಾಹಿತಿಗೆ ಆರ್. ರಾಚಪ್ಪ, ಉಪನಿರ್ದೇಶಕರು ಹಾಗೂ ಆಹಾರ ಸಮಿತಿಯ ಕಾರ್ಯಾಧ್ಯಕ್ಷರು, ದೂ.ಸಂ. 08226-224660, ಮೊಬೈಲ್ ಸಂಖ್ಯೆ 9739875870 ಅಥವಾ ಎ.ಜೆ. ಶ್ರೀನಿವಾಸ್, ಸಹಾಯಕ ನಿರ್ದೇಶಕರು, ಉಪನಿರ್ದೇಶಕರ ಕಚೇರಿ, ಆಹಾರ ಶಾಖೆ, ಮೊಬೈಲ್ ಸಂಖ್ಯೆ 9448413218 ಅಥವಾ ಕೆ.ಎಂ. ಲಿಂಗರಾಜು, ಲೆಕ್ಕಾಧೀಕ್ಷಕರು, ಆಹಾರ ಶಾಖೆ, ಮೊಬೈಲ್ ಸಂಖ್ಯೆ 8073160006 ಸಂಪರ್ಕಿಸುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೆಶಕರು ಹಾಗೂ ಆಹಾರ ಸಮಿತಿ ಕಾರ್ಯಾಧ್ಯಕ್ಷರು ಆಗಿರುವ ಆರ್. ರಾಚಪ್ಪ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.











































Wednesday, 13 September 2017

ನಗರಕ್ಕೆ ವಿಧಾನಸಭೆಯ ಕಾಗದಪತ್ರಗಳ ಸಮಿತಿ ಭೇಟಿ : ಅಧಿಕಾರಿಗಳೊಂದಿಗೆ ಸಭೆ ,ಪ್ರಾಶ್ಚಾತ್ಯ ಸಂಸ್ಕøತಿಗೆ ಮಾರುಹೋಗದೆ ಭಾರತೀಯ ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳಿ - ಆರ್.ರಂಗನಾಥಬಾಬು (13-09-2017)

     

ನಗರಕ್ಕೆ ವಿಧಾನಸಭೆಯ ಕಾಗದಪತ್ರಗಳ ಸಮಿತಿ ಭೇಟಿ : ಅಧಿಕಾರಿಗಳೊಂದಿಗೆ ಸಭೆ                        ..................................... vss


ಚಾಮರಾಜನಗರ, ಸೆ. 13 :- ಕರ್ನಾಟಕ ವಿಧಾನ ಮಂಡಲದ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯು ಇಂದು ಚಾಮರಾಜನಗರಕ್ಕೆ ಭೇಟಿ ನೀಡಿ ವಿವಿಧ ಇಲಾಖೆಗಳ ವಾರ್ಷಿಕ ಲೆಕ್ಕ ವರದಿಗಳನ್ನು ಜಿಲ್ಲಾ ಪಂಚಾಯತ್‍ನಿಂದ ಸಲ್ಲಿಸದಿರುವ ಬಗ್ಗೆ ಸಭೆ ನಡೆಸಿ ಚರ್ಚೆ ನಡೆಸಿತು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಧಾನಸಭೆಯ ಸದಸ್ಯರು ಹಾಗೂ ಸಮಿತಿಯ ಅಧ್ಯಕ್ಷರಾದ ಸಾ.ರಾ. ಮಹೇಶ್ ಹಾಗೂ ಸದಸ್ಯರಾದ ಕೃಷ್ಣಾರೆಡ್ಡಿ, ವಿಧಾನಸಭೆ ಸಚಿವಾಲಯದ ಅಧಿಕಾರಿಗಳು, ಗ್ರಾಮೀಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಮಹಾಲೇಖಪಾಲಕರ ಕಚೇರಿಯ ಅಧಿಕಾರಿಗಳು ವಾರ್ಷಿಕ ಲೆಕ್ಕ ವರದಿ ಸಲ್ಲಿಕೆಯಾಗದ ಕುರಿತು ಜಿಲ್ಲೆಯ ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚೆ ನಡೆಸಿದರು.
ಸಮಿತಿಯು ಜಿಲ್ಲೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ವರದಿ ಬಗ್ಗೆ ಮಹಾ ಲೇಖಪಾಲರ ಆಕ್ಷೇಪಣೆ, ಕಂಡಿಕೆ ವಿವರಗಳನ್ನು ಪರಿಶೀಲಿಸಿತು.
ಈಗಾಗಲೇ ಸಮಿತಿಯು ದಾವಣಗೆರೆ, ಶಿವಮೊಗ್ಗ ಹಾಗೂ ಮೈಸೂರಿಗೆ ಭೇಟಿ ನೀಡಿ ವರದಿ ಸಂಬಂಧ ಸಭೆ ನಡೆಸಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಷೇಪಣೆ ಕಂಡಿಕೆ ತೀರುವಳಿ ಸಂಬಂಧ ಕೈಗೊಂಡಿರುವ ಕಾರ್ಯದ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ನಿರ್ವಹಿಸಿರುವ ಬದ್ಧತೆ ಕೆಲಸದ ಬಗ್ಗೆ ತೀವ್ರ ಪ್ರಶಂಸೆ ವ್ಯಕ್ತವಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಸಮಿತಿಗೆ ಪ್ರಮುಖ ಮಾಹಿತಿಗಳನ್ನು ನೀಡಿದರÀು. ಅಲ್ಲದೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ವರದಿ ಸಂಬಂಧ ಸಮಿತಿಗೆ ಮಾಹಿತಿಗಳನ್ನು ಒದಗಿಸಿದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಂಟಿ ಕಾರ್ಯದರ್ಶಿ ಸಾಗರ, ಆಂತರಿಕ ಆರ್ಥಿಕ ಸಲಹೆಗಾರರಾದ ಡಾ. ಹನುಮಂತೇಗೌಡ, ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಕೆ.ಎಸ್. ಗಣೇಶ್, ಮಹಾಲೇಖಪಾಲಕರ ಕಚೇರಿ ಸಹಾಯಕ ಲೆಕ್ಕಾಧಿಕಾರಿ ರವೀಂದ್ರ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಮುಖ್ಯ ಲೆಕ್ಕಾಧಿಕಾರಿ ಸಿ. ಬಸವರಾಜು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಬಳಿಕ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ವಿಧಾನಸಭೆ ಸಚಿವಾಲಯ ಹಾಗೂ ಇತರೆ ಹಿರಿಯ ಅಧಿಕಾರಿಗಳು ಜಿಲ್ಲಾ ಪಂಚಾಯತ್‍ಗೆ ಭೇಟಿ ನೀಡಿದರು.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಗೆ ಸಜೆ

ಚಾಮರಾಜನಗರ, ಸೆ. 13:- ಕರ್ತವ್ಯನಿರತ ಪೊಲೀಸ್ ಪೇದೆಯೊಬ್ಬರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ 2 ವರ್ಷ 2 ತಿಂಗಳು ಸಾದಾ ಸಜೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ತಾಲೂಕಿನ ಅರಳೀಪುರ ಗ್ರಾಮದ ಹನುಮಶೆಟ್ಟಿ ಅವರ ಮಗ ನಾಗರಾಜು ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಕಳೆದ 2013ರ ಏಪ್ರಿಲ್ 26ರಂದು ನಗರದ ಪಟ್ಟಣ ಪೊಲೀಸ್ ಠಾಣೆಯ ಮುಂಭಾಗ ಸಾರ್ವಜನಿಕರನ್ನು ಉದ್ದೇಶಿಸಿ ಅವಾಚ್ಯ ಶಬ್ಧಗಳಿಂದ  ಬೈಯುತ್ತಿದ್ದರು. ಈ ಸಮಯದಲ್ಲಿ ಸಮವಸ್ತ್ರದಲ್ಲಿದ್ದ ಪಟ್ಟಣ ಪೊಲೀಸ್ ಠಾಣೆಯ ಪೇದೆ ಎಂ. ಮಹೇಶ ಅವರು ಕೇಳಲು ಹೋದಾಗ ಆರೋಪಿಯು ಮಹೇಶ್ ಅವರ ಬಟ್ಟೆಯನ್ನು ಹಿಡಿದುಕೊಂಡು ಎಳೆದಾಡಿ ಬಾಯಿಯಿಂದ ಎಡಗಡೆ ಎದೆಯ ಬಳಿ ಕಚ್ಚಿ, ನಂತರ ಎಡಬೆರಳನ್ನೂ ಸಹ ಬಾಯಿಯಿಂದ ಕಚ್ಚಿ ತೀವ್ರ ಸ್ವರೂಪದ ಗಾಯ ಉಂಟು ಮಾಡಿದ್ದ.
ಪ್ರಕರಣ ದಾಖಲುಗೊಂಡು ಪೊಲೀಸ್ ಪೇದೆ ಮಹೇಶ್ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದು ರುಜುವಾತಾಗಿದೆ ಎಂದು ತೀರ್ಮಾನಿಸಿ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು  ನಾಗರಾಜುವಿಗೆ 2 ವರ್ಷ 2 ತಿಂಗಳÀು ಸಾದಾ ಸಜೆ ವಿಧಿಸಿ ಕಳೆದ ಸೆಪ್ಟೆಂಬರ್ 11ರಂದು ತೀರ್ಪು ನೀಡಿದ್ದಾರೆ.


ಪ್ರಾಶ್ಚಾತ್ಯ ಸಂಸ್ಕøತಿಗೆ ಮಾರುಹೋಗದೆ ಭಾರತೀಯ ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳಿ - ಆರ್.ರಂಗನಾಥಬಾಬು


    ಕೊಳ್ಳೇಗಾಲ, ಸೆ,13 ಪ್ರಾಶ್ಚಾತ್ಯ ಸಂಸ್ಕøತಿಗೆ ಮಾರುಹೋಗದೆ ಭಾರತೀಯ ಸಂಸ್ಕøತಿಯನ್ನು ಮ್ಯೆಗೂಡಿಸಿಕೊಂಡು ನಿಮ್ಮ ತನವನ್ನು ಮೆರೆಯಿರಿ ಹಾಗೂ ಇಂತಹ ವೇದಿಕೆಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗುತ್ತದೆ ಎಂದು ಮೈಸೂರಿನ ಬಿಜಿಎಸ್ ಪದವಿಪೂರ್ವ ಕಾಲೇಜಿನ ಶ್ಯೆಕ್ಷಣಿಕ ಸಂಯೋಜನಾಧಿಕಾರಿಗಳಾದ ಆರ್.ರಂಗನಾಥಬಾಬು ಅಭಿಪ್ರಾಯಪಟ್ಟರು.
   ಪಟ್ಟಣದ ಜೆಎಸ್‍ಎಸ್ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಾಂಸ್ಕøತಿಕ ಹಾಗೂ ಕ್ರೀಡಾ ವೇದಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಹೆಣ್ಣು ಮಕ್ಕಳಾಗಿರುವ ನೀವು ಅಂಧಾನುಕರಣೆ ಮಾಡಬೇಡಿ ಕಲೆ, ಸಾಹಿತ್ಯ, ಸಂಸ್ಕøತಿಗಳನ್ನು ಮೈಗೂಡಿಸಿಕೊಂಡು ಶ್ರದ್ಧೆ, ಆಸಕ್ತಿ, ಆತ್ಮವಿಶ್ವಾಸದಿಂದ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ಯೆಪೋಟಿ ನೀಡಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಮುನ್ನಡೆಯಿರಿ ಎಂದು ಕಿವಿಮಾತು ಹೇಳಿದರು ಹಾಗೂ ಈ ಭಾಗದ ಕಲೆ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಜವಬ್ದಾರಿ ನಿಮ್ಮಮೇಲಿದೆ ನಮ್ಮ ನಡೆ ಯಾವ ಕಡೆ ಹೋಗುತ್ತಿದೆ ನಾವು ಇಂದು ಜೀವನವನ್ನು ಯಾವ ರೀತಿ ರೂಪಿಸಿಕೊಳ್ಳುತ್ತಿದ್ದೇವೆ ಎಂಬುದನ್ನು ಅರಿಯಬೇಕು ಸಣ್ಣ ಸಣ್ಣ ಆಸೆಗಳಿಗೆ ಒಳಗಾಗಬೇಡಿ ಜನನಿಯೇ ಜನ್ಮಭೂಮಿ ಈ ಜನ್ಮಭೂಮಿಯ ಋಣವನ್ನು ತೀರಿಸಬೇಕೆಂದು ಕರೆ ಕೊಟ್ಟರು.
   ಚಾಮರಾಜನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎ.ಎಂ. ನಾಗಮಲ್ಲಪ್ಪ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಮಾನವ ಸ್ವಭಾವತಾ ಸಂಘಜೀವಿ ಭೂಮಿಯ ಮೇಲಿರುವ ಜೀವಿಗಳಿಗಿಂತ ವಿಭಿನ್ನವಾಗಿರುವ ಜೀವಿ ಮಾತನಾಡುವ ಕಲೆ ಬಲ್ಲ ಮನುಷ್ಯ ವಿಕಾಸ ಹೊಂದಿದ್ದರೂ ಮಾನಸಿಕ ಸ್ಥಿತಿಗತಿಗಳು ಬದಲಾವಣೆ ಹೊಂದದಿರುವುದು ವಿಪರ್ಯಾಸ ಮನುಷ್ಯ ಯಾವುದನ್ನು ಎಷ್ಟು ಯಾವ ರೀತಿ ಬಳಸಬೇಕು ಎಂಬ ವಿವೇಚನೆಯ ಅರಿವಿನಿಂದ ಪರಿಪೂರ್ಣವಾದ ಜೀವನವನ್ನು ನಡೆಸುವಂತವರಾಗಬೇಕು ನಾವು ಉಟ್ಟಿದಾಗಲೇ ನಮ್ಮ ಸಾವು ನಮ್ಮ ಹಿಂದೆ ಹಿಂದೆ ಹಿಂಬಾಲಿಸುತ್ತಿರುತ್ತದೆ ಆದುದರಿಂದ ನಾವು ಯಾವುದೇ ಕ್ಷಣಿಕ ಸುಖಗಳಿಗೆ ಒಳಗಾಗದೇ ನಿಮ್ಮ ವಿದ್ಯಾಭ್ಯಾಸವನ್ನು ಯಶಸ್ವಿಗೊಳಿಸಿ ಆದರೆ ಅಂಕ ಗಳಿಸುವ ಪ್ರವೃತ್ತಿಯನ್ನು ಬಿಟ್ಟು ಮಾನವೀಯತೆ, ಅನುಕಂಪ ಜೀವನಾನುಭವದಿಂದ ಕೂಡಿರುವ ಬದುಕನ್ನು ನಡೆಸಿ ಸಮಾಜಕ್ಕೆ, ತಂದೆ ತಾಯಿಗಳಿಗೆ ಆಸ್ತಿಯಾಗಬೇಕೆಂದು ತಿಳಿಸಿದರು.

       ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರೆಜಿನಾ ಪಿ ಮಲಾಕಿ ವಹಿಸಿ ಮಾತನಾಡುತ್ತಾ ಆಸಕ್ತಿ, ಶ್ರದ್ಧೆ, ಪ್ರಾಮಾಣಿಕತೆಯಿಂದ ಅಧ್ಯಯನ ಮಾಡಿ ವಿದ್ಯಾರ್ಥಿ ಜೀವನದಲ್ಲಿ ನಿಮ್ಮ ಗುರಿಯನ್ನು ಮುಟ್ಟಲು ನಿಮ್ಮ ಪ್ರಯತ್ನ ಪರಿಶ್ರಮ ಅತ್ಯವಶ್ಯಕ. ಗ್ರಾಮೀಣ ಪ್ರದೇಶದ ಹಿನ್ನಲೆಯಲ್ಲಿ ಬಂದಂತಹ ನೀವು ನಿಮ್ಮ ತಂದೆ ತಾಯಿಗಳನ್ನು ನೆನೆಯುತ್ತಾ ಶಿಕ್ಷಣವೇ ಧ್ಯೇಯ ಎಂಬ ಉದ್ದೇಶವನ್ನು ಹೊಂದಿರುವ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವ ನೀವೇ ಪುಣ್ಯವಂತರು. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿರುವ ಸಂಸ್ಥೆಗೆ ನೀವು ಉನ್ನತ ಸ್ಥಾನಮಾನಗಳನ್ನು ಗಳಿಸಿದಾಗ ಕೃತಜ್ಞರಾಗಿರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅಧ್ಯಾಪಕರು ಪ್ರಾಮಾಣಿಕವಾಗಿ ನಿಮ್ಮ ಕರ್ತವ್ಯ ನಿರ್ವಹಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿ ಅವರ ಬದುಕನ್ನು ಕಟ್ಟಲು ಸಹಕಾರಿಯಾಗಬೇಕೆಂದು ತಿಳಿಸಿದರು.
     ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎನ್.ಮಹದೇವಸ್ವಾಮಿ, ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸೆಪ್ಟೆಂಬರ್ 14ರಂದು ವಾಲ್ಮೀಕಿ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ

ಚಾಮರಾಜನಗರ, ಸೆ. 13 - ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು 2017ರ ಅಕ್ಟೋಬರ್ 5ರಂದು ಆಚರಿಸುವ ಸಂಬಂಧ ಸೆಪ್ಟೆಂಬರ್ 14ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಪರಿಶಿಷ್ಟ ವರ್ಗದ ಹಾಗೂ ಇತರೆ ಸಮುದಾಯದ ಮುಖಂಡರು, ಎಲ್ಲಾ ಸಂಘಸಂಸ್ಥೆಗಳು ಮತ್ತು ಕನ್ನಡ ಪರ ಸಂಘಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ನಾಗರಿಕರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ಜಿಲ್ಲಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ. 

ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ, ಶೈಕ್ಷಣಿಕ ಶುಲ್ಕ ಮರುಪಾವತಿ, ಸಾಧನೆ ಪ್ರಶಸ್ತಿ : ಅರ್ಜಿ ಆಹ್ವಾನ

ಚಾಮರಾಜನಗರ, ಸೆ. 13- ಯುವÀಜನ ಮತ್ತು ಕ್ರೀಡಾ ಇಲಾಖೆಯು ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಇಲಾಖೆಯ ವಿವಿಧ ಯೋಜನೆಗಳಡಿ ನೀಡಲಾಗುವ ಪ್ರೋತ್ಸಾಹ ಮತ್ತು ಪ್ರಶಸ್ತಿಗಳಿಗಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, ಕ್ರೀಡಾ ವಿದ್ಯಾರ್ಥಿವೇತನ ಯೋಜನೆ, ಶೈಕ್ಷಣಿಕ ಶುಲ್ಕ ಮರುಪಾವತಿ ಯೋಜನೆ, ಕ್ರೀಡಾ ಪ್ರತಿಭಾ ಯೋಜನೆ, ಸ್ಪೋಟ್ರ್ಸ್ ಅಕಾಡೆಮಿ ಫಾರ್ ಎಕ್ಸ್‍ಲೆನ್ಸ್ ಅಡಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 18. ಕ್ರೀಡಾಪಟುಗಳು ನಿಗದಿತ ಅವಧಿಯೊಳಗೆ ಅರ್ಜಿಗಳನ್ನು hಣಣಠಿ://ಜಥಿes.ಞಚಿಡಿ.ಟಿiಛಿ.iಟಿ ಮೂಲಕ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 08226-224932 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಸೆ. 15ರಂದು ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ

ಚಾಮರಾಜನಗರ, ಸೆ. 13- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 15ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸಿ.ಆರ್. ಬಾಲರಪಟ್ಟಣ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಉದ್ಘಾಟನೆ ನೆರವೇರಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸÀುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ ಘನ ಉಪಸ್ಥಿತರಿರುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಉದ್ಘಾಟನೆ ನೆರವೇರಿಸುವರು.
ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು,  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರೆಜಿನ ಪಿ ಮೆಲಾಕಿ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ದಸರಾ ಕನ್ನಡ ಪುಸ್ತಕ ಮಾರಾಟ ಮೇಳ : ಮಳಿಗೆಗೆ ಅರ್ಜಿ ಆಹ್ವಾನ

ಚಾಮರಾಜನಗರ, ಸೆ. 13 :- ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಉತ್ಸವದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ ಆಶ್ರಯದಲ್ಲಿ ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳವನ್ನು ಸೆಪ್ಟೆಂಬರ್ 21 ರಿಂದ 29ರವರೆಗೆ ಮೈಸೂರಿನಲ್ಲಿ ಏರ್ಪಡಿಸಲಾಗುತ್ತದೆ.
ಈ ಪುಸ್ತಕ ಮೇಳದಲ್ಲಿ ಕನ್ನಡ ಪ್ರಕಾಶಕರು, ಮಾರಾಟಗಾರರು ಭಾಗವಹಿಸಬಹುದಾಗಿದ್ದು ಮಳಿಗೆಯೊಂದಕ್ಕೆ 2 ಸಾವಿರ ರೂ. ಭದ್ರತಾ ಠೇವಣಿ ಡಿಡಿ.ಯನ್ನು ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಹೆಸರಿನಲ್ಲಿ ಡಿಡಿ ಹಾಗೂ ಅರ್ಜಿ ಸಲ್ಲಿಸಬೇಕು.
ಅರ್ಜಿ ನಮೂನೆಯನ್ನು ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಕಚೇರಿ ಅಥವಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಇಲ್ಲವೆ ಪ್ರಾಧಿಕಾರದ ವೆಬ್ ಸೈಟ್ ತಿತಿತಿ.ಞಚಿಟಿಟಿಚಿಜಚಿಠಿusಣಚಿಞಚಿಠಿಡಿಚಿಜiಞಚಿಡಿಚಿ .ಛಿom ನಲ್ಲಿ ಉಚಿತವಾಗಿ ಪಡೆಯಬಹುದು.
ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 18 ಕಡೆಯ ದಿನ. ಅರ್ಜಿ ಹಾಗೂ ಡಿಡಿ.ಯನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು ಇವರಿಗೆ ಅಂಚೆ ಹಾಗೂ ಇ ಮೇಲ್ ಞಚಿಟಿಟಿಚಿಜಚಿಠಿಠಿಡಿಚಿಜiಞಚಿಡಿಚಿ@gmಚಿiಟ.ಛಿom ಮೂಲಕ ಸಲ್ಲಿಸಬೇಕು.
ನಿರ್ಮಿಸಲಾಗುವ 50 ಮಳಿಗೆಗಳನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗುತ್ತದೆ. ಮಾಹಿತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಅಥವಾ ದೂ.ಸಂ. 080-22484516/22107704 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಸೆ. 20ರಂದು ಕೊಳ್ಳೇಗಾಲ ತಾಲೂಕು ಪ.ಜಾ. ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ

ಚಾಮರಾಜನಗರ, ಸೆ. 13 -  ಕೊಳ್ಳೇಗಾಲ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕೊಳ್ಳೇಗಾಲ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸೆಪ್ಟೆಂಬರ್ 20ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ತಾಲೂಕಿನ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಹಿತರಕ್ಷಣೆ ಕುಂದುಕೊರತೆ ಬಗ್ಗೆ ಸಭೆಯಲ್ಲಿ ಚರ್ಚಿಸಲು ಇಚ್ಚಿಸಿದ್ದಲ್ಲಿ ಸಂಘಸಂಸ್ಥೆ ಜಾತಿ ವರ್ಗದವರು ಸೆಪ್ಟೆಂಬರ್ 16ರೊಳಗೆ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಲಿಖಿತವಾಗಿ ಸಲ್ಲಿಸುವಂತೆ  ಸಮಾಜ ಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಹನೂರು : ವಾಹನ ಪಡೆಯಲು ಕಾಲಾವಕಾಶ

ಚಾಮರಾಜನಗರ, ಸೆ. 13 -  ಹನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೆಲವು ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳ ವಾರಸುದಾರರು ಇದುವರೆಗೂ ಪತ್ತೆಯಾಗದ ಕಾರಣ ವಾಹನಗಳನ್ನು ಬಹಿರಂಗ ಹರಾಜು ಹಾಕಲು ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ವಾಹನ ಮಾಲೀಕರು ಇದ್ದಲ್ಲಿ ವಾಹನ ದಾಖಲಾತಿ ಹಾಜರುಪಡಿಸಿ ವಶಕ್ಕೆ ಪಡೆಯಲು 10 ದಿನಗಳ ಕಾಲಾವಕಾಶ ನೀಡಲಾಗಿದೆ.
ಹರಾಜು ಹಾಕಲಿರುವ ವಾಹನಗಳನ್ನು ಹನೂರು ಪೊಲೀಸ್ ಠಾಣೆಯಲ್ಲಿ ನೋಡಬಹುದಾಗಿದೆ. ನಿಗದಿತ 10 ದಿನಗಳ ಅವಧಿಯಲ್ಲಿ ವಾಹನ ಮಾಲೀಕರು ಬಾರದಿದ್ದಲ್ಲಿ ಬಹಿರಂಗ ಹರಾಜಿಗೆ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ಹನೂರು ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್  ತಿಳಿಸಿದ್ದಾರೆ.















Tuesday, 12 September 2017

ಚಾಮರಾಜನಗರದಲ್ಲಿ ಆತ್ಮಹತ್ಯೆ ತಡೆ ದಿನ ಜಾಗೃತಿ ಜಾಥಾ (12-09-2017)

ಚಾಮರಾಜನಗರದಲ್ಲಿ ಆತ್ಮಹತ್ಯೆ ತಡೆ ದಿನ ಜಾಗೃತಿ ಜಾಥಾ


ಚಾಮರಾಜನಗರ, ಸೆ. 12- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದಲ್ಲಿಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು.
ನಗರದ ಚಾಮರಾಜೇಶ್ವರ ದೇವಾಲಯದ ಬಳಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಹಸಿರು ನಿಶಾನೆ ತೋರುವ ಮೂಲಕ ಜಾಗೃತಿ ಜಾಥಾಗೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ರಾಮಚಂದ್ರ ಅವರು ಪ್ರಸ್ತುತ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗತೊಡಗಿದೆ.ಆತ್ಮಹತ್ಯೆಯಿಂದ ಸಮಸ್ಯೆ ಪರಿಹಾರವಾಗದು. ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು. ಯಾವುದೆ ಕಾರಣಕ್ಕೂ ದೃತಿಗೆಡಬಾರದು ಎಂದರು.
ಯಾರೆ ಇರಲಿ ಸಮಸ್ಯೆಗಳಿಗೆ ಪರಿಹಾರ ಇದ್ದೆಇರುತ್ತದೆ. ಕ್ಷಣಿಕ ಮಾತ್ರದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರ ಅನಾಹುತಕ್ಕೆ ಎಡೆಮಾಡಿಕೊಡುತ್ತದೆ. ಹೀಗಾಗಿ ಆರೋಗ್ಯಕರ ಚಿಂತನೆಗಳಿಗೆ ಮನಸ್ಸನ್ನು ಹರಿಯಬಿಡಬೇಕು ಎಂದು ರಾಮಚಂದ್ರ ಸಲಹೆ ಮಾಡಿದರು.
ಜನರ ಆರೋಗ್ಯ ಸಮಸ್ಯೆಗಳಿಗೆ ಸಾಕಷ್ಟು ಪರಿಹಾರ ನೀಡುವ ಸೌಲಭ್ಯಗಳನ್ನು ಒದಗಿಸಲಾಗಿದೆ. ಎಲ್ಲ ಬಗೆಯ ಚಿಕಿತ್ಸೆ, ಔಷಧಿ ಉಪಚಾರಕ್ಕೆ ಹೆಚ್ಚಿನ ನೆರವನ್ನು ಸರ್ಕಾರ ನೀಡುತ್ತಿದೆ. ಅರೋಗ್ಯ ಸೇವೆಗಳನ್ನು ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ರಾಮಚಂದ್ರ ತಿಳಿಸಿದರು.
ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ.ಸದಾಶಿವಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ,ಡಾ.ಅನಿಲ್‍ಕುಮಾರ್,ಡಾ.ರಾಜು ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
   

ಸೆ. 13ರಂದು ವಿಧಾನಸಭೆಯ ಕಾಗದಪತ್ರಗಳ ಸಮಿತಿ ಸಭೆ

ಚಾಮರಾಜನಗರ, ಸೆ. 12- ಕರ್ನಾಟಕ ವಿಧಾನ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯು ಸೆಪ್ಟೆಂಬರ್ 13ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಕಚೇರಿಗೆ ಭೇಟಿ ನೀಡಿ ವಾರ್ಷಿಕ ವರದಿಗಳನ್ನು ಸಲ್ಲಿಸದಿರುವ ಬಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಿದೆ.
ವಿಧಾನಸಭೆಯ ಸದಸ್ಯರು ಹಾಗೂ ಸಮಿತಿಯ ಅಧ್ಯಕ್ಷರಾದ ಸಾ.ರಾ. ಮಹೇಶ್, ಸಮಿತಿಯ ಸದಸ್ಯರಾಗಿರುವ ವಿಧಾನ ಸಭೆಯ ಸದಸ್ಯರಾದ ಎಂ.ಎಚ್. ಅಂಬರೀಶ್, ಶಾಮನೂರು ಶಿವಶಂಕರಪ್ಪ, ಎನ್.ವೈ. ಗೋಪಾಲಕೃಷ್ಣ, ಎ.ಎಸ್. ಪಾಟೀಲ (ನಡಹಳ್ಳಿ), ಡಿ.ಜಿ. ಶಾಂತನಗೌಡ, ಎಚ್.ವೈ. ಮೇಟಿ, ಪ್ರಿಯಕೃಷ್ಣ, ಮುನಿರತ್ನ, ಎಸ್. ಮುನಿರಾಜು, ಎಂ.ಕೃಷ್ಣಪ್ಪ, ಟಿ.ಎಚ್. ಸುರೇಶ್ ಬಾಬು, ಎಂ. ಕೃಷ್ಣಾರೆಡ್ಡಿ, ಕೆ.ಎಸ್. ಪುಟ್ಟಣ್ಣಯ್ಯ, ಬಿ. ನಾಗೇಂದ್ರ, ವಿಧಾನ ಪರಿಷತ್ತಿನ ಸದಸ್ಯರಾದ ಡಿ.ಯು. ಮಲ್ಲಿಕಾರ್ಜುನ, ವಿವೇಕರಾವ್ ವಸಂತರಾವ್ ಪಾಟೀಲ್, ಜಿ. ರಘು ಆಚಾರ್, ವಿಧಾನಸಭೆ ಸಚಿವಾಲಯ ಅಧಿಕಾರಿಗಳಾದ ಜಂಟಿ ಕಾರ್ಯದರ್ಶಿ ಮಲ್ಲಪ್ಪ ಬಿ. ಕಾಳೆ, ಉಪಕಾರ್ಯದರ್ಶಿ ಎಜಾಜ್ ಅಹಮದ್ ಖಾನ್, ಅಧೀನ ಕಾರ್ಯದರ್ಶಿ ಕೆ.ಎಸ್. ಗಣೇಶ, ಶಾಖಾಧಿಕಾರಿ ನೂರ್ ಅಹಮದ್ ಹಾಜಿ ಸಾಹೇಬ್ ಜಮಾದಾರ್ ಅವರು ಭೇಟಿ ನೀಡುವರು.
ಸೆಪ್ಟೆಂಬರ್ 13ರ ಬೆಳಿಗ್ಗೆ 11 ಗಂಟೆಗೆ ಚಾಮರಾಜನಗರ ಜಿಲ್ಲಾ ಪಂಚಾಯತ್ ಕಚೇರಿಗೆ ಸಮಿತಿಯು ಭೇಟಿ ನೀಡಲಿದೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ವಾರ್ಷಿಕ ವರದಿಗಳನ್ನು ಸಲ್ಲಿಸದಿರುವ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಿದೆ. ಮಧ್ಯಾಹ್ನ 3 ಗಂಟೆಗೆ ಸಮಿತಿಯು ಬೆಂಗಳೂರಿಗೆ ತೆರಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಚನ ಸಂಪುಟ ಮಾರಾಟ

ಚಾಮರಾಜನಗರ, ಸೆ. 12 - ಕನ್ನಡ ನಾಡಿನ ಪ್ರಥಮ ಪ್ರಜಾ ಸಾಹಿತ್ಯವಾಗಿರುವ ವಚನಗಳು ನಮ್ಮ ಪರಂಪರೆಯ ಅಪೂರ್ವ ಆಸ್ತಿ ಎನಿಸಿದೆ. ಪ್ರಸ್ತುತ ಕನ್ನಡ ಸಾಹಿತ್ಯ ಲೋಕದಲ್ಲಿ ಹತ್ತಾರು ವಚನಕಾರರ ಸಾವಿರಾರು ವಚನಗಳು ಲಭ್ಯವಿದೆ. ಇಂತಹ ವಚನಗಳು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಹಾಗೂ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹವುಗಳಾಗಿದ್ದು ಸಮಾಜಕ್ಕೆ ಅತ್ಯಂತ ಪ್ರಸ್ತುತ ಸಾಹಿತ್ಯವಾಗಿದೆ.
ಇಂತಹ ಸಾವಿರಾರು ವಚನಗಳನ್ನು ಒಟ್ಟುಗೂಡಿಸಿ ಕನ್ನಡ ಪುಸ್ತಕ ಪ್ರಾಧಿಕಾರವು ಬಸವಯುಗದ ವಚನ ಮಹಾಸಂಪುಟ-1952 ಪುಟಗಳು ಹಾಗೂ ಬಸವೋತ್ತರ ಯುಗದ ವಚನ ಮಹಾಸಂಪುಟ-1536 ಪುಟಗಳನ್ನು ಹೊಂದಿದಂತೆ 3ನೆಯ ಮುದ್ರಣವಾಗಿ ಎರಡು ಮಹಾಸಂಪುಟಗಳನ್ನು ಮುದ್ರಣ ಮಾಡಿಸಿ ಬಿಡುಗಡೆ ಮಾಡಿದೆ.
ಸದರಿ ಎರಡು ಸಂಪುಟಗಳ ಒಟ್ಟಾರೆ ಖರೀದಿ ಮೌಲ್ಯ 600 ರೂ.ಗಳು. ಈ ಸಂಪುಟಗಳು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಿಲ್ಲಾ ಕಚೇರಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಚಾಮರಾಜನಗರ, ಸೆ. 12 - 2017-18ನೇ ಸಾಲಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ, ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 20ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಗುಂಡ್ಲುಪೇಟೆ : ವಿವಿಧ ವಿಷಯಗಳ ತರಬೇತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಸೆ. 12 -  ಗುಂಡ್ಲುಪೇಟೆ ಪುರಸಭೆ ವತಿಯಿಂದ ಡೇ ನಲ್ಮ್ ಯೋಜನೆಯಡಿ ವಿವಿಧ ತರಬೇತಿ ನೀಡಲಿದೆ.
5ನೇ ತರಗತಿ ವಿದ್ಯಾರ್ಹತೆ ಉಳ್ಳವರಿಗೆ ಸೀವಿಂಗ್ ಮಿಷನ್ ಆಪರೇಟರ್, 10ನೇ ತರಗತಿ ವಿದ್ಯಾರ್ಹತೆ ಉಳ್ಳವರಿಗೆ ಟ್ಯಾಕ್ಸಿ ಡ್ರೈವಿಂಗ್, ಬಯೋಮೆಟ್ರಿಕ್ ಡಾಟಾ ಆಪರೇಟರ್, ಡಾಟಾ ಆಪರೇಟರ್ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಗಳು 18 ರಿಂದ 45ರ ವಯೋಮಿತಿಯೊಳಗಿರಬೇಕು. ಆಸಕ್ತರು ಸೆಪ್ಟೆಂಬರ್ 20ರೊಳಗೆ ಪುರಸಭೆ ಕಾರ್ಯಾಲಯ ಸಂಪರ್ಕಿಸುವಂತೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
     

ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು