ಅಕ್ರಮ ಸಂಬಂದ ಶಿಕ್ಷಕನ ಕೊಲೆ! ಆರೋಪಿಗಳು ಅಂದರ್.
ಚಾಮರಾಜನಗರ: ಅನೈತಿಕ ಸಂಬಂದದಿಂದ ಶಿಕ್ಷಕನೊರ್ವ ಅನಾಥ ಹೆಣವಾದ ಘಟನೆಗೆ ಸಂಬಂದಿಸಿದಂತೆ ಗುಂಡ್ಲುಪೇಟೆ ವಲಯ ಪೊಲೀಸರು ಆರೋಪಿಗಳನ್ನ ಬಂದಿಸಿದ್ದಾರೆ.
*ಬಂದಿತರು ಗುಂಡ್ಲುಪೇಟೆಯ ಅಣ್ಣೂರು ಕೇರಿ ನಿವಾಸಿ ರಘು, ಹಂಗಳ ಗ್ರಾಮದ ಸಿದ್ದು ಹಾಗೂ ಅನೈತಿಕ ಸಂಬಂದಕ್ಕೊಳಪಟ್ಟ ಗೃಹಿಣಿ ಬಸವ ರಾಜೇಶ್ವರಿ ಎಂಬಾಕೆಯನ್ನ ಪೊಲೀಸರು ಬಂದಿಸಿದ್ದಾರೆ.
ಘಟನೆ ವಿವರ: ಬಸವರಾಜೇಶ್ವರಿ ಎಂಬಾಕೆಯೊಂದಿಗೆ ಅಕ್ರಮ ಸಂಬಂದ ಹೊಂದಿದ ಎನ್ನಲಾದ ಶಿಕ್ಷಕ ರಂಗಸ್ವಾಮಿಯನ್ನ ಗುಂಡ್ಲುಪೇಟೆಯ ಹಾಲಹಳ್ಳಿ-ನಿಟ್ರೆ ರಸ್ತೆ ಮದ್ಯೆ ಸಾಯಿಸಿ ಕಾರಿನೊಳಗೆ ಹಾಕಿ ಬೆಂಕಿ ಹಾಕಿ ದಹಿಸಿದ್ದರು..ಆಗಸ್ಟ್ ಎಂಟರಂದು ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಅಂದೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಕರೆಯಿಸಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದರು. ಕೂಡಲೆ ಆರೋಪಿಗಳ ಸೆರೆಗಾಗಿ ತಂಡ ರಚಿಸಿ ವಿಚಾರಣೆ ಆರಂಬಿಸಿದ ೪೮ ಗಂಟೆಯೊಳಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಆರೋಪಿಗಳಿಗೆ ಜಾಲ ಬೀಸಿದ್ದರು.
*ಬಸವರಾಜೇಶ್ವರಿ ಉದ್ಯೋಗಿಯಾಗಿದ್ದು ಶಿಕ್ಷಕ ರಂಗಸ್ವಾಮಿಯೊಂದಿಗೆ ಬಹಳ ವರ್ಷದಿಂದೆ ಅಕ್ರಮ ಸಂಬಂದವಿರಿಸಿಕೊಂಡಿದ್ದಳು ಎನ್ನಲಾಗಿದೆ. ಆದರೆ ಈ ಹಿಂದೆಯೂ ವಿಚಾರ ಗೊತ್ತಾಗಿ ಕೌಟುಂಬಿಕ ಕಲಹವೂ ಆಗಿತ್ತು ಎನ್ನಲಾಗಿದೆ.ತದ ನಂತರದ ದಿನಗಳಲ್ಲೂ ಈ ಚಾಳಿ ಮುಂದುವರೆದಿತ್ತು ಎನ್ನಲಾಗಿದೆ ಆದರೆ ಈ ನಡುವೆ ಬಸವರಾಜೇಶ್ವರಿಗೆ ಮತ್ತೊಬ್ಬನ ಸಂಪರ್ಕವೂ ಇತ್ತು ಎನ್ನಲಾಗಿದೆ. ಆತನೊಂದಿಗೂ ಶಿಕ್ಷಕ ತಾನು ನಡೆಸಿದ ರಾಸಲೀಲೆಯ ಕೆಲವು ತುಣುಕುಗಳನ್ನ ಕಳುಹಿಸಿದ್ದ ಎನ್ನಲಾಗುತ್ತಿದ್ದಷ್ಟೆ ಅಲ್ಲದೇ ಸಾಮಾಜಿಕ ಜಾಲತಾಣಕ್ಕೂ ಹರಿಯಬಿಡುವ ಬೆದರಿಕೆಯನ್ನೂ ಹಾಕಿದ್ದ ಎನ್ನಲಾಗಿದೆ.
*ಪ್ರಕರಣದ ಬಗ್ಗೆ ಮನನೊಂದು ಗೃಹಿಣಿ ಪೂರ್ವ ಯೋಜನೆ ಮಾಡಿ ರಘು ಮತ್ತು ಸಿದ್ದು ಎಂಬುವವರೊಂದಿಗೆ ಸೇರಿ ಕೊಲೆ ಮಾಡಿಸಿ ಯಾರಿಗೂ ಅನುಮಾನ ಬಾರದಂತೆ ಮೃತ ಶವವನ್ನ ಕಾರಿನೊಳಗೆ ಇರಿಸಿ ಬೆಂಕಿ ಹಾಕಿ ಇದೊಂದು ಸಹಜ ಸಾವಂತೆ ಮೇಲ್ನೋಟಕ್ಕೆ ಬಿಂಬಿಸಿದ್ದರು. *ಅನುಮಾನಗೊಂಡ ಗುಂಡ್ಲುಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಬಾಲಕೃಷ್ಟ, ಬೇಗೂರು ಠಾಣೆಯ ರೋಹಿತ್ ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ ಎನ್ನಲಾಗಿದೆ.
ಆರೋಪಿಗಳನ್ನ ನಿನ್ನೆ ರಾತ್ರಿ ಡಿವೈಸ್ಪಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಿ ಆರೋಪಿಗಳನ್ನ ಜೈಲಿಗಟ್ಟಿದ್ದಾರೆ.
------------
All right reserved publication ..
Rashvee@ publication.
Chamarajanagar