Thursday, 24 January 2019

ತುಮಕೂರು ಶ್ರೀಗಳ ವಿಚಾರದಲ್ಲಿ ಈ... ಜಿಲ್ಲಾಡಳಿತ ನಡೆದುಕೊಂಡಿದ್ದು ಸರಿಯೇ!? ನಾಚಿಕೆಯಾಗಬೇಕು.. ಸರಿ ಎನಿಸಿದ್ರೆ ಶೇರ್ ಮಾಡಿ.. ಇದು ಕೇವಲ ನನ್ನ ಮನದಾಳದ ಮಾತುಗಳಷ್ಟೆ ನೆನಪಿರಲಿ...ನೋಯಿಸುವ ಹಿತಾದೃಷ್ಟಿಯಲ್ಲ.! ಇಂತಿ ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಪೀಠಿಕೆಯನ್ನ ಚೆನ್ನಾಗಿ ಹಾಕ್ತೀನಿ ಆದರೆ ಸತ್ಯಾಂಶವನ್ನ ಯಾವುದೋ ಒಂದು ಭಾಗದ ಸಾಲುಗಳಲ್ಲಿ ಬರೆಯಲು ಇಚ್ಚೆ ಪಡುತ್ತೇನೆ.ಕಾರಣ ಮೊದಲೆ ಹೇಳಿ ಬಿಟ್ಟರೆ ಅದಕ್ಕೆ ಸ್ವಾರಸ್ಯವಿರಲ್ಲ ನೋಡಿ..ಪೂರ್ತಿ ಓದಿ. ಎಲ್ಲಾದರೂ.ಲೋಪದೋಷವಿದ್ದರೆ ನನಗೆ ತಿಳಿಸಿ ತಪ್ಪು ತಿದ್ದುಕೊಳ್ಳಲು ನನ್ನೊಂದಿಗ ಕೈ ಜೋಡಿಸಿ....
ಶ್ರೀಗಳ ಲಿಂಗೈಕ್ಯ ಸುದ್ದಿಯನ್ನ ಮದ್ಯಾಹ್ನ ಪ್ರಸಾದ ಸ್ವೀಕರಿಸಿದ  (ಮಕ್ಕಳ ಊಟ ಮಾಡಿದ )ನಂತರ ತಿಳಿಸಬೇಕೆಂಬ ಮಾತಿನಂತೆ  ಕಾರ್ಯದರ್ಶಿಗಳು ಆಡಳಿತ ಮಂಡಳಿ ತಿಳಿಸಿದರು.ಅದರಂತೆ ಭಕ್ತಾದಿಗಳಿಗೆ ತಿಳಿಸಿದರು. ಇಡೀ ಅಖಂಡ ಭಾರತವೇ ಕತ್ತಲಲ್ಲಿ ಒಂದು ಕ್ಷಣ ಮುಳುಗಿದಂತೆ ಆದವು. ಬಡ ವಿದ್ಯಾರ್ಥಿಗಳ ಪಾಲಿನ  ಆಶಾಕಿರಣ ತನ್ನ ಪ್ರಕರತೆಯನ್ನ ನಿಲ್ಲಿಸಿದ್ದರಿಂದ ಶೋಕ ಸಾಗರದಲ್ಲಿ ಮುಳುಗಿದರು. ಶ್ರೀಗಳ ದರ್ಶನ ಪಡೆಯಲು ಅಸಂಖ್ಯಾತ ಭಕ್ತರು ಸಾಲು ಸಾಲು ಮುಗಿಲ ಮುಟ್ಟಿದ್ದವು. ನಮ್ಮ ಆರಕ್ಷಕ ಪಡೆ ಸದ್ದಿಲ್ಲದೆ,ಲೋಪವಾಗದಂತೆ ರಾಜ್ಯದ ನಾನಾ ಮೂಲೆಗಳಿಂದ ಬಂದು ಶಾಂತಿ ಸುವ್ಯವಸ್ಥೆಯನ್ನ ಕಾಪಾಡಿದರು. ಇವರಿಗೊಂದು ಸಲಾಂ ಹೇಳಲೇ ಬೇಕು.ಈ ನಡುವೆ ತುಮಕೂರಿನ ಲೇಡಿ ಸಿಂಗಂ ಎಂದೇ ಬಿಂಬಿತರಾಗಿರುವ ಎಸ್ಪಿ ಅವರ ಮೇಲೆ ಅಂದು ಸಚಿವರೊಬ್ಬರ ದರ್ಪ ಮಾತ್ರ ಕೇಳುವ ಹಾಗೇ ಇರಲಿಲ್ಲ. ಮುಖ್ಯಮಂತ್ರಿಗಳ ಅವರೊಂದಿಗಿನ ಸಚಿವರನ್ನ ಬೆಂಬಲಿಸುವ ಹಿತಾದೃಷ್ಟಿಯಿಂದ ಆಕೆಯನ್ನ ಅವರದ್ದೆ ತಪ್ಪೆಂದು ಬಿಂಬಿಸಿದರು.. ನಾಚಿಕೆಯಾಗಬೇಕು ಸ್ವಾಮಿ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಚಿವರು,ಶಾಸಕರು ಎಂಬುದ ಮರೆತ ಒಮ್ಮೆ ಅಲ್ಲಿ ನಿಂತು ನೀವು ಕೊಟ್ಟ ಪ್ರೋಟೊ ಕಾಲ್ ಅನುಸರಿಸಿ ನಿಮಗೆ ಗೊತ್ತಾಗುತ್ತದೆ ಅವರವರ ಕಷ್ಟ ಏನು ಅಂತ.? ಇರಲಿ ಬಿಡಿ ಅವರು ನಿಮ್ಮಿಂದ ಮೆಚ್ಚಿಸಿಕೊಂಡರೆ ಪದಕ ಕೊಡಬಹುದು ಜನರು ಕೊಡುವ ಪದಕದ ಮುಂದೆ ನಿಮ್ಮದು ಕಸ ಕಡಿಮೆ..ಈ ಎಸ್ಪಿ ಅವರನ್ನ ಎಲ್ಲೆಡೆ ಸನ್ಮಾನ ಮಾಡುವ ಕಾಲವೂ ದೂರವಿಲ್ಲ ಬಂದೆ ಬರುತ್ತೆ..
ಇನ್ನ ಇಡೀ ತುಮಕೂರಿನ ಜನತೆ ಎಲ್ಲೆಡೆ ಪ್ರಸಾದವನ್ನ ಸದ್ದಿಲ್ಲದೆ ಹಂಚಿದರು. ಹಲವಾರು ಹೊಟೆಲ್ ಅಲ್ಲಿ ರಾಜ್ಯದ ವಿವಿದೆಡೆಯಿಂದ ಬರುವ ಜನರಿಗಾಗಿ ಉಚಿತ ಊಟ ತಿಂಡಿ,ಕೊಟ್ಟು ಸಂತೈಸಿದರು ಇದಕ್ಕಿಂತ ಬೇಕಾ ಪ್ರತಿ ಭಕ್ತನೂ ಇಲ್ಲಿ ರತ್ನವೇ ಆಗಿತ್ತು. ಈ ಭಾರತ ರತ್ನ ಕೊಡಿ ಅಂತ ನಿಮಗೆ ಪತ್ರ ಬರೆಯಬೇಕಾ? ಇದೇಂದಾ ದೌರ್ಭಾಗ್ಯ ನಮ್ಮದು ಹೇಳಿ ...ಸಣ್ಣಪುಟ್ಟ ವಿಚಾರಕ್ಕೆಲ್ಲ ಬೀದಿಗೆ ಬಂದು ಬಂದ್ ಕರೆ ಕೊಡುವ ಬುದ್ದಿ (ಲದ್ದಿ) ಜೀವಿಗಳು ಎಲ್ಲಿದ್ದಾರೆ?  ಇವರಿಗೆ ಭಾರತರತ್ನ ಕೊಡಬೇಕೆಂಬ ಜನರ ಕೂಗು ಕೊಡುವವರ ಕಿವಿಗೆ ತಟ್ಟಿಸುವ ಬಗೆ ಹೇಗೆ? ನೀವೇ ಹೇಳಿ...ಇದೊಂದು ಕಡೆಯಾದರೆ ಮತ್ತೊಂದು ಕಡೆ ಅದೂ ನಮ್ಮ ಚಾಮರಾಜನಗರ ಜಿಲ್ಲೆಯಲ್ಲಿ ಎಂಥ ವಿಪರ್ಯಾಸ ನೋಡಿ....ಇದು ನಿಜಕ್ಕೂ ಜಿಲ್ಲಾಡಳಿತ ..ಯಾರಿಗೆ ಮಾಡಿದ ಅವಮಾನ ಹೇಳಿ..ಸರ್ಕಾರಿ ರಜೆಯನ್ನ ಮುಖ್ಯಮಂತ್ರಿಗಳು ಘೋಷಣೆ ಮಾಡಿದರೂ ಕಚೇರಿಯಲ್ಲಿ ಮೀಟಿಂಗ್ ನಡೆದವು. ಅದೂ ಜಿಲ್ಲಾಡಳಿತ ಭವನದ ಒಳಗೆ. ಇದನ್ನ ಕಂಡ ಕೆಲವರು ಗಲಾಟೆಯನ್ನೂ ಮಾಡಿ ಬಂದರು..ಇದೇನಾ ಮುಖ್ಯಮಂತ್ರಿಗಳೇ ನಿಮ್ಮ ಆದೇಶ..ಅಂತ ಕಡಿದು‌ ಕಟ್ಟೆ ಹಾಕುವ ಮೀಟಿಂಗ್ ಚಾಮರಾಜನಗರ ಜಿಲ್ಲೆಯ ಜಿಲ್ಲಾಡಳಿತಕ್ಕೆ ಇತ್ತ, ಅಥವಾ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಇತ್ತ.? ವಿಪರ್ಯಾಸ ಎಂದರೆ ಇಡೀ ರಾಜ್ಯವೇ ಜಾತಿ ಮತ ದರ್ಮ ಮತ ಮರೆತು, ಬಾಗಿಲು ಹಾಕಿ ಭಾವಚಿತ್ರಕ್ಕೆ ಹಾರ ಸಮರ್ಪಣೆ ‌ಮಾಡಿ ಗೌರವ ಸೂಚಿಸಿದರೆ ಇಲ್ಲಿ ಪೊಟೊ ಇಲ್ಲ, ಅವರಿಗೊಂದು ಹಾರವೂ ಇಲ್ಲ. ಜಿಲ್ಲಾಡಳಿತಕ್ಕೆ ಇಷ್ಟು ದರಿದ್ರವೇ!?   ಹಣ ಲೂಟಿ ಮಾಡುವವರ ವಿರುದ್ದ ಹೋರಾಟ ಮಾಡುವ ಮಾಹಿತಿ ಹಕ್ಕು ಕಾರ್ಯಕರ್ತರೇ ನೀವೆ ಒಂದು ಅರ್ಜಿ ಹಾಕಿ ಯಾವುದೋ ಒಂದು ವರ್ಗಕ್ಕೆ ಸೀಮಿತವಾದ ಸಂತರ ಜಯಂತಿ ಮಾಡಲು ಏನಿಲ್ಲ ಅಂದರೂ ಸರ್ಕಾರ ೨೫ ರಿಂದ ೫೦ ಸಾವಿರ ಹಣ ಖರ್ಚು ಮಾಡುತ್ತದೆ. ತಿಳಿದಿರಲಿ.. ವರ್ಷವಿಡಿ ವಿವಿದ ಮಹಾನುಭಾವರ ಹೆಸರಿನಲ್ಲು
ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಮಾಡುವ ಜಯಂತಿ ಹೆಸರಲ್ಲಿ ಕೋಟಿ ಗಟ್ಟಲೆ ಪೋಲಾಗುತ್ತದೆ. ಒಂದೊಂದು ಜಿಲ್ಲೆಯಲ್ಲೂ ಅರ್ಜಿ ಹಾಕಿ ನೋಡಿ ಸತ್ಯಾಂಶ ಗೋಚರವಾಗುತ್ತದೆ. ಇಂತಹವರಿಂದ ಹಣ ಲೂಟಿಯಾಗುವ ಲೆಕ್ಕ ಕೇಳಿ ನಿಮಗೂ ಕಾರ್ಯಕ್ರಮ ಗಳು, ಆಯೋಜನೆಗಳು ಸಿಗಬಹುದು ಆದರೆ ಎಲ್ಲರ ಮನ ಗೆದ್ದ ಶ್ರೀಗಳ ನೆನೆಯದ ಈ ..... ಜಿಲ್ಲಾಡಳಿತ ಕ್ಕೆ ಏನು ಹೇಳಬೇಕೊ ಗೊತ್ತಿಲ್ಲ.! ಬಹುಶಃ ಒಂದು ಬೃಹತ್ ಕಾರ್ಯಕ್ರಮ ಅದೇ ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿ ಮಾಡಿ ಎಲ್ಲಾ ದರ್ಮದ ಹಿರಿಯರನ್ನ (ಪಾದ್ರಿಯವರು,ಸ್ವಾಮೀಜಿಯವರು, ಮೌಲ್ವಿಗಳ ಸಮಾಗಮ ಮಾಡಿ ) ಕರೆಯಿಸಿ ಅದೇ ಜಿಲ್ಲಾಡಳಿತ ಕರೆಯಿಸಿ ಅವರಿಂದ ಉದ್ಘಾಟಿಸಬೇಕು. ಅದು ್ಮ ನಿಮ್ಮೆಲ್ಲರ ಹಣದಿಂದ...ಬೇವರ್ಸಿ ಸರ್ಕಾರದ ಹಣದಿಂದಲ್ಲ....
ಮತ್ತೊಂದು ಸಂತೋಷ ವಿಷಯ ಅಂದರೆ ಚಾಮರಾಜನಗರ ಜನತೆ ಸಂತೋಷ, ಹೆಮ್ಮೆಯಿಂದ ಎದೆ ತಟ್ಟಿ ಹೇಳಬೇಕು..ಪ್ರಸಾದ ಅಂದರೆ ಶ್ರಮದ ಪ್ರತಿಫಲವೆಂದು..ಹಲವಾರು ಬಡ ರೈತರ ದುಡಿಮೆಯ ಫಲವೆಂದು ನೆನಪಿರಲಿ...
 ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ರಾಮಾಪುರದಲ್ಲಿ ವೈಯುಕ್ತಿಕ ಮತ್ಸರಕ್ಕಾಗಿ ಪ್ರಸಾದದಲ್ಲಿ ವಿಷವಿಕ್ಕಿ ಸಾವಿಗೆ ಕಾರಣರಾವರೂ ಇದ್ದಾರೆ.ಇರಬಹುದು ಆದರೆ ಲಕ್ಷಕ್ಕೊಂದು ಬೇರೆ ವಿಚಾರಕ್ಕಷ್ಟೆ. ಅಂದು ಇತಿಹಾಸ ಸೇರಿಯೂ ಆಯಿತು. ಆದರೆ ಇಂದು  ಅದೇ ಪ್ರಸಾದ ಮಹತ್ವ ಸಾರಿದ ಚಾಮರಾಜನಗರ ಶಿವು( ಸಿದ್ದಗಂಗಾ ಮಠದಲ್ಲಿ ಎಂಟನೆ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ)ಯೂ ಇದ್ದಾನೆ .. .ಪ್ರಸಾದವೆಂದರೆ ದೇವರು ನೀಡುವ ವರ..ಅದು ಸಿಗದೇ ಅದೇಷ್ಟೋ ಜನ ಹಸಿವಿನಿಂದ ಸತ್ತವರೂ ಇದ್ದಾರೆ. ಅದನ್ನ ಚೆಲ್ಲಬೇಡಿ. ಎಂದು ಅನ್ನದ ಮಹಿಮೆ ಸಾರಿದ ವಿದ್ಯಾರ್ಥಿ ಯನ್ನ ಅದೂ ಚಾಮರಾಜನಗರ ಜನತೆ ಸ್ಮರಿಸಬೇಕು. ಸಮಾರಂಭದಲ್ಲಿ ಕರೆದು ಸನ್ಮಾನಿಸಬೇಕು..
ಇಂತಿ..
ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
(ಅನಿಸಿಕೆ ಅಭಿಪ್ರಾಯ ಕಾಮೆಂಟ್ ಬಾಕ್ಸ್ ಅಲ್ಲಿ ಹಾಕಿ. ಇಷ್ಟ ಆದರೆ ಶೇರ್ ಮಾಡಿ) 

Friday, 11 January 2019

ಸೆಕ್ಸ್ ಚಾಟ್ ಮಾಡಿದ ಮೇಲೆ: ಕೆಲವರು ಯಾಕೆ ಹಿಂಗೆ!

ಸೆಕ್ಸ್ ಚಾಟ್ ಮಾಡಿದ ಮೇಲೆ: ಕೆಲವರು ಯಾಕೆ ಹಿಂಗೆ!? 
ಪೇಸ್ ಬುಕ್ ಅನ್ನೋ ಮಾಯಜಾಲದಲ್ಲಿ ಹೋಗು ಹೋಗುತ್ತಾ ಮೋಹ ಜಾಲ,ಕಾಮ ಜಾಲಕ್ಕೂ ನೂಕಿ ಬಿಡುತ್ತದೆ. ಎರಡನ್ನಿ ಬಿದ್ದ ಮೇಲೆ ಇದಕ್ಕೇಕೆ ಪರದಾಟ ಎನ್ನುವಂತೆ ಕೈ ಬಿಟ್ಟು ಮತ್ತೆ ಸುಮ್ಮನಾಗಿ ಬಿಡುತ್ತಾರೆ. ಆದರೆ ಕಾಮದ ಮೋಹ ಜಾಲಕ್ಕೆ ಸಿಕ್ಕ ಕೆಲವರ ಪೇಸ್ ಬುಕ್ ಟೈಮ್ ಲೈನ್ ನೋಡಿದರೆ ಸಾಕು..ಹುಡುಗರು ಬೃಹತ್ ಪ್ರಮಾದ ಮಾಡಿದವರಂತೆ ಕುಣಿಯುತ್ತಾ ಪೋಸ್ಟ್ ಹಾಕಿ ಬಿಡುತ್ತಾರೆ. ಕೆಲವೊಮ್ಮೆ ಕೆಲವು ಮೆಸೆಜ್ ಡಿಲಿಟ್ ಮಾಡಿ.ಇತರ ಕಮಂಗಿ ಹುಡುಗರಿಂದಲೆ ಬೈಗುಳ ಪ್ರಾರಂಭಿಸಿ ತಮಾಸೆ ನೋಡುತ್ತಾರೆ.ಕೆಲವರ ಪುಕ್ಕಟ್ಟೆ ಸಂದೇಶಗಳು ಅಬ್ಬಾ.. ಗ್ರೇಟ್...ಖಾತೆ ತೆರೆದ ಮಂದಾಕಿನಿಗೆ ಬ್ಲಾಕ್,ಇಗ್ನೊರ್..ಇತ್ಯಾದಿ ಮಾಡೋದು ಗೊತ್ತಿಲ್ಲ.!?  ಸುದ್ದಿ ಮೂಲವೋ,ಸಾಮಾಜಿಕ ಕಳಕಳಿ ಮಾಹಿತಿ ಹಾಕಿದ್ರೆ ಜಾಗೃತ ಮೂಡಿಸೋ ಕೆಲಸವೇ ಆಗೊಲ್ಲ..ಕಾಮಾಂದದ ಸಂದೇಶಗಳಲ್ಲಿ ಒಬ್ಬರದ್ದೆ ತಪ್ಪು ಅಂತ ಹೇಳೊಲ್ಲ. ಇಬ್ಬರದ್ದು ಇದ್ದೆ ಇರುತ್ತೆ. ಹೇಳಲು ಒಬ್ಬರಿಕೆ ಅಂಜಿಕೆಯಾದರೆ ಮತ್ತೊಬ್ಬರಿಗೆ ನಾಚಿಕೆ. ಅಂತಿಮವಾಗಿ ಸಂಬಂದಗಳು,ಸಂಸಾರದ ಕೊಂಡಿಗಳು ಕಳಚಿ ಬೀಳುತ್ತದೆ. ಸತ್ಯಾಂಸ ಮಾಡಿದವರಿಗೆ, ಮಾಡಿಸಿಕೊಂಡವರಿಗಷ್ಟೆ ಗೊತ್ತು. ಈ ನಡುವೆ ಅದಿಕೃತ ಅಂದ್ರೆ .ನಮ್ ಸೈಬರ್ ಪೊಲೀಸರಿಗೆ ಡಿಟೇಲ್ ತೆಗೆಯೊ ಮೊದಲೆ ಏನೆನೆಲ್ಲ ಇದೆ ಅಂತ ಲೆಕ್ಕ ಹಾಕಿ ಬಿಡುತ್ತಾರೆ.... ಮೋಸ ಹೋದೆವು ಎಂದರೆ ಠಾಣೆಗೆ ಹೋಗಿ..ಮತ್ತೊಬ್ಬರು ಏನೇನೋ ಸಂದೇಶ ಮಾಡಿಬಿಟ್ಟರು..ತಮ್ಮ ಶೀಲವೇ ಹೋಯಿತು ಅನ್ನೊ ಮಟ್ಟಿಗೆ ಬೀದಿಯಲ್ಲಿ ನಿಲ್ಲಬೇಡಿ...ಎಲ್ಲರೂ ಶ್ರೀರಾಮ ಆಗೊಲ್ಲ. ಎಲ್ಲರೂ ಕೃಷ್ಣರಾಗೊಲ್ಲ...ಕಾಮಾತುರಾಣಾಯ ನಭಯಂ,ನಲಜ್ಜ ಅನ್ನೊ ಹಾಗೇ ತಪ್ಪು ಮಾಡೋವಾಗ ಗೊತ್ತಾಗದ್ದು, ಮಾಡಿದ ಮೇಲೆ ಗೊತ್ತಾದರೆ ಏನೂ ಪ್ರಯೋಜನವಿಲ್ಲ.‌ನೆನಪಿರಲಿ...ಅರಿಷಡ್ವರ್ಗ ಅನ್ನೋದು ಎಲ್ಲರಲ್ಲೂ ಇರುತ್ತೆ. ಇರಲೇಬೇಕು. ಎಲ್ಲರದ್ದು ತಪ್ಪಲ್ಲ..
: ಪೇಸ್ ಬುಕ್ ಸ್ನೇಹಿತೆಯೊಬ್ಬರ ಟೈಮ್ ಲೈನ್ ನೋಡಿ ಬೇಸರ ಆಯಿತು..ಅದನ್ನ ನೋಡಿ ಡಿಲಿಟ್ ಮಾಡಿ.. ಪಾಪ ಅವರದಷ್ಟೆ ಅಲ್ಲ ನಿಮ್ಮದು ಮರ್ಯಾದೆ ಹೋಗುತ್ತದೆ ಅಂತ..ಡೋಂಟ್ ಕೇರ್...ಬೇರೆಯವರು ಎಚ್ಚೆತ್ತುಕೊಳ್ಳಲಿ ಬಿಡಿ ಅಂತ ಸರ್ ಅಂತ ಹೇಳಿದರು..ಸ್ನೇಹಿತರಲ್ಲದ ಸ್ನೇಹಿತನಿಗೆ ಕರೆ ಮಾಡಿ ಕೇಳಿದೆ...ತಪ್ಪಲ್ಲವೇ ಅಂತ..? ಒಂದೇ ಮಾತು. ನನ್ನದು ತಪ್ಪು ಅಂತ ಅನಿಸಿದರೆ ಆಕೆ ಮಾಡಿದ್ದು ಸರಿಯೇ!? ಸಂಪೂರ್ಣ ಸಂದೇಶಗಳನ್ನ ತೋರಿಸಲೆ ಅಂತೇಳಿದ.ಕೆಲವನ್ನಷ್ಟೆ  ಅಳಿಸಿ ಹಾಕಿದ್ದಾರೆ. ತಮಗೂ ತೋರಿಸಲೇ ಅಂದರು. ನನಗೆ. ಆ ಶುಭ ಸಂದೇಶಗಳನ್ನ ನೋಡುವ ತವಕವಿಲ್ಲ..ಪ್ರಪಂಚ ಕೆಲವೊಮ್ಮೆ ಕತ್ತಲ ಕೂಪದಲ್ಲಿರುತ್ತದೆ. ಬೆಳಕು ಬಂದಾಗ ಜಗತ್ತು ನೋಡಬೇಕು ಅಂತೇಳಿ ಕಟ್ ಮಾಡಿದೆ.. ಇವರಿಬ್ಬರು ನನಗೆ ಗೊತ್ತೆ ಅಲ್ಲ..ಏನೇನಾಗಿದೆ ಅನ್ನೊ ವಾಸ್ತವ ಅಂಶ ಗೊತ್ತು.!ಪಾಪ ಠಾಣೆಗೆ ಹೋದರೆ ಗೊತ್ತಿಲ್ಲದವರಿಗೆ ಗೊತ್ತಾಗೊ ಬದಲು,ಗೊತ್ತಿರುವವರಿಗೆ ಗೊತ್ತಾದರೆ (ತಂದೆ,ತಾಯಿ) ಸಾಕು ನಿಮ್ಮ ಕಥೆ ಗೊತ್ತಾಗೊದು. ನೆನಪಿರಲಿ..ಗೊತ್ತಿದ್ದರೂ ಗೊತ್ತಿಲ್ಲದಂತೆ ಇರಬೇಕು..ಆಗ ಪ್ರಪಂಚ ಏನೆಂಬುದು ಅರಿವಾಗೋದು..!?
ಇಬ್ಬರದ್ದೂ ತಪ್ಪು ಅಂತ ನಾನು ನಿರ್ಣಯಕ್ಕೆ ಬರೋದು ನನ್ನ ಅಭಿಪ್ರಾಯವಲ್ಲ...ಅವರವರಿಗೆ ಬಿಟ್ಟಿದ್ದು..ಅವರವರ ನೋವು ಅವರಿಗಷ್ಟೆ ಗೊತ್ತಲ್ಲವೇ!?
ಇಷ್ಟ ಆದರೆ ಶೇರ್ ಮಾಡಿ...ನೀವು ಮಾಡಿಕೊಂಡ ತಪ್ಪಿಗೆ ಗಂಡು ಸಂತತಿ ದೂಷಿಸಬೇಡಿ. ನೆನಪಿರಲಿ ಆತನೂ........!
ಅದೇಷ್ಟೋ ಹುಡುಗರು ತಮ್ಮ ಗೆಳತಿಯರು ಅವರ ಮಾನ‌ ಮರ್ಯಾದೆ ಹೋಗೋದು ಬೇಡ ಅಂತ ಅವರಿಗೆ ಬೆಲೆ ಕೊಡ್ತಾರೆ. ಅದೆ ಅವರು ಮನಸ್ಸು ಮಾಡಿದರೆ ಏನೆಲ್ಲ ಅವಘಡವಾಗೊದು ನೆನಪಿಸಿಕೊಂಡರೆ ಸಾಕು. ಬದುಕೇ ವಿಚಿತ್ರ.. ನಿಮ್ಮ ತೆವಲಿಗೆ ಮತ್ತೊಬ್ಬರ ಬಲಿ ಕೊಡಬೇಡಿ.ಹುಡುಗರೆಲ್ಲ ಕೆಟ್ಟವರಲ್ಲ....ಕೆಟ್ಟವರಲ್ಲ ಹುಡುಗಿಯರಲ್ಲ..ಸಂದರ್ಭವಷ್ಟೆ.!

Friday, 4 January 2019

ಮಕ್ಕಳ ಕಲಿಕಾ ಸಾಮಥ್ರ್ಯಕ್ಕೆ ಅನುಗುಣವಾಗಿ ಗುಣಾತ್ಮಕ ಶಿಕ್ಷಣ ನೀಡಲು ಸಿ.ಇ.ಒ ಸಲಹೆ  

ಚಾಮರಾಜನಗರ, ಜ. 03 :- ಮಕ್ಕಳ ಕಲಿಕಾ ಸಾಮಥ್ರ್ಯಕ್ಕೆ ಅನುಗುಣವಾಗಿ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಸುಸ್ಥಿರ ಫಲಿತಾಂಶ ಹೊರಹೊಮ್ಮಲು ಶಿಕ್ಷಕರು ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಸಲಹೆ ಮಾಡಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಫ್ರೌಢಶಾಲೆಯ ಸಮಾಜವಿಜ್ಞಾನ ವಿಷಯದ ಸಹ ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರವನ್ನು ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕ ವೃತ್ತಿ ಇತರೆ ವೃತ್ತಿಗಳಿಗಿಂತ ಪವಿತ್ರವಾದದ್ದು. ಮಕ್ಕಳ ಜ್ಞಾನಾರ್ಜನೆಗೆ ಸೂಕ್ತ ಕಲಿಕಾ ಅವಕಾಶಗಳನ್ನು ನೀಡಿ ಅವರ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರು ವಹಿಸುವ ಪಾತ್ರ ಪ್ರಮುಖವಾಗಿದೆ. ಶಿಕ್ಷಕರ ನಡೆ. ನುಡಿ, ಶಿಸ್ತು ಹಾಗೂ ಬದ್ಧತೆ ಮಕ್ಕಳನ್ನು ಸಕ್ರಿಯವಾಗಿ ತಲುಪಬೇಕು. ಆ ಮೂಲಕ ಮಕ್ಕಳಲ್ಲಿ ಗುಣಮಟ್ಟದ ಕಲಿಕಾ ಪ್ರವೃತ್ತಿಗೆ ಪರಿಣಾಮಕಾರಿ ಒತ್ತು ನೀಡಬೇಕು. ಎಸ್.ಎಸ್.ಎಲ್.ಸಿ ಪರೀಕ್ಷೆ ಕೆಲವೇ ತಿಂಗಳುಗಳ ಹತ್ತಿರವಿದೆ. ಇದನ್ನು ಗಮನದಲ್ಲಿಟುಕೊಂಡು ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯ ವೃದ್ದಿಸಲು ಕಾಯೋನ್ಮುಖರಾಗಬೇಕು ಎಂದರು.
ಪ್ರತಿವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಸಮಾಜವಿಜ್ಞಾನ ವಿಷಯದಲ್ಲಿ ಎರುಪೇರು ಕಂಡುಬರುತ್ತಿದೆ. ಸಮಾಜ ವಿಜ್ಞಾನ ವಿಷಯ ಮಕ್ಕಳ ದೈನಂದಿನ ಘಟನೆಗೆ ಸಂಬಂದಿಸಿದೆ. ವಿಷಯದ ಕಲಿಕಾ ಸಾಮಥ್ರ್ಯಕ್ಕೆ ಅನುಸಾರವಾಗಿ ಮಕ್ಕಳನ್ನು ವಿಂಗಡಿಸಿ ನಿಧಾನಗತಿಯ ಕಲಿಕಾರ್ಥಿಗಳಿಗೆ ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕು. ಅ ಮೂಲಕ ಎಸ್.ಎಸ್.ಎಲ್.ಸಿ ಸುಸ್ಥಿರ ಫಲಿತಾಂಶಕ್ಕೆ ಎಲ್ಲಾ ಶಿಕ್ಷಕರು ಶ್ರಮಿಸಬೇಕು ಎಂದು ತಿಳಿಸಿದರು.
ಮಕ್ಕಳು ಗುರುಗಳನ್ನು ಮಾದರಿ ವ್ಯಕ್ತಿಯನ್ನಾಗಿ ಕಾಣುವುದರಿಂದ ಶಿಕ್ಷಕರು ಹೊಂದಿರುವ ಜ್ಞಾನ, ಮಕ್ಕಳ ಮೇಲೆ ತೋರುವ ಪ್ರೀತಿ, ವಿಷಯ ಸಂಪತ್ತು ಮಕ್ಕಳನ್ನು ಪ್ರಭಾವಿಸುವಂತಿರಬೇಕು. ಸಮಾಜವಿಜ್ಞಾನವಷ್ಟೆ ಅಲ್ಲ. ಇತರೆ ವಿಷಯಗಳನ್ನು ಮಕ್ಕಳಿಗೆ ಅಪ್ಯಾಯಮಾನ ರೀತಿಯಲ್ಲಿ ಕಲಿಸಿದಾಗ ಮಾತ್ರ ಗುಣಮಟ್ಟದ ಕಲಿಕೆ ಸಾಧ್ಯವಾಗುತ್ತದೆ ಎಂದು ಹರೀಶ್‍ಕುಮಾರ್ ಅವರು ಶಿಕ್ಷಕರಿಗೆ ತಿಳಿಸಿದರು.
ಕಾರ್ಯಾಗಾರದಲ್ಲಿ ನಂಜನಗೂಡಿನ ಹದಿನಾರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕರಾದ ಬಸವರಾಜು ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳು, ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಫ್ರೌಢಶಾಲೆಯ ಸಮಾಜವಿಜ್ಞಾನ ಶಿಕ್ಷಕರು ಕಾರ್ಯಾಗಾರದಲ್ಲಿ ಹಾಜರಿದ್ದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯಾಗಿ ಹನುಮನರಸಯ್ಯ ಅಧಿಕಾರ ಸ್ವೀಕಾರ 

ಚಾಮರಾಜನಗರ, ಜ. 03 - ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ನೂತನ ಉಪಕಾರ್ಯದರ್ಶಿಯಾಗಿ ಎ. ಹನುಮನರಸಯ್ಯ ಅವರು ಇಂದು ಅಧಿಕಾರ ಸ್ವೀಕರಿಸಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಯೋಜನಾ ನಿರ್ದೇಶಕರಾಗಿಯು ಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ. ಶಿವಮೊಗ್ಗ, ತುಮಕೂರು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿಯೂ ಸೇವೆ ಸಲ್ಲಿಸಿದ್ದ ಎ. ಹನುಮನರಸಯ್ಯ ಅವರು ಪ್ರಸ್ತುತ ಚಾಮರಾಜನಗರ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯಾಗಿ ಅಧಿಕಾರಿ ಸ್ವೀಕರಿಸಿದ್ದಾರೆ
ರೈತರ ಸಾಲ ಮನ್ನಾ: ನಾಡಕಚೇರಿಗಳಲ್ಲೂ ನೊಂದಾಯಿಸಿಕೊಳ್ಳಲು ಅವಕಾಶ
ಚಾಮರಾಜನಗರ, ಜ. 03:- ರಾಜ್ಯ ಸರ್ಕಾರ ವಾಣಿಜ್ಯ ಬ್ಯಾಂಕುಗಳಲ್ಲಿ ಬೆಳೆ ಸಾಲ ಮಾಡಿರುವ ರೈತರಿಗೆ ಸಾಲ ಮನ್ನಾ ಮಾಡುವ ಸಲುವಾಗಿ ತಂತ್ರಾಂಶವನ್ನು ಜಾರಿಗೆ ತಂದಿದ್ದು, ಬ್ಯಾಂಕುಗಳಲ್ಲಿ ಸಾಲಪಡೆದ ಎಲ್ಲ ರೈತರು ಅಗತ್ಯ ದಾಖಲಾತಿಗಳೊಂದಿಗೆ ಜನವರಿ 10ರೊಳಗೆ ಸಂಬಂಧಪಟ್ಟ ಬ್ಯಾಂಕಿಗೆ ಹಾಜರಾಗಿ ಸ್ವಯಂ ಘೋಷಣಾ ಪತ್ರಕ್ಕೆ ಸಹಿ ಮಾಡುವಂತೆ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರು ಆಧಾರ್, ರೇಷನ್ ಕಾರ್ಡ್, ಪಹಣಿ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಬ್ಯಾಂಕಿಗೆ ಖುದ್ದು ಹಾಜರಾಗಿ ಸ್ವಯಂ ಘೋಷಣಾ ಪತ್ರಕ್ಕೆ ಸಹಿ ಮಾಡಬೇಕು. ಸದರಿ ದಾಖಲೆಗಳನ್ನು ಹತ್ತಿರದ ನಾಡ ಕಚೇರಿಯಲ್ಲೂ ಕೂಡ ಸಲ್ಲಿಸಿ ನೊಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಸದಾವಕಾಶವನ್ನು ರೈತಬಾಂಧವರು ಸದುಪಯೋಗ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಸಮನ್ವಯ, ವಿಶೇಷ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜ. 03 :- ಸಮನ್ವಯ ಶಿಕ್ಷಣ ಸಂಪನ್ಮೂಲ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿ ಖಾಲಿ ಇರುವ ಸಮನ್ವಯ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರನ್ನು ನೇರ ಗುತ್ತಿಗೆ ಮೂಲಕ ನೇಮಕಾತಿ ಮಾಡಿಕೊಳ್ಳುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುದ್ದಿ ಮಾಂಧ್ಯತ್ವ(ಎಂ.ಆರ್), ದೃಷ್ಠಿ ದೋಷ(ವಿ,ಐ), ಶ್ರವಣದೋಷ(ಎಚ್.ಐ) ಮತ್ತು ಸರ್ಕಾರಿ ಪ್ರೌಢಶಾಲಾ ವಿಭಾಗದಲ್ಲಿ ಬುದ್ದಿ ಮಾಂಧ್ಯತ್ವ(ಎಂ.ಆರ್), ದೃಷ್ಠಿ ದೋಷ(ವಿ,ಐ), ದೈಹಿಕ ನ್ಯೂನತೆ(ಎಲ್.ಡಿ) ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಆರ್.ಸಿ.ಐ ಸೂಕ್ತ ವಿದ್ಯಾರ್ಹತೆ ಇರಬೇಕು. ಪ್ರಾಥಮಿಕ ಶಾಲಾ ವಿಭಾಗಕ್ಕೆ ವಿಶೇಷ ಶಿಕ್ಷಣದಲ್ಲಿ ಡಿ.ಇಡಿ ಮತ್ತು ಪ್ರೌಢಶಾಲಾ ವಿಭಾಗಕ್ಕೆ ವಿಶೇಷ ಶಿಕ್ಷಣದಲ್ಲಿ ಬಿ.ಇಡಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಅಭಿಯಾನ ಇಲ್ಲಿಗೆ ಜನವರಿ 10ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಸದರಿ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಜನವರಿ 4ರಂದು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ
ಚಾಮರಾಜನಗರ, ಜ. 03 - ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯು ಜನವರಿ 4 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನವರಿ 4ರಂದು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
ಚಾಮರಾಜನಗರ, ಜ. 03 :- ಪೊಲೀಸ್ ಇಲಾಖೆವತಿಯಿಂದ ಚಾಮರಾಜನಗರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಜನವರಿ 4, 5 ಮತ್ತು 6ರಂದು ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಜನವರಿ 4ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸಮಾರಂಭವನ್ನು ಉದ್ಘಾಟಿಸುವರು. ಕೊಳ್ಳೇಗಾಲ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಡುಕೊಂಡಲು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕ್ರೀಡಾಕೂಟದ ಸಮಾರೋಪ ಸಮಾರಂಭವು ಜನವರಿ 6ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಮೈಸೂರು ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಕೆ.ವಿ. ಶರತ್‍ಚಂದ್ರ ಸಮಾರೋಪ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




   

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಅಗತ್ಯ ಸಹಕಾರ: ವೀಕ್ಷಕರಾದ ನವೀನ್‍ರಾಜ್ ಸಿಂಗ್ (04-01-2019)


ಗಣರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ 

ಚಾಮರಾಜನಗರ, ಜ. 04 :- ಜಿಲ್ಲಾಡಳಿತ ಹಾಗೂ ಎಲ್ಲಾ ಸಂಘಸಂಸ್ಥೆಗಳ ಸಹಕಾರದೊಂದಿಗೆ ಜನವರಿ 26ರಂದು ಗಣರಾಜ್ಯೋತ್ಸವ ದಿನ ಆಚರಣೆಯನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮವನ್ನು ಸುಸೂತ್ರವಾಗಿ ಕೈಗೊಳ್ಳಲು ನಿರ್ಧಾರ ಮಾಡಲಾಯಿತು.
ಸಭೆಯಲ್ಲಿ ಹಾಜರಿದ್ದ ಸಂಘಟನೆಗಳ ಮುಖಂಡರು ಮಾತನಾಡಿ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಹೆಚ್ಚು ಆದ್ಯತೆ ಕೊಡಬೇಕು. ಖಾಸಗಿ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಗಣರಾಜ್ಯೋತ್ಸವ ದಿನ ಆಚರಿಸಬೇಕು. ಬ್ಯಾಂಕುಗಳಲ್ಲಿ ಸಹ ಆಚರಣೆಗೆ ಸೂಚನೆ ನೀಡಬೇಕು. ಯಾವುದೇ ಲೋಪವಿಲ್ಲದೇ ಕಾರ್ಯಕ್ರಮ ಆಯೋಜನೆಯಾಗಬೇಕು. ಕಾರ್ಯಕ್ರಮಕ್ಕೆ ನಾವು ಎಲ್ಲ ಸಹಕಾರ ನೀಡಲಿದ್ದೇವೆ ಎಂದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಮಾತನಾಡಿ ಎಲ್ಲ ಶಾಲೆಗಳು ಕಡ್ಡಾಯವಾಗಿ ಗಣರಾಜ್ಯೋತ್ಸವ ಆಚರಿಸಲು ಸೂಚಿಸಲಾಗುತ್ತದೆ. ಜಿಲ್ಲೆಯಲ್ಲಿರುವ ಬ್ಯಾಂಕುಗಳು ಕೂಡ ಗಣರಾಜ್ಯೋತ್ಸವ ಆಚರಿಸುವಂತೆ ನಿರ್ದೇಶನ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಕಾರ್ಯಕ್ರಮ ಆಚರಿಸದೇ ಇರುವವರ ಬಗ್ಗೆ ಗಮನಿಸಲಾಗುತ್ತದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಎಂದಿನಂತೆ ಗಣರಾಜ್ಯೋತ್ಸವ ದಿನ ಆಚರಣೆ ಮಾಡಲಾಗುತ್ತದೆ. ಬೆಳಗಿನ ಪಥ ಸಂಚಲನ, ಸಾಂಸ್ಕøತಿಕ ಕಾರ್ಯಕ್ರಮಗಳು, ಧ್ವಜಾರೋಹಣ ಇತರೆ ಸಿದ್ದತೆಗಳಿಗೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಆಕರ್ಷಕ ಪಥಸಂಚಲನ ಕಾರ್ಯಕ್ರಮಕ್ಕೆ ಮೊರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ ಸೇರಿದಂತೆ ಎಲ್ಲಾ ಸರ್ಕಾರಿ ವಸತಿ ಶಾಲೆಗಳ ಮಕ್ಕಳನ್ನು ಸಹ ತೊಡಗಿಸಿಕೊಳ್ಳಬೇಕು. ಬೆಳಗಿನ ಸಾಂಸ್ಕøತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮೂಡಿಬರಲು ಎಲ್ಲರಿಗೂ ಸರಿಸಮಾನವಾಗಿ ತರಬೇತಿ, ತಾಲೀಮು ನೀಡುವ ಕೆಲಸ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಸಂಜೆಯ ವೇಳೆ ಚಾಮರಾಜೇಶ್ವರ ದೇವಾಲಯ ಬಳಿ ಸಹ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ಈಗಿನಿಂದಲೇ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದರು.
ಕಾರ್ಯಕ್ರಮ ನಿರ್ವಹಣೆಗೆ ಸ್ವಾಗತ ಸಮಿತಿ, ವೇದಿಕೆ ಸಮಿತಿ, ಧ್ವಜಾ ಸಿದ್ದತೆ ಸಮಿತಿ, ಲಘು ಉಪಹಾರ, ಬಹುಮಾನ, ಸಾಂಸ್ಕøತಿಕ ಕಾರ್ಯಕ್ರಮ ಸಮಿತಿಗಳು ಮಾಡಬೇಕಿರುವ ಕೆಲಸಗಳನ್ನು ನಿರ್ದಿಷ್ಟ ಪಡಿಸಲಾಗಿದೆ. ಯಾವುದೇ ಚ್ಯುತಿ ಬಾರದಂತೆ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅಧಿಕಾರಿಗಳು ಮುಂದಾಗುವಂತೆ ಜಿಲ್ಲಾಧಿಕಾರಿ ಕಾವೇರಿಯವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಎಚ್. ಚೆನ್ನಪ್ಪ, ತಹಶೀಲ್ದಾರ್ ಕೆ. ಪುರಂದರ್, ಸಂಘಟನೆಗಳ ಮುಖಂಡರಾದ ಚಾ.ರಂ. ಶ್ರೀನಿವಾಸಗೌಡ, ಗು. ಪುರುಷೋತ್ತಮ್, ಚಾ.ಗು. ನಾಗರಾಜು, ಜಿ. ಬಂಗಾರು, ಚಾ.ಹ. ಶಿವರಾಜು, ಪಣ್ಯದಹುಂಡಿ ರಾಜು, ಬಸವನಪುರ ರಾಜಶೇಖರ್, ಉಮ್ಮತ್ತೂರು ಬಸವರಾಜು ಇತರೆ ಸಂಘಟನೆ ಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಅಗತ್ಯ ಸಹಕಾರ: ವೀಕ್ಷಕರಾದ ನವೀನ್‍ರಾಜ್ ಸಿಂಗ್

ಚಾಮರಾಜನಗರ, ಜ. 04  ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗಿದ್ದು, ಈ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಹಕಾರ, ಸಲಹೆ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಮಿನರಲ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾ ಮತದಾರರ ಪಟ್ಟಿಯ ವೀಕ್ಷಕರಾದ ನವೀನ್‍ರಾಜ್ ಸಿಂಗ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ನಡೆದಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ತಮ್ಮ ಸಲಹೆ, ಅಭಿಪ್ರಾಯಗಳನ್ನು ಸಹ ನೀಡಬೇಕಿದೆ ಎಂದು ನವೀನ್‍ರಾಜ್ ಸಿಂಗ್ ಅವರು ಪ್ರಸ್ತಾಪ ಮಾಡಿದರು.
ಈ ವೇಳೆ ಮಾತನಾಡಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳು ನೇಮಕ ಮಾಡಿರುವ ಮತಗಟ್ಟೆ ಮಟ್ಟದ ಏಜೆಂಟರು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಮುಂದೆ ಸಭೆ ಏರ್ಪಾಡು ಮಾಡಬೇಕು. ಕೆಲ ವಾರ್ಡುಗಳಲ್ಲಿ ಕಳೆದ ನಗರಸಭೆ ಚುನಾವಣೆ ವೇಳೆ ಕೆಲ ಮತದಾರರ ಹೆಸರು ಕೈಬಿಟ್ಟು ಹೋಗಿತ್ತು. ಇದನ್ನು ಸರಿಪಡಿಸಬೇಕು. ಎಂಬಿತ್ಯಾದಿ ವಿಷಯಗಳನ್ನು ಪ್ರಸ್ತಾಪಿಸಿದರು.
ಇದಕ್ಕೆ ಸ್ಪಂದಿಸಿದ ವೀಕ್ಷಕರು ಶೀಘ್ರದಲ್ಲೇ ಮತಗಟ್ಟೆ ಮಟ್ಟದ ಏಜೆಂಟರು ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳ ಸಭೆ ಕರೆಯಬೇಕು. ಎಲ್ಲ ವಿಷಯಗಳು ಮನದಟ್ಟು ಮಾಡಿಕೊಡಬೇಕು ಎಂದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನೀಡಿರುವ ಸಲಹೆ, ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸಮರ್ಪಕ ಕಾರ್ಯ ನಿರ್ವಹಣೆಗೆ ಸೂಚನೆ ಕೊಡಲಾಗುತ್ತದೆ ಎಂದು ನವೀನ್‍ರಾಜ್ ಸಿಂಗ್ ಅವರು ತಿಳಿಸಿದರು.
ಇದೇ ವೇಳೆ ಅಧಿಕಾರಿಗಳು ಕೈಗೊಂಡಿರುವ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯದ ಪ್ರಗತಿ ಪರಿಶೀಲಿಸಿದ ನವೀನ್‍ರಾಜ್ ಸಿಂಗ್ ಅವರು ಮತದಾರರ ಪಟ್ಟಿ ಪರಿಷ್ಕರಣೆ ಕೆಲಸವನ್ನು ಗಂಭೀರವಾಗಿ ನಿರ್ವಹಿಸಬೇಕು. ಮರಣ ಹೊಂದಿದವರ ಹೆಸರು, ವಿವರವನ್ನು ಗ್ರಾಮ ಲೆಕ್ಕಾಧಿಕಾರಿಗಳು ತಕ್ಷಣವೇ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇದರಿಂದ ಪಟ್ಟಿಯಲ್ಲಿ ಹೆಸರು ಕೈಬಿಡುವ ಸಂಬಂಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಮಾತನಾಡಿ ಮತಗಟ್ಟೆ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳು ನೇಮಿಸಿರುವ ಮತಗಟ್ಟೆ ಮಟ್ಟದ ಏಜೆಂಟರ್ ಸಭೆ ನಡೆಸಲು ಅಗತ್ಯ ಕ್ರಮ ವಹಿಸಲಾಗುತ್ತದೆ. ಸಮರ್ಪಕ ಮತದಾರರ ಪಟ್ಟಿ ಪರಿಷ್ಕರಣೆ ಕೆಲಸಕ್ಕೆ ಆದ್ಯ ಗಮನ ನೀಡಲಾಗುತ್ತದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್, ತಹಶೀಲ್ದಾರರಾದ ರಾಯಪ್ಪ ಹುಣಸಗಿ, ಕೆ. ಪುರಂದರ್, ಗಣಪತಿ ಶಾಸ್ತ್ರಿ, ಸುದರ್ಶನ್, ಜಿಲ್ಲಾ ಯೋಜನಾ ನಿರ್ದೆಶಕರಾದ ಕೆ. ಸುರೇಶ್ ಇತರೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಜನವರಿ 5ರಂದು ಮುಜರಾಯಿ ಸಚಿವರ ಜಿಲ್ಲಾ ಪ್ರವಾಸ 

ಚಾಮರಾಜನಗರ, ಜ. 04 - ಮುಜರಾಯಿ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಖಾತೆಯ ಸಚಿವರಾದ ಪಿ.ಟಿ. ಪರಮೇಶ್ವರನಾಯ್ಕ ಅವರು ಜನವರಿ 5ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 9.30 ಗಂಟೆಗೆ ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇವಾಲಯಕ್ಕೆ ಭೇಟಿ ಕೊಡುವರು. ಸ್ಥಳೀಯ ಶಾಸಕರು, ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸುವರು. ಸಂತ್ರಸ್ತರ ಮನೆಗೆ ಭೇಟಿ ಕೊಡುವರು. ಬಳಿಕ ಮಧ್ಯಾಹ್ನ 2.30 ಗಂಟೆಗೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವರು. ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ಮಧ್ಯಾಹ್ನ 3.30 ಗಂಟೆಗೆ ಮೈಸೂರಿಗೆ ತೆರಳುವರು.
   

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು