ಪ್ರಸಾದ ಸೇವನೆ ಪ್ರಕರಣ : ಮತ್ತೋರ್ವ ಸಾವು - ಸಾವಿನ ಸಂಖ್ಯೆ 14ಕ್ಕೆ ಏರಿಕೆ
S.Veeerabhadra Swamy-chamarajanagar 9480030980
ಚಾಮರಾಜನಗರ, ಡಿ. 17:- ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮನ ದೇವಾಲಯದ ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಇಂದು ಓರ್ವ ಮಹಿಳೆ ಮೃತಪಟ್ಟಿದ್ದಾರೆ.
ಮಾರ್ಟಳ್ಳಿಯ ಕೋಟೆಪೊದೆಯ ಕೃಷ್ಣನಾಯಕ್ ಎಂಬುವರ ಪತ್ನಿ ಮೈಲಿಬಾಯಿ (35 ವರ್ಷ) ಮೃತಪಟ್ಟವರು. ಪ್ರಸಾದ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಮೈಲಿಬಾಯಿಯವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೈಲಿಬಾಯಿಯವರು ಇಂದು ನಿಧನ ಹೊಂದಿದ್ದಾರೆ.
ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥಗೊಂಡಿರುವ 109 ಮಂದಿ ಮೈಸೂರಿನ ಕೆ. ಆರ್. ಆಸ್ಪತ್ರೆ ಸೇರಿದಂತೆ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಯವರಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಳ್ವಾಡಿ ಪ್ರಸಾದ ಸೇವನೆ ಪ್ರಕರಣ: ಪ್ರತಿ ಆಸ್ಪತ್ರೆಗೆ ನೋಡಲ್ ಅಧಿಕಾರಿ,ಸಿಬ್ಬಂದಿ ನೇಮಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಆದೇಶ
ಚಾಮರಾಜನಗರ, ಡಿ. 17:- ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮನ ದೇವಾಲಯದ ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥರಾಗಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿರುವವರ ಆರೋಗ್ಯ ಸ್ಥಿತಿ ನಿರ್ವಹಣೆ, ನೆರವು ಸಂಬಂಧ ನೋಡಿಕೊಂಡು ವರದಿ ಸಲ್ಲಿಸಲು ಪ್ರತಿ ಆಸ್ಪತೆಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೊಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರು ಆದೇಶ ಹೊರಡಿಸಿದ್ದಾರೆ.
ಅಧಿಕಾರಿಗಳೊಂದಿಗೆ ಜಿಲ್ಲೆಯ ಇತರೆ ಸಿಬ್ಬಂದಿಯ ತಂಡವನ್ನು ನಿಯೋಜಿಸಿದ್ದು, ಅಧಿಕಾರಿಗಳು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆ, ಅಧಿಕಾರಿಗಳು, ಸಿಬ್ಬಂದಿ ಹಾಗೂ ವೈದ್ಯರ ವಿವರಗಳು ಇಂತಿದೆ.
ಜೆ.ಎಸ್.ಎಸ್. ಆಸ್ಪತ್ರೆ, ಮೈಸೂರು, ತಿರುಮಲೇಶ್, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಚಾಮರಾಜನಗರ. ಮೊ. 8277930760 , ಡಾ|| ಮಹೇಶ್,ಮೊ : 9845114166, ರೇಚಣ್ಣಸ್ವಾಮಿ, ರಾಜಸ್ವ ನಿರೀಕ್ಷಕರು ಚಂದಕವಾಡಿ ಹೋಬಳಿ. ಚಾಮರಾಜನಗರ ತಾ||ಮೊ: 9980745781 ಅಬ್ದುಲ್ ಮುಜಾಹಿದ್, ದ್ವಿ.ದ.ಸ ತಾಲ್ಲೂಕು ಕಚೇರಿ ಚಾಮರಾಜನಗರಮೊ: 9901352329, ಸುಧೀರ್ ಗ್ರಾ.ಲೆ, ಕಾಗಲವಾಡಿ ವೃತ್ತ,ಗುಂಡ್ಲುಪೇಟೆ ತಾ||ಮೊ: 9686676932
ಸೆಂಟ್ ಜೋಸೆಫ್ ಆಸ್ಪತೆ ಮೈಸೂರು ಸೋಮಶೇಖರ್, ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಚಾಮರಾಜನಗರ.ಮೊ.9620583072 ಡಾ|| ರಾಮಕೃಷ್ಣ,ಮೊ: 9980006401 9448043242 ಡಾ|| ನಿರ್ಮಲ ಮೊ: 9845056714ನಾಗರಾಜು, ರಾಜಸ್ವ ನಿರೀಕ್ಷಕರು ಹರದನಹಳ್ಳಿ ರೇವಣ್ಣ.ಗಾಮ ಲೆಕ್ಕಿಗರು ಶಿವಪುರ ವೃತ್ತ,ಚಾಮರಾಜನಗರ ತಾ||,ಮೊ: 9620759484 ಹೋಬಳಿ,ಚಾಮರಾಜನಗರ ತಾ|| ಮೊ: 9141598212ಮಹದೇವಶೆಟ್ಟಿ,ಪ್ರ.ದ.ಸ. ತಾಲ್ಲೂಕು ಕಚೇರಿ ಚಾಮರಾಜನಗರಮೊ: 9844371655
ಕೊಲಂಬಿಯ ಏಷಿಯಾ ಆಸ್ಪತ್ರೆ, ಮೈಸೂರು ರಾಚಪ್ಪ, ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಚಾಮರಾಜನಗರ ಮೊ:. 9448424665 9739875870 ಡಾ|| ಮಂಜುನಾಥ್ ಮೊ: 9738251350 ಪರಮೇಶ್ ರಾಜಸ್ವ ನಿರೀಕ್ಷಕರು ಸಂತೇಮರÀಹಳ್ಳಿ ಹೋಬಳಿ ಚಾಮರಾಜನಗರ ತಾ|| ಮೊ: 8971901894 ರವಿ ಎನ್ ಗಾಮ ಲೆಕ್ಕಿಗರು ಸುತ್ತೂರು ವೃತ್ತ ಚಾಮರಾಜನಗರ ತಾ|| ಮೊ: 9342891798 ಸುಮಂತ್‍ಕುಮಾರ್‍ಗ್ರಾ.ಲೆ, ಚಾಮರಾಜನಗರ ತಾಲ್ಲೂಕು ಮೊ: 9036578896
ಕೆ.ಆರ್. ಆಸ್ಪತ್ರೆ, ಮೈಸೂರು ಕೃಷ್ಣಪ್ಪ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಾಮರಾಜನಗರ. ಮೊ. 9739567241 ಡಾ|| ರಾಜು ಮೊ; 9448267187 ಲಿಂಗರಾಜಮೂರ್ತಿ ರಾಜಸ್ವ ನಿರೀಕ್ಷಕರು ಹರವೆ ಹೋಬಳಿ ಚಾಮರಾಜನಗರ ತಾ|| ಮೊ: 9886785333 ಶ್ರೀನಿವಾಸಮೂರ್ತಿ ಗ್ರಾ.ಲೆ, ಉಡಿಗಾಲ ವೃತ್ತ ಚಾಮರಾಜನಗರ ತಾ|| ಮೊ: 9986102162 ಬಾಲರಾಜು, ದ್ವಿ.ದ.ಸ ತಾಲ್ಲೂಕು ಕಚೇರಿ ಚಾಮರಾಜನಗರ ಮೊ: 8150815550
ಗೋಪಾಲಗೌಡ ಆಸ್ಪತ್ರೆ, ಮೈಸೂರು ರಾಜೇಂದ್ರ ಪ್ರಸಾದ್, ಉಪ ನಿರ್ದೇಶಕರು, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ, ಚಾಮರಾಜನಗರ. ಮೊ. 7019517306 ಡಾ|| ವೈದ್ಯನಾಥನ್ ಮತ್ತು ಡಾ|| ಆದರ್ಶ್(ಕಾವೇರಿ ಆಸ್ಪತ್ರೆ) ಡಾ|| ರಘುನಾಥ್ ಮತ್ತು ಡಾ|| ಲಕ್ಷ್ಮೀಕಾಂತ್‍ನದೀಂ ಹುಸೇನ್ ರಾಜಸ್ವ ನಿರೀಕ್ಷಕರು ಹಂಗಳ ಹೋಬಳಿ ಗುಂಡ್ಲುಪೇಟೆ ತಾ|| ಮೊ: 9482378786, ವಿನಯ್‍ಕುಮಾರ್ ವೈ.ಸಿ.ಗಾಮ ಲೆಕ್ಕಿಗರು ಕಣ್ಣೇಗಾಲ ವೃತ್ತಗುಂಡ್ಲುಪೇಟೆ ತಾ||ಮೊ: 7760632756 ಅರುಣ್ ಎಂ.ವೈ ಗಾಮ ಲೆಕ್ಕಿಗರು ಕಲೀಗೌಡನಹಳ್ಳಿ ವೃತ್ತ ಗುಂಡ್ಲುಪೇಟೆ ತಾಲ್ಲೂಕು ಮೊ: 9734098395
ಸುಯೋಗ್ ಆಸ್ಪತ್ರೆ, ಮೈಸೂರು ಸೋಮಶೇಖರ್, ಉಪ ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಚಾಮರಾಜನಗರ. ಮೊ. 9945229477 ಡಾ| ಯೋಗಣ್ಣ ಮೊ: 9663113722 ನಂಜೇಗೌಡ ರಾಜಸ್ವ ನಿರೀಕ್ಷಕರು ತೆರಕಣಾಂಬಿ ಹೋಬಳಿ ಗುಂಡ್ಲುಪೇಟೆ ತಾ|| ಮೊ: 9448536861 ಕೃಷ್ಣಮೂರ್ತಿ ಗಾಮ ಲೆಕ್ಕಿಗರು ಪುಟ್ಟನಪುರ ವೃತ್ತ ಗುಂಡ್ಲುಪೇಟೆ ತಾ|| ಮೊ: 9342825630 ರಮೇಶ್ ಗಾಮ ಲೆಕ್ಕಿಗರು ಹಂಗಳ ವೃತ್ತ ಗುಂಡ್ಲುಪೇಟೆ ತಾ|| ಮೊ: 9483306166
ಅಪೋಲೋ ಆಸ್ಪತ್ರೆ, ಮೈಸೂರು ಸುರೇಶ್, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಚಾಮರಾಜನಗರ .ಮೊ. 7406127698 ಡಾ|| ಹೆಚ್.ಜಿ. ಭರತೇಶ್ ರೆಡ್ಡಿ. ಮೊ: 9741667788 ಭೈರಯ್ಯ ರಾಜಸ್ವ ನಿರೀಕ್ಷಕರು ಬೇಗೂರು ಹೋಬಳಿ,ಗುಂಡ್ಲುಪೇಟೆ ತಾ|| ಮೊ: 8277858907 ಸುಹಾಸ್ ಗ್ರಾ.ಲೆ, ಉಗನೀಯ ವೃತ್ತ ಹನೂರು ತಾ|| ಮೊ: 9535118280 ರವಿ ಗ್ರಾ.ಲೆ, ಶೀಗವಾಡಿ ವೃತ್ತ, ಗುಂಡ್ಲುಪೇಟೆ ತಾ|| ಮೊ: 9980349517
ಡಿ.ಆರ್.ಎಂ. (ವಿಕ್ರಂ) ಆಸ್ಪತ್ರೆ, (ಡಾ|| ಮಂಜುನಾಥ ಆಸ್ಪತ್ರೆ, ) ಒಂಟಿಕೊಪ್ಪಲು ಮೈಸೂರು. ಆನಂದ, ಉಪ ನಿರ್ದೇಶಕರು, ಪಶುಪಾಲನೆ ಮತ್ತು ಪಶು ಸಂಗೋಪನೆ ಇಲಾಖೆ, ಚಾಮರಾಜನಗರ. ಮೊ. 7899686738 ಡಾ|| ಮಂಜುನಾಥ ಮೊ: 9738251350 ಶಿವಣ್ಣ ರಾಜಸ್ವ ನಿರೀಕ್ಷಕರು ಕಸಬಾ ಹೋಬಳಿ ಗುಂಡ್ಲುಪೇಟೆ ತಾ|| ಮೊ: 9663457597 ರಾಜು ಗ್ರಾ.ಲೆ, ಕೂತನೂರು ವೃತ್ತ ಗುಂಡ್ಲುಪೇಟೆ ತಾ|| ಮೊ: 9739302662 ಯದುಗಿರಿ ಗ್ರಾ.ಲೆ, ಭೀಮನಬೀಡು ವೃತ್ತ ಗುಂಡ್ಲುಪೇಟೆ ತಾ|| ಮೊ: 7019194050
ಭಾನವಿ ಆಸ್ಪತ್ರೆ, ಮೈಸೂರು ಬಸವರಾಜು, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಚಾಮರಾಜನಗರ. ಮೊ.9972505030 ಸಿದ್ದಲಿಂಗಸ್ವಾಮಿ ರಾಜಸ್ವ ನಿರೀಕ್ಷಕರು ಅಗರ ಹೋಬಳಿ ಯಳಂದೂರು ತಾ|| ಮೊ: 8277858836 ಮುಜಾಹಿದ್ ದ್ವಿ.ದ.ಸ. ತಾಲ್ಲೂಕು ಕಚೇರಿ ಚಾಮರಾಜನಗರ ಮೊ: 9901358329 ದೇವೇಂದ್ರನಾಯ್ಕ ಗ್ರಾ.ಲೆ, ಹೊನ್ನೂರು ವೃತ್ತ ಯಳಂದೂರು ತಾ|| ಮೊ: 8618541013
ಬೃಂದಾವನ ಆಸ್ಪತ್ರೆ , ಮೈಸೂರು ಸುಂದರೇಶ್‍ಮೂರ್ತಿ. ಕಾರ್ಯಪಾಲಕ ಅಭಿಯಂತರರು ಕೆ.ಆರ್.ಐ.ಡಿ.ಎಲ್. ಚಾಮರಾಜನಗರ ಮೊ: 9449863071, ನಂಜಯ್ಯ, ರಾಜಸ್ವ ನಿರೀಕ್ಷಕರು ಪಾಳ್ಯ ಹೋಬಳಿ, ಕೊಳ್ಳೇಗಾಲ ತಾ||, ಮೊ: 9632891116 ದಿನಕರ್ ,ಗ್ರಾ.ಲೆ, ದಿನ್ನಳ್ಳಿ ವೃತ್ತ, ಹನೂರು ತಾ|| ,ಮೊ: 8277858916 ತಾರೇಶ್, ಗ್ರಾ.ಲೆ, ತಾಲ್ಲೂಕು ಕಚೇರಿ ಚಾಮರಾಜನಗರ ಮೊ: 9845568909
ಕಾವೇರಿ ಆಸ್ಪತ್ರೆ, ಮೈಸೂರು ಸೈಯದ್ ನಯೀಮ್ ಅಹಮ್ಮದ್, ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಚಾಮರಾಜನಗರ, ಮೊ.9945164259 ಸತೀಶ್ ಜಿ.ಪಿ ಗ್ರಾ.ಲೆ, ಗೌಡಹಳ್ಳಿ ವೃತ್ತ, ಯಳಂದೂರು ತಾ||, ಮೊ. 9900510515 ನಂದಕುಮಾರ್‍ಗ್ರಾ.ಲೆ, ಯಳಂದೂರ ತಾ|| ಮೊ. 8183024048 ಶರತ್ ಗ್ರಾ.ಲೆ, ಯಳಂದೂರು ತಾ|| ಮೊ.7829596655
ನಾರಾಯಣ ಹೃದಯಾಲಯ,ಮೈಸೂರು ನಾಗೇಶ್ ಅಬಕಾರಿ ಉಪ ಆಯುಕ್ತರು ಚಾಮರಾಜನಗರ ಜಿಲ್ಲೆ,ಮೊ. 9448838004 ಜಯಪ್ಪ ಗ್ರಾ.ಲೆ ಚಾಮರಾಜನಗರ ತಾ||, ಮೊ.9449490017 ಮಹೇಶ್ ಕುಮಾರ್ ಗ್ರಾ.ಲೆ ಕಾಳನಹುಂಡಿ ವೃತ್ತ ಚಾಮರಾಜನಗರ ತಾ|| ಮೊ.9901262081 ಮಂಜುನಾಥ ಹಂಚಿನಮನೆ, ಗ್ರಾ.¯,É ಚಾಮರಾಜನಗರ ತಾ||ಮೊ.8884614054 / 8660726968
ಬೆಳೆ ಸಾಲ ಮನ್ನಾ: ರೈತರು ನೊಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮನವಿ
ಚಾಮರಾಜನಗರ, ಡಿ. 17 - ರಾಜ್ಯ ಸರ್ಕಾರವು ವಾಣಿಜ್ಯ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಮಾಡಿರುವ ರೈತರಿಗೆ ಸಾಲ ಮನ್ನಾ ಮಾಡುವ ಸಲುವಾಗಿ ತಂತ್ರಾಂಶವೊಂದÀನ್ನು ಜಾರಿಗೆ ತಂದಿದ್ದು ಬೆಳೆ ಸಾಲ ಪಡೆದ ಪ್ರತಿಯೊಬ್ಬ ರೈತರು ಸಾಲ ಪಡೆದ ವಾಣಿಜ್ಯ ಬ್ಯಾಂಕ್‍ಗಳಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಮನವಿ ಮಾಡಿದ್ದಾರೆ.
2009ರ ಏಪ್ರಿಲ್ 1 ರಿಂದ 2017ರ ಡಿಸೆಂಬರ್ 31ರವರೆಗೆ ಬಾಕಿ ಇರುವ ಬೆಳೆ ಸಾಲ(sಸುಸ್ತಿಸಾಲ, ಪುನರಾವಸ್ತಿ ಸಾಲ, ಎನ್.ಪಿ.ಎ. (ನಾನ್ ಪರ್ಫಾಮಿಂಗ್ ಅಸೆಟ್ ಸಾಲಗಳು) ಪಡೆದಿರುವ ರೈತರು ಸಾಲ ಮನ್ನಾ ಯೋಜನೆಗೆ ಅರ್ಹರಾಗಿದ್ದಾರೆ. ಯೋಜನೆಯಡಿ ಒಂದು ರೈತ ಕುಟುಂಬವು (ಗಂಡ+ಹೆಂಡತಿ+ಅವಲಂಬಿತ ಮಕ್ಕಳು) ಗರಿಷ್ಠ 2 ಲಕ್ಷ ರೂ.ವರೆಗೆ ಮಾತ್ರ ಬೆಳೆ ಸಾಲ ಮನ್ನಾ ಸೌಲಭ್ಯ ಪಡೆಯಲು ಅವಕಾಶವಿದೆ.
ಜಿಲ್ಲೆಯ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಪಡೆದ ರೈತರ ಸಂಖ್ಯೆ 22978 ಆಗಿದ್ದು ಈ ಪೈಕಿ 19325 ರೈತರ ಬೆಳೆ ಸಾಲ ಮನ್ನಾ ಕುರಿತು ಪರಿಶೀಲಿಸಲಾಗಿದೆ. ಜಿಲ್ಲಾ ವ್ಯಾಪ್ತಿಯ ವಾಣಿಜ್ಯ ಬ್ಯಾಂಕಿನ ಶಾಖೆಗಳಲ್ಲಿ ಪ್ರತಿದಿನ ಕನಿಷ್ಟ 40 ರೈತರು ಹೆಸರÀು ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ರೈತರಿಗೆ ಕ್ರಮಬದ್ದವಾಗಿ ಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿದ ಟೋಕನ್‍ಗಳನ್ನು ನೀಡಲಾಗುವುದು. ನಿಗದಿಪಡಿಸಿದ ದಿನಾಂಕಗಳಂದು ರೈತರು ಬ್ಯಾಂಕ್ ಶಾಖೆಗೆ ತೆರಳಿ ಸ್ವಯಂ ದೃಢೀಕರಣ ಪತ್ರದೊಂದಿಗೆ ,ಆಧಾರ್ ಕಾರ್ಡ್, ಪಡಿತರ ಚೀಟಿ (ದಿನಾಂಕ 5.7.2018ಕ್ಕಿಂತ ಮುಂಚಿತವಾಗಿ ಪಡೆದ ಪಡಿತರ ಚೀಟಿ) ನಕಲು, ಪಹಣಿ ಪತ್ರದೊಂದಿಗೆ ಬೆಳೆ ಸಾಲ ಮನ್ನಾ ತಂತ್ರಾಂಶದಲ್ಲಿ ನೊಂದಾಯಿಸಿಕೊಳ್ಳಬೇಕು.
ಯಾವ ರೈತರು ವಾರ್ಷಿಕ ಆದಾಯ ತೆರಿಗೆ ಪಾವತಿದಾರರರೋ ಮತ್ತು ರಾಜ್ಯ, ಕೇಂದ್ರ ಸರ್ಕಾರಿ, ಅರೆ ಸರ್ಕಾರಿ, ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಲ್ಲಿ, ಸಾರ್ವಜನಿಕ ಸ್ವಾಮ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು 15 ಸಾವಿರ ರೂ.ಗಳಿಗಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತ ನೌಕರರು ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್‍ನ ಬೆಳೆಸಾಲ ಮನ್ನಾ ಯೋಜನೆಗೆ ಅರ್ಹರಿರುವುದಿಲ್ಲ.
ಅರ್ಹ ರೈತರು ಬೆಳೆ ಸಾಲ ಮನ್ನಾ ಯೋಜನೆಯಡಿ ತಮ್ಮ ಬ್ಯಾಂಕ್ ಶಾಖೆಗಳಲ್ಲಿ ಹೆಸರು ನೊಂದಾಯಿಸಿಕೊಳ್ಳಲು 2019ರ ಜನವರಿ 10ರವರೆಗೆ ಕಾಲಾವಕಾಶ ನೀಡಲಾಗಿದೆ. ರೈತರು ಯಾವುದೇ ಗೊಂದಲಗಳಿಗೆ ಒಳಗಾಗದೇ ಶಾಂತ ರೀತಿಯಿಂದ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಹಕರಿಸಿ ಬೆಳೆ ಸಾಲ ಮನ್ನಾ ಯೋಜನೆಯ ಲಾಭ ಪಡೆದುಕೊಳ್ಳಬೇಕು.
ಬೆಳೆ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಮಾಹಿತಿ ಕೇಂದ್ರವನ್ನು ನಗರದ ಜಿಲ್ಲಾಡಳಿತ ಭವನದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 104ರಲ್ಲಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ 08226-223160 ಸಂಪರ್ಕಿಸಿಯೂ ಸಹ ವಿವರ ಪಡೆಯಬಹುದಾಗಿದೆ. ಬೆಳೆ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಸಂದೇಹಗಳಿದಲ್ಲಿ ಪರಿಹಾರಕ್ಕಾಗಿ ಹಾಗೂ ಸಲಹೆಗಳನ್ನು ಪಡೆಯಲು ಆಯಾ ತಾಲೂಕಿಗೆÀ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಿಲೀಪ್, ಚಾಮರಾಜನಗರÀ – ಮೊಬೈಲ್ 9535803412, ರಾಜೇಂದ್ರ, ಕೊಳ್ಳೇಗಾಲ - ಮೊ. 9901885361, ಕಾರ್ತಿಕ್, ಹನೂರು – ಮೊ. 9743299941, ವಾಸುದೇವ, ಗುಂಡ್ಲುಪೇಟೆ – ಮೊ. 9742593734, ಶರತ್, ಯಳಂದೂರು – ಮೊ. 7829596655 ಇವರನ್ನು ಸಂಪರ್ಕಿಸಿ ಬೆಳೆ ಸಾಲ ಮನ್ನಾ ಮಾಹಿತಿ, ಸಲಹೆ ಹಾಗೂ ಪರಿಹಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಗ್ರಾ.ಪಂ. ಉಪಚುನಾವಣೆ : ಜಿಲ್ಲಾಧಿಕಾರಿಯವರಿಂದ ಅಧಿಸೂಚನೆ
ಚಾಮರಾಜನಗರ, ಡಿ. 17 - ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲೆಯ ಒಟ್ಟು 5 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸುವ ಸಂಬಂಧ ಜಿಲ್ಲಾಧಿಕಾರಿಯವರಾದ ಬಿ.ಬಿ. ಕಾವೇರಿ ಅವರು ಇಂದು ಅಧಿಸೂಚನೆ ಹೊರಡಿಸಿದ್ದಾರೆ.
ಜಿಲ್ಲೆಯ ಚಾಮರಾಜನಗರ ತಾಲೂಕಿನ ವೆಂಕಟಯ್ಯನಛತ್ರ ಗ್ರಾಮ ಪಂಚಾಯಿತಿಯ ಬಸವಾಪುರ ಕ್ಷೇತ್ರ (ಅನುಸೂಚಿತ ಜಾತಿ), ಅರಕಲವಾಡಿ ಗ್ರಾಮ ಪಂಚಾಯಿತಿಯ ಮೂಡ್ಲ ಹೊಸಹಳ್ಳಿ ಕ್ಷೇತ್ರ (ಸಾಮಾನ್ಯ), ದೇಮಹಳ್ಳಿ ಗ್ರಾಮ ಪಂಚಾಯಿತಿಯ ದೇಮಹಳ್ಳಿ ಕ್ಷೇತ್ರ (ಸಾಮಾನ್ಯ), ಕೊಳ್ಳೇಗಾಲ ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮ ಪಂಚಾಯಿತಿಯ ಪಿ.ಜಿ ಪಾಳ್ಯ ಕ್ಷೇತ್ರ (ಸಾಮಾನ್ಯ), ಯಳಂದೂರು ತಾಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿಯ ಹೊನ್ನೂರು ಕ್ಷೇತ್ರ (ಸಾಮಾನ್ಯ)ಕ್ಕೆ ಚುನಾವಣೆ ನಿಗದಿಯಾಗಿದೆ. ಒಟ್ಟು 5 ಸದಸ್ಯ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ.
ನಾಮಪತ್ರಗಳನ್ನು ಸಲ್ಲಿಸಲು ಡಿಸೆಂಬರ್ 20 ಕಡೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ ಕಾರ್ಯವು ಡಿಸೆಂಬರ್ 21ರಂದು ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಡಿಸೆಂಬರ್ 24 ಕಡೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ 2019ರ ಜನವರಿ 2ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತದೆ. ಮರು ಮತದಾನ ಅವಶ್ಯವಿದ್ದಲ್ಲಿ ಜನವರಿ 3ರಂದು ನಡೆಸಲಾಗುತ್ತದೆ. ಮತಗಳ ಎಣಿಕೆ ಕಾರ್ಯವು 2019ರ ಜನವರಿ 4ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಜನವರಿ 4ರಂದೇ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಜಿಲ್ಲಾಧಿಕಾರಿಯವರಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದ್ವಿತೀಯ ಪಿಯು ಪರೀಕ್ಷೆ : ನೊಂದಾಯಿತ ಪುನರಾವರ್ತಿತ, ಖಾಸಗಿ ಅಭ್ಯರ್ಥಿಗಳು
ಭಾವಚಿತ್ರ ಸಲ್ಲಿಸಲು ಸೂಚನೆ
ಚಾಮರಾಜನಗರ, ಡಿ. 17 - ಪದವಿಪೂರ್ವ ಶಿಕ್ಷಣ ಇಲಾಖೆಯು ಮಾರ್ಚ್ 2019ರಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ನೊಂದಾಯಿಸಿಕೊಂಡಿರುವ ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ನೊಂದಾಯಿಸಿಕೊಂಡಿರುವ ಕಾಲೇಜಿಗೆ ತಮ್ಮ ಇತ್ತೀಚಿನ ಭಾವಚಿತ್ರವನ್ನು ಡಿಸೆಂಬರ್ 20ರೊಳಗೆ ತುರ್ತಾಗಿ ಸಲ್ಲಿಸುವಂತೆ ಹಾಗೂ ಖುದ್ದಾಗಿ ಪ್ರಾಂಶುಪಾಲರನ್ನು ಭೇಟಿಯಾಗುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ವಿ.ಆರ್. ಶ್ಯಾಮಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ. 21ರಂದು ಚಾ.ನಗರ ತಾ.ಪಂ. ಸಾಮಾನ್ಯ ಸಭೆ
ಚಾಮರಾಜನಗರ, ಡಿ. 17 ಚಾಮರಾಜನಗರ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ದೊಡ್ಡಮ್ಮ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 21ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ಏರ್ಪಡಿಸಲಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ. 29ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ
ಚಾಮರಾಜನಗರ, ಡಿ. 17:- ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯು ಡಿಸೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡÉಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಸಾಪ ಪರೀಕ್ಷೆ : ಪ್ರವೇಶ ಪತ್ರ ರವಾನೆ
ಚಾಮರಾಜನಗರ, ಡಿ. 17 ಕನ್ನಡ ಸಾಹಿತ್ಯ ಪರಿಷತ್ತಿನ 2018-19ನೇ ಸಾಲಿನ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು 2019ರ ಜನವರಿ 11, 12 ಮತ್ತು 13ರಂದು ಒಟ್ಟು 3 ದಿನಗಳ ಕಾಲ ರಾಜ್ಯದ 19 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದೆ.
ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರಗಳನ್ನು ಅಂಚೆ ಮೂಲಕ ಕಳುಹಿಸಲಾಗಿದೆ. ಡಿಸೆಂಬರ್ 29ರ ನಂತರವೂ ಪ್ರವೇಶ ಪತ್ರ ತಲುಪದಿದ್ದಲ್ಲಿ ವಿದ್ಯಾರ್ಥಿಗಳು ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18 ಇವರಲ್ಲಿ ವಿಚಾರಿಸಬಹುದು.
ಬೇರೆ ಜಿಲ್ಲೆಯವರಿಗೆ ಪ್ರವೇಶ ಪತ್ರ ತಲುಪದಿದ್ದಲ್ಲಿ ಪರೀಕ್ಷಾ ಕೇಂದ್ರಕ್ಕೆ ನೇರವಾಗಿ ಹಾಜರಾಗಬಹುದು. ಪರೀಕ್ಷಾ ಕೇದ್ರದ ವಿವರವನ್ನು ದೂರವಾಣಿ ಸಂಖ್ಯೆ 080-26623584ಗೆ ಕರೆ ಮಾಡಿ ಪಡೆಯಬಹುದು. ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಗಳ ವಿಳಾಸವನ್ನು ಅಂತರ್ಜಾಲ ತಾಣ ತಿತಿತಿ.ಞಚಿsಚಿಠಿಚಿ.iಟಿ ಮೂಲಕವೂ ಪಡೆದುಕೊಳ್ಳಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ರಾಜಶೇಖರ ಹತಗುಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೆರಳು ಪರದೆ (ಶೇಡ್ ನೆಟ್) ನಿರ್ಮಾಣ ಸಹಾಯಧನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಡಿ. 17 ತೋಟಗಾರಿಕೆ ಇಲಾಖೆಯು 2018-19ನೇ ಸಾಲಿನ ಕೃಷಿ ಭಾಗ್ಯ ಯೋಜನೆಯಡಿ ಚಾಮರಾಜನಗರ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕುಗಳಲ್ಲಿ ನೆರಳು ಪರದೆ (ಶೇಡ್ ನೆಟ್) ನಿರ್ಮಾಣಕ್ಕೆ ಸಹಾಯಧನ ಒದಗಿಸಲಿದ್ದು ರೈತರಿಂದ ಅರ್ಜಿ ಆಹ್ವಾನಿಸಿದೆ.
ನೆರಳು ಪರದೆ ನಿರ್ಮಾಣಕ್ಕೆ ಸಾಮಾನ್ಯ ವರ್ಗದಡಿ ಅನುದಾನ ಲಭ್ಯವಿದೆ. ನೆರಳು ಪರದೆ ಮನೆಯ ಜಿಐ ಪೈಪ್‍ಗಳಿಂದ ವೈಜ್ಞಾನಿಕವಾಗಿ ವಿನ್ಯಾಸ ಮಾಡಿ ನಿರ್ಮಿಸಲ್ಪಟ್ಟ ಆಕೃತಿಗಳನ್ನು ತೋಟಗಾರಿಕೆ ಬೆಳೆಗಳ ಅವಶ್ಯಕತೆಗೆ ತಕ್ಕಂತೆ ನಿಗಧಿತ ಪ್ರಮಾಣದಲ್ಲಿ ನೆರಳನ್ನು ಒದಗಿಸುವ ಪ್ಲಾಸ್ಟಿಕ್ ಪರದೆಗಳಿಂದ ಕೂಡಿದೆ. ಬೇಸಿಗೆ ಅಥವಾ ಹೆಚ್ಚು ಮಳೆಗಾಲದಲ್ಲಿಯೂ ಸಹ ಉತ್ತಮ ಗುಣಮಟ್ಟದ ತರಕಾರಿಗಳನ್ನು ಬೆಳೆಯಲು, ತರಕಾರಿ, ಹಣ್ಣಿನ ಸಸ್ಯಾಭಿವೃದ್ಧಿ (ನರ್ಸರಿ ಚಟುವಟಿಕೆ), ನೆರಳು ಪರದೆಯ ಬೆಳೆಗಳನ್ನು ನೇರಳಾತೀತ ಕಿರಣಗಳನ್ನು ಸ್ಥಳೀಕರಣಗೊಳಿಸಿ ತೀವ್ರವಾದ ಉಷ್ಣಾಂಶವನ್ನು ನಿಯಂತ್ರಿಸುವುದರಿಂದ ತೋಟಗಾರಿಕೆ ಉತ್ಪನ್ನಗಳ ಕೊಯ್ಲೋತ್ತರ ಗುಣಮಟ್ಟವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಘಟಕದಲ್ಲಿ ಮುಖ್ಯವಾಗಿ ದೊಣ್ಣೆ ಮೆಣಸಿನಕಾಯಿ, ಬಜ್ಜಿ ಮೆಣಸಿನಕಾಯಿ, ಪೋಲ್ ಬೀನ್ಸ್, ಸೌತೆಕಾಯಿ, ಟಮೋಟೋ ಬೆಳೆ ಬೆಳೆಯಲು ಸೂಕ್ತವಾಗಿದೆ.
ಆಸಕ್ತ ರೈತರು ಅರ್ಜಿಯೊಂದಿಗೆ ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಚೆಕ್‍ಬಂದಿ, ನೀರಾವರಿ ಮೂಲದ ದೃಢೀಕರಣ, ಮತದಾರರ ಗುರುತಿನ ಚೀಟಿ, ಆಧಾರ್, ಪಡಿತರ ಚೀಟಿಗಳ ಜೆರಾಕ್ಸ್, ಯೋಜನೆ ಕುರಿತು ಪ್ರಸ್ತಾವನೆ (ಡಿಪಿಆರ್ – ಡೀಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್) ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ ಆಯಾ ತಾಲೂಕಿನ (ಗುಂಡ್ಲುಪೇಟೆ ಹೊರತುಪಡಿಸಿ) ತೋಟಗಾರಿಕೆ ಇಲಾಖೆ ಕಚೇರಿಗೆ ಡಿಸೆಂಬರ್ 26ರೊಳಗೆ ಸಲ್ಲಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.