Monday, 19 September 2016

24-08-2016 ರಿಂದ 31-08-2016 ರವೆಗೆ ಚಾಮರಾಜನಗರ ಸುದ್ದಿಗಳು









ಆ. 24ರಂದು ನಗರದಲ್ಲಿ ದಲಿತ ವಚನಕಾರರ ಜಯಂತಿ ಆಚರಣೆ ಚಾಮರಾಜನಗರ, ಆ. 23 (ಕರ್ನಾಟಕ ವಾರ್ತೆ):– ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮವನ್ನು ಆಗಸ್ಟ್ 24ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಗತಿಪರ ಮಠಾಧೀಶರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಪೀಠಾಧ್ಯಕ್ಷರಾದ ಡಾ. ಜ್ಞಾನಪ್ರಕಾಶ ಸ್ವಾಮಿ ಅವರು ದಿವ್ಯ ಸಾನಿಧ್ಯ ವಹಿಸುವರು. ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವÀಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ವಿಧಾನ ಪರಿಷತ್‍ನ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜ್), ಆರ್. ಧರ್ಮಸೇನ, ಕೆ.ಟಿ. ಶ್ರೀಕಂಠೇಗೌಡ, ನಗರಸಭೆ ಅಧ್ಯಕ್ಷರಾದ ಎಸ್. ಎನ್. ರೇಣುಕಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್. ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳುವರು ಎಂದು ಪ್ರಕಟಣೆ ತಿಳಿಸಿದೆ. ಮಂಡ್ಯದ ಸರ್ ಎಂ ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕರಾದ ಡಾ. ಹೊಂಬಯ್ಯ ಮುಖ್ಯ ಭಾಷಣಕಾರರಾಗಿ ಆಗಮಿಸುವರು. ಬೆಳಿಗ್ಗೆ 9.30 ಗಂಟೆಗೆ ರಾಯಚೂರಿನ ಖ್ಯಾತ ಅಂತರ ರಾಷ್ಟ್ರೀಯ ವಚನ ಸಂಗೀತ ಗಾಯಕರಾದ ಅಂಬಯ್ಯನುಲಿ ಮತ್ತು ತಂಡದವರಿಂದ ವಚನ ಗಾಯನ ಕಾರ್ಯಕ್ರಮ ಏರ್ಪಾಡು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಆ. 26ರಂದು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಕಟ್ಟಡದ ಶಂಕುಸ್ಥಾಪನೆ ಸಮಾರಂಭ ಚಾಮರಾಜನಗರ, ಆ. 23 (ಕರ್ನಾಟಕ ವಾರ್ತೆ):– ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಕಟ್ಟಡದ ಶಂಕುಸ್ಥಾಪನಾ ಸಮಾರಂಭವು ಆಗಸ್ಟ್ 26ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿಯಿರುವ ಚನ್ನಿಪುರದ ಮೋಳೆ ಬಡಾವಣೆಯಲ್ಲಿ ನೆರವೇರಲಿದೆ. ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಶಿಲಾನ್ಯಾಸ ನೆರವೇರಿಸುವರು. ನಗರಾಭಿವೃದ್ಧಿ ಹಾಗೂ ಹಜ್ ಸಚಿವರಾದ ಆರ್.ರೋಷನ್ ಬೇಗ್ ಸಮಾರಂಭ ಉದ್ಘಾಟಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್‍ನ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜ್), ಆರ್. ಧರ್ಮಸೇನ, ನಗರಸಭೆ ಅಧ್ಯಕ್ಷರಾದ ಎಸ್. ಎನ್. ರೇಣುಕಾ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಾದ ವಿ. ಪೊನ್ನುರಾಜ್, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯ ಎಂ.ವಿ. ರಂಗೇಶ್, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್,ಜೈನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್. ಎಂ. ರಾಜಪ್ಪ, ನಗರಸಭೆ ಸದಸ್ಯರಾದ ಮಹೇಶ್, ಪ್ರಾಧಿಕಾರದ ಅಧಿಕಾರಿ ಹಾಗೂ ನಾಮನಿರ್ದೇಶಿತ ಸದಸ್ಯರಾದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಚ್. ಪ್ರಸಾದ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇನಾಯತ್ ಉಲ್ಲಾ ಷರೀಫ್, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಎಚ್.ಕೆ. ರಮೇಶ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಿನ್ನಸ್ವಾಮಿ, ನಗರಸಭೆ ಪೌರಾಯುಕ್ತರಾದ ಎಂ. ರಾಜಣ್ಣ, ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರಾದ ಎಸ್.ಎಚ್. ಚಲುವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸುದರ್ಶನ ಗೌಡ, ಶ್ರೀಕಾಂತ್, ಎಂ. ಆಶಾ, ಶ್ರೀನಿವಾಸ ಮುಖ್ಯ ಅತಿಥಿಗಳಾಗಿ ಪಾಲ್ಗೊಳುವರು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫಿ ಅವರು ತಿಳಿಸಿದ್ದಾರೆ. ಆ. 24ರಂದು ರಾಜ್ಯ ಕಸಾಪ ಅಧ್ಯಕ್ಷರ ಜಿಲ್ಲಾ ಪ್ರವಾಸ ಚಾಮರಾಜನಗರ, ಆ. 23 (ಕರ್ನಾಟಕ ವಾರ್ತೆ):- ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರು ಆಗಸ್ಟ್ 24ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಅಂದು ಮಧ್ಯಾಹ್ನ 12 ಗಂಟೆಗೆ ನಗರಕ್ಕೆ ಆಗಮಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ಜಿಲ್ಲಾ ಗ್ರಂಥಾಲಯ ಇಲಾಖೆಯ ಸಹಕಾರದೊಂದಿಗೆ ಗ್ರಂಥಾಲಯ ಉದ್ಘಾಟನೆ ನೆರವೇರಿಸುವರು. ಮಧ್ಯಾಹ್ನ 12.15 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರು ಆಯೋಜಿಸಿರುವ ಚುನಾವಣೆ ಸುಧಾರಣೆ ಹಾಗೂ ನಿಬಂಧನೆ ತಿದ್ದುಪಡಿ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಸಮಿತಿಯ ಸಂಚಾಲಕರಾದ ಎನ್.ಕೆ. ನಾರಾಯಣ ಅವರೊಂದಿಗೆ ಭಾಗವಹಿಸುವರು. ಮಧ್ಯಾಹ್ನ 2.30 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಮಲೆಯೂರು ಗುರುಸ್ವಾಮಿಯವರ ಸಾಹಿತ್ಯ ಸುವರ್ಣಾವತಿಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 4.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಹಿರಿಯ ಸಾಹಿತಿಗಳು, ಕಲಾವಿದರೊಂದಿಗೆ ಸಮಾಲೋಚನೆ ನಡೆಸುವರು. ಬಳಿಕ ಬೆಂಗಳೂರಿಗೆ ತೆರಳುವರೆಂದು ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಹಾಗೂ ಸಂಯೋಜನಾಧಿಕಾರಿ ಬಿ.ಎನ್. ಪರಡ್ಡಿ ತಿಳಿಸಿದ್ದಾರೆ. 233 ಕೋಟಿ ರೂ. ಪ್ರಸ್ತಾವನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ಪ್ರಸಕ್ತ ಸಾಲಿನಲ್ಲಿಯೇ 24 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆ : ಉಸ್ತುವಾರಿ ಸಚಿವರಾದ ಮಹದೇವಪ್ರಸಾದ್ ಹರ್ಷ ಚಾಮರಾಜನಗರ, ಆ. 24 (ಕರ್ನಾಟಕ ವಾರ್ತೆ):– ಚಾಮರಾಜನಗರ, ಯಳಂದೂರು ಹಾಗೂ ನಂಜನಗೂಡು ತಾಲೂಕಿನ ಒಟ್ಟು 24 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿಯೇ ಕೈಗೆತ್ತಿಕೊಳ್ಳಲು 233 ಕೋಟಿ ರೂ.ಗಳ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಚಾಮರಾಜನಗರ ತಾಲೂಕಿನ 21, ಯಳಂದೂರು ತಾಲೂಕಿನ 1 ಹಾಗೂ ನಂಜನಗೂಡು ತಾಲೂಕಿನ 2 ಕೆರೆಗಳು ಸೇರಿದಂತೆ ಒಟ್ಟು 24 ಕೆರೆಗಳಿಗೆ ಕುಡಿಯುವ ನೀರನ ಉದ್ದೇಶಕ್ಕಾಗಿ ಸುತ್ತೂರು ಗ್ರಾಮದ ಬಳಿ ಕಬಿನಿ ನದಿಯಿಂದ ನೀರನ್ನು ಎತ್ತಿ ಕೆರೆಗಳಿಗೆ ನೀರು ತುಂಬಿಸಲು ಉದ್ದೇಶಿಸಲಾಗಿದೆ. ಈ ಮೂರೂ ತಾಲೂಕಿನ ಸುತ್ತಮುತ್ತಲ 33 ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ 24 ಕೆರೆಗಳಲ್ಲಿ ಕಳೆದ 30 ವರ್ಷಗಳಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಬವಣೆ ಪಡುವಂತಾಗಿತ್ತು. ಅಲ್ಲದೆ ಅಂತರ್ಜಲ ಮಟ್ಟವು ಕುಸಿದಿತ್ತು. ಇದನ್ನು ಮನಗಂಡು ರಾಜ್ಯ ಸರ್ಕಾರ ಕೆರೆಗಳಿಗೆ ನೀರು ತುಂಬಿಸಲು ಮುಂದಾಗಿದೆ. ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಕೆರೆ, ಯಡಿಯೂರು ಅಡ್ಡಹಳ್ಳ ಕೆರೆ, ದೊಡ್ಡರಾಯಪೇಟೆ ಕೆರೆ, ಕೋಡಿಮೊಳೆ ಕೆರೆ, ಮರಗದ ಕೆರೆ, ಹೊಂಡರಬಾಳು ಕೆರೆ, ಜನ್ನೂರು ಕೆರೆ, ಬಾಗಲಿ ಕೆರೆ, ಹೊಮ್ಮ ಕೆರೆ, ಕಣ್ಣೇಗಾಲ ಕೆರೆ, ಬ್ಯಾಡಮೂಡ್ಲುವಿನ ಚಿಕ್ಕ ಕೆರೆ, ಸಿಂಡಿಗೆರೆ ಕೆರೆ, ನಗರದ ಕೆರೆ, ದೊಡ್ಡ ಕೆರೆ, ಬಂಡಿಗೆರೆ ಕೆರೆ, ಸರಗೂರು ಮೋಳೆ ಕೆರೆ, ಕುಂಬೇಶ್ವರ ಕಾಲೋನಿಯ ಹೆಬ್ಬಳ್ಳ ಕೆರೆ, ಮಲ್ಲದೇವನಹಳ್ಳಿ ಕೆರೆ, ನಾಗವಳ್ಳಿ ಕೆರೆ, ಕಾಗಲವಾಡಿ ಕೆರೆ, ಪುಟ್ಟಪ್ಪನಪುರ ಕೆರೆ, ಯಳಂದೂರು ತಾಲೂಕಿನ ಅಂಬಳೆ ಕೆರೆ, ನಂಜನಗೂಡು ತಾಲೂಕಿನ ತಗಡೂರು ಗ್ರಾಮದ ಕುಂಕೆರೆ, ಚಿಕ್ಕಹೊಮ್ಮ ಕೆರೆಗಳಿಗೆ ಸದರಿ ಯೋಜನೆಯಿಂದ ನೀರು ಲಭ್ಯವಾಗಲಿದೆ. ಕೆರೆಗಳಿಗೆ ನೀರು ತುಂಬಿಸುವ ಈ ಪ್ರಸಕ್ತ ಯೋಜನೆ ಜಿಲ್ಲೆಯ ಬಹು ಮುಖ್ಯ ಯೋಜನೆಯಾಗಿದೆ. ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಬಳಿ ಕಬನಿ ನದಿಯಿಂದ 3 ಹಂತದಲ್ಲಿ 51.13 ಕಿ.ಮೀ. ಉದ್ದದ ರೈಸಿಂಗ್ ಮೈನ್ ಮೂಲಕ 0.628 ಟಿಎಂಸಿ ನೀರನ್ನು 72.00 ಕ್ಯೂಸೆಕ್ಸ್‍ನಂತೆ ಜೂನ್‍ನಿಂದ ಸೆಪ್ಟೆಂಬರ್‍ವರೆಗೆ 101 ದಿನ ಮಳೆಗಾಲದ ಅವಧಿಯಲ್ಲಿ ನೀರನ್ನು ಎತ್ತಿ ಮೂರೂ ತಾಲೂಕಿನ 24 ಕೆರೆಗಳಿಗೆ ಹರಿಸಲಾಗುತ್ತದೆ. ಈ ಮೂಲಕ 33 ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲು ಉದ್ದೇಶಿಸಲಾಗಿದೆ. ಸದರಿ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿಯೇ ಕೈಗೆತ್ತಿಕೊಳ್ಳಲು 233 ಕೋಟಿ ರೂ. ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಲು ಇಂದು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿರುವುದನ್ನು ಜಿಲ್ಲೆಯ ಜನರಿಗೆ ತಿಳಿಸಲು ಹರ್ಷವಾಗುತ್ತದೆ ಎಂದು ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಸಂತಸ ವ್ಯಕ್ತಪಡಿಸಿದ್ದಾರೆ. ಧೈರ್ಯ, ಸಾಹಸ ಪ್ರದರ್ಶಿಸಿದ ಮಕ್ಕಳಿಗÉ ನೀಡಲಾಗುವ ಹೊಯ್ಸಳ, ಕೆಳದಿಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ ಚಾಮರಾಜನಗರ, ಆ. 24 (ಕರ್ನಾಟಕ ವಾರ್ತೆ):– ಅಸಾಧಾರಣ ಧೈರ್ಯ ಸಾಹಸ ಪ್ರದರ್ಶಿಸಿದ 6 ರಿಂದ 15ರ ವಯೋಮಿತಿಯೊಳಗಿನ ಬಾಲಕ ಬಾಲಕಿಯರಿಗೆ ನೀಡಲಾಗುವ 2016-17ನೇ ಸಾಲಿನ ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಮಕ್ಕಳಿಗೆ 10 ಸಾವಿರ ರೂ ನಗದು ಮತ್ತು ಪ್ರಶಸ್ತಿ ಪತ್ರವನ್ನು ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವುದು. 2015ರ ಆಗಸ್ಟ್‍ನಿಂದ 2016ರ ಜುಲೈ ಅವಧಿಯೊಳಗೆ ಅಸಾಧಾರಣ ಧೈರ್ಯ ಶೌರ್ಯ ಪ್ರದರ್ಶಿಸಿರುವ ಪ್ರಕರಣ ಜಿಲ್ಲಾಮಟ್ಟದಲ್ಲಿ ಗುರುತಿಸಿರಬೇಕು. ಈ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿರಬೇಕು. ಶೌರ್ಯ ಸಾಧನೆ ಕುರಿತ ಬಗ್ಗೆ ಪೊಲೀಸ್ ಇಲಾಖೆಯ ತನಿಖಾ ವರದಿ (ಎಫ್‍ಐಆರ್), ಜನ್ಮ ದಿನಾಂಕದ ಬಗ್ಗೆ ನಗರಸಭೆ, ಗ್ರಾಮಲೆಕ್ಕಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ, ಶಾಲೆಯಿಂದ ಪಡೆದ ವರ್ಗಾವಣೆ ಪತ್ರದಂತಹ ದಾಖಲೆ ಇರಬೇಕು. ಪತ್ರಿಕಾ ಪ್ರಕಟಣೆ ಭಾವಚಿತ್ರ ಇತರೆ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಡೆದು ಆಗಸ್ಟ್ 30ರೊಳಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. ಉದ್ದಿಮೆ ಪರವಾನಗಿ ಶುಲ್ಕ ಪರಿಷ್ಕರಣೆ : ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಚಾಮರಾಜನಗರ, ಆ. 24 (ಕರ್ನಾಟಕ ವಾರ್ತೆ):– ಚಾಮರಾಜನಗರ ನಗರಸಭೆಯು ಉದ್ದಿಮೆ ಪರವಾನಗಿ ಶುಲ್ಕ ಪರಿಷ್ಕರಣೆ ವಿವರವನ್ನು ನಗರಸಭಾ ಕಚೇರಿ ಪ್ರಕಟಣಾ ಫಲಕದಲ್ಲಿ ಪ್ರದರ್ಶಿಸಿದೆ. ಶುಲ್ಕ ಪರಿಷ್ಕರಣೆ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಉದ್ದಿಮೆದಾರರು ಒಂದು ತಿಂಗಳೊಳಗೆ ಲಿಖಿತವಾಗಿ ನಗರಸಭೆ ಕಚೇರಿಗೆ ಸಲ್ಲಿಸಬಹುದಾಗಿದೆ. ನಗರಸಭೆಯಿಂದ ಉದ್ದಿಮೆ ಪರವಾನಗಿಗಳ ಶುಲ್ಕವನ್ನು ಪ್ರತಿ 5 ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡಬೇಕಿದೆ. ಈಗಾಗಲೇ 5 ವರ್ಷಗಳ ಅವಧಿ ಪೂರ್ಣವಾಗಿರುವ ಹಿನ್ನೆಲೆಯಲ್ಲಿ ಉದ್ದಿಮೆಗಳ ಶುಲ್ಕವನ್ನು ಪರಿಷ್ಕರಣೆ ಮಾಡಿ ಕಳೆದ ಜುಲೈ 8ರಂದು ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಮಂಡಿಸಲಾಗಿದೆ. ಕೆಲ ಬದಲಾವಣೆಗಳೊಂದಿಗೆ ಶುಲ್ಕ ಪರಿಷ್ಕರಣೆ ಮಾಡಲಾಗಿದೆ. ಈ ವಿವರವನ್ನು ನಗರಸಭೆ ಕಚೇರಿಯ ಪ್ರಕಟಣಾ ಫಲಕದಲ್ಲಿ ಪ್ರದರ್ಶಿಸಲಾಗಿದೆ. ಉದ್ದಿಮೆದಾರರು ಪರಿಶೀಲಿಸಿ ಆಕ್ಷೇಪಣೆಗಳಿದ್ದಲ್ಲಿ ಒಂದು ತಿಂಗಳೊಳಗೆ ಲಿಖಿತವಾಗಿ ನಗರಸಭೆ ಕಚೇರಿಗೆ ಸಲ್ಲಿಸಬಹುದು. ಯಾವುದೇ ಆಕ್ಷೇಪಣೆಗಳು ಬರದಿದ್ದಲ್ಲಿ ಪರಿಷ್ಕರಿಸಿರುವ ಉದ್ದಿಮೆ ಶುಲ್ಕವನ್ನು ಅಂತಿಮಗೊಳಿಸಲಾಗುವುದು ಎಂದು ಪೌರಾಯುಕ್ತರಾದ ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ. 27ರಂದು ಯಳಂದೂರಿನಲ್ಲಿ ದಸರಾ ಕ್ರೀಡಾಕೂಟ ಉದ್ಘಾಟನೆ ಚಾಮರಾಜನಗರ, ಆ. 24 (ಕರ್ನಾಟಕ ವಾರ್ತೆ):– ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಯಳಂದೂರು ತಾಲೂಕುಮಟ್ಟದ ದಸರಾ ಕ್ರೀಡಾಕೂಟವನ್ನು ಆಗಸ್ಟ್ 27ರಂದು ಬೆಳಿಗ್ಗೆ 10.30 ಗಂಟೆಗೆ ಯಳಂದೂರು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದೆ. ಶಾಸಕರಾದ ಎಸ್. ಜಯಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರವಿ ಅವರು ಅಧ್ಯಕ್ಷತೆ ವಹಿಸುವರು. ತಾಲೂಕು ಪಂಚಾಯಿತಿ ಅಧ್ಯಕ್ಷರಾದ ನಂಜುಂಡಯ್ಯ, ಜಿಲ್ಲಾ ಪಂಚಾಯತ್ ಸದಸ್ಯರಾದ ಜೆ. ಯೋಗೇಶ್, ಎನ್. ಉಮಾವತಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ನಿಂಗರಾಜು, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪದ್ಮಾವತಿ, ಪಟ್ಟಣ ಪಂಚಾಯಿತಿ ಸದಸ್ಯರಾದ ನಾಗರತ್ನಮ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ. ಆ. 29ರಂದು ಭೂಮಾಪಕರಾಗಿ ಪರವಾನಗಿ ಪಡೆಯಲು ಆಯ್ಕೆಯಾದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಚಾಮರಾಜನಗರ, ಆ. 22 (ಕರ್ನಾಟಕ ವಾರ್ತೆ):- ಪರವಾನಗಿ ಭೂಮಾಪಕರಾಗಿ ಪರವಾನಗಿ ಪಡೆಯಲು ಆಯ್ಕೆಯಾಗಿದ್ದು ಕಳೆದ ಜುಲೈ 28ರಂದು ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಲು ಸಾಧ್ಯವಾಗದೇ ಇರುವ ಅಭ್ಯರ್ಥಿಗಳಿಗೆ ಆಗಸ್ಟ್ 29ರಂದು ಮೂಲ ದಾಖಲಾತಿಗಳ ಪರಿಶೀಲನೆ ಮಾಡಲಾಗುತ್ತದೆ. ಪರವಾನಗಿ ಭೂಮಾಪಕರಾಗಿ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ದಾಖಲೆ ಪರಿಶೀಲನೆಯನ್ನು ಕಳೆದ ಜುಲೈ 28ರಂದು ನಡೆಸಲಾಗಿತ್ತು. ಅಂದು ಕರ್ನಾಟಕ ಬಂದ್ ಇದ್ದುದರಿಂದ ಕೆಲ ಅಭ್ಯರ್ಥಿಗಳು ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಾಜರಾಗದ ಅಭ್ಯರ್ಥಿಗಳಿಗೆ ಆಗಸ್ಟ್ 29ರಂದು ಮೂಲ ದಾಖಲಾತಿ ಪರಿಶೀಲಿಸಲಾಗುತ್ತದೆ. ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಸೂಚನಾ ಪತ್ರ ರವಾನಿಸಲಾಗಿದೆ. ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗದ ಅಭ್ಯರ್ಥಿಗಳು ಆಗಸ್ಟ್ 29ರಂದು ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ. ಆ. 26ರಂದು ತಾ.ಪಂ. ಸಾಮಾನ್ಯ ಸಭೆ ಚಾಮರಾಜನಗರ, ಆ. 24 (ಕರ್ನಾಟಕ ವಾರ್ತೆ):– ಚಾಮರಾಜನಗರ ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆಯು ಅಧ್ಯಕ್ಷರಾದ ಎಚ್.ವಿ. ಚಂದ್ರು ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 26ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಲ್ಲೆ ಮಾಡಿದ ನಾಲ್ವರಿಗೆ ದಂಡ ಚಾಮರಾಜನಗರ, ಆ. 24 (ಕರ್ನಾಟಕ ವಾರ್ತೆ):– ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಚಾಕು ಹಾಗೂ ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ ನಾಲ್ವರಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದೆ. 2011ರ ಆಗಸ್ಟ್ 11ರಂದು ಬೆಳಿಗ್ಗೆ ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಸೋಮಣ್ಣ ಎಂಬುವವರನ್ನು ಹಳೇ ದ್ವೇಷದ ಹಿನ್ನೆಲೆಯಲ್ಲಿ ಆರೋಪಿತರಾದ ಆನಂದರಾಜು, ಪುಟ್ಟಮಾದಯ್ಯ, ಜಯಮ್ಮ ಮತ್ತು ಆಕೆಯ ಪತಿ ಬಸವಣ್ಣ ಅವರು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಸೋಮಣ್ಣ ಅವರ ಮೇಲೆ ಚಾಕು ಹಾಗೂ ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದು ರುಜುವಾತಾಗಿದೆ ಎಂದು ತೀರ್ಮಾನಿಸಿ ಆಪಾದಿತರಿಗೆ 10400 ರೂ. ದಂಡ ವಿಧಿಸಿ ಪ್ರÀದಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್. ಮಳವಳ್ಳಿ ಅವರು ಕಳೆದ ಆಗಸ್ಟ್ 17ರಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು. ಸೆ.1ರಂದು ಮದ್ದೂರಿನಲ್ಲಿ ಅಂಚೆ ಸಂತೆ ಚಾಮರಾಜನಗರ, ಆ. 24 (ಕರ್ನಾಟಕ ವಾರ್ತೆ):– ಅಂಚೆ ಇಲಾಖೆಯು ಯಳಂದೂರು ತಾಲೂಕಿನ ಮದ್ದೂರು ಗ್ರಾಮದಲ್ಲಿ ಸೆಪ್ಟೆಂಬರ್ 1ರಂದು ಅಂಚೆ ಸಂತೆ ಹಮ್ಮಿಕೊಂಡಿದೆ. ಈ ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ, ಇತರೆ ಅಂಚೆ ಜೀವವಿಮೆ ಇನ್ನಿತರ ಅಂಚೆ ಯೋಜನೆಗಳನ್ನು ಸ್ವೀಕರಿಸಲಾಗುತ್ತದೆ. ಮದ್ದೂರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಅಂಚೆಸಂತೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ಕೋರಿದ್ದಾರೆ. ಆ. 26ರಂದು ಮಹದೇಶ್ವರ ಬೆಟ್ಟದಲ್ಲಿ ಗೋಲಕ ಹಣ ಎಣಿಕೆ ಚಾಮರಾಜನಗರ, ಆ. 24 (ಕರ್ನಾಟಕ ವಾರ್ತೆ):– ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಗೋಲಕಗಳ ಹಣ ಎಣಿಕೆ ಕಾರ್ಯವು ಆಗಸ್ಟ್ 26ರಂದು ಬೆಳಿಗ್ಗೆ ನಡೆಯಲಿದೆ. ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ಸಹಯೋಗದೊಂದಿಗೆ ಎಣಿಕೆ ಕಾರ್ಯವನ್ನು ನಡೆಸಲಾಗುವುದೆಂದು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೆ. 25ರೊಳಗೆ ವಾರ್ಷಿಕ ಮಹಾಸಭೆ ನಡೆಸಲು ಸಹಕಾರ ಸಂಘಗಳಿಗೆ ಸೂಚನೆ ಚಾಮರಾಜನಗರ, ಆ. 24 (ಕರ್ನಾಟಕ ವಾರ್ತೆ):– ಜಿಲ್ಲೆಯಲ್ಲಿರುವ ಎಲ್ಲ ಸಹಕಾರ ಸಂಘಗಳು ಸೆಪ್ಟೆಂಬರ್ 25ರೊಳಗೆ ವಾರ್ಷಿಕ ಮಹಾಸಭೆ ನಡೆಸಿ ಲೆಕ್ಕ ಪರಿಶೀಲನಾ ವರದಿಯನ್ನು ಮಂಡಿಸುವಂತೆ ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ. ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ನಿಯಮಗಳು 1960ರ ನಿಯಮ 14 (ಎಜೆ) ಪ್ರಕಾರ 2015-16ನೇ ಸಾಲಿನ ವಾರ್ಷಿಕ ಮಹಾ ಸಭೆಯನ್ನು ಸೆಪ್ಟೆಂಬರ್ 25ರೊಳಗೆ ನಡೆಸಬೇಕು. ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಬೇಕು. ಇಲ್ಲವಾದಲ್ಲಿ ಸಹಕಾರ ಸಂಘಗಳ ಕಾಯಿದೆ ಹಾಗೂ ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರಾದ ಪಿ. ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |************** ಟೊಮ್ಯಾಟೋ-ಸಾಮಥ್ರ್ಯವೃದ್ಧಿ ಕಾರ್ಯಕ್ರಮ ಮತ್ತು ವಸ್ತುಪ್ರದರ್ಶನ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಅಡಿಯಲ್ಲಿ ಬರುವ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ತೋಟಗಾರಿಕೆ ಮಹಾವಿದ್ಯಾಲಯ, ಮೈಸೂರು ಇಲ್ಲಿ 24.0.2016 ರಂದು ಟೊಮ್ಯಾಟೋ ಬೆಳೆಯ ವಾಣಿಜ್ಯ ಉತ್ಪಾದನಾ ತಾಂತ್ರಿಕತೆಗಳ ಕುರಿತು ಒಂದು ದಿನದ ರೈತರ ತರಬೇತಿ, ಸಂವಾದ ಹಾಗೂ ವಸ್ತುಪ್ರದರ್ಶನವನ್ನು ಮೈಸೂರು, ಚಾಮರಾಜನಗರ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಟೊಮ್ಯಾಟೋ ಕೃಷಿಕರ ಅನುಕೂಲಕ್ಕಾಗಿ ಆಯೋಜಿಸಲಾಗಿತ್ತು. ಉದ್ಘಾಟನೆಯನ್ನು ನೆರವೇರಿಸಿದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಪ್ರಧಾನ ವಿಜ್ಞಾನಿಗಳಾದ ಡಾ. ಶಂಕರ್ ಎಸ್ ಹೆಬ್ಬಾರ್ ಟೊಮ್ಯಾಟೋ ಬೆಳೆಯಲ್ಲಿ ಸರಿಯಾದ ಯೋಜನೆ ಹಾಗೂ ಹೆಚ್ಚಿನ ಉತ್ಪಾದನೆಯಿಂದಾಗಿ ದರದ ಅಸ್ಥಿರತೆ ಸಾಮಾನ್ಯವಾದುದು, ಆದ್ದರಿಂದ ರೈತರು ಧೃತಿಗೆಡಬೇಕಾಗಿಲ್ಲ ಎಂದು ಕರೆನೀಡಿದರು ಮತ್ತು ಇದೇ ಸಂದರ್ಭದಲ್ಲಿ ಅವರು ಟೊಮ್ಯಾಟೋ ಬೆಳೆಯ ಸುಧಾರಿತ ಉತ್ಪಾದನಾ ತಂತ್ರಜ್ಞಾನ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ರೈತರಿಗೆ ಉಪಯುಕ್ತವಾಗುವ “ಟೊಮ್ಯಾಟೋ : ಕೃಷಿಕರ ಮಾರ್ಗದರ್ಶಿ” ಎಂಬ ತಾಂತ್ರಿಕ ಕೈಪಿಡಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮತ್ತೋರ್ವ ಪ್ರಧಾನ ವಿಜ್ಞಾನಿಗಳಾದ ಡಾ. ಬಾಲಕೃಷ್ಣರವರು ಬಿಡುಗಡೆ ಮಾಡಿ ಟೊಮ್ಯಾಟೋ ಬೆಳೆಯ ಗುಣಮಟ್ಟವನ್ನು ಹೇಗೆ ಕಾಯ್ದು ಕೊಳ್ಳಬೇಕು ಎಂಬುವುದರ ಬಗ್ಗೆ ಅನುಭವವನ್ನು ಹಂಚಿಕೊಂಡರು. ಮೈಸೂರು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ, ಡಿ. ರವರು ಮಾತನಾಡಿ ರೈತರು ಹೆಚ್ಚು ಜೈವಿಕ ಗೊಬ್ಬರಗಳು, ಜೈವಿಕ ಶಿಲೀಂಧ್ರನಾಶಕಗಳನ್ನು ಹೆಚ್ಚು ಹೆಚ್ಚು ಬಳಸಬೇಕು ಮತ್ತು ಒಪ್ಪಂದ ಕೃಷಿಗೆ ಹೋಗಬೇಕು ಎಂದು ಸಲಹೆ ನೀಡಿದರು. ಡಾ.ವಸಂತ್‍ಕುಮಾರ್ ತಿಮ್ಕಾಪುರ್ ರವರು ಮಾತನಾಡಿ ಮಾತನಾಡಿ ತೋಟಗಾರಿಕೆ ಮಹಾವಿದ್ಯಾಲಯದ ವಿಸ್ತರಣಾ ಘಟಕವು ರೈತರಿಗೆ ತಾಂತ್ರಿಕ ಮಾಹಿತಿಯನ್ನು ತಲುಪಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯ ಹಾಗೂ ಈ ರೀತಿಯ ಕಾರ್ಯಕ್ರಮಗಳನ್ನು ಹೆಚ್ಚು-ಹೆಚ್ಚು ಆಯೋಜಿಸಿ ರೈತರಿಗೆ ಉಪಯೋಗ ಮಾಡಬೇಕೆಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಮಧಾರಿ ಸೀಡ್ಸ ಪ್ರೈ. ಲಿಮಿಟೆಡ್ ನ ಮಹಾಪ್ರಬಂಧಕರಾದ ಶ್ರೀಯುತ ಮಂಜುನಾಥರವರು ಮಾತನಾಡಿ ರೈತರು ಬಹು ರೋಗಗಳಿಗೆ ನಿರೋಧಕತೆಯನ್ನು ಹೊಂದಿರುವ ಎನ್‍ಎಸ್-1218 ನಂತಹ ತಳಿಗಳನ್ನು ಬೆಳೆಯಬೇಕೆಂದು ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಿಸ್ತರಣಾ ಮುಂದಾಳು, ಶ್ರೀ ಹರೀಶ್ ಬಿ ಎಸ್ ರವರು ಎಲ್ಲ ಟೊಮ್ಯಾಟೋ ಬೆಳೆಗಾರರು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು, ನೂತನ ತಂತ್ರಜ್ಞಾನಗಳನ್ನು ಅಳವಡಿಸಿ ಕೊಂಡು ವಿವಿಧ ಹಂತಗಳಲ್ಲಿ ಬೆಳೆಗಳನ್ನು ಬೆಳೆದು ಹೆಚ್ಚು ಇಳುವರಿಯನ್ನು ಪಡೆದು ಅಧಿಕ ಲಾಭ ಪಡೆಯಬೇಕೆಂದು ತಿಳಿಸಿದರು. ತಾಂತ್ರಿಕ ಗೋಷ್ಠಿಯಲ್ಲಿ ಸಿ.ಎಫ್.ಟಿ.ಆರ್.ಐ ನ ಪ್ರಧಾನ ವಿಜ್ಞಾನಿಗಳಾದ ಡಾ. ಬೋಮೈನ್ ಸಿಂಗ್ ರವರು ಟೊಮ್ಯಾಟೋ ಬೆಳೆಯಲ್ಲಿ ಮೌಲ್ಯವರ್ಧನೆ ಹಾಗೂ ಕೊಯ್ಲೊತ್ತರ ತಂತ್ರಜ್ಞಾನದ ಬಗ್ಗೆ ಮಾಹಿತಿಯನ್ನು ನೀಡಿದರು. ಡಾ.ಗಾಲಿ ಬಸವರಾಜು ಅವರು ಟೊಮ್ಯಾಟೋ ಕೃಷಿಯ ಆರ್ಥಿಕ ವಿಶ್ಲೇಷಣೆ ಮಾಡಿದರು. ಶ್ರೀಯುತ ಸುದರ್ಶನ್ ಜಿ. ಕೆ. ರವರು ಸಮಗ್ರ ರೋಗ ನಿರ್ವಹಣೆ ಕುರಿತು ಹಾಗೂ ಸಮಗ್ರ ಕೀಟ ನಿರ್ವಹಣೆ ಕುರಿತು ಡಾ. ಮುತ್ತುರಾಜುರವರು ವಿಷಯ ಮಂಡಿಸಿ ಶಿಬಿರಾರ್ಥಿಗಳ ಜೊತೆ ಚರ್ಚಿಸಿದರು. ಬೆಳೆಗಾರರಿಗೆ ಉಪಯೋಗಕ್ಕಾಗಿ ಟೊಮ್ಯಾಟೋ ಬೆಳೆಗೆ ಸಂಬಂಧಿಸಿದ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದ್ದು ಇದರ ಬಗ್ಗೆ ಭಾಗವಹಿಸಿದ ಕೃಷಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ರವರಾದ ಡಾ. ಕೆ. ಎಂ. ಇಂದಿರೇಶ್ ರವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಾರಣಾಂತರಗಳಿಂದ ಭಾಗವಹಿಸಲಾಗದ ವಿಶ್ವವಿದ್ಯಾಲಯದ ಗೌರವನ್ವಿತ ಕುಲಪತಿಗಳಾದ ಡಾ.ಡಿ.ಎಲ್ ಮಹೇಶ್ವರ್‍ರವರು ಈ ಕಾರ್ಯಕ್ರಮದ ಪ್ರತಿ ಹಂತದಲ್ಲೂ ಮೈಸೂರಿನ ತೋಟಗಾರಿಕೆ ವಿಸ್ತರಣಾ ಘಟಕಕ್ಕೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನವನ್ನು ನೀಡಿ ಟೊಮ್ಯಾಟೋ ಬೆಳೆಗಾರರ ಸಮಗ್ರ ಬೆಳೆವಣಿಗೆಯಲ್ಲಿ ವಿಶ್ವವಿದ್ಯಾಲಯವು ಸಹ ಪಾಲುದಾರರಾಗಿ ಕೆಲಸ ಮಾಡಲಿ ಎಂದು ಕರೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ 200 ಟೊಮ್ಯಾಟೋ ಬೆಳೆಗಾರರೂ ಹಾಗೂ ಆಸಕ್ತ ಕೃಷಿಕರೂ ಮತ್ತು ತೋಟಗಾರಿಕೆ ಇಲಾಖೆಯ ವಿಸ್ತರಣಾಧಿಕಾರಿಗಳು ಭಾಗವಹಿಸಿ ಇದರ ಸದುಪಯೋಗ ಪಡೆದರು. ನಗರದಲ್ಲಿ ಅರ್ಥಪೂರ್ಣವಾಗಿ ನಡೆದ ದಲಿತ ವಚನಕಾರರ ಜಯಂತಿ ಚಾಮರಾಜನಗರ, ಆ. 24 (ಕರ್ನಾಟಕ ವಾರ್ತೆ):– ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ದಲಿತ ವಚನಕಾರರ ಜಯಂತಿಯನ್ನು ಅರ್ಥಪೂರ್ಣವಾಗಿ ಇಂದು ಆಚರಿಸಲಾಯಿತು. ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ವಚನಗಳು ಜ್ಞಾನದ ಭಂಡಾರವೇ ಆಗಿದೆ. ವಚನಕಾರರು ಕಾಯಕವೇ ಕೈಲಾಸವೆಂದು ನಂಬಿದವರು. ಕಾಯಕದಲ್ಲೆ ಭಗವಂತನನ್ನು ಕಾಣಬೇಕೆಂಬ ಮಹತ್ವ ಸಂದೇಶವನ್ನು ಸಾರಿದವರು ಎಂದರು. ವಚನಕಾರರಲ್ಲಿ ದಲಿತ ವಚನಕಾರರು ಸಹ ಪ್ರಮುಖರಾಗಿದ್ದಾರೆ. ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಹರಳಯ್ಯ, ಉರಿಲಿಂಗ ಪೆದ್ದಿಸ್ವಾಮಿಗಳು ಸೇರಿದಂತೆ ಹಲವಾರು ದಲಿತ ವಚನಕಾರರು ಉತ್ತಮ ವಚನಗಳನ್ನು ರಚಿಸಿದ್ದಾರೆ. ಅವುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕಿದೆ ಎಂದು ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಉರಿಲಿಂಗ ಪೆದ್ದಿಮಠದ ಪೀಠಾಧ್ಯಕ್ಷರು ಹಾಗೂ ಪ್ರಗತಿಪರ ಮಠಾಧೀಶರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯವರಾದ ಡಾ. ಜ್ಞಾನಪ್ರಕಾಶಸ್ವಾಮಿ ಅವರು ಮಾತನಾಡಿ ವಚನಕಾರರು ಸಮಾನತೆಯ ಸಮಾಜವನ್ನು ನಿರ್ಮಿಸಿದವರು. ವಚನವೆಂದರೆ ಸಂವಿಧಾನದ ಆಶಯಗಳೇ ಆಗಿವೆ. ಸೋದರತೆ, ಸಮಾನತೆ, ಭ್ರಾತೃತ್ವ ಮಹತ್ವವನ್ನು ವಚನಕಾರರು ತಮ್ಮ ವಚನಗಳಲ್ಲಿ ಪ್ರತಿಪಾದಿಸಿದ್ದಾರೆ. ಪ್ರಜಾಪ್ರಭುತ್ವದ ಪರಿಕಲ್ಪನೆ ಕಟ್ಟಿಕೊಟ್ಟವರು ವಚನಕಾರರೆಂದು ಅಭಿಪ್ರಾಯಪಟ್ಟರು. ವಚನ ಸಾಹಿತ್ಯದಲ್ಲಿ 27,400 ವಚನಗಳಿವೆ. ಈ ಪೈಕಿ ದಲಿತ ವಚನಕಾರರಾದ ಮಾದಾರ ಚನ್ನಯ್ಯ,ಡೋಹರ ಕಕ್ಕಯ್ಯ, ಆಯ್ದಕ್ಕಿ ಲಕ್ಕಮ್ಮ, ಹರಳಯ್ಯ, ಸೂಳೆ ಸಂಕವ್ವ, ಉರಿಲಿಂಗ ಪೆದ್ದಿ, ಮಾದಾರ ಧೂಳಯ್ಯ ಸೇರಿದಂತೆ ಇನ್ನೂ ಹಲವು ವಚನಕಾರರು ಪ್ರಬುದ್ಧ ವಚನಗಳನ್ನು ಬಿಟ್ಟುಹೋಗಿದ್ದಾರೆ ಎಂದರು. ವಚನಗಳಿಗೆ ಇಡೀ ಜಗತ್ತನ್ನೇ ಕಟ್ಟುವ ಶಕ್ತಿಯಿದೆ. ದಲಿತ ವಚನಕಾರರ ಕುರಿತು ಅಧ್ಯಯನ ಕೇಂದ್ರವನ್ನು ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ತೆರೆಯಬೇಕು. ಜಾತಿ, ತಾರತಮ್ಯ ಹೋಗಲಾಡಿಸಿ ಸಾಮರಸ್ಯವನ್ನು ಕಾಪಾಡುವ ದಿಸೆಯಲ್ಲಿ ರಾಜ್ಯ ಸರ್ಕಾರ ದಲಿತ ವಚನಕಾರರ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯವೆಂದು ಜ್ಞಾನಪ್ರಕಾಶಸ್ವಾಮಿ ಅವರು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ರೇಣುಕಾ ಅವರು ಶರಣರ ವಚನಗಳನ್ನು ಎಲ್ಲರು ಓದಬೇಕಿದೆ. ನಾನು, ನನ್ನದು ಎನ್ನುವ ಸ್ವಾರ್ಥ, ಆಹಂ ನ್ನು ತ್ಯಜಿಸಬೇಕಿದೆ. ಶರಣರ, ವಚನಕಾರರ ಆದರ್ಶವನ್ನು ಪಾಲಿಸಬೇಕಿದೆ ಎಂದರು. ಮಂಡ್ಯದ ತೂಬಿನಕೆರೆ ಸರ್. ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಾಪಕರಾದ ಡಾ. ಹೊಂಬಯ್ಯ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫೀ, ಜಿಲ್ಲಾ ಪಂಚಾಯತ್ ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಜಿಲ್ಲಾಧಿಕಾರಿ ಬಿ. ರಾಮು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸರಸ್ವತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ************* ಗ್ರಾ.ಪಂ.ಚುನಾವಣೆ: ನೀತಿಸಂಹಿತೆ ಉಲ್ಲಂಘಿಸುವವರ ವಿರುದ್ಧ ಕ್ರಮ-ಡೀಸಿ ಚಾಮರಾಜನಗರ, ಆ. 24 (ಕರ್ನಾಟಕ ವಾರ್ತೆ):– ಜಿಲ್ಲೆಯಲ್ಲಿ ನಡೆಯಲಿರುವ ಗ್ರಾಮಪಂಚಾಯಿತಿ ಚುನಾವಣೆ ಪ್ರಚಾರ ಅವಧಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಂಡು ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ತಿಳಿಸಿದ್ದಾರೆ. ಗ್ರಾಮಪಂಚಾಯಿತಿ ಚುನಾವಣೆಗಳು ಪಕ್ಷ ರಹಿತ ಚುನಾವಣೆಯಾಗಿದೆ. ರಾಜಕೀಯ ಪಕ್ಷಗಳು ಸಭೆ, ಸಮಾರಂಭಗಳನ್ನು ಏರ್ಪಡಿಸಿ ವೇದಿಕೆಯ ಮೇಲೆ ಪಕ್ಷದ ಬಾವುಟ, ಬ್ಯಾನರ್ ಅಳವಡಿಸುವಂತಿಲ್ಲ. ಸ್ಪರ್ಧಿಸುವ ಅಭ್ಯರ್ಥಿಗಳನ್ನು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿ ಎಂದು ಪರಿಚಯಿಸುವುದು, ಅವರ ಪರವಾಗಿ ಮತ ನೀಡುವಂತೆ ಮತದಾರರನ್ನು ಕೋರುವಂತಿಲ್ಲ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ರಾಜಕೀಯ ಮುಖಂಡರ ಭಾವಚಿತ್ರ, ಪಕ್ಷದ ಚಿಹ್ನೆ ಇರುವ ಕರಪತ್ರಗಳನ್ನು ಮುದ್ರಿಸಿ ಹಂಚುವಂತಿಲ್ಲ. ರಾಜಕೀಯ ಮುಖಂಡರ ಭಾವಚಿತ್ರ, ಪಕ್ಷಗಳ ಚಿಹ್ನೆ ಇರುವ ಕರಪತ್ರಗಳು, ಕಟೌಟ್, ಬ್ಯಾನರ್ ಮತ್ತು ಬಂಟಿಂಗ್‍ಗಳ ಮೂಲಕ ಪ್ರಚಾರ ನಡೆಸುವಂತಿಲ್ಲ. ಟಿ.ವಿ, ಪತ್ರಿಕೆಗಳು, ಮಾಧ್ಯಮಗಳ ಮೂಲಕ ರಾಜಕೀಯ ಮುಖಂಡರ ಭಾವಚಿತ್ರ ಮತ್ತು ಪಕ್ಷಗಳ ಚಿಹ್ನೆಗಳನ್ನು ಬಳಿಸಿ ಜಾಹೀರಾತು ನೀಡುವಂತಿಲ್ಲ. ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಗಸ್ಟ್ 26ರಂದು ಬೆಳಿಗ್ಗೆ 7 ಗಂಟೆಗೆ ಪ್ರಚಾರದ ಅವಧಿ ಮುಕ್ತಾಯವಾಗಲಿದೆ. ಗ್ರಾಮ ಪಂಚಾಯತ್ ಮತದಾರರಲ್ಲದ ಚುನಾವಣಾ ಪ್ರಚಾರಕ್ಕಾಗಿ ಬಂದ ಹೊರಗಿನ ವ್ಯಕ್ತಿಗಳು ಆಗಸ್ಟ್ 26ರ ಸಂಜೆ 6 ಗಂಟೆಯೊಳಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ತೆರಳಬೇಕು. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ************** ಗ್ರಾ.ಪಂ. ಚುನಾವಣೆ : ಸಂತೆ, ಜಾತ್ರೆ ನಿಷೇಧ ಚಾಮರಾಜನಗರ, ಆ. 25 (ಕರ್ನಾಟಕ ವಾರ್ತೆ):– ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುರಟ್ಟಿ ಹೊಸೂರು, ಶಾಗ್ಯ, ಸಿದ್ದಯ್ಯನಪುರ ಗ್ರಾಮ ಪಂಚಾಯಿತಿ, ಚಾಮರಾಜನಗರ ತಾಲೂಕಿನ ಮಂಗಲ ಹಾಗೂ ಮಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಸ್ಟ್ 28ರಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪ್ರದೇಶಗಳಲ್ಲಿ ಎಲ್ಲ ತರಹದ ಸಂತೆ, ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ. ಅಂದು ಸಂಜೆ 5 ರಿಂದ 6 ಗಂಟೆಯವರೆಗೆ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರದೇಶಗಳಲ್ಲಿ ಸಂತೆ ಮತ್ತು ಜಾತ್ರೆ ನಡೆಸದಂತೆ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ. ಹೆದ್ದಾರಿ ಅಭಿವೃದ್ಧಿ : ದಾಖಲೆಗಳ ಸಲ್ಲಿಕೆಗೆ ನಗರಸಭೆ ಸೂಚನೆ ಚಾಮರಾಜನಗರ, ಆ. 25 (ಕರ್ನಾಟಕ ವಾರ್ತೆ):– ಚಾಮರಾಜನಗರ ಪಟ್ಟಣ ಪರಿಮಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ರಸ್ತೆಯ ಎರಡೂ ಬದಿಗÀಳಲ್ಲಿ ಬರುವ ಆಸ್ತಿಯ ಮಾಲೀಕರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಪ್ರಾಥಮಿಕ ದಾಖಲಾತಿಗಳನ್ನು 3 ದಿನಗಳೊಳಗೆ ಲಿಖಿತ ಅರ್ಜಿಯೊಂದಿಗೆ ಸಲ್ಲಿಸುವಂತೆ ಚಾಮರಾಜನಗರ ನಗರಸಭೆ ಸೂಚಿಸಿದೆ. ಪಟ್ಟಣದ ಪರಿಮಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 209 ಹಾದು ಹೋಗುತ್ತಿದ್ದು ರಸ್ತೆಯ ಸರಪಳಿ 300.750 ಕಿ.ಮೀ. ಯಿಂದ 305.180 ಕಿ.ಮೀ.ವರೆಗಿನ ಈಗಿನ ರಸ್ತೆಯನ್ನು 4 ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಸೋಮವಾರಪೇಟೆಯ ಸ್ವಾಗತ ಕಮಾನಿನಿಂದ ಪ್ರಾರಂಭಗೊಂಡು ಸುಲ್ತಾನ್ ಫರೀಫ್ ವೃತ್ತ, ಪಚ್ಚಪ್ಪ ವೃತ್ತ, ಸಂತೆಮರಹಳ್ಳಿ ವೃತ್ತ ಮಾರ್ಗವಾಗಿ ಮೈನರ್ ಬ್ರಿಡ್ಜ್ ಹತ್ತಿರ ಕೊನೆಗೊಳ್ಳಲಿದೆ. ಸುಮಾರು 4.43 ಕಿ.ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿದೆ. ಹೀಗಾಗಿ ಈ ರಸ್ತೆಯ ಎರಡೂ ಬದಿಗಳಲ್ಲಿ ಬರುವ ಆಸ್ತಿಯ ಮಾಲೀಕರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದಂತೆ ಕೆಲ ಪ್ರಾಥಮಿಕ ದಾಖಲಾತಿಗಳನ್ನು 7 ದಿನಗಳವರೆಗೆ ಕಡ್ಡಾಯವಾಗಿ ನಗರಸಭೆಗೆ ಸಲ್ಲಿಸುವಂತೆ ಈ ಹಿಂದೆ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿತ್ತು. ಆದರೆ ಕೆಲವರು ಕೋರಿರುವ ದಾಖಲಾತಿಗಳನ್ನು ಹೊರತುಪಡಿಸಿ ಅರ್ಜಿಗಳನ್ನು ಮಾತ್ರ ಕಚೇರಿಗೆ ಸಲ್ಲಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆಸ್ತಿಯ ಮಾಲೀಕರು ಲಿಖಿತ ಅರ್ಜಿಯೊಂದಿಗೆ ದಾಖಲಾತಿಗಳನ್ನು ಲಗತ್ತಿಸಿ 3 ದಿನಗಳೊಳಗೆ ನಗರಸಭೆಗೆ ಸಲ್ಲಿಸುವಂತೆ ಪೌರಾಯುಕ್ತರಾದ ಎಂ. ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ. 27ರಂದು ನೇರ ಫೋನ್ ಇನ್ ಕಾರ್ಯಕ್ರಮ ಚಾಮರಾಜನಗರ, ಆ. 25 (ಕರ್ನಾಟಕ ವಾರ್ತೆ):- ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನೇರ ಫೋನ್ ಇನ್ ಕಾರ್ಯಕ್ರಮವನ್ನು ಆಗಸ್ಟ್ 27ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ತಮ್ಮ ಕುಂದುಕೊರತೆಗಳಿದ್ದಲ್ಲಿ ದೂ.ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ. 26ರಂದು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಕಟ್ಟಡದ ಶಂಕುಸ್ಥಾಪನೆ ಸಮಾರಂಭ ಚಾಮರಾಜನಗರ, ಆ. 25 (ಕರ್ನಾಟಕ ವಾರ್ತೆ):– ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಕಟ್ಟಡದ ಶಂಕುಸ್ಥಾಪನಾ ಸಮಾರಂಭವು ಆಗಸ್ಟ್ 26ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿಯಿರುವ ಚನ್ನಿಪುರದ ಮೋಳೆ ಬಡಾವಣೆಯಲ್ಲಿ ನೆರವೇರಲಿದೆ. ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಶಿಲಾನ್ಯಾಸ ನೆರವೇರಿಸುವರು. ನಗರಾಭಿವೃದ್ಧಿ ಹಾಗೂ ಹಜ್ ಸಚಿವರಾದ ಆರ್.ರೋಷನ್ ಬೇಗ್ ಸಮಾರಂಭ ಉದ್ಘಾಟಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್‍ನ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜ್), ಆರ್. ಧರ್ಮಸೇನ, ನಗರಸಭೆ ಅಧ್ಯಕ್ಷರಾದ ಎಸ್. ಎನ್. ರೇಣುಕಾ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಾದ ವಿ. ಪೊನ್ನುರಾಜ್, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯ ಎಂ.ವಿ. ರಂಗೇಶ್, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್,ಜೈನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್. ಎಂ. ರಾಜಪ್ಪ, ನಗರಸಭೆ ಸದಸ್ಯರಾದ ಮಹೇಶ್, ಪ್ರಾಧಿಕಾರದ ಅಧಿಕಾರಿ ಹಾಗೂ ನಾಮನಿರ್ದೇಶಿತ ಸದಸ್ಯರಾದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಚ್. ಪ್ರಸಾದ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇನಾಯತ್ ಉಲ್ಲಾ ಷರೀಫ್, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಎಚ್.ಕೆ. ರಮೇಶ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಿನ್ನಸ್ವಾಮಿ, ನಗರಸಭೆ ಪೌರಾಯುಕ್ತರಾದ ಎಂ. ರಾಜಣ್ಣ, ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರಾದ ಎಸ್.ಎಚ್. ಚಲುವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸುದರ್ಶನ ಗೌಡ, ಶ್ರೀಕಾಂತ್, ಎಂ. ಆಶಾ, ಶ್ರೀನಿವಾಸ ಮುಖ್ಯ ಅತಿಥಿಗಳಾಗಿ ಪಾಲ್ಗೊಳುವರು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫಿ ಅವರು ತಿಳಿಸಿದ್ದಾರೆ. ಆ. 26ರಿಂದ ನಗರದಲ್ಲಿ ಚಲನಚಿತ್ರೋತ್ಸವ ಚಾಮರಾಜನಗರ, ಆ. 25 (ಕರ್ನಾಟಕ ವಾರ್ತೆ):– ಚಲನಚಿತ್ರೋತ್ಸವ ಸಮಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 26ರಿಂದ 28ರವರೆಗೆ ಮೂರು ದಿನಗಳ ಚಲನಚಿತ್ರೋತ್ಸವವನ್ನು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 26ರಂದು ಸಂಜೆ 4 ಗಂಟೆಗೆ ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಸಂಸದೀಯ ಕಾರ್ಯದರ್ಶಿಗಳು, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಬಿ. ರಾಮು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ಮತ್ತು ನಿರ್ದೇಶಕ ಬಿ.ಎಸ್. ಲಿಂಗದೇವರು ನಿರ್ದೇಶನದ ನಾನು ಅವನಲ್ಲ ಅವಳು ಚಿತ್ರ ಪ್ರದರ್ಶನದ ನಂತರ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಹಾಗೂ ಬಿ.ಎಸ್. ಲಿಂಗದೇವರು ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 27ರಂದು ಬೆಳಿಗ್ಗೆ 10 ಗಂಟೆಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಡಾ. ಯು.ಆರ್. ಅನಂತಮೂರ್ತಿ ಕುರಿತ ಸಾಕ್ಷ್ಯಚಿತ್ರ, ಮಧ್ಯಾಹ್ನ 12 ಗಂಟೆಗೆ ಪಿ. ಶೇಷಾದ್ರಿ ನಿರ್ದೇಶನದ ಬೆಟ್ಟದ ಜೀವ, ಮಧ್ಯಾಹ್ನ 3.45ಕ್ಕೆ ಚಿತ್ರ ಕಲಾವಿದ ಪ್ರಕಾಶ್ ಬಾಬು ಅವರಿಂದ ವರ್ಣಚಿತ್ರಗಳ ಸ್ಲೈಡ್ ಪ್ರದರ್ಶನ ಮತ್ತು ವಿವರಣೆ, ಸಂಜೆ 4.30ಕ್ಕೆ ಪ್ರಕಾಶ್ ಬಾಬು ನಿರ್ದೇಶನದ ಕಿರುಚಿತ್ರಗಳ ಪ್ರದರ್ಶನ ಹಾಗೂ ಸಂವಾದ, ಸಂಜೆ 5.30ಕ್ಕೆ ನಾಗೇಂದ್ರ ಷಾ ನಿರ್ದೇಶನದ ಮಕ್ಕಳ ಚಿತ್ರ ಹಾಡು ಹಕ್ಕಿ ಹಾಡು ಪ್ರದರ್ಶನಗೊಳ್ಳಲಿದೆ. ಆಗಸ್ಟ್ 28ರಂದು ಬೆಳಿಗ್ಗೆ 10ಕ್ಕೆ ಕೆ.ಎಸ್. ಪರಮೇಶ್ವರ ನಿರ್ದೇಶನದ ಹತ್ಯೆಗೀಡಾದ ಪ್ರೊ. ಎಂ.ಎಂ. ಕಲ್ಬುರ್ಗಿ ಕುರಿತ ಸಾಕ್ಷ್ಯಚಿತ್ರ ಮಾರ್ಗಕ್ಕೆ ಕೊನೆಯಿಲ್ಲ, ಬೆಳಿಗ್ಗೆ 11.30 ರಿಂದ ಕೆ.ಎಸ್. ಪರಮೇಶ್ವರ ಅವರೊಂದಿಗೆ ಸಂವಾದ, ಮಧ್ಯಾಹ್ನ 12.15ಕ್ಕೆ ಉಮಾಶಂಕರ ಸ್ವಾಮಿ ನಿರ್ದೇಶನದ ಮುನ್ಸೀಫಾ, ಮಧ್ಯಾಹ್ನ 3 ಗಂಟೆಗೆ ಎನ್. ವಿದ್ಯಾಶಂಕರ್, ಡಾ. ಕೃಷ್ಣಮೂರ್ತಿ ಹನೂರು, ಬಿ.ಎಸ್. ವಿನಯ್ ಇವರಿಂದ ಸಾಹಿತ್ಯ ಮತ್ತು ಸಿನಿಮಾ ಚರ್ಚೆ ನಡೆಯಲಿದ್ದು ಅಪೂರ್ವ ಡಿ ಸಿಲ್ವ ನಿರ್ವಹಿಸಲಿದ್ದಾರೆ. ಸಂಜೆ 4.15ಕ್ಕೆ ಶಿವರುದ್ರಯ್ಯ ನಿರ್ದೇಶನದ ಭಗವತಿ ಕಾಡು ಪ್ರದರ್ಶನವಾಗಲಿದೆ. ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ. ಚಲನಚಿತ್ರೋತ್ಸವ ಸಮಿತಿಯ ಅಧ್ಯಕ್ಷರಾದ ಎ. ಜಯಸಿಂಹ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್ ಸಮಾರೋಪ ಭಾಷಣ ಮಾಡುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ದೀನಬಂಧು ಸಂಸ್ಥೆ ಗೌರವ ಕಾರ್ಯದರ್ಶಿ ಜಿ.ಎಸ್. ಜಯದೇವ ಮುಖ್ಯ ಅತಿಥಿಗಳಾಗಿ ಆಗಮಿಸುವರು. ನಂತರ ಟಿ.ವಿ.ಸಿಂಗ್ ಠಾಕೂರ್ ನಿರ್ದೇಶನದ ಚಂದವಳ್ಳಿಯ ತೋಟ ಚಲನಚಿತ್ರ ಪ್ರದರ್ಶನವಿರುತ್ತದೆ. ಮೇಲ್ಕಂಡ ಎಲ್ಲ ಕಾರ್ಯಕ್ರಮಗಳಿಗೂ ಉಚಿತ ಪ್ರವೇಶ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಆ. 26ರಂದು ತಾ.ಪಂ. ಸಾಮಾನ್ಯ ಸಭೆ ಚಾಮರಾಜನಗರ, ಆ. 25 (ಕರ್ನಾಟಕ ವಾರ್ತೆ):– ಚಾಮರಾಜನಗರ ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆಯು ಅಧ್ಯಕ್ಷರಾದ ಎಚ್.ವಿ. ಚಂದ್ರು ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 26ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ಸೂಚನೆ ಚಾಮರಾಜನಗರ, ಆ. 25 (ಕರ್ನಾಟಕ ವಾರ್ತೆ):– ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಬುಧವಾರ (ಆಗಸ್ಟ್ 24) ನಡೆಯಿತು. ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಮಚಂದ್ರ ಅವರು 2016-17ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಉತ್ತಮಪಡಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ ಅವರು ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು. ಗಣಿತ ಮತ್ತು ವಿಜ್ಞಾನ ವಿಷಯಗಳ ಪಠ್ಯಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಸಾಧನೆಯಾಗಲು ಶ್ರಮಿಸುವಂತೆ ತಿಳಿಸಿದರು. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಸಂಬಂಧ ತಾಲೂಕು ಹಂತದಲ್ಲಿ ರೂಪಿಸಲಾಗಿರುವ ಕ್ರಿಯಾ ಯೋಜನೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲೆಯ ಶೈಕ್ಷಣಿಕ ಸಾಲಿನ ಪ್ರಗತಿ ಹಾಗೂ ಯೋಜನೆ, ತರಬೇತಿ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ ಪವರ್ ಪಾಯಿಂಟ್ ಮೂಲಕ ವಿವರಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಬಿಆರ್‍ಪಿ, ಸಿಆರ್‍ಪಿ, ಇಸಿಓ, ಸಿಆರ್‍ಪಿ, ಉಪನ್ಯಾಸಕರು, ಶಿಕ್ಷಣ ಇಲಾಖೆಯ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಆ. 31ರಂದು ಹಿರಿಯ ನಾಗರಿಕರಿಗೆ ವಿವಿಧ ಸ್ಪರ್ಧೆ ಚಾಮರಾಜನಗರ, ಆ. 25 (ಕರ್ನಾಟಕ ವಾರ್ತೆ):– ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 60 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಗಸ್ಟ್ 31ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದೆ. ಪುರುಷರ ವಿಭಾಗದಲ್ಲಿ 60 ರಿಂದ 70 ವರ್ಷದವರಿಗೆ 100 ಮೀ. ಓಟ, ಶಾಟ್ ಪುಟ್ ಎಸೆತ, 70 ರಿಂದ 80 ವರ್ಷದವರಿಗೆ 800 ಮೀ. ನಡಿಗೆ, ಕ್ರಿಕೆಟ್ ಬಾಲ್ ಎಸೆತ, 81 ವರ್ಷ ಮೇಲ್ಪಟ್ಟವರಿಗೆ 400 ಮೀ. ನಡಿಗೆ, ಕ್ರಿಕೆಟ್ ಬಾಲ್ ಎಸೆತ ಸ್ಪರ್ಧೆಗಳಿವೆ. ಮಹಿಳೆಯರ ವಿಭಾಗದಲ್ಲಿ 60ರಿಂದ 70 ವರ್ಷದವರಿಗೆ 400 ಮೀ. ನಡಿಗೆ, ಕ್ರಿಕೆಟ್ ಬಾಲ್ ಎಸೆತ, 70 ರಿಂ 80 ವರ್ಷದವರಿಗೆ 200 ಮೀ. ನಡಿಗೆ, ಕ್ರಿಕೆಟ್ ಬಾಲ್ ಎಸೆತ, 82 ವರ್ಷ ಮೇಲ್ಪಟ್ಟರಿಗೆ 100 ಮೀ. ನಡಿಗೆ, ಕ್ರಿಕೆಟ್ ಬಾಲ್ ಎಸೆತ ಸ್ಪರ್ಧೆಗಳಿವೆ. ಪುರುಷರು ಮತ್ತು ಮಹಿಳೆಯರಿಗೆ ಸಾಂಸ್ಕøತಿಕ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿದೆ. ಕನಿಷ್ಟ 3 ರಿಂದ 5 ನಿಮಿಷದವರೆಗೆ ಜಾನಪದ ಗೀತೆ ಗಾಯನ, ಕನಿಷ್ಟ 3 ರಿಂದ 5 ನಿಮಿಷದವರೆಗೆ ಕಥೆ ಹೇಳುವ (ಚಿಕ್ಕ ಮಕ್ಕಳು ಹಾಗೂ ಯುವ ಪೀಳಿಗೆಗೆ) ಸ್ಪರ್ಧೆ ಇದೆ. ಸ್ಪರ್ಧಿಗಳು ವಯಸ್ಸಿನ ದೃಢೀಕರಣಕ್ಕಾಗಿ ಮತದಾರರ ಗುರುತಿನ ಚೀಟಿ, ಹಿರಿಯ ನಾಗರಿಕರ ಗುರುತಿನ ಚೀಟಿ, ವಾÀಹನ ಚಾಲನಾ ಪರವಾನಗಿ ಇತರೆ ಯಾವುದೇ ದಾಖಲಾತಿಗಳ ಪೈಕಿ ಒಂದನ್ನು ತರಬೇಕಿದೆ. ವಿವರಗಳಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಥವಾ ದೂರವಾಣಿ ಸಂಖ್ಯೆ 08226-223688 ಅಥವಾ 222030 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ************************* ಆ. 30ರಂದು ಮೈಸೂರಿನಲ್ಲಿ ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ಚಾಮರಾಜನಗರ, ಆ. 29 (ಕರ್ನಾಟಕ ವಾರ್ತೆ):– ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯು ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಸಹಕಾರ ಸಕ್ಕರೆ ಖಾತೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 30ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯ ನೂತನ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಸೆ. 6ರಂದು ವಾಹನ ಚಾಲಕರ ಹುದ್ದೆ ಅಭ್ಯರ್ಥಿಗಳಿಗೆ ದೇಹದಾಢ್ರ್ಯತೆ ದೃಷ್ಠಿ ಸಾಮಥ್ರ್ಯ ಪರೀಕ್ಷೆ ಚಾಮರಾಜನಗರ, ಆ. 29 (ಕರ್ನಾಟಕ ವಾರ್ತೆ):– ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ವಾಹನ ಚಾಲಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ದೇಹದಾಢ್ರ್ಯತೆ ಮತ್ತು ದೃಷ್ಠಿಸಾಮಥ್ರ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 6ರಂದು ಬೆಳಿಗ್ಗೆ 8 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆ. ಅಭ್ಯರ್ಥಿಗಳಿಗೆ ವೈದ್ಯಕೀಯ ತಪಾಸಣೆ ಹಾಜರಾಗಲು ಈಗಾಗಲೇ ನೋಂದಣಿ ಅಂಚೆ ಮೂಲಕ ತಿಳಿವಳಿಕೆ ಪತ್ರ ರವಾನಿಸಲಾಗಿದೆ. ನಗರದ ಡೆಪ್ಯೂಟಿ ಕಮಿಷನರ್ ಆಫ್ ಎಕ್ಸೈಜ್‍ರವರ ಕಚೇರಿಯಲ್ಲಿಯೂ ವಿವರ ಪ್ರಕಟಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ನಿವೇಶನ ರಹಿತರ ಪಟ್ಟಿ ಸೇರ್ಪಡೆಗೆ ಅರ್ಜಿ ಆಹ್ವಾನ ಚಾಮರಾಜನಗರ, ಆ. 29 (ಕರ್ನಾಟಕ ವಾರ್ತೆ):– ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರ ಪಟ್ಟಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳು ಆಧಾರ್ ಕಾರ್ಡ್, ಪಡಿತರ ಚೀಟಿ ಗುರುತಿನ ಚೀಟಿ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ನಗರಸಭೆ ಕಚೇರಿಗೆ ಆಗಸ್ಟ್ 31ರೊಳಗೆ ಅರ್ಜಿ ಸಲ್ಲಿಸಿ ಹೆಸರು ನೊಂದಾಯಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಪರ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ ಚಾಮರಾಜನಗರ, ಆ. 29 (ಕರ್ನಾಟಕ ವಾರ್ತೆ):- ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 5 ಮತ್ತು 26(2) ಹಾಗು 12ಎ, ಬಿ ಮತ್ತು ಸಿ ಅನ್ವಯ ಇಚ್ಚೆಯುಳ್ಳ ಹಾಗೂ 7 ವರ್ಷಗಳ ಕಾಲ ವಕೀಲರ ವೃತ್ತಿಯನ್ನು ಪೂರೈಸಿದ ಅರ್ಹ ವಕೀಲರು ಪೂರ್ಣ ಮಾಹಿತಿ ಒಳಗೊಂಡ ವಿವರಣೆಯನ್ನು ಸೆಪ್ಟೆಂಬರ್ 25ರ ಒಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿದ್ಯಾಸಿರಿ ವಿದ್ಯಾರ್ಥಿವೇತನ ಶುಲ್ಕ ವಿನಾಯಿತಿ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ ಚಾಮರಾಜನಗರ, ಆ. 29 (ಕರ್ನಾಟಕ ವಾರ್ತೆ):– ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2016-17ನೇ ಸಾಲಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ಊಟ ಮತ್ತು ವಸತಿ ಸಹಾಯ ಯೋಜನೆಯಾದ ವಿದ್ಯಾಸಿರಿ, ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯ ವೇತನಕ್ಕಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ನೀಡಲು ಸಹ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕಡೆಯ ದಿನವಾಗಿದೆ. ಅರ್ಜಿಯನ್ನು ಞಚಿಡಿeಠಿಚಿss.ಛಿgg.gov.iಟಿ ಹಾಗೂ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನಲ್ಲಿ ಸಲ್ಲಿಸಬಹುದು. ಸಂಪೂರ್ಣ ವಿವರಗಳಿಗೆ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನೋಡಬಹುದು. ಅಲ್ಲದೆ ಮೊಬೈಲ್ ಸಂಖ್ಯೆ 9480818013 ಸಹಾಯವಾಣಿ 080-44554444 ಹಾಗೂ 080-65970005 ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚರ್ಮರೋಗ ತಪಾಸಣಾ ಅಭಿಯಾನ : ಅಗತ್ಯ ಸಿದ್ಧತೆಗೆ ಡೀಸಿ ಸೂಚನೆ ಚಾಮರಾಜನಗರ, ಆ. 29 (ಕರ್ನಾಟಕ ವಾರ್ತೆ):– ಆರೋಗ್ಯ ಇಲಾಖೆಯು ಚರ್ಮ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಚರ್ಮರೋಗ ತಪಾಸಣೆ ಸಲುವಾಗಿ ಸೆಪ್ಟೆಂಬರ್ 6ರಿಂದ 19ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ನಡೆಸುವಂತೆ ಜಿಲ್ಲಾಧಿಕಾರಿ ಬಿ. ರಾಮು ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಚರ್ಮರೋಗ ನಿರ್ಮೂಲನ ಕಾರ್ಯಕ್ರಮ ಕುರಿತ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚರ್ಮರೋಗ ಪತ್ತೆಹಚ್ಚಿ ಅದನ್ನು ಸಂಪೂರ್ಣವಾಗಿ ಗುಣಪಡಿಸುವ ಸಲುವಾಗಿ ವಿಶೇಷ ಅಭಿಯಾನವನ್ನು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಬೇಕು. ಸಮೀಕ್ಷೆಯ ತಂಡಗಳು ಮನೆಮನೆಗೆ ಭೇಟಿ ನೀಡುವ ಮೊದಲು ಇತರೆ ಇಲಾಖೆಗಳ ನೆರವು ಪಡೆದುಕೊಳ್ಳಬೇಕು. ಕಾಡಂಚಿನ ಪ್ರದೇಶಗಳು ಪೋಡುಗಳಿಗೆ ತೆರಳುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಸಹಕಾರದೊಂದಿಗೆ ಸಮೀಕ್ಷೆ ನಡೆಸಬೇಕು ಎಂದರು. ಕಂದಾಯ ಇಲಾಖೆಯ ತಾಲೂಕು ಅಧಿಕಾರಿಗಳು ಗ್ರಾಮಲೆಕ್ಕಾಧಿಕಾರಿಗಳು ಪಂಚಾಯತ್ ಅಧಿಕಾರಿಗಳು ಸಿಬ್ಬಂದಿ ಕೂಡ ಚರ್ಮರೋಗ ನಿರ್ಮೂಲನೆಗಾಗಿ ಕೈಗೊಂಡಿರುವ ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಬೇಕು. ನಾಗರಿಕರಿಗೆ ಕಾರ್ಯಕ್ರಮದ ಉದ್ದೇಶವನ್ನು ಮನವರಿಕೆ ಮಾಡಿಕೊಡಬೇಕು. ಸಮೀಕ್ಷೆ ತಂಡಕ್ಕೆ ಅಗತ್ಯ ನೆರವು ನೀಡಿ ಸಂಪೂರ್ಣವಾಗಿ ಅಭಿಯಾನ ಕೈಗೊಳ್ಳಲು ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು. ಶಾಲೆ ಕಾಲೇಜು ಹಾಸ್ಟೆಲ್‍ಗಳಿಗೂ ಸಮೀಕ್ಷಾ ತಂಡ ಭೇಟಿ ಕೊಡಬೇಕು, ವಿದ್ಯಾರ್ಥಿಗಳು ಹೆಚ್ಚು ಸಮಾವೇಶಗೊಳ್ಳುವ ಶಾಲಾಕಾಲೇಜು ವಿದ್ಯಾರ್ಥಿನಿಲಯಗಳಲ್ಲಿ ತಪಾಸಣೆ ಮಾಡುವುದರಿಂದ ಅಭಿಯಾನ ಕಾರ್ಯವು ತ್ವರಿತವಾಗಿ ಪೂರ್ಣವಾಗಲಿದೆ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿನಿಲಯ ಪಾಲಕರು ಸಮೀಕ್ಷಾ ತಂಡಕ್ಕೆ ನೆರವು ನೀಡುವ ಮೂಲಕ ತಪಾಸಣೆಗೆ ಅನುಕೂಲ ಮಾಡಕೊಡಬೇಕು. ಆಯಾ ಇಲಾಖೆ ಹಿರಿಯ ಅಧಿಕಾರಿಗಳು ಕಾರ್ಯಕ್ರಮ ಆರಂಭಕ್ಕೂ ಮೊದಲೇ ಮಾಹಿತಿ ನೀಡಬೇಕು ಎಂದು ರಾಮು ನಿರ್ದೇಶನ ನೀಡಿದರು. ತಪಾಸಣೆಗೆ ನಿಯೋಜಿತವಾಗಿರುವ ತಂಡಗಳು ಜಿಲ್ಲೆಯ ಮನೆಮನೆಗೂ ಭೇಟಿ ನೀಡಬೇಕು. ಯಾವುದೇ ಕಾರಣಕ್ಕೂ ಯಾವುದೇ ಮನೆ ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ತೋಟದ ಮನೆಗಳು, ಒಂಟಿಮನೆ, ಹಾಡಿ ಪೋಡು ಹೀಗೆ ಎಲ್ಲ ಜನವಸತಿ ಪ್ರದೇಶಗಳಲ್ಲೂ ತಪಾಸಣೆ ಕಾರ್ಯ ಕೈಗೊಳ್ಳಬೇಕು. ಯಾವುದೇ ಲೋಪವಿಲ್ಲದೇ ನಿಗದಿತ ಅವಧಿಯೊಳಗೆ ಅಭಿಯಾನ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ಮಾತನಾಡಿ ಅಭಿಯಾನ ಸಂಬಂಧ ಈಗಾಗಲೇ ವೈದ್ಯಾಧಿಕಾರಿಗಳಿಗೆ ತರಬೇತಿ ನೀಡಲಾಗಿದೆ, ಆಶಾ ಕಾರ್ಯಕರ್ತೆಯರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯಾದ್ಯಂತ ನಡೆಸಲು ಯೋಜಿಸಲಾಗಿದೆ ಎಂದರು. ಆರೋಗ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿಗಳಾದ ಡಾ. ರಾಜು, ಡಾ. ಅನಿಲ್ ಕುಮಾರ್, ವಿಶ್ವೇಶ್ವರಯ್ಯ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸತೀಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ನೂರು ಅಡಿ ಎತ್ತರದ ಮಲೈ ಮಹದೇಶ್ವರ ಪ್ರತಿಮೆ ನಿರ್ಮಿಸಲು ತೀರ್ಮಾನ ಮೈಸೂರು,ಆ.30.(ಕ.ವಾ.)-ಚಾಮರಾಜನಗರ ಜಿಲ್ಲೆಯ ಶ್ರೀ ಮಲೈ ಮಹದೇಶ್ವರಸ್ವಾಮಿ ಪ್ರಾಧಿಕಾರದ ದೀಪದ ಗಿರಿ ಒಡ್ಡಿನಲ್ಲಿ ಸುಮಾರು 100 ಅಡಿ ಎತ್ತರದ ಶ್ರೀ ಮಲೈ ಮಹಾದೇಶ್ವರ ಸ್ವಾಮಿ ಪ್ರತಿಮೆ ನಿರ್ಮಿಸಲು ತೀರ್ಮಾನಿಸಲಾಯಿತು. ಈ ತೀರ್ಮಾನವನ್ನು ಇಂದು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸಹಕಾರ ಮತ್ತು ಸಕ್ಕರೆ ಖಾತೆ ಸಚಿವ ಹಾಗೂ ಶ್ರೀ ಮಲೈ ಮಹದೇಶ್ವರಸ್ವಾಮಿ ಪ್ರಾಧಿಕಾರದ ಉಪಾಧ್ಯಕ್ಷರಾದ ಹೆಚ್.ಎಸ್. ಮಹದೇವ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರ ಸಚಿವರು ಪ್ರತಿಮೆ ನಿರ್ಮಾಣಕ್ಕಾಗಿ 43 ಎಕರೆ ವಿಸ್ತೀರ್ಣದ ಪ್ರದೇಶವನ್ನು ಗುರುತಿಸಲಾಗಿದೆ. 20 ಎಕರೆ ಕಂದಾಯ ಇಲಾಖೆಯ ವ್ಯಾಪ್ತಿಯದ್ದಾಗಿದ್ದು, 10 ಎಕರೆ ಒತ್ತುವರಿಯಿದ್ದು, ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಉಳಿದ 13 ಎಕರೆಯಲ್ಲಿರುವವರಿಗೆ ಪರ್ಯಾಯವಾಗಿ ಜಮೀನು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು. ಪ್ರತಿಮೆಯನ್ನು ಸಿಮೆಂಟ್ ಕಾಂಕ್ರೀಟ್ ಬಳಸಿ ನಿರ್ಮಿಸಲಾಗುವುದು. ಇದಕ್ಕೆ 21 ಕೋಟಿ ರೂ ವೆಚ್ಚವಾಗಲಿದ್ದು, ಇದಕ್ಕೆ ಭಕ್ತಾಧಿಗಳಿಂದ ದೇಣಿಗೆ ಸಂಗ್ರಹಿಸಲಾಗುವುದು. ಪ್ರತಿಮೆ ನಿರ್ಮಾಣಕ್ಕಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಮೆ ನಿರ್ಮಿಸಿರುವವರಿಂದ ಎಕ್ಸ್‍ಪ್ರೆಷನ್ ಆಫ್ ಇಂಟ್ರಸ್ಟ್ ಕರೆಯಲಾಗುವುದು. ಪ್ರತಿಮೆ ನಿರ್ಮಾಣದ ಸ್ಥಳದಲ್ಲಿ ಉದ್ಯಾನವನ, ನೀರಿನ ಕಾರಂಜಿ, ಬಯಲು ರಂಗಮಂದಿರ ನಿರ್ಮಿಸಲು ಸಹ ಯೋಜಿಸಲಾಗಿದೆ ಎಂದರು. ಚಾಮರಾಜನಗರ ಜಿಲ್ಲೆಯಲ್ಲಿ ಕಂಸಾಳೆ, ಮಂಟೇಸ್ವಾಮಿ, ಗುರುಭಜನೆ ಮುಂತಾದ ಜನಪದ ಕಲೆಗಳನ್ನು ಉತ್ತೇಜಿಸಿ ಪೋಷಿಸಿ ಬೆಳೆಸುವ ದೃಷ್ಟಿಯಿಂದ ಪ್ರಾಧಿಕಾರದ ವತಿಯಿಂದ 3 ಎಕರೆ ಜಮೀನನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ನೀಡಲಾಗಿತ್ತು. ಇಲಾಖೆಯವರು ಜನಪದ ವಿಶ್ವವಿದ್ಯಾನಿಲನಯಕ್ಕೆ ಸ್ಥಳ ನೀಡಿರುತ್ತಾರೆ ಆದರೆ ಇಲ್ಲಿ ಯಾವುದೇ ಪ್ರಗತಿಯುತ ಕೆಲಸವಾಗಿಲ್ಲ. ಪ್ರಾಧಿಕಾರವು ಈ ಸ್ಥಳವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ವಾಪಸ್ಸು ಪಡೆದು. ಜಾನಪದ ವಿಶ್ವವಿದ್ಯಾನಿಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡು ಜನಪದ ಕಲೆ ಬೆಳೆಸುವ ಕೆಲಸ ಮಾಡಲಿದೆ ಎಂದರು. 50 ಕೋಟಿ ರೂ. ವೆಚ್ಚದಲ್ಲಿ ಪ್ರಾಧಿಕಾರದಿಂದ ಒಳ ಚರಂಡಿ ಕಾಮಗಾರಿ, ತಿರುಪತಿಯ ರೀತಿಯಲ್ಲಿ ಅಂತರಗಂಗೆ, ವಸತಿ ಸಮೂಹ ಹಾಗೂ ಪ್ರಾಧಿಕಾರದ ನೌಕರರಿಗೆ ವಸತಿಗೃಹ ನಿರ್ಮಾಣದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಸೆಪ್ಟೆಂಬರ್ ಮಾಹೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು. ಭಕ್ತಾಧಿಗಳು ಸಲ್ಲಿಸುವ ಕಾಣಿಕೆಗಳಿಗಾಗಿ ನಾಗಮಲೈನಲ್ಲಿ ಪ್ರಾಧಿಕಾರದ ವತಿಯಿಂದ ಗೋಲಕ ಇಡಲಾಗುವುದು. ಇಲ್ಲಿ ಸಂಗ್ರಹವಾಗುವ ಹಣದಿಂದ ಭಕ್ತಾಧಿಗಳಿಗೆ ಬೇಕಾಗುವ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಪ್ರಾಧಿಕಾರದ ಕೆಲಸ ನಿರ್ವಹಣೆಗಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಿನ ಸಭೆಯೊಳಗಾಗಿ ಸಿ ಅಂಡ್ ಆರ್ ರೂಲ್ ಸಿದ್ದಪಡಿಸುವಂತೆ ತಿಳಿಸಿದರು. ು. ಮಲೈ ಮಹಾದೇಶ್ವರ ಪ್ರಾಧಿಕಾರದ ವ್ಯಾಪ್ತಿಯಲ್ಲಿ 176 ಎಕರೆ ಭೂಮಿಯಿದ್ದು, ಮುಂದಿನ ದಿನಗಳಲ್ಲಿ ಪ್ರಾಧಿಕಾರದ ಅಭಿವೃದ್ಧಿ ಹಾಗೂ ಭಕ್ತಾಧಿಗಳ ಮೂಲಭೂತ ವ್ಯವಸ್ಥೆಗಾಗಿ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿಕೊಳ್ಳಲಾಗಿದೆ. ಮಾಸ್ಟರ್ ಪ್ಲ್ಯಾನ್ ಅನ್ವಯ ಪ್ರಾಧಿಕಾರಕ್ಕೆ ಬರುವ ಹಣದಿಂದ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಈ ಯೋಜನೆಯಲ್ಲಿ ದೀಪಾವಳಿ ಮುಂತಾದ ವಿಶೇಷ ದಿನಗಳಲ್ಲಿ ಭಕ್ತಾಧಿಗಳ ಸಂಖ್ಯೆ ಹೆಚ್ಚಳವಾದಗ ಅವರಿಗೆ ಸರದಿಯಲ್ಲಿ ಕಾಯಲು ಅನುಕೂಲವಾಗುವಂತೆ ಕಂಪಾರ್ಟ್‍ಮೆಂಟ್, ಶೌಚಾಲಯದ ವ್ಯವಸ್ಥೆ, ಕುಡಿಯುವ ನೀರು, ವಾಹನ ನಿಲುಗಡೆ ಸೇರಿದಂತೆ ಇನ್ನಿತರ ವ್ಯವಸ್ಥೆಗಳು ಸೇರಿರುತ್ತದೆ ಎಂದರು. ಮಲೈ ಮಹದೇಶ್ವರ ದೇವಸ್ಥಾನಕ್ಕೆ ವಾರ್ಷಿಕ ಅಂದಾಜು 15 ರಿಂದ 20 ಲಕ್ಷ ಭಕ್ತಾಧಿಗಳು ಭೇಟಿ ನೀಡುತ್ತಾರೆ. ಪ್ರಾಧಿಕಾರದ ರಚನೆಯ ಮೊದಲು ದೇವಸ್ಥಾನದ ಆದಾಯ 42 ಕೋಟಿ ಇದ್ದು, ಪ್ರಾಧಿಕಾರದ ರಚನೆಯ ನಂತರ 2015-16 ನೇ ಸಾಲಿನಲ್ಲಿ 56 ಕೋಟಿ ಇರುತ್ತದೆ. ಪ್ರಸಕ್ತ ಸಾಲಿನಲ್ಲಿ ಇನ್ನು ಹೆಚ್ಚಳವಾಗಲಿದೆ ಎಂದರು. ಮೈಸೂರು ಜಿಲ್ಲೆ ಚಾಮರಾಜನಗರ ಜಿಲ್ಲೆಗೆ ಸಮೀಪವಾಗಿದ್ದು, ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಮಲೈ ಮಹದೇಶ್ವರ ದೇವಸ್ಥಾನಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಪ್ರವಾಸಿಗರಿಗೆ ಮಾಹಿತಿ ನೀಡಲು ಮೈಸೂರು ಜಿಲ್ಲೆಯಲ್ಲಿ ಪ್ರಾಧಿಕಾರದ ವತಿಯಿಂದ ಮಾಹಿತಿ ಕೇಂದ್ರ ತೆರೆಯಲು ಯೋಜಿಸಿದ್ದು, ಧಾರ್ಮಿಕ ದತ್ತಿ ಇಲಾಖೆಯವರಿಗೆ ಸ್ಥಳ ಗುರುತಿಸುವಂತೆ ತಿಳಿಸಲಾಗಿದೆ ಎಂದರು. ಚಾಮರಾಜನಗರ ಅಪರ ಜಿಲ್ಲಾಧಿಕಾರಿ ಭಾರತಿ ಅವರು ಮಾತನಾಡಿ ಮುಂದಿನ ತಿಂಗಳು ದೇವಸ್ಥಾನದ ಆನ್‍ಲೈನ್ ಸೇವೆಗಳಿಗೆ ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ದೂರದಿಂದ ಆಗಮಿಸುವ ಭಕ್ತಾಧಿಗಳಿಗೆ ಅನುಕೂಲವಾಗಲಿದೆ. ದೇವಸ್ಥಾನದಲ್ಲಿ ಹಾಗೂ ಸುತ್ತಮುತ್ತಲು 13 ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಸಿಸಿ ಕ್ಯಾಮರಾಗಳ ಮೂಲಕ ಒಂದು ಕಿ.ಮೀಟರ್ ವ್ಯಾಪ್ತಿಯಲ್ಲಿ ನಡೆಯಲು ಸನ್ನಿವೇಶಗಳನ್ನು ಸೆರೆಹಿಡಿಯಬಹುದು ಎಂದು ತಿಳಿಸಿದರು. ಸಭೆಯಲ್ಲಿ ಲೋಕಸಭಾ ಸದಸ್ಯ ಆರ್. ಧ್ರುವನಾರಾಯಣ್, ವಿಧಾನಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ, ಆರ್. ಧರ್ಮಸೇನ, ಹನೂರು ಕ್ಷೇತ್ರದ ಶಾಸಕ ನರೇಂದ್ರ. ಸಾಲೂರು ಮಠದ ಸ್ವಾಮೀಜಿ, ಚಾಮರಾಜನಗರ ಜಿಲ್ಲಾಧಿಕಾರಿ ಡಿ. ರಾಮು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಸುಲಿದ ತೆಂಗಿನಕಾಯಿಗಳ ಖರೀದಿ: ಸೆಪ್ಟೆಂಬರ್ 3ರವರೆಗೆ ಮಾರಾಟ ಚಾಮರಾಜನಗರ, ಆ. 31 (ಕರ್ನಾಟಕ ವಾರ್ತೆ):- ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಸುಲಿದ ತೆಂಗಿನಕಾಯಿ ಖರೀದಿ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ಸೆಪ್ಟೆಂಬರ್ 3 ರಂದು ಮುಕ್ತಾಯಗೊಳಿಸಲಾಗುತ್ತಿದೆ. ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ರೈತರು ಸೆಪ್ಟೆಂಬರ್ 3ರ ವರೆಗೆ ಸುಲಿದ ತೆಂಗಿನಕಾಯಿಗಳನ್ನು ಖರೀದಿ ಕೆಂದ್ರಗಳಿಗೆ ತಂದು ಮಾರಾಟ ಮಾಡಬೇಕು. ಆನಂತರದ ಖರೀದಿ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಶಾಖಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪರಿಸರ ಸ್ನೇಹಿ ಗೌರಿ-ಗಣೇಶ ಚತುರ್ಥಿ ಆಚರಿಸಲು ಬೀದಿನಾಟಕ ಚಾಮರಾಜನಗರ, ಆ. 31 (ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿವತಿಯಿಂದ ಈ ಬಾರಿಯ ಗೌರಿ-ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬೀದಿನಾಟಕ ಕಾರ್ಯಕ್ರಮವನ್ನು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಸೆಪ್ಟೆಂಬರ್ 3ರಂದು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 10.30 ಗಂಟೆಗೆ ಗುಂಡ್ಲುಪೇಟೆಯ ಖಾಸಗಿ ಬಸ್ ನಿಲ್ದಾಣ, ಮಧ್ಯಾಹ್ನ 1 ಗಂಟೆಗೆ ಚಾಮರಾಜನಗರದ ಖಾಸಗಿ ಬಸ್ ನಿಲ್ದಾಣ ಮತ್ತು ಸಂಜೆ 4.30 ಗಂಟೆಗೆ ಕೊಳ್ಳೇಗಾಲದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಪರಿಸರ ಸ್ನೇಹಿಯಾಗಿ ಗೌರಿ-ಗಣೇಶ ಹಬ್ಬ ಆಚರಿಸುವಂತೆ ಜನಜಾಗೃತಿ ಮೂಡಿಸುವ ಬೀದಿನಾಟಕಗಳನ್ನು ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಎಂ. ಪ್ರಕಾಶ್ ತಿಳಿಸಿದ್ದಾರೆ. ಕ.ರಾ.ಮು.ವಿ.ವಿ ವಾರ್ಷಿಕ ಪರೀಕ್ಷೆ: ಸೆ.2ರ ಪರೀಕ್ಷೆಗಳು 27ಕ್ಕೆ ಮುಂದೂಡಿಕೆ ಚಾಮರಾಜನಗರ, ಆ. 31 (ಕರ್ನಾಟಕ ವಾರ್ತೆ):- 2016ರ ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬಿ.ಎ ಹಾಗೂ ಬಿ.ಕಾಂ ವಾರ್ಷಿಕ ಪರೀಕ್ಷೆಗಳು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಸೆಪ್ಟೆಂಬರ್ 2ರಂದು ಕಾರ್ಮಿಕ ಸಂಘಟನೆಗಳು ಮುಷ್ಕರ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಅಂದು ಪೂರ್ವಾಹ್ನ ಮತ್ತು ಅಪರಾಹ್ನ ನಡೆಯಬೇಕಿದ್ದ ಪರೀಕ್ಷೆಗಳನ್ನು ಸೆ. 27ಕ್ಕೆ ಮುಂದೂಡಿ ನಿಗದಿಪಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಕೇಂದ್ರದ ದೂರವಾಣಿ ಸಂಖ್ಯೆ 8722080011, 8792878070, 9448500718 ಮತ್ತು 9740701186 ನ್ನು ಸಂಪರ್ಕಿಸುವಂತೆ ಕ.ರಾ.ಮು.ವಿ.ವಿಯ ಪ್ರಾದೇಶಿಕ ನಿರ್ದೇಶಕರಾದ ಎಸ್. ಮಹದೇವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕ.ರಾ.ಮು.ವಿ.ವಿ ಪ್ರಾದೇಶಿಕ ಕೇಂದ್ರದ ಕಚೇರಿ ಸ್ಥಳಾಂತರ ಚಾಮರಾಜನಗರ, ಆ. 31 (ಕರ್ನಾಟಕ ವಾರ್ತೆ):- ನಗರದ ಅಗ್ರಹಾರ ರಸ್ತೆಯಲ್ಲಿರುವ ಮೆಘಾವತ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಚಾಮರಾಜನಗರ ಪ್ರಾದೇಶಿಕ ಕೇಂದ್ರದ ಕಚೇರಿಯನ್ನು ಕೆ.ಹೆಚ್.ಬಿ. ಕಾಲೋನಿಯ ಇಮ್ಯಾನುಯಲ್ ಕ್ರಿಸ್ಚಿಯನ್ ಸ್ಕೂಲ್ ಹತ್ತಿರ ನೂತನವಾಗಿ ನಿರ್ಮಿಸಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8792878070, 9731250740, 9448500718 ಮತ್ತು 9740701186 ನ್ನು ಸಂಪರ್ಕಿಸುವಂತೆ ಕ.ರಾ.ಮು.ವಿ.ವಿಯ ಪ್ರಾದೇಶಿಕ ನಿರ್ದೇಶಕರಾದ ಎಸ್. ಮಹದೇವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೆಶಿಪ್-3ರ ಯೋಜನೆಯಡಿ ನಿವೃತ್ತ ಅಧಿಕಾರಿ, ಸಿಬ್ಬಂದಿ ನೇಮಕಾತಿ ಚಾಮರಾಜನಗರ, ಆ. 31 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಕೆಶಿಪ್-3ರ ಯೋಜನೆಯಡಿ ರಸ್ತೆ ಅಭಿವೃದ್ಧಿಗಾಗಿ ಭೂಮಾಲೀಕರಿಂದ ಜಮೀನಿನ ನೇರ ಖರೀದಿ ಸಂಬಂಧ ಮತ್ತು ಇನ್ನಿತರೆ ಕೆಲಸ ಕಾರ್ಯಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಲು ನಿವೃತ್ತ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ನಿವೃತ್ತ ಬಿ. ವೃಂದದ ಅಧಿಕಾರಿಯ 1 ಹುದ್ದೆಗೆ 25,000 ರಿಂದ 30,000 ರೂ. ಗಳ ಮಾಸಿಕ ಗೌರವಧನ, ನಿವೃತ್ತ ಪ್ರಥಮ ದರ್ಜೆ ಸಹಾಯಕರ 1 ಹುದ್ದೆಗೆ 15,000 ರಿಂದ 20,000 ರೂ. ಗಳ ಮಾಸಿಕ ಗೌರವಧನ ಮತ್ತು ನಿವೃತ್ತ ಸರ್ವೇಯರ್‍ನ 1 ಹುದ್ದೆಗೆ ಮಾಸಿಕ 15,000 ರೂ. ಗಳ ಗೌರವಧನ ನೀಡಲಾಗುತ್ತದೆ. ಅಸಕ್ತ ನಿವೃತ್ತ ಅಧಿಕಾರಿ, ಸಿಬ್ಬಂದಿಗಳು ಸೇವೆಯಿಂದ ನಿವೃತ್ತಿ ಹೊಂದಿದ ಆದೇಶದ ದೃಢೀಕೃತ ಪ್ರತಿ, ವೈದ್ಯಕೀಯ ದೃಢೀಕರಣ ಪತ್ರ ಮತ್ತು ವಾಸಸ್ಥಳ ವಿಳಾಸದ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 7 ರೊಳಗೆ ಜಿಲ್ಲಾಧಿಕಾರಿಗಳು, ಚಾಮರಾಜನಗರ ಜಿಲ್ಲೆ, ಚಾಮರಾಜನಗರ ಇವರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ. .

Monday, 22 August 2016

ಗೌರಿ ಗಣೇಶ ಪ್ರತಿಷ್ಠಾಪನೆ : ಅನುಮತಿ ಕಡ್ಡಾಯ16-08-2016 ರಿಂದ 23-08-2016 ರವೆಗಿನ ಚಾಮರಾಜನಗರ ಪ್ರಮುಖ ಸುದ್ದಿಗಳು

ಗೌರಿ ಗಣೇಶ ಪ್ರತಿಷ್ಠಾಪನೆ : ಅನುಮತಿ ಕಡ್ಡಾಯ ಚಾಮರಾಜನಗರ, ಆ. 18 (ಕರ್ನಾಟಕ ವಾರ್ತೆ):– ಜಿಲ್ಲೆಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಸಂಘಸಂಸ್ಥೆಗಳು ನಿಗದಿಮಾಡಿರುವ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸುವುದರ ಜತೆಗೆ ಕಡ್ಡಾಯವಾಗಿ ಅನುಮತಿ ಪಡೆದು ಆಗಸ್ಟ್ 25ರೊಳಗೆ ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ. ಗೌರಿ ಗಣೇಶ ಪ್ರತಿಷ್ಠಾಪನೆ ಮಾಡುವ ಸಂಘಗಳ ಉಸ್ತುವಾರಿ ಮುಖ್ಯಸ್ಥರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಕಾರ್ಯಕ್ರಮದ ಆಯೋಜನೆಗೆ ಸಂಬಂಧಿಸಿದಂತೆ ಎಲ್ಲ ಆಗುಹೋಗುಗಳಿಗೆ ಜವಾಬ್ದಾರರೆಂಬ ಬಗ್ಗೆ, ಕಾನೂನು ಸುವ್ಯವಸ್ಥೆಯ ಹಿತದೃಷ್ಠಿಯಿಂದ ಸ್ಥಳೀಯ ನ್ಯಾಯಾಲಯ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ನೀಡುವ ಎಲ್ಲಾ ಸೂಚನೆಗಳನ್ನು ಪಾಲಿಸುವ ಬಗ್ಗೆ ಅನ್ಯಧರ್ಮ, ಮತ, ಸಂಘಟನೆ, ಜನಾಂಗ, ಸಾರ್ವಜನಿಕ ವ್ಯಕ್ತಿಗಳಿಗೆ ನೋವಾಗದಂತೆ ನಡೆದುಕೊಳ್ಳುವ ಬಗ್ಗೆ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು. ಪ್ರತಿಷ್ಠಾಪನೆ ದಿನ ವಿಶೇಷ ಕಾರ್ಯಕ್ರಮಗಳ ಆಯೋಜನೆ, ಭಾಗವಹಿಸಲಿರುವ ವಿಶೇಷ ಅತಿಥಿಗಳ ವಿವರ, ಸಾಂಸ್ಕøತಿಕ ಕಾರ್ಯಕ್ರಮಗಳು, ಮೆರವಣಿಗೆ, ವಿಸರ್ಜನಾ ದಿನ, ಮೆರವಣಿಗೆಯ ಮಾರ್ಗ ವಿವರಗಳನ್ನು ಸಲ್ಲಿಸಬೇಕು. (ಠಾಣಾಧಿಕಾರಿಗಳೊಂದಿಗೆ ಖುದ್ದು ಚರ್ಚಿಸಿ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕು) ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಸ್ಥಳ, ವಿಳಾಸ ಹಾಗೂ ಸ್ಥಳದ ಮಾಲೀಕರಿಂದ ಪಡೆದ ಅನುಮತಿ ಪತ್ರ (ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರಸಭೆ, ಖಾಸಗಿ ವ್ಯಕ್ತಿಗಳು), ಸ್ಥಳೀಯ ವಿದ್ಯುತ್ ಪ್ರಾಧಿಕಾರದಿಂದ ಪಡೆದ ನಿರಾಪೇಕ್ಷಣ ಪತ್ರ, ಅಗ್ನಿಶಾಮಕ ದಳದವರಿಂದ ಪಡೆದ ನಿರಾಪೇಕ್ಷಣ ಪತ್ರ ಸಲ್ಲಿಸಬೇಕು. ಸ್ಥಳೀಯ ಠಾಣೆಯಿಂದ ಧ್ವನಿವರ್ಧಕ ಬಳಕೆಗೆ ಪಡೆದ ಅನುಮತಿ ಪತ್ರವನ್ನು ನೀಡಬೇಕು. ಕಾರ್ಯಕ್ರಮ ಸಂಬಂಧ ಹಾಕಲಾಗುವ ಎಲ್ಲಾ ಫ್ಲೆಕ್ಸ್, ಪೋಸ್ಟರ್, ಫೋಟೋ ಇನ್ನಿತರ ಸಾಮಗ್ರಿಗಳಿಗೆ ಸ್ಥಳೀಯ ಆಡಳಿತದಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ಅನ್ಯಧರ್ಮ, ಮತ, ಸಂಘಟನೆ, ಜನಾಂಗ, ಸಾರ್ವಜನಿಕ ವ್ಯಕ್ತಿಗಳಿಗೆ ನೋವುಂಟು ಮಾಡದಂತಿರಬೇಕು. ವಿಸರ್ಜನಾ ಸ್ಥಳದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮ, ಜೀವರಕ್ಷಕ ಸಾಧನಗಳ ವಿವರ ಒದಗಿಸಬೇಕು. ಪ್ರತಿಷ್ಠಾಪಿತ ಮೂರ್ತಿಯ ರಕ್ಷಣೆಗೆ ಸ್ವಯಂಸೇವಕರನ್ನು ನಿಯೋಜಿಸಿಕೊಳ್ಳಬೇಕು. ನಿಯೋಜಿತರಾದವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆವುಳ್ಳ ಭಾವಚಿತ್ರ ಹೊಂದಿದ ಐಡಿ ಕಾರ್ಡ್, ಹಗಲುರಾತ್ರಿ ನಿಯೋಜಿಸಿರುವ ವೇಳಾಪಟ್ಟಿ ನೀಡಬೇಕು. ಪ್ರತಿಷ್ಠಾಪಿತ ಸ್ಥಳದಲ್ಲಿ ಒಂದು ರಿಜಿಸ್ಟರ್ ಇಟ್ಟು ಕಾವಲು ವಿವರವನ್ನು ನಮೂದಿಸಬೇಕು. ಸಾರ್ವಜನಿಕರಿಂದ ಗಣಪತಿ ಪ್ರತಿಷ್ಠಾಪನೆಗೆ ಬಲವಂತವಾಗಿ ಚಂದಾ ವಸೂಲಿ ಮಾಡುವುದು ಕಾನೂನುಬಾಹಿರಬಾಗಿದೆ. ಲಾಟರಿ ಇನ್ನಿತರ ಯೋಜನೆಗಳ ಮುಖಾಂತರವೂ ಹಣ ಸಂಗ್ರಹಣೆ ಮಾಡುವಂತಿಲ್ಲ. ಇಂತಹ ಪ್ರಕ್ರಿಯೆ ಕಂಡುಬಂದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿರುವಂತೆ ಮಣ್ಣಿನಿಂದ ಮಾಡಿದ ಬಣ್ಣರಹಿತ ಪರಿಸರಸ್ನೇಹಿ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಅಲಂಕಾರಕ್ಕೆ ನೈಸರ್ಗಿಕ ಸಾಮಗ್ರಿಗಳನ್ನು ಬಳಸಬೇಕು. ಸಾಧ್ಯವಾದಷ್ಟು ಮನೆಯಲ್ಲಿ ಬಕೆಟ್‍ಗಳಲ್ಲಿ ನೀರು ತುಂಬಿಸಿ ಮೂರ್ತಿಯನ್ನು ವಿಸರ್ಜಿಸಬೇಕು. ಇಲ್ಲವೇ ಲಭ್ಯವಿರುವ ಕೆರೆಗಳಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಸಂಚಾರಿ ವಿಸರ್ಜನಾ ವಾಹನ ಬಳಸಿ ವಿಸರ್ಜನೆ ಮಾಡಬೇಕು. ವಿಸರ್ಜನೆಗೆ ಮುನ್ನ ಅಲಂಕಾರಿಕ ವಸ್ತುಗಳನ್ನು ತೆಗೆಯಬೇಕು. ವಿಸರ್ಜನಾ ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ನೋಡಿಕೊಳ್ಳಬೇಕು. ಗಣಪತಿ ಮೂರ್ತಿ ಷ್ರತಿಷ್ಠಾಪನೆ ಸಂಬಂಧ ನೀಡಲಾಗಿರುವ ಎಲ್ಲಾ ಕ್ರಮಗಳನ್ನು ಪಾಲನೆ ಮಾಡಬೇಕು. ನಿಬಂಧನೆಗಳನ್ನು ಉಲ್ಲಂಘಿಸುವುದು, ಶಾಂತಿಭಂಗ ಉಂಟುಮಾಡುವುದು ಕಂಡುಬಂದಲ್ಲಿ ಪೊಲೀಸ್ ಅಧೀಕ್ಷಕರು, ದೂರವಾಣಿ ಸಂಖ್ಯೆ 08226-222243, ಮೊಬೈಲ್ 9480804601, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ದೂರವಾಣಿ ಸಂಖ್ಯೆ 08226-225979, ಮೊಬೈಲ್ 9480804604, ಡಿಎಸ್‍ಪಿ, ಚಾಮರಾಜನಗರ ದೂರವಾಣಿ ಸಂಖ್ಯೆ 08226-222090, ಮೊಬೈಲ್ 9480804620, ಡಿಎಸ್ ಪಿ ಕೊಳ್ಳೇಗಾಲ, ದೂರವಾಣಿ ಸಂಖ್ಯೆ 08224-252840, ಮೊಬೈಲ್ 9480804621, ಜಿಲ್ಲಾ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08226-222383, ಮೊಬೈಲ್ 9480804600ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ. ಗ್ರಾ ಪಂ ಚುನಾವಣೆ: ಜಿಲ್ಲಾಧಿಕಾರಿಗಳಿಂದ ಅಧಿಸೂಚನೆ ಚಾಮರಾಜನಗರ, ಆ. 16 (ಕರ್ನಾಟಕ ವಾರ್ತೆ):- ಅವಧಿ ಮುಕ್ತಾಯವಾಗಲಿರುವ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿಗಳ ಚುನಾವಣೆ ಹಾಗೂ ಉಪಚುನಾವಣೆಗೆ ಜಿಲ್ಲಾಧಿಕಾರಿ ಬಿ. ರಾಮು ಇಂದು ಅಧಿಸೂಚನೆ ಹೊರಡಿಸಿದರು. ಅವಧಿ ಮುಕ್ತಾಯವಾಗಲಿರುವ ಕೊಳ್ಳೇಗಾಲ ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿಯ ಸದಸ್ಯ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಶಾಗ್ಯ, ಸಿದ್ದಯ್ಯನಪುರ ಗ್ರಾಮ ಪಂಚಾಯಿತಿಯ ತಲಾ ಒಂದು ಸ್ಥಾನಕ್ಕೆ ಉಪ ಚುನಾವಣೆ ನಿಗದಿಯಾಗಿದೆ. ಚಾಮರಾಜನಗರ ತಾಲೂಕಿನ ಮಸಣಾಪುರ ಹಾಗೂ ಮಂಗಲ ಗ್ರಾಮ ಪಂಚಾಯಿತಿ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ನಾಮಪತ್ರ ಸಲ್ಲಿಕೆಗೆ ಆಗಸ್ಟ್ 19 ಕಡೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆಯು ಆಗಸ್ಟ್ 20ರಂದು ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಆಗಸ್ಟ್ 22 ಕಡೆಯ ದಿನವಾಗಿದೆ. ಆಗಸ್ಟ್ 28ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ (ಅವಶ್ಯವಿದ್ದರೆ) ನಡೆಸಲಾಗುತ್ತದೆ. ಮರು ಮತದಾನ ಅವಶ್ಯವಿದ್ದರೆ ಆಗಸ್ಟ್ 30ರಂದು ನಡೆಸಲಾಗುತ್ತದೆ. ಆಗಸ್ಟ್ 31ರಂದು ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅಂದೇ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ. ಕುರಟ್ಟಿ ಹೊಸೂರು ಕ್ಷೇತ್ರ ಸಂಖ್ಯೆ 1 ರ 2 ಸ್ಥಾನಕ್ಕೆ (ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ‘ಬ’ ವರ್ಗ) ಕ್ಷೇತ್ರ 2ರ 3 ಸ್ಥಾನಕ್ಕೆ (ಹಿಂದುಳಿದ ‘ಅ’ ವರ್ಗ (ಮಹಿಳೆ), ಸಾಮಾನ್ಯ ಮತ್ತು ಸಾಮಾನ್ಯ(ಮಹಿಳೆ)) ಎಲ್.ಪಿ.ಎಸ್ ಪ್ರಾಜೆಕ್ಟ್ ಕ್ಷೇತ್ರದ 3 ಸದಸ್ಯ ಸ್ಥಾನಕ್ಕೆ (ಹಿಂದುಳಿದ ‘ಅ’ ವರ್ಗ (ಮಹಿಳೆ), ಸಾಮಾನ್ಯ ಮತ್ತು ಸಾಮಾನ್ಯ (ಮಹಿಳೆ)), ದಂಟಳ್ಳಿ 1ನೇ ಕ್ಷೇತ್ರದ 2 ಸ್ಥಾನಕ್ಕೆ (ಸಾಮಾನ್ಯ, ಸಾಮಾನ್ಯ (ಮಹಿಳೆ)), ದಂಟಳ್ಳಿ 2ನೇ ಕ್ಷೇತ್ರದ 3 ಸ್ಥಾನಕ್ಕೆ (ಪರಿಶಿಷ್ಟ ಪಂಗಡ (ಮಹಿಳೆ), ಹಿಂದುಳಿದ ’ಅ’ ವರ್ಗ ಮತ್ತು ಸಾಮಾನ್ಯ), ಚೆಂಗಡಿ ಕ್ಷೇತ್ರದ 1 ಸ್ಥಾನಕ್ಕೆ (ಪರಿಶಿಷ್ಟ ಜಾತಿ (ಮಹಿಳೆ)) ಚುನಾವಣೆ ನಿಗದಿಯಾಗಿದೆ. ಶಾಗ್ಯ ಗ್ರಾಮ ಪಂಚಾಯಿತಿಯ 2ನೇ ಕ್ಷೇತ್ರದ 1 ಸ್ಥಾನಕ್ಕೆ (ಪರಿಶಿಷ್ಟ ಪಂಗಡ) ಮತ್ತು ಸಿದ್ದಯ್ಯನಪುರ ಗ್ರಾಮ ಪಂಚಾಯಿತಿಯ 2ನೇ ಕ್ಷೇತ್ರದ 1 ಸ್ಥಾನಕ್ಕೆ (ಸಾಮಾನ್ಯ) ಚುನಾವಣೆ ನಿಗದಿಯಾಗಿದೆ. ಚಾಮರಾಜನಗರ ತಾಲ್ಲೂಕಿನ ಮಸಣಾಪುರ ಗ್ರಾಮ ಪಂಚಾಯಿತಿಯ 1ನೇ ಕ್ಷೇತ್ರದ ಒಂದು ಸ್ಥಾನಕ್ಕೆ (ಪರಿಶಿಷ್ಟ ಜಾತಿ (ಮಹಿಳೆ)), ಮಂಗಲ ಗ್ರಾಮ ಪಂಚಾಯಿತಿಯ 2ನೇ ಕ್ಷೇತ್ರದ ಒಂದು ಸ್ಥಾನಕ್ಕೆ (ಸಾಮಾನ್ಯ (ಮಹಿಳೆ)) ಚುನಾವಣೆ ನಿಗದಿಯಾಗಿದೆ. ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ 3 ಗ್ರಾಮ ಪಂಚಾಯಿತಿಯ 16 ಸ್ಥಾನಗಳಿಗೆ ಹಾಗೂ ಚಾಮರಾಜನಗರ ತಾಲ್ಲೂಕಿನ 2 ಗ್ರಾಮ ಪಂಚಾಯಿತಿಯ 2 ಸದಸ್ಯ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಒಟ್ಟಾರೆ 5 ಗ್ರಾಮ ಪಂಚಾಯಿತಿಯ 18 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕುಶಲಕರ್ಮಿ ವಸತಿ ಕಾರ್ಯಾಗಾರ ನಿರ್ಮಾಣ ನೆರವಿಗೆ ಪ.ಜಾ, ಪ.ಪಂ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಚಾಮರಾಜನಗರ, ಆ. 16 (ಕರ್ನಾಟಕ ವಾರ್ತೆ):- ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಕೈಗಾರಿಕಾ ಕುಶಲಕರ್ಮಿಗಳಿಗೆ ವಸತಿ ಕಾರ್ಯಾಗಾರ ನಿರ್ಮಾಣ ಮಾಡಿಕೊಳ್ಳಲು ನೀಡುವ ನೆರವಿಗಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬಿದಿರು, ಬೆತ್ತ, ಬಡಗಿ, ಕಮ್ಮಾರಿಕೆ, ಕುಂಬಾರಿಕೆ, ಚರ್ಮ ವಸ್ತುಗಳ ತಯಾರಿಕೆ, ಟೈಲರಿಂಗ್ ಹೊರತುಪಡಿಸಿದ ಕರಕುಶಲ ವಸ್ತು ತಯಾರಿಕೆ, ಜನರಲ್ ಎಂಜಿನಿಯರಿಂಗ್, ಚಾಪೆ, ಬುಟ್ಟಿ ಹೆಣೆಯುವುದು, ತೆಂಗಿನ ನಾರಿನ ಉತ್ಪನ್ನ ತಯಾರಿಕೆ ವೃತ್ತಿಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ವಸತಿ ಕಾರ್ಯಾಗಾರ ನಿರ್ಮಾಣ ಮಾಡಿಕೊಳ್ಳಲು ನೆರವು ನೀಡಲಾಗುತ್ತದೆ. ಅರ್ಜಿದಾರರು ಚಟುವಟಿಕೆಯಲ್ಲಿ ತೊಡಗಿದ್ದು ಗ್ರಾಮ ಪಂಚಾಯಿತಿಯಿಂದ ದೃಢೀಕರಣ ಪತ್ರ ಪಡೆದು ಲಗತ್ತಿಸಬೇಕು. ವಸತಿ ಕಾರ್ಯಾಗಾರ ನಿರ್ಮಿಸಿಕೊಳ್ಳಲು ನಿವೇಶನ ಹೊಂದಿರಬೇಕು. ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರ ಕಚೇರಿಯಲ್ಲಿ ಪಡೆಯಬೇಕು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 25ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ವಿವಿಧ ತರಬೇತಿಗೆ ಪ.ಜಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಚಾಮರಾಜನಗರ, ಆ. 16 (ಕರ್ನಾಟಕ ವಾರ್ತೆ):- ಜಿಲ್ಲಾ ಕೈಗಾರಿಕಾ ಕೇಂದ್ರವು ವಿಶೇಷ ಘಟಕ ಯೋಜನೆಯಡಿ ವಿವಿಧ ಆಧುನೀಕರಣ ಮತ್ತು ತಾಂತ್ರಿಕ ತರಬೇತಿ ನೀಡಲಿದ್ದು ಪರಿಶಿಷ್ಟ ಜಾತಿಯ ಯುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಹತೆ ಹೊಂದಿರುವವರಿಗೆ ಕಂಪ್ಯೂಟರ್ ಆಫೀಸ್ ಮೇನೇಜ್‍ಮೆಂಟ್, ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಹೊಂದಿರುವವರಿಗೆ ಬ್ಯುಟಿಷಿಯನ್, 8ನೇ ತರಗತಿ ತೇರ್ಗಡೆಯಾದವರಿಗೆ ಫ್ಯಾಷನ್ ಡಿಸೈನಿಂಗ್ ತರಬೇತಿ ನೀಡಲಾಗುತ್ತದೆ. ಚಾಮರಾಜನಗರದ ಮರಿಯಾಲ ಜೆಎಸ್‍ಎಸ್ ಕೌಶಲ್ಯ ತರಬೇತಿ ಸಂಸ್ಥೆ, ಚಾಮರಾಜನಗರ ಹಾಗೂ ಯಳಂದೂರಿನ ಕಿಯೋನಿಕ್ಸ್, ಕಾವ್ಯಶ್ರೀ ಗಾರ್ಮೆಂಟ್ಸ್, ಕೊಳ್ಳೇಗಾಲದಲ್ಲಿರುವ ಕಾವ್ಯಶ್ರೀ ಗಾರ್ಮೆಂಟ್ಸ್‍ನಲ್ಲಿ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಮಾಹೆಯಾನ 2500 ರೂ. ಶಿಷ್ಯ ವೇÀತನ ನೀಡಲಾಗುತ್ತದೆ. ಅಭ್ಯರ್ಥಿಗಳೂ 18 ರಿಂದ 35ರ ವಯೋಮಿತಿಯೊಳಗಿರಬೇಕು. ನಿಗದಿತ ನಮೂನೆಯ ಅರ್ಜಿಯೊಂದಿಗೆ ಅಗತ್ಯ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಆಗಸ್ಟ್ 25ರೊಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ವಿವರಗಳಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರ ಕಚೇರಿ ಅಥವಾ ಆಯಾ ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ಆಗಸ್ಟ್ 17ರಂದು ಲೊಕ್ಕನಹಳ್ಳಿಯಲ್ಲಿ ಜನಸಂಪರ್ಕ ಸಭೆ ಚಾಮರಾಜನಗರ, ಆ. 16 (ಕರ್ನಾಟಕ ವಾರ್ತೆ):- ನಾಗರಿಕರ ಕುಂದುಕೊರತೆಗಳನ್ನು ಆಲಿಸುವ ಸಲುವಾಗಿ ಕೊಳ್ಳೆಗಾಲ ತಾಲೂಕಿನ ಲೊಕ್ಕನಹಳ್ಳಿ ಹೊಬಳಿ ಕೇಂದ್ರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟಲ್ ಅವರಣದಲ್ಲಿ ಆಗಸ್ಟ್ 17ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಮ್ಮುಖದಲ್ಲಿ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ. ಈ ಸಭೆಗೆ ನಾಗರಿಕರು ಪಾಲ್ಗೊಂಡು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜನಸಂಪರ್ಕ ಸಭೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ. ಆ. 19ರಂದು ನಗರದಲ್ಲಿ ಅರಸು ಕುರಿತು ವಿಚಾರ ಸಂಕಿರಣ ಚಾಮರಾಜನಗರ, ಆ. 17 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರ, ಹಿಂದುಳಿದ ವರ್ಗಗಳ ನೇತಾರ ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಆಚರಣೆ ಅಂಗವಾಗಿ ಆಗಸ್ಟ್ 19ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಅರಸು ಅವರ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳಾದ ಬಿ. ರಾಮು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಂಗಳೂರು ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಎಂ. ಚಂದ್ರಪೂಜಾರಿ ಅವರು ಡಿ. ದೇವರಾಜ ಅರಸು ಅವರ ಸಾಮಾಜಿಕ ನ್ಯಾಯ ಸುಧಾರಣೆ ಮತ್ತು ರಾಜಕೀಯ ತುಲನಾತ್ಮಕ ಆಡಳಿತ ಕುರಿತು, ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ಹೆಚ್. ಕೆ. ಲೋಲಾಕ್ಷಿ ಅವರು ಡಿ. ದೇವರಾಜ ಅರಸು ಅವರು ಕೈಗೊಂಡ ಕಾರ್ಯಕ್ರಮಗಳು ಮತ್ತು ಅವುಗಳ ಪ್ರಸ್ತುತತೆ ಕುರಿತು ಪ್ರಗತಿಪರ ಸಾಹಿತಿ ಮತ್ತು ಪತ್ರಕರ್ತರಾದ ಡಾ. ಕೃಷ್ಣಮೂರ್ತಿ ಚಮರಂ ಅವರು ಡಿ. ದೇವರಾಜ ಅರಸು ಪರಿವರ್ತನೆಯ ಹರಿಕಾರ ಎಂಬ ವಿಷಯ ಕುರಿತು ವಿಚಾರ ಮಂಡಿಸುವರು ಎಂದು ಪ್ರಕಟಣೆ ತಿಳಿಸಿದೆ. ಲೊಕ್ಕನಹಳ್ಳಿ ಜನ ಸಂಪರ್ಕ ಸಭೆಯಲ್ಲಿ ಮನವಿಗಳ ಮಹಾಪೂರ ಚಾಮರಾಜನಗರ. ಆಗಸ್ಟ್ 17 (ಕರ್ನಾಟಕ ವಾರ್ತೆ) ಜನರ ಸಮಸ್ಯೆ ಆಲಿಸುವ ಸಲುವಾಗಿ ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿಯಲ್ಲಿ ಇಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‍ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ಮನವಿಗಳ ಮಹಾಪೂರವೇ ಹರಿದು ಬಂದಿತು. ಹೋಬಳಿ ಕೇಂದ್ರದ ಸಮಾಜ ಕಲ್ಯಾಣ ಇಲಾಖೆ ವಸತಿನಿಲಯ ಆವರಣದಲ್ಲಿ ಜಿಲ್ಲಾಧಿಕಾರಿ ಬಿ.ರಾಮು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲ ಪಾಟಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ನಾಗರಿಕರು ಸರತಿ ಸಾಲಿನಲ್ಲಿ ನಿಂತು ಅಧಿಕಾರಿಗಳಿಗೆ ತಮ್ಮ ಕುಂದು ಕೊರತೆ ನಿವೇದಿಸುವ ಮನವಿ ಪತ್ರಗಳನ್ನು ಸಲ್ಲಿಸಿದರು. ಪ್ರತಿಯೊಬ್ಬರಿಂದ ಖುದ್ದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೇ ಮನವಿ ಪತ್ರ ಸ್ವೀಕರಿಸಿ ಸಮಸ್ಯಗಳನ್ನು ವಿವರವಾಗಿ ಆಲಿಸಿದರು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಬಿ.ರಾಮು ಅವರು ನಾಗರಿಕರ ಸಮಸ್ಯಗಳನ್ನು ಅವರ ಮನೆ ಬಾಗಿಲಿನಲ್ಲಿಯೇ ಕೇಳಿ ಪರಿಹರಿಸಬೇಕೆಂಬ ಮುಖ್ಯ ಮಂತ್ರಿಯವರ ನಿರ್ದೇಶನದಂತೆ ಪ್ರತಿ ತಿಂಗಳು 1 ರಿಂದ 2 ಜನ ಸಂಪರ್ಕ ಸಭೆಯನ್ನು ಹೋಬಳಿ ಮಟ್ಟದಲ್ಲಿ ನಡೆಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ತಿಂಗಳು ಜನ ಸಂಪರ್ಕ ಸಭೆ ನಡೆಸಲಿದ್ದಾರೆ. ಕಳೆದ ತಿಂಗಳು ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಹೋಬಳಿ ಕೇಂದ್ರದಲ್ಲಿ ತಾವು ಜನ ಸಂಪರ್ಕ ಸಭೆ ಆಯೋಜಿಸಿ ಮನವಿ ಸ್ವೀಕರಿಸಿದ್ದೇವೆ ಎಂದರು. ರಾಜ್ಯ ಸರ್ಕಾರ ಗ್ರಾಮೀಣ ಜನರ ಬದುಕು ಹಸನಾಗಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿ ಇಲಾಖೆಗೆ ಅರ್ಜಿ ಸಲ್ಲಿಸಿ ಸವಲತ್ತುಗಳನ್ನು ಪಡೆಯಬೇಕು, ಕೃಷಿ ಜೊತೆಗೆ ಆದಾಯ ಹೆಚ್ಚು ತರುವ ಹಸು, ಕುರಿ, ಕೋಳಿ ಸಾಕಾಣೆಯನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು. ಗ್ರಾಮೀಣ ಭಾಗದ ಜನರು ಆರ್.ಟಿ.ಸಿ, ವೃದ್ದಾಪ್ಯ ವೇತನ, ಅಂಗವಿಕಲರ ವೇತನ, ಮೈತ್ರಿ, ಮನಸ್ವಿನಿ ಯೋಜನೆಯ ಪ್ರಯೋಜನಕ್ಕೆ ಅರ್ಜಿ ಸಲ್ಲಿಸಲು ಹೋಬಳಿ ಕೇಂದ್ರಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲ. ಆಯಾ ಗ್ರಾಮ ಪಂಚಾಯತಿ ಕಚೇರಿಯಲ್ಲೆ ಬಾಪುಜಿ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದ್ದು ಎಲ್ಲಾ ಯೋಜನೆ ಹಾಗೂ ಸೇವೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಪ್ರಯೋಜನವನ್ನು ಪಡೆಯಬೇಕೆಂದು ರಾಮು ಅವರು ತಿಳಿಸಿದರು. ಇಂದಿನ ಜನ ಸಂಪರ್ಕ ಸಭೆಯಲ್ಲಿ ಜನರಿಂದ 333 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 228 ಅರ್ಜಿಗಳು ಅರಣ್ಯ ಹಾಗೂ ಪಂಚಾಯತ್‍ರಾಜ್ ಇಲಾಖೆಗೆ ಸಂಬಂದಿಸಿದ್ದಾಗಿದೆ. ಕಂದಾಯ ಇಲಾಖೆಗೆ ಸಂಬಂಧ ಪಟ್ಟಂತೆ 78 ಅರ್ಜಿಗಳು ಬಂದಿವೆ. ಇನ್ನಿತರ ಇಲಾಖೆಗಳ ಕುರಿತ ಮನವಿಗಳು ಸಹ ಸ್ವೀಕೃತವಾಗಿದೆ. ಈ ಎಲ್ಲಾ ಅರ್ಜಿಗಳಿಗೆ ಇನ್ನು 15 ದಿನಗಳ ಒಳಗೆ ಪರಿಶೀಲಿಸಿ ಸಮಸ್ಯ ಪರಿಹರಿಸುವಂತೆ ಸೂಚಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಪಂಚಾತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲ ಪಾಟಿ ಮಾತನಾಡಿ ಇಂದು ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಶೇ20 ರಷ್ಟು ಅರ್ಜಿಗಳಲ್ಲಿ ಶೌಚಾಲಯ ಹಾಗೂ ವಸತಿ ನಿರ್ಮಾಣ ಮಾಡಿಕೊಡುವಂತೆ ಕೋರಲಾಗಿದೆ. ಅರ್ಹ ಹಾಗೂ ಜಾಗ ಹೊಂದಿರುವವರಿಗೆ ಆದ್ಯತೆ ಮೇರೆಗೆ ಸೌಲಭ್ಯ ಕಲ್ಪಿಸಲಾಗುವುದು. ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೂ ಬೇಡಿಕೆಗೆ ಅನುಸಾರವಾಗಿ ಉನ್ನತ ಮಟ್ಟದಲ್ಲಿ ಗಮನಕ್ಕೆ ತಂದು ಅನುಕೂಲ ಮಾಡಿಕೊಡಲು ಮುಂದಾಗುವುದಾಗಿ ತಿಳಿಸಿದರು. ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ರಾಜು, ಜಿಲ್ಲಾ ಪಂಚಾಯತ್ ಸದಸ್ಯರಾದ ಮರುಗದ ಮಣಿ, ತಾಲ್ಲೂಕು ಪಂಚಾಯತ್ ಸದಸ್ಯರಾದ ರುಕ್ಮಿಣಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಿಂಗಶೆಟ್ಟಿ , ಉಪಾಧ್ಯಕ್ಷರಾದ ಸುಮತಿ, ತಹಸಿಲ್ದಾರ್ ಚಂದ್ರಮೌಳಿ ಇತರೆ ಜನ ಪ್ರತಿ ನಿಧಿಗಳು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ತರಬೇತಿ ಶುಲ್ಕ, ಶಿಷ್ಯ ವೇತನ ಪಡೆಯಲು ಹಿಂದುಳಿದ ವರ್ಗಗಳ ನರ್ಸಿಂಗ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಚಾಮರಾಜನಗರ, ಆ. 18 (ಕರ್ನಾಟಕ ವಾರ್ತೆ):– ಜಿಎನ್‍ಎಂ, ಬಿಎಸ್ಸಿ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ (ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ) ಕೋರ್ಸುಗಳಿಗೆ ತರಬೇತಿ ಶುಲ್ಕ, ಶಿಷ್ಯ ವೇತನ ಹಾಗೂ ಇತರೆ ಶುಲ್ಕ ಮಂಜೂರಾತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. 2016-17ನೇ ಸಾಲಿನಿಂದ ತರಬೇತಿ ಶುಲ್ಕ, ಶಿಷ್ಯ ವೇತನ ಇತರೆ ಶುಲ್ಕಗಳನ್ನು ಇ - ಪಾಸ್ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಜೂರು ಮಾಡುತ್ತಿದೆ. ಈ ಹಿಂದೆ ಬಿಎಸ್ಸಿ ನರ್ಸಿಂಗ್, ಜಿಎನ್‍ಎಂ ಹಾಗೂ ಪ್ಯಾರಾ ಮೆಡಿಕಲ್ (ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ) ಕೋರ್ಸ್‍ಗಳಲ್ಲಿ ತರಬೇತಿ ಶುಲ್ಕ ಮತ್ತು ಶಿಷ್ಯ ವೇತನಕ್ಕೆ ಆಯ್ಕೆಯಾಗಿದ್ದು ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮುಂದುವರೆಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಅಲ್ಲದೆ 2016-17ನೇ ಸಾಲಿನಲ್ಲಿ ಪ್ರಥಮ ವರ್ಷಕ್ಕೆ ದಾಖಲಾಗಿರುವ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬೇಕಿದೆ. ವಿವರಕ್ಕೆ ಞಚಿಡಿeಠಿಚಿss.egg.gov.iಟಿ ಹಾಗೂ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನೋಡಬಹುದು. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 15 ಕಡೆಯ ದಿನವಾಗಿದೆ ಎಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಿ. ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ. 20ರಂದು ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಚಾಮರಾಜನಗರ, ಆ. 18 (ಕರ್ನಾಟಕ ವಾರ್ತೆ):– ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ಸಾಮಾಜಿಕ ಕ್ರಾಂತಿಯ ಹರಿಕಾರ, ಹಿಂದುಳಿದ ವರ್ಗಗಳ ದೀನದಲಿತರ ಧೀಮಂತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವದ ಸಮಾರೋಪ ಹಾಗೂ 101ನೇ ಜನ್ಮ ದಿನಾಚರಣೆ ಸಮಾರಂಭವನ್ನು ಆಗಸ್ಟ್ 20ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಗೆ ಡಿ. ದೇವರಾಜ ಅರಸು ಅವರು ಕೈಗೊಂಡ ಸುಧಾರಣೆಗಳ ಕುರಿತು ಸ್ತಬ್ಧಚಿತ್ರ ಹಾಗೂ ಕಲಾತಂಡಗಳೊಂದಿಗಿನ ಮೆರವಣಿಗೆಗೆ ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಚಾಲನೆ ನೀಡುವರು. ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭವನ್ನು ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಉದ್ಘಾಟಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವÀಹಿಸುವರು. ವಿಧಾನ ಪರಿಷತ್‍ನ ಉಪಸಭಾಪತಿಗಳಾದ ಮರಿತಿಬ್ಬೇಗೌಡ ಡಿ. ದೇವರಾಜ ಅರಸು ಅವರ ಭಾವಚಿತ್ರ ಅನಾವರಣ ಮಾಡುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಸವಲತ್ತು ವಿತರಣೆ ಮಾಡುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಬಹುಮಾನ ವಿತರಿಸುವರು. ಸಾಹಿತಿ ಮತ್ತು ಸಂಸೃತಿ ಚಿಂತಕರಾದ ಪ್ರೊ. ಕಾಳೇಗೌಡ ನಾಗವಾರ ಮುಖ್ಯ ಭಾಷಣಕಾರರಾಗಿ ಆಗಮಿಸುವರು. ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜ್), ಆರ್. ಧರ್ಮಸೇನ, ನಗರಸಭೆ ಅಧ್ಯಕ್ಷರಾದ ಎಸ್. ಎನ್. ರೇಣುಕಾ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫಿ, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ನಗರಸಭೆ ಉಪಾಧ್ಯಕ್ಷರಾದ ಆರ್. ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳುವರು ಎಂದು ಪ್ರಕಟಣೆ ತಿಳಿಸಿದೆ. ಆ. 20ರಂದು ಆದರ್ಶ ವಿದ್ಯಾಲಯ ಕಟ್ಟಡ ಉದ್ಘಾಟನೆ ಚಾಮರಾಜನಗರ, ಆ. 18 (ಕರ್ನಾಟಕ ವಾರ್ತೆ):– ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ವತಿಯಿಂದ ತಾಲೂಕಿನ ಎಂ. ಮಲ್ಲಯ್ಯನಪುರದಲ್ಲಿ ನಿರ್ಮಾಣ ಮಾಡಿರುವ ಸರ್ಕಾರಿ ಆದರ್ಶ ವಿದ್ಯಾಲಯ ಕಟ್ಟಡದ ಉದ್ಘಾಟನಾ ಸಮಾರಂಭವು ಆಗಸ್ಟ್ 20ರಂದು ಮಧ್ಯಾಹ್ನ 2.30 ಗಂಟೆಗೆ ನೆರವೇರಲಿದೆ. ಸಹಕಾರ, ಸಕ್ಕರೆÀ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಉದ್ಘಾಟಿಸುವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ವಕ್ಫ್ ಸಚಿವರಾದ ತನ್ವೀರ್ ಸೇಠ್ ನಾಮಫಲಕ ಅನಾವರಣ ಮಾಡುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವÀಹಿಸುವರು. ವಿಧಾನ ಪರಿಷತ್‍ನ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜ್), ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ. ಚಂದ್ರಕಲಾ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಸದಸ್ಯರಾದ ಎಸ್. ನಾಗರಾಜಮ್ಮ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎನ್. ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳುವರು ಎಂದು ಪ್ರಕಟಣೆ ತಿಳಿಸಿದೆ. ಆರೋಗ್ಯ ಸಹಾಯಕಿಯರ ತರಬೇತಿಗೆ ಅರ್ಜಿ ಆಹ್ವಾನ ಚಾಮರಾಜನಗರ, ಆ. 18 (ಕರ್ನಾಟಕ ವಾರ್ತೆ):– ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಿಎನ್‍ಎಂ ಶಾಲೆಗಳಿಗೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಆಗಸ್ಟ್ 24ರ ಸಂಜೆ 5.30 ಗಂಟೆಯೊಳಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಸಂಪೂರ್ಣ ಮಾಹಿತಿಗೆ ವೆಬ್ ಸೈಟ್ ತಿತಿತಿ.ಞಚಿಡಿhಜಿತಿ.gov.iಟಿ ನೋಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗ್ರಾ.ಪಂ. ಚುನಾವಣೆ : ಮದ್ಯ ಮಾರಾಟ ನಿಷೇಧ ಚಾಮರಾಜನಗರ, ಆ. 18 (ಕರ್ನಾಟಕ ವಾರ್ತೆ):– ವಿವಿಧ ಕಾರಣಗಳಿಂದ ತೆರವಾಗಿರುವ ಹಾಗೂ ಅವಧಿ ಮುಕ್ತಾಯವಾಗುವ ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ಹಾಗೂ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆಯಾ ವ್ಯಾಪ್ತಿ ಪ್ರದೇಶದಲ್ಲಿ ನೀತಿ ಸಂಹಿತೆ ಮುಕ್ತಾಯವಾಗುವವರೆಗೂ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಬಿ. ರಾಮು ಆದೇಶ ಹೊರಡಿಸಿದ್ದಾರೆ. ಮತದಾನವು ಶಾಂತ ಹಾಗೂ ಮುಕ್ತವಾಗಿ ನಡೆಯುವಂತಾಗಲು ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಒಂದು ಮದ್ಯದಂಗಡಿಯನ್ನು ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಅಂದರೆ ಆಗಸ್ಟ್ 16 ರಿಂದ 31ರವರೆಗೆ ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ. ಉಳಿದಂತೆ ಚುನಾವಣೆ ನಡೆಯಲಿರುವ ಕೊಳ್ಳೇಗಾಲ ತಾಲೂಕಿನ ಕುರಟ್ಟಿ ಹೊಸೂರು, ಶಾಗ್ಯ, ಸಿದ್ದಯ್ಯನಪುರ ಗ್ರಾಮ ಪಂಚಾಯಿತಿ ಹಾಗೂ ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಮದ್ಯದಂಗಡಿ ಇಲ್ಲ. ಹೀಗಾಗಿ ಮಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಒಂದು ಮದ್ಯದಂಗಡಿಯನ್ನು ನೀತಿ ಸಂಹಿತೆ ಅವಧಿಯಲ್ಲಿ ಮುಚ್ಚುವಂತೆ ಆದೇಶಿಸಲಾಗಿದೆ. ನೀತಿಸಂಹಿತೆ ಅವಧಿಯಲ್ಲಿ ಮದ್ಯ ಮಾರಾಟ, ಹಂಚಿಕೆ, ಶೇಖರಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ಪ್ಲಾಸ್ಟಿಕ್ ರಾಷ್ಟ್ರಧ್ವಜ ಮಾರಾಟ, ಮುದ್ರಣ, ದಾಸ್ತಾನು ನಿಷೇಧ ಚಾಮರಾಜನಗರ, ಆ. 18 (ಕರ್ನಾಟಕ ವಾರ್ತೆ):– ಜಿಲ್ಲೆಯಲ್ಲಿ ಪ್ಲಾಸ್ಟಿಕ್‍ನಿಂದ ತಯಾರಿಸಿದ ರಾಷ್ಟ್ರಧ್ವಜ ಮಾರಾಟ ಮಾಡುವುದು, ಮುದ್ರಿಸುವುದು ಹಾಗೂ ದಾಸ್ತಾನು ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಬಿ. ರಾಮು ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಸಾಂಸ್ಕøತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳಲ್ಲಿ ಕಾಗದದಿಂದ ತಯಾರಿಸಿದ ರಾಷ್ಟ್ರಧ್ವಜಗಳನ್ನು ಮಾತ್ರ ಬಳಸಬೇಕು. ಕಾರ್ಯಕ್ರಮ ಮುಗಿದ ಬಳಿಕ ಇವುಗಳನ್ನು ನೆಲದ ಮೇಲೆ ಎಲ್ಲೆಂದರಲ್ಲಿ ಬಿಸಾಡದೆ ನಿಯಮಾನುಸಾರ ಗೌರವಪೂರ್ವಕವಾಗಿ ಅವುಗಳ ವಿಲೇ ಮಾಡಬೇಕು. ಪ್ಲಾಸ್ಟಿಕ್‍ನಿಂದ ರಾಷ್ಟ್ರಧ್ವಜ ತಯಾರಿಸುವುದು, ಪ್ಲಾಸ್ಟಿಕ್ ಬ್ಯಾಗ್ ಹಾಳೆಯ ಮೇಲೆ ರಾಷ್ಟ್ರಧ್ವಜ ಮುದ್ರಿಸುವುದನ್ನು ನಿಷೇಧಿಸಲಾಗಿದೆ. ಎಲ್ಲ ಅಂಗಡಿ, ಸ್ಟೇಷನರಿ ಅಂಗಡಿ ಹಾಗೂ ಬೀದಿಬದಿಗಳಲ್ಲಿ ಪ್ಲಾಸ್ಟಿಕ್‍ನಿಂದ ತಯಾರಿಸಿದ ರಾಷ್ಟ್ರಧ್ವಜ ಮಾರಾಟ, ಮುದ್ರಣ ಹಾಗೂ ದಾಸ್ತಾನು ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ಆದೇಶದಲ್ಲಿ ತಿಳಿಸಿದ್ದಾರೆ. ಆ. 24ರಂದು ನರ್ಸಿಂಗ್ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಚಾಮರಾಜನಗರ, ಆ. 18 (ಕರ್ನಾಟಕ ವಾರ್ತೆ):– ಬೆಂಗಳೂರಿನ ಅಪೊಲೋ ಹೋಂ ಹೆಲ್ತ್ ಕೇರ್ ಕಂಪನಿಯು ಬಿಎಸ್ಸಿ ನರ್ಸಿಂಗ್, ಎಎನ್‍ಎಂ, ಜಿಎನ್‍ಎಂ ಹಾಗೂ ಎಂಎಸ್ಸಿ ನರ್ಸಿಂಗ್ ವಿದ್ಯಾರ್ಹತೆಯುಳ್ಳ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಆಗಸ್ಟ್ 24ರಂದು ಬೆಳಿಗ್ಗೆ 10.30 ಗಂಟೆಗೆ ನೇರ ಸಂದರ್ಶನ ನಡೆಸಲಿದೆ. ಆಸಕ್ತರು ಸ್ವವಿವರದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು, ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗಾಧಿಕಾರಿ ಅವರ ದೂರವಾಣಿ ಸಂಖ್ಯೆ 08226-224430 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ಬಹಿರಂಗ ಹರಾಜು ಚಾಮರಾಜನಗರ, ಆ. 18 (ಕರ್ನಾಟಕ ವಾರ್ತೆ):– ನಗರದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರ ಕಚೇರಿಯ ಟಾಟಾ ಸುಮೋ ವಿಕ್ಟಾ ಹಾಗೂ ಟಾಟಾ ಸುಮೋ ವಾಹನಗಳ 24 ಹಳೆಯ ಟೈರುಗಳು ಮತ್ತು ಒಂದು ಹಳೆಯ ಬ್ಯಾಟರಿ, ಇತರೆ ಕಬ್ಬಿಣದ ಬಿಡಿಭಾಗಗಳನ್ನು ಆಗಸ್ಟ್ 25ರಂದು ಮಧ್ಯಾಹ್ನ 12 ಗಂಟೆಗೆ ನಗರದ ಲೋಕಾಯುಕ್ತ ಕಚೇರಿಯ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುತ್ತದೆ. ಆಸಕ್ತರು ಭಾಗವಹಿಸಬಹುದು. ವಿವರಗಳಿಗೆ ಕಚೇರಿ ಅಥವಾ ದೂರವಾಣಿ ಸಂಖ್ಯೆ 08226-223333 ಅಥವಾ 226177 ಸಂಪರ್ಕಿಸುವಂತೆ ನಗರದ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ. 19ರಂದು ನಗರದಲ್ಲಿ ಅರಸು ಕುರಿತು ವಿಚಾರ ಸಂಕಿರಣ ಚಾಮರಾಜನಗರ, ಆ. 18 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರ, ಹಿಂದುಳಿದ ವರ್ಗಗಳ ನೇತಾರ ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಆಚರಣೆ ಅಂಗವಾಗಿ ಆಗಸ್ಟ್ 19ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಅರಸು ಅವರ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳಾದ ಬಿ. ರಾಮು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಂಗಳೂರು ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಎಂ. ಚಂದ್ರಪೂಜಾರಿ ಅವರು ಡಿ. ದೇವರಾಜ ಅರಸು ಅವರ ಸಾಮಾಜಿಕ ನ್ಯಾಯ ಸುಧಾರಣೆ ಮತ್ತು ರಾಜಕೀಯ ತುಲನಾತ್ಮಕ ಆಡಳಿತ ಕುರಿತು, ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ಹೆಚ್. ಕೆ. ಲೋಲಾಕ್ಷಿ ಅವರು ಡಿ. ದೇವರಾಜ ಅರಸು ಅವರು ಕೈಗೊಂಡ ಕಾರ್ಯಕ್ರಮಗಳು ಮತ್ತು ಅವುಗಳ ಪ್ರಸ್ತುತತೆ ಕುರಿತು ಪ್ರಗತಿಪರ ಸಾಹಿತಿ ಮತ್ತು ಪತ್ರಕರ್ತರಾದ ಡಾ. ಕೃಷ್ಣಮೂರ್ತಿ ಚಮರಂ ಅವರು ಡಿ. ದೇವರಾಜ ಅರಸು ಪರಿವರ್ತನೆಯ ಹರಿಕಾರ ಎಂಬ ವಿಷಯ ಕುರಿತು ವಿಚಾರ ಮಂಡಿಸುವರು ಎಂದು ಪ್ರಕಟಣೆ ತಿಳಿಸಿದೆ. ಅರಸು ಅವಧಿಯಲ್ಲಿ ಭೂಸುಧಾರಣೆ ಕಾಯಿದೆ ಪರಿಣಾಮಕಾರಿ ಜಾರಿ ಚಾಮರಾಜನಗರ, ಆ. 19 (ಕರ್ನಾಟಕ ವಾರ್ತೆ):- ಭೂಸುಧಾರಣಾ ಕಾಯಿದೆಯನ್ನು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದ ಹೆಗ್ಗಳಿಕೆ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರ ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಆಚರಣೆ ಅಂಗವಾಗಿ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅರಸು ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಡಿ. ದೇವರಾಜ ಅರಸು ಅವರು ಜಾರಿಗೆ ತಂದ ಉಳುವವನೇ ಭೂಮಿಯ ಒಡೆಯ ಕಾರ್ಯಕ್ರಮದಿಂದ ಸಾವಿರಾರು ರೈತರು, ಬಡಜನತೆಗೆ ಅನುಕೂಲವಾಯಿತು. ಭೂಸುಧಾರಣಾ ಕಾಯಿದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ ಕೀರ್ತಿಗೆ ಅರಸು ಅವರು ಪಾತ್ರರಾದರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು. ಅರಸು ಅವರು ಚಿಕ್ಕಂದಿನಿಂದಲೇ ಶೋಷಿತರು, ಹಿಂದುಳಿದವರ ನೋವನ್ನು ಬಲ್ಲವರಾಗಿದ್ದರು. ಈ ಅನುಭವದ ಆಧಾರದ ಮೇಲೆ ಅರಸು ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಬಡವರ ಪರ ಅನೇಕ ಸುಧಾರಣೆ ಕಾರ್ಯಕ್ರಮಗಳನ್ನು ಕೈಗೊಂಡರು. ಋಣಮುಕ್ತ, ಜೀತಪದ್ಧತಿ ನಿರ್ಮೂಲನೆ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಜನರ ಭೂ ಪರಭಾರೆ ನಿಷೇಧ ಕಾಯಿದೆ (ಪಿಟಿಸಿಎಲ್ ಆಕ್ಟ್) ಯಂತಹ ಕ್ರಾಂತಿಕಾರಕ ಕಾರ್ಯಕ್ರಮಗಳು ಅನುಷ್ಠಾನವಾದವು ಎಂದು ಭಾರತಿ ತಿಳಿಸಿದರು. ದೇವರಾಜ ಅರಸು ಅವರ ಸಾಮಾಜಿಕ ನ್ಯಾಯ ಸುಧಾರಣೆ ಮತ್ತು ರಾಜಕೀಯ ತುಲನಾತ್ಮಕ ಆಡಳಿತ ಕುರಿತು ಮಾತನಾಡಿದ ಮಂಗಳೂರು ಕನ್ನಡ ವಿವಿ ಪ್ರಾಧ್ಯಾಪಕರಾದ ಡಾ. ಎಂ. ಚಂದ್ರಪೂಜಾರಿ ಅವರು ಅರಸು ಅವರು ತಳಸಮುದಾಯದ ಜನತೆಗೆ ಶಿಕ್ಷಣ, ಆರೋಗ್ಯ ಇನ್ನಿತರ ಸೌಲಭ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಅರಸು ಅವರ ಅಭಿವೃದ್ಧಿ ರಾಜಕಾರಣದಲ್ಲಿ ಹೆಸರಿಲ್ಲದ ಅನೇಕ ಸಮುದಾಯದಿಂದ ನಾಯಕರನ್ನು ತಂದು ಅವಕಾಶ ನೀಡಿದರು ಎಂದರು. ಮೈಸೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ಎಚ್. ಕೆ. ಲೋಲಾಕ್ಷಿ ಅವರು ಡಿ. ದೇವರಾಜ ಅರಸು ಅವರು ಕೈಗೊಂಡ ಕಾರ್ಯಕ್ರಮಗಳು ಮತ್ತು ಅವುಗಳ ಪ್ರಸ್ತುತತೆ ಕುರಿತು ಮಾತನಾಡಿ ಅರಸು ಅವರು ಜಾರಿಗೆ ತಂದ ಜೀತವಿಮುಕ್ತ ಕಾರ್ಯಕ್ರಮದಿಂದ 65 ಸಾವಿರ ಜೀತದಾರರು ಮುಕ್ತಿ ಪಡೆದುಕೊಂಡರು. ಹಾವನೂರು ವರದಿ ಫಲವಾಗಿ ನಾನಾ ಸಂಘಸಂಸ್ಥೆಗಳು ಅಸ್ತಿತ್ವಕ್ಕೆ ಬಂದು ಶೋಷಿತರ ಜನಪರವಾಗಿ ದನಿ ಎತ್ತಲು ಕಾರಣವಾಯಿತು ಎಂದರು. ದೇವರಾಜ ಅರಸು ಪರಿವರ್ತನೆಯ ಹರಿಕಾರ ಎಂಬ ವಿಷಯ ಕುರಿತು ವಿಚಾರ ಮಂಡನೆ ಮಾಡಿದ ಪ್ರಗತಿಪರ ಸಾಹಿತಿ ಮತ್ತು ಪತ್ರಕರ್ತರಾದ ಡಾ. ಕೃಷ್ಣಮೂರ್ತಿ ಚಮರಂ ಅವರು ದೇವರಾಜ ಅರಸು ಆಳ್ವಿಕೆ ಅವಧಿಯಲ್ಲಿ ಪರಮಾಧಿಕಾರವನ್ನು ದಕ್ಷತೆಯಿಂದ ಚಲಾಯಿಸಿದರು. ಹಿಂದುಳಿದ ವರ್ಗ ಜನಸಾಮಾನ್ಯರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಜಾರಿಗೆ ತಂದರು. ಸಂವಿಧಾನದ ಅಡಿಯಲ್ಲಿ ತರಬಹುದಾದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಾದರು ಎಂದರು. ರಂಗವಾಹಿನಿ ಸಂಸ್ಥೆಯ ಅಧ್ಯಕ್ಷರಾದ ಸಿ.ಎಂ. ನರಸಿಂಹಮೂರ್ತಿ ನಿರೂಪಿಸಿದರು. ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸಿ. ಶಿವಕುಮಾರ್ ಸ್ವಾಗತಿಸಿ ವಂದಿಸಿದರು. ನೂತನವಾಗಿ ಜಿಲ್ಲೆಗೆ ವರ್ಗಾವಣೆಯಾಗಿರುವ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಪ್ರಕಾಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸರಸ್ವತಿ, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜಯಪ್ರಕಾಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪಟಾಕಿ ಮಾರಾಟ ಪರವಾನಗಿ : ಹಬ್ಬದ 60 ದಿನಗಳ ಮೊದಲೇ ಅರ್ಜಿ ಸಲ್ಲಿಕೆ ಕಡ್ಡಾಯ ಚಾಮರಾಜನಗರ, ಆ. 19 (ಕರ್ನಾಟಕ ವಾರ್ತೆ):– 2016ರ ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಮಾರಾಟ ಮಾಡಲು ಪರವಾನಗಿಯನ್ನು ಹಬ್ಬಕ್ಕೂ ಮೊದಲ 30 ದಿವಸಗಳ ಮುಂಚಿತವಾಗಿ ಪಡೆಯಬೇಕು. ಪರವಾನಗಿಗಾಗಿ ಅರ್ಜಿಯನ್ನು ಹಬ್ಬದ ಮೊದಲ 60 ದಿವಸ ಮುಂಚಿತವಾಗಿಯೇ ಸಲ್ಲಿಸಿ ಪಡೆಯಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ. ಕೇಂದ್ರ ಪೆಟ್ರೋಲಿಯಂ ಮತ್ತು ಎಕ್ಸ್‍ಫ್ಲೋಸಿವ್ ಸೇಫ್ಟಿ ಆರ್ಗನೈಸೆÉೀಷನ್‍ನ ಚೀಫ್ ಕಂಟ್ರೋಲರ್ ಆಫ್ ಎಕ್ಸ್‍ಫ್ಲೋಸಿವ್ಸ್ ಅವರ ನಿರ್ದೇಶನದಂತೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ ಮಾಡುವವರಿಗೆ ಪರವಾನಗಿಯನ್ನು ಹಬ್ಬದ 30 ದಿನಗಳ ಮುಂಚೆಯೇ ನೀಡಬೇಕಿದೆ. ಪರವಾನಗಿ ಪಡೆಯುವ ಅರ್ಜಿಯನ್ನು ಹಬ್ಬದ 60 ದಿನಗಳ ಮುಂಚಿತವಾಗಿಯೇ ಸ್ವೀಕರಿಸಬೇಕೆಂದು ನಿರ್ದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಟಾಕಿ ಮಾರಾಟ ಪರವಾನಗಿ ಪಡೆಯಲು ಬಯಸುವವರು ಹಬ್ಬದ ಮುಂದಿನ 60 ದಿನಗಳ ಮುಂಚಿತವಾಗಿಯೇ ಅರ್ಜಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. , ಜಿಲ್ಲೆಯಲ್ಲಿ ಪ.ಜಾ, ಪ.ಪಂ. ಉದ್ದಿಮೆದಾರ ಜಾಗೃತಿ ಸಮಾವೇಶ ಆಯೋಜನೆಗೆ ನಿರ್ಧಾರ ಚಾಮರಾಜನಗರ, ಆ. 19 (ಕರ್ನಾಟಕ ವಾರ್ತೆ):– ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಉದ್ದಿಮೆದಾರರ ಕುಂದುಕೊರತೆ ಹಾಗೂ ಜಾಗೃತಿ ಸಮಾವೇಶವನ್ನು ಆಯೋಜಿಸುವ ಸಂಬಂಧ ನಗರದಲ್ಲಿಂದು ಕೈಗಾರಿಕೆ ಉದ್ಯಮಿಗಳು ಹಾಗೂ ಭಾವಿ ಕೈಗಾರಿಕೆ ಉದ್ಯಮಿಗಳ ಪೂರ್ವಭಾವಿ ಸಭೆ ನಡೆಯಿತು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರ ಕಚೇರಿ ಆವರಣದಲ್ಲಿ ಸಮಾವೇಶ ಆಯೋಜನೆ ಕುರಿತು ವಿವರವಾಗಿ ಸಮಾಲೋಚನೆ ನಡೆಸಲಾಯಿತು. ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಉದ್ದಿಮೆದಾರರು ಕೈಗಾರಿಕೆ ಉದ್ಯಮಗಳ ಸಂಘದ ಅಧ್ಯಕ್ಷರಾದ ಸಿ.ಜಿ. ಶ್ರೀನಿವಾಸ್ ಮಾತನಾಡಿ ಸಂಘದಲ್ಲಿ ಉದ್ದಿಮೆದಾರರು ಮತ್ತು ಭಾವಿ ಉದ್ದಿಮೆದಾರರು ಮಾತ್ರ ಸದಸ್ಯತ್ವ ಪಡೆಯಲು ಅರ್ಹರಾಗಿದ್ದಾರೆ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಉದ್ದಿಮೆದಾರರು ಸರ್ಕಾರದ ಉತ್ತೇಜನ ಯೋಜನೆಗಳನ್ನು ಪಡೆಯಲು ಹಾಗೂ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವ ಉದ್ದೇಶದಿಂದ ಹೊಸದಾಗಿ ಸಂಘ ಸ್ಥಾಪಿಸಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಇರುವ ಕೈಗಾರಿಕೆ ಉದ್ಯಮಿಗಳು ಸಭೆ ಸೇರಿ ಸಂಘ ಪ್ರಾರಂಭಕ್ಕೆ ನಿರ್ಣಯ ತೆಗೆದುಕೊಳ್ಳಬೇಕು. ಸಂಘ ಸ್ಥಾಪನೆಗೆ ಅಗತ್ಯವಿರುವ ಮಾಹಿತಿ ಸಹಕಾರವನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಲು ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಸಂಘ ಮುಂದೆ ಬರಲಿದೆ. ಸರ್ಕಾರದ ವತಿಯಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಉದ್ದಿಮೆದಾರರು ಕೈಗಾರಿಕೆ ಸ್ಥಾಪಿಸಲು ನೀಡುವ ರಿಯಾಯಿತಿ ಆದೇಶಗಳ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದು ಶ್ರೀನಿವಾಸನ್ ಸಲಹೆ ಮಾಡಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಎ.ಎಸ್. ರಮೇಶ್ ಅವರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನತೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಸರ್ಕಾರದಿಂದ ಕೈಗಾರಿಕೋದ್ಯಮಿಗಳಿಗೆ ಒದಗಿಸುವ ಸವಲತ್ತುಗಳನ್ನು ಪಡೆಯಲು ಮುಂದೆ ಬಂದಿಲ್ಲ. ಸರ್ಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳಿಗೆ ನೀಡುವ ಕೈಗಾರಿಕಾ ಸೌಲಭ್ಯಗಳನ್ನು ಪಡೆಯಲು ಜಾಗೃತರಾಗಬೇಕು ಎಂದರು. ಚಾಮರಾಜನಗರ ತಾಲೂಕಿನ ಬದನಗುಪ್ಪೆ ಕೆಲ್ಲಂಬಳ್ಳಿ 1500 ಎಕರೆ ಪ್ರದೇಶದಲ್ಲಿ ನೂತನ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗುತ್ತಿದೆ. ನೂತನ ಕೈಗಾರಿಕಾ ನೀತಿಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಜಿಲ್ಲೆಯ ಕೈಗಾರಿಕಾ ಉದ್ಯಮಿಗಳು ಈ ಪ್ರಯೋಜನ ಪಡೆದುಕೊಳ್ಳಬೇಕೆಂದು ರಮೇಶ್ ತಿಳಿಸಿದರು. ಕೆಎಸ್‍ಎಫ್‍ಸಿ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ್ ಸೇರಿದಂತೆ ಕೈಗಾರಿಕಾ ಇಲಾಖೆ ಅಧಿಕಾರಿಗಳು ಕೈಗಾರಿಕೆ ಅಭಿವೃದ್ಧಿಗಾಗಿ ಸರ್ಕಾರ ಕೊಡಮಾಡುತ್ತಿರುವ ಉತ್ತೇಜನ ಸೌಕರ್ಯಗಳ ಕುರಿತು ವಿವರ ನೀಡಿದರು. ಸಭೆಯಲ್ಲಿ ಹಾಜರಿದ್ದ ಉದ್ದಿಮೆದಾರರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಪೂರ್ಣ ಪ್ರಮಾಣದಲ್ಲಿ ಅನುಕೂಲವಾಗುವ ಹಾಗೆ ಸಮಾವೇಶ ಆಯೋಜಿಸುವಂತೆ ಸಲಹೆ ನೀಡಿದರು. ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ಅರಕಲವಾಡಿ ನಾಗೇಂದ್ರ, ಮಹೇಶ್ ಕುದರ್, ಬಿ.ಸಿ. ರಾಜು, ಬಸವನಪುರ ರಾಜಶೇಖರ್, ಕಾಗಲವಾಡಿ ಚಂದ್ರು, ಶ್ರೀಕಂಠಮೂರ್ತಿ ಇತರರು, ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ರಾಗಿ ಬೆಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ ಚಾಮರಾಜನಗರ, ಆ. 19 (ಕರ್ನಾಟಕ ವಾರ್ತೆ):– ಕೃಷಿ ಇಲಾಖೆಯು ಚಾಮರಾಜನಗರ ತಾಲೂಕಿಗೆ ಕೃಷಿ ಪ್ರಶಸ್ತಿಗೆ ಮಳೆಯಾಶ್ರಿತ ರಾಗಿ ಬೆಳೆಯನ್ನು ಪರಿಗಣಿಸಲಿದ್ದು ಆಸಕ್ತ ಕೃಷಿಕರಿಂದ ಅರ್ಜಿ ಆಹ್ವಾನಿಸಿದೆ. ಕೃಷಿ ಪ್ರಶಸ್ತಿಗೆ ನೊಂದಾಯಿಸುವ ಸಾಮಾನ್ಯ ವರ್ಗದ ರೈತರು 100 ರೂ. ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರು 25 ರೂ.ಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕಿದೆ. ಮಳೆಯಾಶ್ರಿತದಲ್ಲಿ ರಾಗಿ ಬೆಳೆಯುವ ರೈತರು ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಆಯಾ ರೈತ ಸಂಪರ್ಕ ಕೇಂದ್ರದಲ್ಲಿ ಪಡೆದುಕೊಳ್ಳಬಹುದು. ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಕೆಗೆ ಆಗಸ್ಟ್ 31 ಕಡೆಯ ದಿನವಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಕ್ರಮ ನಿರ್ಮಾಣ ಮನೆ ಸಕ್ರಮ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ ಚಾಮರಾಜನಗರ, ಆ. 19 (ಕರ್ನಾಟಕ ವಾರ್ತೆ):– ಪಟ್ಟಣ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ 20*30ರ ಅಡಿ ವಿಸ್ತೀರ್ಣದ ಮನೆಯನ್ನು ಸಕ್ರಮಗೊಳಿಸಿಕೊಳ್ಳುವ ಸಂಬಂಧ ಅರ್ಜಿ ಸ್ವೀಕರಿಸುವ ಅವಧಿಯನ್ನು ಆಗಸ್ಟ್ 27ರವರೆಗೆ ವಿಸ್ತರಿಸಲಾಗಿದೆ. ನಗರ ಪ್ರದೇಶದಲ್ಲಿ ಅಂದರೆ ಸಿಎಂಸಿ, ಟಿಎಂಸಿ, ಪಟ್ಟಣ ಪಂಚಾಯಿತಿ, ನಗರ ಕಾರ್ಪೋರೇಷನ್ ವ್ಯಾಪ್ತಿಯಿಂದ ನಿರ್ಧಿಷ್ಟ ಪಡಿಸಿದ ಅಂತರದೊಳಗಿನ ಸರ್ಕಾರಿ ಜಮೀನುಗಳಲ್ಲಿ ದಿನಾಂಕ 1.1.2012ರ ಪೂರ್ವದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ 20*30ರ ಅಡಿ ವಿಸ್ತೀರ್ಣದ ವಾಸದ ಮನೆಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಅರ್ಜಿ ಸ್ವೀಕರಿಸುವ ಅವಧಿಯನ್ನು ಆಗಸ್ಟ್ 27ರವರೆಗೂ ವಿಸ್ತರಿಸಲಾಗಿದೆ. ಈ ಯೋಜನೆಯಡಿ ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವವರು ಅಗತ್ಯ ದಾಖಲೆಗಳೊಂದಿಗೆ ಗುಂಡ್ಲುಪೇಟೆ ತಾಲೂಕು ಕಚೇರಿಯ ಏಕಗವಾಕ್ಷಿ ಕೇಂದ್ರಕ್ಕೆ ಅರ್ಜಿ ಸಲ್ಲಿಸುವಂತೆ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ. 23ರಂದು ಸಾಲಸೌಲಭ್ಯ ಅರ್ಜಿದಾರರಿಗೆ ಸಂದರ್ಶನ ಚಾಮರಾಜನಗರ, ಆ. 19 (ಕರ್ನಾಟಕ ವಾರ್ತೆ):– 2016-17ನೇ ಸಾಲಿನ ಮುಖ್ಯಮಂತ್ರಿಗಳ ಉದ್ಯೋಗ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆ ಹಾಗೂ ಸೇವಾ ಘಟಕಗಳನ್ನು ಪ್ರಾರಂಭಿಸುವ ಸಲುವಾಗಿ ಸಾಲಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಆಗಸ್ಟ್ 23ರಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರ ತಾಲೂಕಿನ ಮರಿಯಾಲದ ಜೆಎಸ್‍ಎಸ್ ರುಡ್‍ಸೆಟ್ ಸಂಸ್ಥೆಯಲ್ಲಿ ಸಂದರ್ಶನ ನಡೆಸಲಾಗುತ್ತದೆ. ಈಗಾಗಲೇ ಅಭ್ಯರ್ಥಿಗಳಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರ ಕಚೇರಿಯಿಂದ ಸಂದರ್ಶನದ ಕರೆಪತ್ರಗಳನ್ನು ಅಂಚೆ ಮೂಲಕ ರವಾನಿಸಲಾಗಿದೆ. ಕರೆಪತ್ರಗಳು ತಲುಪದೇ ಇದ್ದವರು ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನದ ವೇಳೆ ಆನ್ ಲೈನ್‍ನಲ್ಲಿ ಸಲ್ಲಿಸಿದ್ದ ಅರ್ಜಿಯೊಂದಿಗೆ ಭಾವಚಿತ್ರ, ವಿದ್ಯಾರ್ಹತೆ, ಜನ್ಮ ದಿನಾಂಕ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಅಥವಾ ಚುನಾವಣಾ ಆಯೋಗದ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಅಂಗವಿಕಲ ಅಭ್ಯರ್ಥಿಗಳಾಗಿದ್ದಲ್ಲಿ ದೃಢೀಕರಣ ಪತ್ರ, ಜನಸಂಖ್ಯೆ ದೃಢೀಕರಣ ಪತ್ರ, ಯೋಜನಾ ವರದಿ, ಯೋಜನೆ ಬಗ್ಗೆ ಅನುಭವವಿದ್ದಲ್ಲಿ ಅದರ ಪತ್ರ, ಸಾಧ್ಯವಾದಲ್ಲಿ ಬÁ್ಯಂಕಿನ ಅಧಿಕಾರಿಗಳನ್ನು ಭೇಟಿ ಮಾಡಿ ಸಾಲ ನೀಡುವ ಒಪ್ಪಿಗೆ ಪತ್ರವನ್ನು ಪಡೆದು ಹಾಜರುಪಡಿಸಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ. 20ರಂದು ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ವಸತಿನಿಲಯ ಶಂಕುಸ್ಥಾಪನೆ ಸಮಾರಂಭ ಚಾಮರಾಜನಗರ, ಆ. 19 (ಕರ್ನಾಟಕ ವಾರ್ತೆ):– ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ವಸತಿನಿಲಯ ನಿರ್ಮಾಣದ ಶಂಕುಸ್ಥಾಪನಾ ಸಮಾರಂಭವು ಆಗಸ್ಟ್ 20ರಂದು ಮಧ್ಯಾಹ್ನ 3 ಗಂಟೆಗೆ ನೆರವೇರಲಿದೆ. ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಶಂಕುಸ್ಥಾಪನೆ ನೆರವೇರಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್‍ನ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜ್), ಆರ್. ಧರ್ಮಸೇನ, ನಗರಸಭೆ ಅಧ್ಯಕ್ಷರಾದ ಎಸ್. ಎನ್. ರೇಣುಕಾ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು, ನಗರಸಭೆ ಉಪಾಧ್ಯಕ್ಷರಾದ ಆರ್. ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿದಿ, ಸದಸ್ಯರಾದ ಜಿ. ಬಸವಣ್ಣ, ಬದನಗುಪ್ಪೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ.ಪಿ. ನಾಗೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳುವರು ಎಂದು ಪ್ರಕಟಣೆ ತಿಳಿಸಿದೆ. ಆ. 20ರಂದು ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಚಾಮರಾಜನಗರ, ಆ. 19 (ಕರ್ನಾಟಕ ವಾರ್ತೆ):– ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ಸಾಮಾಜಿಕ ಕ್ರಾಂತಿಯ ಹರಿಕಾರ, ಹಿಂದುಳಿದ ವರ್ಗಗಳ ದೀನದಲಿತರ ಧೀಮಂತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವದ ಸಮಾರೋಪ ಹಾಗೂ 101ನೇ ಜನ್ಮ ದಿನಾಚರಣೆ ಸಮಾರಂಭವನ್ನು ಆಗಸ್ಟ್ 20ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಗೆ ಡಿ. ದೇವರಾಜ ಅರಸು ಅವರು ಕೈಗೊಂಡ ಸುಧಾರಣೆಗಳ ಕುರಿತು ಸ್ತಬ್ಧಚಿತ್ರ ಹಾಗೂ ಕಲಾತಂಡಗಳೊಂದಿಗಿನ ಮೆರವಣಿಗೆಗೆ ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಚಾಲನೆ ನೀಡುವರು. ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭವನ್ನು ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಉದ್ಘಾಟಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವÀಹಿಸುವರು. ವಿಧಾನ ಪರಿಷತ್‍ನ ಉಪಸಭಾಪತಿಗಳಾದ ಮರಿತಿಬ್ಬೇಗೌಡ ಡಿ. ದೇವರಾಜ ಅರಸು ಅವರ ಭಾವಚಿತ್ರ ಅನಾವರಣ ಮಾಡುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಸವಲತ್ತು ವಿತರಣೆ ಮಾಡುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಬಹುಮಾನ ವಿತರಿಸುವರು. ಸಾಹಿತಿ ಮತ್ತು ಸಂಸೃತಿ ಚಿಂತಕರಾದ ಪ್ರೊ. ಕಾಳೇಗೌಡ ನಾಗವಾರ ಮುಖ್ಯ ಭಾಷಣಕಾರರಾಗಿ ಆಗಮಿಸುವರು. ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜ್), ಆರ್. ಧರ್ಮಸೇನ, ನಗರಸಭೆ ಅಧ್ಯಕ್ಷರಾದ ಎಸ್. ಎನ್. ರೇಣುಕಾ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫಿ, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ನಗರಸಭೆ ಉಪಾಧ್ಯಕ್ಷರಾದ ಆರ್. ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳುವರು ಎಂದು ಪ್ರಕಟಣೆ ತಿಳಿಸಿದೆ. ಆ. 20ರಂದು ಆದರ್ಶ ವಿದ್ಯಾಲಯ ಕಟ್ಟಡ ಉದ್ಘಾಟನೆ ಚಾಮರಾಜನಗರ, ಆ. 19 (ಕರ್ನಾಟಕ ವಾರ್ತೆ):– ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ವತಿಯಿಂದ ತಾಲೂಕಿನ ಎಂ. ಮಲ್ಲಯ್ಯನಪುರದಲ್ಲಿ ನಿರ್ಮಾಣ ಮಾಡಿರುವ ಸರ್ಕಾರಿ ಆದರ್ಶ ವಿದ್ಯಾಲಯ ಕಟ್ಟಡದ ಉದ್ಘಾಟನಾ ಸಮಾರಂಭವು ಆಗಸ್ಟ್ 20ರಂದು ಮಧ್ಯಾಹ್ನ 2.30 ಗಂಟೆಗೆ ನೆರವೇರಲಿದೆ. ಸಹಕಾರ, ಸಕ್ಕರೆÀ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಉದ್ಘಾಟಿಸುವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ವಕ್ಫ್ ಸಚಿವರಾದ ತನ್ವೀರ್ ಸೇಠ್ ನಾಮಫಲಕ ಅನಾವರಣ ಮಾಡುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವÀಹಿಸುವರು. ವಿಧಾನ ಪರಿಷತ್‍ನ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜ್), ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ. ಚಂದ್ರಕಲಾ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಸದಸ್ಯರಾದ ಎಸ್. ನಾಗರಾಜಮ್ಮ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎನ್. ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳುವರು ಎಂದು ಪ್ರಕಟಣೆ ತಿಳಿಸಿದೆ. ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಸಮಾರಂಭಕ್ಕೆ ಆಗಮಿಸಲು ಮನವಿ ಚಾಮರಾಜನಗರ, ಆ. 19 (ಕರ್ನಾಟಕ ವಾರ್ತೆ):– ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ಸಾಮಾಜಿಕ ಕ್ರಾಂತಿಯ ಹರಿಕಾರ, ಹಿಂದುಳಿದ ವರ್ಗಗಳ ದೀನದಲಿತರ ಧೀಮಂತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವದ ಸಮಾರೋಪ ಹಾಗೂ 101ನೇ ಜನ್ಮ ದಿನಾಚರಣೆ ಸಮಾರಂಭವನ್ನು ಆಗಸ್ಟ್ 20ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಗೆ ಡಿ. ದೇವರಾಜ ಅರಸು ಅವರು ಕೈಗೊಂಡ ಸುಧಾರಣೆಗಳ ಕುರಿತು ಸ್ತಬ್ಧಚಿತ್ರ ಹಾಗೂ ಕಲಾತಂಡಗಳೊಂದಿಗಿನ ಮೆರವಣಿಗೆಗೆ ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಚಾಲನೆ ನೀಡುವರು. ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ. ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಕ್ಕೆ ನಾಗರಿಕರು, ಚುನಾಯಿತ ಪ್ರತಿನಿಧಿಗಳು, ವಿದ್ಯಾರ್ಥಿಗಳು ಆಗಮಿಸುವಂತೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಿ. ಶಿವಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿ : ಸಚಿವ ಎಚ್.ಎಸ್.ಮಹದೇವಪ್ರಸಾದ್ ಚಾಮರಾಜನಗರ, ಆ. 20 (ಕರ್ನಾಟಕ ವಾರ್ತೆ):- ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಹಂತವು ವಿದ್ಯಾರ್ಥಗಳಿಗೆ ಪ್ರಮುಖ ಘಟ್ಟವಾಗಿದ್ದು ಈ ಅವಧಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್.ಮಹದೇವಪ್ರಸಾದ್ ಸಲಹೆ ಮಾಡಿದರು. ತಾಲ್ಲೂಕಿನ ಎಂ.ಮಲ್ಲಯ್ಯನ ಪುರದಲ್ಲಿ ಇಂದು ನೂತನ ಸರ್ಕಾರಿ ಆದರ್ಶ ವಿದ್ಯಾಲಯ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತಾನಾಡಿದರು. ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ ಅನಾವರಣಕ್ಕೆ ಅವಕಾಶ ಮಾಡಿಕೊಡಬೇಕು. ಕಾಲೇಜು ಶಿಕ್ಷಣಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಶಾಲಾ ಶೈಕ್ಷಣಿಕ ಅವಧಿಯಲ್ಲಿಯೇ ವಿಶ್ವಾಸ ತುಂಬಬೇಕು. ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಸಚಿವರು ತಿಳಿಸಿದರು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಹತ್ತರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಶಿಕ್ಷಣ ಕ್ಷೇತ್ರದ ಉತ್ತೇಜನಕ್ಕೆ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದೆ. ಎಲ್ಲ ವಿದ್ಯಾರ್ಥಿಗಳಿಗೆ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಮವಸ್ತ್ರ, ಬಿಸಿಯೂಟ, ಇನ್ನಿತರ ಶಾಲಾ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿತರಿಸಲಾಗುತ್ತಿದೆ ಎಂದರು. ಪ್ರಸ್ತುತ ಆದರ್ಶ ವಿದ್ಯಾಲಯ ಪಟ್ಟಣದ ಹೊರಭಾಗದಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಇತರೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅನುಷ್ಠಾನಕ್ಕೆ ತರಲು ಮುಂದಾಗುತ್ತೇನೆ. ಶಾಲಾ ಸುತ್ತುಗೋಡೆ ಇತರೆ ಅಗತ್ಯ ವ್ಯವಸ್ಥೆಗೂ ಅನುಕೂಲ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು. ಲೋಕಸಭಾ ಸದಸ್ಯರಾದ ಆರ್.ದ್ರುವನಾರಾಯಣ ಮಾತಾನಾಡಿ ಶಿಕ್ಷಣಕ್ಕೆ ಹೆಚ್ಚು ಉತ್ತೇಜನ ನೀಡಲಾಗುತ್ತಿದ್ದು, ಪ್ರತಿಯೊಬ್ಬರಿಗೂ ಅವಕಾಶ ವಿದೆ. ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿದೆ. ವೈದ್ಯಕೀಯ ಕಾಲೇಜು ಕೂಡ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಆರಂಭವಾಗಲಿದೆ. ಸ್ನಾತಕೋತ್ತರ ಕೇಂದ್ರ, ನವೊದಯ, ಆದರ್ಶ ವಿದ್ಯಾಲಯಗಳು ಸಹ ಇದೆ. ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯವನ್ನು ಕಲ್ಪಿಸಿ ಕೊಡಲಿದ್ದೆವೆ. ಈ ಎಲ್ಲ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕೇಂದು ತಿಳಿಸಿದರು. ಅಧ್ಯಕ್ಷತೆವಹಿಸಿ ಮಾತಾನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಇಂದು ವಿದ್ಯಾರ್ಥಿ ನಿಲಯಗಳ ಅವಶ್ಯಕತೆ ಕಂಡುಬಂದಿದೆ. ಈ ಭಾಗದ ಶೈಕ್ಷಣೀಕ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯವನ್ನು ಒದಗಿಸಲಾಗುವುದು ಎಂದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಮಚಂದ್ರ ಮಾತಾನಾಡಿ ವಿದ್ಯಾರ್ಥಿಗಳ ವ್ಯಾಸಂಗದ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕಿದೆ. ಮಕ್ಕಳ ಭವಿಷ್ಯದ ಉದ್ದೇಶದಿಂದ ವಿಶೇಷ ಗಮನ ಹರಿಸಿ ಅವರನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸುವ ಜವಬ್ಧಾರಿಯು ಸಹ ಇದೆ ಎಂದರು. ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ.ಸದಾಶಿವಮೂರ್ತಿ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ.ಚಂದ್ರು, ಉಪಾಧ್ಯಕ್ಷರಾದ ದಯನೀಧಿ, ಜಿಪಂ ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಜಿಪಂ ಸದಸ್ಯರಾದ ಶಶಿಕಲಾ ಸೋಮಲಿಂಗಪ್ಪ, ಗ್ರಾಪಂ ಅಧ್ಯಕ್ಷರಾದ ಎನ್.ಕುಮಾರ್. ತಾ.ಪಂ.ಸದಸ್ಯರಾದ ಎಸ್.ನಾಗರಾಜಮ್ಮ, ಮಾವು ಅಭಿವೃದ್ದಿ ನಿಗಮದ ನಿರ್ದೇಶಕರಾದ ಬಿ.ಕೆ.ರವಿಕುಮಾರ್, ಜಿ.ಪಂ.ಸಿ.ಇ.ಓ. ಹೆಪ್ಸಿಬಾ ರಾಣಿ ಕೊರ್ಲಾಪಾಟಿ, ಡಿಡಿಪಿಐ ಮಂಜುಳ, ಇತರರು ಉಪಸ್ಥಿತರಿದ್ದರು. ಪತ್ರಿಕಾ ಪ್ರಕಟಣೆ ಚಾಮರಾಜನಗರ ಜಿಲ್ಲೆಯ ಜನತೆಗೆ ಜಿಲ್ಲಾ ಪೊಲೀಸ್ ವತಿಯಿಂದ ದಿನಾಂಕ: 04-09-2016 ಮತ್ತು 05-09-2016 ರಂದು ನಡೆಯಲಿರುವ ಗೌರಿ ಗಣೇಶ ಹಬ್ಬದ ಶುಭಾಷಯಗಳು. ಗೌರಿ-ಗಣೇಶ ಹಬ್ಬದ ಸಂಬಂಧ ಜಿಲ್ಲೆಯ ಹಲವು ಕಡೆಗಳಲ್ಲಿ ಗೌರಿ – ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿ, ನಂತರ ಮೆರವಣಿಗೆ ಮುಖಾಂತರ ವಿಸರ್ಜನೆ ಮಾಡುವ ವಾಡಿಕೆ ಇರುತ್ತದೆ. ಈ ಸಂಬಂಧ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಸಂಘಗಳು ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಅನುಮತಿಗಳನ್ನು ಕಡ್ಡಾಯವಾಗಿ ಪಡೆದು, ದಿನಾಂಕ: 25-08-2016 ರೊಳಗೆ ತಮ್ಮ ಸರಹದ್ದಿನ ಪೊಲೀಸ್ ಠಾಣಾಧಿಕಾರಿಗಳಲ್ಲಿ ಲಿಖಿತವಾಗಿ ಸಲ್ಲಿಸುವುದು. 1. ಉಸ್ತುವಾರಿ ಮುಖ್ಯಸ್ಥರ ಹೆಸರು, ವಿಳಾಸ, ಮೊಬೈಲ್ ನಂಬರ್ ಹಾಗೂ ಕಾರ್ಯಕ್ರಮದ ಆಯೋಜನೆಗೆ ಸಂಬಂಧಿಸಿದಂತೆ ಆಗುವ ಎಲ್ಲಾ ಆಗುಹೋಗುಗಳಿಗೆ ತಾವೇ ಜವಾಬ್ದಾರರೆಂಬ ಬಗ್ಗೆ, ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಠಿಯಿಂದ ಸ್ಥಳೀಯ ನ್ಯಾಯಾಲಯ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೀಡುವ ಎಲ್ಲಾ ಸೂಚನೆಗಳನ್ನು ಪಾಲಿಸುವ ಬಗ್ಗೆ ಹಾಗೂ ಕಾರ್ಯಕ್ರಮದ ಎಲ್ಲಾ ಸಂದರ್ಭಗಳಲ್ಲಿ ಅನ್ಯಧರ್ಮ, ಅನ್ಯಮತ, ಅನ್ಯ ಸಂಘಟನೆ, ಅನ್ಯ ಸಂಘ, ಅನ್ಯ ಜನಾಂಗ ಅಥವಾ ಇನ್ನಾವುದೆ ಸಾರ್ವಜನಿಕ ವ್ಯಕ್ತಿಗಾಗಲಿ ನೋವಾಗದಂತೆ ನಡೆದುಕೊಳ್ಳುವ ಬಗ್ಗೆ ಮುಚ್ಚಳಿಕೆ ಪತ್ರ ಹಾಗೂ ಪ್ರತಿಷ್ಠಾಪನೆ ದಿನ, ವಿಶೇಷ ಕಾರ್ಯಕ್ರಮಗಳ ಆಯೋಜನೆ ದಿನ, ಭಾಗವಹಿಸಲಿರುವ ವಿಶೇಷ ಅತಿಥಿಗಳ ವಿವರ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ದಿನ, ಮೆರವಣಿಗೆ, ವಿಸರ್ಜನಾ ದಿನ ಹಾಗೂ ವಿಸರ್ಜನಾ ಮೆರವಣಿಗೆ ನಡೆಸುವ ಮಾರ್ಗದ ಎಲ್ಲಾ ವಿವರಗಳನ್ನು ಸಲ್ಲಿಸುವುದು. (ಖುದ್ದು ಸರಹದ್ದಿನ ಠಾಣಾಧಿಕಾರಿಗಳೊಂದಿಗೆ ಚರ್ಚಿಸಿ ಕಡ್ಡಾಯವಾಗಿ ಅನುಮೋಧಿಸಿಕೊಳ್ಳುವುದು) 2. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಸ್ಥಳ ಮತ್ತು ವಿಳಾಸ ಹಾಗೂ ಸ್ಥಳದ ಮಾಲೀಕರಿಂದ ಪಡೆದ ಅನುಮತಿ ಪತ್ರ ನೀಡುವುದು (ಗ್ರಾಮಪಂಚಾಯತ್/ ಪಟ್ಟಣಪಂಚಾಯತ್/ನಗರಸಭೆ /ಖಾಸಗಿ ವ್ಯಕ್ತಿಗಳು) 3. ಸ್ಥಳೀಯ ವಿದ್ಯುತ್ ಪ್ರಾಧಿಕಾರದಿಂದ ಪಡೆದ ನಿರಾಕ್ಷೇಪಣಾ ಪತ್ರ 4. ಸ್ಥಳೀಯ ಠಾಣೆಯಿಂದ ಧ್ವನಿವರ್ಧಕ ಬಳಕೆಗೆ ಪಡೆದ ಅನುಮತಿ ಪತ್ರ(ಧ್ವನಿವರ್ಧಕ ಬಳಕೆಯ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸುವುದು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸುವುದು.) 5. ಕರ್ನಾಟಕ ಅಗ್ನಿಶಾಮಕ ದಳದವರಿಂದ ನಿರಪೇಕ್ಷಣಾ ಪತ್ರ 6. ಈ ಸಂಬಂಧ ಹಾಕಲಾಗುವ ಎಲ್ಲಾ ಫ್ಲೆಕ್ಸ್/ಪೋಸ್ಟರ್/ಪೋಟೊ ಇತ್ಯಾದಿಗಳಿಗೆ ಸ್ಥಳೀಯ ಆಡಳಿತದಿಂದ ಕಡ್ಡಾಯವಾಗಿ ಅನುಮತಿ ಪಡೆಯುವುದು ಹಾಗೂ ಅವುಗಳಲ್ಲಿ ಅನ್ಯಧರ್ಮ, ಅನ್ಯಮತ, ಅನ್ಯ ಸಂಘಟನೆ, ಅನ್ಯ ಸಂಘ, ಅನ್ಯ ಜನಾಂಗ ಅಥವಾ ಇನ್ನಾವುದೆ ಸಾರ್ವಜನಿಕ ವ್ಯಕ್ತಿಗಾಗಲಿ ನೋವುಂಟು ಮಾಡದಂತಿರಬೇಕು. 7. ವಿಸರ್ಜನಾ ಸ್ಥಳದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಹಾಗೂ ಜೀವರಕ್ಷಕ ಸಾಧನಗಳ ವಿವರ ಒದಗಿಸುವುದು. 8. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರವರು ತಿಳಿಸಿರುವಂತೆ ಪರಿಸರ ಸ್ನೇಹಿಯಾದ, ಮಣ್ಣಿನಿಂದ ಮಾಡಿದ, ಬಣ್ಣ ರಹಿತ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಗಣಪತಿಯ ಅಲಂಕಾರಕ್ಕೆ ನೈಸರ್ಗಿಕ ಸಾಮಗ್ರಿಗಳನ್ನೇ ಬಳಸಬೇಕು. ವಿಸರ್ಜಿಸುವಾಗ ಸಾಧ್ಯವಾದಷ್ಠು ಮನೆಯಲ್ಲಿ ಬಕೆಟ್‍ಗಳಲ್ಲಿ ನೀರು ತುಂಬಿಸಿ ವಿಸರ್ಜಿಸಿ, ಇಲ್ಲವೆ ಲಭ್ಯವಿರುವ ಕಡೆಗಳಲ್ಲಿ ಸಂಚಾರಿ ವಿಸರ್ಜನಾ ವಾಹನ ಬಳಸಿ ಅಥವಾ ಕೆರೆಗಳಲ್ಲಿ ನಿಗಧಿಪಡಿಸಿದ ಸ್ಥಳದಲ್ಲಿ ಮಾತ್ರ ವಿಸರ್ಜಿಸುವುದು ಹಾಗೂ ವಿಸರ್ಜನೆಗೂ ಮುನ್ನಾ ಅಲಂಕಾರಿಕ ವಸ್ತುಗಳನ್ನು ತೆಗೆದುಹಾಕುವುದು. ವಿಸರ್ಜನಾ ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ, ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ನಡೆದುಕೊಳ್ಳುವುದು. 9. ಪ್ರತಿಷ್ಠಾಪಿತ ಮೂರ್ತಿಯ ರಕ್ಷಣೆಗೆ ಸ್ವಯಂ ಸೇವಕರನ್ನು ನಿಯೋಜಿಸುವುದು. ನಿಯೋಜಿಸಲಾದ ಸ್ವಯಂಸೇವಕರ ಭಾವಚಿತ್ರ, ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಐ.ಡಿ ಕಾರ್ಡ್ 10. ಸ್ವಯಂ ಸೇವಕರ ಹಗಲು ಮತ್ತು ರಾತ್ರಿ ಪಾಳಿಯ ಕಾವಲಿಗೆ ನಿಯೋಜಿಸಿರುವ ವೇಳಾಪಟ್ಟಿ (ಹೆಸರು ಮೊಬೈಲ್ ನಂಬರಿನೊಂದಿಗೆ) ಒದಗಿಸುವುದು ಹಾಗೂ ಪ್ರತಿಷ್ಠಾಪಿತ ಸ್ಥಳದಲ್ಲಿ ಒಂದು ರಿಜಿಸ್ಟರ್ ಇಟ್ಟು ಕಾವಲಿನ ವಿವರವನ್ನು ನಮೂದಿಸುವುದು. 11. ವ್ಯವಸ್ಥಾಪಕರು ಅಥವಾ ಕಾರ್ಯಕರ್ತರು, ಇತರರು ಬಲವಂತವಾಗಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡುವುದು ಕಾನೂನುಬಾಹಿರವಾಗಿರುತ್ತದೆ ಅಥವಾ ಲಾಟರಿ ಇತ್ಯಾದಿ ಯೋಜನೆಯ ಮುಖಾಂತರ ಹಣ ಸಂಗ್ರಹಣೆ ಮಾಡ ಕೂಡದು. ಅಂತಹವರು ಕಂಡು ಬಂದರೆ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಮಾಹಿತಿ ನೀಡುವುದು. ಆದ್ದರಿಂದ ಸಾರ್ವಜನಿಕರು ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಹಿನ್ನಲೆಯಲ್ಲಿ, ಮೇಲ್ಕಂಡ ಅಂಶಗಳಿಗೆ ಅನುಗುಣವಾಗಿ ಹಾಗೂ ನಿಬಂಧನೆಗಳಿಗೆ ಒಳಪಟ್ಟು ಮೂರ್ತಿ ಪ್ರತಿಷ್ಠಾಪನೆ, ಪೂಜಾ ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮ, ವಿಸರ್ಜನಾ ಮೆರವಣಿಗೆ ಹಾಗೂ ವಿಸರ್ಜನಾ ಕಾರ್ಯಕ್ರಮಗಳನ್ನು ಆಯೋಜಿಸುವುದು. ಮೇಲ್ಕಂಡ ನಿಬಂಧನೆಗಳನ್ನು ಉಲ್ಲಂಘನೆ ಕಂಡುಬಂದಲ್ಲಿ ಅಥವಾ ಶಾಂತಿ ಭಂಗ ಉಂಟುಮಾಡುವುದು ಕಂಡು ಬಂದಲ್ಲಿ ಕೂಡಲೇ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡಲು ಕೋರಲಾಗಿದೆ. ಕ್ರ.ಸಂ ಪೊಲೀಸ್ ಅಧಿಕಾರಿಗಳು ಸ್ಥಿರ ದೂರವಾಣಿ ಸಂಖ್ಯೆ ಮೊಬೈಲ್ ದೂರವಾಣಿ 1 ಪೊಲೀಸ್ ಅಧೀಕ್ಷಕರು 08226-222243 9480804601 2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು 08226-225979 9480804602 3 ಡಿ.ಎಸ್.ಪಿ ಚಾ-ನಗರ 08226-222090 9480804620 4 ಡಿ.ಎಸ್.ಪಿ ಕೊಳ್ಳೇಗಾಲ 08224-252840 9480804621 5 ಜಿಲ್ಲಾ ನಿಯಂತ್ರಣ ಕೊಠಡಿ 08226-222383 9480804600 ಆಗಸ್ಟ್ 23ರಂದು ಜಿಲ್ಲೆಗೆ ಕಂದಾಯ ಸಚಿವರ ಭೇಟಿ ಚಾಮರಾಜನಗರ, ಆ. 20 (ಕರ್ನಾಟಕ ವಾರ್ತೆ):- ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಆಗಸ್ಟ್ 23ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅಂದು ಮಧ್ಯಾಹ್ನ 3.30ಗಂಟೆಗೆ ನಗರಕ್ಕೆ ಆಗಮಿಸಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಸಂಜೆ 5ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಚಿವರ ವಿಶೇಷ ಕರ್ತವ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅರಸು ಅವರ ಕಾರ್ಯಕ್ರಮಗಳು ಇಂದಿಗೂ ಮಾದರಿ : ಸಚಿವ ಎಚ್.ಎಸ್.ಮಹದೇವಪ್ರಸಾದ್ ಚಾಮರಾಜನಗರ, ಆ. 20 (ಕರ್ನಾಟಕ ವಾರ್ತೆ):- ಸಮಾಜಿಕ ಕ್ರಾಂತಿ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರು ಜಾರಿಗೊಳಿಸಿದ ಮಹತ್ವದ ಯೋಜನೆ, ಕಾರ್ಯಕ್ರಮಗಳು ಇಂದಿಗೂ ದೇಶ ಹಾಗೂ ರಾಜ್ಯಗಳಿಗೆ ಮಾದರಿಯಾಗಿವೆ ಎಂದು ಸಹಕಾರ ಸಕ್ಕರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್.ಮಹದೇವಪ್ರಸಾದ್ ಅಭಿಪ್ರಾಯಪಟ್ಟರು. ನಗರದ ಜೆಎಚ್.ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಢಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಿ.ದೇವರಾಜ ಅರಸು ಜನ್ಮ ಶತಮಾನೋತ್ಸವ ಸಮಾರೋಪ ಹಾಗೂ 101ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತಾನಾಡಿದರು. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನೇಕ ಕ್ರಾಂತಿಕಾರಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಅವರು ಎಂಟು ವರ್ಷಗಳ ಅವಧಿಯಲ್ಲಿ ಕೈಗೊಂಡ ಜನಪರ ತೀರ್ಮಾನಗಳು ಮಾದರಿಯಾಗಿವೆ. ವಿಶೇಷವಾಗಿ ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದರು. ಇದರ ಸಮರ್ಪಕ ಅನುಷ್ಠಾನಕ್ಕೆ ನ್ಯಾಯ ಮಂಡಳಿ ರಚಿಸಿ ದುಡಿಯುವ ಜನರಿಗೆ ಭೂಮಿಯ ಹಕ್ಕು ಪಡೆಯಲು ಅನುಕೂಲ ಕಲ್ಪಿಸಿದರು ಎಂದರು. ಹಿಂದುಳಿದ ವರ್ಗಗಳಿಗೆ ಉದ್ಯೋಗ ಸೇರಿದಂತೆ ಇತರೆ ಸ್ಥಾನಮಾನಗಳನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಹಾವನೂರು ಆಯೋUದÀ ವರದಿಯನ್ನು ಅನುಷ್ಠಾನಕ್ಕೆ ತಂದರು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದರೂ ಲೆಕ್ಕಿಸದೇ ದಿಟ್ಟತನದಿಂದ ವರದಿ ಜಾರಿಗೆ ತಂದು ಹಿಂದುಳಿದಜನತೆ ಅನುಕೂಲ ಪಡೆಯಲು ಕಾರಣರಾದರು ಎಂದು ಸಚಿವರು ತಿಳಿಸಿದರು. ಅರಸು ಅವರು ವಿವಿಧ ಖಾತೆಗಳನ್ನು ನಿರ್ವಹಿಸಿ ಯಶ್ವಸಿಯಾದರು ಸ್ವಾಂತ್ರತ್ಯಕೂ ಮೊದಲೇ ಪ್ರಜಾಪ್ರತಿನಿಧಿ ಸಭೆಯಿಂದ ಆಯ್ಕೆಯಾಗಿದ್ದರು. ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣ ಮಾಡಿದರು. ಆಡಳಿತದಲ್ಲಿ ಕನ್ನಡ ಭಾಷೆಯನ್ನು ಜಾರಿಗೆ ತಂದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು. ಇದೇ ವೇಳೆ ಅರಸು ಅವರೋಂದಿಗಿನ ಒಡನಾಟವನ್ನು ಸಚಿವರು ವಿವರವಾಗಿ ಕಾರ್ಯಕ್ರಮದಲ್ಲಿ ತೆರೆದಿಟ್ಟರು. ಲೋಕಸಭಾ ಸದಸ್ಯರಾದ ಆರ್.ದ್ರುವನಾರಾಯಣ ಮಾತಾನಾಡಿ ಅರಸು ಅವರು ರಾಜ್ಯದ ಚಿತ್ರಣವನ್ನೇ ಬದಲಾವಣೆ ಮಾಡಿ ಅಭಿವೃದ್ದಿಗೆ ಬುನಾದಿ ಹಾಕಿಕೊಟ್ಟರು. ಅಲ್ಪಸಂಖ್ಯಾತರು, ಹಿಂದುಳಿದವರು, ದೀನದಲಿತರು ಸೇರಿದಂತೆ ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಧೀಮಂತ ನಾಯಕ ಅರಸು ಎಂದರು. ಅಧ್ಯಕ್ಷತೆವಹಿಸಿ ಮಾತಾನಾಡಿದ ಗ್ರಾಮೀಣಾಭೀವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶೀ ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಅರಸು ಅವರು ಅನೇಕ ಕೊಡುಗೆಗಳನ್ನು ನೀಡಿದ ಅಭಿವೃದ್ದಿ ಹರಿಕಾರರು. ಅವರ ಅವಧಿಯಲ್ಲಿಯೇ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ಸ್ಥಾಪನೆಯಾಯಿತು. ರೈತರ ಕಷ್ಟಗಳ ಬಗ್ಗೆ ಅರಸು ಅವರಿಗೆ ಅರಿವಿತ್ತು. ಹೀಗಾಗಿ ಅನೇಕ ಸುಧಾರಣೆಗಳನ್ನು ತಂದರು ಎಂದರು. ದೇವರಾಜ ಅರಸು ಜನ್ಮ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಫರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ನಿಗಮದಿಂದ ಸಾಲಸೌಲಭ್ಯದ ಚೆಕ್‍ಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ಸಾಹಿತಿ ಹಾಗೂ ಸಂಸ್ಕøತಿ ಚಿಂತಕರಾದ ಪ್ರೋ.ಕಾಳೇಗೌಡ ನಾಗವಾರ ಅವರು ಅರಸು ಅವರ ಕುರಿತು ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಮಾತಾನಾಡಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಬಸವರಾಜು, ಸದಸ್ಯರಾದ ಕೆ.ಪಿ.ಸದಾಶಿವಮೂರ್ತಿ, ಕೆರೆಹಳ್ಳಿನವೀನ್. ಅಶ್ವಿನಿ, ಸಿ.ಎನ್.ಬಾಲರಾಜು, ಕೆ.ಎಸ್.ಮಹೇಶ್, ಬಿ.ಕೆ.ಬೊಮ್ಮಯ್ಯ, ಶಶಿಕಲಾ ಸೋಮಲಿಂಗಪ್ಪ, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫೀ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ.ಚಂದ್ರು, ಉಪಾಧ್ಯಕ್ಷರಾದ ದಯನಿಧಿ, ನಗರಸಭೆ ಅಧ್ಯಕ್ಷರಾದ ರೇಣುಕಾ, ಉಪಾಧ್ಯಕಾರಾದ ಆರ್.ಎಂ.ರಾಜಪ್ಪ, ಜಿಪಂ.ಸಿ.ಇ.ಓ.ಹೆಪ್ಸಿಬಾ ರಾಣಿ ಕೊರ್ಲಾಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲ ದೀಪ್ ಕುಮಾರ್ ಆರ್ ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಚಾಮರಾಜೇಶ್ವರ ದೇವಾಲಯ ಬಳಿ ಅರಸು ಅವರ ಭಾವಚಿತ್ರ ಹಾಗೂ ಸ್ತಬ್ಧಚಿತ್ರ ಮೆರವಣಿಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು. ಎಂಜಿನಿಯರಿಂಗ್ ಕಾಲೇಜಿಗೆ ಅಗತ್ಯ ಸೌಲಭ್ಯ : ಸಚಿವ ಮಹದೇವಪ್ರಸಾದ್ ಚಾಮರಾಜನಗರ, ಆ. 20 (ಕರ್ನಾಟಕ ವಾರ್ತೆ):- ನಗರದ ಹೊರವಲಯದಲ್ಲಿರುವ ಬೇಡರಪುರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಹಂತ ಹಂತವಾಗಿ ಮತ್ತಷ್ಟು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಸಹಕಾರ ಸಕ್ಕರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್.ಮಹದೇವಪ್ರಸಾದ್ ತಿಳಿಸಿದರು. ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿಂದು ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೆರಿಸಿ ಅವರು ಮಾತಾನಾಡಿದರು. ಕಳೆದ ಹತ್ತು ವರ್ಷಗಳ ಹಿಂದೆ ಆರಂಭವಾದ ಎಂಜಿನಿಯರಿಂಗ್ ಕಾಲೇಜು ಸ್ವಂತ ಕಟ್ಟಡ ಹೊಂದಿದೆ. ಕಾಲೇಜಿಗೆ ಸಾಗುವ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಚಾಲನೇ ನೀಡಲಾಗಿದೆ. ವಿದ್ಯಾರ್ಥಿನಿಯರ ಹಾಸ್ಟೇಲ್ ಕಟ್ಟಡಕ್ಕೂ ಶಂಕುಸ್ಥಾಪನೆ ನೆರವೆರಿಸಿದ್ದು ಕಾಮಗಾರಿ ಆರಂಭವಾಗಿದೆ ಎಂದರು. ಕಾಲೇಜಿಗೆ ಗ್ರಂಥಾಲಯ, ಪ್ರಯೋಗಾಲಯ, ಕಾರ್ಯಾಗಾರ ಕಟ್ಟಡಗಳನ್ನು ನಿರ್ಮಿಸಿಕೊಡಬೇಕೆಂಬ ಬೇಡಿಕೆ ಬಂದಿದೆ. ಅನುದಾನ ಲಭ್ಯತೆಯನ್ನು ಅನುಸರಿಸಿ ಹಂತ ಹಂತವಾಗಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು. ಕಾಲೇಜಿಗೆ ನೀಡಬೇಕಿರುವ ಸೌಲಭ್ಯಗಳ ಸಂಬಂಧ ಉನ್ನತ ಶಿಕ್ಷಣ ಸಚಿವರ ಗಮನಕ್ಕೂ ತಂದಿದ್ದೇನೆ. ಕಾಲೇಜು ಕ್ಯಾಂಪಸ್ ಪ್ರದೇಶವು ವಿಸ್ತಾರವಾಗಿದೆ. ಆದರೇ ಆವರಣವನ್ನು ಸಮತಟ್ಟು ಗೊಳಿಸಬೇಕಿದೆ. ಇಲ್ಲಿಯ ಪ್ರದೇಶದಲ್ಲಿ ತೋಟಗಾರಿಕೆ ಇಲಾಖೆಯಿಂದ ಹೂ, ಗಿಡಗಳನ್ನು ಬೆಳಸಿ ಅಭಿವೃದ್ದಿಗೊಳಿಸಬೇಕಿದೆ ಎಂದರು. ಲೋಕಸಭಾ ಸದಸ್ಯರಾದ ಆರ್.ದ್ರುವನಾರಾಯಣ ಮಾತಾನಾಡಿ ವಿದ್ಯಾರ್ಥಿಗಳಿಗೆ 1.5 ಕೋಟಿ ರೂ ವೆಚ್ಚದಲ್ಲಿ ಹಾಸ್ಟೇಲ್ ನಿರ್ಮಾಣ ವಾಗಲಿದೆ ಇದರಿಂದ ದೂರದ ಜಿಲ್ಲೆಗಳಿಂದ ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮೈಸೂರಿನಿಂದ ನಗರ ಸಂರ್ಪಕಿಸುವ ರಾಷ್ಟ್ರೀಯ ಹೆದ್ದಾರಿ ಕೆಲಸವು ಭರದಿಂದ ಸಾಗಿದೆ ಎಂದರು. ಶಾಸಕರಾದ ಸಿ.ಪುಟ್ಟಂಗಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ಉಪಾಧ್ಯಕ್ಷರಾದ ಬಸವರಾಜು, ಸದಸ್ಯರಾದ ಸಿ.ಎನ್.ಬಾಲರಾಜು, ನಗರಸಭೆ ಅಧ್ಯಕ್ಷರಾದ ರೇಣುಕಾ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ.ಚಂದ್ರು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆ. 24ರಂದು ನಗರದಲ್ಲಿ ದಲಿತ ವಚನಕಾರರ ಜಯಂತಿ ಆಚರಣೆ ಚಾಮರಾಜನಗರ, ಆ. 22 (ಕರ್ನಾಟಕ ವಾರ್ತೆ):– ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮವನ್ನು ಆಗಸ್ಟ್ 24ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಗತಿಪರ ಮಠಾಧೀಶರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಪೀಠಾಧ್ಯಕ್ಷರಾದ ಡಾ. ಜ್ಞಾನಪ್ರಕಾಶ ಸ್ವಾಮಿ ಅವರು ದಿವ್ಯ ಸಾನಿಧ್ಯ ವಹಿಸುವರು. ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವÀಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ವಿಧಾನ ಪರಿಷತ್‍ನ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜ್), ಆರ್. ಧರ್ಮಸೇನ, ಕೆ.ಟಿ. ಶ್ರೀಕಂಠೇಗೌಡ, ನಗರಸಭೆ ಅಧ್ಯಕ್ಷರಾದ ಎಸ್. ಎನ್. ರೇಣುಕಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್. ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳುವರು ಎಂದು ಪ್ರಕಟಣೆ ತಿಳಿಸಿದೆ. ಮಂಡ್ಯದ ಸರ್ ಎಂ ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕರಾದ ಡಾ. ಹೊಂಬಯ್ಯ ಮುಖ್ಯ ಭಾಷಣಕಾರರಾಗಿ ಆಗಮಿಸುವರು. ಬೆಳಿಗ್ಗೆ 9.30 ಗಂಟೆಗೆ ರಾಯಚೂರಿನ ಖ್ಯಾತ ಅಂತರ ರಾಷ್ಟ್ರೀಯ ವಚನ ಸಂಗೀತ ಗಾಯಕರಾದ ಅಂಬಯ್ಯನುಲಿ ಮತ್ತು ತಂಡದವರಿಂದ ವಚನ ಗಾಯನ ಕಾರ್ಯಕ್ರಮ ಏರ್ಪಾಡು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಆ. 23ರಂದು ಜಿಲ್ಲೆಗೆ ಕಂದಾಯ ಸಚಿವರ ಭೇಟಿ ಚಾಮರಾಜನಗರ, ಆ. 22 (ಕರ್ನಾಟಕ ವಾರ್ತೆ):- ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಆಗಸ್ಟ್ 23ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅಂದು ಮಧ್ಯಾಹ್ನ 3.30 ಗಂಟೆಗೆ ನಗರಕ್ಕೆ ಆಗಮಿಸಿ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಸಂಜೆ 5 ಗಂಟೆಗೆ ಬೆಂಗಳೂರಿಗೆ ತೆರಳುವರೆಂದು ಸಚಿವರ ವಿಶೇಷ ಕರ್ತವ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆ. 24ರಂದು ರಾಜ್ಯ ಕಸಾಪ ಅಧ್ಯಕ್ಷರ ಜಿಲ್ಲಾ ಪ್ರವಾಸ ಚಾಮರಾಜನಗರ, ಆ. 22 (ಕರ್ನಾಟಕ ವಾರ್ತೆ):- ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರು ಆಗಸ್ಟ್ 24ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಅಂದು ಮಧ್ಯಾಹ್ನ 12 ಗಂಟೆಗೆ ನಗರಕ್ಕೆ ಆಗಮಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ಜಿಲ್ಲಾ ಗ್ರಂಥಾಲಯ ಇಲಾಖೆಯ ಸಹಕಾರದೊಂದಿಗೆ ಗ್ರಂಥಾಲಯ ಉದ್ಘಾಟನೆ ನೆರವೇರಿಸುವರು. ಮಧ್ಯಾಹ್ನ 12.15 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರು ಆಯೋಜಿಸಿರುವ ಚುನಾವಣೆ ಸುಧಾರಣೆ ಹಾಗೂ ನಿಬಂಧನೆ ತಿದ್ದುಪಡಿ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಸಮಿತಿಯ ಸಂಚಾಲಕರಾದ ಎನ್.ಕೆ. ನಾರಾಯಣ ಅವರೊಂದಿಗೆ ಭಾಗವಹಿಸುವರು. ಮಧ್ಯಾಹ್ನ 2.30 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಮಲೆಯೂರು ಗುರುಸ್ವಾಮಿಯವರ ಸಾಹಿತ್ಯ ಸುವರ್ಣಾವತಿಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 4.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಹಿರಿಯ ಸಾಹಿತಿಗಳು, ಕಲಾವಿದರೊಂದಿಗೆ ಸಮಾಲೋಚನೆ ನಡೆಸುವರು. ಬಳಿಕ ಬೆಂಗಳೂರಿಗೆ ತೆರಳುವರೆಂದು ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಹಾಗೂ ಸಂಯೋಜನಾಧಿಕಾರಿ ಬಿ.ಎನ್. ಪರಡ್ಡಿ ತಿಳಿಸಿದ್ದಾರೆ. ಆ. 25ರಂದು ವಿದ್ಯುತ್ ವ್ಯತ್ಯಯ ಚಾಮರಾಜನಗರ, ಆ. 22 (ಕರ್ನಾಟಕ ವಾರ್ತೆ):– ತಾಲೂಕಿನ ಹೊನ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆಗಸ್ಟ್ 25ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅರಕಲವಾಡಿ, ಯರಗನಹಳ್ಳಿ, ಸುವರ್ಣನಗರ, ಫ್ಯಾಕ್ಟರಿ, ಡೊಳ್ಳಿಪುರ, ಪುಣಜನೂರು, ಬಿಸಲವಾಡಿ, ಅಮಚವಾಡಿ, ಎನ್ ಜೆ ವೈ ಮಾದಲವಾಡಿ, ಎನ್ ಜೆ ವೈ ಚನ್ನಪ್ಪನಪುರ ಮಾರ್ಗಗಳಿಗೆ ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯರವರೆಗೆ ವಿದ್ಯುತ್ ಸರಬರಾಜಿಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ ಚಾಮರಾಜನಗರ, ಆ. 22 (ಕರ್ನಾಟಕ ವಾರ್ತೆ):– ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಷ್ಟ್ರೀಯ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕವನ್ನು ಮರುಪಾವತಿಸಲಿದ್ದು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರುಪಾವತಿ ಯೋಜನೆ ಅನ್ವಯವಾಗಲಿದೆ. ಏಷ್ಯನ್ ಗೇಮ್ಸ್, ಕಾಮನ್ ವೆಲ್ತ್ ಗೇಮ್ಸ್, ಕಾಮನ್ ವೆಲ್ತ್ ಚಾಂಪಿಯನ್‍ಶಿಪ್, ಒಲಂಪಿಕ್ ಗೇಮ್ಸ್, ವಲ್ರ್ಡ್ ಚಾಂಪಿಯನ್‍ಶಿಪ್, ಏಷಿಯನ್ ಚಾಂಪಿಯನ್‍ಶಿಪ್, ಪ್ಯಾರಾ ಒಲಂಪಿಕ್, ನ್ಯಾಷನಲ್ ಗೇಮ್ಸ್ ಇನ್ನಿತರ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರುಪಾವತಿಸಲಾಗುತ್ತದೆ. ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಆಗಸ್ಟ್ 27ರ ಒಳಗೆ ಸಲ್ಲಿಸಬೇಕಿದೆ. ಮಾಹಿತಿಗೆ ಸದರಿ ಕಚೇರಿ ಅಥವಾ ದೂರವಾಣಿ ಸಂಖ್ಯೆ 08226-224932 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣ ತರಬೇತಿ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಚಾಮರಾಜನಗರ, ಆ. 22 (ಕರ್ನಾಟಕ ವಾರ್ತೆ):– ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2016-17ನೇ ಸಾಲಿಗೆ ಆಡಳಿತ ನ್ಯಾಯಾಧೀಕರಣದಲ್ಲಿ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ನೀಡಲಾಗುವ ತರಬೇತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕಡೆಯ ದಿನಾಂಕಕ್ಕೆ ಕಾನೂನು ಪದವಿಯಲ್ಲಿ ತೇರ್ಗಡೆಯಾಗಿ 2 ವರ್ಷ ಮೀರಿರಬಾರದು. ಬಾರ್ ಕೌನ್ಸಿಲಿಂಗ್‍ನಲ್ಲಿ ಈಗಾಗಲೇ ಹೆಸರು ನೊಂದಾಯಿಸಿರಬೇಕು. ಅಭ್ಯರ್ಥಿಗಳು 40ರ ವಯೋಮಿತಿಯೊಳಗಿರಬೇಕು. ವಾರ್ಷಿಕ ಆದಾಯದ ಮಿತಿ 2 ಲಕ್ಷ ರೂ. ಇರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ 4 ವರ್ಷ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು 2 ಸಾವಿರ ರೂ. ಶಿಷ್ಯ ವೇತನ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 31ರೊಳಗೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿ ಆಹ್ವಾನ ಚಾಮರಾಜನಗರ, ಆ. 22 (ಕರ್ನಾಟಕ ವಾರ್ತೆ):– ಯಳಂದೂರು ತಾಲೂಕಿನ ಅಂಬಳೆ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಜವಾನ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 31 ಕಡೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗೆ ಗ್ರಾಮ ಪಂಚಾಯಿತಿ ಕಚೇರಿ ಸಂಪರ್ಕಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ಚಾಮರಾಜನಗರ, ಆ. 22 (ಕರ್ನಾಟಕ ವಾರ್ತೆ):– ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಿದ್ದು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ, ರಸಾಯನಶಾಸ್ತ್ರ, ಭೂಗೋಳಶಾಸ್ತ್ರ, ಭೌತಶಾಸ್ತ್ರ ವಿಷಯಗಳ ಹುದ್ದೆಗಳು ಖಾಲಿ ಇವೆ. ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಶೇ. 55ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿದ್ದು ಬಿಎಡ್ ಪದವಿಯನ್ನು (ವಾಣಿಜ್ಯಶಾಸ್ತ್ರ ವಿಷಯ ಹೊರತುಪಡಿಸಿ) ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಆಗಸ್ಟ್ 25ರೊಳಗೆ ನೇರವಾಗಿ ಅರ್ಜಿ ಸಲ್ಲಿಸಬೇಕಿದೆ ಎಂದು ಪ್ರಕಟಣೆ ತಿಳಿಸಿದೆ. ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಚಾಮರಾಜನಗರ, ಆ. 22 (ಕರ್ನಾಟಕ ವಾರ್ತೆ):– ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ದಸರಾ ಕ್ರೀಡಾಕೂಟವನ್ನು ಆಯೋಜಿಸಿದೆ. ಆಗಸ್ಟ್ 27ರಂದು ಯಳಂದೂರಿನ ಸರ್ಕಾರಿ ಪದವಿಪೂರ್ವ ಕಾಲೇಜು, ಆಗಸ್ಟ್ 29ರಂದು ಗುಂಡ್ಲುಪೇಟೆಯ ಡಿ.ದೇವರಾಜ ಅರಸು ತಾಲೂಕು ಕ್ರೀಡಾಂಗಣ, ಆ. 31ರಂದು ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಹಾಗೂ ಸೆಪ್ಟೆಂಬರ್ 2ರಂದು ಕೊಳ್ಳೇಗಾಲದ ತಾಲೂಕು ಕ್ರಿಡಾಂಗಣ ಹಾಗೂ ಮಹದೇಶವರ ಪ್ರಥಮದರ್ಜೆ ಸರ್ಕಾರಿ ಕಾಲೇಜು ಮೈದಾನದಲ್ಲಿ ಕ್ರೀಡಾಕೂಟ ಆಯಾ ದಿನದಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಪುರುಷರಿಗೆ 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 5000 ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಎಸೆತ, ಡಿಸ್ಕಸ್ ಎಸೆತ, 4*100 ಮೀ. ರಿಲೇ, 100 ಮೀ. ಹರ್ಡಲ್ಸ್ ಸ್ಪರ್ಧೆಗಳಿವೆ. ಮಹಿಳೆಯರಿಗೆ 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 3000 ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಎಸೆತ, ಡಿಸ್ಕಸ್ ಎಸೆತ, 4*100 ಮೀ. ರಿಲೇ, 100 ಮೀ. ಹರ್ಡಲ್ಸ್ ಸ್ಪರ್ಧೆಗಳಿವೆ. ಗುಂಪು ವಿಭಾಗದಲ್ಲಿ ವಾಲಿಬಾಲ್, ಕಬಡ್ಡಿ, ಖೊಖೋ, ಫುಟ್ ಬಾಲ್ (ಪುರುಷರಿಗೆ), ಬಾಲ್ ಬ್ಯಾಡ್ಮಿಂಟನ್, ಥ್ರೋಬಾಲ್ ಸ್ಪರ್ಧೆಗಳಿವೆ. ತಾಲೂಕು ಮಟ್ಟದಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು, ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಲಿದ್ದಾರೆ. ಭಾಗವಹಿಸುವವರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಾಹನ ಪರವಾನಗಿ ಈ ಪೈಕಿ ಗುರುತಿನ ಚೀಟಿ, 2 ಭಾವಚಿತ್ರ ತರಬೇಕು. ವಿವರಗಳಿಗೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಥವಾ ದೂ. ಸಂಖ್ಯೆ 08226-224932, ಮೊಬೈಲ್ 9611172984, 9482718278, 9880211027, 9945615695 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. _______________________- ಆಗಸ್ಟ್ 23ರಂದು ಹೊಂಡರಬಾಳುವಿನಲ್ಲಿ ಪ್ರಾದೇಶಿಕ ಮಟ್ಟದ ಖೊಖೊ ಕ್ರೀಡಾಕೂಟ ಚಾಮರಾಜನಗರ, ಆ. 22 (ಕರ್ನಾಟಕ ವಾರ್ತೆ):- ಪ್ರಾದೇಶಿಕ ಮಟ್ಟದ ಖೊಖೊ ಕ್ರೀಡಾಕೂಟವು ಆಗಸ್ಟ್ 23 ಹಾಗೂ 24ರಂದು ಚಾಮರಾಜನಗರ ತಾಲೂಕಿನ ಹೊಂಡರಬಾಳುವಿನಲ್ಲಿರುವ ಜವಾಹರ್ ನವೋದಯ ವಿದ್ಯಾಲಯದ ಅವರಣದಲ್ಲಿ ನಡೆಯಲಿದೆ. ಜವಾಹರ್ ನವೋದಯ ವಿದ್ಯಾಲಯವು ಖೊಖೊ ಕ್ರೀಡಾಕೂಟದ ಆತಿಥ್ಯ ವಹಿಸಿಕೊಂಡಿದೆ. ಆಂದ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ, ಕರ್ನಾಟಕ ಸೇರಿದಂತೆ ವಿವಿಧ 8 ಕ್ಲಸ್ಟರ್‍ಗಳಿಂದ ಅಂದಾಜು 500 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಆಗಸ್ಟ್ 23ರಂದು ಬೆಳಿಗ್ಗೆ 9 ಗಂಟೆಗೆ ಖೊಖೊ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್, ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಆಶೋಕ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷರಾದ ಎಸ್. ನಂಜುಂಡಸ್ವಾಮಿ,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ನಾಗಶ್ರೀ ಪ್ರತಾಪ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ 24ರಂದು ಮಧ್ಯಾಹ್ನ 4 ಗಂಟೆಗೆ ಕ್ರೀಡಾಕೂಟದ ಸಮಾರೋಪ ನಡೆಯಲಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಯಪ್ರಕಾಶ್, ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಜಿ.ಎಸ್. ಜಯದೇವ್, ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಚಾಮರಾಜನಗರ ಶಾಖೆಯ ಹಿರಿಯ ವ್ಯವಸ್ಥಾಪಕರಾದ ಎಂ. ಲತಾ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ______________

Tuesday, 16 August 2016

ಅರಸು ರಥಯಾತ್ರೆಗೆ ಅದ್ದೂರಿ ಸ್ವಾಗತ

ಅರಸು ರಥಯಾತ್ರೆಗೆ ಅದ್ದೂರಿ ಸ್ವಾಗತ ಚಾಮರಾಜನಗರ, ಆ. 14 (ಕರ್ನಾಟಕ ವಾರ್ತೆ):- ಸಾಮಾಜಿಕ ಸಮಾನತೆಯ ಹರಿಕಾರ, ಹಿಂದುಳಿದ ವರ್ಗಗಳ ನೇತಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಇಂದು ಜಿಲ್ಲೆಗೆ ಆಗಮಿಸಿದ ಅರಸು ಅವರ ಪ್ರಮುಖ ಸಾಧನೆಗಳನ್ನು ಬಿಂಬಿಸುವ ಮಾಹಿತಿಯನ್ನು ಒಳಗೊಂಡ ಅತ್ಯಾಕರ್ಷಕ ರಥಯಾತ್ರೆಗೆ ಅದ್ದೂರಿ ಸ್ವಾಗತ ನೀಡಲಾಯಿತು. ಮೊದಲಿಗೆ ಜಿಲ್ಲೆಯ ಟಗರುಪುರಮೋಳೆ ಬಳಿ ಅರಸು ರಥಯಾತ್ರೆಗೆ ಕೊಳ್ಳೇಗಾಲ ತಾಲ್ಲೋಕು ಪಂಚಾಯತ್ ಅಧ್ಯಕ್ಷರಾದ ರಾಜು, ಜಿಲ್ಲಾ ಪರಿಶಿಷ್ಟವರ್ಗಗಳ ಕಲ್ಯಾಣ ಅಧಿಕಾರಿ ಸಿ.ಶಿವಕುಮಾರ್ ತಾಲ್ಲೋಕು ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿ ರೇವಣ್ಣ, ಸಮಾಜ ಕಲ್ಯಾಣ ಆಧಿಕಾರಿ ಇತರರು ಅರಸು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಬರಮಾಡಿಕೊಂಡರು. ಇದೆ ವೇಳೆ ದೇವರಾಜ ಅರಸು ಜನ್ಮ ಶತಮಾನೊತ್ಸವ ಸಮಿತಿಯ ಸಂಚಾಲಕರಾದ ಎಚ್.ಎ.ವೆಂಕಟೇಶ್ ಮಾತನಾಡಿ. ಅರಸು ಅವರು ರಾಜ್ಯದ ಶೋಷಿತರು,ದೀನದಲಿತರು ಸೇರಿದಂತೆ ಬಹುತೇಕ ಜನರ ಅಭಿವೃದಿಗಾಗಿ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದರು.ಅವರ ಸಾಧನೆಯನ್ನು ತಿಳಿಸುವ ಉದ್ದೇಶದೊಂದಿಗೆ ರಥಯಾತ್ರೆ ರಾಜ್ಯದ ಎಲ್ಲೆಡೆ ಸಂಚರಿಸುತ್ತಿದೆ.ಆಗಸ್ಟ್ 20ರಂದು ಅರಸುಅವರ ಜನ್ಮ ಶತಮಾನೊತ್ಸವ ಸಮಾರಂಭವನ್ನು ವಿಭಿನ್ನವಾಗಿ ರಾಜ್ಯ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಬಳಿಕ ರಥಯಾತ್ರೆಯು ಚಿಲಕವಾಡಿ, ಕುಂತೂರು ಜಂಕ್ಷನ್, ಉತ್ತಂಬಳ್ಳಿ, ಮದ್ದೂರು, ಅಗರ-ಮಾಂಬಳ್ಳಿ, ಯರಿಯೂರು ಮೂಲಕ ಯಳಂದೂರು ಪಟ್ಟಣಕ್ಕೆ ಬಂದು ಸೇರಿತು. ಜಿಲ್ಲಾ ಪಂಚಾಯಿತ್ ಸದಸ್ಯರಾದ ಯೋಗೇಶ್ ಇತರೆ ಗಣ್ಯರು ಅರಸು ಅಭಿಮಾನಿಗಳು ಭವ್ಯ ಸ್ವಾಗತ ನೀಡಿದರು. ಯಳಂದೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥಯಾತ್ರೆ ಸಂಚರಿಸಿ ಸಂತೇಮರಹಳ್ಳಿ ಮೂಲಕ ಜಿಲ್ಲಾ ಕೇಂದ್ರಕ್ಕೆ ಆಗಮಿಸಿತು. ನಗರದ ಕೇಂದ್ರಿಯ ವಿದ್ಯಾಲಯದ ಬಳಿ ಅರಸು ರಥಯಾತ್ರೆಯನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅÀವರು ಸ್ವಾಗತಿಸಿ ರಥ ಸಂಚಾರಕ್ಕೆ ಚಾಲನೆ ನೀಡಿದರು. ಪಟಾಕಿ ಸಿಡಿಸಿ ಅದ್ದೂರಿಯಾಗಿ ಬರಮಾಡಿಕೊಂಡ ರಥಯಾತ್ರೆ ಚಾಮರಾಜನಗರ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಸಂಚಾರ ಮುಂದುವರೆಸಿತು. ನಗರಸಭೆ ಅಧ್ಯಕ್ಷರಾದ ರೇಣುಕಾ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್,ಜಿ.ಪಂ ಸದಸ್ಯರಾದ ಸಿ.ಎನ್.ಬಾಲರಾಜು, ತಾ.ಪಂ.ಅಧ್ಯಕ್ಷರಾದ ಎಚ್.ವಿ.ಚಂದ್ರು, ನಗರಸಭೆ ಸದಸ್ಯರಾದ ಸಿ.ಕೆ.ಮಂಜುನಾಥ್, ಮುಖಂಡರಾದ ಚಿಕ್ಕಮಹದೇವು,ಶಿವಕುಮಾರ್,ಶಾ.ಮುರಳಿ,ಗು.ಪುರುಷೋತ್ತಮ್, ಚಾ.ಹ.ಶಿವರಾಜು, ಜಯಕುಮಾರ್, ಇತರರು,ಜಿ.ಪಂ ಸಿ.ಇ.ಓ ಹೆಪ್ಸಿಭಾರಾಣಿ ಕೊರ್ಲಪಾಟಿ ಇತರೆ ಆಧಿಕಾರಿಗಳು ಹಾಜರಿದ್ದು ರಥಯಾತ್ರೆಯಲ್ಲಿ ಸಾಗಿದರು. ಜಿಲ್ಲಾಡಳಿತ ಭವನ ಆವರಣ ಬಳಿ ರಥಯಾತ್ರೆ ಮುಕ್ತಾಯವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಅರಸು ಅವರು ದೀರ್ಘಕಾಲ ಮುಖ್ಯಮಂತ್ರಿಯಾಗಿ ಅಳ್ವಿಕೆ ನಡೆಸಿದರು.ಅವರ ಅವದಿಯಲ್ಲಿ ಹಲವಾರು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ಬಂದವು. ವೃದ್ದಾಪ್ಯ ವೇತನ ಬಡವರಿಗೆ ಸೂರು, ನಿರುದ್ಯೋಗಿ ಅಭ್ಯರ್ಥಿಗಳಿಗೆ ಸ್ಟ್ಯಪಂಡರಿ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಅರಸುಅವರು ಅನುಷ್ಟಾನಕ್ಕೆ ತಂದರು ಎಂದರು. ಜಿ.ಪಂ. ಸ್ಯಾಯಿಸಮಿತಿ ಅಧ್ಯಕ್ಷರಾದ ಸದಾಶಿವಮೂರ್ತಿ ಮಾತನಾಡಿ ಅರಸುಅವರು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು ಅವರ ಸಾಧನೆಯ ಹೆಜ್ಜೆಗಳನ್ನು ಸ್ಮರಿಸಬೇಕಿದೆ ಎಂದರು. ಆ. 15ರಂದು ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ದಿನಾಚರಣೆ ಚಾಮರಾಜನಗರ, ಆ. 14 (ಕರ್ನಾಟಕ ವಾರ್ತೆ):– ಜಿಲ್ಲಾಡಳಿತದ ವತಿಯಿಂದ ಆಗಸ್ಟ್ 15ರಂದು ಬೆಳಿಗ್ಗೆ 9 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ 70ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಹಕಾರ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಧ್ವಜಾರೋಹಣ ನೆರವೇರಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವÀಹಿಸುವರು. ವಿಧಾನ ಪರಿಷತ್‍ನ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜ್), ಆರ್. ಧರ್ಮಸೇನ, ನಗರಸಭೆ ಅಧ್ಯಕ್ಷರಾದ ಎಸ್. ಎನ್. ರೇಣುಕಾ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫಿ, ನಗರಸಭೆ ಉಪಾಧ್ಯಕ್ಷರಾದ ಆರ್. ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳುವರು. ಸಂಜೆ 5.30 ಗಂಟೆಗೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ. ಸಂಜೆ 5.30 ರಿಂದ 6.30ರವರೆಗೆ ಜ್ಯೋತಿಗೌಡನಪುರದ ಜೆ.ಬಿ. ಮಹೇಶ್ ಮತ್ತು ತಂಡದವರಿಂದ ದೇಶಭಕ್ತಿ ಗೀತೆ ಗಾಯನ, ಸಂಜೆ 6.30 ರಿಂದ 7.30ರವರೆಗೆ ಶಾಲಾಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. 7.30 ರಿಂದ 8.30ರವರೆಗೆÉ ಮೈಸೂರಿನ ನಿಮಿಶಾಂಭ ನೃತ್ಯಾಲಯದ ಆಪ್ತಮಿತ್ರ ಖ್ಯಾತಿಯ ವಿದ್ವಾನ್ ಶ್ರೀಧರ್ ಜೈನ್ ಮತ್ತು ತಂಡದವರು ಭಾರತೀಯ ನೃತ್ಯ ವೈಭವ ಕುರಿತ ನೃತ್ಯ ರೂಪಕ ಪ್ರಸ್ತುತ ಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಮುಖ್ಯಮಂತ್ರಿಯವರ 50 ಕೋಟಿ ರೂ. ವಿಶೇಷ ಅನುದಾನ: ಕಾಮಗಾರಿ ಅನುಷ್ಟಾನ ಪ್ರಕ್ರಿಯೆಗೆ ಉಸ್ತುವಾರಿ ಸಚಿವರ ಗಡುವು ಚಾಮರಾಜನಗರ, ಆ. 15 (ಕರ್ನಾಟಕ ವಾರ್ತೆ):- ಚಾಮರಾಜನಗರ ಪಟ್ಟಣ ಅಭಿವೃದ್ಧಿಗೆ ಮುಖ್ಯಮಂತ್ರಿಯವರು ಪ್ರಸಕ್ತ ಆಯವ್ಯಯದಲ್ಲಿ ನಿಗದಿ ಮಾಡಿರುವ 50 ಕೋಟಿ ರೂ. ವಿಶೇಷ ಅನುದಾನದಡಿ ಕೈಗೊಳ್ಳಬೇಕಿರುವ ಕಾಮಗಾರಿ ಅನುಷ್ಠಾನಕ್ಕೆ ಅಗತ್ಯ ಪ್ರಕ್ರಿಯೆಯನ್ನು ಇನ್ನು 15 ದಿನದೊಳಗೆ ಪೂರೈಸುವಂತೆ ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚಾಮರಾಜನಗರ ಪಟ್ಟಣ ಅಭಿವೃದ್ಧಿಗೆ ನಿಗಧಿಯಾಗಿರುವ 50 ಕೋಟಿ ರೂ. ವಿಶೇಷ ಅನುದಾನಕ್ಕೆ ತಯಾರಿಸಿರುವ ಕ್ರಿಯಾಯೋಜನೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಾಮರಾಜನಗರ ನಗರಸಭೆಗೆ ಪಟ್ಟಣದ ಪ್ರಗತಿಗಾಗಿ 50 ಕೋಟಿ ರೂ. ವಿಶೇಷ ಅನುದಾನ ಲಭ್ಯವಾಗುತ್ತಿದೆ. ಈ ಅನುದಾನದಲ್ಲಿ ನಗರದ ಪ್ರಮುಖ ಕಾಮಗಾರಿಗಳನ್ನು ಕೈಗೊಂಡು ಪಟ್ಟಣವನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಬೇಕಿದೆ. ಅನುದಾನ ಬಳಸಿ ಕೈಗೊಳ್ಳಬಹುದಾದ ವಿವಿಧ ಕಾಮಗಾರಿಗೆ ಸಿದ್ಧಪಡಿಸಿರುವ ಕ್ರಿಯಾಯೋಜನೆಯಂತೆ ಅನುಷ್ಠಾನಕ್ಕೆ ತರಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಸಚಿವರು ತಿಳಿಸಿದರು. ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಉಳಿಕೆ ಕಾಮಗಾರಿಗಾಗಿ ಮುಖ್ಯಮಂತ್ರಿಯವರ ವಿಶೇಷ ಅನುದಾನವನ್ನು ಬಳಕೆ ಮಾಡಿಕೊಂಡು ಕ್ರೀಡಾಂಗಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ಪೆವಿಲಿಯನ್, ಈಜುಕೊಳ, ಹೆಲಿಪ್ಯಾಡ್ ಕಂ ಸ್ಕೇಟಿಂಗ್ ಟ್ರ್ಯಾಕ್, ಜಿಮ್ನಾಶಿಯಂ, ಕುಸ್ತಿ ಅಖಾಡ, ಫ್ಲಡ್‍ಲೈಟ್, ಶಾಶ್ವತ ವೇದಿಕೆ, ಪ್ರೇಕ್ಷಕರ ಆಸನ ಕಾಮಗಾರಿಯನ್ನು ಕ್ಯಗೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಸಿಂಥೆಟಿಕ್ ಟ್ರ್ಯಾಕ್ ಕೆಲಸವು ಕ್ರೀಡಾಂಗಣದಲ್ಲಿ ಪ್ರಗತಿಯಲ್ಲಿದೆ. ಇದು ಪೂರ್ಣಗೊಂಡರೆ 8 ಆಟೋಟ ಗಳಿಗೆ ಅವಕಾಶವಾಗಲಿದೆ. ವಿಶೇಷ ಅನುದಾನದಲ್ಲಿ ಇತರೆ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸ್ಥಳವಾಗಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಬೇಕು ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಲ ಬಗೆಯ ಕ್ರೀಡೆಗಳಿಗೆ ಅವಕಾಶವಾಗುವಂತೆ ಪೂರಕವಾಗಿ ಕಾಮಗಾರಿ ಕೈಗೊಳ್ಳಬೇಕು. ಇದರಿಂದ ಉನ್ನತ ಮಟ್ಟದ ಕ್ರೀಡಾಕೂಟಗಳನ್ನು ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಬಹುದು. ಹೊರಗಿನ ಕ್ರೀಡಾಪಟುಗಳು ಪಾಲ್ಗೊಳ್ಳಬಹುದಾಗಿದೆ. ಕ್ರೀಡೆಗೆ ಹೆಚ್ಚು ಉತ್ತೇಜನ ನೀಡಿದಂತಾಗುತ್ತದೆ. ಹೀಗಾಗಿ ಕ್ರೀಡಾ ಕಾಮಗಾರಿ ತಜ್ಞರ ಮಾರ್ಗದರ್ಶನದಲ್ಲಿ ಬಹುಪಯೋಗಿ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಾಮಗಾರಿ ಕೈಗೊಳ್ಳಬೇಕೆಂದು ತಿಳಿಸಿದರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಕ್ರೀಡಾಂಗಣದ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಾಲಮಿತಿಯೊಳಗೆ ಕೆಲಸಗಳು ಪೂರ್ಣಗೊಳ್ಳಬೇಕು ಎಂದರು. ಮುಂದುವರೆದು ಮಾತನಾಡಿದ ಸಚಿವರು ನಗರದ ದೊಡ್ಡ ಅರಸನ ಕೊಳದ ಅಭಿವೃದ್ಧಿಯನ್ನು ವಿಶೇಷ ಅನುದಾನದಡಿ ಕೈಗೊಳ್ಳಬೇಕು. ಕಲ್ಯಾಣಿ, ಮೆಟ್ಟಿಲುಗಳು, ಇದರ ಸುತ್ತಲ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು. ಧ್ವನಿ-ಬೆಳಕಿನ ವ್ಯವಸ್ಥೆಯನ್ನು ಈಗಾಗಲೇ ಪಾರಂಪರಿಕ ನಗರಗಳಲ್ಲಿ ಕೈಗೊಂಡಿರುವಂತೆ ಇಲ್ಲಿಯೂ ಅಳವಡಿಸಬಹುದು. ನಗರದ ಪ್ರಮುಖ ಆಕರ್ಷಣೀಯ ತಾಣವನ್ನಾಗಿ ಮಾರ್ಪಾಡು ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಸಚಿವರು ತಿಳಿಸಿದರು. ಇದೇ ಸಂದರ್ಭದಲ್ಲಿ ಕಲ್ಯಾಣಿ ಅಭಿವೃದ್ಧಿಗಾಗಿ ವಾಸ್ತುಶಿಲ್ಪಿ ತಯಾರಿಸಿರುವ ಪವರ್ ಪಾಯಿಂಟ್ ಮಾದರಿಯನ್ನು ಸಚಿವರು ವೀಕ್ಷಿಸಿದರು. ಅಲ್ಲದೆ, ಹೆಸರಾಂತ ಪಾರಂಪರಿಕ ಸ್ಥಳಗಳಲ್ಲಿ ಧ್ವನಿ-ಬೆಳಕಿನ ವ್ಯವಸ್ಥೆ ಅಳವಡಿಸಿರುವ ಬಗ್ಗೆಯು ವಿವರವಾದ ಮಾಹಿತಿಯನ್ನು ಸಭೆಯಲ್ಲಿ ನೀಡಲಾಯಿತು. ಜಿಲ್ಲಾಡಳಿತ ಭವನದ ಬಳಿಯಿರುವ ರಂಗಮಂದಿರದ ಉಳಿದ ಅಗತ್ಯ ಕಾಮಗಾರಿಯನ್ನು ವಿಶೇಷ ಅನುದಾನದಲ್ಲಿ ನಿರ್ವಹಿಸುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ಮಾತನಾಡಿದ ಉಸ್ತುವಾರಿ ಸಚಿವರು ಪ್ರಸ್ತುತ ನಿರ್ಮಾಣ ವಾಗಿರುವ ರಂಗಮಮದಿರದಲ್ಲಿ ಪ್ರೇಕ್ಷಕರ ಅಸನಗಳ ಸಂಖ್ಯೆಯನ್ನು ಹೆಚ್ಚು ಮಾಡಬೇಕಿದೆ. ಅಕೋಸ್ಟಿಕ್, ವೇದಿಕೆ ಇನ್ನಿತರ ಅವಶ್ಯಕ ವ್ಯವಸ್ಥೆ ಅಳವಡಿಕೆಯನ್ನು ಪೂರ್ಣ ಮಾಡಬೇಕು ಎಂದರು. ವಿಶೇಷ ಅನುದಾನದಡಿ ಚಾಮರಾಜೇಶ್ವರ ದೇವಾಲಯ ಅಭಿವೃದ್ಧಿ, ಖಾಸಗಿ ಬಸ್ ನಿಲ್ದಾಣ, ಮಾರುಕಟ್ಟೆ ಸಂಕೀರ್ಣ, ಸಂತೇಮರಹಳ್ಳಿ ವೃತ್ತದ ಬಳಿ ವಾಣಿಜ್ಯ ಸಮುಚ್ಚಯ, ನ್ಯಾಯಾಲಯ ರಸ್ತೆಯಲ್ಲಿ ಚರಂಡಿ ನಿರ್ಮಾಣ, ಅನ್ವರ್ ಪಾಷ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಸಿ. ಸಿ. ರಸ್ತೆ ಅಭಿವೃದ್ಧಿ ಚರಂಡಿ ನಿರ್ಮಾಣ, ಅರಳುಕೋಟೆಗೆ ಹೋಗುವ ರಸ್ತೆ, ನಗರಸಭೆ ವ್ಯಾಪ್ತಿಯ ವಿವಿಧೆಡೆ ರಸ್ತೆ, ಚರಂಡಿ ನಿರ್ಮಾಣ, ಪಟ್ಟಣ ಗಡಿಯಲ್ಲಿ ಸ್ವಾಗತ ಕಮಾನುಗಳ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಯಿತು. ನಗರಸಭೆ ಅಧ್ಯಕ್ಷರಾದ ರೇಣುಕಾಮಲ್ಲಿಕಾರ್ಜುನ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫೀ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್.ಆರ್,ಜೈನ್, ಜಿಲ್ಲಾ ನಗರಾಬಿವೃದ್ಧಿ ಕೋಶದ ನಿರ್ದೇಶಕರಾದ ನಿರಂಜನಮೂರ್ತಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಇನಾಯತ್ ಉಲ್ಲಾ ಷರೀಫ್, ನಗರಸಭೆ ಆಯುಕ್ತರಾದ ರಾಜಣ್ಣ, ಕೆ.ಆರ್.ಐ.ಡಿ.ಎಲ್. ಉಪನಿರ್ದೇಶಕರಾದ ನಟೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕರಾದ ಆರ್. ಸರಸ್ವತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಚಲುವಯ್ಯ, ಇತರೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಗ್ರಾ ಪಂ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಆಗಸ್ಟ್ 19 ಕಡೆಯ ದಿನ ಚಾಮರಾಜನಗರ, ಆ. 15 (ಕರ್ನಾಟಕ ವಾರ್ತೆ):- ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲೆಯ ಗ್ರಾಮ ಪಂಚಾಯಿತಿಯ ಸದಸ್ಯ ಸ್ಥಾನಗಳಿಗೆ ಚುನಾವಣೆ ನಿಗಧಿಯಾಗಿದ್ದು, ನಾಮಪತ್ರ ಸಲ್ಲಿಕೆಗೆ ಆಗಸ್ಟ್ 19 ಕಡೆಯ ದಿನವಾಗಿದೆ. ಆಗಸ್ಟ್ 16 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವು ಅಧಿಸೂಚನೆ ಪ್ರಕಟಣೆಯ ದಿನಾಂಕದ ತರುವಾಯ ಬರುವ 3ನೇಯ ದಿನವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು