ಕೆರೆ, ಇತರೆ ಜಲಮೂಲಗಳಲ್ಲಿ ಬಣ್ಣಲೇಪಿತ ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ನಿರ್ಮಿಸಿದ ವಿಗ್ರಹಗಳ ವಿಸರ್ಜನೆ ನಿಷೇಧ
ಚಾಮರಾಜನಗರ, ಸೆ. 01 (ಕರ್ನಾಟಕ ವಾರ್ತೆ):– ಜಿಲ್ಲೆಯಾದ್ಯಂತ ಇರುವ ಕೆರೆಗಳು ಹಾಗೂ ನದಿ, ಕಾಲುವೆ, ಬಾವಿಗಳು ಸೇರಿದಂತೆ ಇತರೆ ಜಲಮೂಲಗಳಲ್ಲಿ ಪ್ಲಾಸ್ಟರ್ ಆಪ್ ಫ್ಯಾರೀಸ್, ಬಣ್ಣಲೇಪಿತ ವಿಗ್ರಹಗಳನ್ನು ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ.
ರಾಜ್ಯದ ಕೆರೆಗಳು, ಕಾಲುವೆ, ಬಾವಿ ಸೇರಿದಂತೆ ಇತರೆ ಜಲಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಬಣ್ಣಲೇಪಿತ ವಿಗ್ರಹಗಳನ್ನು ನಿಷೇಧಿಸುವ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಜಲಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯಿದೆ 1974ರ ಕಲಂ 45ರ ಎ ಅನ್ವಯ 10 ಸಾವಿರ ರೂ.ವರೆಗೆ ದಂಡ ಹಾಗೂ ಜೈಲುವಾಸ ವಿಧಿಸುವ ಅವಕಾಶವಿದೆ.
ಪರಿಸರ ಮತ್ತು ಸಾರ್ವಜನಿಕರ ಆರೋಗ್ಯ ದ್ಥಷ್ಠಿಯಿಂದ ಆದೇಶ ಹೊರಡಿಸಲಾಗಿದ್ದು ಈ ಸಂಬಂಧ ಅಧಿಸೂಚನೆಯ ನಿರ್ದೇಶನದಂತೆ ಕ್ರಮ ವಹಿಸುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿರುವ ಅಧಿಸೂಚನೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಣೆಗೆ ಮನವಿ
ಚಾಮರಾಜನಗರ, ಸೆ. 01 (ಕರ್ನಾಟಕ ವಾರ್ತೆ):– ನೈಸರ್ಗಿಕ ವಸ್ತುವಾದ ಜೇಡಿ ಮಣ್ಣಿನಿಂದ ತಯಾರಿಸಿದ ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ಖರೀದಿಸುವ ಮೂಲಕ ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸುವಂತೆ ನಗರಸಭೆ, ಪುರಸಭೆ ಆಡಳಿತ ಮನವಿ ಮಾಡಿದೆ.
ಪ್ಲಾಸ್ಟರ್ ಆಫ್ ಪ್ಯಾರೀಸ್ ಬಣ್ಣ ಲೇಪಿತ ವಿಗ್ರಹಗಳನ್ನು ನದಿ ಕಾಲುವೆ ಬಾವಿ ಕೆರೆ ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಷೇಧಿಸಿದೆ.
ಆದೇಶ ಉಲ್ಲಂಘಿಸಿದಲ್ಲಿ ಜಲಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯಿದೆ 1974ರ ಕಲಂ 45ರ ಎ ಅನ್ವಯ 10 ಸಾವಿರ ರೂ.ವರೆಗೆ ದಂಡ ಹಾಗೂ ಜೈಲುವಾಸ ವಿಧಿಸುವ ಅವಕಾಶವಿದೆ. ಹೀಗಾಗಿ ಜನತೆ ಜೇಡಿ ಮಣ್ಣಿನಿಂದ ತಯಾರಿಸಿದ ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ಖರೀದಿಸುವ ಮೂಲಕ ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸುವಂತೆ ಚಾಮರಾಜನಗರ ಗುಂಡ್ಲುಪೇಟೆ ನಗರಸಭೆ, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಅಧಿಕಾರಿಗಳು, ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕೊಳ್ಳೇಗಾಲ : ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 01 (ಕರ್ನಾಟಕ ವಾರ್ತೆ):– ಕೊಳ್ಳೇಗಾಲ ತಾಲೂಕಿಗೆ ಸಂಬಂಧಿಸಿದಂತೆ 2015-16ನೇ ಸಾಲಿನ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 6ರವರೆಗೆ ಅವಕಾಶ ಕಲ್ಪಿಸಲಾಗಿದೆ.
2015-16ನೇ ಸಾಲಿನಲ್ಲಿ ಅರ್ಜಿ ಸಲ್ಲಿಸದೇ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಸಂಬಂಧಿಸಿದ ದಾಖಲಾತಿಗಳನ್ನು ಆಯಾ ಕಾಲೇಜಿಗೆ ನೀಡಬೇಕು. ಕಾಲೇಜು ಪ್ರಾಂಶುಪಾಲರು ಅರ್ಜಿಗಳನ್ನು ಕಾಲೇಜು ಶುಲ್ಕದ ಪಟ್ಟಿಯನ್ನು ನೀಡಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸೆಪ್ಟೆಂಬರ್ 30ರ ಒಳಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ದೂ.ಸಂ. 08224-253196 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಚಾಮರಾಜನಗರ : ವಿದ್ಯಾರ್ಥಿವೇತನಕ್ಕೆ ಪ.ಜಾ. ಕಾಲೇಜು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 01 (ಕರ್ನಾಟಕ ವಾರ್ತೆ):– ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ 2015-16ನೇ ಸಾಲಿನಲ್ಲಿ ವ್ಯಾಸಂಗ ಮಾಡಿ ವಿವಿಧ ಕಾರಣಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸದೇ ಇರುವ ಪರಿಶಿಷ್ಟ ಜಾತಿಯ ಕಾಲೇಜು ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಜಾತಿ, ಆದಾಯ ಪ್ರಮಾಣ ಪತ್ರ, ಅಧಾರ್ ಕಾರ್ಡ್ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಿದೆ. ಆದಾಯ ಜಾತಿ ಪ್ರಮಾಣ ಪತ್ರಗಳ ಆರ್ ಡಿ ಸಂಖ್ಯೆಯನ್ನು ಪಡೆದು ತಪ್ಪಿಲ್ಲದಂತೆ ನಮೂದು ಮಾಡಬೇಕು. ಆರ್ ಡಿ ಸಂಖ್ಯೆಯಿಲ್ಲದ ಪ್ರಮಾಣ ಪತ್ರಗಳು ಆನ್ ಲೈನ್ ಮೂಲಕ ಸ್ವೀಕಾರವಾಗುವುದಿಲ್ಲ. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 6 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಚಾಮರಾಜನಗರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೆಸಕರ ಕಚೇರಿ ಅಥವಾ ದೂ.ಸಂ. 08226-223143 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಅಕ್ರಮವಾಗಿ ಗಾಂಜಾ ಬೆಳೆದ ವ್ಯಕ್ತಿಗೆ ಸಜೆ
ಚಾಮರಾಜನಗರ, ಸೆ. 01 (ಕರ್ನಾಟಕ ವಾರ್ತೆ):- ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದ ವ್ಯಕ್ತಿಯೊಬ್ಬರಿಗೆ 2 ವರ್ಷಗಳ ಕಠಿಣ ಸಜೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಅಜ್ಜೀಪುರ ಗ್ರಾಮದ ಕೆ. ಮಹೇಂದ್ರ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಇವರು ತಾವು ವ್ಯವಸಾಯ ಮಾಡುತ್ತಿದ್ದ ಜಮೀನಿನಲ್ಲಿ ಅರಿಶಿನ, ತೊಗರಿ, ಬದನೆ, ಟೊಮೆಟೋ ಬೆಳೆಗಳ ನಡುವೆ ಅಲ್ಲಲ್ಲಿ ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿದ್ದರು. 2012ರ ಅಕ್ಟೋಬರ್ 4ರಂದು ರಾಮಾಪುರ ಪೊಲೀಸ್ ನಿರೀಕ್ಷಕರಾದ ಕೆ.ಬಿ. ಜಯರಾಮು ಮತ್ತು ಸಿಬ್ಬಂದಿ ದಾಳಿ ನಡೆಸಿ ಜಮೀನಿನಲ್ಲಿ ಬೆಳೆಸಿದ್ದ 80 ಗಾಂಜಾ ಗಿಡಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.
ಮಹೇಂದ್ರ ಅವರು ಅಕ್ರಮವಾಗಿ ಗಾಂಜಾ ಗಿಡ ಬೆಳೆದಿರುವುದು ರುಜುವಾತಾದ ಹಿನ್ನೆಲೆಯಲ್ಲಿ ಪ್ರದಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ ಎಫ್ ಮಳವಳ್ಳಿ ಆಪಾದಿತರಿಗೆ 2 ವರ್ಷಗಳ ಕಠಿಣ ಸಜೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿ ಕಳೆದ ಆಗಸ್ಟ್ 24ರಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು.
ಅಪರಿಚಿತ ಮೃತ ವ್ಯಕ್ತಿ ವಾರಸುದಾರರ ಪತ್ರೆಗೆ ಮನವಿ
ಚಾಮರಾಜನಗರ, ಸೆ. 01 (ಕರ್ನಾಟಕ ವಾರ್ತೆ):- ಚಿಕಿತ್ಸೆ ಫಲಕಾರಿಯಾಗದೆ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಅಪರಿಚಿತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಸಂಪರ್ಕಿಸುವಂತೆ ಪಟ್ಟಣ ಪೊಲೀಸ್ ಠಾಣೆ ಪೊಲೀಸ್ ಇನ್ಸ್‍ಪೆಕ್ಟರ್ ಮನವಿ ಮಾಡಿದ್ದಾರೆ.
ಮೃತ ವ್ಯಕ್ತಿಯ ಹೆಸರು ಮುರುಗೇಶ ಎಂದಿದ್ದು 50 ರಿಂದ 55 ವರ್ಷದ ವ್ಯಕ್ತಿಯಾಗಿದ್ದಾರೆ. ಕಪ್ಪು ಬಣ್ಣ, ಕಪ್ಪು ಕೂದಲು ಹೊಂದಿದ್ದು 5.5 ಅಡಿ ಎತ್ತರ, ಸಣಕಲ ಶರೀರವಾಗಿರುತ್ತದೆ. ಮೃತ ಶರೀರವು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇದೆ. ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಪಟ್ಟು ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಯಳಂದೂರು : ವಸತಿ ನಿರ್ಮಾಣ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 01 (ಕರ್ನಾಟಕ ವಾರ್ತೆ):- ಯಳಂದೂರು ಪಟ್ಟಣ ಪಂಚಾಯಿತಿಯು 2016-17ನೇ ಸಾಲಿಗೆ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ನಾಗರಿಕರಿಂದ ಅರ್ಜಿ ಆಹ್ವಾನಿಸಿದೆ.
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಪರಿಶಿಷ್ಟ ಜಾತಿಯ 53, ಪರಿಶಿಷ್ಟ ಪಂಗಡದ 102 ಫಲಾನುಭವಿಗಳಿಗೆ 1.80 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ.
ಅರ್ಜಿದಾರರು ಮಹಿಳೆಯರಾಗಿರಬೇಕು. ಆದರೆ ಅಂಗವಿಕಲರು, ಹಿರಿಯ ನಾಗರಿಕರಾಗಿರುವ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಜಾತಿ, ಆದಾಯ ಪ್ರಮಾಣ ಪತ್ರ, ಬಿಪಿಎಲ್ ಪಡಿತರ ಚೀಟಿ, ವಾಸಸ್ಥಳ ದೃಢೀಕರಣ ಪತ್ರ ಸೇರಿದಂತೆ ಇನ್ನಿತರ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿದ ಅರ್ಜಿಯನ್ನು ಸೆಪ್ಟೆಂಬರ್ 26ರೊಳಗೆ ಸಲ್ಲಿಸಬೇಕು. ಸಂಪೂರ್ಣ ವಿವರಗಳಿಗೆ ಯಳಂದೂರು ಪಟ್ಟಣ ಪಂಚಾಯಿತಿ ಕಾರ್ಯಾಲಯ ಸಂಪರ್ಕಿಸುವಂತೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 2ರಂದು ನಗರಕ್ಕೆ ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 01 (ಕರ್ನಾಟಕ ವಾರ್ತೆ):- ಚಾಮರಾಜನಗರ ಪಟ್ಟಣದಲ್ಲಿ ಸೆಪ್ಟೆಂಬರ್ 2ರಂದು ವಿದ್ಯುತ್ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಮಸಮುದ್ರ ಮತ್ತು ಹೌಸಿಂಗ್ ಬೋರ್ಡ್ ಹೊರತುಪಡಿಸಿ ಪಟ್ಟಣದ ಉಳಿದ ಪ್ರದೇಶಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ನಾಗರಿಕರು ಸಹಕರಿಸಬೇಕೆಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಒಳಚರಂಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ
ಚಾಮರಾಜನಗರ, ಸೆ. 01 (ಕರ್ನಾಟಕ ವಾರ್ತೆ):- ನಗರದಲ್ಲಿ ಪ್ರಗತಿಯಲ್ಲಿರುವ ಒಳಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ದಿ ಮತ್ತು ಹಣಕಾಸು ನಿಗಮದ ಮುಖ್ಯಸ್ಥರಾದ ಕೃಷ್ಣ ಶ್ರೀವತ್ಸ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪಟ್ಟಣ ವ್ಯಾಪ್ತಿಯಲ್ಲಿ ಕೈಗೊಂಡಿರುವ ಒಳಚರಂಡಿ ಹಾಗೂ ಉದ್ದೇಶಿತ ಕುಡಿಯುವ ನೀರಿನ ಕಾಮಗಾರಿ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತಾನಾಡಿದರು.
ನಗರದಲ್ಲಿ ಒಳಚರಂಡಿ ಕಾಮಗಾರಿಯು ಶೇಕಡ 78ರಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ಅದಷ್ಟು ಶೀಘ್ರವೇ ಪೂರ್ಣಗೊಳಿಸಬೇಕು. ಮ್ಯಾನ್ ಹೋಲ್, ಸಿವಿಲ್ ಟ್ರೀಟ್‍ಮೆಂಟ್ ಪ್ಲಾನ್ ಕಾಮಗಾರಿಯನ್ನು ವಿಳಂಭ ಮಾಡದೇ ನಿರ್ವಹಿಸಬೇಕು ಎಂದರು.
ಕಾಮಗಾರಿ ಕಾಲಮಿತಿಒಳಗೆ ಪೂರ್ಣವಾಗಲು ಅಗತ್ಯವಿರುವ ಪ್ರಕ್ರಿಯೆಯನ್ನು ಕೈಗೊಳ್ಳಬೇಕು. ಒಳಚರಂಡಿಗಾಗಿ ಕಾಮಗಾರಿ ಕೈಗೊಳ್ಳುವ ವೇಳೆ ಭೂಮಿಯ ಒಳಭಾಗದಲ್ಲಿ ಬಲವಾದ ಬಂಡೆಗಳು ಅಡ್ಡ ಬಂದಿವೆ. ಇದನ್ನು ಅತ್ಯಾಧುನಿಕ ತಂತ್ರಜಾÐನದಲ್ಲಿ ರೂಪುಗೊಂಡಿರುವ ಪರಿಸರ ಸ್ನೇಹಿ ಸಾಧನಗಳನ್ನು ಬಳಸಿ ತೆರವುಗೊಳಿಸಬೇಕು ಎಂದು ಕೃಷ್ಣ ಶ್ರೀವತ್ಸ ನಿರ್ದೇಶನ ನೀಡಿದರು.
ಕಾಮಗಾರಿ ನಡೆಯುವ ಸ್ಥಳದಲ್ಲಿ ಜನರಿಗೆ ಯಾವುದೇ ತೊಂದರೆ ಅಥವಾ ಅನಾಹುತಕ್ಕೆ ಅಸ್ಪಧವಿಲ್ಲದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಗುತ್ತಿಗೆದಾರರ ಮೇಲಿದೆ. ಸುರಕ್ಷತಾ ಕ್ರಮಗಳಿಗೆ ನಿರ್ಲಕ್ಷ್ಯವಹಿಸಿದರೇ ದೂರು ನೀಡಿ ಕ್ರಮ ಜರೂಗಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಬಿ.ರಾಮು ಅವರು ಮಾತಾನಾಡಿ ಒಳಚರಂಡಿ ಕಾಮಗಾರಿಯಿಂದ ಹಾನಿಯಾಗಿರುವ ರಸ್ತೆ, ಇತರೆ ಸ್ಥಳಗಳಲ್ಲಿ ತ್ವರಿತವಾಗಿ ಕಾಮಗಾರಿ ಕೈಗೊಂಡು ಮೊದಲಿನ ಸುಸ್ಥಿತಿಗೆ ತರುವ ಕೆಲಸಕ್ಕೆ ಸೂಚಿಸುವಂತೆ ತಿಳಿಸಿದರು.
ನಗರದಲ್ಲಿ ಕುಡಿಯುವ ನೀರು ಸಂರ್ಪಕ ಕಲ್ಪಿಸುವ ಯೋಜನೆ ಕುರಿತು ಪ್ರಸ್ತಾಪಿಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ, ಉಪವಿಭಾಗಾಧಿಕಾರಿ ಕವಿತಾ ರಾಜ ರಾಂ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ದಿ ಮತ್ತು ಹಣಕಾಸು ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಖಾಜಾ ಮೊಯಿನುದ್ದಿನ್, ಮಹಮ್ಮದ್ ಬಸೀರುದ್ದಿನ್, ಎಸ್‍ಎನ್‍ಸಿ ಲ್ಯಾವಲಿನ್ ನಟರಾಜ್, ನಗರಸಭೆ ಆಯುಕ್ತರಾದ ರಾಜಣ್ಣ, ಲಿಂಗರಾಜು, ಇತರರು ಸಭೆಯಲ್ಲಿ ಹಾಜರಿದ್ದರು.
ಗೌರಿ ಗಣೇಶ, ಬಕ್ರಿದ್ ಹಿನ್ನಲೆ : ಅಗತ್ಯ ಕ್ರಮಗಳ ಪಾಲನೆಗೆ ಡಿಸಿ ಸೂಚನೆ
ಚಾಮರಾಜನಗರ, ಸೆ. 01 (ಕರ್ನಾಟಕ ವಾರ್ತೆ):- ಮುಂಬರುವ ಗೌರಿಗಣೇಶ ಹಾಗೂ ಬಕ್ರಿದ್ ಹಬ್ಬದ ಸಂಧರ್ಭದಲ್ಲಿ ಯಾವುದೇ ಲೋಪಕ್ಕೆ ಆಸ್ಪದವಾಗದಂತೆ ಅಧಿಕಾರಿಗಳು ಮುಂಜಾಗರುಕತೆ ವ್ಯವಸ್ಥೆಗಳ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ರಾಮು ಸೂಚಿಸಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿಂದು ಪೊಲೀಸ್ ಅಧಿಕಾರಿಗಳು, ಕಂದಾಯ ಇಲಾಖೆ, ಚೆಸ್ಕಾಂ,ಹಾಗೂ ಗ್ರಾ.ಪಂ ಪಿಡಿಓ,ಪುರಸಭೆ,ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಗಣಪತಿ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಗಣಪತಿ ವಿಸರ್ಜನಾ ವೇಳೆ ಸ್ಥಳೀಯ ಸಂಸ್ಥೆಗಳ ಹಾಗೂ ಪಂಚಾಯಿತಿ ಸಿಬ್ಬಂಧಿ, ಪೊಲೀಸರು,ಗ್ರಾಮದ ಮುಖಂಡರು, ಸಂಪೂರ್ಣ ಜವಾಬ್ದಾರಿ ಹೊತ್ತು ಯಾವುದೇ ಗೊಂದಲ ನಡೆಯದಂತೆ ವಿಸರ್ಜನಾ ಕಾರ್ಯಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ನಗರಸಭೆ,ಪುರಸಭೆ,ಪ.ಪಂ ವ್ಯಾಪ್ತಿಯಲ್ಲಿ ಗಣಪತಿ ವಿಸರ್ಜನೆ ಕೈಗೊಳ್ಳಲು ಟ್ಯಾಂಕರ್‍ಗಳನ್ನು ವ್ಯವಸ್ಥೆಗೊಳಿಸಿ ಸಮಯವನ್ನು ಗೊತ್ತುಪಡಿಸಿ ಆಯಾ ಬಡಾವಣೆಗೆ ತೆರಳುವ ಬಗ್ಗೆ ಪ್ರಚಾರ ಕೈಗೊಳ್ಳಬೇಕೆಂದು ಹೇಳಿದರು.
ಪರಿಸರ ಸ್ನೇಹಿಯಾಗಿ ಗೌರಿ ಗಣೇಶ ಹಬ್ಬ ಆಚರಿಸಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್, ಹಾನಿಕಾರಕ ಬಣ್ಣಗಳಿಂದ ತಯಾರಿಸಿದ ವಿಗ್ರಹಗಳನ್ನು ಖರೀದಿಸದೇ, ನೈಸರ್ಗೀಕ ವಸ್ತುಗಳಿಂದ ತಯಾರಾದ ಗೌರಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಬೇಕೆಂಬ ಮಾಹಿತಿಯನ್ನು ಪ್ರಚುರ ಪಡಿಸಬೇಕು. ಪರಿಸರ ಮಾಲಿನ್ಯಕ್ಕೆ ಅವಕಾಶ ಮಾಡಬಾರದೆಂಬ ವಿಷಯವನ್ನು ಮನವರಿಕೆ ಮಾಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಬಕ್ರಿದ್ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿವಧೆ ಮಾಡುವಂತಿಲ್ಲ, ಇದಕ್ಕಾಗಿಯೇ ಪ್ರತ್ಯೇಕ ಸ್ಥಳ ನಿಗದಿಮಾಡಬೇಕು. ಹಬ್ಬದ ಸಂದರ್ಭದಲ್ಲಿ ಅಗತ್ಯ ವಿರುವ ಮುಂಜಾಗಾರುಕತ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಎಸ್‍ಪಿ ಕುಲದೀಪ್‍ಕುಮಾರ್ ಜೈನ್ ಮಾತನಾಡಿ ಗಣಪತಿ ವಿಸರ್ಜನೆ ವೇಳೆ ಯಾವುದೇ ಜೀವಹಾನಿ ಸಂಭವಿಸದಂತೆ ಎಚ್ಚರವಹಿಸಬೇಕು. ಜೀವರಕ್ಷಕ ಸಾಧನ, ಈಜುಗಾರರ ಸಹಾಯದೊಂದಿಗೆ ವಿಸರ್ಜನೆ ಕಾರ್ಯ ಮಾಡಬೇಕು. ಗಣಪತಿಯನ್ನು ಪ್ರತಿಷ್ಠಾಪಿಸುವ ಬಗ್ಗೆ 400 ಅರ್ಜಿಗಳು ಬಂದಿವೆ.ಯಾವುದೇ ಸಮಸ್ಯೆ ಬಾರದಂತೆ ಜಾಗರೂಕರಾಗಿ ಕೆಲಸ ಮಾಡಬೇಕೆಂದು ಸೂಚಿಸಿದರು.
ಬಕ್ರಿದ್ ಹಬ್ಬದ ಸಂಧರ್ಭದಲ್ಲಿ ಪ್ರಾಣಿವಧೆಯನ್ನು ತಾತ್ಕಲಿಕ ಕಸಾಯಿಖಾನೆಗಳಲ್ಲಿ ಮಾಡಬೇಕು. ತ್ಯಾಜ್ಯವಿಲೇವಾರಿಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಪಶುವೈದ್ಯರು ಧೃಢಿಕರಣ ಮಾಡಬೇಕು. ಈ ಬಗ್ಗೆ ಅಗತ್ಯ ವ್ಯವಸ್ಥೆಯನ್ನು ನಿರ್ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು, ವೇದಿಕೆಯಲ್ಲಿ ಇದ್ದರು.
ಸೆಪ್ಟೆಂಬರ್ 9ರಂದು ಜಿಲ್ಲಾ ಮಟ್ಟದ ಪಂದ್ಯಾಟಗಳು
ಚಾಮರಾಜನಗರ, ಸೆ. 02 (ಕರ್ನಾಟಕ ವಾರ್ತೆ):- ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ 2016-17ನೇ ಸಾಲಿನ 14ರಿಂದ 17 ವರ್ಷ ವಯೋಮಿತಿಯ ಶಾಲಾ ಬಾಲಕ, ಬಾಲಕಿಯರ ಜಿಲ್ಲಾ ಮಟ್ಟದ ವಿವಿಧ ಪಂದ್ಯಾಟಗಳನ್ನು ಸೆಪ್ಟೆಂಬರ್ 9 ರಂದು ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಆಯೋಜಿಸಲಾಗಿದೆ.
ಹನೂರಿನ ಮಹದೇಶ್ವರ ಕ್ರೀಡಾಂಗಣದಲ್ಲಿ ಕಬಡ್ಡಿ, ಕೊಳ್ಳೇಗಾಲದ ಎಂ.ಜಿ.ಎಸ್.ವಿ. ಶಾಲಾ ಮೈದಾನದಲ್ಲಿ ಖೋಖೋ, ಸಂತೇಮರಹಳ್ಳಿಯ ಜೆ.ಎಸ್.ಎಸ್. ಶಾಲಾ ಮೈದಾನದಲ್ಲಿ ವಾಲಿಬಾಲ್, ಯಳಂದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಥ್ರೋಬಾಲ್ ಮತ್ತು ಗುಂಡ್ಲುಪೇಟೆಯ ದೇವರಾಜ ಅರಸು ಕ್ರೀಡಾಂಗಣದಲ್ಲಿ ಬಾಲ್ ಬ್ಯಾಡ್ಮಿಂಟನ್ ಆಟೋಟಗಳು ನಡೆಯಲಿವೆ. ಎಲ್ಲ ಪಂದ್ಯಾಟಗಳು ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂದಾಯ ಬಾಕಿ ಬೀಳು ಜಮೀನು: ಸೆಪ್ಟಂಬರ್ 6ರಂದು ವಿಚಾರಣೆಗೆ ಹಾಜರಾಗಲು ಸೂಚನೆ
ಚಾಮರಾಜನಗರ, ಸೆ. 02 (ಕರ್ನಾಟಕ ವಾರ್ತೆ):– ಗುಂಡ್ಲುಪೇಟೆ ತಾಲ್ಲೂಕು ಕಸಬಾ ಹೋಬಳಿ ಮಾಡ್ರಹಳ್ಳಿ ಗ್ರಾಮದ 40/1ರಲ್ಲಿ 1.27 ಎಕರೆ ಭೂಮಿಯಲ್ಲಿ 0.04 ಗುಂಟೆ ಬಿ ಖಾರಾಬು ಇದ್ದು ಉಳಿಕೆ 1.23ಗುಂಟೆ ಜಮೀನು ಕಂದಾಯ ಬಾಕಿ ಬೀಳು ಎಂದು ಕಂದಾಯ ದಾಖಲಾತಿಯಲ್ಲಿ ದಾಖಲಾಗಿದೆ. ಈ ಸಂಬಂಧ ಸೆಪ್ಟಂಬರ್ 6 ರಂದು ಬೆಳಿಗ್ಗೆ 11 ಗಂಟೆಗೆ ಕೊಳ್ಳೇಗಾಲದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ವಿಚಾರಣೆ ನಡೆಯಲ್ಲಿದ್ದು ಹಿತಾಸಕ್ತರು ಹಾಜರಾಗುವಂತೆ ಸೂಚಿಸಲಾಗಿದೆ.
ಗುಂಡ್ಲುಪೇಟೆ ತಾಲ್ಲೂಕು ಕಸಬಾ ಹೋಬಳಿ ಮಾಡ್ರಹಳ್ಳಿ ಗ್ರಾಮದ ಸ.ನಂ.40ರಲ್ಲಿ 2.13 ಎಕರೆ ಪೂಟ್ ಖರಾಬ್ ಜಮೀನಿದ್ದು ಈ ಪೈಕಿ 0.30 ಗುಂಟೆಯು ಮಹಮ್ಮದ್ ರಫಿ ಬಿನ್ ಅಬ್ದುಲ್ ಖಾರಿ ಎಂಬುವವರಿಗೆ ಪ್ರಕರಣ ಸಂಖ್ಯೆ ಎಲ್ ಎನ್ ಡಿ(ಇ) 179/98-99 ದಿನಾಂಕ 23-08-2011 ರಂದು ದರಖಾಸ್ತು ಮೂಲಕ ಮಂಜೂರಾಗಿದೆ. ಸದರಿ ಜಮೀನು ದುರಸ್ತಾಗಿ 40/2 ರಲ್ಲಿ 0.30ಗುಂಟೆ ಪ್ರತ್ಯೇಕವಾಗಿರುತ್ತದೆ. 40/1ರಲ್ಲಿ ಒಟ್ಟು 1.27 ಎಕರೆ ಇದ್ದು ಇದರಲ್ಲಿ 0.04ಗುಂಟೆ ಬಿ ಖಾರಾಬು ಇದ್ದು ಉಳಿಕೆ 1.23 ಗುಂಟೆ ಜಮೀನು ಕಂದಾಯ ಬಾಕಿ ಬೀಳು ಎಂದು ಕಂದಾಯ ದಾಖಲಾತಿಯಲ್ಲಿ ದಾಖಲಾಗಿದೆ.
ಹಿಂದಿನ ದಾಖಲೆಗಳನ್ನು ಪರಿಶೀಲಿಸಲಾಗಿ ಸದರಿ ಜಮೀನಿನ ಖಾತೆ ಹೊಂದಿರುವ ಬಗ್ಗೆ ಯಾವುದೇ ಪೂರಕ ದಾಖಲೆಗಳು ಲಭ್ಯವಿಲ್ಲ. ಆದ ಕಾರಣ ಸೆಪ್ಟಂಬರ್ 6 ರಂದು ಬೆಳಿಗ್ಗೆ 11 ಗಂಟೆಗೆ ಈ ಸಂಬಂದ ಕೊಳ್ಳೇಗಾಲದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತದೆ. ಸದರಿ ಜಮೀನಿಗೆ ಸಂಬಂಧಪಟ್ಟಂತೆ ಹಿತಾಸಕ್ತರು ದಾಖಲೆಗಳೊಂದಿಗೆ ವಿಚಾರಣಾ ದಿನದಂದು ಹಾಜರಾಗಬೇಕು. ತಪ್ಪಿದ್ದಲ್ಲಿ ಯಾವುದೇ ಆಕ್ಷೇಪಣೆಗಳು ಇಲ್ಲವೆಂದು ತಿಳಿದು ಸರ್ಕಾರದ ವಶಕ್ಕೆ ಪಡೆಯುವ ಬಗ್ಗೆ ಕ್ರಮವಹಿಸಲಾಗುವುದೆಂದು ಉಪವಿಭಾಗಾಧಿಕಾರಿ ಕವಿತಾ ರಾಜಾರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದ್ಯಮಶೀಲತಾ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 02 (ಕರ್ನಾಟಕ ವಾರ್ತೆ):– ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಶ್ರಯದಲ್ಲಿ ಸ್ವಂತ ಉದ್ಯೋಗ ಸ್ಥಾಪಿಸಲು ಬಯಸುವ ನಿರುದ್ಯೋಗಿ ಯುವ ಅಭ್ಯರ್ಥಿಗಳಿಗೆ ಹತ್ತು ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆ ಪಟ್ಟಣದಲ್ಲಿ ಹಮ್ಮಿಕೊಳ್ಳಲ್ಲಿದ್ದು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಳ್ಳೇಗಾಲ ಹಾಗೂ ಯಳಂದೂರು ತಾಲ್ಲೂಕಿನ ಅಭ್ಯರ್ಥಿಗಳಿಗೆ ಕೊಳ್ಳೇಗಾಲ ಪಟ್ಟಣದಲ್ಲಿ ಹಾಗೂ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕಿನ ಅಭ್ಯರ್ಥಿಗಳಿಗೆ ಗುಂಡ್ಲುಪೇಟೆ ಪಟ್ಟಣದಲ್ಲಿ ತರಬೇತಿ ಆಯೋಜಿಸಲಾಗುತ್ತದೆ. ತರಬೇತಿಯು ಉಚಿತವಾಗಿರುತ್ತದೆ. ಅಭ್ಯರ್ಥಿಗಳು ಕನಿಷ್ಟ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು. 18 ರಿಂದ 35ರ ವಯೋಮಿತಿಯೊಳಗಿರಬೇಕು. ತರಬೇತಿಯಲ್ಲಿ ಉದ್ಯಮ ಆಯ್ಕೆ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ, ಹಣಕಾಸು ಸೌಲಭ್ಯ ಸೇರಿದಂತೆ ಇತರೆ ಕುರಿತು ಮಾಹಿತಿ ನೀಡಲಾಗುತ್ತದೆ.
ತರಬೇತಿ ಪಡೆಯಲು ಬಯಸುವವರು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಸೆಪ್ಟಂಬರ್ 10ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಸದರಿ ಕಚೇರಿ ಅಥವಾ ದೂರವಾಣಿ ಸಂಖ್ಯೆ 08226-226346, ಮೊಬೈಲ್ ಸಂಖ್ಯೆ-7760145784 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಸೆ. 3ರಂದು ಬಿಸಲವಾಡಿಯಲ್ಲಿ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ಉಸ್ತುವಾರಿ ಸಚಿವರಿಂದ ಶಂಕುಸ್ಥಾಪನೆ
ಚಾಮರಾಜನಗರ, ಸೆ. 02 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜಕಲ್ಯಾಣ ಇಲಾಖೆ ವತಿಯಿಂದ ಬಿಸಲವಾಡಿ ಗ್ರಾಮದಲ್ಲಿ ನಿರ್ಮಾಣ ಮಾಡಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭ ಸೆಪ್ಟೆಂಬರ್ 3 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಶಂಕುಸ್ಥಾಪನೆ ನೆರವೇರಿಸುವರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಎಚ್.ಅಂಜನೇಯ ಅವರು ಸಮಾರಂಭವನ್ನು ಉದ್ಘಾಟಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಅಮಚವಾಡಿ ಕ್ಷೇತ್ರದ ಜಿ.ಪಂ. ಸದಸ್ಯರಾದ ಶಶಿಕಲಾ ಸೋಮಲಿಂಗಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಅರಕಲವಾಡಿ ಕ್ಷೇತ್ರದ ತಾ.ಪಂ. ಸದಸ್ಯರಾದ ರತ್ನಮ್ಮ, ಬಿಸಲವಾಡಿ ಗ್ರಾ.ಪಂ. ಅಧ್ಯಕ್ಷರಾದ ಸಿ. ಮಹದೇವಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಸೌಹಾರ್ದಯುತವಾಗಿ ಹಬ್ಬ ಆಚರಿಸಲು ಜಿಲ್ಲಾಧಿಕಾರಿ ಆಶಯ
ಚಾಮರಾಜನಗರ, ಸೆ. 02 (ಕರ್ನಾಟಕ ವಾರ್ತೆ):- ಹಬ್ಬದ ಸಂದರ್ಭದಲ್ಲಿ ಸುವ್ಯಸ್ಥಿತವಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಅನುಸರಿಸಬೇಕಿರುವ ಕ್ರಮಗಳನ್ನು ಪಾಲನೆ ಮಾಡುವ ಮೂಲಕ ಎಲ್ಲರು ಸೌಹಾರ್ದತೆಯಿಂದ ನಡೆದುಕೊಳ್ಳೋಣವೆಂದು ಜಿಲ್ಲಾಧಿಕಾರಿ ಬಿ.ರಾಮು ಸಲಹೆ ಮಾಡಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಗೌರಿ-ಗಣೇಶ ಹಾಗೂ ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಕರೆಯಲಾಗಿದ್ದ ಶಾಂತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಹಬ್ಬಗಳನ್ನು ಪರಸ್ಪರ ಶಾಂತಿ ಸೌಹಾರ್ದತೆಯಿಂದ ಆಚರಿಸುತ್ತಾ ಬರಲಾಗುತ್ತಿದೆ. ಇದೇ ಪರಂಪರೆ ಮುಂದುವರೆಯಬೇಕು. ಎಲ್ಲರ ಭಾವನೆಗಳನ್ನು ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಆಶಿಸಿದರು.
ಗೌರಿ-ಗಣೇಶ, ಬಕ್ರೀದ್ ಆಚರಣೆ ಸಂದರ್ಭದಲ್ಲಿ ಕುಡಿಯುವ ನೀರು, ಸ್ವಚ್ಚತೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸರ್ವರು ಹಬ್ಬದ ಆಚರಣೆ ವೇಳೆ ಒಳ್ಳೇಯ ಉದ್ದೇಶಕ್ಕೆ ಜಾರಿಗೊಳಿಸಿರುವ ಆದೇಶ, ನಿಯಮಗಳನ್ನು ಪಾಲನೆ ಮಾಡುವ ಮೂಲಕ ಸಹಕರಿಸಬೇಕು ಎಂದು ರಾಮು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್, ಜೈನ್ ಮಾತನಾಡಿ ಹಬ್ಬ ವಿಶೇಷ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ. ಹಬ್ಬ ಸಂದರ್ಭದಲ್ಲಿ ಅನುಸರಿಸಬೇಕಿರುವ ಆದೇಶ ಪಾಲನೆ ಬಗ್ಗೆ ಈಗಾಗಲೇ ತಿಳಿಸಲಾಗಿದೆ. ಜನತೆ ಕೂಡ ಸ್ಪಂದಿಸಿ ಸಹಕರಿಸಬೇಕು ಎಂದರು.
ನಗರಸಭೆ ಅಧ್ಯಕ್ಷರಾದ ರೇಣುಕಾ ಅವರು ಮಾತನಾಡಿ ಹಬ್ಬದ ಸಂದರ್ಭದಲ್ಲಿ ಕುಡಿಯುವ ನೀರು,ಸ್ವಚ್ಚತೆಗೆ ವಿಶೇಷ ಗಮನ ನೀಡಲಾಗುತ್ತದೆ ಎಂದರು.
ಮುಖಂಡರಾದ ಶಾ. ಮುರಳಿ, ಬಾಲಸುಂದರ್, ಇರ್ಷಾದ್ ಉಲ್ಲಾ, ಮಹಮದ್ ಅಸ್ಗರ್, ಚಾ.ರಂ. ಶ್ರೀನಿವಾಸಗೌಡ, ಸುರೇಶ್ ನಾಯಕ್, ಅಬ್ರಾರ್ ಅಹಮದ್, ನಿಜಧ್ವನಿ ಗೋವಿಂದರಾಜು, ಮಹಮದ್ ಜಿಯಾ ಉಲ್ಲಾ ಮತ್ತಿತರರು ಮಾತನಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಡಿ.ವೈ.ಎಸ್.ಪಿ ಗಂಗಾಧರಸ್ವಾಮಿ, ನಗರಸಭೆ ಆಯುಕ್ತರಾದ ರಾಜಣ್ಣ, ವಿವಿಧ ಸಂಘಟನೆಗಳು, ಸಮುದಾಯ ಮುಖಂಡರು, ಗಣ್ಯರು, ನಾಗರಿಕರು ಹಾಜರಿದ್ದರು.
ಪರಿಸರ ಸ್ನೇಹಿ ಹಬ್ಬ ಆಚರಿಸಿ: ಡಿಸಿ
ಚಾಮರಾಜನಗರ, ಸೆ. 02 (ಕರ್ನಾಟಕ ವಾರ್ತೆ):- ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ.
ಪ್ಲಾಸ್ಟರ್ ಆಫ್ ಪ್ಯಾರಿಸ್, ವಿಷಕಾರಿ ರಸಾಯನಿಕ, ಲೋಹದ ಲೇಪದ ಗಣೇಶ ಮೂರ್ತಿ ಬಳಕೆ ಮಾಡದೆ ಸಾದಾ ಜೇಡಿಮಣ್ಣಿನ ಪುಟ್ಟ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಬೇಕೆ ವಿನಹ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಉಪಯೋಗ ಮಾಡಬಾರದು.
ಬಾವಿ, ಕೆರೆ, ಹೊಳೆ ಇತರೆ ಜಲಮೂಲಗಳಲ್ಲಿ ಗಣಪತಿ ವಿಸರ್ಜನೆ ಮಾಡಬಾರದು. ಇದರಿಂದ ಅಂತರ್ಜಲ ಕುಡಿಯುವ ನೀರಿನ ಸೆಲೆ ಕಲುಷಿತಗೊಳ್ಳಲಿದೆ. ಬಕೆಟ್‍ನಲ್ಲಿ ವಿಸರ್ಜಿಸಬೇಕು. ಸೂಚಿತ ಕೆರೆಗಳಲ್ಲಿ ವಿಸರ್ಜಿಸುವ ಮೊದಲು ಹೂವು, ವಸ್ತ್ರ, ಹಾರ ಎಲ್ಲವನ್ನು ತೆಗೆಯಬೇಕು.
ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಬಾರದು. ಪಟಾಕಿಯ ಹೊಗೆ ಮಾಲಿನ್ಯ ಕಾರಕವಾಗಿದೆ. ಅಲ್ಲದೆ, ರಸ್ತೆ ಕಸಮಯವಾಗಲಿದೆ. ಪಟಾಕಿ ಶಬ್ದವು ಕಿವಿಗೆ ಹಾನಿಕಾರಕವಾಗಿದೆ. ರಸ್ತೆ, ಚರಂಡಿಯಲ್ಲಿ ಹೂವಿನ ಹಾರ, ತಟ್ಟೆ, ಲೋಟ, ಎಲೆಯನ್ನು ಎಲ್ಲೆಂದರಲ್ಲಿ ಎಸೆಯದೆ ಮನೆಯ ಬಳಿ ಬರುವ ಕಸದ ವಾಹನಗಳಿಗೆ ನೀಡಬೇಕು.
ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ನಾಗರಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*********************
ಸೆಪ್ಟೆಂಬರ್ 4 ರಿಂದ ಆಕಾಶವಾಣಿಯಲ್ಲಿ
ಭಾಗ್ಯವಾಣಿ-ಅಭಿವೃದ್ಧಿ ಯೋಜನೆಗಳೊಂದಿಗೆ ಅರ್ಥಪೂರ್ಣ ಪಯಣ
ಮೈಸೂರು,ಸೆ.02.(ಕ.ವಾ.)- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆಕಾಶವಾಣಿ ಜೊತೆ ಜೊತೆಯಾಗಿ ಹೆಜ್ಜೆ ಹಾಕಲಿವೆ. ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳ ಮಾಹಿತಿಯನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಪ್ರಯತ್ನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿನೂತನ ಕಾರ್ಯಕ್ರಮ ಭಾಗ್ಯವಾಣಿ-ಅಭಿವೃದ್ಧಿ ಯೋಜನೆಗಳೊಂದಿಗೆ ಅರ್ಥಪೂರ್ಣ ಪಯಣ ರೂಪಿಸಿದೆ.
ಆಕಾಶವಾಣಿಯಲ್ಲಿ ಈಗಾಗಲೇ ಜನಪ್ರಿಯವಾಗಿರುವ ಹಟ್ಟಿ-ಹರಟೆ ಮಾದರಿಯಲ್ಲಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದ್ದು, ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಗ್ರಾಮೀಣ ಜನರ ಆಡುನುಡಿಯಲ್ಲಿ ಯೋಜನೆಗಳ ಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು ಯೋಜನೆ ಮಾಹಿತಿ ನೀಡುವುದರ ಜೊತೆಗೆ ಯೋಜನೆಗಳ ಫಲಾನುಭವಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ. ಸುಶ್ರಾವ್ಯ ಹಾಡುಗಳೊಂದಿಗೆ ಯೋಜನೆಗಳ ಕುರಿತು ಸಂವಾದ ಕೂಡ ನಡೆಯಲಿದೆ.
13 ಸರಣಿಗಳುಳ್ಳ ಈ ಭಾಗ್ಯವಾಣಿ ಸೆಪ್ಟೆಂಬರ್ 4 ರಿಂದ ನವೆಂಬರ್ 27 ರವರೆಗೆ ಪ್ರತಿ ಭಾನುವಾರ ರಾತ್ರಿ 7 ರಿಂದ 7-30 ಗಂಟೆಯವರೆಗೆ ರಾಜ್ಯದ 13 ಆಕಾಶವಾಣಿ ಕೇಂದ್ರಗಳ ಮೂಲಕ ರಾಜ್ಯಾದ್ಯಂತ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವ್ಮೂರ್ತಿ ಅವರು ನಿರ್ಮಿಸಿದ್ದಾರೆ.
ಸೆಪ್ಟೆಂಬರ್4 ರಂದು ಅನ್ನಭಾಗ್ಯ ಯೋಜನೆ, ಸೆಪ್ಟೆಂಬರ್ 11 ರಂದು ಕೃಷಿಭಾಗ್ಯ ಯೋಜನೆ, ಸೆಪ್ಟೆಂಬರ್ 18 ರಂದು ಮನಸ್ವಿನಿ ಮತ್ತು ಮೈತ್ರಿ ಯೋಜನೆ-ನೊಂದವರಿಗೆ ಸಾಂತ್ವನ, ಸೆಪ್ಟೆಂಬರ್ 25 ರಂದು ಋಣಮುಕ್ತ - ಹೊಸ ಬದುಕಿನ ಆಶಯಕ್ಕೆ ಮುನ್ನಡಿ, ಅಕ್ಟೋಬರ್ 2 ರಂದು ಕ್ಷೀರಾಧಾರೆ-ಹೈನುಗಾರಿಕೆಗೆ ಉತ್ತೇಜನ, ಅಕ್ಟೋಬರ್ 9 ರಂದು ವಿದ್ಯಾಸಿರಿ-ಓದುವ ಕನಸಿಗೆ ನೆರವು, ಅಕ್ಟೋಬರ್ 16 ರಂದು ಕ್ಷೀರಭಾಗ್ಯ-ಪೌಷ್ಠಕ ಮಕ್ಕಳು, ಅಕ್ಟೋಬರ್ 23 ರಂದು ತಳ ಸಮುದಾಯ ಏಳಿಗೆ-ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರಿಗಾಗಿ ನೆರವು, ಅಕ್ಟೋಬರ್ 30 ರಂದು ಸ್ವಚ್ಫ ಭಾರತ್ ಮಿಷನ್-ನಿರ್ಮಲ ಭಾರತ್ ಅಭಿಯಾನ, ನವೆಂಬರ್ 6 ರಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ನರೇಗಾ, ಕುಡಿಯುವ ನೀರು, ಎನ್.ಆರ್.ಎಲ್.ಎಂ., ನವೆಂಬರ್ 13 ರಂದು ಜಲ ಸಂಪನ್ಮೂಲ ಹಾಗೂ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಯೋಜನೆಗಳು, ನವೆಂಬರ್ 20 ರಂದು ಇಂಧನ, ಸೌರ ವಿದ್ಯುತ್, ನಗರ ಜ್ಯೋತಿ, ಜೈವಿಕ ಇಂಧನ, ಭಾಗ್ಯಜ್ಯೋತಿ ಮತ್ತು ನವೆಂಬರ್ 27 ರಂದು ನಗರಾಭಿವೃದ್ಧಿ-ನಗರ ಬಡತನ ನಿರ್ಮೂಲನ ಹಾಗೂ ನಮ್ಮ ಮೆಟ್ರೋ ಕಾರ್ಯಕ್ರಮ ನಡೆಯಲಿದೆ.
ಸರ್ಕಾರ ಸಾಮಾನ್ಯ ಹಾಗೂ ಬಡ ಜನರಿಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮವನ್ನು ರೂಪಿಸುತ್ತದೆ. ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಿಳಿಸುವುದೇ ಭಾಗ್ಯವಾಣಿ ಸರಣಿಯ ಮುಖ್ಯ ಆಶಯವಾಗಿದೆ. ಈ ಕಾರ್ಯಕ್ರಮ ಅರ್ಧ ಗಂಟೆ ಅವಧಿಯದಾಗಿದ್ದು, ಅಕಾಶವಾಣಿ ಮೂಲಕ ಪ್ರಸಾರವಾಗುವ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆದು ಸದುಪಯೋಗ ಪಡಿಸಿಕೊಳ್ಳುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್ ವಿಶುಕುಮಾರ್ ಅವರು ಕೋರಿದ್ದಾರೆ.
ಅರಣ್ಯ ಸಚಿವರೇ, ಕ್ರಮಕೈಗೊಳ್ಳಲು ನಿಮ್ಮಿಂದ ಸಾದ್ಯನಾ..?
ಬಂಡೀಪುರ ಅನೈತಿಕ ಚಟುವಟಿಕೆಗಳ ತಾಣವೋ, ವನ್ಯಮೃಗಳ ತಿಂದು ತೇಗುವ ಕೇಂದ್ರವೋ..?ರಕ್ಷಕರೇ ಭಕ್ಷಕರಾದರೆ ಏನು ಮಾಡೋದು ಭಗವಂತ.,.!
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಅರಣ್ಯ ಮತ್ತು ಅರಣ್ಯ ಪ್ರಾಣಿಗಳನ್ನು ರಕ್ಷಿಸಬೇಕಾದವರೆ ಅದನ್ನು ಒಂದೆಡೆ ಭಕ್ಷಿಸುತ್ತಿರುವ ಆತಂಕಕಾರಿ ವಿಚಾರ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ವಲಯದಲ್ಲಿ ನಡೆದಿದೆ.
ಬಂಡೀಪುರ ಅರಣ್ಯ ವಲಯದ ಜಂಗಲ್ ಲಾಡ್ಜ್ ಅಲ್ಲಿ ಏರ್ಪಡಿಸಲಾಗಿದ್ದ ಉನ್ನತ ಅರಣ್ಯಾಧಿಕಾರಿಗಳಿಗೆ ಗಸ್ತು ನಿರ್ವಹಣೆ ಹಾಗೂ ಎರಡನೇ ಹಂತದ ತರಬೇತಿ ಕಾರ್ಯಾಗಾರದಲ್ಲಿ ಅರಣ್ಯಾಧಿಕಾರಿಗಳೆ ಜಿಂಕೆ ಮಾಂಸವನ್ನು ತಿಂದು ಮದ್ಯೆ ಸೇವಿಸಿ ಮೋಜು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಕೇರಳ ಹಗೂ ತಮಿಳುನಾಡಿನ ಮೂರು ರಾಜ್ಯದ ಐ,ಎಫ್.ಎಸ್ ಆದಿಕಾರಿಗಳಿಗೆ ಕಳೆದ ಐದು ದಿನಗಳ ಹಿಂದೆ ನಡೆಯುತ್ತಿರುವ ಕಾರ್ಯಾಗಾರದ ಅದಿಕಾರಿಗಳು ಈ ಮದ್ಯೆ ಬಳಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅರಣ್ಯ ಇಲಾಖೆ ಕಾಯ್ದೆ ಪ್ರಕಾರ ಅರಣ್ಯದಲ್ಲಿ ಕುಡಿಯುವುದು, ಮಾಂಸದೂಟ ಮಾಡುವುದು ಸಂಪೂರ್ಣವಾಗಿ ನಿಷೇದಿಸಲಾಗಿದ್ದು ಈಗ ಈ ಮ್ಯಾಕ್ಸೋಡೋಲ್, ಯು.ಬಿ.ಕಂಪೆನಿಯ ಮದ್ಯೆದ ಬಾಟಲಿ ಜೊತೆಗೆ ಜಿಂಕೆಗಳ ಕೊಂಬು ಇವರು ವಾಸ್ತವ್ಯ ಹೂಡಿದ್ದ ಗಜೇಂಧ್ರ, ಮಯೂರ ಚೀತಾಲ್ ವಸತಿಗೃಹಗಳ ಸುತ್ತಮುತ್ತ ಸಿಕ್ಕಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪ್ರಾಣಿ ಕೊಂದು ತಿಂದು ತೇಗಿದ ಅಧಿಕಾರಿಗಳ ಮೇಲೆ ಅರಣ್ಯ ಸಚಿವರೇ ಕ್ರಮಕೈಗೊಳ್ಳಬೇಕಾಗಿದೆ. ಆದರೆ ಇಲ್ಲಿನ ವಲಯ ಅರಣ್ಯಾದಿಕಾರಿಗಳಿಗೆ ಪ್ರಶ್ನೆ ಮಾಡಿದರೆ ಅಂತಹ ಘಟನೆಗಳು ನಡೆದಿಲ್ಲ, ಅದು ಚಾಲಕರ ಮಾಡಿರಬಹುದೆಂದು ಹೇಳಿಕೆ ನೀಡಿ ತಪ್ಪಿಸಿಕೊಳ್ಳಲು ಮುಂದಾಗುತ್ತಿದ್ದಾರೆ.
ಹಣ್ಣು (ಜಿಂಕೆ) ತಿಂದವನು ಜಾರಿಕೊಂಡ ಸಿಪ್ಪೆ ತಿಂದವ (ಚಾಲಕರು) ಸಿಕ್ಕಿ ಹಾಕೊಂಡ ಅನ್ನುವ ಹಾಗೇ ಚಾಲಕರನ್ನೆ ಹೊಣೆಗಾರರನ್ನಾಗಿ ಮಾಡಿ ಯಾರನ್ನಾದರೂ ತಪ್ಪಿತಸ್ಥರನ್ನು ಮಾಡಿ ನುಣುಚಿಕೊಳ್ಳುವ ಸಾದ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಅರಣ್ಯ ಮತ್ತು ಅರಣ್ಯ ಪ್ರಾಣಿಗಳನ್ನು ರಕ್ಷಿಸಬೇಕಾದವರೆ ಅದನ್ನು ಭಕ್ಷಿಸಿದ್ದು ಬೇಲಿಯೇ ಎದ್ದು ಹೊಲ ಮೇಯ್ದಂದಾಗಿದೆ ಎಂದರೆ ತಪ್ಪಾಗಲಾರದು.
ವಿದ್ಯಾರ್ಥಿಗಳ ಸರ್ವತೋಮುಖ ವಿಕಸನಕ್ಕೆ ಮಾರ್ಗದರ್ಶನ ಅಗತ್ಯ:ಉಸ್ತುವಾರಿ ಸಚಿವರಾದ ಮಹದೇವ ಪ್ರಸಾದ್
ಚಾಮರಾಜನಗರ, ಸೆ. 03: ಶಿಕ್ಷರ ವೃತ್ತಿ ಅತ್ಯಂತ ಮಹತ್ತರ ಹಾಗೂ ಗುರುತರವಾಗಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ವಿಕಸನಕ್ಕೆ ಮಾರ್ಗದರ್ಶನ ಮಾಡುವ ಹೊಣೆಗಾರಿಕೆ ಇದೆ ಎಂದು ಸಹಕಾರ ಹಾಗೂ ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಎಸ್ ಮಹದೇವಪ್ರಸಾದ್ ಅವರು ತಿಳಿಸಿದರು.
ನಗರದ ಹೊರವಲಯದ ಮಲ್ಲಯ್ಯನಪುರ ಆದರ್ಶ ಶಾಲೆಯಲ್ಲಿ ಇಂದು ಐದು ದಿನಗಳ ಕಾಲ ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ಸ್ಮಾರ್ಟ್ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಕಲಿಕೆಗೆ ಆದ್ಯತೆ ನೀಡುವ ಜೊತೆಗೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದರ ಅನಾವರಣಕ್ಕೆ ಉತ್ತೇಜಿಸುವ ಕೆಲಸವನ್ನು ಮಾಡಬೇಕಿದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸಿ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಪ್ರಮುಖ ಕರ್ತವ್ಯವನ್ನು ಶಿಕ್ಷಕರು ನಿರ್ವಹಿಸುವ ಅವಕಾಶವಿದೆ. ಹೀಗಾಗಿ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಉತ್ತಮ ಮಾರ್ಗದರ್ಶನ ಮಾಡಬೇಕೆಂದು ಸಚಿವರು ಆಶಿಸಿದರು.
ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬಲ್ಲವರಾಗಿದ್ದಾರೆ. ಎಷ್ಟೇ ಉನ್ನತ ಅಧಿಕಾರ ಹಂತಕ್ಕೂ ಏರಿದರೂ ಸಹ ಶಿಕ್ಷಕರನ್ನು ಸ್ಮರಿಸದೇ ಇರುವವರೇ ಇಲ್ಲ. ಶಿಕ್ಷಕರ ಕಳಕಳಿ, ಬದ್ದತೆಯೇ ವಿದ್ಯಾರ್ಥಿಗಳ ಮನದಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿವೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಶಿಕ್ಷಣ ನೀಡುವಲ್ಲಿ ಕಾಲಕಾಲಕ್ಕೆ ತಕ್ಕಂತೆ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಿದೆ. ವಿದ್ಯಾರ್ಥಿಗಳ ಗ್ರಹಿಕೆ ಗುರುತಿಸಿ ಅವರನ್ನು ಉತ್ತಮ ಫಲಿತಾಂಶ ನೀಡುವಂತಾಗಲು ಪ್ರೇರೇಪಿಸಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕಿದೆ. ಗ್ರಾಮೀಣ ಭಾಗದ ಮಕ್ಕಳಿಗೂ ಸಹ ಕಂಪ್ಯೂಟರ್ ಇನ್ನಿತರ ಅವಶ್ಯ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ಉತ್ತಮ ಶಿಕ್ಷಣ ಪಡೆಯಲು ಸರ್ಕಾರ ಅವಕಾಶ ಮಾಡಿಕೊಡುತ್ತಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಫಲಿತಾಂಶ ಸುಧಾರಣೆ ಉದ್ದೇಶದೊಂದಿಗೆ ಚಾಲನೆ ನೀಡಿರುವ ಸ್ಮಾರ್ಟ್ ಯೋಜನೆ ಉತ್ತಮವಾಗಿದೆ. ಇದರ ಪ್ರತಿಫಲವನ್ನು ನಿರೀಕ್ಷೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕಾರ್ಯಗಳು ಯಶಸ್ವಿಯಾಗಬೇಕಿದೆ ಎಂದು ಸಚಿವರು ನುಡಿದರು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಮಂತ್ರಿಯವರ ಸಂಸದೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸಿ. ಪುಟ್ಟರಂಗ ಶೆಟ್ಟಿ ಅವರು ಮಾತನಾಡಿ ಹಿಂದಿನ ದಿನಗಳಿಗೆ ಹೋಲಿಸಿದರೆ ಪ್ರಸ್ತುತ ಸಂಧರ್ಭದಲ್ಲಿ ಭೋದನೆ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ, ಪ್ರತೀ ವಿಷಯಕ್ಕೂ ಪ್ರತ್ಯೇಕ ಶಿಕ್ಷಕರು ಭೋಧನೆ ಮಾಡಲಿದ್ದಾರೆ, ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಜಿಲ್ಲೆಯ ಫಲಿತಾಂಶದಲ್ಲಿ ಸುಧಾರಣೆ ತರಬೇಕಿದೆ ಎಂದರು.
ಸರ್ವಶಿಕ್ಷಣ ಅಭಿಯಾನದ ರಾಜ್ಯ ನಿರ್ದೇಶಕರಾದ ಪಿ ಸಿ ಜಾಫರ್ ಮಾತನಾಡಿ, ಪಠ್ಯ ಪುಸ್ತಕಗಳಲ್ಲಿ ಇರುವ ವಿಷಯವನ್ನು ಅಧ್ಯಯನ ಮಾಡಿ ಹೆಚ್ಚು ಅಂಕ ಗಳಿಸುವುದಷ್ಟೇ ಶಿಕ್ಷಣ ಎಂಬುವುದಕ್ಕೆ ಸೀಮಿತವಾಗಬಾರದು. ವ್ಯಾಸಂಗ ಹೊರತುಪಡಿಸಿ ಇತರೆ ಪ್ರಮುಖ ವಿಷಯಗಳ ಕುರಿತು ಪ್ರಶ್ನಿಸುವ ಮನೋಭಾವನೆ ರೂಡಿಸಿಕೊಳ್ಳುವ ಮಟ್ಟಿಗೆ ವಿದ್ಯಾರ್ಥಿಗಳನ್ನು ರೂಪುಗೊಳಿಸುವ ಶಿಕ್ಷಣ ಲಭಿಸಬೇಕು ಎಂದರು.
ಶಿಕ್ಷಕರು ಭೋಧನೆ ವೃತ್ತಿಯೊಂದಿಗೆ ಪೋಷಕರ ಪಾತ್ರವನ್ನು ನಿರ್ವಹಿಸಬೇಕಿದೆ. ತರಗತಿಯಲ್ಲಿ ವಿದ್ಯಾರ್ಥಿಗಳು ಕಲಿಕಾ ಪ್ರಮಾಣ ಹೇಗಿದೆ ಎಂಬುವುದನ್ನು ಶಿಕ್ಷಕರು ತಿಳಿಯಬೇಕಿದೆ. ಕಲಿಕೆಯಲ್ಲಿ ಹಿಂದೆ ಬಿದ್ದರೆ ಸುಧಾರಣೆಗೆ ಗಮನ ನೀಡಬೇಕಿದೆ ಎಂದು ಜಾಫರ್ ಅವರು ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಮಾತನಾಡಿ ಶಿಕ್ಷಣ ಗುಣಮಟ್ಟ ಹೆಚ್ಚಿಸಿ ಉತ್ತಮ ಫಲಿತಾಂಶವನ್ನು ನೀಡಬೇಕೆಂಬ ಉದ್ದೇಶದೊಂದಿಗೆ ಸ್ಮಾರ್ಟ್ ಕಾರ್ಯಕ್ರಮವನ್ನು ಆರಂಬಿಸಲಾಗಿದೆ. ಕಳೆದ ಐದು ದಿನಗಳಲ್ಲಿ ವಿವಿಧ ಭಾಗಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ 250 ಶಿಕ್ಷಕರಿಗೆ ವಿವಿಧ ಹಂತದ ತರಬೇತಿ ನೀಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಮಚಂದ್ರ, ಉಪಾಧ್ಯಕ್ಷರಾದ ಬಸವರಾಜು, ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಸದಾಶಿವಮೂರ್ತಿ, ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರಹಳ್ಳಿ ನವೀನ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಮಾರ್, ಜಿಲ್ಲಾಧಿಕಾರಿ ಬಿ ರಾಮು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳ ಇತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಅನುಕೂಲಕ್ಕೆ ಹಾಸ್ಟೆಲ್‍ವಸತಿಶಾಲೆ: ಉಸ್ತುವಾರಿ ಸಚಿವರಾದ ಎಚ್ ಎಸ್ ಮಹದೇವಪ್ರಸಾದ್
ಚಾಮರಾಜನಗರ, ಸೆ. 03: ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದ್ದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿದ್ಯಾಥಿ ನಿಲಯ, ವಸತಿ ಶಾಲೆಗಳ ಸೌಲಭ್ಯವನ್ನು ಜಿಲ್ಲೆಯಲ್ಲಿ ಒದಗಿಸಲಾಗುತ್ತಿದೆ ಎಂದು ಸಹಕಾರ ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಎಸ್ ಮಹದೇವ ಪ್ರಸಾದ್ ತಿಳಿಸಿದರು.
ತಾಲ್ಲೂಕಿನ ಬಿಸಲವಾಡಿ ಗ್ರಾಮದಲ್ಲಿಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣ ಮಾಡಲಿರುವ ಮೆಟ್ರಕ್ ಪೂರ್ವ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 40 ಮೆಟ್ರಿಕ್ ಪೂರ್ವ ಹಾಗೂ 21 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು ಸೇರಿದಂತೆ ಒಟ್ಟು 61 ವಿದ್ಯಾರ್ಥಿ ನಿಲಯಗಳಿವೆ. ಈ ಪೈಕಿ 54 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಗಳು ಇವೆ. ಉಳಿದ ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣ ಮಾಡುವ ಉದ್ದೇಶದಿಂದ ನಾಲ್ಕು ನಿವೇಶನಗಳನ್ನು ಗುರುತಿಸಲಾಗಿದೆ. ಇನ್ನೂ ಉಳಿದ ಕಡೆ ನಿವೇಶನ ಲಭ್ಯವಾದ ಕೂಡಲೇ ಅಲ್ಲಿಯೂ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣವನ್ನು ಆರಂಭಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ರಾಜ್ಯ ಸರ್ಕಾರ 100 ಮೊರಾರ್ಜಿ ಶಾಲೆಗಳನ್ನು ಆರಂಭಿಸುವ ಘೋಷಣೆ ಮಾಡಿತ್ತು. ಇದರಲ್ಲಿ ಜಿಲ್ಲೆಗೆ 4 ವಸತಿ ಶಾಲೆಗಳು ಮಂಜೂರಾಗಿವೆ. ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ವಸತಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದವರು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳು ವಸತಿ ಶಾಲೆಗಳ ಸದಪಯೋಗ ಮಾಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಇದೇ ವೇಳೆ ಗ್ರಾಮಸ್ಥರು ಸಲ್ಲಿಸಿದ ಮನವಿ ಸ್ವೀಕರಿಸಿದ ಸಚಿವರು ಪ್ರಸ್ತಾಪಸಿರುವ ವಿಷಯಗಳ ಬಗ್ಗೆ ಗಮನಹರಿಸುವುದಾಗಿ ತಿಳಿಸಿದರು.
ಲೋಕಸಭಾ ಸದಸ್ಯರಾದ ಆರ್ ದ್ರುವನಾರಾಯಣ ಮಾತನಾಡಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ 19 ಸಾವಿರ ಕೋಟಿ ಹಣವನ್ನು ವೆಚ್ಚ ಮಾಡುತ್ತಿದೆ. ಸಿಮೆಂಟ್ ಕಾಂಕ್ರಿಟ್ ರಸ್ತೆ, ಒಳ ಚರಂಡಿ, ಹಾಸ್ಟೆಲ್‍ಗಳ ನಿರ್ಮಾಣವನ್ನು ಈ ಅನುದಾನದಡಿ ಹೆಚ್ಚು ಕೈಗೊಳ್ಳಲಾಗಿದೆ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಮಂತ್ರಿಯವರ ಸಂಸದೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸಿ. ಪುಟ್ಟರಂಗ ಶೆಟ್ಟಿ ಅವರು ವಿದ್ಯಾರ್ಥಿ ನಿಲಯಗಳು, ಶಾಲಾ ಕಾಲೇಜುಗಳು ಮಂಜೂರಾತಿಯಾದ ಸಂಧರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಶ್ಯವಿರುವ ನಿವೇಶನ ಗುರುತಿಸುವ ವೇಳೆ ಜನ ಪ್ರತಿನಿಧಿಗಳೂ ಮಾಹಿತಿ ನೀಡಿ ಪ್ರಕ್ರಿಯೆ ಕೈಗೊಳ್ಳಬೇಕು.ಇದರಿಂದ ಶೀಘ್ರ ಹಾಗೂ ಸುಗಮವಾಗಿ ಕಟ್ಟಡಗಳು ನಿರ್ಮಾಣ ಆಗಲು ಅನುಕೂಲವಾಗಲಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಮಚಂದ್ರ, ಸಾಮಾಜಿಕ ನ್ಯಾಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ ಕೆ ಬೊಮ್ಮಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್.ವಿ ಚಂದ್ರು, ಜಿಲ್ಲಾ ಪಂಚಾಯತ್ ಸದಸ್ಯರಾದ ಕೆರೆಹಳ್ಳಿ ನವೀನ್,ಶಶಿಕಲಾ ಸೋಮಲಿಂಗಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದ ದಯಾನಿಧಿ, ಸದಸ್ಯರಾದ ರತ್ನಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹದೇವಪ್ಪ, ಮಾವುಅಭಿವೃದ್ದಿ ನಿಗಮದ ನಿರ್ದೇಶಕರಾದ ಬಿ.ಕೆ ರವಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಸತೀಶ್, ಗ್ರಾಮದ ಮುಖಂಡರಾದ ಸಿದ್ದಮಲ್ಲಪ್ಪ, ಶಾಂತಮಲ್ಲಪ್ಪ, ಇತರರು ಕಾರ್ಯಕ್ರಮದಲ್ಲಿ ಉಪ ಸ್ಥಿತರಿದ್ದರು.
ಸೆಪ್ಟೆಂಬರ್ 5ರಂದು ಗೌರಿ-ಗಣೇಶ ಹಬ್ಬ: ಮಾಂಸ ಮಾರಾಟ ನಿಷೇಧ
ಚಾಮರಾಜನಗರ, ಸೆ. 03 (ಕರ್ನಾಟಕ ವಾರ್ತೆ):- ಗೌರಿ-ಗಣೇಶ ಹಬ್ಬದ ಪ್ರಯುಕ್ತ ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 5 ರಂದು ಮಾಂಸ ಮಾರಾಟ ನಿಷೇಧಿಸಲಾಗಿದೆ.
ಅಂದು ಪ್ರಾಣಿವಧೆ ಮಾಡುವುದು ಮತ್ತು ಮಾಂಸ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹವರ ಉದ್ದಿಮೆಯನ್ನು ಬಂದ್ ಮಾಡಿಸಿ, ನೀಡಿರುವ ಪರನಾನಗಿಯನ್ನು ರದ್ದುಪಡಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 1 ರಿಂದ 9ರವರೆಗೆ ಆಹಾರ ಮೇಳ
ಚಾಮರಾಜನಗರ, ಸೆ. 03 (ಕರ್ನಾಟಕ ವಾರ್ತೆ):- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆವತಿಯಿಂದ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 1 ರಿಂದ 9ರ ವರೆಗೆ ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಅಕರ್ಷಕ ಆಹಾರ ಮೇಳವನ್ನು ಆಯೋಜಿಸಲಾಗಿದೆ.
ಮೇಳದಲ್ಲಿ ಭಾಗವಹಿಸುವವರು, ಯಾವುದೇ ವ್ಯಕ್ತಿ, ಸಂಸ್ಥೆ, ಹಾಗೂ ಸ್ಥಳೀಯ ವಿಶೇಷ ಆಹಾರ ಸರಬರಾಜು ಮಾಡಬಯಸುವ ಅಸಕ್ತಿಯುಳ್ಳವರು ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಸೆಪ್ಟೆಂಬರ್ 10ರೊಳಗೆ ಉಪನಿರ್ದೇಶಕರ ಕಚೇರಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ನಂ.113 ಮತ್ತು 114, ಜಿಲ್ಲಾಡಳಿತ ಭವನ, ಚಾಮರಾಜನಗರ ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ನಗರ ಪ್ರದೇಶದ ಪ.ಜಾತಿ, ಪ.ಪಂಗಡದ ವಸತಿ ರಹಿತರಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 03 (ಕರ್ನಾಟಕ ವಾರ್ತೆ):- ನಗರ ಪ್ರದೇಶದ 267 ಪರಿಶಿಷ್ಟ ಜಾತಿ ಮತ್ತು 236 ಪರಿಶಿಷ್ಟ ಪಂಗಡ ವರ್ಗ ಸೇರಿದಂತೆ ಒಟ್ಟು 503 ವಸತಿ ರಹಿತರಿಗೆ ವಸತಿ ಕಲ್ಪಿಸುವ ಸಲುವಾಗಿ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯನ್ನು ನೂತನವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ನಗರಸಭಾ ವ್ಯಾಪ್ತಿಯಲ್ಲಿ ವಾಸವಾಗಿರುವ ವಸತಿ ರಹಿತರು, ಗುಡಿಸಲು ವಾಸಿಗಳು, ತಾತ್ಕಾಲಿಕ ಶೆಡ್‍ಗಳ ವಾಸಿಗಳು, ಶಿಥಿಲವಾಗಿರುವ ಮನೆಗಳಲ್ಲಿ ವಾಸಿಸುವವರು, ಕಚ್ಚಾ ಮನೆಗಳಲ್ಲಿರುವವರು ಮತ್ತು ವಾರ್ಷಿಕ 87,600 ರೂ. ಗಳ ವಾರ್ಷಿಕ ಆದಾಯ ಹೊಂದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಮನೆಗಳ ಹಂಚಿಕೆಗಾಗಿ ಮಾಜಿ ಸೈನಿಕರಿಗೆ ಶೇ. 10, ಅಂಗವಿಕಲರಿಗೆ ಶೇ. 5, ಮಹಿಳೆಯರಿಗೆ ಶೇ. 80 ಹಾಗೂ ವಿಶೇಷ ವರ್ಗದ ಗುಂಪುಗಳಾದ ದೇವದಾಸಿ, ವಿಧವೆ, ಲೈಂಗಿಕಕಾರ್ಯಕರ್ತೆಯರಿಗೆ ಶೇ. 5 ರಷ್ಟು ಒಳ ಮೀಸಲಾತಿಯನ್ನು ನಿಗದಿ ಮಾಡಲಾಗಿದೆ.
ಅರ್ಜಿಯನ್ನು ಸೆಪ್ಟೆಂಬರ್ 15ರೊಳಗೆ ಪಡೆದು ಸೆ. 20ರೊಳಗೆ ನಗರಸಭೆ ಕಚೇರಿಗೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 2ರಿಂದ 19ರ ವರೆಗೆ ತಾಲೂಕಿನಲ್ಲಿ ಚರ್ಮರೋಗ ತಪಾಸಣಾ ಆಭಿಯಾನ
ಚಾಮರಾಜನಗರ, ಸೆ. 03 (ಕರ್ನಾಟಕ ವಾರ್ತೆ):- ತಾಲೂಕು ಮಟ್ಟದ ಚರ್ಮರೋಗ ತಪಾಸಣಾ ಅಭಿಯಾನ ಸಮನ್ವಯ ಸಮಿತಿಯ ಟಾಸ್ಕ್‍ಪೋರ್ಸ್ ಸಭೆ ನಗರದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಕೆ. ಪುರಂದರ್ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಕೆ. ಪುರಂದರ ಅವರು ಸೆಪ್ಟೆಂಬರ್ 6ರಿಂದ 19ರ ವರೆಗೆ ಬೆಳಿಗ್ಗೆ 8 ಗಂಟೆಯಿಂದ 11 ರ ವರೆಗೆ ಚರ್ಮರೊಗ ತಪಾಸಣಾ ಅಭಿಯಾನ ಚಟುವಟಿಕೆಯನ್ನು ಚಾಮರಾಜನಗರ ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದೆ. ಎಲ್ಲ ತಾಲೂಕುಮಟ್ಟದ ಅಧಿಕಾರಿಗಳು ಚರ್ಮರೋಗ ತಪಾಸಣಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ತಾಲೂಕು ವೈದ್ಯಾದಿಕಾರಿ ಡಾ. ಶ್ರೀನಿವಾಸ ಅವರು ಚರ್ಮರೋಗ ತಪಾಸಣಾ ಅಭಿಯಾನಕ್ಕಾಗಿ ತಹಶೀಲ್ದಾರರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ತಪಾಸಣೆಗಾಗಿ 80983 ಮನೆಗಳನ್ನು ಅಂದಾಜಿಸಲಾಗಿದೆ. ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ 86 ಮೇಲ್ವಿಚಾರಕರನ್ನೊಳಗೊಂಡ 256 ತಂಡಗಳನ್ನು ನಿಯೋಜಿಸಲಾಗಿದೆ. ಪ್ರತಿ ತಂಡದಲ್ಲಿರುವ ಒಬ್ಬ ಪುರುಷ ಹಾಗೂ ಮಹಿಳಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಚರ್ಮರೋಗದ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡಲಿದ್ದಾರೆ ಎಂದರು.
ಅಭಿಯಾನ ಕಾರ್ಯಕ್ರಮದಲ್ಲಿ ಕಾಡಂಚಿನ ಗ್ರಾಮಗಳು ಹಾಗೂ ದುರ್ಗಮ ಪ್ರದೇಶಗಳಲ್ಲಿ ತಪಾಸಣಾ ವಾಹನಗಳು ಸಂಚರಿಸಲಿದ್ದು, ವಾಹನಗಳೊಡಾಟಕ್ಕೆ ಅನುಮತಿ ನೀಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು. ಪಟ್ಟಣ ಪ್ರದೇಶದಲ್ಲಿ ಸಹ ಅಭಿಯಾನಕ್ಕೆ ಪೂರ್ಣ ಸಹಕಾರ ನೀಡಬೇಕೆಂದು ಡಾ.ಶ್ರೀನಿವಾಸ ಅವರು ಮನವಿ ಮಾಡಿದರು.
ಬ್ಯಾಂಕ್ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 06: ಇನ್ಸ್‍ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್‍ನಿಂದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲರಿಕಲ್ ಹುದ್ದೆಗಳಿಗೆ ಲಿಖಿತ ಪೂರ್ವಭಾವಿ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದು ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಯಾವುದೇ ಪದವಿ ಹಾಗೂ ಕಂಪ್ಯೂಟರ್ ಜ್ಞಾನ ಪ್ರಮಾಣ ಪತ್ರ ಹೊಂದಿರಬೇಕು.20 ರಿಂದ 28 ರ ವಯೋಮಿತಿಯೊಳಗಿರಬೇಕು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒ ಬಿ ಸಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಇದೆ.
ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 12 ಕಡೆಯ ದಿನವಾಗಿದೆ.ವಿವರಗಳಿಗೆ ವೆಬ್ ಸೈಟ್ ತಿತಿತಿ.ibಠಿs.iಟಿ ನೋಡಬಹುದು.
ಸದರಿ ಹುದ್ದೆಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಉಚಿತ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ.ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಹೆಸರು ನೋಂದಾಯಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಸಿ.ಎಂ.ಉಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಂಡ್ಲುಪೇಟೆ ಪುರಸಭೆ : ಫಲಾನುಭವಿಗಳ ಪಟ್ಟಿ- ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಚಾಮರಾಜನಗರ, ಸೆ. 06:ಗುಂಡ್ಲುಪೇಟೆ ಪುರಸಭೆಯು ವಿವಿಧ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು (ಪ್ರಾವಿಷನಲ್ ಲಿಸ್ಟ್) ಪ್ರಕಟಿಸಿದ್ದು ಈ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದಾಗಿದೆ.
2015-16 ನೇ ಸಾಲಿಗೆ ಎಸ್‍ಎಫ್‍ಸಿ, ಪುರಸಭಾ ನಿಧಿಯ ವಿವಿಧ ಯೋಜನೆಯಡಿ ಪಕ್ಕಾ ಮನೆ, ಲ್ಯಾಪ್‍ಟಾಪ್, ವಿಕಲಚೇತನರ ಸಹಾಯಧನ, ಪರಿಶಿಷ್ಟ ವರ್ಗದ ವಕೀಲರಿಗೆ ಸಹಾಯಧನಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಕಳೆದ ಜೂನ್28 ರಂದು ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಅರ್ಹರನ್ನು ಆಯ್ಕೆ ಮಾಡಲಾಗಿದೆ.ಈ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಈ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲಾತಿಯೊಂದಿಗೆ ಸೆಪ್ಟೆಂಬರ್ 9 ರೊಳಗೆ ಸಲ್ಲಿಸಬಹುದು.ಯಾವುದೇ ಆಕ್ಷೇಪಣೆ ಬರದಿದ್ದಲ್ಲಿ ಪ್ರಕಟ ಪಡಿಸಿರುವ ಪಟ್ಟಿಯನ್ನು ಅಂತಿಮವೆಂದು ಪರಿಗಣಿಸಿ ಸಹಾಯಧನ ವಿತರಿಸಲಾಗುವುದೆಂದು ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾಗ್ಯರೇಖ ಅವರಿಗೆ ಶಿಕ್ಷಣ ಇಲಾಖೆ ಅಭಿನಂದನೆÀ
ಚಾಮರಾಜನಗರ, ಸೆ. 06:ರಾಜ್ಯ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿರುವ ಹನೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಾಮಿಕ ಶಾಲೆಯ ಸಹ ಶಿಕ್ಷಕರಾದ ಭಾಗ್ಯರೇಖ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಭಿನಂದಿಸಿದೆ.
ಪ್ರಶಸ್ತಿ ಪಡೆದುಕೊಂಡಿರುವುದು ಹರ್ಷದಾಯಕ ಸಂಗತಿಯಾಗಿದೆ.ಭಾಗ್ಯರೇಖ ಅವರಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹೃತ್ಪೂರ್ವಕವಾಗಿ ಅಭಿನಂದಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 8 ರಂದು ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಎನ್‍ಎಚ್‍ಎಂ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ
ಚಾಮರಾಜನಗರ, ಸೆ. 06:ಲೋಕಸಭಾ ಸದಸ್ಯರಾದ ಆರ್.ದ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಎನ್‍ಎಚ್‍ಎಂ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಗಾಗಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಸೆಪ್ಟೆಂಬರ್ 8 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ತಿನ ಸ್ಥಾಯಿಸಮಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 8ರಂದು ಶ್ರೀಕೃಷ್ಣ ಜಯಂತಿ, ವಿಶ್ವಕರ್ಮ, ನಾರಾಯಣಗುರು ಜಯಂತಿ ಆಚರಣೆ ಕುರಿತು
ಪೂರ್ವಭಾವಿ ಸಭೆ
ಚಾಮರಾಜನಗರ, ಸೆ. 07 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತದ ವತಿಯಿಂದ ಶ್ರೀಕೃಷ್ಣ ಜಯಂತಿ, ವಿಶ್ವಕರ್ಮ ಜಯಂತಿ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಆಚರಿಸುವ ಸಲುವಾಗಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 8ರಂದು ಮಧ್ಯಾಹ್ನ 12.30 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಗೆ ಎಲ್ಲಾ ಸಮುದಾಯ, ಸಂಘಟನೆಗಳ ಮುಖಂಡರು, ಪ್ರತಿನಿಧಿಗಳು, ನಾಗರಿಕರು ಹಾಜರಾಗಿ ಸಲಹೆ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಸೆಪ್ಟೆಂಬರ್ 8 ರಂದು ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಎನ್‍ಎಚ್‍ಎಂ ಕಾರ್ಯಕ್ರಮಗಳ
ಪ್ರಗತಿ ಪರಿಶೀಲನೆ
ಚಾಮರಾಜನಗರ, ಸೆ. 07 (ಕರ್ನಾಟಕ ವಾರ್ತೆ):- ಲೋಕಸಭಾ ಸದಸ್ಯರಾದ ಆರ್.ದ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಎನ್‍ಎಚ್‍ಎಂ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಗಾಗಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಸೆಪ್ಟೆಂಬರ್ 8 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ತಿನ ಸ್ಥಾಯಿಸಮಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 9ರಂದು ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್
ಚಾಮರಾಜನಗರ, ಸೆ. 07 (ಕರ್ನಾಟಕ ವಾರ್ತೆ):- 2016-17ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಪರಸ್ಪರ ವರ್ಗಾವಣೆಯನ್ನು ಗಣಕೀಕೃತ ಕೌನ್ಸೆಲಿಂಗ್ ಮೂಲಕ ಸೆಪ್ಟೆಂಬರ್ 9ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನಡೆಸಲಾಗುವುದು.
ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಿ ಆದ್ಯತಾ ಪಟ್ಟಿಯಲ್ಲಿರುವ ಅರ್ಹ ಶಿಕ್ಷಕರು ಅಗತ್ಯ ಮಾಹಿತಿಯೊಂದಿಗೆ ಕೌನ್ಸೆಲಿಂಗ್‍ಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಂದ ಆಡಳಿತ ನ್ಯಾಯಾಧೀಕರಣ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 07 (ಕರ್ನಾಟಕ ವಾರ್ತೆ):- ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ನೀಡಲಾಗುವ ಆಡಳಿತ ನ್ಯಾಯಾಧೀಕರಣ ತರಬೇತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟೆಂಬರ್ 15ರವರೆಗೆ ವಿಸ್ತರಿಸಲಾಗಿದೆ.
ಅಭ್ಯರ್ಥಿಗಳು ಹಿಂದುಳಿದ ವರ್ಗಗಳ ಪ್ರವರ್ಗ 1, 2ಎ, 3ಎ, 3ಬಿಗೆ ಸೇರಿದವರಾಗಿರಬೇಕು. ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅನ್ವಯವಾಗುವಂತೆ 40 ವರ್ಷ ವಯೋಮಿತಿಯಿರಬೇಕು. ಇತರರು 38 ವರ್ಷ ವಯೋಮಿತಿಯೊಳಗಿರಬೇಕು.
ಬಾರ್ ಕೌನ್ಸಿಲ್‍ನಲ್ಲಿ ಹೆಸರು ನೊಂದಾಯಿಸಿರಬೇಕು. ನೊಂದಾಯಿಸದೇ ಇದ್ದಲ್ಲಿ ತರಬೇತಿಗೆ ಆಯ್ಕೆಯಾದ ಕೂಡಲೆ ನೊಂದಾಯಿಸಬೇಕು. ಅರ್ಜಿ ಸ್ವೀಕಾರಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕಕ್ಕಿಂತ ಮುಂಚಿನ 2 ವರ್ಷಗಳ ಅವಧಿಯೊಳಗೆ ಕಾನೂನು ಪದವಿ ಪಡೆದವರಾಗಿರಬೇಕು. ಹಿಂದುಳಿದ ವರ್ಗಗಳ ಪ್ರವರ್ಗ 1ರ ಅಭ್ಯರ್ಥಿ ಕುಟುಂಬದ ವಾರ್ಷಿಕ ವರಮಾನ 2 ಲಕ್ಷ ರೂ. ಮೀರಿರಬಾರದು. ಉಳಿದ ಪ್ರವರ್ಗಗಳ ಸೇರಿದ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ವರಮಾನ 44,500 ರೂ. ಮೀರಿರಬಾರದು.
ತರಬೇತಿಗೆ ಆಯ್ಕೆಯಾದವರಿಗೆ ಮಾಹೆಯಾನ ಒಂದು ಸಾವಿರ ರೂ. ಭತ್ಯೆ ನೀಡಲಾಗುತ್ತದೆ.
ನಿಗದಿತ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಜಾತಿ, ಆದಾಯ ಪ್ರಮಾಣ ಪತ್ರ, ಅಂಕಪಟ್ಟಿ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಇತರೆ ಅಗತ್ಯ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 15ರೊಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ವಿಕಲಚೇತನರ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಚಾಮರಾಜನಗರ, ಸೆ. 07 (ಕರ್ನಾಟಕ ವಾರ್ತೆ):- ಕೇಂದ್ರ ಸರ್ಕಾರವು ವಿಕಲಚೇತನರಿಗೆ ನೀಡುವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.
ವಿದ್ಯಾರ್ಥಿ ವೇತನ ಯೋಜನೆ ಸೌಲಭ್ಯವು ಶೇ. 40ರಷ್ಟು ಅಂಗವೈಕಲ್ಯ ಹೊಂದಿರುವ ಹಾಗು ಈ ಸಂಬಂಧ ಪ್ರಮಾಣಪತ್ರ ಹೊಂದಿರುವ ವಿದ್ಯಾರ್ಥಿಗಳಿಗೆ ಲಭಿಸಲಿದೆ. ಅರ್ಜಿಯನ್ನು ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್ ತಿತಿತಿ.sಛಿhoಟಚಿಡಿshiಠಿs.gov.iಟಿ ಮೂಲಕ ಆನ್‍ಲೈನ್‍ನಲ್ಲಿ ಸಲ್ಲಿಸಬೇಕಿದೆ. ವಿವರಗಳಿಗೆ ತಿತಿತಿ.ಜisಚಿbiಟiಣಥಿಚಿಜಿಜಿಚಿiಡಿs.gov.iಟಿ ನೋಡಬಹುದು. ಮಾಹಿತಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕಚೇರಿ ಸಂಪರ್ಕಿಸಿಯೂ (ದೂ.ಸಂ. 08226-223688/224688) ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
ಆಡಳಿತ ನ್ಯಾಯಾಧೀಕರಣ ತರಬೇತಿಗೆ ಪರಿಶಿಷ್ಟ ವರ್ಗಗಳ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಸೆ. 07 (ಕರ್ನಾಟಕ ವಾರ್ತೆ):- ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಆಡಳಿತ ನ್ಯಾಯಾಧೀಕರಣ ತರಬೇತಿಗಾಗಿ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು 40ರ ವಯೋಮಿತಿಯಿರಬೇಕು. ಪೋಷಕರ ವರಮಾನ 2 ಲಕ್ಷ ರೂ. ಮೀರಿರಬಾರದು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅನ್ವಯವಾಗುವಂತೆ ಕಾನೂನು ಪದವಿಯಲ್ಲಿ ತೇರ್ಗಡೆಯಾಗಿ 2 ವರ್ಷ ಮೀರಿರಬಾರದು. ಆಯ್ಕೆಯಾದ ಅಭ್ಯರ್ಥಿಗಳಿಗೆ 4 ವರ್ಷಗಳ ತರಬೇತಿ ಅವಧಿಯಲ್ಲಿ ಪ್ರತೀ ತಿಂಗಳು 2 ಸಾವಿರ ರೂ. ಶಿಷ್ಯ ವೇತನ ನೀಡಲಾಗುವುದು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಬಾರ್ ಕೌನ್ಸಿಲ್ ನೋಂದಣಿ ಪತ್ರ, ಜಾತಿ, ವಿದ್ಯಾರ್ಹತೆ ಅಂಕಪಟ್ಟಿ, ಪದವಿ ಪತ್ರ, ಇನ್ನಿತರ ಅಗತ್ಯ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 30ರೊಳಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ಸೆ. 9ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಸೆ. 07 (ಕರ್ನಾಟಕ ವಾರ್ತೆ):- ಚಾಮರಾಜನಗರ ಪಟ್ಟಣದಲ್ಲಿ ಸೆಪ್ಟೆಂಬರ್ 9ರಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಚಾಮರಾಜನಗರ ಪಟ್ಟಣ (ಸೋಮವಾರಪೇಟೆ) ಫೀಡರ್‍ಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ. ಹೀಗಾಗಿ ಅಂದು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಸಂತೆಮರಹಳ್ಳಿ ವೃತ್ತ, ನಂಜನಗೂಡು ಮುಖ್ಯ ರಸ್ತೆಯಿಂದ ಎಸ್ ಎಂ ಪಿ ರೈಸ್‍ಮಿಲ್‍ವರೆಗೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ನಾಗರಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸೆ. 19 ಕ್ಕೆ ಮುಖ್ಯಮಂತ್ರಿಯವರ ಕಾರ್ಯಕ್ರಮ ಮುಂದೂಡಿಕೆ
ಚಾಮರಾಜನಗರ, ಸೆ. 07 (ಕರ್ನಾಟಕ ವಾರ್ತೆ) :- ಮುಖ್ಯಮಂತ್ರಿ ಅವರಿಂದ ಸೆಪ್ಟಂಬರ್ 12 ರಂದು ನಗರದಲ್ಲಿ ನೆರವೇರಬೇಕಿದ್ದ ಚಾಮರಾಜನಗರ ಪಟ್ಟಣ ಅಭಿವೃದ್ಧಿಯ 50 ಕೋಟಿ ರೂ ವಿಶೇಷ ಅನುದಾನದ ಕಾಮಗಾರಿಗಳÀ ಶಿಲಾನ್ಯಾಸ ಹಾಗೂ ವೈದ್ಯಕೀಯ ಕಾಲೇಜು ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ಸೆಪ್ಟಂಬರ್ 19 ಕ್ಕೆ ಮುಂದೂಡಲಾಗಿದೆ ಎಂದು ಸಹಕಾರ ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್. ಎಸ್ ಮಹದೇವ ಪ್ರಸಾದ್ ಅವರು ತಿಳಿಸಿದ್ದಾರೆ.
ಸೆ. 10ರಂದು ನಗರದಲ್ಲಿ ಶಿಕ್ಷಕರ ದಿನಾಚರಣೆ : ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ
ಚಾಮರಾಜನಗರ, ಸೆ. 08 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆಪ್ಟಂಬರ್ 10ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಹಕಾರ, ಸಕ್ಕರೆ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳು, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ ಉಪಸ್ಥಿತರಿರುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡುವರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರ ಅನಾವರಣ ಮಾಡುವರು.
ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ನಗರಸಭೆ ಅಧ್ಯಕ್ಷರಾದ ಎಸ್. ಎನ್. ರೇಣುಕ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಬಸವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಜಿಲ್ಲಾಧಿಕಾರಿಗಳಾದ ಬಿ. ರಾಮು, ಜಿಲ್ಳಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಎಚ್.ಎನ್. ಗೀತಾಂಬ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಸೆ. 16ರಂದು ನಾರಾಯಣಗುರು ಜಯಂತಿ, ಸೆ.17ರಂದು ವಿಶ್ವಕರ್ಮ ಜಯಂತಿ, ಸೆ. 28ರಂದು ಶ್ರೀಕೃಷ್ಣ ಜಯಂತಿ ಆಚರಣೆ : ಪೂರ್ವಭಾವಿ ಸಭೆಯಲ್ಲಿ ತೀರ್ಮಾನ
ಚಾಮರಾಜನಗರ, ಸೆ. 08 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಸೆಪ್ಟೆಂಬರ್ 16ರಂದು, ವಿಶ್ವಕರ್ಮ ಜಯಂತಿಯನ್ನು ಸೆಪ್ಟೆಂಬರ್ 17ರಂದು ಹಾಗೂ ಶ್ರೀಕೃಷ್ಣ ಜಯಂತಿಯನ್ನು ಸೆಪ್ಟೆಂಬರ್ 28ರಂದು ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ. ರಾಮು ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಮೂರೂ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಕೈಗೊಳ್ಳಲು ಒಮ್ಮತದ ನಿರ್ಧಾರ ಮಾಡಲಾಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಬಿ. ರಾಮು ಅವರು ಇದೇ ಮೊದಲ ಬಾರಿಗೆ ವಿಶ್ವಕರ್ಮ ಜಯಂತಿ, ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಶ್ರೀಕೃಷ್ಣ ಜಯಂತಿಯನ್ನು ಈ ಹಿಂದೆ ಆಚರಿಸಿಕೊಂಡು ಬರಲಾಗಿದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲು ಸಲಹೆ ನೀಡುವಂತೆ ಮನವಿ ಮಾಡಿದರು.
ಶ್ರೀಕೃಷ್ಣ, ವಿಶ್ವಕರ್ಮ, ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಂದು ವಿಶೇಷ ಉಪನ್ಯಾಸ ಆಯೋಜಿಸಬೇಕಿದೆ. ಈ ಹಿನ್ನೆಲೆಯಲ್ಲಿ ವಿಚಾರವಂತರು, ಆಳವಾಗಿ ಅಧ್ಯಯನ ಮಾಡಿದ ಉಪನ್ಯಾಸಕರನ್ನು ಆಹ್ವಾನಿಸಿ ಅವರಿಂದ ಉಪನ್ಯಾಸ ನೀಡುವ ಸಂಬಂಧ ನೀಡಲಾಗುವ ಸಲಹೆಗಳನ್ನು ಪರಿಗಣಿಸಲಾಗುತ್ತದೆ ಎಂದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತದೆ. ಎಲ್ಲ ಸಮಾಜ ಸಮುದಾಯದ ಜನತೆ ಪಾಲ್ಗೊಳ್ಳುವ ಮೂಲಕ ಸಮಾರಂಭವನ್ನು ಯಶಸ್ವಿಗೊಳಿಸಬೇಕಿದೆ ಎಂದರು.
ತಾಲೂಕು ಮಟ್ಟದಲ್ಲಿ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತದೆ. ಈ ಸಂಬಂಧ ಸ್ಥಳೀಯ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ತಾಲೂಕುಮಟ್ಟದ ಕಾರ್ಯಕ್ರಮಗಳಿಗೂ ಪೂರಕ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಶ್ರೀಕೃಷ್ಣ ಜಯಂತಿ ಸಂದರ್ಭದಲ್ಲಿ ಮಕ್ಕಳಿಗೆ ಶ್ರೀಕೃಷ್ಣ ಛದ್ಮವೇಷಭೂಷಣ, ನೃತ್ಯ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸುವಂತೆ ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಕಾರ್ಯಕ್ರಮ ಆಯೋಜನೆ ಸಂಬಂಧ ಸಭೆಯಲ್ಲಿ ಹಾಜರಿದ್ದ ಮುಖಂಡರು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಸರಸ್ವತಿ, ಡಿವೈಎಸ್‍ಪಿ ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ವಿನಯ್, ಸಮುದಾಯ ಸಂಘಟನೆಗಳ ಮುಖಂಡರಾದ ಸಿ.ಪಿ. ಶಿವಕುಮಾರ್, ನಿಜಧ್ವನಿ ಗೋವಿಂದರಾಜು, ವೆಂಕಟೇಶ್, ರಮೇಶ್, ಗಂಗಾಧರ್, ಶ್ರೀನಿವಾಸಪ್ರಸಾದ್, ಸೋಮಣ್ಣಾಚಾರ್ ಹಂಡ್ರಕಳ್ಳಿ, ಕುಮಾರ್ ಬೋಗಾಪುರ, ಸೌಭಾಗ್ಯವತಿ, ಸುರೇಶ್ ಋಗ್ವೇದಿ, ಕೆ.ಎಂ. ನಾಗರಾಜು, ಆಲೂರು ನಾಗೇಂದ್ರ, ಸಿ.ಎಂ. ನರಸಿಂಹಮೂರ್ತಿ, ಅನಂತಕುಮಾರ್, ನಂದೀಶ್ ವಿಶ್ವಕರ್ಮ, ಸಿ.ಎಂ. ಸುಬ್ರಮಣ್ಯ, ಶಂಕರ ಆಚಾರ್ಯ, ಸುಂದರ್, ಅರಕಲವಾಡಿ ನಾಗೇಂದ್ರ, ಆರ್.ಎಲ್. ನಾಗೇಂದ್ರ (ಬಾಬು), ಕೆ.ಎನ್. ಸುರೇಶ್, ಪ್ರಕಾಶ್, ಶಂಭುಲಿಂಗಸ್ವಾಮಿ, ಡಿ. ಕುಮಾರ್, ಕಾಂತರಾಜು, ಜಿ. ಮಹೇಶ, ಶ್ರೀಕಾಂತ, ಪ್ರಕಾಶ್, ಮಧು, ಇತರರು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಸೀವಿಂಗ್ ಮಿಷನ್ ಆಪರೇಟರ್ ತರಬೇತಿ : ಅಭ್ಯರ್ಥಿಗಳಿಗೆ ನೇರ ಸಂದರ್ಶನ
ಚಾಮರಾಜನಗರ, ಸೆ. 08 (ಕರ್ನಾಟಕ ವಾರ್ತೆ):- ಕೈಮಗ್ಗ ಮತ್ತು ಜವಳಿ ಇಲಾಖೆಯು 45 ದಿನಗಳ ಅವಧಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳ ಸೀವಿಂಗ್ ಮಿಷನ್ ಆಪರೇಟರ್ ತರಬೇತಿಯನ್ನು ನಿರುದ್ಯೋಗಿ ಯುವ ಅಭ್ಯರ್ಥಿಗಳಿಗೆ ನೀಡುವ ಸಲುವಾಗಿ ನೇರ ಸಂದರ್ಶನ ನಡೆಸÀಲಿದೆ.
ಅಭ್ಯರ್ಥಿಗಳು 18 ರಿಂದ 35ರ ವಯೋಮಿತಿಯೊಳಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಾಗಿದ್ದಲ್ಲಿ 40ರ ವಯೋಮಿತಿಯೊಳಗಿರಬೇಕು. ಕನಿಷ್ಟ 5ನೇ ತರಗತಿ ವ್ಯಾಸಂಗ ಮಾಡಿರಬೇಕು.
ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ ನಗರದ ದೇವಾಂಗ ಬೀದಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಸಂಸ್ಥೆಯಲ್ಲಿ (ದೂ.ಸಂ.08226-222454)ಸೆಪ್ಟೆಂಬರ್ 15ರಂದು ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ, ನಗರದ ವಾಣಿಯಾರ್ ಸ್ಟ್ರೀಟ್‍ನಲ್ಲಿರುವ ಕಾವ್ಯಶ್ರೀ ಗಾರ್ಮೆಂಟ್ಸ್‍ನಲ್ಲಿ (ಮೊ. 9880905210) ಸೆಪ್ಟೆಂಬರ್ 15ರಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಹಾಗೂ ಮರಿಯಾಲದ ಜೆ ಎಸ್ ಎಸ್ ನೈಪುಣ್ಯ ತರಬೇತಿ ಕೇಂದ್ರದಲ್ಲಿ (ದೂ.ಸಂ. 08226-230170) ಸೆಪ್ಟೆಂಬರ್ 15ರಂದು ಮಧ್ಯಾಹ್ನ 2.30 ರಿಂದ 4.30 ಗಂಟೆಯವರೆಗೆ ಸಂದರ್ಶನ ನಡೆಸಲಾಗುವುದು.
ಗುಂಡ್ಲುಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪಟ್ಟಣದ ಜೆ ಎಸ್ ಎಸ್ ಕಾಲೇಜು ಎದುರು ಇರುವ ಉದಯರವಿ ಸೇವಾ ಸಂಸ್ಥೆ (ಮೊ. 9632786586) ಯಲ್ಲಿ ಸೆಪ್ಟೆಂಬರ್ 16ರಂದು ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ, ಗುಂಡ್ಲುಪೇಟೆ ಪಟ್ಟಣದ ಹಳೇ ಆಸ್ಪತ್ರೆ ರಸ್ತೆಯ ಕಲ್ಪತರು ಗಾರ್ಮೆಂಟ್ಸ್‍ನಲ್ಲಿ (ಮೊ. 9986912896) ಸೆಪ್ಟೆಂಬರ್ 16ರಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 1.30ರವರೆಗೆ ಸಂದರ್ಶನ ನಡೆಯಲಿದೆ.
ಯಳಂದೂರು ಪಟ್ಟಣದಲ್ಲಿ ಅಲ್ಲಿನ ಬಳೇಪೇಟೆಯಲ್ಲಿರುವ ಕಲ್ಪತರು ಗಾರ್ಮೆಂಟ್ಸ್‍ನಲ್ಲಿ (ಮೊ. 9986912896) ಸೆಪ್ಟೆಂಬರ್ 16ರಂದು ಮಧ್ಯಾಹ್ನ 2.30 ರಿಂದ 4.30 ಗಂಟೆಯವರೆಗೆ ಸಂದರ್ಶನ ನಡೆಯಲಿದೆ.
ಕೊಳ್ಳೇಗಾಲ ಪಟ್ಟಣದ ರಾಜೀವ್ ನಗರದಲ್ಲಿರುವ ಕಾವ್ಯಶ್ರೀ ಗಾರ್ಮೆಂಟ್ಸ್ (ಮೊ. 9880905210)ನಲ್ಲಿ ಸೆಪ್ಟೆಂಬರ್ 17ರಂದು ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ಹಾಗೂ ಪೀಸ್ ಪಾರ್ಕ್ ರಸ್ತೆಯಲ್ಲಿರುವ ಕಲ್ಪತರು ಗಾರ್ಮೆಂಟ್ಸ್‍ನಲ್ಲಿ (ಮೊ. 9986912896)ನಲ್ಲಿ ಸೆಪ್ಟೆಂಬರ್ 17ರಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಸಂದರ್ಶನ ನಡೆಸಲಾಗುವುದು.
ಹನೂರು ಪಟ್ಟಣದ ಮಿಲ್ ರಸ್ತೆಯಲ್ಲಿರುವ ಮಾತೃಶ್ರೀ ಗಾರ್ಮೆಂಟ್ಸ್ ನಲ್ಲಿ (ಮೊ. 9986912896) ಸೆಪ್ಟೆಂಬರ್ 17ರಂದು ಮಧ್ಯಾಹ್ನ 2.30 ರಿಂದ 4.30 ಗಂಟೆಯವರೆಗೆ ಸಂದರ್ಶನ ನಡೆಯಲಿದೆ.
ಅಭ್ಯರ್ಥಿಗಳಿಗೆ ಶಿಷ್ಯ ವೇತನ ನೀಡಲಾಗುವುದು.
ಆಯಾ ನಿಗದಿತ ದಿನಾಂಕದಂದು ಅರ್ಜಿ ಹಾಗೂ ವಿದ್ಯಾಭ್ಯಾಸ ಪ್ರಮಾಣಪತ್ರ, ಪಾಸ್ ಪೋಟ್ ್ ಅಳತೆಯ 2 ಭಾವಚಿತ್ರ, ವಯಸ್ಸಿನ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ (ಬೇರೆ ತಾಲೂಕಿನಲ್ಲಿ ವ್ಯಾಸಂಗ ಮಾಡಿದ ಅಬ್ಯರ್ಥಿಗಳಿಗೆ) ಇನ್ನಿತರ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ಸಂಪೂರ್ಣ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಚೇರಿ ಅಥವಾ ದೂ.ಸಂ. 08226-222883 ಸಂಪಕಿಸುವಂತೆ ಪ್ರಕಟಣೆ ತಿಳಿಸಿದೆ.
ಬಂದ್ ಹಿನ್ನೆಲೆ : ವಿವಿ ಪರೀಕ್ಷೆ ಮುಂದೂಡಿಕೆ
ಚಾಮರಾಜನಗರ, ಸೆ. 08 (ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ಮುಕ್ತ ವಿವಿಯು ಸೆಪ್ಟೆಂಬರ್ 9 ರಂದು ನಿಗದಿ ಮಾಡಿದ್ದ ಬಿಎ, ಬಿಕಾಂ ವಾರ್ಷಿಕ ಪರೀಕ್ಷೆಯನ್ನು ಬಂದ್ ಕರೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 29ಕ್ಕೆ ಮುಂದೂಡಿದೆ.
ಹೆಚ್ಚಿನ ಮಾಹಿತಿಗೆ ವಿವಿ ಪ್ರಾದೇಶಿಕ ಕೇಂದ್ರದ ದೂರವಾಣಿ ಸಂಖ್ಯೆ 8722080011, 8792878070, 8448500718 ಹಾಗೂ 9740701186 ಸಂಪರ್ಕಿಸುವಂತೆ ವಿವಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಎಸ್. ಮಹದೇವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸ್ಪತ್ರೆಗಳು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು: ಅರ್. ಧ್ರುವನಾರಾಯಣ
ಚಾಮರಾಜನಗರ, ಸೆ. 08 (ಕರ್ನಾಟಕ ವಾರ್ತೆ):- ಜಿಲ್ಲಾಸ್ಪತ್ರೆ ಹಾಗೂ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿಂದು ನಡೆದ ರಾಷ್ಟೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮ ಕೇಂದ್ರ ಪುರಸ್ಕøತ ಯೋಜನೆಯಾಗಿದ್ದು, ತಾಯಿ, ಮಗುವಿನ ಮರಣ ಪ್ರಮಾಣ ಕಡಿಮೆ ಮಾಡಿ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇದನ್ನು ವೈದ್ಯಾಧಿಕಾರಿಗಳು ಮನಗಂಡು ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು ಎಂದರು.
ಕಾರ್ಯಕ್ರಮ ಅನುಷ್ಟಾನದಲ್ಲಿ ರಾಜ್ಯವು 4ನೇ ಸ್ಥಾನದಲ್ಲಿದೆ. ಜಿಲ್ಲೆಯು ಆರೋಗ್ಯ ಅಭಿಯಾನ ಕಾರ್ಯಕ್ರಮಗಳ ಅನುಷ್ಟಾನದ ಸರಾಸರಿಯಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಗಳು ತಮ್ಮಲ್ಲಿರುವ ಮುಕ್ತ ನಿಧಿ, ವಾರ್ಷಿಕ ನಿರ್ವಹಣಾ ನಿಧಿ ಹಾಗೂ ಆರೊಗ್ಯ ರಕ್ಷಾ ಸಮಿತಿ ಅನುದಾನವನ್ನು ಬಳಸಿಕೊಂಡು ಕೇರಳ ರಾಜ್ಯದ ಮಾದರಿಯಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಆರೋಗ್ಯ ಸಂಸ್ಥೆಗಳು ಸ್ವಚ್ಚತೆಯಿಂದ ಕೂಡಿರಬೇಕು. ಆಸ್ಪತ್ರೆಗಳ ಒಳಾವರಣ, ಹೊರ ಅವರಣ, ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯದ ಸ್ವಚ್ಚತೆಗೆ ಆದ್ಯತೆಗೆ ಗಮನ ಹರಿಸಬೇಕು. ವೈದ್ಯರು ತಾಳ್ಮೆಯಿಂದ ರೋಗಿಗಳ ತಪಾಸಣೆ ನಡೆಸಬೇಕು. ರೋಗಿಗೆ ಆಸ್ಪತ್ರೆ ವಾತಾವರಣ ಹಿಂಸೆಯಾಗದೆ ಹಿತಕರವಾಗಿರುವಂತೆ ನೋಡಿಕೊಳ್ಳಬೇಕು. ಅವರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ವೈದ್ಯಾಧಿಕಾರಿಗಳಿಗೆ ಸಲಹೆ ಮಾಡಿದರು.
ಆಸ್ಪತ್ರೆಗಳ ಪರಿಸರವನ್ನು ಉತ್ತಮಪಡಿಸಲು ಆಯಾ ತಾಲೂಕಿನ ತೋಟಗಾರಿಕೆ ಅಧಿಕಾರಿಗಳಿಗೆ ಪತ್ರಮುಖೇನ ಸಂಪರ್ಕಿಸಿ ಅಸ್ಪತ್ರೆಯ ವಿಶಾಲ ಅವರಣದಲ್ಲಿ ವಿವಿಧ ಬಗೆಯ ಗಿಡ-ಮರಗಳನ್ನು ಬೆಳೆಸುವುದಲ್ಲದೆ, ಕೈತೋಟಗಳನ್ನು ನಿರ್ಮಿಸಿ ಆಸ್ಪತ್ರೆಗಳು ಹಸಿರಿನಿಂದ ಕೂಡಿರಲು ಗಮನ ಹರಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 60 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಕಂಡುಬಂದಾಗ ತಕ್ಷಣವೆ ವೈದ್ಯರ ತಂಡ ಅಲ್ಲಿಗೆ ತರಳಿ ಸಮಗ್ರವಾಗಿ ಪರಿಶೀಲಿಸಿ ವರದಿ ಸಂಗ್ರಹಿಸಬೇಕು. ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆ, ಹಾಸ್ಟಲ್‍ಗಳಿಗೆ ಆಗಾಗ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕು. ಆ ಮೂಲಕ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಚುನಾಯಿತ ಜನಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಸಂಸದರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಶಾಲಾಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮಪಡಿಸುವ ಸಲುವಾಗಿ ಶಾಲೆಗಳಲ್ಲಿ 5 ದಿನ ಯೋಗಭ್ಯ್ಯಾಸ ಹೇಳಿಕೊಡಲಾಗುತ್ತದೆ. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟವು ಸಹ ಹೆಚ್ಚಲಿದೆ ಎಂದರು.
ಗ್ರಾಮೀಣ ಭಾಗದಲ್ಲಿ ನಡೆಯುವ ಬಾಲ್ಯವಿವಾಹಗಳನ್ನು ತಡೆಯಲು ಅಲ್ಲಿನ ಆಶಾ ಕಾರ್ಯಕರ್ತೆಯರು ಸಂಬಂಧಪಟ್ಟವರಿಗೆ ವರದಿ ಮಾಡಬೇಕು. ಪೌಷ್ಠಿಕ ಆಹಾರ ವಿತರಿಸಿ ತಾಯಿ-ಮಗುವಿನ ಆರೋಗ್ಯ ಸುಧಾರಣೆಯಲ್ಲಿ ಕಾಳಜಿ ವಹಿಸುವ ಆಶಾ ಕಾರ್ಯಕತೆಯರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿಗಾ ವಹಿಸಬೇಕು ಎಂದು ಧ್ರುವನಾರಾಯಣ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್.ವಿ. ಚಂದ್ರು, ಗುಂಡ್ಲುಪೇಟೆ ತಾ.ಪಂ. ಅಧ್ಯಕ್ಷರಾದ ನಟೇಶ್, ಕೊಳ್ಳೇಗಾಲ ತಾ.ಪಂ. ಅಧ್ಯಕ್ಷರಾದ ರಾಜು, ಯಳಂದೂರು ತಾ.ಪಂ. ಅಧ್ಯಕ್ಷರಾದ ನಂಜುಂಡಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಕೆ.ಎಚ್. ಪ್ರಸಾದ್, ಜಿಲ್ಲಾ ಸರ್ಜನ್ ಡಾ. ರಘುರಾಮ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಸರ್ವೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸತೀಶ್ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮ ಅನುಷ್ಟಾನದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
*******************
ಬಕ್ರೀದ್ ಹಿನ್ನಲೆ: ಕಸಾಯಿಖಾನೆಗಳಲ್ಲೆ ಪ್ರಾಣಿವಧೆ ಮಾಡಲು ಡಿಸಿ ಆದೇಶ
ಚಾಮರಾಜನಗರ, ಸೆ. 08 (ಕರ್ನಾಟಕ ವಾರ್ತೆ):- ಮುಂಬರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪ್ರಾಣಿವಧೆಯನ್ನು ತಾತ್ಕಾಲಿಕ ಕಸಾಯಿಖಾನೆಯಲ್ಲೆ ಮಾಡುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪಶುಪಾಲನಾ ಇಲಾಖೆ ಅಧಿಕಾರಿಗಳು, ನಗರಸಭೆ, ಪುರಸಭೆ ಇನ್ನಿತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಬಕ್ರೀದ್ ಹಬ್ಬ ಆಚರಣೆ ಸಂಬಂಧ ಕೈಗೊಳ್ಳಬೇಕಿರುವ ನಿಯಮಗಳ ಪಾಲನೆ ಕುರಿತ ಆದೇಶ ಹೊರಡಿಸಿದ್ದಾರೆ.
ಬಕ್ರೀದ್ ಹಬ್ಬದ ಸಮಯದಲ್ಲಿ ಪ್ರಾಣಿವಧೆಯನ್ನು ಕಡ್ಡಾಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಡುವಂತಿಲ್ಲ. ತಾತ್ಕಾಲಿಕ ಕಸಾಯಿಖಾನೆಗಳಲ್ಲಿಯೇ ಮಾಡಬೇಕು. ಪ್ರಾಣಿವಧೆಗೂ ಮೊದಲು ಪಶುವೈದ್ಯರಿಂದ ಪ್ರಾಣಿಯ ಆರೋಗ್ಯ ಹಾಗೂ ವಯಸ್ಸಿನ ಬಗ್ಗೆ ದೃಢೀಕರಿಸಿಕೊಳ್ಳಬೇಕು. ಪಶುಪಾಲನಾ ಇಲಾಖೆ ವೈದ್ಯರಿಂದ ದೃಢೀಕರಿಸಿದ ನಂತರವೇ ಪ್ರಾಣಿವಧೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಾಣಿವಧೆಗೂ ಮುನ್ನ ಸೂಚಿಸಲಾಗಿರುವ ಎಲ್ಲ ನಿಯಮಗಳು ಮತ್ತು ಆದೇಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಆದೇಶದಲ್ಲಿ ತಿಳಿಸಿದ್ದಾರೆ.
***********
ಸೆ. 10 ಮತ್ತು 12ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಸೆ. 09 (ಕರ್ನಾಟಕ ವಾರ್ತೆ):- ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್.ಮಹದೇವಪ್ರಸಾದ್ ಅವರು ಸೆಪ್ಟೆಂಬರ್ 10 ಮತ್ತು 12ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಸೆ. 10ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಗುಂಡ್ಲುಪೇಟೆಯಲ್ಲಿ ಆಯೋಜಿಸಲಾಗಿರುವ ಶಿಕ್ಷಕರ ದಿನಾಚರಣೆ ಕಾರ್ಯಕಮದಲ್ಲಿ ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ಮೈಸೂರಿಗೆ ತೆರಳುವರು.
ಸೆ. 12ರಂದು ಬೆಳಿಗ್ಗೆ 12 ಗಂಟೆಗೆ ಚಾಮರಾಜನಗರ ತಾಲೂಕಿನ ಹರವೆಯಲ್ಲಿ ಮೊರಾರ್ಜಿ ದೇಸಾಯಿ ಶಾಲಾ ಪ್ರಾರಂಭೋತ್ಸವ, ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದ ಶಂಕುಸ್ಥಾಪನೆ ಹಾಗೂ ಹರವೆಯಿಂದ ತಮ್ಮಡಹಳ್ಳಿ ರಸ್ತೆ ಗುದ್ದಲಿಪೂಜೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 2 ಗಂಟೆಗೆ ಮೈಸೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.
ಸೆ. 11ರಂದು ನಗರದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ
ಚಾಮರಾಜನಗರ, ಸೆ. 09 (ಕರ್ನಾಟಕ ವಾರ್ತೆ):- ಅರಣ್ಯ ಇಲಾಖೆಯ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ಇವರ ವತಿಯಿಂದ ನಗರದ ಕೇಂದ್ರ ಸಸ್ಯಕ್ಷೇತ್ರದ ಅರಣ್ಯ ಹುತಾತ್ಮರ ಸ್ಮಾರಕ ಸ್ಥಳದಲ್ಲಿ ಸೆಪ್ಟೆಂಬರ್ 11 ರಂದು ಬೆಳಿಗ್ಗೆ 9.30 ಗಂಟೆಗೆ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮರಾಜನಗರ ವೃತ್ತ(ಪ್ರಾದೇಶಿಕ) ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ. ರವಿ ಅವರು ವಹಿಸಲಿದ್ದಾರೆ. ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಲಕ್ಷ್ಮಣ ಎಫ್, ಮಳವಳ್ಳಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್, ಜೈನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಧಿಕಾರಿ ಮತ್ತು ನಿರ್ದೇಶಕರಾದ ಎಸ್.ಎಸ್. ಲಿಂಗರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 10ರಂದು ಶಿಕ್ಷಕರ ದಿನಾಚರಣೆ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಚಾಮರಾಜನಗರ, ಸೆ. 09 (ಕರ್ನಾಟಕ ವಾರ್ತೆ):- ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ 2016-17ನೇ ಸಾಲಿನ ಪ್ರಶಸ್ತಿಗಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಚಾಮರಾಜನಗರ ತಾಲೂಕಿನ ಕುಂಭೇಶ್ವರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಎಸ್.ಬಿ. ರಾಜು, ಗುಂಡ್ಲುಪೇಟೆ ತಾಲೂಕಿನ ಶ್ರೀಕಂಠಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶಾಂತಪ್ಪ, ಯಳಂದೂರು ತಾಲೂಕಿನ ಯರಿಯೂರು-1ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ವಿ. ಪ್ರೇಮಕುಮಾರಿ, ಕೊಳ್ಳೇಗಾಲ ವಲಯ ಕೊಳ್ಳೇಗಾಲದ ಸರ್ಕಾರಿ ಟೌನ್ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಡಿ. ಭಾಗ್ಯ ಮತ್ತು ಹನೂರು ವಲಯ ಹನೂರಿನ ಅಂತೋಣಿಯರ್ ಕೋವಿಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಸ್ಯಾಮುವೆಲ್ ಕಮಲನಾಥನ್ ಅವರುಗಳು ಆಯ್ಕೆಯಾಗಿದ್ದಾರೆ.
ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕರಾದ ಎನ್. ಜಯಶೇಖರ್, ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿಯ ಕೆಂಪದೇವಮ್ಮನವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಕರಾದ ಉಮೇಶ್, ಯಳಂದೂರಿನ ಜೆ.ಎಸ್.ಎಸ್. ಪ್ರೌಢಶಾಲೆಯ ಸಹ ಶಿಕ್ಷಕರಾದ ಕೆ. ರವಿಕುಮಾರ್, ಕೊಳ್ಳೇಗಾಲದ ಎಸ್.ವಿ.ಕೆ. ಸರ್ಕಾರಿಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕರಾದ ದೊರೆಸ್ವಾಮಿ, ಹನೂರು ವಲಯದ ಮಣಗಳ್ಳಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕರಾದ ಜಯಶಂಕರ ಅವರುಗಳನ್ನು ಪ್ರೌಢಶಾಲಾ ವಿಭಾಗದಲ್ಲಿ ಆಯ್ಕೆ ಮಾಡಿದೆ.
ಆಯ್ಕೆಯಾಗಿರುವ ಶಿಕ್ಷಕರುಗಳು ಸೆಪ್ಟೆಂಬರ್ 10ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಜರಿದ್ದು ಪ್ರಶಸ್ತಿಯನ್ನು ಸ್ವೀಕರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*********************
ಚಾಮರಾಜನಗರದಲ್ಲಿ ಕರ್ನಾಟಕ ಬಂದ್ ಯಿಂದಾಗಿ ಹೂ ಮಾರುವ ವಯೋವೃದ್ದೆ ರಸ್ತೆಯಲ್ಲಿ ಕುಳಿತು ವ್ಯಾಪಾರ ಇಲ್ಲದೆ ಬಣಗುಡುತ್ತಿರುವ ದೃಶ್ಯ. ಚಿತ್ರ. ರಾಮಸಮುದ್ರ ಎಸ್.ವೀರಭದ್ರಸ್ವಾಮಿ
********************************************ಪ್ರಾಥಮಿಕ ಪ್ರೌಢಶಿಕ್ಷಣ ಹಂತ ಮಹತ್ತರ : ಸಚಿವರಾದ ಎಚ್.ಎಸ್.ಮಹದೇವಪ್ರಸಾದ್
ಚಾಮರಾಜನಗರ, ಸೆ. 10 (ಕರ್ನಾಟಕ ವಾರ್ತೆ):- ವಿದ್ಯಾರ್ಥಿ ಜೀವನದಲ್ಲಿ ಪಡೆಯುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಮೇಲೆ ವಿದ್ಯಾರ್ಥಿಗಳ ಭವಿಷ್ಯ ರೂಪಿತವಾಗಲಿದೆ. ಹೀಗಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದ ಶಿಕ್ಷಕರ ಜವಾಬ್ಧಾರಿ ಮಹತ್ತರವಾಗಿದೆ ಎಂದು ಸಹಕಾರ ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಎಚ್.ಎಸ್.ಮಹದೇವಪ್ರಸಾದ್ ಅಭಿಪ್ರಾಯಪಟ್ಟರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿದೆ. ಈ ಅವಧಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಸಮರ್ಥವಾಗಿ ಸಜ್ಜುಗೊಳಿಸುವ ಹೊಣೆಗಾರಿಕೆ ನಿಭಾಯಿಸಬೇಕಿದೆ. ಈ ಮೂಲಕ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪುಗೊಳಿಸಬೇಕಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಖಾಸಗಿ ಅನದಾನಿತ ಅನುದಾನ ರಹಿತ, ಸರ್ಕಾರಿ ಶಾಲೆಗಳು ಸೇರಿದಂತೆ ಒಟ್ಟು 5000 ಶಿಕ್ಷಕರಿದ್ದಾರೆ. ಒಟ್ಟು 1,35,000 ವಿದ್ಯಾರ್ಥಿಗಳು ಇದ್ದಾರೆ. ಅಂದಾಜು ಸರಾಸರಿ ಪ್ರತಿ 27 ರಿಂದ 30 ಮಕ್ಕಳಿಗೆ ಓರ್ವ ಶಿಕ್ಷಕರು ಇದ್ದಾರೆ. ಬೋಧಕವೃಂದಕ್ಕೆ ಮಕ್ಕಳನ್ನು ಸನ್ಮಾರ್ಗದಲ್ಲಿ ಸಮರ್ಪಕವಾಗಿ ಶಿಕ್ಷಣ ನೀಡುವ ಜವಾಬ್ಧಾರಿ ಇದೆ ಎಂದು ಸಚಿವರು ಅಭಿಪ್ರಾಯ ಪಟ್ಟರು.
ರಾಜ್ಯ ಸರ್ಕಾರ ಪ್ರಾಥಮಿಕ ಶಿಕ್ಷಣಕ್ಕೆ 17,373 ಕೋಟಿ ರೂಗಳನ್ನು ಮೀಸಲಿಟ್ಟಿದೆ. ಇದರ ಉದ್ದೇಶ ಎಲ್ಲಾ ಮಕ್ಕಳಿಗೂ ಸಮಾನವಾದ ಶಿಕ್ಷಣ ಲಭಿಸಬೇಕೆಂಬುದೇ ಆಗಿದೆ. ಯಾರು ಸಹ ಶಾಲೆಯಿಂದ ಹೊರಗುಳಿಯಬಾರದು. ಸಾಕ್ಷರತಾ ಪ್ರಮಾಣ ಏರಿಕೆಯಾಗಬೇಕೆಂಬುದು ಸಹ ಮುಖ್ಯ ಆಶಯವಾಗಿದೆ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿಯವರ ಸಂಸಧೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ ಗುರು ಇದ್ದರೆ ಮಾತ್ರ ಗುರಿಕಾಣಲು ಸಾಧ್ಯ. ಶಿಕ್ಷಕರ ವೃತ್ತಿಯನ್ನು ಅತ್ಯಂತ ಉನ್ನತ ದೃಷ್ಟಿಯಿಂದ ಕಾಣಲಾಗುತ್ತದೆ. ವಿದ್ಯೆ ಹೇಳಿಕೊಟ್ಟ ಗುರುಗಳನ್ನು ವಿದ್ಯಾರ್ಥಿಗಳು ಬಹುಕಾಲ ಸ್ಮರಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳನ್ನುತಿದ್ದಿ ಬೆಳಸುವ ಅವಕಾಶ ಶಿಕ್ಷಕರಿಗೆ ಇದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಮಾತನಾಡಿ ಸ್ವಾತಂತ್ರ್ಯ ನಂತರ ಶಿಕ್ಷಣದ ಅವಕಾಶ ವಿಸ್ತಾರವಾಗಿದೆ. ಎಲ್ಲರಿಗೂ ಶಿಕ್ಷಣ ಪಡೆಯುವ ಸೌಲಭ್ಯಗಳು ಲಭ್ಯವಾಗುತ್ತಿವೆ. ಇದರಿಂದ ಒಳ್ಳೆಯ ಹುದ್ದೆಗಳನ್ನು ಅಲಂಕರಿಸುವ ಸದಾವಕಾಶವು ದೊರೆಯುತ್ತಿದೆ, ಶಿಕ್ಷಕರು ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಜಿಲ್ಲೆಯೂ ರಾಜ್ಯದಲ್ಲೆ ಮೊದಲ ಸ್ಥಾನ ಗಳಿಸುವಂತಾಗಲು ಸಹಕರಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲ ಪಾಟಿ ಅವರು ಮಾತನಾಡಿ ಜಿಲ್ಲೆಯಲ್ಲಿ ಕಲಿಕಾ ಮಟ್ಟವನ್ನು ಉತ್ತಮ ಪಡಿಸಿ ಪಲಿತಾಂಶ ಸುಧಾರಿಸುವ ಸಲುವಾಗಿ ಸ್ಮಾರ್ಟ್ ಯೋಜನೆ ಅನುಷ್ಠಾನವಾಗುತ್ತಿದೆ. ಬದ್ಧತೆ ಶಿಸ್ತು, ಸ್ಪಂದನಾತ್ಮಕ ಭೋಧನೆಯ ಮೂಲಕ ಶಿಕ್ಷಕರು ಬಾವಿ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ನಿರ್ವಹಿಸಿ ಮಾದರಿಯಾಗಬೇಕಿದೆ ಎಂದರು.
ಇದೇ ವೇಳೆ ರಾಜ್ಯಮಟ್ಟದ ಶಿಕ್ಷಕರ ಪ್ರಶಸ್ತಿ ಪಡೆದಿರುವ ಭಾಗ್ಯರೇಖ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರನ್ನು ಹಾಗೂ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಪಂಚಾಯತ್‍ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ.ಸದಾಶಿವ ಮೂರ್ತಿ, ನಗರ ಸಭೆ ಅಧ್ಯಕ್ಷರಾದ ಎಸ್.ಎನ್.ರೇಣುಕಾ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ.ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫಿ ಮಾತನಾಡಿದರು.
ನಗರಸಭೆ ಉಪಾಧ್ಯಕ್ಷರಾದ ಆರ್.ಎಂ.ರಾಜಪ,್ಪ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್.ಬಾಲರಾಜು, ಕೆರೆಹಳ್ಳಿ ನವೀನ್, ಶಶಿಕಲಾ ಸೋಮಲಿಂಗಪ್ಪ, ಮಾವು ಅಭಿವೃದ್ಧಿನಿಗಮದ ನಿರ್ದೇಶಕರಾದ ಬಿ.ಕೆ.ರವಿಕುಮಾರ್, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್.ಜೈನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ರಂಗಸ್ವಾಮಿ, ಶಿಕ್ಷಕರ ಸಂಘದ ಪದಾಧಿಕಾರಿಗಳು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಕ್ರೀದ್ ಹಿನ್ನಲೆ: ಕಸಾಯಿಖಾನೆಗಳಲ್ಲೆ ಪ್ರಾಣಿವಧೆ ಮಾಡಲು ಡಿಸಿ ಆದೇಶ
ಚಾಮರಾಜನಗರ, ಸೆ. 10 (ಕರ್ನಾಟಕ ವಾರ್ತೆ):- ಮುಂಬರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪ್ರಾಣಿವಧೆಯನ್ನು ತಾತ್ಕಾಲಿಕ ಕಸಾಯಿಖಾನೆಯಲ್ಲೆ ಮಾಡುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪಶುಪಾಲನಾ ಇಲಾಖೆ ಅಧಿಕಾರಿಗಳು, ನಗರಸಭೆ, ಪುರಸಭೆ ಇನ್ನಿತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಬಕ್ರೀದ್ ಹಬ್ಬ ಆಚರಣೆ ಸಂಬಂಧ ಕೈಗೊಳ್ಳಬೇಕಿರುವ ನಿಯಮಗಳ ಪಾಲನೆ ಕುರಿತ ಆದೇಶ ಹೊರಡಿಸಿದ್ದಾರೆ.
ಬಕ್ರೀದ್ ಹಬ್ಬದ ಸಮಯದಲ್ಲಿ ಪ್ರಾಣಿವಧೆಯನ್ನು ಕಡ್ಡಾಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಡುವಂತಿಲ್ಲ. ತಾತ್ಕಾಲಿಕ ಕಸಾಯಿಖಾನೆಗಳಲ್ಲಿಯೇ ಮಾಡಬೇಕು. ಪ್ರಾಣಿವಧೆಗೂ ಮೊದಲು ಪಶುವೈದ್ಯರಿಂದ ಪ್ರಾಣಿಯ ಆರೋಗ್ಯ ಹಾಗೂ ವಯಸ್ಸಿನ ಬಗ್ಗೆ ದೃಢೀಕರಿಸಿಕೊಳ್ಳಬೇಕು. ಪಶುಪಾಲನಾ ಇಲಾಖೆ ವೈದ್ಯರಿಂದ ದೃಢೀಕರಿಸಿದ ನಂತರವೇ ಪ್ರಾಣಿವಧೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಾಣಿವಧೆಗೂ ಮುನ್ನ ಸೂಚಿಸಲಾಗಿರುವ ಎಲ್ಲ ನಿಯಮಗಳು ಮತ್ತು ಆದೇಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಆದೇಶದಲ್ಲಿ ತಿಳಿಸಿದ್ದಾರೆ.