Tuesday, 6 October 2026

ಜಿಲ್ಲೆಯಲ್ಲಿ ಎರಡನೇ ದಿನವು ಕೇಂದ್ರ ಅಧಿಕಾರಿಗಳ ತಂಡದಿAದ ಬರ ಅಧ್ಯಯನ : ಒಳಗಿದ ಬೆಳೆ, ವಿಬಿ ಜಿ ರಾಮ್ ಜಿ ಕಾಮಗಾರಿ ವೀಕ್ಷಣೆ











ಜಿಲ್ಲೆಯಲ್ಲಿ ಎರಡನೇ ದಿನವು ಕೇಂದ್ರ ಅಧಿಕಾರಿಗಳ ತಂಡದಿAದ ಬರ ಅಧ್ಯಯನ : ಒಳಗಿದ ಬೆಳೆ, ವಿಬಿ ಜಿ ರಾಮ್ ಜಿ ಕಾಮಗಾರಿ ವೀಕ್ಷಣೆ 


        ಚಾಮರಾಜನಗರ, ಅಕ್ಟೋಬರ್ ೦೬ - ಬರ ಅಧ್ಯಯನಕ್ಕಾಗಿ ಆಗಮಿಸಿದ್ದ ಕೇಂದ್ರ ಅಧಿಕಾರಿಗಳ ತಂಡವು ಎರಡನೇ ದಿನವಾದ ಇಂದು ಸಹ ಹನೂರು ಹಾಗೂ ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರದ ತೀವ್ರತೆಯನ್ನು ಪರಿಶೀಲಿಸಿತು. 


      ಕೇಂದ್ರ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಉಪ ಆಯುಕ್ತರಾದ ಡಾ. ಸುಧಾಮ್ ಬೇಗ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಸಲಹೆಗಾರರಾದ ಆಶೀಶ್ ಪಾಂಡೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಮಹಾಲನೋಬಿಸ್ ರಾಷ್ಟಿçÃಯ ಬೆಳೆ ಮುನ್ಸೂಚನೆ ಕೇಂದ್ರ (ಎಂಎನ್‌ಸಿಎಫ್‌ಸಿ)ದ ಉಪನಿರ್ದೇಶಕರಾದ ಕರಣ್ ಚೌಧರಿ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಮಂಗಳವಾರವು ಸಹ ಹಲವು ಬರ ಪೀಡಿತ ಪ್ರದೇಶಗಳಲ್ಲಿ ಬರ ಅಧ್ಯಯನವನ್ನು  ಮುಂದುವರೆಸಿತು.  

 

      ಗುಂಡ್ಲುಪೇಟೆ ತಾಲೂಕಿನ ಪರ್ವತನಪುರದ ದೇವಿರಮ್ಮ ಮಲ್ಲಿಯಯ್ಯ ರವರ ಜಮೀನಿಗೆ ಭೇಟಿ ನೀಡಿ ಒಣಗಿದ ಬಾಳೆ ಬೆಳೆಯನ್ನು ವೀಕ್ಷಿಸಿದರು. ಇದೇ ವೇಳೆ ತಂಡದ ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿದ ಜಮೀನಿನ ಮಾಲಿಕರು ಬೆಳೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇವೆ. ಮಳೆಯಿಲ್ಲದೆ ಫಸಲು ಬಂದಿಲ್ಲ. ಸರಿಯಾದ ವೇಳೆಗೆ ಮಳೆ ಬಂದಿದ್ದರೆ ನಮಗೆ ೨ ಲಕ್ಷ ರೂ. ಆದಾಯ ಬರುತ್ತಿತ್ತು. ಮಳೆ ಕೈಕೊಟ್ಟಿದ್ದರಿಂದ ತೊಂದರೆ ಅನುಭವಿಸುವಂತಾಗಿದೆ. ನಮ್ಮ ನೆರವಿಗೆ ಬರಬೇಕೆಂದು ಕೋರಿದರು. 


      ಹನೂರು ತಾಲೂಕಿಗೆ ಭೇಟಿ ನೀಡಿದ ತಂಡವು ಮೊದಲಿಗೆ ತಾಲೂಕಿನ ಹುಲ್ಲೇಪುರ ಗ್ರಾಮದ ರಾಜಮ್ಮಣ್ಣಿ ಅವರ ಜಮೀನನ್ನು ವೀಕ್ಷಿಸಿತು. ೨.೪ ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿ ಮಳೆಬಾರದ ಪರಿಣಾಮ ಬೆಳೆ ಮೊಳಕೆಯೊಡೆದ ಕೆಲವೇ ದಿನಗಳಲ್ಲಿ ಸಂಪೂರ್ಣ ಒಣಗಿ ಹೋಗಿದೆ. ಬಿತ್ತನೆಗಾಗಿ ಮಾಡಿದ ಸಾಲ ತೀರಿಸಲು ಇನ್ನೂ ಆಗಿಲ್ಲ. ಸೂಕ್ತ ಪರಿಹಾರ ಒದಗಿಸಬೇಕೆಂದು ತಂಡದ ಮುಂದೆ ರಾಜಮ್ಮಣ್ಣಿ ಅವರು ಅಳಲು ತೋಡಿಕೊಂಡರು.


       ತದನಂತರ ತಂಡವು ಹುಬ್ಬೆಹುಣಸೆ ಗ್ರಾಮದಲ್ಲಿ ರೈತರಾದ ಪ್ರಕಾಶ್ ಅವರ ಡೇರಿಗೆ ಭೇಟಿ ನೀಡಿ ವೀಕ್ಷಿಸಿತು. ತಂಡದ ಅಧಿಕಾರಿಗಳಿಗೆ ಮಾಹಿತಿ ನೀಡಿದ ಪ್ರಕಾಶ್ ಅವರು ಕಳೆದ ಮೂರು ತಿಂಗಳಿAದ ಮೇವಿನ ಬೆಲೆ ಹೆಚ್ಚಾಗುತ್ತಿದೆ. ಮೇವು ಪೂರೈಕೆಗೆ ಕಷ್ಟವಾಗುತ್ತಿದೆ. ಕುಡಿಯುವ ನೀರಿಗೂ ಅಭಾವ ಉಂಟಾಗಿದ್ದು, ಟ್ಯಾಂಕರ್ ಮೂಲಕ ನೀರು ತರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವಿವರಿಸಿದರು. 


      ಇದೇ ವೇಳೆ ಶಾಸಕರಾದ ಎಂ.ಆರ್. ಮಂಜುನಾಥ್ ಸಹ ಹಾಜರಿದ್ದು ಹನೂರು ತಾಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಇದೆ. ಕೊಳವೆಬಾವಿ ಕೊರೆಸಿದರೂ ಅಂತರ್ಜಲ ಮಟ್ಟ ಕುಸಿದಿರುವುದರಿಂದ ನೀರು ಲಭ್ಯವಾಗುತ್ತಿಲ್ಲ. ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಗುತ್ತಿದೆ. ಅತೀ ಹೆಚ್ಚು ಸಮಸ್ಯೆ ಎದುರಿಸುತ್ತಿರುವುದು ಹನೂರು ತಾಲೂಕು ಆಗಿದೆ ಎಂದು ಬರ ಅಧ್ಯಯನ ತಂಡಕ್ಕೆ ಮಾಹಿತಿ ಒದಗಿಸಿದರು. 


      ನಂತರ ಅಜ್ಜಿಪುರದಲ್ಲಿ ರೈತರಾದ ಮಲ್ಲೇಗೌಡ ಅವರ ಅರಿಶಿನ ಜಮೀನಿಗೆ ತಂಡ ಭೇಟಿ ಕೊಟ್ಟು ಪರಿಶೀಲಿಸಿತು. ರೈತರಾದ ಮಲ್ಲೇಗೌಡ ಅವರು ಮಾತನಾಡಿ ಬಿತ್ತನೆ ಬೀಜ, ಗೊಬ್ಬರ, ಕೂಲಿ ಸೇರಿದಂತೆ ಸುಮಾರು ೨ ಲಕ್ಷ ರೂ. ಖರ್ಚು ಮಾಡಿದ್ದೇನೆ. ಆದರೆ ಮಳೆಯಿಲ್ಲದೆ ಗೆಡ್ಡೆಗಳು ಕೊಳೆತು ಬೆಳೆ ಸಂಪೂರ್ಣ ಹಾನಿಯಾಗಿದೆ. ಅಂತರ್ಜಲ ಮಟ್ಟ ಕಡಿಮೆಯಾಗಿರುವುದರಿಂದ ಕೊಳವೆ ಬಾವಿಗಳಲ್ಲಿಯೂ ನೀರು ಸಿಗುತ್ತಿಲ್ಲ ಎಂದು ಹೇಳಿದರು. 


       ಇದೇ ವೇಳೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಗಿರೀಶ್ ಅವರು ಮಾಹಿತಿ ನೀಡಿ ಹನೂರು ತಾಲೂಕಿನಲ್ಲೇ ೧,೮೦೦ ಎಕರೆ ಪ್ರದೇಶಷ್ಟು ತೋಟಗಾರಿಕೆ ಬೆಳೆ ಮಳೆ ಕೊರತೆಯಿಂದ ಹಾನಿಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ೧೩,೫೦೦ ಎಕರೆಯಷ್ಟು ತೋಟಗಾರಿಕೆ ಬೆಳೆ ನಷ್ಟವಾಗಿದೆ ಎಂದು ವಿವರಿಸಿದರು. 


      ಕೇಂದ್ರ ಅಧಿಕಾರಿಗಳ ತಂಡವು ಪುದುರಾಮಪುರ ಗ್ರಾಮಕ್ಕೆ ಭೇಟಿ ನೀಡಿ ವಿಬಿ ಜಿ ರಾಮ್ ಜಿ ಯೋಜನೆಯಡಿ ನಿರ್ವಹಿಸಲಾಗುತ್ತಿದ್ದ ಕಾಲುವೆ ಹೂಳೆತ್ತುವ ಕೆಲಸವನ್ನು ವೀಕ್ಷಿಸಿದರು. 


      ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ತಹಶೀಲ್ದಾರ್ ಚೈತ್ರ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಭಾನುಪ್ರಕಾಶ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಮಾನ್ಯುವೆಲ್ ಸಂತೋಷ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು. 


ಅ. ೭, ೮, ೯ರಂದು ಚಾಮರಾಜನಗರ, ಗುಂಡ್ಲುಪೇಟೆ ಚೆಸ್ಕ್ ಉಪವಿಭಾಗ ಕಚೇರಿಯಲ್ಲಿ ಪಿಎಂಎಸ್‌ಜಿವೈ ಸೇವಾ ಸೇತು ಶಿಬಿರ : ಸದುಪಯೋಗಕ್ಕೆ ಮನವಿ


        ಚಾಮರಾಜನಗರ, ಅಕ್ಟೋಬರ್ ೦೬ :- ಭಾರತ ಸರ್ಕಾರದ ಮಹತ್ವದ ಯೋಜನೆಯಾದ ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಚಾಮರಾಜನಗರ ಉಪವಿಭಾಗ ಮತ್ತು ಗುಂಡ್ಲುಪೇಟೆ ಉಪವಿಭಾಗ ಕಚೇರಿಯಲ್ಲಿ ಅಕ್ಟೋಬರ್ ೭, ೮ ಮತ್ತು ೯ರಂದು ಬೆಳಗ್ಗೆ ೧೦.೩೦ ರಿಂದ ಸಂಜೆ ೫.೩೦ ಗಂಟೆಯವರೆಗೆ ಸೇವಾ ಸೇತು ಶಿಬಿರವನ್ನು ಆಯೋಜಿಸಲಾಗಿದೆ. 


       ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸೇವಾ ಸೇತು ಶಿಬಿರಗಳನ್ನು ಆಯೋಜಿಸುವಂತೆ ಭಾರತ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ (ಎಂಎನ್‌ಆರ್‌ಇ) ನಿರ್ದೇಶಿಸಿದೆ. 


       ಯೋಜನೆಯ ಸೌಲಭ್ಯಗಳನ್ನು ಅರ್ಹ ಗ್ರಾಹಕರಿಗೆ ಯೋಜನೆಯ ಸೌಲಭ್ಯಗಳನ್ನು ತಲುಪಿಸುವ ಹಾಗೂ ವ್ಯಾಪಕವಾಗಿ ಜಾಗೃತಿ ಮೂಡಿಸುವ ಸಲುವಾಗಿ ಸೇವಾ ಸೇತು ಶಿಬಿರಗಳನ್ನು ಏರ್ಪಡಿಸಲಾಗಿದೆ.

   

       ರೈತರು, ಸಾರ್ವಜನಿಕರು ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗಪಡಿಸಿಕೊಳ್ಳುವಂತೆ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ. 



ಚೇತನ ಯೋಜನೆಯಡಿ ಪ್ರೋತ್ಸಾಹಧನಕ್ಕಾಗಿ ಮಹಿಳೆಯರಿಂದ ಅರ್ಜಿ ಆಹ್ವಾನ


        ಚಾಮರಾಜನಗರ, ಅಕ್ಟೋಬರ್ ೦೬ :- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ೨೦೨೬-೨೭ನೇ ಸಾಲಿಗೆ ಚೇತನ ಯೋಜನೆಯಡಿ (ದಮನಿತ ಮಹಿಳೆಯರು) ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಅಭಿವೃದ್ದಿ ಹೊಂದಲು ೪೫ ಸಾವಿರ ರೂ. ಗಳ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಆಸಕ್ತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. 


       ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. ೨೦ ರಿಂದ ೫೫ ವರ್ಷದೊಳಗಿರಬೇಕು. ರಾಷ್ಟಿçÃಕೃತ ಬ್ಯಾಂಕ್‌ನಲ್ಲಿ ಕಡ್ಡಾಯವಾಗಿ ಖಾತೆಯನ್ನು ಹೊಂದಿದ್ದು, ಬ್ಯಾಂಕ್ ಖಾತೆಯ ಪ್ರತಿಯನ್ನು ಲಗತ್ತಿಸಬೇಕು ಹಾಗೂ ಕಡ್ಡಾಯವಾಗಿ ಬ್ಯಾಂಕ್ ಖಾತೆಯೊಂದಿಗೆ ಅರ್ಜಿದಾರರ ಆಧಾರ್ ಸೀಡಿಂಗ್ ಆಗಿರಬೇಕು. ಯಾವುದೇ ಆರ್ಥಿಕ ಸಂಸ್ಥೆ, ಬ್ಯಾಂಕುಗಳಲ್ಲಿ ಸುಸ್ತಿದಾರರಾಗಿರಬಾರದು ಎಂಬ ಬಗ್ಗೆ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು. ಬಿ.ಪಿ.ಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾನ ಗುರುತಿನ ಚೀಟಿ, ಸ್ನೇಹ ಜ್ಯೋತಿ ಸಂಸ್ಥೆಯಲ್ಲಿ ನೊಂದಾಯಿಸಿದ ಗುರುತಿನ ಚೀಟಿ ಹೊಂದಿರಬೇಕು.


      ಅರ್ಜಿಗಳನ್ನು ಆನ್ ಲೈನ್ ಮೂಲಕ hಣಣಠಿs://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ ಮತ್ತು ಆಫ್‌ಲೈನ್‌ನಲ್ಲಿ ಅಕ್ಟೋಬರ್ ೩೧ರೊಳಗೆ ಸಲ್ಲಿಸಬಹುದು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ವಿದ್ಯಾರ್ಥಿವೇತನ, ಶುಲ್ಕಮರುಪಾವತಿ, ವಿದ್ಯಾಸಿರಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ


        ಚಾಮರಾಜನಗರ, ಅಕ್ಟೋಬರ್ ೦೬ :- ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ಹಾಗೂ ಪ್ರವರ್ಗ-೧ರ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ೨೦೨೬-೨೭ನೇ ಸಾಲಿಗೆ ನೀಡಲಾಗುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕಮರುಪಾವತಿ, ವಿದ್ಯಾಸಿರಿ-ಊಟ, ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ ೩೧ರವರೆಗೆ ವಿಸ್ತರಿಸಲಾಗಿದೆ.

     

       ಆನ್‌ಲೈನ್ ಮೂಲಕ ವೆಬ್‌ಸೈಟ್ hಣಣಠಿs://ssಠಿ.ಠಿosಣmಚಿಣಡಿiಛಿs.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಅರ್ಜಿ ಸಲ್ಲಿಸಬಹುದು. ಕಾರ್ಯಕ್ರಮಗಳ ವಿವರ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬAಧಿಸಿದ ಸರ್ಕಾರಿ ಆದೇಶಗಳ ಬಗ್ಗೆ ಮಾಹಿತಿಗಾಗಿ ವೆಬ್‌ಸೈಟ್ hಣಣಠಿs://bಛಿತಿಜ.ಞಚಿಡಿಟಿಚಿಣಚಿಞಚಿ.gov.iಟಿ ಗೆ ಭೇಟಿ ನೀಡಬಹುದು. 


           ಇಲಾಖಾ ಸಹಾಯವಾಣಿ ದೂರವಾಣಿ ಸಂಖ್ಯೆ: ೮೦೫೦೭೭೦೦೦೪, ಇ-ಮೇಲ್ bಛಿತಿಜheಟಠಿಟiಟಿe@gmಚಿiಟ.ಛಿom ಹಾಗೂ ರಾಜ್ಯ ವಿದ್ಯಾರ್ಥಿವೇತನ ತಂತ್ರಾAಶದ ಸಹಾಯವಾಣಿ ಇ-ಮೇಲ್ ಠಿosಣmಚಿಣಡಿiಛಿheಟಠಿ@ಞಚಿಡಿಟಿಚಿಣಚಿಞಚಿ.gov.iಟಿ, ದೂರವಾಣಿ ಸಂಖ್ಯೆ ೧೯೦೨ ಅನ್ನು ಸಂಪರ್ಕಿಸುವAತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕೊಳ್ಳೇಗಾಲ ತಾಲೂಕು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅವ್ಯವಹಾರ ಪ್ರಕರಣ : ದಾಖಲಾತಿ ನೀಡಲು ಗ್ರಾಹಕರಿಗೆ ಮನವಿ 


        ಚಾಮರಾಜನಗರ, ಅಕ್ಟೋಬರ್ ೦೬:- ಕೊಳ್ಳೇಗಾಲ ತಾಲ್ಲೂಕು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಸಂಬAಧ ವರದಿ ತಯಾರಿಸಲು ಈಗಾಗಲೇ ಸಂಘದಲ್ಲಿ ವ್ಯವಹರಿಸಿರುವ ಗ್ರಾಹಕರು ತಮ್ಮ ಮೂಲ ಠೇವಣಾತಿ ಬಾಂಡ್/ಚಲನ್, ಪಿಗ್ಮಿ ಕಾರ್ಡ್, ಚಿನ್ನದ ಚೀಟಿ ಕಾರ್ಡ್/ ಚಲನ್ ದಾಖಲಾತಿಗಳನ್ನು ಪರಿಶೀಲಿಸಲು ಹಾಗೂ ನಿಖರವಾಗಿ ಬಾಕಿ ಪಟ್ಟಿ ತಯಾರಿಸಲು ೧೫ ದಿನಗಳೊಳಗೆ ಕೊಳ್ಳೇಗಾಲ ತಾಲೂಕಿನ ಸಹಕಾರ ಅಭಿವೃದ್ದಿ ಕಚೇರಿ ಸಂಪರ್ಕಿಸಿ ದಾಖಲಾತಿ ನೀಡುವಂತೆ ಕೋರಲಾಗಿದೆ. 


       ಕೊಳ್ಳೇಗಾಲ ತಾಲ್ಲೂಕು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ೧೯೫೯ರ ಪ್ರಕರಣ ೬೪ ರೀತ್ಯಾ ವಿಚಾರಣೆಯನ್ನು ನಡೆಸಲು ಕೊಳ್ಳೇಗಾಲ ತಾಲ್ಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿಯನ್ನು ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ. ದಿನಾಂಕ ೩-೦೯-೨೦೨೫ಕ್ಕೆ ಇದ್ದಂತೆ ಸಂಘದ ಠೇವಣಾತಿ ಬಾಕಿ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಕೈಬಿಟ್ಟಿರುವ ಠೇವಣಿದಾರರ ಠೇವಣಿ ಮೊತ್ತ ೨೦೨೦-೨೧ ರಿಂದ ೨೦೨೪-೨೫ ಹಾಗೂ ಇಲ್ಲಿಯವರೆಗಿನ ಅವಧಿಯಲ್ಲಿ ಚಿನ್ನದ ಸಾಲಗಳ ವ್ಯವಹಾರ, ಪಿಗ್ಮಿ ಸಾಲದ ವ್ಯವಹಾರ ಪಿಗ್ಮಿ ಠೇವಣಿ, ಸಂಬAಧ ನಿಖರವಾಗಿ ವಿಚಾರಣೆ ವರದಿಯನ್ನು ತಯಾರಿಸಿ ತಪ್ಪಿತಸ್ಥರ ವಿರುದ್ಧ ಹಣದುರುಪಯೋಗದ ಮೊತ್ತವನ್ನು ವಸೂಲಾತಿಗೆ ಜವಾಬ್ದಾರಿ ನಿಗಧಿಪಡಿಸುವ ಉದ್ದೇಶದಿಂದ ಈಗಾಗಲೇ ಸಂಘದಲ್ಲಿ ವ್ಯವಹರಿಸಿರುವ ಗ್ರಾಹಕರು ತಮ್ಮ ಮೂಲ ಠೇವಣಾತಿ ಬಾಂಡ್/ಚಲನ್ (ಮುಖ್ಯ ಕಾರ್ಯನಿರ್ವಾಹಕರ/ನಗದು ಗುಮಾಸ್ಥರ ಸಹಿಯುಳ್ಳ), ಪಿಗ್ಮಿ ಕಾರ್ಡ್ (ಪಿಗ್ಮಿ ವಸೂಲಿದಾರರ ಸಹಿಯುಳ್ಳ), ಚಿನ್ನದ ಚೀಟಿ ಕಾರ್ಡ್/ಚಲನ್ (ಮುಖ್ಯಕಾರ್ಯನಿರ್ವಾಹಕರ/ನಗದು ಗುಮಾಸ್ಥರ ಸಹಿಯುಳ್ಳ) ದಾಖಲಾತಿಗಳನ್ನು ಪರಿಶೀಲಿಸಲು ಹಾಗೂ ನಿಖರವಾಗಿ ಬಾಕಿ ಪಟ್ಟಿ ತಯಾರಿಸಲು ೧೫ ದಿನಳೊಳಗಾಗಿ ಕೊಳ್ಳೇಗಾಲ ತಾಲೂಕಿನ ಸಹಕಾರ ಅಭಿವೃದ್ದಿ ಕಚೇರಿ ಅಥವಾ ಮೊಬೈಲ್ ಸಂ:೯೧೦೮೬೬೬೨೬೭ ಸಂಪರ್ಕಿಸಿ ದಾಖಲಾತಿ ನೀಡುವಂತೆ ವಿಚಾರಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ. 


ಅ. ೭ರಂದು ವೀರನಪುರ ವ್ಯಾಪ್ತಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ


        ಚಾಮರಾಜನಗರ, ಅಕ್ಟೋಬರ್ ೦೬ ):- ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದಿಂದ ಹರದನಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ ವೀರನಪುರ ಉಪಕೇಂದ್ರದ ನಿರ್ವಹಣೆ ಕಾಮಗಾರಿಯನ್ನು ಅಕ್ಟೋಬರ್ ೭ ರಂದು ಹಮ್ಮಿಕೊಂಡಿರುವುದರಿAದ ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 


       ಉಡಿಗಾಲ, ನಂಜೇದೇವನಪುರ, ವೀರನಪುರ, ಉಗನೇದಹುಂಡಿ, ದೇವಲಾಪುರ ಲಕ್ಷ್ಮೀಪುರ, ಮಹದೇಶ್ವರ ಕಾಲೋನಿ, ಬಡಗಲಪುರ, ಸಾಣೇಗಾಲ, ಬೊಕ್ಕೆಪುರ, ಶಿವಪುರ, ಕಡುವಿನಕಟ್ಟೆಹುಂಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 


       ಸಾರ್ವಜನಿಕರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬAಧಿತ ದೂರು ಮತ್ತು ಸಹಾಯಕ್ಕಾಗಿ ಉಚಿತ ದೂರವಾಣಿ ಸಂಖ್ಯೆ ೧೯೧೨ ಗೆ ಕರೆ ಮಾಡಬಹುದು ಎಂದು ನಿಗಮದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಎಚ್‌ಐವಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ್


        ಚಾಮರಾಜನಗರ, ಅಕ್ಟೋಬರ್ ೦೬ :- ಎಚ್‌ಐವಿ ಸೋಂಕಿನ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಹಾಗೂ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ್ ಅವರು ಹೇಳಿದರು.


       ನಗರದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಚಾಮರಾಜನಗರ ವಿಶ್ವವಿದ್ಯಾಲಯ, ಪದವಿ ಪೂರ್ವ ಶಿಕ್ಷಣ ಇಲಾಖೆ, ಯುವ ರೆಡ್‌ಕ್ರಾಸ್, ಸಮುದಾಯ ಆಧಾರಿತ ಸ್ವಯಂಸೇವಾ ಸಂಸ್ಥೆಗಳು, ರೋಟರಿ ಸಿಲ್ಕ್ ಸಿಟಿ, ನಾಗ ಕೈವಲ್ಯ ಎಂಟರ್‌ಪ್ರೈಸಸ್ ಹಾಗೂ ಈಶ್ವರಿ ಟ್ರ‍್ಯಾಕ್ಟರ್ಸ್ ಡೀಲರ್‌ಶಿಪ್ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರೆಡ್ ರಿಬ್ಬನ್ ಓಟ ಮ್ಯಾರಥಾನ್-೨೦೨೬ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.


       ಎಚ್‌ಐವಿ ದೇಹದ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಇದರಿಂದ ವಿವಿಧ ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಹೀಗಾಗಿ ಎಚ್‌ಐವಿ ಸೋಂಕಿನ ಕುರಿತು ಸರಿಯಾದ ಮಾಹಿತಿ ಹೊಂದಿರುವುದು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು.


      ಎಚ್‌ಐವಿ ಸೋಂಕು ಸಾಮಾನ್ಯವಾಗಿ ಮುಟ್ಟುವುದರಿಂದ, ಜೊತೆಯಲ್ಲಿ ಕುಳಿತುಕೊಳ್ಳುವುದರಿಂದ ಅಥವಾ ಸಾಮಾನ್ಯ ಸಾಮಾಜಿಕ ಸಂಪರ್ಕದಿAದ ಹರಡುವುದಿಲ್ಲ. ಈ ಕುರಿತು ಜನರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ಸೋಂಕಿತರ ಬಗ್ಗೆ ತಾರತಮ್ಯ ಮಾಡದಂತೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.


      ಮ್ಯಾರಥಾನ್‌ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗವಹಿಸಿ ಎಚ್‌ಐವಿ ಜಾಗೃತಿ ಸಂದೇಶವನ್ನು ಸಾರಿದರು. 


      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಕುಮಾರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ರವಿಕುಮಾರ್, ಚಾಮರಾಜನಗರ ವಿವಿ ದೈಹಿಕ ಶಿಕ್ಷಣ ವಿಭಾಗದ ಶಾಂತರಾಜು, ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಶ್ವೇತಾ ಶಶಿಧರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸAಸ್ಥೆಗಳ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾಸೇವಾ ಅಂದೋಲನ : ಸಾರ್ವಜನಿಕರ ಅರ್ಜಿಗಳ ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ* 

 

ಚಾಮರಾಜನಗರ, ಅಕ್ಟೋಬರ್ 06 - ಜಿಲ್ಲೆಯಾದ್ಯಂತ ತಾಲೂಕು ಹಾಗೂ ಹೋಬಳಿಮಟ್ಟದ ಪ್ರಜಾಸೇವಾ ಆಂದೋಲನಾ ಸಭೆಗಳಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.


       ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಪ್ರಜಾಸೇವಾ ಆಂದೋಲನ ಅಹವಾಲು ಅರ್ಜಿಗಳ ವಿಲೇವಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


       ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ತಾಲೂಕು ಹಾಗೂ ಹೋಬಳಿಮಟ್ಟದ ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಅಗತ್ಯವಿದೆ. ಸ್ವೀಕೃತವಾಗಿರುವ ಅರ್ಜಿಗಳನ್ನು ಈಗಾಗಲೇ ಪ್ರಜಾಸೇವಾ ಆಂದೋಲನ ಪೋರ್ಟಲ್‍ನಲ್ಲಿ ನೊಂದಣಿ ಮಾಡಲಾಗಿದ್ದು, ಸಾಕಷ್ಟು ಇಲಾಖೆಗಳಿಗೆ ಸಂಬಂಧಪಟ್ಟ ಅರ್ಜಿಗಳು ಬಾಕಿ ಇವೆ. ಅವುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಅಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. 


       ಸಾರ್ವಜನಿಕರಿಂದ ಸ್ವೀಕೃತವಾಗಿರುವ ಅರ್ಜಿಗಳಿಗೆ ಸಂಬಂಧಪಟ್ಟ ಇಲಾಖೆಗಳು ಎಷ್ಟು ಸಾಧ್ಯವೋ ಅಷ್ಟೂ ಅರ್ಜಿಗಳನ್ನು ತಮ್ಮ ಹಂತದಲ್ಲಿಯೇ ವಿಲೇವಾರಿ ಮಾಡಲು ಮುಂದಾಗಬೇಕು. ಅಗತ್ಯವಿದ್ದರೆ ಸೂಕ್ತ ಕಾರಣಗಳನ್ನು ನೀಡಿ  ಮುಂದಿನ ಹಂತಕ್ಕೆ ಕಳುಹಿಸಬೇಕು. ಸಕಾರಣವಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಯಾಮಾನುಸಾರ ಪರಿಶೀಲಿಸಲಾಗುವುದೆಂದು ಹಿಂಬರಹ ನೀಡಿ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು. ಪ್ರಜಾಸೇವಾ ಆಂದೋಲನ ಕುರಿತು ಸಾರ್ವಜನಿಕರಲ್ಲಿ ನಿರಾಸಕ್ತಿ ಮೂಡದಂತೆ ತಡೆಯಲು ಅರ್ಜಿಗಳ ಇತ್ಯರ್ಥದ ವಿಳಂಬವನ್ನು ತಡೆಯಬೇಕು ಎಂದರು. 


       ಒಂದು ಅಥವಾ ಎರಡು ಅರ್ಜಿಗಳು ಬಾಕಿ ಇರುವ ಕೆಲ ಇಲಾಖೆಗಳು ಇಂದು ಸಂಜೆಯೊಳಗೆ ವಿಲೇವಾರಿ ಮಾಡಬೇಕು. ಹೆಚ್ಚಿನ ಅರ್ಜಿಗಳು ಬಾಕಿ ಇರುವ ಇಲಾಖೆಗಳು ಮುಂದಿನ 2-3 ದಿನಗಳಲ್ಲಿ ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಅರ್ಜಿಗಳನ್ನು ಶೀಘ್ರವಾಗಿ ಪರಿಹರಿಸಿ ಅರ್ಜಿಗಳಲ್ಲಿರುವ ಸಾರ್ವಜನಿಕರ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಅರ್ಜಿ ವಿಲೇವಾರಿಯಾಗಿರುವ ಬಗ್ಗೆ ಮಾಹಿತಿ ನೀಡಬೇಕು. ಅರ್ಜಿಗಳ ತ್ವರಿತ ಪರಿಹಾರಕ್ಕಾಗಿ ನೀಡುವ ಹಿಂಬರಹ ಕ್ರಮಬದ್ಧವಾಗಿರಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.


      ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಸಾರ್ವಜನಿಕರಿಂದ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಗಮನಿಸುತ್ತಿದ್ದು, ತಾಲೂಕು, ಹೋಬಳಿಮಟ್ಟದ ಸಭೆಗಳಲ್ಲಿ ಸ್ವೀಕೃತವಾಗಿರುವ ಅರ್ಜಿಗಳನ್ನು ಅದಷ್ಟು ಬೇಗನೆ ಪರಿಹರಿಸಲು ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಎಲ್ಲಾ ತಾಲೂಕು ತಹಶೀಲ್ದಾರರು, ನಗರ ಹಾಗೂ ಸ್ಥಳೀಯ ಸಂಸ್ಥೆಗಳು ಅರ್ಜಿಗಳ ವಿಲೇವಾರಿಗೆ ನಿಗಾ ವಹಿಸಬೇಕು. ಪ್ರಜಾಸೇವಾ ಆಂದೋಲನ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿರುವಂತೆ ಎಲ್ಲಾ ಅಧಿಕಾರಿಗಳು ಕಾರ್ಯೋನ್ಮುಖರಾಗಲು ಮುಂದಾಗುವಂತೆ ಜಿಲ್ಲಾಧಿಕಾರಿಗಳಾದ ಶ್ರೀರೂಪ ಅವರು ಸೂಚಿಸಿದರು.


      ಡಿ.ವೈ.ಎಸ್.ಪಿ ಸ್ನೇಹರಾಜ್, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಸುಬ್ರಮಣ್ಯ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಜಿಲ್ಲಾ ನಗರಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ವೆಂಕಟೇಶ್, ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ, ಕೊಳ್ಳೇಗಾಲ ನಗರಸಭೆ ಪೌರಾಯುಕ್ತರಾದ ನಟರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್‍ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪಾಟೀಲ್ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಶ್ವನಾಥ್, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜು, ಆಹಾರ ಇಲಾಖೆ ಉಪನಿರ್ದೇಶಕರಾದ ವಸುಂಧರಾ ಹೆಗಡೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


-----


*ಜಿಲ್ಲೆಯಲ್ಲಿ ರಾಜ್ಯಮಟ್ಟದ ಫೆನ್ಸಿಂಗ್ ಕ್ರೀಡಾಕೂಟದ ಅಗತ್ಯ ಸಿದ್ದತೆ ಕೈಗೊಳ್ಳಿ - ಜಿಲ್ಲಾಧಿಕಾರಿ ಶ್ರೀರೂಪ*  


 ಚಾಮರಾಜನಗರ, ಅಕ್ಟೋಬರ್ 06 :- ಇದೇ ತಿಂಗಳ ಅಂತ್ಯದಲ್ಲಿ ಜಿಲ್ಲೆಯಲ್ಲಿ ರಾಜ್ಯಮಟ್ಟದ ಫೆನ್ಸಿಂಗ್ (ಕತ್ತಿ ವರಸೆ) ಕ್ರೀಡಾಕೂಟ ಆಯೋಜಿಸಲಾಗುತ್ತಿದ್ದು, ಕ್ರೀಡಾಕೂಟದ ವ್ಯವಸ್ಥಿತ ನಿರ್ವಹಣೆಗಾಗಿ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚನೆ ನೀಡಿದರು.


       ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ರಾಜ್ಯಮಟ್ಟದ ಫೆನ್ಸಿಂಗ್ ಕ್ರೀಡಾಕೂಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


       ಫೆನ್ಸಿಂಗ್ (ಕತ್ತಿ ವರಸೆ) ಒಳಾಂಗಣ ಕ್ರೀಡೆಯಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ಫೆನ್ಸಿಂಗ್ ಕ್ರೀಡಾಕೂಟಕ್ಕೆ ಎಲ್ಲಾ ಸಿದ್ದತಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದೆ. ಈಗಾಗಲೇ ಫೆನ್ಸಿಂಗ್ ಕ್ರೀಡಾಕೂಟ ಎಲ್ಲಾ ಜಿಲ್ಲೆಗಳಲ್ಲಿಯೂ ನಡೆದಿದ್ದು, ಜಿಲ್ಲಾಮಟ್ಟದಲ್ಲಿ ಆಯ್ಕೆಯಾಗಿರುವ ಕ್ರೀಡಾಪಟುಗಳು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟದ ನಿರ್ವಹಣೆಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ಮುಂದಾಗುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.


       ತಾಲೂಕಿನ ಸಂತೇಮರಹಳ್ಳಿಯಲ್ಲಿರುವ ಅರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾಶಾಲೆಯ ಒಳಾಂಗಣದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟಕ್ಕಾಗಿ ಸ್ಥಳ ನಿಗದಿಪಡಿಸಲಾಗಿದೆ. ಕ್ರೀಡಾಕೂಟದ ವ್ಯವಸ್ಥಿತ ನಿರ್ವಹಣೆಗಾಗಿ ವಿವಿಧ ಇಲಾಖೆಗಳನ್ನೊಳಗೊಂಡ ಜಿಲ್ಲಾಮಟ್ಟದ ಅಧಿಕಾರಿಗಳ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿರುವ ಅಧಿಕಾರಿಗಳು ಕ್ರೀಡಾಕೂಟ ಆಯೋಜನೆಯಲ್ಲಿ ಯಾವುದೇ ಲೋಪಗಳಾಗದಂತೆ ನೋಡಿಕೊಳ್ಳಬೇಕು. ಕ್ರೀಡಾಪಟುಗಳಿಗೆ ಸಾರಿಗೆ, ವಸತಿ ಸೇರಿದಂತೆ ಅವಶ್ಯ ಮೂಲಸೌಲಭ್ಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ನಿರ್ದೇಶನ ನೀಡಿದರು.


      ಇತರೆ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾಪಟುಗಳಿಗೆ ಸಂತೇಮರಹಳ್ಳಿಯ ವ್ಯಾಪ್ತಿಯಲ್ಲಿರುವ ವಿವಿಧ ಇಲಾಖೆಗಳ ವಿದ್ಯಾರ್ಥಿನಿಲಯಗಳಲ್ಲಿ ತಂಗುವ ವ್ಯವಸ್ಥೆ ಹಾಗೂ ಊಟ, ಉಪಹಾರದ ವ್ಯವಸ್ಥೆಯನ್ನು ಮಾಡಬೇಕು. ಅಗತ್ಯ ಸಾರಿಗೆ ವ್ಯವಸ್ಥೆಯನ್ನು ಕೆ.ಎಸ್.ಆರ್.ಟಿ.ಸಿ ವತಿಯಿಂದ ಕಲ್ಪಿಸಬೇಕು. ಕ್ರೀಡಾಕೂಟಕ್ಕೆ ಸೂಕ್ತ ಪೊಲೀಸ್ (ಭದ್ರತಾ ವ್ಯವಸ್ಥೆ) ಬಂದೋಬಸ್ತ್ ಒದಗಿಸಬೇಕು. ಕ್ರೀಡಾಕೂಟದ ಸ್ಥಳದಲ್ಲಿ ಆರೋಗ್ಯ ಇಲಾಖೆಯಿಂದ ಅಂಬುಲೆನ್ಸ್ ಸನ್ನದ್ಧವಾಗಿರಬೇಕು. ಜೊತೆಗೆ ಚಿಕಿತ್ಸೆಗಾಗಿ ಸ್ಟಾಫ್ ನರ್ಸ್‍ಗಳನ್ನು ನಿಯೋಜಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿ ಕ್ರೀಡಾಕೂಟದ ದಿನಾಂಕವನ್ನು ನಿಗದಿಪಡಿಸಲಾಗುವುದೆಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಸಭೆಯಲ್ಲಿ ತಿಳಿಸಿದರು.


      ಇದೇ ವೇಳೆ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪಾಟೀಲ್ ಅವರು ಫೆನ್ಸಿಂಗ್ ಜಿಲ್ಲೆಯಲ್ಲಿ ಕಳೆದ ಬಾರಿ ರಾಜ್ಯಮಟ್ಟದ ನೆಟ್‍ಬಾಲ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಬಾರಿ ರಾಜ್ಯಮಟ್ಟದ ಫೆನ್ಸಿಂಗ್ ಕ್ರೀಡಾಕೂಟ ಚಾಮರಾಜನಗರ ಜಿಲ್ಲೆಗೆ ನಿಗದಿಯಾಗಿದೆ. 14 ವರ್ಷ ಹಾಗೂ 17 ವರ್ಷದೊಳಗಿನ ಮಕ್ಕಳಿಗಾಗಿ 2 ವಿಭಾಗದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಬಾಲಕ ಹಾಗೂ ಬಾಲಕಿಯರಿಗಾಗಿ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕ್ರೀಡಾಕೂಟದಲ್ಲಿ ಸುಮಾರು 250ರಿಂದ 300 ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಕ್ರೀಡಾಕೂಟದ ಯಶಸ್ಸಿಗಾಗಿ ಸಂಬಂಧಪಟ್ಟ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದರು.


      ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್‍ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಶ್ವನಾಥ್, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಬಿ.ಎಸ್. ರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಗಿರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಸಂತೇಮರಹಳ್ಳಿಯ ಕ್ರೀಡಾ ಅರ್ಚರಿ ಮತ್ತು ಫೆನ್ಸಿಂಗ್ ಶಾಲೆಯ ತರಬೇತುದಾರರು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.


 

Monday, 5 October 2026

ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೇಂದ್ರ ಉನ್ನತ ಮಟ್ಟದ ಅಧಿಕಾರಿಗಳ ತಂಡದಿAದ ಬರ ಅಧ್ಯಯನ : ವಾಸ್ತವ ಪರಿಸ್ಥಿತಿ ಅವಲೋಕನ




 ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೇಂದ್ರ ಉನ್ನತ ಮಟ್ಟದ ಅಧಿಕಾರಿಗಳ ತಂಡದಿAದ ಬರ ಅಧ್ಯಯನ : ವಾಸ್ತವ ಪರಿಸ್ಥಿತಿ ಅವಲೋಕನ 


        ಚಾಮರಾಜನಗರ, ಅಕ್ಟೋಬರ್ ೦೫ ):- ಜಿಲ್ಲೆಯ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಆಗಮಿಸಿರುವ ಕೇಂದ್ರದ ವಿವಿಧ ಸಚಿವಾಲಯಗಳ ಉನ್ನತ ಮಟ್ಟದ ಅಧಿಕಾರಿಗಳ ತಂಡವು (ಐಎಂಸಿಟಿ) ಇಂದು ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರದ ವಾಸ್ತವ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿತು. 


      ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಉಪ ಆಯುಕ್ತರಾದ ಡಾ. ಸುಧಾಮ್ ಬೇಗ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಸಲಹೆಗಾರರಾದ ಆಶೀಶ್ ಪಾಂಡೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಮಹಾಲನೋಬಿಸ್ ರಾಷ್ಟಿçÃಯ ಬೆಳೆ ಮುನ್ಸೂಚನೆ ಕೇಂದ್ರ (ಎಂಎನ್‌ಸಿಎಫ್‌ಸಿ)ದ ಉಪನಿರ್ದೇಶಕರಾದ ಕರಣ್ ಚೌಧರಿ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಬರ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಸ್ಥಿತಿಯನ್ನು ಅವಲೋಕಿಸಿತು. 

 

       ಚಾಮರಾಜನಗರ ತಾಲೂಕಿನ ಕೆರೆಹಳ್ಳಿ ಗ್ರಾಮದ ರೈತರಾದ ಮಾದಪ್ಪ ಎಂಬುವರಿಗೆ ಸೇರಿದ ಜಮೀನಿಗೆ ಭೇಟಿ ನೀಡಿ ಒಣಗಿದ ಜೋಳದ ಬೆಳೆಯನ್ನು ಅಧಿಕಾರಿಗಳ ತಂಡ ವೀಕ್ಷಿಸಿದರು. ಇದೇ ವೇಳೆ ಹಾಜರಿದ್ದ ರೈತರೊಂದಿಗೆ ಅಧಿಕಾರಿಗಳು ಮಾತನಾಡಿ ಬೆಳೆ ನಷ್ಟ, ಬಿತ್ತನೆ ಸಂಬAಧ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಭಾನುಪ್ರಕಾಶ್ ಅವರು ಸ್ಥಳೀಯ ಬೆಳೆ ಹಾನಿ ಕುರಿತು ವಿವರ ಒದಗಿಸಿದರು. 


       ಸ್ಥಳೀಯ ರೈತರು ಮಾತನಾಡಿ ಈ ಭಾಗದಲ್ಲಿ ತೊಗರಿ, ಜೋಳ, ಕಬ್ಬು, ಹುರಳಿ, ಅರಿಶಿನ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಈ ಬಾರಿ ಮಳೆ ಕೊರತೆಯಿಂದ ಎಲ್ಲಾ ಬೆಳೆಗಳು ಒಣಗಿ ಹೋಗಿವೆ. ಬಿತ್ತನೆಗಾಗಿ ಎಕರೆಗೆ ೩೦ ರಿಂದ ೪೦ ಸಾವಿರ ಖರ್ಚು ಮಾಡಿದ್ದೇವೆ. ಬೆಳೆ ಹಾನಿಯಿಂದ ನಾವು ಸಂಕಷ್ಟದಲ್ಲಿದ್ದೇವೆ. ನಮಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು. 


      ಬಳಿಕ ಅಧಿಕಾರಿಗಳ ತಂಡ ಮಲೆಯೂರಿನ ಕನಕಗಿರಿ ಜೈನ ಗೋ ಶಾಲೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಅಲ್ಲಿನ ಗೋಶಾಲೆ ನಿರ್ವಹಣೆ ಸಂಬAಧ ವಿವರ ಪಡೆದರು. ಸಮೀಪದಲ್ಲಿಯೇ ದಾಸ್ತಾನು ಮಾಡಲಾಗಿದ್ದ ಮೇವು ಸಂಗ್ರಹವನ್ನು ವೀಕ್ಷಿಸಿದರು. 


      ಕುಲಗಾಣ ಗ್ರಾಮಕ್ಕೆ ಭೇಟಿ ನೀಡಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಅಲ್ಲಿನ ಸರ್ಕಾರಿ ಕೆರೆಯಲ್ಲಿ ನಿರ್ವಹಿಸಲಾಗುತ್ತಿದ್ದ ಕೆರೆ ಹೂಳೆತ್ತುವ ಕೆಲಸವನ್ನು ಪರಿಶೀಲಿಸಿದರು. ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರೊಂದಿಗೆ ಸಮಾಲೋಚಿಸಿದರು. ಕೆರೆ ಎಷ್ಟು ವರ್ಷದಿಂದ ನೀರಿಲ್ಲದೆ ಒಣಗಿದೆ ಎಂದು ಪ್ರಶ್ನಿಸಿದರು. ಗ್ರಾಮಸ್ಥರು ಕಳೆದ ಎರಡು ವರ್ಷದಿಂದ ಕೆರೆಗೆ ನೀರಿಲ್ಲ ಎಂದರು.


       ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮಕ್ಕೆ ತೆರಳಿ ಲೋಕೇಶ್ವರಿ, ನಾಗರಾಜು ಎಂಬುವರಿಗೆ ಸೇರಿದ ಜಮೀನಿನಲ್ಲಿ ನೀರಿಲ್ಲದೆ ಒಣಗಿ ಹೋಗಿದ್ದ ಸೂರ್ಯಕಾಂತಿ ಬೆಳೆಯನ್ನು ವೀಕ್ಷಿಸಿದರು. ಸ್ಥಳೀಯ ರೈತರು ಅಧಿಕಾರಿಗಳ ತಂಡದ ಮುಂದೆ ತಮ್ಮ ಕುಂದು ಕೊರತೆಗಳನ್ನು ನಿವೇದಿಸಿಕೊಂಡರು. ನೀರಿಲ್ಲದೆ ನಾವು ಹಾಕಿದ್ದ ಬೆಳೆ ಕೈಸೇರಿಲ್ಲ. ಈ ಭಾಗದಲ್ಲಿ ಮಳೆಯನ್ನೇ ಆಶ್ರಯಿಸಿ ಬಿತ್ತನೆ ಮಾಡಿದ್ದು ಫಸಲು ಬಂದಿಲ್ಲ. ಕುಡಿಯುವ ನೀರು, ಜಾನುವಾರುಗಳ ಮೇವಿಗೂ ಸಹ ತೊಂದರೆಯಾಗಿದೆ. ಹೀಗಾಗಿ ನಾವು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ನಮಗೆ ಹೆಚ್ಚಿನ ಪರಿಹಾರ ದೊರಕಬೇಕು ಎಂದು ಮನವಿ ಮಾಡಿದರು. 


      ಇದೇ ವೇಳೆ ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಿದ ಕೃಷಿ ವಿಜ್ಞಾನ ಕೇಂದ್ರದ ಡಾ. ಶೃತಿ ಅವರು ಈ ಹಿಂದಿನ ಸಾಲಿನಲ್ಲಿ ಸಮರ್ಪಕವಾಗಿ ಮಳೆಯಾಗಿತ್ತು. ಈ ಬಾರಿ ಮಳೆಯ ಅಭಾವದಿಂದ ಹೆಚ್ಚಿನ ಬೆಳೆ ನಷ್ಟವಾಗಿದೆ ಎಂದು ವಿವರಿಸಿದರು. 


      ಬಳಿಕ ಗುಂಡ್ಲುಪೇಟೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರು ಮಳೆ, ಬೆಳೆ, ಕುಡಿಯುವ ನೀರು, ಜಾನುವಾರುಗಳ ಮೇವು ಸೇರಿದಂತೆ ಜಿಲ್ಲೆಯು ಎದುರಿಸುತ್ತಿರುವ ಬರ ಪರಿಸ್ಥಿತಿಯ ಸಂಪೂರ್ಣ ವಿವರವನ್ನು ನೀಡಿದರು. 


      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ವಿಬಿ ಜಿ ರಾಮ್ ಜಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವಿವರ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ತಂಡಕ್ಕೆ ಮಾಹಿತಿ ಒದಗಿಸಿದರು. 


      ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಗಿರೀಶ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಮಾನ್ಯುವೆಲ್ ಸಂತೋಷ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸುರೇಖಾ, ನಬಾರ್ಡ್ ಅಧಿಕಾರಿ ಹಿತಾ ಸುವರ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. 


ಅ. ೬ರಂದು ನಗರದಲ್ಲಿ ಹೆಚ್.ಐವಿ, ಏಡ್ಸ್ ಜನ ಜಾಗೃತಿಗಾಗಿ ಮ್ಯಾರಾಥನ್/ರೆಡ್ ರಿಬ್ಬನ್ ಸ್ಪರ್ಧೆ 


        ಚಾಮರಾಜನಗರ, ಅಕ್ಟೋಬರ್ ೦೫ :- ಹೆಚ್‌ಐವಿ, ಏಡ್ಸ್ ಕಾರ್ಯಕ್ರಮದಡಿ ಇಂಟೆನ್ಸಿಫೈಡ್ ಐಇಸಿ ಕ್ಯಾಂಪೇನ್ (Iಟಿಣeಟಿsiಜಿieಜ Iಇಅ ಅಚಿmಠಿಚಿigಟಿ-೨೦೨೬) ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಪದವಿ ಕಾಲೇಜಿನ ೧೭ ವರ್ಷ ಮೇಲ್ಪಟ್ಟು ೨೫ ವರ್ಷದೊಳಗಿನ ವಿದ್ಯಾರ್ಥಿಗಳ ಮೂಲಕ ಹೆಚ್.ಐವಿ, ಏಡ್ಸ್ ಜನಜಾಗೃತಿಗಾಗಿ ಅಕ್ಟೋಬರ್ ೬ ರಂದು ಬೆಳಿಗ್ಗೆ ೮ ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಮುಂಭಾಗದಿAದ ‘ಮ್ಯಾರಾಥನ್/ರೆಡ್ ರಿಬ್ಬನ್ ಸ್ಪರ್ಧೆ’ (ಒಟ್ಟು ೫ ಕಿ.ಮೀ.) ಯನ್ನು ಏರ್ಪಡಿಸಲಾಗಿದೆ. 


      ಮ್ಯಾರಥಾನ್ ಜಿಲ್ಲಾಡಳಿತ ಭವನದ ಮುಂಭಾಗದಿAದ ಸಾಗಿ ಡಿವೈಎಸ್‌ಪಿ ವೃತ್ತದ ಮೂಲಕ ನ್ಯಾಯಾಲಯ ರಸ್ತೆ, ಕರಿನಂಜನಪುರ, ಚರ್ಚ್ ಕ್ರಾಸ್ ಮೂಲಕ ನಿಜಗುಣ ರೆಸಿಡೆನ್ಸಿ ರಸ್ತೆ, ಸಿಎಸ್‌ಐ, ಟೌನ್ ಪೊಲೀಸ್ ಠಾಣೆ, ಅರಣ್ಯ ಇಲಾಖೆ ವೃತ್ತದ ಮೂಲಕ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಪಚ್ಚಪ್ಪ ವೃತ್ತದಿಂದ ಮತ್ತೆ ಜಿಲ್ಲಾಡಳಿತ ಭವನದಲ್ಲಿ ಮುಕ್ತಾಯವಾಗಲಿದೆ. 


       ಹೆಚ್‌ಐವಿ, ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು, ಹೆಚ್‌ಐವಿ ಮತ್ತು ಏಡ್ಸ್ (ತಡೆ) ಕಾಯ್ದೆ ೨೦೧೭, ನ್ಯಾಕೋ ಏಡ್ಸ್ ಆ್ಯಪ್, ಮೊಬಿಲೈಸೇಷನ್ ಆಫ್ ಏಡ್ಸ್ ಸುರಕ್ಷಾ-ಸ್ಕಾö್ಯನರ್ (ಒobiಟisಚಿಣioಟಿ oಜಿ ಂIಆS Suಡಿಚಿಞshಚಿ – Sಛಿಚಿಟಿಟಿeಡಿ), ಉಚಿತ ರಾಷ್ಟಿçÃಯ ಸಹಾಯವಾಣಿ ೧೦೯೭, ಎಸ್‌ಟಿಐ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


ಅ. ೮ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ 


        ಚಾಮರಾಜನಗರ, ಅಕ್ಟೋಬರ್ ೦೫ :- ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಂಬAಧ ಪೂರ್ವಭಾವಿ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಕ್ಟೋಬರ್ ೮ರಂದು ಸಂಜೆ ೪ ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. 


       ಪರಿಶಿಷ್ಟ ವರ್ಗದ ಹಾಗೂ ಇತರೆ ಜನಾಂಗದ ಎಲ್ಲಾ ಸಂಘ ಸಂಸ್ಥೆ ಮತ್ತು ಕನ್ನಡಪರ ಸಂಘ ಸಂಸ್ಥೆಯ ಪದಾಧಿಕಾರಿಗಳು, ಮುಖ್ಯಸ್ಥರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು  ನೀಡುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

ಜಿಲ್ಲೆಯಲ್ಲಿ ಎರಡನೇ ದಿನವು ಕೇಂದ್ರ ಅಧಿಕಾರಿಗಳ ತಂಡದಿAದ ಬರ ಅಧ್ಯಯನ : ಒಳಗಿದ ಬೆಳೆ, ವಿಬಿ ಜಿ ರಾಮ್ ಜಿ ಕಾಮಗಾರಿ ವೀಕ್ಷಣೆ

ಜಿಲ್ಲೆಯಲ್ಲಿ ಎರಡನೇ ದಿನವು ಕೇಂದ್ರ ಅಧಿಕಾರಿಗಳ ತಂಡದಿAದ ಬರ ಅಧ್ಯಯನ : ಒಳಗಿದ ಬೆಳೆ, ವಿಬಿ ಜಿ ರಾಮ್ ಜಿ ಕಾಮಗಾರಿ ವೀಕ್ಷಣೆ          ಚಾಮರಾಜನಗರ, ಅಕ್ಟೋಬರ್ ೦೬ - ಬ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು